HOPCOMS Outlets : ಬೆಂಗಳೂರಿನಲ್ಲಿ ಚಾರ್ಮ್‌ ಕಳೆದುಕೊಂಡ ಹಾಪ್‌ಕಾಮ್ಸ್‌ ಮಳಿಗೆ - Vistara News

ಬೆಂಗಳೂರು

HOPCOMS Outlets : ಬೆಂಗಳೂರಿನಲ್ಲಿ ಚಾರ್ಮ್‌ ಕಳೆದುಕೊಂಡ ಹಾಪ್‌ಕಾಮ್ಸ್‌ ಮಳಿಗೆ

HOPCOMS Outlets : ಬೆಂಗಳೂರಿನಲ್ಲಿ ಹಾಪ್‌ಕಾಮ್ಸ್‌ ಮಳಿಗೆಗಳು ಚಾರ್ಮ್‌ ಕಳೆದುಕೊಂಡು ಮೂಲೆ ಸೇರಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಳಿಗೆಗಳು ಬಾಗಿಲು ಮುಚ್ಚಿವೆ.

VISTARANEWS.COM


on

Hopcoms store loses charm in Bengaluru
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಹಾಪ್ ಕಾಮ್ಸ್ ಮಳಿಗೆಗಳು ಕಣ್ಮರೆಯಾಗುತ್ತಿವೆ. ಹಾಪ್ ಕಾಮ್ಸ್ ಇದ್ದ ಜಾಗಗಳು (HOPCOMS Outlets) ಈಗ ಪಾಳು ಬಿದ್ದ ಜಾಗಗಳಾಗಿ ಪರಿವರ್ತನೆಗೊಂಡಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ಸಂಪರ್ಕಕೊಂಡಿಯಾಗಿದ್ದ ಮಳಿಗೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.

ಗುಣಮಟ್ಟದ ತಾಜಾ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ಪೂರೈಸುವ ಹಾಗೂ ಮಧ್ಯವರ್ತಿಗಳಿಂದ ಮುಕ್ತವಾದ ಮಾರುಕಟ್ಟೆ ಒದಗಿಸುವ ಮಹತ್ವದ ಉದ್ದೇಶದಿಂದ ಹಾಪ್‌ಕಾಮ್ಸ್ ಒಂದು ಕಾಲದಲ್ಲಿ ತನ್ನದೇ ಆದ ಘನತೆ ಗೌರವವನ್ನು ಉಳಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಪ್ಸ್ ಕಾಮ್ಸ್ ಮಳಿಗೆಗೆಳು ಕಣ್ಮರೆಯಾಗುತ್ತಿವೆ.

ಎರಡು ವರ್ಷಗಳ ಹಿಂದೆ ಬೆಂಗಳೂರು ವ್ಯಾಪ್ತಿಯಲ್ಲಿ 316, ಉಳಿದೆಡೆ 262 ಹಾಪ್‌ಕಾಮ್ಸ್‌ ಮಳಿಗೆ ಇದ್ದವು. ನಷ್ಟ, ಮೂಲಸೌಲಭ್ಯ ಕೊರತೆಯಿಂದ ಮಳಿಗೆಗಳ ಸಂಖ್ಯೆ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ.‌ ಎಲ್ಲಾ ಜಿಲ್ಲೆಗಳಲ್ಲೂ ಹಾಪ್ ಕಾಮ್ಸ್ ಮಳಿಗೆಗಳು ಕಾಣೆಯಾಗುತ್ತಿವೆ. ಇದಕ್ಕೆಲ್ಲ ಕಾರಣ ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯ ಎನ್ನಲಾಗುತ್ತಿದೆ. ಬೆಳೆಗಾರರಿಂದ ಬಳಕೆದಾರರಿಗೆ, ರೈತರಿಂದ ಗ್ರಾಹಕರಿಗೆ ಎಂಬ ಟ್ಯಾಗ್‌ಲೈನ್‌ನಿಂದ ಶುರುವಾದ ಹಾಪ್‌ಕಾಮ್ಸ್‌ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಅನುಕೂಲಕ್ಕಾಗಿ ಶುರು ಮಾಡಲಾಗಿತ್ತು. ದಲ್ಲಾಳಿಗಳ ಹಾವಳಿ ತಪ್ಪಿಸಿ, ನೇರವಾಗಿ ಹಾಪ್‌ಕಾಮ್ಸ್‌ನಿಂದ ಖರೀದಿಸಿ, ಗ್ರಾಹಕರಿಗೆ ತಾಜಾತನದೊಂದಿಗೆ ಮಾರಾಟ ಮಾಡಲಾಗುತ್ತಿತ್ತು. ಇದೀಗ ಹಾಪ್‌ಕಾಮ್ಸ್‌ ಹೇಳಹೆಸರಿಲ್ಲದಂತಾಗಿದೆ.

ನಗರದ ವಿಜಯನಗರ ಭಾಗದ ಅತ್ತಿಗುಪ್ಪೆ, ಹಂಪಿನಗರ, ಹೊಸಹಳ್ಳಿಯ ನಾಲ್ಕೈದು ಹಾಪ್ ಕಾಮ್ಸ್‌ಗಳು ಬಂದ್ ಆಗಿವೆ. ಜತೆಗೆ ಬೆಂಗಳೂರಿನ ಸಾಕಷ್ಟು ಏರಿಯಾಗಳಲ್ಲಿ ಹಾಪ್ ಕಾಮ್ಸ್ ಇಲ್ಲದಂತಾಗಿದೆ. ಇದರ ಬಗ್ಗೆ ಈಗ ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಾರೆಯಾಗಿ ಹಾಪ್ ಕಾಮ್ಸ್ ಮೂಲಕ ನೇರವಾಗಿ ರೈತರಿಂದ ಹಣ್ಣು-ತರಕಾರಿ ಸಿಗುತಿತ್ತು. ಬೆಲೆ ಕೊಂಚ ದುಬಾರಿ ಎನಿಸಿದರೂ, ಗುಣಮಟ್ಟದ ತರಕಾರಿಗಳು ಸಿಗುತ್ತಿತ್ತು. ಇದೀಗ ಹಾಪ್‌ಕಾಮ್ಸ್‌ ಜನರಿಂದ ದೂರಾಗಿದೆ.

ಖಾಸಗಿ ಪೈಪೋಟಿ

ದಶಕಗಳ ಕಾಲ ವಹಿವಾಟು ನಡೆಸಿದರೂ ಹಾಪ್‌ಕಾಮ್ಸ್‌ ಆರ್ಥಿಕ ನಷ್ಟದ ಜತೆಗೆ ಸಿಬ್ಬಂದಿ ಕೊರತೆ, ಖಾಸಗಿ ಪೈಪೋಟಿ ಎದುರಿಸಲಾಗದೆ ಬಳಲುತ್ತಿದೆ. ಕೌಶಲ್ಯರಹಿತ ಸಿಬ್ಬಂದಿ, ತಂತ್ರಜ್ಞಾನಗಳ ಅಳವಡಿಕೆಗೆ ನಿರಾಸಕ್ತಿ, ಹೊಸತನಕ್ಕೆ ಒಗ್ಗಿಕೊಳ್ಳದ ಮನೋಭಾವ ಇರುವುದೇ ಹಾಪ್‌ಕಾಮ್ಸ್‌ ಹಿನ್ನೆಡೆಗೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಹಲವು ಖಾಸಗಿ ಮಳಿಗೆಗಳು ಜನರನ್ನು ಸೆಳೆಯಲು ನಾನಾ ರಿಯಾಯಿತಿ ನೀಡುತ್ತಿದೆ. ಆದರೆ ಹಾಪ್‌ಕಾಮ್ಸ್‌ ಇಂಥ ಯಾವ ಪ್ರಯತ್ನಕೂ ಕೈಹಾಕಿಲ್ಲ. ಗ್ರಾಹಕರ ಮನೆಗೆ ತಾಜಾ ಹಣ್ಣು, ತರಕಾರಿಗಳನ್ನು ತಲುಪಿಸಲು ಆರಂಭಿಸಿದ್ದ ಆನ್‌ಲೈನ್‌ ಸೇವೆಯೂ ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

Robbery case : ಲವ್ವರ್‌ನಿಂದ ದೂರಾಗಲು ಟೆಕ್ಕಿಯೊಬ್ಬಳು ನಿರ್ಧರಿಸಿದ್ದಳು. ಆದರೆ ಆತನ ಮೊಬೈಲ್‌ನಲ್ಲಿ ಈಕೆಯ ಫೋಟೊ, ವಿಡಿಯೊ ಇತ್ತು. ಇದನ್ನೂ ಡಿಲೀಟ್‌ ಮಾಡಿಸಲು ಆಕೆ ರಾಬರಿ ಪ್ಲ್ಯಾನ್‌ ಮಾಡಿ ಸಿಕ್ಕಿಬಿದ್ದಿದ್ದಾಳೆ.

VISTARANEWS.COM


on

By

Techie robbery plans to delete her photo video from lovers mobile phone
ಶೃತಿ, ಸುರೇಶ್, ಮನೋಜ್, ವೆಂಕಟೇಶ್ ಹಾಗೂ ಹೊನ್ನಪ್ಪ ಬಂಧಿತ ಆರೋಪಿಗಳು
Koo

ಬೆಂಗಳೂರು: ಇತ್ತೀಚೆಗಂತೂ ಚಿತ್ರ-ವಿಚಿತ್ರದಲ್ಲಿ ಕ್ರೈಂಗಳು ನಡೆಯುತ್ತಿವೆ. ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ ಹಾಗೂ ವಿಡಿಯೊಗಳನ್ನು ಡಿಲೀಟ್ ಮಾಡಿಸಲೆಂದು ಪ್ರಿಯತಮೆಯೇ ರಾಬರಿ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮೀಯ ರೀತಿ ಪ್ರಿಯತಮೆಯೇ ಪ್ರಿಯಕರನ ಮೇಲೆ ರಾಬರಿ ಮಾಡಿಸಿ, ಟೆಕ್ಕಿ ಯುವತಿ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಬೆಳ್ಳಂದೂರು ಪೊಲೀಸರಿಂದ ಟೆಕ್ಕಿ ಶೃತಿ ಸೇರಿ ಮೂವರನ್ನು ಬಂಧಿಸಿದ್ದಾರೆ.

ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶೃತಿ ಭೇಟಿಗೆ ತೆರಳಿದ್ದ. ಭೇಟಿಯಾಗಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತರು ವಂಶಿಕೃಷ್ಣರೆಡ್ಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಜಗಳ ತೆಗೆದು ಆತನ ಬಳಿಯಿದ್ದ ಮೊಬೈಲ್ ಕಸಿದಿದ್ದರು. ವಂಶಿ ಜತೆಯಲ್ಲಿಯೇ ಇದ್ದ ಶೃತಿಯ ಮೊಬೈಲ್‌ ಅನ್ನು ಕಸಿದುಕೊಂಡಿದ್ದರು. ಬಳಿಕ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಯಿತು ಎಂದು ಬಾಯ್‌ಫ್ರೆಂಡ್‌ ವಂಶಿ ಮುಂದೆ ಶೃತಿ ಡ್ರಾಮಾ ಮಾಡಿದ್ದಳು.

ಆದರೆ ಇಷ್ಟಕ್ಕೆ ಸುಮ್ಮನಾಗದ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ತೆರಳಿ ಕಾರಿನ ನಂಬರ್ ಸಮೇತ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದಾಗ, ಶೃತಿಯದ್ದೆ ಇದೆಲ್ಲ ಪ್ಲ್ಯಾನ್‌ ಎಂದು ತಿಳಿಸಿದ್ದರು. ಬೈಕ್‌ಗೆ ಡಿಕ್ಕಿ ಹೊಡೆದು ಮೊಬೈಲ್ ಕಸಿದುಕೊಳ್ಳಲು ಹೇಳಿದ್ದು ಎಂದು ತಿಳಿಸಿದ್ದಾರೆ.

ಪ್ರಿಯತಮನಿಂದ ದೂರವಾಗಲು ತೀರ್ಮಾನಿಸಿದ್ದ ಶೃತಿ

ಇತ್ತೀಚೆಗೆ ಪ್ರಿಯತಮ ವಂಶಿಕೃಷ್ಣನಿಂದ ದೂರವಾಗಲು ಶೃತಿ ಯತ್ನಿಸ್ತಿದ್ದಳು. ಆದರೆ ವಂಶಿಕೃಷ್ಣನ ಮೊಬೈಲ್‌ನಲ್ಲಿ ಶೃತಿಯ ಫೋಟೊಗಳಿದ್ದವು. ನೇರವಾಗಿ ಹೇಳಿದರೆ ಎಲ್ಲಿ ವಂಶಿಕೃಷ್ಣ ವಿರೋಧ ವ್ಯಕ್ತಪಡಿಸುತ್ತಾನೋ ಎಂದು ತಿಳಿದ ಶೃತಿ ಮೊಬೈಲ್ ರಾಬರಿ ಮಾಡುವ ಖರ್ತನಾಕ್ ಪ್ಲ್ಯಾನ್‌ ಮಾಡಿದ್ದಳು. ಸದ್ಯ ಆರೋಪಿ ಟೆಕ್ಕಿ ಶೃತಿ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಬೆಳ್ಳಂದೂರು ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Fraud Case : ಆನ್‌ಲೈನ್ ಜಾಬ್, ಹೂಡಿಕೆ ಹೆಸರಲ್ಲಿ ವಂಚನೆ; ಕನ್ನ ಹಾಕಿದ ಕೋಟಿ ಹಣ ಚೈನಾ ವ್ಯಾಲೆಟ್‌ಗೆ ರವಾನೆ!

Fraud Case : ಆನ್‌ಲೈನ್ ಜಾಬ್, ಹೂಡಿಕೆ ಹೆಸರಲ್ಲಿ ವಂಚನೆ ಮಾಡಿ, ಜನರಿಗೆ ಕನ್ನ ಹಾಕಿ ಕೋಟಿ ಕೋಟಿ ರೂ. ಹಣ ಗಳಿಸುತ್ತಿದ್ದ ವಂಚಕರು ಚೈನಾ ವ್ಯಾಲೆಟ್‌ಗೆ ರವಾನೆ ಮಾಡುತ್ತಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಸೈಬರ್‌ ವಂಚಕರನ್ನು ಹೆಡೆಮುರಿ ಕಟ್ಟಿದ್ದಾರೆ.

VISTARANEWS.COM


on

By

Fraud Case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆನ್‌ಲೈನ್‌ನಲ್ಲಿ ಕೆಲಸ, ಕೈ ತುಂಬ ಸಂಬಳ ಅಂದರೆ ಯಾರು ತಾನೇ ಬೇಡ ಅಂತಾರೆ.‌ ಕುಳಿತಲ್ಲೆ ಹಣ ಜೇಬಿಗೆ ಇಳಿಸಬಹುದು ಎಂದರೆ ಆನ್‌ಲೈನ್ ಕೆಲಸಕ್ಕಾಗಿ ಜನ ಕ್ಯೂನಲ್ಲಿ ನಿಲ್ಲುತ್ತಾರೆ. ಹೀಗೆ ಆನ್‌ಲೈನ್ ಕೆಲಸ ಮತ್ತು ಹೂಡಿಕೆ ಮಾಡುವ ಜನರನ್ನೆ ಟಾರ್ಗೆಟ್ ಮಾಡಿದ ಗ್ಯಾಂಗ್‌ವೊಂದು (Fraud Case) ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕೆಲಸ ಕೊಡಿಸುತ್ತೇವೆ ಎಂದು ವಾಟ್ಸ್‌ಆ್ಯಪ್‌ ಮೂಲಕ ಜನರನ್ನು ಸಂಪರ್ಕ ಮಾಡುತ್ತಿದ್ದ ಈ ಸೈಬರ್ ವಂಚಕರು, ನಂತರ ಟೆಲಿಗ್ರಾಂನಲ್ಲಿ ಒಂದಷ್ಟು ಲಿಂಕ್ ಕಳಿಸಿ ಜಾಬ್ ಟಾಸ್ಕ್ ಕೊಡುತ್ತಿದ್ದರು. ಒಂದರ ಹಿಂದೆ ಒಂದು ಟಾಸ್ಕ್ ಕೊಟ್ಟು ತಾವೇ ಒಂದಷ್ಟು ಹಣ ಕೂಡ ಕೊಡುತ್ತಿದ್ದರು. ಹಣದ ಆಮಿಷಕ್ಕೆ ಒಳಗಾದ ಜನ, ಹೆಚ್ಚಿನ ಹಣ ಬರುತ್ತದೆ ಎಂದು ಹೂಡಿಕೆ ಮಾಡಿದಾಗ ಲಕ್ಷ ಲಕ್ಷ ಹಣ ಹಾಕಿಸಿಕೊಂಡು ಗುಳುಂ ಮಾಡಿಬಿಡುತ್ತಿದ್ದರು. ಹೀಗೆ ಬೆಂಗಳೂರಿನ ಟಿ. ದಾಸರಹಳ್ಳಿ ನಿವಾಸಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಗ್ಯಾಂಗ್ ಬಳಿಕ ಬಂದ ಹಣವನ್ನು ಚೈನಾ ಮೂಲದ ಆ್ಯಪ್‌ಗಳ ವ್ಯಾಲೆಟ್‌ಗಳಿಗೆ ಆ್ಯಡ್ ಮಾಡಿ ವಿದೇಶಕ್ಕೆ ರವಾನಿಸುತ್ತಿದ್ದರು.

ಈ ಸೈಬರ್ ವಂಚಕ ಜಾಲದ ಬಗ್ಗೆ ಉತ್ತರ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು ಆರ್‌ಟಿ ನಗರ ಮೂಲದ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಸೈಯದ್ ಹ್ಯೆಯ್ಯ, ಉಮರ್, ತೇಜಸ್, ಮುಜಾಮಿಲ್, ಚೇತನ್, ವಸೀಂ, ಜಯದ್, ಅಬ್ದುಲ್ ಅನಾನ್, ಓಂ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ಸ್‌ ಭಾಗಿ

ಬಂಧಿತ ಆರೋಪಿಗಳಲ್ಲಿ ಮೂವರು ಸಾಫ್ಟ್ ವೇರ್ ಎಂಜಿನಿಯರ್ಸ್ ಕೂಡ ಇದ್ದಾರೆ ಎನ್ನಲಾಗಿದೆ. ಆರೋಪಿಗಳು ಸಾರ್ವಜನಿಕರಿಂದ ಬಂದ ಹಣವನ್ನು ಯುಎಸ್‌ಡಿಟಿ ಕನ್ವರ್ಟ್ ಮಾಡಿ ಚೈನಾ ವ್ಯಾಲೆಟ್‌ಗಳಿಗೆ ಹಣ ಕಳಿಸಿಕೊಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಆರು ಕೋಟಿ ರೂ. ಅಧಿಕ ಹಣ ವಂಚಿಸಿದ್ದು ಕಂಡು ಬಂದಿದೆ. ಬಂಧಿತರಿಂದ 72 ಮೊಬೈಲ್, 182 ಡೆಬಿಟ್ ಕಾರ್ಡ್, 2 ಲ್ಯಾಪ್ ಟಾಪ್, 133 ಸಿಮ್ ಕಾರ್ಡ್, 127 ಬ್ಯಾಂಕ್ ಪಾಸ್ ಬುಕ್ ಹಾಗೂ 1.74 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಆನ್ ಲೈನ್ ಜಾಬ್ ಮತ್ತು ಹೂಡಿಕೆ ವಂಚನೆ ಬಗ್ಗೆ ದೇಶದ 21 ರಾಜ್ಯಗಳಲ್ಲಿ 122 ಪ್ರಕರಣ ದಾಖಲಾಗಿದ್ದು, ಸೆನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Siddheshwar Temple : ಸೊಲ್ಲಾಪುರದ ಸಿದ್ದೇಶ್ವರ ದೇಗುಲದ ಆವರಣದಲ್ಲಿ ವಚನಕಾರ ಸಿದ್ದರಾಮನ ವಚನಗಳ ಅಳವಡಿಕೆಗೆ ಕಸಾಪ ಆಗ್ರಹ

ಸೊಲ್ಲಾಪುರದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ವಚನಕಾರ ಸಿದ್ದರಾಮನ ವಚನಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

VISTARANEWS.COM


on

By

Siddeshwara Temple
Koo

ಬೆಂಗಳೂರು: ಪ್ರಸಿದ್ಧ ವಚನಕಾರನಾದ ಸೊನ್ನಲಿಗೆಯ ಸಿದ್ದರಾಮ, ಸೊಲ್ಲಾಪುರದಲ್ಲಿ ಸ್ಥಾಪಿಸಿದ ಸಿದ್ದೇಶ್ವರ ಗುಡಿಯಲ್ಲಿ (Siddheshwar Temple) ಸಿದ್ದರಾಮನ ಆಯ್ದ ವಚನಗಳನ್ನು ಕನ್ನಡ ಮತ್ತು ಮರಾಠಿ ಭಾಷೆಯ ಫಲಕಗಳಲ್ಲಿ ಮುದ್ರಿಸಿ, ದೇವಸ್ಥಾನದ ಆವರಣದಲ್ಲಿ ತೂಗುಹಾಕಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ದೇವಳದ ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಪತ್ರ ಬರೆದು ಮಾತನಾಡಿದ ಡಾ. ಬಿಳಿಮಲೆ ಪ್ರಸಿದ್ಧ ವಚನಕಾರನಾದ ಸೊನ್ನಲಿಗೆಯ ಸಿದ್ದರಾಮ ಕಲ್ಯಾಣ ಕ್ರಾಂತಿಯ ಕೇಂದ್ರ ಬಿಂದುವಾಗಿದ್ದ ಶೂನ್ಯ ಸಿಂಹಾಸನವನ್ನೇರಿದ ಮೂರನೆಯ ಅನುಭಾವಿ ಆಗಿದ್ದ. ತನ್ನ ಕಾಯಕ ತತ್ವದಿಂದಲೇ ಪ್ರಸಿದ್ಧನಾಗಿದ್ದ ಆತ, ಶರೀರವನ್ನು ವ್ಯರ್ಥವಾಗಿ ಕಳೆಯಬಾರದೆಂಬ ನಿಲುವನ್ನು ಹೊಂದಿದ್ದ. ಸಿದ್ದರಾಮ ಕಟ್ಟಿಸಿದ ಕೆರೆಗಳು ಮತ್ತು ಅರವಟ್ಟಿಗೆಗಳು ಇಂದಿಗೂ ಬದುಕುಳಿದಿದ್ದು, ಅವರ ಸಾಮಾಜಿಕ ಬದ್ಧತೆ ಅನನ್ಯವಾದುದು ಎಂದಿದ್ದಾರೆ.

ಕರ್ನಾಟಕ ಏಕೀಕರಣದ ನಂತರ ಸಿದ್ದರಾಮನ ಹುಟ್ಟೂರಾದ ಸೊನ್ನಲಿಗೆಯು ಮಹಾರಾಷ್ಟ್ರಕ್ಕೆ ಸೇರಿ, ಆ ಪ್ರದೇಶವು ಮರಾಠಿಮಯವಾಗುತ್ತಲೇ ಹೋಯಿತು. ಇವತ್ತು ಅಲ್ಲಿ ಕನ್ನಡ ಕಾಣೆಯಾಗಿದ್ದು, ಜನರಿಗೂ ಸಿದ್ದರಾಮನ ಮಹತ್ವ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಕಪಿಲ ಸಿದ್ಧಮಲ್ಲಿಕಾರ್ಜುನನ ಅಂಕಿತದಲ್ಲಿ ೧೯೦೦ಕ್ಕೂ ಹೆಚ್ಚು ವಚನಗಳನ್ನು ಬರೆದ ಸಿದ್ದರಾಮನ ಹೆಸರು ಹೀಗೆ ಮರೆಯಾಗುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಕನ್ನಡ ಮತ್ತು ಮರಾಠಿಯಲ್ಲಿ ಸಿದ್ದರಾಮನ ವಚನಗಳ ಸಂದೇಶವು ದೇವಸ್ಥಾನದ ಆವರಣದಲ್ಲಿಯೇ ದೊರೆತಲ್ಲಿ, ಅದು ಭಾಷಾ ಸೌಹಾರ್ದತೆಯ ಸಂಕೇತವಾಗುತ್ತದೆಯಷ್ಟೇ ಅಲ್ಲ, ನಾಗರಿಕ ಸಮಾಜಕ್ಕೆ ದೊರೆಯಬಹುದಾದ ಅತ್ಯುತ್ತಮ ಸಂದೇಶವೂ ಆಗುತ್ತದೆ ಎಂದಿದ್ದಾರೆ. ತಮ್ಮ ಕೋರಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಆಡಳಿತ ಮಂಡಳಿಯು ಇಷ್ಟರಲ್ಲಿಯೇ ಕ್ರಮವಹಿಸಲಿದೆ ಎಂದು ಸಹ ಡಾ. ಬಿಳಿಮಲೆ ಹೇಳಿದ್ದಾರೆ.

Continue Reading

ಬೆಂಗಳೂರು

School Admissions : ಗಲ್ಲಿಗೊಂದು ಹುಟ್ಟಿಕೊಂಡ ಖಾಸಗಿ ಶಾಲೆಗಳು; ವಿದ್ಯಾರ್ಥಿಗಳ ಆಡ್ಮಿನ್‌ಗಾಗಿ ಹೊಸ ತಂತ್ರ

School Admissions : ಹಿಂದೆಲ್ಲ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಆಡ್ಮಿನ್‌ ಮಾಡಿಸಬೇಕು ಅಂದರೆ ಪೋಷಕರು ಹಗಲು-ರಾತ್ರಿ ಎಂದು ಕ್ಯೂ ನಿಲ್ಲುತ್ತಿದ್ದರು. ಆದರೆ ಇದೀಗ ಕಾಲ ಚೇಂಜ್‌ ಆಗಿದೆ. ಗಲ್ಲಿಗೊಂದು ಶಾಲೆಗಳು ಹುಟ್ಟಿಕೊಂಡಿದ್ದು, ದಾಖಲಾತಿ ಹೆಚ್ಚಿಸಿಕೊಳ್ಳಲು ಆಡಳಿತ ಮಂಡಳಿ ಹೊಸ ಹೊಸ ಹೊಸ ಆಫರ್‌ ನೀಡುತ್ತಿದೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಆಡ್ಮಿನ್‌ಗಾಗಿ ಅಡ್ವಾನ್ಸ್‌ ಬುಕ್ಕಿಂಗ್‌ ಮಾಡಲು ಕೆಲ ಖಾಸಗಿ ಶಾಲೆಗಳು ಮುಂದಾಗಿದೆ.

VISTARANEWS.COM


on

By

school admission
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಖಾಸಗಿ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ (School Admissions) ಪರದಾಡುತ್ತಿರುವ ಖಾಸಗಿ ಶಾಲೆಗಳು ಹೊಸದೊಂದು ಆಫರ್ ನೀಡಲು ಮುಂದಾಗಿದ್ದು, ಸದ್ಯ ಈ ಆಫರ್‌ಗೆ ಪೋಷಕರು ಅಸಮಾಧಾನಗೊಂಡಿದ್ದಾರೆ.

ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಆದರೆ ಕೆಲವು ಖಾಸಗಿ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಡ್ವಾನ್ಸ್ ಆಗಿ ಈಗಲೇ ಪ್ರವೇಶಾತಿಗಾಗಿ ಮುಂದಾಗುತ್ತಿವೆ. ಈಗಂತೂ ಗಲ್ಲಿಗೊಂದು ಖಾಸಗಿ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೆ ಪರದಾಡುತ್ತಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಕೆಲವು ಆಫರ್‌ಗಳನ್ನು ಕೊಡಲು ಮುಂದಾಗಿದೆ.

ಹಲವು ಖಾಸಗಿ ಶಾಲೆಗಳು ಆರಂಭಿಕ ಪ್ರವೇಶಕ್ಕಾಗಿ ಶುಲ್ಕ ವಿನಾಯಿತಿಯ ಭರವಸೆಯನ್ನು ನೀಡುತ್ತಿವೆ. ಗಡುವಿನೊಳಗೆ ಪ್ರವೇಶವನ್ನು ಖಚಿತಪಡಿಸಿದರೆ ಪ್ರವೇಶ ಶುಲ್ಕವನ್ನು ಮನ್ನಾ ಮಾಡಲಾಗುವುದು ಎಂದು ಆಡಳಿತ ಮಂಡಳಿ ಪೋಷಕರಿಗೆ ಭರವಸೆ ನೀಡುತ್ತಿವೆ. ಈ ಶಾಲೆಗಳಲ್ಲಿ ಪ್ರವೇಶ ಶುಲ್ಕ 10,000 ರೂ. ಯಿಂದ 25,000 ರೂ. ಇರಲಿದೆ. ಹಲವಾರು ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ರಿಯಾಯಿತಿಗಳ ಜತೆಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿವೆ.

ಇದನ್ನೂ ಓದಿ: Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಕೊರತೆ ಕೂಡ ಇದೆ. ಹೀಗಾಗಿ ಶಾಲೆಗಳ ಪ್ರವೇಶಾತಿಯಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಸಾಮಾನ್ಯವಾಗಿ ಶಿಫಾರಸ್ಸು ಮೂಲಕ ಪ್ರವೇಶಾತಿ ಪಡೆಯುವುದನ್ನು ನೋಡಿದ್ದೇವೆ. ಆದರೆ ಈ ರೀತಿಯ ಅಡ್ವಾನ್ಸ್ ನೋಂದಣಿಯಿಂದ ವಿಧ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಗ್ಗಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಇಂತಹ ಮಾರ್ಕೆಟಿಂಗ್ ತಂತ್ರಗಾರಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕಕ್ಕೆ ಮಾರಕವಾಗದೆ ಇರಲಿ ಎನ್ನುತ್ತಿದ್ದಾರೆ ಪೋಷಕರು. ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಪೋಷಕರ ಡೇಟಾವನ್ನು ತೆಗೆದುಕೊಳ್ಳುವ ಶಾಲೆಗಳಿವೆ. ಆದರೆ ಈ ರೀತಿ ಅಡ್ವಾನ್ಸ್ ನೋಂದಣಿಯ ಆಮಿಷ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Techie robbery plans to delete her photo video from lovers mobile phone
ಬೆಂಗಳೂರು33 ನಿಮಿಷಗಳು ago

Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

Hopcoms store loses charm in Bengaluru
ಬೆಂಗಳೂರು1 ಗಂಟೆ ago

HOPCOMS Outlets : ಬೆಂಗಳೂರಿನಲ್ಲಿ ಚಾರ್ಮ್‌ ಕಳೆದುಕೊಂಡ ಹಾಪ್‌ಕಾಮ್ಸ್‌ ಮಳಿಗೆ

fire accident
ಬೆಂಗಳೂರು ಗ್ರಾಮಾಂತರ2 ಗಂಟೆಗಳು ago

Fire Accident : ಹೊಸೂರು ಸಮೀಪದ ಟಾಟಾ ಕಂಪೆನಿಯಲ್ಲಿ ಭಾರಿ ಅಗ್ನಿ ಅವಘಡ; ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು ‌

Fraud Case
ಬೆಂಗಳೂರು2 ಗಂಟೆಗಳು ago

Fraud Case : ಆನ್‌ಲೈನ್ ಜಾಬ್, ಹೂಡಿಕೆ ಹೆಸರಲ್ಲಿ ವಂಚನೆ; ಕನ್ನ ಹಾಕಿದ ಕೋಟಿ ಹಣ ಚೈನಾ ವ್ಯಾಲೆಟ್‌ಗೆ ರವಾನೆ!

Dina Bhavishya
ಭವಿಷ್ಯ3 ಗಂಟೆಗಳು ago

Dina Bhavishya : ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನಾಡಿ, ಅಪಾಯ ತಂದುಕೊಳ್ಳುವುದು ಬೇಡ

Siddeshwara Temple
ಬೆಂಗಳೂರು1 ದಿನ ago

Siddheshwar Temple : ಸೊಲ್ಲಾಪುರದ ಸಿದ್ದೇಶ್ವರ ದೇಗುಲದ ಆವರಣದಲ್ಲಿ ವಚನಕಾರ ಸಿದ್ದರಾಮನ ವಚನಗಳ ಅಳವಡಿಕೆಗೆ ಕಸಾಪ ಆಗ್ರಹ

school admission
ಬೆಂಗಳೂರು1 ದಿನ ago

School Admissions : ಗಲ್ಲಿಗೊಂದು ಹುಟ್ಟಿಕೊಂಡ ಖಾಸಗಿ ಶಾಲೆಗಳು; ವಿದ್ಯಾರ್ಥಿಗಳ ಆಡ್ಮಿನ್‌ಗಾಗಿ ಹೊಸ ತಂತ್ರ

karnataka weather Forecast
ಮಳೆ1 ದಿನ ago

Karnataka Weather : ಕರಾವಳಿ ಸೇರಿ ಉತ್ತರ ಒಳನಾಡಿನ ಈ ಭಾಗದಲ್ಲಿ ಭರ್ಜರಿ ಮಳೆ; ಯೆಲ್ಲೊ ಅಲರ್ಟ್‌ ಘೋಷಣೆ

Dina Bhavishya
ಭವಿಷ್ಯ1 ದಿನ ago

Dina Bhavishya : ಈ ರಾಶಿಯವರಿಗೆ ಅನಿರೀಕ್ಷಿತ ಲಾಭವು ದುಪ್ಪಟ್ಟು ಖುಷಿ ಸಿಗಲಿದೆ

Murder case
ಬೆಂಗಳೂರು2 ದಿನಗಳು ago

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌