Karnataka politics : ಡಿಕೆ ಶಿವಕುಮಾರ್‌ ಆಪರೇಷನ್‌ ಆಟಕ್ಕೆ ಬ್ರೇಕ್‌ ಹಾಕಿದ್ರಾ ರಾಜಾಹುಲಿ?; ಮತ್ತೆ ಚಿಗುರಿದ ಬಿಜೆಪಿ - Vistara News

ಕರ್ನಾಟಕ

Karnataka politics : ಡಿಕೆ ಶಿವಕುಮಾರ್‌ ಆಪರೇಷನ್‌ ಆಟಕ್ಕೆ ಬ್ರೇಕ್‌ ಹಾಕಿದ್ರಾ ರಾಜಾಹುಲಿ?; ಮತ್ತೆ ಚಿಗುರಿದ ಬಿಜೆಪಿ

Karnataka politics : ಬಿಜೆಪಿಯಿಂದ ಹಲವು ನಾಯಕರನ್ನು ಆಪರೇಷನ್‌ ಮಾಡುವ ಡಿ.ಕೆ. ಶಿವಕುಮಾರ್‌ ಅವರ ಪ್ರಯತ್ನಕ್ಕೆ ಬಿಎಸ್‌ವೈ ತಡೆಯಾಗುತ್ತಾರಾ? ಬಿಎಸ್‌ವೈ ಎಂಟ್ರಿಯಿಂದ ಬದಲಾಯ್ತಾ ಪರಿಸ್ಥಿತಿ?

VISTARANEWS.COM


on

DK Shivakumar BS Yediyurappa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ನಾಯಕರೇ (Leaderless position) ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನೇ ನಗದೀಕರಿಸಿಕೊಂಡು ಬಿಜೆಪಿಯ ಶಾಸಕರನ್ನು ಆಪರೇಷನ್‌ ಹಸ್ತ (Operation Hasta) ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ನಡೆಸುತ್ತಿರುವ ಪ್ರಯತ್ನಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಬ್ರೇಕ್‌ ಹಾಕಿದಂತೆ (Karnataka Politics) ಮೇಲ್ನೋಟಕ್ಕೆ ಕಾಣುತ್ತಿದೆ.

ಕಳೆದ ಕೆಲವು ದಿನಗಳಿಂದ ಬಿಜೆಪಿ ಶಾಸಕರ ಆಪರೇಷನ್‌ನ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ, ಕೆಲವು ಶಾಸಕರು ಕೂಡಾ ನೇರವಾಗಿ ತಮಗೆ ಬಿಜೆಪಿಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಮಾತನ್ನು ಆಡುತ್ತಿದ್ದಾರೆ. ಅಷ್ಟಾದರೂ ಯಾವ ಬಿಜೆಪಿ ನಾಯಕರೂ ಈ ಪರಿಸ್ಥಿತಿಯನ್ನು ತಣ್ಣಗೆ ಮಾಡುವ ಇಲ್ಲವೇ ವಿಶ್ವಾಸ ತುಂಬುವ ಪ್ರಯತ್ನ ನಡೆಸಿರಲಿಲ್ಲ. ಇದು ಇನ್ನಷ್ಟು ಮಂದಿ ಬಿಜೆಪಿ ಶಾಸಕರು, ನಾಯಕರು ಕಾಂಗ್ರೆಸ್‌ ಕಡೆಗೆ ವಾಲುವ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಮತ್ತೆ ಅಖಾಡಕ್ಕೆ ಇಳಿದಿದ್ದು, ಇದು ಬಿಜೆಪಿಗೆ ಆಂತರಿಕವಾಗಿ ಬಲವನ್ನು ತುಂಬಿದಂತಾಗಿದೆ.

ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಮನೆಯಲ್ಲೇ ಆಯೋಜಿಸಿದ್ದ ಸಭೆಗೆ ಬೆಂಗಳೂರಿನ 16 ಬಿಜೆಪಿ ಶಾಸಕರ ಪೈಕಿ ಏಳು ಮಂದಿ ಬಂದಿರಲಿಲ್ಲ. ಅವರಲ್ಲಿ ಎಸ್‌.ಟಿ. ಸೋಮಶೇಖರ್‌ ಅವರೊಬ್ಬರೇ ಸದ್ಯ ಬಿಜೆಪಿಯಿಂದ ದೂರ ಸರಿಯುವ ಅಭಿಪ್ರಾಯ ಹೊಂದಿದವರು ಎನ್ನಲಾಗಿದೆ. ಉಳಿದವರು ನಾನಾ ಕಾರಣಗಳಿಂದ ಬಂದಿರಲಿಲ್ಲ ಎನ್ನಲಾಗಿದೆ. ಶಾಸಕರಾದ ಮುನಿರತ್ನ, ಗೋಪಾಲಯ್ಯ ಮತ್ತು ಬೈರತಿ ಬಸವರಾಜ್‌ ಪಕ್ಷ ಬಿಡುವುದಿಲ್ಲ ಎನ್ನುವುದು ಬಿಜೆಪಿಯಲ್ಲಿ ಖಾತ್ರಿಯಾಗಿದೆ.

ಕಠಿಣ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಮುನ್ನಡೆಸುವವರು ಯಾರು? ಜವಾಬ್ದಾರಿ ವಹಿಸಿಕೊಳ್ಳುವವರು ಯಾರು ಎನ್ನುವ ಪ್ರಶ್ನೆ ಜೋರಾಗಿ ಕೇಳಿಬಂದಾಗ ಯಡಿಯೂರಪ್ಪ ಎಂಟ್ರಿ ಕೊಟ್ಟಿದ್ದು ಹಲವು ನಾಯಕರಿಗೆ ಜೀವ ಬಂದಂತಾಗಿದೆ. ಹೀಗಾಗಿ ಉಳಿದ ನಾಯಕರೂ ಧೈರ್ಯದಿಂದ ಮಾತನಾಡಲು ಆರಂಭ ಮಾಡಿದ್ದಾರೆ. ಜತೆಗೆ ಸಭೆಗಳನ್ನೂ ಆಯೋಜನೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಅವರು ಎಸ್‌.ಟಿ. ಸೋಮಶೇಖರ್‌ ಅವರ ಜತೆ ಶನಿವಾರ ಮಾತುಕತೆ ನಡೆಸಿದ್ದಾರೆ.

ಸಮಸ್ಯೆ ಬಗೆಹರಿಸಲು ಹೊಣೆ

ರಾಜ್ಯದಲ್ಲಿ ಬಿಜೆಪಿ ಬಿಟ್ಟು ಹೋಗುವ ವಿಚಾರದಲ್ಲಿ ಹಲವರ ಹೆಸರು ಕೇಳಿಬರುತ್ತಿದ್ದರೂ ಅಂತಿಮವಾಗಿ ಬಿಜೆಪಿಗೆ ಸಂಶಯವಿರುವುದು ಶಾಸಕರಾದ ಎಸ್‌.ಟಿ ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಮೇಲೆ ಮಾತ್ರ ಎನ್ನಲಾಗಿದೆ. ಸೋಮಶೇಖರ್‌ ಅವರಿಗೆ ಸ್ಥಳೀಯವಾಗಿ ಬಿಜೆಪಿ ನಾಯಕರಿಂದ ತುಂಬ ಕಿರಿಕಿರಿಯಾಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರು ಮುತುವರ್ಜಿ ವಹಿಸಿಲ್ಲ ಎನ್ನುವ ನೋವಿದೆ.

ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ ಬಿ.ಎಸ್‌. ಯಡಿಯೂರಪ್ಪ ಅವರು ಸೋಮಶೇಖರ್‌ ಅವರ ಸಮಸ್ಯೆಯನ್ನು ಪರಿಹರಿಸುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದಾರೆ.

ʻʻಸೋಮಶೇಖರ್ ಜತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು. ಬೆಂಗಳೂರಿನ ಉಳಿದ ನಾಯಕರೂ ಸೋಮಶೇಖರ್ ಜತೆಗೆ ಮಾತನಾಡಿ. ಸ್ಥಳೀಯ ಮುಖಂಡರ ಜತೆ ಮಾತುಕತೆ ಮಾಡಿ ಸಮನ್ವಯ ಸಾಧಿಸಿ. ಎಲ್ಲರೂ ಒಟ್ಟಾಗಿ ಹೋಗುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೆ ಪಕ್ಷ ಬಿಡದಂತೆ ಖಾತ್ರಿ ಮಾಡಿʼʼ ಎಂದು ಬಿಎಸ್‌ವೈ ಹೇಳಿದ್ದಾರೆ ಎನ್ನಲಾಗಿದೆ.

ʻʻಶಿವರಾಮ್ ಹೆಬ್ಬಾರ್ ಜತೆಗೂ ಮಾತನಾಡಿʼʼ ಎಂದು ಬೊಮ್ಮಾಯಿ ಅವರಿಗೆ ಸೂಚಿಸಿರುವ ಅವರು, ʻʻವಲಸಿಗರು ಪಕ್ಷ ಬಿಡುವ ಚರ್ಚೆಯಾದರೆ ಸ್ಪಷ್ಟೀಕರಣ ಕೊಡಿಸಿ. ಯಾರೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನೆ ಆಗಬೇಕು. ಸರ್ಕಾರ ವೈಫಲ್ಯ ಮರೆಮಾಚಲು ಈ ಸುದ್ದಿ ಹರಿಸುತ್ತಿದೆ ಎಂಬ ಸಂದೇಶ ರವಾನೆ ಆಗಬೇಕುʼʼ ಎಂದಿದ್ದಾರೆ.

ಯಾರೇ ಆಯ್ಕೆಯಾದರೂ ಬೆಂಬಲ ನೀಡಬೇಕು

ʻʻಎಲ್ಲ ಬಿಜೆಪಿ ನಾಯಕರು ಆಕ್ಟಿವ್ ಆಗಬೇಕು. ವಿಪಕ್ಷ ನಾಯಕ, ಅಧ್ಯಕ್ಷರ ಆಯ್ಕೆ ಸದ್ಯದಲ್ಲೇ ನಡೆಯಲಿದೆ. ಯಾರೇ ಆಯ್ಕೆ ಆದರೂ ಜತೆಯಾಗಿ ನಿಲ್ಲಬೇಕು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಬೇಕು. ಲೋಕಸಭೆ ಚುನಾವಣೆಯೇ ನಮ್ಮ ಗುರಿʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಎಸ್‌ವೈ ಎಂಟ್ರಿಯಾದ ಕೂಡಲೇ ಠುಸ್‌ ಆಗುತ್ತಾ ಡಿಕೆಶಿ ಪ್ಲ್ಯಾನ್‌

ಡಿ.ಕೆ. ಶಿವಕುಮಾರ್‌ ಅವರು ಪ್ರಮುಖವಾಗಿ ಟಾರ್ಗೆಟ್‌ ಮಾಡಿದ್ದು ಎಸ್‌.ಟಿ. ಸೋಮಶೇಖರ್‌ ಮತ್ತು ಬೈರತಿ ಬಸವರಾಜ್‌ ಅವರನ್ನು. ಬೈರತಿ ಬಸವರಾಜ್‌ಗೆ ಸಿದ್ದರಾಮಯ್ಯ ಅವರ ಮೇಲೆ ಸಿಟ್ಟಿರುವುದರಿಂದ ಅವರನ್ನು ಸೇರಿಸಿಕೊಳ್ಳುವುದು ಕಷ್ಟ. ಎಸ್‌ಟಿ ಸೋಮಶೇಖರ್‌ ಅವರು ಬಿಎಸ್‌ವೈ ಅವರ ಮನವೊಲಿಕೆಗೆ ಬಾಗುವ ಸಾಧ್ಯತೆ ಕಂಡುಬಂದರೆ ಅದು ಡಿ.ಕೆ.ಶಿಗೆ ಹಿನ್ನಡೆಯಾದಂತೆ.

ಇದನ್ನೂ ಓದಿ: BJP Politics : ಬಿಎಸ್‌ವೈ ಸಭೆಗೆ ಸೋಮಶೇಖರ್‌, ಬೈರತಿ ಗೈರು; ಯಡಿಯೂರಪ್ಪ ನೀಡಿದ ಮಹತ್ವದ ಸುಳಿವೇನು?

ಡಿ.ಕೆ.ಶಿವಕುಮಾರ್‌ಗೆ ಮುನಿರತ್ನ, ಜಾರಕಿಹೊಳಿ ಬೇಕಾಗಿಲ್ಲ!

ಡಿ.ಕೆ. ಶಿವಕುಮಾರ್‌ಗೆ ರಾಜರಾಜೇಶ್ವರಿ ಕ್ಷೇತ್ರದಿಂದ ಗೆದ್ದಿರುವ ಮುನಿರತ್ನ ಮತ್ತು ಬದ್ಧ ವಿರೋಧಿಯಂತಿರುವ ರಮೇಶ್‌ ಜಾರಕಿಹೊಳಿಯನ್ನು ತೆಗೆದುಕೊಳ್ಳುತ್ತಿಲ್ಲ. ಒಂದೊಮ್ಮೆ ಮುನಿರತ್ನ ಬಂದರೂ ವಿಧಾನ ಪರಿಷತ್‌ ಸ್ಥಾನ ಕೊಡುವುದಾಗಿ ಹೇಳಿರುವುದು ಮುನಿರತ್ನ ಸೇರ್ಪಡೆಗೆ ಹಿನ್ನಡೆಯಾಗಿದೆ.

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಎಚ್‌. ಕುಸುಮಾ ಅವರನ್ನು ನಿಲ್ಲಿಸಿ ಗೆಲ್ಲಿಸುವ ಪ್ರಯತ್ನದಲ್ಲಿರುವ ಡಿ.ಕೆ. ಬ್ರದರ್ಸ್‌ ಮುನಿರತ್ನ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಯೋಚನೆಯಲ್ಲಿದ್ದರು. ಆದರೆ, ತಾನು ಮತ್ತೊಬ್ಬ ಶಂಕರ್ ಆಗಲಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಆರ್ ಶಂಕರ್ ಬಿಜೆಪಿ ಸೇರ್ಪಡೆ ಬಳಿಕ ಟಿಕೆಟ್ ನಿರಾಕರಿಸಲಾಗಿತ್ತು.

ಬೈರತಿ ಬಸವರಾಜ್‌ಗೆ ಡಿ.ಕೆ. ಶಿವಕುಮಾರ್‌ ಆಹ್ವಾನ ನೀಡಿದ್ದು ನಿಜವಾದರೂ ಸಿದ್ದರಾಮಯ್ಯ, ಜಾರ್ಜ್‌, ಬೈರತಿ ಸುರೇಶ್ ವಿರೋಧವಿದೆ. ಅಲ್ಲದೆ ಬಿಜೆಪಿಯಲ್ಲಿ ಪ್ರಭಾವಿ ಕುರುಬ ಸಮುದಾಯದ ನಾಯಕರ ಕೊರತೆ ಇರುವುದರಿಂದ ಅವರನ್ನು ಬಿಜೆಪಿ ಹೇಗಾದರೂ ಮಾಡಿ ಉಳಿಸಿಕೊಳ್ಳುವುದು ಖಚಿತವಾಗಿದೆ. ಹೀಗಾಗಿ ಈ ಹಂತದಲ್ಲಿ ಆಪರೇಷನ್‌ಗೆ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಇಂದು ಕರಾವಳಿಯಲ್ಲಿ ಸಾಧಾರಣ ಮಳೆ; ಉಳಿದೆಡೆ ಮುಂದುವರಿಯಲಿದೆ ಒಣಹವೆ

Karnataka Weather Forecast : ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

karnataka weather forecast
Koo

ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ (Karnataka Weather Forecast) ಕಡಿಮೆ ಆಗಿದೆ. ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ (Rain News) ಮುನ್ಸೂಚನೆಯನ್ನು ನೀಡಿದೆ. ಸೆ.16ರಂದು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೆಳಗಾವಿ ಸೇರಿ ಮಲೆನಾಡನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಮುಖ್ಯವಾಗಿ ಒಣ ಹವೆಯೇ ಮುಂದುವರಿಯುವ ಸಾಧ್ಯತೆಯಿದೆ. ಒಳನಾಡಿನ ಕೆಲವೆಡೆ ಪ್ರತ್ಯೇಕ ಸ್ಥಳದಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಇಲ್ಲೆಲ್ಲ ಮಳೆಯ ಸಿಂಚನ

ನಿನ್ನೆ ಕರಾವಳಿಯ ಹಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗಿದೆ. ಉಡುಪಿಯ ಕೋಟ 3 ಸೆಂ.ಮೀ, ಗೋಕರ್ಣ, ಹೊನ್ನಾವರ ವೀಕ್ಷಣಾಲಯ, ಶಿರಾಲಿ ಪಿಟಿಒ, ಸಿದ್ದಾಪುರ, ಗೇರ್ಸೊಪ್ಪದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಕುಂದಾಪುರ, ಉಡುಪಿ, ಕ್ಯಾಸಲ್ ರಾಕ್, ಉಪ್ಪಿನಂಗಡಿ, ಕಾರ್ಕಳ, ಕುಮಟಾ ಹಾಗೂ ಲೋಂಡಾ, ಕಮ್ಮರಡಿ, ಹಾಸನ ಪಿಟ್ಟಿಯಲ್ಲಿ 1 ಸೆಂ.ಮೀ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತುಮಕೂರು

Road Accident : ತುಮಕೂರಿನ ಪ್ರತ್ಯೇಕ ಕಡೆ ಭೀಕರ ಅಪಘಾತ; 7 ವರ್ಷದ ಬಾಲಕಿ ಸೇರಿ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವು

Road Accident : ತುಮಕೂರಿನ ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದ್ದು, ಏಳು ವರ್ಷದ ಬಾಲಕಿ ಸೇರಿ ಮತ್ತಿಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Road accident at isolated places in Tumkur Two bikers including a 7-year-old girl died on the spot
Koo

ತುಮಕೂರು: ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 7 ವರ್ಷದ ಬಾಲಕಿ ದಾರುಣವಾಗಿ (Road Accident) ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಘಟನೆ ನಡೆದಿದೆ. ಶಾಲಿನಿ (7)‌ ಮೃತ ದುರ್ದೈವಿ. ಬಸವೇಶ್ (16) ಎಂಬ ಬಾಲಕನಿಗೆ ಗಂಭೀರ ಗಾಯವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮಲ್ಲಿಕಾರ್ಜುನ್ (51) ಎಂಬುವವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹುಂಡೈ ವೆನ್ಯು ಕಾರು ರಸ್ತೆ ಬದಿಯ ಡಿವೈಡರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಛಿದ್ರಗೊಂಡಿದೆ. ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್‌ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Road accident at isolated places in Tumkur Two bikers including a 7-year-old girl died on the spot
Road accident at isolated places in Tumkur Two bikers including a 7-year-old girl died on the spot

ಎರಡು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ; ಸವಾರರಿಬ್ಬರು ಸಾವು

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೌತಮ್ (26) ಹಾಗೂ ಅನಿಲ್ (26) ಸ್ಥಳದಲ್ಲೇ ಮೃತಪಟ್ಟವರು. ಮಧುಗಿರಿ ತಾಲೂಕಿನ ತೆರೆಯೂರು ಮೂಲದ ಗೌತಮ್ ಹಾಗೂ ಬಂದ್ರೆಹಳ್ಳಿ ಗ್ರಾಮದ ಅನಿಲ್ ಮೃತ ದುರ್ದೈವಿಗಳು. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೆಎಸ್ಆರ್‌ಟಿಸಿ ಡಿಪೋ ಹಾಗೂ ಜಡಗೊಂಡನಹಳ್ಳಿ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳು ಮಧುಗಿರಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ನಿಪ್ಪಾಣಿಯಲ್ಲಿ ಸರಣಿ ಅಪಘಾತ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ ಬಳಿ‌ 8 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಸರಣಿ ಅಪಘಾತಕ್ಕೆ ಸ್ಥಳದಲ್ಲೆ ಇಬ್ಬರು ದುರ್ಮರಣ ಹೊಂದಿದ್ದು, 6 ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಸಾವಿನ‌ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳಿಗೆ ನಿಪ್ಪಾಣಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಂಟೇನರ್‌ ವಾಹನದ ಚಾಲಕನ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಮೂರು ಕಾರು, ಎರಡು ಲಾರಿ, ಒಂದು ಕಂಟೇನರ್ ಹಾಗೂ ಬೈಕ್‌ಗಳಿಗೆ ಗುದ್ದಿದೆ. ಒಬ್ಬ ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಿಪ್ಪಾಣಿ ಶಹರ ಪೊಲೀಸರು ದೌಡಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಗದಗ

Democracy Day : ಗದಗದಲ್ಲಿ ಮಾನವ ಸರಪಳಿ ವೇಳೆ ಹೆಜ್ಜೇನು ದಾಳಿ; ಹಾವೇರಿಯಲ್ಲಿ ಮೂರ್ಛೆ ಹೋದ ವಿದ್ಯಾರ್ಥಿಗಳು

Democracy Day: ಪ್ರಜಾಪ್ರಭುತ್ವ ಆಚರಣೆ ಹಿನ್ನೆಲೆಯಲ್ಲಿ ಮಾನವ ಸರಪಳಿ ವೇಳೆ ಹಲವು ಅವಘಡ ಸಂಭವಿಸಿದೆ. ಗದಗದಲ್ಲಿ ಹೆಜ್ಜೇನು ದಾಳಿ ಮಾಡಿ ಶಿಕ್ಷಕಿಯರು ಗಾಯಗೊಂಡರೆ, ಇತ್ತ ಹಾವೇರಿಯಲ್ಲಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಮೂರ್ಛೆ ಹೋಗಿದ್ದಾರೆ.

VISTARANEWS.COM


on

By

Bee attacks during Democracy Day celebrations
Koo

ಹಾವೇರಿ: ಪ್ರಜಾಪ್ರಭುತ್ವ ದಿನಾಚರಣೆಯ (Democracy Day) ಅಂಗವಾಗಿ ಮಾನವ ಸರಪಳಿ ವೇಳೆ ಇಬ್ಬರು ವಿದ್ಯಾರ್ಥಿಗಳು ಮೂರ್ಛೆ ಹೋಗಿದ್ದಾರೆ. ಹಾವೇರಿ ಜಿಲ್ಲೆಯ ಹಾವನೂರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಮೂರ್ಛೆ ಬಂದು ಅಸ್ವಸ್ಥಗೊಂಡಿದ್ದರು. ಹಾವೇರಿ ತಾಲೂಕಿನ ಗುತ್ತಲದಲ್ಲಿ ರಸ್ತೆಯ ಬಳಿ ಸಾಲಾಗಿ ವಿದ್ಯಾರ್ಥಿಗಳು ನಿಂತಿದ್ದರು. ಈ ವೇಳೆ ದಿಢೀರ್‌ ಅಸ್ವಸ್ಥಗೊಂಡ ವಿದ್ಯಾರ್ಥಿನಿಗಳನ್ನು ಆಸ್ಪತ್ರೆದ ದಾಖಲು ಮಾಡಲಾಗಿದೆ.

9ನೇ ತರಗತಿಯ ಪ್ರೀತಂ ನಾಗರಾಜ ಪಕ್ಕೆದ ಹಾಗೂ ಜಯಲಕ್ಷ್ಮಿ ಕೇಶವ ಗುಡಿಹಾಳ ಎಂಬ ವಿದ್ಯಾರ್ಥಿನಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರು ಆಸ್ಪತ್ರೆಗೆ ದೌಡಾಯಿಸಿದ್ದು, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಗದಗದಲ್ಲಿ ಶಿಕ್ಷಕರ ಮೇಲೆ ಹೆಜ್ಜೇನು ದಾಳಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನೆಲೆಯಲ್ಲಿ ಮಾನವ ಸರಪಳಿ ವೇಳೆ ಹೆಜ್ಜೇನು ದಾಳಿ ಮಾಡಿದೆ. ಇಬ್ಬರು ಶಿಕ್ಷಕಿಯರ ಮೇಲೆ ಜೇನು ದಾಳಿ ಮಾಡಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮುಖ, ತಲೆ, ಕೈಗೆ ಹೆಜ್ಜೇನು ಕಚ್ಚಿದ್ದು, ಗಾಯವಾಗಿದೆ. ಹೆಜ್ಜೇನು ದಾಳಿ ವೇಳೆ ಜನರೆಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಶಿಗ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸರಸ್ವತಿ ಗುಡಿಸಾಗರ, ಸರೋಜಾ ದಿಂಡೂರು ಅಸ್ವಸ್ಥಗೊಂಡ ಶಿಕ್ಷಕಿಯರು. ಮಾನವೀಯತೆ ತೋರಿದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

Continue Reading

ಬೆಂಗಳೂರು

theft case : ಸ್ಲೀಪರ್‌ ಬಸ್‌ನಲ್ಲಿ ಮೈಮರೆತು ನಿದ್ರೆ ಮಾಡುವ ಎಚ್ಚರ; ಟೆಕ್ಕಿಯ ಲ್ಯಾಪ್‌ಟಾಪ್‌ ಕದ್ದು ಖದೀಮ ಎಸ್ಕೇಪ್‌

theft case : ಸ್ಲೀಪರ್‌ ಬಸ್‌ನಲ್ಲಿ ಮೈಮರೆತು ನಿದ್ರೆ ಮಾಡುವ ಪ್ರಯಾಣಿಕರೇ ಎಚ್ಚರವಾಗಿರಿ.. ನೀವೆನಾದರೂ ಗಾಢ ನಿದ್ರೆಗೆ ಜಾರಿದರೆ ನಿಮ್ಮ ವಸ್ತುಗಳನ್ನು ಲೂಟಿ ಮಾಡುತ್ತಾರೆ. ಸದ್ಯ ಟೆಕ್ಕಿಯ ಲ್ಯಾಪ್‌ಟಾಪ್‌ ಕದ್ದ ಖದೀಮ ಕಾಲ್ಕಿತ್ತಿದ್ದಾನೆ.

VISTARANEWS.COM


on

By

Thief steals techie's laptop from sleeper bus
Koo

ಬೆಂಗಳೂರು: ಸ್ಲೀಪರ್ ಬಸ್‌ನಲ್ಲಿ ಮೈಮರೆತು ನಿದ್ರೆ ಮಾಡುವ ಮುನ್ನ ಎಚ್ಚರವಾಗಿ ಇರಿ. ಯಾಕೆಂದರೆ ನಿದ್ರೆಗೆ ಜಾರಿದ್ದ ಟೆಕ್ಕಿಯೊಬ್ಬರ 70 ಸಾವಿರ ಮೌಲ್ಯದ ಲ್ಯಾಪ್‌ ಟಾಪ್ ಕದ್ದ ಖದೀಮನೊಬ್ಬ (Theft Case) ಕಾಲ್ಕಿತ್ತಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಬಸ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೆನೈನಿಂದ ಎಲೆಕ್ಟ್ರಾನಿಕ್ ಸಿಟಿ ಬರುತ್ತಿದ್ದ ಖಾಸಗಿ ಸ್ಲೀಪರ್‌ ಬಸ್‌ನಲ್ಲಿ‌ ಕಳ್ಳತನ ನಡೆದಿದೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಟೆಕ್ಕಿ ವಿಘ್ನೇಶ್ ಕುಮಾರ್ ದೂರು ನೀಡಿದ್ದಾರೆ. ಎಸ್.ಬಿ.ಎಸ್ ಟ್ರಾವೆಲ್ಸ್‌ನಲ್ಲಿ ಕಳೆದ ಆಗಸ್ಟ್ 16ರಂದು ವಿಘ್ನೇಶ್ ಚೆನೈನಿಂದ ಬೆಂಗಳೂರಿಗೆ ಬರುತ್ತಿದ್ದರು. ಸುಮಾರು ಬೆಳಗಿನ‌ ಜಾವ ಮೂರು ಗಂಟೆಗೆ ವಿಘ್ನೇಶ್‌ ಗಾಢ ನಿದ್ರೆಗೆ ಜಾರಿದ್ದರು. ಇದೆಲ್ಲವನ್ನೂ ಸೂಕ್ಷವಾಗಿ ಗಮನಿಸಿದ್ದ ಅಸಾಮಿಯೊಬ್ಬ ನಿದ್ರೆಗೆ ಜಾರಿದ್ದೆ ತಡ ಲ್ಯಾಪ್ ಟಾಪ್ ಬ್ಯಾಗ್‌ ಎಗರಿಸಿದ್ದಾನೆ. ‌

ಬೆಳಗ್ಗೆ ಎದ್ದು ನೋಡಿದಾಗ ಲ್ಯಾಬ್ ಟಾಪ್ ಇಟ್ಟಿದ್ದ ಬ್ಯಾಗ್ ಮಾಯವಾಗಿತ್ತು. ಬಸ್ ಸಿಬ್ಬಂದಿ ಗಮನಕ್ಕೆ ತಂದಾಗ ಸಿಸಿಟಿವಿ ಚೆಕ್ ಮಾಡಿದಾಗ ವ್ಯಕ್ತಿಯೊಬ್ಬನ ಕೈಚಳಕ ಬಯಲಾಗಿದೆ. ಲ್ಯಾಪ್ ಟಾಪ್ ಬ್ಯಾಗ್ ಕದ್ದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಘ್ನೇಶ್‌ ಕೂಡಲೇ ಪೊಲೀಸರಿಗೆ ಹಾಗೂ ಬಸ್ ಹೆಡ್ ಆಫೀಸ್‌ಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿದ ಒಂದು ತಿಂಗಳು ಕಳೆದರೂ ಕಳ್ಳ ಮಾತ್ರ ಸಿಕ್ಕಿಲ್ಲ. ಕಳ್ಳನ ಹುಡುಕಾಟದಲ್ಲಿ ಯಾವುದೇ ಕ್ರಮ ಆಗಿಲ್ಲ ಅಂತ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
karnataka weather forecast
ಮಳೆ3 hours ago

Karnataka Weather : ಇಂದು ಕರಾವಳಿಯಲ್ಲಿ ಸಾಧಾರಣ ಮಳೆ; ಉಳಿದೆಡೆ ಮುಂದುವರಿಯಲಿದೆ ಒಣಹವೆ

dina bhavishya
ಭವಿಷ್ಯ4 hours ago

Dina Bhavishya : ಮುಂಗೋಪದಿಂದ ಈ ರಾಶಿಯವರಿಗೆ ನಷ್ಟವೇ ಹೆಚ್ಚು; ಈ ದಿನ ಮೌನದಿಂದ ಇರುವುದೇ ಒಳಿತು

Road accident at isolated places in Tumkur Two bikers including a 7-year-old girl died on the spot
ತುಮಕೂರು12 hours ago

Road Accident : ತುಮಕೂರಿನ ಪ್ರತ್ಯೇಕ ಕಡೆ ಭೀಕರ ಅಪಘಾತ; 7 ವರ್ಷದ ಬಾಲಕಿ ಸೇರಿ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವು

Bee attacks during Democracy Day celebrations
ಗದಗ20 hours ago

Democracy Day : ಗದಗದಲ್ಲಿ ಮಾನವ ಸರಪಳಿ ವೇಳೆ ಹೆಜ್ಜೇನು ದಾಳಿ; ಹಾವೇರಿಯಲ್ಲಿ ಮೂರ್ಛೆ ಹೋದ ವಿದ್ಯಾರ್ಥಿಗಳು

Thief steals techie's laptop from sleeper bus
ಬೆಂಗಳೂರು22 hours ago

theft case : ಸ್ಲೀಪರ್‌ ಬಸ್‌ನಲ್ಲಿ ಮೈಮರೆತು ನಿದ್ರೆ ಮಾಡುವ ಎಚ್ಚರ; ಟೆಕ್ಕಿಯ ಲ್ಯಾಪ್‌ಟಾಪ್‌ ಕದ್ದು ಖದೀಮ ಎಸ್ಕೇಪ್‌

Snake
ದಕ್ಷಿಣ ಕನ್ನಡ23 hours ago

Snake Bite : ಹೆಬ್ಬಾವಿನ ಮರಿ ಎಂದು ವಿಷದ ಹಾವಿನ ಮರಿ ಬರಿಗೈಯಲ್ಲಿ ಹಿಡಿದು ಜೀವ ಬಿಟ್ಟ

Palika Bazaar
ಬೆಂಗಳೂರು24 hours ago

Palika Bazaar : ಜನರಿಲ್ಲದೇ ಖಾಲಿಯಾದ ದಕ್ಷಿಣ ಭಾರತದ ಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್‌!

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ವಿವಾಹಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ

a case of threat to the contractor Absconding MLA Munirathna arrested in Kolar
ರಾಜಕೀಯ2 days ago

MLA Muniratna : ಬಿಬಿಎಂಪಿ ಗುತ್ತಿಗೆದಾರನಿಗೆ ಜೀವಬೆದರಿಕೆ ಪ್ರಕರಣ; ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನ ಕೋಲಾರದಲ್ಲಿ ಅರೆಸ್ಟ್‌

Self Harming
ವಿಜಯನಗರ2 days ago

Self Harming : ಮುದ್ದಾದ ಮಕ್ಕಳಿಬ್ಬರ ಕತ್ತು ಹಿಸುಕಿ ಕೊಂದಳು; ಬಳಿಕ ತಾನೂ ನೇಣಿಗೆ ಶರಣಾದಳು ತಾಯಿ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 year ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌