Kr pura to Whitefield Metro: ಕೆ.ಆರ್. ಪುರಂನಿಂದ ವೈಟ್ ಫೀಲ್ಡ್ ಮೆಟ್ರೋ ಓಡಾಟಕ್ಕೆ ಕೌಂಟ್‌ಡೌನ್‌ ಆರಂಭ; ಮಾರ್ಚ್‌ 25ಕ್ಕೆ ಡೇಟ್‌ ಫಿಕ್ಸ್‌! - Vistara News

ಬೆಂಗಳೂರು

Kr pura to Whitefield Metro: ಕೆ.ಆರ್. ಪುರಂನಿಂದ ವೈಟ್ ಫೀಲ್ಡ್ ಮೆಟ್ರೋ ಓಡಾಟಕ್ಕೆ ಕೌಂಟ್‌ಡೌನ್‌ ಆರಂಭ; ಮಾರ್ಚ್‌ 25ಕ್ಕೆ ಡೇಟ್‌ ಫಿಕ್ಸ್‌!

Kr pura to Whitefield Metro: ಬಹುನಿರೀಕ್ಷಿತ ಕೆ.ಆರ್‌.ಪುರ ಟು ವೈಟ್‌ಫೀಲ್ಡ್‌ ಮೆಟ್ರೋ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಸುರಕ್ಷತಾ ಪರೀಕ್ಷೆ ಮುಗಿದ ಕೂಡಲೇ ಜನರ ಸೇವೆಗೆ ಲಭ್ಯವಾಗಲಿದೆ. ಮಾರ್ಚ್‌ 25ಕ್ಕೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Countdown Strait for KR Puram to Whitefield Metro movement, The date is fixed for March 25
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆ.ಆರ್‌.ಪುರ ಟು ವೈಟ್‌ ಫೀಲ್ಡ್‌ ನಡುವಿನ (Kr pura to Whitefield Metro) ಮೆಟ್ರೋ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲು ಬಿಎಂಆರ್‌ಸಿಎಲ್‌ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಈ ಮಾರ್ಗದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್‌ 25ಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ ಎನ್ನಲಾಗುತ್ತಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೂಲಗಳ ಪ್ರಕಾರ, 12.75 ಕಿ.ಮೀ ಉದ್ದದ ವೈಟ್‌ಫೀಲ್ಡ್‌-ಕೆ.ಆರ್.ಪುರಂ ಮೆಟ್ರೋ ಮಾರ್ಗವು ಮಾರ್ಚ್ 25ರಂದು ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಸ್ಪಷ್ಟತೆಯನ್ನು ನೀಡಿಲ್ಲ. ವಾಣಿಜ್ಯ ಸಂಚಾರಕ್ಕೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಕಳೆದ ಫೆ. 28ಕ್ಕೆ ಬಿಎಂಆರ್‌ಸಿಎಲ್‌ಗೆ ಸುರಕ್ಷತಾ ಕ್ಲಿಯರೆನ್ಸ್‌ ನೀಡಿದ್ದು, ಸದ್ಯ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ.

ಇನ್ನು ಪ್ರತಿ ರೈಲುಗಳು 12 ನಿಮಿಷಗಳಿಗೊಂದು ಓಡಾಡುವ ನಿರೀಕ್ಷೆಯಿದೆ. ನೇರಳೆ ಮಾರ್ಗದಲ್ಲಿ ಲೋಕೋ ಪೈಲೆಟ್‌ ಒಟ್ಟು 106 ಸಿಬ್ಬಂದಿ ಇದ್ದು, ಅವರಲ್ಲಿ ಕೆಲವರನ್ನು ಕೆ.ಆರ್.ಪುರಂ ಮತ್ತು ವೈಟ್‌ಫೀಲ್ಡ್‌ ಮಾರ್ಗಕ್ಕೆ ಪಡೆಯುವ ಚಿಂತನೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಈ ಹೊಸ ವಿಸ್ತರಣೆಯಲ್ಲಿ ಏಳು ರೈಲುಗಳ ಒಟ್ಟಾರೆ ರಚನೆಯು ಅಸ್ತಿತ್ವದಲ್ಲಿರುವ ಮೆಟ್ರೋ ರೈಲುಗಳ ರಚನೆಯನ್ನು ಹೋಲುತ್ತದೆಯಾದರೂ, ಕಾರ್ಯಾಚರಣೆಯ ಅನುಕೂಲತೆಯ ದೃಷ್ಟಿಯಿಂದ ಸ್ವಲ್ಪ ಮಾರ್ಪಾಡು ಇರುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಕೆ.ಆರ್‌.ಪುರ ಟು ವೈಟ್‌ ಫೀಲ್ಡ್‌ ಮೆಟ್ರೋ ಮುಕ್ತ ಸಂಚಾರಕ್ಕೆ ಅಧಿಕೃತವಾಗಿ ದಿನಾಂಕಗಳನ್ನು ನಿರ್ಧರಿಸಿಲ್ಲ. ಆದರೆ ಮಾರ್ಚ್‌ ತಿಂಗಳ ಅಂತ್ಯದೊಳಗಾಗಿ ಜನರ ಸೇವೆಗಾಗಿ ನೀಡಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.

ಸಿವಿಲ್‌ ಕೆಲಸಗಳಷ್ಟೇ ಬಾಕಿ

ಮೆಟ್ರೋ ನಿಲ್ದಾಣಗಳಲ್ಲಿ ವಿಶೇಷವಾಗಿ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಕೆಲವು ಕೆಲಸಗಳು ಬಾಕಿ ಉಳಿದಿವೆ. ಇವುಗಳಲ್ಲಿ ಗಾಜಿನ ಫಿಕ್ಸಿಂಗ್ ಮತ್ತು ಸೂಚನಾ ಫಲಕ ನಿರ್ವಹಣೆಯಂತಹ ಕೆಲವು ಸಿವಿಲ್ ಕೆಲಸಗಳು ಸೇರಿವೆ. ಹೀಗಾಗಿ ಅದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: NHM Workers Protest: 48 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿ; ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಗೆ ಸರ್ಕಾರ ಎಚ್ಚರಿಕೆ

ಸಾಮಾನ್ಯವಾಗಿ ಸ್ವಂತ ವಾಹನದಲ್ಲೋ ಅಥವಾ ಬಸ್‌ನಲ್ಲಿ ಕೆ.ಆರ್‌.ಪುರ ಟು ವೈಟ್‌ಫೀಲ್ಡ್‌ಗೆ ಹೋಗಬೇಕಾದರೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸರಿ ಸುಮಾರು ಒಂದು ಗಂಟೆಯ ಸಮಯ ಬೇಕಾಗುತ್ತದೆ. ಆದರೆ ಮೆಟ್ರೋದಿಂದಾಗಿ ಪ್ರಯಾಣದ ಸಮಯವು 24 ನಿಮಿಷಗಳಿಗೆ ಇಳಿಯಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kannada New Movie: ʼಆಪರೇಷನ್ ಕೊಂಬುಡಿಕ್ಕಿʼ ಚಿತ್ರ ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡ

Kannada New Movie: ಕನ್ನಡ ಚಿತ್ರರಂಗದ ಕಿರಿಯ ಮತ್ತು ಯಶಸ್ವಿ ನಿರ್ಮಾಪಕ ಅನುಪ್‌ ಹನುಮಂತೇಗೌಡ ಈಗ “ಸಿಲ್ವರ್‌ ಸ್ಕ್ರೀನ್‌ ಸ್ಟುಡಿಯೋಸ್” ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ, ಅದರ ಅಡಿಯಲ್ಲಿ “ಆಪರೇಷನ್‌ ಕೊಂಬುಡಿಕ್ಕಿ” ಎಂಬ ಬಿಗ್ ಬಜೆಟ್‌ ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

VISTARANEWS.COM


on

Kannada New Movie
Koo

ಬೆಂಗಳೂರು: ಸೂಪರ್ ಹಿಟ್ ಚಿತ್ರ “ಶಿವಾಜಿ ಸುರತ್ಕಲ್” ಡಿಟೆಕ್ಟಿವ್ ಸರಣಿಗಳ ನಿರ್ಮಾಪಕ ಅನುಪ್ ಹನುಮಂತೇಗೌಡ ತಮ್ಮ ಮೂರನೇ ನಿರ್ಮಾಣದ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ‌. ಹಿರಿಯ ನಿರ್ದೇಶಕ ಎಸ್. ಮಹೇಂದರ್ ಅವರ ನಿರ್ದೇಶನದಲ್ಲಿ ಕಿಶೋರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ “ಆಪರೇಷನ್ ಕೊಂಬುಡಿಕ್ಕಿ” (Kannada New Movie) ಎಂದು ಹೆಸರಿಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಕಿರಿಯ ಮತ್ತು ಯಶಸ್ವಿ ನಿರ್ಮಾಪಕ ಅನುಪ್‌ ಹನುಮಂತೇಗೌಡ ಈಗ “ಸಿಲ್ವರ್‌ ಸ್ಕ್ರೀನ್‌ ಸ್ಟುಡಿಯೋಸ್” ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ, ಅದರ ಅಡಿಯಲ್ಲಿ “ಆಪರೇಷನ್‌ ಕೊಂಬುಡಿಕ್ಕಿ” ಎಂಬ ಬಿಗ್ ಬಜೆಟ್‌ ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

“ಗಟ್ಟಿಮೇಳ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಎಸ್. ಮಹೇಂದರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ “ಕಂಠಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರಸ್ತುತ ದಕ್ಷಿಣ ಭಾರತದ ಬಹು ಬೇಡಿಕೆಯ ನಟರಾಗಿರುವ ಅಪ್ಪಟ ಕನ್ನಡಿಗ ಕಿಶೋರ್‌ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: Pralhad Joshi: ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ

ಕೆ.ಜಿ.ಎಫ್‌, ಸಲಾರ್‌ ಖ್ಯಾತಿಯ ರವಿ ಬಸ್ರೂರ್‌ ಸಂಗೀತ ನೀಡಲಿದ್ದಾರೆ. ಛಾಯಾಗ್ರಾಹಕರಾಗಿ ಹೆಬ್ಬುಲಿ, ಕ್ರಾಂತಿ ಸಿನಿಮಾಗಳ ಖ್ಯಾತಿಯ ಕರುಣಾಕರ್‌ ಕೆಲಸ ಮಾಡುತ್ತಿದ್ದು, ಕನ್ನಡದ ಹೆಸರಾಂತ ಸಂಕಲನಕಾರ ದೀಪು ಎಸ್. ಕುಮಾರ್‌ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಈ ಚಿತ್ರ ಅದ್ಧೂರಿಯಾಗಿ ಮೂಡಿ ಬರಲಿದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಗಳ ನಿರ್ಮಾಪಕರುಗಳ, ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಮಾತ್ರ ಮಾರುಕಟ್ಟೆಯಲ್ಲಿ ಯಶಸ್ಸುಗಳಿಸುತ್ತಿದೆ. ಈ ಸಮಯದಲ್ಲಿ ಸದಭಿರುಚಿಯ ಚಿತ್ರಗಳನ್ನು ಸೀಮಿತ ಬಜೆಟ್‌ನಲ್ಲಿ ನಿರ್ಮಾಣ ಮಾಡಿ ಮಾರುಕಟ್ಟೆಯಲ್ಲಿ ಜನರಿಗೆ ತಲುಪಿಸಿ ಅದನ್ನು ಯಶಸ್ವಿಗೊಳಿಸಿದ ನಿರ್ಮಾಪಕ ಅನುಪ್‌ ಹನುಮಂತೇಗೌಡ ಈಗ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Continue Reading

ಬೆಂಗಳೂರು

Metro City: ಬೆಂಗಳೂರಿಗೆ ‘ಮೆಟ್ರೊ ಸಿಟಿ’ ಸ್ಥಾನಮಾನ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ!

Metro City: ದೇಶದ ಐಟಿ ರಾಜಧಾನಿ ಬೆಂಗಳೂರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಮೆಟ್ರೋ ಸಿಟಿ (Metro City) ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಬಹು ದಿನಗಳ ಬೇಡಿಕೆಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಭಾರತದ ಅತಿದೊಡ್ಡ ನಗರಗಳಲ್ಲಿ ಒಂದಾದ, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮೆಟ್ರೋ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಂಸತ್‌ನಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಈ ವಿಷತ ತಿಳಿಸಿದರು.

VISTARANEWS.COM


on

Metro City
Koo

ಬೆಂಗಳೂರು: ದೇಶದ ಐಟಿ ರಾಜಧಾನಿ ಬೆಂಗಳೂರಿಗೆ (Bengaluru) ಮತ್ತೊಮ್ಮೆ ನಿರಾಸೆಯಾಗಿದೆ. ಮೆಟ್ರೋ ಸಿಟಿ (Metro City) ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಬಹು ದಿನಗಳ ಬೇಡಿಕೆಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಭಾರತದ ಅತಿದೊಡ್ಡ ನಗರಗಳಲ್ಲಿ ಒಂದಾದ, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಮೆಟ್ರೋ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಂಸತ್‌ನಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಆದಾಯ ತೆರಿಗೆ ನಿಯಮಗಳು, 1962ರ ನಿಯಮ 2 ಎ ಅಡಿಯಲ್ಲಿ ಮೆಟ್ರೋ ನಗರಗಳು ಮತ್ತು ಇತರ ನಗರಗಳ ನಡುವೆ ವ್ಯತ್ಯಾಸವಿದೆ ಎಂದು ಹೇಳಿದರು. ಪ್ರಸ್ತುತ ದೇಶದ ನಾಲ್ಕು ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತಾ ಮತ್ತು ಚೆನ್ನೈಯನ್ನು ಮೆಟ್ರೋ ಸಿಟಿ ಎಂದು ಗುರುತಿಸಲಾಗುತ್ತಿದೆ.

ಮೆಟ್ರೋ ಸ್ಥಾನಮಾನ ದೊರೆತರಿಗೆ ಆ ನಗರಕ್ಕೆ ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಸೇರಿದಂತೆ ಕೆಲವೊಂದು ಅನುಕೂಲಗಳು ಲಭಿಸುತ್ತವೆ. ಅಸ್ತಿತ್ವದಲ್ಲಿರುವ ಮೆಟ್ರೋ ನಗರಗಳಲ್ಲಿ ಸೆಕ್ಷನ್ 10 (13 ಎ) ಅಡಿಯಲ್ಲಿ ವಿನಾಯಿತಿ ಮಿತಿಗಳನ್ನು ಲೆಕ್ಕಹಾಕಲು ವೇತನದ ಶೇ. 50ರಷ್ಟನ್ನು ಪರಿಗಣಿಸಲಾಗುತ್ತದೆ. ಅಂದರೆ ಮೆಟ್ರೋ ನಗರಗಳಲ್ಲಿ ಮೂಲ ವೇತನದ ಶೇ. 50ರಷ್ಟನ್ನು ಮನೆ ಬಾಡಿಗೆ ಭತ್ಯೆ (House Rent Allowance) ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ಮೆಟ್ರೋಯೇತರ ನಗರಗಳ ನಿವಾಸಿಗಳು ತಮ್ಮ ಮೂಲ ವೇತನದ ಶೇ. 40ರಷ್ಟನ್ನು ಮಾತ್ರವೇ ಎಚ್‌ಆರ್‌ಎ ತೆರಿಗೆ ವಿನಾಯಿತಿ ಎಂದು ಕ್ಲೈಮ್ ಮಾಡಲು ಸಾಧ್ಯ.

ಅಸ್ತಿತ್ವದಲ್ಲಿರುವ ನೀತಿಯನ್ನು ಬದಲಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಪಂಕಜ್ ಚೌಧರಿ ಹೇಳಿದರು. “ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವುದು ಮತ್ತು ವಿನಾಯಿತಿಗಳು ಹಾಗೂ ಕಡಿತಗಳಿಂದ ದೂರ ಸರಿಯುವುದು ಸರ್ಕಾರದ ಘೋಷಿತ ನೀತಿ. ಆದ್ದರಿಂದ ಹೆಚ್ಚಿನ ನಗರಗಳನ್ನು ಮೆಟ್ರೋ ನಗರಗಳಾಗಿ ಘೋಷಿಸುವುದಿಲ್ಲ. ಅಲ್ಲದೆ ಎಚ್ಆರ್‌ಎ (House Rent Allowance) ಮೇಲಿನ ಹೆಚ್ಚಿನ ವಿನಾಯಿತಿಯನ್ನೂ ಅಂತಹ ನಗರಗಳಿಗೆ ವಿಸ್ತರಿಸುವುದಿಲ್ಲʼʼ ಎಂದು ಹೇಳಿದರು. ಇದರಿಂದಾಗಿ ಬೆಂಗಳೂರಿನ ಬಹು ದಿನಗಳ ಬೇಡಿಕೆಗೆ ಹಿನ್ನಡೆಯಾಗಿದೆ.

ಬೆಂಗಳೂರು ಬೃಹತ್‌ ಐಟಿ ಮತ್ತು ಸ್ಟಾರ್ಟ್ಅಪ್ ಹಬ್ ಆಗಿ ಬೆಳೆಯುತ್ತಿದೆ. ಹೆಚ್ಚಿನ ಜನಸಂಖ್ಯಾ ಸಾಂದ್ರತೆ, ಗಮನಾರ್ಹ ಆರ್ಥಿಕ ಚಟುವಟಿಕೆ ಮತ್ತು ವೇಗದ ಜೀವನಶೈಲಿಯಂತಹ ಇತರ ಮೆಟ್ರೋ ನಗರಗಳ ಎಲ್ಲ ಲಕ್ಷಣಗಳನ್ನು ಬೆಂಗಳೂರು ಹೊಂದಿದೆ. ಆದರೂ ಎಚ್‌ಆರ್‌ಎ ವಿಚಾರವಾಗಿ ಬೆಂಗಳೂರನ್ನು ಇನ್ನೂ ಮೆಟ್ರೋ ಯೇತರ ನಗರವಾಗಿಯೇ ಪರಿಗಣಿಸಲಾಗುತ್ತಿದೆ.

ವಿಶೇಷ ಎಂದರೆ ಮೆಟ್ರೋ ನಗರದ ನಿಯಮಗಳನ್ನು ರಚಿಸಿದಾಗಿನಿಂದ ಈ ಪಟ್ಟಿಯನ್ನು ಪರಿಷ್ಕರಿಸಲಾಗಿಲ್ಲ. ಬೆಂಗಳೂರಿನಲ್ಲಿ ಬಾಡಿಗೆಯ ಪ್ರತಿ ವರ್ಷ ಕನಿಷ್ಠ ಶೇ. 3ರಷ್ಟು ಹೆಚ್ಚಾಗುತ್ತಿದೆ. ವಸತಿ ವೆಚ್ಚಗಳು ಈಗ ದೆಹಲಿ ಅಥವಾ ಮುಂಬೈಗೆ ಪ್ರತಿಸ್ಪರ್ಧಿಯಾಗಿವೆ. ಆದರೂ ಬೆಂಗಳೂರು ನಗರವನ್ನು ಮೆಟ್ರೋ ಎಂದು ವರ್ಗೀಕರಿಸದಿರುವುದರಿಂದ ಲಕ್ಷಗಟ್ಟಲೆ ರೂ. ಸಂಬಳ ಪಡೆಯುವ ಐಟಿ, ಬ್ಯಾಂಕಿಂಗ್ ಮತ್ತು ಇತರ ವೃತ್ತಿಪರರು ಹೆಚ್ಚಿನ ತೆರಿಗೆ ಭರಿಸಬೇಕಿದೆ. ಹೀಗಾಗಿ ಮೆಟ್ರೋ ಸ್ಥಾನಮಾನಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದ್ದು, ಮತ್ತೊಮ್ಮೆ ಮುಖಭಂಗವಾಗಿದೆ.

ಇದನ್ನೂ ಓದಿ: Namma Metro: ಆ.6ರಂದು ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ

Continue Reading

ದೇಶ

Pralhad Joshi: ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ

Pralhad Joshi: ಪಿಎಂ ಕುಸುಮ್ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಿದ್ದು, ಸ್ವತಂತ್ರ ಸೋಲಾರ್ ಪಂಪ್‌ಗಳ ಸ್ಥಾಪನೆಗೆ ರೈತರಿಗೆ ಹಣಕಾಸಿನ ನೆರವು ಕೂಡ ನೀಡಲಾಗಿದೆ. ರೈತರಿಗೆ ಇದು ಆಶಾದಾಯಕವಾಗಿದೆ. ಆದರೆ ವಿಪಕ್ಷದವರು ಪಿಎಂ ಕುಸುಮ್ ಯೋಜನೆ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ. ಹಾಗೊಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ, ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರದವರು ಏಕೆ ಅಧಿಕೃತವಾಗಿ ನಮಗೆ ಇಷ್ಟೊಂದು ಬೇಡಿಕೆ ಕಳುಹಿಸುತ್ತಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ.

VISTARANEWS.COM


on

Pralhad Joshi
Koo

ನವದೆಹಲಿ: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಿಂದ ನಮಗೆ ಬರೋಬ್ಬರಿ 1,79,588 ಸೋಲಾರ್ ಪಂಪ್‌ ಅಳವಡಿಕೆಗೆ ಬೇಡಿಕೆ ಬಂದಿದೆ ಎಂದು ವಿವರಿಸಿದರು.

ವಿಫಲವಾಗಿದ್ರೆ ಬೇಡಿಕೆ ಏಕಿರುತ್ತಿತ್ತು?

ವಿಪಕ್ಷದವರು ಪಿಎಂ ಕುಸುಮ್ ಯೋಜನೆ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ. ಹಾಗೊಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ, ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರದವರು ಏಕೆ ಅಧಿಕೃತವಾಗಿ ನಮಗೆ ಇಷ್ಟೊಂದು ಬೇಡಿಕೆ ಕಳುಹಿಸುತ್ತಿದ್ದರು? ಎಂದು ಸಚಿವರು ಪ್ರಶ್ನಿಸಿದರು.

ಇದನ್ನೂ ಓದಿ: Namma Metro: ಆ.6ರಂದು ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ

ಪಿಎಂ ಕುಸುಮ್ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಿದ್ದು, ಸ್ವತಂತ್ರ ಸೋಲಾರ್ ಪಂಪ್‌ಗಳ ಸ್ಥಾಪನೆಗೆ ರೈತರಿಗೆ ಹಣಕಾಸಿನ ನೆರವು ಕೂಡ ನೀಡಲಾಗಿದೆ. ರೈತರಿಗೆ ಇದು ಆಶಾದಾಯಕವಾಗಿದೆ ಎಂದು ತಿಳಿಸಿದರು.

ಸೂರ್ಯ ಘರ್‌ಗೆ 1.30 ಕೋಟಿ ನೋಂದಣಿ

ಇನ್ನು, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 2024ರವರೆಗೆ 1.30 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಸೂರ್ಯ ಘರ್ ಯೋಜನೆಗೆ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸ್ವೀಕರಿಸಲಾಗಿದೆ. ಸುಮಾರು 2.3 ಲಕ್ಷ ಸೌರ ಮೇಲ್ಛಾವಣಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಧಾರಗಳಿಂದಾಗಿ, ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತ ನಂ.4ನೇ ಸ್ಥಾನದಲ್ಲಿದೆ. ಪವನ ಶಕ್ತಿ ಸಾಮರ್ಥ್ಯದಲ್ಲಿ 4ನೇ ಸ್ಥಾನ ಮತ್ತು ಸೌರ ಪಿವಿ ಸಾಮರ್ಥ್ಯದಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಎನ್‌ಡಿಎ ಸರ್ಕಾರ 21000 ಕೋಟಿ ವೆಚ್ಚ ಮಾಡಲಿದೆ

ಯುಪಿಎ ಆಡಳಿತಾವಧಿಯ ಒಂದು ದಶಕದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಸರ್ಕಾರ ಕೇವಲ 6091 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ, ಎನ್‌ಡಿಎ ಸರ್ಕಾರ ಈ ವರ್ಷವೇ ಬರೋಬ್ಬರಿ 21,000 ಕೋಟಿ ರೂ.ವೆಚ್ಚ ಮಾಡಲಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

ಪ್ರಥಮ ಪ್ರಧಾನ ಕಚೇರಿ

ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಭಾರತ ಈಗ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಾತಂತ್ರ್ಯ ಬಂದಾಗಿನಿಂದ ಯಾವ ಅಂತರಾಷ್ಟ್ರೀಯ ಸಂಸ್ಥೆಯು ಭಾರತದಲ್ಲಿ ಪ್ರಧಾನ ಕಛೇರಿಯನ್ನು ಸ್ಥಾಪಿಸಲು ಯೋಚನೆಯನ್ನೇ ಮಾಡಿರಲಿಲ್ಲ. ಮೋದಿ ಕಾಲಘಟ್ಟದಲ್ಲಿ ಇದು ಸಾಧ್ಯವಾಗಿದ್ದು, ದೂರದೃಷ್ಟಿಯ ಅವರ ನಾಯಕತ್ವಕ್ಕೆ ಇದೊಂದು ನಿದರ್ಶನ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

Continue Reading

ಪ್ರಮುಖ ಸುದ್ದಿ

BJP-JDS Padayatra: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ‌ ; ಬ್ಯಾನರ್‌ಗಳಲ್ಲೂ ಕಾಣಿಸಿಕೊಳ್ಳದ ಸುಮಲತಾ ಅಂಬರೀಷ್‌!

BJP-JDS Padayatra: ಬುಧವಾರ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ಸಂಚರಿಸಲಿದ್ದರೂ, ಮಂಡ್ಯದಲ್ಲಿ ಹಾಕಿರುವ ಫ್ಲೆಕ್ಸ್‌- ಬ್ಯಾನರ್‌ಗಳಿಂದಲೂ ಸುಮಲತಾ ಕಣ್ಮರೆಯಾಗಿದ್ದಾರೆ. ಯಾವ ನಾಯಕರೂ ತಮ್ಮ ಬ್ಯಾನರ್‌ಗಳಲ್ಲಿ ಸುಮಲತಾ ಅವರನ್ನು ಸ್ಮರಿಸಿಕೊಂಡಿಲ್ಲ.

VISTARANEWS.COM


on

bjp-jds padayatra Sumalatha ambareesh
Koo

ಮಂಡ್ಯ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಲಾಗುತ್ತಿರುವ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ (BJP-JDS Padayatra) ಐದನೇ ದಿನ ಮಂಡ್ಯ ತಲುಪಿದ್ದು, ಉಭಯ ಪಕ್ಷಗಳ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್‌ (Sumalatha Ambareesh) ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ.

ಕಳೆದ ಲೋಕಸಭೆ ಚುನಾವಣೆಗೂ (Loksabha Election 2024) ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದ ಸುಮಲತಾ, ಬಿಜೆಪಿ ಸೇರಿದ್ದು ನನ್ನ ಜೀವನದಲ್ಲೇ ಸುದಿನ ಎಂದಿದ್ದರು. ಆದರೆ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಮಂಡ್ಯ ಜೆಡಿಎಸ್‌ ಪಾಲಾಗಿ, ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಟಿಕೆಟ್‌ ಒಲಿದಿತ್ತು. ಮಂಡ್ಯದಲ್ಲಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಸುಮಲತಾ, ಕುಮಾರಣ್ಣ ಪರ ಪ್ರಚಾರ ಕಣದಲ್ಲೆಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಪಾದಯಾತ್ರೆಯಲ್ಲಿಯೂ ಅವರು ಕಾಣಿಸಿಕೊಂಡಿಲ್ಲ. ಹೀಗಾಗಿ, ಮಂಡ್ಯದ ರಾಜಕಾರಣದಲ್ಲಿ ಮತ್ತೆ ಸುಮಲತಾ ಅಂಬರೀಷ್‌ ಸೈಡ್‌ಲೈನ್ ಆದ್ರಾ ಎಂಬ ಪ್ರಶ್ನೆ ಮೂಡಿದೆ.

ಬುಧವಾರ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ಸಂಚರಿಸಲಿದ್ದರೂ, ಮಂಡ್ಯದಲ್ಲಿ ಹಾಕಿರುವ ಫ್ಲೆಕ್ಸ್‌- ಬ್ಯಾನರ್‌ಗಳಿಂದಲೂ ಸುಮಲತಾ ಕಣ್ಮರೆಯಾಗಿದ್ದಾರೆ. ಯಾವ ನಾಯಕರೂ ತಮ್ಮ ಬ್ಯಾನರ್‌ಗಳಲ್ಲಿ ಸುಮಲತಾ ಅವರನ್ನು ಸ್ಮರಿಸಿಕೊಂಡಿಲ್ಲ. ರಾಜ್ಯ ಬಿಜೆಪಿ, ಜೆಡಿಎಸ್ ವತಿಯಿಂದ ಹಾಕಿರುವ ಫ್ಲೆಕ್ಸ್‌ಗಳಲ್ಲಿ ಸುಮಲತಾ ಅವರಿಗೆ ಯಾವುದೇ ಸ್ಥಾನ ನೀಡಿಲ್ಲ. ಪಾದಯಾತ್ರೆ ಪ್ರಚಾರ ಮತ್ತು ಪಾದಯಾತ್ರಿಗಳ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಅವರು ಕಾಣಿಸಿಕೊಂಡಿಲ್ಲ.

ಬೆಂಗಳೂರಿನಿಂದ ಮೈಸೂರಿನವರೆಗೂ ಹಾಕಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಪುಡಿ ನಾಯಕರು, ಕಾರ್ಯಕರ್ತರ ಫೋಟೋಗಳಿದ್ದರೂ ಸುಮಲತಾ ಮುಖ ಎಲ್ಲೂ ಕಾಣಿಸಿಕೊಂಡಿಲ್ಲ. ಬಿಜೆಪಿ ಇರಲಿ, ಸುಮಲತಾ ಅವರ ಆಪ್ತರು, ಬೆಂಬಲಿಗರಿಗೂ ಸುಮಲತಾ ಬೇಡವಾದರೇ ಎಂಬ ಪ್ರಶ್ನೆ ಎದ್ದಿದೆ. ಅಧಿಕಾರ ಇದ್ದಾಗ ಅವರನ್ನು ಮೆರೆಸುತ್ತಿದ್ದ ಆಪ್ತರು, ಬೆಂಬಲಿಗರು ಕೂಡ ಸುಮಲತಾರ ಫ್ಲೆಕ್ಸ್ ಹಾಕದೆ ನಿರ್ಲಕ್ಷ್ಯ ತೋರಿದಂತಿದೆ. ಪಾದಯಾತ್ರೆ ಕುರಿತು ನಡೆಸಲಾಗಿದ್ದ ಪೂರ್ವಭಾವಿ ಸಭೆಯಲ್ಲೂ ಸುಮಲತಾ ಪಾಲ್ಗೊಂಡಿರಲಿಲ್ಲ.

ಮುಡಾ ಹಗರಣದ ಇನ್ನಷ್ಟು ದಾಖಲೆ ಕೇಳಿದ ರಾಜ್ಯಪಾಲರು; ತನಿಖೆಗೆ ಅನುಮತಿ ಖಚಿತ

ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಾಸಿಕ್ಯೂಶನ್‌ಗೆ (Prosecution) ರಾಜ್ಯಪಾಲರು (Governor) ಅನುಮತಿ ನೀಡುವುದು ಬಹುತೇಕ ಖಚಿತವಾಗಿದ್ದು, ಮುಡಾ ಹಗರಣದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡುವಂತೆ ಅರ್ಜಿದಾರ ಟಿಜೆ ಅಬ್ರಹಾಂ (TJ Abraham) ಅವರಿಗೆ ಸೂಚಿಸಿದ್ದಾರೆ.

ನಿನ್ನೆ ಈ ಕುರಿತು ಅಬ್ರಹಾಂ ಅವರನ್ನು ಕರೆದು ಮಾಹಿತಿ ಪಡೆದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot), ಕ್ಯಾಬಿನೆಟ್ ನಿರ್ಣಯದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ (Supreme Court) ತೀರ್ಪುಗಳ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದಾರೆ. ಆ ಮೂಲಕ ಪ್ರಕರಣವನ್ನು ಗಟ್ಟಿಗೊಳಿಸಲು ಅಗತ್ಯವಾದ ಮಾಹಿತಿಗಳನ್ನು ಪಡೆಯಲು ಮುಂದಾಗಿದ್ದಾರೆ.

ಕ್ಯಾಬಿನೆಟ್‌ ರಾಜ್ಯಪಾಲರಿಗೆ ತನ್ನ ನಿರ್ಣಯವನ್ನು ಕಳಿಸುವುದರ ಜೊತೆಗೆ, ದೂರುದಾರರ ಚಾರಿತ್ರ್ಯವನ್ನೂ ಪ್ರಶ್ನೆ ಮಾಡಿತ್ತು. ಸರ್ಕಾರಿ ಅಧಿಕಾರಿಯನ್ನು ಒಂದು ಕೋಟಿ ರೂಪಾಯಿಗೆ ಬ್ಲಾಕ್‌ಮೇಲ್‌ ಮಾಡಿದ ಆರೋಪ ಅಬ್ರಹಾಂ ಮೇಲಿದೆ ಎಂದಿತ್ತು. ಈ ಕುರಿತು ಸಿಡಿಯನ್ನು ಕೂಡ ರಾಜ್ಯಪಾಲರಿಗೆ ರವಾನೆ ಮಾಡಿತ್ತು. ಈ ಆರೋಪದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ನೀಡಿ ಎಂದು ಕೂಡ ರಾಜ್ಯಪಾಲರು ಅಬ್ರಹಾಂಗೆ ಸೂಚಿಸಿದ್ದಾರೆ.

ಹೀಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿ ದಾಖಲೆ ಕೊಡಲಿದ್ದೇನೆ ಎಂದು ದೂರುದಾರ ಅಬ್ರಹಾಂ ತಿಳಿಸಿದ್ದಾರೆ. ಸರ್ಕಾರದ ಆರೋಪಕ್ಕೆ ಪ್ರತಿಯಾಗಿ ದಾಖಲೆ ರೆಡಿ ಮಾಡಿಕೊಳ್ಳುತ್ತಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿದ ಇನ್ನಷ್ಟು ದಾಖಲೆ ಪತ್ರಗಳನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯಗೆ ರಾಜಭವನದಿಂದ ಮೂರನೇ ನೋಟೀಸ್ ಜಾರಿ! ಯಾಕೆ ಪದೇ ಪದೆ ನೋಟೀಸ್‌?

Continue Reading
Advertisement
Kannada New Movie
ಕರ್ನಾಟಕ2 mins ago

Kannada New Movie: ʼಆಪರೇಷನ್ ಕೊಂಬುಡಿಕ್ಕಿʼ ಚಿತ್ರ ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡ

CM Siddaramaiah
ಕರ್ನಾಟಕ6 mins ago

Kali Bridge Collapse: ಕಾಳಿನದಿ ಸೇತುವೆ ಕುಸಿತ; ಉ.ಕ ಡಿಸಿಯಿಂದ ಮಾಹಿತಿ ಪಡೆದ ಸಿಎಂ

Bigg Boss Kannada host by rishab shetty sudeep Out
ಬಿಗ್ ಬಾಸ್8 mins ago

Bigg Boss Kannada: ಈ ಬಾರಿ ʻಬಿಗ್‌ ಬಾಸ್‌ ಕನ್ನಡʼ ಹೋಸ್ಟ್‌ ಮಾಡ್ತಿದ್ದಾರಂತೆ ರಿಷಬ್‌ ಶೆಟ್ಟಿ; ಕಿಚ್ಚ ಸುದೀಪ್ ಔಟ್‌?

Metro City
ಬೆಂಗಳೂರು13 mins ago

Metro City: ಬೆಂಗಳೂರಿಗೆ ‘ಮೆಟ್ರೊ ಸಿಟಿ’ ಸ್ಥಾನಮಾನ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ!

Vinesh Phogat
ಪ್ರಮುಖ ಸುದ್ದಿ20 mins ago

Vinesh Phogat: ವಿನೇಶ್‌ ಫೋಗಟ್‌ ಅನರ್ಹ; ಕ್ರಮ ಕೈಗೊಳ್ಳುವಂತೆ ಒಲಿಂಪಿಕ್ಸ್‌ ಅಸೋಸಿಯೇಷನ್‌ಗೆ ಮೋದಿ ಸೂಚನೆ!

Vinesh Phogat
ಕ್ರೀಡೆ24 mins ago

Vinesh Phogat: ಫೈನಲ್​ಗೆ ಅನರ್ಹ; ವಿನೇಶ್ ಫೋಗಟ್​ ಕಡು ವೈರಿ ಬ್ರಿಜ್ ಭೂಷಣ್ ಮಗನ ಪ್ರತಿಕ್ರಿಯೆ ಏನು?

Bhoomige Banda Bhagavantha came to end
ಕಿರುತೆರೆ28 mins ago

Bhoomige Banda Bhagavantha: ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಮುಕ್ತಾಯ: ಅಂಕಿತಾ ಜಯರಾಮ್‌  ಭಾವುಕ ಪೋಸ್ಟ್‌!

Helicopter crashed
ವಿದೇಶ40 mins ago

Helicopter crashed: ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ; ನಾಲ್ವರ ದುರ್ಮರಣ

Electric Shock
ಕ್ರೈಂ51 mins ago

Electric Shock: ರಾಣೇಬೆನ್ನೂರಿನಲ್ಲಿ ವಿದ್ಯುತ್ ಶಾಕ್ ಹೊಡೆದು ತಂದೆ ಮಗ-ಸಾವು

Vinesh Phogat support by Alia Bhatt Vicky Kaushal Olympics disqualification
ಕ್ರೀಡೆ56 mins ago

Vinesh Phogat: ವಿನೇಶ್ ಪದಕಗಳನ್ನು ಮೀರಿದ ವಿಜೇತೆ: ಆಲಿಯಾ, ವಿಕ್ಕಿ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳ ಬೆಂಬಲ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು23 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ24 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌