Lok Sabha Election 2024: ಬಿಜೆಪಿ ಆಡಳಿತದಲ್ಲಿ ಶೇ. 5ರಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲ: ರಕ್ಷಾ ರಾಮಯ್ಯ - Vistara News

ಬೆಂಗಳೂರು

Lok Sabha Election 2024: ಬಿಜೆಪಿ ಆಡಳಿತದಲ್ಲಿ ಶೇ. 5ರಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲ: ರಕ್ಷಾ ರಾಮಯ್ಯ

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಶುಕ್ರವಾರ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮತಯಾಚನೆ ನಡೆಸಿದರು.

VISTARANEWS.COM


on

Chikkaballapur Lok Sabha Constituency Congress candidate Raksha Ramaiah election campaign in Yalahanka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಶುಕ್ರವಾರ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮತಯಾಚನೆ (Lok Sabha Election 2024) ನಡೆಸಿದರು.

ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ವಿವಿಧ ರಸ್ತೆಗಳಲ್ಲಿ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಚುನಾವಣಾ ಪ್ರಚಾರ ನಡೆಸಿದರು. ನಂತರ ಕೆಂಪೇಗೌಡರ ಪ್ರತಿಮೆ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ವಾರ್ಡ್ ನಂಬರ್ 2 ರಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ‌, ನಂತರ ರೋಡ್ ಶೋ ಮೂಲಕ ಸಾಮಾಕ್ಷಮ್ಮ ರಸ್ತೆ, ಬಡಾವಣೆ ರಸ್ತೆ, ಮಸೀದಿ ರಸ್ತೆ, ಡೌನ್ ಬಜಾರ್ ರಸ್ತೆ, ಓಎಂಎಸ್ ರಸ್ತೆ, ಹೊಸಬೀದಿ, ಡೌನ್ ಬಜಾರ್ ರಸ್ತೆ, ಓಎಂಎಸ್ ರಸ್ತೆ, ಹೊಸಬೀದಿ ಬಸ್ ನಿಲ್ದಾಣ ನಂತರ ವಾರ್ಡ್ ನಂಬರ್ 4ರಲ್ಲಿ ಚಿಕ್ಕಬೊಮ್ಮಸಂದ್ರ ಕ್ರಾಸ್‌ನಿಂದ ಅಟ್ಟೂರು ಮುಖ್ಯರಸ್ತೆವರೆಗೆ ಹಾಗೂ ವಾರ್ಡ್ ನಂಬರ್ 3 ರಲ್ಲಿ ಶನಿ ಮಹಾತ್ಮಾ ದೇವಸ್ಥಾನದಿಂದ ಅಟ್ಟೂರು ಗ್ರಾಮದವರೆಗೆ ಚುನಾವಣಾ ಪ್ರಚಾರ ನಡೆಸಿದರು.

ಇದನ್ನೂ ಓದಿ: CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

ಈ ಸಂದರ್ಭದಲ್ಲಿ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡರು. ಶಾಲಾ ದಿನಗಳಲ್ಲಿ ಪುನೀತ್ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು. ಯುವ ಜನಾಂಗಕ್ಕೆ ಪುನೀತ್ ರಾಜ್‌ಕುಮಾರ್ ಸ್ಫೂರ್ತಿಯಾಗಿದ್ದರು ಎಂದು ತಿಳಿಸಿದರು.

ಹಸಿವು ಮುಕ್ತ ಕರ್ನಾಟಕ ಕಾಂಗ್ರೆಸ್ ಗುರಿಯಾಗಿದ್ದು, ಬಡತನ ನಿರ್ಮೂಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಆದ್ಯತೆ ನೀಡುತ್ತಿದೆ. ನಮ್ಮ ಗುರಿ ಸಾಧನೆಗೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು.

ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸಿದೆ. ಹತ್ತು ವರ್ಷಗಳಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಉದ್ಯೋಗ ಸೃಜನೆಯಲ್ಲಿ ಶೇ 5 ರಷ್ಟು ಸಾಧನೆ ಮಾಡಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಬಡವರ ಪರವಾಗಿದ್ದು, ಜನ ಸಾಮಾನ್ಯರ ಹಿತ ರಕ್ಷಣೆಗೆ ಬದ್ಧವಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ಇದಕ್ಕೆ ಸ್ವಷ್ಟ ಉದಾಹರಣೆಯಾಗಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನ ಸಾಮಾನ್ಯರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಿದೆ. ಕನ್ನಡ ನಾಡಿನ ಮಾತೆಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ತಮ್ಮನ್ನು ಆಶೀರ್ವದಿಸಿ ಬೆಂಬಲಿಸಬೇಕು ಎಂದು ರಕ್ಷಾ ರಾಮಯ್ಯ ಮನವಿ ಮಾಡಿದರು.

ಇದನ್ನೂ ಓದಿ: Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್, ಪಕ್ಷದ ಹಿರಿಯ ಮುಖಂಡರಾದ ಕೇಶವ ರಾಜಣ್ಣ, ಗೋಪಾಲ್ ಕೃಷ್ಣ ಹಾಗೂ ಪಕ್ಷದ ಕಾರ್ಯಕರ್ತರು, ಇತರರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Prajwal Revanna Case: ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ. ಕೊನೆಗೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

VISTARANEWS.COM


on

Prajwal Revanna Case Revanna denied anticipatory bail today Court allows SIT to file objections
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಇನ್ನೊಬ್ಬ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.

ಇದಕ್ಕೆ ವಾದ ಮಂಡಿಸಿದ ಎಚ್.ಡಿ. ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ. ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮೂರ್ತಿ ಡಿ. ನಾಯ್ಕ್ ತಿಳಿಸಿದರು.

ಎಸ್‌ಐಟಿಗೆ ವಿಶೇಷ ಕೋರ್ಟ್‌ ನೋಟಿಸ್‌

ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನ್ಯಾಯಾದೀಶರಾದ ಸಂತೋಷ್ ಗಜಾನನ ಭಟ್, ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಮೇ 3) ಮುಂದೂಡಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಜ್ವಲ್‌ ಅರೆಸ್ಟ್‌ ಆದಲ್ಲಿ ಎಸ್‌ಐಟಿ ಕೇಳುವ ಪ್ರಶ್ನೆಗಳಿವು! ರೇವಣ್ಣಗೂ ತಟ್ಟುವ ಬಿಸಿ

ಪ್ರಜ್ವಲ್‌ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದಲ್ಲಿ ಇಲ್ಲವೇ ಅವರನ್ನು ಬಂಧಿಸಿ ಕರೆತಂದಲ್ಲಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎಸ್‌ಐಟಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಕೇಳಿ ಪ್ರಜ್ವಲ್‌ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್‌ ಅವರ ವಯಸ್ಸಿನಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಆರೋಪಗಳ ಬಗ್ಗೆ ಏನು ಹೇಳುತ್ತೀರಿ? ನೀವೇ ರೆಕಾರ್ಡ್‌ ಮಾಡಿಕೊಂಡಿದ್ದೀರಿ ಎಂಬ ಆರೋಪ ಇದೆ. ರೆಕಾರ್ಡ್‌ಗೆ ಯಾವ ಸಾಧನವನ್ನು ಬಳಸಿಕೊಂಡಿದ್ದೀರಿ. ಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ರೆಡಿಯಾಗಿದೆ. ನಿಮ್ಮ ಪುತ್ರನ ಮೇಲೆ ಆರೋಪಿವಿರುವುದು ಗಮನಕ್ಕೆ ಬಂದಿತ್ತಾ? ನಿಮ್ಮ ಗಮನಕ್ಕೆ ಬಂದಿದ್ರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ? ಒಂದು ವೇಳೆ ಚರ್ಚೆ ಮಾಡಿದರೆ ನಿಮ್ಮ ಪುತ್ರ ಏನು ಹೇಳಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಜ್ವಲ್ ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು

1- ಪ್ರಜ್ವಲ್ ಅವರೇ ನಿಮಗೆ ವಯಸ್ಸು ಎಷ್ಟು?
2- ನೀವು ಏನು ಓದಿದ್ದೀರಿ? ಎಲ್ಲಿ ಓದಿದ್ದು?
3- ಎಲೆಕ್ಷನ್ ಮುಗಿದ ತಕ್ಷಣ ತಾವು ಎಲ್ಲಿಗೆ ಹೋದಿರಿ?
4- ನೀವು ಹೆಚ್ಚಾಗಿ ವಾಸವಿರೋದು ಹಾಸನವಾ? ದೆಹಲಿಯಾ? ಅಥವಾ ಬೆಂಗಳೂರಲ್ಲೋ?
5- ನಿಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಏನಂತೀರಿ?
6- ಅಸಲಿಗೆ ಅವು ನಿಮ್ಮ ವಿಡಿಯೊಗಳಾ?
7- ವಿಡಿಯೋದಲ್ಲಿರುವ ಧ್ವನಿ ನಿಮ್ಮದಲ್ಲವೇ?
8- ನಿಮ್ಮಿಂದಲೇ ರೆಕಾರ್ಡ್‌ ಎನ್ನಲಾಗುತ್ತಿದೆ, ಹೌದೇ?
9- ರೆಕಾರ್ಡ್ ಮಾಡಲು ಬಳಸಿದ ಸಾಧನ ಯಾವುದು?
10- ನೀವೇ ರೆಕಾರ್ಡ್ ಮಾಡಿದ್ದಂತೆ. ಯಾಕೆ ಮಾಡಿದಿರಿ?
11 – ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ?
12- ನಿಮ್ಮ ಮೋಜಿಗೆ ವಿಡಿಯೊಗಳನ್ನು ಮಾಡಿಕೊಳ್ಳುತ್ತಿದ್ದಿರಾ?
13- ರೆಕಾರ್ಡ್ ಮಾಡುವುದು ತಪ್ಪು ಎಂದು ನಿಮಗೆ ಗೊತ್ತಿಲ್ವೆ?
14- ದೃಶ್ಯಗಳಲ್ಲಿ ಇರುವ ಮಹಿಳೆಯರು ನಿಮಗೆ ಪರಿಚಯವೇ?
15- ಆ ಮಹಿಳೆಯರನ್ನು ನೀವು ಎಲ್ಲಿ ಭೇಟಿ ಮಾಡಿದಿರಿ?
16- ದೈಹಿಕ ಸಂಪರ್ಕ ಬೆಳೆಸಲು ಏನಾದರೂ ಆಮಿಷ ಒಡ್ಡಿದ್ರಾ?
17 – ಅದು ಅತ್ಯಾಚಾರಕ್ಕೆ ಸಮ ಎಂದು ಗೊತ್ತಿದೆಯೇ?
18- ಪ್ರಮೋಷನ್, ಕೆಲಸದ ನೆಪದಲ್ಲಿ ದೈಹಿಕ ಸಂಪರ್ಕ ಮಾಡಿದಿರಾ?
19- ನಿಮಗೇನಾದರೂ ಮಾನಸಿಕ ಸಮಸ್ಯೆ ಇದೆಯಾ?
20- ನೀವು ದೌರ್ಜನ್ಯ ನಡೆಸುತ್ತಿರುವಂತಿದೆ, ಏನಂತೀರಿ?
21- ನೋಟಿಸ್ ಕೊಟ್ಟರೂ 7 ದಿನ ಟೈಮ್ ಯಾಕೆ ಕೇಳಿದಿರಿ?
22- ನೀವು ದೃಶ್ಯ ಶೂಟ್ ಮಾಡಲು ಬಳಸಿದ ಸಾಧನ ಎಲ್ಲಿದೆ?
23- ಬೇರೆ ಯಾರ ಬಳಿಯಾದರೂ ವಿಡಿಯೊ ಶೇರ್ ಮಾಡಿದಿರಾ?
24- ಖಾಸಗಿ ದೃಶ್ಯಗಳು ಹೇಗೆ ಹೊರಗೆ ಬಂದವು ಹೇಳಬಹುದಾ?
25- ನಿಮಗೆ ಕಾರ್ತಿಕ್ ಎಂಬ ವ್ಯಕ್ತಿ ಗೊತ್ತಾ?
26 – ನಿಮಗೂ ಕಾರ್ತಿಕ್‌ಗೂ ಸ್ನೇಹವಿತ್ತಾ?
27 – ನಿಮ್ಮ ವಿರುದ್ಧ ಸುದ್ದಿ ಪ್ರಸಾರವಾಗದಂತೆ ತಡೆ ತಂದಿದ್ದಿರಿ ಯಾಕೆ?
28 – ನಿಮ್ಮ ಮೇಲಿನ ಪಿತೂರಿ ಅಂತಾದರೆ ನೀವ್ಯಾಕೆ ದೂರು ನೀಡಲಿಲ್ಲ?
29 – ನಿಮ್ಮ ವಿರುದ್ಧ ಆರೋಪ ಬಂದ ಕೂಡಲೇ ಯಾಕೆ ದೇಶ ಬಿಟ್ಟು ಹೋದಿರಿ?
30 – ಮನೆಯಲ್ಲಿ ಯಾರ ಬಳಿಯಾದರೂ ಈ ವಿಷಯಗಳನ್ನು ಹೇಳಿಕೊಳ್ಳುತ್ತಿದ್ದಿರಾ?
31 – ಕೆಲಸದಾಕೆಯ ಆರೋಪದ ಬಗ್ಗೆ ಏನಂತೀರಿ?
32 – ಪ್ರಜ್ವಲ್ ನೀವು ತನಿಖೆಗೆ ಸಹಕರಿಸಬೇಕು
33 – ತನಿಖೆ ಪೂರ್ಣವಾಗುವವರೆಗೂ ದೇಶ ಬಿಟ್ಟು ಹೋಗಬೇಡಿ

ಎಂಬಿತ್ಯಾದಿ ಪ್ರಶ್ನೆಗಳನ್ನು ಎಸ್‌ಐಟಿ ಕೇಳಲಿದೆ. ಒಂದು ವೇಳೆ ಇವುಗಳಿಗೆ ಆರೋಪಿ ಪ್ರಜ್ವಲ್‌ ಸ್ಪಂದಿಸದೆ ಸಮರ್ಪಕ ಉತ್ತರ ನೀಡಿದ್ದರೆ ಮುಂದಿನ ಕ್ರಮದ ಬಗ್ಗೆ ಎಸ್‌ಐಟಿ ಚಿಂತನೆ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಎಚ್‌‌‌‌.ಡಿ.ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು!

1) ನಿಮ್ಮ ಹೆಸರೇನು..? ಏನು ಕೆಲಸ ಮಾಡಿಕೊಂಡಿದ್ದೀರಿ..?
2) ಯಾವ ವಿಳಾಸದಲ್ಲಿ ವಾಸವಾಗಿದ್ದೀರಾ? ಎಷ್ಟು ವರ್ಷ..?
3) ನಿಮ್ಮ ಮೇಲೆ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ಮಾಹಿತಿ ಇದೆಯಾ?
4) ದೂರು ನೀಡಿರುವ ಮಹಿಳೆ ಪರಿಚಯಸ್ಥರಾ? ಸಂಬಂಧಿನಾ?
5) ಎಷ್ಟು ವರ್ಷಗಳಿಂದ ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ..?
6) ದೂರಿನಲ್ಲಿ ಉಲ್ಲೇಖಿಸಿದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದೀರಾ?
7) ನಿಮ್ಮ ಪುತ್ರನ ಮೇಲೂ ಆರೋಪಿವಿದೆ ಗಮನಕ್ಕೆ ಬಂದಿತ್ತಾ..?
8) ನಿಮ್ಮ ಗಮನಕ್ಕೆ ಬಂದಿದ್ದರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ?
9) ಒಂದು ವೇಳೆ ಚರ್ಚೆ ಮಾಡಿದ್ದರೆ ನಿಮ್ಮ ಪುತ್ರ ಏನು ಹೇಳಿದ್ದರು?
10) ನಿಮ್ಮ ಪುತ್ರನ ಕಾರು ಚಾಲಕ ಕಾರ್ತಿಕ್ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ?
11) ನಿಮ್ಮ ಡ್ರೈವರ್ ಕಾರ್ತಿಕ್ ಜತೆ ಏನಾದರೂ ಗಲಾಟೆ ಆಗಿತ್ತಾ?
12) ವಿಡಿಯೊ ನಾನೇ ಕೊಟ್ಟಿದ್ದು ಎಂದು ಕಾರ್ತಿಕ್ ಹೇಳಿಕೆ ನೀಡಿದ್ದಾರಲ್ವಾ, ಇದು ಸತ್ಯನಾ?
13) ಪೆನ್‌ಡ್ರೈವ್‌ನಲ್ಲಿರೋ ವಿಡಿಯೊ ಪ್ರಜ್ವಲ್ ರೇವಣ್ಣನವರೆದ್ದೇನಾ..?
14) ಇಲ್ಲ ಅಂದಾದರೆ ಕೋರ್ಟ್‌ನಲ್ಲಿ ಸ್ಟೇ ತಂದಿದ್ದು ಯಾಕೆ?
15) ಮನೆ ಕೆಲಸದವಳು ಮಾಡುವ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

Continue Reading

ಕ್ರೈಂ

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Prajwal Revanna Case: ಈಗ ಎಸ್ಐಟಿ ಮುಂದೆ ಹಾಜರಾಗಿರುವ ಮತ್ತೊಬ್ಬ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಆ ಸಂಬಂಧ ಸಿಐಡಿಯಲ್ಲಿಯೇ ಎಫ್ಐಆರ್ ದಾಖಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಖಾತ್ರಿಪಡಿಸಿದ್ದಾರೆ. ಸಂಜೆ ಮ್ಯಾಜಿಸ್ಟ್ರೇಟರ್ ಮುಂದೆ ಮತ್ತೊಬ್ಬ ಸಂತ್ರಸ್ತೆಯನ್ನು ಹಾಜರುಪಡಿಸಿ 164 ಅಡಿಯಲ್ಲಿ‌ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಈ ಸಂಬಂಧ ಮತ್ತೊಂದು ದೂರನ್ನು ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಧೀಶರ ಮುಂದೆ ಸಂತ್ರಸ್ತೆಯು ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ನೀಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನೀಡಿದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

VISTARANEWS.COM


on

Prajwal Revanna Case Another victim gives statement before judge Will Revanna get anticipatory bail
Koo

ಬೆಂಗಳೂರು: ಹಾಸನ ಸಂಸದ ಪ್ರಜ್ಬಲ್ ರೇವಣ್ಣ (Prajwal Revanna Case) ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕಾಗಿದೆ. ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರೂ ಬಾರದ ಪ್ರಜ್ವಲ್ ಪತ್ತೆಗೆ ಲುಕ್ ಔಟ್ ನೋಟಿಸ್ ಅನ್ನು ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಜಾರಿ ಮಾಡಿದ್ದಾರೆ.‌ ಅದರ ಬೆನ್ನಲ್ಲೇ ಈಗ ಮತ್ತೊಬ್ಬ ಸಂತ್ರಸ್ತೆ ದೂರು ನೀಡಿದ್ದಾರೆ. ಇದರಿಂದ ಈ ಪ್ರಕರಣವು ಪ್ರಜ್ವಲ್‌ಗೆ ಮತ್ತಷ್ಟು ಕಂಟಕವಾಗಿ ಪರಿಣಮಿಸಿದೆ. ಇತ್ತ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ನೋಟಿಸ್‌ ನೀಡಿತ್ತು. ಆದರೆ, ಇಬ್ಬರೂ ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಎಚ್‌.ಡಿ. ರೇವಣ್ಣ ಬೆಂಗಳೂರಿನಲ್ಲಿದ್ದರೂ ಎಸ್‌ಐಟಿಯತ್ತ ಸುಳಿಯುತ್ತಿಲ್ಲ. ಇನ್ನು ಪ್ರಜ್ವಲ್‌ ಸಹ ತಾವು ಬೆಂಗಳೂರಿನಲ್ಲಿ ಇಲ್ಲ. ವಿದೇಶದಲ್ಲಿರುವುದರಿಂದ ಬರಲು ಸಮಯಾವಕಾಶ ಬೇಕು. ಹೀಗಾಗಿ ಏಳು ದಿನ ಅವಕಾಶ ಕೊಡಿ ಎಂದು ತಮ್ಮ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ್ದರು. ಆದರೆ, ಸಮಯ ನೀಡಲು ಎಸ್ಐಟಿ ನಿರಾಕರಣೆ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದೆ. ಇದು ಪ್ರಜ್ವಲ್‌ ಸಂಕಷ್ಟಕ್ಕೆ ಕಾರಣವಾಗಿದೆ.

ದುಬೈಗೆ ಹಾರಿರುವ ಪ್ರಜ್ವಲ್‌

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು (ಗುರುವಾರ ಮೇ 2) ಎಚ್.ಡಿ. ರೇವಣ್ಣ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಐಟಿ ವಿಚಾರಣೆಗೆ ಪ್ರಶ್ನಾವಳಿಗಳನ್ನೂ ಸಿದ್ಧಪಡಿಸಿಟ್ಟುಕೊಂಡಿತ್ತು. ಆದರೆ, ಸಂಜೆವರೆಗೂ ಎಸ್ಐಟಿಯತ್ತ ಮುಖ ಮಾಡದೇ ರೇವಣ್ಣ ಟೆಂಪಲ್ ರನ್ ಮಾಡಿಕೊಂಡಿದ್ದಾರೆ. ಇದರ ಜತೆಗೆ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನೆಯಲ್ಲಿ ಮೀಟಿಂಗ್‌ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಪ್ರಜ್ವಲ್ ರೇವಣ್ಣ ಮೇ 15ಕ್ಕೆ ಬರುವುದಾಗಿ ವಿಮಾನ ಟಿಕೆಟ್‌ ಬುಕ್ ಮಾಡಿದ್ದರು ಎಂಬ ಅವರ ಹೆಸರಿನಲ್ಲಿದ್ದ ಟಿಕೆಟ್ ವೈರಲ್ ಆಗಿತ್ತು. ಆದರೆ, ಬೆಂಗಳೂರಿಗೆ ಬರಬೇಕಾದ ಪ್ರಜ್ವಲ್ ಬುಧವಾರ ರಾತ್ರಿಯೇ ಜರ್ಮನಿಯಿಂದ ದುಬೈಗೆ ಹಾರಿದ್ದಾರೆ.

ದೂರು ದಾಖಲಿಸಿದ ಮತ್ತೊಬ್ಬ ಸಂತ್ರಸ್ತೆ!

ಈ ಎಲ್ಲ ಬೆಳವಣಿಗೆಗಳ‌ ಎಸ್ಐಟಿ ಮುಂದೆ ಹಾಜರಾಗಿರುವ ಮತ್ತೊಬ್ಬ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಆ ಸಂಬಂಧ ಸಿಐಡಿಯಲ್ಲಿಯೇ ಎಫ್ಐಆರ್ ದಾಖಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಖಾತ್ರಿಪಡಿಸಿದ್ದಾರೆ. ಸಂಜೆ ಮ್ಯಾಜಿಸ್ಟ್ರೇಟರ್ ಮುಂದೆ ಮತ್ತೊಬ್ಬ ಸಂತ್ರಸ್ತೆಯನ್ನು ಹಾಜರುಪಡಿಸಿ 164 ಅಡಿಯಲ್ಲಿ‌ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಈ ಸಂಬಂಧ ಮತ್ತೊಂದು ದೂರನ್ನು ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಧೀಶರ ಮುಂದೆ ಸಂತ್ರಸ್ತೆಯು ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ನೀಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನೀಡಿದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

ಮತ್ತೊಂದು ನೋಟಿಸ್‌ಗೆ ಸಿದ್ಧತೆ

ಮತ್ತೊಂದೆಡೆ ಸಂಜೆಯೊಳಗೆ ವಿಚಾರಣೆಗೆ ಬರುತ್ತಾರೆ ಅಂದುಕೊಂಡಿದ್ದ ಎಚ್‌.ಡಿ. ರೇವಣ್ಣ ಅವರು ಕೊನೇ ಕ್ಷಣದಲ್ಲಿ ವಕೀಲರ ಮೂಲಕ‌ ಜನ್ರತಿನಿಧಿಗಳ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ‌ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯು ಶುಕ್ರವಾರ (ಮೇ 3) ನಡೆಯಲಿದ್ದು, ಯಾವ ತೀರ್ಪು ಹೊರ ಬರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಮಧ್ಯೆ ತನಿಖಾಧಿಕಾರಿಗಳು ಮತ್ತೊಂದು‌ ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

Continue Reading

ಬೆಂಗಳೂರು

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Site Dispute : ಸೈಟು ವಿಚಾರಕ್ಕೆ ಎರಡು ಗುಂಪುಗಳು ಜ್ಞಾನಭಾರತಿ ಠಾಣೆಯಲ್ಲೇ ಕಿತ್ತಾಡಲು ಮುಂದಾಗಿದ್ದರು. ಈ ವೇಳೆ ಗಲಾಟೆ ಮಾಡದಂತೆ ಎಚ್ಚರಿಸಿ ಮಧ್ಯೆ ಹೋದ ಇನ್‌ಸ್ಪೆಕ್ಟರ್‌ಗೆ ಮಹಿಳೆಯೊಬ್ಬಳು ಕಪಾಳಮೋಕ್ಷ (Assault Case) ಮಾಡಿದ್ದಾಳೆ.

VISTARANEWS.COM


on

By

assault Case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಪೊಲೀಸ್ ಠಾಣಾ ಆವರಣದಲ್ಲೇ ಮಹಿಳೆಯೊಬ್ಬಳು ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ (Assault Case) ಮಾಡಿದ್ದಾಳೆ. ಸೈಟು ವಿಚಾರಕ್ಕೆ (Site Dispute) ಎರಡು ಗುಂಪುಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಜ್ಞಾನಭಾರತಿ ಠಾಣೆಗೆ ಬಂದಿದ್ದರು. ಈ ವೇಳೆ ಎರಡು ಗುಂಪುಗಳ ಸದಸ್ಯರು ಮಾತಿಗೆ ಮಾತು ಬೆಳೆಸಿ ಕಿತ್ತಾಡಲು ಮುಂದಾಗಿದ್ದರು. ಹೀಗಾಗಿ ಮಧ್ಯಪ್ರವೇಶಿಸಿ ಗಲಾಟೆ ಮಾಡದಂತೆ ಎಚ್ಚರಿಸಲು ಹೋದ ಇನ್‌ಸ್ಪೆಕ್ಟರ್‌ಗೆ ಮಹಿಳೆಯೊಬ್ಬಳು ಕಪಾಳಕ್ಕೆ ಹೊಡೆದಿದ್ದಾಳೆ.

ನಿನ್ನೆ ಬುಧವಾರ ಸಂಜೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ರವಿ ಅವರಿಗೆ ಫೌಜೀಯಾ ಎಂಬಾಕೆ ಹಲ್ಲೆ ನಡೆಸಿದ್ದಾಳೆ. ಫೌಜೀಯಾ ಹಾಗೂ ಇನ್ನೊಂದು ಗುಂಪು ಸೈಟು ವಿಚಾರಕ್ಕೆ ಜ್ಞಾನಭಾರತಿ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಠಾಣೆ ಆವರಣದಲ್ಲಿ ಎರಡು ಗುಂಪುಗಳು ಏರು ಧ್ವನಿಯಲ್ಲಿ ಕೂಗಾಡುತ್ತಾ ಮಾತನಾಡುತ್ತಿದ್ದರು.

ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್‌ ರವಿ ಎರಡು ಗುಂಪುಗಳಿಗೆ ಗಲಾಟೆ ಮಾಡದಂತೆ ವಾರ್ನಿಂಗ್‌ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಫೌಜೀಯ ಏಕಾಏಕಿ ಇನ್‌ಸ್ಪೆಕ್ಟರ್‌ ರವಿ ಅವರ ಕಪಾಳಕ್ಕೆ ಹೊಡೆದಿದ್ದಾಳೆ. ಮಾನವ ಹಕ್ಕುಗಳ ಸಂಘಟನೆಯಲ್ಲಿರುವ ಫೌಜೀಯಾ ಹಾಗೂ ಮತ್ತಿಬ್ಬರು ಮಹಿಳೆಯರ ಮೇಲೆ ಎಫ್‌ಐಆರ್ ದಾಖಲಾಗಿದೆ. ರಾತ್ರಿಯೇ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

ಬೆಂಗಳೂರು: ಬೆಂಗಳೂರಿನ (Bengaluru News) ಕೋರಮಂಗಲ ಪೊಲೀಸ್ ಠಾಣಾ (Kormangala police station) ವ್ಯಾಪ್ತಿಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಕೊಲೆಯಾಗಿದೆ. ಸೆಲ್ವಿನ್ ಪ್ರಾನ್ಸಿಸ್ ಎಂಬಾತ ಪತ್ನಿಯನ್ನು ನಡುರಸ್ತೆಯಲ್ಲೆ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಸೆಲ್ವಿನ್ ಪ್ರಾನ್ಸಿಸ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಪತಿಯಿಂದ 6 ತಿಂಗಳ ಹಿಂದೆ ದೂರಾಗಿದ್ದಳು. ವೆಂಕಟಾಪುರದ ತಾಯಿ ಮನೆಯಲ್ಲಿ ವಾಸವಿದ್ದಳು. ಇಂದು ಗುರುವಾರ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಪತ್ನಿ ಜತೆಗೆ ಸೆಲ್ವಿನ್‌ ಪ್ರಾನ್ಸಿಸ್‌ ಗಲಾಟೆ ಮಾಡಿಕೊಂಡಿದ್ದ. ಈ ಮೊದಲೇ ಪ್ರಿಪ್ಲಾನ್‌ ಮಾಡಿಕೊಂಡು ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸೆಂಜ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೃತ್ಯ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

Prajwal Revanna Case: ಪ್ರಜ್ವಲ್‌ ರೇವಣ್ಣ ಅವರ ಮೇಲೆ ಕ್ರಮವಾಗಬೇಕಾದರೆ, ಅವರನ್ನು ಕರೆತರಬೇಕಾದರೆ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದರು.

VISTARANEWS.COM


on

Prajwal Revanna Case Centre says it has no power to revoke Prajwal diplomatic passport Big relief for MP
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಬೆನ್ನಲ್ಲೇ, ಇದು ತಮ್ಮಿಂದ ಸಾಧ್ಯವಿಲ್ಲ ಎಂದು ಕೇಂದ್ರದ ಉತ್ತರ ಬಂದಿದೆ.

ಪ್ರಜ್ವಲ್ ರೇವಣ್ಣ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ (ರಾಜತಾಂತ್ರಿಕ ಪಾಸ್‌ಪೋರ್ಟ್‌) ರದ್ದುಗೊಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಪ್ರತಿಕ್ರಿಯೆ ನೀಡಿ, ಯಾವುದೇ ವ್ಯಕ್ತಿಯ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡಬೇಕೆಂದರೆ ಅದಕ್ಕೆ ನ್ಯಾಯಾಲಯದ ಆದೇಶ ಬೇಕು. ಈವರೆಗೂ ನಮಗೆ ಯಾವುದೇ ನ್ಯಾಯಾಲಯವು ಪಾಸ್‌ಪೋರ್ಟ್‌ ರದ್ದುಗೊಳಿಸಲು ನಿರ್ದೇಶನ ನೀಡಿಲ್ಲ. ಹೀಗಾಗಿ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ!

ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.

ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ, ಒಬ್ಬ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸೆಗಿದ್ದಾರೆ. ಈ ಪ್ರಕರಣದ ಮಹತ್ವದ ಬಗ್ಗೆ ನೀವು ತಿಳಿದಿರಲೇಬೇಕಿತ್ತು. ಅಲ್ಲದೆ, ಪ್ರಜ್ವಲ್‌ 2024ರ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಎನ್‌ಡಿಎ ಅಭ್ಯರ್ಥಿಯೂ ಆಗಿದ್ದಾರೆ. ಜತೆಗೆ ಇಂಥ ಭಯಾನಕ ಹಾಗೂ ನಾಚಿಕೆಗೇಡಿನ ಪ್ರಕರಣ ಪ್ರಜ್ವಲ್‌ ಮೇಲಿದೆ. ಅಲ್ಲದೆ, ಈ ಪ್ರಕರಣವು ದೇಶದ ಜನತೆಯ ಆತ್ಮಸಾಕ್ಷಿಯನ್ನೇ ಕದಡಿಬಿಟ್ಟಿದೆ. ಹೀಗಾಗಿ ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದರು.

ಪ್ರಜ್ವಲ್‌ ರೇವಣ್ಣ ಅವರ ಮೇಲೆ ಕ್ರಮವಾಗಬೇಕಾದರೆ, ಅವರನ್ನು ಕರೆತರಬೇಕಾದರೆ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದರು.

Prajwal Revanna Case  and Hassan Pen Drive case Siddaramaiah writes to PM Modi seeking cancellation of Prajwal Revanna diplomatic passport
ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಬರೆದಿರುವ ಪತ್ರ

ಆದರೆ, ಈಗ ಈ ಸಂಬಂಧ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಪಾಸ್‌ಪೋರ್ಟ್‌ ರದ್ದುಗೊಳಿಸುವ ಅಧಿಕಾರ ವಿದೇಶಾಂಗ ಸಚಿವಾಲಯಕ್ಕೆ ಇಲ್ಲ. ಇದಕ್ಕೆ ನ್ಯಾಯಾಲಯದಿಂದ ಆದೇಶ ಬರಬೇಕು. ಅಂತಹ ಯಾವುದೇ ಆದೇಶವು ಈ ವರೆಗೆ ಯಾವುದೇ ನ್ಯಾಯಾಲಯದಿಂದ ತಮಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಪ್ರಜ್ವಲ್‌ಗೆ ರಿಲೀಫ್‌

ಪ್ರಜ್ವಲ್‌ ರೇವಣ್ಣ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ನ್ಯಾಯಾಲಯದಿಂದ ಆದೇಶ ಬರುವವರೆಗೂ ಹೊರ ದೇಶದಲ್ಲಿ ಪ್ರಜ್ವಲ್‌ ಸೇಫ್‌ ಎಂದು ಹೇಳಲಾಗುತ್ತಿದೆ. ಅಲ್ಲಿಯವರಿಗೆ ಅವರು ಹಲವು ದೇಶಕ್ಕೆ ಪ್ರಯಾಣ ಮಾಡಬಹುದಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ತನಿಖಾ ತಂಡವು ಕೂಡಲೇ ಕೋರ್ಟ್‌ ಮೊರೆ ಹೋಗಿ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಮನವಿ ಸಲ್ಲಿಸಿದರೆ ಪ್ರಜ್ವಲ್‌ಗೆ ಸಂಕಷ್ಟ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌?

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಅನ್ನು ಟೈಪ್‌ ಡಿ (Type D) ಪಾಸ್‌ ಪೋರ್ಟ್‌ ಎಂದೂ ಕರೆಯುತ್ತಾರೆ. ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಪರ ಪ್ರತಿನಿಧಿಸುವ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ. ಭಾರತ ಸರ್ಕಾರದ ಪರ ಅಧಿಕೃತ ವಿದೇಶ ಪ್ರಯಾಣದ ಸಂದರ್ಭ ಬಳಸುತ್ತಾರೆ.

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ 28 ಪುಟಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ ಕಡು ನೀಲಿ ಕವರ್‌ ಅನ್ನು ಹೊಂದಿದ್ದರೆ, ಇದು ಮರೂನ್‌ ಬಣ್ಣದಲ್ಲಿ ಇರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ ವಯಸ್ಕರಿಗೆ 10 ವರ್ಷ ಹಾಗೂ ಅಪ್ರಾಪ್ತರಿಗೆ 5 ವರ್ಷ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ 5 ಅಥವಾ ಕಡಿಮೆ ಅವಧಿಗೆ ಬಿಡುಗಡೆಯಾಗುತ್ತದೆ.

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ದಿಲ್ಲಿಯಲ್ಲಿ ವಿದೇಶಾಂಗ ಇಲಾಖೆಯ ಪಾಸ್‌ಪೋರ್ಟ್‌ ಸೇವಾ ಪ್ರೋಗ್ರಾಮ್‌ ವಿಭಾಗದಲ್ಲಿ ಮಾತ್ರ ಡಿಪ್ಲೊಮ್ಯಾಟಿಕ್‌ ಪಾಸ್‌ ಪೋರ್ಟ್‌ ಬಗ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ರಯೋಜನವೇನು?

ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಭಾರತ ಸರ್ಕಾರವನ್ನು ರಾಜತಾಂತ್ರಿಕ ಉದ್ದೇಶಗಳಿಗೆ ವಿದೇಶಗಳಲ್ಲಿ ಪ್ರತಿನಿಧಿಸುವವರಿಗೆ ಅಧಿಕೃತ ಗುರುತಿನ ದೃಢೀಕರಣವಾಗಿ ಬಳಕೆಯಾಗುತ್ತದೆ. ಇದು ಅವರಿಗೆ ಗುರುತು ಮತ್ತು ಅಧಿಕೃತ ಸ್ಥಾನಮಾನವನ್ನು ಒದಗಿಸುತ್ತದೆ.

ಇದನ್ನೂ ಓದಿ: Hassan Pen Drive Case: SIT ತನಿಖೆಗೆ ಸಂತ್ರಸ್ತೆಯರ ಹಿಂದೇಟು; ವಿಚಾರಣೆ ಅಂತ ತೊಂದರೆ ಕೊಟ್ಟರೆ ಸೂಸೈಡ್‌ ಬೆದರಿಕೆ!

ಅರೆಸ್ಟ್‌ ಮಾಡುವುದು ಸಾಧ್ಯವೇ ಇಲ್ಲ

ಈ ಪಾಸ್‌ಪೋರ್ಟ್‌ ಇರುವವರಿಗೆ ಅಂತಾರಾಷ್ಟ್ರೀಯ ಕಾನೂನು ಅಡಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳು, ಮಾನ್ಯತೆಗಳು ಸಿಗುತ್ತದೆ. ಆತಿಥೇಯ ರಾಷ್ಟ್ರದಲ್ಲಿ ಅರೆಸ್ಟ್‌, ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.

ವೀಸಾ ಸೌಲಭ್ಯ

ಈ ಪಾಸ್‌ಪೋರ್ಟ್‌ ಇರುವವರಿಗೆ ಹಲವು ದೇಶಗಳು ವೀಸಾ ವಿಸ್ತರಿಸುತ್ತವೆ. ವೀಸಾ ಮನ್ನಾ ಸೌಲಭ್ಯವೂ ಸಿಗಬಹುದು. ಅಧಿಕೃತ ಪ್ರವಾಸ ಕಾರ್ಯಕ್ರಮಗಳು ಸುಗಮವಾಗುತ್ತದೆ. ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಸೌಲಭ್ಯಗಳು ಸಿಗುತ್ತವೆ.

Continue Reading
Advertisement
K. Annamalai
ಪ್ರಮುಖ ಸುದ್ದಿ10 mins ago

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

Mumbai
ದೇಶ15 mins ago

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

AC Blast
ಪ್ರಮುಖ ಸುದ್ದಿ1 hour ago

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

Tax Returns
ಪ್ರಮುಖ ಸುದ್ದಿ1 hour ago

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Dr Vinayaka Prasanna passed away
ಬಳ್ಳಾರಿ2 hours ago

Dr Vinayaka Prasanna: ಡಾ.ವಿನಾಯಕ ಪ್ರಸನ್ನ ವಿಧಿವಶ

Sri Siddhivinayaka Swami SrimanMaharathotsava in Ripponpet
ಶಿವಮೊಗ್ಗ2 hours ago

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Minister Santosh Lad latest statement in Dharwad
ಕರ್ನಾಟಕ2 hours ago

Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

Voting Awareness for Passengers at Hosapete Railway Station
ವಿಜಯನಗರ2 hours ago

Lok Sabha Election 2024: ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತದಾನ ಜಾಗೃತಿ

BJP workers meeting in Banavasi
ರಾಜಕೀಯ2 hours ago

Lok Sabha Election 2024: ಕೇಂದ್ರದ ಸಾಧನೆಗಳನ್ನು ಮನೆ ಮನೆಗೂ ಪರಿಚಯಿಸಿ: ವಿ. ಸುನೀಲ್ ಕುಮಾರ್

Yakshagana performance for voting awareness in Uttara Kannada district on May 4
ಉತ್ತರ ಕನ್ನಡ2 hours ago

Lok Sabha Election 2024: ಉ.ಕ. ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಮೇ 4 ರಂದು ಯಕ್ಷಗಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ18 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌