Quest Alliance: ಕ್ವೆಸ್ಟ್ ಅಲಯನ್ಸ್ ಸಂಸ್ಥೆಗೆ ಮೆಕೆಂಜಿ ಸ್ಕಾಟ್ ದೇಣಿಗೆ - Vistara News

ಬೆಂಗಳೂರು

Quest Alliance: ಕ್ವೆಸ್ಟ್ ಅಲಯನ್ಸ್ ಸಂಸ್ಥೆಗೆ ಮೆಕೆಂಜಿ ಸ್ಕಾಟ್ ದೇಣಿಗೆ

Quest Alliance: ಮೆಕೆಂಜಿ ಸ್ಕಾಟ್ ಅವರು ನೀಡಿರುವ ದೇಣಿಗೆಯು ಸಾಂಸ್ಥಿಕ ಅಭಿವೃದ್ಧಿ ಹಾಗೂ ಶಿಕ್ಷಣ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿರ್ಣಾಯಕ ಹೂಡಿಕೆಗಳಿಗೆ ಉತ್ತೇಜನ ನೀಡಲಿದ್ದು, ಹೆಚ್ಚು ಹೆಚ್ಚು ಯುವ ಜನರನ್ನು ಸಶಕ್ತಗೊಳಿಸುವ ಸಂಸ್ಥೆಯ ಗುರಿಗೆ ಸಹಕಾರಿಯಾಗಲಿದೆ ಎಂದು ಕ್ವೆಸ್ಟ್ ಅಲಯನ್ಸ್ ಸಂಸ್ಥೆ ತಿಳಿಸಿದೆ.

VISTARANEWS.COM


on

Quest Alliance Skil Development programme
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯುವ ಕಲಿಕೆದಾರರಲ್ಲಿ 21ನೇ ಶತಮಾನದ ಕೌಶಲಗಳನ್ನು ಬೆಳೆಸಿ ಅವರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕ್ವೆಸ್ಟ್ ಅಲಯನ್ಸ್ ಲಾಭರಹಿತ ಸಂಸ್ಥೆಗೆ ಖ್ಯಾತ ದಾನಿ ಮೆಕೆಂಜಿ ಸ್ಕಾಟ್ ಅವರು ಮಹತ್ತರವಾದ ದೇಣಿಗೆ ನೀಡಿದ್ದಾರೆ. ಈ ದೇಣಿಗೆಯು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಪರಿಣಾಮವನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಲು ಉತ್ತೇಜನ ನೀಡಲಿದೆ ಎಂದು ಕ್ವೆಸ್ಟ್ ಅಲಯನ್ಸ್ ಸಂಸ್ಥೆ (Quest Alliance) ತಿಳಿಸಿದೆ.

ಹವಾಮಾನ ಬದಲಾವಣೆ, ತಂತ್ರಜ್ಞಾನ, ಹೆಚ್ಚುತ್ತಿರುವ ಅಸಮಾನತೆ ಮತ್ತು ಕ್ಷಿಪ್ರವಾಗಿ ಬದಲಾಗುತ್ತಿರುವ ಭವಿಷ್ಯದ ಉದ್ಯೋಗದ ಸ್ವರೂಪ ಮುಂತಾದ ಪಲ್ಲಟಗಳ ನಡುವೆ ತನ್ನ ಕಾರ್ಯ ಚಟುವಟಿಕೆಗಳನ್ನು ಮರುಕಲ್ಪನೆ ಮಾಡಿಕೊಳ್ಳಲು ಹೊರಟಿರುವ ನಿರ್ಣಾಯಕ ಕಾಲಘಟ್ಟದಲ್ಲಿ ಕ್ವೆಸ್ಟ್ ಅಲಯನ್ಸ್ ಸಂಸ್ಥೆಗೆ ಈ ದೇಣಿಗೆ ದೊರೆತಿದೆ. ಈ ದೇಣಿಗೆಯು ಸಂಸ್ಥೆಗೆ ಆಂತರಿಕ ಸಾಮರ್ಥ್ಯ, ತಾಂತ್ರಿಕ ಪರಿಹಾರಗಳನ್ನು ನಿರ್ಮಿಸಿಕೊಳ್ಳಲು ಮತ್ತು ಶಾಲೆಯಿಂದ ಔದ್ಯೋಗಿಕ ಪರಿಸರ ವ್ಯವಸ್ಥೆಯಲ್ಲಿ ಇನ್ನಷ್ಟು ಆಳವಾದ ವ್ಯವಸ್ಥಿತ ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳಿಗೆ ಹೂಡಿಕೆ ಮಾಡಲು ಅವಕಾಶ ನೀಡಲಿದೆ ಎಂದು ಹೇಳಿದೆ.

ಸಂಕೀರ್ಣ ಅಭಿವೃದ್ಧಿ ಸಮಸ್ಯೆಗಳಿಗೆ ದೂರಗಾಮಿ ದೃಷ್ಟಿಯೊಂದಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೆಕೆಂಜಿ ಸ್ಕಾಟ್ ಅವರ ಈ ಕೊಡುಗೆ ವಿಶ್ವಾಸಾಧಾರಿತ ಮತ್ತು ಸಡಿಲ ದೇಣಿಗೆಗಳತ್ತ ಸಂವಾದವನ್ನು ಕೊಂಡೊಯ್ಯಲು ಮಹತ್ತರ ಹೆಜ್ಜೆ ಇಟ್ಟಿದೆ. ಈ ದೇಣಿಗೆಯೊಂದಿಗೆ ಕ್ವೆಸ್ಟ್ ಅಲಯನ್ಸ್ ಸಂಸ್ಥೆಯು ಯುವ ಜನಾಂಗದ ಕಲಿಕಾ ಅನುಭವವನ್ನು ಪರಿವರ್ತನೆ ಮಾಡಿ, 21ನೇ ಶತಮಾನದ ಕಾರ್ಯಪ್ರವೃತ್ತಿಗಳಲ್ಲಿ ಯಶಸ್ಸು ಕಾಣಲು ಅಗತ್ಯವಿರುವ ಕೌಶಲಗಳನ್ನು ರೂಢಿಸುವ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ಕ್ವೆಸ್ಟ್‌ ಅಲಯನ್ಸ್‌ ತಿಳಿಸಿದೆ.

ಇದನ್ನೂ ಓದಿ | PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಸಿಇಒ ಆಕಾಶ್ ಸೇಥಿ ಅವರು ಪ್ರತಿಕ್ರಿಯಿಸಿ, ಈ ದೇಣಿಗೆ ನಮಗೆ ಸ್ಥಿರತೆಯ ಭಾವನೆ ನೀಡಿದ್ದು, ದೀರ್ಘಾವಧಿ ಮತ್ತು ಸುಸ್ಥಿರ ಪರಿಣಾಮಗಳತ್ತ ಗಮನ ಹರಿಸಲು ಅವಕಾಶ ಒದಗಿಸಿದೆ. ಇದು ನಮಗೆ ದಿಟ್ಟ ಹೆಜ್ಜೆಗಳನ್ನಿಡಲು, ನವೀನ ಮಾರ್ಗಗಳನ್ನು ಪ್ರಯೋಗ ಮಾಡಲು ಮತ್ತು ಹೆಚ್ಚು ಸೃಜನಶೀಲತೆಯಿಂದ ಕೆಲಸ ಮಾಡಲು ಸುರಕ್ಷಾ ಜಾಲವನ್ನು ಒದಗಿಸಿದೆ. ಈ ರೀತಿಯ ಬೆಂಬಲ ನಮ್ಮಂತಹ ಸಂಸ್ಥೆಗಳಿಗೆ ಪರಿವರ್ತನಾ ಬದಲಾವಣೆಗಳನ್ನು ಮತ್ತು ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2008ರಲ್ಲಿ ಸ್ಥಾಪನೆಯಾದಾಗಿನಿಂದ ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಕಳೆದ 15 ವರ್ಷಗಳಿಂದ ನಿರಂತರವಾಗಿ ಶಿಕ್ಷಣ ತಂತ್ರಜ್ಞಾನದಲ್ಲಿ ನಾವೀನ್ಯತೆ, ಸಾಮರ್ಥ್ಯ ನಿರ್ಮಾಣ ಮತ್ತು ಸಹಯೋಗದೊಂದಿಗೆ ಕಲಿಕೆದಾರರನ್ನು ಮತ್ತು ಯುವ ಜನಾಂಗವನ್ನು ಸಶಕ್ತಗೊಳಿಸಲು ಮತ್ತು ಕಲಿಕಾ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಕಾರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ತಂತ್ರಜ್ಞಾನ ಮತ್ತು ಹಣಕಾಸು ಸೇವಾ ಸಂಸ್ಥೆಗಳ ಸಿಎಸ್ಆರ್ ಯೋಜನೆ ಸೇರಿದಂತೆ ಅನೇಕ ಪಾಲುದಾರರ ಸಹಕಾರದೊಂದಿಗೆ ಕ್ವೆಸ್ಟ್ ಅಲಯನ್ಸ್ ಸಂಸ್ಥೆ, ಈ ಅನುದಾನದ ಮೂಲಕ ನಾಯಕತ್ವ ವಿಕಾಸ ಮತ್ತು ಸಂಶೋಧನೆಗಾಗಿ ಮಹತ್ವದ ಹೂಡಿಕೆಗಳನ್ನು ಮಾಡಲಿದೆ. ಇದರ ಜತೆಗೆ ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳು ಹಾಗೂ ವೈಯಕ್ತೀಕರಿಸಲಾದ ಕಲಿಕಾ ಸಾಧನಗಳ ನಿರ್ಮಾಣಕ್ಕಾಗಿ ಈ ಅನುದಾನವನ್ನು ಬಳಸಿಕೊಳ್ಳಲಿದೆ. ಇದು ಯುವ ಜನರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಲು ಮತ್ತು ಶಿಕ್ಷಣ ಬದುಕಿನಿಂದ ವೃತ್ತಿ ಬದುಕಿಗೆ ಯಶಸ್ವಿಯಾಗಿ ಮುಂದೆ ಸಾಗಲು ನೆರವಾಗಲಿದೆ ಎಂದು ಕ್ವೆಸ್ಟ್‌ ಅಲಯನ್ಸ್‌ ತಿಳಿಸಿದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಮಕ್ಕಳಿಗಾಗಿ ಅಮರ ಚಿತ್ರಕಥಾ ಲೋಕ ಸೃಷ್ಟಿಸಿದ ಅಂಕಲ್‌ ಪೈಗೆ ಮಕ್ಕಳೇ ಇರಲಿಲ್ಲ!

ಕ್ವೆಸ್ಟ್ ಅಲಯನ್ಸ್ ಬಗ್ಗೆ

ಕ್ವೆಸ್ಟ್ ಅಲಯನ್ಸ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, 21ನೇ ಶತಮಾನದ ಯುವಕ, ಯುವತಿಯರು ಸ್ವಯಂ-ಅಧ್ಯಯನದ ಮೂಲಕ ಕೌಶಲಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಲ್ಲಿರುವ ಕೊರತೆಗಳನ್ನು ನಿವಾರಿಸಲು ಸೂಕ್ತ ಪರಿಹಾರ ವಿನ್ಯಾಸಗೊಳಿಸುತ್ತಿದೆ. ಕಲಿಕಾ ಜಾಲಗಳು ಹಾಗೂ ಸಹಯೋಗಗಳನ್ನು ನಿರ್ಮಿಸುವ ಮೂಲಕ ಸಂಶೋಧನೆ ಮತ್ತು ಆವಿಷ್ಕಾರ ಪ್ರಣೀತ ಬದಲಾವಣೆಗಳನ್ನು ತರುವತ್ತ ಕಾರ್ಯನಿರ್ವಹಿಸುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

Udhayanidhi Stalin: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಇಂದು (ಜೂನ್‌ 25) ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಉದಯನಿಧಿ ಸ್ಟಾಲಿನ್ ಕಳೆದ ವರ್ಷ ನೀಡಿದ್ದ ಹೇಳಿಕೆ ಸಂಬಂಧ ಪರಮೇಶ್ ಎಂಬವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

VISTARANEWS.COM


on

Udhayanidhi Stalin
Koo

ಬೆಂಗಳೂರು: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಇಂದು (ಜೂನ್‌ 25) ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಉದಯನಿಧಿ ಸ್ಟಾಲಿನ್ ಕಳೆದ ವರ್ಷ ನೀಡಿದ್ದ ಹೇಳಿಕೆ ಸಂಬಂಧ ಪರಮೇಶ್ ಎಂಬವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕೋರ್ಟ್‌ ಸಮನ್ಸ್ ಜಾರಿ ಮಾಡಿತ್ತು. ಹೀಗಾಗಿ ಉದಯನಿಧಿ ಸ್ಟಾಲಿನ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಉದಯನಿಧಿ ಸ್ಟಾಲಿನ್ ಆಗಮನದ ಹಿನ್ನೆಲೆಯಲ್ಲಿ ಕೋರ್ಟ್‌ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೂವರು ಇನ್ಸ್‌ಪೆಕ್ಟರ್‌ ಸೇರಿದಂತೆ 70ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಏನಿದು ವಿವಾದ?

ತಮಿಳುನಾಡಿನ ಸಿಎಂ ಎಂ.ಕೆ.‌ ಸ್ಟಾಲಿನ್ ಪುತ್ರ ಹಾಗೂ ಕ್ರೀಡಾ ಸಚಿವರಾಗಿರುವ ಉದಯನಿಧಿ ಸ್ಟಾಲಿನ್‌ 2023ರ ಸೆ. 4ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.

ಉದಯನಿಧಿ ಸ್ಟಾಲಿನ್‌ ಅವರು ಈ ಹೇಳಿಕೆ ನೀಡಿದ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಬಿಜೆಪಿ ನಾಯಕರಂತೂ ಉದಯನಿಧಿ ಸ್ಟಾಲಿನ್‌ ಅವರ ಮೇಲೆ ಮುಗಿಬಿದ್ದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೇ, “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲೆಂದೇ ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟ ರಚಿಸಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಉದಯನಿಧಿ ಸ್ಟಾಲಿನ್‌, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಕಾನೂನು ಹೋರಾಟಕ್ಕೂ ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು.

ಈ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಉದಯನಿಧಿ ಸ್ಟಾಲಿನ್‌ ಹಾಗೂ ತಮಿಳುನಾಡು ಸರ್ಕಾರ ಸೇರಿ 16 ಜನರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿತ್ತು. ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‌, ಮತ್ತೊಬ್ಬ ಸಚಿವ ಎ. ರಾಜಾ ಸೇರಿ 16 ಜನರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿತ್ತು. ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರತಿಕ್ರಿಯೆ ನೀಡುವಂತೆ ತಮಿಳುನಾಡು ಸರ್ಕಾರ ಹಾಗೂ 15 ಜನರಿಗೆ ನೋಟಿಸ್‌ ಜಾರಿಗೊಳಿಸಿತ್ತು. ಎ.ರಾಜಾ ಕೂಡ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇವರ ವಿರುದ್ಧ ಚೆನ್ನೈ ಮೂಲದ ಬಿ. ಜಗನ್ನಾಥ್‌ ಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: Udhayanidhi Stalin: ಸಂಸತ್‌ಗೆ ಮುರ್ಮುರನ್ನು ಆಹ್ವಾನಿಸದಿರುವುದೇ ಸನಾತನ ಧರ್ಮ ಎಂದ ಉದಯನಿಧಿ

Continue Reading

ಪ್ರಮುಖ ಸುದ್ದಿ

Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

Suraj Revanna Case: ಸೂರಜ್‌ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತನ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಿದ್ದಾರೆ. ಮುಂದುವರಿದ ಭಾಗವಾಗಿ, ಇಂದು ಸೂರಜ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂತ್ರಸ್ತನ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವ ಸಾಧ್ಯತೆಗಳನ್ನು ಶೋಧಿಸಲಾಗುತ್ತದೆ. ಈ ಪ್ರಕರಣ ಸ್ವಲ್ಪ ಭಿನ್ನವಾಗಿದ್ದು, ಆರೋಪಿ ಪುರುಷರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಲ್ಲನೇ ಎಂಬುದನ್ನು ಪರೀಕ್ಷಿಸಲಾಗುತ್ತದೆ.

VISTARANEWS.COM


on

Suraj Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (physical abuse) ಪ್ರಕರಣಗಳಲ್ಲಿ ತಮ್ಮ ಪ್ರಜ್ವಲ್‌ ರೇವಣ್ಣಗೆ (Prajwal Revanna Case) ಮಾಡಲಾಗಿದ್ದ ಪುರುಷತ್ವ ಪರೀಕ್ಷೆಯನ್ನು (Medical Test) ಇದೀಗ ಅಣ್ಣ ಸೂರಜ್‌ ರೇವಣ್ಣಗೂ (Suraj Revanna Case) ಮಾಡಲು ತನಿಖಾ ತಂಡ ಮುಂದಾಗಿದೆ. ಬೆದರಿಕೆಯೊಡ್ಡಿ ಸಲಿಂಗಕಾಮ, ಅಸಹಜ ಲೈಂಗಿಕ ಕ್ರಿಯೆಯ ಆರೋಪ ಸೂರಜ್‌ ರೇವಣ್ಣ ಮೇಲಿದೆ.

ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ‌ ದೌರ್ಜನ್ಯ ಪ್ರಕರಣದಲ್ಲಿ, ಸೂರಜ್ ರೇವಣ್ಣಗೆ ಇಂದು ವೈದ್ಯಕೀಯ ಪರೀಕ್ಷೆ ಮಾಡಿಸುವ ಸಾಧ್ಯತೆ ಇದೆ. ಬೌರಿಂಗ್ ಆಸ್ಪತ್ರೆಯಲ್ಲಿ ಇಂದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸೂರಜ್‌ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತನ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಿದ್ದಾರೆ. ಮುಂದುವರಿದ ಭಾಗವಾಗಿ, ಇಂದು ಸೂರಜ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂತ್ರಸ್ತನ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವ ಸಾಧ್ಯತೆಗಳನ್ನು ಶೋಧಿಸಲಾಗುತ್ತದೆ.

ಈ ಪ್ರಕರಣ ಸ್ವಲ್ಪ ಭಿನ್ನವಾಗಿದ್ದು, ಆರೋಪಿ ಪುರುಷರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಲ್ಲನೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸೂರಜ್‌ ಮೇಲೆ ಬಂದಿರುವ ಆರೋಪ ಬೆದರಿಕೆ ಹಾಕಿ ಸಲಿಂಗಕಾಮ ಎಸಗಿದ್ದಾಗಿರುವುದರಿಂದ, ಆರೋಪಿಗೆ ಸಲಿಂಗಕಾಮ ಸಹಜವಾದುದೇ ಎಂದು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೀಗಾಗಿ ಇದು ಅಣ್ಣ ಪ್ರಜ್ವಲ್‌ಗೆ ನಡೆಸಿದ ಪರೀಕ್ಷೆಗಳಿಗಿಂತ ಸ್ವಲ್ಪ ಭಿನ್ನ. ಪ್ರಜ್ವಲ್‌ ಪ್ರಕರಣದಲ್ಲಿ ಸಂತ್ರಸ್ತರು ಮಹಿಳೆಯರಾಗಿದ್ದರು.

ಐಪಿಸಿ ಸೆಕ್ಷನ್ 377 ಹಾಕಿರುವ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಬಹಳ ಮುಖ್ಯವಾಗಿದೆ. ಇಲ್ಲಿ ಸಂತ್ರಸ್ತ ಹಾಗೂ ಆರೋಪಿ ಇಬ್ಬರ ವೈದ್ಯಕೀಯ ಪರೀಕ್ಷೆಯೂ ಮುಖ್ಯವಾಗಿದೆ. ಸಂತ್ರಸ್ತ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾನೆ. ಆರೋಪಿ ಸೂರಜ್ ರೇವಣ್ಣ ಸದ್ಯ ಸಿಐಡಿ ಕಸ್ಟಡಿಯಲ್ಲಿ ಇದ್ದಾರೆ.

ತಮ್ಮ ಪ್ರಜ್ವಲ್‌ ರೇವಣ್ಣಗೆ ಮೂರು ಸಲ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮೂರು ಬೇರೆ ಬೇರೆ ಪ್ರಕರಣಗಳಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, “ಪದೇ ಪದೆ ಖಾಸಗಿ ಅಂಗವನ್ನು ತೋರಿಸಲು ಮುಜುಗರವಾಗುತ್ತದೆ” ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್‌ ಅಲವತ್ತುಕೊಂಡಿದ್ದರು. ಇದೀಗ ಅಣ್ಣನೂ ಈ ಪರೀಕ್ಷೆಗೆ ಗುರಿಯಾಗಬೇಕಿದೆ. ಸೂರಜ್‌ ಎಷ್ಟು ಬಾರಿ ಪರೀಕ್ಷೆಗೊಳಗಾಗಲಿದ್ದಾನೆ ಎಂದು ನೋಡಬೇಕಿದೆ.

ನಾಪತ್ತೆಯಾದ ಸೂರಜ್‌ ಆಪ್ತನ ವಿರುದ್ಧವೂ ದೂರು ನೀಡಿರುವ ಸಂತ್ರಸ್ತ!

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ.ಸೂರಜ್‌ ರೇವಣ್ಣ (Suraj Revanna Case) ಆಪ್ತ, ನಾಪತ್ತೆಯಾಗಿರುವ ಶಿವಕುಮಾರ್‌ ವಿರುದ್ಧವೂ ಸಂತ್ರಸ್ತ ದೂರು ದಾಖಲಿಸಿದ್ದಾರೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ, ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಸೂರಜ್‌ ಆಪ್ತ ಶಿವಕುಮಾರ್ ಹೆಸರು ಸೇರ್ಪಡೆ ಮಾಡಲಾಗಿದೆ. ಶಿವಕುಮಾರ್ ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಗ್ರಾಮದವನು. ಸೂರಜ್‌ ರೇವಣ್ಣ ವಿರುದ್ಧ ಸಂತ್ರಸ್ತ ದೂರು ನೀಡಿದ ಬಳಿಕ, ಸಂತ್ರಸ್ತನ ವಿರುದ್ಧ ದೂರು ಶಿವಕುಮಾರ್ ನಾಪತ್ತೆಯಾಗಿದ್ದಾನೆ.

ಸೂರಜ್‌ಗೆ 5 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂದು ಸಂತ್ರಸ್ತನ ವಿರುದ್ಧ ಶಿವಕುಮಾರ್ ದೂರು ನೀಡಿದ್ದ. ಬಳಿಕ ಶಿವಕುಮಾರ್‌ ಹಾಗೂ ಸಂತ್ರಸ್ತ ಇಬ್ಬರೂ ಸೇರಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಇದಾದ ನಂತರ ಶಿವಕುಮಾರ್‌ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

Continue Reading

ಕ್ರೈಂ

Actor Darshan: ಸಿಗದೇ ಹೋದ ರೇಣುಕಾ ಸ್ವಾಮಿ ಮೊಬೈಲ್, ಹೊಸ ಸಿಮ್‌ ಖರೀದಿಸಿದ ಪೊಲೀಸರು

Actor Darshan: ಬೆಂಗಳೂರು ಪೊಲೀಸರು, ಹೊಸ ಆಯಾಮದಲ್ಲಿ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದೀಗ ಮೃತ ರೇಣುಕ ಸ್ವಾಮಿ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವ ಪೊಲೀಸರು, ಮೊಬೈಲ್ ಮಾಹಿತಿ ರೀ ಆಕ್ಸೆಸ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Renuka swamy Murder case actor darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕ ಸ್ವಾಮಿ ಹತ್ಯೆ (Renuka Swamy Murdr) ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ (Actor Darshan) ಸೇರಿ 17 ಆರೋಪಿಗಳಿಂದ, ಎರಡು ಮೊಬೈಲ್‌ಗಳು ಇನ್ನೂ ಸೀಜ್‌ ಆಗಬೇಕಿದೆ. ಆದರೆ ಆರೋಪಿಗಳು ನೀಡಿದ ಮಾಹಿತಿಯಂತೆ ಅವರು ಇವುಗಳನ್ನು ರಾಜಕಾಲುವೆಯಲ್ಲಿ ಎಸೆದಿದ್ದು, ಇವುಗಳಿಗಾಗಿ ಎಷ್ಟೇ ಹುಡುಕಾಡಿದರೂ ಸಿಕ್ಕಿಲ್ಲ. ರೇಣುಕಾ ಸ್ವಾಮಿ ಮೊಬೈಲ್‌ ಕೇಸಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳನ್ನು ಹೊಂದಿದ್ದು, ಇವುಗಳನ್ನು ಪಡೆಯಲು ಪೊಲೀಸರು ಮತ್ತೊಂದು ದಾರಿ ಹಿಡಿದಿದ್ದಾರೆ.

ಬೆಂಗಳೂರು ಪೊಲೀಸರು, ಹೊಸ ಆಯಾಮದಲ್ಲಿ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದೀಗ ಮೃತ ರೇಣುಕ ಸ್ವಾಮಿ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವ ಪೊಲೀಸರು, ಮೊಬೈಲ್ ಮಾಹಿತಿ ರೀ ಆಕ್ಸೆಸ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರೇಣುಕ ಸ್ವಾಮಿ ಮೊಬೈಲ್ ಫೋನ್ ಅನ್ನು ಆರೋಪಿಗಳು ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸುಮ್ಮನಹಳ್ಳಿ ಜಂಕ್ಷನ್ ಸಮೀಪವಿರುವ ರಾಜಕಾಲುವೆಗೆ ಎಸೆದಿದ್ದರು. ಹೀಗಾಗಿ ಅದರಲ್ಲಿದ್ದ ಡಾಟಾ ನಿಷ್ಕ್ರಿಯವಾಗಿತ್ತು. ಆದ್ದರಿಂದ ಕೋರ್ಟ್ ಅನುಮತಿ ಪಡೆದು ಹೊಸ ಸಿಮ್ ಕಾರ್ಡ್ ಖರೀದಿಸಿರುವ ಪೊಲೀಸರು, ರಿ-ಆಕ್ಸೆಸ್ ಮಾಡಿ ಅದರಲ್ಲಿರುವ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ವೇಳೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಮೊಬೈಲ್‌ಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ಅನ್‌ಸೀಲ್ ಮಾಡಿ, ಯಾರಿಗೆಲ್ಲಾ ಕರೆ ಮಾಡಲಾಗಿತ್ತು ಎಂದು ಪರಿಶೀಲಿಸುತ್ತಿದ್ದಾರೆ.

ಭದ್ರತಾ ದೃಷ್ಟಿಯಿಂದಾಗಿ ದರ್ಶನ್‌ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಜೈಲಿನ ಸೆಕ್ಯೂರಿಟಿ ರೂಂ. ನಂ. 3ರಲ್ಲಿ ದರ್ಶನ್ ಹಾಗೂ ಮತ್ತೊಬ್ಬ ಆರೋಪಿ ವಿನಯ್ ಸಹಖೈದಿಗಳಾಗಿ ಜೈಲುವಾಸ
ಅನುಭವಿಸುತ್ತಿದ್ದಾರೆ. ಶನಿವಾರ ರಾತ್ರಿ ದರ್ಶನ್‌ಗೆ ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬಾರ್, ಮಜ್ಜಿಗೆ ನೀಡಲಾಗಿದೆ. ದಿನದ ಮೂರು ಹೊತ್ತು ಮಾಂಸಾಹಾರ ಸೇವನೆ ಮಾಡುತ್ತಿದ್ದ ದರ್ಶನ್‌ಗೆ ಇದೀಗ ಜೈಲೂಟ ಸರಿಯಾಗಿ ಸೇರುತ್ತಿಲ್ಲ. ಹೀಗಾಗಿ ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ದರ್ಶನ್, ಜೈಲು ಸಿಬ್ಬಂದಿ ಕೊಟ್ಟ ಅನ್ನ ಬೇಡ ಎಂದಿದ್ದರು ಎನ್ನಲಾಗಿದೆ.

ಕೊಲೆ ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರನ್ನೂ ಒಂದೇ ಜೈಲಿನಲ್ಲಿ ಇರಿಸಿದರೆ ಸಾಕ್ಷಿ ನಾಶಕ್ಕೆ ಸಂಚು ರೂಪಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪ್ರತ್ಯೇಕವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲು ನಿರ್ದೇಶಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿ ನಾಲ್ಕು ಕೈದಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಸೂಚನೆ ನೀಡಿದೆ.

ಇದನ್ನೂ ಓದಿ: Renuka Swamy Murder: ರೇಣುಕಾ ಸ್ವಾಮಿ ಮನೆಗೆ ಗೃಹ ಸಚಿವ ಪರಮೇಶ್ವರ್‌, ಪ್ರತಿಪಕ್ಷ ನಾಯಕ ವಿಜಯೇಂದ್ರ ಭೇಟಿ

Continue Reading

ಮಳೆ

Karnataka Weather : ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಸೇರಿ ವಿವಿಧೆಡೆ ಮಳೆ ಅಬ್ಬರ; ಆರೆಂಜ್‌ ಅಲರ್ಟ್‌ ಘೋಷಣೆ

Karnataka Weather Forecast : ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಜೂನ್‌ 27ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Heavy Rain Alert) ಸಾಧ್ಯತೆಯಿದೆ. ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ (Rain News) ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಮಧ್ಯಮ ಮಳೆಯಾದರೆ, ಉತ್ತರ ಒಳನಾಡಿನ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಊತ್ತರ ಒಳನಾಡಿನ ಕೆಲ ಪ್ರದೇಶದಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಬೆಳಗಾವಿಯಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.

ಮಲೆನಾಡಿನ ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲಿಯಸ್‌ ಇರಲಿದೆ.

ಆರೆಂಜ್‌ ಅಲರ್ಟ್‌

ಗುಡುಗು ಸಹಿತ ಭಾರೀ ಮಳೆಯೊಂದಿಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.

ಜೂನ್‌ 27ರವರೆಗೆ ಮೀನುಗಾರರಿಗೆ ಎಚ್ಚರಿಕೆ

ಜೂನ್‌ 27 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ

ಇದನ್ನೂ ಓದಿ: Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

ಮಳೆಗಾಲಕ್ಕೂ ಟ್ರೆಂಚ್‌ ಕೋಟ್‌ (Monsoon trench coat fashion) ಫ್ಯಾಷನ್‌ ಎಂಟ್ರಿ ನೀಡಿದೆ. ಹೌದು, ಕೇವಲ ಚಳಿಗಾಲದಲ್ಲಿ ಟ್ರೆಂಡಿಯಾಗುತ್ತಿದ್ದ, ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಕಿಂಗ್‌ ಖಾನ್‌ ಮಗಳು ಹಾಗೂ ನಟಿ ಸುಹಾನಾ ಖಾನ್‌ ಟ್ರೆಂಚ್‌ ಕೋಟ್‌ ಧರಿಸಿದ್ದು, ಈ ಫ್ಯಾಷನ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದೆ. ಮಾನ್ಸೂನ್‌ನಲ್ಲೂ ಟ್ರೆಂಚ್‌ ಕೋಟ್‌ ಕ್ಲಾಸಿಯಾಗಿ ಕಾಣಿಸುತ್ತದೆ ಎಂಬುದನ್ನು ಪ್ರೂವ್‌ ಮಾಡಿದೆ.

Monsoon Trench Coat Fashion

ಟ್ರೆಂಚ್‌ಕೋಟ್‌ ವೆರೈಟಿ ವಿನ್ಯಾಸ

ಟ್ರೆಂಚ್‌ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್‌ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್‌ ಲುಕ್‌, ಫಾರ್ಮಲ್‌ ಬ್ಲೇಜರ್‌ ಸ್ಟೈಲ್‌ನಲ್ಲೂದೊರಕುತ್ತವೆ. ಮೊದಲೆಲ್ಲಾ ಹಿಲ್‌ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್‌ರೋಬ್‌ ಸೇರಿದ ನಂತರ ಸಾಮಾನ್ಯ ಹುಡುಗಿಯರ ಮನಸ್ಸನ್ನು ಗೆಲ್ಲತೊಡಗಿದವು. ಸ್ವೆಟರ್‌ ಹಾಗೂ ಜಾಕೆಟ್‌ ಧರಿಸುವಂತೆ, ಟ್ರೆಂಚ್‌ ಕೋಟ್‌ಗಳನ್ನು ಧರಿಸುವುದು ಹೆಚ್ಚಾಯಿತು ಎನ್ನುತ್ತಾರೆ ಜಿಯಾ.

ಕ್ಲಾಸಿಕ್‌ ಲುಕ್‌ ಗ್ಯಾರಂಟಿ

ಅಂದಹಾಗೆ, ವೆಸ್ಟರ್ನ್‌ ಲುಕ್‌ ನೀಡುವಲ್ಲಿಈ ಟ್ರೆಂಚ್‌ ಕೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಸೈನರ್‌ ಋತು ಹೇಳುವಂತೆ, ಇದೀಗ ಇಂಡೋ – ವೆಸ್ಟರ್ನ್ ಸ್ಟೈಲ್‌ನಲ್ಲೂ ಈ ಕೋಟ್‌ಗಳನ್ನು ಬಳಸುವುದು ಹೆಚ್ಚಾಗತೊಡಗಿದೆ. ಹಾಗಾಗಿ ಫಾರ್ಮಲ್‌ , ಎಥ್ನಿಕ್‌ ಡ್ರೆಸ್‌ ಧರಿಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಅವರು.

ಹೀಗಿರಲಿ ಟ್ರೆಂಚ್‌ ಕೋಟ್‌ ಸ್ಟೈಲಿಂಗ್‌

  • ಟ್ರೆಂಚ್‌ ಕೋಟ್‌ ಬೆಚ್ಚಗಿಡುವುದರಿಂದ ಧರಿಸುವವರು ಸಿಂಪಲ್‌ ಇನ್ನರ್‌ ಡ್ರೆಸ್‌ ಧರಿಸುವುದು ಬೆಸ್ಟ್.
  • ಉದ್ದಗಿರುವವರಿಗೆ ಯಾವುದೇ ಬಗೆಯ ಟ್ರೆಂಚ್‌ ಕೋಟ್‌ ಆದರೂ ಸೂಟ್‌ ಆಗುತ್ತವೆ.
  • ಪ್ಲಂಪಿಯಾಗಿರುವವರು ಆದಷ್ಟು ಡಿಸೈನರ್‌ ಕೋಟ್‌ ಧರಿಸುವುದು ಉತ್ತಮ.
  • ವಿಂಟೆಂಜ್‌ ಹಾಗೂ ರಾಯಲ್‌ ಕಲರ್‌ಗಳ ಟ್ರೆಂಚ್‌ ಕೋಟ್‌ಗಳು ರಾಯಲ್‌ ಲುಕ್‌ ನೀಡುತ್ತವೆ.
  • ಪ್ರಿಂಟೆಡ್‌ ಕೋಟ್‌ಗಳು ಟ್ರೆಂಡ್‌ನಲ್ಲಿಲ್ಲ.
  • ಫಿಟ್ಟಿಂಗ್‌ ಇದ್ದರೇ ಮಾತ್ರ ಚೆನ್ನಾಗಿ ಕಾಣಿಸುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
milk price hike
ಪ್ರಮುಖ ಸುದ್ದಿ18 mins ago

Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

Viral News
ಕ್ರೈಂ27 mins ago

ಜಮೀನಿನಲ್ಲಿ ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೇಲೆ ಹಲ್ಲೆ; ಖಾಸಗಿ ಅಂಗಕ್ಕೆ ಖಾರದ ಪುಡಿ ಎರಚಿ ವಿಕೃತಿ ಮೆರೆದ ಸಂಬಂಧಿಕರು

AFG vs BAN
ಕ್ರೀಡೆ28 mins ago

AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್​ ಆಟಗಾರರಿಗೆ ಸಲಹೆ ನೀಡಿದ ಕೋಚ್​; ವಿಡಿಯೊ ವೈರಲ್​

cm siddaramaiah DK Shivakumar power fight
ಪ್ರಮುಖ ಸುದ್ದಿ56 mins ago

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

Viral Video
Latest58 mins ago

Viral Video: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

LeT Associate killed
ದೇಶ1 hour ago

LeT Associate killed: ಪ್ರಚೋದನಕಾರಿ ಧರ್ಮ ಪ್ರಚಾರಕ ಖ್ವಾರಿ ಇದ್ರಿಸ್‌ ಹತ್ಯೆ; ವಿಷಪೂರಿತ ಸೂಜಿಯಿಂದ ದಾಳಿ!

Udhayanidhi Stalin
ಕರ್ನಾಟಕ2 hours ago

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

AFG vs BAN
ಕ್ರೀಡೆ2 hours ago

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

Mamata Banerjee
ದೇಶ2 hours ago

Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

physical abuse mandya
ಕ್ರೈಂ2 hours ago

Physical Abuse: ಅಪ್ರಾಪ್ತ ಮಗಳನ್ನು ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ18 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌