ಕ್ರೈಂ
Murder Case : ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕತ್ತು ಕತ್ತರಿಸಿದ!
Murder Case : ಬೆಂಗಳೂರಲ್ಲಿ ಯುವಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿ ಮಾರು ದಿನ ಪೊಲೀಸರಿಗೆ ಶರಣಾಗಿದ್ದಾರೆ.
ಬೆಂಗಳೂರು: ಕೆಟ್ಟದಾಗಿ ಮಾತಾಡಿದ್ದಕ್ಕೆ ವ್ಯಕ್ತಿಯೊಬ್ಬ ಬೆಂಗಳೂರಲ್ಲಿ (Murder Case ) ಕೊಲೆಯಾಗಿ ಹೋಗಿದ್ದಾನೆ. ಫಾರುಕ್ ಮೃತಪಟ್ಟವನು. ಮುಬಾರಕ್, ಸುಹೇಲ್, ಆಲಿ ಅಕ್ರಮ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಮತ್ತು ಕೊಲೆಯಾದವರು ಎಲ್ಲರೂ ಪರಿಚಿತರೇ ಆಗಿದ್ದಾರೆ. ಕೊಲೆಯಾದ ಫಾರುಕ್ ಸುಖಾಸುಮ್ಮನೆ ಸೋಹೆಲ್ ಎಂಬಾತನಿಗೆ ಬೆದರಿಕೆ ಹಾಕುತ್ತಿದ್ದ. ಸೋಹೆಲ್ ಗಾಂಜಾ ಮಾರಾಟ ಮಾಡದೆ ಇದ್ದರೂ, ಫಾರೂಕ್ ಗಾಂಜಾ ಮಾರಾಟ ಮಾಡುತ್ತಾನೆ ಎಂದು ಪೊಲೀಸರಿಗೆ ಹೇಳುತ್ತಿನಿ ಎಂದು ಹೆದರಿಸುತ್ತಿದ್ದ. ಜತೆಗೆ ಏರಿಯಾದಲ್ಲಿ ಸೋಹೆಲ್ ಕೆಟ್ಟವನು ಎಂಬಂತೆ ಬಿಂಬಿಸುತ್ತಿದ್ದ.
ಇದನ್ನೂ ಓದಿ: Road Romeo : ಹುಡುಗಿಯರಿಗೆ ಕರೆ ಮಾಡಿ ಕಾಡುತ್ತಿದ್ದ ರೋಮಿಯೊಗೆ ರೋಡಲ್ಲೇ ಗೂಸಾ; ವಿಡಿಯೊ ಕಾಲ್ ಮಾಡ್ಲಾ ಅಂತಿದ್ದ!
ಈ ವಿಚಾರವಾಗಿ ಸೋಹೆಲ್ ಕೋಪಗೊಂಡಿದ್ದ. ಹೀಗಾಗಿ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಈ ಫಾರುಕ್‌ನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಕಳೆದ 17 ರಂದು ಫಾರುಕ್‌ನನ್ನು ಆಟೋವೊಂದರಲ್ಲಿ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಬಳಿಕ ಚಾಕುವಿನಿಂದ ಫಾರುಕ್‌ನ ಕತ್ತು ಕತ್ತರಿಸಿದ್ದಾರೆ.
ಹತ್ಯೆ ಮಾಡಿ ಎಸ್ಕೇಪ್ ಆದ ಮೂವರು ಮಾರನೇ ದಿನ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಸದ್ಯ ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಫಾರುಕ್‌ನಿಂದ ಸಾಲಪಡೆದಿದ್ದ ಸುಹೇಲ್
ಫಾರುಕ್ ಬಳಿ 20 ಸಾವಿರ ರೂ. ಸಾಲವನ್ನು ಸುಹೇಲ್ ಪಡೆದುಕೊಂಡಿದ್ದ. ಸಾಲ ವಾಪಸ್ ಕೇಳುವ ನೆಪದಲ್ಲಿ ಫಾರುಕ್ ಹಾಗೂ ಆತನ ಸ್ನೇಹಿತ ಸದ್ದಾಂ ಸುಹೇಲ್‌ನ ಮೊಬೈಲ್ ಅನ್ನು ಕಿತ್ತುಕೊಂಡಿದ್ದ. ಆ ಮೊಬೈಲ್‌ನಲ್ಲಿ ಸುಹೇಲ್ ತಾಯಿಯ ಫೋಟೋ ಇದ್ದರಿಂದ ಮೊಬೈಲ್ ಕೊಡುವಂತೆ ಸಾಕಷ್ಟು ಬಾರಿ ಕೇಳಿದ್ದ. ಆದರೆ ಫಾರುಕ್ ಮೊಬೈಲ್ ಕೊಡದೇ ಸತಾಯಿಸಿದ್ದ.
ಈ ನಡುವೆ 20 ಸಾವಿರ ರೂ. ಸಾಲ ವಾಪಸ್ ಕೊಡು ಇಲ್ಲವಾದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದಿದ್ದ. ಫಾರುಕ್‌ಗೆ ಬೆದರಿಸಿ ವಾರ್ನ್ ಮಾಡಲು ಈ ಮೂವರು ಕರೆಸಿಕೊಂಡಿದ್ದರು. ಹೆದರಿಸಲು ಫಾರುಕ್ ಕೈಗೆ ಚಾಕು ಇರಿದಿದ್ದರು. ಆದರೆ ಆತ ತಿರುಗಿ ಬಿದ್ದಾಗ ಮಿಸ್ ಆಗಿ ಕುತ್ತಿಗೆಗೆ ತಾಗಿತ್ತು. ಇವನು ಬದುಕಿದರೂ ಕೂಡ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸುತ್ತಾರೆ. ಅದರ ಬದಲು ಕೊಂದೇ ಬಿಡೋಣ ಎಂದು ನಿರ್ಧರಿಸಿ ಹತ್ಯೆ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
Heart Attack: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತವಾಗಿ ಯವಕ ಮೃತಪಟ್ಟಿದ್ದಾನೆ.
ವಿಜಯನಗರ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತದಿಂದ (Heart Attack) ಯುವಕ ಮೃತಪಟ್ಟಿರುವ ಘಟನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲನಿಯಲ್ಲಿ ಶುಕ್ರವಾರ ನಡೆದಿದೆ. ಮೆರವಣಿಗೆ ವೇಳೆ ಡಿಜೆ ಸದ್ದಿಗೆ ನೂರಾರು ಯುವಕರು ಕುಣಿಯುತ್ತಿದ್ದರು. ಈ ವೇಳೆ ಯುವಕನಿಗೆ ಹೃದಯಾಘಾತವಾಗಿದೆ.
ಜಮೀರ್ ಪಿಂಜಾರ (22) ಮೃತ ಯುವಕ. ಮೆರವಣಿಗೆಯಲ್ಲಿ ಏಕಾಏಕಿ ಯುವಕ ಕುಸಿದು ಬಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಹೃದಯಾಘಾತದಿಂದ ಯುವಕ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅತಿಯಾಗಿ ಮದ್ಯ ಸೇವನೆ ಮಾಡಿದ್ದರಿಂದ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಖಚಿತ ಮಾಹಿತಿ ಲಭ್ಯವಾಗಲಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಇನ್ನೂ ಪ್ರಕರಣ ದಾಖಲಾಗಿಲ್ಲ.
ಪ್ರಿಯಕರನ ಜತೆ ವಿಹಾರಕ್ಕೆ ಬಂದಿದ್ದ ಯುವತಿ ಆತ್ಮಹತ್ಯೆ
ಕೋಲಾರ: ಪ್ರಿಯಕರನ ಜತೆ ವಿಹಾರಕ್ಕೆ ಬಂದಿದ್ದ ಯುವತಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಆಂಧ್ರ ಮೂಲದ ಹರ್ಷಿತ (21) ಮೃತ ಯುವತಿ.
ಇದನ್ನೂ ಓದಿ | Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
ಯುವತಿ ಮೃತ ಪಟ್ಟ ಹಿನ್ನೆಲೆ ಪ್ರಿಯಕರ ಹೆದ್ದಾರಿಯಲ್ಲಿ ಬಂದು ಚೀರಾಡುತ್ತಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದಾರೆ. ಇಬ್ಬರು ಸುಣ್ಣಕಲ್ ಅರಣ್ಯ ಪ್ರದೇಶಕ್ಕೆ ವಿಹಾರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತಳ ಪ್ರಿಯಕರ ಹೇಮಂತ್ ಎಂಬಾತನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಯುವತಿ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ಕ್ರೈಂ
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
Assault Case : ಖಾನಾಪುರದ ತೋಪಿನಕಟ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಶುರುವಾದ ಗಲಾಟೆಯು ಠಾಣೆ ಮೆಟ್ಟಿಲೇರಿದೆ.
ಬೆಳಗಾವಿ: ಇಲ್ಲಿನ ಖಾನಾಪುರ ಪಟ್ಟಣದ ತೋಪಿನಕಟ್ಟಿ ಎಂಬಲ್ಲಿ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಕೈ ಕೈ ಮಿಲಾಯಿಸಿದ್ದಾರೆ. ನಡೆದುಕೊಂಡು ಹೋಗುವಾಗ ಕೈ ತಾಗಿದಕ್ಕೆ ಯುವಕರ ಮಧ್ಯೆ ಗಲಾಟೆ (Assault Case) ನಡೆದಿದೆ ಎನ್ನಲಾಗಿದೆ. ಗಲಾಟೆ ಮಧ್ಯೆ ಬಂದ ಸ್ಥಳೀಯರು ಯುವಕರನ್ನು ಮನವೊಲಿಸಿ ಕಳುಹಿಸಿದ್ದಾರೆ. ಆದರೆ ಸಂಜೆ ಆಗುತ್ತಿದ್ದಂತೆ ಒಂದು ಗುಂಪಿನ ಯುವಕ ಹೋಗಿ ಮತ್ತೊಂದು ಗುಂಪಿನವರೊಂದಿಗೆ ಗಲಾಟೆ ಮಾಡಿದ್ದಾನೆ.
ಶಾಂತಿ ಸಭೆ ಕರೆದ ಶಾಸಕರು
ಇನ್ನು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ವಿಠ್ಠಲ ಹಲಗೇಕರ ಶಾಂತಿ ಸಭೆಗೆ ಕರೆದಿದ್ದರು. ಆದರೆ ಸಭೆಯ ಆರಂಭಕ್ಕೂ ಮುನ್ನವೇ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದರು. ಇದರಿಂದ ಮತ್ತೆ ಪರಿಸ್ಥಿತಿ ಹದಗೆಟ್ಟಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಖಾನಾಪುರ ಪೊಲೀಸರು ಹರಸಾಹಸ ಪಡೆಬೇಕಾಯಿತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಎರಡು ಪೊಲೀಸ್ ಡಿಆರ್‌ವಾಹನಗಳ ನಿಯೋಜನೆ ಮಾಡಲಾಗಿದ್ದು, ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜೆಡಿ ಶಶಿಧರ ಬಬಲಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Murder Case : ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಧೂರ್ತ ಪತಿ
ಹಲ್ಲೆ ಯತ್ನ ಪ್ರಕರಣ ದಾಖಲು
ಖಾನಾಪುರದ ತೋಪಿನಕಟ್ಟಿಯಲ್ಲಿ ಗಲಾಟೆ ವಿಚಾರವಾಗಿ ಬೆಳಗಾವಿ ಎಸ್‌ಪಿ ಎಂ ಡಾ. ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ. ನಾಲ್ವರ ನಡುವೆ ರಸ್ತೆ ಕಾರಣಕ್ಕೆ ವಾಗ್ವಾದ ಆಗಿತ್ತು. ಈ ಸಂಬಂಧ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಗುರುವಾರ ಸಂಜೆ ಒಂದು ಕೋಮಿನವರು ಮತ್ತೊಂದು ಕೋಮಿನವರ ಜಾಗಕ್ಕೆ ಹೋಗಿದ್ದರು. ಹೀಗಾಗಿ ಅಲ್ಲಿ ದ್ವೇಷಮಯ ವಾತಾವಾರಣ ನಿರ್ಮಾಣ ಆಗಿತ್ತು.
ಬಳಿಕ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಬಂದಿತ್ತು. ಯಾರಿಗಾದರೂ ಹಲ್ಲೆಯಾಗಿದ್ದರೆ ದೂರು ನೀಡಿ ಎಂದು ಪೊಲೀಸರು ಹೇಳಿದ್ದರು. ಆದರೆ ಬೆಳಗ್ಗೆ ಬಂದು ದೂರು ನೀಡುವುದಾಗಿ ಹೇಳಿದ್ದರು. ಹಿಂದಿನ ದಿನದ ವಿಡಿಯೋ ಹರಿಬಿಟ್ಟಿದ್ದರಿಂದ ಬೇರೆ ಬೇರೆ ಊರಿನ ಜನರು ತೋಪಿನಕಟ್ಟಿಗೆ ಬಂದಿದ್ದರು. ಹೊರಗಡೆ ಊರಿನ ಜನ ಬಂದ ತಕ್ಷಣ ಕಿಡಿಗೇಡಿಗಳು ಮೂರು ಕಲ್ಲುಗಳನ್ನು ಎಸೆದಿದ್ದರು. ತಕ್ಷಣ ಪೊಲೀಸರು ಧಾವಿಸಿ ಲಾಠಿ ಚಾರ್ಜ್ ಮಾಡಲು ತಯಾರಿ ಮಾಡಿಕೊಂಡಿದ್ದರು.
ಅಲ್ಲಿಂದ ಲಾಠಿ ಚಾರ್ಜ್ ಮಾಡುವ ಮೊದಲೇ ಎಲ್ಲರೂ ಓಡಿ ಹೋಗಿದ್ದರು. ನಂತರ ಕೆಲವರನ್ನು ವಿಚಾರಣೆ ನಡೆಸಿದಾಗ ದಲಿತರ ಮೇಲೆ ಹಲ್ಲೆ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಹಲ್ಲೆ ಯತ್ನ ಪ್ರಕರಣವನ್ನು ನಾವು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿದ್ದೇವೆ. ಗ್ರಾಮದಲ್ಲಿ ಶಾಂತ ರೀತಿಯ ವಾತಾವರಣ ಇದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗ ಈ ಲಿಂಕ್ ಕ್ಲಿಕ್ ಮಾಡಿ
ಉತ್ತರ ಕನ್ನಡ
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ
ಅನ್ಯಕೋಮಿನ ಯುವಕ ಗುಂಪೊಂದು ಶಿವನ ದೇವಾಲಯದ ಅವಶೇಷಕ್ಕೆ ಕಲ್ಲೆಸೆದು ಹಾನಿ ಮಾಡಿರುವ ಘಟನೆ ನಡೆದಿದೆ.
ಕಾರವಾರ: ಇಲ್ಲಿನ ಜೋಯಿಡಾ ರಾಮನಗರದ ನಾಗೋಡಾ ಕ್ರಾಸ್ ಬಳಿ ಜಲಾಶಯ ವ್ಯಾಪ್ತಿಯಲ್ಲಿದ್ದ ಶಿವ ದೇವಾಲಯದ ಅವಶೇಷಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.
ಅನ್ಯಕೋಮಿನ ಯುವಕರು ಈ ಕೃತ್ಯ ಎಸಗಿದ್ದು, ಹಿಂದು ಸಂಘಟನೆಗಳು ಕಿಡಿಕಾರಿದ್ದಾರೆ. ಸೂಪಾ ಜಲಾಶಯದಲ್ಲಿ ಶಿವನ ದೇವಾಲಯವು ಮುಳುಗಡೆಯಾಗಿತ್ತು. ಸದ್ಯ ಮಳೆ ಇಲ್ಲದೆ ನೀರು ಕಡಿಮೆಯಾಗುವ ವೇಳೆ ದೇವಾಲಯ ಕಾಣಿಸಿಕೊಳ್ಳುತ್ತದೆ. ಹೀಗೆ ಕಂಡ ದೇವಾಲಯದ ಕಲ್ಲುಗಳಿಗೆ ಹಾನಿ ಮಾಡಿದ್ದಾರೆ.
ಸೆ.18 ರಂದು ಅನ್ಯಕೋಮಿನ ಯುವಕರ ಗುಂಪು ಶಿವನ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಹೊಡೆದು ಹಾಕಿದ್ದಾರೆ. ದಾಂಡೇಲಿ ಮೂಲದ 6 ಮಂದಿ ಈ ದುಷ್ಕೃತ್ಯ ವೆಸಗಿದ್ದಾರೆ.
ಅವಶೇಷಗಳಿಗೆ ಹಾನಿ ಮಾಡುವುದನ್ನು ಸೆಲ್ಫಿ ವಿಡಿಯೋ ಮಾಡಿ ಹಾಕಿಕೊಂಡು ಹುಸೈನ್ ಶೇಖ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾನೆ. ಹಿಂದೂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವವರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಹಿಂದು ಸಂಘಟನೆಯ ಕಾರ್ಯಕರ್ತರು ರಾಮನಗರ ಪೊಲೀಸರಿಗೆ ಮನವಿ ಪತ್ರವನ್ನು ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Electric shock : ಬೆಕ್ಕು ರಕ್ಷಿಸಲು ಮರವೇರಿದ ಯುವಕನಿಗೆ ಕರೆಂಟ್ ಶಾಕ್!
Electric shock : ಮರದಲ್ಲಿ ಸಿಲುಕಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಕರೆಂಟ್ ಹೊಡೆದು ಯುವಕನೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ: ಇಲ್ಲಿನ ಹಾಲಿನ ಡೈರಿ ಬಳಿ ಕರೆಂಟ್ ಶಾಕ್‌ಗೆ (Electric shock) ಯುವಕನೊರ್ವ ಮೃತಪಟ್ಟಿದ್ದಾನೆ. ರೋಷನ್ (25) ಮೃತ ದುರ್ದೈವಿ.
ಡೈರಿ ಮುಂಭಾಗವೇ ಕಾರ್ ಗ್ಯಾರೇಜ್‌ನಲ್ಲಿ ರೋಷನ್ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವಾಗ ಮರದಲ್ಲಿ ಬೆಕ್ಕೊಂದು ಸಿಲುಕಿ ನರಳಾಡುತಿತ್ತು. ಬೆಕ್ಕಿನ ಚಿರಾಟ ಕೇಳಿದ ರೋಷನ್‌ಗೆ ಕರುಳು ಚುರುಕ್ ಎಂದಿತ್ತು.
ಇದನ್ನೂ ಓದಿ: ಪೊಲೀಸ್‌ರಿಂದ ತಪ್ಪಿಸಿಕೊಳ್ಳಲು ಹೋಗಿ ಕೈ-ಕಾಲು ಮುರಿದುಕೊಂಡ ಬಿಜೆಪಿ ಕಾರ್ಯಕರ್ತ!
ಬೆಕ್ಕನ್ನು ಹೇಗಾದರೂ ಮಾಡಿ ರಕ್ಷಿಸಬೇಕು ಎಂದುಕೊಂಡಿದ್ದ. ಕ್ಷಣಕಾಲವು ಯೋಚಿಸದೇ ತನ್ನ ಪ್ರಾಣವನ್ನು ಲೆಕ್ಕಿಸದೆ ಮರವೇರಿದ್ದ. ಆದರೆ ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್ ಲೈನ್ ಯಮಪಾಶದಂತೆ ಕಾದಿತ್ತು. ಮರದ ರಂಬೆ- ಕೊಂಬೆಗಳನ್ನು ಹಿಡಿದು ಇನ್ನೇನು ಬೆಕ್ಕು ರಕ್ಷಿಸಿದೆ ಎಂದುಕೊಂಡ ರೋಷನ್‌ಗೆ ವಿದ್ಯುತ್ ಪ್ರವಹಿಸಿದೆ.
ಬೆಕ್ಕಿನ ಜೀವ ಉಳಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಒಮ್ಮೆಲೆ ಪ್ರವಹಿಸಿದ ವಿದ್ಯುತ್‌ಗೆ ರೋಷನ್ ಮರದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದಲ್ಲೇ ನೇತಾಡುತ್ತಿದ್ದ ಮೃತದೇಹವನ್ನು ಕೆಳಗಿಸಿ, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಸ್ಕಾಂ ಕಚೇರಿಯಿಂದ ಕಾಲ್ಕಿತ್ತಿರುವ ಸಿಬ್ಬಂದಿ
ಬೆಸ್ಕಾಂ ಕಚೇರಿ ಪಕ್ಕದಲ್ಲೆ ವಿದ್ಯುತ್ ಅವಘಡ ನಡೆದ ಕಾರಣಕ್ಕೆ ಬೆಸ್ಕಾಂ ಸಿಬ್ಬಂದಿ ಹಾಗೂ ಎಇಇ ಕಾಲ್ಕಿತ್ತಿದ್ದಾರೆ. ಮರಗಳ ಕೊಂಬೆಗಳ ನಡುವೆ ವಿದ್ಯುತ್ ತಂತಿ ಹಾದು ಹೋಗಿರುವುದು ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಿದ್ಯುತ್ ತಂತಿ ಕಾಣದೆ ಯುವಕ ಬೆಕ್ಕನ್ನು ರಕ್ಷಿಸಲು ಮುಂದಾಗಿದ್ದು, ಈ ವೇಳೆ ತಂತಿ ತಗುಲಿ ಮೃತಪಟ್ಟಿದ್ದಾನೆ.
ಈ ಹಿಂದೆ ಸಾರ್ವಜನಿಕರು ಹಲವು ಬಾರಿ ತಂತಿ ಬಳಿಯಿರುವ ಮರದ ಕೊಂಬೆ ತೆರವು ಮಾಡಲು ಮನವಿ ಮಾಡಿದ್ದರು. ಆದರೆ ಮನವಿಗೆ ಕ್ಯಾರೆ ಎಂದಿರಲಿಲ್ಲ. ಮರದ ಕೊಂಬೆ ಜತೆ ಹಳೆಯ ವಿದ್ಯುತ್ ಕಂಬದ ತೆರವಿಗೂ ಕೋರಿದ್ದರು. ಈ ಘಟನೆ ಬೆನ್ನಲ್ಲೇ ಭಯಬೀತರಾಗಿ ಬೆಸ್ಕಾಂ ಕಚೇರಿಯಿಂದ ಎಲ್ಲಾ ಸಿಬ್ಬಂದಿ ಕಾಲ್ಕಿತ್ತಿದ್ದಾರೆ. ಸ್ಥಳದಲ್ಲಿ ಮೀಸಲು ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ17 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ9 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ14 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಗ್ಯಾಜೆಟ್ಸ್11 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ10 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ10 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಉತ್ತರ ಕನ್ನಡ11 hours ago
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ
-
ಆರೋಗ್ಯ20 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!