Namma Metro : ಕೆಟ್ಟು ನಿಂತ ನಮ್ಮ ಮೆಟ್ರೋ! ಈ ಮಾರ್ಗದಲ್ಲಿ ಸೇವೆ ಸ್ಥಗಿತ - Vistara News

ಕರ್ನಾಟಕ

Namma Metro : ಕೆಟ್ಟು ನಿಂತ ನಮ್ಮ ಮೆಟ್ರೋ! ಈ ಮಾರ್ಗದಲ್ಲಿ ಸೇವೆ ಸ್ಥಗಿತ

Namma Metro: ಪೀಣ್ಯ ಮೆಟ್ರೋ ನಿಲ್ದಾಣದಲ್ಲಿ (Peenya Metro station) ರೈಲು ಕೆಟ್ಟು ನಿಂತಿದ್ದು, ಒಂದು ಗಂಟೆಗೂ ಹೆಚ್ಚು ಸಮಯ ಮೆಟ್ರೋ ಸೇವೆಯು ಸ್ಥಗಿತಗೊಂಡಿದೆ.

VISTARANEWS.COM


on

Service on Namma Metro Green Line suspended
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಳೆದ ಒಂದು ಗಂಟೆಯಿಂದ ಹಸಿರು ಮಾರ್ಗದಲ್ಲಿ (Green Line) ಮೆಟ್ರೋ ಸೇವೆಯಲ್ಲಿ (Namma Metro) ವ್ಯತ್ಯಯವಾಗಿದೆ. ತಾಂತ್ರಿಕ ದೋಷದಿಂದ ಪೀಣ್ಯ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ರೈಲು ಕೆಟ್ಟು ನಿಂತಿದೆ. ಹೀಗಾಗಿ ಪೀಣ್ಯದಿಂದ ನಾಗಸಂದ್ರಕ್ಕೆ ನಮ್ಮ ಮೆಟ್ರೋ ಸ್ಥಗಿತಗೊಂಡಿದೆ.

ಮೆಟ್ರೋ ಸ್ಥಗಿತದಿಂದಾಗಿ ಪ್ರಯಾಣಿಕರು ಪರದಾಟವನ್ನು ಅನುಭವಿಸಿದರು. ಸದ್ಯ ಯಶವಂತಪುರ – ಸಿಲ್ಕ್ ಇನ್ಸ್ಟಿಟ್ಯೂಟ್‌ವರಗೆ ಮಾತ್ರ ಮೆಟ್ರೋ ಸಂಚಾರಿಸುತ್ತಿದೆ.ಇನ್ನೂ ಎರಡು ಗಂಟೆಯೊಳಗೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ನಾಗಸಂದ್ರದಿಂದ ಯಶವಂತಪುರ ಹಾಗೂ ಯಶವಂತಪುರದಿಂದ ನಾಗಸಂದ್ರದ ಎರಡು ಕಡೆಯಿಂದಲೂ ಮೆಟ್ರೋ ರೈಲು ಸಂಚಾರವಿಲ್ಲ. ಹೀಗಾಗಿ ಮೆಟ್ರೋ ರೈಲಿಗಾಗಿ ಕಾದು ಪ್ರಯಾಣಿಕರು ಸಂಚಾರವಿಲ್ಲದೆ ವಾಪಸ್‌ ಆಗುತ್ತಿದ್ದಾರೆ. ಬೆಳಗ್ಗೆ 10:18ಕ್ಕೆ ರೈಲು ಹಳಿಯಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ಗಂಭೀರ ಸಮಸ್ಯೆ ಏನಿಲ್ಲ ಶೀಘ್ರವೇ ಸೇವೆ ಆರಂಭಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Nandini Milk: ‌ಸದ್ಯದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ ಶಾಕ್ ಖಚಿತ

ಮೆಟ್ರೋಗೆ ಹರಾಜಲ್ಲಿ ಸಿಕ್ತು 7 ಲಕ್ಷ ರೂ.; ಇವು ಪ್ರಯಾಣಿಕರ ವಸ್ತುಗಳು!

ಬೆಂಗಳೂರು: ಹಿಂದಿನ ಐದು ವರ್ಷಗಳಿಂದ ಪ್ರಯಾಣಿಕರು ಬಿಟ್ಟು ಹೋದ ವಸ್ತುಗಳನ್ನು ಮರಳಿ ಪಡೆಯದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಹರಾಜು (Namma Metro) ಹಾಕಿದೆ. ಈ ಮೂಲಕ ಲಕ್ಷಾಂತರ ರೂ. ಸಂಗ್ರಹಿಸಿದೆ. ನಮ್ಮ ಮೆಟ್ರೋ ಪ್ರಯಾಣಿಕರು ನಿಲ್ದಾಣ ಹಾಗೂ ರೈಲಿನಲ್ಲಿ ಬಿಟ್ಟು ಹೋದ ವಸ್ತುಗಳನ್ನು ಹರಾಜು (Auction Process) ಹಾಕಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 7.4 ರೂಪಾಯಿ ಗಳಿಸಿದೆ.

ಮೆಟ್ರೋ ಪ್ರಯಾಣಿಕರು ಬಿಟ್ಟು ಹೋದ ಸುಮಾರು 6,354 ವಸ್ತುಗಳನ್ನು ಮರಳಿ ಪಡೆಯದ ಹಿನ್ನೆಲೆ ಹರಾಜು ಮಾಡಲಾಗಿದೆ. ನೀರಿನ ಬಾಟಲಿ, ಹೆಲ್ಮೆಟ್‌ಗಳು, ಊಟದ ಬಾಕ್ಸ್‌ಗಳು, ಬ್ಯಾಗ್, ಛತ್ರಿಯಂತಹ ಇನ್ನಿತರ ವಸ್ತುಗಳನ್ನು ಹರಾಜು ಮಾಡಲಾಗಿದೆ ಎನ್ನಲಾಗಿದೆ. ನೇರಳೆ ಮಾರ್ಗದಲ್ಲಿನ ಒಟ್ಟು 1,402 ವಸ್ತುಗಳು ಮತ್ತು ಹಸಿರು ಮಾರ್ಗದಲ್ಲಿನ 4,952 ವಸ್ತುಗಳನ್ನು ಹರಾಜು ಮಾಡಲಾಗಿದೆ ಎಂದು ನಿಗಮ ತಿಳಿಸಿದೆ.

ಗ್ಯಾಜೆಟ್‌ಗಳನ್ನು ಕಳೆದುಕೊಂಡ ಪ್ರಯಾಣಿಕರು!

ಕೆಲ ಪ್ರಯಾಣಿಕರು ತಮ್ಮ ಬಳಿಯಿದ್ದ ಗ್ಯಾಜೆಟ್‌ಗಳನ್ನು ಬಿಟ್ಟು ಹೋಗಿದ್ದಾರೆ. ಕೆಲವರು ಕಳೆದುಕೊಂಡು ಇರಬಹುದು ಅಥವಾ ಮರೆತು ಬಿಟ್ಟು ಹೋಗಿರಬಹುದು. ಹೀಗೆ ಪತ್ತೆಯಾದ ಗ್ಯಾಜೆಟ್‌ಗಳನ್ನು ನಿಲ್ದಾಣದ ಸಿಬ್ಬಂದಿಗೆ ನೀಡಲಾಗುತ್ತದೆ. ನಿಲ್ದಾಣದ ಸಿಬ್ಬಂದಿಯನ್ನು ಸಂಪರ್ಕಿಸಿದರೆ ಅದು ಅವರದ್ದೇ ಎಂದು ಪರಿಶೀಲಿಸಿ ಖಚಿತವಾದರೆ ಅವುಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಲಾಗುತ್ತದೆ. ಇನ್ನು ಸುರಕ್ಷತೆ ದೃಷ್ಟಿಯಿಂದ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಗ್ಯಾಜೆಟ್‌ಗಳನ್ನು ಹರಾಜು ಮಾಡಿಲ್ಲ. ಬದಲಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಿನ್ನ-ಬೆಳ್ಳಿಯನ್ನು ಕೇಳಲು ಬರದ ಪ್ರಯಾಣಿಕರು

ಛತ್ರಿ, ಬ್ಯಾಗ್, ಊಟದ ಬಾಕ್ಸ್, ಬಾಟಲಿಗಳಂತಹ ವಸ್ತುಗಳನ್ನು ಸಂಗ್ರಹಿಲು ಆಸಕ್ತಿ ತೋರುವುದಿಲ್ಲ. ಸದ್ಯ ಇಂತಹ ವಸ್ತುಗಳನ್ನು ಬಿಎಂಆರ್‌ಸಿಎಲ್ ಪ್ರತಿ ಆರು ತಿಂಗಳಿಗೊಮ್ಮೆ ಹರಾಜು ಹಾಕುತ್ತದೆ. ಇನ್ನೂ ಕೆಲವೊಮ್ಮೆ ಪ್ರಯಾಣಿಕರು ಬೆಳ್ಳಿ ಮತ್ತು ಚಿನ್ನದ ವಸ್ತುಗಳನ್ನು ಸಹ ಕೇಳಲು ವಾಪಾಸ್ ಬರದ ನಿದರ್ಶನಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಈ ವಸ್ತುಗಳನ್ನು ಹರಾಜಿಗೂ ಮೊದಲು ಬಿಎಂಆರ್‌ಸಿಎಲ್‌ ಹರಾಜಿನ ವಸ್ತುಗಳ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ವಸ್ತು ಕಳೆದುಕೊಂಡವರು ಅಧಿಕಾರಿಗಳನ್ನು ಸಂಪರ್ಕಿಸುವ ಅವಕಾಶವಿದೆ. ಒಂದು ವೇಳೆ ಯಾವುದೇ ಕರೆಗಳು ಬರದೇ ಇದ್ದಾಗ ಹರಾಜು ಮಾಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Shira News: ಕನ್ನಡ ಜ್ಯೋತಿ ರಥಯಾತ್ರೆಗೆ ಶಿರಾದಲ್ಲಿ ಅದ್ಧೂರಿ ಸ್ವಾಗತ

Shira News: ಶಿರಾ ನಗರಕ್ಕೆ ಆಗಮಿಸಿದ ’ಕರ್ನಾಟಕ ಸಂಭ್ರಮ-50’ ರ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ಸಂಜೆ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ, ತಾಲೂಕು ಆಡಳಿತ, ನಗರಸಭೆ, ತಾ.ಪಂ. ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

VISTARANEWS.COM


on

Welcome to the Kannada Jyoti RathaYatra at Shira
Koo

ಶಿರಾ: ಶಿರಾ ನಗರಕ್ಕೆ ಆಗಮಿಸಿದ ’ಕರ್ನಾಟಕ ಸಂಭ್ರಮ-50’ ರ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ಸಂಜೆ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ, ತಾಲೂಕು ಆಡಳಿತ, ನಗರಸಭೆ, ತಾ.ಪಂ. ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ಅದ್ಧೂರಿಯಾಗಿ (Shira News) ಬರಮಾಡಿಕೊಳ್ಳಲಾಯಿತು.

ಈ ವೇಳೆ ಶಾಸಕ ಟಿ.ಬಿ. ಜಯಚಂದ್ರ, ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಈ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಕನ್ನಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಇದನ್ನೂ ಓದಿ: Kannada New Movie: ಗಣೇಶ್ ಅಭಿನಯದ ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ʼದ್ವಾಪರ ದಾಟುತʼ ಹಾಡು ರಿಲೀಸ್‌!

ನಂತರ ನಗರದ ಪ್ರಮುಖ ಬೀದಿಗಳಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯು ಸಂಚರಿಸಿತು. ನೂರಾರು ವಿದ್ಯಾರ್ಥಿಗಳು ಹಾಗೂ ವಾದ್ಯ ಮೇಳಗಳೊಂದಿಗೆ ಕಲಾವಿದರು ಹೆಜ್ಜೆ ಹಾಕಿ, ಮೆರವಣಿಗೆಯನ್ನು ಮೆರಗುಗೊಳಿಸಿದರು. ನಾಡಿನ ಸಂಸ್ಕೃತಿ ಬಿಂಬಿಸುವ ಗಾಯನಕ್ಕೆ ಮಹಿಳೆಯರು ನೃತ್ಯವು ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ ಸುಭದ್ರ, ಜಿಡಿಪಿ 7% ಬೆಳವಣಿಗೆ; ಆರ್ಥಿಕ ಸಮೀಕ್ಷೆ ಪ್ರಕಟ

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ. ದತ್ತಾತ್ರೇಯ ಜೆ. ಗಾದ, ನಗರಸಭೆಯ ಪೌರಾಯುಕ್ತ ರುದ್ರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ರಾಜಾ ನಾಯಕ್, ಆರ್‌ಎಫ್‌ಒ ನವನೀತ್, ಕೃಷಿ ಇಲಾಖೆ ಸಹಾಯ ನಿರ್ದೇಶಕ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಯ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ರಾಮನಗರ

Gas geyser leak : ಗೀಸರ್‌ ಗ್ಯಾಸ್‌ ಸೋರಿಕೆ; ಬಾತ್‌ರೂಮ್‌ನಲ್ಲೇ ತಾಯಿ-ಮಗ ಸಾವು

Gas geyser leak : ಗೀಸರ್‌ ಗ್ಯಾಸ್‌ ಸೋರಿಕೆಯಾಗಿದ್ದು, ಅದರ ಅನಿಲ ಸೇವಿಸಿದ ತಾಯಿ-ಮಗ ಇಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Gas geyser leak
Koo

ರಾಮನಗರ: ಬಾತ್‌ರೂಮ್‌ಗೆ (gas geyser leaks) ಹೋಗಿದ್ದಾಗ ಗೀಸರ್‌ನ ಗ್ಯಾಸ್‌ ಸೋರಿಕೆಯಾಗಿ ಉಸಿರುಗಟ್ಟಿ ತಾಯಿ-ಮಗ ಇಬ್ಬರು ಮೃತಪಟ್ಟಿದ್ದಾರೆ. ರಾಮನಗರದ ಮಾಗಡಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದೆ. ಶೋಭಾ (40), ದಿಲೀಪ್ (17) ಮೃತ ದುರ್ದೈವಿಗಳು.

ದಿಲೀಪ್‌ ಬಿಸಿ ನೀರು ಕಾಯಿಸಲು ಗ್ಯಾಸ್ ಗೀಜರ್ ಆನ್ ಮಾಡಿದ್ದ. ಈ ವೇಳೆ ಅನಿಲ ಸೋರಿಕೆಯಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದ. ಸುಮಾರು ಸಮಯದವರೆಗೂ ಮಗ ಬಾರದೇ ಇದ್ದಾಗ, ಆತನನ್ನು ನೋಡಲು ಬಾತ್‌ರೂಮ್‌ಗೆ ಬಂದ ಶೋಭಾ, ವಿಷ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಇತ್ತ ಅವರಿಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅದಾಗಲೇ ಅವರಿಬ್ಬರು ಮೃತಪಟ್ಟಿದ್ದರು. ನಿನ್ನೆ ಭಾನುವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆ-ಗಾಳಿಗೆ ಯುವಕನ ತಲೆ ಮೇಲೆ ಮುರಿದು ಬಿದ್ದ ವಿದ್ಯುತ್‌ ಕಂಬ

ಹೆಂಡತಿಗೆ ಹೆದರಿಸಲು ಹೋಗಿ ಜೀವ ಕಳೆದುಕೊಂಡ ಲೋಕೋ ಪೈಲಟ್‍!

ಕೆಲವರು ತಮ್ಮವರನ್ನು ಹೆದರಿಸುವ ಸಲುವಾಗಿ ಆಗಾಗ ಸಾಯುವುದಾಗಿ ತಮಾಷೆ ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಈ ತಮಾಷೆಯೇ ಘೋರವಾಗಿ ಬಿಟ್ಟಿದೆ. ಬಿಹಾರದ 33 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಬೆದರಿಸುವ ಪ್ರಯತ್ನದಲ್ಲಿ ನೇಣು ಬಿಗಿದು ಆತ್ಮಹತ್ಯೆ(Self Harming) ಮಾಡಿಕೊಳ್ಳುವಂತೆ ನಟಿಸಲು ಹೋಗಿ ದುರಂತವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಗೋಪಾಲಪಟ್ಟಣಂನ ಕೊಟ್ಟಪಲೆಂ ಪ್ರದೇಶದಲ್ಲಿರುವ ಗಣೇಶ್ ನಗರದಲ್ಲಿ ನಡೆದಿದೆ.

ಬಿಹಾರದ 33 ವರ್ಷದ ಸಹಾಯಕ ಲೋಕೋ ಪೈಲಟ್ ಚಂದನ್ ಕುಮಾರ್ ದುರಂತವಾಗಿ ಪ್ರಾಣ ಕಳೆದುಕೊಂಡ ವ್ಯಕ್ತಿ. ಕಳೆದ ಐದು ವರ್ಷಗಳಿಂದ ಕುಟುಂಬದ ಜೊತೆ ವಾಸಿಸುತ್ತಿದ್ದ ಚಂದನ್ ಅವರು ಪತ್ನಿ ಲಾಲ್ ಮುನ್ನಿ ಕುಮಾರಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಪೊಲೀಸ್ ವರದಿ ಪ್ರಕಾರ, ಚಂದನ್ ಅವರ ಮಕ್ಕಳು ತುಂಬಾ ಗಲಾಟೆ ಮಾಡುತ್ತಿದ್ದ ಕಾರಣ ಈ ವಿಚಾರಕ್ಕೆ ಅವರ ಮತ್ತು ಅವರ ಹೆಂಡತಿಯ ನಡುವೆ ವಾಗ್ವಾದ ಉಂಟಾಯಿತು. ಆರಂಭದಲ್ಲಿ, ಮುನ್ನಿ ಕುಮಾರಿ ಮಕ್ಕಳ ಪರವಾಗಿ ನಿಂತರು. ಇದರಿಂದ ಕೋಪಗೊಂಡ ಚಂದನ್ ಆಕೆಗೆ ಪಾಠ ಕಲಿಸಲು ಮತ್ತು ಕುಟುಂಬದವರನ್ನು ಹೆದರಿಸಲು, ತನ್ನ ಕುತ್ತಿಗೆಗೆ ಸೀರೆಯನ್ನು ಕಟ್ಟಿ, ಇನ್ನೊಂದು ತುದಿಯನ್ನು ಸೀಲಿಂಗ್ ಫ್ಯಾನ್ ಹುಕ್‍ಗೆ ಕಟ್ಟಿದರು. ದುರದೃಷ್ಟವಶಾತ್, ಸೀರೆ ಆಕಸ್ಮಿಕವಾಗಿ ಬಿಗಿಯಾಗಿ ಇದು ಚಂದನ್ ಸಾವಿಗೆ ಕಾರಣವಾಯಿತು.

ತುಂಬಾ ಸಮಯವಾದರೂ ಆತನ ಮಲಗುವ ಕೋಣೆಯ ಬಾಗಿಲು ತೆರೆಯದ ಕಾರಣ ಮುನ್ನಿ ಕುಮಾರಿ, ನೆರೆಹೊರೆಯವರ ಸಹಾಯದಿಂದ ಅದನ್ನು ಬಲವಂತವಾಗಿ ತೆರೆಸಿದಳು, ಆದರೆ ಅಲ್ಲಿ ಚಂದನ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಪರೀಕ್ಷಿಸಿದಾಗ ಆತ ಈಗಾಗಲೇ ಮೃತಪಟ್ಟಿರುವುದಾಗಿ ಎಂದು ತಿಳಿದುಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ದುರಂತ ಘಟನೆಯು ಕುಟುಂಬವನ್ನು ತೀವ್ರ ಆಘಾತ ಮತ್ತು ದುಃಖದಲ್ಲಿ ಮುಳುಗಿಸಿದೆ. ಪತ್ನಿಯೊಂದಿಗೆ ಜಗಳವಾಡಿದ ನಂತರ ಚಂದನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಣ್ಣೆಪು ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿಜಯನಗರ

Vijayanagara News: ನಿತ್ಯ ಯೋಗ ಮಾಡುವುದೇ ನಿಜವಾದ ಗುರು ಕಾಣಿಕೆ: ಭವರ್ ಲಾಲ್ ಆರ್ಯ

Vijayanagara News: ನಿತ್ಯ ಯೋಗ ಮಾಡುವುದು ಮತ್ತು ಇತರರೂ ಯೋಗ ಮಾಡುವಂತೆ ಪ್ರೇರಣೆಯಾಗುವುದೇ ನಾವೆಲ್ಲ ನೀಡಬಹುದಾದ ನಿಜವಾದ ಗುರುಕಾಣಿಕೆ’ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ತಿಳಿಸಿದ್ದಾರೆ.

VISTARANEWS.COM


on

Special Yoga Meditation Pranayama Camp at Hosapete
Koo

ಹೊಸಪೇಟೆ: ನಿತ್ಯ ಯೋಗ ಮಾಡುವುದು ಮತ್ತು ಇತರರೂ ಯೋಗ ಮಾಡುವಂತೆ ಪ್ರೇರಣೆಯಾಗುವುದೇ ನಾವೆಲ್ಲ ನೀಡಬಹುದಾದ ನಿಜವಾದ ಗುರುಕಾಣಿಕೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ (Vijayanagara News) ಹೇಳಿದರು.

ಇಲ್ಲಿನ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ನಡೆಯುತ್ತಿರುವ ಸಹ ಶಿಕ್ಷಕರ ಯೋಗ ತರಬೇತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ವಿಶೇಷ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರ ನಡೆಸಿ, ಸಾಮೂಹಿಕ ಅಗ್ನಿಹೋತ್ರ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಇದನ್ನೂ ಓದಿ: Kannada New Movie: ಗಣೇಶ್ ಅಭಿನಯದ ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ʼದ್ವಾಪರ ದಾಟುತʼ ಹಾಡು ರಿಲೀಸ್‌!

ಹೊಸಪೇಟೆ ನಗರದ 35 ವಾರ್ಡ್‌ಗಳಲ್ಲಿ ಸಹ ಉಚಿತ ಯೋಗ ಶಿಬಿರ ಆರಂಭವಾಗಬೇಕು ಮತ್ತು ಪ್ರತಿ ಮನೆಯಲ್ಲೂ ಒಬ್ಬೊಬ್ಬ ಯೋಗ ಸಾಧಕ ತಯಾರಾಗಬೇಕು. ಈ ಸಂಕಲ್ಪವನ್ನು ಇಂದು ಮಾಡಿದರೆ ಮೂರ್ನಾಲ್ಕು ತಿಂಗಳಲ್ಲಿ ಅದು ಖಂಡಿತ ಈಡೇರುತ್ತದೆ. ಹೊಸಪೇಟೆ ನೀಡಬಹುದಾದ ಬಹುದೊಡ್ಡ ಗುರುಕಾಣಿಕೆ ಇದೇ ಎಂದು ಅವರು ಹೇಳಿದರು.

ಅಗ್ನಿಹೋತ್ರದ ನೇತೃತ್ವ ವಹಿಸಿದ್ದ ಭವರ್‌ಲಾಲ್ ಆರ್ಯ್, ಗಾಯತ್ರಿ ಮಂತ್ರದ ಅರ್ಥ ವಿವರಣೆ ನೀಡುತ್ತಲೇ ಅಗ್ನಿಹೋತ್ರ ನಡೆಸುವ ಅಗತ್ಯವನ್ನು ತಿಳಿಸಿದರು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ

ಈ ವೇಳೆ ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್, ಹಿರಿಯ ಯೋಗ ಸಾಧಕರಾದ ಡಾ.ಎಫ್‌.ಟಿ. ಹಳ್ಳಿಕೇರಿ, ರಾಜೇಶ್ ಕರ್ವಾ, ಬಾಲಚಂದ್ರ ಶರ್ಮಾ, ಗೌರಮ್ಮ, ಮಂಗಳಮ್ಮ ಅಶೋಕ್‌ ಚಿತ್ರಗಾರ್‌, ಶ್ರೀರಾಮ್‌ ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading

ಮಳೆ

Karnataka Rain : ಭಾರಿ ಮಳೆ-ಗಾಳಿಗೆ ಯುವಕನ ತಲೆ ಮೇಲೆ ಮುರಿದು ಬಿದ್ದ ವಿದ್ಯುತ್‌ ಕಂಬ

ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ನಾನಾ ಅವಾಂತರವೇ (Karnataka Rain) ಸೃಷ್ಟಿಯಾಗಿದೆ. ಬೆಳಗಾವಿಯಲ್ಲಿ ಹಲವೆಡೆ ಮನೆ ಕುಸಿದು ಹಾನಿಯಾಗಿದೆ. ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿ ಮೇಲೆ ವಿದ್ಯುತ್‌ ಕಂಬ ಧರೆಗುರುಳಿದೆ.

VISTARANEWS.COM


on

By

karnataka rain
Koo

ಚಿಕ್ಕೋಡಿ/ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ (Karnataka Rain) ಮುಂದುವರಿದಿದೆ. ಜೋರಾಗಿ ಬೀಸಿದ ಗಾಳಿ-ಮಳೆಗೆ ವಿದ್ಯುತ್ ಕಂಬ ಬಿದ್ದಿದೆ. ಅಲ್ಲೆ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ತಲೆಗೆ ಕಂಬ ತಾಗಿದ್ದು, ಗಾಯಗೊಂಡಿದ್ದಾರೆ. ಸ್ವಲ್ಪದರಲ್ಲಿ ಸಾವಿನ‌ ದವಡೆಯಿಂದ ವ್ಯಕ್ತಿ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಾರಗೋಡು ತುಂಬರಗಡಿಯಲ್ಲಿ ಘಟನೆ ನಡೆದಿದೆ. ದಿವೀತ್‌ ಎಂಬುವವರು ಬಸ್ ಇಳಿದು ಹೋಗುತ್ತಿರುವಾಗ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಿದ್ರೆ ಮಂಪರಿನಲ್ಲಿದ್ದಾಗ ಕುಸಿದು ಬಿದ್ದ ಮನೆ

ನಿರಂತರ ಮಳೆಗೆ ಸೋಮವಾರ ನಸುಕಿನ ಜಾವ ಮನೆಯೊಂದು ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದಂತೆ ನಿದ್ದೆಯಲ್ಲಿ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿ ಘಟನೆ ನಡೆದಿದೆ. ರಾಜಕುಮಾರ ಬಾಳಪ್ಪಗೋಳ ಎಂಬುವವರ ಮನೆ ಕುಸಿದಿದೆ. ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಗೋಡೆ ಕುಸಿದು ಮಹಿಳೆ ಗಂಭೀರ

ಸತತವಾಗಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ಘಟನೆ ನಡೆದಿದೆ. ಲಕ್ಷ್ಮಿ ಬಾಯಿ ಚೌಗಲೆ ಎಂಬಾಕೆ ಗಾಯಗೊಂಡವರು. ಸೋಮವಾರ ಬೆಳಗ್ಗೆ ಮನೆ ಸ್ವಚ್ಛಗೊಳಿಸಿ ಸ್ನಾನಕ್ಕೆ ಹೋಗುವಾಗ ಏಕಾಏಕಿ ಗೋಡೆ ಕುಸಿದಿದೆ. ಸದ್ಯ ಗಾಯಾಳು ಲಕ್ಷ್ಮಿಯನ್ನು ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Forced Conversion : ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದವರಿಗೆ ಬ್ರೈನ್‌ ವಾಶ್‌; ಮತಾಂತರಕ್ಕೆ ಯತ್ನಿಸಿದ ಇಬ್ಬರು ಅರೆಸ್ಟ್‌

ವಿದ್ಯುತ್‌ ಮಗ್ಗದ ಮೇಲೆ ಗೋಡೆ ಕುಸಿತ

ನಿರಂತರವಾಗಿ ಸುರಿಯುತ್ತಿರುವ ‌ಮಳೆಗೆ ಮನೆಯ ಗೋಡೆ ಕುಸಿಯುತ್ತಿದೆ. ನೇಕಾರಿಕೆ ಮಾಡುವಾಗ ವಿದ್ಯುತ್ ಮಗ್ಗದ ಮೇಲೆಯೇ ಗೋಡೆ ಕುಸಿದಿದೆ. ಬೆಳಗಾವಿ ತಾಲೂಕಿನ ಸುಳೆಭಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ಸುಳೇಭಾವಿಯ ಕಮ್ಮಾರ ಗಲ್ಲಿಯ ದ್ಯಾಮಪ್ಪ ನಾನಾವರ್ ಎಂಬುವವರ ಮನೆ ಕುಸಿದು ಬಿದ್ದಿದೆ. ಗೋಡೆ ಕುಸಿಯುತ್ತಿದ್ದಂತೆ ಮನೆಯಿಂದ ಹೊರ ಓಡಿ‌ ಬಂದು ಪಾರಾಗಿದ್ದಾರೆ. ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಲುಕಿರುವ ಬಡ ನೇಕಾರ ಕುಟುಂಬವು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಮನೆ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮಣಿಗಾರ ಪಂಚಾಯತ್ ವ್ಯಾಪ್ತಿಯ ಹೊಂಡಗದ್ದೆಯಲ್ಲಿ ಮನೆ ಮೇಲೆ ಮರ ಬಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹರಿಶ್ಚಂದ್ರ ನಾಯ್ಕ ಎಂಬುವವರು ತಲೆಗೆ, ಪತ್ನಿ ಭಾಗೀರಥಿ ನಾಯ್ಕ ಹಣೆಗೆ ಗಾಯವಾಗಿದೆ. ಗಾಯಾಳುಗಳನ್ನು ಸಿದ್ದಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಮನೆಯ ಒಂದು ಬದಿ ಚಾವಣಿಗೆ ಹಾನಿಯಾಗಿದೆ.

ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ

ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ. ಪೊಲೀಸರು ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಹೈವೆ ಪಟ್ರೋಲ್ ವಾಹನವನ್ನು ನಿಲ್ಲಿಸಿದ್ದರು. ಈ ವೇಳೆ ವಾಹನ ನಿಂತ ಜಾಗದಲ್ಲೇ ಭೂಮಿ ಕುಸಿದಿದೆ.ಇದರಿಂದಾಗಿ ಪೊಲೀಸರ ವಾಹವು ಮಣ್ಣಿನಲ್ಲಿ ಸಿಲುಕುವಂತಾಯಿತು. ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವು ಮಾಡಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Welcome to the Kannada Jyoti RathaYatra at Shira
ತುಮಕೂರು7 mins ago

Shira News: ಕನ್ನಡ ಜ್ಯೋತಿ ರಥಯಾತ್ರೆಗೆ ಶಿರಾದಲ್ಲಿ ಅದ್ಧೂರಿ ಸ್ವಾಗತ

Gas geyser leak
ರಾಮನಗರ7 mins ago

Gas geyser leak : ಗೀಸರ್‌ ಗ್ಯಾಸ್‌ ಸೋರಿಕೆ; ಬಾತ್‌ರೂಮ್‌ನಲ್ಲೇ ತಾಯಿ-ಮಗ ಸಾವು

Special Yoga Meditation Pranayama Camp at Hosapete
ವಿಜಯನಗರ8 mins ago

Vijayanagara News: ನಿತ್ಯ ಯೋಗ ಮಾಡುವುದೇ ನಿಜವಾದ ಗುರು ಕಾಣಿಕೆ: ಭವರ್ ಲಾಲ್ ಆರ್ಯ

Chaitra Vasudevan says not a silly girl never thought that someone cheated me
ಸ್ಯಾಂಡಲ್ ವುಡ್22 mins ago

Chaitra Vasudevan: ನಾನು ಸಿಲ್ಲಿ ಹುಡುಗಿ ಅಲ್ಲ..ನನ್ನಂತವರಿಗೂ ಮೋಸ ಆಗುತ್ತದೆ ಅಂದುಕೊಂಡಿರಲಿಲ್ಲ ಎಂದ ಆ್ಯಂಕರ್ ಚೈತ್ರಾ!

karnataka rain
ಮಳೆ27 mins ago

Karnataka Rain : ಭಾರಿ ಮಳೆ-ಗಾಳಿಗೆ ಯುವಕನ ತಲೆ ಮೇಲೆ ಮುರಿದು ಬಿದ್ದ ವಿದ್ಯುತ್‌ ಕಂಬ

Economic Survey 2023-24
ದೇಶ39 mins ago

Economic Survey 2023-24: ಉದ್ಯೋಗ ಸೃಷ್ಟಿ, ಕೃಷಿ ಏಳಿಗೆ; ಬಜೆಟ್‌ಗೂ ಮುನ್ನ ಕೇಂದ್ರದಿಂದ ಮಹತ್ವದ ಸುಳಿವು

Kanwar Yatra
ದೇಶ1 hour ago

Kanwar Yatra: ಕನ್ವರ್‌ ಯಾತ್ರೆ ವೇಳೆ ಅಂಗಡಿಗಳಿಗೆ ನಾಮ ಫಲಕ ಕಡ್ಡಾಯ ಆದೇಶಕ್ಕೆ ಸುಪ್ರೀಂ ತಡೆ

Assembly Session
ಕರ್ನಾಟಕ1 hour ago

Assembly Session: ಅವಾಚ್ಯ ಶಬ್ದ ಬಳಕೆ; ಆರ್.ಅಶೋಕ್ ವಿರುದ್ಧ ಪ್ರದೀಪ್ ಈಶ್ವರ್ ಹಕ್ಕು ಚ್ಯುತಿ ಮಂಡನೆ

Economic Survey 2023-24
ದೇಶ2 hours ago

Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ

Karnataka Rain News
ಮಳೆ2 hours ago

Karnataka Rain News: ಜೋಗ ಜಲಪಾತದ ಬಳಿ ಯುವಕ ನಾಪತ್ತೆ; ಪ್ರವಾಹಕ್ಕೆ ಕೊಚ್ಚಿ ಹೋದ ಬಾಲಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ2 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ3 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ3 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ4 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ6 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ7 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌