Rain news | ಬೆಂಗಳೂರಿನಲ್ಲಿ ತುಂತುರು ಮಳೆ, ಇನ್ನೆರಡು ದಿನ ಚಳಿ ಹೆಚ್ಚಳ ಸಾಧ್ಯತೆ - Vistara News

ಪ್ರಮುಖ ಸುದ್ದಿ

Rain news | ಬೆಂಗಳೂರಿನಲ್ಲಿ ತುಂತುರು ಮಳೆ, ಇನ್ನೆರಡು ದಿನ ಚಳಿ ಹೆಚ್ಚಳ ಸಾಧ್ಯತೆ

ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ತುಂತುರು ಮಳೆಯಾಗುತ್ತಿದೆ. ಇದರ ಪರಿಣಾಮ ಮುಂದಿನ ಎರಡು ದಿನ ತಾಪಮಾನ ತಗ್ಗಲಿದೆ (Rain news) ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

VISTARANEWS.COM


on

bangalore cool
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿಯಲ್ಲಿ ಮೋಡ ಕವಿದ ವಾತವರಣದ ಜೊತೆಗೆ ತುಂತುರು ಮಳೆಯಾಗುತ್ತಿದೆ. ಇನ್ನೆರಡು ದಿನ ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ (Rain news) ತಿಳಿಸಿದೆ.

ನಗರದ ಕೆಲವಡೆ ಬೆಳಗಿನ ಜಾವ ದಟ್ಟವಾಗಿ ಮಂಜು ಆವರಿಸಿಕೊಂಡಿತ್ತು. ಇಂದು ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಗೆ ತಲುಪುವ ಸಾಧ್ಯತೆ ಇದೆ.

ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ವರದಿ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆಯಾಗುತ್ತಿದೆ. ರಾಜ್ಯದ ಹಲವೆಡೆ ಮಳೆಯಾಗಬಹುದು. ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ ಇದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂ,ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು , ತುಮಕೂರು, ವಿಜಯಪುರ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಕಳವಳ; ತಿರುಗೇಟು ಕೊಟ್ಟ ಕೇಂದ್ರ ಸರ್ಕಾರ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕದ ಕಮಿಷನ್‌ ಆನ್‌ ಇಂಟರ್‌ನ್ಯಾಷನಲ್‌ ರಿಲಿಜಿಯಸ್‌ ಫ್ರೀಡಂ ಸಂಸ್ಥೆಯು ವರದಿ ಬಿಡುಗಡೆ ಮಾಡಿದೆ. ಇದರಲ್ಲಿ, ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆದರೆ, ಅಮೆರಿಕದ ವರದಿಗೆ ಕೇಂದ್ರ ಸರ್ಕಾರವು ಅಸಮಾಧಾನ ವ್ಯಕ್ತಪಡಿಸಿದೆ. ಇದು ರಾಜಕೀಯ ಪ್ರೇರಿತ ವರದಿ ಎಂದು ತಿರುಗೇಟು ನೀಡಿದೆ.

VISTARANEWS.COM


on

Religious Freedom
Koo

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಸರ್ಕಾರದ ಕಮಿಷನ್‌ ಆನ್‌ ಇಂಟರ್‌ನ್ಯಾಷನಲ್‌ ರಿಲಿಜಿಯಸ್‌ ಫ್ರೀಡಂ (USCIRF Report) ವರದಿ ಬಿಡುಗಡೆ ಮಾಡಿದೆ. ಅದರಲ್ಲೂ, ಭಾರತ ಸೇರಿ 17 ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ (Religious Freedom) ಕುರಿತು ಕಳವಳ ವ್ಯಕ್ತಪಡಿಸಿದೆ. ಇದಕ್ಕೆ ಭಾರತ ಸರ್ಕಾರವು ತಿರುಗೇಟು ನೀಡಿದ್ದು, “ಯುಎಸ್‌ಸಿಐಆರ್‌ಎಫ್‌ ವರದಿಯು ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿ ತಯಾರಿಸಿದ್ದಾಗಿದೆ” ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಅಮೆರಿಕದ ವರದಿಯಲ್ಲಿ ಏನಿದೆ?

ಅಮೆರಿಕ ಸರ್ಕಾರದ ಆಯೋಗ ರಚಿಸಿದ ವರದಿಯಲ್ಲಿ ಭಾರತದ ಕುರಿತು ಉಲ್ಲೇಖವಿದೆ. “ಭಾರತ ಸೇರಿ 17 ದೇಶಗಳಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸುವ, ಧಾರ್ಮಿಕ ವಿಚಾರಗಳ ಮೇಲೆ ನಂಬಿಕೆ ಇರಿಸುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತದಲ್ಲಂತೂ ತಾರತಮ್ಯದಿಂದ ಕೂಡಿರುವ ರಾಷ್ಟ್ರೀಯವಾದ ನೀತಿಗಳ ಹೇರಿಕೆಯಿಂದಾಗಿ ಧಾರ್ಮಿಕ ನಂಬಿಕೆ ಹೊಂದಿದವರಿಗೆ ಹಿನ್ನಡೆಯಾಗುತ್ತಿದೆ” ಎಂಬುದಾಗಿ ವರದಿ ತಿಳಿಸಿದೆ.

“ಭಾರತದಲ್ಲಿ ರಾಷ್ಟ್ರೀಯವಾದಿ ನೀತಿಗಳ ಹೇರಿಕೆಯಿಂದಾಗಿ ಧರ್ಮಗಳಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಸಮಸ್ಯೆಯಾಗಿದೆ. ದ್ವೇಷ ಕಾರುವ ವಾಕ್ಚಾತುರ್ಯ, ಕೋಮುವಾದದಿಂದ ಕೂಡಿದ ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡವರಿಗೆ ಅವುಗಳನ್ನು ಪಾಲಿಸಲು ಕಷ್ಟವಾಗುತ್ತಿದೆ. ಇದು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದಕ್ಕೆ ಉದಾಹರಣೆಯಾಗಿದೆ” ಎಂಬುದಾಗಿ ಅಮೆರಿಕದ ಆಯೋಗವು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರ ತಿರುಗೇಟು

ಅಮೆರಿಕದ ವರದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ತಿರುಗೇಟು ನೀಡಿದ್ದಾರೆ. “ಯುಎಸ್‌ಸಿಐಆರ್‌ಎಫ್‌ ಎಂಬುದು ಪಕ್ಷಪಾತದ ಧೋರಣೆಗಳಿಂದ ಕೂಡಿದ ಸಂಘಟನೆಯಾಗಿದ್ದು, ರಾಜಕೀಯದಿಂದ ಪ್ರೇರೇಪಿತವಾಗಿದೆ. ಇದಕ್ಕೂ ಮೊದಲು ಕೂಡ ಇಂತಹ ವರದಿಗಳನ್ನು ಅದು ಪ್ರಕಟಿಸಿತ್ತು. ಭಾರತದ ಕುರಿತು ಷಡ್ಯಂತ್ರದಿಂದ ಕೂಡಿದ ವರದಿ ಬಿಡುಗಡೆ ಮಾಡುವುದು ಅದಕ್ಕೆ ರೂಢಿಯೇ ಆಗಿದೆ. ಯುಎಸ್‌ಸಿಐಆರ್‌ಎಫ್‌ ವರದಿಯಲ್ಲಿ ಯಾವುದೇ ಹುರುಳಿಲ್ಲ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್‌ ಯುವತಿಗೆ ಭಾರತದ ಹಿಂದು ವ್ಯಕ್ತಿ ಹೃದಯದ ಕಸಿ; ತಕರಾರು ತೆಗೆದ ನೆರೆ ರಾಷ್ಟ್ರದ ಇಸ್ಲಾಂ ಧರ್ಮಗುರು!

Continue Reading

Lok Sabha Election 2024

Lok Sabha Election 2024: ಜೈ ಶ್ರೀರಾಮ್ ಘೋಷಣೆ ಕೂಗುವವರು ಭಿಕಾರಿಗಳು ಎಂದ ರಾಜು ಕಾಗೆ; ಚುನಾವಣಾ ಆಯೋಗದಿಂದ ನೋಟಿಸ್‌!

Lok Sabha Election 2024: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಿಟ್ಟು ರಾಮಮಂದಿರ ನಿರ್ಮಾಣ ಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ರಾಜು ಕಾಗೆ, ಕೇವಲ ಗುಡಿಗಳನ್ನು ಕಟ್ಟುವುದರಿಂದ ಸವರ್ಣೀಯರಾಗುತ್ತೇವೆಂದರೆ ನಾವು ಕೂಡ ನಿರಂತರವಾಗಿ ಗುಡಿಗಳನ್ನು ಕಟ್ಟುತ್ತೇವೆ. ನಾವು ನಮ್ಮಲ್ಲಿರುವ ವ್ಯವಸ್ಥೆಗಳ ಬಗ್ಗೆ ವಿಚಾರ ಮಾಡಬೇಕು. ಅದೆಲ್ಲವನ್ನು ಬಿಟ್ಟು ಬಿಜೆಪಿಯವರು ಬಂದ ತಕ್ಷಣ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಕೂಗುವುದಲ್ಲ ಎಂದು ರಾಜು ಕಾಗೆ ಕಿಡಿಕಾರಿದ್ದಾರೆ.

VISTARANEWS.COM


on

Lok Sabha Election 2024 Raju Kage calls those chanting Jai Shri Ram are beggars
Koo

ಬೆಳಗಾವಿ: ಬಿಜೆಪಿ ಸಮಾವೇಶದಲ್ಲಿ ಕೂಗಲಾಗುವ “ಜೈ ಶ್ರೀರಾಮ್‌” ಘೋಷಣೆ (Jai Shri Ram slogan) ಬಗ್ಗೆ ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗೆ ಘೋಷಣೆ ಕೂಗುವವರು ಭಿಕಾರಿಗಳು ಎಂದು ಕಿಡಿಕಾರಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಹಿಂದೆ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ ಕಡಿಮೆ ಲೀಡ್‌ ಕೊಟ್ಟರೆ ಕರೆಂಟ್‌ ಕಟ್‌ ಎಂಬ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.

ಬೆಳಗಾವಿಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ರಾಜು ಕಾಗೆ, ಬಿಜೆಪಿಯವರು ಪ್ರತಿ ಸಮಾವೇಶ, ರೋಡ್ ಶೋಗಳಲ್ಲಿ ‘ಜೈ ಶ್ರೀರಾಮ್, ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾರೆ. ಇಂಥದ್ದನ್ನೆಲ್ಲ 40 ವರ್ಷಗಳ ಹಿಂದೆಯೇ ನಾನು ಮಾಡಿ ಬಿಟ್ಟಿದ್ದೇನೆ. ಜೈ ಶ್ರೀರಾಮ್‌ ಘೋಷಣೆ ಕೂಗುವವರಿಗೆ ನಾನು ಸಮರ್ಥವಾಗಿ ಉತ್ತರ ಕೊಡುತ್ತೇನೆ. ಅವರು ಗತಿ ಇಲ್ಲದ ಭಿಕಾರ್ ಛೋಟ್ (ಗತಿ ಇಲ್ಲದ ಭಿಕಾರಿಗಳು) ಇದ್ದಾರೆ ಎಂದು ನಾವು ಆ ಲೆವೆಲ್‌ಗೆ ಇಳಿಯುವುದಕ್ಕೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಆಕ್ಷೇಪ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಿಟ್ಟು ರಾಮಮಂದಿರ ನಿರ್ಮಾಣ ಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ರಾಜು ಕಾಗೆ, ಕೇವಲ ಗುಡಿಗಳನ್ನು ಕಟ್ಟುವುದರಿಂದ ಸವರ್ಣೀಯರಾಗುತ್ತೇವೆಂದರೆ ನಾವು ಕೂಡ ನಿರಂತರವಾಗಿ ಗುಡಿಗಳನ್ನು ಕಟ್ಟುತ್ತೇವೆ. ನಾವು ನಮ್ಮಲ್ಲಿರುವ ವ್ಯವಸ್ಥೆಗಳ ಬಗ್ಗೆ ವಿಚಾರ ಮಾಡಬೇಕು. ಅದೆಲ್ಲವನ್ನು ಬಿಟ್ಟು ಬಿಜೆಪಿಯವರು ಬಂದ ತಕ್ಷಣ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಕೂಗುವುದಲ್ಲ ಎಂದು ಕಿಡಿಕಾರಿದ್ದಾರೆ.

ಜೈ ಶ್ರೀರಾಮ್ ಘೋಷಣೆ ಕೂಗುವವರಿಗೆ ನಾನು ಉತ್ತರ ಕೊಡಬಹುದು. ಆದರೆ, ಅಂಥ ಲೆವೆಲ್‌ಗೆ ಇಳಿಯಲು ನನ್ನಿಂದ ಆಗುವುದಿಲ್ಲ. ಇದಕ್ಕೆಲ್ಲ ಈಗ ಮತದಾರರೇ ತಕ್ಕ ಉತ್ತರ ನೀಡಬೇಕು ಎಂದು ರಾಜು ಕಾಗೆ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

ಕರೆಂಟ್‌ ಕಟ್‌ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್‌

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಗುರುವಾರ ಮತಯಾಚನೆ ಮಾಡಿದ್ದ ರಾಜು ಕಾಗೆ, “ಜುಗುಳ ಮತ್ತು ಮಂಗಾವತಿ ಗ್ರಾಮಗಳಲ್ಲಿ ಕಡಿಮೆ ಲೀಡ್ ಕೊಟ್ಟಲ್ಲಿ ಕರೆಂಟ್ ಕಟ್” ಮಾಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದು, 24 ಗಂಟೆಯೊಳಗಾಗಿ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.

Continue Reading

ಕ್ರೈಂ

Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Prajwal Revanna Case: ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ. ಕೊನೆಗೆ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

VISTARANEWS.COM


on

Prajwal Revanna Case Revanna denied anticipatory bail today Court allows SIT to file objections
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಇನ್ನೊಬ್ಬ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.

ಇದಕ್ಕೆ ವಾದ ಮಂಡಿಸಿದ ಎಚ್.ಡಿ. ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ. ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮೂರ್ತಿ ಡಿ. ನಾಯ್ಕ್ ತಿಳಿಸಿದರು.

ಎಸ್‌ಐಟಿಗೆ ವಿಶೇಷ ಕೋರ್ಟ್‌ ನೋಟಿಸ್‌

ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನ್ಯಾಯಾದೀಶರಾದ ಸಂತೋಷ್ ಗಜಾನನ ಭಟ್, ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಮೇ 3) ಮುಂದೂಡಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಜ್ವಲ್‌ ಅರೆಸ್ಟ್‌ ಆದಲ್ಲಿ ಎಸ್‌ಐಟಿ ಕೇಳುವ ಪ್ರಶ್ನೆಗಳಿವು! ರೇವಣ್ಣಗೂ ತಟ್ಟುವ ಬಿಸಿ

ಪ್ರಜ್ವಲ್‌ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದಲ್ಲಿ ಇಲ್ಲವೇ ಅವರನ್ನು ಬಂಧಿಸಿ ಕರೆತಂದಲ್ಲಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎಸ್‌ಐಟಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಕೇಳಿ ಪ್ರಜ್ವಲ್‌ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್‌ ಅವರ ವಯಸ್ಸಿನಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಆರೋಪಗಳ ಬಗ್ಗೆ ಏನು ಹೇಳುತ್ತೀರಿ? ನೀವೇ ರೆಕಾರ್ಡ್‌ ಮಾಡಿಕೊಂಡಿದ್ದೀರಿ ಎಂಬ ಆರೋಪ ಇದೆ. ರೆಕಾರ್ಡ್‌ಗೆ ಯಾವ ಸಾಧನವನ್ನು ಬಳಸಿಕೊಂಡಿದ್ದೀರಿ. ಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ರೆಡಿಯಾಗಿದೆ. ನಿಮ್ಮ ಪುತ್ರನ ಮೇಲೆ ಆರೋಪಿವಿರುವುದು ಗಮನಕ್ಕೆ ಬಂದಿತ್ತಾ? ನಿಮ್ಮ ಗಮನಕ್ಕೆ ಬಂದಿದ್ರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ? ಒಂದು ವೇಳೆ ಚರ್ಚೆ ಮಾಡಿದರೆ ನಿಮ್ಮ ಪುತ್ರ ಏನು ಹೇಳಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಜ್ವಲ್ ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು

1- ಪ್ರಜ್ವಲ್ ಅವರೇ ನಿಮಗೆ ವಯಸ್ಸು ಎಷ್ಟು?
2- ನೀವು ಏನು ಓದಿದ್ದೀರಿ? ಎಲ್ಲಿ ಓದಿದ್ದು?
3- ಎಲೆಕ್ಷನ್ ಮುಗಿದ ತಕ್ಷಣ ತಾವು ಎಲ್ಲಿಗೆ ಹೋದಿರಿ?
4- ನೀವು ಹೆಚ್ಚಾಗಿ ವಾಸವಿರೋದು ಹಾಸನವಾ? ದೆಹಲಿಯಾ? ಅಥವಾ ಬೆಂಗಳೂರಲ್ಲೋ?
5- ನಿಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಏನಂತೀರಿ?
6- ಅಸಲಿಗೆ ಅವು ನಿಮ್ಮ ವಿಡಿಯೊಗಳಾ?
7- ವಿಡಿಯೋದಲ್ಲಿರುವ ಧ್ವನಿ ನಿಮ್ಮದಲ್ಲವೇ?
8- ನಿಮ್ಮಿಂದಲೇ ರೆಕಾರ್ಡ್‌ ಎನ್ನಲಾಗುತ್ತಿದೆ, ಹೌದೇ?
9- ರೆಕಾರ್ಡ್ ಮಾಡಲು ಬಳಸಿದ ಸಾಧನ ಯಾವುದು?
10- ನೀವೇ ರೆಕಾರ್ಡ್ ಮಾಡಿದ್ದಂತೆ. ಯಾಕೆ ಮಾಡಿದಿರಿ?
11 – ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ?
12- ನಿಮ್ಮ ಮೋಜಿಗೆ ವಿಡಿಯೊಗಳನ್ನು ಮಾಡಿಕೊಳ್ಳುತ್ತಿದ್ದಿರಾ?
13- ರೆಕಾರ್ಡ್ ಮಾಡುವುದು ತಪ್ಪು ಎಂದು ನಿಮಗೆ ಗೊತ್ತಿಲ್ವೆ?
14- ದೃಶ್ಯಗಳಲ್ಲಿ ಇರುವ ಮಹಿಳೆಯರು ನಿಮಗೆ ಪರಿಚಯವೇ?
15- ಆ ಮಹಿಳೆಯರನ್ನು ನೀವು ಎಲ್ಲಿ ಭೇಟಿ ಮಾಡಿದಿರಿ?
16- ದೈಹಿಕ ಸಂಪರ್ಕ ಬೆಳೆಸಲು ಏನಾದರೂ ಆಮಿಷ ಒಡ್ಡಿದ್ರಾ?
17 – ಅದು ಅತ್ಯಾಚಾರಕ್ಕೆ ಸಮ ಎಂದು ಗೊತ್ತಿದೆಯೇ?
18- ಪ್ರಮೋಷನ್, ಕೆಲಸದ ನೆಪದಲ್ಲಿ ದೈಹಿಕ ಸಂಪರ್ಕ ಮಾಡಿದಿರಾ?
19- ನಿಮಗೇನಾದರೂ ಮಾನಸಿಕ ಸಮಸ್ಯೆ ಇದೆಯಾ?
20- ನೀವು ದೌರ್ಜನ್ಯ ನಡೆಸುತ್ತಿರುವಂತಿದೆ, ಏನಂತೀರಿ?
21- ನೋಟಿಸ್ ಕೊಟ್ಟರೂ 7 ದಿನ ಟೈಮ್ ಯಾಕೆ ಕೇಳಿದಿರಿ?
22- ನೀವು ದೃಶ್ಯ ಶೂಟ್ ಮಾಡಲು ಬಳಸಿದ ಸಾಧನ ಎಲ್ಲಿದೆ?
23- ಬೇರೆ ಯಾರ ಬಳಿಯಾದರೂ ವಿಡಿಯೊ ಶೇರ್ ಮಾಡಿದಿರಾ?
24- ಖಾಸಗಿ ದೃಶ್ಯಗಳು ಹೇಗೆ ಹೊರಗೆ ಬಂದವು ಹೇಳಬಹುದಾ?
25- ನಿಮಗೆ ಕಾರ್ತಿಕ್ ಎಂಬ ವ್ಯಕ್ತಿ ಗೊತ್ತಾ?
26 – ನಿಮಗೂ ಕಾರ್ತಿಕ್‌ಗೂ ಸ್ನೇಹವಿತ್ತಾ?
27 – ನಿಮ್ಮ ವಿರುದ್ಧ ಸುದ್ದಿ ಪ್ರಸಾರವಾಗದಂತೆ ತಡೆ ತಂದಿದ್ದಿರಿ ಯಾಕೆ?
28 – ನಿಮ್ಮ ಮೇಲಿನ ಪಿತೂರಿ ಅಂತಾದರೆ ನೀವ್ಯಾಕೆ ದೂರು ನೀಡಲಿಲ್ಲ?
29 – ನಿಮ್ಮ ವಿರುದ್ಧ ಆರೋಪ ಬಂದ ಕೂಡಲೇ ಯಾಕೆ ದೇಶ ಬಿಟ್ಟು ಹೋದಿರಿ?
30 – ಮನೆಯಲ್ಲಿ ಯಾರ ಬಳಿಯಾದರೂ ಈ ವಿಷಯಗಳನ್ನು ಹೇಳಿಕೊಳ್ಳುತ್ತಿದ್ದಿರಾ?
31 – ಕೆಲಸದಾಕೆಯ ಆರೋಪದ ಬಗ್ಗೆ ಏನಂತೀರಿ?
32 – ಪ್ರಜ್ವಲ್ ನೀವು ತನಿಖೆಗೆ ಸಹಕರಿಸಬೇಕು
33 – ತನಿಖೆ ಪೂರ್ಣವಾಗುವವರೆಗೂ ದೇಶ ಬಿಟ್ಟು ಹೋಗಬೇಡಿ

ಎಂಬಿತ್ಯಾದಿ ಪ್ರಶ್ನೆಗಳನ್ನು ಎಸ್‌ಐಟಿ ಕೇಳಲಿದೆ. ಒಂದು ವೇಳೆ ಇವುಗಳಿಗೆ ಆರೋಪಿ ಪ್ರಜ್ವಲ್‌ ಸ್ಪಂದಿಸದೆ ಸಮರ್ಪಕ ಉತ್ತರ ನೀಡಿದ್ದರೆ ಮುಂದಿನ ಕ್ರಮದ ಬಗ್ಗೆ ಎಸ್‌ಐಟಿ ಚಿಂತನೆ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಎಚ್‌‌‌‌.ಡಿ.ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು!

1) ನಿಮ್ಮ ಹೆಸರೇನು..? ಏನು ಕೆಲಸ ಮಾಡಿಕೊಂಡಿದ್ದೀರಿ..?
2) ಯಾವ ವಿಳಾಸದಲ್ಲಿ ವಾಸವಾಗಿದ್ದೀರಾ? ಎಷ್ಟು ವರ್ಷ..?
3) ನಿಮ್ಮ ಮೇಲೆ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ಮಾಹಿತಿ ಇದೆಯಾ?
4) ದೂರು ನೀಡಿರುವ ಮಹಿಳೆ ಪರಿಚಯಸ್ಥರಾ? ಸಂಬಂಧಿನಾ?
5) ಎಷ್ಟು ವರ್ಷಗಳಿಂದ ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ..?
6) ದೂರಿನಲ್ಲಿ ಉಲ್ಲೇಖಿಸಿದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದೀರಾ?
7) ನಿಮ್ಮ ಪುತ್ರನ ಮೇಲೂ ಆರೋಪಿವಿದೆ ಗಮನಕ್ಕೆ ಬಂದಿತ್ತಾ..?
8) ನಿಮ್ಮ ಗಮನಕ್ಕೆ ಬಂದಿದ್ದರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ?
9) ಒಂದು ವೇಳೆ ಚರ್ಚೆ ಮಾಡಿದ್ದರೆ ನಿಮ್ಮ ಪುತ್ರ ಏನು ಹೇಳಿದ್ದರು?
10) ನಿಮ್ಮ ಪುತ್ರನ ಕಾರು ಚಾಲಕ ಕಾರ್ತಿಕ್ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ?
11) ನಿಮ್ಮ ಡ್ರೈವರ್ ಕಾರ್ತಿಕ್ ಜತೆ ಏನಾದರೂ ಗಲಾಟೆ ಆಗಿತ್ತಾ?
12) ವಿಡಿಯೊ ನಾನೇ ಕೊಟ್ಟಿದ್ದು ಎಂದು ಕಾರ್ತಿಕ್ ಹೇಳಿಕೆ ನೀಡಿದ್ದಾರಲ್ವಾ, ಇದು ಸತ್ಯನಾ?
13) ಪೆನ್‌ಡ್ರೈವ್‌ನಲ್ಲಿರೋ ವಿಡಿಯೊ ಪ್ರಜ್ವಲ್ ರೇವಣ್ಣನವರೆದ್ದೇನಾ..?
14) ಇಲ್ಲ ಅಂದಾದರೆ ಕೋರ್ಟ್‌ನಲ್ಲಿ ಸ್ಟೇ ತಂದಿದ್ದು ಯಾಕೆ?
15) ಮನೆ ಕೆಲಸದವಳು ಮಾಡುವ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

Continue Reading

ದೇಶ

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Covaxin: ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಎಂಬುದಾಗಿ ಭಾರತ್‌ ಬಯೋಟೆಕ್‌ ಪ್ರಕಟಣೆ ಹೊರಡಿಸಿದೆ. ಕೋವಿಶೀಲ್ಡ್‌ ಅಡ್ಡಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತ್‌ ಬಯೋಟೆಕ್‌ ಕಂಪನಿಯು ಸ್ಪಷ್ಟನೆ ನೀಡಿದೆ.

VISTARANEWS.COM


on

Covaxin
Koo

ನವದೆಹಲಿ: ಬ್ರಿಟನ್‌ನಲ್ಲಿ (UK) ಅಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಕೋಲಾಹಲ ಹೆಚ್ಚುತ್ತಿರುವಂತೆಯೇ ಭಾರತದಲ್ಲಿಯೂ ಕೋವಿಶೀಲ್ಡ್‌ ಲಸಿಕೆ ಸೈಡ್‌ ಎಫೆಕ್ಟ್‌ಗಳ ಕುರಿತು ಅಧ್ಯಯನ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೊವ್ಯಾಕ್ಸಿನ್‌ (Covaxin) ಅತ್ಯಂತ ಸುರಕ್ಷಿತವಾಗಿ ತಯಾರಿಸಲಾದ ಲಸಿಕೆಯಾಗಿದೆ ಎಂಬುದಾಗಿ ಭಾರತದ ಲಸಿಕಾ ತಯಾರಿಕಾ ಕಂಪನಿಯಾದ ಭಾರತ್‌ ಬಯೋಟೆಕ್‌ (Bharat Biotech) ಪ್ರಕಟಣೆ ತಿಳಿಸಿದೆ.

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿಯು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

“ಕೊವ್ಯಾಕ್ಸನ್‌ ಲಸಿಕೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಕೂಡ ಮೌಲ್ಯಮಾಪನ ಮಾಡಿದೆ. ಕೊವ್ಯಾಕ್ಸಿನ್‌ ಲಸಿಕೆಯ ಸುರಕ್ಷತೆ ಹಾಗೂ ಅದರ ದಕ್ಷತೆಯ ಕುರಿತು ಕೂಡ ಮೌಲ್ಯಮಾಪನ ಮಾಡಲಾಗಿದೆ. ಇದುವರೆಗೆ ವ್ಯಾಕ್ಸಿನ್‌ ಸಂಬಂಧಿಸಿದಂತೆ ಯಾವುದೇ ಅಡ್ಡ ಪರಿಣಾಮಗಳು, ರಕ್ತ ಹೆಪ್ಪುಗಟ್ಟುವುದು, ಥ್ರಂಬೊಸಿಟೋಪೇನಿಯಾ, ಪೆರಿಕಾರ್ಡಿಟಿಸ್‌ ಹಾಗೂ ಮೈಯೋಕಾರ್ಡಿಟಿಸ್‌ ಸೇರಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಹಾಗಾಗಿ, ಕೊವ್ಯಾಕ್ಸಿನ್‌ ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ” ಎಂದು ಮಾಹಿತಿ ನೀಡಿದೆ.

ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಕೋಟ್ಯಂತರ ಮಂದಿ ಪಡೆದಿದ್ದಾರೆ. ಈಗ ಅಮೆರಿಕದಲ್ಲಿ ಅಡ್ಡಪರಿಣಾಮದ ಕುರಿತು ಕಂಪನಿಯೇ ಒಪ್ಪಿಕೊಂಡಿರುವುದರಿಂದ ಭಾರತದಲ್ಲೂ ಈ ಕುರಿತು ಅಧ್ಯಯನ ನಡೆಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

Continue Reading
Advertisement
Religious Freedom
ದೇಶ3 mins ago

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಕಳವಳ; ತಿರುಗೇಟು ಕೊಟ್ಟ ಕೇಂದ್ರ ಸರ್ಕಾರ

Lok Sabha Election 2024 Raju Kage calls those chanting Jai Shri Ram are beggars
Lok Sabha Election 20244 mins ago

Lok Sabha Election 2024: ಜೈ ಶ್ರೀರಾಮ್ ಘೋಷಣೆ ಕೂಗುವವರು ಭಿಕಾರಿಗಳು ಎಂದ ರಾಜು ಕಾಗೆ; ಚುನಾವಣಾ ಆಯೋಗದಿಂದ ನೋಟಿಸ್‌!

Prajwal Revanna Case Revanna denied anticipatory bail today Court allows SIT to file objections
ಕ್ರೈಂ41 mins ago

Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Covaxin
ದೇಶ1 hour ago

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 hour ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

KL Rahul
ಕ್ರೀಡೆ1 hour ago

KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

T20 World Cup
ಕ್ರೀಡೆ2 hours ago

T20 World Cup : ವಿಶ್ವ ಕಪ್​ ಗೆಲ್ಲುವುದು ಭಾರತ; ವಿಶ್ವ ಕಪ್​ ವಿಜೇತ ಲಂಕಾ ಆಟಗಾರನ ಸ್ಪಷ್ಟ ನುಡಿ

Shine Shetty Summer Fashion
ಫ್ಯಾಷನ್2 hours ago

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

IPL 2024
ಕ್ರೀಡೆ2 hours ago

IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

assault Case
ಬೆಂಗಳೂರು2 hours ago

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 hour ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ15 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌