ಸೆ. 9, 10ರಂದು ಜಯನಗರದಲ್ಲಿ ಗಾನಕಲಾಭೂಷಣ ಎ. ವೀರಭದ್ರಯ್ಯ ಜನ್ಮ ಶತಮಾನೋತ್ಸವ - Vistara News

ನೋಟಿಸ್ ಬೋರ್ಡ್

ಸೆ. 9, 10ರಂದು ಜಯನಗರದಲ್ಲಿ ಗಾನಕಲಾಭೂಷಣ ಎ. ವೀರಭದ್ರಯ್ಯ ಜನ್ಮ ಶತಮಾನೋತ್ಸವ

A Veerabhadrayya: ಬೆಂಗಳೂರಿನ ಜಯನಗರದಲ್ಲಿ ಗಾನಕಲಾಭೂಷಣ ಎ. ವೀರಭದ್ರಯ್ಯನವರ ಜನ್ಮ ಶತಮಾನೋತ್ಸವ ಅಂಗವಾಗಿ ಶಾಸ್ತ್ರೀಯ ಸಂಗೀತ, ಗಾಯನ ಕಾರ್ಯಕ್ರಮಗಳು ನಡೆಯಲಿವೆ.

VISTARANEWS.COM


on

Ganakalabhushana A Veerabhadrayya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶ್ರೀ ಕೃಷ್ಣ ಸಂಗೀತ ಸಭಾ, ಸಮನ್ವಯ ಕಲಾಕೇಂದ್ರ, ಜಯರಾಮಸೇವಾ ಮಂಡಳಿ, ಅನೂರು ಅನಂತಕೃಷ್ಣ ಶರ್ಮ ಫೌಂಡೇಶನ್ ಫಾರ್ ಮ್ಯೂಸಿಕ್, ಅನನ್ಯ ಜಿ.ಎಂ.ಎಲ್. ಕಲ್ಬರಲ್‌ ಅಕಾಡೆಮಿ, ಹಾಗೂ ಗಾನಕಲಾಭೂಷಣ ವಿ. ವೀರಭದ್ರಯ್ಯನವರ ಕುಟುಂಬದ ಸಹಯೋಗದಲ್ಲಿ ಸೆಪ್ಟೆಂಬರ್‌ 9 ಮತ್ತು 10ರಂದು ಜಯನಗರದಲ್ಲಿ ʼಗಾನಕಲಾಭೂಷಣ ಎ. ವೀರಭದ್ರಯ್ಯನವರ ಶತಮಾನೋತ್ಸವʼ (A Veerabhadrayya) ಆಯೋಜಿಸಲಾಗಿದೆ.

ಜಯನಗರದ 8ನೇ ಹಂತದ 1ನೇ ಮುಖ್ಯರಸ್ತೆಯ 40ನೇ ಅಡ್ಡ ರಸ್ತೆಯ ಜಯರಾಮ ಸೇವಾ ಮಂಡಳಿಯಲ್ಲಿ ಸಮಾರಂಭ ನಡೆಯಲಿದ್ದು, ಈ ವೇಳೆ ಶಾಸ್ತ್ರೀಯ ಸಂಗೀತ, ಗೀತೆ ಗಾಯನ ಕಾರ್ಯಕ್ರಮಗಳು ನಡೆಯಲಿವೆ. ಸೆ. 9ರಂದು ಶನಿವಾರ ಸಂಜೆ 4.30ಕ್ಕೆ ಸಮಾರಂಭವನ್ನು ಸಂಗೀತ ಕಲಾರತ್ನ ಎ.ವಿ.ಆನಂದ್‌ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಾನ ಕಲಾಭೂಷಣ ಪ್ರೊ. ಡಾ. ನಾಗಮಣಿ ಶ್ರೀನಾಥ್, ಗಾನಕಲಾಶ್ರೀ ಎಚ್‌.ಕೆ. ವೆಂಕಟರಾಮ್‌ ಭಾಗವಹಿಸಲಿದ್ದಾರೆ. ಸಂಜೆ 6.15ರಿಂದ 7.15ರವರೆಗೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 7.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಆಧಾರಿತ ಚಲನಚಿತ್ರ ಗೀತೆ ಗಾಯನ ಕಾರ್ಯಕ್ರಮ ನೆರವೇರಲಿದೆ.

ಇದನ್ನೂ ಓದಿ | ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!

ಅದೇ ರೀತಿ ಸೆ.10ರಂದು ಭಾನುವಾರ ಬೆಳಗ್ಗೆ 10 ಗಂಟೆ, 11 ಗಂಟೆ ಹಾಗೂ ಮಧ್ಯಾಹ್ನ 12ಗಂಟೆಗೆ ಖ್ಯಾತ ಕಲಾವರಿದರು ಪ್ರತ್ಯೇಕ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 40 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇಳೆ ಹಿರಿಯ ಪಿಟೀಲು ವಾದಕರಾದ ಗಾನಕಲಾಭೂಷಣ ಎಸ್‌.ಶೇಷಗಿರಿರಾವ್‌ ಹಾಗೂ ಸಿ.ನಟರಾಜನ್ ಅವರನ್ನು ಸನ್ಮಾನಿಸಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಗಾನಕಲಾಭೂಷಣ ಡಾ. ಆರ್. ಕೆ. ಪದ್ಮನಾಭ, ಕರ್ನಾಟಕ ಕಲಾಶ್ರೀ ಡಿ.ಬಿ.ನಾಗರಾಜ್‌, ಡಾ. ಅನನ್ಯ ರಾಘವೇಂದ್ರ ಉಪಸ್ಥಿತರಿರಲಿದ್ದಾರೆ. ನಂತರ ಲಯಲಹರಿ ತಂಡದಿಂದ ತಾಳವಾದ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಗಾನಕಲಾಭೂಷಣ ವಿ. ವೀರಭದ್ರಯ್ಯ ಸಂಕ್ಷಿಪ್ತ ಪರಿಚಯ

ಗಾನಕಲಾಭೂಷಣ ವಿ. ವೀರಭದ್ರಯ್ಯ ಅವರು ಹಾರ್ಮೋನಿಯಂ ವಾದಕ ಅರುಣಾಚಲಪ್ಪ ಮತ್ತು ಅನ್ನಪೂರ್ಣಮ್ಮ ದಂಪತಿ ಪುತ್ರರಾಗಿ 1923ರ ಡಿಸೆಂಬರ್‌ 4ರಂದು ಜನಿಸಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಪದವೀಧರರಾಗಿದ್ದಾರೆ.

ಸಂಗೀತಾಭ್ಯಾಸ: ಸಂಗೀತ ಕಲಾ ಮನೆತನದಲ್ಲಿ ಜನಿಸಿದ ಇವರು ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿ ಹಿರಿಯ ವಿದ್ವಾಂಸರಾದ ನಾರಾಯಣಸ್ವಾಮಿ ಭಾಗವತರಲ್ಲಿ ಪಿಟೀಲು ಅಭ್ಯಾಸ ಮಾಡಿ, ಅತ್ಯಂತ ಜನಪ್ರಿಯತೆಯನ್ನು ಗಳಿಸಿದರು. ಗುರುಗಳ ಕಚೇರಿಯಲ್ಲಿ ಸಹವಾದಕರಾಗಿ ನುಡಿಸುತ್ತಿದ್ದರು. ತಂದೆ ಅರುಣಾಚಲಪ್ಪ ಹಾಗೂ ಗಾನಸುಧಾಕರ ಎ. ಸುಬ್ಬರಾಯರ ಜತೆ ಸಹಸ್ರಾರು ಸಂಗೀತ ಕಛೇರಿಗಳನ್ನು ನೀಡಿದ್ದರು. ತಮ್ಮ ಗುರುಬಂಧುಗಳಾದ ವಿದ್ವಾನ್ ಎಚ್. ವಿ ಕೃಷ್ಣಮೂರ್ತಿ ಹಾಗೂ ವಿದ್ವಾನ್‌ ಆನೂರು ಎಸ್. ರಾಮಕೃಷ್ಣರವರೊಂದಿಗೆ ಭಾರತಾದದ್ಯಂತ ಅನೇಕ ಸಭೆಗಳಲ್ಲಿ ಪಿಟೀಲು ತ್ರಯ ಕಾರ್ಯಕ್ರಮಗಳನ್ನು ನೀಡಿದ್ದರು. ಅಷ್ಟೇ ಅಲ್ಲದೆ ನಮ್ಮ ನಾಡಿನ ಮತ್ತು ಹೊರ ನಾಡಿನ ಅನೇಕ ವಿದ್ವಾಂಸರ ಸಂಗೀತ ಕಚೇರಿಗಳಿಗೆ ಪಿಟೀಲು ಸಹಕಾರ ನೀಡಿದ್ದರು.

ತಂದೆಯವರು ಸ್ಥಾಪಿಸಿ ಬೆಳೆಸಿದ ಸಂಗೀತ ಕಲಾವಾದ್ಯಗಳ ತಯಾರಿಕಾ ಘಟಕವಾದ “ಅರುಣಾ ಮ್ಯೂಸಿಕಲ್ಸ್” ಅನ್ನು ಭಾರತದ ಕಲಾಭಿಮಾನಿಗಳ ಗಮನ ಸೆಳೆಯುವಂತೆ ಕಾರ್ಯನಿರ್ವಹಿಸಿದರು. ವಿಜಯ ಸಂಗೀತ ಶಾಲೆಯ ಸ್ಥಾಪಕ ಕಾರ್ಯದರ್ಶಿಗಳಾಗಿ ಹಾಗೂ ವಾಣಿ ಸಂಗೀತ ವಿದ್ಯಾಲಯದ ಅಧ್ಯಕ್ಷರಾಗಿ ಅನೇಕ ಶಿಷ್ಯರಿಗೆ ಸಂಗೀತ ಪಾಠ ಹೇಳಿಕೊಟ್ಟ ಹಿರಿಮೆ ಇವರಿಗೆ ಸಲ್ಲುತ್ತದೆ.

ವಾದ್ಯ ನಿರ್ಮಾಣದಲ್ಲಿ ಕ್ರಾಂತಿಕಾರಿಯಾದ ಫೈಬರ್ ಗ್ಲಾಸ್ ಕೊಡದ ವೀಣೆ ಮತ್ತು ತಂಬೂರಿ ತಯಾರಿಕೆ, ಎಲ್ಲಾ ಸಂಗೀತಗಾರರಿಗೂ ಅವಶ್ಯವಾದ “ಪಿಚ್ ಪೈಪ್” ಗಳನ್ನೂ ಪ್ರಪ್ರಥಮಬಾರಿಗೆ ಭಾರತದಲ್ಲಿ ತಯಾರಿಸಿದ ಹೆಗ್ಗಳಿಕೆ ಇವರದ್ದು. ತಂತಿಗಳನ್ನು ಜರ್ಮನ್ ದೇಶದಿಂದ ತರಿಸುತ್ತಿದ್ದರು, ಹಾಗಾಗಿ ಇವರನ್ನು “ಕಿಂಗ್ ಆಫ್ ಸ್ಪ್ರಿಂಗ್ಸ್’ ಎಂದು ಕರೆಯುತ್ತಿದ್ದರು. ಕರ್ನಾಟಕ ಗಾನಕಲಾಪರಿಷತ್ತಿನ ಸ್ಥಾಪಕ ಸದಸ್ಯರಾಗಿ ಅನೇಕ ವರ್ಷಗಳು ಕಲಾಸೇವೆ ಸಲ್ಲಿಸಿ, 20ನೇಯ ಸಂಗೀತ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಗಾನಕಲಾಭೂಷಣ ಬಿರುದನ್ನು ಪಡೆದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಕೃಷ್ಣ ಮತ್ತು ಕೃಷ್ಣಾ ಸಂಬಂಧವೇ ಮಹಾಭಾರತದ ಪಂಚಾಂಗ; ದ್ರೌಪದಿ ಕಟ್ಟಿದ ಸೆರಗಿನ ತುಂಡೇ ರಕ್ಷಾಬಂಧನ!

ಸಂಗೀತ ಕಲಾವಿಶಾರದ, ಗಾನಕಲಾಪ್ರಪೂರ್ಣ, ನಾದಗಂಭೀರ, ಗಾನಕಲಾಪ್ರವೀಣ, ನಾದಚಿಂತಾಮಣಿ, ಗಾಯನ ಲಯ ಸಾಮ್ರಾಟ್, ಸಂಗೀತನಾದ ಕಲಾವಿತಂಸ, ಧನುರ್ವೀಣಾ ಕಲಾಭೂಷಣ, ಚಂದ್ರಹಾಸ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಹೀಗೆ ಅನೇಕ ಬಿರುದು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಹೀಗೆ ತಮ್ಮ ಇಡೀ ಜೀವನವನ್ನೇ ಸಂಗೀತ ಲೋಕಕ್ಕೆ ಸಮರ್ಪಿಸಿಕೊಂಡ ಮಹಾ ಚೇತನ ಎ. ವೀರಭದ್ರಯ್ಯನವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

KEA: ನಾಳೆ ಕನ್ನಡ ಕಡ್ಡಾಯ ಪರೀಕ್ಷೆ; ಅ.27ಕ್ಕೆ ಬಿಗಿ ಬಂದೋಬಸ್ತ್ ನಡೆಯಲಿದೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ

KEA : ಕನ್ನಡ ಕಡ್ಡಾಯ ಪರೀಕ್ಷೆ ಅ.26ಕ್ಕೆ, ಅ.27ಕ್ಕೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ನಡೆಯಲಿದೆ.

VISTARANEWS.COM


on

By

kea
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಯ ಒಂದು ಸಾವಿರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅ.27ರಂದು ಮುಖ್ಯ ಪರೀಕ್ಷೆ ನಡೆಸುತ್ತಿದ್ದು ಸಕಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಂಡಿದೆ.

ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ ಸುಮಾರು 63 ಸಾವಿರ ಮಂದಿಗೆ ಕನ್ನಡ ಕಡ್ಡಾಯ ಪರೀಕ್ಷೆ, ಅ.26ಕ್ಕೆ ರಾಜ್ಯದ 153 ಕೇಂದ್ರಗಳಲ್ಲಿ ನಡೆಯಲಿದೆ. ಇದರಲ್ಲಿ ಜಿಟಿಟಿಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 2,300 ಮಂದಿಯೂ ಸೇರಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ತಿಳಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಮುಖ್ಯ ಪರೀಕ್ಷೆ ಅ.27ರಂದು ನಡೆಯಲಿದ್ದು, ಅದನ್ನು ಬರೆಯಲು 4.8 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಈ ಸಲುವಾಗಿ 1,173 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದರು. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ವಸ್ತ್ರ ಸಂಹಿತೆ ಕೂಡ ಇದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಓಎಂಆರ್ ನೋಂದಣಿ ಎಚ್ಚರ

ಸೆ.26ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಓಎಂಆರ್ ಶೀಟ್ ನಲ್ಲಿ ನೋಂದಣಿ ಸಂಖ್ಯೆ‌ ಮತ್ತು ವರ್ಶನ್ ಕೋಡ್ ನಮೂದಿಸುವಾಗ ಸುಮಾರು ಒಂಬತ್ತು ಸಾವಿರ ಮಂದಿ ತಪ್ಪು ಮಾಡಿದ್ದು ಪುನಃ ಆ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಅಭ್ಯಾಸ ಸಲುವಾಗಿ ಈ ಬಾರಿ ಮಾದರಿ ಓಎಂಆರ್ ಶೀಟ್ ನೀಡಲಾಗಿತ್ತು. ಸರಿಯಾಗಿ ಅಭ್ಯಾಸ ಮಾಡಿಕೊಂಡು ಬನ್ನಿ. ಪುನಃ ತಪ್ಪು ಗಳಾದರೆ ಅದಕ್ಕೆ ಪ್ರಾಧಿಕಾರ ಜವಾಬ್ದಾರಿಯಲ್ಲ.‌ ಮಾದರಿ ಓಎಂಆರ್ ಶೀಟ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಬೇಡ ಎಂದೂ‌ ಅವರು ಸಲಹೆ ನೀಡಿದ್ದಾರೆ.

Continue Reading

ತುಮಕೂರು

Spider detection : ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆ

Spider detection : ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಸಂಶೋದಕರು ಜೇಡಕ್ಕೆ ಸ್ಥಳೀಯ ಹೆಸರನ್ನೇ ನಾಮಕರಣ ಮಾಡಿದ್ದು, “ತೆಂಕಣ ಜಯಮಂಗಲಿ” ಜೇಡ ಎಂಬ ಹೆಸರಿಟ್ಟಿದ್ದಾರೆ.

VISTARANEWS.COM


on

By

Spider detection A new species of spider found on the banks of Jayamangali river
Koo

ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ (Spider detection) ಪತ್ತೆಯಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಸಂಶೋಧನೆ ವೇಳೆ ಹೊಸ ಪ್ರಭೇದ ಜೇಡ ಪತ್ತೆಯಾಗಿತ್ತು. ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಪತ್ತೆಯಾಗಿತ್ತು. ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ ಮೊದಲಿಗೆ 2023ರ ಏಪ್ರಿಲ್ ತಿಂಗಳಿನಲ್ಲಿ ಪತ್ತೆ ಹಚ್ಚಿತ್ತು. ಸಂಶೋದಕರು ಜೇಡಕ್ಕೆ ಸ್ಥಳೀಯ ಹೆಸರನ್ನೇ ನಾಮಕರಣ ಮಾಡಿದ್ದರು. “ತೆಂಕಣ ಜಯಮಂಗಲಿ” ಜೇಡ ಎಂಬ ಹೆಸರಿಟ್ಟಿದ್ದರು.

Spider detection A new species of spider found on the banks of Jayamangali river

ಪ್ರಭೇದವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದಾಗಿದೆ. ದೇವರಾಯನ ದುರ್ಗ ಕೇವಲ ಪುಣ್ಯ ಕ್ಷೇತ್ರವಷ್ಟೆ ಅಲ್ಲದೆ ಜೀವವೈವಿದ್ಯತೆಯ ತಾಣ ಎಂದು ಸಂಶೋಧಕ ಲೋಹಿತ್ ತಿಳಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಲಾನ ಕೇಂದ್ರ ಮತ್ತು ಯೂನಿವರ್ಸಿಟಿ ಆಪ್ ಬ್ರಿಟೀಷ್ ಕೊಲಾಂಬಿಯಾ ಲ್ಯಾಬ್ ನ ಸಹಯೊಗದೊಂದಿಗೆ ಹೊಸ ಪ್ರಭೇದ ಗುರುತಿಸುವಿಕೆ ಕಾರ್ಯ ನಡೆದಿದೆ.

Spider detection A new species of spider found on the banks of Jayamangali river

ತುಮಕೂರಿನ ದೇವರಾಯನದುರ್ಗದ ಹೊಸ ಜೇಡ ಪ್ರಬೇಧವನ್ನು ಜಯಮಂಗಲಿ ನದಿಯ ಹೆಸರಿನಲ್ಲಿ ಪರಿಚಯಿಸಲಾಗುತ್ತಿದೆ. ಚಿನ್ಮಯ್ ಸಿ ಮಳಿಯೆ, ಲೋಹಿತ್ ವೈ ಟಿ ಮತ್ತು ವೈಲ್ಡ್ ಲೈಫ್ ಅವವೇರ್ನೆಸ್ ನೇಚರ್ ಕ್ಲಬ್ಬಿನ ನಿಶಾ ಬಿ ಜಿ ಕಾಡಿನ ಹುಡುಕಾಟಗಳಲ್ಲಿ ಈ ಜೇಡವು ಸಿಕ್ಕಿದ್ದು ಮತ್ತು ಮೊದಲು ಕಂಡಿದ್ದು ದೇವರಾಯನದುರ್ಗದ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ, ಏಪ್ರಿಲ್ 2023 ರಲ್ಲಿ.

ಒಂದೂವರೆ ವರ್ಷಗಳ ಹಿಂದೆ ಶುರುವಾದ ಈ ಸಂಶೋಧನೆ, ಜೀನಸ್ ಕೂಡ ಹೊಸದಾದ ಕಾರಣ ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಟೆ, ಕೃಷ್ಣಮೇಘ ಕುಂಟೆ ಮತ್ತು ಕೆನಡಾದ ವೈನೆ ಮ್ಯಾಡಿಸನ್ ಕೈ ಜೋಡಿಸಿದರು. ಎನ್ ಸಿ ಬಿ ಎಸ್ ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ಗಳೊಂದಿಗಿನ ಸಹಯೋಗದಲ್ಲಿ ಮೂಡಿಬಂತು.

ದೇವರಾಯನದುರ್ಗ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆ ಹೊಲ ಜಾಗದಿಂದ ಜೇಡದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಂತರಾಷ್ಟ್ರೀಯ ನಿಯತಕಾಲಿಕೆ Zookeys ಈ ಸಂಶೋಧನ ಬರಹವನ್ನು 11 ಅಕ್ಟೋಬರ್ 2024 ರಂದು ಪ್ರಕಟಿಸಿದೆ.

ಪ್ರಬೇಧವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದು, ಅದನ್ನು ತೆಂಕಣ ಎಂದು ಹೆಸರಿಸಿದ್ದೇವೆ. ಎಷ್ಟೋ ಕೀಟ ಜೇಡಗಳಂತ ಜೀವಿಗಳ ಹೆಸರು ಆಂಗ್ಲ/ ಲ್ಯಾಟಿನ್ ಮಯವಾಗಿದ್ದು ಹೇಳಲು ನೆನಪಿಡಲು ಕಷ್ಟ, ಆ ಕಾರಣ ಇದು ತೆಂಕಣ ಜಯಮಂಗಲಿ.

ದೇವರಾಯನದುರ್ಗ ಕಾಡು, ಬೆಟ್ಟ, ನದಿ, ಜಲಮೂಲಗಳು ಜೀವವೈವಿಧ್ಯತೆಯನ್ನು ಪೋಶಿಸುತ್ತ ಸುತ್ತಲಿನ ನಗರ ಹಳ್ಳಿಗಳನ್ನು ಕಾಪಾಡುತ್ತಾ ಬಂದಿದೆ. ಈ ಹೊಸ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಕಾಡಿನ ಕಣಜದಲ್ಲಿ ಇವೆ. ದೇವರಾಯನದುರ್ಗವನ್ನು ಕೇವಲ ಪುಣ್ಯಕ್ಷೇತ್ರ ಅಥವಾ ಪ್ರವಾಸಿ ತಾಣವಾಗಿಯಷ್ಟೇ ನೋಡಲು ಸಾಧ್ಯವಿಲ್ಲ, ಇದು ಜೀವವೈವಿಧ್ಯತೆಯ ತಾಣವೂ ಹೌದು.

Continue Reading

ಬೆಂಗಳೂರು

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Namma Metro : ಸಿಲಿಕಾನ್‌ ಸಿಟಿ ಬೆಂಗಳೂರು ಮಂದಿಗೆ ಮತ್ತೊಂದು ಶಾಕ್‌ ಕಾದಿದೆ. ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯಾಗುವ ಸಾಧ್ಯತೆ ಇದೆ.

VISTARANEWS.COM


on

By

Namma metro ticket prices will be hiked soon
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ಕಂಗಲಾಗಿರುವ ಸಿಟಿ ಮಂದಿಗೆ ಮತ್ತೊಂದು ಬರೆ ಬೀಳಲಿದೆ. ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಮ್ಮ ಮೆಟ್ರೋ‌ (Namma Metro) ಟಿಕೆಟ್ ದರ ಶೇ.15-20ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. 2017ರ ನಂತರ ಇದೀಗ ಮೆಟ್ರೋ ದರ ಏರಿಕೆಗೆ ತೀರ್ಮಾನ ಮಾಡಲಾಗಿದೆ.

ಎಷ್ಟು ದರ ಏರಿಕೆ ಮಾಡಬೇಕೆಂದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಸಾರ್ವಜನಿಕರನೊಳಗೊಂಡ ಕಮಿಟಿ ರಚನೆ ಮಾಡಲಾಗಿದೆ. ಅಧಿಕೃತವಾಗಿ ಬಿಎಂಆರ್‌ಸಿಎಲ್ ಜಾಹೀರಾತು ನೀಡಿದೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಹಾಲಿ ನಮ್ಮ ಮೆಟ್ರೋದ ಟಿಕೆಟ್ ದರ ಕನಿಷ್ಠ ದರ 10 ರೂ. ಆಗಿದ್ದು, ಗರಿಷ್ಠ ದರ 60 ರೂ. ಆಗಿದೆ. ಈಗ 15 ರಿಂದ 20 ರಷ್ಟು ಟಿಕೆಟ್ ದರ ಏರಿಕೆ ಆಗಿದೆ. ಮುಂದಿನ ತಿಂಗಳಿಂದ ಹೊಸ ದರ ಜಾರಿ ಆಗಲಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್ ಪ್ರತಿಕ್ರಿಯಿಸಿದ್ದಾರೆ.

ದರ ಏರಿಕೆ ಬಗ್ಗೆ ಕಮಿಟಿ ಆಗಿದ್ದು, ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಮಾಡಲಾಗುತ್ತದೆ. ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ಇದಾಗಿದೆ. ಕಮಿಟಿಯು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿದೆ. ನಮ್ಮ ಖರ್ಚು- ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.ಇದರಿಂದಾಗಿ ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ ಎದುರಾಗಲಿದೆ.

VISTARANEWS.COM


on

By

Power cut off due to a technical problem in the transformer Bengaluru faces water crisis today
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಇಂದು ಗುರುವಾರ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ (Water supply) ಎದುರಾಗಲಿದೆ. ನಿನ್ನೆ ಬುಧವಾರ ಸುರಿದ ಮಳೆಗೆ ಹಾರೋಹಳ್ಳಿ ಹಾಗೂ ಟಿ.ಕೆ ಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಆಗಿದೆ. ಟ್ರಾನ್ಸಫಾರ್ಮರ್‌ಗಳಲ್ಲಿ ತಾಂತ್ರಿಕ ಸಮಸ್ಯೆ, ವಿದ್ಯುತ್ ಸಂಪರ್ಕ ಕಡಿತ ಉಂಟಾಗಿದೆ. ಹೀಗಾಗಿ ಪಂಪಿಂಗ್ ಸ್ಟೇಷನ್‌ಗಳಿಗೆ ವಿದ್ಯುತ್ ಸಂಪರ್ಕ‌ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಇಲ್ಲದೆ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಕೆಪಿಟಿಸಿಎಲ್ ಕಡೆಯಿಂದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ ಮರುಸ್ಥಾಪನೆಯವರೆಗೂ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.

ಬೆಸ್ಕಾಂ ಆನ್‌ಲೈನ್‌ ಸೇವೆ ಸ್ಥಗಿತ!

ಅಕ್ಟೋಬರ್ 5, 6ಕ್ಕೆ ಬೆಸ್ಕಾಂ ಸಾಫ್ಟ್‌ವೇರ್‌ ಉನ್ನತೀಕರಣ ಹಿನ್ನೆಲೆಯಲ್ಲಿ ಆನ್‌ಲೈನ್‌ ಸೇವೆ ಅಲಭ್ಯವಾಗಿರಲಿದೆ. ಅಕ್ಟೋಬರ್ 4ರ ರಾತ್ರಿ 9 ರಿಂದ 7ರ ಬೆಳಗ್ಗೆ 6 ಗಂಟೆವರೆಗೂ ಅಪ್ಲಿಕೇಶನ್‌ ಡೌನ್‌ಟೈಮ್ ನಿಗದಿ ಮಾಡಲಾಗಿದೆ. ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎನ್ನಲಾಗಿದೆ. ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯಕ್ಕೆ ಮುಂದಾಗಿದೆ.

ಸ್ಥಗಿತದ ಸಮಯದಲ್ಲಿ ಈ ಸೇವೆಗಳು ಅಲಭ್ಯ:

-ಹೊಸ ಸಂಪರ್ಕಗಳ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆಗಳು, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ ‘ಆರ್‌ಎಪಿಡಿಆರ್‌ಪಿ’ ಅಪ್ಲಿಕೇಶನ್‌ ಲಭ್ಯವಿರುವುದಿಲ್ಲ.

-ಬೆಸ್ಕಾಂ ಕ್ಯಾಶ್ ಕೌಂಟರ್‌ಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.

-ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಲಭ್ಯವಿರುವುದಿಲ್ಲ.

-ಗ್ರಾಹಕ ಪೋರ್ಟಲ್ ಮತ್ತು ಥರ್ಡ್ ಪಾರ್ಟಿ ಪಾವತಿ ಚಾನಲ್‌ಗಳ ಮೂಲಕ ಆನ್‌ಲೈನ್ ಬಿಲ್ ಪಾವತಿಗಳು ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 5ರ ಬೆಳಗ್ಗೆ 11ರವರೆಗೆ ಲಭ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ಬಿಲ್ ಪಾವತಿ ಕಾರ್ಯವನ್ನು ಮಾತ್ರ ಪುನರಾರಂಭಿಸಲಾಗುತ್ತದೆ.

-ಆರ್‌ಎಪಿಡಿಆರ್‌ಪಿ’ ಸೇವೆ ಇಲ್ಲದ ಕಾರಣ, ಮೊಬೈಲ್ ಅಪ್ಲಿಕೇಶನ್‌ಗಳ‌ ಸೇವೆಯೂ ಅಲಭ್ಯ.

-ಡಬ್ಲ್ಯುಎಎಂಎಸ್ ಮೂಲಕ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ.

    ಯಾವ ನಗರಗಳಲ್ಲಿ ಆನ್‌ಲೈನ್ ಸೇವೆ ಇರುವುದಿಲ್ಲ?

    ಬೆಸ್ಕಾಂ: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು,ತಿಪಟೂರು ಹಾಗೂ ಗೌರಿಬಿದನೂರು.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading
    Advertisement
    Kodava Family Hockey Tournament Website Launched
    ಕೊಡಗು1 ತಿಂಗಳು ago

    Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

    Bengaluru News
    ಬೆಂಗಳೂರು1 ತಿಂಗಳು ago

    Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

    Dina Bhavishya
    ಭವಿಷ್ಯ1 ತಿಂಗಳು ago

    Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

    Gadag News Father commits suicide by throwing three children into river
    ಗದಗ1 ತಿಂಗಳು ago

    Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

    Dina Bhavishya
    ಭವಿಷ್ಯ1 ತಿಂಗಳು ago

    Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

    Dina Bhavishya
    ಭವಿಷ್ಯ1 ತಿಂಗಳು ago

    Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

    Bengaluru airport
    ಬೆಂಗಳೂರು1 ತಿಂಗಳು ago

    Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

    Dina Bhavishya
    ಭವಿಷ್ಯ1 ತಿಂಗಳು ago

    Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

    Dina Bhavishya
    ಭವಿಷ್ಯ1 ತಿಂಗಳು ago

    Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

    dina bhavishya read your daily horoscope predictions for november 4 2024
    ಭವಿಷ್ಯ2 ತಿಂಗಳುಗಳು ago

    Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

    galipata neetu
    ಕಿರುತೆರೆ1 ವರ್ಷ ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ1 ವರ್ಷ ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Sharmitha Gowda in bikini
    ಕಿರುತೆರೆ1 ವರ್ಷ ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Bigg Boss- Saregamapa 20 average TRP
    ಕಿರುತೆರೆ1 ವರ್ಷ ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ1 ವರ್ಷ ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ1 ವರ್ಷ ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    Kannada Serials
    ಕಿರುತೆರೆ1 ವರ್ಷ ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    varun
    ಕಿರುತೆರೆ1 ವರ್ಷ ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Action Prince Dhruva Sarja much awaited film Martin to hit the screens on October 11
    ಸಿನಿಮಾ3 ತಿಂಗಳುಗಳು ago

    Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

    Sudeep's birthday location shift
    ಸ್ಯಾಂಡಲ್ ವುಡ್4 ತಿಂಗಳುಗಳು ago

    Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

    Actor Darshan
    ಸ್ಯಾಂಡಲ್ ವುಡ್4 ತಿಂಗಳುಗಳು ago

    Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

    ಮಳೆ4 ತಿಂಗಳುಗಳು ago

    Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

    karnataka Weather Forecast
    ಮಳೆ4 ತಿಂಗಳುಗಳು ago

    Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

    Bellary news
    ಬಳ್ಳಾರಿ4 ತಿಂಗಳುಗಳು ago

    Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

    Maravoor bridge in danger Vehicular traffic suspended
    ದಕ್ಷಿಣ ಕನ್ನಡ4 ತಿಂಗಳುಗಳು ago

    Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

    Wild Animals Attack
    ಚಿಕ್ಕಮಗಳೂರು5 ತಿಂಗಳುಗಳು ago

    Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

    Karnataka Weather Forecast
    ಮಳೆ5 ತಿಂಗಳುಗಳು ago

    Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

    assault case
    ಬೆಳಗಾವಿ5 ತಿಂಗಳುಗಳು ago

    Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

    ಟ್ರೆಂಡಿಂಗ್‌