Stop Tobacco App is used for to stop public smoking in bengaluru Stop Tobacco App: ಸಾರ್ವಜನಿಕ ಸ್ಮೋಕಿಂಗ್ ಮೇಲೆ 'ಸ್ಟಾಪ್ ಟಬ್ಯಾಕೋ' ನಿಗಾ, ಆ್ಯಪ್ ಬಳಸಿ ದೂರು ನೀಡಿ - Vistara News Stop Tobacco App: ಸಾರ್ವಜನಿಕ ಸ್ಮೋಕಿಂಗ್ ಮೇಲೆ 'ಸ್ಟಾಪ್ ಟಬ್ಯಾಕೋ' ನಿಗಾ, ಆ್ಯಪ್ ಬಳಸಿ ದೂರು ನೀಡಿ

ತಂತ್ರಜ್ಞಾನ

Stop Tobacco App: ಸಾರ್ವಜನಿಕ ಸ್ಮೋಕಿಂಗ್ ಮೇಲೆ ‘ಸ್ಟಾಪ್ ಟಬ್ಯಾಕೋ’ ನಿಗಾ, ಆ್ಯಪ್ ಬಳಸಿ ದೂರು ನೀಡಿ

Stop Tobacco app: ಧೂಮಪಾನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಸ್ಮೋಕಿಂಗ್ (Smoking) ನಿಯಂತ್ರಣಕ್ಕಾಗಿ ಕಾನೂನು ಜಾರಿ ಮಾಡಲಾಗಿದೆ. ಸಾರ್ವಜನಿಕ ಸ್ಮೋಕಿಂಗ್ ನಿಷೇಧಿಸಲಾಗಿದೆ. ಹೀಗಿದ್ದೂ, ಈ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ. ಈಗ ಸ್ಟಾಪ್ ಟಬ್ಯಾಕೋ ಆ್ಯಪ್ ಮೂಲಕ ಸ್ಮೋಕಿಂಗ್ ಕುರಿತು ದೂರು ನೀಡಬಹುದು.

VISTARANEWS.COM


on

Stop Tobacco App is used for to stop public smoking in bengaluru
ಸಾಂದರ್ಭಿಕ ಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು, ಕರ್ನಾಟಕ: ಸಾರ್ವಜನಿಕ ಹಿತಾಸಕ್ತಿಗಾಗಿ ಸರ್ಕಾರವು ಅನೇಕ ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ‘ಸ್ಟಾಪ್ ಟಬ್ಯಾಕೋ'(Stop Tobacco) ಗಮನ ಸೆಳೆಯುತ್ತಿದೆ. ಸಾರ್ಜನಿಕ ಸ್ಥಳಗಳಲ್ಲಿ ಧೂಮಪಾನ (Smoking) ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಮಾಡುವುದರಿಂದ ಅದರ ದುಷ್ಪರಿಣಾಮ ಇತರರಿಗೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ. ಹೀಗಿದ್ದೂ, ಈ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ. ಎಲ್ಲೆಂದರಲ್ಲಿ ಜನರು ಸ್ಮೋಕ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಸ್ಟಾಪ್ ಟಬ್ಯಾಕೋ ಲಾಂಚ್ ಮಾಡಲಾಗಿದೆ. ಈ ಆ್ಯಪ್‌ನಲ್ಲಿ ದೂರುಗಳು ದಾಖಲಾಗುತ್ತಿವೆ.

ಫೆಬ್ರವರಿ 28ರಂದು ಈ ಆ್ಯಪ್ ಲಾಂಚ್ ಮಾಡಲಾಗಿದೆ. ಈವರೆಗೆ 50 ದೂರುಗಳು ದಾಖಲಾಗಿವೆ. ಸಾರ್ವಜನಿಕ ಸ್ಮೋಕಿಂಗ್ ತಡೆಯಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾಗಿರುವ ರಾಜ್ಯ ತಂಬಾಕು ನಿಯಂತ್ರಣ ಕೋಶ(STCC) ಈ ಆ್ಯಪ್ ಲಾಂಚ್ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಪ್ರವೃತ್ತಿಯನ್ನು ಕಡಿಮೆ ಮಾಡುವುದೇ ಈ ಆ್ಯಪ್ ಬಿಡುಗಡೆಯ ಪ್ರಮುಖ ಉದ್ದೇಶವಾಗಿದೆ.

ಆ್ಯಪ್ ಲಾಂಚ್ ಆದಾಗಿನಿಂದಲೂ ಈವರೆಗೆ 200 ಡೌನ್ಲೋಡ್ ಆಗಿದೆ. ನಿಧಾನವಾಗಿ ಆ್ಯಪ್ ಜನಪ್ರಿಯವಾಗುತ್ತಿದೆ. ಈ ಆ್ಯಪ್ ಮೂಲಕ ದಾಖಲಾಗಿರುವ ದೂರುಗಳನ್ನು ಪರಿಶೀಲಿಸಿ, ಈವರೆಗೆ ಮೂರ್ನಾಲ್ಕು ಜನರ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿದೆ. ವಿಶೇಷವಾಗಿ ಅಂಗಡಿ ಮಾಲೀಕರು ನೋ ಸ್ಮೋಕಿಂಗ್ ಫಲಕ ಪ್ರದರ್ಶನ ಮಾಡಿದೇ ಇದ್ದದ್ದಕ್ಕೆ ಮತ್ತು ಧೂಮಪಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಇಂಥ ಅಂಗಡಿಗಳ ಸುತ್ತ ಮುತ್ತ ಸ್ಮೋಕಿಂಗ್ ಮಾಡುತ್ತಿರುವವರಿಗೆ ದಂಡ ಕೂಡ ವಿಧಿಸಲಾಗಿದೆ. ಬೆಂಗಳೂರಿನ ಗಾಂಧಿನಗರ, ಎಚ್ಎಸ್ಆರ್ ಲೇ ಔಟ್, ಬಾಣಸವಾಡಿ ಪ್ರದೇಶಗಳಿಂದ ಹೆಚ್ಚು ದೂರುಗಳು ದಾಖಲಾಗಿವೆ. ಬೆಳಗಾವಿ ಮತ್ತು ದಕ್ಷಿನ ಕನ್ನಡ ಜಿಲ್ಲೆಗಳಿಂದಲೂ ಪ್ರಕರಣಗಳು ದಾಖಲಾಗಿವೆ ಎಂದು ಸ್ಟೇಟ್ ಟಬ್ಯಾಕೋ ಕಂಟ್ರೋಲ್ ಪ್ರೋಗ್ರಾಮ್ ಮುಖ್ಯಸ್ಥ ಪ್ರಭಾಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Smoking Zone | ಹೋಟೆಲ್​​​, ಬಾರ್‌ & ರೆಸ್ಟೋರೆಂಟ್‌ನಲ್ಲಿ ಸ್ಮೋಕಿಂಗ್ ಜೋನ್ ಕಡ್ಡಾಯ ವಿವಾದ; ಧೂಮಪಾನಕ್ಕೆ ಅವಕಾಶ ಏಕೆ ಎಂಬ ವಾದ

ವಿಶ್ವ ಆರೋಗ್ಯ ಸಂಸ್ಥೆ(WHO)ಯ ಪ್ರಕಾರ, ತಂಬಾಕು ನಿಯಂತ್ರಣ ವಿಷಯದಲ್ಲಿ ಜಗತ್ತಿನಲ್ಲೇ ಬೆಂಗಳೂರು ಅತ್ಯುತ್ತಮ ನಗರವಾಗಿದೆ. ತಂಬಾಕು ಉತ್ಪಾದನೆ ಮತ್ತು ಉತ್ಪನ್ನಗಳ ಸೇವನೆ ತಡೆಗೆ ಅನೇಕ ಕ್ರಮಗಳನ್ನು ಕರ್ನಾಟಕ ಸರ್ಕಾರವು ಕೈಗೊಂಡಿದೆ. ಈ ವಿಷಯದಲ್ಲಿ ಹಲವು ಸಂಘ ಸಂಸ್ಥೆಗಳು ಕೈಗೊಡಿಸಿವೆ. ಜನರಲ್ಲಿ ಧೂಮಪಾನದಿಂದಾಗುವ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದರಿಂದ ಸಾರ್ವಜನಿಕ ಸ್ಮೋಕಿಂಗ್ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Xiaomi EV: ಟೆಕ್ ದೈತ್ಯ ಕಂಪೆನಿ ಚೀನಾದ ಕ್ಸಿಯೋಮಿ (Xiaomi) ಆಟೋ ಉದ್ಯಮವನ್ನು ಪ್ರವೇಶಿಸಿದ್ದು, ಕೇವಲ ಒಂದು ತಿಂಗಳಲ್ಲಿ 75 ಸಾವಿರಕ್ಕೂ ಹೆಚ್ಚು ಆರ್ಡರ್ ಸ್ವೀಕರಿಸಿದೆ. ಕ್ಸಿಯೋಮಿ ಇವಿ ಎಸ್ ಯು7 ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಾಹನ ಮಾರಾಟ ಗುರಿಯನ್ನು ಹೊಂದಿದೆ.

VISTARANEWS.COM


on

By

Xiaomi EV
Koo

ಸ್ಮಾರ್ಟ್‌ಫೋನ್ (smart phone) ತಯಾರಿಕ ಟೆಕ್ ದೈತ್ಯ ಕಂಪನಿ ಚೀನಾದ (china) ಕ್ಸಿಯೋಮಿ (Xiaomi) ಇದೀಗ ಆಟೋ (auto) ಉದ್ಯಮವನ್ನು ಪ್ರವೇಶಿಸಲು ಸಜ್ಜಾಗಿದ್ದು, ಕ್ಸಿಯೋಮಿ ಈ ತಿಂಗಳಲ್ಲಿ ತನ್ನ ಹೊಸ ಎಸ್ ಯು 7 (Xiaomi EV) ಎಲೆಕ್ಟ್ರಿಕ್ ಸೆಡಾನ್‌ಗಾಗಿ 75,723 ಆರ್ಡರ್‌ಗಳನ್ನು ಪಡೆದುಕೊಂಡಿದೆ ಮತ್ತು ಜೂನ್ ವೇಳೆಗೆ 10,000 ಯೂನಿಟ್‌ಗಳನ್ನು ತಲುಪಿಸಲು ಯೋಜನೆ ರೂಪಿಸಿದೆ ಎಂದು ಕ್ಸಿಯೋಮಿ ಸಂಸ್ಥಾಪಕ ಲೀ ಜುನ್ ತಿಳಿಸಿದ್ದಾರೆ.

ಬೀಜಿಂಗ್ (Beijing) ಆಟೋ ಶೋನ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿತರಣೆ ಗುರಿಯು ಎಲೆಕ್ಟ್ರಿಕ್ ವೆಹಿಕಲ್ (EV) ಸ್ಟಾರ್ಟ್‌ಅಪ್‌ಗಾಗಿ ಹೊಸ ದಾಖಲೆಯನ್ನು ಸ್ಥಾಪಿಸುತ್ತದೆ ಎಂದು ಹೇಳಿದರು.

ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆರ್ಡರ್ ಸ್ವೀಕರಿಸಲು ಪ್ರಾರಂಭಿಸಲಾಗಿದ್ದು, ಮರುಪಾವತಿಸಲಾಗದ ಠೇವಣಿಗಳೊಂದಿಗೆ 75,೦೦೦ಕ್ಕೂ ಹೆಚ್ಚು SU7 ನ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಆರ್ಡರ್ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?


ವರ್ಷದಲ್ಲಿ 1 ಲಕ್ಷ ಮಾರಾಟ ಗುರಿ

ಕ್ಸಿಯೋಮಿ ಈ ವರ್ಷ ಎಸ್ ಯು7ಗಾಗಿ 1,00,000ಕ್ಕೂ ಹೆಚ್ಚು ವಿತರಣೆ ಗುರಿಯನ್ನು ಹೊಂದಿದೆ. ಮುಂದಿನ ಮೂರು ವರ್ಷಗಳವರೆಗೆ ಚೀನೀ ಮಾರುಕಟ್ಟೆಯ ಮೇಲೆ ಸ್ಥಿರವಾದ ಬೇಡಿಕೆಯನ್ನು ಉಳಿಸಿಕೊಳ್ಳಲು ಕಂಪನಿ ಉದ್ದೇಶಿಸಿದೆ ಎಂದು ಲೀ ತಿಳಿಸಿದರು.

ಮೇ ಅಂತ್ಯಕ್ಕೆ ಪ್ರೊ ಮಾದರಿ ಪರಿಚಯ

ಬೇಡಿಕೆಯನ್ನು ಪೂರೈಸಲು ಕ್ಸಿಯಾವೋಮಿ SU7ನ ಪ್ರಮಾಣಿತ ಮತ್ತು ಮ್ಯಾಕ್ಸ್ ಆವೃತ್ತಿಗಳ ವಿತರಣೆಯನ್ನು ನಿಗದಿತ ಸಮಯಕ್ಕಿಂತ ಹನ್ನೆರಡು ದಿನಗಳ ಮುಂಚಿತವಾಗಿ ಪೂರ್ಣಗೊಳಿಸಿದೆ. ಮೇ ಅಂತ್ಯದ ವೇಳೆಗೆ ಪ್ರೊ ಮಾದರಿಗಳನ್ನು ಪರಿಚಯಿಸಲು ಕಂಪೆನಿಯು ಯೋಜನೆ ಹಾಕಿಕೊಂಡಿದೆ.

ಬೆಲೆ ಕಡಿತ, ಸಬ್ಸಿಡಿ ಘೋಷಣೆ

ಟೆಸ್ಲಾದ ಮಾಡೆಲ್ 3 ಗೆ ಪೈಪೋಟಿ ನೀಡುವ SU7ನ ಚೀನಾದ ಬೃಹತ್ ವಾಹನ ಮಾರುಕಟ್ಟೆಯಲ್ಲಿ EV ಬೆಲೆಗೆ ಪೈಪೋಟಿ ನೀಡಲಿದೆ. Xiaomi ಮಾರುಕಟ್ಟೆ ಪ್ರವೇಶಕ್ಕೆ ಮುಂಚಿತವಾಗಿಯೇ ವಾಹನ ತಯಾರಕರು ಬೆಲೆ ಕಡಿತ ಮತ್ತು ಸಬ್ಸಿಡಿಗಳನ್ನು ಘೋಷಿಸಿದ್ದಾರೆ.


Xiaomiಯ ತಯಾರಿಕೆಯಲ್ಲಿ 6,000 ಆಟೋ ತಂಡವು ಕಾರ್ಯ ನಿರ್ವಹಿಸುತ್ತಿದ್ದು, ಇದು ಸಾಕಾಗುವುದಿಲ್ಲ. ಕಂಪೆನಿಯ ಶೀಘ್ರದಲ್ಲೇ ಹೊಸ ಪ್ರತಿಭೆಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳಲಿದೆ. ಆಟೋಮೋಟಿವ್ ಕ್ಷೇತ್ರದಲ್ಲಿ ಆಸಕ್ತರಿರುವವರು ಕಂಪೆನಿ ಸೇರಲು ಈ ಸಂದರ್ಭದಲ್ಲಿ ಜಾಗತಿಕ ಪ್ರತಿಭೆಗಳಿಗೆ ಕರೆ ನೀಡಿದರು.

ಟೆಸ್ಲಾಗಿಂತ ಅಗ್ಗ

ಎಸ್ ಯು7 ಅನ್ನು ಸ್ಪೀಡ್ ಅಲ್ಟ್ರಾ 7 ಎಂದೂ ಕರೆಯುತ್ತಾರೆ. ಇದು ಸ್ಪರ್ಧಾತ್ಮಕ ಚೈನೀಸ್ ಇವಿ ಮಾರುಕಟ್ಟೆಯನ್ನು 30,000 ಡಾಲರ್ ಗಿಂತ ಕಡಿಮೆ ಬೆಲೆಯ ಮೂಲ ಮಾದರಿಯೊಂದಿಗೆ ಪ್ರವೇಶಿಸಲಿದೆ. ಇದು ಚೀನಾದಲ್ಲಿ ಟೆಸ್ಲಾ ಮಾದರಿ 3ಕ್ಕಿಂತ ಅಗ್ಗವಾಗಿ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.


5,000 ಉತ್ಪಾದನೆ

Xiaomi ಈಗಾಗಲೇ 5,000 SU7 ವಾಹನಗಳನ್ನು ಉತ್ಪಾದಿಸಿದೆ. ಇದನ್ನು “ಸ್ಥಾಪಕರ ಆವೃತ್ತಿ” ಎಂದು ಕರೆಯಲಾಗುತ್ತದೆ. ವಿಶೇಷ ಆವೃತ್ತಿ, EV ಯ ಸೀಮಿತ ಉತ್ಪಾದನಾ ಆವೃತ್ತಿಯು ಆರಂಭಿಕ ಖರೀದಿದಾರರಿಗೆ ಹೆಚ್ಚುವರಿ ಬಿಡಿಭಾಗಗಳೊಂದಿಗೆ ಬರಲಿದೆ.

SU7 ವಾಹನಗಳ ಆರಂಭಿಕ ಬ್ಯಾಚ್‌ನ ವಿತರಣೆಗಳು ಶೀಘ್ರದಲ್ಲೇ 28 ಚೀನೀ ನಗರಗಳಲ್ಲಿ ಪ್ರಾರಂಭವಾಗಲಿದೆ ಎಂದು ಲೀ ಜುನ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.

Xiaomi SU7 ಆಟೋ ವ್ಯವಹಾರದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗಿದೆ. ಪ್ರಾರಂಭದಲ್ಲಿ ಕಂಪೆನಿ ಸಲ್ಪ ನಷ್ಟ ಅನುಭವಿಸಬೇಕಾಗುತ್ತದೆ. ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. Xiaomi ಗಮನಾರ್ಹ ಪ್ರಮಾಣದ ಹಣವನ್ನು ಕಳೆದುಕೊಳ್ಳುತ್ತಾರೆ. ಯೋಜಿತ ಮಾರಾಟದ ಪರಿಮಾಣದ ಆಧಾರದ ಮೇಲೆ 4.1 ಶತಕೋಟಿ ಯುವಾನ್ ಅಥವಾ ಸುಮಾರು 566.82 ಮಿಲಿಯನ್ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Continue Reading

ದೇಶ

Samsung: ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ 2ನೇ ಆವೃತ್ತಿ ಪ್ರಾರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ

Samsung: ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಜನತೆಯ ಕೌಶಲ್ಯ ಹೆಚ್ಚಿಸಲು ವಿನ್ಯಾಸ ಮಾಡಲಾದ ರಾಷ್ಟ್ರೀಯ ಕೌಶಲ ಕಾರ್ಯಕ್ರಮ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ ನ ಎರಡನೇ ಆವೃತ್ತಿಯನ್ನು ಸ್ಯಾಮ್‌ಸಂಗ್ ಇಂಡಿಯಾ ಪ್ರಾರಂಭಿಸಿದೆ.

VISTARANEWS.COM


on

Samsung India launched the 2nd edition of Samsung Innovation Campus
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ಸ್ಯಾಮ್‌ಸಂಗ್ (Samsung) ಎಐ, ಐಒಟಿ, ಬಿಗ್ ಡೇಟಾ, ಮತ್ತು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಮುಂತಾದ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಜನತೆಯ ಕೌಶಲ ಹೆಚ್ಚಿಸಲು ವಿನ್ಯಾಸ ಮಾಡಲಾದ ತನ್ನ ರಾಷ್ಟ್ರೀಯ ಕೌಶಲ್ಯ ಕಾರ್ಯಕ್ರಮ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ ಎರಡನೇ ಆವೃತ್ತಿಯನ್ನು ಪ್ರಾರಂಭಿಸಿದೆ.

ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮವು 18-25 ವರ್ಷ ವಯಸ್ಸಿನ ಯುವಜನತೆಗೆ ಭವಿಷ್ಯದ ತಂತ್ರಜ್ಞಾನಗಳ ಕೌಶಲ ಒದಗಿಸುವ ಮತ್ತು ಆ ಮೂಲಕ ಅವರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಯುವಜನತೆಗೆ ಸರಿಯಾದ ಅವಕಾಶಗಳನ್ನು ಸೃಷ್ಟಿ ಮಾಡಲು ರೂಪಿಸಲಾಗಿರುವ ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳನ್ನು ಬೆಂಬಲಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

ಭಾರತದಾದ್ಯಂತ ಇರುವ 3,500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ತಿಳುವಳಿಕೆ ಒಪ್ಪಂದಕ್ಕೆ ಈ ವಾರದ ಆರಂಭದಲ್ಲಿ ಸ್ಯಾಮ್‌ಸಂಗ್ ಮತ್ತು ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ (ಇಎಸ್‌ಎಸ್‌ಸಿಐ) ನಡುವೆ ಸಹಿ ಮಾಡಲಾಗಿದೆ.

ಈ ವರ್ಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ಒದಗಿಸುವುದರ ಜತೆಗೆ ಇನ್ನೂ ಹೆಚ್ಚಿನ ಆಸಕ್ತಿಕರ ಅಂಶಗಳು ಸೇರ್ಪಡೆಗೊಂಡಿವೆ. ಪ್ರತಿ ಕ್ಷೇತ್ರದಲ್ಲಿ ರಾಷ್ಟ್ರೀಯ ಟಾಪರ್‌ ಸ್ಥಾನ ಪಡೆಯುವವರು ದೆಹಲಿ/ಎನ್‌ಸಿಆರ್‌ನಲ್ಲಿರುವ ಸ್ಯಾಮ್‌ಸಂಗ್ ಘಟಕಗಳಿಗೆ ಭೇಟಿ ನೀಡುವ ಅವಕಾಶ ಪಡೆಯುತ್ತಾರೆ. ಜತೆಗೆ ರೂ. 1 ಲಕ್ಷದ ನಗದು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಘಟಕಗಳಿಗೆ ಭೇಟಿ ನೀಡುವ ವಿದ್ಯಾರ್ಥಿಗಳು ಸ್ಯಾಮ್‌ಸಂಗ್‌ನ ನಾಯಕತ್ವದ ತಂಡಗಳೊಂದಿಗೆ ಸಂವಹನ ನಡೆಸುವ ಮತ್ತು ಅವರಿಂದ ಮಾರ್ಗದರ್ಶನ ಪಡೆಯುವ ಅವಕಾಶ ಹೊಂದಲಿದ್ದಾರೆ. ರಾಷ್ಟ್ರ ಮಟ್ಟದ ಕೋರ್ಸ್ ಟಾಪರ್‌ಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ವಾಚ್‌ಗಳಂತಹ ಅತ್ಯಾಕರ್ಷಕ ಸ್ಯಾಮ್‌ಸಂಗ್ ಉತ್ಪನ್ನಗಳನ್ನು ಸಹ ಪಡೆಯಲಿದ್ದಾರೆ.

ಈ ಕುರಿತು ಮಾತನಾಡಿದ ಸ್ಯಾಮ್‌ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್, ಸ್ಯಾಮ್‌ಸಂಗ್ ಭಾರತದಲ್ಲಿ ಕಳೆದ 28 ವರ್ಷಗಳಿಂದ ತನ್ನ ಅಸ್ತಿತ್ವ ಹೊಂದಿದ್ದು, ಈ ಎಲ್ಲಾ ವರ್ಷಗಳಲ್ಲಿ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿದೆ. ನಮ್ಮ ದೃಷ್ಟಿಕೋನವು ಯುವಜನರಿಗೆ ಕೌಶಲ್ಯ ಒದಗಿಸುವ ಮತ್ತು ಅವರಿಗೆ ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನು ಒದಗಿಸಿ ಅವರನ್ನು ಸಬಲೀಕರಣಗೊಳಿಸುವ ಭಾರತ ಸರ್ಕಾರದ ಉದ್ದೇಶಗಳೊಂದಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.

ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ ಮೂಲಕ, ನಾವು ಯುವಜನತೆಯ ಕೌಶಲ್ಯವನ್ನು ವೃದ್ಧಿಸುವ ಕೌಶಲ್ಯ ಆಧಾರಿತ ಕಲಿಕೆಯ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ. ಅದರಿಂದ ಯುವಕರು ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ ಮತ್ತು ಅರ್ಥಪೂರ್ಣ ಬದಲಾವಣೆ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

ಇಎಸ್‌ಎಸ್‌ಸಿಐ ಸಂಸ್ಥೆಯು ಕೌಶಲಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಉದ್ಯಮ ಸಂಘಗಳಿಂದ ಉತ್ತೇಜಿಸಲ್ಪಟ್ಟ ರಾಷ್ಟ್ರೀಯ ಮಟ್ಟದ ಕೌಶಲ ಒದಗಿಸುವ ಸಂಸ್ಥೆಯಾಗಿದೆ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಅಡಿಯಲ್ಲಿ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ವಲಯ ಕೌಶಲ್ಯ ಮಂಡಳಿ) ಆಗಿ ಕಾರ್ಯನಿರ್ವಹಿಸುತ್ತದೆ. ಇದು ತನ್ನ ರಾಷ್ಟ್ರವ್ಯಾಪಿ ಇರುವ ಅನುಮೋದಿತ ತರಬೇತಿ ಮತ್ತು ಶಿಕ್ಷಣ ಪಾಲುದಾರರ ನೆಟ್‌ವರ್ಕ್ ಮೂಲಕ ಸ್ಥಳೀಯ ಮಟ್ಟದಲ್ಲಿ ತರಬೇತಿಯನ್ನು ನೀಡುತ್ತದೆ. ಇಎಸ್‌ಎಸ್‌ಸಿಐ ಸಂಸ್ಥೆಯು ಭಾರತದ ಸಣ್ಣ ಪಟ್ಟಣಗಳಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನ ಶಿಕ್ಷಣದ ಲಭ್ಯತೆ ಇಲ್ಲವೋ ಅಲ್ಲೆಲ್ಲಾ ಯುವಜನತೆಗೆ ಕೋರ್ಸ್‌ಗಳನ್ನು ಒದಗಿಸುವ ಅವಕಾಶಗಳನ್ನು ಕೂಡ ಎದುರು ನೋಡುತ್ತದೆ.

ಈ ಕುರಿತು ಇಎಸ್‌ಎಸ್‌ಸಿಐ ಚೀಫ್ ಆಫರೇಟಿಂಗ್ ಆಫೀಸರ್ (Officiating CEO) ಡಾ. ಅಭಿಲಾಷಾ ಗೌರ್ ಮಾತನಾಡಿ, ದೇಶದಲ್ಲಿ ಕೌಶಲ ಒದಗಿಸುವ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸಿಎಸ್‌ಆರ್‌ ಉಪಕ್ರಮಕ್ಕಾಗಿ ಸ್ಯಾಮ್‌ಸಂಗ್ ಜತೆಗೆ ಪಾಲುದಾರಿಕೆ ಹೊಂದಲು ಇಎಸ್‌ಎಸ್‌ಸಿಐ ಸಂತೋಷ ಪಡುತ್ತದೆ. ನಮ್ಮ ಉದ್ದೇಶಕ್ಕೆ ಅನುಗುಣವಾಗಿ ರಾಷ್ಟ್ರದ ಯುವಜನರಿಗೆ ಅದರಲ್ಲೂ ವಿಶೇಷವಾಗಿ ಕಡಿಮೆ ಸವಲತ್ತು ಹೊಂದಿರುವ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಕೌಶಲ ಮತ್ತು ಅಗತ್ಯ ಜ್ಞಾನವನ್ನು ಒದಗಿಸಲು ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಒದಗಿಸುತ್ತದೆ ಮತ್ತು ಅವರನ್ನು ಉದ್ಯೋಗಕ್ಕೆ ಸಿದ್ಧಗೊಳಿಸುತ್ತದೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ದಾಖಲಾದ ಯುವಜನತೆ ತರಗತಿ ಮೂಲಕ ಮತ್ತು ಆನ್‌ಲೈನ್ ತರಬೇತಿ ಪಡೆಯುತ್ತಾರೆ ಹಾಗೂ ಎಐ, ಐಒಟಿ, ಬಿಗ್ ಡೇಟಾ ಮತ್ತು ಕೋಡಿಂಗ್ ಆಂಡ್ ಪ್ರೋಗ್ರಾಮಿಂಗ್‌ನಲ್ಲಿ ತಮ್ಮ ಆಯ್ದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸುತ್ತಾರೆ.

ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಸಾಫ್ಟ್ ಸ್ಕಿಲ್ಸ್ ತರಬೇತಿಯನ್ನೂ ನೀಡಲಾಗುವುದು. ಭಾಗವಹಿಸುವವರು ಭಾರತದಾದ್ಯಂತ ಇರುವ ಇಎಸ್‌ಎಸ್‌ಸಿಐಯ ತರಬೇತಿದಾರರು ಮತ್ತು ಶಿಕ್ಷಣ ಪಾಲುದಾರರ ಮೂಲಕ ಸಿದ್ಧಗೊಳಿಸಲಾಗುತ್ತದೆ. ಈ ಕಾರ್ಯಕ್ರಮವು ಆಫ್‌ಲೈನ್ ಮತ್ತು ಆನ್‌ಲೈನ್ ಕಲಿಕೆ, ಹ್ಯಾಕಥಾನ್‌ಗಳು ಮತ್ತು ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್‌ಗಳು ಮತ್ತು ಸ್ಯಾಮ್‌ಸಂಗ್ ಉದ್ಯೋಗಿಗಳು ಒದಗಿಸುವ ಪರಿಣಿತ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮವು ನಾಲ್ಕು ರಾಜ್ಯಗಳಲ್ಲಿ ಎಂಟು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತದೆ. ದೇಶದ ಉತ್ತರ ಭಾಗದಲ್ಲಿ, ದೆಹಲಿ ಎನ್‌ಸಿಆರ್‌ನಲ್ಲಿರುವ ಎರಡು ಕೇಂದ್ರಗಳ ಜತೆಗೆ ಲಕ್ನೋ ಮತ್ತು ಗೋರಖ್‌ಪುರದಲ್ಲಿ ಎರಡು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ದಕ್ಷಿಣ ಭಾರತದಲ್ಲಿ, ತಮಿಳುನಾಡಿನ ಚೆನ್ನೈ ಮತ್ತು ಶ್ರೀಪೆರಂಬದೂರಿನಲ್ಲಿ 2 ಕೇಂದ್ರಗಳು ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಎರಡು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ಗೆ ಉಸೇನ್‌ ಬೋಲ್ಟ್ ಬ್ರ್ಯಾಂಡ್‌ ಅಂಬಾಸಿಡರ್

ಕಾರ್ಯಕ್ರಮವು ಏಪ್ರಿಲ್ 2024 ರಲ್ಲಿ ಪ್ರಾರಂಭವಾಗಲಿದೆ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆರು ತಿಂಗಳ ಕೋರ್ಸ್ ಅಕ್ಟೋಬರ್ 2024ರಲ್ಲಿ ಕೊನೆಗೊಳ್ಳುತ್ತದೆ. ನವೆಂಬರ್ 2024ರಲ್ಲಿ ಕೋರ್ಸ್ ಟಾಪರ್‌ಗಳ ಹೆಸರನ್ನು ಘೋಷಿಸಲಾಗುತ್ತದೆ ಎಂದು ತಿಳಿಸಿದೆ.

Continue Reading

ವಾಣಿಜ್ಯ

Tata Motors: ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್‌ ಬಿಡುಗಡೆ ಮಾಡಿದ ಟಾಟಾ ಮೋಟರ್ಸ್

Tata Motors: ಟಾಟಾ ಮೋಟರ್ಸ್ ಕಂಪನಿಯು ಟಾಟಾ ಮ್ಯಾಜಿಕ್‌ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 10 ಆಸನಗಳ ಟಾಟಾ ಮ್ಯಾಜಿಕ್ ವ್ಯಾನ್‌ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ.

VISTARANEWS.COM


on

Tata Motors launched the Magic bi fuel van
Koo

ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (Tata Motors), ದೇಶದ ಅತ್ಯಂತ ಜನಪ್ರಿಯ ವ್ಯಾನ್ ಟಾಟಾ ಮ್ಯಾಜಿಕ್ (Tata Magic) ಅನ್ನು 4 ಲಕ್ಷ ಗ್ರಾಹಕರು ಖರೀದಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದ್ದು, ಟಾಟಾ ಮ್ಯಾಜಿಕ್‌ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ (Magic Bi Fuel) ಅನ್ನು ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಶ್ವಾಸಾರ್ಹತೆ, ಕಾರ್ಯದಕ್ಷತೆ ಮತ್ತು ಕೈಗೆಟುಕುವ ದರಕ್ಕೆ ಹೆಸರುವಾಸಿಯಾಗಿರುವ ಟಾಟಾ ಮೋಟರ್ಸ್ ಅತ್ಯುತ್ತಮ ಸೇವೆಯನ್ನು ನೀಡುವ ಬದ್ಧತೆಯನ್ನು ಹೊಂದಿದೆ. 10 ಆಸನಗಳ ಟಾಟಾ ಮ್ಯಾಜಿಕ್ ವ್ಯಾನ್‌ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ. ಸ್ಲೀಕ್ ಡಿಸೈನ್, ಸುರಕ್ಷತೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಟಾಟಾ ಮ್ಯಾಜಿಕ್ ಕಳೆದ ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ಇದನ್ನೂ ಓದಿ: Ayodhya Ram mandir: ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

ಇಕೋ ಸ್ವಿಚ್, ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಚಾಲಕರಿಗೆ ಅನುಕೂಲದಾಯಕ ಅಂಶಗಳು ಸೇರಿದಂತೆ ಹಲವಾರು ಮೌಲ್ಯವರ್ಧಿತ ವೈಶಿಷ್ಟ್ಯತೆಗಳನ್ನು ಈ ಟಾಟಾ ಮ್ಯಾಜಿಕ್ ಹೊಂದಿದೆ. ಇದಲ್ಲದೇ, ಕೈಗೆಟುಕುವ ದರದಲ್ಲಿ ಈ ವಾಹನ ಲಭ್ಯವಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಯಾಣಕ್ಕೆ ಸೂಕ್ತವಾದ ವಾಹನವಾಗಿರುವ ಟಾಟಾ ಮ್ಯಾಜಿಕ್, ಕಟ್ಟಕಡೆಯ ಮೈಲಿಯವರೆಗೆ ಸಾರಿಗೆ ಸೌಲಭ್ಯ ಒದಗಿಸುವ ವಾಹನವಾಗಿದೆ.

ಟಾಟಾ ಮ್ಯಾಜಿಕ್ –ಬೈ-ಫ್ಯುಯೆಲ್ ವಾಹನವು 694 ಸಿಸಿ ಎಂಜಿನ್ ಮತ್ತು 60 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಟ್ಯಾಂಕ್ ಹಾಗೂ 5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ಒಂದು ಬಾರಿ ಸಿಎನ್‌ಜಿ ಟ್ಯಾಂಕ್ ತುಂಬಿಸಿದರೆ 380 ಕಿಲೋಮೀಟರ್‌ವರೆಗೆ ಸಾಗಬಹುದಾಗಿದೆ. ಸರಿಸಾಟಿಯಿಲ್ಲದ ಕಾರ್ಯದಕ್ಷತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚದಿಂದ ಕೂಡಿರುವ ಈ ಮ್ಯಾಜಿಕ್ ವಾಹನಕ್ಕೆ 2 ವರ್ಷಗಳ ಅಥವಾ 72,000 ಕಿಲೋಮೀಟರ್‌ಗಳ ವಾರಂಟಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Leopard Attack: ನೂರಕ್ಕೂ ಹೆಚ್ಚು ಕುರಿಗಳ ಜತೆಯೇ ಎರಡು ಗಂಟೆ ಇದ್ದ ಚಿರತೆ!

ಈ ಕುರಿತು ಮಾತನಾಡಿದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ವಿಭಾಗದ ಪ್ಯಾಸೆಂಜರ್ ಬ್ಯುಸಿನೆಸ್‌ನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಆನಂದ್ ಎಸ್., ನಮ್ಮ ವಿನೂತನವಾದ ಮ್ಯಾಜಿಕ್ ಬ್ರ್ಯಾಂಡ್ ಅನ್ನು 4 ಲಕ್ಷ ಗ್ರಾಹಕರಿಗೆ ತಲುಪಿಸಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಮೈಲಿಗಲ್ಲು ಸ್ಥಾಪಿಸಿರುವ ಸವಿನೆನಪಿಗಾಗಿ ನಾವು ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮ್ಯಾಜಿಕ್ ಬೈ-ಫ್ಯುಯೆಲ್ ವಾಹನವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದು ಪೆಟ್ರೋಲ್‌ನೊಂದಿಗೆ ಸಿಎನ್‌ಜಿ ಚಾಲಿತ ವಾಹನವಾಗಿದೆ. ಸಾರಿಗೆ ಅಗತ್ಯತೆಗಳನ್ನು ಪೂರೈಸುವುದು ಮತ್ತು ನಮ್ಮ ಗ್ರಾಹಕರ ಲಾಭದ ಪ್ರಮಾಣ ಹಾಗೂ ಅನುಕೂಲವನ್ನು ಸುಧಾರಣೆ ಮಾಡುವುದಕ್ಕೆ ಪೂರಕವಾಗಿ ಈ ಹೊಸ ಶ್ರೇಣಿಯ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

ಕರ್ನಾಟಕ

Navigating App: ಬೆಂಗಳೂರಿಗರಿಗೆ ಗುಡ್‌ ನ್ಯೂಸ್;‌ ಶೀಘ್ರವೇ ಬರಲಿದೆ ಹೊಸ ನ್ಯಾವಿಗೇಟಿಂಗ್‌ ಆ್ಯಪ್‌

Navigating App: ಬೆಂಗಳೂರಿನ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಹೊಸ ನ್ಯಾವಿಗೇಟಿಂಗ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಯಾಣಿಕರಿಗೆ ರೂಟ್‌ ತೋರಿಸುವ ಜತೆಗೆ ಯಾವ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಇದೆ, ಯಾವ ರೋಡ್‌ ಚೆನ್ನಾಗಿದೆ ಎಂಬುದರ ಕುರಿತು ಕೂಡ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Navigating App
Koo

ಬೆಂಗಳೂರು: ಹೊಸತನ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ಎಂದಿಗೂ ಹಿಂದೆಬಿದ್ದಿಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರು ದೇಶದ ನಾನಾ ಭಾಗಗಳ ಜನರನ್ನು ಕೈಬೀಸಿ ಕರೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಈಗ ಮತ್ತೊಂದು ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಹೌದು, ರಾಜ್ಯ ರಾಜಧಾನಿಯಲ್ಲಿ ಶೀಘ್ರವೇ ಪ್ರಯಾಣಿಕರ (Commuters) ಅನುಕೂಲಕ್ಕಾಗಿ ಹೊಸ ನ್ಯಾವಿಗೇಟಿಂಗ್‌ ಆ್ಯಪ್‌ (Navigating App) ಬರಲಿದೆ. ಬೆಂಗಳೂರಿನಲ್ಲಿ ಸಂಚರಿಸುವರಿಗೆ ಇದು ಉತ್ತಮ ‘ಮಾರ್ಗ’ದರ್ಶನ ನೀಡಲಿದೆ.

ಬೆಂಗಳೂರಿನಲ್ಲಿ ಸಂಚರಿಸುವವರಿಗೆ ಅನುಕೂಲವಾಗಲಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿ ಎಂಬ ದೃಷ್ಟಿಯಿಂದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಇಲಾಖೆಯು ಮ್ಯಾಪ್‌ಪ್ಲಸ್‌ ಮ್ಯಾಪ್‌ಮೈಇಂಡಿಯಾ (Mappls MapmyIndia) ಎಂಬ ಕಂಪನಿಯ ಜತೆ ಒಡಂಡಿಕೆ (MoU) ಮಾಡಿಕೊಂಡಿದೆ. ಈಗಾಗಲೇ ಮ್ಯಾಪ್‌ಪ್ಲಸ್‌ ಮ್ಯಾಪ್‌ಮೈಇಂಡಿಯಾ ಕಂಪನಿಯು ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ಆ್ಯಪ್‌ನಿಂದ ಏನೆಲ್ಲ ಅನುಕೂಲ?

ಹೊಸ ಆ್ಯಪ್‌ನಿಂದ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಕಡಿಮೆ ಟ್ರಾಫಿಕ್‌ ಇರುವ ರಸ್ತೆಗಳನ್ನು ಸೂಚಿಸುವುದು, ರಿಯಲ್‌ ಟೈಮ್‌ ಆಗಿ ನ್ಯಾವಿಗೇಟ್‌ ಮಾಡುವುದು, ಯಾವ ರಸ್ತೆಗಳು ಕ್ಲೋಸ್‌ ಆಗಿವೆ, ಯಾವ ಕಡೆ ಹೋದರೆ ಉತ್ತಮ ರಸ್ತೆ ಇದೆ, ಯಾವ ಮಾರ್ಗಗಳು ಇಕ್ಕಟ್ಟವಾಗಿವೆ ಎಂಬುದು ಸೇರಿ ಪ್ರಯಾಣಿಕರಿಗೆ ಹಲವು ಮಾಹಿತಿ ನೀಡಲಿದೆ. ಇದು ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿ ಎಂಬುದಾಗಿ ತಿಳಿದುಬಂದಿದೆ.

“ಹೊಸ ಆ್ಯಪ್‌ನಿಂದ ಪ್ರಯಾಣಿಕರಿಗೆ ಮಾತ್ರವಲ್ಲ ಟ್ರಾಫಿಕ್‌ ಪೊಲೀಸರಿಗೆ ಇದು ಅನುಕೂಲವಾಗಲಿದೆ. ಎಲ್ಲೆಲ್ಲಿ ಟ್ರಾಫಿಕ್‌ ಇದೆ ಎಂಬುದನ್ನು ಆ್ಯಪ್‌ ಮೂಲಕವೇ ಪತ್ತೆಹಚ್ಚಿ, ಆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ. ರೋಡ್‌ಬ್ಲಾಕ್‌ಗಳು, ಗುಂಡಿಗಳು, ದುರಸ್ತಿ ಕೆಲಸ ನಡೆಯುತ್ತಿರುವ ರಸ್ತೆಗಳ ಕುರಿತು ಕೂಡ ಮಾಹಿತಿ ನೀಡಲಿದೆ” ಎಂಬುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: WhatsApp : ನಿಮ್ಮ ವಾಟ್ಸ್​​​ಆ್ಯಪ್​ನಲ್ಲಿ ಈ ಫೀಚರ್ ಇಲ್ಲವೇ? ತಕ್ಷಣ ಅಪ್​ಡೇಟ್​ ಮಾಡಿಕೊಳ್ಳಿ

Continue Reading
Advertisement
Case of luring apartment dwellers Relief for DK Shivakumar
Lok Sabha Election 202410 mins ago

DK Shivakumar: ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಆಮಿಷ ಪ್ರಕರಣ; ಡಿ.ಕೆ. ಶಿವಕುಮಾರ್‌ಗೆ ರಿಲೀಫ್

ಫ್ಯಾಷನ್28 mins ago

Summer Nail Art : ಸಮ್ಮರ್ ಸೀಸನ್​ನಲ್ಲಿ ಟ್ರೆಂಡಿಯಾದ ಕಲ್ಲಂಗಡಿ ಹಣ್ಣಿನ ನೇಲ್ಆರ್ಟ್

Lok sabaha election
ಪ್ರಮುಖ ಸುದ್ದಿ43 mins ago

Narendra Modi : ತಮ್ಮನ್ನು ನಿಂದಿಸಿದ ರಾಹುಲ್​ಗೆ ಪ್ರತ್ಯುತ್ತರ ಕೊಟ್ಟ ಮೋದಿ; ಇಲ್ಲಿದೆ ವಿಡಿಯೊ

Ballari Lok Sabha Constituency Congress candidate E Tukaram election campaign in Ballari
ರಾಜಕೀಯ54 mins ago

Lok Sabha Election 2024: ಸಂವಿಧಾನ ಉಳಿಸಲು ಕಾಂಗ್ರೆಸ್‌ ಗೆಲ್ಲಿಸಿ; ಈ. ತುಕಾರಾಂ

Lok Sabha Election-2024
Latest59 mins ago

Lok Sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರುವ ಟಾಪ್‌ 10 ಶ್ರೀಮಂತರಲ್ಲಿ ಕರ್ನಾಟಕದ ಐವರು!

Viral Video
ವೈರಲ್ ನ್ಯೂಸ್1 hour ago

Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

deadly murder
Latest1 hour ago

Deadly Murder: ಬರ್ಗರ್‌ ತಿಂದನೆಂದು ಸ್ನೇಹಿತನನ್ನೇ ಗುಂಡಿಟ್ಟು ಕೊಂದ!

Chemistry paper leak case
ಕೋರ್ಟ್1 hour ago

Chemistry paper leak : ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 17 ಆರೋಪಿಗಳು ಖುಲಾಸೆ

Ranji Trophy
ಪ್ರಮುಖ ಸುದ್ದಿ2 hours ago

Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

Fire Tragedy
ದೇಶ2 hours ago

Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ3 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ3 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ6 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20248 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET 2024 Exam
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌