UGCET 2024 : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌ - Vistara News

ಬೆಂಗಳೂರು

UGCET 2024 : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌

KEA Updates : ದ್ವಿತೀಯ ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಆಪ್ಷನ್‌ ದಾಖಲಿಸಲು ಲಿಂಕ್‌ ಓಪನ್‌ ಆಗಿದೆ. ಸೀಟು ಸಿಗದವರು/ ಚಾಯ್ಸ್‌ ದಾಖಲಿಸದವರಿಗೆ ಸೆ.30ರಿಂದ ಆಪ್ಷನ್‌ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ.

VISTARANEWS.COM


on

KEA UGCET 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಯುಜಿಸಿಇಟಿ-24 (UGCET 2024) ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA Updates) ಅವಕಾಶ ಕಲ್ಪಿಸಿದ್ದು, ಶನಿವಾರದಿಂದಲೇ ಆದ್ಯತಾ ಕ್ರಮದಲ್ಲಿ ಆಪ್ಷನ್ಸ್‌ಗಳನ್ನು ದಾಖಲಿಸಲು ವೆಬ್‌ಸೈಟ್‌ ನಲ್ಲಿ ಲಿಂಕ್‌ ಬಿಡುಗಡೆ ಮಾಡಿದೆ.

ಇದಲ್ಲದೆ, ಮೊದಲ ಎರಡೂ ಸುತ್ತುಗಳಲ್ಲಿ ಆಪ್ಷನ್‌ಗಳನ್ನು ದಾಖಲು ಮಾಡದವರು ಹಾಗೂ ಹಂಚಿಕೆಯಾದ ಸೀಟಿಗೆ ಯಾವುದೇ ಛಾಯ್ಸ್‌ ನೀಡದವರು ಹಾಗೂ ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದವರಿಗೂ ಆಪ್ಷನ್ಸ್‌ ದಾಖಲಿಸಲು ಸೆ.30ರಿಂದ ಅ.4ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಶನಿವಾರ ತಿಳಿಸಿದ್ದಾರೆ.

ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಅ.7ರಂದು ಮತ್ತು ಅಂತಿಮ ಫಲಿತಾಂಶವನ್ನು ಅ.8ರಂದು ಪ್ರಕಟಿಸಲಾಗುವುದು. ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ ಲೋಡ್‌ ಮಾಡಿಕೊಳ್ಳಲು ಅ.9ರಿಂದ 14ರವರೆಗೆ ಅವಕಾಶ ನೀಡಲಾಗುವುದು. ಅ.15, ಕಾಲೇಜಿಗೆ ವರದಿ ಮಾಡಿಕೊಳ್ಳಲು ಕೊನೆ ದಿನ ಎಂದು ಪ್ರಸನ್ನ ವಿವರಿಸಿದ್ದಾರೆ.

30ರೊಳಗೆ ಸಲ್ಲಿಸಿ:

3ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅಂಕಗಳ ಮಾಹಿತಿಯನ್ನು ಪಿಯುಸಿ ಇಲಾಖೆಯಿಂದ ನೇರವಾಗಿ ಪಡೆದು, ಅದರ ಆಧಾರದ ಮೇಲೆ ಸಿಇಟಿ ರ‍್ಯಾಂಕ್‌ ನೀಡಲಾಗಿದೆ. ಇತರೆ ಬೋರ್ಡ್ ಗಳಿಂದ 12ನೇ ತರಗತಿಯನ್ನು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕೂಡ ತಮ್ಮ ಅಂಕಪಟ್ಟಿ ಮತ್ತು 2024ನೇ ಸಾಲಿನ ಸಿಇಟಿ ಪ್ರವೇಶ ಪತ್ರವನ್ನು ಸೆ.30ರೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಿ ರ್ಯಾಂಕ್‌ ಪಡೆದು, ಆಪ್ಷನ್‌ ದಾಖಲಿಸಬಹುದು.

ಎಚ್ಚರಿಕೆಯಿಂದ ಆಪ್ಷನ್ಸ್‌ ದಾಖಲಿಸಿ ಇಲ್ಲದಿದ್ದರೆ ಐದು ಪಟ್ಟು ದಂಡ

ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್‌ಗಳನ್ನು ದಾಖಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಸೀಟು ಸಿಕ್ಕ ನಂತರ ಪ್ರವೇಶ ಪಡೆಯಬೇಕು. ಒಂದು ವೇಳೆ ಪ್ರವೇಶ ಪಡೆಯದಿದ್ದರೆ ಸರ್ಕಾರ ನಿಗದಿಪಡಿಸಿರುವ ಎಂಜಿನಿಯರಿಂಗ್‌ ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದ ಆಪ್ಷನ್ಸ್‌ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮೊದಲ ಮತ್ತು ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟು ರದ್ದುಪಡಿಸಿಕೊಳ್ಳಲು ಅ.3ರ ಬೆಳಿಗ್ಗೆ 11ರವರೆಗೆ ಅವಕಾಶ ನೀಡಲಾಗಿದೆ. ಅಂತಹವರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದರು. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಇನ್ನು ಮುಂದೆ ಪ್ರತ್ಯೇಕವಾಗಿ ನಡೆಯಲಿದ್ದು, ಸದ್ಯದಲ್ಲೇ ಅದರ‌ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ವಿವರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Online gambling : ರಮ್ಮಿ ಚಟಕ್ಕೆ 20 ಲಕ್ಷ ರೂ. ಸಾಲ; ಸಾಲಗಾರರ ಕಾಟಕ್ಕೆ ‘ನಾನು ಸೋತಿದ್ದೇನೆ’ ಎಂದು ಮನೆ ತೊರೆದ ಬ್ಯಾಂಕ್‌ ನೌಕರ

ಅತಿಯಾಸೆ ಗತಿಗೇಡು ಎಂಬ ಮಾತು ಈ ಪ್ರಕರಣಕ್ಕೆ ಸರಿ ಒಂದುತ್ತೆ. ರಮ್ಮಿ ಚಟಕ್ಕೆ ಬಿದ್ದ ಬ್ಯಾಂಕ್‌ ನೌಕರ ಬರೋಬ್ಬರಿ 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಬಳಿಕ ಸಾಲಗಾರರ ಕಾಟಕ್ಕೆ ಬೇಸತ್ತ ಆತ ‘ನಾನು ಸೋತಿದ್ದೇನೆ’ ಎಂದು ಪತ್ರ ಬರೆದು ವಿಡಿಯೊ ಮಾಡಿ ಮನೆ ತೊರೆದಿದ್ದಾನೆ. ಇತ್ತ ಪತಿಗಾಗಿ ಪತ್ನಿ ಹುಡುಕಾಟ ನಡೆಸುತ್ತಿದ್ದಾಳೆ.

VISTARANEWS.COM


on

By

Online gambling Rs 20 lakh for rummy addiction debt Bank employee leaves home due to debtors
Koo

ಬೆಂಗಳೂರು: ಜೂಜು (Online gambling) ಎಷ್ಟರ ಮಟ್ಟಿಗೆ ಎಫೆಕ್ಟ್ ಕೊಡುತ್ತೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಒಂದೊಳ್ಳೆ ಹುದ್ದೆಯಲ್ಲಿದ್ದವನು ಮಾಡುವ ಕೆಲಸ ಬಿಟ್ಟು ಜೂಜಿನ ಹಿಂದೆ ಬಿದ್ದವನು ಸಾಲಗಾರರ ಕಾಟಕ್ಕೆ ಬೇಸತ್ತು ಕಾಣೆಯಾಗಿದ್ದಾನೆ. ಭರತ್ ಎಂಬ ಬ್ಯಾಂಕ್ ಉದ್ಯೋಗಿ ಕಾಣೆಯಾಗಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ, ತನ್ನ ಮೊಬೈಲ್‌ಗಳನ್ನು ಮನೆಯಲ್ಲಿಟ್ಟು ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಭರತ್‌ಗಾಗಿ ಆತನ ಪತ್ನಿ ದುಃಖಿತಳಾಗಿದ್ದು ಪತಿಗಾಗಿ ಎಲ್ಲ ಕಡೆ ಹುಡುಕಾಡಿ ಸಿಗದೆ ಇದ್ದಾಗ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಭರತ್‌ ಪ್ರತಿಷ್ಠಿತ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾದರೆ, ಪತ್ನಿ ಚೈತ್ರಾ ಕೂಡ ಸಾಫ್ಟ್ ಇಂಜಿನೀಯರ್. ಇಬ್ಬರು ಸೇರಿ ಒಂದೊಳ್ಳೆ ಜೀವನ ನಡೆಸುತ್ತಿದ್ದರು. ಆದರೆ ರಮ್ಮಿ ಆಡಿ ಬಹುಮಾನ ಗೆಲ್ಲಿ ಎಂಬ ಆ್ಯಡ್‌ಗಳಿಂದ ಆಕರ್ಷಿತನಾದ ಭರತ್ ಕೊನೆಗೆ ರಮ್ಮಿ ಚಟಕ್ಕೆ ಬಿದ್ದಿದ್ದ. ಕೊನೆಗೆ ಬ್ಯಾಂಕ್ ಉದ್ಯೋಗಿಯಾಗಿ ದೊಡ್ಡ ಮಟ್ಟದ ಸಾಲಗಾರನಾಗಿದ್ದ.

ಮಧ್ಯಮ ವರ್ಗದ ಜನರಿಗೆ 20 ‌ಲಕ್ಷ ರೂ. ಎಂಬುದು ಬಹು ದೊಡ್ಡ ಮೊತ್ತವೇ. ಕೆಲವರು ಇಷ್ಟು ಹಣ ಸಿಕ್ಕರೆ ಸಾಕು ಒಂದು ಉದ್ದಿಮೆಗೆ ಹೂಡಿಕೆ ಮಾಡಿ ದುಡಿಮೆ ಮಾಡುತ್ತಾರೆ. ಆದರೆ ಈ ಬ್ಯಾಂಕ್ ಉದ್ಯೋಗಿ ಭರತ್ ಹೂಡಿಕೆ ಮಾಡಿದ್ದು ರಮ್ಮಿ ಜೂಜಿನಲ್ಲಿ. ರಮ್ಮಿ ಚಟಕ್ಕೆ ಬಿದ್ದವನಿಗೆ ತನಗೆ ಬರುತ್ತಿದ್ದ ಸಂಬಳ ಕೂಡ ಸಾಕಾಗುತ್ತಿರಲಿಲ್ಲ. ಪಡೆದುಕೊಂಡಿರುವ ಸಾಲದ ಇಎಂಐ ಕೂಡ ಕಟ್ಟಬೇಕಿತ್ತು. ಜತೆಗೆ ಫ್ಯಾಮಿಲಿ ಕಮಿಟ್ಮೆಂಟ್ ಬೇರೆ ಇತ್ತು . ಒಂದಲ್ಲ ಒಂದು ದಿನ ಕೋಟಿ ಗಳಿಸುತ್ತೀನಿ ಎಂದು ರಮ್ಮಿ ಆ್ಯಪ್‌ನಲ್ಲಿ ಜೂಜಾಟ ನಡೆಸಿದ್ದ.

ಸಂಬಳದ ಹಣ ಅಲ್ಲದೆ ಸಾಲ ಮಾಡಿ ಜೂಜಿಗೆ ಬಳಸಿದ. ಕೊನೆಗೆ ಆ ಸಾಲದ ಮೊತ್ತ ದಾಟಿದ್ದು 20 ಲಕ್ಷಕ್ಕೆ. ಆ ಸಾಲಕ್ಕೆ ಮತ್ತೆ ಬಡ್ಡಿ ಕಟ್ಟಬೇಕು. ಕೊಡದೆ ಇದ್ದಾಗ ಸಾಲಗಾರರು ಕಾಟ ಕೊಡಲು ಶುರು ಮಾಡಿದ್ದರು. ಇದರಿಂದ ಬೇಸತ್ತ ಬ್ಯಾಂಕ್ ಉದ್ಯೋಗಿ ಎರಡು ದಿನ ಮನೆ ಬಿಟ್ಟಿದ್ದ. ಪತ್ನಿ ಚೈತ್ರಾ ಜತೆ ಫೋನ್ ಸಂಪರ್ಕದಲ್ಲಿದ್ದ.

ಆದರೆ ನಾಪತ್ತೆ ಆಗಿದ್ದ. ಎರಡು ದಿನ ಬಳಿಕ ಮನೆಯಲ್ಲಿ ಪುಸ್ತಕವೊಂದರಲ್ಲಿ ಸಾಲಗಾರರ ಕಾಟ ಜಾಸ್ತಿ ಆಗಿದೆ ನಾನು ಮನೆ ಬಿಟ್ಟು ಹೋಗುತ್ತಿದ್ದೀನಿ. ನನ್ನ ಹುಡುಕುವುದು ಬೇಡ ಎಂದು ಬರೆದಿದ್ದ. ಜತೆಗೆ ಆತನ ಮೊಬೈಲ್ ಕೂಡ ಇತ್ತು. ಅದನ್ನು ಪರಿಶೀಲನೆ ನಡೆಸಿದಾಗ ವಿಡಿಯೋ ಸಿಕ್ಕಿದೆ. ತನ್ನ ಬೈಕ್‌ನಲ್ಲಿ ಮನೆ ಬಿಟ್ಟಿರುವ ಭರತ್‌ಗಾಗಿ ಆತನ ಪತ್ನಿ ತೀವ್ರ ಹುಡುಕಾಟ ನಡೆಸಿ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾಳೆ . ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಯಾದಗಿರಿಯಲ್ಲಿ ಮಳೆಯಾರ್ಭಟ; ಸಿಡಿಲು ಬಡಿದು ಮಹಿಳೆ ಸಾವು, ಮತ್ತಿಬ್ಬರಿಗೆ ಗಾಯ

Karnataka Rain : ಯಾದಗಿರಿಯಲ್ಲಿ ಮಳೆಯಾರ್ಭಟ ಜೋರಾಗಿದ್ದು, ಸಿಡಿಲು ಬಡಿದು ಮಹಿಳೆ ಮೃತಪಟ್ಟರೆ, ಮತ್ತಿಬ್ಬರಿಗೆ ಗಾಯವಾಗಿದೆ.

VISTARANEWS.COM


on

By

Heavy rains lash Yadgir Woman killed in lightning strike
Koo

ಯಾದಗಿರಿ: ಭಾರಿ ಮಳೆ ಜತೆಗೆ ಸಿಡಿಲು ಬಡಿದು ಕೂಲಿ ಕಾರ್ಮಿಕ‌ ಮಹಿಳೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಂದ್ಲಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರ್ಮಿಕರು ಹತ್ತಿ ಬಿಡಿಸಲು ಬೇರೊಬ್ಬರ ಜಮೀನಿಗೆ ಕೂಲಿಗೆ ತೆರಳಿದ್ದರು. ನಿನ್ನೆ ಸಂಜೆ ಜಮೀನಿನಲ್ಲಿ ಹತ್ತಿ ಬಿಡಿಸುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ನಿಂಗಮ್ಮ ಕೊಂಗಂಡಿ (35) ಮೃತ ದುರ್ದೈವಿ. ಭಾಗಮ್ಮ, ಬಸವರಾಜ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಸುರಪುರ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಲವತ್ತು ಕೋಳಿಗಳು ಬಲಿ

ಕೊಪ್ಪಳ ತಾಲೂಕಿನ ಗಿಣಗೇರಿಯ ಹುಲಿಗಿ ಚಿಕನ್ ಸೆಂಟರ್‌ನಲ್ಲಿ ಭಾರಿ ಮಳೆಗೆ ನಲವತ್ತು ಕೋಳಿಗಳು ಬಲಿಯಾಗಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ರಾಜು ಎಂಬುವವರಿಗೆ ಸೇರಿದ ಶಾಪ್‌ನ ಒಳಗೆ ಗ್ರಾಮದ ಚರಂಡಿ ನೀರು ನುಗ್ಗಿದೆ. ಪರಿಣಾಮ ನೀರಿಗೆ ಸಿಲುಕಿ ಮಾರಾಟಕ್ಕಿಟ್ಟಿದ್ದ ಕೋಳಿಗಳು ಮೃತಪಟ್ಟಿವೆ. ಸಾವಿರಾರು ರೂಪಾಯಿ ಮೌಲ್ಯದ ಕೋಳಿಗಳು ಕಳೆದುಕೊಂಡು ಶಾಪ್ ಮಾಲೀಕ ನಷ್ಟ ಅನುಭವಿಸಿದ್ದರು.

ಕೋಡಿ ಬಿದ್ದು ಮನೆಗಳು ಜಲಾವೃತ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಹಿರೇಮಲ್ಲನಹೊಳೆ ಗ್ರಾಮದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ
ಹಿರೇಮಲ್ಲನಹೊಳೆ ಕೆರೆ ಕೋಡಿ ಬಿದ್ದಿದೆ. ಮೂವತ್ತು ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿದ್ದು, 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ತೊರೆಸಾಲು, ಹಿರೇಮಲ್ಲನಹೊಳೆ, ತಾಯಿಟೋಣಿ, ಹಾಲೆಹಳ್ಳಿ, ಕೋರಚರಹಟ್ಟಿ ಗ್ರಾಮದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಜೆಸಿಬಿ ಮೂಲಕ ಕೋಡಿ ಬಿದ್ದ ನೀರನ ಹರಿವನ್ನು ಬೇರೆ ಕಡೆಗೆ ಬದಲಿಸಲು ಪ್ರಯತ್ನಿಸಿದರು.

ಚಿತ್ರದುರ್ಗದಲ್ಲೂ ಮಳೆ ಅಬ್ಬರ

ಚಿತ್ರದುರ್ಗ ಜಿಲ್ಲೆಯ ಹಲವು ಕಡೆ ತಡರಾತ್ರಿ ಮಳೆಯ ಅಬ್ಬರ ಜೋರಾಗಿತ್ತು. ಮಳೆಯ ಆರ್ಭಟಕ್ಕೆ ಕೆರೆ ಕಟ್ಟೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿತ್ತು. ಚಳ್ಳಕೆರೆ ತಾಲೂಕಿನ ರೇಖಲಗೆರೆ ಕೆರೆ ಕೋಡಿ ತುಂಬಿ ಹರಿಯುತ್ತಿದೆ. ರಾಮಸಾಗರ ಹಳ್ಳ ಸಂಪೂರ್ಣ ಭರ್ತಿಯಾಗಿದೆ. ರೇಖಲಗೆರೆ ಫೀಡರ್ ಚಾನಲ್ ಮೂಲಕ ಬಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ರಾತ್ರಿ ಮಳೆಗೆ ವರವು ಗ್ರಾಮದ ಕೆರೆಯೂ ಸಂಪೂರ್ಣ ಭರ್ತಿಯಾಗಿ, ಕೋಡಿ ಬಿದ್ದು ಹರಿಯುತ್ತಿದೆ. ಬರದ ನಾಡಲ್ಲಿ ಬರಪೂರ ಮಳೆಗೆ ಅನ್ನದಾತರಲ್ಲಿ ಸಂತಸ ಮೂಡಿದೆ.

ಇದನ್ನೂ ಓದಿ:Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

ಕೆರೆ ಕೋಡಿ ಬಿದ್ದು ಶವ ಸಾಗಿಸಲು ಗ್ರಾಮಸ್ಥರ ಹೆಣಗಾಟ

ಬೆಳಗಾವಿಯ ಕಿತ್ತೂರು ತಾಲೂಕಿನಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಬಸರಕೋಡ ಗ್ರಾಮದಲ್ಲಿ ಶವ ಸಾಗಿಸಲು ಗ್ರಾಮಸ್ಥರು ಹೆಣಗಾಡಿದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮದಲ್ಲಿ ಪ್ರತಿ ವರ್ಷ ಮಳೆಗಾಲ ಬಂದ್ರೇ ಶವ ಸಾಗಿಸಲು ಜನರು ಪರದಾಡಬೇಕು. ಸ್ಮಶಾನಕ್ಕೆ ಹೋಗುವ ಮಾರ್ಗದಲ್ಲಿರುವ ಕೆರೆ ಕೊಡಿ ಬಿದ್ದು ಪರದಾಟ ಅನುಭವಿಸಬೇಕು.

ಮಳೆಗಾಲದಲ್ಲಿ ರಸ್ತೆ ಮೇಲೆ ಕೆರೆಯ ನೀರು ಹಳ್ಳದಂತೆ ಹರಿದು ಹೋಗಲಿದೆ. ನಡುಮಟದ ನೀರಲ್ಲೇ ಶವ ಹೊತ್ತು ಸ್ಮಶಾನಕ್ಕೆ ಸಾಗಿಸುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಹೃದಯಾಘಾತದಿಂದ ಶಂಕ್ರಪ್ಪ ಹರಿಜನ(40) ಎಂಬುವವರು ಮೃತಪಟ್ಟಿದ್ದರು. ಶವ ಹೊತ್ತು ರಭಸವಾಗಿ ಹರಿಯುವ ನೀರಲ್ಲೇ ಸಾಗಿದ ಗ್ರಾಮಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದರು. ಕೆರೆ ಪಕ್ಕ ಸೇತುವೆ ನಿರ್ಮಾಣಕ್ಕೆ ಹಣ ಬಂದ್ದರೂ, ಸಣ್ಣ ನೀರಾವರಿ ಇಲಾಖೆ ಅಸಡ್ಡೆ ತೋರುತ್ತಿದೆ. ಒಂದು ಕೋಟಿಗೂ ಅಧಿಕ ಹಣವನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ದುರಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗದಗ-ಶಲವಡಿ- ನರಗುಂದ ರಸ್ತೆ ಸಂಪರ್ಕ ಸ್ಥಗಿತ

ಗದಗ ಜಿಲ್ಲೆಯ ನರಗುಂದ ತಾ. ಕುರ್ಲಗೇರಿ ಸೇತುವೆ ಭಾರೀ ಮಳೆಗೆ ಜಲಾವೃತಗೊಂಡಿದೆ. ಗದಗ-ಶಲವಡಿ- ನರಗುಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ರೋಣ ತಾ.ಯಾವಗಲ್ ಗ್ರಾಮದ ಬಳಿಯ ಸೇತುವೆ ಜಲಾವೃತವಾಗಿದೆ. ರೋಣ-ನರಗುಂದ ರಸ್ತೆ ಸಂಚಾರ ಸ್ಥಗಿತವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಅಪಾಯ ಮಟ್ಟ ಮೀರಿ ಬೆಣ್ಣೆಹಳ್ಳ ಹರಿಯುತ್ತಿದೆ. ಹುಬ್ಬಳ್ಳಿ-ಧಾರವಾಢ ಹಾಗೂ ಗದಗ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಬೆಣ್ಣೆ ಹಳ್ಳದ ಬಳಿ ಯಾರು ಹೋಗದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಧ್ವನಿ ವರ್ಧಕದ ಮೂಲಕ ಬೆಣ್ಣೆ ಹಳ್ಳ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ ಮಾಡಿದೆ. ಕಷ್ಟ ಪಟ್ಟು ಬೆಳೆದ ಗೋವಿನಜೋಳ ಹತ್ತಿ ಈರುಳ್ಳಿ ಬೆಳೆಗಳು ಜಲಾವೃತಗೊಂಡು, ಬೆಳೆ ಹಾನಿಯಾಗಿದೆ.

ಧಾರವಾಡ, ಯಾದಗಿರಿಯಲ್ಲಿ ಭರ್ಜರಿ ಮಳೆ

ಧಾರವಾಡ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಮತ್ತಷ್ಟು ಮಳೆ ಆದರೆ ಪ್ರವಾಹ ಭೀತಿಯಲ್ಲಿ ಹಳ್ಳಕ್ಕೆ ಹೊಂದಿರುವ ಗ್ರಾಮಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಯಾದಗಿರಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರ ಸೇರಿದಂತೆ ವಿವಿಧೆಡೆ ಒಂದು ಗಂಟೆಗೂ ಮಳೆ ಸುರಿದಿದೆ. ಮಳೆಯಿಂದ ಯಾದಗಿರಿ ರೈತರು ಕಂಗಲಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌ ಆಗಿವೆ. ಸವಾರರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.

VISTARANEWS.COM


on

By

Ayudha Puja celebrations across the karnataka state Temples housefull by devotees
Koo

ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜಾ (Ayudha Puja) ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಸಲುವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬನಶಂಕರಿ, ಆ್ಯಕ್ಸಿಡೆಂಡ್ ಗಣೇಶ, ಸರ್ಕಲ್ ಮಾರಮ್ಮ, ಕಾಡುಮಲ್ಲೆಶ್ವರಂ ದೇವಸ್ಥಾನಕ್ಕೆ ಭಕ್ತರು ದೌಡಾಯಿಸಿದ್ದಾರೆ. ಬೆಳಗಿನಿಂದಲೇ ಪಂಚಾಭಿಷೇಕ ನೇರಿವೇರಿದ್ದು, ವಿಶೇಷ ಅಲಂಕಾರ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Ayudha Puja celebrations across the karnataka state  Temples housefull by devotees

ಅಲ್ಲದೇ ಮನೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡಿ ಸಲ್ಲಿಸಿದ್ದು, ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ವಾಹನ ಸವಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ದೇವಿಗೆ ಮುತ್ತಿನ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆದಿದೆ.

Ayudha Puja celebrations across the karnataka state  Temples housefull by devotees

ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಲು ಮುಗಿಬಿದ್ದಿದ್ದರು. ಹೀಗಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಟ್ರಾಫಿಕ್‌ ಕ್ಲಿಯರ್‌ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವೆಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ವಿಸ್ತಾರ ನ್ಯೂಸ್‌ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

Karnataka Weather Forecast : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ದಕ್ಷಿಣ ಮತ್ತು ಉತ್ತರ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain News) ಸಾಧ್ಯತೆಯಿದೆ. ಕರಾವಳಿಯಲ್ಲಿ ಗುಡುಗು ಜತೆಗೆ ಸಾಧಾರಣ ಮಳೆಯೊಂದಿಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನಲ್ಲಿ ಭಾರಿ ಮಳೆ

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಒಳನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತ ಚದುರಿದಂತೆ ವ್ಯಾಪಕವಾಗಿ ಮಧ್ಯಮ ಮಳೆಯಾಗಲಿದೆ. ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ.

ಒಳನಾಡಿನ ಜಿಲ್ಲೆಗಳಿಗೆ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Online gambling Rs 20 lakh for rummy addiction debt Bank employee leaves home due to debtors
ಬೆಂಗಳೂರು1 ಗಂಟೆ ago

Online gambling : ರಮ್ಮಿ ಚಟಕ್ಕೆ 20 ಲಕ್ಷ ರೂ. ಸಾಲ; ಸಾಲಗಾರರ ಕಾಟಕ್ಕೆ ‘ನಾನು ಸೋತಿದ್ದೇನೆ’ ಎಂದು ಮನೆ ತೊರೆದ ಬ್ಯಾಂಕ್‌ ನೌಕರ

Kantilal Bhansali a close aide of former CM BS Yediyurappa attacked assaulted in gadag
ಗದಗ2 ಗಂಟೆಗಳು ago

Assault Case : ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾಂತಿಲಾಲ್ ಬನ್ಸಾಲಿ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಅಪರಿಚಿತರು ಪರಾರಿ

Husband and wife arrested for honey-trapping in Hubballi-Dharwad
ಹುಬ್ಬಳ್ಳಿ3 ಗಂಟೆಗಳು ago

Honey Trap : ಹುಬ್ಬಳ್ಳಿ- ಧಾರವಾಡದಲ್ಲಿ ಹನಿಟ್ರ್ಯಾಪ್‌ಗೆ ಇಳಿದ ಗಂಡ-ಹೆಂಡತಿ

Heavy rains lash Yadgir Woman killed in lightning strike
ಮಳೆ3 ಗಂಟೆಗಳು ago

Karnataka Rain : ಯಾದಗಿರಿಯಲ್ಲಿ ಮಳೆಯಾರ್ಭಟ; ಸಿಡಿಲು ಬಡಿದು ಮಹಿಳೆ ಸಾವು, ಮತ್ತಿಬ್ಬರಿಗೆ ಗಾಯ

Ayudha Puja celebrations across the karnataka state Temples housefull by devotees
ಬೆಂಗಳೂರು4 ಗಂಟೆಗಳು ago

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

karnataka Weather Forecast
ಮಳೆ11 ಗಂಟೆಗಳು ago

Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ12 ಗಂಟೆಗಳು ago

Dina Bhavishya : ನಂಬಿದ ವ್ಯಕ್ತಿಗಳಿಂದ ಈ ರಾಶಿಯವರು ಮೋಸ ಹೋಗುತ್ತೀರಿ

karnataka Weather Forecast
ಮಳೆ23 ಗಂಟೆಗಳು ago

Karnataka Weather : ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ; ನಾಳೆಗೂ ಭಾರಿ ವರ್ಷಧಾರೆ

Actor Darshan
ಬೆಂಗಳೂರು24 ಗಂಟೆಗಳು ago

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ; ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್‌

Fake journalist arrested for targeting bakeries For money
ಬೆಂಗಳೂರು1 ದಿನ ago

Fake journalist : ಜನ ಸಾಮಾನ್ಯರ ಬಳಿ ಸುಲಿಗೆ ಮಾಡುತ್ತಿದ್ದ ನಕಲಿ‌ ಪತ್ರಕರ್ತ ಅರೆಸ್ಟ್‌

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌