Veloz Eve Red Carpet Award: ಮಾ.11ರಂದು ವೆಲೋಜ್ ಈವ್‌ 4ನೇ ವರ್ಷದ ಭಾರತೀಯ ಮಹಿಳಾ ಸಾಧಕಿಯರು ಪ್ರಶಸ್ತಿ ಪ್ರದಾನ - Vistara News

ನೋಟಿಸ್ ಬೋರ್ಡ

Veloz Eve Red Carpet Award: ಮಾ.11ರಂದು ವೆಲೋಜ್ ಈವ್‌ 4ನೇ ವರ್ಷದ ಭಾರತೀಯ ಮಹಿಳಾ ಸಾಧಕಿಯರು ಪ್ರಶಸ್ತಿ ಪ್ರದಾನ

Veloz Eve Red Carpet Award: ಬೆಂಗಳೂರಿನ ತಾಜ್ ಯಶವಂತಪುರ ಹೋಟೆಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಸಹಯೋಗ ನೀಡಿದೆ.

VISTARANEWS.COM


on

Veloz Eve Red Carpet Award
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವೆಲೋಜ್ ಈವ್‌ ಸಂಸ್ಥೆ ವತಿಯಿಂದ 4ನೇ ವರ್ಷದ ಐಡಬ್ಲ್ಯುಡಿಐಎಎ ಭಾರತೀಯ ಮಹಿಳಾ ಸಾಧಕಿಯರು ಪ್ರಶಸ್ತಿ (IWDIAA-indian women achievers award 2023-) ಪ್ರದಾನ ಸಮಾರಂಭವನ್ನು ಮಾ.11ರಂದು ಮಧ್ಯಾಹ್ನ 2.20 ರಿಂದ 5.30ರವರೆಗೆ ನಗರದ ತಾಜ್ ಯಶವಂತಪುರ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಸಹಯೋಗ ನೀಡಿದೆ. ವೆಲೋಜ್ ಈವ್‌ ಮತ್ತು ಐಡಬ್ಲ್ಯುಡಿಐಎಎ ಸಂಸ್ಥಾಪಕಿ ಮತ್ತು ನಿರ್ದೇಶಕಿ ಪದ್ಮಪ್ರಿಯಾ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Health Camp: ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿ ಏ.14ರಂದು ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ

Health Camp: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಏಪ್ರಿಲ್‌ 14ರಂದು ಬೆಂಗಳೂರಿನ ಪ್ಯಾಲೆಸ್‌ ಗುಟ್ಟಹಳ್ಳಿಯ ಬಿಲ್ವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

VISTARANEWS.COM


on

Health camp
Koo

ಬೆಂಗಳೂರು: ಒಕ್ಕಲಿಗ ಯುವ ಬ್ರಿಗೇಡ್ ಹಾಗೂ NRI ಒಕ್ಕಲಿಗರ ಬ್ರಿಗೇಡ್ ವತಿಯಿಂದ ಬಿಲ್ವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ ಸಹಯೋಗದಲ್ಲಿ ಏಪ್ರಿಲ್‌ 14ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು (Health Camp) ನಗರದ ಪ್ಯಾಲೆಸ್‌ ಗುಟ್ಟಹಳ್ಳಿಯ ವಿನಾಯಕ ಸರ್ಕಲ್‌ ಹತ್ತಿರದ 2ನೇ ಮುಖ್ಯರಸ್ತೆಯ ಬಿಲ್ವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಒಕ್ಕಲಿಗ ಯುವ ಬ್ರಿಗೇಡ್ ಹಾಗೂ NRI ಒಕ್ಕಲಿಗರ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಅವರು ಮಾಹಿತಿ ನೀಡಿದ್ದಾರೆ. ವಿಜಯನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಗೌರವ ಕಾರ್ಯದರ್ಶಿ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ವಿಜಯ ಕರ್ನಾಟಕ ಸಂಪಾದಕ ಸುದರ್ಶನ್ ಚೆನ್ನಂಗಿಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ | Fasting Tips: ನೀವು ಆಗಾಗ ಉಪವಾಸ ಮಾಡುತ್ತೀರಾ? ಹಾಗಾದರೆ ಇದನ್ನು ಓದಿ!

ಮುಖ್ಯ ಅತಿಥಿಗಳಾಗಿ ಸಹಾಯಕ ಪೊಲೀಸ್ ಆಯುಕ್ತ ರವಿ. ಪಿ, ವಿಸ್ತಾರ ನ್ಯೂಸ್ ಡಿಜಿಟಲ್ ವಿಭಾಗದ ಸಂಪಾದಕ ರಮೇಶ್ ಕುಮಾರ್‌ ನಾಯಕ್‌, ಮುಖ್ಯ ಎಂಜಿನಿಯರ್ ಬಿ. ಕೆ. ಪವಿತ್ರ, ವಿಶ್ವವಾಣಿ ಉಪ ಮುಖ್ಯ ಸಂಪಾದಕ ರಂಜಿತ್ ಎಚ್. ಅಶ್ವತ್ಥ್ , ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್‌, ಬಿಲ್ವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಕೇಶವ ಮೂರ್ತಿ, ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ.ಗೋಪಿನಾಥ್‌ ರಾಮಯ್ಯ ಉಪಸ್ಥಿತರಿರಲಿದ್ದಾರೆ.

Continue Reading

ಬೆಂಗಳೂರು

Samsung Solve for Tomorrow: ಸ್ಯಾಮ್‌ಸಂಗ್ ʼಸಾಲ್ವ್ ಫಾರ್ ಟುಮಾರೋʼ ಸೀಸನ್ 3 ಆರಂಭ; ಅರ್ಜಿ ಸಲ್ಲಿಕೆಗೆ ಮೇ 31 ಕೊನೆಯ ದಿನ

Samsung Solve for Tomorrow: ಸ್ಯಾಮ್‌ಸಂಗ್‌ನ ‘ಸಾಲ್ವ್ ಫಾರ್ ಟುಮಾರೋ’ ಕಾರ್ಯಕ್ರಮವು ವಿಭಿನ್ನ ವಯೋಮಾನದವರಿಗೆ ಎರಡು ಪ್ರತ್ಯೇಕ ಟ್ರ್ಯಾಕ್‌ (ವಿಭಾಗ)ಗಳ ಮೂಲಕ ನಡೆಯಲಿದೆ. ಅದರಲ್ಲಿ ಸ್ಕೂಲ್ ಟ್ರ್ಯಾಕ್ ‘ಸಮುದಾಯ ಮತ್ತು ನಾವೀನ್ಯತೆ’ ಎಂಬ ಥೀಮ್(ವಿಷಯ) ಹೊಂದಿದ್ದು, ಯೂತ್ ಟ್ರ್ಯಾಕ್ ‘ಪರಿಸರ ಮತ್ತು ಸುಸ್ಥಿರತೆ’ ಎಂಬ ಥೀಮ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಎನ್ವಿರಾನ್‌ಮೆಂಟ್ ಚಾಂಪಿಯನ್’ ಎಂದು ಕರೆಯಲ್ಪಡುವ ಯೂತ್ ಟ್ರ್ಯಾಕ್‌ನ ವಿಜೇತ ತಂಡವು ಇನ್‌ಕ್ಯುಬೇಶನ್‌ಗಾಗಿ 50 ಲಕ್ಷ ರೂ. ಅನುದಾನವನ್ನು ಪಡೆಯುತ್ತದೆ. ಬಹುಮಾನ ವಿಜೇತ ಸ್ಕೂಲ್ ಟ್ರ್ಯಾಕ್ ತಂಡವು ‘ಕಮ್ಯುನಿಟಿ ಚಾಂಪಿಯನ್’ ಎಂಬ ಮನ್ನಣೆ ಗಳಿಸಲಿದ್ದು, ಮೂಲಮಾದರಿಯ ಅಭಿವೃದ್ಧಿಗಾಗಿ 25 ಲಕ್ಷ ರೂ. ಅನುದಾನವನ್ನು ಸ್ವೀಕರಿಸಲಿದೆ. ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.

VISTARANEWS.COM


on

Samsung Solve for Tomorrow
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ದೆಹಲಿಯ ಫೌಂಡೇಶನ್ ಫಾರ್ ಇನ್ನೋವೇಶನ್ ಆ್ಯಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್ಐಟಿಟಿ) ಐಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಯುನೈಟೆಡ್ ನೇಷನ್ಸ್ ಇನ್ ಇಂಡಿಯಾ ಸಹಯೋಗದಲ್ಲಿ ತನ್ನ ಪ್ರಮುಖ ಸಿಎಸ್ಆರ್ ಉಪಕ್ರಮವಾದ ‘ಸಾಲ್ವ್ ಫಾರ್ ಟುಮಾರೋ’ (ನಾಳೆಗಾಗಿ ಪರಿಹಾರ)ದ (Samsung Solve for Tomorrow) 3ನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದ ಮೂಲಕ ಸ್ಯಾಮ್‌ಸಂಗ್ ದೇಶದ ಯುವಜನರಲ್ಲಿ ನವೀನ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಆಲೋಚನೆಗಳನ್ನು ಮೊಳೆಯಿಸುವ ಗುರಿಯನ್ನು ಹೊಂದಿದೆ.

ಸಾಲ್ವ್ ಫಾರ್ ಟುಮಾರೋ 2024 ಕಾರ್ಯಕ್ರಮವನ್ನು ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆ.ಬಿ. ಪಾರ್ಕ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಜ್ಞಾನಿ “ಜಿ’’ ಮತ್ತು ಹಿರಿಯ ನಿರ್ದೇಶಕ ಡಾ. ಸಂದೀಪ್ ಚಟರ್ಜಿ ಮತ್ತು ಯುನೈಟೆಡ್ ನೇಷನ್ಸ್ ಇನ್ ಇಂಡಿಯಾದ ರೆಸಿಡೆಂಟ್ ಕೋ-ಆರ್ಡಿನೇಟರ್ ಶೊಂಬಿ ಶಾರ್ಪ್ ಇತರ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದರು.

ಈ ಸಿಎಸ್ಆರ್ ಕಾರ್ಯಕ್ರಮವು ನವೀನ ಪರಿಹಾರ ಐಡಿಯಾಗಳ ಶಕ್ತಿಯನ್ನು ಮತ್ತು ಜೀವನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಮಾಡುತ್ತದೆ, ದೃಢವಾದ ಸಾಮಾಜಿಕ ಪ್ರಭಾವವನ್ನು ಬೀರುತ್ತದೆ ಮತ್ತು ಸ್ಯಾಮ್‌ಸಂಗ್ ನ #TogetherforTomorrow #EnablingPeople ಎಂಬ ತತ್ವಕ್ಕೆ ಬಲ ತುಂಬುತ್ತದೆ.

ಈ ವರ್ಷ, ‘ಸಾಲ್ವ್ ಫಾರ್ ಟುಮಾರೊ’ ಕಾರ್ಯಕ್ರಮವು ಸ್ಕೂಲ್ ಟ್ರ್ಯಾಕ್ ಮತ್ತು ಯೂತ್ ಟ್ರ್ಯಾಕ್ ಎಂಬ ಎರಡು ವಿಭಿನ್ನ ವಿಭಾಗಗಳ ಮೂಲಕ ನಡೆಯಲಿದೆ. ಈ ಟ್ರ್ಯಾಕ್ ಗಳು ನಿರ್ದಿಷ್ಟ ಥೀಮ್ ಹೊಂದಿದೆ ಮತ್ತು ವಿವಿಧ ವಯೋಮಾನದವರನ್ನು ಗುರಿಯಾಗಿರಿಸಿಕೊಂಡಿದೆ. ಎರಡೂ ಟ್ರ್ಯಾಕ್‌ಗಳು ಏಕಕಾಲದಲ್ಲಿ ಕಾರ್ಯಾರಂಭ ಮಾಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಮತ್ತು ಒಂದೇ ರೀತಿಯ ಹಿನ್ನೆಲೆಯನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ | Ola Cabs : ಜಾಗತಿಕ ಮಟ್ಟದಲ್ಲಿ ಒಲಾ ಕ್ಯಾಬ್ ಸೇವೆ ಬಂದ್​; ಯಾಕೆ ಈ ನಿರ್ಧಾರ ?

ಸ್ಕೂಲ್ ಟ್ರ್ಯಾಕ್ 14-17 ವಯಸ್ಸಿನ ವಿದ್ಯಾರ್ಥಿಗಳಿಗೆ ಇರುವ ವಿಭಾಗವಾಗಿದ್ದು, “ಸಮುದಾಯ ಮತ್ತು ಒಳಗೊಳ್ಳುವಿಕೆ” ಎಂಬ ಥೀಮ್ ಅನ್ನು ಹೊಂದಿದೆ. ಸಾಮಾಜಿಕ ಆವಿಷ್ಕಾರಗಳ ಮೂಲಕ ಹಿಂದುಳಿದ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ ಅವರ ಬದುಕು ಸುಧಾರಿಸುವ ಮತ್ತು ಸಾಮಾಜಿಕವಾಗಿ ಒಳಗೊಳ್ಳುವಿಕೆಯ ಅವಕಾಶ ಒದಗಿಸುವ ಮೂಲಕ ಹೊಸ ಭಾರತಕ್ಕೆ ಪರಿಹಾರ ಒದಗಿಸುವ ಕಡೆಗೆ ಗಮನ ನೀಡಲಿದೆ.

ಯೂತ್ ಟ್ರ್ಯಾಕ್ 18-22 ವಯಸ್ಸಿನ ತರುಣರ ವಿಭಾಗವಾಗಿದ್ದು, “ಪರಿಸರ ಮತ್ತು ಸುಸ್ಥಿರತೆ” ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಟ್ರ್ಯಾಕ್ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು, ಪರಿಸರವನ್ನು ರಕ್ಷಿಸಲು ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ನವೀನ ಪರಿಹಾರಗಳನ್ನು ಕಂಡು ಹಿಡಿಯಲಿದೆ ಮತ್ತು ಆ ಮೂಲಕ ಹೊಸ ಕಾಲಜ ಜಗತ್ತಿಗೆ ನೆರವು ನೀಡುವ ಕಾರ್ಯ ಮಾಡಲಿದೆ.

ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆಬಿ ಪಾರ್ಕ್, ” ಸ್ಯಾಮ್‌ಸಂಗ್‌ನಲ್ಲಿ, ನಾವು ನವೀನ ಆಲೋಚನೆಗಳು ಮತ್ತು ಪರಿವರ್ತಕ ತಂತ್ರಜ್ಞಾನಗಳ ಮೂಲಕ ಭವಿಷ್ಯವನ್ನು ರೂಪಿಸಲು ಮತ್ತು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ. ಮುಂದಿನ ಪೀಳಿಗೆಯ ಹೊಸ ಆಲೋಚನೆ ಉಳ್ಳವರನ್ನು ಪೋಷಿಸುವುದು ಮತ್ತು ಸಾಮಾಜಿಕ ಬದಲಾವಣೆಗೆ ಉತ್ತೇಜಿಸುವುದು ನಮ್ಮ ಧ್ಯೇಯವಾಗಿದೆ. ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮವು ನಿಜವಾಗಿಯೂ ಭಾರತದ ಯುವಕರಿಗೆ ಜನರ ಜೀವನವನ್ನು ಸುಧಾರಿಸುವ ಅರ್ಥಪೂರ್ಣ ಆವಿಷ್ಕಾರಗಳನ್ನು ಕಂಡು ಹಿಡಿಯಲು ಒಂದು ಅಪೂರ್ವ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

ಮೊದಲ ಎರಡು ಆವೃತ್ತಿಗಳಲ್ಲಿ, ಈ ಸಿಎಸ್‌ಆರ್ ಉಪಕ್ರಮವು ನಮ್ಮ ಮುಂದಿನ ಪೀಳಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದನ್ನು ನಾವು ಗಮನಿಸಿದ್ದೇವೆ. ಅವರು ಆ ಕಾರ್ಯಕ್ರಮದ ನಂತರ ತಮ್ಮ ಸಾಮಾಜಿಕ ಉದ್ಯಮಶೀಲತೆಯ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಅದರ ಮೂರನೇ ಆವೃತ್ತಿಯಲ್ಲಿ, ಎರಡು ಪ್ರತ್ಯೇಕ ಟ್ರ್ಯಾಕ್‌ಗಳನ್ನು ಪರಿಚಯಿಸಿದ್ದೇವೆ. ಆ ಮೂಲಕ ನಾವು ಭಾರತಕ್ಕೆ ಮತ್ತು ಜಗತ್ತಿಗೆ ಏಕಕಾಲದಲ್ಲಿ ಪರಿಹಾರ ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಮುಖ್ಯವಾಗಿ, ಈ ಮಹತ್ವದ ಸಿಎಸ್ಆರ್ ಕಾರ್ಯಕ್ರಮದ ಮೂಲಕ, ನಾವು ದೇಶದಲ್ಲಿ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಬಯಸುತ್ತೇವೆ” ಎಂದು ಹೇಳಿದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಹಿರಿಯ ನಿರ್ದೇಶಕ ಮತ್ತು ವಿಜ್ಞಾನಿ ‘ಜಿ’ ಡಾ.ಸಂದೀಪ್ ಚಟರ್ಜಿ ಮಾತನಾಡಿ, “ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯು ಭಾರತ ಸರ್ಕಾರದ ಆದ್ಯತೆಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸಲು ಮಾನವ ಸಾಮರ್ಥ್ಯಗಳ ಜೊತೆಗೆ ತಂತ್ರಜ್ಞಾನವನ್ನು ಸಂಯೋಜಿಸಲು ಇದು ಸೂಕ್ತ ಸಮಯವಾಗಿದೆ. ಆಧುನಿಕ ಮನಸ್ಸು ಮತ್ತು ಕೌಶಲ್ಯಗಳನ್ನು ಹೊಂದಿರುವ ಭಾರತೀಯ ಯುವಕರು ಪರಿಸರದ ಕುರಿತು ಗಾಢವಾದ ಕಾಳಜಿ ವಹಿಸುತ್ತಾರೆ. ಆಧುನಿಕ ಸಮಗ್ರ ಆವಿಷ್ಕಾರಗಳನ್ನು ಬಳಸಿಕೊಂಡು, ವಿವಿಧ ಜಾಗತಿಕವಾದ ತಳಮಟ್ಟದ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಬಹುದು. ಯುವಕರ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಬೆಳವಣಿಗೆ ಸಾಧಿಸುವ ‘ನಾಳೆಗಾಗಿ ಪರಿಹಾರ (ಸಾಲ್ವ್ ಫಾರ್ ಟುಮಾರೋ)’ ನಂತಹ ಕಾರ್ಯಕ್ರಮಗಳು ಭಾರತ ಸರ್ಕಾರದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಾಕ್ಷಿಯಂತೆ ಕಾರ್ಯ ನಿರ್ವಹಿಸುತ್ತದೆ” ಎಂದರು.

ಇದನ್ನೂ ಓದಿ | Money Guide: ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ಇ-ಶ್ರಮ ಯೋಜನೆ; ಹೀಗೆ ಹೆಸರು ನೋಂದಾಯಿಸಿ

ಐಐಟಿ ದೆಹಲಿಯ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ, ” ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್‌ನ ಪ್ರಮುಖ ಪಾಲುದಾರರಾಗಿ ಮುಂದುವರಿಯಲು ನಮಗೆ ಹೆಮ್ಮೆ ಇದೆ. ಈ ಸಹಯೋಗವು ಹೊಸತನವನ್ನು ಉತ್ತೇಜಿಸುವ ಮತ್ತು ಯುವ ಮನಸ್ಸುಗಳನ್ನು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಶಕ್ತಗೊಳಿಸುವ ಕಾರ್ಯ ಮಾಡಲಿದೆ” ಎಂದು ಹೇಳಿದರು.

ಭಾರತದಲ್ಲಿನ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಶೊಂಬಿ ಶಾರ್ಪ್ ಅವರು ಮಾತನಾಡಿ, “ಸ್ಯಾಮ್‌ಸಂಗ್‌ನ ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿರುವುದು ನನಗೆ ಸಂತೋಷ ತಂದಿದೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ಯುವಕರಿಗೆ ನಾವೀನ್ಯತೆ ತರಲು ಉತ್ತೇಜಿಸುವ ಉತ್ತೇಜಕ ಉಪಕ್ರಮವಾಗಿದೆ. ಭಾರತದಲ್ಲಿನ ಯುಎನ್ ವ್ಯವಸ್ಥೆಯು ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದಂತಹ ಯುವ ಜನರ ಮಹತ್ವಾಕಾಂಕ್ಷೆಗಳು ಮತ್ತು ನಾಯಕತ್ವವನ್ನು ಪ್ರೇರೇಪಿಸುವ ಖಾಸಗಿ ವಲಯದ ಉಪಕ್ರಮಗಳನ್ನು ಬೆಂಬಲಿಸುತ್ತದೆ ಮತ್ತು ಅವರೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಇತಿಹಾಸದಲ್ಲಿಯೇ ಶ್ರೇಷ್ಠ ಯುವ ಪೀಳಿಗೆಯ ಜೊತೆಗೆ ಭಾರತವು ಹಿಂದೆಂದಿಗಿಂತಲೂ ಹೆಚ್ಚು ಯುವ ಮನಸ್ಸುಗಳನ್ನು ಮತ್ತು ಅವರ ಹೊಸ ಆಲೋಚನೆಗಳನ್ನು ಜೊತೆಗೂಡಿಸುತ್ತದೆ! ಇದರರ್ಥ ಭಾರತೀಯ ಪರಿಹಾರಗಳು ಜಾಗತಿಕ ಪರಿಹಾರಗಳೂ ಆಗಿವೆ” ಎಂದು ಹೇಳಿದರು.

ಏನಿದು ಸ್ಯಾಮ್‌ಸಂಗ್ ʼಸಾಲ್ವ್ ಫಾರ್ ಟುಮಾರೋʼ ಕಾರ್ಯಕ್ರಮ, ಯಾರು ಭಾಗವಹಿಸಬಹುದು

ಸ್ಕೂಲ್ ಟ್ರ್ಯಾಕ್‌ನಲ್ಲಿ 14-17 ವರ್ಷ ವಯಸ್ಸಿನವರು -ವೈಯಕ್ತಿಕವಾಗಿ ಅಥವಾ 5 ಸದಸ್ಯರ ತಂಡಗಳಲ್ಲಿ ಭಾಗವಹಿಸಬಹುದು. ಅವರು “ಸಮುದಾಯ ಮತ್ತು ಒಳಗೊಳ್ಳುವಿಕೆ (ಕಮ್ಯುನಿಟಿ ಆಂಡ್ ಇನ್ ಕ್ಲೂಷನ್)” ಥೀಮ್‌ನಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸಬಹುದು. ಯೂತ್ ಟ್ರ್ಯಾಕ್‌ನಲ್ಲಿ 18-22 ವರ್ಷ ವಯಸ್ಸಿನವರು -ವೈಯಕ್ತಿಕವಾಗಿ ಅಥವಾ 5 ಸದಸ್ಯರ ತಂಡಗಳಲ್ಲಿ ಭಾಗವಹಿಸಬಹುದಾಗಿದ್ದು, ಅವರು “ಪರಿಸರ ಮತ್ತು ಸುಸ್ಥಿರತೆ”(ಎನ್ವಿರಾನ್ಮೆಂಟ್ ಆಂಡ್ ಸಸ್ಟೇನೇಬಲಿಟಿ) ಥೀಮ್‌ನಲ್ಲಿ ತಮ್ಮ ಆಲೋಚನೆಗಳನ್ನು ಸಲ್ಲಿಸಬಹುದು.

ಸ್ಪರ್ಧೆಯ ವಿಚಾರಗಳು

ಸ್ಕೂಲ್ ಟ್ರ್ಯಾಕ್ ಗೆ “ಸಮುದಾಯ ಮತ್ತು ಒಳಗೊಳ್ಳುವಿಕೆ” ಥೀಮ್ ಇದ್ದು, ಹಿಂದುಳಿದ ವರ್ಗಕ್ಕೆ ಆರೋಗ್ಯ ಸೇವೆ ಲಭ್ಯತೆ ಸುಧಾರಿಸುವುದು, ಕಲಿಕಾ ವಿಧಾನಗಳು ಮತ್ತು ಶಿಕ್ಷಣ ಲಭ್ಯತೆಯನ್ನು ಸುಲಭಗೊಳಿಸುವುದು ಮತ್ತು ಎಲ್ಲರಿಗೂ ಸಾಮಾಜಿಕ ಒಳಗೊಳ್ಳುವಿಕೆಯ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.

ಯೂತ್ ಟ್ರ್ಯಾಕ್ ಗೆ “ಪರಿಸರ ಮತ್ತು ಸುಸ್ಥಿರತೆ” ಥೀಮ್ ಇದ್ದು, ಈ ತಂಡ ಪರಿಸರ ಸಂರಕ್ಷಣೆ, ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುವುದು ಮತ್ತು ಸುಸ್ಥಿರತೆಯನ್ನು ಪ್ರೇರೇಪಿಸುವ ಕೆಲಸ ಮಾಡಲಿದೆ.

ವಿಜೇತರಿಗೆ ಏನು ಸಿಗುತ್ತದೆ?

ಸ್ಯಾಮ್ ಸಂಗ್, MeitY, ಐಐಟಿ ದೆಹಲಿ ಒಳಗೊಂಡು ಹಲವಾರು ವಿವಿಧ ಉದ್ಯಮ ತಜ್ಞರಿಂದ ತರಬೇತಿ ದೊರೆಯಲಿದೆ ಮತ್ತು ಭಾರತದಲ್ಲಿರುವ ವಿಶ್ವಸಂಸ್ಥೆ ತಂಡದಿಂದ ತಾಂತ್ರಿಕ ಬೆಂಬಲ ಲಭ್ಯವಾಗಲಿದೆ. ಹೆಚ್ಚುವರಿಯಾಗಿ, ಭಾಗವಹಿಸುವವರು ಮೂಲಮಾದರಿಗಳ ಕುರಿತ ತಮ್ಮ ಆಲೋಚನೆಗಳನ್ನು ಹೆಚ್ಚು ಸ್ಪಷ್ಟಗೊಳಿಸಲು ವಿಶೇಷ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆಯುತ್ತಾರೆ. ಸ್ಯಾಮ್‌ಸಂಗ್ ನಾಯಕರೊಂದಿಗೆ ಸಂವಾದದಲ್ಲಿ ಭಾವಹಿಸುವ ಅವಕಾಶ ಹೊಂದುತ್ತಾರೆ ಮತ್ತು ಮೂಲಮಾದರಿ ಅಭಿವೃದ್ಧಿ ಮತ್ತು ವರ್ಧನೆಗಾಗಿ ಆಕರ್ಷಕ ಅನುದಾನವನ್ನು ಪಡೆಯುತ್ತಾರೆ.

ಸ್ಕೂಲ್ ಟ್ರ್ಯಾಕ್: ಸೆಮಿ-ಫೈನಲ್ ಹಂತಕ್ಕೆ ತಲುಪಿದ 10 ತಂಡಗಳು ಮೂಲಮಾದರಿ ಅಭಿವೃದ್ಧಿಗೆ 20,000 ರೂ. ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್‌ಗಳನ್ನು ಪಡೆಯುತ್ತಾರೆ. ಫೈನಲ್ ಹಂತ ತಲುಪಿದ 5 ತಂಡಗಳು ಮೂಲಮಾದರಿ ಬೆಳವಣಿಗೆಗೆ ತಲಾ ರೂ. 1 ಲಕ್ಷ ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಗಳನ್ನು ಪಡೆಯುತ್ತವೆ.

ಯೂತ್ ಟ್ರ್ಯಾಕ್: ಸೆಮಿ-ಫೈನಲ್ ಹಂತಕ್ಕೆ ತಲುಪಿದ 10 ತಂಡಗಳು ಮೂಲಮಾದರಿ ಅಭಿವೃದ್ಧಿಗೆ ರೂ. 20,000 ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಲ್ಯಾಪ್‌ಟಾಪ್ ಗಳನ್ನು ಪಡೆಯುತ್ತಾರೆ. ಫೈನಲ್ ಹಂತ ತಲುಪಿದ 5 ತಂಡಗಳು ಮೂಲಮಾದರಿ ಹೆಚ್ಚಳಕ್ಕೆ ತಲಾ ರೂ. 1 ಲಕ್ಷ ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಝಡ್ ಫ್ಲಿಪ್ ಸ್ಮಾರ್ಟ್ ಫೋನ್ ಗಳನ್ನು ಪಡೆಯುತ್ತವೆ.

    ವಿಜೇತರು ಏನು ಪಡೆಯುತ್ತಾರೆ?

    ಸ್ಕೂಲ್ ಟ್ರ್ಯಾಕ್: ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಕಮ್ಯುನಿಟಿ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಮೂಲಮಾದರಿ ಅಭಿವೃದ್ಧಿಗಾದಿ 25 ಲಕ್ಷ ರೂ. ಅನುದಾನವನ್ನು ನೀಡಲಾಗುತ್ತದೆ. ವಿಜೇತ ತಂಡಗಳ ಶಾಲೆಗಳಿಗೆ ಶೈಕ್ಷಣಿಕ ಪ್ರಗತಿ ಸಾಧಿಸಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಕ್ಕಳ ಮನಸ್ಥಿತಿ ಉತ್ತೇಜಿಸಲು ಸ್ಯಾಮ್ ಸಂಗ್ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಯೂತ್ ಟ್ರ್ಯಾಕ್: ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಪರಿಸರ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಐಐಟಿ-ದೆಹಲಿಯಲ್ಲಿ ಇನ್ ಕ್ಯುಬೇಷನ್‌ಗಾಗಿ ರೂ. 50 ಲಕ್ಷದ ಅನುದಾನವನ್ನು ಪಡೆಯುತ್ತದೆ. ವಿಜೇತ ತಂಡಗಳ ಕಾಲೇಜುಗಳಿಗೆ ತಮ್ಮ ಶೈಕ್ಷಣಿಕ ಬೆಳವಣಿಗೆ ಸಾಧಿಸಲು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಉದ್ಯಮಶೀಲತಾ ಮನೋಭಾವ ಉತ್ತೇಜಿಸಲು ಸ್ಯಾಮ್‌ಸಂಗ್ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಇಲ್ಲಿ ಅರ್ಜಿ ಸಲ್ಲಿಸಬಹುದು: www.samsung.com/in/solvefortomorrow

    ಯಾವಾಗಿನಿಂದ ಅರ್ಜಿ ಸಲ್ಲಿಕೆ: ಏಪ್ರಿಲ್ 9ರಿಂದ ಆರಂಭ

    ಕೊನೆಯ ದಿನಾಂಕ: ಮೇ 31ರಂದು ಸಂಜೆ 5 ಗಂಟೆವರೆಗೆ

    ಕಾರ್ಯಕ್ರಮದ ವಿವರಗಳು

    ಸ್ಕೂಲ್ ಟ್ರ್ಯಾಕ್: ಸಾಲ್ವಿಂಗ್ ಫಾರ್ ಇಂಡಿಯಾ (ಭಾರತಕ್ಕಾಗಿ ಪರಿಹಾರ)ಸ್ಕೂಲ್ ಟ್ರ್ಯಾಕ್‌ ವಿಭಾಗದಲ್ಲಿ ಐದು ಸದಸ್ಯರ ತಂಡಗಳನ್ನು ರಚಿಸಲು ಆಹ್ವಾನಿಸಲಾಗುತ್ತದೆ ಮತ್ತು ‘ಸಮುದಾಯ ಮತ್ತು ನಾವೀನ್ಯತೆ’ ಥೀಮ್ ಅಡಿಯಲ್ಲಿ ತಮ್ಮ ನವೀನ ಆಲೋಚನೆಗಳನ್ನು ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತದೆ. ಕಾರ್ಯಕ್ರಮವು ಅಪ್ಲಿಕೇಶನ್ ವಿಂಡೋ, ಪ್ರಾದೇಶಿಕ ಸುತ್ತುಗಳು, ನಾವೀನ್ಯತೆ ನಡಿಗೆ ಮತ್ತು ಗ್ರ್ಯಾಂಡ್ ಫಿನಾಲೆ ಎಂಬ ನಾಲ್ಕು ಹಂತಗಳ ಮೂಲಕ ನಡೆಯುತ್ತದೆ.

    ಅಪ್ಲಿಕೇಶನ್ ವಿಂಡೋದ ಹಂತದಲ್ಲಿ ಭಾಗವಹಿಸುವ ತಂಡಗಳು ಸ್ವೀಕೃತಿಯ ಡಿಜಿಟಲ್ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತವೆ. ಮೊದಲ ಶಾರ್ಟ್‌ಲಿಸ್ಟ್ ಪ್ರಾದೇಶಿಕ ಹಂತದಲ್ಲಿ ನಡೆಯುತ್ತದೆ, ಅಲ್ಲಿ 50 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ನಡೆಯುವ ಪ್ರಾದೇಶಿಕ ಹಂತದ ಸುತ್ತುಗಳಲ್ಲಿ, ಈ 50 ತಂಡಗಳು ತಮ್ಮ ಆಲೋಚನೆಗಳನ್ನು ಅಥವಾ ಐಡಿಯಾಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತವೆ. ಇಲ್ಲಿಂದ, 10 ತಂಡಗಳು ಸೆಮಿ ಫೈನಲ್ ಹಂತಕ್ಕೆ ಹೋಗಿ ಅಲ್ಲಿ ನಾವೀನ್ಯತೆ ನಡಿಗೆ ಹಂತದಲ್ಲಿ ಭಾಗವಹಿಸುತ್ತವೆ. ಅಲ್ಲಿ ಅವರು ಸ್ಯಾಮ್‌ಸಂಗ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಪ್ರಾದೇಶಿಕ ಪ್ರಧಾನ ಕಚೇರಿಗಳಲ್ಲಿ ನಡೆಯುವ ಕಾರ್ಯಾಗಾರಗಳಿಗೆ ಹಾಜರಾಗುತ್ತಾರೆ. ನಂತರ ರಾಷ್ಟ್ರ ಮಟ್ಟದಲ್ಲಿ ಐಐಟಿ ದೆಹಲಿಯಲ್ಲಿ ಈ 10 ಸೆಮಿ-ಫೈನಲಿಸ್ಟ್‌ಗಳು ತಮ್ಮ ಆಲೋಚನೆಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತಾರೆ. ಬಹುಮಾನವಾಗಿ, ಪ್ರತಿ ತಂಡವು ಮೂಲಮಾದರಿ ಅಭಿವೃದ್ಧಿಗೆ ರೂ. ಅನುದಾನವನ್ನು ಮತ್ತು ಇತ್ತೀಚಿನ ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಗಳನ್ನು ಪಡೆಯುತ್ತದೆ. ರಾಷ್ಟ್ರೀಯ ಪಿಚ್ ಈವೆಂಟ್‌ನಲ್ಲಿ ಆಯ್ಕೆಯಾಗುವ 5 ತಂಡಗಳು ಫೈನಲ್ ಪ್ರವೇಶಿಸುತ್ತವೆ. ಅಲ್ಲಿ ಪ್ರತೀ ತಂಡಗಳು ತರಬೇತಿಗೆ ಒಳಗಾಗುತ್ತವೆ ಮತ್ತು ಅವರ ಪರಿಹಾರ ಐಡಿಯಾಗಳನ್ನು ಫೈನಲ್ ತೀರ್ಪುಗಾರರಿಗೆ ಸಲ್ಲಿಸುತ್ತವೆ. ಫೈನಲ್ ನಲ್ಲಿ ಭಾಗವಹಿಸುವ ಪ್ರತಿ ತಂಡದ ಎಲ್ಲಾ ಭಾಗವಹಿಸುವವರು ಇತ್ತೀಚಿನ ಗ್ಯಾಲಕ್ಸಿ ವಾಚ್ ಪಡೆಯುತ್ತಾರೆ. ಜೊತೆಗೆ ಮೂಲಮಾದರಿಯ ಪ್ರಗತಿಗಾಗಿ 1 ಲಕ್ಷ ರೂ. ಅನುದಾನವನ್ನು ತಂಡ ಪಡೆಯುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಕಮ್ಯುನಿಟಿ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಅವರ ಮೂಲಮಾದರಿಯ ಪ್ರಗತಿಗೆ 25 ಲಕ್ಷ ರೂ. ಅನುದಾನವನ್ನು ಮತ್ತು ಅವರ ಶಾಲೆಗೆ ಅತ್ಯಾಕರ್ಷಕ ಸ್ಯಾಮ್ ಸಂಗ್ ಗ್ಯಾಲಕ್ಸಿ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಯೂತ್ ಟ್ರ್ಯಾಕ್: ಸಾಲ್ವಿಂಗ್ ಫಾರ್ ದಿ ವರ್ಲ್ಡ್ (ಜಗತ್ತಿಗಾಗಿ ಪರಿಹಾರ)

    ಯೂತ್ ಟ್ರ್ಯಾಕ್‌ನಲ್ಲಿ, ಆಕಾಂಕ್ಷಿಗಳು ಐದು ಸದಸ್ಯರು ಇರುವ ತಂಡವನ್ನು ರಚಿಸುತ್ತಾರೆ ಮತ್ತು “ಪರಿಸರ ಮತ್ತು ಸುಸ್ಥಿರತೆ” ಎಂಬ ವಿಷಯದ ಅಡಿಯಲ್ಲಿ ತಮ್ಮ ನವೀನ ಆಲೋಚನೆಗಳನ್ನು ಸಲ್ಲಿಸುತ್ತಾರೆ. ಮೊದಲ ಶಾರ್ಟ್‌ಲಿಸ್ಟ್ ಪ್ರಾದೇಶಿಕ ಹಂತದಲ್ಲಿ ನಡೆಯಲಿದ್ದು, ಅಲ್ಲಿ 50 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರದ ಪ್ರಾದೇಶಿಕ ಸುತ್ತುಗಳಲ್ಲಿ , ಈ 50 ತಂಡಗಳು ತಮ್ಮ ಹೊಸ ಆಲೋಚನೆಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತವೆ. ಇಲ್ಲಿಂದ, 10 ಸೆಮಿ-ಫೈನಲ್ ಹಂತಕ್ಕೆ ತಲುಪಿದ ತಂಡಗಳು ನಾವೀನ್ಯತೆ ನಡಿಗೆ ಹಂತಕ್ಕೆ ಸಾಗುತ್ತವೆ. ಅಲ್ಲಿ ಅವರು ಸ್ಯಾಮ್‌ಸಂಗ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಪ್ರಾದೇಶಿಕ ಪ್ರಧಾನ ಕಚೇರಿಗಳಲ್ಲಿ ಕಾರ್ಯಾಗಾರಗಳಿಗೆ ಹಾಜರಾಗುತ್ತಾರೆ. ನಂತರ ರಾಷ್ಟ್ರೀಯ ಪಿಚ್ ಈವೆಂಟ್ ನಲ್ಲಿ ಈ 10 ಸೆಮಿ-ಫೈನಲಿಸ್ಟ್‌ಗಳು ತಮ್ಮ ಆಲೋಚನೆಗಳನ್ನು ಐಐಟಿ ದೆಹಲಿಯ ತೀರ್ಪುಗಾರರಿಗೆ ತಿಳಿಸುತ್ತಾರೆ. ಬಹುಮಾನವಾಗಿ, ಪ್ರತಿ ತಂಡವು ಮೂಲಮಾದರಿ ಅಭಿವೃದ್ಧಿಗೆ ರೂ. 20,000 ಅನುದಾನವನ್ನು ಮತ್ತು ಇತ್ತೀಚಿನ ಸ್ಯಾಮ್ ಸಂಗ್ ಗ್ಯಾಲಕ್ಸಿ ಲ್ಯಾಪ್‌ಟಾಪ್‌ಗಳನ್ನು ಪಡೆಯುತ್ತಾರೆ. ರಾಷ್ಟ್ರೀಯ ಪಿಚ್ ಈವೆಂಟ್‌ನಲ್ಲಿ ಆಯ್ಕೆ ಮಾಡಲಾದ 5 ಅಂತಿಮ ತಂಡಗಳು ತರಬೇತಿಗೆ ಒಳಪಡುತ್ತಾರೆ ಮತ್ತು ಅವರ ಪರಿಹಾರ ಐಡಿಯಾಗಳನ್ನು ಫೈನಲ್ ತೀರ್ಪುಗಾರರಿಗೆ ಸಲ್ಲಿಸುತ್ತಾರೆ. ಇಲ್ಲಿ ಭಾಗವಹಿಸಿದ ಎಲ್ಲರಿಗೂ ಗೊಸ ಗ್ಯಾಲಕ್ಸಿ ಝಡ್ ಫ್ಲಿಪ್ ಸ್ಮಾರ್ಟ್‌ಫೋನ್ ಪಡೆಯುತ್ತಾರೆ. ಜೊತೆಗೆ ತಂಡಕ್ಕೆ ಮೂಲಮಾದರಿಯ ಅಭಿವೃದ್ಧಿಗೆ ರೂ. 1 ಲಕ್ಷದ ಅನುದಾನವನ್ನು ನೀಡಲಾಗುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024 “ಪರಿಸರ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಇನ್ ಕ್ಯುಬೇಷನ್ ಗೆ ರೂ. 50 ಲಕ್ಷದ ಅನುದಾನವನ್ನು ಮತ್ತು ಅವರ ಕಾಲೇಜಿಗೆ ಅತ್ಯಾಕರ್ಷಕ ಸ್ಯಾಮ್ ಸಂಗ್ ಗ್ಯಾಲಕ್ಸಿ ಉತ್ಪನ್ನಗಳನ್ನು ನೀಡಲಾಗುತ್ತದೆ.

    ಎರಡು ಟ್ರ್ಯಾಕ್‌ಗಳು ಅಥವಾ ವಿಭಾಗಗಳು ಪರಸ್ಪರ ಸ್ಪರ್ಧಿಸುವುದಿಲ್ಲ ಮತ್ತು ಪ್ರತಿ ಟ್ರ್ಯಾಕ್‌ಗಳು ವಿಭಿನ್ನ ಥೀಮ್‌ಗಳು ಮತ್ತು ವಯಸ್ಸಿನ ಗುಂಪುಗಳ ಪ್ರಕಾರವೇ ಪ್ರತ್ಯೇಕ ತರಬೇತಿ, ಮಾರ್ಗದರ್ಶನ ಮತ್ತು ಕಲಿಕೆಯ ಅವಕಾಶಗಳನ್ನು ಪಡೆಯುತ್ತವೆ. ಮುಖ್ಯ ಸ್ಪರ್ಧೆಯ ಜೊತೆಗೆ, ಭಾಗವಹಿಸುವವರು ‘ಸೋಷಿಯಲ್ ಮೀಡಿಯಾ ಚಾಂಪಿಯನ್ ಅವಾರ್ಡ್’ ಮತ್ತು ‘ಗುಡ್ವಿಲ್ ಅವಾರ್ಡ್’ ನಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಸ್ಪರ್ಧಿಸುವ ಅವಕಾಶವನ್ನು ಹೊಂದಿರುತ್ತಾರೆ. ‘ ಸೋಷಿಯಲ್ ಮೀಡಿಯಾ ಚಾಂಪಿಯನ್ ಅವಾರ್ಡ್’ ನಲ್ಲಿ ಪ್ರತಿ ಟ್ರ್ಯಾಕ್‌ನ ಸಾಮಾಜಿಕ ಮಾಧ್ಯಮ ಚಾಂಪಿಯನ್‌ಗಳು ರೂ. 50000 ಬಹುಮಾನವನ್ನು ಪಡೆಯುತ್ತಾರೆ. ನಾವೀನ್ಯತೆ ನಡಿಗೆ ಸುತ್ತಿನಲ್ಲಿ ಘೋಷಿಸಲಾಗುತ್ತದೆ. ‘ಗುಡ್‌ವಿಲ್ ಅವಾರ್ಡ್’ ಪ್ರಶಸ್ತಿ ಅಡಿಯಲ್ಲಿ ಪ್ರತೀ ಟ್ರ್ಯಾಕ್ ನ ವಿಜೇತರು ವ್ಯೂವರ್ಸ್ ಚಾಯ್ಸ್ ಐಡಿಯಾಗಾಗಿ ರೂ. 1 ಲಕ್ಷದ ಬಹುಮಾನ ಪಡೆಯುತ್ತಾರೆ. ಈ ಪ್ರಶಸ್ತಿಯನ್ನು ಗ್ರ್ಯಾಂಡ್ ಫಿನಾಲೆಯಲ್ಲಿ ಘೋಷಿಸಲಾಗುತ್ತದೆ.

    ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಭಾರತದಲ್ಲಿ ಸ್ಪರ್ಧೆಗೆ ಹೆಸರು ನೋಂದಾಯಿಸಲು, www.samsung.com/in/solvefortomorrow ಗೆ ಭೇಟಿ ನೀಡಿ. ಅರ್ಜಿ ಸಲ್ಲಿಕೆಯ ಅವಕಾಶ ಮೇ 31, 202ರಂದು ಸಂಜೆ 5 ಗಂಟೆಗೆ ಮುಗಿಯಲಿದೆ.

    ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮವನ್ನು 2010 ರಲ್ಲಿ ಯುಎಸ್ ನಲ್ಲಿ ಮೊದಲು ಪ್ರಾರಂಭಿಸಲಾಯಿತು. ಪ್ರಸ್ತುತ ಈ ಕಾರ್ಯಕ್ರಮವು ಜಾಗತಿಕವಾಗಿ 63 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈಗಾಗಲೇ ಪ್ರಪಂಚದಾದ್ಯಂತ 2.3 ಮಿಲಿಯನ್ ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಜಾಗತಿಕ ಸಿಎಸ್‌ಆರ್ ತತ್ತ್ವವಾದ ‘ಟುಗೆದರ್ ಫಾರ್ ಟುಮಾರೋ! ಎನೇಬಲಿಂಗ್ ಪೀಪಲ್’ ನಾಳಿನ ನಾಯಕರನ್ನು ಸಶಕ್ತಗೊಳಿಸಲು ಪ್ರಪಂಚದಾದ್ಯಂತದ ಯುವಜನರಿಗೆ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ. ನಮ್ಮ ಸಿಎಸ್ಆರ್ ವೆಬ್‌ಪುಟ http://csr.samsung.com ದಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಸಿಎಸ್ಆರ್ ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಿರಿ.

    ಇದನ್ನೂ ಓದಿ | Money Guide: ಎಚ್‌ಡಿಎಫ್‌ಸಿಯಿಂದ ಎಸ್‌ಬಿಐವರೆಗೆ; ಫಿಕ್ಸೆಡ್‌ ಡೆಪಾಸಿಟ್‌ಗೆ ಶೇ. 7ಕ್ಕಿಂತ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳಿವು

    ಸ್ಯಾಮ್ ಸಂಗ್ ಇಂಡಿಯಾ ಕುರಿತು ಇತ್ತೀಚಿನ ಸುದ್ದಿಗಳಿಗಾಗಿ, ದಯವಿಟ್ಟು http://news.samsung.com/in ನಲ್ಲಿ ಸ್ಯಾಮ್ ಸಂಗ್ ಇಂಡಿಯಾ ನ್ಯೂಸ್ ರೂಮ್ ಗೆ ಭೇಟಿ ನೀಡಿ. ಹಿಂದಿಗಾಗಿ, https://news.samsung.com/bharat ನಲ್ಲಿ ಸ್ಯಾಮ್ ಸಂಗ್ ನ್ಯೂಸ್‌ರೂಮ್ ಭಾರತ್‌ಗೆ ಲಾಗ್ ಇನ್ ಮಾಡಿ. ನೀವು ಟ್ವಿಟ್ಟರ್ ನಲ್ಲಿ @SamsungNewsIN ನಲ್ಲಿಯೂ ನಮ್ಮನ್ನು ಫಾಲ್ ಮಾಡಬಹುದು.

    Continue Reading

    ಧಾರವಾಡ

    Book Release: ಧಾರವಾಡದಲ್ಲಿ ಏ.13ರಂದು ನವಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆ ಶುಭಾರಂಭ, 5 ಕೃತಿಗಳ ಲೋಕಾರ್ಪಣೆ

    Book Release: ಧಾರವಾಡದ ಲಿಂಗಾಯತ ಟೌನ್‌ ಹಾಲ್‌ನಲ್ಲಿಏಪ್ರಿಲ್‌ 13ರಂದು ಬೆಳಗ್ಗೆ 10ಗಂಟೆಗೆ ನವಕರ್ನಾಟಕ ಪ್ರಕಾಶನದ ʼಪುಸ್ತಕ ಮಳಿಗೆಯ ಶುಭಾರಂಭ ಹಾಗೂ 5 ಕೃತಿಗಳ ಲೋಕಾರ್ಪಣೆʼ ಕಾರ್ಯಕ್ರಮ ನಡೆಯಲಿದೆ.

    VISTARANEWS.COM


    on

    Book Release
    Koo

    ಧಾರವಾಡ: ನವಕರ್ನಾಟಕ ಪ್ರಕಾಶನದ ʼಪುಸ್ತಕ ಮಳಿಗೆಯ ಶುಭಾರಂಭ ಹಾಗೂ 5 ಕೃತಿಗಳ ಲೋಕಾರ್ಪಣೆʼ ಕಾರ್ಯಕ್ರಮವನ್ನು ಏಪ್ರಿಲ್‌ 13ರಂದು ಬೆಳಗ್ಗೆ 10ಗಂಟೆಗೆ ವಿದ್ಯಾಕಾಶಿ-ಸಾಂಸ್ಕೃತಿಕ ನಗರಿ ಧಾರವಾಡದ ಮಹಾನಗರ ಪಾಲಿಕೆ ಬಳಿಯ ಎಲ್‌.ಇ.ಎ. ಕ್ಯಾಂಪಸ್‌ನ ಲಿಂಗಾಯತ ಟೌನ್‌ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

    ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಶಿಕ್ಷಣ ತಜ್ಞ, ಜನಪರ ಚಿಂತಕ ಡಾ. ಜಿ. ರಾಮಕೃಷ್ಣ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ಸಾಂಸ್ಕೃತಿಕ ಚಿಂತಕ ರಂಜಾನ್ ದರ್ಗಾ ಮತ್ತು ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ನಿರ್ದೇಶಕ ಡಾ. ಎಂ. ಚಂದ್ರ ಪೂಜಾರಿ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ.

    ಲೋಕಾರ್ಪಣೆಯಾಗಲಿರುವ ಕೃತಿಗಳು

    • ಡಾ.ಜಿ.ರಾಮಕೃಷ್ಣ ಅವರ ʼಉಪನಿಷತ್ತುಗಳು; ಒಂದು ಸ್ಥೂಲ ನೋಟʼ
    • ಡಾ.ರಾವ್ ಸಾಹೇಬ್‌ ಕಸಬೆ ಅವರ ʼಅಂಬೇಡ್ಕರ್‌ ಮತ್ತು ಮಾರ್ಕ್ಸ್‌ʼ (ಕನ್ನಡಕ್ಕೆ ಚಂದ್ರಕಾಂತ ಪೋಕಳೆ)
    • ʼಸಾವಿತ್ರಿಬಾಯಿ; ಪ್ರವರ್ತಕಿಯ ಪಯಣʼ (ವ್ಯಕ್ತಿ ಮತ್ತು ಚಿಂತನೆಗಳು)
    • ಶಶಿಧರ್‌ ಡೋಂಗ್ರೆ, ನೀಲಾಂಜನ್‌ ಪಿ.ಚೌದುರಿ ಅವರ ʼಲೀಲಾವತಿ ಮತ್ತು ಇತರ ವಿಜ್ಞಾನ ನಾಟಕಗಳುʼ
    • ಆದಿತ್ಯ ಅಯ್ಯಂಗಾರ್‌ ಅವರ ʼಭೂಮಿಕಾ; ಸೀತಾ ಕಥನʼ (ಕನ್ನಡಕ್ಕೆ ಜ್ಯೋತಿ.ಎ)

    ಬೆಂಗಳೂರಿನ ‘ಹೊಸತು’ ಮಾಸ ಪತ್ರಿಕೆ ಸಹಸಂಪಾದಕಿ ಡಾ. ಎನ್. ಗಾಯತ್ರಿ, ಜನಪರ ಲೇಖಕಿ, ಚಿಂತಕಿ ಡಾ. ವಿನಯಾ ಒಕ್ಕುಂದ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ರಂಗಕರ್ಮಿ ಡಾ. ಪ್ರಕಾಶ್ ಗರುಡ ಅವರು ಕೃತಿಗಳ ಪರಿಚಯ ಮಾಡಲಿದ್ದಾರೆ.

    ಇದನ್ನೂ ಓದಿ | ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

    ಧಾರವಾಡದ ಲಿಂಗಾಯತ ಎಜುಕೇಷನ್ ಅಸೋಸಿಯೇಷನ್ ಚೇರ್ಮನ್‌ ಆರ್.ಯು. ಬೆಳ್ಳಕ್ಕಿ, ಕನ್ನಡ ಸಾಹಿತ್ಯ ಪರಿಷತ್‌ ಧಾರವಾಡ ಜಿಲ್ಲಾಧ್ಯಕ್ಷ ಡಾ. ಎಲ್. ಆರ್. ಅಂಗಡಿ, ಮೈಸೂರಿನ ರಂಗಕರ್ಮಿ, ಲೇಖಕ ಎಂ. ಶಶಿಧರ ಡೋಂಗ್ರೆ, ಜನಪರ ಲೇಖಕ ಡಾ. ಸದಾಶಿವ ಮರ್ಜಿ, ಧಾರವಾಡದ ಕರ್ನಾಟಕ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕಿ ಡಾ. ಅನುಸೂಯ ಕಾಂಬಳೆ, ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶಶಿಧರ ತೋಡಕರ್, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿದ್ದನಗೌಡ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕರಾದ ಎ. ರಮೇಶ ಉಡುಪ, ಯು. ಪ್ರೇಮಚಂದ್ರ ಉಪಸ್ಥಿತರಿರಲಿದ್ದಾರೆ.

    Continue Reading

    ಕರ್ನಾಟಕ

    Mysore to Bhubaneswar Trains: ಏ.9, 10ರಂದು ಮೈಸೂರು-ಭುವನೇಶ್ವರ ನಡುವೆ ವಿಶೇಷ ರೈಲು

    Mysore to Bhubaneswar Trains: ಮೈಸೂರು-ಭುವನೇಶ್ವರ ನಿಲ್ದಾಣಗಳ ನಡುವೆ ಏಪ್ರಿಲ್‌ 9 ಮತ್ತು 10 ರಂದು ಒಂದು ಟ್ರಿಪ್ ವಿಶೇಷ ರೈಲು ಓಡಿಸಲು ಭಾರತೀಯ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

    VISTARANEWS.COM


    on

    Mysore to Bhubaneswar Trains
    Koo

    ಮೈಸೂರು: ಬೇಸಿಗೆಯಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತೆರವುಗೊಳಿಸಲು ಮೈಸೂರು-ಭುವನೇಶ್ವರ ನಿಲ್ದಾಣಗಳ ನಡುವೆ ಏಪ್ರಿಲ್‌ 9 ಮತ್ತು 10 ರಂದು ಒಂದು ಟ್ರಿಪ್ ವಿಶೇಷ ರೈಲು (Mysore to Bhubaneswar Trains) ಓಡಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಮೈಸೂರು-ಭುವನೇಶ್ವರ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲಿನ ವೇಳಾಪಟ್ಟಿ ಇಲ್ಲಿ ನೀಡಲಾಗಿದೆ.

    1. ಏಪ್ರಿಲ್ 9 ರಂದು ರೈಲು ಸಂಖ್ಯೆ 06215 ಮೈಸೂರು-ಭುವನೇಶ್ವರ ವಿಶೇಷ ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ಬೆಳಗ್ಗೆ 4:15 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10:40 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.
    2. ಏಪ್ರಿಲ್ 10 ರಂದು ರೈಲು ಸಂಖ್ಯೆ 06216 ಭುವನೇಶ್ವರ-ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲು ಭುವನೇಶ್ವರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಸಂಜೆ 07:15 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

    ವಿಶೇಷ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ವೈಟ್ ಫೀಲ್ಡ್, ಬಂಗಾರಪೇಟೆ, ಜೋಲಾರಪೆಟ್ಟೈ, ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ತೆನಾಲಿ, ವಿಜಯವಾಡ, ಎಲೂರು, ರಾಜಮಂಡ್ರಿ, ಸಾಮಲಕೋಟೆ, ದುವ್ವಾಡ, ಕೊಟ್ಟವಲಸಾ, ವಿಜಯನಗರಂ, ಶ್ರೀಕಾಕುಳಂ ರೋಡ, ಪಾಲಸಾ, ಬ್ರಹ್ಮಪುರ ಮತ್ತು ಖುರ್ದಾ ರೋಡ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

    ಈ ವಿಶೇಷ ರೈಲು ಎಸಿ ಟು ಟಯರ್ ಬೋಗಿ-1, ಎಸಿ ತ್ರಿ ಟಯರ್-3, ಸ್ಲೀಪರ್ ಕ್ಲಾಸ್ ಬೋಗಿಗಳು-9, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು-3 ಮತ್ತು ಎಸ್ಎಲ್ಆರ್ / ಡಿ -2 ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ.

    ವಿಶೇಷ ಸೂಚನೆ: ಎಸಿ ಬೋಗಿಗಳಲ್ಲಿ ಬೆಡ್ ಶೀಟ್‌ ಮತ್ತು ಹೊದಿಕೆಯ ಸೌಲಭ್ಯ ಒದಗಿಸಲಾಗುವುದಿಲ್ಲ.

    ಚೆನ್ನೈ-ಬೆಂಗಳೂರು-ಮೈಸೂರು: ಹೀಗಿದೆ ನೋಡಿ ವಂದೇ ಭಾರತ್ ರೈಲಿನ ವೇಳಾಪಟ್ಟಿ

    Vande Bharat Express

    ಬೆಂಗಳೂರು: ಮೈಸೂರು (mysore) ಮತ್ತು ಚೆನ್ನೈಗೆ (chennai) ಬೆಂಗಳೂರು (bengaluru) ಮೂಲಕ ತೆರಳುವ ಎರಡನೇ ವಂದೇ ಭಾರತ್ ಎಕ್ಸ್ ಪ್ರೆಸ್ (Vande Bharat Express) ರೈಲು ಸಂಚಾರ ಏಪ್ರಿಲ್ 5ರಂದು ಶುಕ್ರವಾರ ಚಾಲನೆಗೊಂಡಿದೆ. ಈ ಕುರಿತು ಮಾಹಿತಿ ನೀಡಿದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO), ಮಂಜುನಾಥ್ ಕನಮಡಿ, ನೈಋತ್ಯ ರೈಲ್ವೆ (SWR) ಮೈಸೂರಿನಲ್ಲಿ ಪ್ರೀಮಿಯಂ ರೈಲನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ (PM) ನರೇಂದ್ರ ಮೋದಿ (Narendra modi) ಅವರು ಮಾರ್ಚ್ 12 ರಂದು ಈ ರೈಲಿಗೆ ಚಾಲನೆ ನೀಡಿದ್ದರು . ಆದರೆ ಮಾರ್ಚ್ 14 ಮತ್ತು ಏಪ್ರಿಲ್ 4 ರ ನಡುವೆ ಮೈಸೂರು ವಂದೇ ಭಾರತ್ ರೈಲುಗಳನ್ನು ನಿರ್ವಹಿಸುವ ಸೌಲಭ್ಯವನ್ನು ಹೊಂದಿಲ್ಲದ ಕಾರಣ ರೈಲು SMVT ಬೆಂಗಳೂರು ಮತ್ತು ಚೆನ್ನೈ ಸೆಂಟ್ರಲ್ ನಡುವೆ ಮಾತ್ರ ಓಡಾಟ ನಡೆಸಿತ್ತು.

    ಇದನ್ನೂ ಓದಿ: Karnataka Weather : ನಾಳೆಯಿಂದ ಏ.11ರವರೆಗೆ ಅಬ್ಬರಿಸಲಿದ್ಯಾ ಮಳೆ; ಏನಂತಾರೆ ಹವಾಮಾನ ತಜ್ಞರು

    ಮೈಸೂರಿನಿಂದ ಎಂಜಿಆರ್ ಚೆನ್ನೈ ನಿಲ್ದಾಣಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 6.20 ಗಂಟೆಗಳಿಗೆ ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ, ಸೆಮಿ-ಹೈ ಸ್ಪೀಡ್ ರೈಲು SMVB ಮತ್ತು MGR ಚೆನ್ನೈ ಸೆಂಟ್ರಲ್ ನಡುವೆ ನಿಯಮಿತವಾಗಿ ಓಡುತ್ತಿತ್ತು. ಈಗ, ಕೆಳಗೆ ನೀಡಲಾದ ಸಮಯದ ಪ್ರಕಾರ ರೈಲು ಮೈಸೂರು ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ನಿಯಮಿತವಾಗಿ ಸಂಚಾರ ನಡೆಸಲಿದೆ.

    ಮೈಸೂರಿನಿಂದ ಎಂಜಿಆರ್ ಚೆನ್ನೈ (mysore-chennai)

    ಮೈಸೂರು – ಎಂಜಿಆರ್ ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20663 ಮೈಸೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ 12.20 ಗಂಟೆಗೆ ಎಂಜಿಆರ್ ಚೆನ್ನೈಗೆ ಆಗಮಿಸಲಿದೆ. ಈ ನಡುವೆ ರೈಲು ಮಂಡ್ಯ (06:28/06:30), SMVT ಬೆಂಗಳೂರು (07:45/07:50), ಕೃಷ್ಣರಾಜಪುರಂ (08:04/08:06) ಮತ್ತು ಕಟಪಾಡಿ (10: 33/10:35) ನಿಲುಗಡೆ ಮಾಡಲಿದೆ.

    ಚೆನ್ನೈನಿಂದ ಮೈಸೂರು (chennai-mysore)

    ಎಂಜಿಆರ್ ಚೆನ್ನೈ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20664 ಎಂಜಿಆರ್ ಚೆನ್ನೈನಿಂದ ೫ ಗಂಟೆಗೆ ಹೊರಟು ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ 11.20 ಕ್ಕೆ ಮೈಸೂರು ತಲುಪುತ್ತದೆ.
    ಈ ರೈಲು ನಡುವೆ ರೈಲು ಕಟ್ಪಾಡಿ (18:23/18:25), ಕೃಷ್ಣರಾಜಪುರಂ (20:48/20:50), SMVT ಬೆಂಗಳೂರು (21:25/21:30), ಮತ್ತು ಮಂಡ್ಯ (22: 38/22:40) ರಲ್ಲಿ ನಿಲುಗಡೆ ಮಾಡಲಿದೆ.

    ಇದನ್ನೂ ಓದಿ | Namma Metro : ಇಂದಿನಿಂದ 1 ವರ್ಷ ಬನ್ನೇರುಘಟ್ಟ ಮುಖ್ಯರಸ್ತೆಯ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ ರಸ್ತೆ ಬಂದ್‌

    ಜುಲೈ ಅಂತ್ಯದಿಂದ ದಿನ ಬದಲಾವಣೆ

    2024ರ ಜುಲೈ 30ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 20663/20664 ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯು ನಿರ್ವಹಣೆಯ ಕಾರಣದಿಂದ ಬುಧವಾರದ ಬದಲು ಗುರುವಾರದಂದು ಓಡುವುದಿಲ್ಲ ಎಂದು ನೈಋತ್ಯ ರೈಲ್ವೆ (SWR) ಇತ್ತೀಚೆಗೆ ಪ್ರಯಾಣಿಕರಿಗೆ ಸೂಚನೆ ನೀಡಿದೆ.

    Continue Reading
    Advertisement
    Karnataka weather Forecast
    ಮಳೆ32 mins ago

    Karnataka Weather : ಮುಂದಿನ 4 ತಿಂಗಳು ವಾಡಿಕೆಗಿಂತ‌ ಹೆಚ್ಚು ಮಳೆ; ನಾಳಿನ ಹವಾಮಾನ ಏನು?

    Oil Pulling
    ಆರೋಗ್ಯ34 mins ago

    Oil Pulling: ಆಯಿಲ್‌ ಪುಲ್ಲಿಂಗ್‌; ನಿಮ್ಮ ಬಾಯಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಇಲ್ಲಿದೆ!

    UPSC Results 2023
    ಪ್ರಮುಖ ಸುದ್ದಿ37 mins ago

    UPSC Results 2023: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆದ ಪೊಲೀಸ್‌ ಅಧಿಕಾರಿ!

    Take action to close failed borewell says Vijayanagara DC MS Diwakar
    ವಿಜಯನಗರ46 mins ago

    Vijayanagara News: ವಿಫಲ ಕೊಳವೆಬಾವಿ ಮುಚ್ಚಲು ಕ್ರಮವಹಿಸಿ: ಡಿಸಿ ಎಂ.ಎಸ್. ದಿವಾಕರ್‌

    Job Alert
    ಉದ್ಯೋಗ47 mins ago

    Job Alert: ಅಂಗನವಾಡಿಯಲ್ಲಿದೆ 513 ಹುದ್ದೆ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ; ಏ. 19 ಕೊನೆಯ ದಿನ

    Kalaburagi MP Dr. Umesh Jadav spoke in booth level workers meeting Chittapur assembly constituency
    ಕಲಬುರಗಿ49 mins ago

    Lok Sabha Election 2024: ಕೋಲಿ ಸಮುದಾಯದ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು: ಡಾ. ಉಮೇಶ್ ಜಾಧವ್ ಕಿಡಿ

    Maddur MLA Uday election campaign in various places of Maddur taluk
    ಮಂಡ್ಯ53 mins ago

    Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಬೆಂಬಲ ನೀಡಿ: ಶಾಸಕ ಉದಯ್

    Lok Sabha Election 2024 HD DeveGowda Congress cries out at HD DeveGowda Complaint to Election Commission
    Lok Sabha Election 202457 mins ago

    Lok Sabha Election 2024: ಎಚ್‌.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಿರಿಕ್‌; ಚುನಾವಣಾ ಆಯೋಗಕ್ಕೆ ದೂರು

    jain monk
    ಪ್ರಮುಖ ಸುದ್ದಿ1 hour ago

    Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್​

    Summer Fashion
    ಫ್ಯಾಷನ್1 hour ago

    Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

    Sharmitha Gowda in bikini
    ಕಿರುತೆರೆ6 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ6 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ6 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ5 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ7 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ6 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ6 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ4 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ5 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ7 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    dina bhavishya
    ಭವಿಷ್ಯ14 hours ago

    Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

    HD Kumaraswamy apologised to womens for his statement and slams DK Shivakumar
    Lok Sabha Election 20241 day ago

    HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

    Dina Bhavishya
    ಭವಿಷ್ಯ2 days ago

    Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

    Modi in Karnataka Modi roadshow in coastal area Mangalore Watch video
    Lok Sabha Election 20242 days ago

    Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

    dina bhavishya
    ಭವಿಷ್ಯ3 days ago

    Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

    Dina Bhavishya
    ಭವಿಷ್ಯ4 days ago

    Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

    Rameshwaram Cafe Blast Fake IDs created and captured bombers hiding in Kolkata
    ಕ್ರೈಂ4 days ago

    Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

    Dina Bhavishya
    ಭವಿಷ್ಯ5 days ago

    Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

    Lok Sabha Election 2024 Vokkaliga support us says DK Shivakumar
    ಕರ್ನಾಟಕ5 days ago

    Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

    Lok Sabha Election 2024 Rahul Gandhi should apologise for lying demand BS Yediyurappa
    Lok Sabha Election 20245 days ago

    Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

    ಟ್ರೆಂಡಿಂಗ್‌