Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮದಲ್ಲಿ ಹೇಗಿತ್ತು ಮನರಂಜನೆಯ ಸುಗ್ಗಿ; ಇಲ್ಲಿವೆ ಫೋಟೊ ಝಲಕ್‌ - Vistara News

ಕರ್ನಾಟಕ

Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮದಲ್ಲಿ ಹೇಗಿತ್ತು ಮನರಂಜನೆಯ ಸುಗ್ಗಿ; ಇಲ್ಲಿವೆ ಫೋಟೊ ಝಲಕ್‌

Vistara Kannada Sambhrama : ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನ ಮನರಂಜನೆಯ ಸುಗ್ಗಿ ನಡೆಯುತ್ತಿದ್ದು, ವಿಸ್ತಾರ ವೈಭವದ ಸಂಭ್ರಮ ಜೋರಾಗಿದೆ.

VISTARANEWS.COM


on

Vistara Kannada Sambhrama
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ” (Vistara Kannada Sambhrama) ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಜನರು ಭಾಗಿಯಾಗುತ್ತಿದ್ದಾರೆ. ಬೆಳಗ್ಗೆ 9ರಿಂದ ಶುರುವಾದ ಈ ಸಂಭ್ರಮವು ನಿರಂತರವಾಗಿ ಮಧ್ಯರಾತ್ರಿ 12ರವರೆಗೆ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಮನರಂಜನೆಯ ಸುಗ್ಗಿ ಹೇಗಿತ್ತು? ಇಲ್ಲಿದೆ ನೋಡಿ ಫೋಟೊ ಝಲಕ್‌..

Vistara Kannada Sambhrama
ಖ್ಯಾತ ಹಾಡುಗಾರರಾದ ರಾಮಚಂದ್ರ ಹಡಪದ ಹಾಗೂ ಆರ್‌. ಕೆ. ಸ್ಪರ್ಶ ಅವರ ಗಾನಸುಧೆ ಮೂಲಕ ಚಾಲನೆ
Vistara Kannada Sambhrama
ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟ ನಾರಿಯರು ಜತೆಗೆ ಕನ್ನಡ ಸಂಭ್ರಮದಲ್ಲಿ ಕನ್ನಡದ ಬರಹ
Vistara Kannada Sambhrama programme
ರವೀಂದ್ರ ಕಲಾಕ್ಷೇತ್ರದಲ್ಲಿ ವಿಸ್ತಾರ ನ್ಯೂಸ್‌ ವರ್ಷದ ವೈಭವ
Vistara Kannada Sambhrama programme
ನಾರಿಯರ ಬೈಕ್‌ ರೈಡ್‌
Vistara Kannada Sambhrama programme
ಕಲಾ ತಂಡಗಳ ಭರಾಟೆ
Vistara Kannada Sambhrama programme
ವಿಸ್ತಾರ ನ್ಯೂಸ್‌ ವರ್ಷದ ವೈಭವದಲ್ಲಿ ವಿದ್ಯಾರ್ಥಿಗಳ ಸಂಭ್ರಮ
Vistara Kannada Sambhrama programme
ಸಂಭ್ರಮಕ್ಕೆ ಸಾಕ್ಷಿಯಾದ ಬಿ.ಆರ್‌. ಲಕ್ಷ್ಮಣ್‌ ರಾವ್‌ ಜತೆಗೆ ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ
Vistara prakashana book released
ವಿಸ್ತಾರ ಪ್ರಕಾಶನದಿಂದ ಪುಸ್ತಕ ಬಿಡುಗಡೆ
Vistara prakashana book released
ಸಂಭ್ರಮದಲ್ಲಿ ಭಾಗಿಯಾದ ನಟ ರಮೇಶ್‌ ಅರವಿಂದ್‌
Vistara prakashana book released

Vistara prakashana book released
Vistara prakashana book released
ನಟಿ ಬೃಂದಾ ಆಚಾರ್ಯ ಅವರನ್ನು ಬರಮಾಡಿಕೊಂಡ ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್‌ ಕುಮಾರ್‌ ಡಿ.ಕೆ
ramesh aravind in vistara kannada sambrama
ಸಂಭ್ರಮದಲ್ಲಿ ಜನಸಾಗರ
Vistara Kannada Sambhrama
ಪುಸ್ತಕ ಮೇಳ
Vistara Kannada Sambhrama
ಮೀಡಿಯಾ ಗ್ಯಾಲರಿ
Vistara Kannada Sambhrama
Vistara Kannada Sambhrama
ಪುಸ್ತಕ ಖರೀದಿಯಲ್ಲಿ ನಿರತರಾಗಿರುವ ಜನರು
Vistara Kannada Sambhrama
ಕಲಾವಿದರಿಂದ ಪೆನ್ಸಿಲ್‌ ಸ್ಕೆಚ್‌
ರಕ್ತದಾನ ಶಿಬಿರ ಆಯೋಜನೆ
Vistara Kannada Sambhrama
ರಾಷ್ಟ್ರೀಯ ಸೇವಾ ಯೋಜನೆ
Vistara Kannada Sambhrama
ಚಿಣ್ಣರಿಗಾಗಿ ಜಾದೂ
Vistara Kannada Sambhrama
ವಿಸ್ತಾರ ನ್ಯೂಸ್‌ ವರ್ಷ ವೈಭವದಲ್ಲಿ ಶಾಸಕ ಪ್ರದೀಶ್‌ ಈಶ್ವರ್‌ ಭಾಗಿ
Vistara Kannada Sambhrama
ಬಾರಿಸು ಕನ್ನಡ ಡಿಂಡಿಮವ ವಿಚಾರ ಗೋಷ್ಠಿ
How was the entertainment at Vistara Kannada celebrations
ನಾರಿಯರ ಸೀರೆ ಸೊಬಗು
How was the entertainment at Vistara Kannada celebrations
ಮಕ್ಕಳ ನಾಟಕ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

CM Siddaramaiah: ಖರ್ಗೆಯೂ ಪಿಎಂ ಆಗಲ್ಲ! ಸಿದ್ದರಾಮಯ್ಯ ಯಾಕಿಂಥಾ ಮಾತಾಡಿದ್ರು?

CM Siddaramaiah: ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ರಾಜ್ಯದಿಂದ ಯಾರೂ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ. ನಾನು ಪಿಎಂ ಸ್ಥಾನದ ಆಕಾಂಕ್ಷಿಯಲ್ಲ. ನಾನೇ ಅಲ್ಲ , ನಮ್ಮ ರಾಜ್ಯದಲ್ಲಿ ಯಾರೂ ಸಹ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ” ಎಂದು ಹೇಳಿದ್ದಾರೆ. ಇದರ ಮೂಲಕ, ಖರ್ಗೆ ಕೂಡ ಪಿಎಂ ಆಗುವುದಿಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

VISTARANEWS.COM


on

Mallikarjuna Kharge siddaramaiah
Koo

ಬೆಂಗಳೂರು: ಈ ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶದಲ್ಲಿ ಕಾಂಗ್ರೆಸ್ (congress) ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಪ್ರಧಾನ ಮಂತ್ರಿ (Prime minister) ಆಗಬಹುದು ಎಂಬ ಒಂದು ಸಣ್ಣ ಆಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಿವುಟಿ ಹಾಕಿದ್ದಾರೆ. “ರಾಜ್ಯದ ಯಾವ ನಾಯಕನೂ ಪಿಎಂ ಆಗಲ್ಲ” ಎನ್ನುವ ಮೂಲಕ ಅವರು ಈ ಚರ್ಚೆಗೆ ತೆರೆ ಎಳೆದಿದ್ದಾರೆ.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ರಾಜ್ಯದಿಂದ ಯಾರೂ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ. ನಾನು ಪಿಎಂ ಸ್ಥಾನದ ಆಕಾಂಕ್ಷಿಯಲ್ಲ. ನಾನೇ ಅಲ್ಲ , ನಮ್ಮ ರಾಜ್ಯದಲ್ಲಿ ಯಾರೂ ಸಹ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ” ಎಂದು ಹೇಳಿದ್ದಾರೆ. ಇದರ ಮೂಲಕ, ಖರ್ಗೆ ಕೂಡ ಪಿಎಂ ಆಗುವುದಿಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಹಾಗಾದರೆ ರಾಜ್ಯದಿಂದ ಪಿಎಂ ಸ್ಥಾನದ ಅರ್ಹರು, ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿ ಯಾರು ಇಲ್ಲವೇ? ಸ್ವತಃ ಎಐಸಿಸಿ ಅಧ್ಯಕ್ಷರೇ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸಿದೆ. ಕಾಂಗ್ರೆಸ್ ಒಕ್ಕೂಟ ಅಧಿಕ ಸ್ಥಾನ ಗೆದ್ದರೆ ಪಿಎಂ ರೇಸ್‌ನಲ್ಲಿ‌‌ ಖರ್ಗೆಯೂ ಪರಿಗಣನೆಗೆ ಒಳಗಾಗುವವರೇ. ರೇಸ್‌ನಲ್ಲಿ ನಾನಿಲ್ಲ ಎಂದು ಅವರು ಹೇಳಿಲ್ಲ. ಆದರೆ ರಾಹುಲ್‌ ಗಾಂಧಿಯವರನ್ನು ಓವರ್‌ಟೇಕ್‌ ಮಾಡಿ ಮುಂದೆ ಹೋಗಲು ಸ್ವತಃ ಖರ್ಗೆಯವರೇ ತಯಾರಿಲ್ಲ.

ಇನ್ನು ಸಿದ್ದರಾಮಯ್ಯ. ಸ್ವತಃ ಅವರು ರಾಜ್ಯದ ರಾಜಕಾರಣ ಬಿಟ್ಟು ಹೋಗಲು ತಯಾರಿಲ್ಲ. ಬೇರೆ ರಾಜ್ಯಗಳಿಗೆ ಚುನಾವಣಾ ಪ್ರಚಾರಕ್ಕೆ ಹೋಗುವುದು ಕೂಡ ನನ್ನಿಂದ ಸಾಧ್ಯವಿಲ್ಲ ಎಂದು ಅವರು ಇತ್ತೀಚೆಗೆ ಹೇಳಿದ್ದರು. ಸ್ವತಃ ರಾಜ್ಯದ ಕಾಂಗ್ರೆಸ್‌ ನಾಯಕತ್ವವನ್ನು ಗಟ್ಟಿಯಾಗಿ ಹಿಡಿದಿರುವ ಸಿದ್ದರಾಮಯ್ಯ, ಅದನ್ನು ಸುತರಾಂ ಬಿಟ್ಟುಕೊಡಲು ಸಿದ್ಧರಿಲ್ಲ. ಇದನ್ನೇ ಅವರು ʼನಾನು ಪಿಎಂ ಸ್ಥಾನ ಆಕಾಂಕ್ಷಿಯಲ್ಲʼ ಎನ್ನುವ ಮೂಲಕ ತಿಳಿಸಿದ್ದಾರೆ.

ಸಿದ್ದು ಹೇಳಿಕೆ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿದ ಚೆಕ್‌ಮೇಟ್‌ ಕೂಡ ಎಂದು ವಿಶ್ಲೇಷಿಸಲಾಗುತ್ತಿದೆ. ಪಿಎಂ ಸ್ಥಾನಕ್ಕೆ ಹೋಗಬಹುದಾದ ಖರ್ಗೆಯವರನ್ನು ಹೆಸರಿಸಿ, ಆ ಮೂಲಕ ಇನ್ನೊಂದು ಶಕ್ತಿ ಕೇಂದ್ರವನ್ನು ಪಕ್ಷದೊಳಗೆ ಬೆಂಬಲಿಸಲು ಸಿದ್ದು ಸಿದ್ಧರಿಲ್ಲ. ಹಾಗೆಯೇ ಅವರು ಈ ಮಾತು ರಾಹುಲ್ ಗಾಂಧಿಗೆ ಬೆಂಬಲ ಕೂಡ ಇರಬಹುದು ಅಂತಿದಾರೆ ವಿಶ್ಲೇಷಕರು. ಯಾಕೆಂದರೆ ಸದ್ಯ ಕಾಂಗ್ರೆಸ್‌ನಲ್ಲಿ ರಾಷ್ಟ್ರಮಟ್ಟದ ಹಲವು ನಾಯಕರು ರಾಹುಲ್‌ ಅವರನ್ನೇ ಬೆಂಬಲಿಸುತ್ತಿದ್ದಾರೆ.

ಇದನ್ನೂ ಓದಿ: CM Siddaramaiah: ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಾರ ಕಾಂಗ್ರೆಸ್‌ಗೆ ಎಷ್ಟು ಸೀಟ್‌? ಸಂಪುಟ ಪುನಾರಚನೆ ಇಲ್ಲ!

Continue Reading

ವಿಜಯಪುರ

Murder Case : ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಶವದ ಪಕ್ಕದಲ್ಲೇ ನಿದ್ರೆಗೆ ಜಾರಿದ ಕುಡುಕ ಪತಿ

Murder case : ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪಾಪಿ ಪತಿಯೊಬ್ಬ, ನಂತರ ಶವದ ಪಕ್ಕದಲ್ಲೇ ಮಲಗಿ ರಾತ್ರಿ ಕಳೆದಿದ್ದಾನೆ.

VISTARANEWS.COM


on

By

murder Case in Vijayapura
Koo

ವಿಜಯಪುರ: ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಪಾಪಿ ಪತಿ (Murder Case) ಹತ್ಯೆಗೈದಿದ್ದಾನೆ. ಕಮಲಾಬಾಯಿ ಇಂಚಗೇರಿ ಕೊಲೆಯಾದವರು. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಢವಳಾರ ಗ್ರಾಮದಲ್ಲಿ ನಿನ್ನೆ ಸೋಮವಾರ ತಡ ರಾತ್ರಿ ಘಟನೆ ನಡೆದಿದೆ.

ಗೊಲ್ಲಾಳಪ್ಪ ಇಂಚಗೇರಿ ಎಂಬಾತ ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗವಾಡಿದ್ದ. ಜಗಳ ವಿಕೋಪಕ್ಕೆ ಹೋದಾಗ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿದ್ದಾನೆ. ಗಂಭೀರ ಗಾಯಗೊಂಡ ಕಮಲಾಬಾಯಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನೂ ಪತ್ನಿಯನ್ನು ಕೊಂದು ಅದೇ ಸ್ಥಳದಲ್ಲಿಯೇ ಮಲಗಿದ್ದ. ಮುಂಜಾನೆ ಸ್ಥಳೀಯರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಲಕೇರಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ಗೊಲ್ಲಾಳಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಕಲಕೇರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

ಈಜುಕೊಳದಲ್ಲಿ ಭೀಕರ ದುರಂತ; ಸ್ಟಂಟ್‌ ಮಾಡಲು ಹೋಗಿ ಯುವಕನ ಪ್ರಾಣಕ್ಕೆ ಕುತ್ತು

ಮಧ್ಯಪ್ರದೇಶ: ಕೆಲವೊಮ್ಮೆ ಅತಿಯಾದ ಮೋಜು ಪ್ರಾಣಕ್ಕೆ ಸಂಚು ತಂದು ಬಿಡುತ್ತದೆ. ಮೋಜಿಗೆಂದು ಮಾಡಿದ ಕಾರ್ಯದಿಂದ ಎದುರಿಗಿರುವವರ ಪ್ರಾಣವನ್ನೇ ಬಲಿ ಪಡೆದಂತಹ ಘಟನೆಗಳು ಆಗಾಗ ಕಣ್ಣ ಮುಂದೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಮಧ್ಯಪ್ರದೇಶ(Madya Pradesh)ದ ರತ್ಲಮ್‌ನಲ್ಲಿ ನಡೆದಿದೆ. ಈಜುಕೊಳ(Swimming pool) ದಲ್ಲಿ ಯುವಕನೊರ್ವ ಸ್ಟಂಟ್‌ ಮಾಡಲು ಹೋಗಿ ಮತ್ತೊರ್ವ ಯುವಕನ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video)ಆಗಿದೆ.

ಘಟನೆ ವಿವರ:

ರತ್ಲಮ್‌ನಲ್ಲಿರುವ ಡಾಲ್ಫಿನ್‌ ಈಜುಕೊಳದಲ್ಲಿ ಈ ಘಟನೆ ನಡೆದಿದ್ದು, ಅನೇಕ ಯುವಕರು ಸ್ವಿಮ್ಮಿಂಗ್‌ ಮಾಡುತ್ತಿರುತ್ತಾರೆ. ಇನ್ನೇ ಒಬ್ಬ ಯುವಕ ಮೇಲೆ ಹತ್ತಲು ಮುದಾಗುತ್ತಿದ್ದಾಗ ಮತ್ತೊರ್ವ ಯುವಕ ಸ್ವಿಮ್ಮಿಂಗ್‌ಪೂಲ್‌ಗೆ ಸ್ಟಂಟ್‌ ಮಾಡಿ ಜಂಪ್‌ ಹೊಡೆಯುತ್ತಾನೆ. ಆಗ ಇದ್ದ ಮೇಲೆ ಹತ್ತುತ್ತಿದ್ದ ಯುವಕನ ತಲೆಗೆ ಅವನ ಕಾಲಿನಿಂದ ಗಂಭೀರವಾಗಿ ಏಟಾಗುತ್ತದೆ. ಇದ್ದಕ್ಕಿದ್ದಂತೆ ಆ ಯುವಕ ಸ್ವಿಮ್ಮಿಂಗ್‌ಪೂಲ್‌ ಒಳಗೆ ಬೀಳುತ್ತಾನೆ. ತಕ್ಷಣ ಪ್ರಜ್ಞೆ ತಪ್ಪುತ್ತಾನೆ. ಅನೇಕರು ಅಲ್ಲೇ ಇದ್ದರೂ ತಕ್ಷಣ ಅವರ ಸಹಾಯಕ್ಕೆ ಯಾದೂ ಧಾವಿಸಲಿಲ್ಲ. ಅದಾದ ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ.

ಇದನ್ನೂ ಓದಿ:ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

ಮೃತ ಯುವಕನನ್ನು ಅನಿಕೇತ್‌ ಎಂದು ಗುರುತಿಸಲಾಗಿದೆ. ಇಂತಹದ್ದೇ ಒಂದು ಘಟನೆ ಈ ಹಿಂದೆಯೂ ನಡೆದಿತ್ತು. ಇದಾದ ಬಳಿಕ ಸ್ವಿಮ್ಮಿಂಗ್‌ ಪೂಲ್‌ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಇಂತಹದ್ದೇ ಮತ್ತೊಂದು ಘಟನೆ ನಡೆದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈಜುಕೊಳವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕಳೆದ ವರ್ಷ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಜೆಪಿ ನಗರ 7 ನೇ ಹಂತದಲ್ಲಿರುವ ಖಾಸಗಿ ಈಜುಕೊಳದಲ್ಲಿ 13 ವರ್ಷದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿದ್ದರು. ಮೃತ ವಿದ್ಯಾರ್ಥಿಗಳನ್ನು ಜರಗನಹಳ್ಳಿ ನಿವಾಸಿಗಳಾದ ಮೋಹನ್ ಮತ್ತು ಜಯಂತ್ ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ತಮ್ಮ ಶಾಲೆಯಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಇಬ್ಬರ ಮೃತದೇಹಗಳು ಈಜುಕೊಳದಲ್ಲಿ ಕಂಡುಬಂದಿದ್ದವು.

ಈಜುಕೊಳದ ತರಬೇತುದಾರ ಬಾಲಕರನ್ನು ಈಜುಕೊಳಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ., ಆದರೆ ದುರಂತ ನಡೆದ ಸಮಯದಲ್ಲಿ ಅವರು ಇರಲಿಲ್ಲ ಎಂಬುದು ಆನಂತರ ಬಯಲಾಗಿತ್ತು. ಪೊಲೀಸರ ಪ್ರಕಾರ, ಇಬ್ಬರು ಬಾಲಕರು ತರಗತಿಗಳನ್ನು ಬಿಟ್ಟು ಜೆಪಿ ನಗರದಲ್ಲಿರುವ ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಗೆ ಭೇಟಿ ನೀಡಿ, ಈಜುಕೊಳದಲ್ಲಿ ಆಟವಾಡಿದ್ದಾರೆ. ಈಜುಕೊಳದ ಸರಿಯಾದ ಬಳಕೆಯ ಬಗ್ಗೆ ಬಾಲಕರಿಗೆ ಸೂಚನೆಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿನ್ನದ ದರ

Gold Rate Today: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ, ಗ್ರಾಹಕರಿಗೆ ತುಸು ನಿರಾಳ

ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) 1 ಗ್ರಾಂಗೆ ಕ್ರಮವಾಗಿ ₹60 ಹಾಗೂ ₹65 ಇಳಿಕೆಯಾಗಿವೆ. 10 ಗ್ರಾಂಗೆ ಇದು ₹600 ಹಾಗೂ ₹650 ಆಗುತ್ತವೆ.

VISTARANEWS.COM


on

gold rate today sruthi hassan
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) 1 ಗ್ರಾಂಗೆ ಕ್ರಮವಾಗಿ ₹60 ಹಾಗೂ ₹65 ಇಳಿಕೆಯಾಗಿವೆ. 10 ಗ್ರಾಂಗೆ ಇದು ₹600 ಹಾಗೂ ₹650 ಆಗುತ್ತವೆ. ಬೆಂಗಳೂರು, ದಿಲ್ಲಿ ಹಾಗೂ ಚೆನ್ನೈಯ ಬಂಗಾರದ ಧಾರಣೆಗಳು ಯಾವಾಗಲೂ ತುಸು ವ್ಯತ್ಯಾಸ ಹೊಂದಿವೆ. ಇಲ್ಲಿ ಅವುಗಳನ್ನು ಕೊಡಲಾಗಿದೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,830ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,640 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹68,300 ಮತ್ತು ₹6,83,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,451 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,608 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹74,510 ಮತ್ತು ₹7,45,100 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹92.50, ಎಂಟು ಗ್ರಾಂ ₹740 ಮತ್ತು 10 ಗ್ರಾಂ ₹925ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹9,250 ಮತ್ತು 1 ಕಿಲೋಗ್ರಾಂಗೆ ₹92,500 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ68,45074,660
ಮುಂಬಯಿ68,300 74,510
ಬೆಂಗಳೂರು68,300 74,510
ಚೆನ್ನೈ68,60074,840

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

Continue Reading

ಮೈಸೂರು

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರಗಿ ಭಾಗದಲ್ಲಿ ಕಲುಷಿತ ನೀರು ಸೇವನೆ (Contaminated Water) ಪ್ರಕರಣಗಳ ನಂತರ ಇದೀಗ ಮೈಸೂರಿನಲ್ಲಿ ಕಲುಷಿತ ನೀರು ಸೇವನೆ ಮಾಡಿ ಯುವಕನೊಬ್ಬ ಮೃತಪಟ್ಟಿದ್ದಾನೆ.

VISTARANEWS.COM


on

By

Contaminated Water
Koo

ಮೈಸೂರು: ಮೈಸೂರಿನ ಡಿ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು (Contaminated Water) ಹಲವರು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಚಿಕಿತ್ಸೆ ಫಲಕಾರಿಯಾಗದೆ ಕನಕರಾಜ್ (20) ಎಂಬಾತ ಮೃತಪಟ್ಟಿದ್ದಾನೆ. ಚಾಮುಂಡೇಶ್ವರಿ ಕ್ಷೇತ್ರದ ಡಿ.ಸಾಲುಂಡಿ ಗ್ರಾಮದ ಕನಕರಾಜ್ ನಿನ್ನೆ ಸೋಮವಾರ ತೀವ್ರ ವಾಂತಿ- ಭೇದಿಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಕನಕರಾಜ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಮೇ 21) ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕಾಮಾಕ್ಷಿ ಆಸ್ಪತ್ರೆಗೆ ಆಗಮಿಸಿ, ಮೃತ ಕನಕರಾಜ್ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಪ್ರಕರಣದ ಕುರಿತು ವೈದ್ಯರ ಬಳಿ ಮಾಹಿತಿ ಕಲೆ ಹಾಕಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದ 48 ಜನರಿಗೆ ವಾಂತಿ- ಭೇದಿ ಶುರುವಾಗಿದೆ. ಅಸ್ವಸ್ಥಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದರು.

ನೀರು ಕಲುಷಿತಗೊಂಡ ಕಾರಣ ಈ ಘಟನೆ ನಡೆದಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದೇನೆ. 5 ಜನ ವೈದ್ಯರು ಸಾಲುಂಡಿ ಗ್ರಾಮದಲ್ಲಿ ಕ್ಯಾಂಪ್ ಮಾಡಿದ್ದಾರೆ. 75 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಮತ್ತೊಬ್ಬರು‌ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

ನಗರಾಭಿವೃದ್ಧಿ ಪಾಧಿಕಾರದಲ್ಲಿ ಯುಜಿಡಿ ಮಾಡುವಾಗ ಟ್ಯಾಂಕ್ ಮಾಡಿಲ್ಲ. ಯುವಕನ ಸಾವಿಗೆ ಮುಡಾ ಅಧಿಕಾರಿಗಳೇ ಕಾರಣ ಎಂದು ಶಾಸಕ ಜಿ.ಟಿ.ದೇವೇಗೌಡ ಗಂಭೀರ ಆರೋಪ ಮಾಡಿದರು. ಆಸ್ಪತ್ರೆ ಎಲ್ಲಾ ಚಿಕಿತ್ಸಾ ವೆಚ್ಚವನ್ನು ನಾನೇ ಭರಿಸುತ್ತೇನೆ. ಮೃತ ಕುಟುಂಬಕ್ಕೆ ಸಿಎಂ ಪರಿಹಾರ ನೀಡಬೇಕು. ಇಲ್ಲಿನ ಜನರು ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಕುಟುಂಬಕ್ಕೆ ಪರಿಹಾರ ಕೊಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಈಗಾಲಾದರೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಯುಜಿಡಿ ಕೆಲಸಗಳನ್ನು ಶೀಘ್ರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕು. ಯುಜಿಡಿ ಕೆಲಸಕ್ಕೆ ಸರ್ಕಾರ ಹಣ ಕೊಡಬೇಕೆಂದು ಶಾಸಕ ಜಿ.ಟಿ ದೇವೇಗೌಡ ಮಾತಾನಾಡಿದರು.

ಬೆಡ್ ಕಾಯ್ದಿರಿಸಲು ಸಿಎಂ ಸೂಚನೆ

ಕಲುಷಿತ ನೀರು ಸೇವಿಸಿ ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಿಂದ ಮೊಬೈಲ್ ಕರೆ ಮಾಡಿ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದರು. ಇದೇ ವೇಳೆ ಜಿಲ್ಲಾಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ತಲಾ 25 ಬೆಡ್ ಕಾಯ್ದಿರಿಸಲು ಸೂಚನೆ ನೀಡಿದರು. ಭೇದಿ ಕಾಣಿಸಿಕೊಂಡವರಲ್ಲಿ‌ ಮೂರಿಂದ ನಾಲ್ಕು ಜನರಿಗೆ ಕಾಲರ ಲಕ್ಷಣ ಸಾಧ್ಯತೆ ಇದೆ. ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್‌ಓ ಮಾಹಿತಿ ನೀಡಿದರು.

ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ

ಕಲುಷಿತಗೊಂಡಿರುವ ನೀರನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ ಎಂದು ವಿಸ್ತಾರ ನ್ಯೂಸ್‌ಗೆ ಡಿಎಚ್‌ಒ ಡಾ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ನೀರಿನ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿದ್ದೇವೆ.‌ ಸಾಲುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 5 ವೈದ್ಯರು, 25 ನರ್ಸಿಂಗ್ ಸಿಬ್ಬಂದಿ ನಿಯೋಜಿಸಿದ್ದೇವೆ. ಶಾಲೆಯನ್ನು ಆರೋಗ್ಯ ಶಿಬಿರವಾಗಿ ಮಾಡಿದ್ದೇವೆ.‌ ಮನೆ ಮನೆಗೂ ಹೋಗಿ ಜಾಗೃತಿ ಮೂಡಿಸುತ್ತಿದ್ದೇವೆ. ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡಿದೆ. ಅದರ ಪರಿಣಾಮವಾಗಿಯೇ ಸಾವು, ನೋವು ಕಡಿಮೆ ಆಗಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actress Nayanthara twin sons on auto ride
ಕಾಲಿವುಡ್11 mins ago

Actress Nayanthara: ನಯನತಾರಾ ಅವಳಿ ಮಕ್ಕಳ ಭರ್ಜರಿ ಆಟೋ ಸವಾರಿ!

Mallikarjuna Kharge siddaramaiah
ಪ್ರಮುಖ ಸುದ್ದಿ13 mins ago

CM Siddaramaiah: ಖರ್ಗೆಯೂ ಪಿಎಂ ಆಗಲ್ಲ! ಸಿದ್ದರಾಮಯ್ಯ ಯಾಕಿಂಥಾ ಮಾತಾಡಿದ್ರು?

murder Case in Vijayapura
ವಿಜಯಪುರ22 mins ago

Murder Case : ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಶವದ ಪಕ್ಕದಲ್ಲೇ ನಿದ್ರೆಗೆ ಜಾರಿದ ಕುಡುಕ ಪತಿ

Jayant Sinha
ದೇಶ22 mins ago

Jayant Sinha: ವೋಟೂ ಹಾಕಿಲ್ಲ..ಪ್ರಚಾರಕ್ಕೂ ಬಂದಿಲ್ಲ; ಜಯಂತ್‌ ಸಿನ್ಹಾಗೆ ಬಿಜೆಪಿ ಶೋಕಾಸ್‌ ನೊಟೀಸ್‌

Katrina Kaif And Vicky Kaushal Together In London
ಸಿನಿಮಾ30 mins ago

Katrina Kaif: ಕತ್ರಿನಾ ಕೈಫ್ ಈಗ ಪ್ರೆಗ್ನೆಂಟ್? ಪತಿ ಜತೆ ಲಂಡನ್‌ನಲ್ಲಿ ಜಾಲಿ ಮೂಡ್‌!

gold rate today sruthi hassan
ಚಿನ್ನದ ದರ41 mins ago

Gold Rate Today: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ, ಗ್ರಾಹಕರಿಗೆ ತುಸು ನಿರಾಳ

India Head Coach
ಕ್ರೀಡೆ48 mins ago

India Head Coach: ಭಾರತ ತಂಡದ ಕೋಚ್​ ಆಗಲು ಫ್ಲೆಮಿಂಗ್​ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!

Viral Video
ವೈರಲ್ ನ್ಯೂಸ್57 mins ago

Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Contaminated Water
ಮೈಸೂರು1 hour ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Viral video
ವೈರಲ್ ನ್ಯೂಸ್1 hour ago

Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ23 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌