40% ಕಮಿಷನ್| ಕರ್ನಾಟಕವನ್ನು ಕರಪ್ಶನ್‌ ಕ್ಯಾಪಿಟಲ್‌ ಮಾಡಿದ ಬಿಜೆಪಿ ಸರಕಾರ: ಕಾಂಗ್ರೆಸ್‌ ತೀವ್ರ ವಾಗ್ದಾಳಿ - Vistara News

ಕರ್ನಾಟಕ

40% ಕಮಿಷನ್| ಕರ್ನಾಟಕವನ್ನು ಕರಪ್ಶನ್‌ ಕ್ಯಾಪಿಟಲ್‌ ಮಾಡಿದ ಬಿಜೆಪಿ ಸರಕಾರ: ಕಾಂಗ್ರೆಸ್‌ ತೀವ್ರ ವಾಗ್ದಾಳಿ

ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಹಲವು ಆರೋಪಗಳನ್ನು ಮಾಡಿರುವ ಕಾಂಗ್ರೆಸ್‌ ಕರ್ನಾಟಕವನ್ನೇ ಕರಪ್ಶನ್‌ ಕ್ಯಾಪಿಟಲ್‌ ಮಾಡಲಾಗಿದೆ ಎಂದು ದೂರಿದೆ.

VISTARANEWS.COM


on

congress corruption charge
ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಹಾಡಿನ ಒಂದು ದೃಶ್ಯ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಗಾರ್ಡನ್‌ ಸಿಟಿ, ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆ ಹೊಂದಿದ್ದ ಬೆಂಗಳೂರನ್ನು, ಅದನ್ನು ರಾಜಧಾನಿಯಾಗಿ ಹೊಂದಿರುವ ಕರ್ನಾಟಕವನ್ನು ಬಿಜೆಪಿ ಸರಕಾರ ಕರಪ್ಶನ್‌ ಕ್ಯಾಪಿಟಲ್‌ (ಭ್ರಷ್ಟಾಚಾರದ ರಾಜಧಾನಿ) ಮಾಡಿದೆ ಎಂದು ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ.

ಬಿಜೆಪಿ ಸರಕಾರ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಬೃಹತ್‌ ಅಭಿಯಾನ ನಡೆಸಲು ಮುಂದಾಗಿರುವ ಕಾಂಗ್ರೆಸ್‌ ಮಂಗಳವಾರ ಅದಕ್ಕೆ ಚಾಲನೆಯನ್ನು ನೀಡಿತು. ʻʻಬಿಜೆಪಿ ಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರʼʼ ಎಂದು ಅದು ಅಭಿಯಾನ ಆರಂಭಿಸಿದೆ. ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಒಂದು ಹಾಡು, ಪೋಸ್ಟರ್‌ ಮಾತ್ರವಲ್ಲದೆ, ಸರಕಾರದಲ್ಲಿ ಯಾವ ಕೆಲಸಕ್ಕೆ ಎಷ್ಟು ಲಂಚ ಕೊಡಬೇಕು ಎಂಬ ಬಗ್ಗೆ ಒಂದು ಲಂಚದ ಕಾರ್ಡನ್ನೇ ಬಿಡುಗಡೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಬ್ಬರೂ ಬಿಜೆಪಿ ಸರಕಾರ ಮತ್ತು ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸದನದ ಒಳಗೂ ಹೊರಗೂ ಚರ್ಚೆಯಾಗಲಿ
ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಕಾಂಗ್ರೆಸ್‌ ಸಜ್ಜಾಗಿದೆ. ಇದು ವಿಧಾನಸೌಧದ ಒಳಗೆ ಮತ್ತು ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಸದನದಲ್ಲಿ ಭ್ರಷ್ಟಾಚಾರದ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗಬೇಕು. ಈ ಬಗ್ಗೆ ಶಾಸಕರಿಗೆ ಪಕ್ಷ ಜವಾಬ್ದಾರಿ ಕೊಟ್ಟಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಗೌರವವನ್ನು ಹಾಳು ಮಾಡಿದೆ. ಗಾರ್ಡನ್‌ ಸಿಟಿ ಮತ್ತು ಸಿಲಿಕಾನ್‌ ಸಿಟಿ ಎಂಬ ಗೌರವವನ್ನು ಕರಪ್ಶನ್‌ ಕ್ಯಾಪಿಟರ್‌ ಆಗಿ ಬದಲಾಯಿಸಿದ ಅಪಕೀರ್ತಿ ಬಿಜೆಪಿಗೆ ಸೇರುತ್ತದೆ ಎಂದು ಹೇಳಿದ ಅವರು, ಡಬಲ್‌ ಎಂಜಿನ್‌ ಸರಕಾರ ಬಂದ ಮೇಲೆ ಯಾವ ಕೆಲಸಕ್ಕೆ ಎಷ್ಟು ಎಂದು ಬೋರ್ಡ್‌ ಹಾಕಿ ಕೆಲಸ ಮಾಡುತ್ತಿದೆ ಎಂದು ನುಡಿದರು.

ಪ್ರೊ. ಅಶೋಕ್‌ ಸಾವಿನ ತನಿಖೆ ಯಾಕೆ ಮಾಡಿಲ್ಲ?
ʻʻಎಸಿಪಿ, ಇನ್ಸ್‌ಪೆಕ್ಟರ್‌ ಸೇರಿದಂತೆ ಎಲ್ಲಾ ಹುದ್ದೆಗಳಿಗೆ ರೇಟ್ ಫಿಕ್ಸ್ ಆಗಿದೆ‌ʼʼ ಎಂದ ಡಿ.ಕೆ ಶಿವಕುಮಾರ್‌, ʻʻನಾವು ದಿನಕ್ಕೊಂದು ಪ್ರಶ್ನೆ ಮಾಡುತ್ತಿದ್ದೇವೆ. ಆದರೆ, ಸರಕಾರಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಪ್ರೊ. ಅಶೋಕ್ ಆತ್ಮಹತ್ಯೆ ಮಾಡಿಕೊಂಡರು. ತನಿಖೆ ಯಾಕೆ ಮಾಡಿಲ್ಲ? ರಾಜಪಾಲರು ಭ್ರಷ್ಟಾಚಾರ ಮಾಡಿದ್ರು ಎಂದು ನಾನು ಹೇಳಲ್ಲ. ವಿಸಿ ಆಗಬೇಕು ಎಂದು ಹಣ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಸರ್ಕಾರ, ಮಂತ್ರಿಗಳು ಭಾಗಿಯಾಗದೆ ಯಾವ ಅಧಿಕಾರಿಗಳಿಗೆ ಭ್ರಷ್ಟಾಚಾರ ಮಾಡಲು ಧೈರ್ಯ ಬರುತ್ತದೆʼʼ ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆಗೆ ನೋಟಿಸ್‌ ಕೊಡ್ತೀರಾ?
ʻʻಕನಕಗಿರಿ ಎಂಎಲ್ಎ 15 ಲಕ್ಷ ತಾನೇ ಸರ್ಕಾರಕ್ಕೆ ಕೊಟ್ಟಿದ್ದೀನಿ. ಅದು ನಂದೇ ವಾಯ್ಸ್ ಅಂತ ಹೇಳಿದ. ನಮ್ಮ ಪಕ್ಷದ ಪರವಾಗಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಇದನ್ನು ಪ್ರಸ್ತಾಪ ಮಾಡಿದರೆ ನೊಟೀಸ್ ಕೊಟ್ಟು ಹೆದರಿಸ್ತೀರಾ? ಬೊಮ್ಮಾಯಿ ಅವರು 2500 ಕೋಟಿ ರೂ. ಕೊಟ್ಟು ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿಯದೇ ಶಾಸಕ ಬಸವರಾಜ ಪಾಟೀಲ್‌ ಯತ್ನಾಳ್ ಹೇಳಿದ್ರಲ್ಲ, ಯಾಕೆ ಅವರನ್ನು ನೊಟೀಸ್ ಕೊಟ್ಟು ಕರೆಯಲಿಲ್ಲ? ಮಂಚದ ಕೇಸಲ್ಲಿ ಒಬ್ಬ ಮಾಜಿ ಶಾಸಕ 15 ಲಕ್ಷ ಕೊಟ್ಟೆ ಅಂತ ಹೇಳಿದ. ಯಾಕೆ ಕರೆಯಲಿಲ್ಲ ಅವನನ್ನು? ನಿಮ್ಮ ಸರ್ಕಾರ ಏನು ಮಾಡ್ತಾ ಇತ್ತು?ʼʼ ಎಂದು ಖಾರವಾಗಿ ಪ್ರಶ್ನಿಸಿದರು ಡಿ.ಕೆ. ಶಿವಕುಮಾರ್‌.

ಮುಖ್ಯಮಂತ್ರಿಗಳಿಗೆ ಈಗ ದಮ್ಮು ಬಂತಾ?
ʻʻನಾನು ಪವರ್ ಮಿನಿಸ್ಟರ್ ಆಗಿದ್ದಾಗ ಭ್ರಷ್ಟಾಚಾರ ಆಗಿದೆ ಎಂದು ಹೇಳಿದ್ರು. ಹೆಚ್ಚು ದುಡ್ಡು ಕೊಟ್ಟು ಪವರ್ ಖರೀದಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ರು. ತನಿಖೆ ಮಾಡಲಿ, ಯಾರು ಬೇಡ ಎಂದ್ರು. ನಮ್ಮದೆಲ್ಲ ಬಯಲಿಗೆಳೆಯುತ್ತಾರಂತೆ. ಸಿಎಂ ಏನೋ ದಮ್ಮಿನ ಬಗ್ಗೆ ಮಾತಾಡ್ತಿದ್ರಲ್ಲ. ಮೂರು ವರ್ಷ ಎಲ್ಲಿ ಹೋಗಿತ್ತು ಅವರ ದಮ್ಮು. ಈಗ ಬಂದುಬಿಡ್ತಾ ದಮ್ಮು?ʼʼ ಎಂದು ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

ಭಯ ಬಿಟ್ಟು ದೂರು ಕೊಡಿ ಎಂದ ಸಿದ್ದರಾಮಯ್ಯ
ʻʻಬಿಬಿಎಂಪಿಯಲ್ಲಿ 40 ರಿಂದ 50% ಕಮಿಷನ್ ಫಿಕ್ಸ್‌ ಮಾಡಿದ್ದಾರೆ. ಭ್ರಷ್ಟಾಚಾರದಿಂದ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಬಹಳಷ್ಟು ಜನ ಭಯದಿಂದ ದೂರು ಕೊಡಲ್ಲ. ಹಾಗಾಗಿ ನಾವು ಅಭಿಯಾನ ಪ್ರಾರಂಭ ಮಾಡಿ, ಹೆಲ್ಪ್ ಲೈನ್ ನಂಬರ್ ಮಾಡಿದ್ದೇವೆ. ಯಾರೇ ದೂರು ಕೊಟ್ಟರು ಅದನ್ನು ಗೌಪ್ಯವಾಗಿ ಇಡ್ತೇವೆ. ಜನರಲ್ಲಿ ಜಾಗೃತಿ ಮೂಡಿಸುವುದು. ಈ ಕಿರುಕುಳದಿಂದ ಜನರನ್ನು, ಗುತ್ತಿಗೆದಾರನ್ನು ಮುಕ್ತ ಮಾಡುವುದು ನಮ್ಮ ಉದ್ದೇಶʼʼ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ʻʻಸಿಎಂ ಹಾಗೂ ಮಂತ್ರಿ ಮಂಡಲದ ಎಲ್ಲ ಮಂತ್ರಿಗಳು ಸಂಪೂರ್ಣ ಲೂಟಿ ಹೊಡೆಯುತ್ತಿದ್ದಾರೆ. ಜನರ ರಕ್ತ ಹೀರುವ ಕೆಲಸ ಮಾಡ್ತಾ ಇದ್ದಾರೆʼʼ ಎಂದು ಹೇಳಿದ ಅವರು ಈಶ್ವರಪ್ಪ ಅವರ ಮೇಲಿನ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವಿನ ಆರೋಪವನ್ನು ಉಲ್ಲೇಖಿಸಿದರು.

ಇದನ್ನೂ ಓದಿ | 40% ಕಮಿಷನ್‌ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಂಡ್ಯ

Nagamangala Case: ನಾಗಮಂಗಲ ಗಲಭೆಯು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ; ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಂಚು- ಎಚ್‌ಡಿ ಕುಮಾರಸ್ವಾಮಿ

Nagamangala Case: ನಾಗಮಂಗಲ ಗಲಭೆಯು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ.. ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಲು ಕಾಂಗ್ರೆಸ್‌ನವರಿಂದಲೇ ನಡೆದಿರುವ ಸಂಚು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

VISTARANEWS.COM


on

By

Nagamangala Case
Koo

ಮಂಡ್ಯ: ಗಣೇಶ ವಿಸರ್ಜನೆ ವೇಳೆ ನಾಗಮಂಗಲದ ಗಲಭೆ (Nagamangala Case) ವಿಚಾರಕ್ಕೆ ಸಂಬಂಧಿಸಿಂತೆ ಶುಕ್ರವಾರ ಕೇಂದ್ರ ಸಚಿವ ಎಚ್‌ಡಿ‌ ಕುಮಾರಸ್ವಾಮಿ (HD kumaraswamy) ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಮಂಗಲದ ಇಡೀ ಘಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ. 1990ರಲ್ಲಿ ವಿರೇಂದ್ರ ಪಾಟೀಲರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಲು ಗಲಭೆ ನಡೆಸಿದಂತೆ ಸಿದ್ದರಾಮಯ್ಯರನ್ನ ಸಿಎಂ ಕುರ್ಚಿಯಿಂದ‌ ಕೆಳಗೆ ಇಳಿಸಲು ಕಾಂಗ್ರೆಸ್‌ನಲ್ಲೇ ನಡೆಸಿರುವ ಸಂಚು ಎಂದು ಹೊಸ ಬಾಂಬ್ ಹಾಕಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗದಲ್ಲಿ ನಡೆದಿರುವ ಕೋಮು ದಳ್ಳೂರಿ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ನಿನ್ನೆ ಗುರುವಾರವಷ್ಟೆ ಬಿಜೆಪಿ ನಿಯೋಗ ಭೇಟಿ ನೀಡಿ ಹೋಗಿತ್ತು. ಆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ನಾಯಕರು ನಾಗಮಂಗಲದ ಗಲಭೆಯನ್ನ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗುಡುಗಿದ್ದರು.

ಶುಕ್ರವಾರ ನಾಗಮಂಗಲಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಎಚ್‌ಡಿ‌ ಕುಮಾರಸ್ವಾಮಿ ಗಲಭೆಯಲ್ಲಿ ಹಾನಿಗೊಳಗಾಗಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತಮ್ಮ ತಮ್ಮ ಅಂಗಡಿ ಮುಂಗ್ಗಟ್ಟುಗಳನ್ನು ಕಳೆದುಕೊಂಡಿದ್ದ ಜನರು ಕುಮಾರಸ್ವಾಮಿ ಬಳಿ ತಮ್ಮ ನೋವನ್ನು ತೊಡಿಕೊಂಡರು. ನಾಗಮಂಗಲದ ಕೋಮು ದಳ್ಳುರಿಯನ್ನು ಕಣ್ಣಾರೆ ಕಂಡ ಕುಮಾರಸ್ವಾಮಿ ಇಡೀ ಗಲಭೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದು ನೇರವಾಗಿ ಆರೋಪ ಮಾಡಿದರು. 1990 ರಲ್ಲಿ ವೀರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಗಲಭೆ ನಡೆಸಿದಂತೆ ಸಿದ್ದರಾಮಯ್ಯರನ್ನು ಕೆಳಗೆ ಇಳಿಸಲು ಕಾಂಗ್ರೆಸ್ ಪಕ್ಷವೇ ನಡೆಸಿರೊ ಷಡ್ಯಂತ್ರ ಇದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವ ತನಿಖೆಯನ್ನಾದರು ಮಾಡಲಿ ಎಂದು ಗುಡುಗಿದರು.

ಇದನ್ನೂ ಓದಿ: Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

ಫೂರ್ವ ನಿಯೋಜಿತ ಕೃತ್ಯವಷ್ಟೇ

ನಾಗಮಂಗಲದ ಗಲಭೆಯಲ್ಲಿ ಹಾನಿಗೊಳಗಾಗಿರುವ ಬಹುತೇಕ ಎಲ್ಲಾ ಅಂಗಡಿಗಳಿಗೂ ತೆರಳಿ ಪರಿಶೀಲಿಸಿದ ಕುಮಾರಸ್ವಾಮಿ, ಗಲಭೆಗೆ ಸಂಬಂಧಿಸಿದಂತೆ ಹಾಕಲಾಗಿರುವ ಎಫ್‌ಐಆರ್ ಬಗೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಗೂ ಮುನ್ನಾ ಎಫ್ ಐ ಆರ್ ಪ್ರತಿಯನ್ನು ಪರಿಶೀಲಿಸಿದ ಕುಮಾರಸ್ವಾಮಿ, ಇಲ್ಲಿ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದವರೇ ಮೊದಲ ಆರೋಪಿ ಆಗಿದ್ದಾರೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮತ್ತು ಇಂತಹ ದಿನ ವಿಸರ್ಜನೆ ಮಾಡಲಾಗುವುದು ಎಂದು ಪೊಲೀಸರಲ್ಲಿ ಅನುಮತಿಯನ್ನು ಪಡೆಯಲಾಗಿತ್ತು ಅನ್ನೋದು ಎಫ್ ಐ ಆರ್ ನಲ್ಲೇ ನಮೂದಾಗಿದೆ.

ಅಂದ್ಮೇಲೆ ಘಟನೆ ನಡೆದ ದಿನ ಗಣೇಶ ಮೂರ್ತಿ ವಿಸರ್ಜನೆ ಇದೆ ಅನ್ನೋದು ಪೊಲೀಸರಿಗೂ ಗೊತ್ತಿತ್ತು. ಆದರೆ ಅವರು ಹೆಚ್ಚಿನ ಜನರನ್ನು ನಿಯೋಜನೆ ಮಾಡಲಿಲ್ಲ. ಬದಲಾಗಿ ಭದ್ರತೆಗಾಗಿ ನಿಯೋಜಿಸಿದ್ದ ಡಿಎಆರ್ ಪೊಲೀಸರನ್ನು ಅಲ್ಲಿಂದ ಕಳುಹಿಸಲಾಗಿತ್ತು. ಹೀಗೆ ಪೊಲೀಸರು ಅಲ್ಲಿಂದ ತೆರಳಲು ಸೂಚನೆ ಕೊಟ್ಟವರು ಯಾರು? ದೂರು ನೀಡಿರುವ ರವಿ ಎಂಬ ಪೊಲೀಸ್ ಅಧಿಕಾರಿ ಅಷ್ಟು ಜನರ ಹೆಸರನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆ? ಅಂದು ನಡೆದ ಘಟನೆಯಲ್ಲಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಲ್ಲಾ ಇತ್ತು ಎನ್ನುವುದಾದರೆ ಇದೆಲ್ಲವು ಏಕಾಏಕಿ ಬರುವುದಿಲ್ಲ. ಇದನ್ನು ಗಮನಿಸಿದಾಗ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತೆ‌‌. ಆದರೆ ಗೃಹಮಂತ್ರಿಗೆ ಇದು ಸಣ್ಣ ಘಟನೆ ಅಂತೆ, ಅವರು ಇಲ್ಲಿಗೆ ಬರಬೇಕು ಅಂದರೆ ಹೆಣ ಬೀಳಬೇಕಾ ಎಂದು ಪ್ರಶ್ನಿಸಿದ ಎಚ್‌ಡಿಕೆ ಅವರನ್ನು ಯಾರ್‌ರೀ ಗೃಹ ಮಂತ್ರಿ ಅಂತಾರೆ ಎಂದೂ ಗುಡುಗಿದರು.

ಗಲಭೆಗೆ ಸಂಬಂಧಿಸಿದಂತೆ ಹಾನಿಗೊಳಗಾಗಿರುವ ಜನರಿಗೆ ಸದ್ಯಕ್ಕೆ ಅವರ ಜೀವನೋಪಾಯಕ್ಕೆ ಅನುಕೂಲವಾಗಲಿ ಎಂಬ ಕಾರಣದಿಂದ ವೈಯಕ್ತಿಕವಾಗಿ ಒಂದಷ್ಟು ನೆರವು ನೀಡಿದ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುತ್ತಲೇ ಎರಡೂ ಕೋಮಿನ‌ ಜನರು ಈ ರೀತಿಯ ಗಲಭೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಾಗಲಕೋಟೆ

Road Accident : ಸ್ಕೂಟಿಗೆ ಗುದ್ದಿ ಬೈಕ್‌ನಿಂದ ಹಾರಿ ಬಿದ್ದ ಸವಾರರು; ಸ್ಥಳದಲ್ಲೇ ಓರ್ವ ಸಾವು, ಮತ್ತಿಬ್ಬರು ಗಾಯ

Road Accident : ಸ್ಕೂಟಿ ಹಿಂಬದಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದ್ದು, ಹಾರಿ ಬಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

VISTARANEWS.COM


on

By

Road Accident
Koo

ಬಾಗಲಕೋಟೆ: ಸ್ಕೂಟಿ ಹಿಂಬದಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಓರ್ವ ಬೈಕ್ ಸವಾರ ಮೃತಪಟ್ಟಿದ್ದಾರೆ. ಬಾಗಲಕೋಟೆಯ ಬನಹಟ್ಟಿ ಹೊರ ವಲಯದ ಹೊಸೂರು ಬೈಪಾಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ಡಿಕ್ಕಿ ಹೊಡೆದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಲ್ಲಿಕಾರ್ಜುನ (22) ಮೃತ ದುರ್ದೈವಿ.

ತಲೆ, ಮುಖ ಭಾಗಕ್ಕೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಘಟನೆಯಲ್ಲಿ ರಮೇಶ್, ಕಲ್ಮೇಶ್, ಶ್ರೀಶೈಲ್ ಮೂವರಿಗೂ ಗಂಭೀರ ಗಾಯಗೊಂಡವರು. ಮೃತ ಮಲ್ಲಿಕಾರ್ಜುನ್ ಕುಳಲಿ ಗ್ರಾಮದ ನಿವಾಸಿ ಆಗಿದ್ದಾರೆ. ಮಲ್ಲಿಕಾರ್ಜುನ್ ಕುಳಲಿಯಿಂದ ಬನಹಟ್ಟಿಗೆ ಇಬ್ಬರು ಸ್ನೇಹಿತರೊಂದಿಗೆ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಹೊತ್ತಿ ಉರಿದ ಕಾರು

ನೋಡ ನೋಡುತ್ತಿದ್ದಂತೆ ಮಾರುತಿ ‌ಕಾರು ಹೊತ್ತಿ ಉರಿದಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಬೆಳಗಾವಿ ಬಾಗಲಕೋಟ್ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಕಾರು ಸುಟ್ಟು ಭಸ್ಮವಾಗಿದೆ. ಬೆಳಗಾವಿ ತಾಲೂಕಿನ‌ ಸಾಂಬ್ರಾ ಬಳಿ ಘಟನೆ ನಡೆದಿದೆ. ಯರಗಟ್ಟಿಯಿಂದ‌ ಬೆಳಗಾವಿ ಕಡೆಗೆ ಬರುತ್ತಿದ್ದ ಮಾರುತಿ ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರು ನಿಲ್ಲಿಸಿ, ಎಲ್ಲರನ್ನು ಹೊರೆಗೆ ಕಳಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Theft case : ಬೆಂಗಳೂರಿನಲ್ಲಿ ದೇವರನ್ನೇ ಕದ್ದ ಖದೀಮರು! ಸಿಸಿ ಕ್ಯಾಮೆರಾದಲ್ಲಿ ಸೆರೆ

Theft case : ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಬಂದ ಖದೀಮರು ದೇವರನ್ನೇ ಕದ್ದಿದ್ದಾರೆ. ಕಳ್ಳರ ಕಳ್ಳಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಲಘಟ್ಟಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಕುಖ್ಯಾತ ಸರಗಳ್ಳ ರಮೇಶ್ ಎಂಬಾತನನ್ನು ಬಂಧಿಸಿದ್ದಾರೆ.

VISTARANEWS.COM


on

By

theft case
Koo

ಬೆಂಗಳೂರು: ಚಿನ್ನ, ಬೆಳ್ಳಿ, ಬೈಕ್‌, ಕಾರು ಇದ್ಯಾವುದನ್ನು ಮುಟ್ಟಲ್ಲ ಆದರೆ ದೇವರನ್ನು ಕಂಡರೆ ಬಿಡೋದಿಲ್ಲ. ಬೆಂಗಳೂರಿನಲ್ಲಿ ಗಣಪತಿ ಉತ್ಸವಗಳಿಗೆ ಮಾರಾಟಕ್ಕಿಟ್ಟಿದ್ದ ಗಣಪತಿ ಮೂರ್ತಿ ಕಳವು (Theft Case) ಮಾಡಿದ್ದಾರೆ. ರಾತ್ರೋ ರಾತ್ರಿ ಬಂದ ಖದೀಮರು ಗಣಪತಿ ಮೂರ್ತಿ ಕದ್ದು ಕ್ಷಣಾರ್ಧದಲ್ಲಿ ಎಸ್ಕೇಪ್‌ ಆಗಿದ್ದಾರೆ. ಕಳೆದ 12ರಂದು ಮಧ್ಯರಾತ್ರಿ 12 .45ರ ಸುಮಾರಿಗೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅಂದ್ರಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದಿರುವ ಇಬ್ಬರು ಖದೀಮರಿಂದ ಕೃತ್ಯ ನಡೆದಿದೆ.

ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ಗಣಪತಿ ಉತ್ಸವಗಳಿಗಾಗಿ ಗಣಪತಿ ವಿಗ್ರಹಗಳನ್ನು ಮಾರಾಟಕ್ಕಿಡಲಾಗಿತ್ತು. ಸುಮಾರು 20 ರಿಂದ 30 ವಿಗ್ರಹಗಳನ್ನು ಮಾರಾಟಕ್ಕಿಡಲಾಗಿತ್ತು. ವ್ಯಾಪಾರಿಯೊಬ್ಬರು ರಾತ್ರಿ ಹೊತ್ತು ಮೂರ್ತಿ ಅಲ್ಲೇ ಬಿಟ್ಟು ಟಾರ್ಪಲ್ ಹೊದಿಸಿ‌ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿರುವ ಇಬ್ಬರು ಖದೀಮರಿಂದ ಒಂದು ಮೂರ್ತಿ ಕಳುವು ಮಾಡಿದ್ದಾರೆ. ಖದೀಮರು ಮೂರ್ತಿ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ; Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

ಕುಖ್ಯಾತ ಸರಗಳ್ಳ ಅರೆಸ್ಟ್‌

ತಲಘಟ್ಟಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಕುಖ್ಯಾತ ಸರಗಳ್ಳ ರಮೇಶ್ ಎಂಬಾತನನ್ನು ಬಂಧಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರ ಮಾಂಗಲ್ಯ ಸರವನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ. ಕದ್ದ ಬೈಕ್‌ನಲ್ಲಿ ಸರಗಳ್ಳತನ ಮಾಡುತ್ತಿದ್ದ. ಕಳೆದ ತಿಂಗಳು 27 ರಂದು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿದ್ದ. ಕುತ್ತಿಗೆಯಲ್ಲಿದ್ದ 6 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿ ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆಯಲ್ಲಿ 4 ಬೈಕ್ ಹಾಗೂ 1 ಆಟೋ ಕಳವು ಪ್ರಕರಣವು ಬೆಳಕಿಗೆ ಬಂದಿದೆ. ಕದ್ದ ಚಿನ್ನವನ್ನು ಆನೇಕಲ್‌ನ ಜುವೆಲ್ಲರಿ ಶಾಪ್‌ನಲ್ಲಿ ಅಡವಿಡುತ್ತಿದ್ದ. ಬಂಧಿತನಿಂದ 10 ಲಕ್ಷ ಮೌಲ್ಯದ 6 ಗ್ರಾಂ ಚಿನ್ನಾಭರಣ, 4 ಬೈಕ್ ಹಾಗೂ 1 ಆಟೋ ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Theft case : ಆನ್‌ಲೈನ್‌ ಬೆಟ್ಟಿಂಗ್‌ ಗೀಳು; ಅಣ್ಣನ ಮದುವೆಗೆ ತಂದಿದ್ದ ಚಿನ್ನ ಕದ್ದು ಸಿಕ್ಕಿಬಿದ್ದ ತಮ್ಮ!

Theft case: ಆನ್‌ಲೈನ್‌ ಬೆಟ್ಟಿಂಗ್‌ ಗೀಳಿಗೆ ಬಲಿಯಾದ ತಮ್ಮನೊಬ್ಬ ಅಣ್ಣನ ಮದುವೆಗೆ ತಂದಿದ್ದ ಚಿನ್ನ ಕದ್ದು ಸಿಕ್ಕಿಬಿದ್ದಿದ್ದಾನೆ. ಖದೀಮರು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಒರಿಸ್ಸಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ.

VISTARANEWS.COM


on

By

theft case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಿನ್ನ ಕದ್ದ (Theft case) ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆದಿತ್ಯ ಎಂಬಾತನಿಂದ 100 ಗ್ರಾಂ ಬೆಳ್ಳಿ, 102 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆದಿತ್ಯ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಜೂಜಾಡಿ ಹಣ ಸೋತಿದ್ದ. ಸಾಲ ತೀರಿಸಲಿಕ್ಕೆ ತನ್ನ ಮನೆಯಲ್ಲೇ ಕಳವು ಮಾಡಿದ್ದ. ಆದಿತ್ಯಾ ಕುಟುಂಬಸ್ಥರು ಮೊದಲ ಮಗನ ಮದುವೆಗೆ ಚಿನ್ನ ಖರೀದಿಸಿ ಇಟ್ಟಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತ ಆದಿತ್ಯಾ ಅಣ್ಣನಿಗೆ ಖರೀದಿಸಿದ್ದ ಚಿನ್ನವನ್ನು ಕದ್ದು ಮಳ್ಳನಂತೆ ಸುಮ್ಮನೆ ಇದ್ದ. ಬಳಿಕ ಆದಿತ್ಯಾ ತಾಯಿ ಚಿನ್ನ ಕಳ್ಳತನ ಸಂಬಂಧ ದೂರು ನೀಡಿದ್ದರು. ಪೊಲೀಸರ ವಿಚಾರಣೆ ವೇಳೆ ಮಗನೇ ಮನೆಗಳವು ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಖದೀಮರು

ಬೆಂಗಳೂರಿನ ಹನುಂತನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರವಿ, ಅರುಣ್, ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರ ಬಂಧನದಿಂದ 4 ಪ್ರಕರಣ ಬೆಳಕಿಗೆ ಬಂದಿದೆ. ಬೈಕ್‌ನಲ್ಲಿ ಲೈಟ್ ಆಫ್ ಆಗಿರುವ ಮನೆಗಳ ರೆಕ್ಕಿ ಮಾಡುತ್ತಿದ್ದರು. ಬಳಿಕ ಕಾಲಿಂಗ್ ಬೆಲ್ ಒತ್ತುತ್ತಿದ್ದರು. ಡೋರ್ ಓಪನ್ ಮಾಡದೇ ಇದ್ದಾಗ, ಬಾಗಿಲು ಒಡೆಯುತ್ತಿದ್ದರು. ಮನೆಯಲ್ಲಿದ್ದ ಚಿನ್ನಾಭರಣ ಲೂಟಿ ಮಾಡಿ ಎಸ್ಕೇಪ್ ಆಗುತ್ತಿದ್ದರು. ಸಿಸಿಟಿವಿ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 480 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಒಂಟಿ ಮನೆ ಟಾರ್ಗೆಟ್‌

ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಿದ್ದಾರೆ. 20 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ರಿಯಾನ್ @ ನಾಗರಾಜ್ ಬಂಧಿತ ಆರೋಪಿ ಆಗಿದ್ದಾನೆ. ಬಂಧಿತನಿಂದ 09 ಮನೆಗಳವು ಪ್ರಕರಣ ಬೆಳಕಿಗೆ ಬಂದಿದೆ. ಸಿದ್ದಾಪುರ ನಿವಾಸಿ ಆಗಿರುವ ಆರೋಪಿ ರಿಯಾನ್ ಟಿವಿ ಡಿಶ್ ರಿಪೇರಿ ಮಾಡುವ ನೆಪದಲ್ಲಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ.

ವೈಟ್ ಫೀಲ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳಿಯನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಪಿಂಕಿದೇವಿ ಬಂಧಿತ ಆರೋಪಿಯಾಗಿದ್ದಾಳೆ. ಬಂಧಿತಳಿಂದ 54 ಲಕ್ಷ ಮೌಲ್ಯದ 570 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಸಾಫ್ಟ್ ವೇರ್ ಉದ್ಯೋಗಿ ಮನೆಯಲ್ಲಿ ಕೆಲಸಕ್ಕಿದ್ದ ಪಿಂಕಿದೇವಿ ಮನೆಗಳವು ಮಾಡಿದ್ದಳು. ಬಳಿಕ ಬಿಹಾರಕ್ಕೆ ತೆರಳಿದ್ದ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.

ಇದನ್ನೂ ಓದಿ: Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

ಒರಿಸ್ಸಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ

ಮಂಗಳೂರು: ಒರಿಸ್ಸಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಒರಿಸ್ಸಾದ ಗಜಪತಿ ಜಿಲ್ಲೆಯ ಬುಲುಬಿರೊ (24), ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ದಿಲ್ ದಾರ್ ಆಲಿ (28) ಬಂಧಿತ ಆರೋಪಿ ಆಗಿದ್ದಾರೆ.

ಬಂಧಿತರಿಂದ 2.6 ಲಕ್ಷ ಮೌಲ್ಯದ 8.65 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಒರಿಸ್ಸಾದಿಂದ ರೈಲಿನಲ್ಲಿ ಬೆಂಗಳೂರಿಗೆ ಅಲ್ಲಿಂದ ಬಸ್‌ನಲ್ಲಿ ಮಂಗಳೂರು, ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಅಡಿಕೆ ತೂಕದಲ್ಲಿ ಮೋಸ ಹಾಕಿದವನಿಗೆ 20 ಲಕ್ಷ ರೂ. ದಂಡ ಹಾಕಿದ ಗ್ರಾಮಸ್ಥರು

ಶಿವಮೊಗ್ಗದಲ್ಲಿ ರಾಶಿ ಅಡಿಕೆ ತೂಕದಲ್ಲಿ ಮೋಸ ಮಾಡಿದ ವ್ಯಾಪಾರಿಗೆ ಗ್ರಾಮಸ್ಥರು 20 ಲಕ್ಷ ರೂ. ದಂಡ ಹಾಕಿದ್ದಾರೆ. ರೈತರಿಂದ ಅಡಿಕೆ ಖರೀದಿಸುವಾಗ ‌ಪ್ರತಿ ಕ್ವಿಂಟಾಲ್‌ಗೆ 3 ಕೆ.ಜಿ ಅಡಿಕೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ರೈತರಿಗೆ ವಂಚಿಸುತ್ತಿದ್ದ ವ್ಯಾಪಾರಿಗೆ ತಕ್ಕ ಪಾಠ ಕಲಿಸಿದ ಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮಸ್ಥರು, ಸಮಿತಿಯಿಂದ ಬರೋಬ್ಬರಿ 20 ಲಕ್ಷ ರೂ. ದಂಡ ಹಾಕಿದ್ದಾರೆ. ರೈತರ ಮನೆ ಬಾಗಿಲಲ್ಲಿ ರಾಶಿ ಅಡಿಕೆ ತೂಕದಲ್ಲಿ ವರ್ತಕನಿಂದ ಮೋಸ ನಡೆದಿದೆ. ಅಡಿಕೆ ವರ್ತಕ ತಟ್ಟೆಹಳ್ಳಿ ದಿಲೀಪ ಎಂಬಾತನಿಂದ ಮೋಸವಾಗಿದೆ.
ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಮೋಸಮಾಡಿದ್ದು, ಗ್ರಾಮದ ದೇವಾಲಯಕ್ಕೆ 20 ಲಕ್ಷರೂ. ದಂಡ ಕಟ್ಟಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಘಟನೆ ನಡೆದಿದೆ.

ಸೈರನ್ ಒಡೆದು ಎಟಿಎಂ‌ನಲ್ಲಿ ಲಾಕ್‌ಆದ ವ್ಯಕ್ತಿ

ಉತ್ತರಕನ್ನಡ ಜಿಲ್ಲೆಯ ಕಾರವಾರದ ಅಂಬೇಡ್ಕರ್ ವೃತ್ತದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂ‌ಗೆ ಬೆಳಗಿನ ಜಾವ 3 ಗಂಟೆಗೆ ನುಗ್ಗಿದ ವ್ಯಕ್ತಿಯೊಬ್ಬ ಸೈರನ್‌ ಒಡೆದು ಹಾಕಿದ್ದ. ಈ ವೇಳೆ ಎಟಿಎಂ ಬಾಗಿಲು ಆಟೋಮೆಟಿಕ್ ಆಗಿ ಲಾಕ್ ಆಗಿತ್ತು. 5 ಗಂಟೆ ವೇಳೆಗೆ ವ್ಯಕ್ತಿ ಲಾಕ್ ಆಗಿದ್ದನ್ನ ಗಮನಿಸಿದ ಸಮೀಪದ ಎಸ್‌ಬಿಐ ಎಟಿಎಂನ ಸೆಕ್ಯುರಿಟಿ ಗಾರ್ಡ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಮಾನಸಿಕ ಅಸ್ವಸ್ಥನಂತೆ ಇರುವ ಹಾಸನ ಮೂಲದ ವ್ಯಕ್ತಿಯಿಂದ ಎಟಿಎಂ ಯಂತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Nagamangala Case
ಮಂಡ್ಯ17 mins ago

Nagamangala Case: ನಾಗಮಂಗಲ ಗಲಭೆಯು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ; ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಂಚು- ಎಚ್‌ಡಿ ಕುಮಾರಸ್ವಾಮಿ

Road Accident
ಬಾಗಲಕೋಟೆ1 hour ago

Road Accident : ಸ್ಕೂಟಿಗೆ ಗುದ್ದಿ ಬೈಕ್‌ನಿಂದ ಹಾರಿ ಬಿದ್ದ ಸವಾರರು; ಸ್ಥಳದಲ್ಲೇ ಓರ್ವ ಸಾವು, ಮತ್ತಿಬ್ಬರು ಗಾಯ

theft case
ಬೆಂಗಳೂರು1 hour ago

Theft case : ಬೆಂಗಳೂರಿನಲ್ಲಿ ದೇವರನ್ನೇ ಕದ್ದ ಖದೀಮರು! ಸಿಸಿ ಕ್ಯಾಮೆರಾದಲ್ಲಿ ಸೆರೆ

theft case
ಬೆಂಗಳೂರು3 hours ago

Theft case : ಆನ್‌ಲೈನ್‌ ಬೆಟ್ಟಿಂಗ್‌ ಗೀಳು; ಅಣ್ಣನ ಮದುವೆಗೆ ತಂದಿದ್ದ ಚಿನ್ನ ಕದ್ದು ಸಿಕ್ಕಿಬಿದ್ದ ತಮ್ಮ!

Physical Abuse
ಯಾದಗಿರಿ3 hours ago

Physical Abuse : ಅತ್ಯಾಚಾರ ಎಸಗಿದ ಕಾಮುಕನ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ!

accident case
ಉತ್ತರ ಕನ್ನಡ4 hours ago

Accident Case : ಪ್ರವಾಸಕ್ಕೆ ಬಂದವನು ಸಮುದ್ರದಲ್ಲಿ ಶವವಾಗಿ ತೇಲಿ ಬಂದ!

Fire Accident
ಬೆಂಗಳೂರು5 hours ago

Fire Accident : ಅಂಗಡಿ ಉಳಿಸಿಕೊಳ್ಳಲು ಸಿಲಿಂಡರ್ ಹೊರಗೆಸೆದ ಕಬಾಬ್ ಮಾಲೀಕ; ಆಟೋ ಸೇರಿ 5 ಬೈಕ್‌ಗಳು ಬೆಂಕಿಗಾಹುತಿ

Karnataka Weather Forecast Cloudy weather in Bengaluru Moderate rainfall in coastal and Malnad regions
ಮಳೆ11 hours ago

Karnataka Weather : ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ; ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ

Dina bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿಯಿಂದ ಸಂತೋಷ ದುಪ್ಪಟ್ಟು

Prosecution against Siddaramaiah Hc reserves verdict after hearing arguments
ಕೋರ್ಟ್22 hours ago

CM Siddaramaiah : ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿಸಿರಿದ ಹೈಕೋರ್ಟ್, ಮಧ್ಯಂತರ ತಡೆ ಮುಂದುವರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌