Congress Guarantee: ಬಿಜೆಪಿಯಿಂದ ಸುಳ್ಳುಗಳ ಆಧಾರದಲ್ಲೇ ದೇಶ ಆಳುವ ಸರ್ಕಸ್: ಸಿಎಂ ಸಿದ್ದರಾಮಯ್ಯ - Vistara News

ಕರ್ನಾಟಕ

Congress Guarantee: ಬಿಜೆಪಿಯಿಂದ ಸುಳ್ಳುಗಳ ಆಧಾರದಲ್ಲೇ ದೇಶ ಆಳುವ ಸರ್ಕಸ್: ಸಿಎಂ ಸಿದ್ದರಾಮಯ್ಯ

Congress Guarantee: ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

VISTARANEWS.COM


on

CM Siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ (Congress Guarantee:) ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಬಿಜೆಪಿ ನಿರಂತರವಾಗಿ ಅವಮಾನಿಸುತ್ತಿದೆ. ಒಂದು ಕಡೆ ಅವಮಾನಿಸುತ್ತಲೇ ಮತ್ತೊಂದು ಕಡೆ ವಿಪರೀತ ಸುಳ್ಳುಗಳನ್ನು ಹೇಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಇಲ್ಲವೇ ಸಿ.ಟಿ.ರವಿ? ಈ ಪ್ರಶ್ನೆಗೆ ಬಹಿರಂಗವಾಗಿ ಉತ್ತರಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ ಸಿಎಂ, ಗ್ಯಾರಂಟಿ ಯೋಜನೆಗಳು ರಾಜ್ಯದ ಜನರು ಹಕ್ಕು. ಫಲಾನುಭವಿಗಳನ್ನು ಅವಮಾನಿಸುವುದನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು.

ಐದಕ್ಕೆ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸಿದ ಜಿಲ್ಲೆಯ ಜನತೆಯ ಸಮಯಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು, ನಿಮಗೆ ಬಿಜೆಪಿ ಸರ್ಕಾರದ ಅಚ್ಛೆ ದಿನಗಳು ಬಂದಿದೆಯಾ ಎಂದು ಪ್ರಶ್ನಿಸಿದರು. ನೆರೆದಿದ್ದ ಜನರು ಇಲ್ಲ ಇಲ್ಲ ಎಂದು ಕೂಗಿದರು.

ಇದನ್ನೂ ಓದಿ | BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್‌ ನಕಾರ!

ಅಭಿವೃದ್ಧಿ ಶೂನ್ಯ ಬಿಜೆಪಿ, ಸುಳ್ಳುಗಳ ಉತ್ಪಾದನೆ ಮಾಡುತ್ತಿದೆ. ಸುಳ್ಳುಗಳ ಆಧಾರದಲ್ಲೇ ದೇಶವನ್ನು ಆಳುವ ಸರ್ಕಸ್ ಮಾಡುತ್ತಿದೆ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್, ಹಸಿವು ಮುಕ್ತ ಭಾರತ ನಿರ್ಮಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ನೀವು ಸ್ವತಂತ್ರ ಭಾರತದ ಇತಿಹಾಸ ನೋಡಿದರೆ ಹಸಿವು ಮುಕ್ತ ಭಾರತಕ್ಕಾಗಿ ಕಾಂಗ್ರೆಸ್ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿತು ಎನ್ನುವ ಪಟ್ಟಿಯೇ ಸಿಗುತ್ತದೆ ಎಂದರು.

ಕುವೆಂಪು ಅವರ ಸರ್ವೋದಯವಾಗಲಿ ಸರ್ವರಲಿ ಎನ್ನುವ ಮೌಲ್ಯವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಸರ್ವರ ಉದಯಕ್ಕಾಗಿಯೇ ಕಾಂಗ್ರೆಸ್ ಶ್ರಮಿಸುತ್ತಿದೆ. ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ನಾಲ್ಕೂವರೆ ಕೋಟಿ ಜನರ ಮನೆ ಬಾಗಿಲು ಬಡಿದಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಬಿಜೆಪಿ ರಾಜ್ಯದ ಜನರ ಬದುಕನ್ನು ಪಕ್ಕಕ್ಕಿಟ್ಟು ಕೇವಲ ಭಾವನೆಗಳನ್ನು ಕೆರಳಿಸುತ್ತದೆ. ಇದುವರೆಗೂ ರಾಜ್ಯದಲ್ಲಿ ಬಿಜೆಪಿ ಒಂದು ಭಾರಿಯೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರೇ ಹೊರತು ಸ್ವಂತ ಶಕ್ತಿ ಮೇಲೆ ಅಧಿಕಾರ ನಡೆಸಿಯೇ ಇಲ್ಲ. ನಾವು 2013 , 2023 ಎರಡೂ ಬಾರಿಯೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾ, ಅಲ್ವಾ ತಮ್ಮಯ್ಯ ಎಂದು ಚಿಕ್ಕಮಗಳೂರು ಶಾಸಕರನ್ನು ಪ್ರಶ್ನಿಸಿ ಬಿಜೆಪಿಗೆ ತಿವಿದರು.

4 ಕೋಟಿ 64 ಲಕ್ಷ ಜನರಿಗೆ ನಮ್ಮ ಗ್ಯಾರಂಟಿಗಳು ತಲುಪಿ, ಅವರಿಗೆ ಸ್ವಲ್ಪ ಸಮಾಧಾನ ತಂದಿದೆ. ಅವರ ಜೇಬಿಗೆ ನೇರವಾಗಿ ನಾವು ಹಣ ಹಾಕುತ್ತಿರುವುದರಿಂದ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಇದರ ಪರಿಣಾಮ ರಾಜ್ಯದ ಆರ್ಥಿಕತೆಗೆ ಬಡವರು ಶಕ್ತಿ ತುಂಬಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಮಲೆನಾಡಿನ ಕಾಫಿ ಪ್ಲಾಂಟರ್ಸ್‌ಗಳಿಗೆ ಮಹತ್ವದ ಘೋಷಣೆ

ಮಲೆನಾಡ ಭಾಗದಲ್ಲಿ ಕಾಫಿ ಪ್ಲಾಂಟರ್ಸ್‌ಗಳ ಬಹುದಿನಗಳ ಬೇಡಿಕೆಯಾಗಿದ್ದ ಕಾಫಿ ಪ್ಲಾಂಟೇಷನ್ ಲೀಸ್ ಮೇಲೆ ನೀಡುವ ಕುರಿತು ನಮ್ಮ ಸರ್ಕಾರ ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲೇ ಈ ಕುರಿತು ಅರ್ಜಿಗಳನ್ನು ಆಹ್ವಾನಿಸಲು ಕ್ರಮ ಕೈಗೊಳ್ಳಲಿದೆ. ಇದರಿಂದ ಕಾಫಿ ಬೆಳೆಗಾರ ಸಮುದಾಯಕ್ಕೆ ಮತ್ತು ಬಹಳಷ್ಟು ಜನರಿಗೆ ಅನುಕೂಲ‌ ಆಗಲಿದೆ ಎಂದ ಅವರು, ತಕ್ಷಣ ನಿಯಮಗಳನ್ನು ರೂಪಿಸುವಂತೆ ಡಿಸಿ, ಸಿಇಒಗಳಿಗೆ ಸೂಚಿಸಿದರು.

ಗ್ಯಾರಂಟಿಗಳಿಂದ ಜಿಲ್ಲೆಯ ಜನರ ಖಾತೆಗೆ ಜಮೆ ಆದ ಹಣ ಎಷ್ಟು?

ಶಕ್ತಿ ಯೋಜನೆಯಲ್ಲಿ ಇದುವರೆಗೂ ಒಟ್ಟು 1.52 ಕೋಟಿ ಹೆಣ್ಣು ಮಕ್ಕಳು ವಿಶೇಷ ಪ್ರಯೋಜನ ಪಡೆದಿದ್ದಾರೆ. ಈ ಬಾಬ್ತು 55.71 ಕೋಟಿ ವೆಚ್ಚವಾಗಿರುತ್ತದೆ. ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಹೆಚ್ಚಳವಾಗಿದೆ. ಈ ಮೂಲಕ ರಾಜ್ಯದ ಆರ್ಥಿಕ ಚಟುವಟಿಕೆಯೂ ಸಹ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ ಎಂದರು.

200 ಯೂನಿಟ್‌ಗಿಂತ ಕಡಿಮೆ ಗೃಹ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ “ಗೃಹಜ್ಯೋತಿ” ಯೋಜನೆಯನ್ನು ಇದೇ ವರ್ಷದ ಜುಲೈ ತಿಂಗಳಿಂದ ಜಾರಿಗೆ ತರಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ 2.95 ಲಕ್ಷ ಕುಟುಂಬಗಳು ನೋಂದಣಿಯಾಗಿದ್ದು, ಪ್ರತಿ ತಿಂಗಳಿಗೆ ಅಂದಾಜು 10 ಕೋಟಿ ರೂ. ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಈ ಯೋಜನೆಗೆ ಈವರೆಗೂ 56.60 ಕೋಟಿ ರೂ. ಮೌಲ್ಯದ ವಿದ್ಯುತ್ ಒದಗಿಸಲಾಗಿದೆ.

ಮೂರನೆಯದಾಗಿ “ಅನ್ನಭಾಗ್ಯ ಯೋಜನೆ” ಅಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 2.41 ಲಕ್ಷ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳು ನೋಂದಣಿಯಾಗಿವೆ. ಮಾಸಿಕವಾಗಿ 12.98 ಕೋಟಿಗಳಂತೆ ಒಟ್ಟು 87 ಕೋಟಿ 43 ಲಕ್ಷಗಳು ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ.

ನಾಲ್ಕನೆಯದಾಗಿ “ಗೃಹಲಕ್ಷ್ಮಿ ಯೋಜನೆ” ಅಡಿಯಲ್ಲಿ ಮನೆಯ ಯಜಮಾನಿಗೆ ರೂ. 2,000 ನೀಡುವ ಗುರಿ ಹೊಂದಿದ್ದು, ಈವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 2.44 ಲಕ್ಷ ಫಲಾನುಭವಿಗಳಿಗೆ ಒಟ್ಟು ರೂ. 49 ಕೋಟಿಗಳು ಸಂದಾಯವಾಗುತ್ತಿದೆ. ಯೋಜನೆ ಪ್ರಾರಂಭವಾದ 2023ರ ಆಗಸ್ಟ್‌ನಿಂದ ಈವರೆಗೆ 289.19 ಕೋಟಿ ಫಲಾನುಭವಿಗಳಿಗೆ ಡಿ ಬಿ ಟಿ ಮೂಲಕ ಸಂದಾಯವಾಗಿದೆ.

ಐದನೆಯದಾಗಿ ಪ್ರಸ್ತುತ ವರ್ಷ, ಪದವಿ ಮತ್ತು ಡಿಪ್ಲೊಮಾ ತೇರ್ಗಡೆಯಾಗುವ ನಿರುದ್ಯೋಗಿ ಯುವಜನರಿಗೆ “ಯುವನಿಧಿ” ಯೋಜನೆ ಅಡಿಯಲ್ಲಿ ಇದುವರೆಗೆ 2657 ಫಲಾನುಭವಿಗಳು ನೋಂದಣಿಯಾಗಿದ್ದಾರೆ. 441 ಯುವ ಜನರಿಗೆ ತಲಾ 3 ಸಾವಿರ ರೂ.ಗಳಂತೆ ಒಟ್ಟು 13.23 ಲಕ್ಷ ಯುವನಿಧಿ ಭತ್ಯೆ ಮಂಜೂರಾಗಿರುತ್ತದೆ. ಈ 5 ಯೋಜನೆಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ರೂ 486.86 ಕೋಟಿ ವೆಚ್ಚವಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಇದನ್ನೂ ಓದಿ | Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌; ಅಗತ್ಯ ಬಿದ್ರೆ ಎನ್‌ಐಎಗೆ ವಹಿಸುತ್ತೇವೆ ಎಂದ ಸಿಎಂ

ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವೆ ಮೋಟಮ್ಮ, ಜಿಲ್ಲೆಯ ಶಾಸಕರುಗ ನಯನ ಮೋಟಮ್ಮ, ಆನಂದ್ ಕುಮಾರ್, ರಾಜುಗೌಡ, ಶ್ರೀನಿವಾಸ್, ತಮಯ್ಯ ಗೌಡ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ನಾಯಕರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

Karnataka Weather Forecast : ರಾಜ್ಯಾದ್ಯಂತ ಮಳೆ (Rain News) ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ವಾರಾಂತ್ಯದಲ್ಲಿ 7 ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ (Karnataka Weather Forecast) ಸಾಧ್ಯತೆಯಿದೆ. ಮಲೆನಾಡಿನಲ್ಲಿ ಹಗುರದಿಂದ ಮಧ್ಯಮದೊಂದಿಗೆ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಚದುರಿದಂತೆ ಹಗುರದಿಂದ ಮಳೆಯಾಗುವ (Rain News) ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಮಧ್ಯಮದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ ತುಮಕೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರದಲ್ಲೂ ಮಳೆಯಾಗಲಿದೆ.

ಇದನ್ನೂ ಓದಿ: Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

ಮಲೆನಾಡು ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಆರೆಂಜ್‌ ಅಲರ್ಟ್‌

ಗುಡುಗು ಜತೆಗೆ ಭಾರಿ ಮಳೆಯೊಂದಿಗೆ 40-50 ಕಿ.ಮೀ ಗಾಳಿಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Uttara Kannada News: ಶಿರೂರು ಗುಡ್ಡಕುಸಿತ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದ ಸಹಾಯಹಸ್ತ

Uttara Kannada News: ಶಿರೂರು ಗುಡ್ಡಕುಸಿತದ ಸಂದರ್ಭದಲ್ಲಿ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ ಚಾಚಿದೆ. ಶ್ರೀಮಠದ ನಿಯೋಗವು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಗದು, ಆಹಾರಧಾನ್ಯದ ಕಿಟ್‌ಗಳನ್ನು ಸಂತ್ರಸ್ತರ ಕುಟುಂಬಗಳಿಗೆ ವಿತರಿಸಿತು.

VISTARANEWS.COM


on

assistance from Ramchandrapur Matha for Shiruru landslide victims
Koo

ಗೋಕರ್ಣ: ಶಿರೂರು ಗುಡ್ಡ ಕುಸಿತದ ಸಂದರ್ಭದಲ್ಲಿ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ (Uttara Kannada News) ಚಾಚಿದೆ.

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀರಾಘವೇಶ್ವರ ಭಾರತೀಸ್ವಾಮೀಜಿಯವರು ಶ್ರೀಮಠದ ನಿಯೋಗವನ್ನು ಘಟನಾ ಸ್ಥಳಕ್ಕೆ ಅಗತ್ಯ ನೆರವಿನ ವಸ್ತುಗಳೊಂದಿಗೆ ಶ್ರೀಮಠದ ನಿಯೋಗವನ್ನು ಕಳುಹಿಸಿಕೊಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಂಡ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಗದು, ಆಹಾರಧಾನ್ಯದ ಕಿಟ್‌ಗಳನ್ನು ಸಂತ್ರಸ್ತರ ಕುಟುಂಬಗಳಿಗೆ ವಿತರಿಸಿತು.

ಇದನ್ನೂ ಓದಿ: Dengue Fever: ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ಮತ್ತು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾರ್ಗದರ್ಶನದಲ್ಲಿ ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ನೇತೃತ್ವದಲ್ಲಿ ತಂಡ ಎಲ್ಲ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಗೆ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಆಸರೆ ಪಡೆದಿರುವ 83 ಮಂದಿಯ ಊಟೋಪಚಾರಕ್ಕೆ ದಿನಸಿ ವಿತರಿಸಿದರು.

ಘಟನೆ ಬಗ್ಗೆ ರಾಘವೇಶ್ವರಭಾರತೀ ಸ್ವಾಮೀಜಿಯವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವುರಿಂದ ಎಲ್ಲೂ ಹೊರಹೋಗುವಂತಿಲ್ಲ. ಆದರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿ ನಿಯೋಗವನ್ನು ಕಳುಹಿಸಿಕೊಟ್ಟಿದ್ದಾರೆ. ಸಂತ್ರಸ್ತರು ಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಶ್ರೀಮಠ ಸದಾ ನಿಮ್ಮ ಬೆಂಬಲಕ್ಕಿದೆ ಎಂಬ ಸ್ವಾಮೀಜಿಯವರ ಅಭಯವನ್ನು ಸಂತ್ರಸ್ತರಿಗೆ ತಿಳಿಸಲಾಯಿತು.

ಪ್ರತಿ ಕುಟುಂಬಗಳಿಗೆ ತಕ್ಷಣಕ್ಕೆ 5 ಸಾವಿರ ರೂಪಾಯಿ ನಗದು, ಅಕ್ಕಿ, ತರಕಾರಿ, ಸಕ್ಕರೆ, ತೊಗರಿಬೇಳೆ, ತೆಂಗಿನಕಾಯಿ, ಶ್ರೀಗಳ ಮಂತ್ರಾಕ್ಷತೆ, ರಾಮದೇವರ ಪ್ರಸಾದ ಇದ್ದ ಕಿಟ್‌ಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

ಸಂತ್ರಸ್ತರನ್ನು ಗುರುತಿಸುವಲ್ಲಿ ಮತ್ತು ನೆರವನ್ನು ಅರ್ಹರಿಗೆ ತಲುಪಿಸುವಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಮಹೇಶ್ ಶೆಟ್ಟಿ ನೇತೃತ್ವದ ತಂಡ ಸಹಕರಿಸಿತು. ಸಗಡಗೇರಿ ಪಂಚಾಯಿತಿ ಸದಸ್ಯ ಕೃಷ್ಣಗೌಡ, ಜಗದೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ್ ಗೌಡ, ಗೋಕರ್ಣ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಹನೇಹಳ್ಳಿ ಪಂಚಾಯಿತಿ ಅಧ್ಯಕ್ಷ ಸಣ್ಣುಗೌಡ, ಹಾಲಕ್ಕಿ ಸಮಾಜದ ಮುಖಂಡರಾದ ಶಂಕರಗೌಡ ಹೆಗ್ರೆ, ನಾಗೇಶ್‌ಗೌಡ ಕುಡ್ಲೆ, ಶ್ರೀಮಠದ ಪ್ರತಿನಿಧಿಗಳಾದ ಎಸ್.ವಿ.ಹೆಗಡೆ, ಗೋಪಾಲಕೃಷ್ಣ ಹೆಗಡೆ ಮತ್ತಿತರರು ನಿಯೋಗದಲ್ಲಿದ್ದರು.

Continue Reading

ಕರ್ನಾಟಕ

Bengaluru News: ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಿ: ಸ್ಪೀಕರ್‌ ಯು.ಟಿ.ಖಾದರ್‌ ಸೂಚನೆ

Bengaluru News: ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.

VISTARANEWS.COM


on

Inauguration of Kannada learning classes for Malayali speakers
Koo

ಬೆಂಗಳೂರು: ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ (Bengaluru News) ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ಭಾಷೆಯನ್ನು ಕಲಿಯುವವರು ಹೆಚ್ಚು ಸಾಧನೆ, ಯಶಸ್ಸು ಪಡೆಯುತ್ತಾರೆ. ನಾವು ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಭಾಷೆಗೆ ಗೌರವ ಕೊಟ್ಟು ಭಾಷೆ ಕಲಿಯಲು ಮುಂದಾಗಬೇಕು. ಕರ್ನಾಟಕ ರಾಜ್ಯದಲ್ಲಿರುವ ಮಲೆಯಾಳಿ ಭಾಷಿಕರು ಕನ್ನಡ ಭಾಷೆ ಕಲಿಯುತ್ತಿರುವುದು ನಿಮ್ಮ ವ್ಯಕ್ತಿತ್ವ, ಆತ್ಮ ವಿಶ್ವಾಸ ಹೆಚ್ಚಿಸುವ ಜತೆಗೆ ಕರ್ನಾಟಕ ರಾಜ್ಯಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಇದನ್ನೂ ಓದಿ: Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಇಲ್ಲಿಗೆ ನಿಲ್ಲಬಾರದು. ಈ ಯೋಜನೆ ಹೆಚ್ಚು ವಿಸ್ತೃತವಾಗಿ ಪ್ರತಿ ಜಿಲ್ಲೆಗಳಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಪ್ರಾಧಿಕಾರದಿಂದ ಆಗಬೇಕು. ಪ್ರಾಧಿಕಾರದಿಂದ ಆಯೋಜಿಸಿದ್ದ ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ಜೀವನ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಭಾಷೆ ತುಂಬಾ ಪ್ರಮುಖವಾದುದು. ಹೆಚ್ಚು ಭಾಷೆ ಕಲಿತಷ್ಟು ವ್ಯಕ್ತಿತ್ವ ವಿಕಾಸನ ಆಗುವುದರೊಂದಿಗೆ ನಮ್ಮಲ್ಲಿನ ಜ್ಞಾನವೂ ಹೆಚ್ಚಾಗುತ್ತದೆ.

ಬೇರೆ ಬೇರೆ ಭಾಷೆಗಳಲ್ಲಿರುವ ಒಳ್ಳೆಯ ವಿಚಾರಗಳು ಕನ್ನಡಿಗರಿಗೆ ಪರಿಚಯವಾಗಬೇಕೆಂಬ ಉದ್ದೇಶದಿಂದ ಹಲವು ಪುಸ್ತಕಗಳನ್ನು ಅನುವಾದ ಮಾಡಿಸಲಾಗಿದೆ. ಕನ್ನಡ ಭಾಷೆಯಿಂದ ಮಲೆಯಾಳಿ ಭಾಷೆಗೆ ಮಲೆಯಾಳಿ ಭಾಷೆಯಿಂದ ಕನ್ನಡ ಭಾಷೆಗೆ ಹೆಚ್ಚೆಚ್ಚು ಕೃತಿಗಳು ಅನುವಾದವಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕರಾದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆ ಬಹಳ ಬಲಿಷ್ಠವಾಗಿ ಉಳಿಯಲು ರಾಜ್ಯಗಳ ಭಾಷೆಗಳು ಪ್ರಮುಖವಾದುದು. ಭಾಷೆ ದುರ್ಬಲವಾದರೆ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. 2011ರ ಜನಗಣತಿ ಪ್ರಕಾರ ಭಾರತದಲ್ಲಿ 19,509 ತಾಯ್ನುಡಿಗಳಿವೆ. ರಾಜ್ಯದಲ್ಲಿ 230ಕ್ಕೂ ಹೆಚ್ಚು ಭಾಷೆಗಳಿವೆ. ನಾವು ಎಲ್ಲರೂ ಸೇರಿ ರಾಜ್ಯ ಭಾಷೆಯನ್ನು ಬೆಳೆಸಬೇಕು ಅದರ ಜತೆಗೆ ಸಣ್ಣ ಭಾಷೆಗಳನ್ನು ಬೆಳೆಸಬೇಕು ಎಂದರು.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಮಲೆಯಾಳಂ ಮಿಷನ್ ಕೇರಳ ಸರ್ಕಾರ ಮತ್ತು ಕನ್ನಡ ಕಲಿಕಾ ಯೋಜನೆ ಸಂಚಾಲಕ ಟಾಮಿ ಜೆ. ಅಲುಂಕಲ್ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!

Dog Meat: ಬೆಂಗಳೂರಿನಲ್ಲಿ ನಾಯಿ ಮಾಂಸದ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಹೊರ ರಾಜ್ಯಗಳಿಂದ ಪ್ರತಿ ದಿನ ಬೆಂಗಳೂರಿಗೆ ನಾಯಿ ಮಾಂಸ ಬರುತ್ತಿದೆ ಎನ್ನಲಾಗಿದ್ದು, ಸಾವಿರಾರು ಕೆಜಿ ಶಂಕಿತ ನಾಯಿ ಮಾಂಸವನ್ನು ಮೆಜೆಸ್ಟಿಕ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.

VISTARANEWS.COM


on

Dog meat
Koo

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ನಗರದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಕೆಜಿ ಶಂಕಿತ ನಾಯಿ ಮಾಂಸವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರ ಜಾಗೃತಿ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಲವು ಹಿಂದು ಕಾರ್ಯಕರ್ತರು ದಾಳಿ ನಡೆಸಿದ ವೇಳೆ ಮಾಂಸದ ಪಾರ್ಸೆಲ್‌ಗಳಲ್ಲಿ ನಾಯಿ ಮಾಂಸ (Dog Meat) ಕಂಡುಬಂದಿದೆ. ಇದರಿಂದ ಸ್ಥಳದಲ್ಲಿ‌ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌ ಎಂಬುವವರಿಂದ ನಾಯಿ ಮಾಂಸ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪಗಳನ್ನು ಅಬ್ದುಲ್‌ ರಜಾಕ್‌ ಅಲ್ಲಗಳೆದಿದ್ದಾರೆ. ನಾಯಿ ಮಾಂಸದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದು ಸಂಘಟನೆಗಳು ದಾಳಿ ಮಾಡಿದ್ದು, ಈ ವೇಳೆ ಸಾವಿರಾರು ಕೆ.ಜಿ ಮಾಂಸ ಪತ್ತೆಯಾಗಿದೆ. ಆದರೆ, ಎರಡು ದಿನಕ್ಕೊಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೆಯುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು ಬೇಕಿದ್ದರೆ ಬಂದು ಚೆಕ್ ಮಾಡಲಿ ಎಂದು ಅಬ್ದುಲ್‌ ರಜಾಕ್‌ ಹೇಳಿದ್ದಾರೆ.

ಮಾಂಸದ ಪಾರ್ಸೆಲ್‌ಗಳಲ್ಲಿ ಪ್ರಾಣಿಯ ಬಾಲ ಉದ್ದವಾಗಿರೋದು ಕಂಡುಬಂದಿದ್ದರಿಂದ, ಕುರಿ ಬಾಲ ಈ ರೀತಿ ಇರುತ್ತದಾ ಎಂದು ಹಿಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ರಾಜಸ್ಥಾನ ಕುರಿಗಳಿಗೆ ಇದೇ ರೀತಿ ಬಾಲ ಉದ್ದವಾಗಿರುತ್ತೆ, ಅದನ್ನು ನಾಯಿ ಎನ್ನುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡ ಹೇಳಿದ್ದಾರೆ.

ಪುನೀತ್ ಕೆರೆಹಳ್ಳಿ ಹಣ ವಸೂಲಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಅವರ ವಿರುದ್ಧ ದೂರು ನೀಡುತ್ತೇವೆ ಎಂದು ಅಬ್ದುಲ್‌ ರಜಾಕ್‌ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿಗಳ ಪರಿಶೀಲನೆ

ಸ್ಥಳಕ್ಕೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. 5 ಬಾಕ್ಸ್‌ಗಳಲ್ಲಿ ಇದ್ದ ಕುರಿ ಮಾಂಸದ ಸ್ಯಾಂಪಲ್ ತೆಗೆದುಕೊಂಡಿದ್ದೇವೆ. ಮೇಲ್ನೋಟಕ್ಕೆ ಇದು ಕಳಪೆಯಾಗಿ ತೋರುತ್ತಿದೆ. ಇದನ್ನು ನಾವು ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತೇವೆ. 14 ದಿನದ ಬಳಿಕ ರಿಪೋರ್ಟ್ ಸಿಗುತ್ತದೆ ಎಂದು ಅಧಿಕಾರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೂಲಕ ನಾಯಿ ಮಾಂಸ, ನಗರದ ವಿವಿಧ ಹೋಟೆಲ್‌ಗಳಿಗೆ ಸರಬರಾಜು ಆಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಪ್ಲೈ ಆಗುತ್ತಿದೆ ಎನ್ನಲಾಗಿದೆ. ರಾಜಸ್ಥಾನದಿಂದ ಕುರಿ ಮಾಂಸ ಅಂತ ಹೇಳಿ ನಾಯಿ ಮಾಂಸವನ್ನು ತರಿಸಿ ಇಲ್ಲಿನ ಹೋಟೆಲ್‌ಗಳಿಗೆ 700-800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದು ಒಂದು ದೊಡ್ಡ ದಂಧೆ ಆಗಿದ್ದು, ಅಧಿಕಾರಿಗಳು, ಸಚಿವ ಜಮೀರ್ ಅಹ್ಮದ್ ಎಲ್ಲರೂ ಭಾಗಿ ಆಗಿದ್ದಾರೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿದ್ದಾರೆ.

ಮತ್ತೊಂದೆಡೆ ಕಳೆದೊಂದು ವರ್ಷದಿಂದ 700 ರೂ.ಗಳಿಗಿಂತ ಹೆಚ್ಚಿನ ದರಕ್ಕೆ ಕುರಿ ಹಾಗೂ ಮೇಕೆಯ ಮಟನ್ ಮಾಂಸ ಮಾರಾಟವಾಗುತ್ತಿದೆ. ಆದರೆ, ಬೆಂಗಳೂರಿನ ಶಿವಾಜಿನಗರ ಸೇರಿ ಕಡೆ ಕೆಲ ವ್ಯಾಪಾರಿಗಳು ಪ್ರತಿ ಕೆ.ಜಿ. ಮಾಂಸವನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟು ಕಡಿಮೆ ದರಕ್ಕೆ ಮಾಂಸ ಹೇಗೆ ಸಿಗುತ್ತೆ ಎಂದು ಅನುಮಾನಗೊಂಡ ಮುಸ್ಲಿಂ ವ್ಯಾಪಾರಿಗಳೇ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಕಡಿಮೆ ದರಕ್ಕೆ ನಾಯಿ ಮಾಂಸ ತರಿಸಿಕೊಂಡು ಹೆಚ್ಚಿನ ದರಕ್ಕೆ ಕುರಿ ಮಾಂಸವೆಂದು ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಫಿಶ್ ಎಂದು ಸ್ಟಿಕ್ಕರ್ ಹಾಕಿಕೊಂಡು ಏನು ಪ್ಯಾಕ್ ಮಾಡಿದ್ದಾರೋ ನೋಡಿ, ಕುರಿಯ ಬಾಲ ಇಷ್ಟು ಉದ್ದ ಇರುತ್ತಾ? ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಎಲ್ಲ ಮಾಂಸ ಆಹಾರ ಗುಣಮಟ್ಟ ಚೆಕ್ ಮಾಡಬೇಕು ಎಂದು ಹಿಂದುಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ವೇಳೆ ಪುನೀತ್‌ ಕೆರೆಹಳ್ಳಿ ಸೇರಿ ಹಲವು ಕಾರ್ಯಕರ್ತರನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದಾರೆ.

Continue Reading
Advertisement
Aadhaar Update
ವಾಣಿಜ್ಯ12 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ27 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ1 hour ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ1 hour ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ1 hour ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ1 hour ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Mumbai Spa
ಪ್ರಮುಖ ಸುದ್ದಿ7 hours ago

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ12 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ13 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ14 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ15 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌