Operation Kamala : ಮತ್ತೆ ಆಪರೇಷನ್‌ ಕಮಲ ಸದ್ದು, ಜೂನ್‌ನಲ್ಲಿ ಉರುಳುತ್ತಾ ಸರ್ಕಾರ? ನನಗೂ ಗೊತ್ತು ಎಂದ ಡಿಕೆಶಿ - Vistara News

ಕರ್ನಾಟಕ

Operation Kamala : ಮತ್ತೆ ಆಪರೇಷನ್‌ ಕಮಲ ಸದ್ದು, ಜೂನ್‌ನಲ್ಲಿ ಉರುಳುತ್ತಾ ಸರ್ಕಾರ? ನನಗೂ ಗೊತ್ತು ಎಂದ ಡಿಕೆಶಿ

Operation Kamala : ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲದ ಸೌಂಡ್‌ ಮಾಡುತ್ತಿದೆ. ಮುಂದಿನ ಜೂನ್‌ ಹೊತ್ತಿಗೆ ಸರ್ಕಾರ ಬೀಳಿಸುವ ಪ್ಲ್ಯಾನ್‌ ಇದಾಗಿದ್ದು, ಹೇಗೆ ನಡೆಯುತ್ತಿದೆ ಎನ್ನುವ ಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

DK Shivakumar ramesh Jarakiholi Sathish Jarakiholi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲ (Operation Kamala) ಸದ್ದು ಜೋರಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರ ಗ್ಯಾರಂಟಿಗಳ ಹಿಂದೆ ಬಿದ್ದು ಶಾಸಕರ ಅನುದಾನ ಮತ್ತು ಅಭಿವೃದ್ಧಿಯನ್ನು ಮರೆತಿರುವುದನ್ನು ಮುಂದಿಟ್ಟುಕೊಂಡು ಶಾಸಕರನ್ನು ಸೆಳೆಯುವ ದೊಡ್ಡ ಪ್ಲ್ಯಾನ್‌ ಒಂದು ನಡೆಯುತ್ತಿದೆ ಎನ್ನಲಾಗಿದೆ. ಈ ರೀತಿಯ ಆಟದ ಬಗ್ಗೆ ತಮಗೂ ಅರಿವಿದೆ ಎಂದು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಕೂಡಾ ಹೇಳಿದ್ದಾರೆ.

ಆಪರೇಷನ್‌ ಕಮಲಕ್ಕಾಗಿ ಬಿಜೆಪಿಯಲ್ಲಿ ಮೂರು ಟೀಮ್‌ ರೆಡಿ ಆಗಿದೆ ಎನ್ನಲಾಗಿದೆ. ಅದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಕೂಡಾ ಸಾಥ್‌ ನೀಡುತ್ತಿದೆ. ಈ ಪ್ಲ್ಯಾನ್‌ ವರ್ಕೌಟ್‌ ಆದರೆ 2024ರ ಲೋಕಸಭಾ ಚುನಾವಣೆಯ (Parliament Elections 2024) ಬಳಿಕ ಅಂದರೆ ಜೂನ್‌ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ.

ಬಿಜೆಪಿಯ ಹಿರಿಯ ನಾಯಕ ಅಮಿತ್‌ ಶಾ ಅವರೇ ಈ ಅಪರೇಷನ್‌ನ ಸಾರಥಿ ಎಂದು ಹೇಳಲಾಗುತ್ತಿದೆ. ಅವರಿಗೆ ಸಾಥ್‌ ನೀಡುತ್ತಿರುವುದು ಕಳೆದ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿದ್ದ ಅದೇ ರಮೇಶ್‌ ಜಾರಕಿಹೊಳಿ ಮತ್ತು ಸಿ.ಪಿ. ಯೋಗೀಶ್ವರ್‌ ಎನ್ನಲಾಗಿದೆ. ರಮೇಶ್‌ ಜಾರಕಿಹೊಳಿ ಅವರು ಎರಡು ದಿನದ ಹಿಂದೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿ ಮಾಡಿ ಮಾತನಾಡಿದ್ದರ ಹಿಂದೆಯೂ ಇದೇ ಆಪರೇಷನ್‌ನ ಕಾರಸ್ಥಾನವಿದೆ ಎನ್ನಲಾಗಿದೆ.

ರಮೇಶ್‌ ಜಾರಕಿಹೊಳಿ ಅವರು ಜಗದೀಶ್‌ ಶೆಟ್ಟರ್‌ ಅವರ ಜತೆ ಘರ್‌ ವಾಪ್ಸಿ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಶೆಟ್ಟರ್‌ ಅವರನ್ನೂ ಕೂಡಿಸಿಕೊಂಡು ಕಿತ್ತೂರು ಹಾಗೂ ಹೈದ್ರಬಾದ್‌ ಕರ್ನಾಟಕದ ಶಾಸಕರನ್ನು ಟಾರ್ಗೆಟ್‌‌ ಮಾಡುವುದು ಒಂದು ಪ್ಲ್ಯಾನ್‌ ಎನ್ನಲಾಗಿದೆ. ಈಗ ಸರ್ಕಾರದ ವಿರುದ್ಧ ಮಾತನಾಡುತ್ತಿರುವ ಶಾಸಕರನ್ನು ಸೇರಿಸಕೊಂಡು ಒಟ್ಟು 35 ಶಾಸಕರನ್ನು ಸೆಳೆಯುವ ಪ್ಲ್ಯಾನ್‌ ಇದಾಗಿದೆ.

ಸಿದ್ದರಾಮಯ್ಯ, ಡಿ.ಕೆ.ಶಿಗೂ ಮಾಹಿತಿ ನೀಡಿದ ಶಾಸಕರು

ಕಿತ್ತೂರು ಮತ್ತು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಶಾಸಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಶಾಸಕರ ಅನುದಾನದ ಸಮಸ್ಯೆ ಬಗೆಹರಿಸದಿದ್ದರೆ ಅದುವೇ ಪಕ್ಷಕ್ಕೆ ಮುಳುವಾಗಬಹುದು ಎಂಬ ಎಚ್ಚರಿಕೆಯನ್ನೂ ಇದೇ ಸಂದರ್ಭದಲ್ಲಿ ನೀಡಲಾಗಿದೆ ಎನ್ನಲಾಗಿದೆ. ಮೊದಲು ಶಾಸಕರನ್ನು ಕರೆದು ಮಾತನಾಡಿ ಎಂದು ಸಲಹೆ ನೀಡಲಾಗಿದೆ ಎನ್ನಲಾಗುತ್ತಿದೆ.

ಇದೇ ವಿಚಾರವನ್ನು ಸತೀಶ್‌ ಜಾರಕಿಹೊಳಿ ಅವರು ಕೂಡಾ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಎರಡೇ ದಿನಗಳ ಹಿಂದೆ ಸತೀಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲೂ ಈ ವಿಚಾರವೇ ಪ್ರಧಾನವಾಗಿ ಚರ್ಚೆಯಾಗಿದೆ. ಸತೀಶ್‌ ಜಾರಕಿಹೊಳಿ ಅವರು ತಮ್ಮ ಟೀಮನ್ನು ಮೈಸೂರಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದರ ಹಿಂದೆ ಕೂಡಾ ಇದೇ ವಿಚಾರವಿದೆ ಎನ್ನಲಾಗಿದೆ. ಇದರ ನಡುವೆ ಸತೀಶ್‌ ಜಾರಕಿಹೊಳಿ ಅವರು ಕೂಡಾ ಆಪರೇಷನ್‌ಗೆ ಬಲಿಯಾಗಬಹುದಾ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

ನನಗೆ ಗೊತ್ತಿದ ಎಂದ ಡಿ.ಕೆ ಶಿವಕುಮಾರ್‌

ʻʻರಮೇಶ್‌ ಜಾರಕಿಹೊಳಿ ಮತ್ತು ಜಗದೀಶ್‌ ಶೆಟ್ಟರ್‌ ಅವ ನಡುವಿನ ಮಾತುಕತೆ ವಿಚಾರದಲ್ಲಿ ನಾನು ಅನುಮಾನ ಪಡಲು ಹೋಗುವುದಿಲ್ಲ. ಬಿಜೆಪಿಯವರು ತುಂಬ ಹತಾಶೆಯಲ್ಲಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ತಮ್ಮ ಶಕ್ತಿ ಏನು ಎನ್ನುವುದು ಆಗಲೇ ಪ್ರೂವ್‌ ಆಗಿದೆ.ʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ʻʻಬಿಜೆಪಿಯಲ್ಲಿ ಆಪರೇಷನ್‌ ಮಾಡಲು ಒಂದು ಟೀಮ್ ಆಕ್ಟೀವ್ ಆಗಿರುವುದು ನನಗೆ ಗೊತ್ತಿದೆ. ಅವರು ತಮ್ಮನ್ನು ಭೇಟಿಯಾಗಿರುವ ಬಗ್ಗೆ ಹಲವು ಶಾಸಕರು ನನಗೆ ಮತ್ತು ಸಿಎಂಗೆ ಹೇಳ್ತಿದ್ದಾರೆ. ಏನು ಆಫರ್ ಮಾಡ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ಅಸೆಂಬ್ಲಿ ನಡೆಯಲಿ, ಯಾರೆಲ್ಲಾ ಮಾತನಾಡಲಿದ್ದಾರೆ. ಎಲ್ಲವನ್ನೂ ಅಲ್ಲಿಯೇ ಮಾತಾಡ್ತೀನಿʼʼ ಎಂದು ಹೇಳಿದರು.

ಆಪರೇಷನ್‌ ಮಾಡುವ ಯೋಜನೆ ಇಲ್ಲ ಎಂದ ಅಶ್ವಥ್‌ನಾರಾಯಣ್‌

ಈ ನಡುವೆ ಆಪರೇಷನ್‌ ಕಮಲದ ಸಾಧ್ಯತೆಗಳನ್ನು ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅಲ್ಲಗಳೆದಿದ್ದಾರೆ.

ʻಐದು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನ ಬಹುಮತ ನೀಡಿದ್ದಾರೆ. ಬಿಜೆಪಿಯಿಂದ ಆಪರೇಷನ್ ಮಾಡುವ ಯಾವುದೇ ಆಲೋಚನೆ ಇಲ್ಲ. 135 ಶಾಸಕರಿರೋ ಕಾಂಗ್ರೆಸ್ ಪಕ್ಷವನ್ನು ಆಪರೇಷನ್‌ನಿಂದ ಬೀಳಿಸೋದು ಸಾಧ್ಯಾನಾ ಅಂತ ನೀವೇ ಲೆಕ್ಕಾಚಾರ ಮಾಡಿ ನೋಡಿʼʼ ಎಂದು ಹೇಳಿರುವ ಅಶ್ವಥ್‌ ನಾರಾಯಣ ಅವರು ಒಂದು ವೇಳೆ ಬಿದ್ದರೆ ಅವರಲ್ಲಿ ಇರೋ ಗುಂಪುಗಳಿಂದ ಸರ್ಕಾರ ಬೀಳಬೇಕಷ್ಟೇ ಎಂದರು.

ʻʻಸತೀಶ್ ಜಾರಕಿಹೊಳಿ, ಡಿಕೆಶಿ ಅವರೇ ಯಾರ್ಯಾರನ್ನೋ ಕರೆದುಕೊಂಡು ಹೋಗ್ತಿದ್ದಾರಲ್ಲ. ಹೊರಗಿನಿಂದ ಯಾರೂ ಸರ್ಕಾರ ಬೀಳಿಸುವುದಿಲ್ಲ. ಬಿದ್ರೆ ಒಳ ಜಗಳದಲ್ಲೇ ಬೀಳಬೇಕುʼʼ ಎಂದು ಹೇಳಿದ ಅವರು, ನಾಲ್ಕು ಡಿಸಿಎಂ ಮಾಡಿ, ಅಭಿವೃದ್ಧಿಗೆ ಹಣ ಕೊಟ್ಟಿಲ್ಲ, ಅನುದಾನ ಕೊಡಿ ಎಂದೆಲ್ಲ ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ, ಡಿಕೆಶಿ ಅವರು ನುರಿತ ರಾಜಕಾರಣಿಯಂತೆ ಎಲ್ಲ ವಿಷಯಗಳನ್ನು ಡೈವರ್ಟ್‌ ಮಾಡುತ್ತಾರೆ ಎಂದು ಹೇಳಿದರು.

ʻʻ135 ಜನ ಶಾಸಕರು ಇರುವಾಗ ಆಪರೇಷನ್ ಮಾಡಲು ಸಾಧ್ಯವಾ.? ಸುಮ್ಮನೆ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಬಿಜೆಪಿ ಮೇಲೆ ಗೂಬೆ ಕೂರಿಸ್ತಿದ್ದಾರೆʼʼ ಎಂದು ಹೇಳಿದರು ಅಶ್ವಥ್‌ನಾರಾಯಣ್‌.

ಬಣ ಜಗಳದಿಂದ ತಮ್ಮ ಗುಂಡಿ ತಾವೇ ತೋಡಿಕೊಳ್ಳುತ್ತಿದ್ದಾರೆ

ʻʻಅವರವರ ಗುಂಡಿ, ಅವರೇ ತೋಡಿಕೊಳ್ತಿದ್ದಾರೆ. ಅವರ ಪಕ್ಷದ ಶಾಸಕರೇ ಗುಂಡಿ ತೋಡಿಕೊಳ್ತಿದ್ದಾರೆ. ಸಿದ್ದರಾಮಯ್ಯ ಬಣ, ಡಿಕೆಶಿ ಬಣ, ಸತೀಶ್ ಜಾರಕಿಹೊಳಿ ಬಣ ಎಂದು ಹೇಳುತ್ತಾ ಅವರವರೇ ಒಳ ಜಗಳ ಮಾಡಿಕೊಳ್ತಿದ್ದಾರೆʼʼ ಎಂದು ಅಶ್ವಥ್‌ನಾರಾಯಣ್‌ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

LKG, UKG: ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ನಿಗದಿ; ಇಲ್ಲಿದೆ ಹೊಸ ಅಪ್‌ಡೇಟ್

LKG, UKG: ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿಯು 6 ವರ್ಷ ಆಗಿದೆ. ಯುಕೆಜಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, 7 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಹಾಗೆಯೇ, ಒಂದನೇ ತರಗತಿಗೆ ಕನಿಷ್ಠ 6 ವರ್ಷ ಇದ್ದರೆ, ಗರಿಷ್ಠ 8 ವರ್ಷ ಇರಬೇಕಾಗುತ್ತದೆ.

VISTARANEWS.COM


on

LKG UKG
Koo

ಬೆಂಗಳೂರು: ಮಕ್ಕಳನ್ನು ಎಲ್‌ಕೆಜಿ, ಯುಕೆಜಿ (LKG, UKG) ಹಾಗೂ ಒಂದನೇ ತರಗತಿಗೆ ದಾಖಲಿಸಲು ರಾಜ್ಯ ಸರ್ಕಾರವು (Karnataka Government) ಈಗಾಗಲೇ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ. ಆದರೆ, ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸದ ರಾಜ್ಯ ಸರ್ಕಾರವೀಗ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ. ಅದರಂತೆ, 2023-24ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿಗೆ ದಾಖಲಿಸುವ ಮಕ್ಕಳ ಗರಿಷ್ಠ ವಯೋಮಿತಿಯನ್ನು ಪರಿಷ್ಕರಣೆ ಮಾಡಲಾಗಿದೆ.

ಹೀಗಿದೆ ಪರಿಷ್ಕರಿಸಿದ ವಯೋಮಿತಿ

ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿಯು 6 ವರ್ಷ ಆಗಿದೆ. ಯುಕೆಜಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, 7 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಹಾಗೆಯೇ, ಒಂದನೇ ತರಗತಿಗೆ ಕನಿಷ್ಠ 6 ವರ್ಷ ಇದ್ದರೆ, ಗರಿಷ್ಠ 8 ವರ್ಷ ಇರಬೇಕಾಗುತ್ತದೆ. ಎಲ್‌ಕೆಜಿಗೆ 2023-24, ಯುಕೆಜಿಗೆ 2024-25 ಹಾಗೂ ಒಂದನೇ ತರಗತಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ಹೊಸ ಆದೇಶವು ಅನ್ವಯವಾಗಲಿದೆ. ಡ್ರಾಪ್‌ಔಟ್‌ ಆಗುವ ಮಕ್ಕಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರವು ಹೊಸ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹೀಗಿದೆ…

ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜೂನ್‌ 1ನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದೇ ತರಗತಿಗೆ ದಾಖಲಿಸಿಕೊಳ್ಳುವಂತೆ ಕಳೆದ ವರ್ಷವೇ ಆದೇಶ ಹೊರಡಿಸಿದೆ. ಹೀಗಾಗಿ ಈ ಶೈಕ್ಷಣಿಕ ಸಾಲಿನಿಂದಲೇ ಎಲ್‌ಕೆಜಿ ತರಗತಿಗೆ ದಾಖಲು ಮಾಡಿಕೊಳ್ಳಲು ಜೂನ್‌ 01ನೇ ತಾರೀಖಿಗೆ ಅನ್ವಯವಾಗುವಂತೆ ನಾಲ್ಕು (4) ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಕಳೆದ ವರ್ಷ ಅಂದರೆ 2022 ಜುಲೈ 26ರಂದು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇನ್ನು ಮುಂದೆ ಒಂದು ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್‌ ಒಂದನೇ ತಾರೀಖಿಗೆ ಅನ್ವಯವಾಗುವಂತೆ ಆರು ವರ್ಷ ತುಂಬಿರಲೇಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು 2023-24 ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತಾದರೂ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಇದನ್ನು 2025-26 ನೇ ಸಾಲಿನ ಶೈಕ್ಷಣಿಕ (Education News) ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದೆ.

ಹೊಸ ನಿಯಮದಂತೆ 2025-26ನೇ ಸಾಲಿನಲ್ಲಿ ಒಂದನೇ ತರಗತಿಗೆ ನಿಮ್ಮ ಮಗುವನ್ನು ಸೇರಿಸಿಬೇಕೆಂದರೆ ಎಲ್‌ಕೆಜಿ ಸೇರ್ಪಡೆ ವಿಷಯದಲ್ಲಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ 2025-26ನೇ ಸಾಲಿಗೆ ಬರುವಾಗ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರುವುದು ಕಡ್ಡಾಯ. ಹಾಗಾಗಿ, ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗ ನಿಮ್ಮ ಮಗು ಕಡ್ಡಾಯವಾಗಿ ನಾಲ್ಕು ವರ್ಷ ಪೂರ್ಣಗೊಳಿಸಿರಬೇಕು. ಇಲ್ಲದೇ ಇದ್ದಲ್ಲಿ ಎಲ್‌ಕೆಜಿ ಅಥವಾ ಯುಕೆಜಿಯಲ್ಲಿಯೇ ಮಗು ಒಂದು ವರ್ಷ ಹೆಚ್ಚಾಗಿ ಉಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾಗಿದೆ.

ಇದನ್ನೂ ಓದಿ: LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Continue Reading

ಉತ್ತರ ಕನ್ನಡ

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ ಸೈಲ್, ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿದರು. ಬಳಿಕ ಕದ್ರಾ ಡ್ಯಾಂ ಗೆ ತೆರಳಿದ ಶಾಸಕರು, ಡ್ಯಾಂ ತುಂಬಿದ ಹಿನ್ನಲೆ ಬಾಗೀನ ಅರ್ಪಿಸಿದ್ದು, ಈ ಹಿಂದೆ ನಡೆದ ಅವಘಡಗಳು ಮತ್ತೆ ಮರುಕಳಿಸದಂತೆ ಮಹಾಮಾಯಿ ಮತ್ತು ಕ್ಷೇತ್ರದ ದೇವತೆಗಳಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

VISTARANEWS.COM


on

MLA Satish Sail visited the flood affected areas of Karwar taluk
Koo

ಕಾರವಾರ: ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್, ಸೋಮವಾರ ಭೇಟಿ ನೀಡಿ, ಪರಿಶೀಲನೆ (Uttara Kannada News) ನಡೆಸಿದರು.

ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ದೇವಭಾಗದಿಂದ ಮಾಜಾಳಿವರೆಗೆ ಅಂದಾಜು 8 ರಿಂದ 15 ಕೋಟಿ ವೆಚ್ವದಲ್ಲಿ ರಸ್ತೆ ನಿರ್ಮಾಣವಾಗಿದ್ದು, ತಡೆಗೋಡೆ ಕಾಮಗಾರಿ ಮಾಡದ ಕಾರಣ ಸಮುದ್ರದ ನೀರು ರಸ್ತೆ ದಾಟಿ ಮನೆಗಳಿಗೆ ನುಗ್ಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಬಿಡುಗಡೆಯಾದ 10 ಕೋಟಿ ರೂ. ಗಳನ್ನು 2022ನೇ ಸಾಲಿನಲ್ಲಿ ಸರ್ಕಾರ ಹಿಂದೆ ಪಡೆದಿದ್ದು, ಬಂದರು ಇಲಾಖೆಯಿಂದ ವರದಿ ಪಡೆದುಕೊಂಡು 10 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗುವುದು ಎಂದರು.

ಮಾಜಾಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂದರು ಕಾಮಗಾರಿಯನ್ನು ಮೀನುಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಬೇಕು. ಸ್ಥಳೀಯ ಮೀನುಗಾರರ ದೋಣಿ ನಿಲ್ಲಿಸಲು ಸೂಕ್ತ ರ‍್ಯಾಂಪ್ ವ್ಯವಸ್ಥೆ ಮಾಡುವಂತೆ ಹಾಗೂ ಪ್ರವಾಸೋದ್ಯಮ ಉದ್ದೇಶದಿಂದ ಗೋವಾ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಿಳಮಾತಿ ಕಡಲತೀರವನ್ನು ಅಭಿವೃದ್ಧಿ ಪಡಿಸಲು ಈ ಹಿಂದೆ ನಬಾರ್ಡ್‌ನಲ್ಲಿ ಓಂ ಆಕಾರದಲ್ಲಿ ನೀಲನಕ್ಷೆ ಸಿದ್ದಪಡಿಸಿ ಅನುಮೋದನೆ ಪಡೆದಿದ್ದರೂ, ಕಾಮಗಾರಿ ಆರಂಭವಾಗದೇ ಹಾಗೇ ಉಳಿದುಕೊಂಡಿದ್ದು, ಈಗ ಪುನಃ ತಿಳಮಾತಿ ಸಂಪರ್ಕಿಸಲು ತೂಗು ಸೇತುವೆ ಸೇರಿದಂತೆ ಈ ಹಿಂದೆ ರೂಪಿಸಿರುವ ನೀಲನಕ್ಷೆಯಂತೆ ಕಾಮಗಾರಿ ಕೈಗೊಳ್ಳಲು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: CM Siddaramaiah: ಕ್ವಾರಿ ಗಣಿ ರಾಯಲ್ಟಿಯಲ್ಲಿ ಸರ್ಕಾರಕ್ಕೆ ವಂಚನೆ; ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಕೆರವಡಿಯ ಸೇತುವೆ ಹಾಗೂ ಗೋಕರ್ಣ ಮತ್ತು ಅಂಕೋಲಾ ಸಂಪರ್ಕಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ಮಂಜಗುಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ನಿಶ್ಚಲ್ ನರೋನಾ, ಬಂದರು ಇಲಾಖೆ ಇಇ ರಾಜಕುಮಾರ್, ಇತರರು ಇದ್ದರು.

ಇದನ್ನೂ ಓದಿ: Job Alert: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 6128 ಹುದ್ದೆ; ಪರೀಕ್ಷೆ ಸ್ವರೂಪ ಹೇಗಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ?

ನಂತರ ಕದ್ರಾ ಡ್ಯಾಂ ಗೆ ತೆರಳಿದ ಶಾಸಕರು, ಡ್ಯಾಂ ತುಂಬಿದ ಹಿನ್ನಲೆ ಬಾಗೀನ ಅರ್ಪಿಸಿದ್ದು, ಈ ಹಿಂದೆ ನಡೆದ ಅವಘಡಗಳು ಮತ್ತೆ ಮರುಕಳಿಸದಂತೆ ಮಹಾಮಾಯಿ ಮತ್ತು ಕ್ಷೇತ್ರದ ದೇವತೆಗಳಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ನಂತರ ಡ್ಯಾಮ್‌ನ 4 ಗೇಟ್‌ಗಳಿಂದ 10,600 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದನ್ನು ವೀಕ್ಷಣೆ ಮಾಡಿದರು. ಈ ವೇಳೆ ತಹಸೀಲ್ದಾರ್‌ ನಿಶ್ಚಲ್ ನರೋನಾ, ಕೆಪಿಸಿಎಲ್ ಅಧಿಕಾರಿಗಳು, ಕದ್ರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ವ ಹಾಗೂ ಇತರರು ಇದ್ದರು.

Continue Reading

ಕರ್ನಾಟಕ

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

Dengue Cases: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 892 ಮಂದಿಗೆ ಟೆಸ್ಟ್‌ ನಡೆಸಿದ್ದು, ಈ ಪೈಕಿ 197 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ.

VISTARANEWS.COM


on

Dengue Cases
Koo

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 197 ಡೆಂಗ್ಯೂ ಕೇಸ್‌ಗಳು (Dengue Cases) ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 303ಕ್ಕೇರಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲೇ 95 ಮಂದಿಗೆ ಸೋಮವಾರ ಸೋಂಕು ತಗುಲಿದೆ. ಸೋಂಕಿತರ ಪೈಕಿ 46 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 24 ಗಂಟೆಯಲ್ಲಿ 892 ಮಂದಿಗೆ ಟೆಸ್ಟ್‌ ನಡೆಸಿದ್ದು, ಈ ಪೈಕಿ 197 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 95, ಬೆಂಗಳೂರು ನಗರ 4, ಶಿವಮೊಗ್ಗ 16, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 3, ಕಲಬುರಗಿ 15, ಕೊಪ್ಪಳ 1, ಚಾಮರಾಜನಗರ 6, ಮಂಡ್ಯ 33, ಉಡುಪಿ 1, ಚಿಕ್ಕಮಗಳೂರು ಜಿಲ್ಲೆಯಲ್ಲಿ 17 ಮಂದಿಗೆ ಸೋಂಕು ತಗುಲಿದೆ. 197 ಮಂದಿಯಲ್ಲಿ 0-1 ವರ್ಷದೊಳಗಿನವರಲ್ಲಿ 1 ಮಗುವಿಗೆ, 1 ರಿಂದ 18 ವರ್ಷಗೊಳಗಿನ 63 ಮಂದಿಗೆ ಸೋಂಕು ತಗುಲಿದೆ.

ಇನ್ನು ರಾಜ್ಯದಲ್ಲಿ ಜನವರಿಯಿಂದ ಈವರೆಗೆ ಒಟ್ಟು 7362 ಮಂದಿ ಡೆಂಗ್ಯೂ ಪೀಡಿತರಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ 0.09 ಇದೆ.

ಕಲುಷಿತ ನೀರು ಪೂರೈಕೆಯಾದ್ರೆ ಅಧಿಕಾರಿಗಳೇ ಹೊಣೆ; 15 ದಿನಕ್ಕೊಮ್ಮೆ ಕ್ವಾಲಿಟಿ ಟೆಸ್ಟ್ ಮಾಡಿ ಎಂದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ (Dengue Cases) ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಲಾರ್ವಾ ಸಮೀಕ್ಷೆ, ಸೊಳ್ಳೆ ನಿಯಂತ್ರಣದ ಜತೆಗೆ ಮನೆಮನೆಗೆ ತೆರಳಿ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ನಡುವೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು, ಜನರಿಗೆ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ನೀರಿನ ಮೂಲಗಳಲ್ಲಿ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Uttara Kannada News: ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ, 12 ಕಾಳಜಿ ಕೇಂದ್ರಗಳಲ್ಲಿ 437 ಜನರಿಗೆ ಆಸರೆ

ಕಲುಷಿತ ನೀರಿನಿಂದ ಯಾವುದೇ ತೊಂದರೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಯನ್ನು ನೇರ ಜವಾಬ್ದಾರಿ ಮಾಡಲಾಗುವುದು. ತುಕ್ಕು ಹಿಡಿದ ಹಳೆಯ ಪೈಪ್‌ ಬದಲಾವಣೆ ಮಾಡಬೇಕು. ಪ್ರತಿ 15 ದಿನಗಳಿಗೊಮ್ಮೆ ನೀರಿನ ಮೂಲದಲ್ಲಿ ಹಾಗೂ ವಿತರಣಾ ಬಿಂದುವಿನಲ್ಲಿನ ನೀರಿನ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಡೆಗಳಲ್ಲಿ ಹೊಸ ಮೂಲದಿಂದ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ ಆದಷ್ಟು ಬೇಗನೆ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಬೇಕು. ಇನ್ನೂ 55 ಕಡೆಗಳಲ್ಲಿ ಘನತ್ಯಾಜ್ಯ ಘಟಕಗಳ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಬೇಗನೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾರ್ಯಾರಂಭಿಸುವ ಮೂಲಕ ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಸೇರುವುದನ್ನು ತಪ್ಪಿಸಬೇಕು. ಮೈಸೂರಿನ ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಹೇಳಿದ್ದಾರೆ.

Continue Reading

ಯಾದಗಿರಿ

Yadgiri News: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಅವಿರೋಧ ಆಯ್ಕೆ

Yadgiri News: ಅಖಿಲ ಭಾರತ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಯಾದಗಿರಿಯ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಹಾಗೂ ಯಾದಗಿರಿ ತಾಲೂಕಾ ಅಧ್ಯಕ್ಷರಾಗಿ ರಾಜಶೇಖರ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

VISTARANEWS.COM


on

Channappa Gowda Mosambi elected as new District President of Akhila bharata Veerashaiva Mahasabha
Koo

ಯಾದಗಿರಿ: ಅಖಿಲ ಭಾರತ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಹಾಗೂ ಯಾದಗಿರಿ ತಾಲೂಕಾ ಅಧ್ಯಕ್ಷರಾಗಿ ರಾಜಶೇಖರ ಪಾಟೀಲ ಅವಿರೋಧವಾಗಿ (Yadgiri News) ಆಯ್ಕೆಯಾಗಿದ್ದಾರೆ.

ಸಮಾಜದ ಮುಖಂಡರು ಹಾಗೂ ಯುವಕರು ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಹಾಗೂ ತಾಲೂಕಾ ಅಧ್ಯಕ್ಷ ರಾಜಶೇಖರ ಪಾಟೀಲ ಅವರಿಗೆ ಗೌರವಿಸಿ, ಸನ್ಮಾನಿಸಿದರು.

ಇದನ್ನೂ ಓದಿ: CM Siddaramaiah: ಕ್ವಾರಿ ಗಣಿ ರಾಯಲ್ಟಿಯಲ್ಲಿ ಸರ್ಕಾರಕ್ಕೆ ವಂಚನೆ; ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಮಾತನಾಡಿ, ಹಿರಿಯರು ಹಾಗೂ ಸಮಾಜದ ಎಲ್ಲರ ಸಹಕಾರದಿಂದ ನನ್ನನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಎಲ್ಲರ ನಿರೀಕ್ಷೆ ತಕ್ಕಂತೆ ನನ್ನ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇನೆ. ಸಮಾಜದ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ವಿಶ್ವಗುರು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.

ಇದಕ್ಕೂ ಮುನ್ನ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಸಮಾಜದ ಮುಖಂಡರು ಹಾಗೂ ಬೆಂಬಲಿಗರು, ಹತ್ತಿಕುಣಿ ವೃತ್ತದ ಸಮೀಪದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಇದನ್ನೂ ಓದಿ: Kannada New Movie: ಗಣೇಶ್‌ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರ ʼಕೃಷ್ಣಂ ಪ್ರಣಯ ಸಖಿʼ

ಈ ಸಂದರ್ಭದಲ್ಲಿ ಉಮ್ಮಾರೆಡ್ಡಿಗೌಡ ನಾಯ್ಕಲ್, ಸೂಗುಪ್ಪ ಬೆಳಗೇರಿ, ಶರಣಪ್ಪ ಜಾಕಾ, ಅಪ್ಪಣ್ಣ ಜೈನ್, ರುದ್ರಗೌಡ, ಇಂದೂಧರ ಸಿನ್ನೂರು,ಶಂಕ್ರೇಪ್ಪ, ಸುರೇಶ್, ಅವಿನಾಶ್ ಜಗನ್ನಾಥ್, ಡಾ. ಸಿದ್ದರಾಜರೆಡ್ಡಿ, ಮಂಜುನಾಥ ಜಡಿ ಸೇರಿದಂತೆ ಅನೇಕರು ಇದ್ದರು.

Continue Reading
Advertisement
PM Modi Russia Visit
ವಿದೇಶ3 hours ago

PM Modi Russia Visit: ದೇಶ, ಜನರಿಗಾಗಿ ನಿಮ್ಮ ಜೀವನವೇ ಮುಡಿಪು ಎಂದು ಮೋದಿಯನ್ನು ಹೊಗಳಿದ ಪುಟಿನ್

LKG UKG
ಪ್ರಮುಖ ಸುದ್ದಿ3 hours ago

LKG, UKG: ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ನಿಗದಿ; ಇಲ್ಲಿದೆ ಹೊಸ ಅಪ್‌ಡೇಟ್

IND vs SL
ಕ್ರೀಡೆ4 hours ago

IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್​-ಕೊಹ್ಲಿಗೆ ವಿಶ್ರಾಂತಿ

Ramniwas Rawat
ದೇಶ5 hours ago

Ramniwas Rawat: 15 ನಿಮಿಷದಲ್ಲಿ 2 ಬಾರಿ ಸಚಿವನಾಗಿ ಬಿಜೆಪಿ ಶಾಸಕ ಪ್ರಮಾಣವಚನ; ಎಲ್ಲಾಯ್ತು ಎಡವಟ್ಟು?

Paris Olympics 2024
ಕ್ರೀಡೆ5 hours ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

MLA Satish Sail visited the flood affected areas of Karwar taluk
ಉತ್ತರ ಕನ್ನಡ5 hours ago

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Union Budget 2024
ದೇಶ5 hours ago

Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Dengue Cases
ಕರ್ನಾಟಕ5 hours ago

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

ಕ್ರೀಡೆ5 hours ago

Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

Channappa Gowda Mosambi elected as new District President of Akhila bharata Veerashaiva Mahasabha
ಯಾದಗಿರಿ6 hours ago

Yadgiri News: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಅವಿರೋಧ ಆಯ್ಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ9 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ11 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ13 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ14 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು15 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ1 day ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌