CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು - Vistara News

ಕರ್ನಾಟಕ

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

CM Siddaramaiah : ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagowda Pateel Yatnal) ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯತ್ನಾಳ ಒಬ್ಬ ಮಹಾನ್ ಸುಳ್ಳುಗಾರ. ತನ್ವೀರ್‌ ಪೀರಾ ಅವರ ಜತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ತನಿಖೆ ನಡೆಸಿ ಪ್ರೂವ್‌ ಮಾಡಿ ಎಂದು ಸವಾಲು ಹಾಕಿದ್ದಾರೆ.

VISTARANEWS.COM


on

CM-Siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಐಸಿಸ್‌ ಸಂಘಟನೆ ಜತೆ ಮುಸ್ಲಿಂ ಮೌಲ್ವಿ ತನ್ವೀರ್‌ ಪೀರಾ (Moulvi thanveer Peera) ಸಂಪರ್ಕ ಹೊಂದಿದ್ದು, ಅವರ ಜತೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ ಸಿದ್ದರಾಮಯ್ಯ ‌(CM Siddaramaiah) ವೇದಿಕೆ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagowda Pateel Yatnal) ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯತ್ನಾಳ ಒಬ್ಬ ಮಹಾನ್ ಸುಳ್ಳುಗಾರ. ತನ್ವೀರ್‌ ಪೀರಾ ಅವರ ಜತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ. ತನಿಖೆ ನಡೆಸಿ ಪ್ರೂವ್‌ ಮಾಡಿ ಎಂದು ಸವಾಲು ಹಾಕಿದ್ದಾರೆ.

ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಸನಗೌಡ ಪಾಟೀಲ್ ಯತ್ನಾಳ್‌‌ ಅವರು ದ್ವೇಷದ ರಾಜಕಾರಣಿಯಾಗಿದ್ದಾರೆ. ಅವರು ಅಲ್ಪಸಂಖ್ಯಾತರ ವಿರೋಧಿ ರಾಜಕಾರಣ ಮಾಡುತ್ತಾರೆ. ಅವರು ಚುನಾವಣೆ ಗೆಲ್ಲಲು ಈ ರೀತಿ ಮಾತನಾಡಬಾರದು. ಯತ್ನಾಳ್ ಒಬ್ಬ ಮಹಾನ್ ಸುಳ್ಳುಗಾರ ಎಂದು ಹೇಳಿದರು.

ಈ ಆರೋಪವನ್ನು ಬಸನಗೌಡ ಪಾಟೀಲ್‌ ಯತ್ನಾಳ್‌ ಮೊದಲು ಸಾಬೀತು ಪಡಿಸಲಿ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಈ ಆರೋಪವನ್ನು ಫ್ರೂವ್ ಮಾಡಲಿ. ಬರಿ ಆರೋಪ ಮಾಡುವುದಲ. ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಲು ಪ್ರಯತ್ನ ಮಾಡಿದರು. ಎರಡೂ ಸಿಗಲಿಲ್ಲ. ಅದಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಾರೇ ಜಹಾಂ ಸೇ ಅಚ್ಛಾ ಹಾಡಿನ ಮೂಲಕ ತಿರುಗೇಟು ನೀಡಿದ ತನ್ವೀರ್‌ ಪೀರಾ

ಮುಸ್ಲಿಂ ಮೌಲ್ವಿ ತನ್ವೀರ್‌ ಪೀರಾ ಅವರು ಹೊಸ ರೂಪದೊಂದಿಗೆ ಎದ್ದು ಬಂದಿದ್ದಾರೆ. ಮೌಲ್ವಿ ತನ್ವೀರ್‌ ಪೀರಾ ಐಸಿಸ್‌ ಸಂಘಟನೆ ಜತೆ ಸಂಪರ್ಕ ಹೊಂದಿರುವ ದೇಶ ವಿರೋಧಿ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಆರೋಪಕ್ಕೆ ಪ್ರತಿಕ್ರಿಯೆಯಾಗಿ ತಾನೂ ದೇಶಭಕ್ತ ಎಂಬುದನ್ನು ನಿರೂಪಿಸುವ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು, ಸಾರೇ ಜಹಾಂ ಸೇ ಅಚ್ಛಾ ಹಾಡನ್ನು ಅವರು ತಾವೂ ಹಾಡುತ್ತಾರೆ, ಉಳಿದವರ ಮೂಲಕವೂ ಹಾಡಿಸುತ್ತಾರೆ.

ಸಿದ್ದರಾಮಯ್ಯ ಅವರು ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸುವ ವೇಳೆ ವಿಜಯಪುರ ಮೂಲದ ಮೌಲ್ವಿ ತನ್ವೀರ್‌ ಪೀರಾ ಕೂಡಾ ಜತೆಗಿದ್ದರು. ತನ್ವೀರ್‌ ಪೀರಾ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿರುವುದು ಮೊದಲೇನೂ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರೇ ಬಂದು ಭೇಟಿ ಮಾಡಿದ್ದರು. ಆದರೆ, ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಮತ್ತು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಇದೊಂದು ಅಸ್ತ್ರವಾಗಿದೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ತನ್ವೀರ್‌ ಪೀರಾ ಅವರು ಐಸಿಸ್‌ ಜತೆಗೆ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದಲ್ಲದೆ, ಅದಕ್ಕೆ ಸಂಬಂಧಿಸಿ ಹಲವು ಫೋಟೊ ಮತ್ತು ಮಾಹಿತಿಗಳನ್ನು ಬುಧವಾರ ಬಿಡುಗಡೆ ಮಾಡಿದ್ದರು. ಜತೆ‌ಗೆ ಮೌಲ್ವಿ ಬಗ್ಗೆ ಎನ್‌ಐಎ ತನಿಖೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಪತ್ರ ಬರೆದಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಗಳೇನು?

  1. ತನ್ವೀರ್ ಪೀರಾ ಅನ್ನೋ ಐಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಹೀಗಾಗಿ ಈ ಪ್ರಕರಣವನ್ನು ಎನ್‌ಐಗೆ ವಹಿಸುವುದು ಸೂಕ್ತ.
  2. ತನ್ವೀರ್‌ ಪೀರಾ ಎಂಬ ವ್ಯಕ್ತಿ ಐಸಿಸ್ ನಾಯಕರನ್ನು ಭೇಟಿ ಮಾಡಿದ ಉದ್ದೇಶವನ್ನು ಕಂಡುಹಿಡಿಯಲು, ಅವರ ಪ್ರಯಾಣದ ಖರ್ಚು ವೆಚ್ಚಗಳ ಮೂಲಗಳನ್ನು ಕಂಡುಕೊಳ್ಳಲು, ಹಣಕಾಸು ನಿರ್ವಹಣೆಯಲ್ಲಿ ಆ ವ್ಯಕ್ತಿಯ ಪಾತ್ರ ಏನು ಎಂಬ ಬಗ್ಗೆ ತಿಳಿಯಬೇಕಿದೆ.
  3. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವಾರು ಸಭೆಗಳಲ್ಲಿ ಪೀರಾ ಕಾಣಿಸಿಕೊಂಡಿದ್ದು, ಎಲ್ಲ ವಿಷಯಗಳ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಎನ್ಐಎಗೆ ವಹಿಸಬೇಕು.
  4. ಪೀರಾ ಈ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಿನ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯ ನಾಯಕರನ್ನು ಭೇಟಿಯಾಗಿರುವ ಬಗ್ಗೆ ನನಗೆ ತಿಳಿದಿದೆ.
  5. ನಮ್ಮ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಪೀರಾ ಮುಸ್ಲಿಂ ದೇಶಗಳಿಂದ ಹಣವನ್ನು ತರುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯೊಂದು ನನಗೆ ಸಿಕ್ಕಿದೆ.
  6. ಸಿಎಂ ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಇಲ್ಲವೇ, ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪೀರಾ ಅವರನ್ನು ಉದ್ದೇಶಪೂರ್ವಕವಾಗಿ ಭೇಟಿ ಮಾಡಲು ಅನುವು ‌ಮಾಡಿಕೊಟ್ಟಿದ್ದಾರೆ.
  7. ಭಯೋತ್ಪಾದನೆಯ ಪರವಾಗಿ ಇರುವ ವ್ಯಕ್ತಿಗಳು ಉನ್ನತ ಮಟ್ಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಈ ಭೇಟಿಗಳು ನಡೆಯುತ್ತವೆ.
  8. ಪೀರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ಸ್ಥಳೀಯ ಪೊಲೀಸರು ಮುಂದಾಗುವುದಿಲ್ಲ. ಕಾರಣ, ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬುದು ನನ್ನ ಅನುಮಾನವಾಗಿದೆ. ಹೀಗಾಗಿ ಪೀರಾ ಅವರನ್ನು ಎನ್‌ಐಎ ತನಿಖೆ ಆಗಲಿ.

ಯತ್ನಾಳ್‌ ಸುಳ್ಳುಗಾರ ಎಂದು ಸಿಎಂ ಸಿದ್ದರಾಮಯ್ಯ

ತಾನೂ ದೇಶಭಕ್ತ ಎಂದು ವಿಡಿಯೊ ಬಿಡುಗಡೆ ಮಾಡಿದ ಪೀರಾ

ಈ ನಡುವೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ತಮಗೆ ಐಸಿಸ್ ನಂಟಿದೆ ಆರೋಪದ ಬೆನ್ನಲ್ಲೇ ಸಿಡಿದೆದ್ದ ಮೌಲ್ವಿ ತನ್ವೀರ್ ಪೀರಾ ಅವರು ದೇಶಭಕ್ತಿ ಗೀತೆಯ ಮೂಲಕ ತಿರುಗೇಟು ನೀಡಿದ್ದಾರೆ.

ತಾವು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ʻಸಾರೇ ಜಹಾಂಸೇ ಅಚ್ಛಾʼ ಹಾಡನ್ನು ಹಾಡಿದ್ದಲ್ಲದೆ ಅಲ್ಲಿದ್ದವರ ಮೂಲಕವೂ ಹಾಡಿಸಿದ್ದಾರೆ. ದೇಶ, ಹಿಂದೂ ಎಂಬ ಪದಗಳ ಬಗ್ಗೆ ಪ್ರೀತಿಯಿಂದ ಆಡಿದ ಮಾತುಗಳು ಇಲ್ಲಿವೆ. ದೇಶಭಕ್ತಿ ಗೀತೆ ಹಾಡಿ ತನ್ನ Hafiz Khwaja ಪೇಸ್ಬುಕ್‌ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ ತನ್ವೀರ್ ಪೀರಾ ಅವರು ಯತ್ನಾಳ್‌ ಅವರಿಗೆ ಮೌನವಾಗಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?; ಇಲ್ಲಿದೆ ವಿಡಿಯೊ

Hafiz Khwaja ಅಕೌಂಟ್‌ನಲ್ಲಿ ಅವರು ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಭೇಟಿ ಮಾಡಿದ ಮತ್ತು ಸ್ವಾಮೀಜಿಗಳ ಜತೆಗೆ ಇರುವ ಚಿತ್ರಗಳೂ ಇವೆ. ಜತೆಗೆ ಅವರು ವಿಶ್ವಕಪ್‌ ಪಂದ್ಯಗಳಲ್ಲಿ ಭಾರತದ ಗೆಲುವನ್ನು ಸಂಭ್ರಮಿಸಿದ್ದು ಹಾಗೂ ಫೈನಲ್‌ನಲ್ಲಿ ಸೋತಾಗ ಸಾಂತ್ವನ ಹೇಳಿದ ಚಿತ್ರಗಳು ಇವೆ. ಇದಕ್ಕೆ ಯತ್ನಾಳ್‌ ಅವರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job Alert: ಗುಡ್‌ನ್ಯೂಸ್‌: 364 ಭೂಮಾಪಕರ ಹುದ್ದೆಗೆ ಮಾ. 11ರಿಂದ ಅರ್ಜಿ ಸಲ್ಲಿಕೆ ಆರಂಭ

Job Alert: ಕರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ 364 ಗ್ರೂಪ್‌ ಸಿ ಭೂ ಮಾಪಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾರ್ಚ್‌ 11ರಂದು ಆರಂಭವಾಗಲಿದ್ದು, ಕೊನೆಯ ದಿನ ಏಪ್ರಿಲ್‌ 10.

VISTARANEWS.COM


on

kpsc
Koo

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(Karnataka Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಸುಮಾರು 364 ಗ್ರೂಪ್‌ ಸಿ ಭೂ ಮಾಪಕರ ಹುದ್ದೆ ಇದಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು (KPSC Land Surveyor Recruitment 2024). ಮಾರ್ಚ್‌ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್‌ 10ರ ವರೆಗೆ ಸಲ್ಲಿಸಬಹುದು (Job Alert).

ವಿದ್ಯಾರ್ಹತೆ

ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಬಿ.ಇ. (ಸಿವಿಲ್‌) / ಬಿ.ಟೆಕ್‌ (ಸಿವಿಲ್‌) ಅಥವಾ ಡಿಪ್ಲೋಮಾ (ಸಿವಿಲ್‌ ಎಂಜಿನಿಯರಿಂಗ್‌) ಉತ್ತೀರ್ಣರಾಗಿರಬೇಕು ಅಥವಾ ಪಿಯುಸಿ ಅಥವಾ ಸಿಬಿಎಸ್‌ಇ ಅಥವಾ ಐಸಿಎಸ್‌ಇಯ 12ನೇ ತರಗತಿ ಉತ್ತೀರ್ಣರಾಗಿರಬೇಕು (ಗಣಿತ ವಿಷಯದಲ್ಲಿ 60% ಅಂಕ ಪಡೆದಿರಬೇಕು) ಅಥವಾ ಕರ್ನಾಟಕ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್‌ & ಸಿಟಿ ಸರ್ವೆಯ ಪದವಿ ಪೂರ್ವ ಡಿಪ್ಲೋಮಾ ಉತ್ತೀರ್ಣವಾಗಿರಬೇಕು ಇಲ್ಲವೇ ಕರ್ನಾಟಕ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ನಡೆಸುವ ಐಟಿಐ ಇನ್‌ ಸರ್ವೆ ಟ್ರೇಡ್‌ನಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಲಭ್ಯ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಇತರ ಹಿಂದುಳಿದ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 600 ರೂ., ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ) ಅಭ್ಯರ್ಥಿಗಳು 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಮತ್ತು ಅರ್ಜಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ವಿಶೇಷ ಚೇತನ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸ ಬೇಕಾಗಿಲ್ಲ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಸ್ಪರ್ಧಾತ್ಮಕ ಪರೀಕ್ಷೆ, ಡಾಕ್ಯುಮಂಎಟ್‌ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾಗುವವರಿಗೆ 23,500 ರೂ.-47,650 ರೂ. ಮಾಸಿಕ ವೇತನ ದೊರೆಯಲಿದೆ.

ಇದನ್ನು ಗಮನಿಸಿ

ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಒಂದು ಬಾರಿಯ ನೋಂದಣಿ (OTR-One Time Registration)ಯನ್ನು ಒಳಗೊಂಡಿದ್ದು, ಅಭ್ಯರ್ಥಿಗಳು ನೀಡಿರುವ ಮಾಹಿತಿಗಳನ್ನು ಮುಂದಿನ ಎಲ್ಲ ಅಧಿಸೂಚನೆಗಳಿಗೂ ಪರಿಗಣಿಸುವುದರಿಂದ, ಜಾಗರೂಕತೆಯಿಂದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.

ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್‌ ವಿಳಾಸ: https://kpsc.kar.nic.in/

ಅಧಿಸೂಚನೆಗಾಗಿ ಇಲ್ಲಿ ಇಲ್ಲಿ ಕ್ಲಿಕ್‌ ಮಾಡಿ (HK)

ಅಧಿಸೂಚನೆಗಾಗಿ ಇಲ್ಲಿ ಇಲ್ಲಿ ಕ್ಲಿಕ್‌ ಮಾಡಿ (RPC)

ಇದನ್ನೂ ಓದಿ: Job Alert: ಯುಪಿಎಸ್‌ಸಿಯಿಂದ 1,056 ಹುದ್ದೆಗಳ ಭರ್ತಿ; ಮಾ. 5ರೊಳಗೆ ಅರ್ಜಿ ಸಲ್ಲಿಸಿ

Continue Reading

ಪ್ರಮುಖ ಸುದ್ದಿ

R Ashok : ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ

R Ashok : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.

VISTARANEWS.COM


on

R Ashok
Koo

ಬೆಂಗಳೂರು: ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Government) ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ (R Ashok) ಆರೋಪಿಸಿದ್ದಾರೆ. ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ. ಎಫ್ಎಸ್ಎಲ್ ವರದಿ ಪರಿಶೀಲನೆ ಎಂದು ಹೇಳಿ ಯಾವುದೋ ವಾಹಿನಿಯ ವೀಡಿಯೋ ಪಡೆದು ಪರೀಕ್ಷೆ ನಡೆಸಿ ಸುಳ್ಳು ವರದಿ ರೂಪಿಸಲಾಗುತ್ತಿದೆ. ಇದನ್ನು ಮುಚ್ಚಿ ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರದಿಯನ್ನು ತಿರುಚುವುದು ಖಂಡಿತ ಎಂದು ಅಶೋಕ್ ಅವರು ಆರೋಪಿಸಿದರು.

ದೇಶದ್ರೋಹಿಗಳಿಗೆ ರಕ್ಷಣೆ

ಜೈಕಾರದ ಸುದ್ದಿ ಮಾಧ್ಯಮಗಳಲ್ಲಿ ಬಂದು ಜನರಿಗೆ ಗೊತ್ತಾದರೂ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗೆಯೇ ಬಿಟ್ಟರೆ ವಿಧಾನಸೌಧ ಕೂಡ ಭಯೋತ್ಪಾದಕರ ತಾಣವಾಗಲಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧವನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಕೆಲಸ ದೇವರ ಕೆಲಸ ಎಂದರೆ, ಈ ಸರ್ಕಾರ ಅದಕ್ಕೆ ಅಪಮಾನ ಮಾಡುತ್ತಿದೆ. ಈ ಪ್ರಕರಣ ಮುಚ್ಚಿಹಾಕಿ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಇವರು ಭಂಡರು ಎಂದು ಅಶೋಕ್ ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಜನರು ಇದನ್ನು ಮನಗಾಣಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಅಶೋಕ್ ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯಲ್ಲಿ ಹಿಂದೂ ವಿರೋಧಿ ವಿಷ ಹಾಗೂ ಪ್ರಧಾನಿ ಮೋದಿ ವಿರುದ್ಧ ದ್ವೇಷ ತುಂಬಿದೆ. ಮೋದಿ ಎಂದರೆ ಕಾಂಗ್ರೆಸ್ ನಾಯಕರು ಭಯ ಪಡುತ್ತಾರೆ ಎಂದು ಹೇಳಿದರು. ಬಿ.ಕೆ.ಹರಿಪ್ರಸಾದ್ ಅವರು ಪಾಕಿಸ್ತಾನಿಗಳು ಸಹೋದರರು ಎನ್ನುತ್ತಾರೆ. ಕಾಂಗ್ರೆಸ್ ನಾಯಕರ ಮನಸ್ಸಿನ ಪೂರ್ತಿ ಪಾಕಿಸ್ತಾನ ತುಂಬಿಕೊಂಡಿದೆ. ಇದೇ ರೀತಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನ ಬ್ರದರ್ಸ್ ಎಂದಿದ್ದರು ಎಂದು ನೆನಪಿಸಿದರು.

ಇದನ್ನೂ ಓದಿ : Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

ಎಫ್ಎಸ್ಎಲ್ ವರದಿ ಬಹಿರಂಗಪಡಿಸಿ

ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಿ. ಯಾರನ್ನೋ ರಕ್ಷಣೆ ಮಾಡಲು ಸರ್ಕಾರ ವರದಿಯನ್ನು ಮುಚ್ಚಿಡುವುದು ಬೇಡ. ಈಗಾಗಲೇ ಮಾಧ್ಯಮಗಳಲ್ಲಿ ಈ ಸುದ್ದಿ ಬಂದಿದೆ. ಈಗ ಜನರಿಗೆ ವರದಿ ನೀಡಲಿ ಎಂದು ಆರ್.ಅಶೋಕ ಆಗ್ರಹಿಸಿದರು.

ಜಾತಿ ಗಣತಿ ಅವೈಜ್ಞಾನಿಕ

ಸರ್ಕಾರ ರೂಪಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಇದನ್ನು ವೈಜ್ಞಾನಿಕವಾಗಿ ರೂಪಿಸಲಿ. ಸರಿಯಾದ ಅಂಕಿ ಅಂಶ ಸಂಗ್ರಹಿಸಿ ವರದಿ ರೂಪಿಸಲಿ ಎಂದು ಆರ್.ಅಶೋಕ ಒತ್ತಾಯಿಸಿದರು.

Continue Reading

ಬೆಂಗಳೂರು

Lakshmi Hebbalkar : ವಿಕಲಚೇತನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವೆ ಹೆಬ್ಬಾಳ್ಕರ್

Lakshmi Hebbalkar : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ವಿಕಲಚೇತನರ ಬಹು ದಿನದ ಬೇಡಿಕೆಯನ್ನು ಈಡೇರಿಸಿದ್ದಾರೆ. ಆ ಮೂಲಕ ಅವರು ಪ್ರತಿಭಟನೆ ಅಂತ್ಯಗೊಳ್ಳುವಂತೆ ಮಾಡಿದರು.

VISTARANEWS.COM


on

Lakshmi Hebbalkar Handicapped
Koo

ಬೆಂಗಳೂರು : ವಿಕಲಚೇತನರ ಬಹುದಿನಗಳ ಪ್ರಮುಖ ಬೇಡಿಕೆಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸ್ಥಳದಲ್ಲೇ ಆದೇಶ ಹೊರಡಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ವಿಕಲ ಚೇತನರು (Protest by Handicapped) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಪ್ರಮುಖ ಎರಡು ಬೇಡಿಕೆಗಳಿಗೆ ಸ್ಥಳದಲ್ಲೇ ಪರಿಹಾರ ಆದೇಶ ಹೊರಡಿಸಿದ್ದಾರೆ.

ಸ್ಥಳದಲ್ಲೇ ಆದೇಶ ನೀಡಿದ ಸಚಿವರು

ಆದೇಶ: 1: ಮಹಿಳಾ ಪುನರ್ವಸತಿ ಕಾರ್ಯಕರ್ತೆಯರಿಗೆ ವೇತನ ಸಹಿತ ಹೆರಿಗೆ ರಜೆ, ಆರು ತಿಂಗಳು, ಗರ್ಭಪಾತ ರಜೆ 45 ದಿನ.
ಆದೇಶ: 2: ಹೊಸದಾಗಿ ರಚನೆಗೊಂಡಿರುವ 51 ತಾಲೂಕುಗಳಿಗೆ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್ ಡಬ್ಲ್ಯೂ) ನೇಮಕಾತಿ ಮಾಡಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆಗೆ ಶಿಫಾರಸು.

Lakshmi Hebbalkar Handicapped1

ಮುಂದಿನ ವಾರ ಸಿಎಂ ಜೊತೆ ಚರ್ಚೆ ಎಂದ ಹೆಬ್ಬಾಳ್ಕರ್‌

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಕಲಾಂಗ ಚೇತನರ ಸಮಸ್ಯೆಗಳಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡಲಿದೆ. ಈ ಸಂಬಂಧ ಮಾರ್ಚ್ 13 ಅಥವಾ 14ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿಕಲ ಚೇತನರ ಉಳಿದ ಬೇಡಿಕೆಗಳನ್ನೂ ಈಡೇರಿಸಲಾಗುವುದು ಎಂದು ಸಚಿವರು ಹೇಳಿದರು. ಧರಣಿ ವಾಪಸ್ ಪಡೆದ ಪ್ರತಿಭಟನಾಕಾರರು
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಇದನ್ನೂ ಓದಿ : Lakshmi Hebbalkar : ನಿಮ್ಮ ಕ್ಷೇತ್ರದಲ್ಲೂ ಗೃಹಲಕ್ಷ್ಮಿ ಸಕ್ಸಸ್‌; ಸಿದ್ದು ಸವದಿಗೆ ಸಚಿವೆ ಹೆಬ್ಬಾಳ್ಕರ್‌ ತಿರುಗೇಟು

ಜಾತಿ ಗಣತಿಯಲ್ಲಿ ಕೆಲವು ದೋಷಗಳಿವೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಈ ನಡುವೆ ರಾಮನಗರದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಆದರೆ ಈ ಜನಗಣತಿಯಲ್ಲಿ ಕೆಲ ದೋಷಗಳಿವೆ ಎಂದು ಹೇಳಿದರು.

ʻʻನಾಲ್ಕು ಜನರ ಮನೆಗೆ ಹೋಗಿದ್ದರೆ, ಇನ್ನು ಕೆಲವರ ಮನೆಗೆ ಹೋಗಲೇ ಇಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ ಈ ರೀತಿಯ ಕೆಲ ಗೊಂದಲಗಳಿವೆ. ವೀರಶೈವ ಲಿಂಗಾಯತ ಜಾತಿಯಲ್ಲಿ ಅನೇಕ ಉಪಪಂಗಡಗಳಿವೆ‌. 103 ಉಪ ಪಂಗಡಳಿರುವುದರಿಂದ ಅಧ್ಯಯನ ಮಾಡಬೇಕು. ಇದರ ವೈಜ್ಞಾನಿಕ ವರದಿ ಮಾಡಿ ಬಳಿಕ ಸ್ವೀಕರಿಸಬೇಕು. ಇದರಲ್ಲಿ ನಾವು ರಾಜಕೀಯ ಮಾಡಲ್ಲ.ʼʼ ಎಂದು ಮಾಗಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

Continue Reading

ಪ್ರಮುಖ ಸುದ್ದಿ

Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

Sedition Case : ಪಾಕಿಸ್ತಾನ ಜಿಂದಾಬಾದ್​ ಕೂಗಿದ್ದಾರೆ ಎಂದು ಹೇಳಲಾಘಿರುವ ವಿಡಿಯೊವನ್ನು ಎಫ್​ಎಸ್​​ಎಲ್​ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದಾರೆ.

VISTARANEWS.COM


on

FSL Report
Koo

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಪ್ರಕಟಗೊಂಡ ವೇಳೆ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಜೈಕಾರ ಕೂಗಿದ್ದಾರೆ ಎಂಬ ಪ್ರಕರಣದ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದ (FSL Report) ವರದಿ ಸಿದ್ಧಗೊಂಡಿದೆ. ಘಟನೆ ನಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರುಎರಡು ದಿನಗಳ ಎಫ್ಎಸ್ಎಲ್ ರಿಪೋರ್ಟ್ ಕೊಡುವಂತೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅಂತೆಯೇ ವರದಿ ಸಿದ್ದಗೊಂಡಿದ್ದು ಗೃಹ ಇಲಾಖೆಗೆ ವರದಿ ಸಲ್ಲಿಕೆಯಾಗಿದೆ.

ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ಮಾಡಿರುವುದು ಮತ್ತೊಂದು ದುರಂತವಾಗಿದೆ ಎಂಬ ಆರೋಪಗಳನ್ನು ವಿಪಕ್ಷಗಳು ಮಾಡಿದ್ದವು.

ಇದನ್ನೂ ಓದಿ : Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆಯಾಯಿತು. ಆಗ ನೂತನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಕಾಂಗ್ರೆಸ್‌ ಬೆಂಬಲಿಗರು ಎತ್ತಿ ಖುಷಿಪಟ್ಟಿದ್ದಾರೆ. ಹಾರವನ್ನು ಹಾಕಿ ಸಂಭ್ರಮಿಸಿದ್ದಾರೆ. ಇದೇ ವೇಳೆ, ಕೆಲವು ಪಾಪಿಗಳು “ಪಾಕಿಸ್ತಾನ್‌ ಜಿಂದಾಬಾದ್‌” ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಅದರ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದವು.

ಇದು ಅತ್ಯಂತ ನಾಚಿಕೆಗೇಡಿನ ಸಂಗತಿ

ಈ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.‌ ರವಿಕುಮಾರ್‌ ಪ್ರತಿಕ್ರಿಯೆ ನೀಡಿ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದಕ್ಕೆ ಸುಮೋಟೋ ಕೇಸ್‌ ಅನ್ನು ದಾಖಲು ಮಾಡಬೇಕು. ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬೇಕು. ಇದು ದೇಶದ್ರೋಹದ ಕೆಲಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದರು.

ಈ ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಕೂಡಲೇ ಈ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಬೇಕು. ಇದು ಅಕ್ಷಮ್ಯವಾಗಿದೆ. ಈ ಸರ್ಕಾರ ಏನು ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ರವಿಕುಮಾರ್‌ ಒತ್ತಾಯಿಸಿದ್ದರು.

ಕಾಂಗ್ರೆಸ್‌ನ ಗೆಲುವು ದೇಶದ್ರೋಹಿಗಳ ಗೆಲುವಾ?

ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಇದು ಪಾಕಿಸ್ತಾನ ಚುನಾವಣೆಯಾ? ಭಾರತದ ಚುನಾವಣೆಯಾ? ಇದು ಕಾಂಗ್ರೆಸ್‌ನ ಮಾನಸಿಕತನವನ್ನು ತೋರಿಸುತ್ತದೆ. ಕಾಂಗ್ರೆಸ್‌ ಗೆಲುವು ಸಾಧಿಸಿದ ಮೇಲೆ ಇಂಥ ವಿಧ್ವಂಸಕ ಕೃತ್ಯ ಎಸಗುವವರಿಗೆ ಬಲ ಸಿಕ್ಕಂತೆ ಆಗಿದೆ. ಇವರೇನು ಪಾಕಿಸ್ತಾನದ ಏಜೆಂಟರಾ? ಇದರ ವಿರುದ್ಧ ಈ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಈ ದೇಶದ ಅನ್ನ ತಿಂದು, ಸೌಲಭ್ಯವನ್ನು ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರಲ್ಲವೇ? ಇವರು ಹೊಟ್ಟೆಗೆ ಏನನ್ನು ತಿನ್ನುತ್ತಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದರು.

Continue Reading
Advertisement
kpsc
ಉದ್ಯೋಗ6 mins ago

Job Alert: ಗುಡ್‌ನ್ಯೂಸ್‌: 364 ಭೂಮಾಪಕರ ಹುದ್ದೆಗೆ ಮಾ. 11ರಿಂದ ಅರ್ಜಿ ಸಲ್ಲಿಕೆ ಆರಂಭ

R Ashok
ಪ್ರಮುಖ ಸುದ್ದಿ36 mins ago

R Ashok : ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ

Lakshmi Hebbalkar Handicapped
ಬೆಂಗಳೂರು1 hour ago

Lakshmi Hebbalkar : ವಿಕಲಚೇತನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವೆ ಹೆಬ್ಬಾಳ್ಕರ್

FSL Report
ಪ್ರಮುಖ ಸುದ್ದಿ1 hour ago

Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

Russia Ukraine War
ವಿದೇಶ1 hour ago

Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

Modi GDP
ಪ್ರಮುಖ ಸುದ್ದಿ2 hours ago

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

2nd PU Exam from tomorrow what are the conditions
ಶಿಕ್ಷಣ2 hours ago

2nd PU Exam: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

insurance
ಮನಿ-ಗೈಡ್2 hours ago

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Budget session Siddaramaiah
ವಿಧಾನಮಂಡಲ ಅಧಿವೇಶನ2 hours ago

Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

Nitasha Kaul
ದೇಶ3 hours ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ17 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌