Isha Foundation : ಈಶ ಫೌಂಡೇಷನ್‌ಗೆ ಸರ್ಕಾರಿ ಭೂಮಿ ಮಾರಿದ ಪಿಡಿಒ ಅಮಾನತು Vistara News

ಕ್ರೈಂ

Isha Foundation : ಈಶ ಫೌಂಡೇಷನ್‌ಗೆ ಸರ್ಕಾರಿ ಭೂಮಿ ಮಾರಿದ ಪಿಡಿಒ ಅಮಾನತು

Isha Foundation : ಚಿಕ್ಕಬಳ್ಳಾಪುರದ ಬಾರ್ಲಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸಸ್ಪೆಂಡ್‌ ಮಾಡಲಾಗಿದೆ. ಅವರು ಇಷಾ ಫೌಂಡೇಷನ್‌ಗೆ ಅನುಕೂಲವಾಗುವಂತೆ ಭೂಮಿ ಮಾರಾಟ ಮಾಡಿದ್ದರು ಎಂಬ ಆಪಾದನೆ ಇದೆ.

VISTARANEWS.COM


on

Isha foundation PDO suspended
ಒಳ ಚಿತ್ರದಲ್ಲಿ ಪಿಡಿಒ ಸಿ.ಎಂ. ವೆಂಕಟೇಶ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಬಳ್ಳಾಪುರ: ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ನೇತೃತ್ವದ ಈಶ ಫೌಂಡೇಷನ್‌ಗೆ (Isha Foundation) ಅನುಕೂಲವಾಗುವಂತೆ ಸರ್ಕಾರಿ ಜಮೀನನ್ನು (Government Land) ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣದ ರೂವಾರಿ ಚಿಕ್ಕಬಳ್ಳಾಪುರದ ಬಾರ್ಲಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸಿ.ಎಂ. ವೆಂಕಟೇಶ್‌ ಅವರನ್ನು ಅಮಾನತು ಮಾಡಲಾಗಿದೆ.

ಈಶ ಫೌಂಡೇಶನ್‌ಗೆ ಸರ್ಕಾರಿ ಗ್ರಾಮ ಠಾಣಾ ಜಾಗವನ್ನು ಮಾರಾಟ ಮಾಡಿದ್ದ ಬಗ್ಗೆ ಆರೋಪ ಕೇಳಿಬಂದ ಬೆನ್ನಿಗೇ ವೆಂಕಟೇಶ್‌ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಸಿ ಪ್ರಕಾಶ್ ನಿಟ್ಟಾಲಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿರುವ ದೂರು ದಾಖಲಾದ ಬೆನ್ನಿಗೇ ಸಿ.ಎಂ ವೆಂಕಟೇಶ್ ಅಮಾನತು ಮಾಡಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.

ಬಾರ್ಲಹಳ್ಳಿ ಸರ್ಕಾರಿ ಗ್ರಾಮ ಠಾಣಾ ಜಾಗವನ್ನು ನಿವೇಶನಗಳಾಗಿ ಪರಿವರ್ತಿಸಿ ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. ಇವುಗಳನ್ನು ಬಲಾಢ್ಯರಿಗೆ ಹಂಚಿಕೆ ಮಾಡಲಾಗಿತ್ತು. ಹೀಗೆ ನಿವೇಶನಗಳನ್ನು ಪಡೆದವರು ಅವುಗಳನ್ನು ಈಶಾ ಫೌಂಡೇಶನ್ ನವರಿಗೆ ಮಾರಾಟ ಮಾಡಿದ್ದರು.

ಈ ಪ್ರಕರಣ ಬಯಲಾಗುತ್ತಿದ್ದಂತೆಯೇ ಪಿಡಿಓ ವೆಂಕಟೇಶ್ ವರ್ಗಾವಣೆಗೊಂಡಿದ್ದರು. ಸದ್ಯ ವೆಂಕಟೇಶ್‌ ಹಾರೋಬಂಡೆ ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದಾರೆ.

ಸರ್ಕಾರಿ ಭೂಮಿಯನ್ನು ಈ ರೀತಿ ಅಕ್ರಮವಾಗಿ ಹಂಚಿಕೆ ಮಾಡಿದ್ದು ಮತ್ತು ಬಳಿಕ ಅದು ಈಶಾ ಫೌಂಡೇಷನ್‌ಗೆ ಸೇರುವಂತೆ ಮಾಡಿದ್ದರ ಹಿಂದೆ ದೊಡ್ಡ ಕುತಂತ್ರವಿದೆ. ನೇರವಾಗಿ ಈಶಾ ಫೌಂಡೇಷನ್‌ಗೆ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜನರನ್ನೇ ಮಧ್ಯವರ್ತಿಗಳನ್ನಾಗಿ ಪರಿವರ್ತಿಸಲಾಗಿದೆ. ಅವರಿಗೆ ನಿವೇಶನ ಕೊಟ್ಟಂತೆ ಮಾಡಿ ಅಂತಿಮವಾಗಿ ಅದನ್ನು ಈಶಾ ಫೌಂಡೇಷನ್‌ಗೆ ತಲುಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈಶಾ ಫೌಂಡೇಷನ್‌ ಇಲ್ಲಿ ದೊಡ್ಡ ಈಶ್ವರನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಪೂರಕವಾಗಿ ಸಾಕಷ್ಟು ಭೂಮಿಯ ಅವಶ್ಯಕತೆ ಅದಕ್ಕಿತ್ತು. ಈಗಾಗಲೇ ಜಾಗದ ಅತಿಕ್ರಮಕ್ಕೆ ಸಂಬಂಧಿಸಿ ಪ್ರತಿಭಟನೆಗಳು ಕೂಡಾ ನಡೆಯುತ್ತಿದೆ.

ಇದರ ನಡುವೆಯೇ ಈಶಾ ಫೌಂಡೇಷನ್‌ನ ಚಟುವಟಿಕೆಗಳಿಂದ ಈ ಭಾಗದಲ್ಲಿ ದೊಡ್ಡ ಮಟ್ಟದ ಆರ್ಥಿಕ ವ್ಯವಹಾರವೂ ಚೆನ್ನಾಗಿ ಕುದುರಿದೆ. ಈ ಪ್ರದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೋಗುವ ಮಾರ್ಗದ ಉದ್ದಕ್ಕೂ ವ್ಯಾಪಾರೋದ್ಯಮ ವಿಸ್ತರಣೆಯಾಗಿದೆ. ಅಂತಿಮವಾಗಿ ಇದರಿಂದ ಈ ಭಾಗದಲ್ಲಿ ದೊಡ್ಡ ಸಂಚಲನವೇ ಉಂಟಾಗಿದೆ.

ಇದನ್ನೂ ಓದಿ: Isha Foundation | ಚಿಕ್ಕಬಳ್ಳಾಪುರದ ಬಳಿ ಈಶ ಫೌಂಡೇಷನ್‌ ಕಾರ್ಯಕ್ಕೆ ಹೈಕೋರ್ಟ್‌ ತಡೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

ಬೆಂಗಳೂರಿನ ಬಿಪಿಒ ಉದ್ಯೋಗಿಯೊಬ್ಬ ತನ್ನ ಕಚೇರಿಯ ಹುಡುಗಿಯರೂ ಸೇರಿದಂತೆ ನೂರಾರು ಹುಡುಗಿಯರ 13000 ಫೋಟೊಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾನೆ. ಯಾಕಿದು?

VISTARANEWS.COM


on

BPO Employee Bangalore Nude Photos
Koo

ಬೆಂಗಳೂರು: ಅವಳು ಬೆಂಗಳೂರಿನ ಬಿಪಿಒ ಕಂಪನಿಯಲ್ಲಿ (BPO Company in Bangalore) ಉದ್ಯೋಗಿ. ವಯಸ್ಸು 22 ವರ್ಷ. ಅವಳಿಗೊಬ್ಬ ಬಾಯ್‌ಫ್ರೆಂಡ್ (Boy friend). ಇನ್ನೂ 25 ವರ್ಷ. ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಅವರು ಆಗಲೇ ಪ್ರೀತಿ-ಪ್ರೇಮ-ಪ್ರಣಯ (Love and sex relationship) ಅಂತ ಸ್ವಲ್ಪ ಸ್ವಲ್ಪ ಎಲ್ಲೆ ಮೀರಿದ್ದರು. ಅವರಿಬ್ಬರ ನಡುವಿನ ಆತ್ಮೀಯ ಕ್ಷಣಗಳನ್ನು ಆ ಹುಡುಗ ಸೆರೆ ಹಿಡಿದಿದ್ದ. ಅದೊಂದು ದಿನ ಅವನು ಕಣ್ಣಂಚಿನಲ್ಲಿ ಇಲ್ಲದಾಗ ಅವನ ಮೊಬೈಲ್‌ ತೆಗೆದು ತಮ್ಮ ಇಂಟಿಮೇಟ್‌ ಕ್ಷಣಗಳ (Intemate moments) ಚಿತ್ರ ವಿಡಿಯೊಗಳನ್ನು ಡಿಲೀಟ್‌ ಮಾಡಲು ಮುಂದಾದಳು. ಅದು ಹೇಗೋ ಸಂಪಾದಿಸಿಕೊಂಡಿದ್ದ ಲಾಕಿಂಗ್‌ ಪಾಸ್‌ವರ್ಡ್‌ ಬಳಸಿ ಅವನು ಮೊಬೈಲ್‌ನ ಗ್ಯಾಲರಿ (Mobile Photo Gallery) ಓಪನ್‌ ಮಾಡಿದರೆ.. ಬೆಚ್ಚಿ ಬೀಳುವ ಸರದಿ ಅವಳದಾಗಿತ್ತು. ಯಾಕೆಂದರೆ, ಅಲ್ಲಿ ಅವಳೊಬ್ಬಳ ಫೋಟೊ, ವಿಡಿಯೊ ಮಾತ್ರ ಇದ್ದಿದ್ದಲ್ಲ. ಸುಮಾರು 13000 ಹುಡುಗಿಯರ ಸೆಕ್ಸೀ, ರೊಮ್ಯಾಂಟಿಕ್‌ ಫೋಟೊಗಳು ಅಲ್ಲಿದ್ದವು. ಮಾತ್ರವಲ್ಲ, ಅವರಿಬ್ಬರು ಕೆಲಸ ಮಾಡುವ ಅದೇ ಬಿಪಿಒ ಕಂಪನಿಯ ಹಲವು ಹುಡುಗಿಯರ ಮಾದಕ ಚಿತ್ರಗಳ ಸಂಪುಟವೂ ಅಲ್ಲಿ ತೆರೆದುಕೊಂಡಿತ್ತು!

ಹೀಗೆ ಬೆಚ್ಚಿ ಬಿದ್ದ ಹುಡುಗಿಯ ಹೆಸರು ಸಾನ್ವಿ (ಹೆಸರು ಬದಲಿಸಲಾಗಿದೆ). ವರ್ಷದ ಹಿಂದೆ ಬಿಪಿಒ ಕಂಪನಿಗೆ ಸೇರಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ಐದು ತಿಂಗಳ ಹಿಂದೆ ಬಂದು ಸೇರಿಕೊಂಡವನು ಸಂತೋಷ್‌ ಆದಿತ್ಯ (ಹೆಸರು ಬದಲಿಸಲಾಗಿದೆ). ನೋಡಲು ಚೆನ್ನಾಗಿದ್ದ ಅವನಿಗೂ, ಚೆಲುವಿನ ಖನಿಯಾಗಿದ್ದ ಅವಳಿಗೂ ಆಗಲೇ ಪರಿಚಯವಾಗಿತ್ತು. ಒಂದೇ ತಿಂಗಳಲ್ಲಿ ಅದು ಸಂಬಂಧವಾಗಿ ಪರಿವರ್ತನೆಯಾಯಿತು. ಮನಸು ಮಾತ್ರವಲ್ಲ ದೇಹಗಳೂ ಹತ್ತಿರವಾಗಿ ಆತ್ಮೀಯ ರಸಕ್ಷಣಗಳು ನಡೆದುಹೋದವು. ಈ ರಸಕ್ಷಣಗಳ ನೆನಪು ಶಾಶ್ವತವಾಗಿರಲಿ ಎಂದು ಸಂತೋಷ್‌ ಆದಿತ್ಯ ಕೆಲವೊಮ್ಮೆ ಫೋಟೊ ತೆಗೆದಿದ್ದ, ಕೆಲವೊಮ್ಮೆ ವಿಡಿಯೊ ಮಾಡಿದ್ದ.

BPO Employee representational photo
ಪ್ರಾತಿನಿಧಿಕ ಚಿತ್ರ

ಎಲ್ಲ ಮುಗಿದ ಮೇಲೆ ಸಾನ್ವಿಗೆ ಒಬ್ಬ ಹುಡುಗನ ಮೊಬೈಲ್‌ನಲ್ಲಿ ತನ್ನ ಈ ರೀತಿಯ ಫೋಟೊ/ವಿಡಿಯೊಗಳು ಇರುವುದು ಸರಿಯಲ್ಲ ಎಂಬುದರ ಅರಿವಾಗಿದೆ. ಹಾಗಾಗಿ ಆಕೆ ಆತನಿಗೆ ಅರಿವಿಲ್ಲದೆಯೇ ಆತನ ಮೊಬೈಲ್‌ ತೆರೆದು ಗ್ಯಾಲರಿ ಓಪನ್‌ ಮಾಡಿದ್ದಾಳೆ. ಆಗ ಅವಳಿಗೆ ಕಂಡಿದ್ದು 13 ಸಾವಿರ ಫೋಟೊಗಳು! ಅದರಲ್ಲಿ ಹೆಚ್ಚಿನವರು ಹೆಣ್ಮಕ್ಕಳ ಫೋಟೊಗಳು! ಅದರಲ್ಲೂ ತನ್ನದೇ ಆಫೀಸಿನ ಹೆಣ್ಮಕ್ಕಳ ಫೋಟೊಗಳು ಹೆಚ್ಚಾಗಿದ್ದವು. ಅವರ ಜತೆಗೆ ಇದ್ದದ್ದು ಕೂಡಾ ಅದೇ ಇಂಟಿಮೇಟ್‌ ಕ್ಷಣಗಳು.

ಇದನ್ನು ನೋಡಿದ ಸಾನ್ವಿ ಬೆಚ್ಚಿ ಬಿದ್ದಿದ್ದಾಳೆ. ಅಷ್ಟೂ ಹುಡುಗಿಯರ ಫೋಟೊ/ವಿಡಿಯೊಗಳ ನಡುವೆ ಆಕೆಯದ್ದು ಕಾಣಿಸಲೇ ಇಲ್ಲ! ಇದೆಲ್ಲ ನಡೆದದ್ದು ಸುಮಾರು 10 ದಿನಗಳ ಹಿಂದೆ. ಇದನ್ನು ನೋಡಿದ ಸಾನ್ವಿ ಸುಮ್ಮನಿರಲಿಲ್ಲ.

ಮೊದಲು ಸಂತೋಷ್‌ ಜತೆಗೆ ಬ್ರೇಕಪ್‌ ಮಾಡಿಕೊಂಡಿದ್ದಾಳೆ. ನಂತರ ನವೆಂಬರ್‌ 20ರಂದು ಆಕೆ ತನ್ನ ಕಚೇರಿಯ ಸೀನಿಯರ್‌ಗಳಿಗೆ ಈ ವಿಚಾರ ತಿಳಿಸಿದ್ದಾಳೆ. ಸಂತೋಷ್‌ನ ಫೋನ್‌ನಲ್ಲಿ 13000ಕ್ಕೂ ಹೆಚ್ಚು ನಗ್ನ ಫೋಟೊಗಳಿವೆ. ಇವುಗಳಲ್ಲಿ ಕೆಲವು ನಮ್ಮ ಕಚೇರಿಯಲ್ಲೇ ಕೆಲಸ ಮಾಡುವ ಹುಡುಗಿಯರು, ಹೆಂಗಸರದ್ದೂ ಇದೆ. ಹೀಗಾಗಿ ಅವರಿಗೆ ಯಾರಿಗೂ ಮುಂದೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಚಾರವನ್ನು ಗಮನಕ್ಕೆ ತರುತ್ತಿರುವುದಾಗಿ ಹೇಳಿದ್ದಾಳೆ.

ವರದಿಗಳ ಪ್ರಕಾರ ಈ ಚಿತ್ರಗಳಲ್ಲಿ ಕೆಲವು ಒರಿಜಿನಲ್‌ ಆಗಿವೆ. ಅದರ ಜತೆಗೆ ಕೆಲವು ಚಿತ್ರಗಳು ನಕಲಿಯಾಗಿರಬಹುದು ಎನ್ನಲಾಗಿದೆ. ಅಂದರೆ ಕಚೇರಿಯ ಕೆಲವು ಮಹಿಳೆಯರ ಯುವತಿಯರ ಫೋಟೊಗಳನ್ನು ಆತ ನಗ್ನ ಚಿತ್ರಗಳಿಗೆ ಜೋಡಿಸಿ ಆನಂದಿಸಿರಬಹುದು ಎಂದು ಕೂಡಾ ಹೇಳಲಾಗುತ್ತಿದೆ.

BPO sex case

ಮತ್ತೊಬ್ಬ ಸಿಬ್ಬಂದಿಯಿಂದ ಪೊಲೀಸರಿಗೆ ದೂರು

ಸಂತೋಷ್‌ನ ಈ ವಿಕೃತಿಯನ್ನು ಅರ್ಥ ಮಾಡಿಕೊಂಡ ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯ ಉದ್ಯೋಗಿಯಾಗಿರುವ ಸುಚಿತ್ರಾ (ಹೆಸರು ಬದಲಿಸಲಾಗಿದೆ) ಅವರು ಸಂತೋಷ್‌ ವಿರುದ್ಧ ನವೆಂಬರ್‌ 23ರಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅವನು ಇದುವರೆಗೆ ಈ ಕಚೇರಿಯಲ್ಲಿ ಯಾವ ಮಹಿಳೆಯರಿಗೂ ತೊಂದರೆ ಮಾಡಿಲ್ಲ. ಆದರೆ, ಈ ರೀತಿ ಫೋಟೊಗಳು ಇವೆ ಎಂದಾಗ ಅದು ಹೆಣ್ಮಕ್ಕಳಿಗೆ ಆತಂಕ ಆಗಿಯೇ ಆಗುತ್ತದೆ. ಆತ ಯಾಕೆ ಈ ರೀತಿಯಾಗಿ ಫೋಟೊಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾನೆ? ಅವನ ಉದ್ದೇಶವೇನು ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಇಂಥ ಫೋಟೊಗಳು ಒಂದು ವೇಳೆ ಸೋರಿಕೆಯಾದರೆ ಹೆಣ್ಮಕ್ಕಳು ತುಂಬ ಖಿನ್ನತೆಗೆ ಒಳಗಾಗಬಹುದು. ಹೀಗಾಗಿ ಪ್ರಕರಣದ ಗಂಭೀರತೆಯನ್ನು ಆಧರಿಸಿ ಪೊಲೀಸರಿಗೆ ವಿವರಿಸಿದ್ದೇವೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ ಎನ್ನಲಾಗಿದೆ.

ಈ ನಡುವೆ ಕಂಪನಿ ಇನ್ನೊಂದು ಸ್ಪಷ್ಟೀಕರಣವನ್ನು ನೀಡಿದೆ. ಅದೇನೆಂದರೆ, ಸಂತೋಷ್‌ ಫೋಟೊಗಳನ್ನು ಮಾರ್ಫ್‌ ಮಾಡಲು ಕಂಪನಿಯ ಯಾವುದೇ ಸಾಧನಗಳನ್ನು ಬಳಸಿಕೊಂಡಿಲ್ಲ ಎಂಬುದು. ಈ ಮೂಲಕ ಆತನ ಇಂಥ ಕುಕೃತ್ಯಗಳಿಗೂ ಕಂಪನಿಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.

ಇದೇವೇಳೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಸಂತೋಷ್‌ನನ್ನು ಆತನ ಕಚೇರಿಯಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ. ಆತನ ಮೊಬೈಲ್‌ ಮತ್ತು ಅದರಲ್ಲಿರುವ ಚಿತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಸಂಖ್ಯೆಯ ನಗ್ನ ಚಿತ್ರಗಳನ್ನು ಸಂಗ್ರಹಿಸುವ ಆತನ ಉದ್ದೇಶವೇನು ಎನ್ನುವ ಬಗ್ಗೆ ಅವರು ತನಿಖೆ ನಡೆಸಲಿದ್ದಾರೆ.

ಮೊಬೈಲ್‌ನಲ್ಲಿರುವ ಚಿತ್ರಗಳ ಪೈಕಿ ಕೆಲವು ಮಾರ್ಫ್‌ ಮಾಡಿದ ನಕಲಿ ಫೋಟಗಳು, ಕೆಲವು ನಿಜವಾಗಿಯೂ ಮಹಿಳೆಯರದ್ದೇ ಫೋಟೊಗಳು. ಅವನು ಈ ಫೋಟೊಗಳನ್ನು ಹೇಗೆ ತೆಗೆದುಕೊಂಡ, ಕೇವಲ ಐದೇ ತಿಂಗಳಲ್ಲಿ ಇಂಥ ಫೋಟೊಗಳನ್ನು ತೆಗೆಸಿಕೊಳ್ಳುವಷ್ಟು ಆತ್ಮೀಯತೆ ಹೇಗೆ ಬೆಳೆಯಿತು? ಆತ ಯಾರಿಗಾದರೂ ಈ ಫೋಟೋ ಬಳಸಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನಾ? ಯಾರಿಗಾದರೂ ಕಳುಹಿಸಿದ್ದಾನಾ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಜತೆಗೆ ಆತನ ಸಂಪರ್ಕಗಳ ಮೇಲೂ ಕಣ್ಣಿಡಲಿದ್ದಾರೆ.

Continue Reading

ಆರೋಗ್ಯ

Child dead : ಝೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಬೆಡ್‌ ಇಲ್ಲ ಎಂದ ನಿಮ್ಹಾನ್ಸ್‌; ಎಳೆ ಮಗು ಸಾವು

Child death: ಅದು ದೊಡ್ಡ ಆಸ್ಪತ್ರೆ, ದೊಡ್ಡ ವೈದ್ಯರು ಸಿಗುತ್ತಾರೆ ಎನ್ನುವ ಆಸೆಯೊಂದಿಗೆ ಹಾಸನದಿಂದ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆ ತರಲಾದ ಮಗುವೊಂದು ಬೆಡ್‌ ಸಿಗದೆ ಪ್ರಾಣ ಕಳೆದುಕೊಂಡಿದೆ.

VISTARANEWS.COM


on

Child death in Nimhans
Koo

ಬೆಂಗಳೂರು: ಸಾವು ಬದುಕಿನ ಹೋರಾಟದಲ್ಲಿದ್ದ (Life and death) ಪುಟ್ಟ ಮಗುವಿನ ಬಗೆಗೂ ಕರುಣೆ ತೋರದೆ, ಬೆಡ್‌ ಇಲ್ಲ ಎಂದು ನಿರ್ಲಕ್ಷ್ಯ ತೋರಿದೆ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್‌ ಆಸ್ಪತ್ರೆ (Nimhans Hospital). ಹೀಗಾಗಿ ಒಂದುವರೆ ವರ್ಷದ ಪುಟ್ಟ ಮಗುವೊಂದು ಹೆತ್ತವರ ಆಕ್ರಂದನ ನಡುವೆ ಕಣ್ಮುಚ್ಚಿದೆ (Child death).

ಚಿಕ್ಕಮಗಳೂರಿನ ಬಸವನಗುಡಿ ನಿವಾಸಿ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಒಂದುವರೆ ವರ್ಷದ ಮಗು ಮೇಲಿಂದ ಬಿದ್ದು ತಲೆಗೆ ಗಾಯವಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಈ ಮಗುವನ್ನು ನಿಮ್ಹಾನ್‌ ಆಸ್ಪತ್ರೆಗೆ ಸ್ಪಷ್ಟ ಮಾಹಿತಿ ನೀಡಿಯೇ ಹಾಸನದ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್‌ನಲ್ಲಿ ತರಲಾಗಿತ್ತು. ಆದರೆ, ಮಗು ಆಸ್ಪತ್ರೆ ತಲುಪಿ ಗಂಟೆಗಳು ಕಳೆದರೂ ಬೆಡ್‌ ನೀಡದೆ, ಚಿಕಿತ್ಸೆ ನೀಡದೆ ಅಂತಿಮವಾಗಿ ಮಗು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಇವರು ವೈದ್ಯರೋ, ರಕ್ಕಸರೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಚಿಕ್ಕಮಗಳೂರಿನ ಬಸವನಗುಡಿ ನಿವಾಸಿ ವೆಂಕಟೇಶ್ ಹಾಗೂ ಜ್ಯೋತಿ ಎಂಬವರು ಪುಟ್ಟ ಮಗು ಮಂಗಳವಾರ ಆಟವಾಡುವಾಗ ಹತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದಿತ್ತು. ಆಟವಾಡುವಾಗ ಮೆಟ್ಟಿಲಿನಿಂದ ಬಿದ್ದಿದೆ ಎಂದು ಕೆಲವರು ಹೇಳಿದರೆ, ತಾಯಿಯ ಕೈಯಿಂದಲೇ ಬಿದ್ದಿದೆ ಎಂದು ಕೆಲವರು ಹೇಳುತ್ತಿದ್ದಾರೆ.

Child death Hasan to Nimhans zero traffic
ಹಾಸನದಿಂದ ಹೊರಟ ಆಂಬ್ಯುಲೆನ್ಸ್

ಹೀಗೆ ಬಿದ್ದಾಗ ಮಗುವಿನ ತಲೆಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣವೇ ಮಗುವನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದರಿಂದ, ಅದರಲ್ಲೂ ತಲೆಗೆ ಗಾಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.

ಹಾಸನ ಆಸ್ಪತ್ರೆಯ ವೈದ್ಯರು ನಿಮ್ಹಾನ್ಸ್‌ನ ವೈದ್ಯರು ಮತ್ತು ಆಡಳಿತ ವಿಭಾಗಕ್ಕೆ ಕರೆ ಮಾಡಿ ಮಗುವನ್ನು ಕರೆ ತರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ನಡುವೆ, ಹಾಸನ ಪೊಲೀಸರು ಮಗುವಿನ ರವಾನೆಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಕಳುಹಿಸಿದರು. ಹಾಸನದಿಂದ ಬೆಂಗಳೂರಿಗೆ ಕೇವಲ ಒಂದು ಗಂಟೆ 40 ನಿಮಿಷದಲ್ಲಿ ತಲುಪಿತ್ತು.

Child death Hasan to Nimhans zero traffic

ಇಲ್ಲಿ ಬಂದು ನೋಡಿದರೆ ಬೆಡ್ಡೂ ಇಲ್ಲ, ಚಿಕಿತ್ಸೆಯೂ ಇಲ್ಲ!

ಆಂಬ್ಯುಲೆನ್ಸ್‌ ಏನೋ ಅತ್ಯಂತ ವೇಗವಾಗಿ ಮಗುವನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ತಲುಪಿಸಿತು. ಆದರೆ, ಇಲ್ಲಿ ಬಂದು ಕೇಳಿದರೆ ಬೆಡ್‌ ಇಲ್ಲ ಎಂದು ಸಬೂಬು ಹೇಳಲಾಯಿತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಕಂದಮ್ಮಗೆ ವೈದ್ಯರು ಚಿಕಿತ್ಸೆ ನೀಡಲೇ ಇಲ್ಲ.

ದಯವಿಟ್ಟು ಮಗುವಿಗೆ ಬೆಡ್‌ ಕೊಡಿ, ಚಿಕಿತ್ಸೆ ಶುರು ಮಾಡಿ ಎಂದು ಪೋಷಕರು ಎಷ್ಟೇ ಬೊಬ್ಬೆ ಹಾಕಿದರೂ, ಕಣ್ಣೀರು ಹಾಕಿದರೂ ಅವಕಾಶ ಸಿಗಲೇ ಇಲ್ಲ. ಬರುವ ಮೊದಲೇ ಮಾಹಿತಿ ನೀಡಿದ್ದರೂ ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿ ಆಂಬ್ಯುಲೆನ್ಸ್‌ನಲ್ಲೇ ಉಳಿಸಲಾಯಿತು. ಅಂತಿಮವಾಗಿ ಮಗು ಪ್ರಾಣವನ್ನೇ ಕಳೆದುಕೊಂಡಿದೆ.

ಆರೋಗ್ಯ ಸಚಿವರು ಹೇಳುವುದೇನು?

ಘಟನೆಯ ಬಗ್ಗೆ, ಸಾರ್ವಜನಿಕವಾಗಿ ಕೇಳಿಬರುತ್ತಿರುವ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ನಿಮ್ಹಾನ್ಸ್‌ನಲ್ಲಿ ವ್ಯವಸ್ಥೆಗಳು ಸರಿಯಾಗಿಲ್ಲ. ಅಲ್ಲಿ ಜನಜುಂಗಳಿ ಕೂಡ ಇದೆ. ಒತ್ತಡದ ನಡುವೆಯೂ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಕೊಡುತ್ತಿದ್ದಾರೆ. ಅವರ ಮೇಲಿನ ಒತ್ತಡ ವನ್ನು ನಾವು ಕಡಿಮೆ ಮಾಡಬೇಕು ಎಂದು ಹೇಳಿದರು. ಮಗು ಮೃತಪಟ್ಟಿರುವ ಬಗ್ಗೆ ಮಾಹಿತಿ ತರಿಸಿಕೊಡುವುದಾಗಿ ತಿಳಿಸಿದರು.

Continue Reading

ಉತ್ತರ ಕನ್ನಡ

Murder Case : ಟಿಪ್ಪರ್‌ ಹಾಯಿಸಿ ಸ್ನೇಹಿತನ ಕೊಲೆ ಯತ್ನ; ಆದರೆ ಸತ್ತಿದ್ದು ಇನ್ಯಾರೋ!

Murder Case : ಇಲ್ಲಿ ನಡೆದ ಘಟನೆಯೊಂದರಲ್ಲಿ ಅಮಾಯಕ ಬಲಿಯಾಗಿದ್ದಾನೆ. ಆಟೋ ರಿಕ್ಷಾದ ಮೇಲೆ ಟಿಪ್ಪರ್‌ ನುಗ್ಗಿಸುವ ಕ್ರೌರ್ಯಕ್ಕೆ ಚಾಲಕ ಸಾವನ್ನಪ್ಪಿದ್ದಾನೆ.

VISTARANEWS.COM


on

Accused Vinayak Bhat
ಆಟೋ ರಿಕ್ಷಾ ಚಾಲಕನ ಕೊಂದ ವಿನಾಯಕ ಭಟ್‌
Koo

ಕಾರವಾರ: ಇಬ್ಬರು ಯುವಕರ ನಡುವಿನ ಜಗಳ ದ್ವೇಷಕ್ಕೆ (Rivarly between Friends) ತಿರುಗಿ ಕೊಲೆ ಮಾಡುವ (Murder Case) ಹಂತವನ್ನು ತಲುಪಿದೆ. ಆದರೆ, ಸಾವು ಕಂಡದ್ದು ಮಾತ್ರ ಇನ್ಯಾರೋ? ಇಂಥಹುದೊಂದು ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಹೊನ್ನಾವರದ ಅರೆಯಂಗಡಿ ಬಳಿ. ಇಲ್ಲಿನ ಯುವಕನೊಬ್ಬ ತನ್ನ ಸ್ನೇಹಿತನನ್ನು ಕೊಲ್ಲಲೆಂದು ಆತ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಟಿಪ್ಪರ್‌ (Tipper Rams into Auto Rickshaw) ಹಾಯಿಸಿದ್ದಾನೆ. ಆದರೆ, ಸತ್ತಿದ್ದು ಮಾತ್ರ ಅಮಾಯಕನಾದ ಅಟೋ ಚಾಲಕ.

ವಿನಾಯಕ ಭಟ್‌ ಎಂಬಾತನಿಗೂ ಕೇಶವ ನಾಯ್ಕ ಮತ್ತು ವಸಂತ ನಾಯ್ಕ ಎಂಬವರಿಗೂ ಹಣಕಾಸಿನ ವಿಚಾರಕ್ಕೆ ಜಗಳ ಉಂಟಾಗಿತ್ತು. ಹೀಗಾಗಿ ಇಬ್ಬರ ಮಧ್ಯೆ ದ್ವೇಷ ಬೆಳೆದಿತ್ತು. ಮಂಗಳವಾರ ರಾತ್ರಿ ಕೇಶವ ಮತ್ತು ವಸಂತ ಅವರು ಆಟೋ ಒಂದರ ಬಳಿ ನಿಂತಿದ್ದರು. ಆಗ ಅವರನ್ನು ಕಂಡವನೇ ವಿನಾಯಕ ತಾನು ಚಲಾಯಿಸುತ್ತಿದ್ದ ಟಿಪ್ಪರನ್ನು ಅವರ ಮೇಲೆ ಹಾಯಿಸಿದ್ದ. ಆದರೆ, ಅಲ್ಲಿ ಕೇಶವ ಮತ್ತು ವಸಂತನ ಜತೆಗೆ ಆಟೋ ಚಾಲಕ ಓಲ್ವಿನ್‌ ಕೂಡಾ ನಿಂತಿದ್ದರು.

ವಿನಾಯಕ ಭಟ್‌ ಹಾಯಿಸಿದ ಟಿಪ್ಪರ್‌ ಆಲ್ವಿನ್‌, ಕೇಶವ ನಾಯ್ಕ್‌ ಮತ್ತು ವಸಂತ ನಾಯ್ಕ್‌ ಗೆ ಅಪ್ಪಳಿಸಿದೆ. ಈ ವೇಳೆ ಓಲ್ವಿನ್‌ ಅವರಿಗೆ ಅದು ಸರಿಯಾಗಿ ಗುದ್ದಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದೆ. ಮೂವರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಲ್ಲಿ ಓಲ್ವಿನ್‌ ಮಾತ್ರ ಬದುಕುಳಿಯಲಿಲ್ಲ.

ಸಿಟ್ಟಿನ ಭರದಲ್ಲಿ ಅಮಾಯಕನನ್ನು ಬಲಿ ಪಡೆದ ಆರೋಪಿ ವಿನಾಯಕ ಭಟ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Murder Case : ಮೊಮ್ಮಗನಿಂದಲೇ ತಾತನ ಬರ್ಬರ ಹತ್ಯೆ!

ಪ್ರಿನ್ಸಿಪಾಲ್‌ ಕಿರುಕುಳ ಆರೋಪ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಹಾವೇರಿ: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ (First PU Student) ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Self Immolation) ಮಾಡಿಕೊಂಡ (Student death) ಭೀಕರ ಘಟನೆ ಹಾವೇರಿ ಜಿಲ್ಲೆಯ (Haveri News) ಹಾನಗಲ್ ತಾಲೂಕಿನ ಡೊಳ್ಳೆಶ್ವರ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಕಾಲೇಜಿನ ಪ್ರಿನ್ಸಿಪಾಲ್‌ ಅವರ ಕಿರುಕುಳವೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.

ಹಾನಗಲ್ ಪಟ್ಟಣದ ಎನ್ ಸಿಜೆಸಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಆದಿತ್ಯ ರಘುವೀರ ಚವ್ಹಾಣ (16) ಆತ್ಮಹತ್ಯೆ ಮಾಡಿಕೊಂಡವನು. ಆತ ಮಂಗಳವಾರ ಸಂಜೆ ತನ್ನ ಮನೆಯಲ್ಲೇ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆಯಾದರೂ ಆತ ಬದುಕುಳಿಯಲಿಲ್ಲ.

Adithya Self immolation

ಆದಿತ್ಯ ಎನ್ ಸಿಜೆಸಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ. ಆತ ಪ್ರಾಂಶುಪಾಲರ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ. ಪ್ರಾಂಶುಪಾಲೆ ಅನಿತಾ ಹೊಸಮನಿ ಅವರು ಕಿರುಕುಳ ನೀಡಿದ್ದಾರೆ ಎನ್ನುವುದು ಮನೆಯವರ ಆರೋಪ.

ಅದಿತ್ಯನಿಗೆ ಪ್ರಿನ್ಸಿಪಾಲ್‌ ಬೈದಿದ್ದು, ಅದರಿಂದ ನೋವನುಭವಿಸಿ ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಿನ್ಸಿಪಾಲರು ಆದಿತ್ಯನಿಗೆ ಮಾತ್ರವಲ್ಲ, ಹಲವರಿಗೆ ಇದೇ ರೀತಿ ಅಪಮಾನ ಮಾಡಿದ್ದಾರೆ ಎಂದು ಮನೆಯವರು ಹೇಳುತ್ತಾರೆ.

ಈ ನಡುವೆ ಆದಿತ್ಯ ಕಾಲೇಜಿಗೆ ಸರಿಯಾಗಿ ಹೋಗುತ್ತಿರಲಿಲ್ಲ, ಇದಕ್ಕಾಗಿ ಪ್ರಿನ್ಸಿಪಾಲರು ಕರೆದು ಬುದ್ಧಿ ಹೇಳಿದ್ದಾರೆ. ಇದನ್ನೇ ಇಟ್ಟುಕೊಂಡು ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕೂಡಾ ಹೇಳಲಾಗುತ್ತಿದೆ.

ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸುಟ್ಟು ಹೋದ ಆದಿತ್ಯನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಆತ ಬದುಕುಳಿಯಲಿಲ್ಲ ಎನ್ನಲಾಗಿದೆ.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿರುವಾಗಲೇ ತನ್ನ ಸಾವಿಗೆ ಸಂಬಂಧಿಸಿ ಆದಿತ್ಯ ಮಾತನಾಡಿರುವ ವಿಡಿಯೋಗ ಈ ಜಾಲತಾಣದಲ್ಲಿ ಹರಿದಾಡುತ್ತಿದೆ.

Continue Reading

ಉತ್ತರ ಕನ್ನಡ

Student death : ಪ್ರಿನ್ಸಿಪಾಲ್‌ ಕಿರುಕುಳಕ್ಕೆ ನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

Student death : ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜಿನಲ್ಲಿ ಪ್ರಿನ್ಸಿಪಾಲ್‌ ಬೈದರು ಎಂಬ ಕಾರಣ ನೀಡಿ ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.

VISTARANEWS.COM


on

Adithya Self immolation
Koo

ಹಾವೇರಿ: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ (First PU Student) ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Self Immolation) ಮಾಡಿಕೊಂಡ (Student death) ಭೀಕರ ಘಟನೆ ಹಾವೇರಿ ಜಿಲ್ಲೆಯ (Haveri News) ಹಾನಗಲ್ ತಾಲೂಕಿನ ಡೊಳ್ಳೆಶ್ವರ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಕಾಲೇಜಿನ ಪ್ರಿನ್ಸಿಪಾಲ್‌ ಅವರ ಕಿರುಕುಳವೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.

ಹಾನಗಲ್ ಪಟ್ಟಣದ ಎನ್ ಸಿಜೆಸಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಆದಿತ್ಯ ರಘುವೀರ ಚವ್ಹಾಣ (16) ಆತ್ಮಹತ್ಯೆ ಮಾಡಿಕೊಂಡವನು. ಆತ ಮಂಗಳವಾರ ಸಂಜೆ ತನ್ನ ಮನೆಯಲ್ಲೇ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆಯಾದರೂ ಆತ ಬದುಕುಳಿಯಲಿಲ್ಲ.

ಆದಿತ್ಯ ಎನ್ ಸಿಜೆಸಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ. ಆತ ಪ್ರಾಂಶುಪಾಲರ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ. ಪ್ರಾಂಶುಪಾಲೆ ಅನಿತಾ ಹೊಸಮನಿ ಅವರು ಕಿರುಕುಳ ನೀಡಿದ್ದಾರೆ ಎನ್ನುವುದು ಮನೆಯವರ ಆರೋಪ.

ಅದಿತ್ಯನಿಗೆ ಪ್ರಿನ್ಸಿಪಾಲ್‌ ಬೈದಿದ್ದು, ಅದರಿಂದ ನೋವನುಭವಿಸಿ ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಿನ್ಸಿಪಾಲರು ಆದಿತ್ಯನಿಗೆ ಮಾತ್ರವಲ್ಲ, ಹಲವರಿಗೆ ಇದೇ ರೀತಿ ಅಪಮಾನ ಮಾಡಿದ್ದಾರೆ ಎಂದು ಮನೆಯವರು ಹೇಳುತ್ತಾರೆ.

ಈ ನಡುವೆ ಆದಿತ್ಯ ಕಾಲೇಜಿಗೆ ಸರಿಯಾಗಿ ಹೋಗುತ್ತಿರಲಿಲ್ಲ, ಇದಕ್ಕಾಗಿ ಪ್ರಿನ್ಸಿಪಾಲರು ಕರೆದು ಬುದ್ಧಿ ಹೇಳಿದ್ದಾರೆ. ಇದನ್ನೇ ಇಟ್ಟುಕೊಂಡು ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕೂಡಾ ಹೇಳಲಾಗುತ್ತಿದೆ.

ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸುಟ್ಟು ಹೋದ ಆದಿತ್ಯನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಆತ ಬದುಕುಳಿಯಲಿಲ್ಲ ಎನ್ನಲಾಗಿದೆ.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿರುವಾಗಲೇ ತನ್ನ ಸಾವಿಗೆ ಸಂಬಂಧಿಸಿ ಆದಿತ್ಯ ಮಾತನಾಡಿರುವ ವಿಡಿಯೋಗ ಈ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Viral Video: ಈಕೆ ‘ಪೊರಕೆ’ ಓಬವ್ವ! ಗುಂಡು ಹಾರಿಸುತ್ತಿದ್ದವರನ್ನು ಹೆದರಿಸಿ, ಓಡಿಸಿದ ಹರ್ಯಾಣದ ಮಹಿಳೆ

ಟಿಪ್ಪರ್‌ ಹಾಯಿಸಿ ಸ್ನೇಹಿತನ ಕೊಲೆ ಯತ್ನ; ಆದರೆ ಸತ್ತಿದ್ದು ಇನ್ಯಾರೋ!

ಕಾರವಾರ: ಇಬ್ಬರು ಯುವಕರ ನಡುವಿನ ಜಗಳ ದ್ವೇಷಕ್ಕೆ ತಿರುಗಿ ಕೊಲೆ ಮಾಡುವ ಹಂತವನ್ನು ತಲುಪಿದೆ. ಆದರೆ, ಸಾವು ಕಂಡದ್ದು ಮಾತ್ರ ಇನ್ಯಾರೋ?

ಇಂಥಹುದೊಂದು ಘಟನೆ ನಡೆದಿದ್ದು ಹೊನ್ನಾವರದ ಹಿರೇಅಂಗಡಿ ಬಳಿ. ಇಲ್ಲಿನ ಯುವಕನೊಬ್ಬ ತನ್ನ ಸ್ನೇಹಿತನನ್ನು ಕೊಲ್ಲಲೆಂದು ಆತ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಟಿಪ್ಪರ್‌ ಹಾಯಿಸಿದ್ದಾನೆ. ಆದರೆ, ಸತ್ತಿದ್ದು ಮಾತ್ರ ಅಮಾಯಕನಾದ ಅಟೋ ಚಾಲಕ.

ವಿನಾಯಕ ಭಟ್‌ ಎಂಬಾತನಿಗೂ ಕೇಶವ ನಾಯ್ಕ ಮತ್ತು ವಸಂತ ನಾಯ್ಕ ಎಂಬವರಿಗೂ ಹಣಕಾಸಿನ ವಿಚಾರಕ್ಕೆ ಜಗಳ ಉಂಟಾಗಿತ್ತು. ಹೀಗಾಗಿ ಇಬ್ಬರ ಮಧ್ಯೆ ದ್ವೇಷ ಬೆಳೆದಿತ್ತು. ಮಂಗಳವಾರ ರಾತ್ರಿ ಕೇಶವ ಮತ್ತು ವಸಂತ ಅವರು ಆಟೋ ಒಂದರ ಬಳಿ ನಿಂತಿದ್ದರು. ಆಗ ಅವರನ್ನು ಕಂಡವನೇ ವಿನಾಯಕ ತಾನು ಚಲಾಯಿಸುತ್ತಿದ್ದ ಟಿಪ್ಪರನ್ನು ಅವರ ಮೇಲೆ ಹಾಯಿಸಿದ್ದ. ಆದರೆ, ಅಲ್ಲಿ ಕೇಶವ ಮತ್ತು ವಸಂತನ ಜತೆಗೆ ಆಟೋ ಚಾಲಕ ಓಲ್ವಿನ್‌ ಕೂಡಾ ನಿಂತಿದ್ದರು.

Accused Vinayak Bhat
ಆರೋಪಿ ವಿನಾಯಕ ಭಟ್‌

ವಿನಾಯಕ ಭಟ್‌ ಹಾಯಿಸಿದ ಟಿಪ್ಪರ್‌ ಆಲ್ವಿನ್‌, ಕೇಶವ ನಾಯ್ಕ್‌ ಮತ್ತು ವಸಂತ ನಾಯ್ಕ್‌ ಗೆ ಅಪ್ಪಳಿಸಿದೆ. ಈ ವೇಳೆ ಓಲ್ವಿನ್‌ ಅವರಿಗೆ ಅದು ಸರಿಯಾಗಿ ಗುದ್ದಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದೆ. ಮೂವರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಲ್ಲಿ ಓಲ್ವಿನ್‌ ಮಾತ್ರ ಬದುಕುಳಿಯಲಿಲ್ಲ.

ಸಿಟ್ಟಿನ ಭರದಲ್ಲಿ ಅಮಾಯಕನನ್ನು ಬಲಿ ಪಡೆದ ಆರೋಪಿ ವಿನಾಯಕ ಭಟ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement
physical abuse
ದೇಶ12 mins ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

peace accord between Manipur oldest armed group UNLF and Government
ದೇಶ23 mins ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ38 mins ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ40 mins ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ51 mins ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

life certificate
ಉದ್ಯೋಗ1 hour ago

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

pain
ಆರೋಗ್ಯ1 hour ago

Home Remedies: ಚಳಿಗಾಲದಲ್ಲಿ ಪಾದ ನೋವೇ? ಇಲ್ಲಿದೆ ಮನೆಮದ್ದು

BPO Employee Bangalore Nude Photos
ಕರ್ನಾಟಕ1 hour ago

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

Finger Ring
ಫ್ಯಾಷನ್2 hours ago

Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

siri bbk
ಕಿರುತೆರೆ2 hours ago

BBK SEASON 10: ಸ್ಪರ್ಧಿಗಳ ಕಾಲಿಗೆ ಹಗ್ಗ; ಕಣ್ಣೀರಿಟ್ಟ ಸಿರಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌