Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ - Vistara News

ಕರ್ನಾಟಕ

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

Dasara Elephant Arjuna: ಕಾರ್ಯಾಚರಣೆ ವೇಳೆ ಕಾಡಾನೆ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ದಸರಾ ಆನೆ ಅರ್ಜುನ ಸಾವಿಗೆ ರಾಜಕೀಯ ನಾಯಕರು, ಚಿತ್ರರಂಗದ ಕಲಾವಿದರು ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.

VISTARANEWS.COM


on

Dasara Elephant Arjuna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗದ ವಿರುದ್ಧ ಹೋರಾಡಿ ಮೃತಪಟ್ಟ ದಸರಾ ಆನೆ ಅರ್ಜುನನ (Dasara Elephant Arjuna) ನಿಧನಕ್ಕೆ ರಾಜಕೀಯ ನಾಯಕರು, ಚಿತ್ರರಂಗದ ಕಲಾವಿದರು ಸೇರಿ ಗಣ್ಯರು ಕಂಬನಿ ಮಿಡಿದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂಗಳಾದ ಎಚ್‌.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ನಟ ದರ್ಶನ್‌ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಮೃತಪಟ್ಟಿದೆ. ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ (Dasara Elephant Arjuna) ಕೊನೆಯುಸಿರೆಳೆದಿದೆ. ಹೀಗಾಗಿ ಜನರ ಪ್ರೀತಿಪಾತ್ರವಾಗಿದ್ದ ದಸರಾ ಆನೆಯ ಸೇವೆಯನ್ನು ಗಣ್ಯರು ಸ್ಮರಿಸಿದ್ದಾರೆ.

‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು ಎಂದ ಸಿಎಂ

ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು. ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ.‌

ಇದನ್ನೂ ಓದಿ | Dasara Elephant Arjuna: 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಂತಾಪ

ದಸರಾ ಆನೆ ಅರ್ಜುನ ಸಾವಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದ್ದಾರೆ.

ಅರ್ಜುನ ಮರಣದ ಸುದ್ದಿ ತೀವ್ರ ನೋವುಂಟು ಮಾಡಿದೆ: ಬೊಮ್ಮಾಯಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಮೈಸೂರು ದಸರಾದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ, ಆನೆಗಳ ಕಾರ್ಯಾಚರಣೆ ವೇಳೆ ವೀರ ಮರಣರಾಗಿರುವ ಸುದ್ದಿ ತೀವ್ರ ನೋವುಂಟು ಮಾಡಿದೆ. ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ

ಮರೆಯಲಾರದ ನೆನಪುಗಳನ್ನು ಬಿಟ್ಟುಹೋದ: ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ‌ ಹೊತ್ತಿದ್ದ ಅರ್ಜುನ ಆನೆ, ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಸಂಗತಿ ತಿಳಿದು ದುಃಖವಾಗಿದೆ. ಒಂದು ಕಾಲದಲ್ಲಿ ಮೈಸೂರು ದಸರಾದ ಕೇಂದ್ರಬಿಂದುವಾಗಿದ್ದ ಅರ್ಜುನ ನಮ್ಮೆಲ್ಲರ ಹೃದಯದಲ್ಲಿ ಮರೆಯಲಾರದ ನೆನಪುಗಳನ್ನು ಬಿಟ್ಟುಹೋಗಿದ್ದಾನೆ ಎಂದು ತಿಳಿಸಿದ್ದಾರೆ.

ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ ಎಂದ ದರ್ಶನ್

‌ನಟ ದರ್ಶನ್‌ ಪ್ರತಿಕ್ರಿಯಿಸಿ, 8 ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 64 ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ! ಓಂ ಶಾಂತಿ!

ಇದನ್ನೂ ಓದಿ | ಕಾರ್ಯಾಚರಣೆಗೆ ಅರ್ಜುನ ಬಳಕೆ ಕಾನೂನುಬಾಹಿರ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್‌ ಗೂಳಿಗೌಡ ಆಗ್ರಹ

ಜನರ ನೆನಪಲ್ಲಿ ಬಹುಕಾಲ ಉಳಿಯಲಿದ್ದಾನೆ: ಬಿ.ವೈ. ವಿಜಯೇಂದ್ರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಂದಿಸಿ, ವಿಶ್ವ ವಿಖ್ಯಾತ ನಾಡಹಬ್ಬ ದಸರೆಯ ಮುಖ್ಯ ಆಕರ್ಷಣೆ ಜಂಬೂಸವಾರಿಯಲ್ಲಿ ಸತತ ಎಂಟು ಬಾರಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುತ್ತಿದ್ದ ಗಜರಾಜ ಅರ್ಜುನ ಸಾವನ್ನಪ್ಪಿರುವ ಸಂಗತಿ ಬೇಸರ ತರಿಸಿದೆ.
ಅರ್ಜುನ ನಾಡಿನ ಜನರ ನೆನಪಲ್ಲಿ ಬಹುಕಾಲ ಉಳಿಯಲಿದ್ದಾನೆ ಎಂದು ತಿಳಿಸಿದ್ದಾರೆ.

ಅತ್ಯಂತ ದುರಾದೃಷ್ಟಕರ ಘಟನೆ: ಈಶ್ವರ್‌ ಖಂಡ್ರೆ

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಪ್ರತಿಕ್ರಿಯಿಸಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತಿದ್ದ 64 ವರ್ಷದ ಅರ್ಜುನ ಆನೆಯ ಸಾವಿನ ಸುದ್ದಿ ತಿಳಿದು ಬಹಳ ದುಃಖವಾಗಿದೆ. ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ. ಕಾರ್ಯಾಚರಣೆಯಲ್ಲಿ ಪುಂಡಾನೆ ರೌದ್ರಾವತಾರ ತಾಳಿ, ಅರ್ಜುನನ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದೆ ದಾಳಿ ಮಾಡಿದೆ. ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ. ಆದರೆ ಅರ್ಜುನ ಪುಂಡಾನೆಯೊಂದಿಗೆ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಕೂಡಾ ಪಡೆದಿತ್ತು. ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

G Parameshwar : ಗೃಹ ಮಂತ್ರಿ ಮನೆಗೇ ನುಗ್ಗಿ ಫ್ರಿಜ್‌ನಿಂದ ಹಾಲು ಕದ್ದ ಕಳ್ಳ! Don’t arrest ಅಂದಿದ್ಯಾಕೆ ಸಚಿವರು!

G Parameshwar : ರಾಜ್ಯದ ಗೃಹ ಸಚಿವರ ಮನೆಗೇ ಕಳ್ಳನೊಬ್ಬ ನುಗ್ಗಿದ ಸ್ಟೋರಿ ಇದು. ಆದರೆ, ಅವರು ಮಾತ್ರ ಕಳ್ಳನನ್ನು ಅರೆಸ್ಟ್‌ ಮಾಡಬೇಡಿ ಎಂದಿದ್ದಾರೆ! ಯಾಕಂತೀರಾ? ಈ ಸ್ಟೋರಿ ಓದಿ

VISTARANEWS.COM


on

G Parameshwar Monkey Menace
Koo

ತುಮಕೂರು: ಜನಸಾಮಾನ್ಯರ ಮನೆಗೆ ಕಳ್ಳರು ನುಗ್ಗೋದು ಸಾಮಾನ್ಯ.. ಆದರೆ, ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಅವರ ಮನೆಗೇ ರಾಜಾರೋಷವಾಗಿ ಒಬ್ಬ ಕಳ್ಳ ನುಗ್ಗಿದ್ದಾನೆ (Thief enters into home Ministers house) ಎಂದರೆ ನಂಬುತ್ತೀರಾ? ಅದರಲ್ಲೂ ಸ್ವತಃ ಗೃಹ ಮಂತ್ರಿಗಳೇ (Home Minister) ಮನೆಯಲ್ಲಿ ಇರುವಾಗ, ಜತೆಯಲ್ಲಿ ಹಲವಾರು ಪೊಲೀಸ್‌ ಅಧಿಕಾರಿಗಳು ಭದ್ರತೆ ಕೈಗೊಂಡಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ತುಮಕೂರಿನಲ್ಲಿರುವ ಸಚಿವ ಜಿ. ಪರಮೇಶ್ವರ್‌ ಅವರ ಮನೆಯಲ್ಲಿ ಹಾಡಹಗಲೇ ಈ ಘಟನೆ ನಡೆದಿದೆ.

ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಸೋಮವಾರ ತುಮಕೂರಿನ (Tumkur News) ಸಿದ್ದಾರ್ಥ ನಗರದಲ್ಲಿರುವ ಮನೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದರು. ಹಲವಾರು ಮಂದಿ ಅಲ್ಲಿ ಸೇರಿದ್ದರು. ಪೊಲೀಸ್‌ ಅಧಿಕಾರಿಗಳು ಕೂಡಾ ಅಲ್ಲಿದ್ದರು. ಈ ವೇಳೆ ಎಲ್ಲರ ನಡುವೆಯೇ ರಾಜಾರೋಷವಾಗಿ ಈ ಕಳ್ಳ ಬಂದಿದ್ದಾನೆ. ನೇರವಾಗಿ ಮನೆಯ ಒಳಗೆ ಹೋಗಿ ಫ್ರಿಜ್‌ ಬಾಗಿಲು ತೆಗೆದು ಹಾಲು ಕದ್ದಿದ್ದೇನೆ. ಹಾಲನ್ನು ಹಿಡಿದುಕೊಂಡು ಮೆಟ್ಟಿಲು ಇಳಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಅಂದ ಹಾಗೆ, ಸಚಿವರ ಮನೆಯಲ್ಲಿ ಕಳವು ಮಾಡಲು ಬಂದದ್ದು ಮನುಷ್ಯನಲ್ಲ. ಒಂದು ಕೋತಿ. ಹೌದು. ಮನೆಯಲ್ಲಿ ಹತ್ತಾರು ಮಂದಿ ಇದ್ದಾಗಲೇ ಸೀದಾ ಮನೆಗೆ ನುಗ್ಗಿದ ಕೋತಿಯೊಂದು ಫ್ರಿಜ್‌ನಿಂದ ಹಾಲಿನ ಪ್ಯಾಕೆಟ್‌ ತೆಗೆದುಕೊಂಡಿದೆ.

ಅಡುಗೆ ಮನೆಯಿಂದ ಹಾಲಿನ ಪ್ಯಾಕೇಟನ್ನು ಹಿಡಿದುಕೊಂಡು ಮೆಟ್ಟಿಲು ಇಳಿಯತೊಡಗಿತ್ತು. ಆಗ ಪ್ಯಾಕೆಟ್‌ನಲ್ಲಿದ್ದ ಹಾಲು ಚೆಲ್ಲಿ ಹೋಯಿತು. ಆಗ ಎಲ್ಲರಿಗೂ ಈ ಕಳ್ಳನ ಆಟ ಗೊತ್ತಾಯಿತು. ಮನೆಯ ಮೆಟ್ಟಿಲುಗಳ ಮೇಲೆ ಚೆಲ್ಲಿದ ಹಾಲನ್ನು ಅಲ್ಲೇ ಕುಳಿತು ಆರಾಮವಾಗಿ ಕುಡಿದಿದೆ.

ಇದನ್ನೂ ಓದಿ: G Parameshwar: ಶನೀಶ್ವರನ ಮಂತ್ರ ಹೇಳಿ ಭಾಷಣ ಆರಂಭಿಸಿದ ಗೃಹ ಸಚಿವ ಜಿ. ಪರಮೇಶ್ವರ್‌!

ಈ ನಡುವೆ ಭದ್ರತಾ ಸಿಬ್ಬಂದಿಯೊಬ್ಬರು ಮೆಟ್ಟಿಲ ಮೇಲೆ ಬಿದ್ದಿದ್ದ ಹಾಲಿನ ಪ್ಯಾಕೇಟನ್ನು ತೆಗೆಯಲು ಮುಂದಾದಾಗ ಕೋತಿ ಗುರ‍್ರೆಂದಿದೆ. ಈ ನಡುವೆ ಕೆಲವರು ಅದನ್ನು ಓಡಿಸಲು ಮುಂದಾದಾಗ ಸ್ವತಃ ಗೃಹ ಸಚಿವರು ಕೋತಿಯನ್ನು ಓಡಿಸಬೇಡಿ ಎಂದು ಮನವಿ ಮಾಡಿದರು.

ಹಾಲಿನ ಪ್ಯಾಕೇಟನ್ನು ಬಗೆಬಗೆಯಾಗಿ ಹಿಡಿದುಕೊಂಡು ಹಾಲು ಕುಡಿದ ಕೋತಿ ಬಳಿಕ ನಿಧಾನವಾಗಿ ಹೊರಗೆ ಹೋಯಿತು. ಈ ದೃಶ್ಯವನ್ನು ತುಮಕೂರು ನಗರ ಡಿವೈಎಸ್ ಪಿ ಚಂದ್ರಶೇಖರ್ ಮೊಬೈಲ್ ನಲ್ಲಿ ಸೆರೆ ಹಿಡಿದರು.

ಗೃಹ ಸಚಿವರ ಮನೆಯಲ್ಲೇ ಕೋತಿ ಹಾಲು ಕಳ್ಳತನ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಜನರು ಬಗೆಬಗೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.!

Continue Reading

ಉದ್ಯೋಗ

Job Fair: ಇನ್ನು ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲೂ ಉದ್ಯೋಗ ಮೇಳ; ಪೂರಕ ತರಬೇತಿ

Job Fair: ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದರ ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ.

VISTARANEWS.COM


on

Job fair at district level every year Complementary training
Koo

ಬೆಂಗಳೂರು: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ “ಯುವ ಸಮೃದ್ಧಿ ಸಮ್ಮೇಳನ – 2024” ಅಡಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ (Job Fair) 1,10,000ಕ್ಕೂ ಅಧಿಕ ಉದ್ಯೋಗವಕಾಶಗಳಿದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ. ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದರ ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಕೌಶಲ್ಯ ಅಭಿವೃದ್ಧಿ ನಿಗಮವು ಪ್ರಕಟಣೆ ಮೂಲಕ ತಿಳಿಸಿದ್ದು, ಯೋಜನೆಯ ಗುರಿ ಹಾಗೂ ಕಾರ್ಯಯೋಜನೆ ಬಗ್ಗೆ ವಿವರಿಸಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸುವ ಬಗ್ಗೆಯೂ ತಿಳಿಸಲಾಗಿದೆ. ಇ – ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್‌ಲೈನ್ ವೇದಿಕೆಯನ್ನು ಒದಗಿಸಲಾಗಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Rajya Sabha Election: ಕೆಆರ್‌ಪಿಪಿ ಏಜೆಂಟ್‌ ಆಗಿ ಡಿಕೆಶಿ ಆಪ್ತ ಯೋಗೇಂದ್ರ ನೇಮಕ; ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ರೆಡ್ಡಿ ಬೆಂಬಲ

ಯುವಜನತೆ ಉದ್ಯೋಗಕ್ಕಾಗಿ ಏನೆಲ್ಲ ಕ್ರಮ?

 • ಕರ್ನಾಟಕದಲ್ಲಿ ಅಂದಾಜು ಪ್ರತಿ ವರ್ಷ ಪಿ.ಯು.ಸಿ.ಯಲ್ಲಿ 932450, ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 62437, ಪಾಲಿಟೆಕ್ನಿಕ್‌ನಲ್ಲಿ 48153, ಪದವಿಯಲ್ಲಿ 480000 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ.
 • ಇವರಲ್ಲಿ ನಿರುದ್ಯೋಗದ ಶೇಕಡಾವಾರು ದರ ಪಿರಿಯೋಡಿಕ್ ಲೇಬರ್ ಫೋರ್ಸ್‌ ಸರ್ವೆ ಪ್ರಕಾರ ಶೇ. 2.4 ಇದೆ.
 • ರಾಜ್ಯದಲ್ಲಿನ ನಿರುದ್ಯೋಗಿ ಯುವಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮುಖೇನ ಇಂದಿನ ಯುವಜನತೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದರೊಂದಿಗೆ ಕೌಶಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
 • ರಾಜ್ಯದ ಯುವ ಜನತೆಗೆ ಉಚಿತ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯಮಶೀಲತೆಯ ನೆರವು ಹಾಗೂ ಜೀವನೋಪಾಯಕ್ಕೆ ಅಡಿಪಾಯವನ್ನು ರೂಪಿಸಿ ಮೌಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿ ಹೊಂದಲಾಗಿದೆ.
 • ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳು ಇದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ
 • ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
 • ಪ್ರಸ್ತುತ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದು. ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ.
 • ಈ ಬಜೆಟ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿಗೆ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 25,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಘೋಷಣೆ ಮಾಡಲಾಗಿದೆ.
 • ಅದರಂತೆ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳ ಮೂಲಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ಕಲಿಕೆ ಜತೆಗೆ ಕೌಶಲ್ಯ ಕಾರ್ಯಕ್ರಮ ಅನುಷ್ಠಾನಗೊಳಿಸಲು ಘೋಷಿಸಲಾಗಿದೆ.
 • ರಾಜ್ಯದ ಆಯ್ದ 62 ಕಾಲೇಜುಗಳಲ್ಲಿನ ಬಿ.ಎ/ ಬಿ.ಕಾಂ/ ಬಿ.ಬಿ.ಎ/ ಬಿ.ಎಸ್.ಸಿ/ ಪದವಿಯ 5 & 6 ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 28 ವಿವಿಧ ಕೈಗಾರಿಕಾ ಬೇಡಿಕೆ ಆಧಾರಿತ ಅಲ್ಪಾವಧಿ ತರಬೇತಿ ನೀಡಲಾಗುವುದು.
 • ನೇರವಾಗಿ ಕೈಗಾರಿಕೆ/ ಉದ್ಯಮಗಳ ಪ್ರಮಾಣಪತ್ರವನ್ನು ನೀಡುವ ಮುಖೇನ ಉದ್ಯೋಗಾವಕಾಶವನ್ನು ಕಲ್ಪಿಸಲು 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 150 ಉನ್ನತೀಕರಿಸಿದ ಸರ್ಕಾರಿ ಐಟಿಐ, 32 ಜಿಟಿಟಿಸಿ ಮತ್ತು 8 ಕೆಜಿಟಿಟಿಐಗಳ ಮೂಲಕ ತರಬೇತಿ ನೀಡಲು ಕ್ರಮ
 • ಕರ್ನಾಟಕ ಕರಿಯರ್ ಪ್ಲಾನಿಂಗ್ ಕಾರ್ಯಕ್ರಮದಡಿ “ನನ್ನ ವೃತ್ತಿ, ನನ್ನ ಆಯ್ಕೆ” ಎಂಬ ಧೇಯವಾಕ್ಯದೊಂದಿಗೆ 8 ನೇತರಗತಿಯಿಂದ 12 ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಇದು 150 ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದೆ.
 • ಇ ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್‌ಲೈನ್ ವೇದಿಕೆಯನ್ನು ಒದಗಿಸಲಾಗಿದೆ.
Continue Reading

ಕರ್ನಾಟಕ

Emerging Leader: ದೇಶಕ್ಕಾಗಿ 18 ಗಂಟೆ ದುಡಿಯುವ ಮೋದಿಯವರ ಕೈ ಬಲಪಡಿಸಲು ರಾಜಕಾರಣಕ್ಕೆ: ಚನ್ನಬಸವಣ್ಣ ಬಳತೆ ಮನದ ಮಾತು

Emerging Leader: ವಿಸ್ತಾರ ನ್ಯೂಸ್‌ನ ಎಮರ್ಜಿಂಗ್‌ ಲೀಡರ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ನಾಯಕ ಭಾಲ್ಕಿಯ ಚನ್ನಬಸವಣ್ಣ ಬಳತೆ ಅವರು ತಮ್ಮ ಸಮಾಜ ಸೇವೆಯ ಕನಸುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ವಿಸ್ತಾರ ನ್ಯೂಸ್‌ನ ಚಂದನ್‌ ಶರ್ಮಾ ಅವರೊಂದಿಗೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.

VISTARANEWS.COM


on

channabasava
Koo

ಬೆಂಗಳೂರು: ಸರ್ಕಾರಿ ಉದ್ಯೋಗವನ್ನು ತ್ಯಜಿಸಿ, ಬಾಲ್ಯದಲ್ಲಿಯೇ ಕನಸು ಕಂಡ ಸಮಾಜ ಸೇವೆಯ ಉದ್ದೇಶ ಸಾಕಾರಗೊಳಿಸಲು ರಾಜಕಾರಣದತ್ತ ಮುಖ ಮಾಡಿದವರು ಯುವ ಸಾಧಕ, ಭಾಲ್ಕಿಯ ಚನ್ನಬಸವಣ್ಣ ಕೆ ಬಳತೆ. (Channabasavanna Balte). ಎಮರ್ಜಿಂಗ್‌ ಲೀಡರ್‌ (Emerging Leader) ಕಾರ್ಯಕ್ರಮದ ಅಡಿಯಲ್ಲಿ ಅವರೊಂದಿಗೆ ವಿಸ್ತಾರ ನ್ಯೂಸ್‌ನ ಚಂದನ್‌ ಶರ್ಮಾ ನಡೆಸಿರುವ ಮಾತುಕತೆಯ ಸಾರ ಇಲ್ಲಿದೆ.

ʼʼಜೀವನದಲ್ಲಿ ನಾವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಹೀಗಾಗಿ ಬಂದದ್ದನ್ನು ಸ್ವೀಕರಿಸಿ, ಇದ್ದುದರಲ್ಲೇ ಖುಷಿ ಪಡಬೇಕು. ಈ ರೀತಿ ಆಗಬೇಕು ಎನ್ನುವ ಗುರಿ ಇರಬೇಕು. ಇದಕ್ಕಾಗಿ ನಮ್ಮ ಕೈಲಾದ ಪ್ರಯತ್ನ ಮಾಡಿ ಸುಮ್ಮನಿರಬೇಕುʼʼ ಎಂದು ಹೇಳುವ ಮೂಲಕ ಚನ್ನಬಸವಣ್ಣ ಅವರು ಮಾತು ಆರಂಭಿಸಿದರು.

ʼʼಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ಯಾವುದೇ ಕೆಲಸವನ್ನು ಜಬಾಬ್ದಾರಿಯಿಂದ ನಿರ್ವಹಿಸುವುದು ಮುಖ್ಯ. ಖುಷಿಯಿಂದ ಕೆಲಸ ಮಾಡಿದರೆ ಮುಖದಲ್ಲಿ ನಗು ತನ್ನಿಂದ ತಾನೇ ಹೊಮ್ಮತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

41 ವರ್ಷದ ಚನ್ನಬಸವಣ್ಣ ಅವರು ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಇ ಮತ್ತು ಇಂಡಸ್ಟ್ರಿಯಲ್‌ ಸ್ಟ್ರಕ್ಚರ್‌ನಲ್ಲಿ ಎಂ.ಟೆಕ್‌ ಮಾಡಿದ್ದಾರೆ. ʼʼ2007ರಿಂದ 2017ರವರೆಗೆ ಸರ್ಕಾರಿ ಉದ್ಯೋಗ ನಿರ್ವಹಿಸಿದ್ದಾರೆ. ಬಹಳಷ್ಟು ಮಂದಿ ಸರ್ಕಾರಿ ಕೆಲಸ ಸುಲಭ ಮತ್ತು ಆರಾಮ ಎನ್ನುತ್ತಾರೆ. ಆದರೆ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಯಾರು ಸರ್ಕಾರಿ ಕೆಲಸ ದೇವರ ಕೆಲಸ ಎಂದುಕೊಳ್ಳೊತ್ತಾರೋ ಅವರು ದಿನಕ್ಕೆ 16 ಗಂಟೆ ದುಡಿದರೂ ಕಡಿಮೆಯೇ. ನಾನು ಬೆಳಗ್ಗೆ 6-7 ಗಂಟೆಗೆ ಮನೆ ಬಿಟ್ಟರೆ ಮರಳುತ್ತಿದ್ದುದು ರಾತ್ರಿ 9-10 ಗಂಟೆಗೆ. ಹೀಗಾಗಿ ಮನೆಯವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಕೆಲಸದಿಂದ ಗುರುತಿಸಬೇಕು ಎನ್ನುವುದೇ ನನ್ನ ಗುರಿಯಾಗಿತ್ತುʼʼ ಎಂದು ಹೇಳಿದರು.

ಸರ್ಕಾರಿ ಕೆಲಸದಿಂದ ಸಮಾಜ ಸೇವೆಯತ್ತ…

ʼʼಸಮಾಜ ಸೇವೆ ಮಾಡಬೇಕು ಎನ್ನುವುದು ಬಾಲ್ಯದಲ್ಲೇ ನನ್ನೊಳಗೆ ಮೊಳೆತ ಕನಸಾಗಿತ್ತು. ನಮ್ಮ ಮನೆ ಹಳ್ಳಿಯಲ್ಲಿತ್ತು. ಸಹಜವಾಗಿ ಅಲ್ಲಿ ಜಾತಿ ವ್ಯವಸ್ಥೆಯ ಪದ್ಧತಿ ಆಚರಣೆಯಲ್ಲಿತ್ತು. ಆದರೆ ನಮ್ಮ ಮನೆಯಲ್ಲಿನ ಪರಿಸ್ಥಿತಿ ಭಿನ್ನವಾಗಿತ್ತು. ಮನೆಯವರು ಎಲ್ಲರಿಗೂ ಸ್ವಾತಂತ್ರ್ಯ ನೀಡಿದ್ದರು. ಅಪ್ಪ-ಅಮ್ಮ ನಮ್ಮ ಓರಗೆಯ ಮಕ್ಕಳನ್ನು ನಮ್ಮಂತೆಯೇ ಪರಿಗಣಿಸಿದ್ದರು. ಹೀಗಾಗಿ ಚಿಕ್ಕಂದಿನಿಂದಲೇ ಇತರರಿಗೆ ಸಹಾಯ ಮಾಡಬೇಕು ಎನ್ನುವ ಮನೋಭಾವ ಮೂಡಿತ್ತು.
ಇದಕ್ಕೊಂದು ಉದಾಹರಣೆ ಕೊಡುತ್ತೇನೆ. ನಾನಾಗ 10ನೇ ತರಗತಿಯಲ್ಲಿದ್ದೆ. ನನ್ನ ಸ್ನೇಹಿತ ಮನೋಹರ ಅಂತಿದ್ದ. ಆತನ ಬಳಿ 10ನೇ ತರಗತಿಯ ಪರೀಕ್ಷೆಯ ಫೀಸ್‌ ಕಟ್ಟಲು ದುಡ್ಡಿರಲಿಲ್ಲ. ಇದನ್ನು ನಾನು ತಂದೆಗೆ ತಿಳಿಸಿ ಫೀಸ್‌ಗೆ ಹಣ ಕೊಡುವಂತೆ ಮನವಿ ಮಾಡಿದ್ದೆ. ಆಗ ತಂದೆ, ಶಿಕ್ಷಣದ ಉದ್ದೇಶಕ್ಕಾದರೆ ಮನೋಹರ್‌ನಂತಹ 10 ಮಂದಿಗೆ ನೆರವು ನೀಡುತ್ತೇನೆ ಎಂದು ಸಹಾಯ ಮಾಡಿದ್ದರು. ಇನ್ನೊಂದು ಪ್ರಸಂಗವನ್ನೂ ಹೇಳಬೇಕು. ಅದು ನಾನು 3ನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ಆಗ ಪಾರ್ಲೆಜಿ ಬಿಸ್ಕಟ್‌ ಬೆಲೆ 2 ರೂಪಾಯಿ. ತಂದೆ 20 ರೂ. ನೋಟು ನೀಡಿ 2 ಬಿಸ್ಕೆಟ್‌ ಪ್ಯಾಕ್‌ ತರುವಂತೆ ಹೇಳಿದ್ದರು. ಅಂಗಡಿಯವನು ನಾನು 50 ರೂ. ನೋಟು ನೀಡಿದ್ದೆಂದು ತಪ್ಪಾಗಿ ಅರ್ಥೈಸಿ 46 ರೂ. ಚಿಲ್ಲರೆ ನೀಡಿದ್ದ. ನಾನು ಖುಷಿಯಲ್ಲಿ ಮನೆಗೆ ಬಂದೆ. ತಂದೆಗೆ ವಿಷಯ ತಿಳಿಸಿದೆ. ಆಗ ಅವರು, ಇದು ತಪ್ಪು. ಇಂತಹ ಹಣವನ್ನು ನಾವು ತಗೋಬಾರದು. ವಾಪಸ್‌ ಕೊಟ್ಟು ಬಾ ಎಂದು ಅಂಗಡಿಗೆ ಕಳುಹಿಸಿದರು. ಇದು ನನ್ನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತುʼʼ.

ʼʼಇನ್ನು ಆಗೆಲ್ಲ ಯಾವುದೇ ವಸ್ತು ಕೊಂಡುಕೊಳ್ಳಬೇಕಿದ್ದರೆ‍ ತಂದೆ ನೇರವಾಗಿ ನನ್ನ ಕೈಗೆ ಹಣ ಕೊಡುತ್ತಿರಲಿಲ್ಲ. ಬೇರೆಯವರಿಗೆ ಹಣ ಕೊಟ್ಟು ತರಿಸಿಕೊಡುತ್ತಿದ್ದರು. ಹೀಗೆ ಚಿಕ್ಕಂದಿನಿಂದಲೇ ತಂದೆ ಶಿಸ್ತು ಬೆಳೆಸಿದ್ದರು. ಕೃಷಿಕರಾಗಿದ್ದ ಅವರಿಗೆ ಎಪಿಎಂಸಿಯಲ್ಲಿ ಅಂಗಡಿಯೂ ಇತ್ತು. ಕಾಶೆಪ್ಪ ಬಳತೆ ಅವರ ಹೆಸರು. ಕೊಟ್ಟ ಮಾತನ್ನು ಯಾವ ಕಾರಣಕ್ಕೂ ಅವರು ತಪ್ಪಿಸುವುದಿಲ್ಲ ಎಂದೇ ಜನರು ಮಾತನಾಡಿಕೊಳ್ಳುತ್ತಿದ್ದರು. ಅಷ್ಟು ಶಿಸ್ತುಬದ್ಧ ಜೀವನ ಅವರದ್ದಾಗಿತ್ತು. ಈಗಲೂ ಅದನ್ನು ಹಲವು ಮಂದಿ ನೆನಪಿಸಿಕೊಳ್ಳುತ್ತಾರೆ. ಜತೆಗೆ ನಾನು ತಂದೆಯ ಹಾದಿಯಲ್ಲೇ ನಡೆಯುತ್ತಿದ್ದೇನೆ. ನೀನೂ ಕೊಟ್ಟ ಮಾತನ್ನು ಎಂದಿಗೂ ತಪ್ಪುವುದಿಲ್ಲ ಎಂದು ಸ್ನೇಹಿತರು ಹೇಳುತ್ತಾರೆʼʼ ಎಂದು ಚನ್ನಬಸವಣ್ಣ ಹೆಮ್ಮೆಯಿಂದ ಹೇಳಿದರು. ʼʼತಂದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಆತ ಎಷ್ಟೇ ಕೆಳ ಹಂತದಲ್ಲಿರಲಿ ಆತನ ಜತೆಗೆ ಕುಳಿತು ಊಟ ಮಾಡುತ್ತಿದ್ದರುʼʼ ಎಂದರು.

ಸಾಧನೆಗಳ ವಿವರ

ʼʼಸಮಾಜ ಸೇವೆಯನ್ನು ಇನ್ನೊಬ್ಬರ ಕಣ್ಣಿನಲ್ಲಿ ಹೀರೋ ಆಗಬೇಕೆಂಬ ಉದ್ದೇಶದಿಂದ ಮಾಡಬಾರದು. ನಮ್ಮ ಮನಸ್ಸಿನ ಸಮಾಧಾನಕ್ಕಾಗಿ ಮಾಡಬೇಕು. ಇವತ್ತಿನ ಸಮಾಜ ಕೇವಲ ಆರ್ಥಿಕ ಭದ್ರತೆಯತ್ತಲೇ ಗಮನ ಕೇಂದ್ರೀಕರಿಸುತ್ತಿದೆ. ಧರ್ಮ, ಪ್ರೀತಿ, ನಂಬಿಕೆ ಯಾರಿಗೂ ಬೇಕಾಗಿಲ್ಲ. ಹೀಗಾಗಿ ಜನರ ಮನಸ್ಥಿತಿಯನ್ನ ಬದಲಾಯಿಸಲು ನಿಯಮಿತವಾಗಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಗುರುಗಳಾದ ಸಿದ್ದೇಶ್ವರ ಅಪ್ಪುಗೋಳ ಅವರ ಬಳಿ ಚರ್ಚೆ ನಡೆಸಿದ್ದೆ. ಅದಕ್ಕೆ ಅವರು, ʼನೀವು ಯಾವುದೇ ಕಾರ್ಯಕ್ರಮ ಮಾಡಿ. ಆದರೆ ಸಮಾಜ ಪರಿವರ್ತನೆಯಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಮಾಡಬೇಡಿ. ನಿಮ್ಮ ಮನಸ್ಸಿಗೆ ಆನಂದ ಸಿಗುವಂತಿದ್ದರೆ ಮಾಡಿʼ ಎಂದರು. ಇದು ಸತ್ಯ ಎನಿಸಿತು ನನಗೆ. ಹೀಗಾಗಿ ಸಮಾಜ ಸೇವೆಯ ಚಿಂತನೆ ಮನಸ್ಸಿನ ಒಳಗಿನಿಂದ ಬರಬೇಕುʼʼ ಎಂದು ಹೇಳಿದರು.

ಚನ್ನಬಸವಣ್ಣ ಸುಮಾರು ಹನ್ನೆರಡು ಸಾವಿರ ವಿದ್ಯಾರ್ಥಿಗಳಿರುವ ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಟ್ರಸ್ಟಿ, ಬಸವ ಕಲ್ಯಾಣದ ಗುರುದೇವ ಆಶ್ರಮದ ಟ್ರಸ್ಟಿ, ವಿಜಯಪುರರ ಜ್ಞಾನಯೋಗ ಆಶ್ರಮದ ಆಜೀವ ಸದಸ್ಯ, ಭಾಲ್ಕಿಯ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ, ಬಸವ ಕಲ್ಯಾಣ ಅನುಭವ ಮಂಟಪ ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯ, ಕಾಖಂಡಕಿಯ ಸತ್ಕಾಯಕ ಫೌಂಡೇಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ವಿವಿಧ ಕಡೆಗಳಲ್ಲಿ ಸಕ್ರಿಯರಾಗಿರುವ ಅವರು ಆರೋಗ್ಯ, ಯೋಗ ಶಿಬಿರ ಆಯೋಜಿಸುತ್ತಿದ್ದಾರೆ.

ರಾಜಕಾರಣದತ್ತ…

ಇನ್ನಷ್ಟು ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕಾರಣದತ್ತ ಹೆಜ್ಜೆ ಹಾಕಲು ಚನ್ನಬಸವಣ್ಣ ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಅವರು ಹೇಳುವುದು ಹೀಗೆ: ʼʼಪ್ರಧಾನಮಂತ್ರಿ ನರೇಂದ್ರ ಮೋದಿ ಈ ವಯಸ್ಸಿನಲ್ಲಿಯೂ ಸುಮಾರು 18 ಗಂಟೆ ಕೆಲಸ ಮಾಡುತ್ತಾರೆ. ಮುಖ್ಯವಾಗಿ ಈ ವಿಚಾರದಿಂದ ನಾನು ಪ್ರಭಾವಿತನಾಗಿದ್ದೇನೆ. ನಮ್ಮ ದೇಶವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸುವತ್ತ ಅವರು ಗಮನ ಹರಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನಿಗೆ ಯೋಜನೆ ತಲುಪಲು ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬ ನಾಯಕನೂ ತಮ್ಮ ತಮ್ಮ ಜಿಲ್ಲೆಯನ್ನು ಅಭಿವೃದ್ಧಿಪಡಿಬೇಕು ಎನ್ನುವ ಯೋಜನೆ ಹಾಕಿಕೊಳ್ಳಬೇಕು. ಆಗ ದೇಶವೇ ಉದ್ಧಾರವಾಗುತ್ತದೆ. ನಮ್ಮ ಕಾಯಕಯೋಗಿ ಬಸವಣ್ಣನ ಬಗ್ಗೆ ಸೀಮಿತ ಜನಕ್ಕೆ ಮಾತ್ರ ತಿಳಿದಿದೆ. ನನ್ನ ದೃಷ್ಟಿಕೋನದಲ್ಲಿ ಬಸವ ಕಲ್ಯಾಣದಂತಹ ಸಂಸ್ಕೃತಿಯನ್ನು ಎಲ್ಲೆಡೆಗೆ ತಲುಪಿಸುವ ಕೆಲಸ ಆಗಬೇಕು. ಜಗತ್ತಿನ ಮೊದಲ ಪಾರ್ಲಿಮೆಂಟ್‌ ಎಂದು ಕರೆಸಿಕೊಳ್ಳುವ ಇದು ಎಲ್ಲರಿಗೂ ತಿಳಿಯಬೇಕು. ಇಂತಹ ಸಾಕಷ್ಟು ಕಾರ್ಯ ನಡೆಸಬೇಕು. ಉದಾಹರಣೆಗೆ ನಮ್ಮ ಬೀದರ್‌ನಲ್ಲಿರುವ ಬಿದರಿ ಕಲೆಯನ್ನು ಎಲ್ಲೆಡೆ ಪಸರಿಸಬೇಕುʼʼ.

ಮೋದಿಯವರ ಕೈ ಬಲಪಡಿಸಬೇಕು…

ʼʼಒಂದು ದಿನವೂ ರಜೆ ಪಡೆಯದೆ ದೇಶಕ್ಕಾಗಿ ದುಡಿಯುವ ಮೋದಿ ಅವರ ಕೈ ಬಲಪಡಿಸಲು ನಾನೇನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದೇನೆ. ನನ್ನನ್ನು ಜನರೇ ರಾಜಕಾರಣಿಯಾಗಿಸುತ್ತಿದ್ದಾರೆ. ಜನರ ಸಮಸ್ಯೆಯನ್ನು ಹೊರ ಜಗತ್ತಿಗೆ ತಿಳಿಸಲು ರಾಜಕಾರಣಕ್ಕೆ ಬರಬೇಕು ಎನ್ನುತ್ತಿದ್ದಾರೆ. ಕ್ಯಾಶ್‌ಲೆಸ್‌ ಮತ್ತು ಕಾಸ್ಟ್‌ಲೆಸ್‌ ರಾಜಕಾರಣ ನನ್ನ ಉದ್ದೇಶ. ಶಿಕ್ಷಣದಿಂದಲೇ ಇದು ಸಾಧ್ಯ ಎನ್ನುವುದು ನನ್ನ ಅಭಿಮತ. ದುಡ್ಡು ಇರುವವರು ಮೆರೆಯುತ್ತಾರೆ ಎನ್ನುವ ಮನಸ್ಥಿತಿ ಬದಲಾಗಬೇಕು. ರಾಜಕಾರಣ ಕಟ್ಟೊಗಿದೆ ಎಂದು ದೂರುವ ಬದಲು ನಮ್ಮಂತಹ ಯುವ ಜನತೆ ಇದನ್ನು ಸರಿಪಡಿಸಲು ಮುಂದಾಗಬೇಕುʼʼ ಎನ್ನುವುದು ಚನ್ನಬಸವಣ್ಣ ಅವರ ದೃಢ ನಿಲುವು.

ಗುರುಗಳೇ ಸ್ಫೂರ್ತಿ…

ʼʼನಮ್ಮ ಗುರುಗಳಾದ ಚೆನ್ನಬಸವ ಪಟ್ಟದೇವರು ಬದುಕಿದ್ದು 109 ವರ್ಷ. 107 ವರ್ಷದವರೆಗೂ ಅವರು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದರು. ನಿಜಾಮನ ಕಾಲದಲ್ಲಿ ಅವರು ಹೊರಗೆ ಉರ್ದು ಬೋರ್ಡ್‌ ಹಾಕಿ ಒಳಗೆ ಕನ್ನಡ ಕಲಿಸುತ್ತಿದ್ದರು. ಅವರ ಕ್ರಾಂತಿಯ ಕಾಯಕವೇ ನನಗೆ ಸ್ಫೂರ್ತಿ. ಹಿಂದೆ ನಾನು ಸರ್ಕಾರಿ ಉದ್ಯೋಗ ತೊರೆಯುವಾಗ ಕೆಲವರು ಆಡಿಕೊಂಡು ನಕ್ಕಿದ್ದರು. ಈಗ ಅಂತಹವರೇ ಬೆನ್ನು ತಟ್ಟುತ್ತಿದ್ದಾರೆ. ಸಮಾಜ ಸಾಕಷ್ಟು ಟೀಕೆ ಮಾಡುತ್ತದೆ. ಅದನ್ನು ಮೀರಿ ಮುಂದೆ ಸಾಗಬೇಕು. ಜೀವನವನ್ನು ದುಡ್ಡಿನಲ್ಲಿ ಅಳೆಯಬಾರದು. ಇದ್ದುದರಲ್ಲೇ ಸಮಾಧಾನ ಹೊಂದಬೇಕುʼʼ ಎಂದು ಚನ್ನಬಸವಣ್ಣ ಬಳತೆ ಮನದಾಳದ ಮಾತನ್ನು ಹಂಚಿಕೊಂಡರು.

ಇದನ್ನೂ ಓದಿ: 20 ಯುವ ನಾಯಕರಿಗೆ ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್; ಡಿಕೆ ಶಿವಕುಮಾರ್‌, ಬಿವೈ ವಿಜಯೇಂದ್ರರಿಂದ ನಾಯಕತ್ವ ಪಾಠ

Continue Reading

ಬೆಂಗಳೂರು ಗ್ರಾಮಾಂತರ

Road Accident : ಬೈಕ್‌-ಕಾರು ಡಿಕ್ಕಿ; ಹಿಂಬದಿ ಕುಳಿತಿದ್ದ ಮಹಿಳೆ ಸಾವು

Road Accident : ಬೈಕ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟಿದ್ದಾರೆ.

VISTARANEWS.COM


on

By

Road Accident in Anekal
Koo

ಆನೇಕಲ್: ರಾಯಲ್ ಇನ್ಫೀಲ್ಡ್ ಬೈಕ್ ಮತ್ತು ಕಾರಿನ ನಡುವೆ ಅಪಘಾತ (road accident) ನಡೆದಿದೆ. ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ವೀರಸಂದ್ರ ಬಳಿ ಘಟನೆ ನಡೆದಿದೆ.

ಹೊಸೂರು ಮೂಲದ ಹಿಂದೂಮತಿ ಮೃತ ದುರ್ದೈವಿ. ಹಿಂದೂಮತಿ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಹೊಸೂರಿನಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬೈಕ್‌ನಲ್ಲಿ ಬರುವಾಗ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಹಿಂದೂಮತಿ ತಲೆಗೆ ಗಂಭೀರ ಗಾಯಗೊಂಡಿದ್ದಾರೆ.

ಕೂಡಲೇ ಸ್ಥಳೀಯರು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಹಾಗೂ ಬೈಕ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ

ಸಾವಿನ ರಹದಾರಿಯಾದ ರಾಷ್ಟ್ರೀಯ ಹೆದ್ದಾರಿ

ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯು ಸ್ಥಳೀಯರ ಪಾಲಿಗೆ ಸಾವಿನ ರಹದಾರಿಯಾಗಿದೆ. ನಿತ್ಯ ಅಪಘಾತಗಳಿಂದ ಬೇಸತ್ತಿದ್ದಾರೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಬಳಿ ಅಂಡರ್ ಪಾಸ್ ನಿರ್ಮಿಸಲು ಒತ್ತಾಯಿಸಿದ್ದಾರೆ. ಶಾಲಾ-ಕಾಲೇಜು ಮಕ್ಕಳು, ಬೈಕ್ ಸವಾರರು ಹೆದ್ದಾರಿ ಕ್ರಾಸ್ ಮಾಡಲು ಪರದಾಡುವಂತಾಗಿದೆ.

ವಾರಾಂತ್ಯದಲ್ಲಿ ಈಶಾ ಫೌಂಡೇಶನ್, ನಂದಿಬೆಟ್ಟಕ್ಕೆ ಹೆಚ್ಚು ವಾಹನಗಳು ಸಂಚರಿಸುತ್ತವೆ. ಕಳೆದ ಒಂದು ವರ್ಷದಲ್ಲಿ 76 ಅಪಘಾತಗಳಾಗಿದ್ದು, 36 ಜನ ಜೀವ ಕಳೆದುಕೊಂಡಿದ್ದಾರೆ. ವೆಂಕಟಗಿರಿ ಕೋಟೆ, ಮುದುಗುರ್ಕಿ,ಬುಳ್ಳಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಗ್ರಾಮಸ್ಥರ ಓಡಾಟಕ್ಕೆ ಸಂಕಷ್ಟ ಎದುರಾಗಿದೆ. ಅಂಡರ್ ಪಾಸ್ ಅಥವಾ ಸ್ಕೈ ವಾಕ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
G Parameshwar Monkey Menace
ತುಮಕೂರು5 mins ago

G Parameshwar : ಗೃಹ ಮಂತ್ರಿ ಮನೆಗೇ ನುಗ್ಗಿ ಫ್ರಿಜ್‌ನಿಂದ ಹಾಲು ಕದ್ದ ಕಳ್ಳ! Don’t arrest ಅಂದಿದ್ಯಾಕೆ ಸಚಿವರು!

Job fair at district level every year Complementary training
ಉದ್ಯೋಗ28 mins ago

Job Fair: ಇನ್ನು ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲೂ ಉದ್ಯೋಗ ಮೇಳ; ಪೂರಕ ತರಬೇತಿ

channabasava
ಕರ್ನಾಟಕ30 mins ago

Emerging Leader: ದೇಶಕ್ಕಾಗಿ 18 ಗಂಟೆ ದುಡಿಯುವ ಮೋದಿಯವರ ಕೈ ಬಲಪಡಿಸಲು ರಾಜಕಾರಣಕ್ಕೆ: ಚನ್ನಬಸವಣ್ಣ ಬಳತೆ ಮನದ ಮಾತು

Road Accident in Anekal
ಬೆಂಗಳೂರು ಗ್ರಾಮಾಂತರ36 mins ago

Road Accident : ಬೈಕ್‌-ಕಾರು ಡಿಕ್ಕಿ; ಹಿಂಬದಿ ಕುಳಿತಿದ್ದ ಮಹಿಳೆ ಸಾವು

PM Narendra Modi inaugurates 2000 railway projects worth RS 41,000 crore
ಪ್ರಮುಖ ಸುದ್ದಿ43 mins ago

PM Narendra Modi: 2000 ರೈಲ್ವೆ ಪ್ರಾಜೆಕ್ಟ್‌ಗಳಿಗೆ ಪಿಎಂ ಚಾಲನೆ; ಜೂನ್‌ನಿಂದ 3ನೇ ಅವಧಿಗೆ ಸರ್ಕಾರ ಎಂದ ಮೋದಿ

Kannada Name Board Deadline
ಬೆಂಗಳೂರು47 mins ago

Kannada Name Board : ಕನ್ನಡ ನಾಮಫಲಕಕ್ಕೆ ಫೆ. 28 ಕೊನೇ ದಿನ; ಇನ್ನೂ ಬಳಸದವರಿಗೆ ನೋಟಿಸ್‌

CM Siddaramaiah Inauguration of job fair and announces setting up of new GTTC
ಉದ್ಯೋಗ49 mins ago

Job Fair: ಚಾರಿತ್ರಿಕ ಉದ್ಯೋಗ ಮೇಳ ಉದ್ಘಾಟನೆ; ಹೊಸದಾಗಿ GTTC ಸ್ಥಾಪನೆ: ಸಿಎಂ ಮಹತ್ವದ ಘೋಷಣೆ

cricket
ಕ್ರಿಕೆಟ್54 mins ago

IND Vs ENG: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಗೆಲುವು; ಭಾರತಕ್ಕೆ ಸರಣಿ

Man murders old woman to pay off debts
ಬೆಂಗಳೂರು55 mins ago

Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ

Shah Rukh Khan's Adorable Reaction To Allu Arjun's Son
ಬಾಲಿವುಡ್58 mins ago

Shah Rukh Khan: ಅಲ್ಲು ಅರ್ಜುನ್ ಮಗನನ್ನು ಹಾಡಿ ಹೊಗಳಿದ ಶಾರುಖ್‌! ಅದ್ಯಾಕೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Crowd mistakes Arabic words as Quran Verses on the kurta and Pak Women mobbed
ವಿದೇಶ1 hour ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ10 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

ಟ್ರೆಂಡಿಂಗ್‌