ಕರ್ನಾಟಕ
Power Point with HPK : ಕೆಜಿ ಹಳ್ಳಿ ಗಲಭೆ ಕೇಸ್ ವಾಪಸ್ ಹಿಂದೆ ಸಿಎಂ ಸಿದ್ದರಾಮಯ್ಯ: ಆರಗ ಜ್ಞಾನೇಂದ್ರ
Power Point with HPK : ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವ ಹುನ್ನಾರ ನಡೆಯುತ್ತಿದ್ದು, ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎಂದು ದೂರಿದ್ದಾರೆ.
ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ (KG Halli and DJ Halli riot cases) ಆರೋಪಿಗಳನ್ನು ಬಿಡುಗಡೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದು ಈಗ ಶಾಸಕ ತನ್ವೀರ್ ಸೇಠ್ (MLA Tanveer Sait) ಬರೆದಿರುವ ಪತ್ರವು ಈ ಸರ್ಕಾರದ ಪ್ರೀ ಪ್ಲ್ಯಾನ್ ಆಗಿದೆ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Former Home Minister Araga Jnanendra) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಗುಡುಗಿದ್ದಾರೆ.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈ ಪ್ರಕರಣದಲ್ಲಿ ಬಂಧಿತರಾದವರು “ಅಮಾಯಕರು” ಎಂದು ಕೇವಲ ಶಾಸಕ ತನ್ವೀರ್ ಸೇಠ್ ಪತ್ರ ಬರೆಯಲಿಲ್ಲ. ಗೃಹ ಸಚಿವ ಪರಮೇಶ್ವರ್ ಅದಕ್ಕೆ ಕ್ರಮ ವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಲಿಲ್ಲ. ನೀನು ಪತ್ರ ಬರಿ ಎಂದು ತನ್ವೀರ್ ಸೇಠ್ ಅವರಿಗೆ ಹೇಳಿಸಿ, ಗೃಹ ಸಚಿವರಿಂದ ಕ್ರಮವಹಿಸಲು ಆದೇಶ ನೀಡಿಸಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರದ ಭಾಗವಾಗಿದೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ: Karnataka Politics : ಸಚಿವರ ವಿರುದ್ಧದ ಪತ್ರಕ್ಕೆ ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ: ಬಿ.ಆರ್. ಪಾಟೀಲ್
ಇದು ಬಹಳ ದುರದೃಷ್ಟಕರ ಸಂಗತಿಯಾಗಿದೆ. ತಮ್ಮ ವೋಟ್ ಬ್ಯಾಂಕ್ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ನಾವು ಎನ್‌ಐಎಗೆ ವಹಿಸಿದ್ದೇವೆ. ಪ್ರತಿಯೊಬ್ಬರ ಮೇಲೆ ಚಾರ್ಜ್‌ಶೀಟ್ ಆಗಿದೆ. ಎನ್‌ಐಎ ಈ ಪ್ರಕರಣವನ್ನು ಈಗ ಮುನ್ನಡೆಸುತ್ತಿದೆ. ನನಗೆ ಗೊತ್ತಿರುವಂತೆ ಈ ಪ್ರಕರಣವನ್ನು ವಾಪಸ್ ಪಡೆಯಲು ಬರುವುದಿಲ್ಲ. ಆದರೆ, ಈ ಪ್ರಕರಣದಲ್ಲಿರುವವರನ್ನು ಇವರು ಯಾವುದಾದರೂ ಒಂದು ಮಾರ್ಗದಲ್ಲಿ ವಾಪಸ್ ಕರೆತರುವ ಸಾಧ್ಯತೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಸರ್ಕಾರದ ಈ ಕ್ರಮಕ್ಕೆ ಏನರ್ಥ?
ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣವು ಮೀಡಿಯಾದಲ್ಲಿ ಬಿತ್ತರವಾಗಿದೆ. ಅಂದು ಅರ್ಧ ಬೆಂಗಳೂರು ಹೊತ್ತಿ ಉರಿಯಿತು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು. ಕಾಂಗ್ರೆಸ್‌ನ ಒಬ್ಬ ದಲಿತ ಶಾಸಕನ ಮನೆಗೆ ಬೆಂಕಿ ಇಡಲಾಯಿತು. ಅವರು ಅಂದು ಯಾವ ರೀತಿ ತಪ್ಪಿಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಅಂದು ಉಟ್ಟ ಬಟ್ಟೆಯಲ್ಲಿ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದರು. ಇಂಥ ಒಂದು ಭಯಾನಕವಾದ ಪರಿಸ್ಥಿತಿಯನ್ನು ನೋಡಿಯೂ ಸಹ ಶಾಸಕ ತನ್ವೀರ್ ಸೇಠ್ ಅವರು ಬಂಧಿತರಾದವರು ಅಮಾಯಕರು ಎಂದು ಪತ್ರ ಬರೆಯುತ್ತಾರೆ. ಅದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡುತ್ತಾರೆ ಎಂದರೆ ಏನರ್ಥ? ಮಂತ್ರಿಯೊಬ್ಬರು ಬರೆಯುವ ಒಂದೊಂದು ಶಬ್ದಕ್ಕೆ ಅರ್ಥ ಇರುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಈ ಪ್ರಕರಣದಲ್ಲಿ ಒಬ್ಬರೇ ಒಬ್ಬ ಅಮಾಯಕರಿದ್ದರೆ ಜನರು ಹೇಳಲಿ. ಅಂದು ನಡೆದ ವಿಡಿಯೊ ನೋಡಿದರೇ ಎಲ್ಲರಿಗೂ ತಿಳಿಯುತ್ತದೆ. ಅಂದು ನಡೆದ ಘಟನಾವಳಿಯ ವಿಡಿಯೊ ಚಿತ್ರೀಕರಣವನ್ನು ಇಟ್ಟುಕೊಂಡು ಅದರಲ್ಲಿ ಕಂಡುಬಂದವರನ್ನು ಕರೆಸಿ ಅವರ ಬಳಿಯೇ ಕೇಳಿದ್ದೇವೆ. ಅಲ್ಲಿರುವುದು, ಕಲ್ಲು ಹೊಡೆದಿರುವುದು ತಾವೇ ಎಂದು ಆರೋಪಿಗಳು ಬಾಯಿ ಬಿಟ್ಟ ಬಳಿಕವೇ ನಾವು ಅಂಥವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಆದರೆ, ಈ ಸರ್ಕಾರ ಬಂದ ಮೇಲೆ ಅಪರಾಧ ಕೃತ್ಯ ಮಾಡಿದವರಿಗೆ ಬಿಡುಗಡೆ ಮಾಡಲಾಗುತ್ತದೆ ಎಂಬ “ಗ್ಯಾರಂಟಿ” ಸಿಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ದಲಿತ ಶಾಸಕನ ಜೀವಂತ ಸಮಾಧಿಗೆ ನಡೆದಿತ್ತು ಪ್ಲ್ಯಾನ್!
ಈ ಘಟನೆಯನ್ನು ಸಂಘಟಿತವಾಗಿ ಮಾಡಿದ್ದು, ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಹಾಗೂ ಕುಟುಂಬವನ್ನು ಜೀವಂತವಾಗಿ ಸುಟ್ಟುಹಾಕುವ ಹುನ್ನಾರ ಇತ್ತು. ಸುದೈವ ವಶಾತ್ ಪೊಲೀಸರು ಅವರ ಮನೆಗೆ ನುಗ್ಗಿ ರಕ್ಷಣೆ ಮಾಡಿದರು. ಇಲ್ಲದಿದ್ದರೆ ಈ ಪ್ರಕರಣ ನಿಯಂತ್ರಣಕ್ಕೆ ತಕ್ಷಣ ಬರುತ್ತಿರಲಿಲ್ಲ. ಗಲಭೆಕೋರರು ಪೊಲೀಸರು ಬಾರದಂತೆ ತಡೆಯೊಡ್ಡಿದ್ದರು. ಈ ಎಲ್ಲವೂ ಇದಕ್ಕೆ ಪುಷ್ಟಿ ನೀಡುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇಂಥ ಗಲಭೆಗಳು ಪ್ರತಿ ಊರಿನಲ್ಲಿಯೂ ನಡೆಯಬಹುದು
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವು ಒಂದು ವ್ಯವಸ್ಥಿತ, ಸಂಘಟಿತ ಪಿತೂರಿಯಾಗಿದೆ. ಈ ಕೃತ್ಯಕ್ಕೆ ಮುಂಚೆ ಅವರು ದೂರವಾಣಿ ಸಂಭಾಷಣೆಯಲ್ಲಿ ತೊಡಗಿರುವುದರ ಬಗ್ಗೆ ನ್ಯಾಯಾಲಯದಲ್ಲಿಯೂ ದಾಖಲೆ ಸಲ್ಲಿಕೆಯಾಗಿದೆ. ತಮ್ಮ ವಿರುದ್ಧ ಹೆಚ್ಚುಕಡಿಮೆಯಾದರೆ ನಾವು ಏನು ಎಂಬುದನ್ನು ತೋರಿಸಬೇಕು ಎಂದು ನಡೆದಿದ್ದ ಕೃತ್ಯ ಅದಾಗಿತ್ತು. ಹಾಗಾಗಿ ಮುಂದೆ ಈ ರೀತಿ ಆಗಬಾರದು ಎಂಬ ಕಾರಣಕ್ಕಾಗಿ ಇಂಥವರನ್ನು ಎಷ್ಟು ಮಟ್ಟ ಹಾಕಬೇಕೋ ಆ ಕೆಲಸವನ್ನು ನಾವು ಮಾಡಿದ್ದೇವೆ. ಆದರೆ, ಈಗ ಈ ಸರ್ಕಾರ ಮಾಡುತ್ತಿರುವ ರೀತಿಯನ್ನು ನೋಡಿದರೆ, ಇಂಥ ಗಲಭೆಗಳು ಪ್ರತಿ ಊರಿನಲ್ಲಿಯೂ ನಡೆಯಬಹುದು ಎಂದು ಆರಗ ಹೇಳಿದರು.
ಹರಿಪ್ರಕಾಶ್ ಕೋಣೆಮನೆ ಅವರೊಂದಿಗೆ ಆರಗ ಜ್ಞಾನೇಂದ್ರ ಅವರ ನೇರ ಮಾತು; ವಿಡಿಯೊ ಇಲ್ಲಿದೆ
ನಾವು ಕೈಬಿಟ್ಟಿದ್ದೇ ಬೇರೆ ಪ್ರಕರಣಗಳು
ಎಲ್ಲ ಸರ್ಕಾರಗಳೂ ಪ್ರಕರಣವನ್ನು ಕೈಬಿಡುತ್ತವೆ. ಆದರೆ, ಕೈಬಿಟ್ಟಿರುವ ಪ್ರಕರಣ ಯಾವುದು ಎಂಬುದನ್ನು ನೋಡಬೇಕು. ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರ ಅಧಿಕಾರಕ್ಕೆ ಮೊದಲ ಕ್ಯಾಬಿನೆಟ್‌ನಲ್ಲಿ ಪಿಎಫ್‌ಐ ಸಂಘಟನೆಯವರ ಮೇಲಿದ್ದ ಕೇಸ್ ಅನ್ನು ವಾಪಸ್ ಪಡೆಯಿತು. ಈಗ ಹೀಗೆ ಮಾಡುತ್ತಿದೆ. ಆದರೆ, ನಮ್ಮ ಸರ್ಕಾರ ಇದ್ದಾಗ ಕನ್ನಡ ಪರ ಸಂಘಟನೆಯವರ ಮೇಲಿನ ಕೇಸ್, ಗಣಪತಿ ಉತ್ಸವದಲ್ಲಿ ಡಿಜೆ ಹಾಕಿದವರ ಮೇಲೆ ಹಾಕಿದಂತಹ ಕೇಸ್‌ಗಳನ್ನು ವಾಪಸ್ ಪಡೆದಿದ್ದೇವೆ. ಅದು ಬಿಟ್ಟು ಹೀಗೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನು, ಸಾರ್ವಜನಿಕರ ಆಸ್ತಿ ಪಾಸ್ತಿಯನ್ನು ಹಾನಿ ಮಾಡಿದವರ ಮೇಲಿನ ಕೇಸ್ ಅನ್ನು ನಾವು ವಾಪಸ್ ಪಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಕೇಸಲ್ಲಿ ಒಬ್ಬನನ್ನು ಕೈಬಿಟ್ಟರೂ ಬೇರೆಯ ಸಂದೇಶವೇ ಹೋಗುತ್ತದೆ. ಒಂದು ಮನೆಗೆ, ಪೊಲೀಸ್ ಠಾಣೆಗೆ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದು ಅಪರಾಧಿ ಕೃತ್ಯ ಮಾಡುವವರಿಗೆ ಬೇರೆ ಸಂದೇಶವನ್ನು ಕೊಟ್ಟಂತೆ ಆಗುತ್ತದೆ. ಈ ಸಂಬಂಧ ಬಿಜೆಪಿ ಈಗಾಗಲೇ ಪ್ರತಿಭಟನೆ ನಡೆಸಿದೆ. ಮತ್ತೂ ಹೋರಾಟ ಮುಂದುವರಿಯಲಿದೆ. ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಘಟನೆ ನಡೆದು ಮೂರ್ನಾಲ್ಕು ದಿನವಾದರೂ ಯಾವುದೇ ಒಬ್ಬ ಕಾಂಗ್ರೆಸ್ ನಾಯಕರು ಹೋಗಿಲ್ಲ. ಇದರ ಅರ್ಥ ಏನು? ಇಷ್ಟೆಲ್ಲ ಘಟನೆ ನಡೆದ ಮೇಲೆಯೂ ಮುಸ್ಲಿಂ ಸಮುದಾಯದ ಓಲೈಕೆ, ತುಷ್ಟೀಕರಣಕ್ಕೆ ಇವರು ಮುಂದಾಗಿರುವುದು ಎಷ್ಟು ಸರಿ? ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು.
ಪೊಲೀಸ್ ಇಂಟಲಿಜೆನ್ಸ್‌ಗೆ ವಿಶೇಷ ತರಬೇತಿ ಬೇಕು!
ಎಲ್ಲಿಯೂ ಸಲ್ಲದವನು ಇಂಟೆಲಿಜೆನ್ಸಿಯಲ್ಲಿರುತ್ತಾನೆ. ಟ್ರಾನ್ಸ್‌ಫರ್ ಮಾಡಿಸಿಕೊಳ್ಳಲು ಶಕ್ತಿ ಇಲ್ಲದವರು ಅನೇಕರು ಅಲ್ಲಿಗೆ ಹೋಗುತ್ತಾರೆ. ಎಲ್ಲರೂ ಹಾಗೇ ಎಂದು ನಾನು ಹೇಳುವುದಿಲ್ಲ. ಕೆಲವರು ಇಲ್ಲಿ ಸಮರ್ಥರೂ ಇರುತ್ತಾರೆ. ಆದರೆ, ಅವರು ಎಷ್ಟರಮಟ್ಟಿಗೆ ಮಾಹಿತಿಯನ್ನು ಸಂಗ್ರಹಿಸಬಹುದೋ ಅಷ್ಟನ್ನು ಸಂಗ್ರಹ ಮಾಡುತ್ತಾರೆ. ಹೀಗಾಗಿ ಇಲ್ಲಿ ಸಂಘಟನಾ ಪ್ರಯತ್ನ ಬೇಕು. ಈ ವ್ಯವಸ್ಥೆಯನ್ನು ಪುನರ್ ಬಲಪಡಿಸುವ ಕೆಲಸ ಮಾಡಬೇಕಿದೆ. ಇಲ್ಲಿ ದುಡಿಯುವ ಅಪೇಕ್ಷೆ ಇದ್ದವನನ್ನು ಅಲ್ಲಿಗೆ ಹಾಕಬೇಕು ಎಂಬುವವರನ್ನು ಅಲ್ಲಿಗೆ ನೇಮಕ ಮಾಡಬೇಕು. ಕೆಲವರಿಗೆ ಇಂಟೆಲಿಜನ್ಸ್ ಪೊಲೀಸ್ ನೌಕರಿಯೇ ಅಲ್ಲ, ಪೊಲೀಸ್ ಸಮವಸ್ತ್ರ ಹಾಕಿದರೆ ಮಾತ್ರವೇ ಅದು ಉದ್ಯೋಗ ಎಂಬ ಭಾವನೆ ಇದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇದನ್ನೂ ಓದಿ: Pradeep Eshwar : ಆಟೋ ಡ್ರೈವರ್ ಆದ ಪ್ರದೀಪ್ ಈಶ್ವರ್; ಪ್ರತಿ ವರ್ಷ 5000 ಧನಸಹಾಯ!
ಪೊಲೀಸ್ ಇಂಟಲಿಜೆನ್ಸ್‌ಗೆ ಪ್ರತ್ಯೇಕವಾದ ಘಟಕವನ್ನು ಮಾಡಬೇಕು. ಅವರಿಗೆ ವಿಶೇಷವಾದ ತರಬೇತಿ ಕೊಡಬೇಕಿದೆ. ಉದಾಹರಣೆಗೆ ಕೇಂದ್ರ ಸರ್ಕಾರದಲ್ಲಿನ ಎನ್‌ಐಎ ಸೇರಿದಂತೆ ಇತರ ಘಟಕಗಳಿಗೆ ನೀಡುವ ವಿಶೇಷ ತರಬೇತಿಯಂತೆ ಇವರಿಗೂ ಪರಿಣಿತಿ ಸಾಧಿಸಲು ಟ್ರೈನಿಂಗ್ ಕೊಡಬೇಕಿದೆ. ಆಗ ಕೆಜಿ ಹಳ್ಳಿ, ಡಿಜೆ ಹಳ್ಳಿಯಂತಹ ಘಟನೆಗಳನ್ನು ತಪ್ಪಿಸಬಹುದು ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಕರ್ನಾಟಕ
Cauvery Water Dispute: ಜನರ ಸಂಕಷ್ಟದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ: ಬಿ.ವೈ.ವಿಜಯೇಂದ್ರ
Cauvery Water Dispute: ರಾಜ್ಯದ ಸ್ಥಿತಿ ಬಗ್ಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು: ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು. ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) (Cauvery Water Dispute) ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ವೈ.ವಿಜಯೇಂದ್ರ ಅವರು, ‘ಗಾಯದ ಮೇಲೆ ಬರೆ’ ಎಳೆದಂತೆ ಸಿಡಬ್ಲ್ಯುಆರ್‌ಸಿಯಿಂದ ಮತ್ತೆ 3000 ಕ್ಯೂಸೆಕ್ ನೀರು ಬಿಡುವ ಆದೇಶ ಪಡೆದು, ಸರ್ಕಾರವು ಕರ್ನಾಟಕದ ಪಾಲಿಗೆ ಕರಾಳ ಶಾಸನ ಬರೆಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕರುನಾಡು ಉದ್ವಿಗ್ನ ಗೊಂಡಿದೆ, ಜನರ ಆಕ್ರೋಶ ಮುಗಿಲು ಮುಟ್ಟಿದೆ, ರೈತ ಬಂಧುಗಳು ಕಂಗಾಲಾಗಿದ್ದಾರೆ. ಇಷ್ಟಾದರೂ ಕಾವೇರಿ ಉಳಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಥವಾಗಿ ಹೋರಾಡಲು ಕನಿಷ್ಠ ಕಾಳಜಿಯೂ ತೋರದೇ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಉಡಾಫೆಯ ಮಾತನಾಡಿಕೊಂಡು ಕನ್ನಡಿಗರ ಕತ್ತು ಹಿಸುಕುತ್ತಿದ್ದಾರೆ. ಕಾವೇರಿ ಪರ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬದ್ಧತೆ, ಇಚ್ಛಾಶಕ್ತಿ ಇಲ್ಲದ ಸರ್ಕಾರವೊಂದು ಜನರ ಸಂಕಷ್ಟದೊಂದಿಗೆ ಹೇಗೆ ಚೆಲ್ಲಾಟವಾಡಬಹುದು ಎಂಬುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಉದಾಹರಣೆಯಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ, ಕುಡಿಯುವ ನೀರಿಗೂ ಸಂಚಕಾರ ಬಂದೊದಗಿರುವ ಕಠೋರ ಪರಿಸ್ಥಿತಿಯನ್ನು ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಂದೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ…
— Vijayendra Yediyurappa (@BYVijayendra) September 26, 2023
ಇದನ್ನೂ ಓದಿ | Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್‌ವೈ
CWRCಯಿಂದ ಮತ್ತೆ ಹೊಡೆತ, ಇನ್ನೂ 18 ದಿನ 3000 ಕ್ಯೂಸೆಕ್ ನೀರು ಬಿಡಲು ಆದೇಶ
ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.ಈವರೆಗೆ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದ ಸಮಿತಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಕಳೆದ ಸೆಪ್ಟೆಂಬರ್ 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳವರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಅದನ್ನು ಅನುಮೋದಿಸಿತ್ತು. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಈ ಆದೇಶವನ್ನು ಎತ್ತಿಹಿಡಿಯಲಾಗಿತ್ತು.
ಇದೀಗ ಮಂಗಳವಾರ (ಸೆ. 26) ನಡೆದ ಸಭೆಯಲ್ಲಿ ಕರ್ನಾಟಕದ ಮಂಡಿಸಿದ ವಾದವನ್ನು ಪರಿಗಣಿಸಿದ ಸಮಿತಿ ನೀರೇ ಬಿಡುವುದಿಲ್ಲ ಎಂಬ ಮನವಿಯನ್ನು ಒಪ್ಪಲಿಲ್ಲ. ಐದು ಸಾವಿರ ಕ್ಯೂಸೆಕ್ ಬದಲಿಗೆ ಮೂರು ಸಾವಿರ ಕ್ಯೂಸೆಕ್‌ಗೆ ಇಳಿಸಿ ಎಂದು ಸೂಚನೆ ನೀಡಿದೆ.
ಸೆ. 13ರಂದು ಹದಿನೈದು ದಿನಗಳವರೆಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ನೀಡಿದ ಆದೇಶ ಊರ್ಜಿತದಲ್ಲಿರುವುದರಿಂದ ಸೆ. 28ರಿಂದ ಹೊಸ ಆದೇಶ ಜಾರಿಗೆ ಬರಲಿದೆ. ಆಗ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಈ ಆದೇಶವು ಅಕ್ಟೋಬರ್ 15ರವರೆಗೆ ಜಾರಿಯಲ್ಲಿ ಇರಲಿದ್ದು, ಅಲ್ಲಿವರೆಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ.
CWRC ಯ ಮುಂದೆ ವಾಸ್ತವ ಸ್ಥಿತಿ ಸಲ್ಲಿಕೆ ಮಾಡಿದ ಕರ್ನಾಟಕ
ಇದಕ್ಕಿಂತ ಮೊದಲು ಕರ್ನಾಟಕವು ತನ್ನ ನೀರಿನ ಪರಿಸ್ಥಿತಿಯ ವಿವರಣೆಯನ್ನು ನೀಡಿತು.
25.09.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟೂ ಒಳಹರಿವಿನ ಕೊರತೆ 53.04% ಆಗಿದೆ. ಕರ್ನಾಟಕ ಸರ್ಕಾರವು ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಈ ಅಂಶವು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು ಕರ್ನಾಟಕ ಮನವಿ ಮಾಡಿತು.
ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಇದನ್ನೂ ಓದಿ | Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್
ಇದಕ್ಕೆ ಪ್ರತಿಯಾಗಿ ತಮಿಳುನಾಡು ನಿಯಮ ಪ್ರಕಾರ 12500 ಕ್ಯೂಸೆಕ್ ನೀರು ಪ್ರತಿದಿನವೂ ಬಿಡುಗಡೆ ಮಾಡಬೇಕು ಎಂಬ ವಾದವನ್ನೇ ಮುಂದೆ ಮಾಡಿತು.
ಅಂತಿಮವಾಗಿ ನಿಯಂತ್ರಣ ಸಮಿತಿಯು ನೀರಿನ ಪ್ರಮಾಣವನ್ನು ಇಳಿಸಿ ಆದೇಶ ಹೊರಡಿಸಿತು.
ಇದೀಗ ಕರ್ನಾಟಕವು ಈ ಅದೇಶವನ್ನು ಮತ್ತೆ ಕಾವೇರಿ ನದಿ ನೀರು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಅವಕಾಶವಿದೆ.
ಕಲೆ/ಸಾಹಿತ್ಯ
Yakshagana Show: ಅ.7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ
Yakshagana Show: ಮದರ್ ಫೌಂಡೇಶನ್ ಅರ್ಪಿಸುವ ಯಕ್ಷನೂಪುರ ʼರಾಜಾ ತ್ರೀʼ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಬೆಂಗಳೂರು: ರಾಜ್ ಭಟ್ ಜಕ್ಕೂರು ಅವರ ಸಂಯೋಜನೆಯಲ್ಲಿ ಜಲವಳ್ಳಿ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅಕ್ಟೋಬರ್ 7ರಂದು ರಾತ್ರಿ 9.30ಕ್ಕೆ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷನೂಪುರ ʼರಾಜಾ ತ್ರೀʼ ಪ್ರದರ್ಶನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ, ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನ ಹಾಗೂ ಅಜ್ಞಾನ ಕವಿ ವಿರಚಿತ ʼರಾಜಾ ಉರಗಕೇತನʼ ಯಕ್ಷಗಾನ ಪ್ರಸಂಗ (Yakshagana Show) ಪ್ರದರ್ಶನವಾಗಲಿದೆ.
ಮದರ್ ಫೌಂಡೇಶನ್ ಅರ್ಪಿಸುವ ಕಾರ್ಯಕ್ರಮವನ್ನು ಸ್ವರ್ಣರೇಖಾ ಇಂಟಿರಿಯರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್ ಚಾನೆಲ್ ಮಾಧ್ಯಮ ಸಹಯೋಗ ನೀಡಿದೆ.
ಕೊಳಗಿ, ಜನ್ಸಾಲೆ, ಮೂಡುಬೆಳ್ಳೆ, ಬ್ರಹ್ಮೂರು ಅವರ ಗಾನ ರಸಧಾರೆ, ಅನಿರುದ್ಧ್, ಶಶಾಂಕ್, ಶ್ರೀನಿವಾಸ್ ಪ್ರಭು, ಸುಜನ್ ಹಾಗೂ ಅರುಣ ಅವರ ಚಂಡೆ ಮದ್ದಳೆಯ ಜೇಂಕಾರದಲ್ಲಿ ʼರಾಜಾ ತ್ರೀʼ ಪ್ರದರ್ಶನ ಮೂಡಿಬರಲಿದೆ.
ರತ್ನಾಪುರದ ರಾಮ ವಿರಚಿತ ʼರಾಜಾ ಮಯೂರಕೇತನʼ ಪ್ರಸಂಗದಲ್ಲಿ ತಾಮ್ರಧ್ವಜನಾಗಿ ವಿದ್ಯಾಧರ್ ಜಲವಳ್ಳಿ, ಮಯೂರಧ್ವಜನಾಗಿ ಮಂಕಿ ಈಶ್ವರ್ ನಾಯ್ಕ, ಕೃಷ್ಣನಾಗಿ ನಿಲ್ಕೋಡು ಶಂಕರ ಹೆಗಡೆ, ಅರ್ಜುನನಾಗಿ ಹೆನ್ನಾಬೈಲ್ ವಿಶ್ವನಾಥ್, ಹಾಸ್ಯ ಪಾತ್ರಗಳಲ್ಲಿ ರಮೇಶ್ ಭಂಡಾರಿ, ಸಿತಾರಾಮ ಕುಮಾರ್ ಅಭಿನಯಿಸಲಿದ್ದಾರೆ.
ಇದನ್ನೂ ಓದಿ | ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!
ಗುಂಡೂ ಸೀತಾರಾಮಯ್ಯ ವಿರಚಿತ ʼರಾಜಾ ಮಥುರಾನಿಕೇತನʼ ಪ್ರದರ್ಶನದಲ್ಲಿ ಕಂಸನಾಗಿ ತೀರ್ಥಹಳ್ಳಿ ಗೋಪಾಲಾಚಾರ್, ಉಗ್ರಸೇನಾ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್, ರುಚಿಮತಿಯಾಗಿ ಸಂತೋಷ್ ಹಿಲಿಯಾಣ, ದೂತನಾಗಿ ಸೀತಾರಾಮ್ ಕುಮಾರ್, ಬ್ರಾಹ್ಮಣನಾಗಿ ಶ್ರೀಧರ್ ಕಾಸರಕೋಡು, ಮಾಗಧ ಆಗಿ ನಾಗರಾಜ ಭಂಡಾರಿ, ಆಸ್ತೀಯಾಗಿ ಉದಯ ಕಡಬಾಳ್, ಪಾಸ್ತಿಯಾಗಿ ಹರೀಶ್ ಜಪ್ತಿ, ದೃಮಿಳ ಆಗಿ ಕಾರ್ತಿಕ್ ಕಣ್ಣಿ ಬಣ್ಣ ಹಚ್ಚಲಿದ್ದಾರೆ.
ಅಜ್ಞಾತ ಕವಿ ವಿರಚಿತ ʼʼರಾಜಾ ಉರಗಕೇತನʼ ಯಕ್ಷಗಾನದಲ್ಲಿ ರಾಜೇಶ್ ಭಂಡಾರಿ, ಪ್ರಕಾಶ್ ಕಿರಾಡಿ, ವಿಶ್ವನಾಥ್ ಹೆನ್ನಾಬೈಲ್ ಅವರು (ಕೌರವ, ಭೀಮ, ಕೃಷ್ಣ ಪಾತ್ರದಲ್ಲಿ), ವಿನಾಯಕ ಗುಂಡುಬಾಳ, ಕಾರ್ತಿಕ್ ಹೆಗಡೆ, ಶ್ರೀಕಾಂತ್ ರಟ್ಟಾಡಿ, ನಾಗರಾಜ್ ದೇವಲ್ಕುಂದ ಪ್ರಮುಖ ಪಾತ್ರಗಳಲ್ಲಿ ರಂಜಿಸಲಿದ್ದಾರೆ.
ಪ್ರವೇಶ ದರ ಇರಲಿದ್ದು, ಮುಂಗಡ ಟಿಕೆಟ್ ಬುಕಿಂಗ್‌ಗಾಗಿ ರಾಜ್ ಭಟ್ ಮೊ.9019776411 ಸಂಪರ್ಕಿಸಿ.
ವಿಜಯನಗರ
Vijayanagara News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಚಾಲನೆ
Vijayanagara News: ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ಜರುಗಿತು.
ಕೂಡ್ಲಿಗಿ: ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ , ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ (Foot and Mouth Disease Vaccination campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಶುಪಾಲನೆ ಭಾಗವಾದ ಆಕಳು ಎತ್ತು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಆರೋಗ್ಯದ ಸಮಸ್ಯೆ ಕಂಡುಬಂದ ವೇಳೆ ತಾಲೂಕಿನ ರೈತರು ಕರೆ ಮಾಡಿದಾಗ ವೈದ್ಯಕೀಯ ತಂಡ ತಕ್ಷಣ ಭೇಟಿ ನೀಡಿ, ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SBI SO Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ
ಇದೇ ವೇಳೆ ಕೂಡ್ಲಿಗಿ ತಾಲೂಕಿನ ವೈದ್ಯರ ಸಿಬ್ಬಂದಿ, ಔಷಧಿ ಗುಣಮಟ್ಟ, ವೈದ್ಯಕೀಯ ಸೇವೆ, ಲಸಿಕೆ ವಿಧಾನ, ಆಸ್ಪತ್ರೆ ಕಟ್ಟಡಗಳ ಸ್ಥಿತಿ ಹಾಗೂ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಾರ್ಯ ನಿರ್ವಹಣೆ ಇತ್ಯಾದಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿರಿಗುಂಬಳಗುಂಟೆ ಪಶುವೈದ್ಯಾಧಿಕಾರಿ ಡಾ. ಮಂಜುಶ್ರೀ, ಚಿರತಗುಂಡು ಪಶುವೈದ್ಯಾಧಿಕಾರಿ ಡಾ. ಇಸ್ಮಾಯಿಲ್ ಜಬೀಉಲ್ಲ, ಡಾ. ಲೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿವಮೊಗ್ಗ
Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ
Death News: ಸೊರಬ ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ(80) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಸೊರಬ: ತಾಲೂಕು ಕಡಸೂರು ಗ್ರಾಮದ ಹಿರಿಯ ಸಾಹಿತಿ, ಪ್ರಾಜ್ಞ ಬಸವಣ್ಯಪ್ಪ (80) ಮಂಗಳವಾರ ಬೆಳಿಗ್ಗೆ ನಿಧನರಾದರು. (Death News)
ಕೇವಲ ನಾಲ್ಕನೇ ತರಗತಿ ಓದಿ, ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮೂರು ಕೃತಿಗಳನ್ನು ರಚಿಸಿದ್ದರು.
ಕಾವ್ಯಗಳನ್ನು ರಾಗದ ಮೂಲಕ ರಚಿಸಿ ಮನ್ನಣೆ ಪಡೆದ ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಭಾರತ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇವರ ವಯೋಸಹಜ ನಿಧನಕ್ಕೆ ಅಭಾಸಾಪ ಸೇರಿದಂತೆ ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ, ಕಸಾಪ, ಕಜಾಪ, ಕಸಾಸಾಂವೇ ಸಾಹಿತ್ಯ ಘಟಕಗಳು ಕಂಬನಿ ಮಿಡಿದಿವೆ.
-
Live News21 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ11 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ3 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema14 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ14 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್10 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ11 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್15 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ