congress guarantee Increased demand for BPL cards People rush to buy induction stovesCongress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ - Vistara News

ಕರ್ನಾಟಕ

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Congress Guarantee: ಕಾಂಗ್ರೆಸ್‌ ಗ್ಯಾರಂಟಿ ಎಫೆಕ್ಟ್‌ನಿಂದಾಗಿ ಎಲೆಕ್ಟ್ರಿಕ್‌ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಫ್ರೀ ಕರೆಂಟ್‌ ಆಫರ್‌ ಹಿನ್ನೆಲೆಯಲ್ಲಿ ಇಂಡಕ್ಷನ್‌ ಸ್ಟವ್ ಖರೀದಿಯಲ್ಲಿ ಹೆಚ್ಚಳವಾಗಿದೆ. ಜತೆಗೆ ಯಾವ ಗ್ಯಾರಂಟಿ ಮಿಸ್‌ ಆಗಬಾರದೆಂದು ಬಿಪಿಎಲ್‌ ಕಾರ್ಡ್‌ಗೂ (BPL Card) ಬೇಡಿಕೆ ಹೆಚ್ಚಿದೆ. ಈ ಕುರಿತ ವರದಿ ಇಲ್ಲಿದೆ.

VISTARANEWS.COM


on

induction stoves
ಎಲೆಕ್ಟ್ರಾನಿಕ್ ಸಾಧನಗಳಿಗೆ ಹೆಚ್ಚಿದ ಬೇಡಿಕೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ (Congress Guarantee) ಜಾರಿ ವಿಳಂಬವಾಗಿದ್ದರೂ ಜನರು ಇನ್ನೂ ಅದರ ಮೇಲೆ ನಂಬಿಕೆ ಇಟ್ಟಿದ್ದಾರೆ. ಯಾವಾಗದಿಂದ ಜಾರಿ ಎಂದು ಹಕ್ಕೊತ್ತಾಯದ ಮೂಲಕ ಕೇಳುತ್ತಿರುವ ಜನರು ಅದೇ ವೇಳೆಗೆ ಅದನ್ನು ಪಡೆಯಲು ಬೇಕಾದ ಸಿದ್ಧತೆಗಳನ್ನು, ಅದರ ಲಾಭಗಳನ್ನು ಅನುಭವಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಪ್ರಮಾಣ ಒಂದೇ ಸಮನೆ ಹೆಚ್ಚಿದೆ. ಅದರ ಜತೆಗೆ ಇಂಡಕ್ಷನ್‌ ಸ್ಟವ್‌ ಖರೀದಿ ಭರಾಟೆಯೂ ಜೋರಾಗಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಎಂದು ಘೋಷಿಸಿದರೆ ಅದು ಮಿಸ್‌ ಆಗಬಾರದು ಎಂಬ ಲೆಕ್ಕಾಚಾರದಲ್ಲಿ ಇದುವರೆಗೆ ಕಾರ್ಡ್‌ ಮಾಡಿಸದವರೂ ಮಾಡಿಸುತ್ತಿದ್ದಾರೆ, ಕೆಲವರು ಎಪಿಎಲ್‌ನಿಂದ ಬಿಪಿಎಲ್‌ಗೆ ಶಿಫ್ಟ್‌ ಆಗಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಉಚಿತ ವಿದ್ಯುತ್‌ ಗ್ಯಾರಂಟಿ ಜಾರಿಗೆ ಬಂದರೆ ಗ್ಯಾಸ್‌ ಬದಲು ವಿದ್ಯುತ್‌ ಸ್ಟವ್‌ನಲ್ಲೇ ಅಡುಗೆ ಮಾಡಬಹುದು ಎಂಬ ಉದ್ದೇಶದಿಂದ ಇಂಡಕ್ಷನ್‌ ಸ್ಟವ್‌ಗೆ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.

ಇಂಡಕ್ಷನ್‌ ಸ್ಟೌವ್‌ಗೆ ಡಿಮ್ಯಾಂಡ್‌ ಯಾಕೆ?

ಉಚಿತ ವಿದ್ಯುತ್ ಯೋಜನೆ ಜಾರಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರಾಟ ಪ್ರಮಾಣದಲ್ಲೂ ಗಣನೀಯವಾಗಿ ಏರಿಕೆ ಕಂಡಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ವವ್‌ಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.

-ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ₹1 ಸಾವಿರ ಗಡಿ ದಾಟಿದೆ
-ಫ್ಯಾನ್, ವಾಷಿಂಗ್ ಮಷಿನ್ ಪ್ರತಿ ತಿಂಗಳಿಗೆ 170 ಯೂನಿಟ್‌ ದಾಟಲ್ಲ
-ವಿದ್ಯುತ್‌ ಬಿಲ್‌ ಫ್ರೀ ಭರವಸೆ ಹಿನ್ನೆಲೆ ಗ್ಯಾಸ್‌ಗೆ ಗುಡ್‌ಬೈ ಹೇಳುವ ಸಾಧ್ಯತೆ

ಗೃಹ ಬಳಕೆಯಾಗುವ ಎಲ್‌ಪಿಜಿ ಸಿಲಿಂಡರ್‌ ಬೆಲೆ 1 ಸಾವಿರ ರೂಪಾಯಿ ಗಡಿ ದಾಟಿದೆ. ಜತೆಗೆ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಮಿಕ್ಸಿ, ಫ್ರಿಜ್‌ ಇದ್ದೇ ಇರುತ್ತೆ. ಆದರೆ ಎಲೆಕ್ಟ್ರಿಕ್ ಸ್ಟವ್‌, ಇಂಡಕ್ಷನ್ ಒಲೆಗಳು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್‌ ಬದಲು ಎಲೆಕ್ಟ್ರಿಕ್ ಸ್ಟವ್‌ಗಳ ಬಳಕೆಗೆ ಮುಂದಾಗಿದ್ದಾರೆ.

ಫ್ಯಾನ್, ವಾಷಿಂಗ್ ಮಷಿನ್, ಫ್ರಿಡ್ಜ್ ಇದ್ದರೂ ಪ್ರತಿ ತಿಂಗಳಿಗೆ 100 ಯುನಿಟ್‌ಗಿಂತ ದಾಟಲ್ಲ. ಆದರೆ ಮೊದಲು ಬಿಲ್ ಭಯದಲ್ಲಿ ಮಧ್ಯಮ ವರ್ಗದವರು ಎಲೆಕ್ಟ್ರಿಕ್ ವಸ್ತು‌ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಈಗ ಉಚಿತ ವಿದ್ಯುತ್ ಘೋಷಣೆ ನಂತರ ಎಲೆಕ್ಟ್ರಿಕ್ ವಸ್ತುಗಳ ಖರೀದಿಯಲ್ಲಿ ಹೆಚ್ಚಳವಾಗಿದೆ.

 Electronic Devices

ಇತರೆ ಎಲೆಕ್ಟ್ರಾನಿಕ್ ವಸ್ತುಗಳಾದ ಏರ್ ಕೂಲರ್, ಎಲೆಕ್ಟ್ರಿಕ್ ಗೀಸರ್‌ಗಳ ಮಾರಾಟದಲ್ಲಿ ಕೂಡ ಹೆಚ್ಚಳವಾಗಿದೆ. ಮೊದಲೆಲ್ಲಾ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತದೆ ಎಂದು ಏರ್ ಕೂಲರ್, ಏರ್ ಕಂಡಿಷನರ್ ಬಳಸಲು ಜನರು ಹಿಂದೇಟು ಹಾಕುತ್ತಿದ್ದರು. ಉಚಿತ ವಿದ್ಯುತ್ ಘೋಷಣೆ ನಂತರ ಇವುಗಳ ಮಾರಾಟದಲ್ಲಿ ಕೂಡ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳು ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಸೆಲ್ಸ್‌ ಮ್ಯಾನೇಜರ್‌ ಪ್ರಶಾಂತ್‌ ಮಾಹಿತಿ ನೀಡಿದ್ದಾರೆ.

ಸದ್ಯ ಜನರೇನೊ ಉಚಿತ ಆಫರ್‌ಗೆ ಫಿದಾ ಆಗಿ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಏನಾದರೂ ಉಚಿತ ವಿದ್ಯುತ್ ನೀಡಲು ಹಲವು ನಿಯಮಗಳನ್ನು ರೂಪಿಸುತ್ತೆ ಎಂದು ಬಿಪಿಎಲ್‌ ಕಾರ್ಡ್‌ಗೂ ಜನ ಮುಗಿಬಿದ್ದಿದ್ದಾರೆ.

ಬಿಪಿಎಲ್‌ ಕಾರ್ಡ್ ಬೇಕಾದರೆ ಇನ್ಮುಂದೆ ಬೇಕು ಪರ್ಮಿಷನ್‌?

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆ. ಸಿದ್ದರಾಮಯ್ಯ ಸರ್ಕಾರದ ಹಲವು ಭಾಗ್ಯ, ಗ್ಯಾರಂಟಿ ಘೋಷಣೆ ಬೆನ್ನಲ್ಲೆ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿಗಳ ಸುರಿಮಳೆ ಬರುತ್ತಿದೆ. ಉಚಿತ ಸ್ಕೀಂ ಪಡೆಯಲು ಪ್ರತಿದಿನ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ ಆಗುತ್ತಿದೆ.

BPL Card center
ಸಂಗ್ರಹ ಚಿತ್ರ

ಕಳೆದೆರಡು ವರ್ಷದಿಂದ ಇಲ್ಲಿಯವರೆಗೆ ಒಟ್ಟು 3.36 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ 2.87 ಲಕ್ಷ ಬಿಪಿಎಲ್ ಹಾಗೂ 46,576 ಎಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಇನ್ನು ಮುಂದೆ ಬಿಪಿಎಲ್‌ ಕಾರ್ಡ್ ಬೇಕಾದರೆ ಹಣಕಾಸು ಇಲಾಖೆ ಅನುಮತಿ ಅಗತ್ಯ ಎನ್ನಲಾಗುತ್ತಿದೆ.

ಯಾಕೆಂದರೆ ಕರ್ನಾಟಕವು ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಮಿತಿ ತಲುಪಿದೆ. ಕಳೆದ ಮೂರು ತಿಂಗಳ ಹಿಂದೆ‌ 1.5 ಲಕ್ಷ ಬಿಪಿಎಲ್ ಕಾರ್ಡ್‌ಗೆ ಅನುಮತಿ ನೀಡಿದ್ದು, ಎರಡು ಲಕ್ಷಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಿದೆ. ಅನಾರೋಗ್ಯದಂತಹ ತುರ್ತು ಇದ್ದರಷ್ಟೇ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಗ್ಯಾನೇಂದ್ರ ಕುಮಾರ್ ಪ್ರತಿಕ್ರಿಯಿಸಿದ್ದಾರೆ.\

ಹೊಸ ಅರ್ಜಿ ಸ್ವೀಕಾರಕ್ಕೆ ಬ್ರೇಕ್

ಜಿಲ್ಲೆಗಳು- ಅರ್ಜಿ ಸಲ್ಲಿಕೆ
ಬೆಳಗಾವಿ- 27,411
ವಿಜಯಪುರ- 17,228
ಬೆಂಗಳೂರು – 12,765
ಬೀದರ್ – 12,661
ರಾಯಚೂರು- 12,498‌

ಗ್ಯಾರಂಟಿ ಯೋಜನೆಗಳನ್ನು ಕೇವಲ ಬಡ ವರ್ಗದ ಜನರಿಗೆ ಸೀಮಿತಗೊಳಿಸಲು ಯೋಚಿಸುತ್ತಿದ್ದು, ಈ ಹಿನ್ನೆಲೆ ಉಚಿತ ಕೊಡುಗೆಗಳ ಲಾಭ ಪಡೆಯಲು ಜನರು ಹೊಸ ಬಿಪಿಎಲ್ ಕಾರ್ಡ್ ಮಾಡಿಸಲು‌ ಮುಂದಾಗಿದ್ದಾರೆ. ಮೇ 14 ರಿಂದ 20ರವರೆಗೆ ಆರೇ ದಿನಗಳಲ್ಲಿ ಬರೋಬ್ಬರಿ 78 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಬಿಪಿಎಲ್ ಕಾರ್ಡ್‌ಗಾಗಿ ಅಲೆದಾಡುತ್ತಿರುವ ಜನರಿಗೆ ನಿರಾಸೆ ಕಾದಿದ್ದು, ಹೊಸ ಕಾರ್ಡ್‌ಗಳಿಗಾಗಿ ಅರ್ಜಿ ಸ್ವೀಕಾರವೇ ಸ್ಥಗಿತವಾಗಿದೆ.

ಅರ್ಜಿ ಸಲ್ಲಿಕೆ ಹೆಚ್ಚಾಗುತ್ತಿದ್ದಂತೆ ಆಹಾರ ಇಲಾಖೆ ಹೊಸ ಅರ್ಜಿಗಳನ್ನು ಪಡೆಯುವುದನ್ನು ನಿಲ್ಲಿಸಿಬಿಟ್ಟಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಪ್ರಕಟ ಮಾಡಿದೆ. ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಪ್ರಕಾರ ಈಗಾಗಲೇ ಕರ್ನಾಟಕ‌ ರಾಜ್ಯ ಮಿತಿ ತಲುಪಿದೆ. ಹೀಗಾಗಿ ಅರ್ಜಿ ಸಲ್ಲಿಕೆ ತಾತ್ಕಲಿಕವಾಗಿ ಸ್ಥಗಿತ ಮಾಡಲಾಗಿದೆ. ಇನ್ನು ಬಿಪಿಎಲ್‌ ಕಾರ್ಡ್ ನೀಡಲು ಹಣಕಾಸು ಇಲಾಖೆ ಅನುಮತಿ ಅಗತ್ಯವಾಗಿದೆ.

ಅರ್ಜಿ‌‌ ಸ್ವೀಕರವನ್ನು ಆಹಾರ ಇಲಾಖೆ ಸ್ಥಗಿತ ಮಾಡಿದರೂ ಸಾವಿರಾರು ಜನರು ಅರ್ಜಿ‌ ಸಲ್ಲಿಕೆಗೆ ಯತ್ನಿಸುತ್ತಿದ್ದಾರೆ. ಸೈಬರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿಚಾರಿಸುತ್ತಿದ್ದಾರೆ. ಆಹಾರ ಇಲಾಖೆಯ ಕಂಟ್ರೋಲ್ ರೂಂಗೆ ಕೂಡ ಕರೆ‌‌ ಮಾಡಿ ಮಾಹಿತಿ ಪಡೆಯುತ್ತಿದ್ದರಂತೆ. ಇನ್ನು ಅರ್ಹರಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ಗಳನ್ನು ನೀಡುವಂತೆ ಆಗ್ರಹವೂ ವ್ಯಕ್ತವಾಗಿದೆ.

ಇದನ್ನೂ ಓದಿ: Mallikarjun Kharge: ರೈಲ್ವೆ ಸಚಿವ ವೈಷ್ಣವ್‌ಗೆ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ, ಏನು ಬೇಡಿಕೆ ಇಟ್ಟರು?

ಯಾವ್ಯಾವ ಜಿಲ್ಲೆಯಲ್ಲಿ ಹೆಚ್ಚು ಅರ್ಜಿ ಸಲ್ಲಿಕೆ?

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Hanuman Chalisa: ನಗರ್ತಪೇಟೆಯಲ್ಲಿ ಗುಡುಗಿದ ‘ಕೇಸರಿ’; ಕಠಿಣ ಕ್ರಮದ ಭರವಸೆ, ಪ್ರತಿಭಟನೆಗೆ ವಿರಾಮ

Hanuman Chalisa: ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಅಂಗಡಿಯಾತನ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಬಿಜೆಪಿ ಬೃಹತ್‌ ಪ್ರತಿಭಟನೆ ನಡೆಸಿದೆ. ಅಷ್ಟೂ ಆರೋಪಿಗಳ ಮೇಲೆ ಕಠಿಣ ಕ್ರಮದ ಭರವಸೆ ಸಿಕ್ಕಿದ್ದರಿಂದ

VISTARANEWS.COM


on

MP Tejaswi surya participate at Nagarthapet protest
Koo

ಬೆಂಗಳೂರು: ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿಯಾತನ ಮೇಲೆ ಹಲ್ಲೆ (assault case) ಮಾಡಿದ ಕೃತ್ಯವನ್ನು ಖಂಡಿಸಿ ನಡೆಸುತ್ತಿದ್ದ ಬೃಹತ್‌ ಪ್ರತಿಭಟನೆಯನ್ನು ಬಿಜೆಪಿ ತಾತ್ಕಾಲಿಕವಾಗಿ ಕೈಬಿಟ್ಟಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಹಿರಿಯ ಪೊಲೀಸರು ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆಯುತ್ತಿರವುದಾಗಿ ಸಂಸದ ತೇಜಸ್ವಿ ಸೂರ್ಯ ಘೋಷಿಸಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಬೆಂಬಲಕ್ಕೆ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ನಿಂತಿದ್ದರು. ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಮತ್ತು ಹಿಂದು ಕಾರ್ಯಕರ್ತರು ಸ್ಥಳಕ್ಕೆ ಬರುತ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ.

MP Tejaswi surya participate at Nagarthapet protest

ಈ ವೇಳೆ ನಗರ ಪೊಲೀಸ್ ಆಯುಕ್ತ ದಯಾನಂದ ಪ್ರತಿಕ್ರಿಯೆ ನೀಡಿ, ಆರು ಮಂದಿಯಲ್ಲಿ ಐವರನ್ನು ಬಂಧಿಸಿದ್ದೇವೆ. ಇನ್ನೊಬ್ಬನನ್ನು ಶೀಘ್ರವೇ ಬಂಧಿಸುತ್ತೇವೆ. ಆರೋಪಿಗಳ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದೇವೆ. ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪೊಲೀಸರು ಕ್ರಮದ ಭರವಸೆ ನೀಡಿದ್ದರಿಂದ ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆಯನ್ನು ವಾಪಸ್‌ ಪಡೆಯುವುದಾಗಿ ಘೋಷಿಸಿದ್ದಾರೆ.

ಪ್ರತಿಭಟನೆ ವಾಪಸ್‌

ನಗರ್ತಪೇಟೆಯಲ್ಲಿ ಸಾವಿರಾರು ಹಿಂದುಪರ ಕಾರ್ಯಕರ್ತರು ಜಮಾಯಿಸಿದ್ದು, ಜೈಶ್ರೀರಾಮ್‌ ಘೋಷಣೆ ಕೂಗಿದ್ದರು. ಅಲ್ಲದೆ, ಘಟನಾ ಸ್ಥಳದಲ್ಲಿ ಹನುಮಾಧ್ವಜವನ್ನೂ ಹಾರಿಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಸ್ಕ್‌, ಹ್ಯಾಟ್‌ ಧರಿಸಿ ಸಾಮಾನ್ಯರಂತೆ ಪ್ರತಿಭಟನಾ ಸ್ಥಳಕ್ಕೆ ಬಂದ ಸಂಸದ ತೇಜಸ್ವಿ ಸೂರ್ಯರನ್ನು ಕಂಡು ಹಿಂದು ಕಾರ್ಯಕರ್ತರು ಮತ್ತಷ್ಟು ಹುರುಪುಗೊಂಡರು. ಮತ್ತೆ ಜೈಶ್ರೀರಾಮ್ ಘೋಷಣೆಯೊಂದಿಗೆ ಪ್ರತಿಭಟನೆಯನ್ನು ಜೋರು ಮಾಡಲಾಯಿತು. ಆಗ ಹಿರಿಯ ಪೊಲೀಸ್‌ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ, ಸೂಕ್ತ ಕ್ರಮದ ಭರವಸೆ ನೀಡಿದ್ದರಿಂದ ಕೆಲವು ಷರತ್ತುಗಳೊಂದಿಗೆ ಪ್ರತಿಭಟನೆಯನ್ನು ವಾಪಸ್‌ ಪಡೆಯುವುದಾಗಿ ತೇಜಸ್ವಿ ಸೂರ್ಯ ಹೇಳಿದರು.

ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ. ನಾವೀಗ ಪ್ರತಿಭಟನೆಯನ್ನು ಕೈಬಿಟ್ಟು ಸ್ಥಳದಿಂದ ನಿರ್ಗಮಿಸುತ್ತೇವೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಧರ್ಮವಾಗಿದೆ. ಹಾಗಂತ ಪೊಲೀಸರು ಭರವಸೆ ನೀಡಿದಂತೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳದೇ ಇದ್ದರೆ ಮತ್ತೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆ ಪ್ರತಿಭಟನೆಯಲ್ಲಿ ಏನಾಗಿತ್ತು?

ಬೆಳಗ್ಗೆ ನಗರ್ತಪೇಟೆಯಲ್ಲಿ ಬಿಜೆಪಿ ಹಾಗೂ ಹಿಂದು ಪರ ಕಾರ್ಯಕರ್ತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಜೈಶ್ರೀರಾಮ್‌ ಘೋಷಣೆಯನ್ನು ಕೂಗತೊಡಗಿದ್ದರು. ಒಂದು ಕಡೆ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸುತ್ತಿದ್ದರೆ ಮತ್ತೊಂದು ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮತ್ತಷ್ಟು ಜನ ಬರುತ್ತಲೇ ಇದ್ದರು. ಇದು ಪೊಲೀಸರನ್ನು ಹೈರಾಣಾಗಿಸಿತ್ತು.

Hanuman Chalisa Nagarthapet tense Shobha Karandlaje and Hindu activists are detained

ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ. ಹಿಂದುಗಳಿಗೆ ಈಗಿನ ಸರ್ಕಾರ ಅನ್ಯಾಯ ಮಾಡುತ್ತಲೇ ಬರುತ್ತಿದೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಹನುಮ ಧ್ವಜವನ್ನು ಹಾರಿಸಲಾಗಿದೆ. ಹನುಮಧ್ವಜ ಹಾರಿಸುತ್ತಿದ್ದಂತೆ ಹಿಂದು ಕಾರ್ಯಕರ್ತರು ಜೋರಾಗಿ ಶಿಳ್ಳೆ, ಚಪ್ಪಾಳೆ ಹೊಡೆದು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು.

Hanuman Chalisa Nagarthapet tense Shobha Karandlaje and Hindu activists are detained

ಅಂಗಡಿಗಳು ಬಂದ್!‌

ಪ್ರತಿಭಟನಾ ಸ್ಥಳಕ್ಕೆ ನೂರಾರು ಜನರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸುತ್ತಲೇ ಇದ್ದರು. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿತ್ತು. ಹೀಗಾಗಿ ಘಟನಾ ಸ್ಥಳದ ಸುತ್ತಲಿನ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಪ್ರತಿಭಟನಾಕಾರರು ಸ್ಥಳದಲ್ಲೇ ಕುಳಿತು ಜೈಶ್ರೀರಾಮ್‌ ಭಜನೆಯನ್ನು ಮಾಡಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಪರವೂ ಘೋಷಣೆಗಳು ಮೊಳಗಿವೆ. “ಮೋದಿ.. ಮೋದಿ” ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆಗ ಪೊಲೀಸರ ಜತೆಗೆ ತಳ್ಳಾಟ ನೂಕಾಟ ನಡೆಯಿತು. ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು ಗೂಡ್ಸ್‌ ವಾಹನದಲ್ಲಿ ತುಂಬಿಕೊಂಡು ಹೋಗಿದ್ದರು.

ಹಿಂದು ನಾವೆಲ್ಲ ಒಂದು ಘೋಷಣೆ

ಹಿಂದು ಪರ ಸಂಘಟನೆಗಳು, ಹಿಂದು ವ್ಯಾಪಾರಸ್ಥರು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತಿದ್ದಾರೆ. “ಹಿಂದು ನಾವೆಲ್ಲ ಒಂದು” ಎಂದು ಘೋಷಣೆಗಳನ್ನು ಕೂಗಿದ್ದರು.

Hanuman Chalisa Nagarthapet tense Shobha Karandlaje and Hindu activists are detained and Suresh kumar visit place

ರಾಜ್ಯ ಸರ್ಕಾರದ ವಿರುದ್ಧ ಸುರೇಶ್‌ ಕುಮಾರ್‌ ಕಿಡಿ

ಘಟನಾ ಸ್ಥಳಕ್ಕೆ ಶಾಸಕ ಸುರೇಶ್‌ ಕುಮಾರ್‌ ಭೇಟಿ ನೀಡಿದ್ದು, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಅಸಹನೆ ಅನ್ನೋದು ಈ ಮಟ್ಟಕ್ಕೆ ಹೋಗಬಾರದು. ಒಟ್ಟಾರೆಯಾಗಿ ಸಮಾಜದ ಶಾಂತಿ ಕದಡಿದಂತಾಗಿದೆ. ಇದೊಂದು ನೆಪವೆಂಬಂತೆ ನಮಗೆ ಅನ್ನಿಸುತ್ತಿದೆ. ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಿದಂತಿದೆ. ಹಲ್ಲೆ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು. ಆ ಸಮಯದಲ್ಲಿ ಆತನ ರಕ್ಷಣೆಗೂ ಯಾರೂ ಇರಲಿಲ್ಲ. ಎಲ್ಲ ಸಮುದಾಯದವರು ಈ ವಿಷಯವಾಗಿ ಮುಂದೆ ಬರಬೇಕು. ಈ ರೀತಿಯಾಗಿ ನಡೆಯುತ್ತಿರುವ ಸರಣಿ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯವರು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಆಗ್ರಹ

ಏನಿದು ಹಲ್ಲೆ ಪ್ರಕರಣ?

ಭಾನುವಾರ ಸಾಯಂಕಾಲ 6.15ರ ಸುಮಾರಿಗೆ ಐದು ಮಂದಿ ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಗೆ ಬಂದಿದ್ದಾರೆ. ಅಲ್ಲಿ ಹಿಂದು ದೇವರ ಭಜನೆ ಹಾಕಿದ್ದರಿಂದ ಬಂದ್‌ ಮಾಡಲು ಹೇಳಿದ್ದಾರೆ. ಅದಕ್ಕೆ ಅಂಗಡಿಯಾತ ಮುಖೇಶ್‌, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್‌ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್‌ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಈವರೆಗೆ ಒಟ್ಟು ಐದು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Continue Reading

ತುಮಕೂರು

Student death: ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು; ಶಿಕ್ಷಕರ ಸಸ್ಪೆಂಡ್

Student death : ಆ ಪುಟ್ಟ ಹುಡುಗಿ ದೇವರ ಮೇಲಿನ ಭಕ್ತಿಯಿಂದ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ಆದರೆ, ಆ ದೀಪವೇ ಬೆಂಕಿಯಾಗಿ ಆಕೆಯನ್ನು ಸುಟ್ಟು ಹಾಕಿದೆ. ಈಗವಳು ಮೃತ್ಯುವಶಳಾಗಿದ್ದಾಳೆ.

VISTARANEWS.COM


on

Student Death Deeksha
ದೇವರಿಗೆ ದೀಪವಿಡಲು ಹೋದಾಗ ಬೆಂಕಿ ತಗುಲಿ ಗಾಯಗೊಂಡಿದ್ದ ದೀಕ್ಷಾ ಇನ್ನಿಲ್ಲ
Koo

ಶಿರಾ (ತುಮಕೂರು) : ಶಾಲೆಯ ಸಮೀಪದ ದೇವಸ್ಥಾನವೊಂದರಲ್ಲಿ ದೀಪ ಹಚ್ಚಲು ಹೋದ (Girl went to light the lamp in temple dead) ಸಂದರ್ಧದಲ್ಲಿ ಬಟ್ಟೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. (Girl Burnt to death) ತುಮಕೂರು ಜಿಲ್ಲೆ (Tumkur News) ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ (First standard Student) ದೀಕ್ಷಾ ಮೃತಪಟ್ಟ ದುರ್ದೈವಿ ಬಾಲಕಿ (Student Death).

ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ಹಿರಿಯರು ಮಾಡುವ ಸಂಪ್ರದಾಯಗಳನ್ನು ಗಮನಿಸಿದ್ದ ಆಕೆ ಭಕ್ತಿಯಿಂದ ಆಕೆ ಈ ಕೆಲಸವನ್ನು ಮಾಡಿದ್ದಳು. ತನ್ನ ಜತೆಗೆ ತರಗತಿಯ ಇತರ ಕೆಲವು ಮಕ್ಕಳನ್ನು ಕೂಡಾ ಆಕೆ ಕರೆದುಕೊಂಡು ಹೋಗಿದ್ದಳು. ‌ ಮಾರ್ಚ್‌ 13ರಂದು ಘಟನೆ ನಡೆದಿತ್ತು.

ಆ ಬಾಲಕಿಗೆ ದೀಪ ಹಚ್ಚಿದರೆ ಒಳ್ಳೆಯದಾಗುತ್ತದೆ ಎನ್ನುವುದು ಗೊತ್ತಿತ್ತೇ ವಿನಃ ಬೆಂಕಿಯಿಂದ ಆಗಬಹುದಾದ ಅನಾಹುತಗಳ ಅರಿವು ಇರಲಿಲ್ಲ. ಆದರೆ, ದುರದೃಷ್ಟವಶಾತ್‌ ಅಲ್ಲಿ ದುರಂತ ಸಂಭವಿಸಿಯೇ ಬಿಟ್ಟಿತು.

ಗೆಳತಿಯರೊಂದಿಗೆ ಖುಷಿ ಖುಷಿಯಾಗಿ ಹೋಗಿ ದೇವರಿಗೆ ದೀಪ ಹಚ್ಚಿದ ಆಕೆ ಈ ಸಂಭ್ರಮದಲ್ಲಿ ಮೈಮರೆತಿದ್ದಳೋ ಗೊತ್ತಿಲ್ಲ. ಅಂತೂ ಆಕೆಯ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಬಟ್ಟೆಗೆ ತಗುಲಿ ಮೈಗೆ ಸುಟ್ಟ ಗಾಯಗಳಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಆಕೆ ಚಿಕಿತ್ಸೆ ಫಲಿಸದೆ ಮಾರ್ಚ್‌ 19ರಂದು (ಮಂಗಳವಾರ) ಮೃತಪಟ್ಟಿದ್ದಾಳೆ.

ಇದನ್ನೂ ಓದಿ : Illicit Relationship : ವಿಜಯಪುರದಲ್ಲಿ ಜೋಡಿ ಕೊಲೆ; ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?

Student death : ಶಿಕ್ಷಕರ ಮೇಲೆ ಸಾರ್ವಜನಿಕರು, ಪೋಷಕರ ಆಕ್ರೋಶ

ಈ ಘಟನೆ ನಡೆಯುತ್ತಿದ್ದಂತೆಯೇ ಊರಿನವರು ಮತ್ತು ಪೋಷಕರ ಆಕ್ರೋಶ ಶಿಕ್ಷಕರ ಮೇಲೆ ತಿರುಗಿತ್ತು. ದೀಕ್ಷಾ ಮಧ್ಯಾಹ್ನ ಊಟದ ನಂತರ ಸಹಪಾಠಿಗಳನ್ನು ಕರೆದುಕೊಂಡು ಶಾಲೆಯಿಂದ ಸ್ವಲ್ಪ ದೂರದ ಕಾಟಮ್ಮ ದೇವಸ್ಥಾನಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ? ಮಕ್ಕಳು ಶಾಲೆಗೆ ಹೋದ ಮೇಲೆ ಶಾಲೆ ಬಿಡುವವರೆಗೆ ಶಿಕ್ಷಕರ ಜವಾಬ್ದಾರಿಯಲ್ಲವೇ ಎಂದು ಜನರು ಪ್ರಶ್ನೆ ಮಾಡಿದ್ದರು.

ವಿಷಯ ತಿಳಿದ ನಂತರ ಬಿಇಒ ಕೃಷ್ಣಪ್ಪ ಅವರು ಶಾಲೆಗೆ ಭೇಟಿ ನೀಡಿ ಕೂಲಂಕಣ ಪರಿಶೀಲನೆ ನಡೆಸಿದ್ದರು. ನಾಲ್ಕು ಪುಟ್ಟ ಮಕ್ಕಳು ಮಧ್ಯಾಹ್ನದ ಹೊತ್ತು ಯಾರಿಗೂ ತಿಳಿಯದಂತೆ ಶಾಲೆಯಿಂದ ಹೊರಗೆ ಹೋಗಿರುವುದಕ್ಕೆ ಶಿಕ್ಷಕರ ಬೇಜವಾಬ್ದಾರಿಯೇ ಕಾರಣವೆಂದು ‌ ಅಭಿಪ್ರಾಯಪಟ್ಟರು.

ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯ ವರೆಗೆ ಸುಮಾರು 75 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಂದರೆ ಒಂದು ಕ್ಲಾಸಿನಲ್ಲಿ ಸರಾಸರಿ 11 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇವರಿಗೆ ಪಾಠ ಮಾಡಲು ನಾಲ್ಕು ಜನ ಶಿಕ್ಷಕರಿದ್ದಾರೆ. ಅವರಲ್ಲಿ ಇಬ್ಬರು ಸರ್ಕಾರಿ ಸೇವೆ, ಇಬ್ಬರು ಗುತ್ತಿಗೆ ಆಧಾರದ ಶಿಕ್ಷಕರು. ‌ ಇಷ್ಟೆಲ್ಲ ಜನ ಇದ್ದರೂ ಮಕ್ಕಳ ಮೇಲೆ ನಿಗಾ ಇಡದೆ ಇರುವುದು ತಪ್ಪು ಎಂಬ ನೆಲೆಯಲ್ಲಿ ಎಲ್ಲ ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Continue Reading

ಬೆಂಗಳೂರು

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

Hanuman Chalisa: ಮೊಬೈಲ್‌ ಅಂಗಡಿಯಲ್ಲಿ ಹುನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ನಡೆಸಲಾದ ಪ್ರಕರಣ ತೀವ್ರತೆಯನ್ನು ಪಡೆದುಕೊಂಡಿದೆ. ಘಟನಾ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

VISTARANEWS.COM


on

Nagarthpet protest by BJP
Koo

ಬೆಂಗಳೂರು: ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿಯಾತನ ಮೇಲೆ ಹಲ್ಲೆ (assault case) ನಡೆಸಿದ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹಲ್ಲೆಗೊಳಗಾದ ವ್ಯಕ್ತಿ ಬೆಂಬಲಕ್ಕೆ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ನಿಂತಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಸಂಬಂಧ ನಗರ್ತಪೇಟೆಯ ಅಂಗಡಿ ಮುಂದಿನಿಂದಲೇ ಜೈ ಶ್ರೀರಾಮ್‌ ಘೋಷಣೆ ಹಾಗೂ ಹನುಮಾನ್‌ ಚಾಲೀಸಾ ಪಠಣೆಗೆ ಮುಂದಾಗಲಾಗಿತ್ತು. ಆದರೆ, ಇದಕ್ಕೆ ಅವಕಾಶ ಕೊಡದ ಪೊಲೀಸರು, ಪ್ರತಿಭಟನೆಗೆ ಬರುತ್ತಿದ್ದ ಕಾರ್ಯಕರ್ತರನ್ನು ಒಬ್ಬೊಬ್ಬರನ್ನಾಗಿಯೇ ಬಂಧಿಸುತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ ಅವರನ್ನೂ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರತಿಭಟನೆ ಕಾವು ಜೋರಾಗುತ್ತಿದಂತೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ. ಆದರೆ, ನಗರ್ತಪೇಟೆಗೆ ತಂಡೋಪ ತಂಡವಾಗಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹರಿದು ಬರುತ್ತಲೇ ಇದ್ದಾರೆ. ಜೈ ಶ್ರೀರಾಮ್‌ ಘೋಷಣೆಯನ್ನು ಮೊಳಗಿಸುತ್ತಲೇ ಇದ್ದಾರೆ. ಹೀಗಾಗಿ ಅಲ್ಲಿ ಪ್ರತಿಭಟನೆ ಕಾವು ಜೋರಾಗಿಯೇ ಇದೆ.

Hanuman Chalisa Nagarthapet tense Shobha Karandlaje and Hindu activists are detained

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಿಂದು ಕಾರ್ಯಕರ್ತರು

ಒಂದು ಕಡೆ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸುತ್ತಿದ್ದರೆ ಮತ್ತೊಂದು ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮತ್ತಷ್ಟು ಜನ ಬರುತ್ತಲೇ ಇರುವುದು ಪೊಲೀಸರನ್ನು ಹೈರಾಣಾಗಿಸಿದೆ. ಸ್ಥಳದಲ್ಲಿ ಜೈಶ್ರೀರಾಮ್‌ ಘೋಷಣೆ ಮೊಳಗುತ್ತಿದೆ. ಅಲ್ಲದೆ, “ಬೇಕೇ ಬೇಕು ನ್ಯಾಯ ಬೇಕು ಅಂತ ಘೋಷಣೆ ಕೂಗಲಾಗುತ್ತಿದೆ. ಹೀಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದ್ದರೂ ಮತ್ತೆ ಪ್ರತಿಭಟನೆಯನ್ನು ಪ್ರಾರಂಭಿಸಲಾಗಿದೆ.

Hanuman Chalisa Nagarthapet tense Shobha Karandlaje and Hindu activists are detained

ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ. ಹಿಂದುಗಳಿಗೆ ಈಗಿನ ಸರ್ಕಾರ ಅನ್ಯಾಯ ಮಾಡುತ್ತಲೇ ಬರುತ್ತಿದೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಹನುಮ ಧ್ವಜವನ್ನು ಹಾರಿಸಲಾಗಿದೆ. ಹನುಮಧ್ವಜ ಹಾರಿಸುತ್ತಿದ್ದಂತೆ ಹಿಂದು ಕಾರ್ಯಕರ್ತರು ಜೋರಾಗಿ ಶಿಳ್ಳೆ, ಚಪ್ಪಾಳೆ ಹೊಡೆದು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.

Hanuman Chalisa Nagarthapet tense Shobha Karandlaje and Hindu activists are detained

ಅಂಗಡಿಗಳು ಬಂದ್!‌

ಪ್ರತಿಭಟನಾ ಸ್ಥಳಕ್ಕೆ ನೂರಾರು ಜನರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸುತ್ತಲೇ ಇದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಹೀಗಾಗಿ ಘಟನಾ ಸ್ಥಳದ ಸುತ್ತಲಿನ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಪ್ರತಿಭಟನಾಕಾರರು ಸ್ಥಳದಲ್ಲೇ ಕುಳಿತು ಜೈಶ್ರೀರಾಮ್‌ ಭಜನೆಯನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಪರವೂ ಘೋಷಣೆಗಳು ಮೊಳಗಿವೆ. “ಮೋದಿ.. ಮೋದಿ” ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಗ ಪೊಲೀಸರ ಜತೆಗೆ ತಳ್ಳಾಟ ನೂಕಾಟ ನಡೆದಿದೆ. ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು ಗೂಡ್ಸ್‌ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.

ಹಿಂದು ನಾವೆಲ್ಲ ಒಂದು ಘೋಷಣೆ

ಹಿಂದು ಪರ ಸಂಘಟನೆಗಳು, ಹಿಂದು ವ್ಯಾಪಾರಸ್ಥರು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತಿದ್ದಾರೆ. “ಹಿಂದು ನಾವೆಲ್ಲ ಒಂದು” ಎಂದು ಘೋಷಣೆಗಳನ್ನು ಕೂಗಿದ್ದಾರೆ.

Hanuman Chalisa Nagarthapet tense Shobha Karandlaje and Hindu activists are detained and Suresh kumar visit place

ರಾಜ್ಯ ಸರ್ಕಾರದ ವಿರುದ್ಧ ಸುರೇಶ್‌ ಕುಮಾರ್‌ ಕಿಡಿ

ಘಟನಾ ಸ್ಥಳಕ್ಕೆ ಶಾಸಕ ಸುರೇಶ್‌ ಕುಮಾರ್‌ ಭೇಟಿ ನೀಡಿದ್ದು, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಅಸಹನೆ ಅನ್ನೋದು ಈ ಮಟ್ಟಕ್ಕೆ ಹೋಗಬಾರದು. ಒಟ್ಟಾರೆಯಾಗಿ ಸಮಾಜದ ಶಾಂತಿ ಕದಡಿದಂತಾಗಿದೆ. ಇದೊಂದು ನೆಪವೆಂಬಂತೆ ನಮಗೆ ಅನ್ನಿಸುತ್ತಿದೆ. ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಿದಂತಿದೆ. ಹಲ್ಲೆ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು. ಆ ಸಮಯದಲ್ಲಿ ಆತನ ರಕ್ಷಣೆಗೂ ಯಾರೂ ಇರಲಿಲ್ಲ. ಎಲ್ಲ ಸಮುದಾಯದವರು ಈ ವಿಷಯವಾಗಿ ಮುಂದೆ ಬರಬೇಕು. ಈ ರೀತಿಯಾಗಿ ನಡೆಯುತ್ತಿರುವ ಸರಣಿ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯವರು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಆಗ್ರಹ

ಏನಿದು ಹಲ್ಲೆ ಪ್ರಕರಣ?

ಭಾನುವಾರ ಸಾಯಂಕಾಲ 6.15ರ ಸುಮಾರಿಗೆ ಐದು ಮಂದಿ ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಗೆ ಬಂದಿದ್ದಾರೆ. ಅಲ್ಲಿ ಹಿಂದು ದೇವರ ಭಜನೆ ಹಾಕಿದ್ದರಿಂದ ಬಂದ್‌ ಮಾಡಲು ಹೇಳಿದ್ದಾರೆ. ಅದಕ್ಕೆ ಅಂಗಡಿಯಾತ ಮುಖೇಶ್‌, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್‌ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್‌ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಈವರೆಗೆ ಒಟ್ಟು ಐದು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Continue Reading

ವಿಜಯಪುರ

Water Crisis: ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್‌ ಟವರ್‌ ಏರಿದ ಯುವಕ!

Water Crisis: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ನೀರಿಗೆ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಗ್ರಾಮದ ಮಂದಿ ಪಿಡಿಒ ಹಾಗೂ ತಾಲೂಕು ಆಡಳಿತಕ್ಕೆ ಎಷ್ಟೇ ಮನವಿ ಕೊಟ್ಟರೂ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ಗ್ರಾಮದ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಹುಚ್ಚಾಟ ನಡೆಸಿದ್ದಾನೆ.

VISTARANEWS.COM


on

Water crisis Youth climbs mobile tower in Vijayapura
Koo

ವಿಜಯಪುರ: ರಾಜ್ಯದಲ್ಲಿ ಭೀಕರ (Drought in Karnataka) ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರ ಸೇರಿ ಹಲವಾರು ಹಳ್ಳಿಗಳಲ್ಲೂ ಈಗ ನೀರಿಗೆ ಹಾಹಾಕಾರ (Water Crisis) ಎದುರಾಗಿದೆ. ನೀರು ಪೂರೈಕೆ (Water Supply) ಮಾಡಲು ಕಷ್ಟಪಡುತ್ತಿರುವ ಸ್ಥಳೀಯ ಆಡಳಿತಗಳು ಹೈರಾಣಾಗಿವೆ. ಈ ವೇಳೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಹುಚ್ಚಾಟ ನಡೆಸಿದ್ದಾನೆ. ಅರೆಬೆತ್ತಲೆಯಾಗಿ ಕೂಗಾಡಿದ್ದಾನೆ. ನನ್ನ ಗ್ರಾಮಕ್ಕೆ ಕುಡಿಯುವ (Drinking Water) ನೀರಿಲ್ಲ. ಪಿಡಿಒ, ತಾಲೂಕು ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪ ಮಾಡಿದ್ದಾನೆ.

ಇಂಡಿ ಬಸವೇಶ್ವರ ಸರ್ಕಲ್‌ನಲ್ಲಿರುವ ಜಿಯೋ ಟವರ್ ಅನ್ನು ಯುವಕ ಏರಿದ್ದಾನೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಸತೀಶ್ ಚಂದ್ರಶೇಖರ ಕಡಣಿ ಎಂಬಾತನೇ ಟವರ್‌ ಏರಿರುವುದು ಎಂದು ತಿಳಿದುಬಂದಿದೆ. 250 ಅಡಿ ಎತ್ತರದ ಟವರ್‌ನ ತುದಿಗೆ ಯುವಕ ಏರಿದ್ದಾನೆ.

ಕುಡಿಯುವ ನೀರಿಗಾಗಿ ಟವರ್ ಏರಿದ ಭೂಪ!

ಸತೀಶ್ ಚಂದ್ರಶೇಖರ ಕಡಣಿ ಬಿಎಸ್ಎನ್ಎಲ್ ಟವರ್ ಹತ್ತಿದ್ದು, ನೀರಿಗಾಗಿ ಆಗ್ರಹಿಸುತ್ತಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ‌ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಯುವಕನನ್ನು ಕೆಳಗೆ ಇಳಿಸಲು ಹರಸಾಹಸಪಡುತ್ತಿದ್ದಾರೆ.

ಯುವಕನ ಬೇಡಿಕೆ ಏನು?

ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಹಾಹಾಕಾರವಿದೆ. ಹಲವು ಬಾರಿ ಪಿಡಿಒ‌ ಮತ್ತು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಹಿಸಿಲ್ಲ. ನಮ್ಮ ಗ್ರಾಮದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಪರಿಹರಿಸಿದರೆ ಮಾತ್ರವೇ ನಾನು ಟವರ್‌ನಿಂದ ಇಳಿಯುತ್ತೇನೆ ಎಂದು ಯುವಕ ಪಟ್ಟುಹಿಡಿದು ಕುಳಿತಿದ್ದ.

ಕೆಳಗಿಳಿಸುವಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಯಶಸ್ವಿ

ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಯುವಕ ಟವರ್ ಹತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ, ತನ್ನ ಶರ್ಟ್‌ ತೆಗೆದು ತನ್ನ ಪ್ರತಿಭಟನೆಯನ್ನು ತೋರಿದ್ದಾನೆ. ಕೆಳಗೆ ಸೇರಿದ್ದ ಜನರು, ಕೆಳಗೆ ಬರವಂತೆ ಎಷ್ಟೇ ಮನವಿ ಮಾಡಿದರೂ ಆತ ಕೆಳಗಿಳಿಯಲು ಸುತಾರಾಂ ಇಷ್ಟಪಡುತ್ತಿಲ್ಲ. ನನಗೆ ನನ್ನೂರಿನ ಸಮಸ್ಯೆ ಬಗೆಹರಿಯಬೇಕು. ಸಂಬಂಧಪಟ್ಟವರು ಇಲ್ಲಿಗೆ ಬಂದು ಭರವಸೆ ಕೊಡಬೇಕು. ಆಗ ಮಾತ್ರ ಇಳಿಯುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ಟವರ್‌ ಹತ್ತಿ ಆತನನ್ನು ಕಾಪಾಡಲು ಮುಂದಾದರೆ, ಟವರ್‌ನಿಂದ ಹಾರಿ ಬಿಡುವುದಾಗಿ ಬೆದರಿಸಿದ್ದಾನೆ. ಇದು ಉಳಿದವರ ಭಯಕ್ಕೆ ಕಾರಣವಾಗಿತ್ತು. ಕೂಡಲೇ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: Bangalore Water Crisis: ಬೆಂಗಳೂರಿನ ಜಲದಾಹ ನೀಗಿಸಲು ತ್ಯಾಜ್ಯ ನೀರಿನ ಮರುಬಳಕೆ: ಸಿದ್ದರಾಮಯ್ಯ

ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬಳಿಕ ಯುವಕನ ಮನವೊಲಿಕೆಗೆ ಪ್ರಯತ್ನಪಟ್ಟಿದ್ದಾರೆ. ಆದರೆ, ಮೊದ ಮೊದಲಿಗೆ ಯುವಕ ಒಪ್ಪಲೇ ಇಲ್ಲ. ಬಳಿಕ ನಾಜಾಕಾಗಿ ಆತನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯುವಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ, ಆತನ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

Continue Reading
Advertisement
nitin gadkari ashiwini vaishnav
ಪ್ರಮುಖ ಸುದ್ದಿ2 mins ago

Lok Sabha Election 2024: ಮೋದಿ ಮತ್ತೆ ಪ್ರಧಾನಿ, ಎನ್‌ಡಿಗೆ 400: ನಿತಿನ್‌ ಗಡ್ಕರಿ; 2026ರಲ್ಲಿ ಬುಲೆಟ್‌ ಟ್ರೇನ್:‌ ಅಶ್ವಿನಿ ವೈಷ್ಣವ್

Tom Curran
ಕ್ರೀಡೆ8 mins ago

IPL 2024: ಎಲ್ಲ ಅನುಮಾನಗಳಿಗೂ ತೆರೆ; ಆರ್​ಸಿಬಿ ಸೇರಿದ ಇಂಗ್ಲೆಂಡ್​ ಆಲ್​ರೌಂಡರ್​

MP Tejaswi surya participate at Nagarthapet protest
ಬೆಂಗಳೂರು9 mins ago

Hanuman Chalisa: ನಗರ್ತಪೇಟೆಯಲ್ಲಿ ಗುಡುಗಿದ ‘ಕೇಸರಿ’; ಕಠಿಣ ಕ್ರಮದ ಭರವಸೆ, ಪ್ರತಿಭಟನೆಗೆ ವಿರಾಮ

SS Rajamouli soft launches Mahesh Babu
ಟಾಲಿವುಡ್11 mins ago

SS Rajamouli: ಮಹೇಶ್‌ ಬಾಬು ಸಿನಿಮಾ ಬಗ್ಗೆ ಜಪಾನ್‌ನಲ್ಲಿ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಜಮೌಳಿ!

Student Death Deeksha
ತುಮಕೂರು19 mins ago

Student death: ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು; ಶಿಕ್ಷಕರ ಸಸ್ಪೆಂಡ್

Thalapathy Vijay
ಕಾಲಿವುಡ್44 mins ago

Thalapathy Vijay: 14 ವರ್ಷಗಳ ಬಳಿಕ ದಳಪತಿ ವಿಜಯ್‌ ಕೇರಳಕ್ಕೆ; ಕಾರಿನ ಗ್ಲಾಸ್ ಪೀಸ್ ಪೀಸ್!

Virat Kohli's new look
ಕ್ರೀಡೆ51 mins ago

Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

Nagarthpet protest by BJP
ಬೆಂಗಳೂರು56 mins ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

viral video
ಕ್ರೀಡೆ1 hour ago

Imad Wasim: ಡ್ರೆಸ್ಸಿಂಗ್‌ ರೂಮ್​ನಲ್ಲೇ ರಾಜಾರೋಷವಾಗಿ ಸಿಗರೇಟ್‌ ಸೇದಿದ ಪಾಕ್​ ಆಟಗಾರ

Pashupati Kumar Paras
ಪ್ರಮುಖ ಸುದ್ದಿ1 hour ago

Lok Sabha Election: ಚಿರಾಗ್‌ಗೆ ಮಣೆ ಹಾಕಿದ ಎನ್‌ಡಿಎ, ಸಿಟ್ಟಿಗೆದ್ದ ಕೇಂದ್ರ ಸಚಿವ ಪಶುಪತಿ ಕುಮಾರ್‌ ಪರಾಸ್‌ ರಾಜೀನಾಮೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು56 mins ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು20 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌