Sira News: ಶಿರಾ ನಗರಸಭೆ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಪೂಜಾ ಪೆದ್ದರಾಜು ಅವಿರೋಧ ಆಯ್ಕೆ Vistara News

ಕರ್ನಾಟಕ

Sira News: ಶಿರಾ ನಗರಸಭೆ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಪೂಜಾ ಪೆದ್ದರಾಜು ಅವಿರೋಧ ಆಯ್ಕೆ

Sira News: ಶಿರಾ ನಗರಸಭೆ ಅಧ್ಯಕ್ಷೆಯಾಗಿ 31ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಪೂಜಾ ಪೆದ್ದರಾಜು (25) ಅವರು ಅವಿರೋಧ ಆಯ್ಕೆಯಾಗಿದ್ದಾರೆ.

VISTARANEWS.COM


on

Congress member Pooja Peddaraju
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ಶಿರಾ ನಗರಸಭೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಒಳಿದಿದೆ. 31ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಪೂಜಾ ಪೆದ್ದರಾಜು (25) ಅವರು ನಗರಸಭೆ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅಂಜಿನಪ್ಪ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ನಗರಸಭೆ (Sira News) 31 ಸದಸ್ಯ ಬಲ ಹೊಂದಿದ್ದು, ಈ ಪೈಕಿ 11 ಸದಸ್ಯರು ಚುನಾವಣೆಗೆ ಗೈರಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ಕಾಂಗ್ರೆಸ್‌ನಲ್ಲಿ ಲಕ್ಷ್ಮಿಕಾಂತ್ ಮತ್ತು ಪೂಜಾ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಿತ್ತು. ಹೀಗಾಗಿ ಶಾಸಕ ಟಿ.ಬಿ.ಜಯಚಂದ್ರ ಅವರು ಶುಕ್ರವಾರ ರಾತ್ರಿ, ಸದಸ್ಯರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿನ ನಿರ್ಧಾರದಂತೆ ಪೂಜಾ ಪೆದ್ದರಾಜು ಅವರನ್ನು ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆ ಮಾಡಲಾಗಿದೆ. ನಗರ ಸಭೆಯಲ್ಲಿ 31 ಸದಸ್ಯರು, ಸಂಸದ, ಶಾಸಕ, ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 34 ಮತಗಳಿವೆ. 11 ಸದಸ್ಯರ ಗೈರು ಹಾಜರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತವಿಲ್ಲದ ಕಾರಣ ಈ ಹಿಂದೆ ಜೆಡಿಎಸ್, ಬಿಜೆಪಿ, ಪಕ್ಷೇತರರ ಬೆಂಬಲದೊಂದಿಗೆ ಜೆಡಿಎಸ್‌ನ ಅಂಜಿನಪ್ಪ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಅಂಬುಜಾಕ್ಷಿ ನಟರಾಜು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Sira Municipal Council

ಇದನ್ನೂ ಓದಿ | HD Kumaraswamy : ಎಲ್ಲರನ್ನೂ Brother ಅನ್ನುವ ಕುಮಾರಸ್ವಾಮಿಗೆ ಡಿಕೆಶಿಯಂಥ ತಮ್ಮ ಯಾವ ಜನ್ಮದಲ್ಲೂ ಬೇಡವಂತೆ!

ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ನಗರಸಭೆಯ ಗದ್ದುಗೆ ಹಿಡಿಯಲು ತೀವ್ರ ಕಸರತ್ತು ನಡೆಸುತ್ತಿತ್ತು.
ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿಕಾಂತ್ ಹಾಗೂ ಪಿ.ಪೂಜಾ ಆಕಾಂಕ್ಷಿಗಳಾಗಿದ್ದರು. ಅಧ್ಯಕ್ಷರ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ನಗರಸಭೆ ಸದಸ್ಯರು ಶಾಸಕರಿಗೆ ಬಿಟ್ಟಿದ್ದರು. ಅವರು ಸೂಚಿಸುವವರು ಅಧ್ಯಕ್ಷರಾಗಲಿದ್ದಾರೆ ಎಂದು ಎಲ್ಲ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ನೂತನ ಅಧ್ಯಕ್ಷೆಯನ್ನು ಆಯ್ಕೆ ಮಾಡಲಾಗಿದೆ.

ನಗರಸಭೆಯ ಅಧ್ಯಕ್ಷೆಯಾಗಿ ಕಾಂಗ್ರೆಸ್​ ಸದಸ್ಯೆ ಪೂಜಾ ಆಯ್ಕೆಯಾಗಿರುವುದು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ಒಟ್ಟು 31 ಸದಸ್ಯ ಬಲದಲ್ಲಿ ಕಾಂಗ್ರೆಸ್-19, ಜೆಡಿಎಸ್- 11, ಪಕ್ಷೇತರ 1 ಸದಸ್ಯ ಇದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

Mohandas Pai : ಐಟಿ ಕಂಪನಿಗಳು ಹೈದರಾಬಾದ್‌ ನತ್ತ ಹೋಗುತ್ತಿವೆ, ಇದು ಐಟಿ ಹಬ್‌ ಖ್ಯಾತಿಯ ಬೆಂಗಳೂರಿಗೆ ಎಚ್ಚರಿಕೆ ಎಂದಿದ್ದಾರೆ ಉದ್ಯಮಿ ಟಿ.ವಿ ಮೋಹನದಾಸ್‌ ಪೈಕಿ. ಇದಕ್ಕೆ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

VISTARANEWS.COM


on

TV Mohandas Pai Priyank Kharge
Koo

ಬೆಂಗಳೂರು: ರಾಜ್ಯ ಸರ್ಕಾರ (State Government) ಹೀಗೇ ನಿರ್ಲಕ್ಷ್ಯ ಮಾಡುತ್ತಾ ಹೋದರೆ ಬೆಂಗಳೂರಿಗೆ ಇರುವ ಐಟಿ ನಗರಿ (IT City feather) ಎಂಬ ಗರಿಮೆಗೆ ಕುತ್ತು ಬಂದೀತು ಎಂದು ಹಿರಿಯ ಉದ್ಯಮಿ ಟಿ.ವಿ. ಮೋಹನ್‌ ದಾಸ್‌ ಪೈ (TV Mohandas Pai) ಅವರು ಚಾಟಿ ಏಟು ನೀಡಿದ್ದಾರೆ. ಆದರೆ, ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರು ʻಗಾಳಿಯಲ್ಲಿ ಗುಂಡು ಹೊಡೆಯಬೇಡಿʼʼ ಎಂದಿದ್ದಾರೆ.

analyticsindiamag.com ಎಂಬ ವೆಬ್‌ಸೈಟ್‌ ಪ್ರಕಟಿಸಿದ Will Hyderabad Dethrone Bangalore in the IT Hub Race? (ಐಟಿ ಹಬ್‌ ಪೈಪೋಟಿಯಲ್ಲಿ ಹೈದರಾಬಾದ್‌ ಬೆಂಗಳೂರನ್ನು ಅಗ್ರಪಟ್ಟದಿಂದ ಕಿತ್ತೆಸೆಯಬಹುದೇ?) ಎಂಬ ವರದಿಯನ್ನು ಮುಂದಿಟ್ಟುಕೊಂಡು ಟಿ.ವಿ. ಮೋಹನ್‌ದಾಸ್‌ ಪೈ ಅವರು ಟ್ವೀಟ್‌ ಒಂದನ್ನು ಮಾಡಿದ್ದಾರೆ. ವೆಬ್‌ಸೈಟ್‌ ವರದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಟ್ಯಾಗ್‌ ಮಾಡಿದ ಟ್ವೀಟ್‌ನಲ್ಲಿ Will Hyderabad Dethrone Bangalore’s IT Status? continued neglect of Bengaluru by successive govts over last 10 years has led to this. Hope govt shows more energy to improve city ಎಂದು ಬರೆದಿದ್ದಾರೆ. ಅಂದರೆ, ಐಟಿ ಕ್ಷೇತ್ರದ ಅಗ್ರಗಣ್ಯ ಎಂಬ ಬೆಂಗಳೂರಿನ ಸ್ಥಾನಮಾನವನ್ನು ಹೈದರಾಬಾದ್‌ ಕಿತ್ತು ಹಾಕಬಹುದೇ? ಇದಕ್ಕೆ ಕಾರಣವಾಗಿರುವುದು ಕಳೆದ ಹತ್ತು ವರ್ಷಗಳಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ವಹಿಸಿದ ದಿವ್ಯ ನಿರ್ಲಕ್ಷ್ಯ. ಸರ್ಕಾರ ನಗರದ ಅಭಿವೃದ್ಧಿಗಾಗಿ ಹೆಚ್ಚು ಶಕ್ತಿಯನ್ನು ವಿನಿಯೋಗಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಹಿರಿಯ ಉದ್ಯಮಿ ಆನಂದ ಮಹೇಂದ್ರ ಅವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು: ಗೂಗಲ್‌ ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ದೊಡ್ಡ ಕಚೇರಿಯನ್ನು ಸ್ಥಾಪಿಸಲಿದೆ. ಅಮೆರಿಕದ ಹೊರಗಡೆ ಅತಿ ದೊಡ್ಡ ಕಚೇರಿಯನ್ನು ನಿರ್ಮಿಸಲು ಮುಂದಾಗಿರುವುದು ಒಂದು ಗೂಗಲ್‌ ಭೌಗೋಳಿಕ ರಾಜಕೀಯ ಪ್ರಯತ್ನ. ಈ ಕ್ರಮವು ಭಾರತೀಯ ಟೆಕ್‌ ವಾತಾವರಣಕ್ಕೆ ಒಂದು ಗುಡ್‌ ನ್ಯೂಸ್‌. ಆದರೆ, ಗೂಗಲ್‌ ಸಿಲಿಕಾನ್‌ ವ್ಯಾಲಿ ಎಂದೇ ಹೆಸರಾಗಿರುವ ಭಾರತದ ನಿರ್ವಿವಾದಿತ ಐಟಿ ರಾಜಧಾನಿಯಾಗಿರುವ ಬೆಂಗಳೂರನ್ನು ಬಿಟ್ಟು ಹೈದರಾಬಾದ್‌ನ್ನು ಆಯ್ಕೆ ಮಾಡಿರುವುದು ಏನೋ ಅಸಂಬದ್ಧ ಅನಿಸುತ್ತದೆ.

ಈ ಅಂಶಗಳನ್ನು ಉಲ್ಲೇಖಿಸಿ ಮಾಡಿರುವ ವರದಿಗೆ ಹೈದರಾಬಾದ್‌ ಬೆಂಗಳೂರನ್ನು ಅಗ್ರ ಪಟ್ಟದಿಂದ ಕಿತ್ತು ಹಾಕಬಹುದೇ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ವರದಿ ಮಾಡಿದೆ.

ಟಿ.ವಿ. ಮೋಹನ್‌ ದಾಸ್‌ ಪೈ ಅವರು ಈ ಅಂಶವನ್ನು ಇಟ್ಟುಕೊಂಡು ಟ್ವೀಟ್‌ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಚಾಟಿ ಬೀಸುತ್ತಿರುವುದು ಇದು ಮೊದಲೇನಲ್ಲ. ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಬೆಂಗಳೂರು ನಗರದ ರಸ್ತೆಗಳ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನು ಸೆಳೆದಿದ್ದರು.

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಕೆಲವು ಐಟಿ ಕಂಪನಿಗೆ ನೀರು ನುಗ್ಗಿದಾಗಲೂ ಮೋಹನ್‌ ದಾಸ್‌ ಪೈ ಅವರು ಹೀಗೇ ಆದರೆ ಇಲ್ಲಿನ ಕಂಪನಿಗಳು ವಲಸೆ ಹೋಗುವ ಸಾಧ್ಯತೆಗಳಿವೆ ಎಂದಿದ್ದರು. ಈ ನಡುವೆ ಅವರ ಮಾತಿಗೆ ಪೂರಕವಾಗಿ ಬೆಂಗಳೂರಿನಲ್ಲಿ ಪ್ರಾರಂಭವಾಗಬೇಕಿದ್ದ ಕೆಲ ಐಟಿ ಕಂಪನಿ ಹೈದರಾಬಾದ್ ಗೆ ಶಿಫ್ಟ್ ಆಗುತ್ತಿವೆ ಎಂಬ ಮಾಹಿತಿಯೂ ಇದೆ. ಈ ಬಗ್ಗೆ ಐಟಿ ಕಂಪನಿಗಳು ಹಲವು ಬಾರಿ ಸರ್ಕಾರಕ್ಕೆ ಮಾಹಿತಿ ನೀಡಿವೆ ಎನ್ನಲಾಗಿದೆ. ಇದನ್ನು ಬಳಸಿಕೊಂಡು ಮೋಹನ್‌ ದಾಸ್‌ ಪೈ ಅವರು ಸರ್ಕಾರಕ್ಕೆ ಮಾರ್ಮಿಕವಾಗಿ ಕುಟುಕಿದ್ದಾರೆ.

ರಾಜ್ಯ ವಿರೋಧಿ ಹೇಳಿಕೆ ಸಲ್ಲ: ಮೋಹನ್‌ದಾಸ್‌ ಪೈಗೆ ಪ್ರಿಯಾಂಕ್‌ ತಿರುಗೇಟು

ಮೋಹನ್ ದಾಸ್ ಪೈ ಅವರು ಮಾಡಿರುವ ಟ್ವೀಟ್‌ಗೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.

ʻʻಮೋಹನ್ ದಾಸ್ ಪೈ ಅವರಿಗೆ ಮಾಹಿತಿ ಕೊರತೆ ಇದೆ. ಒಂದೇ ಒಂದು ಸಿಂಗಲ್ ಕಂಪನಿ ಕರ್ನಾಟಕ ಬಿಟ್ಟು ಹೋಗಿಲ್ಲ. ಕೆಲವರಿಗೆ ಕರ್ನಾಟಕ ವಿರೋಧಿ ಹೇಳಿಕೆ ಕೊಡೋದು ಹ್ಯಾಬಿಟ್ ಆಗಿದೆ. ಇದನ್ನು ಪದೇಪದೆ ಮಾಡುವುದು ಸರಿಯಲ್ಲ. ಅವರು ಒಂದೇ ಒಂದು ಕಂಪನಿಯ ಉದಾಹರಣೆ ನೀಡಲಿ ನೋಡೋಣ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾಕುವುದು ಬೇಡʼʼ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ʻʻಇದೇ ಮೋಹನ್ ದಾಸ್ ಪೈ ಬೇರೆ ಬೇರೆ ರಾಜ್ಯಗಳ ಕಂಪನಿಗಳಿಗೆ ಬಂಡವಾಳ ಹಾಕುವುದಿಲ್ವಾ? ಅವರು ಡೈವರ್ಸಿಫಿಕೇಷನ್ ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪಾ? ಅವರು ಕನ್ನಡಿಗರ ಪರವಾಗಿ ಮಾತನಾಡಬೇಕೇ ಹೊರತು ಈ ರೀತಿ ಮಾತನಾಡಬಾರದುʼʼ ಎಂದು ಹೇಳಿದ್ದಾರೆ ಪ್ರಿಯಾಂಕ್‌ ಖರ್ಗೆ.

ಇವರೇ ಅಲ್ವಾ ಎಲ್ಲ ವಿಷನ್ ಗ್ರೂಪ್‌ಗಳಲ್ಲಿ ಇದ್ದವರು? ಎಂದು ಕೇಳಿರುವ ಪ್ರಿಯಾಂಕ್‌ ಖರ್ಗೆ, ಫಿಲಿಪ್ಸ್ ಇನೊವೇಶನ್ ರಾಜ್ಯಕ್ಕೆ ಬಂದಾಗ ಇವರು ಬೆನ್ನು ತಟ್ಟಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

ʻʻಸಕಾರಾತ್ಮಕವಾಗಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡ್ತೇವೆ. ಅವರ ಮಾತುಗಳಿಂದ ನಮಗೆ ರಾಜ್ಯಕ್ಕೆ ಬಂಡವಾಳ ಬರುತ್ತದೆ ಎಂದು ಭಾವಿಸುತ್ತೇವೆ. ಆದರೆ, ಪದೇಪದೆ ಯಾಕೆ ಹೀಗೆ ನೆಗೆಟಿವ್ ಆಗಿ ಮಾತನಾಡ್ತಾರೆ ಗೊತ್ತಿಲ್ಲʼʼ ಎಂದು ಹೇಳಿರುವ ಪ್ರಿಯಾಂಕ್‌ ಖರ್ಗೆ, ಯಾವ ಬಂಡವಾಳ ಕೂಡ ರಾಜ್ಯದಿಂದ ವಾಪಸ್ ಹೊರಗಡೆ ಹೋಗಿಲ್ಲ ಎಂದಿದ್ದಾರೆ.

ʻʻಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವಂತ ವ್ಯಕ್ತಿ ಅವರಲ್ಲ. ಆದರೆ ಪದೇ ಪದೇ ಕರ್ನಾಟಕ ವಿರೋಧಿ ನಿಲುವು ತಾಳಬಾರದುʼʼ ಎಂದು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

ಮೂಲಸೌಕರ್ಯ ಕೊಡಲು ಸರ್ಕಾರ ವಿಫಲ ಎಂದ ಅಶ್ವತ್ಥನಾರಾಯಣ

ಈ ನಡುವೆ, ಮೋಹನ್ ದಾಸ್ ಪೈ ಟ್ವೀಟ್‌ ಅನ್ನು ಸಮರ್ಥಿಸಿ ಮಾತನಾಡಿರುವ ಮಾಜಿ ಐಟಿಬಿಟಿ ಸಚಿವ ಅಶ್ವಥ್ ನಾರಾಯಣ್ ಅವರು, ಎಲ್ಲಾ ಆವಿಷ್ಕಾರವಂತರು, ತಂತ್ರಜ್ಞಾನದವರು ಮತ್ತು ಉದ್ಯಮಶೀಲ ಇವರೆಲ್ಲರಿಗೂ ಬೆಂಗಳೂರು ಬೇಕು. ಆದರೆ, ಮೂಲಭೂತ ಸೌಕರ್ಯಗಳ ಕೊಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

ʻʻಭ್ರಷ್ಟಾಚಾರ ಹೆಚ್ಚುತ್ತಿದೆ. ಬಿಲ್ಡರ್ ಗಳು ಬಿಲ್ಡಿಂಗ್ ಕಟ್ಟಲು ತಯಾರಿಲ್ಲ. ಅವರಿಗೆ ಸಿಗುವ ಮಾರ್ಜಿನ್‌ ಹಣವನ್ನೂ ಸೇರಿಸಿ ಲಂಚ ಕೊಡುವ ಪರಿಸ್ಥಿತಿ ಇದೆ. ಹಾಗಾಗಿ ಎಲ್ಲರಿಗೂ ಹೈದರಾಬಾದ್ ಆಟ್ರಾಕ್ಷನ್ ಆಗುತ್ತದೆ. ಹೈದರಾಬಾದ್ ನಮ್ಮ ವ್ಯಾಪಾರಕ್ಕೆ ಉತ್ತಮವಾಗಿರುವ ಸ್ಥಳ ಎಂದು ಅವರಿಗೆ ಅನಿಸುತ್ತದೆʼʼ ಎಂದಿದ್ದಾರೆ ಅಶ್ವತ್ಥ್‌ ನಾರಾಯಣ್‌.

ʻʻಏನೂ ಮಾಡಲಿಲ್ಲ ಅಂದ್ರೂ ಬೆಂಗಳೂರಿಗೆ ಬರ್ತಾರೆ ಎಂಬ ಧೋರಣೆ ಬೆಂಗಳೂರಿಗೆ ಕಂಟಕವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ , ಅವರು ಸರ್ಕಾರ ಸಚಿವರು ಎಚ್ಚೆತ್ತುಕೊಳ್ಳಬೇಕಾಗಿದೆʼʼ ಎಂದು ಅವರು ಹೇಳಿದರು.

Continue Reading

ಕರ್ನಾಟಕ

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

Actress Ramya: ಸ್ಯಾಂಡಲ್‌ವುಡ್‌ ಕ್ವೀನ್ ನಟಿ ರಮ್ಯಾ ಅವರು 41ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.

VISTARANEWS.COM


on

Actress Ramya
Koo

ಬೆಂಗಳೂರು: ಮೋಹಕ ತಾರೆ, ಸ್ಯಾಂಡಲ್‌ವುಡ್‌ ಕ್ವೀನ್ ನಟಿ ರಮ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ತಮ್ಮ ನೆಚ್ಚಿನ ನಟಿಗೆ (Actress Ramya) ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಮತ್ತೊಂದೆಡೆ ರಮ್ಯಾ ಜನುಮದಿನವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದು, ತಮಗೆ ಇಷ್ಟವಾದವರ ಜತೆ ಕಾಲ ಕಳೆದ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ಅವರಿಗೆ ಶ್ವಾನಗಳೆಂದರೆ ಬಹಳ ಪ್ರೀತಿ. ಮನೆಯಲ್ಲಿ ಹಲವು ನಾಯಿಗಳನ್ನು ಅವರು ಸಾಕಿದ್ದಾರೆ. ಹೀಗಾಗಿ ಬರ್ತ್‌ಡೇ ದಿನ ಮುದ್ದಾದ ನಾಯಿ ಮರಿಗಳ ಜತೆ ಅವರು ಕಾಲಕಳೆದಿದ್ದು, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮ ಶುಭಾಶಯಗಳು ನನ್ನ ಮನಸ್ಸಿಗೆ ಸಂತೋಷ ನೀಡಿದಂತೆ ಈ ವಿಡಿಯೊ ನಿಮ್ಮ ಮನಸ್ಸಿಗೆ ಮುದ ನೀಡುವ ಭರವಸೆ ಇದೆ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಶ್ವಾನ ಪ್ರೇಮಿಯಾಗಿರುವ ರಮ್ಯಾ ಅವರು ಬೀದಿ ನಾಯಿಗಳ ಸಂರಕ್ಷಣೆಗಾಗಿ ಕೆಲಸ ಮಾಡುವ ಸಂಘ-ಸಂಸ್ಥೆಗಳ ಜತೆಗೂ ಗುರುತಿಸಿಕೊಂಡಿದ್ದಾರೆ. ಇವರ ಶ್ವಾನಗಳೆಂದರೆ ಅದೆಷ್ಟು ಇಷ್ಟವೆಂದರೆ, ಒಮ್ಮೆ ತಮ್ಮ ಮುದ್ದಿನ ನಾಯಿ ನಾಪತ್ತೆಯಾಗಿದ್ದರಿಂದ ಉತ್ತರ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್‌ ಆಗಿದ್ದರು. ನಂತರ ನಾಯಿ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರೆ. ಆದರೆ, ಕಾಣೆಯಾಗಿದ್ದ ನಾಯಿ ʼಚಾಂಪ್‌ʼ ಮೃತಪಟ್ಟಿತ್ತು. ಇದರಿಂದ ಅವರು ಬಹಳ ಬೇಸರಗೊಂಡಿದ್ದರು.

ಇದನ್ನೂ ಓದಿ | Darshan: ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ

ರಾಜಕೀಯಕ್ಕೆ ಎಂಟ್ರಿ ನೀಡಿದ್ದರಿಂದ ಚಿತ್ರರಂಗದಿಂದ ದೂರವಾಗಿದ್ದ ನಟಿ ರಮ್ಯಾ ಅವರು ಈಗ ಮತ್ತೆ ಚಿತ್ರರಂಗಕ್ಕೆ ಮರಳಿ ಎರಡನೇ ಇನಿಂಗ್ಸ್‌ ಆರಂಭಿಸಿದ್ದಾರೆ. ‘ಆ್ಯಪಲ್ ಬಾಕ್ಸ್’ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅವರೇ ನಾಯಕಿ ಎಂದು ಮೊದಲು ಹೇಳಲಾಗಿತ್ತು. ಆದರೆ, ನಂತರ ಅವರ ಸ್ಥಾನಕ್ಕೆ ನಟಿ ಸಿರಿ ರವಿಕುಮಾರ್‌ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ‘ಹಾಸ್ಟೆಲ್ ಹುಡುಗರು’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದರು. ಇದೀಗ ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿಯೂ ರಮ್ಯಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉದ್ಯೋಗ

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಕಡ್ಡಾಯವಾಗಿ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕು. ಇದಕ್ಕೆ ನವೆಂಬರ್‌ 30 ಕೊನೆಯ ದಿನವಾಗಿದ್ದು, ಗಡುವಿನೊಳಗೆ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ.

VISTARANEWS.COM


on

life certificate
Koo

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ಜೀವನ ಪ್ರಮಾಣಪತ್ರ (Jeevan Pramaan Patra) ಸಲ್ಲಿಸಲು ನವೆಂಬರ್‌ 30 ಕೊನೆಯ ದಿನವಾಗಿದೆ. ಒಂದು ವೇಳೆ ಗಡುವಿನೊಳಗೆ ಲೈಫ್‌ ಸರ್ಟಿಫಿಕೇಟ್ ( Life Certificate) ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ.

ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬರೂ ಪ್ರತಿ ವರ್ಷ ತಾವು ಜೀವಂತ ಇರುವ ಬಗ್ಗೆ ‘ಲೈಫ್‌ ಸರ್ಟಿಫೀಕೇಟ್’ ಅನ್ನು ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ ಸಲ್ಲಿಸಬೇಕು. ನವೆಂಬರ್ 30ರೊಳಗೆ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಜತೆಗೆ ಮುಂಬರುವ ತಿಂಗಳ ಪಿಂಚಣಿ ಬರುವುದಿಲ್ಲ. ಬಳಿಕ, ಪ್ರಮಾಣ ಪತ್ರ ನೀಡಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿಸಬೇಕು. ನಂತರ ಮುಂಬರುವ ಪಿಂಚಣಿಯಲ್ಲಿ ಹಳೆಯ ಬಾಕಿ ಸೇರಿಸಿ ಪಿಂಚಣಿ ಹಣ ಖಾತೆಗೆ ಜಮೆ ಆಗುತ್ತದೆ.

ಇದನ್ನೂ ಓದಿ | SSC Recruitment 2023 : ಅರೆಸೇನಾಪಡೆಗಳ 75 ಸಾವಿರವಲ್ಲ 26 ಸಾವಿರ ಹುದ್ದೆಗಳಿಗೆ ನೇಮಕ; ಕನ್ನಡದಲ್ಲಿಯೂ ನಡೆಯುತ್ತೆ ಪರೀಕ್ಷೆ!

ಏನಿದು ಜೀವನ ಪ್ರಮಾಣಪತ್ರ?

ಪಿಂಚಣಿ ಪಡೆಯುವವರು ಮೃತಪಟ್ಟ ಬಳಿಕವೂ ಅವರ ಖಾತೆಗೆ ಪಿಂಚಣಿ ಹಣ ಜಮೆಯಾಗುತ್ತಿತ್ತು. ಹಾಗಾಗಿ, ಇದನ್ನು ತಪ್ಪಿಸಲು ಫಲಾನುಭವಿಗಳು ಪ್ರತಿ ವರ್ಷ ತಾವು ಬದುಕಿರುವ ಬಗ್ಗೆ ಒಂದು ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಪ್ರಮಾಣ ಪತ್ರವನ್ನು ಪಿಂಚಣಿದಾರರು ಪೆನ್ಷನ್ ಡಿಸ್ಬರ್ಸಿಂಗ್ ಏಜೆನ್ಸಿ (ಪಿಡಿಎ) ಅಥವಾ ಪಿಂಚಣಿ ವಿತರಿಸುವ ಸಂಸ್ಥೆಗಳಲ್ಲಿ (ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌) ತೆರಳಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಡಿಜಿಟಲ್ ಜೀವನ ಪ್ರಮಾಣಪತ್ರ ಯೋಜನೆಯನ್ನು ಕೇಂದ್ರ ಸರ್ಕಾರ 2014ರಲ್ಲಿ ಜಾರಿ ಮಾಡಿತ್ತು.

Continue Reading

ಕರ್ನಾಟಕ

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

ಬೆಂಗಳೂರಿನ ಬಿಪಿಒ ಉದ್ಯೋಗಿಯೊಬ್ಬ ತನ್ನ ಕಚೇರಿಯ ಹುಡುಗಿಯರೂ ಸೇರಿದಂತೆ ನೂರಾರು ಹುಡುಗಿಯರ 13000 ಫೋಟೊಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾನೆ. ಯಾಕಿದು?

VISTARANEWS.COM


on

BPO Employee Bangalore Nude Photos
Koo

ಬೆಂಗಳೂರು: ಅವಳು ಬೆಂಗಳೂರಿನ ಬಿಪಿಒ ಕಂಪನಿಯಲ್ಲಿ (BPO Company in Bangalore) ಉದ್ಯೋಗಿ. ವಯಸ್ಸು 22 ವರ್ಷ. ಅವಳಿಗೊಬ್ಬ ಬಾಯ್‌ಫ್ರೆಂಡ್ (Boy friend). ಇನ್ನೂ 25 ವರ್ಷ. ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಅವರು ಆಗಲೇ ಪ್ರೀತಿ-ಪ್ರೇಮ-ಪ್ರಣಯ (Love and sex relationship) ಅಂತ ಸ್ವಲ್ಪ ಸ್ವಲ್ಪ ಎಲ್ಲೆ ಮೀರಿದ್ದರು. ಅವರಿಬ್ಬರ ನಡುವಿನ ಆತ್ಮೀಯ ಕ್ಷಣಗಳನ್ನು ಆ ಹುಡುಗ ಸೆರೆ ಹಿಡಿದಿದ್ದ. ಅದೊಂದು ದಿನ ಅವನು ಕಣ್ಣಂಚಿನಲ್ಲಿ ಇಲ್ಲದಾಗ ಅವನ ಮೊಬೈಲ್‌ ತೆಗೆದು ತಮ್ಮ ಇಂಟಿಮೇಟ್‌ ಕ್ಷಣಗಳ (Intemate moments) ಚಿತ್ರ ವಿಡಿಯೊಗಳನ್ನು ಡಿಲೀಟ್‌ ಮಾಡಲು ಮುಂದಾದಳು. ಅದು ಹೇಗೋ ಸಂಪಾದಿಸಿಕೊಂಡಿದ್ದ ಲಾಕಿಂಗ್‌ ಪಾಸ್‌ವರ್ಡ್‌ ಬಳಸಿ ಅವನು ಮೊಬೈಲ್‌ನ ಗ್ಯಾಲರಿ (Mobile Photo Gallery) ಓಪನ್‌ ಮಾಡಿದರೆ.. ಬೆಚ್ಚಿ ಬೀಳುವ ಸರದಿ ಅವಳದಾಗಿತ್ತು. ಯಾಕೆಂದರೆ, ಅಲ್ಲಿ ಅವಳೊಬ್ಬಳ ಫೋಟೊ, ವಿಡಿಯೊ ಮಾತ್ರ ಇದ್ದಿದ್ದಲ್ಲ. ಸುಮಾರು 13000 ಹುಡುಗಿಯರ ಸೆಕ್ಸೀ, ರೊಮ್ಯಾಂಟಿಕ್‌ ಫೋಟೊಗಳು ಅಲ್ಲಿದ್ದವು. ಮಾತ್ರವಲ್ಲ, ಅವರಿಬ್ಬರು ಕೆಲಸ ಮಾಡುವ ಅದೇ ಬಿಪಿಒ ಕಂಪನಿಯ ಹಲವು ಹುಡುಗಿಯರ ಮಾದಕ ಚಿತ್ರಗಳ ಸಂಪುಟವೂ ಅಲ್ಲಿ ತೆರೆದುಕೊಂಡಿತ್ತು!

ಹೀಗೆ ಬೆಚ್ಚಿ ಬಿದ್ದ ಹುಡುಗಿಯ ಹೆಸರು ಸಾನ್ವಿ (ಹೆಸರು ಬದಲಿಸಲಾಗಿದೆ). ವರ್ಷದ ಹಿಂದೆ ಬಿಪಿಒ ಕಂಪನಿಗೆ ಸೇರಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ಐದು ತಿಂಗಳ ಹಿಂದೆ ಬಂದು ಸೇರಿಕೊಂಡವನು ಸಂತೋಷ್‌ ಆದಿತ್ಯ (ಹೆಸರು ಬದಲಿಸಲಾಗಿದೆ). ನೋಡಲು ಚೆನ್ನಾಗಿದ್ದ ಅವನಿಗೂ, ಚೆಲುವಿನ ಖನಿಯಾಗಿದ್ದ ಅವಳಿಗೂ ಆಗಲೇ ಪರಿಚಯವಾಗಿತ್ತು. ಒಂದೇ ತಿಂಗಳಲ್ಲಿ ಅದು ಸಂಬಂಧವಾಗಿ ಪರಿವರ್ತನೆಯಾಯಿತು. ಮನಸು ಮಾತ್ರವಲ್ಲ ದೇಹಗಳೂ ಹತ್ತಿರವಾಗಿ ಆತ್ಮೀಯ ರಸಕ್ಷಣಗಳು ನಡೆದುಹೋದವು. ಈ ರಸಕ್ಷಣಗಳ ನೆನಪು ಶಾಶ್ವತವಾಗಿರಲಿ ಎಂದು ಸಂತೋಷ್‌ ಆದಿತ್ಯ ಕೆಲವೊಮ್ಮೆ ಫೋಟೊ ತೆಗೆದಿದ್ದ, ಕೆಲವೊಮ್ಮೆ ವಿಡಿಯೊ ಮಾಡಿದ್ದ.

BPO Employee representational photo
ಪ್ರಾತಿನಿಧಿಕ ಚಿತ್ರ

ಎಲ್ಲ ಮುಗಿದ ಮೇಲೆ ಸಾನ್ವಿಗೆ ಒಬ್ಬ ಹುಡುಗನ ಮೊಬೈಲ್‌ನಲ್ಲಿ ತನ್ನ ಈ ರೀತಿಯ ಫೋಟೊ/ವಿಡಿಯೊಗಳು ಇರುವುದು ಸರಿಯಲ್ಲ ಎಂಬುದರ ಅರಿವಾಗಿದೆ. ಹಾಗಾಗಿ ಆಕೆ ಆತನಿಗೆ ಅರಿವಿಲ್ಲದೆಯೇ ಆತನ ಮೊಬೈಲ್‌ ತೆರೆದು ಗ್ಯಾಲರಿ ಓಪನ್‌ ಮಾಡಿದ್ದಾಳೆ. ಆಗ ಅವಳಿಗೆ ಕಂಡಿದ್ದು 13 ಸಾವಿರ ಫೋಟೊಗಳು! ಅದರಲ್ಲಿ ಹೆಚ್ಚಿನವರು ಹೆಣ್ಮಕ್ಕಳ ಫೋಟೊಗಳು! ಅದರಲ್ಲೂ ತನ್ನದೇ ಆಫೀಸಿನ ಹೆಣ್ಮಕ್ಕಳ ಫೋಟೊಗಳು ಹೆಚ್ಚಾಗಿದ್ದವು. ಅವರ ಜತೆಗೆ ಇದ್ದದ್ದು ಕೂಡಾ ಅದೇ ಇಂಟಿಮೇಟ್‌ ಕ್ಷಣಗಳು.

ಇದನ್ನು ನೋಡಿದ ಸಾನ್ವಿ ಬೆಚ್ಚಿ ಬಿದ್ದಿದ್ದಾಳೆ. ಅಷ್ಟೂ ಹುಡುಗಿಯರ ಫೋಟೊ/ವಿಡಿಯೊಗಳ ನಡುವೆ ಆಕೆಯದ್ದು ಕಾಣಿಸಲೇ ಇಲ್ಲ! ಇದೆಲ್ಲ ನಡೆದದ್ದು ಸುಮಾರು 10 ದಿನಗಳ ಹಿಂದೆ. ಇದನ್ನು ನೋಡಿದ ಸಾನ್ವಿ ಸುಮ್ಮನಿರಲಿಲ್ಲ.

ಮೊದಲು ಸಂತೋಷ್‌ ಜತೆಗೆ ಬ್ರೇಕಪ್‌ ಮಾಡಿಕೊಂಡಿದ್ದಾಳೆ. ನಂತರ ನವೆಂಬರ್‌ 20ರಂದು ಆಕೆ ತನ್ನ ಕಚೇರಿಯ ಸೀನಿಯರ್‌ಗಳಿಗೆ ಈ ವಿಚಾರ ತಿಳಿಸಿದ್ದಾಳೆ. ಸಂತೋಷ್‌ನ ಫೋನ್‌ನಲ್ಲಿ 13000ಕ್ಕೂ ಹೆಚ್ಚು ನಗ್ನ ಫೋಟೊಗಳಿವೆ. ಇವುಗಳಲ್ಲಿ ಕೆಲವು ನಮ್ಮ ಕಚೇರಿಯಲ್ಲೇ ಕೆಲಸ ಮಾಡುವ ಹುಡುಗಿಯರು, ಹೆಂಗಸರದ್ದೂ ಇದೆ. ಹೀಗಾಗಿ ಅವರಿಗೆ ಯಾರಿಗೂ ಮುಂದೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಚಾರವನ್ನು ಗಮನಕ್ಕೆ ತರುತ್ತಿರುವುದಾಗಿ ಹೇಳಿದ್ದಾಳೆ.

ವರದಿಗಳ ಪ್ರಕಾರ ಈ ಚಿತ್ರಗಳಲ್ಲಿ ಕೆಲವು ಒರಿಜಿನಲ್‌ ಆಗಿವೆ. ಅದರ ಜತೆಗೆ ಕೆಲವು ಚಿತ್ರಗಳು ನಕಲಿಯಾಗಿರಬಹುದು ಎನ್ನಲಾಗಿದೆ. ಅಂದರೆ ಕಚೇರಿಯ ಕೆಲವು ಮಹಿಳೆಯರ ಯುವತಿಯರ ಫೋಟೊಗಳನ್ನು ಆತ ನಗ್ನ ಚಿತ್ರಗಳಿಗೆ ಜೋಡಿಸಿ ಆನಂದಿಸಿರಬಹುದು ಎಂದು ಕೂಡಾ ಹೇಳಲಾಗುತ್ತಿದೆ.

BPO sex case

ಮತ್ತೊಬ್ಬ ಸಿಬ್ಬಂದಿಯಿಂದ ಪೊಲೀಸರಿಗೆ ದೂರು

ಸಂತೋಷ್‌ನ ಈ ವಿಕೃತಿಯನ್ನು ಅರ್ಥ ಮಾಡಿಕೊಂಡ ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯ ಉದ್ಯೋಗಿಯಾಗಿರುವ ಸುಚಿತ್ರಾ (ಹೆಸರು ಬದಲಿಸಲಾಗಿದೆ) ಅವರು ಸಂತೋಷ್‌ ವಿರುದ್ಧ ನವೆಂಬರ್‌ 23ರಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅವನು ಇದುವರೆಗೆ ಈ ಕಚೇರಿಯಲ್ಲಿ ಯಾವ ಮಹಿಳೆಯರಿಗೂ ತೊಂದರೆ ಮಾಡಿಲ್ಲ. ಆದರೆ, ಈ ರೀತಿ ಫೋಟೊಗಳು ಇವೆ ಎಂದಾಗ ಅದು ಹೆಣ್ಮಕ್ಕಳಿಗೆ ಆತಂಕ ಆಗಿಯೇ ಆಗುತ್ತದೆ. ಆತ ಯಾಕೆ ಈ ರೀತಿಯಾಗಿ ಫೋಟೊಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾನೆ? ಅವನ ಉದ್ದೇಶವೇನು ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಇಂಥ ಫೋಟೊಗಳು ಒಂದು ವೇಳೆ ಸೋರಿಕೆಯಾದರೆ ಹೆಣ್ಮಕ್ಕಳು ತುಂಬ ಖಿನ್ನತೆಗೆ ಒಳಗಾಗಬಹುದು. ಹೀಗಾಗಿ ಪ್ರಕರಣದ ಗಂಭೀರತೆಯನ್ನು ಆಧರಿಸಿ ಪೊಲೀಸರಿಗೆ ವಿವರಿಸಿದ್ದೇವೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ ಎನ್ನಲಾಗಿದೆ.

ಈ ನಡುವೆ ಕಂಪನಿ ಇನ್ನೊಂದು ಸ್ಪಷ್ಟೀಕರಣವನ್ನು ನೀಡಿದೆ. ಅದೇನೆಂದರೆ, ಸಂತೋಷ್‌ ಫೋಟೊಗಳನ್ನು ಮಾರ್ಫ್‌ ಮಾಡಲು ಕಂಪನಿಯ ಯಾವುದೇ ಸಾಧನಗಳನ್ನು ಬಳಸಿಕೊಂಡಿಲ್ಲ ಎಂಬುದು. ಈ ಮೂಲಕ ಆತನ ಇಂಥ ಕುಕೃತ್ಯಗಳಿಗೂ ಕಂಪನಿಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.

ಇದೇವೇಳೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಸಂತೋಷ್‌ನನ್ನು ಆತನ ಕಚೇರಿಯಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ. ಆತನ ಮೊಬೈಲ್‌ ಮತ್ತು ಅದರಲ್ಲಿರುವ ಚಿತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಸಂಖ್ಯೆಯ ನಗ್ನ ಚಿತ್ರಗಳನ್ನು ಸಂಗ್ರಹಿಸುವ ಆತನ ಉದ್ದೇಶವೇನು ಎನ್ನುವ ಬಗ್ಗೆ ಅವರು ತನಿಖೆ ನಡೆಸಲಿದ್ದಾರೆ.

ಮೊಬೈಲ್‌ನಲ್ಲಿರುವ ಚಿತ್ರಗಳ ಪೈಕಿ ಕೆಲವು ಮಾರ್ಫ್‌ ಮಾಡಿದ ನಕಲಿ ಫೋಟಗಳು, ಕೆಲವು ನಿಜವಾಗಿಯೂ ಮಹಿಳೆಯರದ್ದೇ ಫೋಟೊಗಳು. ಅವನು ಈ ಫೋಟೊಗಳನ್ನು ಹೇಗೆ ತೆಗೆದುಕೊಂಡ, ಕೇವಲ ಐದೇ ತಿಂಗಳಲ್ಲಿ ಇಂಥ ಫೋಟೊಗಳನ್ನು ತೆಗೆಸಿಕೊಳ್ಳುವಷ್ಟು ಆತ್ಮೀಯತೆ ಹೇಗೆ ಬೆಳೆಯಿತು? ಆತ ಯಾರಿಗಾದರೂ ಈ ಫೋಟೋ ಬಳಸಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನಾ? ಯಾರಿಗಾದರೂ ಕಳುಹಿಸಿದ್ದಾನಾ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಜತೆಗೆ ಆತನ ಸಂಪರ್ಕಗಳ ಮೇಲೂ ಕಣ್ಣಿಡಲಿದ್ದಾರೆ.

Continue Reading
Advertisement
TV Mohandas Pai Priyank Kharge
ಕರ್ನಾಟಕ8 mins ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ25 mins ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

peace accord between Manipur oldest armed group UNLF and Government
ದೇಶ35 mins ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ51 mins ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ53 mins ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ1 hour ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

life certificate
ಉದ್ಯೋಗ1 hour ago

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

pain
ಆರೋಗ್ಯ1 hour ago

Home Remedies: ಚಳಿಗಾಲದಲ್ಲಿ ಪಾದ ನೋವೇ? ಇಲ್ಲಿದೆ ಮನೆಮದ್ದು

BPO Employee Bangalore Nude Photos
ಕರ್ನಾಟಕ2 hours ago

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

Finger Ring
ಫ್ಯಾಷನ್2 hours ago

Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌