Couple Love | ಮಡದಿ ಮಡಿದಳೆಂದು ಭಾವಿಸಿ 9 ವರ್ಷ ಕಳೆದ; ಬದುಕಿದ್ದು ತಿಳಿದು ಹರ್ಯಾಣದಿಂದ ಓಡೋಡಿ ಬಂದು ತಬ್ಬಿ ಮುತ್ತಿಟ್ಟು ಕಣ್ಣೀರಾದ! - Vistara News

ಕರ್ನಾಟಕ

Couple Love | ಮಡದಿ ಮಡಿದಳೆಂದು ಭಾವಿಸಿ 9 ವರ್ಷ ಕಳೆದ; ಬದುಕಿದ್ದು ತಿಳಿದು ಹರ್ಯಾಣದಿಂದ ಓಡೋಡಿ ಬಂದು ತಬ್ಬಿ ಮುತ್ತಿಟ್ಟು ಕಣ್ಣೀರಾದ!

Couple Love | ಕಳೆದ 9 ವರ್ಷಗಳ ಹಿಂದೆ ನಾಪತ್ತೆಯಾಗಿದ್ದವಳು ಇನ್ನಿಲ್ಲ ಎಂದುಕೊಂಡು ಒಂಟಿಯಾಗಿ, ಅದೇ ನೋವಿನಲ್ಲಿಯೇ ಜೀವನ ನಡೆಸುತ್ತಿದ್ದವನ ಬಾಳಲ್ಲಿ ಹೊಸ ಆಶಾಕಿರಣ ಮೂಡಿದೆ. ಪತ್ನಿ ಇರುವ ಸುದ್ದಿ ಕೇಳಿ 3,000 ಕಿಮೀ ದೂರದಿಂದ ಪತಿಯು ಹುಡುಕಿಕೊಂಡು ಬಂದಿದ್ದಾರೆ.

VISTARANEWS.COM


on

Kodagu News missing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಡಗು: ದೇಶದ ರಾಜಧಾನಿ ನವ ದೆಹಲಿಯಲ್ಲಿ ಮುದ್ದಿನ ಮಡದಿ (Couple Love) ಕಳೆದು ಹೋಗಿ ೯ ವರ್ಷಗಳೇ ಗತಿಸಿತ್ತು. ಹುಡುಕಿ ಹುಡುಕಿ ಸುಸ್ತಾಗಿದ್ದ ಪತಿ ಮತ್ತವನ ಕುಟುಂಬಸ್ಥರು ಆಕೆ ಸತ್ತೇ ಹೋಗಿದ್ದಳು ಎಂದು ಕೈಚೆಲ್ಲಿ ಕುಳಿತಿದ್ದರು. ಆದರೆ, ಮಡಿಕೇರಿಯು ಈ ದಂಪತಿಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ಹೆಂಡತಿ ಬದುಕಿದ್ದಾಳೆ ಎಂದು ಸುದ್ದಿ ತಿಳಿದ ಪತಿಯು ಹರ್ಯಾಣದಿಂದ ಓಡಿ ಬಂದಿದ್ದು, ಕಣ್ಣುಗಳು ಅರಸಿಯನ್ನು ಅರಸಿದೆ. ಅವಳು ಕಂಡೊಡನೆ ಓಡೋಡಿ ಹೋಗಿ ಬಿಗಿದಪ್ಪಿದ, ಗಟ್ಟಿಯಾಗಿ ಹಿಡಿದು ಮುದ್ದಾಡಿದ. ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ ಪ್ರಸಂಗಕ್ಕೆ ಮಡಿಕೇರಿ ಸಾಕ್ಷಿಯಾಯಿತು.

Kodagu News Couple Love

ಈಕೆಯ ಹೆಸರು ದರ್ಶಿನಿ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡ ಕೆಹರ್ ಸಿಂಗ್ ಜತೆಗೆ ಸಂಸಾರ ಮಾಡುತ್ತಿದ್ದರು. ಐವರು ಮಕ್ಕಳೂ ಇವರಿಗಿದ್ದರು. ಆದರೆ, ದರ್ಶಿನಿ ಅವರಿಗೆ ಕೊಂಚ ಮಾನಸಿಕ ಅಸ್ವಸ್ಥತೆ ಕಾಡಿತ್ತು. ಇದೇ ವೇಳೆ 2013ರಲ್ಲಿ ದೆಹಲಿಯಲ್ಲಿ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ದರ್ಶಿನಿಗಾಗಿ ಕೆಹರ್‌ ಸಿಂಗ್‌ ಹುಡುಕಾಡಿದ ಊರುಗಳಿಲ್ಲ. ಬರೋಬ್ಬರಿ 9 ವರ್ಷಗಳ ಹುಡುಕಾಟ ನಡೆಸಿದರೂ ಪತ್ನಿಯ ಸುಳಿವು ಇರಲಿಲ್ಲ. ಕೊನೆಗೆ ಆಕೆ ಕೋವಿಡ್‌ಗೆ ಬಲಿಯಾಗಿರುಬಹುದೆಂದು ಊಹಿಸಿ ಹುಡುಕುವುದನ್ನು ನಿಲ್ಲಿಸಲಾಗಿತ್ತು.

Kodagu News Couple Love

ಪತ್ನಿಯ ಅಗಲಿಕೆಯ ನೋವಿನಲ್ಲಿದ್ದ ಸಿಂಗ್‌ಗೆ ಬಂದ ಅದೊಂದು ಫೋನ್‌ ಕಾಲ್‌ನಿಂದ ಅಚ್ಚರಿಯಾಯಿತು. ಆಕಾಶಕ್ಕೆ ಇನ್ನು ಮೂರೇ ಗೇಣು ಎಂಬಂತೆ ಭಾಸವಾಗಿತ್ತು. ಫೋನ್‌ ಕಾಲ್‌ ಮಾಡಿದವರು ನಿಮ್ಮ ಪತ್ನಿ ದರ್ಶಿನಿ ಮಡಿಕೇರಿಯಲ್ಲಿ ಇರುವುದಾಗಿ ತಿಳಿಸಿದ್ದರು. ಇದನ್ನು ನಂಬಬೇಕೊ ಬೇಡವೋ ಎಂಬ ಗೊಂದಲದಲ್ಲಿಯೇ ಸುಮಾರು 3,000 ಕಿ.ಮೀ ದೂರದ ದೆಹಲಿಯಿಂದ ಕೊಡಗಿಗೆ ಓಡೋಡಿ ಬಂದರು.

Kodagu News Couple Love

ಇದನ್ನೂ ಓದಿ |Karnataka Election | ಕುಟುಂಬ ರಾಜಕಾರಣ ಎಂದರೇ ಭ್ರಷ್ಟಾಚಾರ; ದೇಶ-ಕರ್ನಾಟಕದಲ್ಲಿ ಇದಕ್ಕಿಲ್ಲ ಅವಕಾಶ: ಪ್ರಲ್ಹಾದ್‌ ಜೋಶಿ

ಸಿಹಿ ತಿನ್ನಿಸಿದ ಪತಿ
ಕೊನೆಗೆ ಹರ್ಯಾಣದಿಂದ ಕೊಡಗಿನ ತನಲ್‌ ಸಂಸ್ಥೆಗೆ ಕೆಹರ್‌ ಸಿಂಗ್‌ ಬಂದಿದ್ದಾರೆ. ಅಲ್ಲಿನ ಆವರಣಕ್ಕೆ ಬಂದೊಡದೆ ಸಿಂಗ್‌ ಕಣ್ಣುಗಳು ಪ್ರೀತಿಯ ಮಡದಿಗಾಗಿ ಹುಡುಕಾಡುತ್ತಿತ್ತು. ಪತ್ನಿ ಎಲ್ಲಿ, ಎಲ್ಲಿ ಎಂದು ಅತ್ತಿತ್ತ ನೋಡುತ್ತಿತ್ತು. ಆಗ ಒಳಗಿನಿಂದ ಪತ್ನಿಯನ್ನು ಕರೆ ತರಲಾಯಿತು. ಆಕೆಯನ್ನು ಕಂಡೊಡನೆ ಓಡೋಡಿ ಬಂದ ಕೆಹರ್‌ ಸಿಂಗ್‌, ಆಕೆಯನ್ನು ಬಿಗಿದಪ್ಪಿದರು. 9 ವರ್ಷಗಳ ಬಳಿಕ ಭೇಟಿಯಾದ ಇಬ್ಬರು ಒಂದು ಕ್ಷಣ ಭಾವುಕಾರಾದರು. ಇವರಿಬ್ಬರ ಆನಂದಭಾಷ್ಪ ಕಂಡು ಅಲ್ಲಿದ್ದವರ ಕಣ್ಣುಗಳು ಒದ್ದೆಯಾಗಿದ್ದವು. ಧರ್ಮಪತ್ನಿಗೆ ಸಿಹಿ ತಿನಿಸಿ ಈ ಖುಷಿಯನ್ನು ಸಂಭ್ರಮಿಸಿದರು.

Kodagu News Couple Love

ಅರೆನಗ್ನ ಸ್ಥಿತಿಯಲ್ಲಿ ಪತ್ತೆ
ದೆಹಲಿಯಲ್ಲಿ ನಾಪತ್ತೆಯಾಗಿದ್ದ ದರ್ಶಿನಿ, ಊರೂರು ಸುತ್ತಿ ಕುಶಾಲನಗರದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆ ಆಗಿದ್ದರು. ಈಕೆಯನ್ನು ಕಂಡ ಪೊಲೀಸರು ಮಡಿಕೇರಿಯ ತನಲ್ ಎಂಬ ಆಶ್ರಯ ಕೇಂದ್ರಕ್ಕೆ ತಂದು ಸೇರಿಸಿದ್ದರು. ಸುಮಾರು ನಾಲ್ಕು ವರ್ಷಗಳಿಂದ ದರ್ಶಿನಿ ಅಲ್ಲಿಯೇ ಇದ್ದರು. ಈಕೆಗೆ ಮಹಮದ್ ಎಂಬುವವರು ಆಶ್ರಯ ಕೊಟ್ಟು, ಚಿಕಿತ್ಸೆ ಕೊಡಿಸುತ್ತಿದ್ದರು.

Kodagu News Couple Love

ಕಳೆದ ಆರು ತಿಂಗಳ ಹಿಂದಷ್ಟೇ ದರ್ಶಿನಿಗೆ ತನ್ನ ಊರು ಹಾಗೂ ತನ್ನವರ ನೆನಪು ಬಂದಿದೆ. ತಾನು ಹರ್ಯಾಣದವಳು ಎಂಬ ವಿಷಯವನ್ನು ತಿಳಿಸಿದ್ದರು. ಈ ಮಾಹಿತಿಯನ್ನು ಇಟ್ಟುಕೊಂಡು ತನಲ್‌ ಸಂಸ್ಥೆಯ ಮಹಮದ್‌ರವರು ಹರ್ಯಾಣದ ಹಲವು ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ಮಿಸಿಂಗ್ ಆದವರ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಎಲ್ಲರ ಮಾಹಿತಿಯನ್ನು ಕಲೆ ಹಾಕಿದಾಗ ದರ್ಶಿನಿಯ ಪತಿಯ ಸಂಪರ್ಕ ಸಿಕ್ಕಿದೆ. ಹೀಗಾಗಿ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ದೂರಾಗಿದ್ದ ದಂಪತಿಯನ್ನು ಒಂದು ಮಾಡಿದರು.

Kodagu News Couple Love

ಕಡೆಗೂ ತನ್ನವರನ್ನು ಸೇರಿದ ಖುಷಿಯಲ್ಲಿ ಸಿಂಗ್‌ ಹಾಗೂ ದರ್ಶಿನಿ ದಂಪತಿಯು ತನಲ್‌ ಸಂಸ್ಥೆಯಲ್ಲಿದ್ದವರಿಗೆ ಧನ್ಯತಾ ಭಾವದೊಂದಿಗೆ ನಮಸ್ಕರಿಸಿ ದೆಹಲಿಗೆ ಹೊರಟಿದ್ದಾರೆ. ನಾಲ್ಕು ವರ್ಷ ತನ್ನನ್ನು ಸಾಕಿ ಸಲುಹಿದವರನ್ನು ಬಿಟ್ಟು ಹೋಗುವಾಗ ದರ್ಶಿನಿಯ ಕಣ್ಣುಗಳು ಒದ್ದೆಯಾಗಿದ್ದವು.

ಇದನ್ನೂ ಓದಿ | Karnataka Election | ಬಿಜೆಪಿಗೆ ಮತ ನೀಡಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

ಯಾವುದೇ ಸಂದರ್ಭ ಇರಲಿ ದಿನದಲ್ಲಿ ಶುಭ ಸಮಯ ನೋಡಿ ಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು (Akshaya Tritiya 2024) ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Akshaya Tritiya 2024
Koo

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲ್ಪಡುವ ಹಬ್ಬ ಅಕ್ಷಯ ತೃತೀಯ (Akshaya Tritiya 2024) ಅಥವಾ ಅಕ್ಷಯ ತದಿಗೆ. ಈ ದಿನ ಕೃತ ಯುಗದ ಆರಂಭದ ದಿನ. ವಿಷ್ಣುವಿನ (vishnu) ದಶಾವತಾರಗಳಲ್ಲಿ ಆರನೇ ಅವತಾರವಾದ ಪರಶುರಾಮನ (parasuram) ಹಾಗೂ ಕಲ್ಯಾಣಕ್ರಾಂತಿಯ ರೂವಾರಿ ಬಸವೇಶ್ವರರ (basaweshwara) ಜನ್ಮ ದಿನ. ಭಗೀರಥನ (bhagiratha) ಪ್ರಯತ್ನದಿಂದ ಗಂಗೆ (ganga) ಭೂಮಿಗೆ ಬಂದ ದಿನವೂ ಹೌದು. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನವೆಂದು ನಂಬಲಾಗುತ್ತದೆ.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯ ವರ್ಷದ ಮೂರೂವರೆ ಶುಭದಿನಗಳಾದ ವಿಜಯದಶಮಿ (vijayadashami), ದೀಪಾವಳಿ (deepavali) ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಹೀಗಾಗಿ ಈ ದಿನ ಯಾವುದೇ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. ಅಲ್ಲದೆ ಅಕ್ಷಯ ತೃತೀಯವು ಚಿನ್ನ ಖರೀದಿಗೆ ಒಳ್ಳೆಯ ದಿನ ಎಂದೇ ನಂಬಲಾಗುತ್ತದೆ. ಈ ದಿನ ಯಾವುದೇ ವಸ್ತು ಖರೀದಿ ಮಾಡಿದರೂ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ಈ ದಿನ ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ.

ಯಾವುದೇ ಸಂದರ್ಭ ಇರಲಿ. ದಿನದಲ್ಲಿ ಶುಭ ಸಮಯ ನೋಡಿಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.


ಶುಭ ಮುಹೂರ್ತ ಯಾವಾಗ?

ಅಖ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯದ ಹಬ್ಬವನ್ನು ಮೇ 10ರಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಲ್ಲಿ ಮಂಗಳಕರ ದಿನವನ್ನು ಆಚರಿಸಲಾಗುತ್ತದೆ ಮತ್ತು ಮಹತ್ವದ ಧಾರ್ಮಿಕ ಆಚರಣೆಗಳು ಮತ್ತು ಚಟುವಟಿಕೆಗಳಿಂದ ಗುರುತಿಸಲ್ಪಡುತ್ತದೆ. ಈ ದಿನ ಚಿನ್ನದ ಖರೀದಿಯು ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ 2024ರ ಪೂಜೆ ಮುಹೂರ್ತವು ಮೇ 10ರಂದು ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. ತೃತೀಯ ತಿಥಿಯು ಮೇ 10ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 2.50ಕ್ಕೆ ಮುಕ್ತಾಯಗೊಳ್ಳುತ್ತದೆ.

ಚಿನ್ನ ಖರೀದಿಗೆ ಶುಭ ಸಮಯ

ಚಿನ್ನವನ್ನು ಖರೀದಿಸಲು ಮೇ 9ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗಿ ಮೇ 11ರಂದು ತೃತೀಯ ತಿಥಿ ಮುಗಿಯುವವರೆಗೆ ಇರುತ್ತದೆ. ನವದೆಹಲಿ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಅಕ್ಷಯ ತೃತೀಯ 2024ರಂದು ಚಿನ್ನವನ್ನು ಖರೀದಿಸಲು ನಿರ್ದಿಷ್ಟ ಸಮಯದಲ್ಲಿ ಸ್ವಲ್ಪ ಬದಲಾಗುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಹೊಸ ದೆಹಲಿಯಲ್ಲಿ ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ, ಮುಂಬಯಿಯಲ್ಲಿ ಬೆಳಗ್ಗೆ 6.6ರಿಂದ ಮಧ್ಯಾಹ್ನ 12.35ರವರೆಗೆ ಮತ್ತು ಬೆಂಗಳೂರಿನಲ್ಲಿ ಬೆಳಗ್ಗೆ 5.56ರಿಂದ ಮಧ್ಯಾಹ್ನ 12.16ರವರೆಗೆ ಚಿನ್ನ ಖರೀದಿ ಮಾಡಲು ಶುಭ ಸಮಯವಾಗಿದೆ.

Continue Reading

ಪ್ರಮುಖ ಸುದ್ದಿ

Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

Lok Sabha Election 2024: ರಾಜ್ಯದ 14 ಕ್ಷೇತ್ರಗಳ ಪೈಕಿ ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.72.75 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.57.20 ವೋಟಿಂಗ್‌ ಆಗಿದೆ.

VISTARANEWS.COM


on

Lok Sabha Election 2024
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಹಳ್ಳಿ ಜೀವನದ ವಿಷಯಾಧಾರಿತ ಮತಗಟ್ಟೆ ಆಕರ್ಷಕವಾಗಿ ನಿರ್ಮಾಣಗೊಂಡಿದ್ದು, ಮತದಾರರ ಗಮನ ಸೆಳೆಯಿತು.
Koo

ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (lok sabha election 2024) ಮಂಗಳವಾರ ನಡೆದಿದ್ದು, ಮತದಾರರು ಉತ್ಸಾಹದಿಂದ ಹಕ್ಕು ಚಲಾವಣೆ ಮಾಡಿದ್ದಾರೆ. ಸಂಜೆ 5ಗಂಟೆವರೆಗೆ ಶೇ.66.05 ಮತದಾನ (Voter Turnout) ನಡೆದಿದೆ.

14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತದಾನ ಸಂಜೆ 6ಗಂಟೆವರೆಗೆ ನಡೆಯಲಿದೆ. ಬೆಳಗ್ಗೆ ಮೊದಲ ಎರಡು ಗಂಟೆಗಳಲ್ಲಿ ಅಂದರೆ 9 ಗಂಟೆವರೆಗೆ ಶೇ.9.45% ಮತದಾನ ದಾಖಲಾಗಿತ್ತು. ಬಳಿಕ 11 ಗಂಟೆಗೆ ಶೇ.24.48 ಹಾಗೂ 1 ಗಂಟೆವರೆಗೆ ಶೇ.41.59 ಮತದಾನ ವರದಿಯಾಗಿತ್ತು. ಅದೇ ರೀತಿ ಮಧ್ಯಾಹ್ನ 3ಗಂಟೆವರೆಗೆ ಶೇ.54.20 ವೋಟಿಂಗ್‌ ನಡೆದಿದೆ. ಇನ್ನು ಸಂಜೆ 5 ಗಂಟೆ ವೇಳೆಗೆ ಶೇ. 66.05 ವೋಟಿಂಗ್‌ ದಾಖಲಾಗಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.72.75 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.57.20 ವೋಟಿಂಗ್‌ ಆಗಿದೆ.

ಕ್ಷೇತ್ರವಾರು ಮತದಾನ ಮಾಹಿತಿ

ಚಿಕ್ಕೋಡಿ-ಶೇ. 72.75
ಬೆಳಗಾವಿ- ಶೇ.65.67
ಬಾಗಲಕೋಟೆ- ಶೇ.65.55
ವಿಜಯಪುರ-ಶೇ.60.95
ಕಲಬುರಗಿ- ಶೇ. 57.20
ರಾಯಚೂರು-ಶೇ.59.48
ಬೀದರ್‌- ಶೇ.60.17
ಕೊಪ್ಪಳ- ಶೇ.66.05
ಬಳ್ಳಾರಿ-ಶೇ.68.94
ಹಾವೇರಿ-ಶೇ.71.90
ಧಾರವಾಡ-ಶೇ.67.15
ಉತ್ತರ ಕನ್ನಡ – 69.57
ದಾವಣಗೆರೆ-ಶೇ.70.90
ಶಿವಮೊಗ್ಗ-72.07

ಇದನ್ನೂ ಓದಿ Lok Sabha Election 2024: ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 54.20 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

Continue Reading

ಮಳೆ

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Rain News : ಮೇ 7ರಂದು ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ರಾಜ್ಯದಲ್ಲಿ ಇನ್ನೊಂದು ವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಚಿಕ್ಕಮಗಳೂರು/ಹಾಸನ/ಬೆಂಗಳೂರು: ಮಂಗಳವಾರ ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಭಾರಿ ಆಲಿಕಲ್ಲು ಮಳೆಗೆ ಚಿಕ್ಕಮಗಳೂರು ನಗರ ನಿವಾಸಿಗಳು ಥಂಡಾ ಹೊಡೆದಿದ್ದಾರೆ. ಮಳೆಯಿಲ್ಲದೆ ಕಾದ ಕಾವಲಿಯಂತಾಗಿದ್ದ ಕಾಫಿನಾಡಿನಲ್ಲಿ ಕಳೆದೊಂದು ಗಂಟೆಯಿಂದ ಭಯಂಕರ ಮಳೆ ಸುರಿಯುತ್ತಿದೆ.

ರಸ್ತೆಯಲ್ಲಿ ಅರ್ಧ ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. 41 ಡಿಗ್ರಿ ತಲುಪುತ್ತಿದ್ದ ಬಿಸಿಲ ತಾಪಮಾನಕ್ಕೆ ಜನ ಹೈರಾಣಾಗಿದ್ದರು. ಧಾರಾಕಾರ ಮಳೆ ಕಂಡು ರೈತರು, ಬೆಳೆಗಾರರು ಸಂತಸಗೊಂಡರು. ಇನ್ನೂ ಆಲಿಕಲ್ಲು ಕೈಯಲ್ಲಿ ಹಿಡಿದು ಖುಷಿ ಪಟ್ಟರು.

Karnataka weather Forecast

ಹಾಸನದಲ್ಲೂ ಧಾರಾಕಾರ ಮಳೆ

ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಹಾಸನ, ಹೊಳೆನರಸೀಪುರ, ಅರಸೀಕೆರೆ ಭಾಗಗಳಲ್ಲಿ ಭಾರಿ ಗಾಳಿಯೊಂದಿಗೆ ಗುಡುಗು, ಸಿಡಿಲು ಸಹಿತ ಮಳೆ ಸುರಿಯುತ್ತಿದೆ. ಅರಸೀಕೆರೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಜೋರಾಗಿ ಆಲಿಕಲ್ಲು ಬೀಳುತ್ತಿರುವುದರಿಂದ ಸವಾರರು ಬೈಕ್‌ ನಿಲ್ಲಿಸಿ ರಸ್ತೆ ಬದಿ ನಿಲ್ಲುವಂತಾಯಿತು. ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.

ಇದನ್ನೂ ಓದಿ: Karnataka Rains: ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿ ಸಾವು, ಬೆಂಗಳೂರಲ್ಲಿ ಟೆಕ್ಕಿ ಬೆನ್ನು ಮೂಳೆ ಮುರಿತ

ಮಂಗಳವಾರ ಸಂಜೆಗೆ ಲಘು ಮಳೆ ಎಚ್ಚರಿಕೆ

ಮೇ 7ರ ಸಂಜೆಗೆ ದಕ್ಷಿಣ ಕನ್ನಡ, ಕೊಡಗು, ಮಂಡ್ಯ, ಮೈಸೂರು ಸೇರಿದಂತೆ ತುಮಕೂರು, ಉಡುಪಿಯಲ್ಲಿ ಗುಡುಗು ಸಹಿತ ಲಘು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರಲ್ಲಿ ಗುಡುಗು, ಮಿಂಚು ಸಹಿತ ಗಾಳಿ ಮಳೆ

ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಮುಂಜಾನೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಸಂಜೆ/ರಾತ್ರಿಯ ಸಮಯದಲ್ಲಿ ಗುಡುಗು ಮಿಂಚು ಜತೆಗೆ ಮಳೆಯಾಗಲಿದೆ. ಈ ವೇಳೆ ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35 ಮತ್ತು 22 ಡಿ.ಸೆ ಇರಲಿದೆ.

ಇನ್ನೂ ಕೊಡಗು, ಮೈಸೂರು, ಮಂಡ್ಯ, ಹಾಸನ, ಕೋಲಾರ, ಬೆಂಗಳೂರು ನಗರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು ಮತ್ತು ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (ಗಂಟೆಗೆ 40-50 ಕಿಮೀ) ಹಗುರದಿಂದ ಶುರುವಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ವಿಜಯನಗರ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (30-40 ಕಿಮೀ) ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೀದರ್‌

Lok Sabha Election 2024: ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

Lok Sabha Election 2024: ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ, ಸಚಿವ ಈಶ್ವರ ಖಂಡ್ರೆ, ಬೀದರ್‌ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್ ಖಂಡ್ರೆ ಅವರು ಮತ ಚಲಾಯಿಸಿದರು.

VISTARANEWS.COM


on

Lok Sabha Election 2024
Koo

ಭಾಲ್ಕಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಲ್ಕಿಯಲ್ಲಿ ಮಂಗಳವಾರ ಮತ ಚಲಾಯಿಸಿದ್ದು, ಈ ಅಪರೂಪದ ಘಟನೆಗೆ ಹಲವರು ಸಾಕ್ಷಿಯಾದರು.

ಮಾಜಿ ಸಾರಿಗೆ ಸಚಿವ, ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣ ಚಳವಳಿಯ ನೇತಾರ ಹಾಗೂ ಲೋಕನಾಯಕ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ವಾರ್ಧಕ್ಯದ ನಡುವೆಯೂ ಉತ್ಸಾಹದಿಂದ ಗಾಲಿ ಕುರ್ಚಿಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಅವರ ಪುತ್ರ ಮತ್ತು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನೂತನ ಕಚೇರಿಯ ಸಭಾ ಭವನದ ಮತಗಟ್ಟೆ ಸಂಖ್ಯೆ 118ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಖಂಡ್ರೆ ಕುಟುಂಬದ ಇತರ ಸದಸ್ಯರೂ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತಗಟ್ಟೆಯಿಂದ ಹೊರ ಬಂದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು, ಮತದಾನ ಅತ್ಯಂತ ಪವಿತ್ರವಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ | Lok Sabha Election 2024: ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಮತದಾನ

Continue Reading
Advertisement
Lok Sabha Election 2024
Lok Sabha Election 202444 seconds ago

Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

Met Gala 2024
ಫ್ಯಾಷನ್6 mins ago

Met Gala 2024: ಮೆಟ್ ಗಾಲಾದಲ್ಲಿ 200 ಕ್ಯಾರಟ್ ವಜ್ರ ಧರಿಸಿ ಗಮನ ಸೆಳೆದ ಸುಧಾ ರೆಡ್ಡಿ! ಯಾರಿವರು?

IPL 2024: KKR's Flight to Kolkata Unexpectedly Diverted Mid-Air
ಪ್ರಮುಖ ಸುದ್ದಿ12 mins ago

IPL 2024 : ಗುರಿ ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಿದ ಕೆಕೆಆರ್​ ಆಟಗಾರರಿದ್ದ ವಿಮಾನ!

Akshaya Tritiya 2024
ಧಾರ್ಮಿಕ12 mins ago

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

Kulgam
ದೇಶ23 mins ago

Kulgam: ಪೂಂಚ್‌ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಖತಂ

Lok Sabha Election
Latest39 mins ago

Lok Sabha Election : ರಾಜಕೀಯಕ್ಕಾಗಿ ದ್ವೇಷ ಸೃಷ್ಟಿ; ಬಿಜೆಪಿ ವಿರುದ್ಧ ವಿಡಿಯೊ ಮೂಲಕ ಟೀಕೆ ಮಾಡಿದ ಸೋನಿಯಾ ಗಾಂಧಿ

guava leaves benefits
ಆರೋಗ್ಯ50 mins ago

Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

t20 world cup
ಕ್ರೀಡೆ1 hour ago

T20 World Cup : ಕೊಹ್ಲಿಯನ್ನು ಎದುರಿಸಲು ಪ್ಲ್ಯಾನ್​ ರೆಡಿ ಇದೆ ಎಂದ ಬಾಬರ್ ಅಜಮ್​

Lok Sabha Election 2024
ಪ್ರಮುಖ ಸುದ್ದಿ1 hour ago

Lok Sabha Election 2024: ಸಂಜೆ 5ಗಂಟೆವರೆಗೆ ಶೇ.66.05 ವೋಟಿಂಗ್‌; ಚಿಕ್ಕೋಡಿಯಲ್ಲಿ ಅತಿ ಹೆಚ್ಚು

School Jobs
ಪ್ರಮುಖ ಸುದ್ದಿ1 hour ago

School Jobs: 25 ಸಾವಿರ ಶಿಕ್ಷಕರ ವಜಾ ಆದೇಶಕ್ಕೆ ಸುಪ್ರೀಂ ತಡೆ; ಮಮತಾ ಸರ್ಕಾರಕ್ಕೆ ಚಾಟಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ1 hour ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ3 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌