ಉಡುಪಿ
Chaitra Kundapura : ಚೈತ್ರಾ ಕುಂದಾಪುರ ವಂಚನೆ ಕೇಸಿನಲ್ಲಿ ವಜ್ರದೇಹಿ ಸ್ವಾಮೀಜಿ ಹೆಸರು; ಹಾಗಿದ್ದರೆ ಅವರ ಪಾತ್ರವೇನು?
Chaitra Kundapura : ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಮಂಗಳೂರಿನ ವಜ್ರದೇಹಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ ಹೆಸರು ಕೇಳಿಬಂದಿದೆ. ಹಾಗಿದ್ದರೆ ಅವರ ಪಾತ್ರವೇನು? ಈ ಪ್ರಕರಣದ ಬಗ್ಗೆ ಅವರಿಗೆ ಗೊತ್ತಿರುವುದೇನು?
ಮಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP ticket) ಹೆಸರಿನಲ್ಲಿ ನಡೆದ ಐದು ಕೋಟಿ ರೂ. ವಂಚನೆ ಪ್ರಕರಣ ಹಲವಾರು ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಹೊಸ ಹೊಸ ಹೆಸರುಗಳು ಕೇಳಿಬಂದಿವೆ. ಇದೀಗ ಹೊಸದಾಗಿ ಹೆಸರು ಕೇಳಿಬಂದಿರುವುದು ಮಂಗಳೂರಿನ ಮಂಗಳೂರಿನ ವಜ್ರದೇಹಿ ಮಠದ (Mangalore Vajradehi matt) ಶ್ರೀ ರಾಜಶೇಖರಾನಂದ ಸ್ವಾಮೀಜಿ (Shri Rajashekharananda Swamiji) ಹೆಸರು. ಗೋವಿಂದ ಪೂಜಾರಿ (Govinda Poojari) ಟಿಕೆಟ್ ಪ್ರಕರಣಕ್ಕೆ ಸಂಬಂಧಿಸಿ ರಾಜಶೇಖರಾನಂದ ಸ್ವಾಮೀಜಿ ಅವರು ತನಗೆ ಫೋನ್ ಮಾಡಿದ್ದರು ಎಂದು ಚೈತ್ರಾ ಕುಂದಾಪುರ (Chaitra Kundapura) ಅವರು ಆದಾಯ ತೆರಿಗೆ ಇಲಾಖೆಗೆ ಬರೆದಿದ್ದಾರೆನ್ನಲಾದ ಪತ್ರದಲ್ಲಿ (Letter to IT Department) ಉಲ್ಲೇಖವಾಗಿದೆ.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದು ಕರಾವಳಿಯಲ್ಲಿ ನಡೆಯುವ ಹಿಂದು ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ, ಪ್ರಧಾನ ಭಾಷಣಕಾರರೂ ಆಗಿರುತ್ತಾರೆ. ವಿಶ್ವ ಹಿಂದು ಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ವಿದ್ಯಮಾನದ ಬಗ್ಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿರುವ ಅವರು ತಮ್ಮ ಪಾತ್ರದ ಬಗ್ಗೆ, ಗೋವಿಂದ ಪೂಜಾರಿ ವಂಚನೆ ಪ್ರಕರಣದ ಬಗ್ಗೆ, ತಾನು ಯಾಕಾಗಿ ಚೈತ್ರಾ ಕುಂದಾಪುರಗೆ ಫೋನ್ ಮಾಡಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹಾಗಿದ್ದರೆ, ಚೈತ್ರಾ ಕುಂದಾಪುರ ಐಟಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ವಜ್ರದೇಹಿ ಸ್ವಾಮೀಜಿಗಳ ಬಗ್ಗೆ ಏನಿದೆ ಎಂದು ಮೊದಲು ತಿಳಿಯೋಣ.. ಬಳಿಕ ಸ್ವಾಮೀಜಿ ಪ್ರತಿಕ್ರಿಯೆ.
ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ವಜ್ರದೇಹಿ ಸ್ವಾಮೀಜಿ ಬಗ್ಗೆ ಇರುವುದು ಇಷ್ಟು:
1.ಕೃಷ್ಣ ಪೂಜಾರಿ ಎಂದು ಪರಿಚಯಿಸಿ ಕೊಂಡ ವ್ಯಕ್ತಿಯಿಂದ ಜುಲೈ 21,2023ರಂದು 918217220747 ಎಂಬ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದ್ದು, ಅವರು ನನ್ನ ಗೋವಿಂದ ಬಾಬು ಪೂಜಾರಿ ಅವರು ಚುನಾವಣೆ ಟಿಕೆಟ್ ಗಾಗಿ 5 ಕೋಟಿ ರೂಪಾಯಿ ಕೊಟ್ಟಿರುವ ಕುರಿತು ನನ್ನನ್ನು ಪ್ರಶ್ನಿಸಿರುತ್ತಾರೆ ಈ ಕುರಿತು ನಾನು ಅವರ ಬಳಿ ನನ್ನ ಅಭಿಪ್ರಾಯವನ್ನು ಹಂಚಿಕೊಂಡು ಪೊಲೀಸ್ ಕೇಸ್ ದಾಖಲಿಸುವಂತೆ ಸಲಹೆ ನೀಡಿರುತ್ತೇನೆ.
2.ತದ ನಂತರ ಪುನಃ ಜುಲೈ 29ರಂದು ಮಧ್ಯಾಹ್ನ 12:43ಕ್ಕೆ ನನಗೆ ಪರಿಚಿತರಾಗಿರುವ ರಾಜಶೇಖರಾನಂದ ಸ್ವಾಮೀಜಿಯವರ ಫೋನ್ ನಂಬರ್+919986126131ರಿಂದ ಕರೆ ಬಂದಿದ್ದು, ಅದರಲ್ಲಿ ಅವರು ಗೋವಿಂದ ಬಾಬು ಪೂಜಾರಿಯವರು ಬಿಜೆಪಿ ಟಿಕೆಟ್ ಗಾಗಿ 5 ಕೋಟಿ ರೂಪಾಯಿಯನ್ನು ನೀಡಿರುವ ಕುರಿತು ಅವರ ಆಪ್ತರೊಬ್ಬರು ಅವರಿಗೆ ಮಾಹಿತಿ ನೀಡಿರುವ ಬಗ್ಗೆ ನನ್ನ ಬಳಿ ಚರ್ಚಿಸುತ್ತಾರೆ.
3.ಅದಾದ ಬಳಿಕ ಮತ್ತೆ ಜುಲೈ 30ರಂದು ನನಗೆ ಪರಿಚಿತರರಾದ ಸಂತೋಷ್ ಕೆಲ್ಲೋಜಿ ಎನ್ನುವವರು ಮಧ್ಯಾಹ್ನ 2:05 ಕ್ಕೆ ಕರೆಯಲ್ಲಿ ನನ್ನೊಂದಿಗೆ ಮಾತನಾಡಿ ಗೋವಿಂದ ಬಾಬು ಪೂಜಾರಿಯವರಿಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಹಣ ನೀಡಿರುವ ಸುದ್ದಿಯೊಂದು ವಾಟ್ಸಾಪ್ ಗಳಲ್ಲಿ ಶೇರ್ ಆಗಿರುವ ಕುರಿತು ನನ್ನ ಬಳಿ ವಿಚಾರಿಸಿರುತ್ತಾರೆ, ಈ ಎಲ್ಲಾ ಕರೆಗಳಿಗೆ ಸಂಬಂಧಿಸಿದಂತೆ ಕರೆಗಳನ್ನು ನಾನು ರೆಕಾರ್ಡ್ ಮಾಡಿ ಕೊಂಡಿದ್ದು, ಅದನ್ನು ಇದರೊಂದಿಗೆ ಲಗತ್ತಿಸಿರುತ್ತೇನೆ. (File no 005, 006, 007).
ಇದರ ಬಗ್ಗೆ ವಜ್ರದೇಹಿ ಮಠದ ಸ್ವಾಮೀಜಿ ಹೇಳುವುದೇನು?
ನಾನು ಜುಲೈ 29ರಂದು ನಾನು ಚೈತ್ರಾ ಕುಂದಾಪುರಗೆ ಕಾಲ್ ಮಾಡಿದ್ದು ಹೌದು. ಆದರೆ, ಈ ಪ್ರಕರಣದಲ್ಲಿ ನಾನು ಯಾವುದೇ ರೀತಿಯಲ್ಲೂ ಶಾಮೀಲಾಗಿಲ್ಲ. ನನ್ನ ಹೆಸರು ಥಳುಕುಹಾಕಿಕೊಂಡಿದೆ ಎಂದು ಕೆಲವರು ಈ ಹಿಂದೆ ಹೇಳಿದ್ದರು. ಅವರಿಗೆಲ್ಲ ನಾನು ಬೈದು ಫೋನ್ ಇಟ್ಟಿದ್ದೇನೆ. ನಾನು ಇಂಥ ಬೇನಾಮಿ ವ್ಯವಹಾರ ಮಾಡುವವನಲ್ಲ. ನನ್ನನ್ನು ನೇರಾನೇರ ಎಂದು ಸ್ವಾಮೀಜಿ ಹೇಳಿದ್ದಾರೆ. ಈ ಸಂಗತಿಯ ಕೆಲವೊಂದು ಒಳಸುಳಿಗಳು ಹಿಂದಿನಿಂದಲೇ ತನಗೆ ಗೊತ್ತೆಂದೂ, ಅದರ ಬಗ್ಗೆ ತಾನು ಹಾಲಶ್ರೀ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಜತೆ ಚರ್ಚೆ ಮಾಡಿದ್ದಾಗಿಯೂ ಹೇಳಿದ್ದಾರೆ.
ಇಲ್ಲಿವೆ ವಜ್ರದೇಹಿ ಸ್ವಾಮೀಜಿ ಅವರ ಮಾತಿನ ಪ್ರಮುಖ ಅಂಶಗಳು
ನಮ್ಮ ಹೆಸರು ಕೂಡಾ ಉಲ್ಲೇಖವಾಗಿದೆ, ಐಟಿಗೆ ಬರೆದ ಪತ್ರದಲ್ಲಿದೆ
ಚೈತ್ರಾ ಕುಂದಾಪುರ ಅವರು ಆದಾಯ ಇಲಾಖೆಗೆ ಬರೆದ ಪತ್ರದಲ್ಲಿ ನಮ್ಮ ಹೆಸರು ಉಲ್ಲೇಖ ಮಾಡಿರುವುದು ನನಗೆ ಮಾಧ್ಯಮಗಳ ಮೂಲಕ ತಿಳಿದುಬಂತು. ಹೀಗಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಜೂನ್ ತಿಂಗಳ ಮಧ್ಯಭಾಗದಲ್ಲಿ ಅಭಿನವ ಹಾಲಸ್ವಾಮಿಗಳು ನನಗೆ ಫೋನ್ ಮಾಡಿದ್ದರು. ʻನಂದೊಂದು ಒಂದು ಕೋಟಿ ರೂ. ಸಮಸ್ಯೆಯಾಗಿದೆ ಸ್ವಾಮೀಜಿ, ನೀವು ಸ್ವಲ್ಪ ಜಾಗೃತೆಯಾಗಿರಿ. ನಿಮ್ಮ ಹೆಸರು ಕೂಡಾ ಹಾಳಾಗಬಹುದು ಎಂದಿದ್ದರು. ಆಗ ನಾನು ಇಲ್ಲ ಅದು ಬೇನಾಮಿ ವ್ಯವಹಾರ ಮಾಡುವವರಿಗೆ ಮಾತ್ರ ಹೆದರಿಕೆ. ನಾವು ಅಂಥದ್ರಲ್ಲಿ ಇದ್ದರೆ ಮಾತ್ರ ಭಯ ಇರಬೇಕು, ಇಲ್ಲದಿದ್ದರೆ ಯಾಕೆ ಎಂದಿದ್ದೆ.
ಜುಲೈ 29ಕ್ಕೆ ಸತ್ಯಜಿತ್ ಸುರತ್ಕಲ್ ಕಾಲ್ ಮಾಡಿ ಆರೋಪ ಮಾಡಿದರು
ಜುಲೈ 29ನೇ ತಾರೀಕು ಸತ್ಯಜಿತ್ ಸುರತ್ಕಲ್ (ಹಿಂದು ಮುಖಂಡ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಖ್ಯಾತಿ) ಅವರು ನನಗೆ ಫೋನ್ ಮಾಡಿದರು. ಅವರು ನನ್ನ ಮೇಲೆ ನೇರ ಆರೋಪ ಮಾಡಿದರು. ಸ್ವಾಮೀಜಿ ನೀವು ಒಂದುವರೆ ಕೋಟಿ ರೂ. ತೆಗೆದುಕೊಂಡಿದ್ದೀರಿ. ಅದನ್ನು ನೀವು ಗೋವಿಂದ ಬಾಬು ಪೂಜಾರಿ ಅವರಿಗೆ ವಾಪಸ್ ಕೊಡಿ. ಅದನ್ನು ಕೊಡದೆ ಹೋದರೆ ನಿಮ್ಮ ಹೆಸರು ಮೀಡಿಯಾದಲ್ಲಿ ಬರ್ತದೆ, ಪೊಲೀಸ್ ತನಿಖೆಯಲ್ಲಿ ಬರುತ್ತದೆ, ನಿಮ್ಮ ಹೆಸರಿಗೆ ಕಳಂಕ ಬರುತ್ತದೆ. ಹೀಗಾಗಿ ನೀವು ಈಗಲೇ ಅದನ್ನು ಮುಗಿಸಿಕೊಳ್ಳಿ ಎಂದು ಹೇಳಿದರು. ಆಗ ನನಗೆ ಸಿಟ್ಟುಬರ್ತದೆ. ಯಾಕೆ ನಮ್ಮ ಹೆಸರು ಬರ್ತದೆ? ನಾನು ಇದರಲ್ಲಿ ಇಲ್ವೇ ಇಲ್ವಲ್ಲ.. ನಾನು ಹಿಂದೆ ಒಮ್ಮೆ ಕೊಲ್ಲೂರಿನಲ್ಲಿ ಅವರನ್ನು ನೋಡಿದ್ದೇನೆ. ಅದು ಕೂಡಾ ಜಗದೀಶ್ ಕೊಲ್ಲೂರು ಎಂಬವರು ಆಯೋಜಿಸಿದ ಬಜರಂಗ ದಳ ಕಾರ್ಯಕ್ರಮದಲ್ಲಿ ಪರಿಚಯ ಮಾಡಿದ್ದರು ಅಷ್ಟೆ. ಅದು ಬಿಟ್ಟರೆ ಪರಿಚಯವೇ ನನಗಿಲ್ಲ.
ನಾನು ಶರಣ್ ಪಂಪ್‌ವೆಲ್ ಜತೆಗೆ ವಿಷಯದ ಚರ್ಚೆ ಮಾಡಿದೆ
ಈ ವಿಚಾರವನ್ನು ನಾನು ಶರಣ್ ಪಂಪ್‌ವೆಲ್, ಪುನೀತ್ ಕೊಟ್ಟಾರಿ, ಭುಜಂಗ ಕುಲಾಲ್ ಅವರಲ್ಲಿ ಚರ್ಚೆ ಮಾಡಿದೆ. ಹೀಗೀಗೆ ನನ್ನ ಹೆಸರು ಥಳುಕು ಬಿದ್ದಿದೆಯಂತೆ ಎಂದು. ಆಗ ಅವರು ನೀವು ಇಲ್ವಲ್ಲ ಇದರಲ್ಲಿ ಯಾಕೆ ಹೆದರಿ ಕೊಳ್ತೀರಿ ಎಂದು ಹೇಳಿ ಸಮಾಧಾನ ಮಾಡಿದರು. ಆಮೇಲೆ ಅರ್ಧ ಗಂಟೆಯಲ್ಲಿ ಸತ್ಯಜಿತ್ ಸುರತ್ಕಲ್ ಮತ್ತೆ ಫೋನ್ ಮಾಡ್ತಾರೆ. ಇದರಲ್ಲಿ ನೀವಿಲ್ಲ ಯಾರೋ ಒಬ್ಬರು ಅಭಿನವ ಹಾಲಶ್ರೀ ಸ್ವಾಮೀಜಿಯಂತೆ, ಅವರ ಹೆಸರು ಇದ್ಯಂತೆ ಎಂದು ಹೇಳಿದರು. ಅಲ್ಲಿಗೆ ಅದು ಮುಗಿಯಿತು.
ನಾನು ನಂತರ ಕಾಲ್ ಮಾಡಿದ್ದು ಚಕ್ರವರ್ತಿ ಸೂಲಿಬೆಲೆಗೆ
ಸತ್ಯಜಿತ್ ಸುರತ್ಕಲ್ ಅಭಿನವ ಹಾಲಶ್ರೀ ಹೆಸರು ಹೇಳಿದಾಗ ನನಗೆ ಈ ಹಿಂದೆ ಅಭಿನವ ಹಾಲಶ್ರೀಗಳು ಹೇಳಿದ ಮಾತು ನೆನಪಾಯಿತು. ನಾನು ಕೂಡಲೇ ಚಕ್ರವರ್ತಿ ಸೂಲಿಬೆಲೆಯವರಿಗೆ ಫೋನ್ ಮಾಡಿದೆ. ಅವರ ಆಪ್ತ ಸಹಾಯಕರು ಎತ್ತಿದರು. ಅವರಿಲ್ಲ, ಪ್ರೋಗ್ರಾಂನಲ್ಲಿದ್ದಾರೆ ಎಂದು ಹೇಳಿದರು. ನನಗೆ ಸಿಟ್ಟು ಬಂದು ಬೈದೆ. ಆಗ ಅವರು ಚಕ್ರವರ್ತಿ ಸೂಲಿಬೆಲೆಯವರಿಗೆ ಫೋನ್ ಕೊಟ್ರು.
ಚಕ್ರವರ್ತಿಯವರೇ ವಂಚನೆ ಪ್ರಕರಣವೊಂದರಲ್ಲಿ ಅಭಿನವ ಹಾಲಸ್ವಾಮಿಗಳ ಹೆಸರು ಥಳುಕು ಹಾಕಿಕೊಂಡಿದೆ. ಇದು ಮುಂದೆ ನಿಮಗೂ ತೊಂದರೆಯಾಗಬಹುದು, ಹೀಗಾಗಿ ನೀವು ಇದು ಏನು ಎಂದು ವಿಚಾರಿಸಿ ಸರಿ ಮಾಡುವುದು ಒಳ್ಳೆಯದು ಎಂದು ಹೇಳಿದೆ. ಆಗ ಅವರು, ನಾನು ಈ ಬಗ್ಗೆ ಒಂದು ಸುತ್ತಿನ ಮಾತುಕತೆಯನ್ನು ಆಗಲೇ ಮಾಡಿದ್ದೇನೆ, ಸಿ.ಟಿ. ರವಿಯವರ ಗಮನಕ್ಕೂ ತಂದಿದ್ದೇನೆ. ಈ ವಿಷಯ ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲ. ನೀವು ಒಂದು ಕೆಲಸ ಮಾಡಿ, ನಿಮಗೆ ಚೈತ್ರಾ ಕುಂದಾಪುರ ಪರಿಚಯ ಇದ್ದರೆ, ನೀವು ಅವಳಲ್ಲಿ ಮಾತನಾಡಿ, ವಿಷಯ ಏನೂ ಅಂತ ವಿಚಾರಿಸಿ ಎಂದು ನನಗೆ ಸಲಹೆ ನೀಡಿದರು.
ಇದನ್ನೂ ಓದಿ: Chaitra Kundapura : ಅಬ್ಬಬ್ಬಾ… ಗೋವಿಂದ ಪೂಜಾರಿಯೇ ವಂಚಕ ಎಂದು ಬಿಂಬಿಸಲು ಕ್ರಿಮಿನಲ್ ಐಡಿಯಾ; ITಗೆ ದೂರು
ಹಾಗೆ ನಾನು ಚೈತ್ರಾ ಕುಂದಾಪುರಕ್ಕೆ ಕರೆ ಮಾಡಿದ್ದು ಜುಲೈ 29ರಂದು
ನಾನು ಫೋನ್ ಮಾಡಿದ ಒಂದೇ ರಿಂಗ್‌ನಲ್ಲಿ ಚೈತ್ರಾ ಕುಂದಾಪುರ ಫೋನ್ ಎತ್ತಿಕೊಳ್ತಾರೆ. ನೋಡಮ್ಮಾ ಗೋವಿಂದ ಬಾಬು ಪೂಜಾರಿಯವರ ಹಣದ ವಿಷಯದಲ್ಲಿ ನಿನ್ನ ಹೆಸರು ಥಳುಕು ಹಾಕಿಕೊಂಡಿದೆ. ಇದೇನೋ ಒಂದು ದೊಡ್ಡ ಗೋಲ್ ಮಾಲ್ ಅಂತ ನನಗೆ ಅನಿಸ್ತಾ ಇದೆ. ಏನು ಸತ್ಯ ಇದ್ರೂ ನೀನು ನಮ್ಮಲ್ಲಿ ಹೇಳು, ಇದನ್ನು ಏನು ಅಂತ ವಿಚಾರಿಸೋಣ. ಯಾಕೆಂದರೆ ನನ್ನ ಹೆಸರು ಕೂಡಾ ಇದರಲ್ಲಿ ಥಳುಕು ಹಾಕಿಕೊಂಡಿದೆ ಎಂದು ಹೇಳಿದೆ.
ಆಗ ಚೈತ್ರಾ ಕುಂದಾಪುರ, ಇಲ್ಲ ಸ್ವಾಮೀಜಿ, ಇದು ಏನೂ ನನಗೆ ಗೊತ್ತಿಲ್ಲ. ಅವರು ಯಾರಿಗೆ ಹಣ ಕೊಟ್ಟಿದ್ದಾರೆ, ಯಾರ ಜತೆ ವ್ಯವಹಾರ ಮಾಡಿದ್ದಾರೆ ಎನ್ನುವುದು ಒಂದೂ ಗೊತ್ತಿಲ್ಲ ಎಂದರು. ಆಗ ನಾನು ʻನಿನ್ನ ಹೆಸರು ಇದರಲ್ಲಿ ಹೇಗೆ ಬಂತುʼ ಎಂದು ಕೇಳಿದೆ. ಅದಕ್ಕೆ ಆಕೆ ʻʻಒಮ್ಮೆ ಗೋವಿಂದ ಪೂಜಾರಿ ಅವರು ಮನೆ ಗೃಹ ಪ್ರವೇಶಕ್ಕೆ ಒಬ್ಬ ಸ್ವಾಮೀಜಿ ಬೇಕು ಎಂದು ಕೇಳಿದ್ದರು. ನಂಗೆ ಹಾಲಶ್ರೀ ಸ್ವಾಮೀಜಿಗಳ ಪರಿಚಯ ಇದ್ದಿದ್ದರಿಂದ ಅವರನ್ನು ಶಿಫಾರಸು ಮಾಡಿದ್ದೆ. ಅವರ ಫೋನ್ ನಂಬರ್ ಕೊಟ್ಟು ಅವರ ಕಾಂಟಾಕ್ಟ್ ಮಾಡಿಸಿದೆ. ಹಾಗೆ ಗೋವಿಂದ ಬಾಬು ಪೂಜಾರಿ ಅವರಿಗೂ ಸ್ವಾಮೀಜಿಗೂ ನಂಟಿದೆ. ಅವರೊಳಗೆ ಏನು ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲʼʼ ಎಂದು ಹೇಳಿದಳು. ನನಗೆ ಒಂದೂ ವಿಷಯ ಗೊತ್ತಿಲ್ಲ ಎಂದು ಹೇಳಿದಳು. ನಾನು ಮತ್ತೆ ಮತ್ತೆ ಒತ್ತಾಯ ಮಾಡಿ ಕೇಳಿದೆ. ಏನಾದರೂ ವಿಷಯ ಇದ್ರೆ ಹೇಳು ಎಂದಾಗ, ಅದು ಏನೋ ಇಂದಿರಾ ಕ್ಯಾಂಟೀನ್ ಬಿಲ್ ಗೊಂದಲಗಳಿಗಾಗಿ ಹೀಗೆ ಮಾಡುತ್ತಿದ್ದಾರೆ. ಅವರಿಗೆ 150 ಇಂದಿರಾ ಕ್ಯಾಂಟೀನ್ ಇದೆ ಎಂದೆಲ್ಲ ಹೇಳಿದರು.
ನಂತರ ಆಕೆಯ ಬಂಧನವಾದಾಗಲೇ ನನಗೆ ಇದು ಇಷ್ಟು ತೀವ್ರತೆ ಪಡೆದದ್ದು ಗೊತ್ತಾಗಿದ್ದು. ಹಣದ ವಿಚಾರದಲ್ಲಿ ನನಗೇನೂ ಗೊತ್ತಿಲ್ಲ, ಚೈತ್ರಾಳ ಪರಿಚಯ ಇದ್ದುದು ಹೌದು. ಹಾಗಂತ, ಆಕೆಯ ಜೊತೆಗೆ ಬೇರೇನೂ ಸಂಪರ್ಕ, ಮಾತುಕತೆ, ವಹಿವಾಟು ಇಲ್ಲ ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಉಡುಪಿ
Weather Report : ಉತ್ತರ ಕರ್ನಾಟಕದಲ್ಲಿ ಮಳೆ ಚುರುಕು; ಬೆಂಗಳೂರಲ್ಲಿ ಹೇಗೆ?
Rain News : ಉತ್ತರ ಒಳನಾಡಲ್ಲಿ ಮುಂಗಾರು ಚುರುಕುಗೊಂಡಿದ್ದು, ಸೆ. 26ರಂದು ಹಲವೆಡೆ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು (Weather report) ಐಎಂಡಿ ನೀಡಿದೆ. 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು: ಉತ್ತರ ಒಳನಾಡಿನ ಹಲವು ಕಡೆ ಭಾರಿ ಮಳೆಯಾಗುವ (Rain News) ಮುನ್ಸೂಚನೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಲಘುವಾಗಿ, ಬೆಂಗಳೂರಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆ (Weather report) ಸುರಿಯಲಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ನಾಲ್ಕು ಜಿಲ್ಲೆಗಳಿಗೆ ಅಲರ್ಟ್
ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
ಒಳನಾಡಲ್ಲಿ ಹಗುರ ಮಳೆ
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಮಳೆಯಾಗಲಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉತ್ತರ ಒಳನಾಡಿನ ರಾಯಚೂರು, ಬೀದರ್, ಬೆಳಗಾವಿ, ಧಾರವಾಡದ ಹಲವೆಡೆ ಅಲ್ಲಲ್ಲಿ ಹಗುರ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಟಿ ಜಿಟಿ ಮಳೆ ಸುರಿಯಲಿದೆ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ – 21 ಡಿ.ಸೆ
ಮಂಗಳೂರು: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 20 ಡಿ.ಸೆ
ಗದಗ: 31 ಡಿ.ಸೆ – 20 ಡಿ.ಸೆ
ಹೊನ್ನಾವರ: 30 ಡಿ.ಸೆ- 23 ಡಿ.ಸೆ
ಕಲಬುರಗಿ: 29 ಡಿ.ಸೆ – 23 ಡಿ.ಸೆ
ಬೆಳಗಾವಿ: 29 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 24 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Rain News : ಉತ್ತರ ಕರ್ನಾಟಕದ ಹಲವು ಕಡೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಐಎಂಡಿ ನೀಡಿದೆ. 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ಸೆ. 26ರಂದು ಉತ್ತರ ಒಳನಾಡಿನ ಹಲವು ಕಡೆ ಭಾರಿ ಮಳೆಯಾಗುವ (Rain News) ಮುನ್ಸೂಚನೆ ಇದೆ. ಬೆಂಗಳೂರಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆ ಸುರಿಯಲಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ (weather report) ಸಾಧ್ಯತೆ ಇದೆ.
ಭಾರೀ ಮಳೆ ಮುನ್ನೆಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
ಬೆಂಗಳೂರಲ್ಲಿ ಸಾಧಾರಣ ಮಳೆ
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಮಳೆಯಾಗಲಿದೆ.
ಉತ್ತರ ಒಳನಾಡಿನ ರಾಯಚೂರು, ಬೀದರ್, ಬೆಳಗಾವಿ, ವಿಜಯಪುರ, ಯಾದಗಿರಿ, ಧಾರವಾಡದ ಹಲವೆಡೆ ಅಲ್ಲಲ್ಲಿ ಹಗುರ ಮಳೆಯಾಗಲಿದೆ. ಕೊಪ್ಪಳದಲ್ಲಿ ಅಲ್ಲಲ್ಲಿ ಅತಿ ಕಡಿಮೆ ಮಳೆ ಬೀಳಲಿದೆ. ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಟಿ ಜಿಟಿ ಮಳೆ ಸುರಿಯಲಿದೆ.
ಇದನ್ನೂ ಓದಿ:Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ
ರಾಜ್ಯದಲ್ಲಿ ಭಾನುವಾರದಂದು ನೈರುತ್ಯ ಮುಂಗಾರು ಸಾಮಾನ್ಯವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ, ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆಯು ಶಹಪುರದಲ್ಲಿ 7 ಸೆಂ.ಮೀ ವರದಿ ಆಗಿದೆ. ಅಂಕೋಲಾ, ಹೆಬ್ಬೂರಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಕುಮಟಾ, ಗೇರ್ಸೊಪ್ಪ, ಗೋಕರ್ಣ, ಮಂಕಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.
ಕುಂದಾಪುರ, ಕೋಟ, ಸಿದ್ದಾಪುರ, ಬೇಲಿಕೇರಿ, ಹೊನ್ನಾವರ, ಖಜೂರಿ, ಮೈಸೂರು, ರಾಯಲ್ಪಾಡದಲ್ಲಿ ತಲಾ 3 ಸೆಂ.ಮೀ, ಉಡುಪಿ, ಕಾರ್ಕಳ , ಮಂಗಳೂರು, ಉಪ್ಪಿನಂಗಡಿ, ಮೂಲ್ಕಿ, ಕದ್ರಾ, ಕೆಂಭಾವಿ, ಮುನಿರಾಬಾದ್ , ಗಬ್ಬೂರು ಹಾಗೂ ಆಳಂದ, ಸೇಡಂ, ಕಳಸ, ಗುಬ್ಬಿ, ತಿಪಟೂರು, ಚಿತ್ರದುರ್ಗ, ಕುಡತಿನಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.
ಕಾರವಾರ, ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ಕಿರವತ್ತಿ, ಮುಂಡಗೋಡ ಯಲ್ಲಾಪುರ, ಮಂಚಿಕೆರೆ, ಜಾಲಹಳ್ಳಿ, ಮಹಾಗೋಣ, ಮುಧೋಳೆ, ಗುಂಡಗುರ್ತಿ, ಆಡಕಿ, ಕವಡಿಮಟ್ಟಿ ಅರ್ಗ, ಭಾಲ್ಕಿ , ಮಂಠಾಳ, ಹಾವೇರಿ, ಚಿಕ್ಕಬಳ್ಳಾಪುರ, ಕಡೂರು, ಕೋಲಾರ, ಲಿಂಗನಮಕ್ಕಿ ಎಚ್‌ಎಂಎಸ್, ತಾಳಗುಪ್ಪ, ತ್ಯಾಗರ್ತಿ, ಯಗಟಿ , ಹೊಸಕೋಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Kantara Effect : ಕಣ್ಮರೆಯಾಗಿದ್ದಯುವಕ 8 ದಿನಗಳ ಬಳಿಕ ನಾಯಿ ಜತೆ ಪ್ರತ್ಯಕ್ಷ; ಅವನ ಹಿಂದೆ ಇದೆ ಕಾಂತಾರ ಪವಾಡ ಕಥೆ!
Kantara Effect : ಕುಂದಾಪುರ ತೊಂಬಟ್ಟಿನ ಒಬ್ಬ ಯುವಕ ದಿಢೀರ್ ನಾಪತ್ತೆಯಾಗುತ್ತಾನೆ. ಎಲ್ಲಿ ಹುಡುಕಿದರೂ ಇಲ್ಲ. ಎಂಟು ದಿನದ ಬಳಿಕ ಒಂದು ನಾಯಿ ಜತೆ ಆತ ಪ್ರತ್ಯಕ್ಷನಾಗುತ್ತಾನೆ. ಇದರ ಹಿಂದೆ ಕಾಂತಾರದಂಥಹುದೇ ಕಥೆ ಇದೆ.. ಏನಿದು ಅಚ್ಚರಿ?
ಅಶ್ವತ್ಥ್ ಆಚಾರ್ಯ, ವಿಸ್ತಾರ ನ್ಯೂಸ್ ಉಡುಪಿ
ಕಾಂತಾರ (Kantara Movie) ಒಂದು ಸಿನಿಮಾ ಅಲ್ಲ, ಅದೊಂದು ಅನುಭವ ಎಂದು ಹಲವು ಹೇಳುತ್ತಾರೆ. ಹಲವರಿಗೆ ಇಂಥ ಅತೀಂದ್ರಿಯ ಅನುಭವ (Unnatural Experience) ಆಗಿರುವುದರಿಂದಲೇ ಅದು ನಮ್ಮೆಲ್ಲರ ಕಥೆ ಅನಿಸುವುದು. ಅಂಥಹುದೇ ಒಂದು ಅನುಭವ ಈಗ ಕುಂದಾಪುರ ತಾಲೂಕಿನ (Kundapura taluk) ಮಚ್ಚಟ್ಟು ಗ್ರಾಮದ ತೊಂಬಟ್ಟಿನ ಜನತೆಗೆ ಆಗಿದೆ. ಮನೆಯಿಂದ ದಿಢೀರ್ ಕಣ್ಮರೆಯಾಗಿದ್ದ ಒಬ್ಬ ಯುವಕ (Young man dissapears) ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆದರೆ, ದೈವದ ನುಡಿಯಲ್ಲಿ ಕೇಳಿದಾಗ ಅವನು ಇಲ್ಲೇ ಇದ್ದಾನೆ ಎನ್ನುತ್ತದೆ. ಎಂಟು ದಿನಗಳ ಬಳಿಕ ಆತ ದಿಢೀರ್ ಪ್ರತ್ಯಕ್ಷನಾಗುತ್ತಾನೆ (Young man Reappears). ಅವನನ್ನು ಕರೆದುಕೊಂಡು ಬರುವುದು ಒಂದು ನಾಯಿ! ಎಲ್ಲಿ ಹೋಗಿದ್ದೆ ಎನ್ನುವುದು ಅವನಿಗೇ ಗೊತ್ತಿಲ್ಲ! ಹಾಗಿದ್ದರೆ ಮರಳಿ ಬಂದಿದ್ದು ಹೇಗೆ? ದೈವವೇ ಕರೆದುಕೊಂಡುಬಂದಿದೆ ಎನ್ನುತ್ತಾರೆ (Kantara Effect) ತೊಂಬಟ್ಟಿನ ಜನ.
ಹಾಗಿದ್ದರೆ ನಿಜಕ್ಕೂ ಆಗಿದ್ದೇನು? ಇಲ್ಲದೆ ಕಂಪ್ಲೀಟ್ ರಿಪೋರ್ಟ್
ಆ ಯುವಕನ ಹೆಸರು ವಿವೇಕಾನಂದ. ಕುಂದಾಪುರ ತಾಲೂಕು ಅಮವಾಸೆ ಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ನಿವಾಸಿ ಶೀನ ನಾಯ್ಕರ ಮಗ. ವಯಸ್ಸು 28. ಕಳೆದ ಸೆಪ್ಟೆಂಬರ್ 16ರಂದು ವಿವೇಕಾನಂದ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಜತೆಗೆ ಮನೆಯ ನಾಯಿಯೂ ಕಣ್ಮರೆಯಾಗಿತ್ತು.
ಈ ಭಾಗದಲ್ಲಿ ಚಿರತೆಗಳ ಕಾಟ ವಿಪರೀತ. ಹೀಗಾಗಿ ಮೊದಲ ಸಂಶಯ ಬಂದಿದ್ದು ಚಿರತೆಗಳೇನಾದರೂ…! ಅಂತ. ಇಲ್ಲಿ ಯಾವುದೇ ದನ, ನಾಯಿ ಕಣ್ಮರೆಯಾದರೂ ಜನ ಗುಂಪಾಗಿ ಹುಡುಕಾಟ ಮಾಡುವುದು ರೂಢಿ. ಹೀಗಾಗಿ ವಿವೇಕಾನಂದ ನಾಪತ್ತೆಯಾದಾಗಲೂ ಹುಡುಕಾಟ ನಡೆಸಿದರು. ಅರಣ್ಯ ಇಲಾಖೆಗೂ ದೂರು ನೀಡಿದರು. ಅವರೂ ಬಂದು ಬಂದು ಹುಡುಕಾಟ ನಡೆಸಿದರು. ಅದು ದಟ್ಟವಾದ ಕಾಡಿನ ಪ್ರದೇಶ. ಹೀಗಾಗಿ ಎಷ್ಟು ದಿನ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಮೃತದೇಹವಾಗಲೀ, ಸಾವಿನ ಯಾವುದೇ ಕುರುಹುಗಳಾಗಲೀ ಸಿಗಲಿಲ್ಲ. ಹೀಗಾಗಿ ಜನ ಆತನನ್ನು ಚಿರತೆ ಹೊತ್ತುಕೊಂಡು ಹೋಗಿರಲಾರದು ಅಂದುಕೊಂಡರು.
ಶೀನ ನಾಯ್ಕ ಮತ್ತು ಮನೆಯವರು ಇದ್ದ ದೈವ ದೇವರಿಗೆಲ್ಲ ಹರಕೆ ಹೊತ್ತರು. ಕೊರಗಜ್ಜಾ ಹುಡುಕಿಕೊಡು ಎಂದರು. ಸಾಮಾನ್ಯವಾಗಿ ಈ ಭಾಗದಲ್ಲಿ ಮನುಷ್ಯರು, ಪ್ರಾಣಿಗಳು ನಾಪತ್ತೆಯಾದಾಗ ʻನಿಮಿತ್ತ ಕೇಳುವುದುʼ ರೂಢಿ. ಅಂದರೆ ದೈವದಲ್ಲಿ, ದೇವರಲ್ಲಿ, ಜೋಯಿಸರಲ್ಲಿ ಪ್ರಶ್ನೆ ಕೇಳುವುದು. ವೀಳ್ಯದೆಲೆ, ಕವಡೆ ಕಾಯಿಯ ಮೂಲಕ ಅವರು ಪ್ರಶ್ನೆ ಹೇಳುತ್ತಾರೆ.
ಹಾಗೆ ಶೀನ ನಾಯ್ಕರೂ ನಿಮಿತ್ತ ಕೇಳಿದರು. ಕೇಳಿಬಂದ ಸಂತಸದ ಸಂಗತಿ ಏನೆಂದರೆ: ವಿವೇಕಾನಂದ ಈಸ್ ಸೇಫ್!. ಯಾವುದೋ ಒಂದು ನಿರ್ದಿಷ್ಟ ದಿಕ್ಕು ಹೇಳಿದರು. ಎಷ್ಟೋ ದೂರ ಅಂದರು. ಮರಳಿ ಬರುತ್ತಾನೆ ಅಂದರು. ಇದನ್ನು ಕೇಳಿದ ಕುಟುಂಬ ಮತ್ತು ಊರಿನವರು ಅಲ್ಲೆಲ್ಲ ಹುಡುಕಿದರು.
ಇದಾದ ಬಳಿಕ ಸಂಭವಿಸಿದ್ದೇ ಅಚ್ಚರಿ. ಸರಿಯಾಗಿ 8 ದಿನಗಳ ಬಳಿಕ ವಿವೇಕಾನಂದ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದ. ಆತನ ಮುಂದೆ ನಾಯಿ ದಾರಿ ತೋರಿಸುತ್ತಾ ಬರುತ್ತಿತ್ತು. ಹಾಗಂತ ವಿವೇಕಾನಂದ ಬಂದಿದ್ದು ತನ್ನ ಮನೆಗಲ್ಲ. ತೊಂಬಟ್ಟಿನಿಂದ ಸುಮಾರು ಏಳೆಂಟು ಕಿ.ಮೀ. ದೂರದ ಕಬ್ಬಿನಾಲೆಯ ಸಮೀಪದ ಮನೆಯೊಂದರ ಸಮೀಪ ಬಂದಿದ್ದಾನೆ. ವಿವೇಕಾನಂದ ಮತ್ತು ನಾಯಿ ಎರಡನ್ನೂ ಗಮನಿಸಿದ ಮನೆಯವರು ಶೀನ ನಾಯ್ಕರಿಗೆ ಸುದ್ದಿ ಮುಟ್ಟಿಸಿದರು. ಈಗ ವಿವೇಕಾನಂದನನ್ನು ಮನೆಗೆ ಕರೆತರಲಾಗಿದೆ. ಆಹಾರ ಸೇವಿಸದೆ ಬರಿ ನೀರಿನಲ್ಲೇ ಬದುಕಿದಂತಿರುವ ವಿವೇಕಾನಂದ ನಿತ್ರಾಣನಾಗಿದ್ದಾನೆ. ಆದರೆ, ಮರಳಿಬಂದನಲ್ಲ ಎಂದು ಜನರು ದೈವ ದೇವರ ಮಹಿಮೆಯನ್ನು ಕೊಂಡಾಡುತ್ತಿದ್ದಾರೆ. ಈಗ ವಿವೇಕಾನಂದ ನಾಯಿ, ಮನೆಯವರು ಎಲ್ಲರೂ ಖುಷಿಯಾಗಿದ್ದಾರೆ. ಎಂಬಲ್ಲಿಗೆ ಕಥೆ ಮುಗಿಯುವುದಿಲ್ಲ!
ನಿಜವಾದ ಕಥೆ ಶುರುವಾಗುವುದು ಇಲ್ಲಿಂದಲೇ!
ವಿವೇಕಾನಂದ ಎಂಬ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿರುವ ಯುವಕ ನಾಪತ್ತೆಯಾಗಿ ಎಷ್ಟು ದಿನ ಹುಡುಕಿದರೂ ಸಿಗದೆ ಕೊನೆಗೆ ಎಂಟು ದಿನಗಳ ಬಳಿಕ ಮನೆಗೆ ಬರುವ ಈ ಕಥೆಗೆ ಸಂಬಂಧಿಸಿ ಮತ್ತೊಂದು ಮಗ್ಗುಲೂ ಇದೆ. ನೀವು ಕಾಂತಾರಕ್ಕೂ ಈ ಘಟನೆಗೂ ಏನು ಸಂಬಂಧ ಎಂದು ಯೋಜಿಸುತ್ತಿದ್ದೀರಲ್ಲಾ.. ಅದುವೇ ಈ ಕಥೆ. ಈ ಘಟನೆಗೆ ಸಂಬಂಧಿಸಿ ನಡೆದಿದೆ ಎನ್ನಲಾದ ವಿದ್ಯಮಾನವನ್ನು ರವೀಶ್ ಎಂಬವರು ಬರೆದಿದ್ದಾರೆ. ಅವರು ಹೇಳುವ ಕುತೂಹಲಕಾರಿ ವಿಚಾರವನ್ನು ಅವರ ಬರವಣಿಗೆಯಲ್ಲೇ ಓದಿ. ಮುಂದಿನದು ರವೀಶ್ ಅವರು ಹೇಳಿದ ಕಥೆ.
ಕಾಂತಾರದಲ್ಲಿ ದೈವ ನರ್ತಕ ಮಾಯವಾಗುವ ಕಥೆಗೂ ಇದಕ್ಕೂ ಸಂಬಂಧ
ಕಾಂತಾರ ಸಿನಿಮಾಮಾದಲ್ಲಿ ದೈವ ನರ್ತಕರು ಕಾಡಿನಲ್ಲಿ ಮಾಯವಾಗುವ ದೃಶ್ಯವಿದೆ. ಅದು ನಿಜವಾ ? ಕಲ್ಪನೆಯಾ? ಎನ್ನುವ ಒಂದು ಚರ್ಚೆ ಹುಟ್ಟು ಹಾಕಿತ್ತು. ಅದು ನಿಜವಾ? ಸುಳ್ಳಾ ಗೊತ್ತಿಲ್ಲ. ಅಂತಹದ್ದೆ ಒಂದು ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟಿನಲ್ಲಿ ನಡೆದಿದೆ.
ಇಂದಿಗೆ ಸುಮಾರು ಹತ್ತು ದಿನ ಮೊದಲು ಊರಿನ ಯುವಕನೊಬ್ಬ ತನ್ನ ಮನೆಯ ಎರಡು ನಾಯಿಗಳೊಂದಿಗೆ ಕಾಣೆಯಾಗುತ್ತಾನೆ. ಮನೆಯವರು ಹುಡುಕಲು ಆರಂಭಿಸುತ್ತಾರೆ ಎಲ್ಲಿ ಹುಡುಕಿದರೂ ಸುಳಿವು ಸಿಗುವುದಿಲ್ಲ. ಮನೆಯವರು, ಊರವರು, ಪೊಲೀಸರು, ಸಿಕ್ಕ ಸಿಕ್ಕವರೆಲ್ಲ ದಟ್ಟ ಕಾಡಿನಲ್ಲಿ ಬಿಟ್ಟು ಬಿಡದೆ ಹುಡುಕುತ್ತಾರೆ ಒಂದೆರಡು ದಿನದಲ್ಲಿ ಒಂದು ನಾಯಿ ಮನೆಗೆ ವಾಪಸ್ ಬರುತ್ತದೆ. ಅಲ್ಲಿಗೆ ಊರವರು ಅನಾಹುತವನ್ನು ಗ್ರಹಿಸುತ್ತಾರೆ ಆದರೆ ಹುಡುಕುವುದು ನಿಲ್ಲುವುದಿಲ್ಲ.
ಸಿಗದೆ ಹೋದಾಗ ದೈವ, ದೇವರುಗಳ ಮೊರೆ ಹೋಗುತ್ತಾರೆ . ಕೊರಗಜ್ಜನ ಸನ್ನಿದಿಯಲ್ಲಿ ಕೇಳಿದಾಗ ಬದುಕಿದ್ದಾನೆ ಎಂಬ ಆಶ್ವಾಸನೆ ಸಿಗುತ್ತದೆ. ಅದಾಗಲೇ ಒಂದು ವಾರ ಕಳೆದುಹೋಗುತ್ತದೆ ಯುವಕನ ಸುಳಿವಿಲ್ಲ. ಮನೆಯವರು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಅದರಲ್ಲಿ ಒಂದು ಆಡಿಯೋ ಮಾತ್ರ ದಿಗ್ಬ್ರಮೆಗೊಳಿಸುತ್ತದೆ.
ಅದೊಂದು ಫೋನ್ ಕಾಲ್ ಸಂಭಾಷಣೆ. ಒಂದು ಕಡೆ ಒಬ್ಬ ಹೆಂಗಸು: ಮಾಂತ್ರಿಕರೊ, ತಾಂತ್ರಿಕರೊ ಇರಬಹುದು ಇನ್ನೊಂದು ಕಡೆ ಈ ಯುವಕನ ಸಂಬಂಧಿಕರು ಇದ್ದಂತಿದೆ.
ಆ ಮಹಿಳೆ ಹೇಳುತ್ತಾರೆ: “ಹುಡುಗ ಬದುಕಿದ್ದಾನೆ. ಅವರ ಮನೆಯ ಗದ್ದೆಯಲ್ಲಿ ಒಂದು ಕಲ್ಲಿದೆ. ನೋಡಲು ಅದೊಂದು ಸಾಧಾರಣ ಕಲ್ಲು. ಆ ಕಲ್ಲಿನಲ್ಲಿ ದೇವಿ ಇದ್ದಾಳೆ. ಆ ಕಲ್ಲಿನ ಮೇಲೆ ಈತ ಆವಾಗಾವಾಗ ಕೂರುತಿದ್ದ. ಈಗ ಆ ಕಲ್ಲನ್ನು ಗದ್ದೆಯ ಪಕ್ಕದಲ್ಲಿ ಎಸೆದಿದ್ದಾರೆ. ನನಗೆ ಸ್ಪಷ್ಟವಾಗಿ ಕಾಣುತ್ತಿದೆ ಆ ದೇವಿಯ ಕೈಯಲ್ಲಿ ಕತ್ತಿ ಇದೆ. ಅವಳೇ ಅವನನ್ನು ಅಡಗಿಸಿ ಇಟ್ಟಿದ್ದಾಳೆ. ಈಗ ಮನೆಯವರು ಆ ಕಲ್ಲನ್ನು ಹುಡುಕಬೇಕು, ಸಂಜೆ ಆರು ಘಂಟೆಯ ನಂತರ ಕಲ್ಲಿಗೆ ಪೂಜೆ ಮಾಡಿ ಒಂದು ರೂಪಾಯಿ ನಾಣ್ಯವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಎಕ್ಕದ ಮರಕ್ಕೆ ಕಟ್ಟಿ ಪ್ರಾರ್ಥಿಸಿಕೊಳ್ಳಬೇಕು ಹುಡುಗ ಮನೆಗೆ ಬರುತ್ತಾನೆ ” ಎಂದು ಹೇಳುತ್ತಿರುವ ಆಡಿಯೋ ಅದು.
ದಿನ ಬೆಳಗಾದರೆ ಇಂತಹ ಅದೆಷ್ಟೊ ಜ್ಯೋತಿಷಿಗಳು ಹೊಟ್ಟೆ ಪಾಡಿಗೆ ಏನೇನೊ ಹೇಳುತ್ತಿರುತ್ತಾರೆ. ಎಂಟು ದಿನ ಊಟ ವಿಲ್ಲದೆ ಸುರಿವ ಮಳೆಯಲ್ಲಿ ಕ್ರೂರ ಪ್ರಾಣಿಗಳಿರುವ ಕಾಡಿನಲ್ಲಿ ಆ ಯುವಕ ಬದುಕವ ಸಾದ್ಯತೆ ತೀರಾ ಕಡಿಮೆ ಅನಿಸದಿರದು.
ಆದರೆ, ಮನೆಯವರು ಆ ಕಲ್ಲನ್ನು ಹುಡುಕಿದರು. ಆ ಕಲ್ಲಿಗೆ ಪೂಜೆ ಮಾಡಿ ದೀಪವಿಟ್ಟು ಬೇಡಿಕೊಂಡರು. ಆ ರಾತ್ರಿ ಹಾಗೆ ಮುಗಿಯಿತು. ಮರುದಿನ ಆ ಯುವಕ ತನಗೇನೂ ಆಗಿಲ್ಲ ಎಂಬಂತೆ ತನ್ನ ಇನ್ನೊಂದು ನಾಯಿ ಜೊತೆ ನಡೆದುಕೊಂಡು ಬರುತ್ತಿರುವುದನ್ನು ಊರವರು ನೋಡಿ ಅವರ ಮನೆಯಲ್ಲಿರಿಸಿ ಊಟಕ್ಕೆ ಹಾಕಿ ಮನೆಯವರಿಗೆ ಸುದ್ದಿ ಮುಟ್ಟಿಸುತ್ತಾರೆ.
ಈಗ ಸುತ್ತಮುತ್ತ ಎಲ್ಲ ಕಡೆ ಇದೇ ಸುದ್ದಿ. ಆ ಕಲ್ಲು, ಈ ಮಾಂತ್ರಿಕ ಮಹಿಳೆ, ಅವರು ಹೇಳಿದ ದೇವಿ. ಊಟವಿಲ್ಲದ ಎಂಟು ದಿನ ಬದುಕಿದ ಯುವಕ ಅವನನ್ನು ಬಿಟ್ಟು ಬಾರದ ನಾಯಿ. ಅದೇ ಕಾಂತಾರದ ಕಾಡು. ಅಲ್ಲಿ ಮಾಯವಾದವರು ಮತ್ತೆ ಬರಲಿಲ್ಲ. ಇಲ್ಲಿ ಈ ಯುವಕ ಬಂದಿದ್ದಾನೆ.
ಈ ವಿಜ್ಞಾನದ ಯುಗದಲ್ಲಿ ಹೀಗೂ ನಡೆಯುತ್ತದಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಹೌದು ಮತ್ತು ಇಲ್ಲ. ನಂಬಿದವರಿಗೆ ಹೌದು. ನಾನು ಇದೆ ಊರಿನಲ್ಲಿ ಹುಟ್ಟಿ ಬೆಳೆದಿರುವುದರಿಂದ ನಾನದನ್ನು ಬಲವಾಗಿ ನಂಬುತ್ತೇನೆ. ನಂಬದವರಿಗೆ ಒಂದು ಅವಕಾಶವಿದೆ ಇದು ಕಥೆಯಲ್ಲ ನಿಜ ಘಟನೆ ಈಗಷ್ಟೆ ನಡೆದಿದೆ ನೀವು ಇದರ ಹಿಂದೆ ಬೀಳಬಹುದು.
-ಇದಿಷ್ಟು ರವೀಶ್ ಅವರು ಹೇಳುವ ಕಥೆ. ಈ ಜಗತ್ತಿನಲ್ಲಿ ಅತಿಮಾನುಷವಾದ ದೈವಿಕ ಶಕ್ತಿಯೊಂದಿದೆ. ಅದುವೇ ಜಗತ್ತನ್ನು ನಿಯಂತ್ರಿಸುತ್ತದೆ ಎನ್ನುವುದನ್ನು ಸಾರವಾಗಿ ಹೇಳುತ್ತದೆ ಕತೆ.
ಇದನ್ನೂ ಓದಿ ; Rishab Shetty : ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಕಾಂತಾರ 2! ಶೂಟಿಂಗ್ ಯಾವಾಗ?
ವಿವೇಕಾನಂದನ ಕರೆ ತಂದ ನಾಯಿಗಿದೆ ಸನ್ಮಾನ
ವಿವೇಕಾನಂದ ಬದುಕಿದ್ದಾನೆ ಎಂಬುದನ್ನು ಸಾರಿ ಸಾರಿ ಹೇಳಿದ್ದರು ಹೆಬ್ರಿ ಸಮೀಪದ ಗುಡಿಯೊಂದರ ಕೊರಗಜ್ಜ. ಹೀಗಾಗಿ ಮನೆಯವರೆಲ್ಲ ಸೋಮವಾರ ಸಂಜೆ ಆ ಗುಡಿಗೆ ಹೋಗಲಿದ್ದಾರೆ. ಇತ್ತ ವಿವೇಕಾನಂದನ ಪ್ರಾಣ ಉಳಿಸಿದ್ದು, ಮರಳಿ ಮನೆಗೆ ಕರೆತಂದಿದ್ದು ನಾಯಿ ಎಂಬುದು ನಂಬಿಕೆ. ಇಂಥ ವಿಶ್ವಾಸಾರ್ಹ ಪ್ರಾಣಿಯನ್ನು ಸನ್ಮಾನಿಸುವ ಕಾರ್ಯಕ್ರಮವೂ ಸೋಮವಾರ ಸಂಜೆ ನಡೆಯಲಿದೆ. ಅಂದ ಹಾಗೆ, ಈ ಎಲ್ಲ ವಿದ್ಯಮಾನಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿರುವವರು ಪೊಲೀಸರು. ವಿವೇಕಾನಂದ ಬದುಕಿದ್ದಾನೆ, ಮರಳಿ ಬಂದಿದ್ದಾನೆ ಎಂದು ಮನೆಯವರು ಹೇಳಿದಾಗ, ನಾವು ಅಷ್ಟು ಹುಡುಕಿದರೂ ಸಿಗದಿದ್ದವನು ಎಲ್ಲಿದ್ದ ಎಂಬ ಅಚ್ಚರಿಯೊಂದಿಗೆ, ಅವನನ್ನು ಒಮ್ಮೆ ಠಾಣೆಗೆ ಕರೆದುಕೊಂಡು ಬನ್ನಿ. ಅವನು ಬದುಕಿದ್ದಾನೆ ಎಂದು ರುಜುವಾತು ಮಾಡಿ ನಾಪತ್ತೆ ಕೇಸು ಕ್ಲೋಸ್ ಮಾಡಿಬಿಡುವ ಎಂದಿದ್ದಾರಂತೆ.
ಇದನ್ನೂ ಓದಿ: ಪತ್ನಿ, ಮಕ್ಕಳೊಂದಿಗೆ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ; ದೇವರ ದರ್ಶನ, ಖಾವಂದರ ಆಶೀರ್ವಾದ ಪಡೆದ ಕಾಂತಾರ ಹೀರೋ
ಇದಿಷ್ಟು ಕಾಂತಾರ ಕಥೆ. ಜನಜೀವನದಲ್ಲಿ ನಡೆಯುವ ಹಲವು ಅಚ್ಚರಿಗಳಲ್ಲಿ ಇದೂ ಒಂದು. ನೀವು ದೈವ ದೇವರುಗಳನ್ನು ನಂಬುವವರೇ ಆದರೆ ದೈವವೇ ಆ ಯುವಕನನ್ನು ಮರಳಿ ತಂದು ಮನೆ ಸೇರಿಸಿದೆ ಎಂದು ನಂಬಬಹುದು. ಇಲ್ಲಾ ಈಗೆಲ್ಲ ಅದು ಸಾಧ್ಯವಾ ಎನ್ನುವ ಯೋಚನೆ ನಿಮ್ಮದಾಗಿದ್ದರೆ ನಾಯಿಯೇ ಅವನನ್ನು ಕೈಹಿಡಿದಿದೆ ಎಂದೂ ಒಪ್ಪಬಹುದು. ಅಂತೂ ಅಚ್ಚರಿಯ ವಿದ್ಯಮಾನವೊಂದು ಇಲ್ಲಿ ನಡೆದಿರುವುದು ಮಾತ್ರ ನಿಜ.
ಉಡುಪಿ
Weather report : ಮುಂದಿನ 5 ದಿನ ಬೆಂಗಳೂರು ಸೇರಿ ಕರಾವಳಿಯಲ್ಲಿ ಭರ್ಜರಿ ಮಳೆ ಪ್ರದರ್ಶನ
Rain News : ಮಳೆ ಕೊರತೆಯಿಂದ ಕಂಗಲಾಗಿರುವವರಿಗೆ ಹವಾಮಾನ ಇಲಾಖೆಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಕರಾವಳಿ ಹಾಗೂ ಒಳನಾಡಲ್ಲಿ ಮುಂದಿನ 5 ದಿನಗಳು ಭಾರಿ ಮಳೆಯಾಗುವ ಮುನ್ಸೂಚನೆಯನ್ನು (Weather report) ನೀಡಿದೆ.
ಬೆಂಗಳೂರು: ಕರಾವಳಿ ಸೇರಿದಂತೆ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಮುಂದಿನ 5 ದಿನಗಳ ಕಾಲ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಒಳನಾಡಿನಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐಎಂಡಿ ಯೆಲ್ಲೋ ಅಲರ್ಟ್ ನೀಡಿದೆ. ಇನ್ನು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ.
ಬೆಂಗಳೂರು ಸೇರಿ ಮೈಸೂರಲ್ಲೂ ಸಾಧಾರಣ ಮಳೆ
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಭಾಗದಲ್ಲಿ ಚದುರಿದಂತೆ ಮಳೆಯಾಗಲಿದೆ. ಉಳಿದಂತೆ ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಮಂಡ್ಯ ಅತಿ ಕಡಿಮೆ ಮಳೆಯಾಗಲಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 30 ಡಿ.ಸೆ – 21 ಡಿ.ಸೆ
ಮಂಗಳೂರು: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 31 ಡಿ.ಸೆ – 22 ಡಿ.ಸೆ
ಗದಗ: 30 ಡಿ.ಸೆ – 21 ಡಿ.ಸೆ
ಹೊನ್ನಾವರ: 31 ಡಿ.ಸೆ- 24 ಡಿ.ಸೆ
ಕಲಬುರಗಿ: 31 ಡಿ.ಸೆ – 23 ಡಿ.ಸೆ
ಬೆಳಗಾವಿ: 28 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 24 ಡಿ.ಸೆ
ಸೆಪ್ಟೆಂಬರ್ 24ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯದಲ್ಲಿ ಒಳಹರಿವು, ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನ ಮಟ್ಟ (ಅಡಿಗಳಲ್ಲಿ) | ಒಳ ಹರಿವು (ಕ್ಯೂಸೆಕ್) | ಹೊರ ಹರಿವು (ಕ್ಯೂಸೆಕ್) |
ಕೆಆರ್‌ಎಸ್ ಜಲಾಶಯ (KRS Dam) | 38.04 | 20.61 | 6016 | 5735 |
ಆಲಮಟ್ಟಿ ಜಲಾಶಯ (Almatti Dam) | 519.6 | 114.73 | 405 | 405 |
ಮಲಪ್ರಭಾ ಜಲಾಶಯ (Malaprabha Dam) | 633.80 | 21.44 | 0 | 194 |
ಘಟಪ್ರಭಾ ಜಲಾಶಯ (Ghataprabha Dam) | 662.91 | 42.40 | 2311 | 181 |
ತುಂಗಾಭದ್ರಾ ಜಲಾಶಯ (Tungabhadra Dam) | 497.71 | 62.92 | 4378 | 10316 |
ಭದ್ರಾ ಜಲಾಶಯ (Bhadra Dam) | 657.73 | 43.23 | 290 | 290 |
ಕಬಿನಿ ಜಲಾಶಯ (Kabini Dam) | 696.13 | 14.80 | 3166 | 4390 |
ಹಾರಂಗಿ (Harangi Dam) | 871.38 | 8.06 | 1335 | 2791 |
ಲಿಂಗನಮಕ್ಕಿ (Linganamakki Dam) | 554.44 | 68.30 | 5493 | 5393 |
ಹೇಮಾವತಿ (Hemavathi Dam) | 890.58 | 17.66 | 4986 | 1300 |
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
Live News5 hours ago
Bangalore Bandh Live: ಬೆಂಗಳೂರು ಬಂದ್; ಪ್ರತಿಭಟನಾಕಾರರ ಬಂಧನ, ಆತ್ಮಹತ್ಯೆ ಯತ್ನ, ಎಲ್ಲೆಲ್ಲಿ ಏನೇನಾಗ್ತಿದೆ?
-
ವಿದೇಶ22 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ20 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ15 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ದೇಶ12 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ
-
ಕರ್ನಾಟಕ15 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema18 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ22 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?