Foreign Currency Transfer: ಧರ್ಮಸ್ಥಳದಲ್ಲಿ ಐವರ ಬಳಿ 42 ಸಿಮ್! ವಿದೇಶಿ ಕರೆನ್ಸಿ ವರ್ಗಾವಣೆ ದಂಧೆ? - Vistara News

ದಕ್ಷಿಣ ಕನ್ನಡ

Foreign Currency Transfer: ಧರ್ಮಸ್ಥಳದಲ್ಲಿ ಐವರ ಬಳಿ 42 ಸಿಮ್! ವಿದೇಶಿ ಕರೆನ್ಸಿ ವರ್ಗಾವಣೆ ದಂಧೆ?

Foreign Currency Transfer: ಯುವಕರ ಬ್ಯಾಗ್‌ನಲ್ಲಿ ಬೇರೆ ಬೇರೆ ವಿಳಾಸದ ಸಿಮ್ ಕಾರ್ಡ್ ಹಾಗೂ ಮೊಬೈಲ್ ಇರುವುದು ಬೆಳಕಿಗೆ ಬಂದಿದೆ. ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದೇಶಿ ಕರೆನ್ಸಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆಗೆ ಯುವಕರನ್ನು ಒಳಪಡಿಸಲಾಗಿದೆ.

VISTARANEWS.COM


on

Dharmastala Police station five arrested
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳೂರು: ವಿದೇಶಿ ಕರೆನ್ಸಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ಐವರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಒಟ್ಟು 42 ಸಿಮ್ ಕಾರ್ಡ್ ಖರೀದಿ ಮಾಡಿದ್ದ ಇವರು, ನಿಗೂಢ ಕಾರ್ಯ ಸಾಧನೆಗೆ ಬಳಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ಕಡೆ ಪ್ರಯಾಣ ಮಾಡುತ್ತಿದ್ದ ಐವರು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೋಲಿಸರು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಹಾಗೂ ತಂಡದಿಂದ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: BDA Site: ಬಿಡಿಎ ಎಡವಟ್ಟಿಗೆ 700 ಸೈಟ್‌ ಅತಂತ್ರ! ಮುಚ್ಚಲಾಗುತ್ತಾ ಕೆಂಪೇಗೌಡ ಲೇಔಟ್‌?

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಫೀಕ್ ಮಗ ರಮೀಝ್ (20), ಬಂಟ್ವಾಳ ತಾಲೂಕಿನ ಬಡಗಕಜೆಕರ್ ಗ್ರಾಮದ ಪಾಂಡವಕಲ್ಲು ನಿವಾಸಿ ಇಬ್ರಾಹಿಂ ಮಗ ಅಕ್ಬರ್ ಆಲಿ (24), ಬೆಳ್ತಂಗಡಿ ನಗರದ ಸಂಜಯನಗರ ನಿವಾಸಿ ಹಸನಬ್ಬ ಮಗ ಮೊಹಮ್ಮದ್ ಮುಸ್ತಫಾ (22), ಬೆಳ್ತಂಗಡಿ ತಾಲೂಕಿನ ಪಡಂಗಡಿ ಬದ್ರಿಯಾ ಮನ್ಝೀಲ್ ನಿವಾಸಿ ಇಸ್ಮಾಯಿಲ್ ಮಗ ಮಹಮ್ಮದ್ ಸಾಧಿಕ್ (27), ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

Dharmastala Police station five arrested

ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗುಂಪು ಸೇರಿಕೊಂಡಿದ್ದ ಯುವಕರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಶಂಕೆ ಬಂದಿದೆ. ಹೀಗಾಗಿ ಈ ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿ ಬೇರೆ ಬೇರೆ ವಿಳಾಸದ ಸಿಮ್ ಕಾರ್ಡ್ ಹಾಗೂ ಮೊಬೈಲ್ ಇರುವುದು ಬೆಳಕಿಗೆ ಬಂದಿದೆ. ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದೇಶಿ ಕರೆನ್ಸಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆಗೆ ಯುವಕರನ್ನು ಒಳಪಡಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Assault Case : ಸಂಬಳ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಹಾಕಿ ಮನಸ್ಸೋ ಇಚ್ಛೆ ಹಲ್ಲೆ

ಚಿಕ್ಕಮಗಳೂರು: ಸಂಬಳ ಕೇಳಿದ್ದಕ್ಕೆ (Salary Issue) ಹೋಟೆಲ್‌ ಕಾರ್ಮಿಕನಿಗೆ ಮನಸ್ಸೋ ಇಚ್ಛೆ ಹಲ್ಲೆ (Assault Case) ನಡೆಸಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಸೋಮಲಾಪುರ ನಿರ್ಜನ ಪ್ರದೇಶದಲ್ಲಿ (Chikkmagalur News) ನಡೆದಿದೆ. ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕರಾಗಿದ್ದಾರೆ.

ಸತೀಶ್‌ ಬೆಂಗಳೂರಿನ ಕೊಪ್ಪ ಮೂಲದ ಮಂಜು ಎಂಬುವವರ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಸಂಬಳದ ವಿಚಾರವಾಗಿ ಗಲಾಟೆಯಾಗಿದ್ದರಿಂದ ಕೆಲಸ ಬಿಟ್ಟು ಸತೀಶ್‌ ವಾಪಸ್‌ ಊರಿಗೆ ಬಂದಿದ್ದ. ಈ ನಡುವೆ ಕೆಲಸ ಮಾಡಿದ ಹಣವನ್ನು ಕೇಳಲು ಹೋಟೆಲ್‌ ಮಾಲೀಕ ಮಂಜುಗೆ ಫೋನ್ ಮಾಡಿದ್ದ.

ಇದರಿಂದ ಸಿಟ್ಟಿಗೆದ್ದ ಮಂಜು ಸಹೋದರ ಹಾಗೂ ಆತನ ನಾಲ್ಕೈದು ಸ್ನೇಹಿತರು ಹಣ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಾರೆ. ನಂತರ ರೆಸ್ಟೋರೆಂಟ್‌ಗೆ ಕರೆದುಹೋಗಿ ಕಂಠಪೂರ್ತಿ ಕುಡಿಸಿದ್ದಾರೆ. ಹಣ ಕೊಡುತ್ತೇನೆ ಎಂದು ಹೇಳಿ ಬೈಕ್‌ನಲ್ಲಿ ಕೂರಿಸಿಕೊಂಡು ಸೋಮಲಾಪುರದ ಸಮೀಪದ ಕಾಡಿನ ಮಧ್ಯೆ ಕರೆದು ಹೋಗಿದ್ದಾರೆ. ಬೈಕ್‌ನಿಂದ ಇಳಿಯುತ್ತಿದ್ದಂತೆ ಹಗ್ಗದಿಂದ ಕಟ್ಟಿ ಹಾಕಿ, ಬಟ್ಟೆ ಬಿಚ್ಚಿಸಿ ಸತೀಶ್‌ನನ್ನು ಮರಕ್ಕೆ ಕಟ್ಟಲಾಗಿದೆ. ಕಬ್ಬಿಣದ ರಾಡ್‌, ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ.

ಅರ್ಧ ದಿನ ಪೂರ್ತಿ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಸತೀಶ್‌ ಆರೋಪಿಸಿದ್ದಾರೆ. ಮಾತ್ರವಲ್ಲದೆ ವಾಪಸ್‌ ಬೆಂಗಳೂರಿಗೆ ಹೋಗಿ ಮಂಜು ಹೋಟೆಲ್‌ನಲ್ಲಿ ಕೆಲಸ ಮಾಡಬೇಕು. ಹೋಗದಿದ್ದರೆ ಇದೇ ರೀತಿ ಹಿಂಸೆ ಕೊಟ್ಟು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸತೀಶ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮನಸೋ ಇಚ್ಛೆ ಹಲ್ಲೆ ನಡೆಸಿದ ನಂತರ ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿ ಬಿಟ್ಟು, ಪೊಲೀಸ್‌ ಠಾಣೆಗೆ ತೆರಳಿ ದೂರು ಕೊಟ್ಟರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ; ಜೆಡಿಎಸ್ ರಣತಂತ್ರ, ಉಸ್ತುವಾರಿಗಳ ನೇಮಕ

ಸದ್ಯ ಗಂಭೀರ ಗಾಯಗೊಂಡಿರುವ ಸತೀಶ್‌ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!‌

karnataka Weather Forecast : ಒಳನಾಡು ಹಾಗೂ ಮಲೆನಾಡು, ಕರಾವಳಿಯಲ್ಲಿ ಮಳೆ (Rain News) ಅಬ್ಬರ ಜೋರಾಗಿ ಇರಲಿದ್ದು, ಮೀನುಗಾರರಿಗೆ ಕಡಲಿಗಿಳಿಯದಂತೆ ಎಚ್ಚರಿಕೆ (Fisher Waring) ನೀಡಲಾಗಿದೆ. ಬಿರುಗಾಳಿಯು 55 ಕಿ.ಮೀ ವೇಗದಲ್ಲಿ ಬೀಸಲಿದ್ದು, ಈ ವೇಳೆ ಸಮುದ್ರಕ್ಕೆ ಇಳಿಯಬಾರೆಂದು ಸೂಚಿಸಲಾಗಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟ ಮುಂದುವರಿದಿದ್ದು, ಗುಡುಗು, ಮಿಂಚು ಸಹಿತ (Rain News) ಬಿರುಗಾಳಿಯೊಂದಿಗೆ ಮಳೆಯಾಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ (Karnataka Weather Forecast) ಬೀಸಲಿದೆ.

ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ ಮತ್ತು ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರದ ಹಲವು ಕಡೆಗಳಲ್ಲಿ ಗಾಳಿಯು ರಭಸವಾಗಿ ಬೀಸಲಿದ್ದು, ಗುಡುಗು ಸಹಿತ ಮಳೆ ಲಘು ಮಳೆಯಾಗಲಿದೆ. ತುಮಕೂರು ಮತ್ತು ವಿಜಯನಗರ ಸೇರಿದಂತೆ ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲೂ ಗಾಳಿ ಸಹಿತ ಭಾರಿ ಮಳೆಯಾಗಲಿದೆ.

Karnataka Weather Forecast

ಇದನ್ನೂ ಓದಿ: SSLC Toper: ಓದೋಕೂ ಬರದವ ಎಸ್‌ಎಸ್‌ಎಲ್‌ಸಿ ಟಾಪರ್‌ ಆಗಿ ಜವಾನನಾದ! ಜಡ್ಜ್‌ ದೂರಿನಿಂದ ಹೊರ ಬಿತ್ತು ಅಸಲಿಯತ್ತು!

ಯೆಲ್ಲೋ ಅಲರ್ಟ್‌

ಗುಡುಗು ಸಹಿತ ಭಾರೀ ಮಳೆಯೊಂದಿಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಲಿದ್ದು, ಹಳದಿ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೀನುಗಾರರಿಗೆ ಅಲರ್ಟ್‌

ಮೇ 24ರಂದು ಕರ್ನಾಟಕ ಕರಾವಳಿ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಗಾಳಿಯ ವೇಗವು ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದೆ. ಪ್ರವಾಸಿಗರು ಕಡಲ ತೀರಕ್ಕೆ ಹೋಗದಂತೆ ಎಚ್ಚರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Rain News : ರಾಜ್ಯದ ಹಲವೆಡೆ ಮಳೆಯು (Karnataka Rain) ಅಬ್ಬರಿಸುತ್ತಿದೆ. ಮೈಸೂರಿನ ಹುಣಸೂರಿನಲ್ಲಿ ಜೋರು ಮಳೆಗೆ ಮನೆ ಕುಸಿದು ಬಿದ್ದರೆ, ಬೆಳಗಾವಿಯಲ್ಲಿ ಗಾಳಿ ಮಳೆಗೆ ಶಾಲೆಯ ಶೆಡ್‌
(Karnataka Weather Forecast) ಹಾರಿ ಹೋಗಿದೆ. ಯಾದಗಿರಿ, ಧಾರವಾಡದಲ್ಲಿ ಮರಗಳು ಧರೆಗುರುಳಿದ್ದವು.

VISTARANEWS.COM


on

By

Karnataka rain
Koo

ಮೈಸೂರು: ಮೈಸೂರಿನ ಹುಣಸೂರು ಭಾಗದಲ್ಲಿ ವರುಣನ (Rain News) ಅಬ್ಬರ ಜೋರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ (Karnataka Rain) ತಾಲೂಕಿನ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಳೇನಹಳ್ಳಿಯಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆಯು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜೋರಾಗಿ ಸುರಿದ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ನಾಶವಾಗಿದೆ. ವಾಸಕ್ಕೆ ಮನೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬಸ್ಥರು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಇತ್ತ ಹನಗೋಡಿನಲ್ಲಿ ಭಾರಿ ಮಳೆಗೆ ಜನರು ತತ್ತರಿಸಿದ್ದರು. ಹುಣಸೂರು ತಾಲೂಕಿನ ಹನಗೋಡಿ ಗ್ರಾಮದಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಮನೆ ಅಂಗಡಿಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿತ್ತು. ಬಸ್ ನಿಲ್ದಾಣ ಕೆರೆಯಂತಾಗಿತ್ತು. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದೆ ನೀರು ಹೋಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆಯಾಗಿತ್ತು.

ಇದನ್ನೂ ಓದಿ: Accident Case : ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್‌; ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಮೃತ್ಯು

ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಶೆಡ್‌

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೋರು ಗಾಳಿ ಮಳೆಗೆ ಶೆಡ್ ಹಾರಿ ಹೋಗಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಶಾಲೆಯ ಶೆಡ್ ಹಾರಿ ಅಕ್ಕಪಕ್ಕದ ಮನೆಗಳು ಹಾಗೂ ವಿದ್ಯುತ್ ತಂತಿಗಳು ಮೇಲೆ ಬಿದ್ದು ಹಾನಿಯಾಗಿತ್ತು.

ಯಾದಗಿರಿಯಲ್ಲಿ ಧರೆಗುರುಳಿದ ಮರಗಳು

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ಮರಗಳ ಮೇಲ್ಭಾಗದ ರಂಬೆ, ಕೊಂಬೆಗಳು ಸಂಪೂರ್ಣ ಗಾಳಿಗೆ ಮುರಿದು ಬೋಳಾಗಿದ್ದವು. ಕೆಲವೆಡೆ ಮನೆ ಮುಂದೆ ಇದ್ದ ಮರಗಳು ನೆಲಕ್ಕುರುಳಿದ್ದವು. ಭಾರಿ ಮಳೆಗೆ ಸುಭಾಷ್ ವೃತ್ತದ ಸಮೀಪದ ಪಿಡ್ಲೂಡಿ ಕಚೇರಿ ಆವರಣದೊಳಗೆ ಮಳೆ ನೀರು ನುಗ್ಗಿತ್ತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಜನಸಂಪರ್ಕದ ಕಚೇರಿ ಆವರಣದಲ್ಲಿ ಮರಗಳು ಧರೆಗುರುಳಿದ್ದವು.

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಆರು ಜನರ ಕುಟುಂಬವೊಂದು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದೆ. ಯಾದಗಿರಿಯ ಮಾತಾಮಣಿಕೇಶ್ವರಿ ನಗರದಲ್ಲಿ ಭಾರೀ ಮಳೆ ಗಾಳಿಗೆ ಮನೆಗೆ ಹಾಕಿದ ಟಿನ್ ಶೆಡ್ ಹಾರಿಹೋಗಿದೆ. ಮಳೆ ಗಾಳಿ ಜೋರಾಗುತ್ತಿದ್ದಂತೆ ಇಡೀ ಕುಟುಂಬ ಮನೆಯಿಂದ ಹೊರಬಂದು ಬಚಾವ್ ಆಗಿದ್ದಾರೆ. ಮನೆಯಿಂದ ಹೊರ ಬಂದ ಕೆಲವೇ ಕ್ಷಣದಲ್ಲಿ ಟಿನ್ ಶೆಡ್ ಕುಸಿದು ಬಿದ್ದಿದೆ. ಇತ್ತ ದಿನಸಿ ಸಾಮಾನು ಸೇರಿದಂತೆ ಎಲ್ಲ ವಸ್ತುಗಳು ಹಾಳಾಗಿವೆ.

ಧಾರಾವಾಡದಲ್ಲಿ ಧಾರಾಕಾರ ಮಳೆಗೆ ರಸ್ತೆ ಮೇಲೆ ನಿಂತ ನೀರು

ಧಾರವಾಡದಲ್ಲಿ ಗುರುವಾರದಂದು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಎರಡು ದಿನದಿಂದ ಬ್ರೇಕ್‌ ಕೊಟ್ಟಿದ್ದ ಮಳೆಯು ಗುರುವಾರ ದಿಢೀರ್‌ ಅಪ್ಪಳಿಸಿತ್ತು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಧಾರವಾಡ ಹೊರವಲಯದ ಕೆಎಂಎಫ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲೇ ನೀರು ನಿಂತಿತ್ತು. ಬಿಆರ್‌ಟಿಎಸ್ ಕಾರಿಡಾರ್‌ನಿಂದ ಹರಿದು ಹೋಗದೇ ಇರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶಿಸಿದರು.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರೀಕಟ್ಟೆ, ತರೀಕೆರೆಯಲ್ಲೂ ಭಾರೀ ಮಳೆಯಾಗಿದ್ದು ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿತ್ತು. ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಕಾರು, ಬೈಕ್‌ಗಳು ಅರ್ಧದಷ್ಟು ಮುಳುಗಿತ್ತು. ಎನ್ಆರ್‌ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲೂ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Karnataka Weather: ಇಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Karnataka Weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ, ಅಂದರೆ ಮೇ 29ರವರೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ಮೇ 23ರಂದು ಗುರುವಾರ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Karnataka Weather) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ಜಿಲ್ಲೆಗಳಲ್ಲಿ ಕೂಡ ಗುರುವಾರ ಹಲವೆಡೆ ಗುಡುಗು ಸಹಿತ ಗಾಳಿ (40-50 ಕಿ.ಮೀ) ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಹಾಗೆಯೇ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿ.ಮೀ) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಗಾಳಿಯೊಂದಿಗೆ (40-45 ಕಿ.ಮೀ) ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-45 ಕಿ.ಮೀ) ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ | Rain News: ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಹಾರಿದ 10ಕ್ಕೂ ಹೆಚ್ಚು ಮನೆಗಳ ಮೇಲಿನ ಶೀಟ್, ಇಬ್ಬರಿಗೆ ಗಾಯ

ಇದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ, ಅಂದರೆ ಮೇ 29ರವರೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮೇ 23ರಂದು ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಒಂದೆರಡು ಸ್ಥಳಗಳಲ್ಲಿ ಗುಡುಗು, ಬಿರುಗಾಳಿ ಸಹಿತ (40-50 ಕಿ.ಮೀ) ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಒಂದೆರೆಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಅದೇ ರೀತಿ ಮೇ 24ರಂದು ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ಒಂದೆರೆಡು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಂದೆರೆಡು ಸ್ಥಳಗಳಲ್ಲಿ ಭಾರೀ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ತಾಪಮಾನದ ಮುನ್ಸೂಚನೆ

ಮೇ 23 ರಿಂದ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಲಿಯನ್ ಹೆಚ್ಚಾಗುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ

ಕರಾವಳಿಯಲ್ಲಿ 55 ಕಿ.ಮೀ. ವೇಗದಲ್ಲಿ ಗಂಟೆಗೆ 40 ಕಿ.ಮೀ. ನಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಇದನ್ನು ಓದಿ | Hampi Monument: ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32°C ಮತ್ತು 23°C ಇರುವ ಸಾಧ್ಯತೆ ಇದೆ.

Continue Reading

ಕರ್ನಾಟಕ

Harish Poonja: ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಶಾಸಕ ಹರೀಶ್‌ ಪೂಂಜಾ

Harish Poonja: ಶಾಸಕ ಹರೀಶ್ ಪೂಂಜಾ ವಿಚಾರಣೆ ನಡೆಸಲಾಗಿದೆ. ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರನ್ನು ವಿಚಾರಣೆಗೆ ಕಳುಹಿಸಿಕೊಡುವುದಾಗಿ ವಿನಂತಿಸಿದ್ದರು. ಅದರಂತೆ ಶಾಸಕರನ್ನು ವಿಚಾರಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

Harish Poonja
Koo

ಮಂಗಳೂರು: ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಬುಧವಾರ ರಾತ್ರಿ ವಿಚಾರಣೆಗೆ ಹಾಜರಾದ ಬಳಿಕ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿ ಪೊಲೀಸ್‌ ಠಾಣೆಯಿಂದ ಹೊರಬಂದಿದ್ದಾರೆ. ಪೊಲೀಸರು ಬುಧವಾರ ಮಧ್ಯಾಹ್ನ ಶಾಸಕರ ನಿವಾಸಕ್ಕೆ ತೆರಳಿ ಬಂಧಿಸಲು ಮುಂದಾಗಿದ್ದರು. ಆದರೆ, ಬಿಜೆಪಿ ಕಾರ್ಯಕರ್ತರು, ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ಅಲ್ಲಿಂದ ತೆರಳಿದ್ದರು. ಹೀಗಾಗಿ ವಿಚಾರಣೆ ಮುಗಿಸಿ ಠಾಣೆಯಿಂದ ಶಾಸಕ ಹರೀಶ್ ಪೂಂಜಾ‌ ವಾಪಸ್‌ ಆಗಿದ್ದಾರೆ.

ಪೂಂಜಾಗೆ ಶಾಸಕ ಸುನೀಲ್ ಕುಮಾರ್, ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಮತ್ತಿತರರ ಬಿಜೆಪಿ ನಾಯಕರು ಸಾಥ್ ನೀಡಿದರು. ಈ ವೇಳೆ ಶಾಸಕ ಸುನೀಲ್‌ಕುಮಾರ್ ಮಾತನಾಡಿ, ಕಾನೂನುಬಧ್ದವಾಗಿ ಹರೀಶ್ ಪೂಂಜಾ ವಿಚಾರಣೆಗೆ ಹಾಜಾರಾಗಿದ್ದಾರೆ. ಇದೇ ರೀತಿ ಪೊಲೀಸರೂ ಬಂದು ನೋಟಿಸ್ ಕೊಡಬಹುದಿತ್ತು. ನೂರು ಇನ್ನೂರು ಪೊಲೀಸರ ಜತೆ ಬರುವ ಅಗತ್ಯ ಇರಲಿಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಮುಂದೆ ಅಧಿವೇಶನದಲ್ಲಿ ಇದನ್ನು ಚರ್ಚೆ ಮಾಡುತ್ತೇವೆ. ಈ ವಿಚಾರವಾಗಿ ಅಧಿವೇಶವನ್ನು ಮಾಡಲು ಬಿಡವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ | Harish Poonja: ಪೊಲೀಸರಿಗೆ ಧಮ್ಕಿ ಕೇಸ್‌; ಶಾಸಕ ಹರೀಶ್ ಪೂಂಜಾರನ್ನು ಅರೆಸ್ಟ್‌ ಮಾಡದೇ ವಾಪಸ್‌ ಹೋದ ಪೊಲೀಸರು!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಪ್ರೆಸ್ ನೋಟ್

ಮಂಗಳೂರು: ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಪ್ರೆಸ್ ನೋಟ್ ಬಿಡುಗಡೆ ಮಾಡಲಾಗಿದೆ. ಶಾಸಕ ಹರೀಶ್ ಪೂಂಜಾ ವಿಚಾರಣೆ ನಡೆಸಲಾಗಿದೆ. ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರನ್ನು ವಿಚಾರಣೆಗೆ ಕಳುಹಿಸಿಕೊಡುವುದಾಗಿ ವಿನಂತಿಸಿದ್ದರು. ಅದರಂತೆ ಸಂಸದರು ಪೊಲೀಸರ ಜೊತೆ ಆರೋಪಿಯನ್ನು ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ. 2 ಪ್ರಕರಣದ ಆರೋಪಿ ಶಾಸಕ ಹರೀಶ್ ಪೂಂಜಾ ವಿಚಾರಣೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಕೇಸ್‌?

ಬೆಳ್ತಂಗಡಿಯ ಮೆಲಂತಬೆಟ್ಟುವಿನ ಕಲ್ಲು ಕ್ವಾರಿ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಗುರುವಾಯನಕೆರೆಯ ಬಿಜೆಪಿಯ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬುವವರನ್ನು ಬಂಧನ ಮಾಡಲಾಗಿತ್ತು. ಇದನ್ನು ಖಂಡಿಸಿ ರಾತ್ರೋರಾತ್ರಿ ಪೊಲೀಸ್ ಠಾಣೆ ಎದುರು ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ, ಆಕ್ರೋಶ ಹೊರಹಾಕಿದ್ದರು.

ಪ್ರತಿಭಟನೆ ವೇಳೆ ‘ಪೊಲೀಸ್ ಠಾಣೆ ನಿಮ್ಮ‌ ಅಪ್ಪಂದಾʼ ಅಂತ ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಶಾಸಕ ಹರೀಶ್‌ ಪೂಂಜಾ ಧಮ್ಕಿ ಹಾಕಿದ್ದರು. ಮನೆಯಲ್ಲಿದ್ದವರನ್ನು ಯಾವುದೇ ದಾಖಲೆಗಳಿಲ್ಲದೆ ಹೆಂಗಸರು, ಮಕ್ಕಳೆದುರು ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಮಾಯಕನ ಬಂಧನವಾಗಿದ್ದು, ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದರು. ಹೀಗಾಗಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

Continue Reading
Advertisement
DC m s Diwakar instructed for adequate supply of sowing seed, fertilizers in monsoon season
ಮಳೆ38 seconds ago

Vijayanagara News: ಬಿತ್ತನೆ ಬೀಜ, ರಸ ಗೊಬ್ಬರ ಸಮರ್ಪಕ ಪೂರೈಕೆಗೆ ಡಿಸಿ ದಿವಾಕರ್ ಸೂಚನೆ

Rave party case Three persons including a PSI of Hebbagodi police station have been suspended
ಕ್ರೈಂ3 mins ago

Rave party: ರೇವ್‌ ಪಾರ್ಟಿ ಕೇಸ್‌; ಹೆಬ್ಬಗೋಡಿ ಠಾಣೆಯ ಪಿಎಸ್‌ಐ ಸೇರಿ ಮೂವರ ಸಸ್ಪೆಂಡ್‌

Union Minister Pralhad Joshi latest statement in Hubli
ರಾಜಕೀಯ3 mins ago

Pralhad Joshi: ಕೇಜ್ರಿವಾಲ್‌ಗೆ ಸಿಎಂ ಆಗಿ ಮುಂದುವರಿಯುವ ನೈತಿಕ ಹಕ್ಕಿಲ್ಲ: ಪ್ರಲ್ಹಾದ್‌ ಜೋಶಿ

Miracle case At Bagalakote News
ವೈರಲ್ ನ್ಯೂಸ್11 mins ago

Miracle case : ಮುರ್ತುಜಾ ಖಾದ್ರಿ ಪವಾಡ; ಅಂತ್ಯಕ್ರಿಯೆ ಮಾಡುವಾಗಲೇ ಕೆಮ್ಮಿದ ಮಗು!

A: Film by Upendra
ಪ್ರಮುಖ ಸುದ್ದಿ13 mins ago

A: Film by Upendra : ರೀ ರಿಲೀಸ್ ನಲ್ಲೂ ದಾಖಲೆ ನಿರ್ಮಿಸಿದ ಉಪೇಂದ್ರ ನಿರ್ದೇಶನದ “A”

gold rate today rachita ram
ಚಿನ್ನದ ದರ16 mins ago

Gold Rate Today: ಬಂಗಾರದ ಬೆಲೆ ಮತ್ತೆ ತೀವ್ರ ಇಳಿಕೆ; ಇದು ಚಿನ್ನ ಕೊಳ್ಳುವವರ ವಾರ!

'Chow Chow Bath'
ಪ್ರಮುಖ ಸುದ್ದಿ27 mins ago

Chow Chow Bath : ‘ಚೌ ಚೌ ಬಾತ್’ ಸಿನಿಬಜಾರ್​​ ಡಿಜಿಟಲ್ ಥಿಯೇಟರ್​​ನಲ್ಲಿ ಬಿಡುಗಡೆ

Maarige Daari
ಪ್ರಮುಖ ಸುದ್ದಿ48 mins ago

Maarige Daari : ‘ಮಾರಿಗೆ ದಾರಿ” ಫಸ್ಟ್ ಲುಕ್ ಟೀಸರ್ ಬಿಡುಗಡೆ, ಇಲ್ಲಿದೆ ವಿಡಿಯೊ

Mansoon
ಪ್ರಮುಖ ಸುದ್ದಿ1 hour ago

Monsoon : ಮಳೆ ವರದಿ; ಕರ್ನಾಟಕದಲ್ಲಿ ಜೂನ್ 1ರಂದೇ ಮಾನ್ಸೂನ್ ಮಳೆ ಆರಂಭ

bbmp waste disposal
ಬೆಂಗಳೂರು1 hour ago

Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌