Dead body Found : ಮೀನಿಗೆ ಹಾಕಿದ ಗಾಳಕ್ಕೆ ಸಿಕ್ಕ ಮೂಟೆಯಲ್ಲಿತ್ತು ಮಹಿಳೆಯ ಮೂಳೆ! - Vistara News

ಕರ್ನಾಟಕ

Dead body Found : ಮೀನಿಗೆ ಹಾಕಿದ ಗಾಳಕ್ಕೆ ಸಿಕ್ಕ ಮೂಟೆಯಲ್ಲಿತ್ತು ಮಹಿಳೆಯ ಮೂಳೆ!

Dead body Found : ಮೀನು ಹಿಡಿಯಲು ಹೋದ ಯುವಕರಿಗೆ ಕೆರೆಯಲ್ಲಿ ಮೂಟೆಯೊಂದು ಪತ್ತೆಯಾಗಿದ್ದು, ಅದರಲ್ಲಿ ಅಪರಿಚಿತ ಮಹಿಳೆಯೊಬ್ಬಳ ಕಳೇಬರಗಳು ಸಿಕ್ಕಿದೆ.

VISTARANEWS.COM


on

The womans bone was in the sack found in the fish net
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆನೇಕಲ್: ಕೆರೆಯಲ್ಲಿ ಅಪರಿಚಿತ ಮಹಿಳೆಯ ಮೂಳೆಗಳು ಪತ್ತೆಯಾಗಿವೆ. ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರ ಕೆರೆಯಲ್ಲಿ (Dead body Found) ಘಟನೆ ನಡೆದಿದೆ. ಗ್ರಾಮದ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಮೂಟೆಯೊಂದು ಸಿಕ್ಕಿದೆ.

ಮಹಿಳೆಯನ್ನು ಹತ್ಯೆ ಮಾಡಿ ಕಲ್ಲಿನ ಜತೆಗೆ ಮೂಟೆಯಲ್ಲಿ ಕಟ್ಟಿ ಕೆರೆಗೆ ಹಾಕಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಯುವಕರು ನಿನ್ನೆ ಭಾನುವಾರ ಮೀನು ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಮೀನಿನ ಗಾಳಕ್ಕೆ ಮೂಟೆ ಸಿಕ್ಕಿಹಾಕಿಕೊಂಡಿದೆ. ಬೃಹತ್‌ ಮೀನು ಇರಬೇಕೆಂದು ಎಳೆದು ನೋಡಿದಾಗ ಮೂಟೆ ಸಿಕ್ಕಿದೆ. ಮೂಟೆ ಮೇಲೆತ್ತಿ ನೋಡಿದಾಗ ಮೂಳೆಗಳು ಪತ್ತೆ ಆಗಿವೆ. ಜತೆಗೆ ಮೂಟೆಯ ಒಳಗೆ ಇಟ್ಟಿಗೆ ತುಂಡುಗಳನ್ನು ಹಾಕಿ ನೀರಿನಲ್ಲಿ ಬಿಡಲಾಗಿದೆ. ಜತೆಗೆ ಮಹಿಳೆಯ ತಲೆ ಕೂದಲು, ದೇಹದ ಮೂಳೆಗಳು ಹಾಗೂ ಸೀರೆ ಜತೆಗೆ ತಲೆಗೆ ಹಾಕುವ ಕ್ಲಿಬ್, ಕೈಬಳೆಗಳು ಪತ್ತೆಯಾಗಿದೆ.

ಮಹಿಳೆಯ ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿ ನೀರಿನಲ್ಲಿ ಬಿಟ್ಟಿರುವ ಸಾಧ್ಯತೆ ಇದೆ. ಹಲವು ತಿಂಗಳುಗಳ ಹಿಂದೆಯೇ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿರಬೇಕೆಂದು ಅಂದಾಜಿಸಲಾಗಿದೆ. ಸದ್ಯ ಕಳೇಬರ ಪತ್ತೆಯಾದ ಕಾರಣಕ್ಕೆ ಯುವಕರು ಅತ್ತಿಬೆಲೆ ಪೊಲೀರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Bilkis Bano: ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳಿಗೆ ಜೈಲೇ ಗತಿ; ಗುಜರಾತ್‌ ಆದೇಶ ರದ್ದುಗೊಳಿಸಿದ ಸುಪ್ರೀಂ

ನವದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗುಜರಾತ್‌ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ್ದ ಗುಜರಾತ್‌ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಅತ್ಯಾಚಾರ ಎಸಗಿದ 11 ಅಪರಾಧಿಗಳ (Bilkis Bano Convicts) ಬಿಡುಗಡೆಗೊಳಿಸಿದ್ದ ಗುಜರಾತ್‌ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ (Supreme Court) ಸೋಮವಾರ (ಜನವರಿ 8) ರದ್ದುಗೊಳಿಸಿದೆ. ಹಾಗಾಗಿ, ಕ್ಷಮಾದಾನದ ಆಧಾರದ ಮೇಲೆ ಬಿಡುಗಡೆಯಾಗಿದ್ದ 11 ಅಪರಾಧಿಗಳಿಗೆ ಈಗ ಜೈಲೇ ಗತಿಯಾಗಿದೆ.

ಸನ್ನಡತೆ ಆಧಾರದ ಮೇಲೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್‌ ಸರ್ಕಾರದ ಆದೇಶ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು. ಈಗ ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. “ಅತ್ಯಾಚಾರದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ವಿಧಾನದಲ್ಲಿ ಗುಜರಾತ್‌ ಸರ್ಕಾರ ಸಮರ್ಪಕವಾಗಿ ನಿಯಮ ಪಾಲಿಸಿಲ್ಲ. ಬಿಲ್ಕಿಸ್‌ ಬಾನೊ ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಅರ್ಹವಾಗಿದೆ. ಹಾಗಾಗಿ, ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.

ಎರಡು ವಾರದಲ್ಲಿ ಶರಣಾಗಿ

ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿರುವ 11 ಅಪರಾಧಿಗಳು ಎರಡು ವಾರದಲ್ಲಿ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. “ಬಿಡುಗಡೆಯಾಗಿರುವವರು ಕಾನೂನಿಗೆ ಗೌರವ ನೀಡಬೇಕು. ಅವರು 2 ವಾರದೊಳಗೆ ಮತ್ತೆ ಜೈಲು ಸೇರಬೇಕು” ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಏನಿದು ‘ಬಿಡುಗಡೆ’ ಪ್ರಕರಣ?

ಬಿಲ್ಕಿಸ್‌ ಬಾನೊ ಮೇಲೆ ಅತ್ಯಾಚಾರ, ಅವರ ಮಗಳು ಸೇರಿ ಏಳು ಕುಟುಂಬಸ್ಥರ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್‌ ಸರ್ಕಾರವು 1992ರ ನೀತಿ ಅನ್ವಯ 2022ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿತ್ತು. ಹಾಗಾಗಿ, ಗುಜರಾತ್‌ ಸರ್ಕಾರದ ತೀರ್ಮಾನದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಗುಜರಾತ್‌ ಸರ್ಕಾರದ ಕ್ರಮ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಇವರ ಪರ ವಕೀಲೆ ಶೋಭಾ ಗುಪ್ತಾ ಅವರು ನವೆಂಬರ್‌ 30ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರ ಎದುರು ಅರ್ಜಿ ಪ್ರಸ್ತಾಪಿಸಿದ್ದರು. ಬಳಿಕ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.

Supreme Court On Bilkis Bano Case
Supreme Court On Bilkis Bano Case

ಇದನ್ನೂ ಓದಿ: Bilkis Bano Case | ಅತ್ಯಾಚಾರಿಗಳ ಬಿಡುಗಡೆ ನಾಚಿಕೆಗೇಡು, ಈ ಕುರಿತು ಮೋದಿಗೆ ಮನವಿ ಮಾಡುವೆ ಎಂದ ಬಿಜೆಪಿ ನಾಯಕ

2002ರಲ್ಲೇನಾಯಿತು?
2002ನೇ ಇಸ್ವಿಯ ಫೆಬ್ರವರಿ 27ರಂದು ಗುಜರಾತ್​​ನಲ್ಲಿ ಸಾಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಗೋದ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರಸೇವಕರು ಸಜೀವದಹನಗೊಂಡಿದ್ದರು. ಇವರೆಲ್ಲ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬರುತ್ತಿದ್ದರು. ಗೋದ್ರಾದಲ್ಲಿ ಗಲಾಟೆ-ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಅಲ್ಲಿನ ಅನೇಕರು ಊರು ತೊರೆಯಲು ಪ್ರಾರಂಭ ಮಾಡಿದರು. ಅಂತೆಯೇ 20 ವರ್ಷದ ಬಿಲ್ಕಿಸ್​ ಬಾನೊ ಕೂಡ ಮಾರ್ಚ್​ 3ರಂದು ತನ್ನ ಪತಿ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಸದಸ್ಯರೊಂದಿಗೆ ಹಳ್ಳಿಯನ್ನು ಬಿಟ್ಟು ಹೊರಡುತ್ತಿದ್ದರು. ಆಗವರು ಐದು ತಿಂಗಳ ಗರ್ಭಿಣಿ ಕೂಡ. ಆದರೆ ಅದೇ ಹೊತ್ತಲ್ಲಿ ದುರ್ದೈವ ಅವರ ಬೆನ್ನತ್ತಿತ್ತು. 20-30 ಮಂದಿ ಶಸ್ತ್ರಾಸ್ತ್ರಧಾರಿಗಳನ್ನು ಅವರನ್ನು ಮಾರ್ಗ ಮಧ್ಯೆಯೇ ತಡೆದರು. ಗರ್ಭಿಣಿ ಬಿಲ್ಕಿಸ್​ ಬಾನೊ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಕುಟುಂಬದ ಏಳುಮಂದಿಯನ್ನು ಕೊಂದು ಹಾಕಿದರು. ಉಳಿದವರು ಬಿಲ್ಕಿಸ್​ ಬಾನೊ ಮಗಳೂ ಜೀವ ಕಳೆದುಕೊಂಡಳು. ಉಳಿದವರು ಹೇಗೋ ಪಾರಾಗಿ ಓಡಿಹೋದರು.

ಬಿಲ್ಕಿಸ್ ಬಾನೊ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಬಹುದೊಡ್ಡ ಸುದ್ದಿಯಾಯಿತು. ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಯಿತು. 2004ರಲ್ಲಿ ಸುಪ್ರೀಂಕೋರ್ಟ್​ ಈ ಕೇಸ್​​ನ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತು. 2004ರಲ್ಲಿ ಎಲ್ಲ ಆರೋಪಿಗಳೂ ಬಂಧಿತರಾದರು. ಅಹ್ಮದಾಬಾದ್​ ಕೋರ್ಟ್​​ನಲ್ಲಿ ವಿಚಾರಣೆಯೂ ಪ್ರಾರಂಭವಾಯಿತು. ಆದರೆ, ಮತ್ತೆ ಬಿಲ್ಕಿಸ್ ಬಾನೊ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ ‘ಸಿಬಿಐನಿಂದ ಸಂಗ್ರಹಿಸಲ್ಪಟ್ಟ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. ಪುರಾವೆಗಳು ನಾಶವಾಗುವ ಆತಂಕ ನನಗೆ ಕಾಡುತ್ತಿದೆ’ ಎಂದು ಹೇಳಿದರು. ಈ ಮೂಲಕ ಗುಜರಾತ್​​ನ ಅಹ್ಮದಾಬಾದ್​ ಕೋರ್ಟ್​ನಲ್ಲಿ ಈ ಕೇಸ್​​ನ ವಿಚಾರಣೆ ಬೇಡ ಎಂದೂ ಮನವಿ ಮಾಡಿದರು. ಹೀಗಾಗಿ 2004ರ ಆಗಸ್ಟ್​ನಲ್ಲಿ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂಬೈ ಕೋರ್ಟ್​ಗೆ ವರ್ಗಾಯಿಸಿತು.

ತಲೆಬುರುಡೆಗಳೇ ಇರಲಿಲ್ಲ !
ಆರೋಪಿಗಳು ಅರೆಸ್ಟ್ ಆಗಿದ್ದರೂ ತನಿಖೆ ಮುಂದುವರಿದಿತ್ತು. ಹತ್ಯೆಯಾದ ಏಳುಮಂದಿಯ (ಬಿಲ್ಕಿಸ್​ ಬಾನೊ ಕುಟುಂಬದವರು) ಪೋಸ್ಟ್​ಮಾರ್ಟಮ್​ ರಿಪೋರ್ಟ್​ ಸರಿಯಾಗಿಲ್ಲ. ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಪೋಸ್ಟ್​ ಮಾರ್ಟಮ್​​ನ್ನು ಸೂಕ್ತವಾಗಿ ನಡೆಸಲಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದರು. ಅಷ್ಟೇ ಅಲ್ಲ, ಹೂಳಲಾಗಿದ್ದ ಅವರ ಮೃತದೇಹವನ್ನು ಮತ್ತೆ ಹೊರತೆಗೆಸಿದರು. ಹೀಗೆ ತೆಗೆಸಿದಾಗ ಆ ಶವಗಳಲ್ಲಿ ಒಂದಕ್ಕೂ ತಲೆ ಇರಲಿಲ್ಲ. ‘ಶವಪರೀಕ್ಷೆಯ ಬಳಿಕ ಅವುಗಳ ತಲೆ ಕತ್ತರಿಸಲಾಗಿದೆ. ಮೃತರ ಗುರುತು ಸಿಗಬಾರದು ಎಂಬ ಕಾರಣಕ್ಕೇ ಹೀಗೆ ಮಾಡಲಾಗಿದೆ. ಇಂಥ ಪ್ರಯತ್ನಗಳ ಮೂಲಕ ತನಿಖೆಯ ದಾರಿ ತಪ್ಪಿಸಿ, ಆರೋಪಿಗಳನ್ನು ಬಚಾವ್​ ಮಾಡುವ ಪ್ರಯತ್ನ ನಡೆದಿತ್ತು’ ಎಂದು ವರದಿ ಕೊಟ್ಟರು.

2008ರಲ್ಲಿ ಜೈಲು ಶಿಕ್ಷೆ
2004ರಿಂದ 2008ರವರೆಗೆ ಸಿಬಿಐ ನಿರಂತರವಾಗಿ ವಿಚಾರಣೆ-ತನಿಖೆ ನಡೆಸಿ, 2008ರ ಜನವರಿ 1ರಂದು ಅದಕ್ಕೊಂದು ತಾರ್ಕಿಕ ಅಂತ್ಯ ನೀಡಿತು. ಬಂಧಿತರಾಗಿದ್ದ 19 ಆರೋಪಿಗಳಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಸರಿಯಾದ ಸಾಕ್ಷಿ ಇಲ್ಲದ ಕಾರಣ ಏಳು ಜನರಿಗೆ ಬಿಡಗಡೆ ಭಾಗ್ಯ ದೊರೆಯಿತು. ಹಾಗೇ, ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಒಬ್ಬಾತ ಮೃತಪಟ್ಟಿದ್ದ. ಬಿಲ್ಕಿಸ್​ ಬಾನೊ ಅವರಿಗೆ ಒಂದು ಮನೆ, 50 ಲಕ್ಷ ರೂಪಾಯಿ ಪರಿಹಾರ, ಅವರ ಮನೆಯಲ್ಲಿ ಒಬ್ಬರಿಗೆ ಉದ್ಯೋಗ ಕೊಡುವಂತೆ ಸುಪ್ರೀಂಕೋರ್ಟ್​ 2019ರಲ್ಲಿ ಗುಜರಾತ್ ಸರ್ಕಾರಕ್ಕೆ ಸೂಚನೆಯನ್ನೂ ನೀಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಮಳೆ

Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

Karnataka Weather Forecast : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ದಕ್ಷಿಣ ಮತ್ತು ಉತ್ತರ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain News) ಸಾಧ್ಯತೆಯಿದೆ. ಕರಾವಳಿಯಲ್ಲಿ ಗುಡುಗು ಜತೆಗೆ ಸಾಧಾರಣ ಮಳೆಯೊಂದಿಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನಲ್ಲಿ ಭಾರಿ ಮಳೆ

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಒಳನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತ ಚದುರಿದಂತೆ ವ್ಯಾಪಕವಾಗಿ ಮಧ್ಯಮ ಮಳೆಯಾಗಲಿದೆ. ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ.

ಒಳನಾಡಿನ ಜಿಲ್ಲೆಗಳಿಗೆ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ; ನಾಳೆಗೂ ಭಾರಿ ವರ್ಷಧಾರೆ

Karnataka Weather Forecast: ಚಿಕ್ಕಮಗಳೂರಿನಲ್ಲಿ ಗುರುವಾರ ಮಳೆ ಅಬ್ಬರಿಸಿದ್ದು, ನಾಳೆ ಶುಕ್ರವಾರಕ್ಕೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka Weather Forecast
Koo

ಬೆಳಗಾವಿ/ಚಿಕ್ಕಮಗಳೂರು: ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ (Rain News) ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಮಳೆರಾಯನ (Karnataka Weather Forecast) ಅಟ್ಟಹಾಸಕ್ಕೆ ಉಡಚ್ಚಮ್ಮಾ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕಳೆದ ಒಂದು ಗಂಟೆಗಳ ಕಾಲ ಸುರಿದ ಭಾರಿ‌ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದೇವಲಾಪೂರ ಮತ್ತು ಯರಡಾಲ ರಸ್ತೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಬಂದ್‌ ಆಗಿತ್ತು. ಮಳೆರಾಯನ ಆರ್ಭಟಕ್ಕೆ ಜಮೀನುಗಳು ನೀರುಪಾಲಾಗಿದ್ದು, ರೈತರು ಸಂಕಷ್ಟ ಅನುಭವಿಸಿದರು.

ಚಿಕ್ಕಮಗಳೂರಿನಲ್ಲೂ ಮಳೆ ಆರ್ಭಟ

ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಗೆ ಗುಡ್ಡದ ಮಣ್ಣು ಬಿದ್ದಿದ್ದು, 2 ಜೆಸಿಬಿಯಿಂದ ನಿರಂತರ ಮಣ್ಣು ತೆರವಿನ ಕಾರ್ಯ ನಡೆಯುತ್ತಿದೆ. ಸುರಿಯುತ್ತಿರುವ ಮಳೆ ಮಧ್ಯೆಯೇ ತೆರವು ಕಾರ್ಯ ನಡೆಯುತ್ತಿದೆ. ಇನ್ನು ಅಪಾರ ಪ್ರಮಾಣದಲ್ಲಿ ನೀರು ಹರಿದು ರಸ್ತೆ ಬದಿ ಗುಂಡಿಗಳು ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ಮಣ್ಣನ್ನು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಮಳೆ ಜತೆ ಸರ್ಕಾರಿ ಆಸ್ಪತ್ರೆಗೆ ಡ್ರೈನೇಜ್ ನೀರು ನುಗ್ಗಿದೆ. ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಸುರಿದ ಮಳೆಯಿಂದ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿದೆ. ಆಸ್ಪತ್ರೆಯಲ್ಲಿ ನೀರು ತುಂಬಿದ್ದರಿಂದ ರೋಗಿಗಳು ಪರದಾಟಬೇಕಾಯಿತು. ಮಳೆ ನೀರಿನ ಜತೆಗೆ ಡ್ರೈನೇಜ್ ನೀರು ಸೇರಿ ಕೆಟ್ಟ ವಾಸನೆ ಬರುತ್ತಿದ್ದು, ರೋಗಿಗಳು ಪರದಾಡಬೇಕಾಯಿತು.

ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕುದುರೆಮುಖ, ಸಂಸೆ, ಹೊರನಾಡು ಸುತ್ತಮುತ್ತ ಮಳೆ ಅಬ್ಬರಿಸುತ್ತಿದೆ. ಕಳಸ ಪಟ್ಟಣದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಕಾಫಿ-ಅಡಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮಲೆನಾಡಿನಾದ್ಯಂತ ಬೆಳೆಗ್ಗೆಯಿಂದಲೂ ಮೋಡ ಕವಿದ ವಾತವರಣ ಇದೆ.

ಉಕ್ಕಿ ಹರಿದ ಇಂದಿರಮ್ಮನ ಕೆರೆ

ಧಾರವಾಡದಲ್ಲಿ ಸುರಿದ ನಿರಂತರ ಮಳೆಗೆ ಅಳ್ನಾವರ ತಾಲೂಕಿನ ಇಂದಿರಮ್ಮನ ಕೆರೆ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಬಿದ್ದು ತುಂಬಿ ಹರಿಯುತ್ತಿರುವ ದೃಶ್ಯ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಕೆಲ ಯುವಕರು ಕೆರೆ ಕೋಡಿ ಬಿದ್ದು ಹರಿಯುತ್ತಿದ್ದ ನೀರಿನಲ್ಲಿ ದಾಟುವ ಹುಚ್ಚುತನ ಪ್ರದರ್ಶಿಸಿದ್ದರು. ಯುವಕನ ಹುಚ್ಚಾಟಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಕಳೆದ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ವಿದ್ಯಾಕಾಶಿ ಜನರು ತತ್ತರಿಸಿ ಹೋಗಿದ್ದರು. ಧಾರವಾಡದಲ್ಲಿ ಮಳೆಯು ಅವಾಂತರವೇ ಸೃಷ್ಟಿಸಿತ್ತು. ಮಳೆಯ ನೀರು ನಿಂತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡದ ಸಂಪಿಗೆನಗರ, ನಿಲಸಿಟಿ, ಶ್ರೀಶ ರೆಸಿಡೆನ್ಸಿ, ವ್ಯಾಸ ವಿಹಾರ ಲೇಔಟ್‌ನ ತುಂಬ ನೀರು ನಿಂತಿದ್ದರಿಂದ, ಜನರು ಮನೆಯಿಂದ ಹೊರ ಬರಲು ಆಗದೆ ಪರದಾಡಿದರು. ರಾಜಕಾಲುವೆ ಇಲ್ಲದಿರುವುದೇ ಇದಕ್ಕೆ ಕಾರಣವೆಂದು ದೂರಿದರು. ಸ್ಥಳಕ್ಕೆ ಬಂದ ಅಧಿಕಾರಿಗಳ ವಿರುದ್ಧ ದೂರುಗಳ ಪಟ್ಟಿ ನೀಡಿದ್ದರು.

ಧಾರವಾಡದಲ್ಲಿ ಮಳೆ ಅವಾಂತರ

ರಾತ್ರಿಯಿಡೀ ಸುರಿದ ಮಳೆಗೆ ಕಟಾವಿಗೆ ಬಂದಿದ್ದ ಬೆಳೆಗಳು ನೀರಲ್ಲಿ ಹೋಮವಾಗಿದೆ. ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಮಳೆಗೆ ನೆಲಸಮವಾಗಿದೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮ ಜಲಾವೃತಗೊಂಡಿದೆ. ಮಳೆಯ ಆರ್ಭಟಕ್ಕೆ ಮನೆಗಳೆಲ್ಲ ಕೆರೆಯಂತೆ ನಿರ್ಮಾಣವಾಗಿದ್ದು, ಮಳೆ ಬಂದಾಗೆಲ್ಲ ಇದೆ ಸಮಸ್ಯೆ ಅನುಭವಿಸುವಂತಾಗಿದೆ.

ಲಕ್ಷ್ಮೇಶ್ವರ-ದೊಡ್ಡೂರ ರಸ್ತೆ ಸಂಪರ್ಕ ಕಡಿತ

ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ ತುಂಬಿ ಹರಿಯುತ್ತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಬಳಿ ಹಳ್ಳದಲ್ಲಿ ನೀರು ತುಂಬಿ ಹರಿದಿದ್ದು, ಲಕ್ಷ್ಮೇಶ್ವರ-ದೊಡ್ಡೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಳ್ಳದಲ್ಲಿ ಬೆಳೆ ಕಟಾವು ಯಂತ್ರ ಸಿಲುಕಿದ್ದರಿಂದ ರೈತರು ಪರದಾಡಿದರು. ಪ್ರತಿ ಬಾರಿ ಮಳೆಯಾದರೆ ಇದೇ ಸಂಕಷ್ಟ ಎದುರಾಗುತ್ತದೆ. ಸೇತುವೆ ನಿರ್ಮಾಣಕ್ಕೆ ಅನೇಕ ಬಾರಿ ಮನವಿ ಮಾಡಿದ್ದರು ಕ್ಯಾರೆ ಅಂತಿಲ್ಲ ಎಂದು ಆಕ್ರೋಶ ಹೊರಹಾಕಿದರು.

Continue Reading

ಬೆಂಗಳೂರು

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ; ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್‌

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ ಆಗಲಿದೆ. ವಾದ-ಪ್ರತಿವಾದ ಆಲಿಸಿರುವ ಕೋರ್ಟ್‌ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್‌ನಲ್ಲಿ ನಟ ದರ್ಶನ್ (Actor Darshan) ಆ್ಯಂಡ್ ಗ್ಯಾಂಗ್‌ ಜೈಲುಪಾಲಾಗಿದೆ. ನಟ ದರ್ಶನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯು ಅ.10ರಂದು ನಡೆಯಿತು. ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಅ.14ಕ್ಕೆ ಕಾಯ್ದಿರಿಸಿದೆ. ಈ ಮೂಲಕ ದರ್ಶನ್‌ ಜಾಮೀನು ಭವಿಷ್ಯ ಮೂರು ದಿನ ಮುಂದಕ್ಕೆ ಹೋಗಿದ್ದು, ದಚ್ಚು ಜೈಲುವಾಸದಲ್ಲಿ ಇರುವಂತಾಗಿದೆ.

ಆರೋಪಿಗಳ ಜಾಮೀನು ಅರ್ಜಿಗಳಿಗೆ ಗುರುವಾರ (ಅ.10) ಆಕ್ಷೇಪಣೆ ಮಾಡಿ ಎಸ್‌ಪಿಪಿ ಪ್ರಸನ್ನಕುಮಾರ್‌ ವಾದಿಸಿದರು. ದರ್ಶನ್‌ ಪರ ಸುದೀರ್ಘ ವಾದ ಮಂಡಿಸಿದ್ದ ಸಿ.ವಿ ನಾಗೇಶ್ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್‌ ಕೌಂಟರ್ ಕೊಟ್ಟರು. ದರ್ಶನ್‌ ವಿರುದ್ಧ ತನಿಖಾಧಿಕಾರಿಗಳು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ದರ್ಶನ್‌ ಪರ ಸಿ.ವಿ ನಾಗೇಶ್‌ ಆರೋಪಿಸಿದ್ದರು. ಇದೆಲ್ಲದಕ್ಕೂ ಪ್ರಸನ್ನ ಕುಮಾರ್‌ ಒಂದೊಂದಾಗಿ ಎದುರೇಟು ಕೊಟ್ಟರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Fake journalist : ಜನ ಸಾಮಾನ್ಯರ ಬಳಿ ಸುಲಿಗೆ ಮಾಡುತ್ತಿದ್ದ ನಕಲಿ‌ ಪತ್ರಕರ್ತ ಅರೆಸ್ಟ್‌

Fake journalist : ಬೇಕರಿಗಳನ್ನೇ ಟಾರ್ಗೆಟ್‌ ಮಾಡಿ ಸುಲಿಗೆ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Fake journalist arrested for targeting bakeries For money
Koo

ಬೆಂಗಳೂರು: ಇತ್ತೀಚಿಗೆ ನಕಲಿ ಪತ್ರಕರ್ತರ ಹಾವಳಿ (Fake journalist) ಹೆಚ್ಚಾಗಿದೆ. ಈ ನಕಲಿ ಪತ್ರಕರ್ತರು ಕೈಯಲ್ಲಿ ಮೈಕ್‌ ಹಿಡಿದು ರೌಂಡ್ಸ್‌ಗೆ ಇಳಿದರೆ ರೋಲ್‌ಕಾಲ್‌ ಫಿಕ್ಸ್‌ ಅಂತಲೇ ಅರ್ಥ.. ಹೀಗೆ ನಗರದ ಬೇಕರಿಗಳನ್ನೇ ಟಾರ್ಗೆಟ್‌ ಮಾಡಿ ಸುಲಿಗೆ ಮಾಡುತ್ತಿದ್ದ ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ಪೊಲೀಸರು ಮಹಮ್ಮದ್ ಶಫಿ ಎಂಬಾತನನ್ನು ಬಂಧನ ಮಾಡಿದ್ದಾರೆ. ಈತ ಸಂಘಟನೆಯ ಜತೆಗೆ ಒಂದು ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನಲ್‌ವೊಂದನ್ನು ಮಾಡಿಕೊಂಡು, ಬೆದರಿಕೆ, ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ.

ಕುತ್ತಿಗೆ ಐಡಿ ಕಾರ್ಡ್‌, ಪ್ರಜಾಪರ ಟಿವಿ ಎಂಬ ಕೈಯಲ್ಲಿ ಲೋಗೋ ಹಾಗೂ ಮೊಬೈಲ್ ಹಿಡಿದು ಪತ್ರಕರ್ತನಾಗಿರುವ ಮಹಮ್ಮದ್‌ ಶಫಿ, ತನ್ನ ಅಸಿಸ್ಟೆಂಟ್ ಜತೆಗೆ ಹೊರಟರೆ ಅಂದು ರೋಲ್ ಕಾಲ್ ಫಿಕ್ಸ್ ಅಂತಲೇ ಅರ್ಥ. ಹುಳಿಮಾವು ಬಳಿ ರಮೇಶ್ ಎಂಬುವವರ ಒಡೆತನದಲ್ಲಿರುವ ಎಸ್‌ಎಲ್‌ವಿ ಬೇಕರಿಗೆ ಎಂಟ್ರಿ ಕೊಟ್ಟ ಮಹಮ್ಮದ್ ಶಫಿ ತಾನು ಪತ್ರಕರ್ತ ಎಂದು ಪ್ರಜಾಪರ ಟಿವಿಯ ಲೋಗೋ ಹಿಡಿದು ಬಂದಿದ್ದ.

ಕ್ಲೀನಿಂಗ್ ವೇಳೆ ಒಳ ನುಗ್ಗುವ ಈತ, ವಾಶ್‌ ಮಾಡುವ ಸಂದರ್ಭದಲ್ಲಿ ಅದನ್ನು ವಿಡಿಯೊ ಮಾಡಿಕೊಂಡಿದ್ದ. ನಂತರ ಅಲ್ಲಿದ್ದ ಸಿಬ್ಬಂದಿ ಮುಂದೆ ದರ್ಪ ಮರೆದು ಫುಡ್ ಕ್ಲೀನ್ ಇಲ್ಲ, ತಯಾರಿಸುವ ಸ್ಥಳ ಸ್ವಚ್ಚವಿಲ್ಲ ಎಂದು ಕ್ಯಾತೆ ತೆಗೆದಿದ್ದ. ಎಲ್ಲಿ ಕ್ಲೀನ್ ಮಾಡುತ್ತಾರೋ, ಕಸ ಒಟ್ಟು ಮಾಡುತ್ತಾರೋ ನಿರ್ದಿಷ್ಟವಾಗಿ ಅಲ್ಲಿಯ ವಿಡಿಯೊ ತೆಗೆಯುತ್ತಿದ್ದ. ನಂತರ ತಾನು ಪ್ರೆಸ್ ರಿಪೋರ್ಟರ್ ಈ ಸುದ್ದಿನ ಹಾಕುತ್ತಿನಿ ನಂತರ ಆಟೋಮ್ಯಾಟಿಕ್ ಆಗಿ ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ ಎಂದು ಭಯ ಬೀಳಿಸುತ್ತಿದ್ದ.

ನಂತರ ಸುದ್ದಿ ಹಾಕಬಾರದು ಅಂದರೆ 50 ಸಾವಿರ ಕೊಡಬೇಕು ಇಲ್ಲದಿದ್ದರೆ, ನಂಗೆ ಲೋಕಲ್ ಎಎಲ್‌ಎ , ಬಿಡಿಎ ಅಧಿಕಾರಿಗಳು , ಫುಡ್ ಆಫೀಸರ್‌ಗಳೆಲ್ಲರೂ ಗೊತ್ತು . ನೀ ಹೇಗೆ ಬೇಕರಿ ನಡಿಸ್ತಿಯಾ ನೋಡ್ತಿನಿ ಎಂದು ಧಮ್ಕಿ ಹಾಕಿದ್ದ. ಇದರಿಂದ ಹೆದರಿದ ರಮೇಶ್ ಆತನಿಗೆ ಕನ್ವಿಯೆನ್ಸ್ ಮಾಡಿ ಹತ್ತು ಸಾವಿರ ಗೂಗಲ್ ಪೇ ಮಾಡಿದ್ದ. ನಂತರ ರಮೇಶ್ ಬೇಕರಿ ಅಸೋಸಿಯೇಷನ್ ಗಮನಕ್ಕೆ ತಂದಾಗ ಸುಮಾರು ನಲವತ್ತು ಐವತ್ತು ಜನರಿಗೆ ಇದೇ ರೀತಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಿರುವುದು ತಿಳಿದು ಬಂದಿದೆ. ಹುಳಿಮಾವು ಪೊಲೀಸರು ನಕಲಿ ಪ್ರೆಸ್ ರಿಪೋರ್ಟರ್‌ನನ್ನು ಹೆಡೆಮುರಿ ಕಟ್ಟಿ ವಿಚಾರಣೆ ನಡೆಸುತ್ತಿದ್ದಾರೆ . ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
karnataka Weather Forecast
ಮಳೆ4 ಗಂಟೆಗಳು ago

Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ4 ಗಂಟೆಗಳು ago

Dina Bhavishya : ನಂಬಿದ ವ್ಯಕ್ತಿಗಳಿಂದ ಈ ರಾಶಿಯವರು ಮೋಸ ಹೋಗುತ್ತೀರಿ

karnataka Weather Forecast
ಮಳೆ16 ಗಂಟೆಗಳು ago

Karnataka Weather : ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ; ನಾಳೆಗೂ ಭಾರಿ ವರ್ಷಧಾರೆ

Actor Darshan
ಬೆಂಗಳೂರು16 ಗಂಟೆಗಳು ago

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ; ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್‌

Fake journalist arrested for targeting bakeries For money
ಬೆಂಗಳೂರು17 ಗಂಟೆಗಳು ago

Fake journalist : ಜನ ಸಾಮಾನ್ಯರ ಬಳಿ ಸುಲಿಗೆ ಮಾಡುತ್ತಿದ್ದ ನಕಲಿ‌ ಪತ್ರಕರ್ತ ಅರೆಸ್ಟ್‌

Murder case
ತುಮಕೂರು19 ಗಂಟೆಗಳು ago

Murder Case : ಬುದ್ದಿವಾದ ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

Ratan Tata missed england's royal honour to take care of sick dogs
ದೇಶ21 ಗಂಟೆಗಳು ago

Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ಮಿಸ್‌ ಮಾಡಿದ್ದರು ರತನ್‌ ಟಾಟಾ!

Ratan Tata joined the company as an ordinary employee but Why is he the guru of the industry
ದೇಶ22 ಗಂಟೆಗಳು ago

Ratan Tata : ರತನ್‌ ಟಾಟಾ ಕಂಪನಿ ಸೇರಿದ್ದು ಸಾಮಾನ್ಯ ಉದ್ಯೋಗಿಯಾಗಿ! ಉದ್ಯಮ ರಂಗದ ಗುರು ಆಗಿದ್ದೇಗೆ?

Ratan Tata
ದೇಶ22 ಗಂಟೆಗಳು ago

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಇನ್ನಿಲ್ಲ; ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರ ಸಂತಾಪ

Why Ratan Tata didn't get married
ದೇಶ22 ಗಂಟೆಗಳು ago

Ratan Tata: ರತನ್ ಟಾಟಾ ಯಾಕೆ ಮದ್ವೆ ಆಗಲಿಲ್ಲ! ತಮ್ಮ ಪ್ರೀತಿಯ ಕತೆ ಬಗ್ಗೆ ಹೇಳಿದ್ದೇನು?

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌