Dr BR Ambedkar : ಕಿರುನಾಟಕದಲ್ಲಿ ಅಂಬೇಡ್ಕರ್‌ಗೆ ಅಪಮಾನ ; ಕಾಲೇಜು ವಿದ್ಯಾರ್ಥಿಗಳ ಮೇಲಿನ ಪ್ರಕರಣಕ್ಕೆ ತಡೆ - Vistara News

ಕರ್ನಾಟಕ

Dr BR Ambedkar : ಕಿರುನಾಟಕದಲ್ಲಿ ಅಂಬೇಡ್ಕರ್‌ಗೆ ಅಪಮಾನ ; ಕಾಲೇಜು ವಿದ್ಯಾರ್ಥಿಗಳ ಮೇಲಿನ ಪ್ರಕರಣಕ್ಕೆ ತಡೆ

Dr BR Ambedkar : ಜೈನ್‌ ಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿದ ಸ್ಕಿಟ್‌ನಲ್ಲಿ ಅಂಬೇಡ್ಕರ್‌ ಅವರನ್ನು ಅಪಮಾನಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಮೇಲಿನ ಪ್ರಕರಣದ ವಿಚಾರಣೆಗೆ ತಡೆ ವಿಧಿಸಲಾಗಿದೆ.

VISTARANEWS.COM


on

Karnataka High court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯುವ ಜನೋತ್ಸವದಲ್ಲಿ ಪ್ರದರ್ಶಿಸಿದ ಕಿರು ನಾಟಕವೊಂದರಲ್ಲಿ (Drama Skit) ಡಾ.ಬಿ ಆರ್ ಅಂಬೇಡ್ಕರ್ (Dr BR Ambedkar) ಮತ್ತು ದಲಿತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ ಆರೋಪದಲ್ಲಿ ಬೆಂಗಳೂರು ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ (Jain University center for Management Studies) ಏಳು ವಿದ್ಯಾರ್ಥಿಗಳ ವಿರುದ್ಧದ ದಾಖಲಾಗಿದ್ದ (Case against 7 students) ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ (Karnataka High court) ತಡೆಯಾಜ್ಞೆ ನೀಡಿದೆ. ಈ ವಿದ್ಯಾರ್ಥಿಗಳ ವಿರುದ್ಧ ಆರೋಪದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ (Scheduled Castes and the Scheduled Tribes (Prevention of Atrocities) Act, 1989) ಅಡಿ ಕೇಸು ದಾಖಲಾಗಿತ್ತು.

2023ರ ಫೆಬ್ರವರಿ 8ರಂದು ನಗರದ ನಿಮ್ಹಾನ್ಸ್‌ ಸಭಾಂಗಣದಲ್ಲಿ ಯುವ ಜನೋತ್ಸವ ನಡೆದಿತ್ತು. ಅದರಲ್ಲಿ ಜೈನ್‌ ಕಾಲೇಜಿನ ವಿದ್ಯಾರ್ಥಿಗಳು ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೀಸಲು ವ್ಯವಸ್ಥೆ ಕುರಿತು ವಿಡಂಬನಾತ್ಮಕ ಕಿರು ನಾಟಕ (ಮ್ಯಾಡ್- ಆ್ಯಡ್ ಸ್ಕಿಟ್) ಪ್ರದರ್ಶಿಸಿದ್ದರು. ಅದರಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆಗಳನ್ನು ವಿದ್ಯಾರ್ಥಿಗಳು ಹೇಳಿದ್ದರು ಎನ್ನಲಾಗಿತ್ತು. ಕಿರು ನಾಟಕದ ವಿಡಿಯೊ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿ ಸದ್ದು ಮಾಡಿತ್ತು.

ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಈ ಬಗ್ಗೆ 2023ರ ಫೆಬ್ರವರಿ 10ರಂದು ಜಯನಗರ ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು. ಪ್ರಕರಣವು ಬೆಂಗಳೂರಿನ 70ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ದಿನೇಶ್ ನೀಲಕಂಠ್ ಬೋರ್ಕರ್‌ ಮತ್ತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಿ.ಪ್ರತೀಕ್ ತೋಡ್ಕರ್ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ವಿಚಾರಣೆ ಪ್ರಕ್ರಿಯೆ ರದ್ದತಿ ಕೋರಿ ವಿದ್ಯಾರ್ಥಿಗಳ ಮನವಿ

ಈ ನಡುವೆ, ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ನೈಮಾ ಅಕ್ತರ್ ನಜಾರಿಯಾ ಸೇರಿ ಏಳು ಮಂದಿ ವಿದ್ಯಾರ್ಥಿಗಳು ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ತಡೆಯಾಜ್ಞೆಯನ್ನು ನೀಡಿದೆ.

ವಿದ್ಯಾರ್ಥಿಗಳ ಪರ ವಕೀಲರ ವಾದ ಏನಿತ್ತು?

ವಿದ್ಯಾರ್ಥಿಗಳ ಪರವಾಗಿ ಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಎಸ್‌ ಶ್ರೀರಂಗ ಅವರ ವಾದದ ಅಂಶಗಳು ಇವು.

  1. ವಿದ್ಯಾರ್ಥಿಗಳು ದುರುದ್ದೇಶವಿಲ್ಲದೆ ಕೇವಲ ವಿಡಂಬನಾತ್ಮಕವಾಗಿ ಕಿರು ನಾಟಕ ಪ್ರದರ್ಶಿಸಿದ್ದಾರೆ.
  2. ವಿಡಂಬನಾತ್ಮಕ ಸಾಹಿತ್ಯವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಇದು ಕಲ್ಪನೆ, ಪರಿಕಲ್ಪನೆ, ನೀತಿ ಅಥವಾ ನಿರ್ದಿಷ್ಟ ವ್ಯಕ್ತಿಯನ್ನು ಹಾಸ್ಯದ ಮೂಲಕ ಟೀಕಿಸಲು ಉದ್ದೇಶಿಸಲಾಗಿದೆ.
  3. ಯಾವುದೇ ತೆರನಾದ ಅಭಿಪ್ರಾಯದ ವ್ಯಕ್ತಪಡಿಸುವುದನ್ನು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ (ಅಭಿವ್ಯಕ್ತಿ ಸ್ವಾತಂತ್ರ್ಯ) ರಕ್ಷಿಸಲ್ಪಟ್ಟಿದೆ.
  4. ಪ್ರಕರಣ ಸಂಬಂಧ ದೂರು ದಾಖಲಿಸಲು ಸಮಾಜ ಕಲ್ಯಾಣ ಇಲಾಖೆಗೆ ಸಹಾಯಕ ನಿರ್ದೇಶಕರಿಗೆ ಯಾವುದೇ ಅಧಿಕಾರ ಇಲ್ಲ.
  5. ದೂರಿನಲ್ಲಿ ಹೇಳಿರುವಂತೆ ಅರ್ಜಿದಾರರು ಎಸ್‌ಸಿ-ಎಸ್‌ಟಿ ಸಮುದಾಯದ ಯಾವೊಬ್ಬರಿಗೂ ಅವಮಾನ, ಅಪಮಾನ ಹಾಗೂ ನಿಂದನೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಆ ಸಮುದಾಯದ ಯಾರೊಬ್ಬರಿಗೂ ಅಗೌರವ ತೋರಿಲ್ಲ.
  6. ನಾಟಕವು ಸಭಾಂಗಣವೊಂದರಲ್ಲಿ ಪ್ರದರ್ಶನವಾಗಿದೆ ಹೊರತು ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ.
  7. ಪ್ರಕರಣದಿಂದ ಅರ್ಜಿದಾರ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹಾಕಲ್ಪಡುವ ಭೀತಿ ಎದುರಿಸುತ್ತಿದ್ದಾರೆ. ಆದ್ದರಿಂದ, ಪ್ರಕರಣವನ್ನು ರದ್ದುಪಡಿಸಬೇಕು.

ಹಿಂದಿನ ಸುದ್ದಿ : Jain College: ಸ್ಕಿಟ್‌ನಲ್ಲಿ ಅಂಬೇಡ್ಕರ್‌ಗೆ ಅಪಮಾನ ಪ್ರಕರಣ; ಏಳು ವಿದ್ಯಾರ್ಥಿಗಳ ಬಂಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Election Results 2024: ಡಿ.ಕೆ. ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

Election Results 2024: ಕರ್ನಾಟಕದಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ಒಂದು ಅಹಿಂದ ಟೀಮ್ ಯಾವಾಗಲೂ ಕೆಲಸ ಮಾಡುತ್ತದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು ಎಂದು ಅವರ ಸಹೋದರರನನ್ನು ಸೋಲಿಸಲಾಗಿದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ ಗೌಡ ಆರೋಪಿಸಿದ್ಧಾರೆ.

VISTARANEWS.COM


on

Election Results 2024
Koo

ತುಮಕೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ (Election Results 2024) ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್ (DK Suresh) ಸೋಲಿಗೆ ಸಿದ್ದರಾಮಯ್ಯ ಆ್ಯಂಡ್ ಟೀಮ್ ಕಾರಣ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು ಎಂದು ಈ ರೀತಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಿ. ಸುರೇಶ್ ಗೌಡ (B Suresh Gowda) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ಒಂದು ಅಹಿಂದ ಟೀಮ್ ಯಾವಾಗಲೂ ಕೆಲಸ ಮಾಡುತ್ತದೆ. ಆ ಅಹಿಂದ ಟೀಮ್ ಮತ್ತು ಸಿದ್ದರಾಮಯ್ಯ ಸೇರಿ ಡಿ.ಕೆ. ಸುರೇಶ್ ಅವರನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಈ ಹಿಂದೆಯೇ ಹೇಳಿದ್ದೆ. ಸತೀಶ್ ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ, ಸಿದ್ದರಾಮಯ್ಯ ಇಷ್ಟೂ ಜನ ಸೇರಿ ಡಿ.ಕೆ. ಸುರೇಶ್ ಅವರನ್ನು ಸೋಲಿಸುತ್ತಾರೆ ಎಂದು ಚುನಾವಣೆಯ ಮೊದಲೇ ಹೇಳಿದ್ದೆ. ನಾನು ಹೇಳಿದಂತೆಯೇ ನಡೆದಿದೆ. ಎರಡು ಲಕ್ಷ ಮತಗಳ ಅಂತರದಿಂದ (Lok Sabha Election 2024) ಸೋಲಿಸುತ್ತಾರೆ ಅಂತ ಹೇಳಿದ್ದೆ. ಅದಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಡಿ.ಕೆ. ಸುರೇಶ್‌ ಅವರನ್ನು ಸೋಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Kumar Bangarappa: ಗೀತಾ ಸೋತ ಹಿನ್ನೆಲೆಯಲ್ಲಿ ಗೇಲಿ ಮಾಡಿದ್ದ ಕುಮಾರ್ ಬಂಗಾರಪ್ಪ ಮನೆಗೆ ಶಿವಣ್ಣ ​ಅಭಿಮಾನಿಗಳ ಮುತ್ತಿಗೆ

ಕಾಂಗ್ರೆಸ್‌ನಲ್ಲಿ ಒಳಜಗಳ ಶುರುವಾಗುತ್ತೆ

ಇದು ಸಿದ್ದರಾಮಯ್ಯ ಸಂಚಿನ ಒಂದು ಭಾಗ. ಡಿ.ಕೆ. ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿ ಆಗಬಾರದು, ಅವರ ನೈತಿಕತೆ ಕುಸಿಯಬೇಕು ಅಂತ ಹೀಗೆ ಮಾಡಿದ್ದಾರೆ. ಇದರಿಂದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ, ಈ ಸರ್ಕಾರ ಉಳಿಯಲ್ಲ ಎಂಬುವುದು ಗೊತ್ತಾಗುತ್ತದೆ. ಇಲ್ಲಿಂದ ರಾಜಕೀಯ ಧ್ರುವೀಕರಣ ಪ್ರಾರಂಭ ಆಗುತ್ತದೆ, ಕಾಂಗ್ರೆಸ್‌ನಲ್ಲಿ ಒಳಜಗಳ ಶುರುವಾಗುತ್ತೆ. ಈಗಾಗಲೇ ಬೆಳಗಾವಿಯಲ್ಲಿ ಕಿತ್ತಾಟ ಶುರುವಾಗಿದೆ. ಬೆಂಗಳೂರು ಗ್ರಾಮಾಂತರದ ಸೋಲಿನಿಂದ ಇಲ್ಲಿಯೂ ಕೂಡ ಜಗಳ ಶುರುವಾಗಿದೆ, ಸರ್ಕಾರ ಪತನವಾಗುತ್ತೆ ಎಂದು ಹೇಳಿದ್ದಾರೆ.

Continue Reading

ದೇಶ

Toyota Kirloskar Motor: ದೆಹಲಿಯಲ್ಲಿ ಟಿಕೆಎಂನ ʼಟೊಯೊಟಾ ಯೂಸ್ಡ್ ಕಾರ್ʼ ಮಳಿಗೆಗೆ ಚಾಲನೆ

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ನವದೆಹಲಿಯಲ್ಲಿ ತನ್ನ ಮೊದಲ ಕಂಪನಿಯ ಒಡೆತನದ ಟೊಯೊಟಾ ಯೂಸ್ಡ್ ಕಾರ್ ಮಳಿಗೆಯನ್ನು (ಟಿಯುಸಿಒ) ಉದ್ಘಾಟಿಸಿದೆ. “ಟೊಯೊಟಾ ಯು-ಟ್ರಸ್ಟ್” ಬ್ರಾಂಡ್ ಹೆಸರಿನಲ್ಲಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತವಾಗಿ ಬಳಸಿದ ಕಾರುಗಳನ್ನು ನೀಡುವ ಗುರಿಯನ್ನು ಹೊಂದಿರುವ ಟೊಯೊಟಾ ಯು-ಟ್ರಸ್ಟ್ ಕಾರುಗಳ ಖರೀದಿ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ಅನುಕೂಲತೆ, ಪಾರದರ್ಶಕತೆ ಮತ್ತು ಪೀಸ್ ಆಫ್ ಮೈಂಡ್ ಅನ್ನು ನೀಡುತ್ತದೆ.

VISTARANEWS.COM


on

Toyota Kirloskar Motor Inauguration of Toyota Used Car Store by TKM in New Delhi
Koo

ಬೆಂಗಳೂರು: ಗ್ರಾಹಕ ಮೊದಲು ಎಂಬ ತತ್ವಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ‘ಟೊಯೊಟಾ ಕಿರ್ಲೋಸ್ಕರ್ ಮೋಟಾರ್’ (Toyota Kirloskar Motor) ಇಂದು ನವದೆಹಲಿಯಲ್ಲಿ ತನ್ನ ಮೊದಲ ಕಂಪನಿಯ ಒಡೆತನದ ಟೊಯೊಟಾ ಯೂಸ್ಡ್ ಕಾರ್ ಮಳಿಗೆಯನ್ನು (ಟಿಯುಸಿಒ) ಉದ್ಘಾಟಿಸಿದೆ. “ಟೊಯೊಟಾ ಯು-ಟ್ರಸ್ಟ್” ಬ್ರಾಂಡ್ ಹೆಸರಿನಲ್ಲಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತವಾಗಿ ಬಳಸಿದ ಕಾರುಗಳನ್ನು ನೀಡುವ ಗುರಿಯನ್ನು ಹೊಂದಿರುವ ಟೊಯೊಟಾ ಯು-ಟ್ರಸ್ಟ್ ಕಾರುಗಳ ಖರೀದಿ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ಅನುಕೂಲತೆ, ಪಾರದರ್ಶಕತೆ ಮತ್ತು ಪೀಸ್ ಆಫ್ ಮೈಂಡ್ ಅನ್ನು ನೀಡುತ್ತದೆ.

ಈ ಹೊಸ ಸೌಲಭ್ಯವು 15,000 ಚದರ ಅಡಿಗಳಷ್ಟು ವಿಸ್ತಾರವಾಗಿದ್ದು, 20ಕ್ಕೂ ಹೆಚ್ಚು ಟೊಯೊಟಾ ಪ್ರಮಾಣೀಕೃತ ವಾಹನಗಳ ಡಿಸ್‌ಪ್ಲೆ ಸಾಮರ್ಥ್ಯವನ್ನು ಹೊಂದಿದೆ. ಟೊಯೊಟಾ ವಾಹನಗಳ ಖರೀದಿ ಮತ್ತು ಮಾರಾಟ ಎರಡಕ್ಕೂ ಉದ್ದೇಶಿಸಲಾದ ರಿಟೇಲ್ ಟಚ್ ಪಾಯಿಂಟ್ ಆಗಿ ಟಿಯುಸಿಒದಲ್ಲಿನ ಎಲ್ಲಾ ಕಾರುಗಳು ಜಾಗತಿಕ ಟೊಯೊಟಾ ಮಾನದಂಡಗಳ ಆಧಾರದ ಮೇಲೆ ಸಮಗ್ರ 203-ಪಾಯಿಂಟ್‌ಗಳ ತಪಾಸಣೆಗೆ ಒಳಗಾಗುತ್ತವೆ. ತಪಾಸಣೆಗಳು ಕಠಿಣ ಸುರಕ್ಷತೆ, ರಚನಾತ್ಮಕ ಕಠಿಣತೆ ಮತ್ತು ಕಾರ್ಯಕ್ಷಮತೆಯ ಪರಿಶೀಲನೆಯನ್ನು ಸಹ ಒಳಗೊಂಡಿವೆ.

ಇದನ್ನೂ ಓದಿ: Gold Rate Today: ಆಭರಣ ಖರೀದಿಗೆ ಇದು ಸಕಾಲ; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಟೊಯೊಟಾಗೆ ಪ್ರತ್ಯೇಕವಾದ “ಹೈ ಕ್ವಾಲಿಟಿ ಪ್ರಿಶಿಯಸ್ ಕ್ಲೀನಿಂಗ್” ‘ಮಾರು ಮಾರು’ ಸಿಗ್ನೇಚರ್‌ನೊಂದಿಗೆ ಟಿಯುಸಿಒ ವಹಿವಾಟು ಭಾರತದಾದ್ಯಂತ ಟೊಯೊಟಾ ಗ್ರಾಹಕರಿಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ಬಳಸಿದ ಕಾರು ಮಾರುಕಟ್ಟೆಯನ್ನು ಬೆಳೆಸುವ ಟಿಕೆಎಂನ ಬದ್ಧತೆಯನ್ನು ಬಲಪಡಿಸುತ್ತದೆ. ಇದಲ್ಲದೆ ಟೊಯೊಟಾ ಯು-ಟ್ರಸ್ಟ್ ಮಳಿಗೆಗಳು ಹೊಚ್ಚ ಹೊಸ ವಾಹನವನ್ನು ಖರೀದಿಸುವ ಸಮಾನಾರ್ಥಕ ವಾತಾವರಣ ಮತ್ತು ಗ್ರಾಹಕರ ಅನುಭವವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆ.

ಖರೀದಿದಾರರು ಸಂಪೂರ್ಣ ಪಾರದರ್ಶಕತೆ, ಕಿರಿಕಿರಿ ಇಲ್ಲದ ಡಾಕ್ಯುಮೆಂಟೇಶನ್ ಮತ್ತು ನ್ಯಾಯೋಚಿತ ಸ್ಪರ್ಧಾತ್ಮಕ ಬೆಲೆಯ ಭರವಸೆಯೊಂದಿಗೆ ವಿವಿಧ ರೀತಿಯ ಉತ್ತಮ-ಗುಣಮಟ್ಟದ ಟೊಯೊಟಾ ಮಾದರಿಗಳಿಂದ ಆಯ್ಕೆ ಮಾಡಬಹುದು. ಡಿಜಿಟಲ್ ಸಂಯೋಜಿತ ಶೋರೂಂ ಸಮಗ್ರ ವಾಹನ ಇತಿಹಾಸ ಮತ್ತು ಮೌಲ್ಯಮಾಪನವನ್ನು ಒದಗಿಸುವ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು “ ವ್ಯಾಲ್ಯುಯೇಟ್ ಯುವರ್ ಕಾರ್” ಆಯ್ಕೆಯ ಮೂಲಕ ಟೊಯೊಟಾ ಯು-ಟ್ರಸ್ಟ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ವಾಹನಗಳನ್ನು ಮೌಲ್ಯಮಾಪನ ಮಾಡಬಹುದು.

ಹೆಚ್ಚುವರಿಯಾಗಿ ಮಾರಾಟದ ನಂತರದ ಸೇವೆಯ ಕಡೆಗೆ ನಿಜವಾದ ಟೊಯೊಟಾ ಗ್ರಾಹಕ ಕೇಂದ್ರಿತ ವಿಧಾನವನ್ನು ಪ್ರದರ್ಶಿಸುತ್ತದೆ. ಟಿಯುಸಿಒ ಪ್ರಮಾಣೀಕರಿಸಿದ ಬಳಸಿದ ಕಾರುಗಳಿಗೆ ದೇಶಾದ್ಯಂತ ಯಾವುದೇ ಟೊಯೊಟಾ ಸೇವಾ ಕೇಂದ್ರಗಳಲ್ಲಿ 30,000 ಕಿ.ಮೀ, ಅಥವಾ 2 ವರ್ಷಗಳು ಮತ್ತು 3 ಉಚಿತ ಸೇವೆಗಳ ವಾರಂಟಿಯನ್ನು ನೀಡಲಾಗುತ್ತದೆ. ಮಾರಾಟಗಾರರಿಗೆ, ಶಾಂತಿಯುತ ಮತ್ತು ಕಿರಿಕಿರಿ ಇಲ್ಲದ ಮಾರಾಟ ಪ್ರಕ್ರಿಯೆ ಜತೆಗೆ ಟುಕೊ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ನೀಡುತ್ತದೆ.

ಇದನ್ನೂ ಓದಿ: Kannada New Movie: ʻರಮೇಶ್ ಸುರೇಶ್‌ʼ ಸಿನಿಮಾದಲ್ಲಿ ಇಬ್ಬರು ನಿರ್ದೇಶಕರು, ಇಬ್ಬರು ನಾಯಕರು ; ಜೂನ್ 21ರಂದು ತೆರೆಗೆ!

ಈ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ತಕಾಶಿ ತಕಾಮಿಯಾ ಮಾತನಾಡಿ, ಯೂಸ್ಡ್ ಕಾರ್ ಬ್ಯುಸಿನೆಸ್ ಭಾರತದಲ್ಲಿ ಟೊಯೊಟಾದ ಒಟ್ಟಾರೆ ವ್ಯವಹಾರ ಮತ್ತು ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿದೆ. ಇದು ‘ಮೊಬಿಲಿಟಿ ಫಾರ್ ಆಲ್ ‘ ಎಂಬ ನಮ್ಮ ದೃಷ್ಟಿಕೋನದೊಂದಿಗೆ ನಿಕಟವಾಗಿ ಹೊಂದಿಕೆಯಾಗಿದೆ. ಆದ್ದರಿಂದ ನವದೆಹಲಿಯಲ್ಲಿ ನಮ್ಮ ಮೊದಲ ಯೂಸ್ಡ್ ಕಾರ್ ಔಟ್ಲೆಟ್ ಉದ್ಘಾಟನೆಯೊಂದಿಗೆ ಟಿಯುಸಿಒದ ವಿಸ್ತರಣೆಯು ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಗ್ರಾಹಕರ ತೃಪ್ತಿಗೆ ನಮ್ಮ ಸಮರ್ಪಣೆಗೆ ಉದಾಹರಣೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಹೊಸ ಮಳಿಗೆಯು ಟೊಯೊಟಾ ಉತ್ಪನ್ನಗಳಿಗೆ ಸಮಾನಾರ್ಥಕವಾದ ಮಾನದಂಡಗಳನ್ನು ಮತ್ತು ನಮ್ಮ ಬೆಂಚ್ ಮಾರ್ಕ್ ಸೇವಾ ಅನುಭವವನ್ನು ಎತ್ತಿಹಿಡಿಯುತ್ತದೆ.

ಭಾರತೀಯ ಬಳಸಿದ ಕಾರು ಮಾರುಕಟ್ಟೆಯು ಶೇ.8% ಸಿಎಜಿಆರ್‌ ನಷ್ಟು ಬೆಳೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಹೊಸ ಕಾರು ಮಾರುಕಟ್ಟೆಯ ಗಾತ್ರಕ್ಕಿಂತ 1.3 ಪಟ್ಟು ದೊಡ್ಡದಾಗಿದೆ. ಈ ವಲಯವು ಗಮನಾರ್ಹ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ. ದೆಹಲಿಯಲ್ಲಿ ಟೊಯೊಟಾ ಕಂಪನಿಯ ಒಡೆತನದ ಮಳಿಗೆಯ ನಮ್ಮ ಇತ್ತೀಚಿನ ವಿಸ್ತರಣೆ ಮತ್ತು ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಮಳಿಗೆಗಳನ್ನು ನಿರ್ಮಿಸಲು ಚಿಂತಿಸಿದೆ.

ನಮ್ಮ ಗ್ರಾಹಕರಿಗೆ ತಡೆರಹಿತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಬಳಸಿದ ಕಾರು ಮಾರುಕಟ್ಟೆಯನ್ನು ರಚಿಸುವ ಟಿಕೆಎಂನ ಕಾರ್ಯತಂತ್ರವನ್ನು ನಗರಗಳು ಒತ್ತಿಹೇಳುತ್ತವೆ. ಗುಣಮಟ್ಟ ಮತ್ತು ಸುರಕ್ಷತೆ-ಕೇಂದ್ರಿತ ನವೀಕರಣಕ್ಕೆ ಒತ್ತು ನೀಡುತ್ತವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಯೋಜನಾ ಉಪಾಧ್ಯಕ್ಷ ಅತುಲ್ ಸೂದ್ ಮಾತನಾಡಿ, ನವದೆಹಲಿ ಟಿಯುಸಿಒ ಸೌಲಭ್ಯವನ್ನು ತೆರೆಯುವುದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಮಹತ್ವದ ಮೈಲಿಗಲ್ಲಾಗಿದೆ. ಯೂಸ್ಡ್ ಕಾರ್ ಮಾರುಕಟ್ಟೆಯಲ್ಲಿ ನಮ್ಮ ಹೆಜ್ಜೆ ಗುರುತನ್ನು ವಿಸ್ತರಿಸಲು ನಾವು ರೋಮಾಂಚನ ಗೊಂಡಿದ್ದೇವೆ, ಗ್ರಾಹಕರಿಗೆ ತಮ್ಮ ಟೊಯೊಟಾ ಕಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವಿಶ್ವಾಸಾರ್ಹ ಮತ್ತು ಪಾರದರ್ಶಕ ಅನುಭವವನ್ನು ಒದಗಿಸುತ್ತದೆ, ಎಲ್ಲಾ ಮೌಲ್ಯವರ್ಧಿತ ಸೇವೆಗಳಿಗೆ ಒಂದೇ ಸೂರಿನಡಿ ಪರಿಹಾರವನ್ನು ನೀಡುತ್ತದೆ.

ಪ್ರತಿ ಪೂರ್ವ ಮಾಲಿಕತ್ವದ (ಯೂಸ್ಡ್ ಕಾರ್) ವಾಹನವು ನಮ್ಮ ವಿಶೇಷ ಕೇಂದ್ರಗಳಲ್ಲಿ ಟೊಯೊಟಾ ಜೆನ್ಯೂನ್ ಪಾರ್ಟ್ಸ್‌ಗಳನ್ನು ಬಳಸಿಕೊಂಡು ನಮ್ಮ ತಂತ್ರಜ್ಞರಿಂದ ನವೀಕರಣಕ್ಕೆ ಒಳಗಾಗುತ್ತದೆ. ಜಾಗತಿಕ ಟೊಯೊಟಾ ಮಾನದಂಡಗಳಿಗೆ ಅನುಗುಣವಾಗಿ ಸಮಗ್ರ 203-ಅಂಶಗಳ ತಪಾಸಣೆಯನ್ನು ನಡೆಸಲಾಗುತ್ತದೆ, ಇದು ಉತ್ತಮ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ. ಈ ಬದ್ಧತೆಯನ್ನು ಟೊಯೊಟಾದ ತೊಂದರೆ ಮುಕ್ತ ಮಾರಾಟದ ನಂತರದ ಸೇವಾ ಬೆಂಬಲದ ಖಾತರಿಯಿಂದ ಮತ್ತಷ್ಟು ಬಲಪಡಿಸಲಾಗಿದೆ, ಇದು ತಡೆರಹಿತ ಮತ್ತು ಸಂತೋಷದಾಯಕ ಮಾಲೀಕತ್ವದ ಅನುಭವವನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Raja Rani Show: ಇಂದಿನಿಂದ ʻರಾಜ ರಾಣಿ ರೀಲೋಡೆಡ್ʼ ರಿಯಾಲಿಟಿ ಶೋ ಶುರು!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2022 ರಲ್ಲಿ ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ಉದ್ಘಾಟಿಸುವ ಮೂಲಕ 2022 ರಲ್ಲಿ ಬಳಸಿದ ಯೂಸ್ಡ್ ಕಾರ್ ಮಾರುಕಟ್ಟೆಗೆ ಕಾಲಿಟ್ಟಿತು. ಇದು ಟಿಕೆಎಂ ಅನ್ನು ಗ್ರಾಹಕರಿಗೆ ಸಂಪೂರ್ಣ ಒಇಎಂ (ಮೂಲ ಉಪಕರಣ ತಯಾರಕ) ನವೀಕರಿಸಿದ ಬಳಸಿದ ಕಾರುಗಳನ್ನು ನೀಡುವ ಭಾರತದ ಮೊದಲ ವಾಹನ ತಯಾರಕ ಕಂಪನಿಯನ್ನಾಗಿ ಮಾಡಿದೆ.

Continue Reading

ಬೆಂಗಳೂರು

Assault Case : ಅರೆ ಬೆತ್ತಲಾಗಿ ಯುವಕನಿಗೆ ನಡು ರಸ್ತೆಯಲ್ಲೆ ಹಿಗ್ಗಾಮುಗ್ಗಾ ಥಳಿತ; ಹಲ್ಲೆಕೋರರು ಅರೆಸ್ಟ್‌

Assault Case : ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆಯು ವಿಕೋಪಕ್ಕೆ ತಿರುಗಿ ಸ್ನೇಹಿತರೇ ಹಲ್ಲೆಕೋರರಾಗಿದ್ದರು. ನಡುರಸ್ತೆಯಲ್ಲೇ ಸ್ನೇಹಿತನನ್ನು ಅರೆಬೆತ್ತಲೆ ಮಾಡಿ, ತಾವು ಅರೆ ಬೆತ್ತಲಾಗಿ ಹಿಗ್ಗಾಮುಗ್ಗಾ ಥಳಿಸಿದ್ದರು. ಕಳೆದ ತಿಂಗಳು ನಡೆದಿದ್ದ ಈ ಹಲ್ಲೆಯು ಇದೀಗ ವೈರಲ್‌ ಆಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

VISTARANEWS.COM


on

By

assault case
Koo

ಬೆಂಗಳೂರು: ಯುವಕರ ನಡುವೆ ಗಲಾಟೆಯೊಂದು ತಿಂಗಳ ಹಿಂದೆ (Assault Case) ನಡೆದಿತ್ತು. ಬೆಂಗಳೂರಿನ ಕಾಡುಗೋಡಿಯ ಬೆಳತ್ತೂರು ಕಾಲೋನಿಯಲ್ಲಿ ಧನಂಜಯ್ ಎಂಬಾತನನ್ನು ಆತನ ಸ್ನೇಹಿತರೇ ಹಿಗ್ಗಾಮುಗ್ಗಾ ಥಳಿಸಿದ್ದರು. ತಾವು ಅರೆ ಬೆತ್ತಲಾಗಿ ಧನಂಜಯ್‌ನನ್ನು ಅರೆ ಬೆತ್ತಲೆ ಮಾಡಿ ನಡುರಸ್ತೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದರು.

ಹಲ್ಲೆ ಮಾಡುವ ವಿಡಿಯೊವನ್ನು ಅಲ್ಲಿನ ಸ್ಥಳೀಯರು ಚಿತ್ರೀಕರಿಸಿದ್ದರು. ಆದರೆ ಇದೀಗ ಒಂದು ತಿಂಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಹಲ್ಲೆ ವಿಡಿಯೊ ವೈರಲ್ ಆಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಬೆಂಗಳೂರು ಸೇಫ್‌ ಸಿಟಿಯಿಂದ ದೂರಾಗುತ್ತಿದೆ ಎಂದು ಕಿಡಿಕಾರಿದರು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು, ವಿಡಿಯೊ ಅಧಾರಿಸಿ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಧನಂಜಯ್‌ ಹಾಗೂ ಆರೋಪಿಗಳು ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: MM Hills : ಮಲೆಮಹದೇಶ್ವರ ಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ; ಒಬ್ಬರು ಸಾವು, ಮೂವರು ಗಂಭೀರ

ಸದ್ಯ ಹೋಟೆಲ್‌ ಮ್ಯಾನೇಜರ್ ದೂರಿನ ಮೇರೆಗೆ ಸಂತೋಷ್, ಆಕಾಶ್, ಅಮರೇಶ್, ನವೀನ್, ವಿಶಾಲ್ ಜೋಷಿ ಹಾಗೂ ಸುರೇಂದ್ರ, ಮಂಜುನಾಥ್ ಎಂಬುವವರನ್ನು ಬಂಧಿಸಲಾಗಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕಾಡುಗೋಡಿ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ವೈಟ್ ಫಿಲ್ಡ್ ಡಿಸಿಪಿ ಶಿವಕುಮಾರ್, ಮೇ 8ರಂದು ಸಾಯಿಪ್ಯಾಲೆಸ್ ಹೊಟೇಲ್ ಮುಂದೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ ಆರೋಪಿಗಳು ಹೋಟೆಲ್‌ ಮುಂದೆ ಮಧ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು. ಇದನ್ನೂ ಧನಂಜಯ್‌ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಾದ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಧನಂಜಯ್‌ನನ್ನು ಕರೆಸಿ ನಮ್ಮ ಸಿಬ್ಬಂದಿ ದೂರು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

Kumar Bangarappa: ಗೀತಾ ಸೋತ ಹಿನ್ನೆಲೆಯಲ್ಲಿ ಗೇಲಿ ಮಾಡಿದ್ದ ಕುಮಾರ್ ಬಂಗಾರಪ್ಪ ಮನೆಗೆ ಶಿವಣ್ಣ ​ಅಭಿಮಾನಿಗಳ ಮುತ್ತಿಗೆ

Kumar Bangarappa: ಇತ್ತ ಮನೆ ಗೇಟ್ ಒಳಗೆ ನುಗ್ಗಿ ಕುಮಾರ್ ಬಂಗಾರಪ್ಪ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಿವಣ್ಣ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮನೆ ಬಾಗಿಲಿನಿಂದ ಹೊರ ಹೋಗುವಂತೆ ಪೊಲೀಸರು ನಟನ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು.

VISTARANEWS.COM


on

Kumar Bangarappa attack by Shivarajkumar Supporters
Koo

ಬೆಂಗಳೂರು: ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ (Karnataka election results 2024) ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತ ಸಹೋದರಿ ಗೀತಾ ಮತ್ತು ನಟ ಶಿವರಾಜ್‌ಕುಮಾರ್‌ ಬಗ್ಗೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ (Kumar Bangarappa) ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರು. ಶಿವರಾಜ್‌ ಕುಮಾರ್‌ ಈಗ ಶಿವಮೊಗ್ಗ ಜಾತ್ರೆಯಲ್ಲಿ ಕುಣಿಯಲು ಅರ್ಜಿ ಹಾಕಿಕೊಳ್ಳಲಿ ಎಂದಿದ್ದರು. ಇದೀಗ ಸದಾಶಿವನಗರದಲ್ಲಿರುವ ಅವರ ಮನೆಗೆ ನಟ ಶಿವರಾಜ್‌ಕುಮಾರ್‌ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ. ಶಿವರಾಜ್ ಕುಮಾರ್ ಹಾಗೂ ರಾಜ್ ಕುಮಾರ್ ಕುಟುಂಬದ ಬಗ್ಗೆ ಕುಮಾರ್‌ ಬಂಗಾರಪ್ಪ ಲಘುವಾಗಿ ಮಾತನಾಡಿದ್ದಾರೆ. ಅದರಿಂದ ನಮಗೆ ನೋವಾಗಿದೆ. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಮನೆಯ ಗೇಟ್ ಒಳಗೆ ನುಗ್ಗಿ ಕುಮಾರ್ ಬಂಗಾರಪ್ಪ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಿವಣ್ಣ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಮನೆ ಬಾಗಿಲಿನಿಂದ ಹೊರ ಹೋಗುವಂತೆ ಪೊಲೀಸರು ನಟನ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಮಾರ್‌ ಬಂಗಾರಪ್ಪ ಅವರು ಪೋಸ್ಟ್‌ನಲ್ಲಿ, ನಟ ಶಿವರಾಜ್ ಕುಮಾರ್ ಈಗ ನಿರುದ್ಯೋಗಿ ಆಗಬೇಕಿಲ್ಲ, ನಮ್ಮ ಊರಿನ ಜಾತ್ರೆಯಲ್ಲಿ ಕುಣಿಯೋಕೆ ಅರ್ಜಿ ಹಾಕಲಿ ಎಂದು ಕುಮಾರ್ ಬಂಗಾರಪ್ಪ ಗೇಲಿ ಮಾಡಿದ್ದರು.

ಇದನ್ನೂ ಓದಿ: Kumar Bangarappa: ಶಿವರಾಜ್ ಕುಮಾರ್ ನಮ್ಮೂರಿನ ಜಾತ್ರೆಯಲ್ಲಿ ಕುಣಿಯಲು ಅರ್ಜಿ ಹಾಕಲಿ! ಗೀತಾ ಸೋತ ಹಿನ್ನೆಲೆಯಲ್ಲಿ ಕುಮಾರ್ ಬಂಗಾರಪ್ಪ ಗೇಲಿ

ಕುಮಾರ್​ ಬಂಗಾರಪ್ಪ ಫೋಸ್ಟ್​ನಲ್ಲಿ ಏನಿತ್ತು?

ʻʻನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರ ಪಡುವುದು ಬೇಕಿಲ್ಲ. ದೊಡ್ಮನೆ ವ್ಯವಹಾರ ಸಾಕಷ್ಟಿದೆ, ಅದು ಬೇರೆಯವರಿಗೆ ಅವಕಾಶ ಸಿಗಲ್ಲ. ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನಿದ್ದರೂ ತಮ್ಮ ಪಟಾಲಂ ಮುಂದೆ ಮಾತ್ರ ಇರಲಿ. ದಿಕ್ಕು ಗೆಟ್ಟು ದಿಕ್ಕಾ ಪಾಲಾಗಿ ಬೆಂಗಳೂರು ಸೇರಿದವರಿಗೆ ಇದು ಕೊನೆಯ ಎಚ್ಚರಿಕೆ. ನೀವು ಹಿಂತುಗಿರುಗಿ ಬರುವುದು ನಿಮ್ಮ ಕನಸಿನ ಮಾತು. ಹೋಗಿ ಬನ್ನಿ ಟಾಟಾ ಬೈ ಬೈ ಎಂದು ತಿರುಗೇಟು ನೀಡಿದ್ದರು.

ಬಂಗಾರಪ್ಪನವರನ್ನು ಪ್ರಚಾರ ಸಾಮಗ್ರಿಯಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿಯಾಗಿದೆ.
ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಗೀತಾ ಶಿವರಾಜ್‌ಕುಮಾರ್‌, ಬಾವ ಶಿವರಾಜ್‌ ಕುಮಾರ್‌ ಹಾಗೂ ಸಹೋದರ ಮಧು ಬಂಗಾರಪ್ಪ ಅವರ ವಿರುದ್ಧ ಕುಮಾರ್‌ ಬಂಗಾರಪ್ಪ ವಾಗ್ದಾಳಿ ನಡೆಸಿದರು. ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು ಎಂಬ ಸಾರ್ಥಕ ಬಿರುದಾವಳಿಯನ್ನು ತಮ್ಮ ಹೆಸರಿನೊಡನೆ ನಡೆಸಿಕೊಂಡು ಬದುಕಿದವರು ಸಾರೆಕೊಪ್ಪ ಬಂಗಾರಪ್ಪ. ಹಿಂದುಳಿದ ವರ್ಗಗಳಿಗೆ ಆಶಾಕಿರಣವಾಗಿದ್ದ, ರೈತಬಂಧುವೂ, ಗೇಣಿದಾರರ ಜೀವಜಲವೆನಿಸಿದ್ದ ಹೋರಾಟಗಾರ, ನಾಡು ನುಡಿ ಸಂಸ್ಕೃತಿಗಳ ರಕ್ಷಾ ದೀಕ್ಷೆಯನ್ನು ತೊಟ್ಟಿದ್ದ ವೀರಯೋಧನೆನಿಸಿದ್ದ ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರೆಲ್ಲರಲ್ಲಿಯೂ ಸಮ ಭಾವ, ಸಮಚಿತ್ತದಿಂದ ಬೆರೆತಿದ್ದವರು. ಇವರ ಆಡಳಿತ ವೈಖರಿಯು ಅನುಕರಣೀಯ ಮಾತ್ರವಲ್ಲದೆ ಆದರ್ಶರೂಪದ್ದಾಗಿತ್ತು ಎಂದು ಹೇಳಿದ್ದರು.

ಇವರು ಜಾರಿಗೆ ತಂದಿದ್ದ ಪಂಚಮುಖಿ ಕಾರ್ಯಕ್ರಮಗಳಾದ ವಿಶ್ವ, ಸುಶ್ರತ, ಆರಾಧನ, ಆಶ್ರಯ, ಅಕ್ಷಯ ಮುಂತಾದವನ್ನು ಇಡೀ ರಾಜ್ಯ ನೆನೆಯುತ್ತಾ ಆರಾಧಿಸುತ್ತಿದೆ, ಬೇರೆ ರಾಜ್ಯಗಳೂ ಅನುಕರಿಸುತ್ತಿವೆ. ಇಂತಹ ಒಬ್ಬ ಧೀರೋದ್ಧಾತ ನಾಯಕನನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ! ಎಂದು ತಿಳಿಸಿದ್ದರು.

ಇದನ್ನೂ ಓದಿ: Madhu Bangarappa : ಆ ಹುಚ್ಚನ್‌ ಬಗ್ಗೆ ನಾ ಮಾತಾಡಲ್ಲ ಬಿಟ್ಬಿಡಿ; ಮಧು ಬಂಗಾರಪ್ಪ ಹೇಳಿದ್ದು ಯಾರ ಬಗ್ಗೆ?

ಮೇಲಾಗಿ, ಕನ್ನಡದ ಕಣ್ಮಣಿ Dr. ರಾಜಕುಮಾರ್ ರವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ. ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ ಎಂದು ಸಲಹೆ ನೀಡಿದ್ದರು

ಈ ವಿಜಯೋತ್ಸವದ ಕೊಡುಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದ ಮತದಾರರಿಂದ ಲಭಿಸಿದ್ದು ಅವರಿಗೆ ನಾವು ಚಿರಋಣಿಗಳಾಗಿರುತ್ತೇವೆ ಅವರ ಆಶಯಗಳನ್ನು ಸಾಕಾರಗೊಳಿಸುತ್ತೇವೆ ಅವರ ನಂಬಿಕೆಗೆ ಚ್ಯುತಿಬಾರದಂತೆ ನಡೆದುಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು, ಹಿರಿಯ ಕಿರಿಯ ಪದಾಧಿಕಾರಿಗಳು, ಸಂಘಟನೆಯಲ್ಲಿ ತೊಡಗಿಸಿಕೊಂಡ ಬ್ರಿಗೇಡ್/ಶಿಸ್ತಿನ ಸಿಪಾಯಿಗಳು ಹಗಲಿರುಲೆನ್ನದೆ ದುಡಿದು, B Y ರಾಘವೇಂದ್ರರಿಗೆ ಅತ್ಯಧಿಕ ಬಹುಮತದಿಂದ ವಿಜಯಶಾಲಿಯನ್ನಾಗಿಸಿದ್ದಾರೆ ಅವರೆಲ್ಲರಿಗೂ ನನ್ನ ನಮನಗಳು. ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಮಾರ್ಗದರ್ಶನ ನೀಡಿದ ನಾಯಕರೆಲ್ಲರಿಗೂ ಧನ್ಯವಾದಗಳು ಎಂದಿದ್ದರು.

War is over but battle remains ZP, TP ಚುನಾವಣೆಗಳು, ಇದೇ ಓಟ ನಿರಂತರವಾಗಿ ನಡೆಯಬೇಕು, ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು ಪಣತೋಡೋಣ, ಗುರಿ ಮುಟ್ಟೋಣ. ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ಚಾಲನೆಯಗಬೇಕು. ಪಶ್ಚಿಮ ಘಟ್ಟದ ಈ ತಪ್ಪಲು ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಬೇಕು. ಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲ CM ಅವನನ್ನು ಸಂಪುಟ ದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ. ಅವನ bAವ, ನನ್ನ ತಂಗಿಯ ಗಂಡ Dr. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು.

ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾ‌ರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು ಎಂದು ತಾಕೀತು ಮಾಡಿದ್ದರು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು. ಜೈಹಿಂದ್, ಜೈ ಕರ್ನಾಟಕ! ಎಂದು ತಿಳಿಸಿದ್ದರು.

Continue Reading
Advertisement
AFG vs NZ
ಕ್ರಿಕೆಟ್18 mins ago

AFG vs NZ: ಅಫಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡ ನ್ಯೂಜಿಲ್ಯಾಂಡ್​

Election Results 2024
ಕರ್ನಾಟಕ39 mins ago

Election Results 2024: ಡಿ.ಕೆ. ಸುರೇಶ್ ಸೋಲಿಗೆ ಸಿದ್ದರಾಮಯ್ಯ ಆ್ಯಂಡ್ ಟೀಮ್ ಕಾರಣ: ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ

Toyota Kirloskar Motor Inauguration of Toyota Used Car Store by TKM in New Delhi
ದೇಶ45 mins ago

Toyota Kirloskar Motor: ದೆಹಲಿಯಲ್ಲಿ ಟಿಕೆಎಂನ ʼಟೊಯೊಟಾ ಯೂಸ್ಡ್ ಕಾರ್ʼ ಮಳಿಗೆಗೆ ಚಾಲನೆ

Niveditha Gowda chandan divorce main reason told by advocate
ಸ್ಯಾಂಡಲ್ ವುಡ್47 mins ago

Niveditha Gowda: ಚಂದನ್‌-ನಿವೇದಿತಾ ಡಿವೋರ್ಸ್‌ ಬಗ್ಗೆ ಅಸಲಿ ಸತ್ಯ ಬಯಲು ಮಾಡಿದ ವಕೀಲೆ!

Job Alert
ಉದ್ಯೋಗ50 mins ago

Job Alert: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

assault case
ಬೆಂಗಳೂರು59 mins ago

Assault Case : ಅರೆ ಬೆತ್ತಲಾಗಿ ಯುವಕನಿಗೆ ನಡು ರಸ್ತೆಯಲ್ಲೆ ಹಿಗ್ಗಾಮುಗ್ಗಾ ಥಳಿತ; ಹಲ್ಲೆಕೋರರು ಅರೆಸ್ಟ್‌

Kumar Bangarappa attack by Shivarajkumar Supporters
ರಾಜಕೀಯ1 hour ago

Kumar Bangarappa: ಗೀತಾ ಸೋತ ಹಿನ್ನೆಲೆಯಲ್ಲಿ ಗೇಲಿ ಮಾಡಿದ್ದ ಕುಮಾರ್ ಬಂಗಾರಪ್ಪ ಮನೆಗೆ ಶಿವಣ್ಣ ​ಅಭಿಮಾನಿಗಳ ಮುತ್ತಿಗೆ

Pakistan
ವಿದೇಶ1 hour ago

Pakistan: ಇಡೀ ಜಗತ್ತೇ ಮೋದಿಗೆ ಅಭಿನಂದಿಸಿದರೂ ಪಾಕಿಸ್ತಾನ ಮಾತ್ರ ಇನ್ನೂ Congratulations ಎಂದಿಲ್ಲ!

Valmiki Corporation Scam
ಪ್ರಮುಖ ಸುದ್ದಿ1 hour ago

Valmiki Corporation Scam: ಸಾಕ್ಷ್ಯ ನಾಶ ಆರೋಪ; ಮೇ 24ರಂದು ನಾನು ಕಚೇರಿಗೆ ಹೋಗಿಯೇ ಇಲ್ಲ ಎಂದ ಸಚಿವ ಶರಣ ಪ್ರಕಾಶ್ ಪಾಟೀಲ್

Gold Rate Today
ಚಿನ್ನದ ದರ2 hours ago

Gold Rate Today: ಆಭರಣ ಖರೀದಿಗೆ ಇದು ಸಕಾಲ; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ20 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ22 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು7 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌