Keruru Case | ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹಣವನ್ನು ವಾಪಸ್‌ ಎಸೆದ ರಜ್ಮಾ! - Vistara News

ಕರ್ನಾಟಕ

Keruru Case | ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹಣವನ್ನು ವಾಪಸ್‌ ಎಸೆದ ರಜ್ಮಾ!

ಬಾಗಲಕೋಟೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿಯಾಗಲು ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ದರು. ಈ ವೇಳೆ ಗಾಯಾಳುಗಳ ಕುಟುಂಬಸ್ಥರು ಹಣಕಾಸು ನೆರವನ್ನು ನಿರಾಕರಿಸಿದ್ದಾರೆ.

VISTARANEWS.COM


on

ಸಿದ್ದರಾಮಯ್ಯ
ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಕೆರೂರು ಘರ್ಷಣೆ ಪ್ರಕರಣದ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಗಲಕೋಟೆ: ಕೆರೂರು ಗುಂಪು ಘರ್ಷಣೆ (Keruru Case) ಪ್ರಕರಣದ ಗಾಯಾಳುಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿ ಆರ್ಥಿಕ ನೆರವನ್ನು ನೀಡಿದಾಗ, ಗಾಯಾಳುಗಳ ಕುಟುಂಬಸ್ಥರು ನಮಗೆ ದುಡ್ಡು ಬೇಡ, ಶಾಂತಿ ಬೇಕು ಎನ್ನುತ್ತ ಹಣವನ್ನು ಕಾರಿನ ಮೇಲೆ ಎಸೆದು ಅಸಮಾಧಾನ ಹೊರಹಾಕಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಭೇಟಿ ನೀಡಿ ಕೆರೂರು ಗಲಭೆ ಪ್ರಕರಣದಲ್ಲಿ ಗಾಯಗೊಂಡಿದ್ದ ಮಹಮ್ಮದ್‌ ಹನೀಫ್‌, ದಾವಲ ಮಲಿಕ್, ರಾಜೆಸಾಬ್, ರಫೀಕ್ ಆರೋಗ್ಯವನ್ನು ವಿಚಾರಿಸಿ, ತಲಾ 50 ಸಾವಿರ ರೂ.ಗಳಂತೆ ಒಟ್ಟು 2 ಲಕ್ಷ ರೂ. ನೀಡಲು ಮುಂದಾದರು. ಈ ವೇಳೆ ಗಾಯಾಳುಗಳ ಕುಟುಂಬಸ್ಥರು ಪರಿಹಾರ ಹಣ ಪಡೆಯಲು ನಿರಾಕರಿಸಿದರೂ ಸಿದ್ದರಾಮಯ್ಯ ಹಣ ನೀಡಿ ಅಲ್ಲಿಂದ ತೆರಳಿದರು.

ಸಿದ್ದರಾಮಯ್ಯ ವಾಪಸ್‌ ತೆರಳುತ್ತಿದ್ದಾಗ ಕಾರಿನ ಬಳಿ ಧಾವಿಸಿದ ಗಾಯಾಳುಗಳ ಕುಟುಂಬಸ್ಥರು, ನಮಗೆ ಹಣ ಬೇಡ ಶಾಂತಿ ಬೇಕು ಎಂದು‌ ಹಣವನ್ನು ವಾಪಸ್‌ ನೀಡಲು ಮುಂದಾದರು. ಆಗ ಸಿದ್ದರಾಮಯ್ಯ ಕಾರು ಮುಂದೆ ಚಲಿಸಿತು. ಇದರಿಂದ ಕೋಫಗೊಂಡ, ಗಾಯಾಳು ಮಹಮ್ಮದ್‌ ಹನೀಫ್ ಪತ್ನಿ ರಜ್ಮಾ ಎಸ್ಕಾರ್ಟ್‌ ಕಾರಿಗೆ 2 ಲಕ್ಷ ರೂ. ಎಸೆದರು. ನಮಗೆ ಹಿಂದು ಮುಸ್ಲಿಮರು ನೆಮ್ಮದಿಯಿಂದ ಬದುಕವ ವಾತಾವರಣ ಬೇಕು ಎಂದು ಆಕ್ರೋಶ ಹೊರಹಾಕಿದರು.

ಕೆರೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜುಲೈ 6ರಂದು ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಗಲಭೆಯಲ್ಲಿ ಹಿಂದು ಜಾಗರಣ ವೇದಿಕೆಯ ನಾಲ್ವರು ಹಾಗೂ ಐವರು ಮುಸ್ಲಿಂರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿಯಾಗುವುದು ಬೇಡ ಎಂದು ಹಿಂದು ಜಾಗರಣ ವೇದಿಕೆಯ ಗಾಯಾಳುಗಳು ತಿಳಿಸಿದ್ದಾರೆ.

ಇದನ್ನೂ ಓದಿ | ಕೆರೂರು ಗಲಾಟೆ | ಪಟ್ಟಣದಲ್ಲಿ ಗುಂಪು ಘರ್ಷಣೆಗೆ ಹುಡುಗಿಯನ್ನು ಚುಡಾಯಿಸಿದ್ದು ಮೂಲಕಾರಣವೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Parkinson’s disease: ಪಾರ್ಕಿನ್ಸನ್ ರೋಗಿಗಳಲ್ಲಿ ಡಿಬಿಎಸ್ ಚಿಕಿತ್ಸೆಗಾಗಿ ಹೊಸ ತಂತ್ರಜ್ಞಾನ- ಇದು ದೇಶದಲ್ಲೇ ಮೊದಲು

Parkinson’s disease:ಪಾರ್ಕಿನ್ಸನ್ಸ್ ಚಿಕಿತ್ಸೆಗಾಗಿ ಭಾರತದ ಪ್ರಪ್ರಥಮ NeuroSmartTM ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ ಸಾಧನವನ್ನು ಪರಿಚಯಿಸಲಾಗಿದೆ.

VISTARANEWS.COM


on

By

Koo

ಬೆಂಗಳೂರು: ಮೆಡ್‌ಟ್ರಾನಿಕ್ (NYSE:MDT)ನ ಅಧೀನ ಸಂಸ್ಥೆಯಾದ ಇಂಡಿಯಾ ಮೆಡ್‌ಟ್ರಾನಿಕ್ ಪ್ರೈವೇಟ್ ಲಿಮಿಟೆಡ್, ಪಾರ್ಕಿನ್ಸನ್ಸ್ ಚಿಕಿತ್ಸೆ(Parkinson’s disease) ಗಾಗಿ ಭಾರತದ ಪ್ರಪ್ರಥಮ NeuroSmartTM ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್(MER) ಸಾಧನವನ್ನು ಪರಿಚಯಿಸಿದೆ. ಡೀಪ್ ಬ್ರೈನ್ ಸ್ಟಿಮುಲೇಶನ್ (DBS), ನಡುಕಗಳು, ಬಿಗಿತ, ಮತ್ತು ನಡೆಯುವುದಕ್ಕೆ ಕಷ್ಟವಾಗುವುದು ಹೀಗೆ ಪಾರ್ಕಿನ್ಸನ್ಸ್ ಕಾಯಿಲೆಯ ಲಕ್ಷಣಗಳುಳ್ಳ ರೋಗಿಗಳ ಚಿಕಿತ್ಸೆಯಲ್ಲಿ ಈ ಸಾಧನ ಬಳಸಲಾಗುತ್ತದೆ. DBS, ರೋಗ ಲಕ್ಷಣ ಹೊಂದಿರುವ ಮಿದುಳಿನ ಭಾಗದ ಪ್ರದೇಶದ ಮೇಲೆ ಗುರಿಯಿರಿಸುವುದಕ್ಕಾಗಿ “ಲೀಡ್ಸ್” ಎಂದು ಕರೆಯಲ್ಪಡುವ ಅತಿಸಣ್ಣ ತಂತಿಗಳ ಮೂಲಕ ವಿದ್ಯುತ್ ಸಿಗ್ನಲ್‌ಗಳನ್ನು ಕಳುಹಿಸುವ ಒಂದು ಚಿಕ್ಕ ಪೇಸ್‍ಮೇಕ್‌ನಂತಹ ಸಾಧನದಿಂದ ನೀಡುವ ಚಿಕಿತ್ಸೆ ಇದಾಗಿದೆ. ಅತ್ಯಾಧುನಿಕ DBS ತಂತ್ರಜ್ಞಾನ ಬಳಸಿ ಮಿದುಳಿನ ಸಿಗ್ನಲ್‌ಗಳನ್ನು ಸೆರೆಹಿಡಿಯುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. NeuroSmartTM ಪೋರ್ಟಬಲ್ MER ನ್ಯಾವಿಗೇಶನ್ ಸಿಸ್ಟಮ್, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಿಖರತೆಯನ್ನು ವರ್ಧಿಸುವ ಮೂಲಕ ಡೀಪ್ ಬ್ರೈನ್ ಸ್ಟಿಮುಲೇಶನ್(DBS)ಅನ್ನು ಪರಿಣಾಮಕಾರಿಯನ್ನಾಗಿಸುತ್ತದೆ.

ಪಾರ್ಕಿನ್ಸನ್ಸ್ ಕಾಯಿಲೆಯು, ಜನರು ಸುಲಭವಾಗಿ ಗುರುತಿಸಬಹುದಾದ ಮೋಟಾರು ಲಕ್ಷಣಗಳು ನಡುಕ, ಸ್ನಾಯುಗಳ ಬಿಗಿತ , ದೈನಂದಿನ ಚಟುವಟಿಕೆಗಳಲ್ಲಿ ನಿಧಾನತೆ ಮತ್ತು ವಾಕಿಂಗ್ ಬದಲಾವಣೆಗಳನ್ನು ಒಳಗೊಂಡಿರುತ್ತದೆ. 2016ರಲ್ಲಿ, ವಿಶ್ವವ್ಯಾಪಿಯಾಗಿ 6.1 ದಶಲಕ್ಷ ಜನರು ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿತ್ತು. ಭಾರತದಲ್ಲಿ ಸುಮಾರು 5.8 ಲಕ್ಷ ಜನ ಈ ಖಾಯಿಲೆಯಿಂದ ಬಳಸುತ್ತಿದ್ದಾರೆ ಎಂದು ಹೇಳಲಾಗಿತ್ತು.

1987ರಿಂದಲೂ ಮೆಡ್‌ಟ್ರಾನಿಕ್ ಡಿಬಿಎಸ್ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವವ್ಯಾಪಿಯಾಗಿ 185,000ಗಿಂತ ಹೆಚ್ಚಿನ ಡಿಬಿಎಸ್ ಸಾಧನಗಳ ಅಳವಡಿಕೆಯಾಗಿದೆ. ಆಲ್ಫಾ ಒಮೇಗಾ ಇಂಜಿನಿಯರಿಂಗ್ ಅಭಿವೃದ್ಧಿಪಡಿಸಿರುವ NeuroSmartTM ಪೋರ್ಟಬಲ್ MER ನ್ಯಾವಿಗೇಶನ್ ಸಿಸ್ಟಮ್, ನರರೋಗ ಹಾಗೂ ಮಾನಸಿಕ ರೋಗಗಳ ಚಿಕಿತ್ಸೆಗಾಗಿ ಒಂದು ವಿನೂತನ ಚಿಕಿತ್ಸೆಯಾಗಿದೆ. ಅತ್ಯಾಧುನಿಕವಾದ ನ್ಯೂರೋಫಿಸಿಯಲಾಜಿಕಲ್ (neurophysiological) ನ್ಯಾವಿಗೇಶನ್ ಮ್ಯಾಪಿಂಗ್ ಹೊಂದಿರುವ ಇದು, ನರಗಳ ಚಟುವಟಿಕೆಯನ್ನು ದಾಖಲಿಸುವ ಸಮಯದಲ್ಲಿ ನಿಖರವಾದ ಎಲೆಕ್ಟ್ರೋಡ್ ಇರಿಸುವುದಕ್ಕೆ ನೆರವಾಗುತ್ತದೆ. HaGuide ಸ್ವಯಂಚಾಲಿತ ನ್ಯಾವಿಗೇಶನ್ ಮೇಲೆ ಆಧಾರಿತವಾದ ವರ್ಧಿತ ಗುರಿಯಿರಿಸಲಾದ ಸ್ಥಳೀಕರಣಕ್ಕೆ ಇದಕ್ಕಿರುವ ಅತ್ಯಾಧುನಿಕ ಸಾಮರ್ಥ್ಯಗಳು, ರೋಗಿಗಾಗಿ ಅತ್ಯಂತ ಪರಿಣಾಮಕಾರಿಯಾದ ಗುರಿಯನ್ನು ಗುರುತಿಸಲು ನೆರವಾಗಿ ಗರಿಷ್ಟ ಲಕ್ಷಣ ಶಮನವನ್ನು ಖಾತರಿಪಡಿಸುತ್ತದೆ.

ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ, ನರರೋಗಶಾಸ್ತ್ರ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರ್ಕರ್ ಒಳಗೊಂಡ ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್‌ನ ನರರೋಗಶಾಸ್ತ್ರ ತಂಡವು, ಪಾರ್ಕಿನ್ಸನ್ಸ್ ರೋಗಿಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿದ ಪ್ರಪ್ರಥಮ ತಂಡವಾಗಿದೆ. 68-ವರ್ಷ ವಯಸ್ಸಿನ ರೋಗಿ ಒಂದು ದಶಕಕ್ಕಿಂತ ಹೆಚ್ಚಿನ ಕಾಲದಿಂದ ಪಾರ್ಕಿನ್ಸನ್ಸ್‌ನಿಂದ ಬಳಲುತ್ತಿದ್ದರು. ಈ ಪರಿಸ್ಥಿತಿ ಅವರ ಚಲನೆಯನ್ನು ಮಿತಗೊಳಿಸಿ, ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸವಾಲೊಡ್ಡುತ್ತಿತ್ತು. ರೋಗಿಯ ಕುಟುಂಬದವರಿಗೂ ಅವರನ್ನು ನೋಡಿಕೊಳ್ಳುವುದು ಸವಾಲಾಗಿತ್ತು. NeuroSmartTM ನಲ್ಲಿರುವ ಹೊಸ ಆವಿಷ್ಕಾರಗಳ ಪ್ರಭಾವದೊಂದಿಗೆ, ಈ ರೋಗಿಯ ಅನಿಯಂತ್ರಿತ ಲಕ್ಷಣಗಳನ್ನು, ಕನಿಷ್ಠ ಅಡ್ಡಪರಿಣಾಮಗಳೊಂದಿಗೆ ನಿರ್ವಹಿಸಲು ವೈದ್ಯರಿಗೆ ಸಾಧ್ಯವಾಯಿತು.

“ಈ ತಂತ್ರಜ್ಞಾನ ಒಂದು ಆಟ-ಬದಲಾಯಿಸುವ ತಂತ್ರಜ್ಞಾನವಾಗಿದೆ. ಎಐ ಮತ್ತು ವಾಸ್ತವ-ಸಮಯ ಫೀಡ್‌ಬ್ಯಾಕ್ ಇರುವುದೆಂದರೆ, ಈ ಹೊಸ MER ನ್ಯಾವಿಗೇಶನ್ ಸಿಸ್ಟಮ್, ಡಿಬಿಎಸ್ ಕಾರ್ಯವಿಧಾನಗಳ ಸಮಯದಲ್ಲಿ, ಮಿದುಳಿನ ರಚನೆಗಳನ್ನು ಗುರಿಯಿರಿಸುವ ನಮ್ಮ ದೃಷ್ಟಿಕೋನವನ್ನು ಕ್ರಾಂತಿಕಾರಕಗೊಳಿಸಿದೆ ಎಂದರ್ಥ. ಈ ಆಧುನೀಕರಣವು, ನಮ್ಮ ನಿಖರತೆಯನ್ನು ಗಣನೀಯವಾಗಿ ವರ್ಧಿಸಿ, ಹಿಂದೆಂದೂ ಕಂಡಿರದ ನಿಖರತೆಯೊಂದಿಗೆ ಚಿಕಿತ್ಸೆಯನ್ನು ಅಗತ್ಯಕ್ಕೆ ತಕ್ಕಂತೆ ಅನುವುಗೊಳಿಸಲು ನಮಗೆ ನೆರವಾಗುತ್ತದೆ ಎಂದು ಡಾ. ರಘುರಾಮ್ ಜಿ ಹೇಳಿದರು.

ಡಾ. ಗುರುಪ್ರಸಾದ್ ಹೊಸೂರ್ಕರ್ ಮಾತನಾಡಿದ, “ಡಿಬಿಎಸ್ ಚಿಕಿತ್ಸೆಯು, ಒಂದು ಪರಿವರ್ತನಾತ್ಮಕ ಪರಿಹಾರವಾಗಿದ್ದು, ವರ್ಧಿತ ಚಲನಾ ಕಾರ್ಯಕ್ಷಮತೆಗೆ ನೆರವಾಗಿ, ರೋಗಿಗಳಿಗೆ ಹೊಸ ಸ್ವಾತಂತ್ರ್ಯ ನೀಡುತ್ತದೆ. ಹೊಸ ಹಾಗ್ಊ ಅತ್ಯಾಧುನಿಕವಾದ ಎಐ-ನೆರವಿನ MER ನ್ಯಾವಿಗೇಶನ್ ಸಿಸ್ಟಮ್ ನಿಖರತೆಯ ಮೂಲಕ, ಎಲೆಕ್ಟ್ರೋಡ್ ಇರಿಸುವಿಕೆಯನ್ನು ಅತ್ಯಂತ ಸ್ಪಷ್ಟತೆಯೊಂದಿಗೆ ಗರಿಷ್ಟೀಕರಿಸಬಹುದಾದ್ದರಿಂದ, ಇದು ರೋಗಿಗಳಿಗೆ ನಡುಕ ಮತ್ತು ಬಿಗಿತ ಮುಂತಾದ ತೀವ್ರತರವಾದ ವೈಕಲ್ಯತೆಯಿಂದ ಶಮನ ನೀಡುತ್ತದೆ.” ಎಂದರು.

ಇದನ್ನೂ ಓದಿ: Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

“ರೋಗಿ ಮತ್ತು ಚಿಕಿತ್ಸಾ ಅನುಭವವಗಳನ್ನು ವರ್ಧಿಸುವ ಗುರಿಯಿರುವ ಮೆಡ್‌ಟ್ರಾನಿಕ್‌ನ ಡಿಬಿಎಸ್‌ನಲ್ಲಿನ ಆವಿಷ್ಕಾರ ಪರಂಪರೆಯು, ಎರಡು ದಶಕಗಳಿಗಿಂತ ಹೆಚ್ಚಿನದು. ನಮ್ಮ ಅತ್ಯಾಧುನಿಕ ಡಿಬಿಎಸ್ ಸಿಸ್ಟಮ್ಸ್, ಕಾರ್ಯವಿಧಾನಾತ್ಮಕ ಯೋಜನೆ ಹಾಗೂ ಪರಿಶೀಲನೆಗಾಗಿ ನಿಖರವಾದ ಡೇಟಾದೊಂದಿಗೆ ಆರೋಗ್ಯಶುಶ್ರೂಷಾ ವೃತ್ತಿಪರರನ್ನು ಸಬಲಗೊಳಿಸುವ ಮೂಲಕ ಶಸ್ತ್ರಚಿಕಿತ್ಸೆ ಕೋಣೆಯಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಮೆಡ್‌ಟ್ರಾನಿಕ್ ಇಂಡಿಯಾದ ನರರೋಗವಿಜ್ಞಾನ ಮತ್ತು ಸ್ಪೆಶಲ್ಟಿ ಚಿಕಿತ್ಸೆಗಳು ವಿಭಾಗದ ಹಿರಿಯ ನಿರ್ದೇಶಕ ಪ್ರತೀಕ್ ತಿವಾರಿ ಹೇಳಿದರು.

Continue Reading

ಕರ್ನಾಟಕ

Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Drought Relief: ಕರ್ನಾಟಕದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಸಕಾಲಕ್ಕೆ ಬಿಡುಗಡೆ ಮಾಡದ ಕಾರಣ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಅದರಂತೆ, ಕೇಂದ್ರ ಸರ್ಕಾರವು ಈಗ ಬರ ಪರಿಹಾರ ಘೋಷಣೆ ಮಾಡಿದೆ.

VISTARANEWS.COM


on

Drought Relief
Koo

ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರವು (Centra Government) ಕೊನೆಗೂ ಬರ ಪರಿಹಾರ (Drought Relief) ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಒಟ್ಟು 3,454 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಕರ್ನಾಟಕ ಸರ್ಕಾರಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. 18,171 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಈಗ ಕೇಂದ್ರ ಸರ್ಕಾರವು ಪರಿಶೀಲನೆ ನಡೆಸಿ 3,454 ಕೋಟಿ ರೂ. ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಸಕಾಲಕ್ಕೆ ಬಿಡುಗಡೆ ಮಾಡದ ಕಾರಣ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಅದರಂತೆ, ಕೇಂದ್ರ ಸರ್ಕಾರವು ಈಗ ಬರ ಪರಿಹಾರ ಘೋಷಣೆ ಮಾಡಿದೆ. ಹಾಗೆಯೇ, ನೆರೆ ರಾಜ್ಯವಾದ ತಮಿಳುನಾಡಿಗೆ 275 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ ಮಾಡಿದೆ.

ಬರ ಪರಿಹಾರ ನೀಡಲು ಒಂದು ವಾರ ಬೇಕು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. “ಒಂದು ವಾರದಲ್ಲಿ ಬರ ಪರಿಹಾರದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ, ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ಒಂದು ವಾರ ಸಮಯಾವಕಾಶ ನೀಡಬೇಕು” ಎಂದು ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಏಪ್ರಿಲ್‌ 29ಕ್ಕೆ ವಿಚಾರಣೆ ಮುಂದೂಡಿತ್ತು. ಈಗ ವಿಚಾರಣೆಗೂ ಮೊದಲೇ ಬರ ಪರಿಹಾರ ಬಿಡುಗಡೆ ಮಾಡಿದೆ.

ಕರ್ನಾಟಕಕ್ಕೆ ಬರ ಪರಿಹಾರ ವಿತರಣೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ತೀವ್ರ ಜಟಾಪಟಿ ಉಂಟಾಗಿತ್ತು. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡಿತ್ತು. ತೆರಿಗೆ ಪಾಲು ನೀಡದ ಕೇಂದ್ರ ಸರ್ಕಾರವು ಬರ ಪರಿಹಾರವನ್ನೂ ನೀಡದೆ ಅನ್ಯಾಯ ಮಾಡುತ್ತಿದೆ. ಇನ್ನಾದರೂ ಬರ ಪರಿಹಾರ ನೀಡಬೇಕು ಎಂಬುದಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಆಗ್ರಹಿಸಿತ್ತು. ಕೊನೆಗೆ ನಮಗೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂಬುದಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು ಎಂದಿತ್ತು. “ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು. ಎರಡು ವಾರಗಳಲ್ಲಿ ಬರ ಪರಿಹಾರದ ಕುರಿತು ಉತ್ತರ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಎಂದಿಗೂ ಸ್ಪರ್ಧೆ ಇರಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಇತ್ತೀಚೆಗೆ ಹಲವು ರಾಜ್ಯ ಸರ್ಕಾರಗಳು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿವೆ. ಇಂತಹ ಬೆಳವಣಿಗೆಗಳು ಸರಿಯಲ್ಲ” ಎಂದು ತಿಳಿಸಿತ್ತು.

ಇದನ್ನೂ ಓದಿ: Drought Relief: ಬರ ಪರಿಹಾರ ನೀಡಲು ಕೇಂದ್ರ ಒಪ್ಪಿಗೆ; ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಎಂದ ಸಿಎಂ

Continue Reading

ಕಲಬುರಗಿ

Road Accident : ಲಾರಿ- ಬೈಕ್‌ ಅಪಘಾತ; ಪತ್ನಿ ಕಣ್ಣೇದುರೇ ಒದ್ದಾಡಿ ಪ್ರಾಣಬಿಟ್ಟ ಪತಿ

Road Accident : ಆ ದಂಪತಿ ಪುಣೆಯಿಂದ ಯಾದಗಿರಿಗೆ ಬೈಕ್‌ನಲ್ಲಿ ಹೊರಟಿದ್ದರು. ಆದರೆ ಯಮರೂಪಿಯಾಗಿ ಬಂದ ಲಾರಿಯು ಬೈಕ್‌ ಸವಾರನ ಪ್ರಾಣವನ್ನೇ ಕಸಿದುಕೊಂಡಿದೆ. ಲಾರಿ ಡಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬಂದ ಸವಾರ ಪತ್ನಿ ಕಣ್ಣೇದುರೇ ಒದ್ದಾಡಿ ಪ್ರಾಣಬಿಟ್ಟಿದ್ದಾನೆ.

VISTARANEWS.COM


on

By

Road Accident in kalaburagi
Koo

ಕಲಬುರಗಿ: ಬೆಳಗಿನ ಜಾವ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬೈಕ್‌ ಸವಾರ ದಾರುಣವಾಗಿ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಢೋಗಿ ನಾಲಾ ಬಳಿ‌ ಲಾರಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ.

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಬೈಕ್ ಸವಾರ ಅರ್ಜುನ್ ಎಂಬಾತ ಮೃತಪಟ್ಟಿದ್ದಾರೆ. ಅರ್ಜುನ್‌ ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದ ನಿವಾಸಿಯಾಗಿದ್ದಾರೆ. ಅರ್ಜುನ್‌ ತಮ್ಮ ಪತ್ನಿ ಜತೆಗೆ ಬೆಳಗಿನ ಜಾವ ಪುಣೆಯಿಂದ ಯಾದಗಿರಿ ಕಡೆ ಬೈಕ್ ಮೇಲೆ ಹೊರಟಿದ್ದರು.

ಈ ವೇಳೆ ವೇಗವಾಗಿ ಬಂದ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಬೈಕ್‌ನಿಂದ ಎಗರಿ ಬಿದ್ದಾಗ ಅರ್ಜುನ್‌ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಜತೆಯಲ್ಲಿದ್ದ ಅರ್ಜುನ್‌ ಪತ್ನಿಗೂ ಗಾಯವಾಗಿದ್ದು, ಪತಿ ಒದ್ದಾಡಿ ಸಾವನ್ನಪ್ಪಿದ್ದು ಕಂಡು ಆಘಾತಕ್ಕೆ ಒಳಗಾಗಿದ್ದರು.

ಕೂಡಲೇ ಅಲ್ಲಿದ್ದ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ನರೋಣಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಪುಡಿ ಪುಡಿಯಾಗಿದ್ದ ಬೈಕ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Public Exam: ಇನ್ನು ಮುಂದೆ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆ ? ಪರಿಶೀಲನೆಗೆ ಸಿಬಿಎಸ್‌ಇಗೆ ಸೂಚನೆ

Anjali Nimbalkar: ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ನೆರವಾದ ಅಂಜಲಿ ನಿಂಬಾಳ್ಕರ್

ಕಾರವಾರ: ಅಪಘಾತದಲ್ಲಿ (Road Accident) ಗಾಯಗೊಂಡು ರಸ್ತೆ ಬದಿ ನರಳುತ್ತ ಬಿದ್ದಿದ್ದ ಯುವಕನನ್ನು ತಮ್ಮದೇ ಕಾರಿನಲ್ಲಿ ಉತ್ತರ ಕನ್ನಡ ಲೋಕಸಭೆ ಚುನಾವಣಾ ಅಭ್ಯರ್ಥಿ (Uttara Kannada lok sabha election candidate) ಅಂಜಲಿ ನಿಂಬಾಳ್ಕರ್‌ (Anjali Nimbalkar) ಆಸ್ಪತ್ರೆಗೆ ಸಾಗಿಸಿ ಮಾನವೀಯತೆ (Humanity) ಮೆರೆದಿದ್ದಾರೆ.

ಉತ್ತರ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಯಲ್ಲಾಪುರ- ಶಿರಸಿ ನಡುವೆ ಪ್ರಯಣಿಸುತ್ತಿದ್ದಾಗ, ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಯುವಕನನ್ನು ಗಮನಿಸಿದ್ದರು. ವಿನಾಯಕ್ ಶೆಟ್ಟರ್ ಎಂಬ ಯುವಕ ಬೈಕ್‌ ಸ್ಕಿಡ್‌ ಆಗಿ ಬಿದ್ದು ಗಾಯಗೊಂಡಿದ್ದರು.

ಹಳಿಯಾಳದಿಂದ ಶಿರಸಿಗೆ ಹೋಗುವಾಗ ಯುವಕನನ್ನು ಗಮನಿಸಿದ ಅಂಜಲಿ ನಿಂಬಾಳ್ಕರ್, ಕಾರು ನಿಲ್ಲಿಸಿ ಗಾಯಗೊಂಡವನನ್ನು ಪರಿಶೀಲಿಸಿದರು. ಸ್ವತಃ ವೈದ್ಯೆಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಸೂಕ್ತ ಪ್ರಥಮ ಉಪಚಾರ ನೀಡಿ ತಕ್ಷಣ ಯುವಕನನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆಯಲ್ಲೂ ಚಿಕಿತ್ಸೆ ವೇಳೆ ಸಿಬ್ಬಂದಿಯೊಂದಿಗಿದ್ದು ನೆರವು ನೀಡಿದರು. ಶಿರಸಿಯ ಪಂಡಿತ್ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಬಿಜೆಪಿಯ ಭದ್ರಕೋಟೆಯನ್ನು ಒಡೆಯುವೆ: ಅಂಜಲಿ

ಅಂಕೋಲಾ: ಜಾತಿ- ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಬಿಜೆಪಿಗರು ಉತ್ತರ ಕನ್ನಡದ ಹೆಸರು ಕೆಡಿಸಿರುವುದನ್ನು ಸರಿಪಡಿಸಲು ನಮಗೆ ಈ ಬಾರಿ ಉತ್ತಮ ಅವಕಾಶವಿದೆ. ನಾನು ಈ ಜಿಲ್ಲೆಯವಳಲ್ಲ ಎನ್ನುವ ಬಿಜೆಪಿಗರು ಕೂಡ ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇಬೇಕು. ಬಹುಶಃ ಅವರಿಗೆ ಖಾನಾಪುರ ಬ್ಲಾಕ್ ಎಲ್ಲಿದೆ ಎನ್ನುವುದೂ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅಲ್ಲಿಗೆ ಅವರು ಬರುವುದೇ ಅಪರೂಪ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ (Uttara Kannada News) ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ವ್ಯಂಗ್ಯವಾಡಿದರು.

ಅಂಕೋಲಾದ ನಾಡವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ 30 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ ಎಂದು ಹೇಳುತ್ತಾರೆ. ಆದರೆ ಈಗ ಪ್ರತಿ ಕಾರ್ಯಕರ್ತರೂ “ನಾನೇ ಅಂಜಲಿ ನಿಂಬಾಳ್ಕರ್ʼ ಎಂಬಂತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಈ ಭದ್ರಕೋಟೆಯನ್ನು ಒಡೆಯಲು ಹೆಚ್ಚೇನೂ ಶ್ರಮ ಬೇಕಿಲ್ಲವೆಂದೆನಿಸುತ್ತಿದೆ. ರಾಜಕೀಯ ನನಗೆ ಹೊಸದಲ್ಲ. ಖಾನಾಪುರದಲ್ಲಿ ಕೇವಲ ಮಹಿಳೆಯರಿಗಾಗಿ ಎಂಸಿಎಚ್ ಆಸ್ಪತ್ರೆ ಕಟ್ಟಿದ್ದೇನೆ. ಕಾಡುಪ್ರದೇಶದಲ್ಲಿ ಅಂಥದ್ದೊಂದು ಆಸ್ಪತ್ರೆ ಕಟ್ಟಿಸಬೇಕೆಂಬುದು ನನ್ನ ಕನಸಾಗಿತ್ತು. ಬಿಜೆಪಿ ಸರ್ಕಾರವಿದ್ದರೂ ಅಂಥ ದೊಡ್ಡ ಆಸ್ಪತ್ರೆ ಕಟ್ಟಿ ತೋರಿಸಿದ್ದೀನಿ. ಜಿಲ್ಲೆಯಲ್ಲೂ ಸುಸಜ್ಜಿತ ಆಸ್ಪತ್ರೆ ಆಗಬೇಕೆಂಬ ಆಸೆ ಇಲ್ಲಿಯ ಜನರದ್ದಿದೆ. ಅದನ್ನು ಮಾಡಲು ಪ್ರಯತ್ನಿಸೋಣʼʼ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Food Poisoning: ಹಾಸ್ಟೆಲ್‌ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥ

Food Poisoning: ನಿನ್ನೆ ಮಧ್ಯಾಹ್ನದ ಊಟಕ್ಕೆ ಹಾಸ್ಟೆಲ್‌ ಸಿಬ್ಬಂದಿ ಚಪಾತಿ, ಅನ್ನ ಮತ್ತು ಸಾಂಬಾರು ವಿತರಿಸಿದ್ದರು. ಊಟವಾದ ನಂತರ ಹೊಟ್ಟೆ ನೋವು, ತಲೆ ಸುತ್ತುವಿಕೆಯಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದಾರೆ. ಅಸ್ವಸ್ಥ ವಿದ್ಯಾರ್ಥಿನಿಯರನ್ನು ತಡರಾತ್ರಿಯೇ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

VISTARANEWS.COM


on

food poisoning raichur news
Koo

ರಾಯಚೂರು: ಹಾಸ್ಟೆಲ್‌ನಲ್ಲಿ ತಯಾರಿಸಲಾದ ಊಟ ಸೇವಿಸಿ 24ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ (Food poisoningw) ಘಟನೆ ರಾಯಚೂರು (Raichur news) ಜಿಲ್ಲೆಯ ಸಿಂಧನೂರು ಬಿಸಿಎಂ ಹಾಸ್ಟೆಲ್‌ನಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನದ ಊಟವನ್ನು ಸೇವಿಸಿದ ಬಳಿಕ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ನಿನ್ನೆ ಮಧ್ಯಾಹ್ನದ ಊಟಕ್ಕೆ ಹಾಸ್ಟೆಲ್‌ ಸಿಬ್ಬಂದಿ ಚಪಾತಿ, ಅನ್ನ ಮತ್ತು ಸಾಂಬಾರು ವಿತರಿಸಿದ್ದರು. ಊಟವಾದ ನಂತರ ಹೊಟ್ಟೆ ನೋವು, ತಲೆ ಸುತ್ತುವಿಕೆಯಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದಾರೆ. ಅಸ್ವಸ್ಥ ವಿದ್ಯಾರ್ಥಿನಿಯರನ್ನು ತಡರಾತ್ರಿಯೇ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಆದರೆ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರು ಇಲ್ಲದ ಕಾರಣ ಅಸ್ವಸ್ಥ ವಿದ್ಯಾರ್ಥಿನಿಯರು ಪರದಾಟ ಅನುಭವಿಸಬೇಕಾಯಿತು. ಬಳಿಕ ಟಿಎಚ್‌ಓಗೆ ಕರೆ ಮಾಡಿ ಹಾಸ್ಟೆಲ್ ಸಿಬ್ಬಂದಿ ಮಾಹಿತಿ ತಿಳಿಸಿದ್ದರು. ಒಂದು ಗಂಟೆ ತಡವಾಗಿ ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 240ಕ್ಕೂ ಹೆಚ್ಚು ಪದವಿಧರ ವಿದ್ಯಾರ್ಥಿನಿಯರು ಇರುವ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ಇದಾಗಿದೆ.

ಮತದಾನ ಮುಗಿಸಿ ತೆರಳುತ್ತಿದ್ದಾಗ ಅಪಘಾತ, ಇಬ್ಬರು ಸಾವು

ಮೈಸೂರು: ಮತದಾನ ಮಾಡಿ ತೆರಳುತ್ತಿದ್ದ ವೇಳೆ ಅಪಘಾತ (Bike Accident) ನಡೆದು ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಂಜನಗೂಡು ತಾಲೂಕಿನ ತಾಂಡವಪುರ ಬಳಿ ನಡೆದಿದೆ. ಪಾದಚಾರಿಗೆ ಬೈಕ್‌ ಡಿಕ್ಕಿ ಹೊಡೆದಿದ್ದರಿಂದ ಪಾದಚಾರಿ ಮತ್ತು ಬೈಕ್‌ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಿವಣ್ಣ (40) ಹಾಗೂ ಬೈಕ್ ಸವಾರ ಮಿಥುನ್(19) ಮೃತ ದುರ್ದೈವಿಗಳು. ಮತ್ತೊಬ್ಬ ಸವಾರ ಅನಿಲ್ ಪಟೇಲ್ ಗಾಯಾಳು. ಶಿವಣ್ಣ ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ವೇಗವಾಗಿ ಬಂದ ಯುವಕರು, ನಡೆದು ತೆರಳುತ್ತಿದ್ದ ಶಿವಣ್ಣಗೆ ಡಿಕ್ಕಿ ಹೊಡೆದಿದ್ದರಿಂದ ಶಿವಣ್ಣ ಹಾಗೂ ಮಿಥುನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident: ಕಾರು ಟಯರ್‌ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

ತುಮಕೂರು: ಚುನಾವಣೆ (Lok sabha Election 2024) ಸಂಬಂಧಿತ ಗಲಾಟೆ ಸಂಭವಿಸಿದ ಬಳಿಕ ವಾಟರ್ ಮ್ಯಾನ್ (Water man) ಒಬ್ಬರು ಅನುಮಾನಾಸ್ಪದವಾಗಿ (UDR Case, unnatural death) ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಿಚ್ಚೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಂದ್ರಪ್ಪ (56) ಮೃತ ವಾಟರ್ ಮ್ಯಾನ್. ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು “ನೀನು ಬಿಜೆಪಿ ಪರವಾಗಿ ಕೆಲಸ‌ ಮಾಡ್ತಿಯಾ?” ಎಂದು ಈತನ ಮೇಲೆ ಹಲ್ಲೆ (Assault case) ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನೇಣು ಬಿಗಿದ (Self Harming) ಸ್ಥಿತಿಯಲ್ಲಿ ಚಂದ್ರಪ್ಪ ಶವ ಪತ್ತೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ನಟೇಶ್, ರವೀಶ್, ವೆಂಕಟೇಶ, ಸಂತೋಷ ನಿನ್ನೆ ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಧರಣಿ

ಬೈಲಹೊಂಗಲ: ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ (Bus driver Attacked) ನಡೆದಿದೆ. ಆಕ್ರೋಶಗೊಂಡ ಸಾರಿಗೆ ನೌಕರರು ಬೈಲಹೊಂಗಲ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಧಾರವಾಡದಿಂದ ಬೈಲಹೊಂಗಕ್ಕೆ ಮುಸ್ಲಿಂ ಯುವಕರು ಬಂದಿದ್ದರು. ಬಸ್​​ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿತ್ತು. ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗುಂಪುಕಟ್ಟಿ ಹಲ್ಲೆ ನಡೆಸಿದ್ದರು. ಬೇಸತ್ತ ಚಾಲಕರು ವೃತ್ತಿಯ ವೇಳೆ ಸುರಕ್ಷತೆ ನೀಡಿ ಧರಣಿ ಮಾಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿರುವ ಸಾರಿಗೆ ಮೇಲಧಿಕಾರಿಗಳು ಬಂದು ಮಾತು ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ: Drunken Driving: ಎರ‍್ರಾಬಿರ‍್ರಿ ಟಿಪ್ಪರ್ ಚಲಾಯಿಸಿ ಪಾದಚಾರಿಯನ್ನು ಕೊಂದ ಪಾನಮತ್ತ

Continue Reading
Advertisement
Dhanush Gowda Wedding With Sanjana Photos
ಕಿರುತೆರೆ27 seconds ago

Dhanush Gowda:  ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಗೀತಾʼ ಧಾರಾವಾಹಿ ನಟ

ಕರ್ನಾಟಕ12 mins ago

Parkinson’s disease: ಪಾರ್ಕಿನ್ಸನ್ ರೋಗಿಗಳಲ್ಲಿ ಡಿಬಿಎಸ್ ಚಿಕಿತ್ಸೆಗಾಗಿ ಹೊಸ ತಂತ್ರಜ್ಞಾನ- ಇದು ದೇಶದಲ್ಲೇ ಮೊದಲು

Drought Relief
ಕರ್ನಾಟಕ16 mins ago

Drought Relief: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

IRCTC Jyotirlinga Yatra
ಪ್ರವಾಸ18 mins ago

IRCTC Jyotirlinga Yatra: ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ವೀಕ್ಷಣೆ ಪ್ರವಾಸ; ದರ ವಿವರ ಇಲ್ಲಿದೆ

Viral Video
ವೈರಲ್ ನ್ಯೂಸ್18 mins ago

Fact Check: ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮಹಿಳೆ ಅಲ್ಲವೆ?

Road Accident in kalaburagi
ಕಲಬುರಗಿ20 mins ago

Road Accident : ಲಾರಿ- ಬೈಕ್‌ ಅಪಘಾತ; ಪತ್ನಿ ಕಣ್ಣೇದುರೇ ಒದ್ದಾಡಿ ಪ್ರಾಣಬಿಟ್ಟ ಪತಿ

food poisoning raichur news
ಕ್ರೈಂ21 mins ago

Food Poisoning: ಹಾಸ್ಟೆಲ್‌ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥ

Anupama Parameswaran Paradha next
ಟಾಲಿವುಡ್45 mins ago

Anupama Parameswaran: ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್‌: ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ!

PU Board exam girl writing exam
ಪ್ರಮುಖ ಸುದ್ದಿ1 hour ago

Public Exam: ಇನ್ನು ಮುಂದೆ ವರ್ಷಕ್ಕೆರಡು ಬಾರಿ ಬೋರ್ಡ್‌ ಪರೀಕ್ಷೆ ? ಪರಿಶೀಲನೆಗೆ ಸಿಬಿಎಸ್‌ಇಗೆ ಸೂಚನೆ

ಕ್ರೈಂ2 hours ago

Child Welfare commission: ಅಕ್ರಮವಾಗಿ ಸಾಗಿಸುತ್ತಿದ್ದ 95 ಮುಸ್ಲಿಂ ಮಕ್ಕಳ ರಕ್ಷಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ23 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202424 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

ಟ್ರೆಂಡಿಂಗ್‌