fire accident Fire breaks out near vijaya vittala temple in hampiFire Accident: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇಗುಲದ ಸಮೀಪ ಅಗ್ನಿ ಅವಘಡ - Vistara News

ಕರ್ನಾಟಕ

Fire Accident: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇಗುಲದ ಸಮೀಪ ಅಗ್ನಿ ಅವಘಡ

ಬೇಸಿಗೆ ಶುರುವಾಗುತ್ತಿದ್ದಂತೆಯೇ ಅಗ್ನಿ ಅವಘಡಗಳು ಹೆಚ್ಚಾಗುತ್ತಿದೆ. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಇರುವ ಬಜಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯನಗರ: ಇಲ್ಲಿನ ವಿಶ್ವವಿಖ್ಯಾತ ದಕ್ಷಿಣ ಕಾಶಿ ಹಂಪಿಯ (Hampi) ವಿಜಯ ವಿಠ್ಠಲ ದೇವಸ್ಥಾನದ ಸ್ಮಾರಕದ ಬಳಿ ಏಕಾಏಕಿ ಬೆಂಕಿ (Fire Accident) ಕಾಣಿಸಿಕೊಂಡು ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದರು. ಸ್ಮಾರಕದ ಸುತ್ತಮುತ್ತ ಒಣಹುಲ್ಲು ಇರುವುದರಿಂದ ತಾಪಮಾನ ಹೆಚ್ಚಳವಾಗಿದೆ. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದೆಯೇ ಅಥವಾ ಯಾರಾದರೂ ಬೆಂಕಿ ಹಾಕಿದ್ದಾರೆಯೇ ಎಂಬ ಸಂಶಯ ಉಂಟಾಗಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ

ಘಟನೆಯಲ್ಲಿ ಯಾವುದೇ ಸ್ಮಾರಕಕ್ಕೆ ಹಾನಿಯಾಗಿಲ್ಲ. ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಂಪಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Boat Capsizes: ಭಾರೀ ಗಾಳಿ ಮಳೆಗೆ ಅರಬ್ಬೀ ಸಮುದ್ರದಲ್ಲಿ ಬೋಟ್‌ ಮುಳುಗಡೆ, ನಾಲ್ವರ ರಕ್ಷಣೆ; ಇಲ್ಲಿದೆ ವಿಡಿಯೋ

Boat Capsizes: ಇಂದು ಬೆಳಿಗ್ಗೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅರಬ್ಬೀ ಸಮದ್ರದಲ್ಲಿ ಕಾಣಿಸಿಕೊಂಡ ಭಾರೀ ಗಾಳಿ ಮಳೆಗೆ ಬೋಟ್ ಪಲ್ಟಿಯಾಗಿದೆ.

VISTARANEWS.COM


on

boat capsizes in bhatkal
Koo

ಕಾರವಾರ: ಅರಬ್ಬೀ ಸಮುದ್ರದಲ್ಲಿ (arabian sea) ಭಾರಿ ಗಾಳಿ ಮಳೆಯಿಂದಾಗಿ ಒಂದು ಮೀನುಗಾರಿಕಾ ಬೋಟ್ (Fishing boat capsizes) ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 4 ಮಂದಿ ಮೀನುಗಾರರನ್ನು (fishermen) ರಕ್ಷಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಾದೇವ ಖಾರ್ವಿ ಎಂಬವರ ಮಾಲಕತ್ವದ ಓಂ ಮಹಾಗಣಪತಿ ಹೆಸರಿನ ಬೋಟ್ ಮುಳುಗಡೆಯಾಗಿದೆ.

ಇಂದು ಬೆಳಿಗ್ಗೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅರಬ್ಬೀ ಸಮದ್ರದಲ್ಲಿ ಕಾಣಿಸಿಕೊಂಡ ಭಾರೀ ಗಾಳಿ ಮಳೆಗೆ ಬೋಟ್ ಪಲ್ಟಿಯಾಗಿದೆ. ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನವರಿಂದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಬೋಟ್ ದುರ್ಘಟನೆಯಿಂದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಇಂದು ಉತ್ತರಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಭಾರೀ ಗಾಳಿ ಮಳೆ ಪ್ರಾರಂಭಗೊಂಡಿದೆ. ಸಮುದ್ರಕ್ಕೆ ತೆರಳುವವರಿಗೆ ಜಿಲ್ಲಾಡಳಿತ ಈ ಕುರಿತು ಅಲರ್ಟ್‌ ನೀಡಿದೆ.

ದೋಣಿ ಮುಳುಗಿ ಇಬ್ಬರು ಸಾವು, 7 ಮಂದಿ ನಾಪತ್ತೆ

ಭುವನೇಶ್ವರ:‌ ಒಡಿಶಾದ ಜಾರ್ಸುಗುಡ ಜಿಲ್ಲೆಯ ಮಹಾನದಿ ನದಿ (Mahanadi River)ಯಲ್ಲಿ ಶುಕ್ರವಾರ (ಏಪ್ರಿಲ್‌ 19) ದುರಂತವೊಂದು ಸಂಭವಿಸಿದೆ. ದೋಣಿ ಮಗುಚಿ ಬಿದ್ದ (Boat Capsizes) ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 50 ಪ್ರಯಾಣಿಕರನ್ನು ಹೊತ್ತ ದೋಣಿ ಪಥರ್ಸೇನಿ ಕುಡಾದಿಂದ ಬಾರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಜಾರ್ಸುಗುಡ ಜಿಲ್ಲೆಯ ರೆಂಗಲಿ ಪೊಲೀಸ್ ಠಾಣೆಯ ಶಾರದಾ ಘಾಟ್ ತಲುಪುತ್ತಿದ್ದಾಗ ದೋಣಿ ಮಗುಚಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಮೀನುಗಾರರು 35 ಪ್ರಯಾಣಿಕರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಇನ್ನೂ ಏಳು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಇತರ ಏಳು ಪ್ರಯಾಣಿಕರು ಇನ್ನೂ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪರಿಹಾರ ಘೋಷಣೆ

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಘೋಷಿಸಿದ್ದಾರೆ. ಜತೆಗೆ ಐದು ಡೈವರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಜಮ್ಮು-ಕಾಶ್ಮೀರದ ಜೇಲಂ ನದಿಯಲ್ಲಿ ದೋಣಿಯೊಂದು ಮುಳುಗಿ, ನಾಲ್ವರು ಶಾಲಾ ಮಕ್ಕಳು ಜಲಸಮಾಧಿಯಾಗಿದ್ದರು. ಈ ಘಟನೆ ಹಸಿಯಾಗಿರುವಾಗಲೇ ಇಂದೂ ಅಂತಹದ್ದೇ ದುರಂತ ಸಂಭವಿಸಿದೆ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜೇಲಂ ನದಿಯು ಉಕ್ಕಿ ಹರಿಯುತ್ತಿತ್ತು. ಶಾಲಾ ಮಕ್ಕಳು ಸೇರಿ ಹಲವರು ಇದ್ದ ದೋಣಿಯು ತುಂಬಿದ ನದಿಯಲ್ಲಿ ಶ್ರೀನಗರದ ಗಂಡ್ಬಾಲ್‌ನಿಂದ ಬಟ್ವಾರದವರೆಗೆ ಚಲಿಸುತ್ತಿತ್ತು. ಇದೇ ವೇಳೆ ದೋಣಿ ಮಗುಚಿತ್ತು.

ಇದನ್ನೂ ಓದಿ: ಹಡಗು ಮುಳುಗಿ 94 ಜನರ ದುರ್ಮರಣ, 26 ಮಂದಿ ನಾಪತ್ತೆ; ಕಾಲರಾ ಭೀತಿ ತೆಗೆಯಿತು ಪ್ರಾಣ!

Continue Reading

ಪ್ರಮುಖ ಸುದ್ದಿ

PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

PM Narendra Modi: ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರು ಕ್ರಮ ಜರುಗಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ.

VISTARANEWS.COM


on

Modi In Karnataka
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ಅರಮನೆಗೆ ಮೈದಾನಕ್ಕೆ (Palace ground) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಆಗಮಿಸಲಿದ್ದು, ಹಲವಾರು ಪ್ರಮುಖ ರಸ್ತೆಗಳ ಸಂಚಾರ ಬದಲಾವಣೆ (Traffic Change) ಮಾಡಲಾಗಿದೆ. ಸಾರ್ವಜನಿಕರು ಇದನ್ನು ಗಮನಿಸುವಂತೆ ಟ್ರಾಫಿಕ್‌ ಇಲಾಖೆ (traffic police) ಸೂಚಿಸಿದೆ.

ಮೋದಿ ನಗರ ಭೇಟಿಯ ವೇಳೆ ಅಹಿತಕರ ಘಟನೆ ಆಗದಂತೆ ನಗರ ಪೊಲೀಸರು ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಬಂದೋಬಸ್ತ್​​ಗಾಗಿ‌ ಎರಡು ಸಾವಿರ ಪೊಲೀಸರ ನಿಯೋಜನೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದಲ್ಲಿ ಭದ್ರತೆ ನಿಯೋಜನೆಗೊಂಡಿದೆ. ಸಮಾವೇಶ ನಡೆಯುವ ಅರಮನೆ ಮೈದಾನ, ಹೆಲಿಪ್ಯಾಡ್, ಮೇಕ್ರಿ ಸರ್ಕಲ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ‌‌‌.

ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದು, ಮೇಕ್ರಿ ಸರ್ಕಲ್‌ನಲ್ಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆ ಸರ್ಕಲ್‌ನಲ್ಲಿ ಹೆಚ್ಚುವರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೇಕ್ರಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶವಿಲ್ಲ. ಪ್ರತಿಭಟನೆ ನಡೆಸಲು ಮುಂದಾದರೆ ಕೂಡಲೇ ವಶಕ್ಕೆ ಪಡೆದು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಸಂಚಾರ ವ್ಯತ್ಯಯ

ಸಮಾವೇಶದ ನಂತರ ರಸ್ತೆ ಮಾರ್ಗವಾಗಿ ಮೋದಿ ಹೆಚ್.ಎ .ಎಲ್. ತಲುಪಲಿರುವರು. ಹೆಚ್.ಎ.ಎಲ್ ಮಾರ್ಗದಲ್ಲೂ ಕೂಡ ಹೆಜ್ಜೆ ಹಜ್ಜೆಗೆ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ. ಇದೇ ವೇಳೆ, ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರು ಕ್ರಮ ಜರುಗಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ.

ಪ್ಯಾಲೇಸ್ ರಸ್ತೆ, ಜಯಮಹಲ್, ರಮಣಮಹರ್ಷಿ ರಸ್ತೆ, ಮೌಂಟ್ ಕಾರ್ಮೆಲ್ ರಸ್ತೆ, ಜಯರಾಮ್ ರಸ್ತೆ, ಸಿ ವಿ ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಮೇಕ್ರಿ ಸರ್ಕಲ್, ವಸಂತನಗರ, ಬಳ್ಳಾರಿ ರಸ್ತೆ ಮತ್ತು ತರಳಬಾಳು ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧವಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸರಕು ಸಾಗಣೆ ವಾಹನಗಳಕ್ಕೆ ನಿರ್ಬಂಧ ಹೇರಲಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಸಿಎಂಐಟಿ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಬಿಹೆಚ್ಇಎಲ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ಬಸವೇಶ್ವರ ಜಂಕ್ಷನ್ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.

ಬೆಂಗಳೂರಿನ ಅರಮನೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮೊದಲು ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಅಲ್ಲಿಯೂ ಸಹ ಬಿಗಿ ಪೊಲೀಸ್​ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉಭಯ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: Modi in Karnataka: ರಾಜ್ಯದಲ್ಲಿಂದು ಮೋದಿ ಮೋಡಿ; ಚಿಕ್ಕಬಳ್ಳಾಪುರದಲ್ಲಿ ಬೃಹತ್‌ ಸಮಾವೇಶ, ಬೆಂಗಳೂರಲ್ಲಿ ರೋಡ್‌ ಶೋ

Continue Reading

ಕ್ರೈಂ

Rowdy Sheeters: ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಮಚ್ಚು ಲಾಂಗ್, ಬೀದಿಯಲ್ಲೇ ಅಟ್ಟಾಡಿಸಿದರು!

Rowdy Sheeters: ಹಳೇ ದ್ವೇಷ ಹಿನ್ನೆಲೆಯಲ್ಲಿ ಬೈಯ್ಯಪ್ಪನಹಳ್ಳಿ ರೌಡಿಶೀಟರ್ ಶಿವ ಟೀಂನಿಂದ ಪ್ಲಾನ್‌ ಮಾಡಿ ಅಟ್ಯಾಕ್ ಮಾಡಲಾಗಿದೆ. ಅಟ್ಯಾಕ್ ಆಗುತ್ತಿದ್ದಂತೆ ಯಾರ ಕೈಗೂ ಸಿಗದೇ ತಿಪ್ಪಸಂದ್ರ ಮಾರ್ಕೆಟ್‌ಗೆ ನುಗ್ಗಿ ಜೋಶ್ವಾ ಎಸ್ಕೇಪ್ ಆಗಿದ್ದಾನೆ.

VISTARANEWS.COM


on

rowdy sheeters attack bangalore
Koo

ಬೆಂಗಳೂರು: ರಾಜಧಾನಿ ನಗರದಲ್ಲಿ ಬೀದಿ ರೌಡಿಗಳಿಗೆ (Rowdy sheeters) ಯಾವ ಕಾನೂನಿನ ಕಟ್ಟುಪಾಡೂ ಇಲ್ಲದಾಗಿದೆ ಎಂಬುದಕ್ಕೆ ಇನ್ನೊಂದು ನಿದರ್ಶನ ಲಭ್ಯವಾಗಿದೆ. ನಗರದಲ್ಲಿ ಮತ್ತೆ ಮಚ್ಚು ಲಾಂಗುಗಳು ಝಳಪಿಸಿವೆ. ನಡು ರಸ್ತೆಯಲ್ಲೇ ರೌಡಿಗಳ ಗುಂಪು ಇನ್ನೊಬ್ಬ ರೌಡಿಯನ್ನು ಕೊಲೆ ಮಾಡಲೆಂದು ಅಟ್ಯಾಕ್ (Assault Case) ಮಾಡಿದೆ.

ತಿಪ್ಪಸಂದ್ರದದ ಬಳಿ ಯುವಕರ ಗುಂಪಿನಿಂದ ಅಟ್ಯಾಕ್ ನಡೆದಿದ್ದು, ದಾಳಿ ಮಾಡುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಯ್ಯಪ್ಪನಹಳ್ಳಿ ರೌಡಿಶೀಟರ್ ಶಿವ & ಟೀಂನಿಂದ ಅಟ್ಯಾಕ್ ನಡೆದಿದ್ದು, ಜೀವನ್ ಭೀಮಾನಗರ ರೌಡಿಶೀಟರ್ ಜೋಶ್ವಾ ಮೇಲೆ ಡೆಡ್ಲಿ ಅಟ್ಯಾಕ್ ಎಸಗಲಾಗಿದೆ.

ಆದರೆ ಜೋಶ್ವಾ ಇವರ ಕೈಗೆ ಸಿಗದಂತೆ ಪರಾರಿಯಾಗಿದ್ದಾನೆ. ಹಳೇ ದ್ವೇಷ ಹಿನ್ನೆಲೆಯಲ್ಲಿ ಬೈಯ್ಯಪ್ಪನಹಳ್ಳಿ ರೌಡಿಶೀಟರ್ ಶಿವ ಟೀಂನಿಂದ ಪ್ಲಾನ್‌ ಮಾಡಿ ಅಟ್ಯಾಕ್ ಮಾಡಲಾಗಿದೆ. ಅಟ್ಯಾಕ್ ಆಗುತ್ತಿದ್ದಂತೆ ಯಾರ ಕೈಗೂ ಸಿಗದೇ ತಿಪ್ಪಸಂದ್ರ ಮಾರ್ಕೆಟ್‌ಗೆ ನುಗ್ಗಿ ಜೋಶ್ವಾ ಎಸ್ಕೇಪ್ ಆಗಿದ್ದಾನೆ. ಸದ್ಯ ಘಟನೆ ಸಂಬಂಧ ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಮೋದಿ ಹೊಗಳಿ ಹಾಡು ಬರೆದದ್ದಕ್ಕೆ ಹಲ್ಲೆ

ಮೈಸೂರು: ಪ್ರಧಾನಿ ಮೋದಿ ಕುರಿತ ಹಾಡು ಬಿಡುಗಡೆ ಮಾಡಿದ್ದಕ್ಕೆ ಹಿಂದು ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಇದೇ ವೇಳೆ ಪಾಕ್‌ ಪರ ಮತ್ತು ಅಲ್ಲಾಹು ಅಕ್ಬರ್‌ ಎಂದು ಪರ ಘೋಷಣೆ (Pro Pak Slogan) ಕೂಗುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಘಟನೆ ನಡೆದಿದ್ದು, ಈ ಬಗ್ಗೆ ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಯುವಕ ದೂರು ನೀಡಿದ್ದಾನೆ.

‌Assault Case

ಮೈಸೂರಿನ ಲಕ್ಷ್ಮೀನಾರಾಯಣ್ ಹಲ್ಲೆಗೊಳಗಾದ ಯುವಕ. ಮೋದಿ ಹಾಡು ರಿಲೀಸ್‌ ಮಾಡಿದ್ದೀಯ, ನಿನ್ನ ಸಾಯಿಸುತ್ತೇವೆ ಎಂದು ಅಪರಿಚಿತ ಮುಸ್ಲಿಂ ಯುವಕರ ಗುಂಪು, ಹಿಂದು ಯುವಕನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆ ವೇಳೆ ಪಾಕಿಸ್ತಾನ ಹಾಗೂ ಅಲ್ಲಾಹ್‌ ಪರ ಘೋಷಣೆ ಕೂಗುವಂತೆ ಯುವಕನಿಗೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ವಿಡಿಯೊ ಮೂಲಕ ಲಕ್ಷ್ಮೀನಾರಾಯಣ್ ಮಾಹಿತಿ ನೀಡಿದ್ದಾನೆ.

ಘಟನೆ ಬಗ್ಗೆ ಗಾಯಾಳು ಲಕ್ಷ್ಮೀನಾರಾಯಣ್ ಪ್ರತಿಕ್ರಿಯಿಸಿ, ನಾನು ಕಳೆದ ವಾರ ಮೋದಿ ಸಾಂಗ್‌ ರಿಲೀಸ್‌ ಮಾಡಿದ್ದೆ. ಪರಿಚಯಸ್ಥರ ಬಳಿ ನಮ್ಮ ಯುಟ್ಯೂಟ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿಸುತ್ತಿದ್ದೆ. ಸರ್ಕಾರಿ ಗೆಸ್ಟ್‌ ಹೌಸ್‌ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರು ಬಂದರು. ಅವರು ಮುಸ್ಲಿಂ ಎಂದು ನನಗೆ ಗೊತ್ತಿರಲಿಲ್ಲ. ನಂತರ ಆ ವ್ಯಕ್ತಿ ವಿಡಿಯೊ ನೋಡಿದ. ನಂತರ ನನ್ನನ್ನು ಒಳಗೆ ಕರೆದುಕೊಂಡು ಹೋಗಿ, ಮೋದಿ ಬಗ್ಗೆ ಸಾಂಗ್‌ ಮಾಡಿದ್ದೀಯಾ, ನಿನ್ನ ಇಲ್ಲೇ ಕೊಲ್ಲುತ್ತೇವೆ ಎಂದು ಸಹಚರರ ಜತೆ ಸೇರಿ ಹಲ್ಲೆ ಮಾಡಿದರು. ನನ್ನ ಕೈಯಲ್ಲಿ ಇದ್ದ ಶ್ರೀರಾಮನ ಫೋಟೊ, ಧ್ವಜವನ್ನು ಕಿತ್ತು ಬಿಸಾಡಿದರು. ನಂತರ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಮೇಲೆ ಬಿಯರ್‌ ಎರಚಿ, ಮೂತ್ರ ವಿಸರ್ಜನೆ ಮಾಡಿ, ಸಿಗರೇಟ್‌ನಿಂದ ಸುಟ್ಟು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Continue Reading

ಪ್ರಮುಖ ಸುದ್ದಿ

CET Exam: ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾರೀ ಗೊಂದಲ, ದೂರು ನೀಡಲು ಏ.27ರವರೆಗೆ ಕಾಲಾವಕಾಶ

CET Exam: ಪಿಯು ಮಂಡಳಿ ನಿಗದಿ ಮಾಡದ ಪಠ್ಯ ಪುಸ್ತಕದ ಪ್ರಶ್ನೆ ಕೇಳಿ ಕೆಇಎ ಗೊಂದಲ ಸೃಷ್ಟಿಸಿದೆ. ಕೆಇಎ ಎಡವಟ್ಟಿಗೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 27ರವರೆಗೆ ಕಾಲಾವಕಾಶವನ್ನು ಕೆಇಎ ನೀಡಿದೆ.

VISTARANEWS.COM


on

cet exam karnataka exam authority
Koo

ಬೆಂಗಳೂರು: ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ (CET Exam) ಪ್ರಶ್ನೆಪತ್ರಿಕೆ (Question Paper) ಕಂಡು ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದು, ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆಗಳನ್ನು ಕಂಡು ದಂಗಾಗಿದ್ದರು. ಈ ಪ್ರಮಾದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹಾಗೂ ಪಿಯು ಮಂಡಳಿ (PU board) ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಗ್ರೇಸ್‌ ಮಾರ್ಕ್ಸ್‌ (Grace marks) ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪಿಯು ಮಂಡಳಿ ನೀಡಿದ ಪಠ್ಯಪುಸ್ತಕವೇ ಒಂದಾಗಿದ್ದರೆ, ಕೆಇಎ ನೀಡಿದ ಪ್ರಶ್ನೆಪತ್ರಿಕೆಯೇ ಮತ್ತೊಂದಾಗಿದೆ. ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆ ಕಂಡು ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಗಣಿತ, ಜೀವಶಾಸ್ತ್ರ, ರಸಾಯನವಿಜ್ಞಾನ ಹಾಗೂ ಭೌತವಿಜ್ಞಾನ ಪರೀಕ್ಷೆಯಲ್ಲಿ 50ಕ್ಕೂ ಅಧಿಕ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಕಂಡುಬಂದಿವೆ.

ಜೀವಶಾಸ್ತ್ರದ 60 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿ ಇಲ್ಲದ 10 ಪ್ರಶ್ನೆಗಳನ್ನು ಕೇಳಲಾಗಿದೆ. ಗಣಿತ ಪರೀಕ್ಷೆಯಲ್ಲಿ 9 ಪ್ರಶ್ನೆಗಳು, ರಾಸಾಯನಿಕ ಹಾಗೂ ಭೌತಶಾಸ್ತ್ರ ಪರೀಕ್ಷೆಯಲ್ಲಿ 30ಕ್ಕೂ ಅಧಿಕ ಔಟ್ ಆಫ್ ಸಿಲೆಬಸ್ ಪ್ರಶ್ನೆ ಕೇಳಲಾಗಿದೆ. ನಿಗದಿತ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದರು. ಹೀಗಾಗಿ ಮರು ಪರೀಕ್ಷೆ ಮಾಡುವಂತೆ ಅಥವಾ ಗ್ರೇಸ್ ಮಾರ್ಕ್ಸ್ ನೀಡುವಂತೆ ವಿದ್ಯಾರ್ಥಿಗಳಿಂದ ಒತ್ತಾಯ ಬಂದಿದೆ.

ಈ ವರ್ಷ ಪಠ್ಯದಲ್ಲಿ ಇಲ್ಲದ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರ ಪ್ರಶ್ನೆ ಕೇಳಿದೆ. ಪಿಯು ಮಂಡಳಿ ನಿಗದಿ ಪಡಿಸಿರುವ ಪಿಯು ಪಠ್ಯಪುಸ್ತಕದ ಆಧಾರದ ಮೇಲೆ ಸಿಇಟಿ ಪರೀಕ್ಷೆ ನಡೆಸಬೇಕು. ಆದರೆ ಪಿಯು ಮಂಡಳಿ ನಿಗದಿ ಮಾಡದ ಪಠ್ಯ ಪುಸ್ತಕದ ಪ್ರಶ್ನೆ ಕೇಳಿ ಕೆಇಎ ಗೊಂದಲ ಸೃಷ್ಟಿಸಿದೆ. ಕೆಇಎ ಎಡವಟ್ಟಿಗೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 27ರವರೆಗೆ ಕಾಲಾವಕಾಶವನ್ನು ಕೆಇಎ ನೀಡಿದೆ.

ಈ ಬಗ್ಗೆ ಪರೀಕ್ಷಾ ಪ್ರಾಧಿಕಾರ ಹಾಗೂ ಪಿಯು ಮಂಡಳಿ ನಡುವೆ ಆರೋಪ ಪ್ರತ್ಯಾರೋಪ ನಡೆದಿದೆ. ಪಿಯು ಮಂಡಳಿ ನೀಡಿದ ಪಠ್ಯ ಪುಸ್ತಕದ ಆಧಾರದ ಮೇಲೆಯೇ ಸಿಇಟಿ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ ಎಂದು ಕೆಇಎ‌ ಹೇಳಿದೆ. ತಾವು ನೀಡಿದ ಪರಿಷ್ಕೃತ ಪಠ್ಯಪುಸ್ತಕ ಕೆಇಎ ಅನುಸರಿಸಿಲ್ಲ ಎಂದು ಪಿಯು ಮಂಡಳಿ ಆರೋಪಿಸಿದೆ. ಎರಡು ಇಲಾಖೆ ನಡುವೆ ಪತ್ರವ್ಯವಹಾರ ನಡೆದಿದೆ. ಪಠ್ಯಪುಸ್ತಕ ಪರಿಷ್ಕರಣೆ ಆಧಾರದ ಮೇಲೆ ಸಿಇಟಿ ಪರೀಕ್ಷೆ ನಡೆಸುವಂತೆ ಪಿಯು ಬೋರ್ಡ್ ಮೊದಲೇ ಪತ್ರ ಬರೆದಿತ್ತು. ಪಿಯು ಬೋರ್ಡ್ ಪತ್ರಕ್ಕೆ ಉತ್ತರವನ್ನೂ ಕೆಇಎ ನೀಡಿತ್ತು. ಪರಿಷ್ಕೃತ ಪಠ್ಯಪುಸ್ತಕ ಅನುಸರಿಸಲಾಗಿದೆ ಎಂದಿದೆ. ಕೊನೆಗೆ ಪಿಯು ಬೋರ್ಡ್ ನೀಡಿದ ಪರಿಷ್ಕೃತ ಪಠ್ಯಪುಸ್ತಕವನ್ನು ಕೆಇಎ ನಿರ್ಲಕ್ಷ್ಯ ಮಾಡಿದೆ.

ಇಂದು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೆಇಎ ಸೂಚನೆ ನೀಡಿದೆ. ಆಕ್ಷೇಪಣೆಗಳ ಆಧಾರದ ಮೇಲೆ ಪರಿಶೀಲನೆಗೆ ಸಮಿತಿ ರಚಿಸುವ ಭರವಸೆಯನ್ನು ಕೆಇಎ ನೀಡಿದ್ದು, ಸಮಿತಿ ನೀಡುವ ವರದಿಯ ಆಧಾರದ ಮೇಲೆ‌ ಕ್ರಮ ಕೈಗೊಳ್ಳಲಾಗುವುದು ಎಂದು ಕೆಇಎ ನಿರ್ದೇಶಕಿ ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ: CET Exam: ಸಿಇಟಿ ಪರೀಕ್ಷೆ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್;‌ ಕೊನೇ ಅವಕಾಶ ಕೊಟ್ಟ KEA!

Continue Reading
Advertisement
AC Helmet
ದೇಶ19 seconds ago

AC Helmet: ಬೇಸಿಗೆ ಎಫೆಕ್ಟ್​​; ಟ್ರಾಫಿಕ್ ಪೊಲೀಸರ ಹೆಲ್ಮೆಟ್​ಗೆ ಎಸಿ!

Tarak Ponnappa out of udho udho sri renuka yellamma serial
ಕಿರುತೆರೆ3 mins ago

Tarak Ponnappa: ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ಧಾರಾವಾಹಿಗೆ ವಿದಾಯ ಹೇಳಿದ ʻಕೆಜಿಎಫ್‌ʼ ಖ್ಯಾತಿಯ ನಟ!

electoral Bond
ಪ್ರಮುಖ ಸುದ್ದಿ16 mins ago

Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

boat capsizes in bhatkal
ಉತ್ತರ ಕನ್ನಡ20 mins ago

Boat Capsizes: ಭಾರೀ ಗಾಳಿ ಮಳೆಗೆ ಅರಬ್ಬೀ ಸಮುದ್ರದಲ್ಲಿ ಬೋಟ್‌ ಮುಳುಗಡೆ, ನಾಲ್ವರ ರಕ್ಷಣೆ; ಇಲ್ಲಿದೆ ವಿಡಿಯೋ

Mahesh Babu SS Rajamouli return from Dubai
South Cinema44 mins ago

Mahesh Babu: ಹೇಗಿದೆ ಮಹೇಶ್‌ ಬಾಬು ಲುಕ್‌? ರಾಜಮೌಳಿ ಪ್ಲ್ಯಾನ್​ ಉಲ್ಟಾ!

MS Dhoni
ಪ್ರಮುಖ ಸುದ್ದಿ51 mins ago

MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

Modi In Karnataka
ಪ್ರಮುಖ ಸುದ್ದಿ1 hour ago

PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

MS Dhoni
ಪ್ರಮುಖ ಸುದ್ದಿ2 hours ago

MS Dhoni : ಧೋನಿ ಆಡಲು ಇಳಿದಾಗ ಸ್ಟೇಡಿಯಮ್​ನಲ್ಲಿ ಶಬ್ದ ಮಾಲಿನ್ಯ; ಡಿಕಾಕ್ ಹೆಂಡತಿಯ ಪೋಸ್ಟ್​ ವೈರಲ್​

Impact Player Rule
ಕ್ರೀಡೆ2 hours ago

Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

Tillu Square anupama parameswaran movie tillu square release date
ಒಟಿಟಿ2 hours ago

Tillu Square: ಅನುಪಮಾ ಪರಮೇಶ್ವರನ್‌‌ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ20 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌