Fraud Case : ಅಮಾಯಕರ ಬ್ಯಾಂಕ್‌ ಅಕೌಂಟ್‌ಗಳಿಗೆ ಕನ್ನ ಹಾಕಿದ ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು! - Vistara News

ಕರ್ನಾಟಕ

Fraud Case : ಅಮಾಯಕರ ಬ್ಯಾಂಕ್‌ ಅಕೌಂಟ್‌ಗಳಿಗೆ ಕನ್ನ ಹಾಕಿದ ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು!

Fraud Case : ನಾವು ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರೆಂದು ಹೇಳಿ ಫೆಡೆಕ್ಸ್ ಕೋರಿಯರ್‌ ಪಾರ್ಸಲ್‌ ಹೆಸರಿನಲ್ಲಿ ಸೈಬರ್‌ ವಂಚನೆ (Cyber Crime) ಎಸಗುತ್ತಿದ್ದ 8 ಮಂದಿಯನ್ನು ಸೆನ್‌ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

cyber frauds posing as Mumbai Crime Branch cops arrests accused
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರ ಸೋಗಿನಲ್ಲಿ ಫೋನ್‌ ಮಾಡಿ ಜನರ ಬ್ಯಾಂಕ್‌ ಅಕೌಂಟ್‌ಗಳಿಗೆ ಕನ್ನ ಹಾಕಿ, ಲಕ್ಷಾಂತರ ರೂ. ಹಣವನ್ನು ಲೂಟಿ ಮಾಡುತ್ತಿದ್ದ ಸೈಬರ್‌ ವಂಚಕರನ್ನು (Fraud case) ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಒಟ್ಟು ಎಂಟು ಮಂದಿ ವಂಚಕರು ಸೆನ್ ಪೊಲೀಸರ ಕೆಡ್ಡಕ್ಕೆ ಬಿದ್ದಿದ್ದಾರೆ. ವಸೀಂ‌, ಹಬೀಬುಲ್ಲ, ನಿಝಾಮುದ್ದೀನ್, ಮುಶ್ರಫ್ ಖಾನ್, ನೂರುಲ್ಲ ಖಾನ್ ಹಾಗೂ ‌ಮೊಹಮಮ್ದ್ ಉಮರ್, ಸೈಯದ್ ಅಹ್ಮದ್, ಸೈಯದ್ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 13 ಲಕ್ಷ ರೂ., 11 ಮೊಬೈಲ್ ಫೋನ್, ಬ್ಯಾಂಕ್ ಪಾಸ್ ಬುಕ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸೈಬರ್‌ ವಂಚಕರು ಮಲ್ಲೇಶ್ವರದ ವ್ಯಕ್ತಿಗೆ ನ.10ರಂದು ವಾಟ್ಸ್ ಆ್ಯಪ್ ಮೂಲಕ ಕಾಲ್‌ ಮಾಡಿದ್ದಾರೆ. ಬಳಿಕ ತಾವು ಮುಂಬೈ ಕ್ರೈಂ ‌ಬ್ರಾಂಚ್‌ ಪೊಲೀಸರು, ನಿಮ್ಮ ಪತ್ನಿಯ ಹೆಸರಲ್ಲಿ ಫೆಡೆಕ್ಸ್‌ ಕೋರಿಯರ್‌ನಲ್ಲಿ ಮುಂಬೈನಿಂದ ಥೈಲ್ಯಾಂಡ್‌ ದೇಶಕ್ಕೆ ಕಾನೂನು ಬಾಹಿರ ಪಾರ್ಸೆಲ್‌ ಬಂದಿದೆ. ನಿಮ್ಮ ಹೆಸರಲ್ಲಿ ಹಲವು ಬ್ಯಾಂಕ್‌ ಖಾತೆಗಳನ್ನು ತೆರೆದು ಅದರಿಂದ ಮನಿ ಲಾಂಡರಿಂಗ್‌ ಆಗುತ್ತಿದೆ. ಆರ್‌ಬಿಐ ನಿಮ್ಮ ಅಕೌಂಟ್‌ ಅನ್ನು ಪ್ರೀಜ್‌ ಮಾಡುತ್ತಾರೆ. ಹೀಗಾಗಿ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ ಅನ್ನು ತನಿಖೆಗಾಗಿ ವಿಚಾರಿಸಬೇಕಿದೆ ಎಂದು ಕಥೆ ಕಟ್ಟಿದ್ದಾರೆ.

ಇದನ್ನೂ ಓದಿ: Murder Case : ತಂಗಿ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ!

ಅಸಲಿ ಪೊಲೀಸರೆಂದು ನಂಬಿದ ವ್ಯಕ್ತಿಯಿಂದ ಬ್ಯಾಂಕ್‌ ಖಾತೆ ಮಾಹಿತಿ ಪಡೆದು ಹಾಗೂ ತನಿಖಾ ವಿಚಾರಣೆ ಸಲುವಾಗಿ ಮುಂಗಡ ಹಣವನ್ನು ನೀಡಬೇಕು. ತನಿಖೆ ನಂತರ ನಿಮ್ಮ ಹಣ ವಾಪಸ್‌ ಕೊಡುತ್ತೇವೆ ಎಂದು ಹೇಳಿ ಪುಸಲಾಯಿಸಿದ್ದಾರೆ. ಎಚ್‌ಡಿಎಫ್‌ಸಿ ಅಕೌಂಟ್‌ನಿಂದ 66 ಲಕ್ಷ ರೂ., ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಿಂದ 42 ಲಕ್ಷ ರೂ. ಸೇರಿದಂತೆ ಒಟ್ಟು 1 ಕೋಟಿ 8 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ.

ವಂಚನೆಗೊಳಗಾದವರು ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಐಟಿ ಆಕ್ಟ್‌ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಇಎನ್‌ ಕ್ರೈಂ ಪೊಲೀಸರು ವಿಶೇಷ ತಂಡವನ್ನು ರಚಿಸಿ, ತನಿಖೆಗಿಳಿದಿದ್ದರು. ದೂರುದಾರರ ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದ ಖಾತೆಯನ್ನು ಪರಿಶೀಲಿಸುವಾಗ ವಂಚಕರು ಆ ಹಣವನ್ನು ದಾವಣಗೆರೆಯ ಆರ್‌ಬಿಎಲ್ ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮಾಡಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಅಲರ್ಟ್‌ ಪೊಲೀಸರು ವಂಚಕರನ್ನು ಬೇಟೆಯಾಡಿದ್ದಾರೆ.

ಬ್ಯಾಂಕ್‌ ಖಾತೆಯಲ್ಲಿದ್ದ 19 ಲಕ್ಷ ಹಣ ಪೀಜ್‌ ಮಾಡಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಬ್ಯಾಂಕ್‌ಗಳ 148 ಖಾತೆಗಳನ್ನು ಪ್ರೀಜ್‌ ಮಾಡಿದ್ದು, ಚೆಕ್‌ಬುಕ್‌, ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳ ಬಂಧನದಿಂದ ಎನ್‌ಸಿಆರ್‌ಬಿ‌ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಸುಮಾರು 75 ವಂಚನೆ ಪ್ರಕರಣಗಳು ಪತ್ತೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

Eshwar Khandre: ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜುಲೈ 3ನೇ ವಾರದಲ್ಲಿ ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

VISTARANEWS.COM


on

Quick start for online ticketing for trekking says minister Eshwar Khandre
Koo

ಮಂಗಳೂರು: ಜುಲೈ 3ನೇ ವಾರದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ (Eshwar Khandre) ತಿಳಿಸಿದ್ದಾರೆ.

ಮಂಗಳೂರಿನ ಪಡೀಲ್‌ನಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಲಗ್ಗೆ ಇಟ್ಟು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಚಾರಣಕ್ಕೆ ಈ ಆಗಸ್ಟ್ ನಿಂದ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾವುದೇ ಚಾರಣ ಪಥಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಕಾರಣ ಚಾರಣಿಗರು ಅಪಾಯಕ್ಕೆ ಈಡಾಗುವ ಸಂಭವ ಹೆಚ್ಚಾಗಿರುತ್ತದೆ, ಜತೆಗೆ ಇಲ್ಲಿನ ಜೀವರಾಶಿ ಮತ್ತು ಮೊಳಕೆಯೊಡೆಯುವ ಸಸ್ಯರಾಶಿಗೂ ತೊಂದರೆ ಆಗುತ್ತದೆ ಹೀಗಾಗಿ ಆಗಸ್ಟ್‌ನಿಂದ ಚಾರಣಕ್ಕೆ ಮರು ಚಾಲನೆ ನೀಡುವುದಾಗಿ ಹೇಳಿದರು.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಈಗಾಗಲೇ ರಾಜ್ಯದ ಹಲವು ಚಾರಣ ಪಥಗಳನ್ನು ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದ್ದು, ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಆದೇ ರೀತಿ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಕೊಡಚಾದ್ರಿ, ಕುರಿಂಜಲ್, ಕಂಗಡಿಕಲ್, ನರಸಿಂಹ ಪರ್ವತಗಳಲ್ಲಿ ಅರಣ್ಯ ಇಲಾಖೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಇದಲ್ಲದೆ ಎತ್ತಿನಭುಜ ಸೇರಿದಂತೆ ಕೆಲವು ಕಡೆಗಳಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲ ಚಾರಣ ಪಥಗಳಿಗೂ ಒಂದೇ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಚಾರಣಿಗರ ಸಂಖ್ಯೆಗೆ ಮಿತಿ

ಕೆಲವು ಪ್ರವಾಸಿ ಸಂಸ್ಥೆಗಳು (ಟೂರ್ ಆಪರೇಟರ್‌ಗಳು) ಚಾರಣಪಥಗಳ ಬಗ್ಗೆ ಯುವಜನರಲ್ಲಿ ಅತಿಯಾದ ಆಸಕ್ತಿ ಕೆರಳಿಸುತ್ತಿದ್ದು, ಇದರ ಪರಿಣಾಮವಾಗಿ ಚಾರಣಪಥಗಳಲ್ಲಿ ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕೃತಿ, ಪರಿಸರ ಉಳಿಸಲು ಕೆಲವು ಕಠಿಣ ಕ್ರಮ ಅತ್ಯಗತ್ಯ ಎಂದು ಹೇಳಿದರು.

ಪ್ರತಿಯೊಂದು ಚಾರಣ ಪಥದಲ್ಲೂ ಅದರ ವಿಸ್ತಾರ, ಅಲ್ಲಿರುವ ಗೈಡ್ ಮತ್ತು ಇತರ ಮೂಲಭೂತ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗುವುದು. ಯಾವುದೇ ಚಾರಣಪಥದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಚಾರಣಿಗರಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಮೂರನೇ ವ್ಯಕ್ತಿ ತಪಾಸಣೆ

ಒಂದೊಮ್ಮೆ ಯಾವುದೇ ಚಾರಣ ಪಥದಲ್ಲಿ ಹೆಚ್ಚಿನ ಸಂಖ್ಯೆಯ ಚಾರಣಿಗರಿಗೆ ಅವಕಾಶ ನೀಡಲಾಗುತ್ತಿದೆ ಎಂದು ದೂರು ಬಂದರೆ, ಈ ಬಗ್ಗೆ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

ಒಂದೇ ವೆಬ್‌ಸೈಟ್‌ನಲ್ಲಿ ವಿವಿಧ ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಇರುವ ಕಾರಣ, ಒಂದು ಚಾರಣ ಪಥದಲ್ಲಿ ಟಿಕೆಟ್ ಸಿಗದಿದ್ದರೆ ಮತ್ತೊಂದಕ್ಕೆ ಟಿಕೆಟ್ ಕಾಯ್ದಿರಿಸುವ ಅವಕಾಶವೂ ಇರುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ವಿವರಿಸಿದರು.

Continue Reading

ಕರ್ನಾಟಕ

Pourakarmikas: ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

Pourakarmikas: ವಾರದ ಒಂದು ದಿನ ಸಂಪೂರ್ಣ ರಜೆ ನೀಡಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸುತ್ತಿದ್ದರು. ಈ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ವಾರದಲ್ಲಿ ಒಂದು ದಿನ ಸಂಪೂರ್ಣ ರಜೆಯನ್ನು ನೀಡಿ ಆದೇಶ ಹೊರಡಿಸಿದೆ.

VISTARANEWS.COM


on

Pourakarmikas
Koo

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ (Pourakarmikas) ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಪೌರ ಕಾರ್ಮಿಕರಿಗೆ ವಾರಕ್ಕೆ ಒಂದು ದಿನ ಪೂರ್ತಿ ರಜೆ ನೀಡಿ ನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಈವರೆಗೆ ಪೌರಕಾರ್ಮಿಕರಿಗೆ ವಾರದಲ್ಲಿ ಎರಡು ಬಾರಿ ಅರ್ಧ ದಿನದ ರಜೆ ನೀಡಲಾಗುತ್ತಿತ್ತು. ಈಗ ನಿತ್ಯದ ಕೆಲಸಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಂಡು ಇಡೀ ದಿನದ ರಜೆ ನೀಡಲು ಆದೇಶಿಸಲಾಗಿದೆ.

ವಾರದ ಒಂದು ದಿನ ಸಂಪೂರ್ಣ ರಜೆ ನೀಡಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸುತ್ತಿದ್ದರು. ಈ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ವಾರದಲ್ಲಿ ಒಂದು ದಿನ ಸಂಪೂರ್ಣ ರಜೆಯನ್ನು ನೀಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ | Pawan Kalyan: ವೇತನವೇ ಬೇಡ ಎಂದ ಪವನ್‌ ಕಲ್ಯಾಣ್‌- ಮತ್ತೊಮ್ಮೆ ಗಮನ ಸೆಳೆದ ಆಂಧ್ರ ಡಿಸಿಎಂ

ಷರತ್ತುಗಳೇನು?

  • ದಿನನಿತ್ಯದ ಸ್ವಚ್ಛತಾ ಕೆಲಸ, ಕಾರ್ಯಗಳಿಗೆ ತೊಂದರೆಯಾಗದಂತೆ ಶೇ.85 ಹಾಜರಾತಿ ಖಚಿತಪಡಿಸಿಕೊಂಡು ಒಂದು ರಜೆ ನೀಡುವುದು.
  • ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ನೇಮಿಸಿರುವ ಸಿಬ್ಬಂದಿಗೆ ವಾರದ ರಜೆ ನೀಡುವ ಸಂದರ್ಭದಲ್ಲಿ ಬೇರೊಬ್ಬ ನೌಕರರನ್ನು ಆ ಕಾರ್ಯಕ್ಕೆ ನಿಯೋಜಿಸುವ ಮೇರೆಗೆ ರಜೆಯ ಅವಶ್ಯಕತೆಯಿರುವ ಪೌರಕಾರ್ಮಿಕರಿಗೆ ವಾರದಲ್ಲಿ ಒಂದು ದಿನ ರಜೆ ನೀಡಲು ಅವಕಾಶ ಕಲ್ಪಿಸಬಹುದು.
  • ವಾರದ ರಜೆಯನ್ನು ನೌಕರರು, ಪೌರ ಕಾರ್ಮಿಕರ ಹಕ್ಕು ಎಂದು ಪರಿಗಣಿಸತಕ್ಕದ್ದಲ್ಲ ಹಾಗೂ ಒಂದು ವಾರದ ಒಂದು ರಜೆಯನ್ನು ಮುಂದಿನ ವಾರಕ್ಕೆ ಹಿಂಬಾಕಿ ಎಂದು ಪರಿಗಣಿಸಿ ಸತತವಾಗಿ ರಜೆ ಪಡೆಯಲು ಅವಕಾಶವಿರುವುದಿಲ್ಲ.
  • ಪ್ರಕೃತಿ ವಿಕೋಪ, ಸ್ಥಳೀಯ ಜಾತ್ರೆ, ಸಭೆ ಸಮಾರಂಭಗಳ ವಿಶೇಷ ಸಂದರ್ಭಗಳಲ್ಲಿ ವಾರದ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸುವಂತಿಲ್ಲ ಹಾಗೂ ಈ ಸಂದರ್ಭದಲ್ಲಿ ವಾರದ ರಜೆ ನೀಡುವ ಅಧಿಕಾರ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿವೇಚನೆಗೆ ಒಳಪಟ್ಟಿರುತ್ತದೆ.
  • ರಜೆಯ ಮೇಲೆ ತೆರಳಿದ ನೌಕರ, ಪೌರ ಕಾರ್ಮಿಕರ ವ್ಯಾಪ್ತಿಗೆ ಸೇರಿದ ಪ್ರದೇಶದ ಸ್ವಚ್ಛತಾ ಕಾರ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸಕ್ಕೆ ಹಾಜರಾಗಿರುವ ಇತರೆ ಸಿಬ್ಬಂದಿ ಸ್ವಚ್ಛಗೊಳಿಸಬೇಕು.
  • ಪ್ರಸ್ತುತ ಪೌರ ಕಾರ್ಮಿಕರಿಗೆ ವಾರಕ್ಕೆ ಎರಡು ಬಾರಿ ಅರ್ಧ ದಿನ ರಜೆ ನೀಡಲಾಗುತ್ತಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಬುಧವಾರ, ಭಾನುವಾರ 11 ಗಂಟೆವರೆಗೂ ಕೆಲಸ ಆಮೇಲೆ ರಜೆ ನೀಡಲಾಗುತ್ತಿತ್ತು, ಇದೀಗ ವಾರದಲ್ಲಿ ಒಂದು ದಿನ ಪೂರ್ತಿ ರಜೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
Continue Reading

ಕ್ರೈಂ

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Sandalwood theft : ಕೋಲಾರದಲ್ಲಿ ಅರಣ್ಯಾಧಿಕಾರಿಗಳ ಕಣ್ತಪ್ಪಿಸಿ ಗಂಧ ಕದಿಯಲು ಬಂದ ಚೋರನಿಗೆ ಗುಂಡು ಹಾರಿಸಲಾಗಿದೆ. ನಾಲ್ಕೈದು ಮಂದಿ ಕಾಲ್ಕಿತ್ತಿದ್ದು, ಗುಂಡೇಟು ತಿಂದವನು ಸಿಕ್ಕಿಬಿದ್ದಿದ್ದಾನೆ. ಇತ್ತ ಕಲಬುರಗಿಯಲ್ಲಿ ಕಿಡಿಗೇಡಿಗಳು ಕೋರ್ಟ್‌ ಆವರಣದಲ್ಲೇ ತಳವಾರ್‌ ಹಿಡಿದು ದಾಳಿ ಮಾಡಿದ್ದಾರೆ.

VISTARANEWS.COM


on

By

sandalwood theft
Koo

ಕೋಲಾರ : ಅರಣ್ಯ ಪ್ರದೇಶದಲ್ಲಿ ಶ್ರೀಗಂಧವನ್ನು ಕದಿಯಲು (Sandalwood theft) ಬಂದವನು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗುಂಡೇಟು ತಿಂದಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿ (Kashipura Forest) ಘಟನೆ ನಡೆದಿದೆ.

ತಾಯಲೂರು ಗ್ರಾಮದ ಭತ್ಯಪ್ಪ ಎಂಬಾತ ಕಾಲಿಗೆ ಗುಂಡು ತಗುಲಿದೆ. ಅರಣ್ಯ ಇಲಾಖೆ ರಕ್ಷಕ ಅನಿಲ್ ಗುಂಡು ಹಾರಿಸಿದ್ದಾರೆ. ಶ್ರೀಗಂಧ ಕಳ್ಳತನಕ್ಕೆ ಆಂಧ್ರಪ್ರದೇಶದ ಐದಾರು ಮಂದಿ ಜತೆಗೆ ಭತ್ಯಪ್ಪ ಬಂದಿದ್ದ. ಈ ವೇಳೆ ರಕ್ಷಕ ಅನಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದ.

ರಕ್ಷಣೆಗಾಗಿ ಭತ್ಯಪ್ಪ ಹಾಗೂ ಮತ್ತೋರ್ವನಿಗೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಭತ್ಯಪ್ಪ ಸಿಕ್ಕಿಬಿದ್ದರೆ ಉಳಿದವರು ಕಾಲ್ಕಿತ್ತಿದ್ದಾರೆ. ಗಾಯಾಳು ಭತ್ಯಪ್ಪಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Drowned In water : ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋದ ಮಾಜಿ ಸೈನಿಕ

ಕೋರ್ಟ್‌ ಆವರಣದಲ್ಲೇ ಡೆಡ್ಲಿ ಅಟ್ಯಾಕ್‌

ಕಲಬುರಗಿ ಕೋರ್ಟ್ ಆವರಣದಲ್ಲಿ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಬೆನ್ನತ್ತಿ ದುಷ್ಕರ್ಮಿಗಳು ತಲವಾರ್‌ನಿಂದ ದಾಳಿ ನಡೆಸಿದ್ದಾರೆ. ಧೀರಜ್ ಎಂಬಾತನ ಮೇಲೆ ತಲವಾರ್‌‌ನಿಂದ ದಾಳಿ ನಡೆಸಿದ್ದಾರೆ.

ತಲವಾರ್ ದಾಳಿಯಿಂದ ಧೀರಜ್‌ ಎಂಬಾತ ಗಾಯಗೊಂಡಿದ್ದು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇತ್ತ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ದುಷ್ಕರ್ಮಿಗಳನ್ನು ಸಾರ್ವಜನಿಕರು ಹಾಗೂ ವಕೀಲರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಸಂಬಂಧ ಪ್ರಶಾಂತ್ ಪಾಟೀಲ್ (20), ವಿರೇಶ್ ಪಾಟೀಲ್ (19), ರಾಮು ಪಾಟೀಲ್ (38) ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಲಬುರಗಿ ನಗರದ ಬಾಪುನಗರ ಬಡಾವಣೆಯ ನಿವಾಸಿಗಳು ಎನ್ನಲಾಗಿದೆ. ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Drowned In water : ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋದ ಮಾಜಿ ಸೈನಿಕ

Drowned In water ; ಮೊನ್ನೆ ಮೊನ್ನೆಯಷ್ಟೇ ಲೊನಾವನಾದಲ್ಲಿ ಐದು ಮಂದಿ ಕೊಚ್ಚಿ ಹೋಗಿದ್ದರು. ಈ ಘಟನೆ ಮಾಸುವ ಮುನ್ನವೇ ತಮ್ಹಿನಿ ಘಾಟ್‌ನಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಮಾಜಿ ಸೈನಿಕ ಕೊಚ್ಚಿ ಹೋಗಿದ್ದಾರೆ.

VISTARANEWS.COM


on

By

Drowned in water
Koo

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಪದೆಪದೇ ಅವಘಡಗಳು ಮರುಕಳಿಸುತ್ತಿವೆ. ತುಂಬಿ ಹರಿಯುವ ಹಳ್ಳಕ್ಕೆ ಹಾರಿದ ವ್ಯಕ್ತಿ ಶವವಾಗಿದ್ದಾರೆ. ಮಹಾರಾಷ್ಟ್ರದ ತಮ್ಹಿನಿ ಘಾಟ್‌ನಲ್ಲಿ ಈ ದುರ್ಘಟನೆ (Drowned In water ) ನಡೆದಿದೆ.

ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು ಹೋಗಿ ಮಾಜಿ ಸೈನಿಕರೊಬ್ಬರು ಕೊಚ್ಚಿ ಹೋಗಿದ್ದಾರೆ. ಈ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನೋಡನೋಡುತ್ತಿದ್ದಂತೆ ವ್ಯಕ್ತಿ ಜಲಸಮಾಧಿಯಾಗಿದ್ದಾರೆ. ಸುಮಾರು 20 ಜನರ ತಂಡ ಟ್ರಕ್ಕಿಂಗ್‌ ಹೋಗಿದ್ದರು. ಈ ವೇಳೆ ತುಂಬಿ ಹರಿವ ಹಳ್ಳಕ್ಕೆ ಜಿಗಿದ ಮಾಜಿ ಸೈನಿಕ ಸಾಹಸ ತೋರಿಸಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದಾನೆ.

ಮಹಾರಾಷ್ಟ್ರದ ಲೊನಾವನಾ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ. ಈಜಿ ಬರುವ ವಿಶ್ವಾಸ ತೋರಿದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಸದ್ಯ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Allahabad High Court: ಮತಾಂತರ ತಡೆಯದಿದ್ದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಬಹುದು; ಅಲಹಾಬಾದ್ ಹೈಕೋರ್ಟ್ ಕಳವಳ

ಕಾಳಮ್ಮವಾಡಿ ಜಲಾಶಯದಲ್ಲಿ ನಿಪ್ಪಾಣಿ ಯುವಕರು ಕಣ್ಮರೆ

ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಲ್ಲಿ ನಿಪ್ಪಾಣಿ ಯುವಕರು ಕಣ್ಮರೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ಶವ ಪತ್ತೆಯಾಗಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ಮುಂದುವರಿದಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಕಾಳಮ್ಮವಾಡಿ ಜಲಾಶಯಕ್ಕೆ ನಿನ್ನೆ ನಿಪ್ಪಾಣಿಯಿಂದ ಪ್ರವಾಸಕ್ಕೆಂದು 13 ಜನರ ಯುವಕರ ತಂಡ ತೆರಳಿದ್ದರು. ಈ ವೇಳೆ ಕಾಳಮ್ಮವಾಡಿ ಜಲಾಶಯದಲ್ಲಿ ಇಬ್ಬರು ನೀರಿನಲ್ಲಿ ಕಣ್ಮರೆಯಾಗಿದ್ದರು. ನಿಪ್ಪಾಣಿಯ ಗಣೇಶ ಕದಮ್ ಪ್ರತೀಕ್ ಪಾಟೀಲ್ ಇಬ್ಬರು ಕಣ್ಮರೆಯಾಗಿದ್ದರು. ಪ್ರತಿಕ ಪಾಟೀಲ್ ಶವವಾಗಿ ಪತ್ತೆಯಾದರೆ, ಗಣೇಶ್ ಕದಮ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ಎನ್ ಡಿ ಆರ್ ಎಫ್ ಹಾಗೂ ಕೊಲ್ಹಾಪುರ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

ನೀರಲ್ಲಿ ಕೊಚ್ಚಿ ಹೋದವರ ಶವ ಪತ್ತೆ

ಭಾನುವಾರ ಮಹಾರಾಷ್ಟ್ರದ ಲೋನಾವಲಾ ಬಳಿ ದಿಢೀರ್ ಪ್ರವಾಹಕ್ಕೆ ನೋಡನೋಡುತ್ತಿದ್ದಂತೆ ಐವರು ಕೊಚ್ಚಿ ಹೋಗಿದ್ದರು. ಪುಣೆಯ ಅನ್ಸಾರಿ ಕುಟುಂಬದ ನಾಲ್ವರು ಮಕ್ಕಳು ಸೇರಿ ಓರ್ವ ‌ಮಹಿಳೆ‌ ನೀರುಪಾಲಾಗಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ಎನ್‌ಆರ್‌ಎಫ್‌ ತಂಡ ಮೂವರ ಶವ ಹೊರ ತೆಗೆದಿತ್ತು. ನೀರಲ್ಲಿ ಕಣ್ಮರೆಯಾಗಿರುವ ಇನ್ನಿಬ್ಬರಿಗಾಗಿ ನಿರಂತರ ಶೋಧ ಕಾರ್ಯ ನಡೆಸಿತ್ತ. ಅದರಲ್ಲಿ ಒಬ್ಬನ ಮೃತದೇಹವು ಮಂಗಳವಾರ ಸಿಕ್ಕಿದ್ದು, ಮತ್ತೊಬ್ಬ ಶವಕ್ಕೆ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬೀಡು ಬಿಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Quick start for online ticketing for trekking says minister Eshwar Khandre
ಕರ್ನಾಟಕ43 seconds ago

Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

Narendra Modi
ಪ್ರಮುಖ ಸುದ್ದಿ14 mins ago

Narendra Modi: ಸಂಸತ್ತಲ್ಲಿ ಹಿಂದುಗಳಿಗೆ ಅವಮಾನ, ದೇವರಿಗೆ ಅಪಮಾನ, ಇದನ್ನು ಹಿಂದುಗಳು ಮರೆಯಲಾರರು ಎಂದ ಮೋದಿ

NEET PG exam
ಪ್ರಮುಖ ಸುದ್ದಿ16 mins ago

NEET PG exam : ಮೋಸ ತಡೆಯಲು ಕ್ರಮ; ನೀಟ್ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ತಯಾರಿ!

Viral Video
Latest20 mins ago

Eknath Shinde: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

Rainy Season Tourism
ಪ್ರವಾಸ31 mins ago

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Viral News
Latest32 mins ago

Viral News: ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದರು! ವೆಡ್ಡಿಂಗ್‌ ಕಾರ್ಡ್‌ ನೋಡಿ!

Narendra Modi
ದೇಶ37 mins ago

Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ

Pourakarmikas
ಕರ್ನಾಟಕ40 mins ago

Pourakarmikas: ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

Super Computers
ಪ್ರಮುಖ ಸುದ್ದಿ42 mins ago

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

sandalwood theft
ಕ್ರೈಂ45 mins ago

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌