ಕನ್ನಡಕ್ಕೆ ಆತಂಕವಿರುವುದು ಹಿಂದಿಯಿಂದಲ್ಲ, ಇಂಗ್ಲಿಷ್‌ನಿಂದ: ಹರಿಪ್ರಕಾಶ್‌ ಕೋಣೆಮನೆ ಅಭಿಮತ - Vistara News

ಕರ್ನಾಟಕ

ಕನ್ನಡಕ್ಕೆ ಆತಂಕವಿರುವುದು ಹಿಂದಿಯಿಂದಲ್ಲ, ಇಂಗ್ಲಿಷ್‌ನಿಂದ: ಹರಿಪ್ರಕಾಶ್‌ ಕೋಣೆಮನೆ ಅಭಿಮತ

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಖಿಲ ಕರ್ನಾಟಕ ಮಕ್ಕಳ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಡಾ ಎಚ್‌ ವಿಶ್ವನಾಥ ಮತ್ತು ಎಂ ಎಸ್‌ ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಶನಿವಾರ ನಡೆಯಿತು.

VISTARANEWS.COM


on

kasapa award 2022
ಸಾಹಿತಿ ರಮೇಶ್ ಮುದಿಗೆರೆ ಅವರಿಗೆ ಪ್ರಶಸ್ತಿ ಪ್ರದಾನ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಗಳಿಗೆ ಆತಂಕ ಎದುರಾಗಿರುವುದು ಹಿಂದಿ ಭಾಷೆಯಿಂದಲ್ಲ. ಹಿಂದಿ ಸೇರಿದಂತೆ ಭಾರತೀಯ ಭಾಷೆಗಳಿಗೆ ಸಮಾನ ಸವಾಲು, ಸಂಕಷ್ಟ ಇರುವುದು ಇಂಗ್ಲಿಷ್‌ನಿಂದ ಎಂದು ಹಿರಿಯ ಪತ್ರಕರ್ತ, ವಿಸ್ತಾರ ಮೀಡಿಯಾ ಪ್ರೈ. ಲಿ. ಸಿಇಒ ಹರಿಪ್ರಕಾಶ್‌ ಕೋಣೆಮನೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಖಿಲ ಕರ್ನಾಟಕ ಮಕ್ಕಳ ಕೂಟ ಜಂಟಿಯಾಗಿ ಏರ್ಪಡಿಸಿದ್ದ ಡಾ. ಎಚ್‌ ವಿಶ್ವನಾಥ ಮತ್ತು ಶ್ರೀಮತಿ ಎಂ ಎಸ್‌ ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ “ಇಂಗ್ಲಿಷ್‌ಗೆ ಪರ್ಯಾಯವಾಗಿ ಕನ್ನಡವನ್ನು ಕಟ್ಟಬೇಕು, ಭಾರತೀಯ ಭಾಷೆಗಳನ್ನು ಕಟ್ಟಬೇಕು ಎಂದರೆ ನಮ್ಮ ಭಾಷೆಗಳನ್ನು ಅನ್ನದ ಇಲ್ಲವೇ ಬದುಕಿನ ಭಾಷೆಯನ್ನಾಗಿಸಬೇಕುʼʼ ಎಂದವರು ಹೇಳಿದರು.

ಇಂದು ಕನ್ನಡ ಪರ ಎಂದರೆ ಅನೇಕರು ಗೊಂದಲಕ್ಕೊಳಗಾಗುವ ಸಂದರ್ಭ ಇದೆ. ಇದಕ್ಕೆ ಮುಖ್ಯ ಕಾರಣ ಕನ್ನಡಕ್ಕೆ ಯಾರಿಂದ ಆತಂಕವಿದೆ ಎಂಬುದು ಸ್ಪಷ್ಟವಿರದೇ ಇರುವುದು. ನಾವು ಕನ್ನಡಕ್ಕೆ ಆತಂಕವಿದೆ ಎಂದು ಕೊರಗುತ್ತಿದ್ದೇವೆ. ಅದೇ ರೀತಿ ಬೇರೆ ಬೇರೆ ಭಾಷಿಕರಿಗೂ ಕೊರಗು ಇದೆ. ಕೇರಳದಲ್ಲಿ ಮಲಯಾಳಿಗಳು, ಆಂಧ್ರದಲ್ಲಿ ತೆಲುಗರು, ತಮಿಳುನಾಡಿನ ಬಹಳ ಸ್ವಾಭಿಮಾನಿಗಳು ಎನ್ನಲಾಗುವ ತಮಿಳರು ಸಹ ನಮ್ಮದೇ ರೀತಿಯಲ್ಲಿ ಆತಂಕ ಎದುರಿಸುತ್ತಿದ್ದಾರೆʼʼ ಎಂದು ವಿವರಿಸಿದರು.

kasapa award 2022
ಸಮಾರಂಭದಲ್ಲಿ ಮಾತನಾಡುತ್ತಿರುವ ಹರಿಪ್ರಕಾಶ್‌ ಕೋಣೆಮನೆ

“ನಾವು ಕನ್ನಡಕ್ಕೆ ತಮಿಳರು ತೊಂದರೆ ಮಾಡಿದರು, ಹಿಂದಿ ಭಾಷಿಕರು ತೊಂದರೆ ಮಾಡುತ್ತಿದ್ದಾರೆ ಎಂದು ಕೊರಗುತ್ತಲೇ ಇದ್ದೇವೆ. ಈ ವಿಷಯದಲ್ಲಿ ನಾವು ವಸ್ತುನಿಷ್ಠವಾಗಿ ಯೋಚಿಸಬೇಕಾಗಿದೆ. ನಮಗೆ ನಿಜವಾಗಿಯೂ ಆತಂಕ ಎದುರಾಗಿದ್ದು ಎಲ್ಲಿ, ಯಾರಿಂದ ಎಂಬುದನ್ನು ಸರಿಯಾಗಿ ಗ್ರಹಿಸಬೇಕಾಗಿದೆ. ಅನೇಕರು ಇದನ್ನು ಒಪ್ಪಿಕೊಳ್ಳುವುದಿಲ್ಲ. ವಾಸ್ತವ ಏನೆಂದರೆ ಕನ್ನಡ, ಹಿಂದಿ ಸೇರಿದಂತೆ ಇಂದು ಎಲ್ಲ ಭಾರತೀಯ ಭಾಷೆಗಳಿಗೆ ಆತಂಕ ಎದುರಾಗಿರುವುದು ಭಾರತದ ಯಾವ ಭಾಷೆಯಿಂದಲೂ ಅಲ್ಲ, ಪರಕೀಯ ಇಂಗ್ಲಿಷ್‌ನಿಂದ. ಇದರ ಬಿಗಿ ಹಿಡಿತದಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆʼʼ ಎಂದು ಕೋಣೆಮನೆ ಅವರು ಹೇಳಿದರು.

“ಇಂಗ್ಲಿಷ್‌ ಬಲ್ಲವರಿಗೆ ಉದ್ಯೋಗ ಖಾತ್ರಿ ಎಂಬ ಪರಿಸ್ಥಿತಿ ಇರುವುದರಿಂದ ಎಲ್ಲರೂ ಇಂಗ್ಲಿಷ್‌ ಸೆಳೆತಕ್ಕೆ ಒಳಗಾಗಿದ್ದಾರೆ. ಇದನ್ನು ತಪ್ಪಿಸಿ, ನಮ್ಮ ಭಾಷೆಯನ್ನು ಕಟ್ಟಬೇಕು ಎಂದರೆ ನಾವು ಕನ್ನಡವನ್ನು ಉದ್ಯೋಗ ಮಾರುಕಟ್ಟೆಯ ಭಾಷೆಯನ್ನಾಗಿಸಬೇಕು. ಕೇವಲ ಭಾವನಾತ್ಮಕತೆಯಿಂದಾಗಲಿ, ಹಿಂದಿಯನ್ನು ವಿರೋಧಿಸುವುದರಿಂದಾಗಲಿ ಇದು ಸಾಧ್ಯವಿಲ್ಲ. ನಮಗೆಲ್ಲ ಮಾದರಿ ಆಗಿರುವ ವಿಷಯ ಏನೆಂದರೆ ಚೀನಾ, ಜಪಾನ್‌ ದೇಶಗಳು ಇಂಗ್ಲಿಷ್‌ ಭಾಷೆಯನ್ನು ಆಶ್ರಯಿಸದೆ ಸ್ವಾವಲಂಬಿಯಾಗಿರುವುದುʼʼ ಎಂದವರು ನುಡಿದರು.

“ಜಗತ್ತಿನ ಬೇರೆ ಬೇರೆ ದೇಶಗಳು ಯಾವ ಭಾಷೆ ಬಳಸುತ್ತಿವೆ, ಇಂಗ್ಲಿಷ್‌ಗೆ ಎಷ್ಟು ಪ್ರಾಮುಖ್ಯತೆ ನೀಡಿವೆ ಎಂದು ನಾವು ತಿಳಿಯದೇ ಮಾತನಾಡುತ್ತಿದ್ದೇವೆ. ಯಾವ ಕಾರಣಕ್ಕೂನ ಸ್ಥಳೀಯ ಭಾಷೆಗಳಿಗೆ ಮಾರಕ ಆಗಿರುವುದು, ಮುಂದೆ ಆಗುವುದು ಭಾರತದ ಭಾಷೆಗಳಿಂದ ಅಲ್ಲ. ನಮ್ಮೆಲ್ಲ ಭಾಷೆಗಳ ಹಿಂದೆ ಸಂಸ್ಕೃತದ ಗಟ್ಟಿ ಬೇರಿದೆ. ಅವು ಒಂದಕ್ಕೊಂದು ಬೆಸೆದುಕೊಂಡಿವೆ. ಆದರೆ ಹೊರಗಿನಿಂದ ಬಂದ ಇಂಗ್ಲಿಷ್‌ ನಮಗೆ ನಿಜವಾದ ಸವಾಲೊಡ್ಡುತ್ತಿದೆ. ಎಲ್ಲ ಭಾಷೆಗಳಂತೆಯೇ ಇಂಗ್ಲಿಷ್‌ ಕೂಡ ಒಂದು ಎಂದುಕೊಂಡಾಗ ನಮ್ಮ ಮಾತೃ ಭಾಷೆಯ ಬಗೆಗಿನ ಕೀಳರಿಮೆ ದೂರವಾಗುತ್ತದೆʼʼ ಎಂದರು.

ದೂರದರ್ಶನವನ್ನು ಹತ್ತಿರವಾಗಿಸಿದರು!

“ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಎಲ್ಲಿ ಇರುತ್ತಾರೋ ಅಲ್ಲಿ ಹೊಸತನ ಇರುತ್ತದೆ, ಕ್ರಿಯಾಶೀಲತೆ ಇರುತ್ತದೆʼʼ ಎಂದು ಕಸಾಪದ ನೂತನ ಅಧ್ಯಕ್ಷರ ಕಾರ್ಯಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಹರಿಪ್ರಕಾಶ್‌ ಕೋಣೆಮನೆ, “ಜೋಶಿ ಅವರು ದೂರದರ್ಶನದಲ್ಲಿ ಇದ್ದಾಗ ಅದರ ಹೆಸರು ದೂರದರ್ಶನ ಅಂತ ಇದ್ದರೂ ಅದನ್ನು ಅವರು ಕನ್ನಡಿಗರಿಗೆ ಸಮೀಪದ ದರ್ಶನ ಮಾಡಿಸಿದರು. ಯಾವುದು ನಮ್ಮ ಕೈಗೆ ಸಿಗುವುದಿಲ್ಲ ಎಂದುಕೊಂಡಿದ್ದೇವೋ ಅದನ್ನು ಸಮೀಪಕ್ಕೆ ತಂದರುʼʼ ಎಂದು ನೆನಪಿಸಿಕೊಂಡರು.

ಕಣ್ಣು ದಾನ ಮಾಡೋಣ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ “ಜಗತ್ತಿನ ಅತಿ ಹೆಚ್ಚು ದೃಷ್ಟಿ ವೈಕಲ್ಯ ಇರುವ ದೇಶ ಅಂದರೆ ಭಾರತ. ಪ್ರತಿ ಸಾವಿರ ಶಿಶುಗಳಲ್ಲಿ 9 ದೃಷ್ಟಿ ವೈಕಲ್ಯ ಹೊಂದಿರುತ್ತದೆ. ದೇಶದ ಶೇ.10ರಷ್ಟು ಜನರು ಮುಂದೆ ಬಂದು ಕಣ್ಣು ದಾನ ಮಾಡಿದರೆ ನಮ್ಮ ದೇಶದಲ್ಲಿ ಅಂಧತ್ವವೇ ಇರುವುದಿಲ್ಲʼʼ ಎಂದು ಹೇಳಿದರು.

ನಾನು ನನ್ನ ಕಣ್ಣುಗಳನ್ನ ದಾನ ಮಾಡುತ್ತೇನೆ ಎಂದು ಕಾರ್ಯಕ್ರಮದಲ್ಲಿ ಪ್ರಕಟಿಸಿದ ಡಾ. ಮಹೇಶ ಜೋಶಿ, ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರೂ ಕಣ್ಣು ದಾನ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದರು. ಅಂಗಾಂಗ ದಾನದ ಕುರಿತು ತಾವು ದೂರದರ್ಶನದಲ್ಲಿ ಕೆಲಸ ಮಾಡುವಾಗ ವಿಶೇಷ ಅಭಿಯಾನ ನಡೆಸಿದ್ದನ್ನು ಸ್ಮರಿಸಿದ ಅವರು, ಎಲ್ಲರೂ ಅಮೂಲ್ಯವಾದ ಕಣ್ಣನ್ನು ದಾನ ಮಾಡಿ ತಮ್ಮ ಮರಣ ನಂತರವೂ ಅಂಧರ ಬಾಳಿಗೆ ಬೆಳಕಾಗಬೇಕೆಂದರು.

ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2022ನೇ ಸಾಲಿನ ʻಡಾ.ಎಚ್.ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿಯನ್ನು ಸಾಹಿತಿ ರಮೇಶ್ ಮುದಿಗೆರೆ ಅವರಿಗೆ ನೀಡಲಾಯಿತು. ಮುದಿಗೆರೆ ಅವರ ʻಬಟಾಬಯಲುʼ ಕವನ ಸಂಕಲನ ಡಾ. ಎಚ್. ವಿಶ್ವನಾಥ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿಗೆ (ದೃಷ್ಟಿದೋಷ ಇರುವ ಲೇಖಕರಿಗೆ ಈ ಪ್ರಶಸ್ತಿ ಮೀಸಲು) ಆಯ್ಕೆಯಾಗಿದ್ದು, ಪ್ರಶಸ್ತಿಯು 10,000 ರೂ. ನಗದು ಹಾಗೂ ಫಲಕ ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಡಾ. ಎಚ್.ವಿಶ್ವನಾಥ, ಅಖಿಲ ಕರ್ನಾಟಕ ಮಕ್ಕಳ ಕೂಟದ ಅಧ್ಯಕ್ಷ ಕೆ ಮೋಹನ್‌ದೇವ್‌ ಆಳ್ವ ಉಪಸ್ಥಿತರಿದ್ದರು.

ಇದನ್ನೂ ಓದಿ| Award | ಸಾಹಿತಿ ರಮೇಶ್ ಮುದಿಗೆರೆಗೆ ಕಸಾಪ ದತ್ತಿ ಪ್ರಶಸ್ತಿ: ಇಂದು ಪ್ರದಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಹುಬ್ಬಳ್ಳಿ

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Neha Murder Case : ರಾಜ್ಯ ಸರ್ಕಾರವು ನೇಹಾ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದು, ಅಧಿಕಾರಿಗಳು ತನಿಖೆಯನ್ನು ಚುರುಕುಗೊಳ್ಳಿಸಿದ್ದಾರೆ. ಕಾರಾಗೃಹದಲ್ಲಿದ್ದ ಆರೋಪಿ ಫಯಾಜ್‌ ಕರೆತಂದು ನಿನ್ನೆ ಸ್ಥಳ ಮಹಜರು ಮಾಡಲಾಗಿದೆ. ಇಂದು ಗುರುವಾರ ಸಿಐಡಿ ಅಧಿಕಾರಿಗಳು ನೇಹಾ ತಂದೆ-ತಾಯಿಗಳ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ.

VISTARANEWS.COM


on

By

Neha Murder case CID Officer
Koo

ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ (Neha Murder Case) ಸಂಬಂಧ ಸಿಐಡಿ ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ಗುರುವಾರ (ಏ.25) ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದರು. ಸಿಐಡಿ ಎಡಿಜಿಪಿ ಬಿಕೆ‌ ಸಿಂಗ್, ಎಸ್‌ಪಿ ವೆಂಕಟೇಶ ನೇತೃತ್ವದ ತಂಡ ಸುಮಾರು ಒಂದು ಗಂಟೆಗಳ ಸುದೀರ್ಘ ವಿಚಾರಣೆಯನ್ನು ನಡೆಸಿದರು. ನಂತರ ನೇಹಾ ತಂದೆ ನಿರಂಜನ್‌ ಹಿರೇಮಠ್‌, ತಾಯಿ ಗೀತಾರಿಂದ ಹೇಳಿಕೆಯನ್ನು ಪಡೆದರು.

ಇನ್ನೂ ನೇಹಾ ಹತ್ಯೆ ಪ್ರಕರಣ (Neha Murder Case) ಸಂಬಂಧ ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ಬುಧವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಆರು ದಿನಗಳ‌ ಕಾಲ‌ ಕಸ್ಟಡಿಗೆ ನೀಡಿದ ಹಿನ್ನೆಲೆ ಆರೋಪಿಯನ್ನು ಧಾರವಾಡದ ಕಾರಾಗೃಹದಿಂದ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿತ್ತು. ಇದೀಗ ನೇಹಾ ತಂದೆ- ತಾಯಿಯಿಂದ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿರುವ ಸಿಐಡಿ ಅಧಿಕಾರಿಗಳು 1 ಗಂಟೆಯ ವಿಚಾರಣೆ ನಡೆಸಿ ವಾಪಸ್‌ ಆದರು.

ರಹಸ್ಯ ಸ್ಥಳದಲ್ಲಿ ಆರೋಪಿ ಫಯಾಜ್‌ ವಿಚಾರಣೆ

ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಧಾರವಾಡದಲ್ಲಿ ಬೀಡು ಬಿಟ್ಟಿದೆ. ಆರೋಪಿ ಫಯಾಜ್‌ನನ್ನು ಧಾರವಾಡದ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ ಅಧಿಕಾರಿಗಳು ನಿನ್ನೆ ಬುಧವಾರ ಸ್ಥಳ ಮಹಜರು ಜತೆಗೆ ಪ್ರಾಥಮಿಕ ಹಂತದ ವಿಚಾರಣೆ ಪೂರ್ಣಗೊಳಿಸಿದ್ದಾರೆ.

ಸ್ಥಳ ಮಹಜರು ವೇಳೆ ಕಾಲೇಜು ಬಳಿ ಎವಿಬಿಪಿ ಪ್ರತಿಭಟನೆ ನಡೆಸಿತ್ತು. ಇದೀಗ ಧಾರವಾಡದಲ್ಲಿಯೂ ಪ್ರತಿಭಟನೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಫಯಾಜ್‌ನನ್ನು ರಹಸ್ಯ ಸ್ಥಳದಲ್ಲಿಟ್ಟಿದ್ದಾರೆ. ಫಯಾಜ್‌ ನೇಹಾಳನ್ನು ಹತ್ಯೆ ಮಾಡಲು ಧಾರವಾಡದಲ್ಲೇ ಚಾಕು ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಾಕು ಖರೀದಿಸಿದ ಸ್ಥಳ, ಸ್ನೇಹಿತರ ಭೇಟಿಯಾದ ಸ್ಥಳಗಳಿಗೆ ಸಿಐಡಿ ಟೀಂ ಭೇಟಿ ನೀಡುವ ಸಾಧ್ಯತೆ ಇದೆ.

ಏನಿದು ನೇಹಾ ಹತ್ಯೆ ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌ ಎಂಬಾತ ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್‌ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ.

ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್‌ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್‌ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇತ್ತ ಹತ್ಯೆ ಮಾಡಿ ಎಸ್ಕೇಪ್‌ ಆಗುತ್ತಿದ್ದ ಫಯಾಜ್‌ನನ್ನು ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bank fraud: ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ

Bank fraud: ಎಸ್‌ಐಟಿ ತನಿಖೆ ನಡೆಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಠೇವಣಿದಾರರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ತಮಗೆ ಸಾಕಷ್ಟು ಅನ್ಯಾಯ ಆಗಿದೆ. ಕೋಟಿ ಕೋಟಿ ಕಳೆದುಕೊಂಡಿದ್ದೇವೆ. ನ್ಯಾಯ ಕೇಳೋಕೆ ಹೋದರೆ ಯಾವುದೇ ಪರಿಹಾರ ಇಲ್ಲ. ಮೂರು ವರ್ಷದಿಂದ ಒಂದು ದೂರು ಕೂಡ ದಾಖಲಾಗಿಲ್ಲ. ಕಾಂಗ್ರೆಸ್‌ ಮುಖಂಡ ಶಂಕರ್ ಗುಹಾ ಅವರು ಬಂದ ಮೇಲೆ ದೂರು ದಾಖಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

VISTARANEWS.COM


on

Guru Raghavendra and Vasishta Co operative Bank fraud handed over to SIT says DK Shivakumar
Koo

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಹಗರಣದ (Bank fraud) ತನಿಖೆ ಹೊಣೆಯನ್ನು ಎಸ್‌ಐಟಿಗೆ (SIT Investigation) ವಹಿಸುವಂತೆ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಚರ್ಚೆ ನಡೆಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಭರವಸೆ ನೀಡಿದ್ದಾರೆ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಠೇವಣಿದಾರರು ಗುರುವಾರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಮನವಿ ಮಾಡಿದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಈ ಭರವಸೆ ನೀಡಿದರು.

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ (Priyanka Gandhi) ಆಗಮಿಸಿದ್ದ ವೇಳೆ ಅವರನ್ನು ಭೇಟಿ ಮಾಡಿದ್ದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಠೇವಣಿದಾರರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂಪಾಯಿಯನ್ನು ಹೂಡಿಕೆ ಮಾಡಿದ್ದೇವೆ. ಈಗ ಹಗರಣದಿಂದಾಗಿ ನಮಗೆ ನಯಾ ಪೈಸೆ ಸಿಗುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಕಷ್ಟಪಟ್ಟು ನಾವು ದುಡಿದಿದ್ದ ಹಣವನ್ನೆಲ್ಲ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿಟ್ಟಿದ್ದೇವೆ. ಇದರಿಂದ ನಮಗೆ ತೀವ್ರ ಸಮಸ್ಯೆಯಾಗುತ್ತಿದೆ. ಈವರೆಗೆ ಯಾವ ಸರ್ಕಾರಗಳೂ ಈ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ನಮಗೆ ದಿಕ್ಕೇ ತೋಚದಂತಾಗಿದೆ. ಹೀಗಾಗಿ ಕೂಡಲೇ ಕ್ರಮವಹಿಸುವಂತೆ ಮನವಿ ಮಾಡಿದ್ದರು. ‌

ಎಸ್‌ಐಟಿ ತನಿಖೆಯ ಭರವಸೆ ನೀಡಿದ್ದ ಪ್ರಿಯಾಂಕಾ ಗಾಂಧಿ

ಠೇವಣಿದಾರರ ಮನವಿ ಸ್ವೀಕಾರ ಮಾಡಿದ್ದ ಪ್ರಿಯಾಂಕಾ ಗಾಂದಿ, ರಾಜ್ಯ ಸರ್ಕಾರದಿಂದ ಎಸ್‌ಐಟಿ ತನಿಖೆ ನಡೆಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಠೇವಣಿದಾರರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ತಮಗೆ ಸಾಕಷ್ಟು ಅನ್ಯಾಯ ಆಗಿದೆ. ಕೋಟಿ ಕೋಟಿ ಕಳೆದುಕೊಂಡಿದ್ದೇವೆ. ನ್ಯಾಯ ಕೇಳೋಕೆ ಹೋದರೆ ಯಾವುದೇ ಪರಿಹಾರ ಇಲ್ಲ. ಮೂರು ವರ್ಷದಿಂದ ಒಂದು ದೂರು ಕೂಡ ದಾಖಲಾಗಿಲ್ಲ. ಕಾಂಗ್ರೆಸ್‌ ಮುಖಂಡ ಶಂಕರ್ ಗುಹಾ ಅವರು ಬಂದ ಮೇಲೆ ದೂರು ದಾಖಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸಿಎಂಗೆ ಪತ್ರ ಬರೆಯಲು ಮುಂದಾದ ಡಿ.ಕೆ. ಶಿವಕುಮಾರ್

ಮನವಿ ಸ್ವೀಕರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈ ಸಂಬಂಧ ಮಾತನಾಡುತ್ತೇನೆ. ಶೀಘ್ರವೇ ಎಸ್‌ಐಟಿ ರಚನೆ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಕೂಡಲೇ ಈ ಸಂಬಂಧ ಸಿಎಂಗೆ ಪತ್ರವನ್ನು ಸಿದ್ಧಪಡಿಸಲು ಸಿಬ್ಬಂದಿಗೆ ಸೂಚನೆ ನೀಡಿದರು.

ಗುರು ರಾಘವೇಂದ್ರ ಬ್ಯಾಂಕ್ ಹಗರಣದ​ ಹಿನ್ನೆಲೆ

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರೆ ಬ್ಯಾಂಕ್​​ ಸುಳ್ಳು ಸಾಲಗಾರರ ಖಾತೆ ತೆರೆದು ಈ ಹಣವನ್ನು ಲಾಂಡರಿಂಗ್​ ಮಾಡಿದೆ.

ಇದನ್ನೂ ಓದಿ: Lok Sabha Election 2024: ಮತ ಹಾಕಿಸಿಕೊಳ್ಳಲು ಚುನಾವಣಾಧಿಕಾರಿಗಳು ಮನೆಗೆ ಬಂದಾಗಲೇ 98ರ ವೃದ್ಧೆ ಸಾವು!

ಫೆಬ್ರವರಿ 2022 ರಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅಧಿಕಾರಿಯೊಬ್ಬರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಬಂಧಿಸಿತು. ಈವರೆಗೆ ಸಂಸ್ಥೆಯ ಅಧ್ಯಕ್ಷ ಸೇರಿ 4 ಮಂದಿಯನ್ನು ಬಂಧಿಸಲಾಗಿದೆ. ಬ್ಯಾಂಕ್‌​ನಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನವರಾಗಿದ್ದಾರೆ. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದರು.

ಗುರು ರಾಘವೇಂದ್ರ ಬ್ಯಾಂಕ್‌ ಹಾಗೂ ಗುರು ಸಾರ್ವಭೌಮ ಬ್ಯಾಂಕ್‌ನಲ್ಲಿ 1,500 ಕೋಟಿ ರೂ. ಅಕ್ರಮ, ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿರುವ ಆರೋಪವಿದೆ.

Continue Reading

ಪ್ರಮುಖ ಸುದ್ದಿ

Lok Sabha Election 2024: ಮತ ಹಾಕಿಸಿಕೊಳ್ಳಲು ಚುನಾವಣಾಧಿಕಾರಿಗಳು ಮನೆಗೆ ಬಂದಾಗಲೇ 98ರ ವೃದ್ಧೆ ಸಾವು!

Lok Sabha Election 2024: ಪಾರ್ವತಮ್ಮ ಅವರಿಂದ ಮತ ಹಾಕಿಸಿಕೊಳ್ಳಲು ಚುನಾವಣಾ ಅಧಿಕಾರಿಗಳು ಮತಪೆಟ್ಟಿಗೆ ಸಹಿತ ಅವರ ನಿವಾಸಕ್ಕೆ ಧಾವಿಸಿದ್ದರು. ಈ ವೇಳೆ ಅಧಿಕಾರಿಗಳು ಮತ ಚಲಾವಣೆ ಮಾಡಿಸಲು ತಯಾರಿ ನಡೆಸಿಕೊಳ್ಳುತ್ತಿದ್ದರು. ಆದರೆ, ಅಷ್ಟರಲ್ಲಿ ಪಾರ್ವತಮ್ಮ ಅವರು ವಯೋಸಹಜವಾಗಿ ನಿಧನರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬೇಕು ಎಂಬ ಅವರ ಕೊನೇ ಆಸೆ ಕೊನೆಗೂ ಈಡೇರಲೇ ಇಲ್ಲ.

VISTARANEWS.COM


on

Lok Sabha Election 2024 vote for better future and 98 year old woman dies when returning officer arrives at home to cast her vote
Koo

ಕೊಪ್ಪಳ: ಲೋಕಸಭಾ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ (First phase of polling) ಕರ್ನಾಟಕವು ಸಜ್ಜಾಗಿದೆ. ಮತದಾರರು ಸಹ ತಮ್ಮ ನೆಚ್ಚಿನ ಅಭ್ಯರ್ಥಿ, ಪಕ್ಷವನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಇದೇ ರೀತಿ ಕೊಪ್ಪಳ ಜಿಲ್ಲೆಯಲ್ಲಿ ವೃದ್ಧೆಯೊಬ್ಬರು ಮತದಾನ ಮಾಡಲು ಕಾತರರಾಗಿದ್ದರು. ಈ ಸಂಬಂಧ ಮನೆಯಲ್ಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದರು. ವಿಪರ್ಯಾಸವೆಂದರೆ ಚುನಾವಣಾಧಿಕಾರಿಗಳು ಮತ ಹಾಕಿಸಿಕೊಳ್ಳಲು ಮನೆಗೆ ಬಂದಾಗಲೇ ಅವರು ಅಸುನೀಗಿದ್ದಾರೆ.

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಪಾರ್ವತಮ್ಮ ಸಜ್ಜನ (98) ಮೃತ ವೃದ್ಧೆಯಾಗಿದ್ದಾರೆ. ಇವರು ಪ್ರತಿ ಚುನಾವಣೆಗೂ ತಪ್ಪದೇ ಮತ ಚಲಾವಣೆ ಮಾಡುತ್ತಿದ್ದರು. ಈ ಬಾರಿಯೂ ಮತ ಚಲಾಯಿಸಬೇಕು ಎಂದು ಉತ್ಸಾಹವನ್ನು ತೋರಿದ್ದರು. ಇದಕ್ಕಾಗಿಯೇ ಅವರು ಮನೆಯಲ್ಲಿ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದರು.

Lok Sabha Election 2024 98 year old woman dies when returning officer arrives at home to cast her vote

ಪಾರ್ವತಮ್ಮ ಅವರಿಂದ ಮತ ಹಾಕಿಸಿಕೊಳ್ಳಲು ಚುನಾವಣಾ ಅಧಿಕಾರಿಗಳು ಮತಪೆಟ್ಟಿಗೆ ಸಹಿತ ಅವರ ನಿವಾಸಕ್ಕೆ ಧಾವಿಸಿದ್ದರು. ಈ ವೇಳೆ ಅಧಿಕಾರಿಗಳು ಮತ ಚಲಾವಣೆ ಮಾಡಿಸಲು ತಯಾರಿ ನಡೆಸಿಕೊಳ್ಳುತ್ತಿದ್ದರು. ಆದರೆ, ಅಷ್ಟರಲ್ಲಿ ಪಾರ್ವತಮ್ಮ ಅವರು ವಯೋಸಹಜವಾಗಿ ನಿಧನರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬೇಕು ಎಂಬ ಅವರ ಕೊನೇ ಆಸೆ ಕೊನೆಗೂ ಈಡೇರಲೇ ಇಲ್ಲ.

ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

ವಿದ್ಯುನ್ಮಾನ ಮತಯಂತ್ರಗಳ (EVM- ಇವಿಎಂ) ಕುರಿತು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕಾನೂನು ಹೋರಾಟದ ನಡುವೆಯೇ ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (1st phase Voting) ನಡೆಯುತ್ತಿದೆ. ಇವಿಎಂಗಳಲ್ಲಿ ಚಲಾವಣೆಯಾದ 100% ಮತಗಳನ್ನೂ ವಿವಿಪ್ಯಾಟ್ (VVPAT) ವ್ಯವಸ್ಥೆಯ ಮೂಲಕ ಪರಿಶೀಲಿಸುವ ವ್ಯವಸ್ಥೆ ಜಾರಿ ಮಾಡಬೇಕು (VVPAT Verification) ಎಂದು ಅರ್ಜಿದಾರರು ಕೋರಿದ್ದಾರೆ. ಈ ಸಂದರ್ಭದಲ್ಲಿ, ಇವಿಎಂ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ವಿವಿಪ್ಯಾಟ್‌ ಮೂಲಕ ಅದರ ಪರಿಶೀಲನೆ ಹೇಗೆ, ಎಂಬುದನ್ನು ವಿವರವಾಗಿ ತಿಳಿಯೋಣ.

ಕೋರ್ಟ್‌ನಲ್ಲಿ ನಡೆಸದ ವಾದವಿವಾದಗಳ ಸಮಯದಲ್ಲಿ, ಬ್ಯಾಲೆಟ್ ವೋಟಿಂಗ್ ಸಿಸ್ಟಮ್‌ಗೆ ಹಿಂತಿರುಗಲು ಸಲಹೆಗಳು ಬಂದಿವೆ. ಅರ್ಜಿದಾರರು ಯುರೋಪಿಯನ್ ರಾಷ್ಟ್ರಗಳ ಉದಾಹರಣೆ ತೋರಿಸಿದ್ದಾರೆ. ಆದರೆ, “ಪಶ್ಚಿಮ ಬಂಗಾಳದ ಜನಸಂಖ್ಯೆಯೇ ಜರ್ಮನಿಗಿಂತ ಹೆಚ್ಚಿರುವುದನ್ನು ಗಮನಿಸಿ. ಇಂತಹ ಹೋಲಿಕೆಗಳನ್ನು ಮಾಡಬೇಡಿ” ಎಂದು ನ್ಯಾಯಾಲಯವು ಅರ್ಜಿದಾರರಿಗೆ ಹೇಳಿದೆ. ನಿನ್ನೆ, ಭಾರತೀಯ ಚುನಾವಣಾ ಆಯೋಗದ ವಕೀಲರು ಇವಿಎಂ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ರೀತಿಯ ಟ್ಯಾಂಪರಿಂಗ್ ವಿರುದ್ಧ ಹೇಗೆ ದೋಷರಹಿತವಾಗಿದೆ ಎಂಬುದನ್ನು ವಿವರಿಸಿದರು.

ಇವಿಎಂ ಕೆಲಸ ಮಾಡುವುದು ಹೇಗೆ?

EVM ಎರಡು ಘಟಕಗಳನ್ನು ಹೊಂದಿದೆ- ನಿಯಂತ್ರಣ ಘಟಕ ಮತ್ತು ಮತದಾನ ಘಟಕ. ಇವುಗಳನ್ನು ಕೇಬಲ್ ಮೂಲಕ ಸಂಪರ್ಕಿಸಲಾಗಿದೆ. ಇವಿಎಂ ನಿಯಂತ್ರಣ ಘಟಕವು ಪೋಲಿಂಗ್ ಆಫೀಸರ್‌ ಬಳಿ ಇರುತ್ತದೆ. ಮತಯಂತ್ರ ಸಾಮಾನ್ಯವಾಗಿ ಮತದಾರನ ಖಾಸಗಿತನಕ್ಕಾಗಿ ಮುಚ್ಚಿದ ಆವರಣದೊಳಗೆ ಇರುತ್ತದೆ.

ಮತಗಟ್ಟೆಯಲ್ಲಿ, ಮತಗಟ್ಟೆ ಅಧಿಕಾರಿಯು ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ. ನಂತರ ನೀವು ಮತ ​​ಚಲಾಯಿಸಲು ಅನುವು ಮಾಡಿಕೊಡುವ ಬ್ಯಾಲೆಟ್ ಬಟನ್ ಅನ್ನು ಒತ್ತುತ್ತಾರೆ. ಬ್ಯಾಲೆಟ್ ಯೂನಿಟ್‌ನಲ್ಲಿ ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳು ಅವುಗಳ ಪಕ್ಕದಲ್ಲಿ ನೀಲಿ ಬಟನ್‌ಗಳಿರುತ್ತವೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತಬೇಕು.

ಮತದಾನ ಪ್ರಕ್ರಿಯೆ

ಮತಗಟ್ಟೆ ಅಧಿಕಾರಿಯ ನಿಯಂತ್ರಣ ಘಟಕವು ಬಹು ಬಟನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ʼballot’ ಎಂಬ ಶೀರ್ಷಿಕೆಯಿದು. ಒಮ್ಮೆ ಅಧಿಕಾರಿಯು ಈ ಗುಂಡಿಯನ್ನು ಒತ್ತಿದರೆ, ʼಬ್ಯುಸಿ’ ಎಂಬ ಶೀರ್ಷಿಕೆಯ ಕೆಂಪು ದೀಪವು ಬೆಳಗುತ್ತದೆ. ಒಂದು ಮತವನ್ನು ದಾಖಲಿಸಲು ನಿಯಂತ್ರಣ ಘಟಕ ಸಿದ್ಧವಾಗಿದೆ ಎಂದು ಇದು ಸೂಚಿಸುತ್ತದೆ. ಮತದಾರ ಇರುವ ಬ್ಯಾಲೆಟ್ ಯೂನಿಟ್‌ನಲ್ಲಿ ಹಸಿರು ದೀಪ ಆನ್ ಆಗಿದ್ದು, ಮತದಾನಕ್ಕೆ ಯಂತ್ರ ಸಿದ್ಧವಾಗಿದೆ ಎಂದು ಸಂಕೇತಿಸುತ್ತದೆ. ನಂತರ ಮತದಾರನು ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತುತ್ತಾನೆ. ಬ್ಯಾಲೆಟ್ ಯೂನಿಟ್ ದೃಷ್ಟಿಹೀನ ಮತದಾರರಿಗೆ ಬ್ರೈಲ್ ಲಿಪಿಯನ್ನು ಸಹ ಹೊಂದಿದೆ.

ಮತದಾರರು ಮತದಾನ ಮಾಡಿದ ನಂತರ, ನಿಯಂತ್ರಣ ಘಟಕವು ಬೀಪ್ ಧ್ವನಿಯನ್ನು ಹೊರಸೂಸುತ್ತದೆ. ಇದು ಮತದಾನ ಪೂರ್ಣಗೊಂಡಿದೆ ಎಂದು ಸೂಚಿಸುತ್ತದೆ. ನಿಯಂತ್ರಣ ಘಟಕವು ಎಲ್‌ಇಡಿ ಪರದೆ ಮತ್ತು ಬಟನ್‌ಗಳನ್ನು ಹೊಂದಿದ್ದು, ಅದರಲ್ಲಿ ದಾಖಲಾಗಿರುವ ಒಟ್ಟು ಮತಗಳ ಸಂಖ್ಯೆಯನ್ನು ನೋಡಲು ಬಳಸಬಹುದು. ಎಲ್ಲಾ ಮತಗಳು ದಾಖಲಾದ ನಂತರ, ಮತಗಟ್ಟೆ ಅಧಿಕಾರಿಯು ನಿಯಂತ್ರಣ ಘಟಕದ ಬದಿಯಲ್ಲಿರುವ ಗುಂಡಿಯನ್ನು ಒತ್ತಿ, ಯಂತ್ರವನ್ನು ಮುಚ್ಚುತ್ತಾರೆ. ಎಣಿಕೆಯ ದಿನದಂದು, ಪ್ರತಿ ಅಭ್ಯರ್ಥಿ ಪಡೆದ ಒಟ್ಟು ಮತಗಳನ್ನು ನೋಡಲು ʼresult’ ಶೀರ್ಷಿಕೆಯ ಬಟನ್ ಅನ್ನು ಬಳಸಲಾಗುತ್ತದೆ. ನಿಯಂತ್ರಣ ಘಟಕದಿಂದ ಎಲ್ಲಾ ಡೇಟಾವನ್ನು ಅಳಿಸಲು ಬಳಸಬಹುದಾದ ʼclear’ ಬಟನ್ ಕೂಡ ಇದೆ.

VVPAT ಎಂದರೇನು?

VVPAT ಎಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್. ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ಚಲಾಯಿಸಿದ ಅಭ್ಯರ್ಥಿಗೇ ಆ ಮತ ಹೋಗಿದೆಯೇ ಎಂದು ನೋಡಲು ಅವಕಾಶವಿರುವ ಯಂತ್ರ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒಮ್ಮೆ ಒತ್ತಿದರೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗೆ ಸಂಪರ್ಕಗೊಂಡಿರುವ VVPAT, ಏಳು ಸೆಕೆಂಡುಗಳ ಕಾಲ ಮತದಾರರಿಗೆ ಗೋಚರಿಸುವ ಕಾಗದದ ಸ್ಲಿಪ್ ಅನ್ನು ಉತ್ಪಾದಿಸುತ್ತದೆ. ಅದರ ನಂತರ, ಪೇಪರ್ ಸ್ಲಿಪ್ VVPAT ಯಂತ್ರದಲ್ಲಿರುವ ಡ್ರಾಪ್ ಬಾಕ್ಸ್‌ಗೆ ಬೀಳುತ್ತದೆ.

ಪ್ರಸ್ತುತ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿಯೂ 5 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಇವಿಎಂಗಳೊಂದಿಗೆ ಕ್ರಾಸ್-ಚೆಕ್ ಮಾಡಲಾಗುತ್ತದೆ. 100 ಶೇಕಡ ಇವಿಎಂಗಳಲ್ಲಿ ದಾಖಲಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಕ್ರಾಸ್ ಚೆಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಯಸಿವೆ. ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್ ಲೈಟ್ ಆನ್ ಆಗಿದ್ದು, ಮತದಾರರು ತಮ್ಮ ಮತವನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಅರ್ಜಿದಾರರು ಕೋರಿದ್ದಾರೆ. ಪೇಪರ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಸಲಹೆಯಾಗಿದೆ. ಚುನಾವಣಾ ಆಯೋಗ ಇದನ್ನು ವಿರೋಧಿಸಿದೆ. ಇದು ಮತದಾನದ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಳಕೆಯಾಗಬಹುದು ಎಂದು ಹೇಳಿದೆ.

ಇದನ್ನೂ ಓದಿ: Gold Rate Today: ಬಂಗಾರದ ಮಾರುಕಟ್ಟೆಯಲ್ಲಿ ದರ ಇಂದು ತುಸು ಇಳಿಕೆ; 24Kಗೆ ಎಷ್ಟಿದೆ ನೋಡಿ

ಸಮಯ ಉಳಿಕೆ

ಚುನಾವಣಾ ಆಯೋಗದ ಪ್ರಕಾರ ಇವಿಎಂ ವ್ಯವಸ್ಥೆ ಫೂಲ್ ಪ್ರೂಫ್ ಆಗಿದೆ. ಇದು ಮತ ಎಣಿಕೆ ಸಮಯವನ್ನು ಉಳಿಸುತ್ತದೆ, ಟ್ಯಾಂಪರ್ ಪ್ರೂಫ್ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಇವಿಎಂಗಳು ಹಗುರವಾಗಿವೆ ಮತ್ತು ಸದೃಢವಾಗಿವೆ- ಮತಗಟ್ಟೆ ಅಧಿಕಾರಿಗಳು ದೂರದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಟ್ರೆಕ್ಕಿಂಗ್‌ ಮಾಡಬೇಕಾದ ದೇಶದಲ್ಲಿ ಇದು ನಿರ್ಣಾಯಕವಾಗಿದೆ.

ಎಲ್ಲರ ಸಮ್ಮುಖದಲ್ಲಿ ಪರಿಶೀಲನೆ

ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ ಮತ್ತು ಬ್ಯಾಟರಿ/ಪವರ್ ಪ್ಯಾಕ್‌ ಇದರೊಂದಿಗೆ ಬರುತ್ತದೆ. ಸ್ಥಿರವಾದ ವಿದ್ಯುತ್ ಸರಬರಾಜನ್ನು ಹೊಂದಿರದ ಪ್ರದೇಶಗಳಲ್ಲಿ ಮತದಾನವನ್ನು ಸಕ್ರಿಯಗೊಳಿಸಲು ಇದು ಮತ್ತೊಂದು ನಿರ್ಣಾಯಕ ವೈಶಿಷ್ಟ್ಯ. ಪ್ರತಿ ಚುನಾವಣೆಗೂ ಮುನ್ನ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ನಡೆಸಲಾಗುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಇವಿಎಂಗಳಲ್ಲಿನ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ವಿವಿಧ ಘಟಕಗಳ ಕಾರ್ಯವನ್ನು ಪ್ರದರ್ಶಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಸಲಾಗುತ್ತದೆ.

Continue Reading

ಚಾಮರಾಜನಗರ

Road Accident : ಶಾಸಕ ಎಆರ್ ಕೃಷ್ಣಮೂರ್ತಿ ಕಾರು ಅಪಘಾತ; ಚಲಿಸುತ್ತಿದ್ದಾಗಲೇ ಕಾರ್‌ ಟೈರ್‌ ಸ್ಫೋಟ

Road Accident : ಬುಧವಾರ ತಡರಾತ್ರಿ ಚಾಮರಾಜನಗರದಿಂದ ಮೈಸೂರಿನ ಮನೆಗೆ ಹೋಗುವಾಗ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಕಾರು ಅಪಘಾತವಾಗಿದೆ. ಚಲಿಸುತ್ತಿದ್ದಾಗಲೇ ಕಾರಿನ ಟೈರ್‌ ಸ್ಫೋಟಗೊಂಡು ಕಾರು ಅಪಘಾತಕ್ಕೀಡಾಗಿದೆ. ಇತ್ತ ತುಮಕೂರಿನಲ್ಲಿ ಲಾರಿಯ ಹಿಂಬದಿಗೆ ಬುಲೆರೋ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.

VISTARANEWS.COM


on

By

Road Accident in Chamarajanagar
Koo

ಚಾಮರಾಜನಗರ/ತುಮಕೂರು: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ಸಂಭವಿಸಿವೆ. ಮೈಸೂರಿನ ಹೊರವಲಯದ ನಾಡನಹಳ್ಳಿಯಲ್ಲಿ ಶಾಸಕ ಎಆರ್ ಕೃಷ್ಣಮೂರ್ತಿ (MLA A R Krishnamurthy) ಅವರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Road Accident

ಕೊಳ್ಳೆಗಾಲದ ಕಾಂಗ್ರೆಸ್ ಶಾಸಕ ಎಆರ್ ಕೃಷ್ಣಮೂರ್ತಿ ಬುಧವಾರ ತಡರಾತ್ರಿ ಚಾಮರಾಜನಗರದಿಂದ ಮೈಸೂರಿನ ಮನೆಗೆ ಹೋಗುವ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದಾಗಲೇ ಕಾರಿನ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣಕ್ಕೆ ಸಿಗದೇ ಕಾರು ರಸ್ತೆ ಬಿಟ್ಟು ಪಕ್ಕಕ್ಕೆ ಇಳಿದಿದೆ.

Road Accident in Chamarajnagar

ಇದನ್ನೂ ಓದಿ: IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

ಲಾರಿಯ ಹಿಂಬದಿಗೆ ಬುಲೆರೋ ವಾಹನ ಡಿಕ್ಕಿ, ಇಬ್ಬರು ಸಾವು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿಯ ಹಿಂಬದಿಗೆ ಬುಲೆರೋ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಂದೆ ಸಾಗುತ್ತಿದ್ದ ಅಶೋಕ ಲೇಲ್ಯಾಂಡ್ ಲಾರಿಗೆ ಹಿಂಬದಿಯಿಂದ ಬೊಲೆರೋ ವಾಹನ ಡಿಕ್ಕಿಯಾಗಿದೆ. ಪರಿಣಾಮ ಬೊಲೆರೋ ವಾಹನದಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಉಮೇಶ್ ನಾಗಪ್ಪ ಹಾಗೂ ಸಂತೋಷ್ ಸುರೇಶ್ ಮೃತ ದುರ್ದೈವಿ. ಮೃತರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು ಎನ್ನಲಾಗಿದೆ.

Road Accident in Tumkur

ದ್ರಾಕ್ಷಿ ತುಂಬಿಸಿಕೊಂಡು ಬೆಂಗಳೂರು ಕಡೆ ಬರುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಬೊಲೆರೋ ವಾಹನ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
arunachal pradesh landslide
ವೈರಲ್ ನ್ಯೂಸ್18 mins ago

Arunachal Pradesh landslide: ಅರುಣಾಚಲದಲ್ಲಿ ಭೂಕುಸಿತ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್‌

Neha Murder case CID Officer
ಹುಬ್ಬಳ್ಳಿ26 mins ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Virender Sehwag
ಕ್ರೀಡೆ34 mins ago

Virender Sehwag: ಬಡ ದೇಶದ ಕ್ರಿಕೆಟ್​ ಲೀಗ್​ ಆಡಲ್ಲ ಎಂದ ವೀರೇಂದ್ರ ಸೆಹವಾಗ್; ಕಾರಣವೇನು?

Guru Raghavendra and Vasishta Co operative Bank fraud handed over to SIT says DK Shivakumar
ಬೆಂಗಳೂರು36 mins ago

Bank fraud: ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ

Shakhahaari Movie In OTT amzon Prime
ಸ್ಯಾಂಡಲ್ ವುಡ್42 mins ago

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Xiaomi EV
ಆಟೋಮೊಬೈಲ್43 mins ago

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Nilkrishna Gajare JEE main 2024 result AIR 1
ಅಂಕಣ51 mins ago

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

Aircraft Crash
ದೇಶ57 mins ago

Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ; ಭಾಗಗಳು ಸುಟ್ಟು ಭಸ್ಮ

Lok Sabha Election 2024 vote for better future and 98 year old woman dies when returning officer arrives at home to cast her vote
ಪ್ರಮುಖ ಸುದ್ದಿ1 hour ago

Lok Sabha Election 2024: ಮತ ಹಾಕಿಸಿಕೊಳ್ಳಲು ಚುನಾವಣಾಧಿಕಾರಿಗಳು ಮನೆಗೆ ಬಂದಾಗಲೇ 98ರ ವೃದ್ಧೆ ಸಾವು!

Horlicks Label
ದೇಶ1 hour ago

Horlicks Label: ಹಾರ್ಲಿಕ್ಸ್‌ ಇನ್ನು ಹೆಲ್ತ್‌ ಡ್ರಿಂಕ್ಸ್‌ ಅಲ್ಲ ಎಂದ ಹಿಂದುಸ್ತಾನ್‌ ಯುನಿಲಿವರ್;‌ ಕಾರಣ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ26 mins ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌