JDS ticket : ಜೆಡಿಎಸ್‌ ಟಿಕೆಟ್‌ ಹಂಚಿಕೆ ಗೊಂದಲ, ಕುಮಾರಸ್ವಾಮಿ ಕಾರಿಗೆ ಕಾರ್ಯಕರ್ತರ ಮುತ್ತಿಗೆ - Vistara News

ರಾಜಕೀಯ

JDS ticket : ಜೆಡಿಎಸ್‌ ಟಿಕೆಟ್‌ ಹಂಚಿಕೆ ಗೊಂದಲ, ಕುಮಾರಸ್ವಾಮಿ ಕಾರಿಗೆ ಕಾರ್ಯಕರ್ತರ ಮುತ್ತಿಗೆ

ಹಾಸನದಲ್ಲಿ ಸ್ವರೂಪ್‌ ಪ್ರಕಾಶ್‌ಗೆ ಪಕ್ಷದ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಕಾರಿಗೆ ಮುತ್ತಿಗೆ ಹಾಕಿದ ಘಟನೆ (JDS ticket) ಸೋಮವಾರ ರಾತ್ರಿ ನಡೆದಿದೆ.

VISTARANEWS.COM


on

JDS
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಸನ : ಹಾಸನದಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ ಮುಂದುವರಿದಿದೆ. (JDS ticket) ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ನೀಡುವಂತೆ ಪಕ್ಷದ ಕಾರ್ಯಕರ್ತರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಕಾರಿಗೆ ಸೋಮವಾರ ರಾತ್ರಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಹಾಸನ ಜಿಲ್ಲೆ‌ಯ ಶ್ರವಣಬೆಳಗೊಳದಲ್ಲಿ ಕುಮಾರಸ್ವಾಮಿ ಅವರಿದ್ದ ಕಾರನ್ನು ಕಾರ್ಯಕರ್ತರು ತಡೆದರು. ಸ್ವರೂಪ್ ಪ್ರಕಾಶ್ ಭಾವಚಿತ್ರ ಹಿಡಿದು ಹೆಚ್ಡಿಕೆ ಮುಂದೆ ಬೇಡಿಕೆ ಇಡಲಾಯಿತು. ಶ್ರವಣಬೆಳಗೊಳ ಗ್ರಾಮದಲ್ಲಿ ಅನೇಕ ಸ್ನೇಹಿತರು ಮತ್ತು ಬೆಂಬಲಿಗರನ್ನು ಸ್ವರೂಪ್ ಹೊಂದಿದ್ದಾರೆ. ಇಂಜಿನಿಯರಿಂಗ್ ಪದವಿಯನ್ನು ಶ್ರವಣಬೆಳಗೊಳದಲ್ಲಿ ಮಾಡಿದ್ದಾರೆ. ವಿದ್ಯಾಭ್ಯಾಸದ ದಿನಗಳಿಂದಲೂ ಗ್ರಾಮದಲ್ಲಿ ಉತ್ತಮ ಒಡನಾಟ ಹೊಂದಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನು ಹೆಚ್ಡಿಕೆ ಆಯೋಜಿಸಿದ್ದಾರೆ. ಸೋಮವಾರ ರಾತ್ರಿ ಶ್ರವಣಬೆಳಗೊಳ ಗ್ರಾಮಕ್ಕೆ ಹೆಚ್ಡಿಕೆ ಆಗಮಿಸಿದ ವೇಳೆಯಲ್ಲಿ ಘಟನೆ ನಡೆದಿದೆ. ಕಾರ್ಯಕರ್ತರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಡಿಕೆ ಮುನ್ನಡೆದರು. ವಡ್ಡರಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Lok sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರೋ ಅತ್ಯಂತ ಸಿರಿವಂತ, ಬಡ ಅಭ್ಯರ್ಥಿಗಳು ಯಾರ್ಯಾರು ಗೊತ್ತಾ?

Lok sabha Election 2024:ದೇಶದಲ್ಲಿ ಎರಡನೇ ಹಂತದ ಚುನಾವಣೆ ರಂಗೇರಿದೆ. ಈ ಬಾರಿ ಕಣದಲ್ಲಿ ಅತ್ಯಂತ ಶ್ರೀಮಂತ ಹಾಗೂ ಬಡ ಅಭ್ಯರ್ಥಿಗಳು ಇದ್ದಾರೆ. ಎರಡನೇ ಹಂತದ ಚುನಾವಣೆಯ ಕಣದಲ್ಲಿರುವ ಕೆಲವು ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯನ್ನು ಅಸೋಸಿಯೇಷನ್ ​​​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿದೆ.

VISTARANEWS.COM


on

By

Koo

ನವದೆಹಲಿ: ಲೋಕಸಭಾ ಚುನಾವಣೆ-2024ರಲ್ಲಿ (Lok Sabha Election 2024) ಒಟ್ಟು 12 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದ 1,120 ಅಭ್ಯರ್ಥಿಗಳ ತಮ್ಮ ಅದೃಷ್ಟವನ್ನು ಪರೀಕ್ಷೆ ಇಂದು ನಡೆಯಲಿದೆ. ಈ ಬಾರಿ ಹಲವು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿ ಇದ್ದು, ಇವರಲ್ಲಿ ಅತೀ ಹೆಚ್ಚು ಶ್ರೀಮಂತ (richest), ಕಡಿಮೆ ಆಸ್ತಿ ಹೊಂದಿರುವ (Candidates With Lowest Assets) ಹಾಗೂ ಯಾವುದೇ ಆಸ್ತಿ ಪಾಸ್ತಿ ಹೊಂದಿರದ ಅಭ್ಯರ್ಥಿಗಳೂ (Zero assets candidates) ಸೇರಿದ್ದಾರೆ.

ಎರಡನೇ ಹಂತದ ಚುನಾವಣೆಯ ಕಣದಲ್ಲಿರುವ ಕೆಲವು ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯನ್ನು ಅಸೋಸಿಯೇಷನ್ ​​​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿದೆ. ಎರಡನೇ ಹಂತದ ಚುನಾವಣೆಯಲ್ಲಿ ಭಾಗವಹಿಸುತ್ತಿರುವ 1,210 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ್ದು, 390 ಅಭ್ಯರ್ಥಿಗಳು ‘ಕೋಟ್ಯಧಿಪತಿಗಳು’ ಎಂದು ಹೇಳಿದೆ. ಇವರಲ್ಲಿ ಶೇ. 21ರಷ್ಟು ಅಭ್ಯರ್ಥಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳಿವೆ.

ಟಾಪ್‌ 5 ಶ್ರೀಮಂತ ಅಭ್ಯರ್ಥಿಗಳಿವರು

1. ವೆಂಕಟರಮಣ ಗೌಡ

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಲಿಯಾಸ್‌ ಸ್ಟಾರ್‌ ಚಂದ್ರು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 622 ಕೋಟಿ ರೂ. ಗೂ ಅಧಿಕ ಆಸ್ತಿ ಹೊಂದಿದ್ದಾರೆ.

2. ಡಿ.ಕೆ. ಸುರೇಶ್

ಎರಡನೇ ಸ್ಥಾನವು ಕಾಂಗ್ರೆಸ್‌ನ ಅಭ್ಯರ್ಥಿ ಡಿ.ಕೆ. ಸುರೇಶ್‌ಗೆ ಸೇರಿದೆ. ಅವರು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರರಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿರುವ ಸುರೇಶ್ ಅವರ ಒಟ್ಟು ಆಸ್ತಿ ಮೌಲ್ಯ 593 ಕೋಟಿ ರೂ.

Hema Malini

3. ಹೇಮಾ ಮಾಲಿನಿ

ಖ್ಯಾತ ನಟಿ ಹೇಮಾ ಮಾಲಿನಿ ಮೂರನೇ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶದ ಮಥುರಾದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ. ಇವರು 278.9 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

4. ಸಂಜಯ್ ಶರ್ಮಾ

ಮಧ್ಯಪ್ರದೇಶದ ಹೋಶಂಗಾಬಾದ್‌ನಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ಸಂಜಯ್ ಶರ್ಮಾ ಅವರ ಆಸ್ತಿ 232 ಕೋಟಿ ರೂ.

5. ಎಚ್.ಡಿ. ಕುಮಾರಸ್ವಾಮಿ

ಬಿಜೆಪಿಯೊಂದಿಗೆ ಸಮ್ಮಿಶ್ರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಮುಖಂಡ ಹಾಗೂ ಮಂಡ್ಯ ಅಭ್ಯರ್ಥಿ ಎಚ್ .ಡಿ. ಕುಮಾರಸ್ವಾಮಿ ಅವರ ಆಸ್ತಿ 217 ಕೋಟಿ ರೂ.

ಅತೀ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿಗಳು

    1. ಮಹಾರಾಷ್ಟ್ರದ ನಾಂದೆಡ್‌ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಲಕ್ಷ್ಮಣ್‌ ನಾಗರಾವ್‌ ತಮ್ಮ ಅಫಿಡವಿಟ್‌ನಲ್ಲಿ ಕೇವಲ 500 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

    2. ಕೇರಳದ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸಿರುವ ರಾಜೇಶ್ವರಿ ಕೆ.ಆರ್.‌ 1000ರೂ ಆದಾಯ ಘೋಷಿಸಿದ್ದಾರೆ.

      3. ಮತ್ತೋರ್ವ ಸ್ವತಂತ್ರ ಅಭ್ಯರ್ಥಿ ಅಮರಾವತಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಪೃಥ್ವಿಸಾಮ್ರಾಟ್‌ ಮುಖಿಂದ್‌ರಾವ್‌ ದೀಪವಂಶ್ 1,400 ರೂ ಮೊತ್ತದ ಆಸ್ತಿ ಹೊಂದಿದ್ದಾರೆ.

      4. ಇನ್ನು ಕೇವಲ 2000 ರೂ. ಮೌಲ್ಯ ಆಸ್ತಿ ಹೊಂದಿರುವ ರಾಜಸ್ಥಾನದ ಜೋಧ್‌ಪುರ ಅಭ್ಯರ್ಥಿ ಶಹನಾಜ್‌ ಬಾನೋ ನಾಲ್ಕನೇ ಸ್ಥಾನದಲ್ಲಿದ್ದಾರೆ.

      5. ಕೇರಳದ ಕೊಟ್ಟಾಯಂನಲ್ಲಿ ಕಣಕ್ಕಿಳಿದಿರುವ ವಿ.ಪಿ.ಕೊಚುಮನ್‌ 2,230 ರೂ. ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

      ಇದನ್ನೂ ಓದಿ:Lok Sabha Election 2024: ಲೋಕಸಭೆ ಚುನಾವಣೆ 2024 ಮತದಾನ Live News

      ಯಾವುದೇ ಆಸ್ತಿ ಪಾಸ್ತಿ ಹೊಂದಿರದ ಅಭ್ಯರ್ಥಿಗಳು:

      ಕರ್ನಾಟಕ ಪ್ರಕಾಶ್‌ ಆರ್.ಎ ಜೈನ್‌, ರಾಮಮೂರ್ತಿ ಎಂ ಮತ್ತು ರಾಜಾ ರೆಡ್ಡಿ ಸೇರದಂತೆ ಒಟ್ಟು ಆರು ಮಂದಿ ತಮ್ಮ ಬಳಿ ಯಾವುದೇ ಆಸ್ತಿ ಪಾಸ್ತಿ ಇಲ್ಲ ಎಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಕಿಶೋರ್‌ ಭೀಮರಾವ್‌ ಲಾಬಡೆ, ನಾಗೇಶ್‌ ಸಾಂಬಾಜಿ ಗಾಯಕ್ವಾಡ್‌ ಮತ್ತು ಧ್ಯಾನೇಶ್ವರ್‌ ರಾವ್‌ ಸಾಹೇಬ್‌ ಕಾಪಟೆ ಕೂಡ ಯಾವುದೇ ಆಸ್ತಿ ಪಾಸ್ತಿ ಹೊಂದಿರದ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.

      Continue Reading

      ರಾಜಕೀಯ

      Lok Sabha Election 2024: ಸ್ಯಾಂಡಲ್‌ವುಡ್‌ ತಾರೆಯರು ಎಲ್ಲೆಲ್ಲಿ ವೋಟ್‌ ಹಾಕ್ತಾರೆ?

      Lok Sabha Election 2024: ಬೆಂಗಳೂರಿನಲ್ಲೇ ಬಹುತೇಕ ಸೆಲೆಬ್ರೆಟಿಗಳು ವಾಸವಿದ್ದಾರೆ. ಹಾಗಾಗಿ ಸಾಕಷ್ಟು ಜನ ತಮ್ಮ ನಿವಾಸದ ಬಳಿ ಇರುವ ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆ ಮಾಡಲಿದ್ದಾರೆ. ನಟ ದರ್ಶನ್ ಆರ್‌. ಆರ್‌ ನಗರದ ಮೌಂಟ್ ಕಾರ್ಮೆಲ್ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ. ಈಗಾಗಲೇ ನಟ ಗೋಪಾಲ್ ದೇಶಪಾಂಡೆ ಮತದಾನ ಮಾಡಿದ್ದಾರೆ. ರಾಘಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರು ಸದಾಶಿವನಗರದ ಪೂರ್ಣ ಪ್ರಜ್ಞಾ ಎಜುಕೇಶನ್ ಸ್ಕೂಲ್‌ನಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ.

      VISTARANEWS.COM


      on

      Lok Sabha Election 2024 sandalwood celebs where do cast their votes
      Koo

      ಬೆಂಗಳೂರು: ಕರ್ನಾಟಕ ಸೇರಿದಂತೆ (Lok Sabha Election 2024) ದೇಶದ ಒಟ್ಟು 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಹಬ್ಬ (Voting) ರಂಗೇರಿದೆ. ಎರಡನೇ ಹಂತದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ (Lok sabha election 2024) ಇಂದು ಮತದಾನಕ್ಕೆ ಮತದಾರ ಸಜ್ಜಾಗಿದ್ದು, ಕೇರಳ (Kerala) ದ ಎಲ್ಲಾ 20 ಕ್ಷೇತ್ರಗಳು, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 8 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರಗಳ 5 ಕ್ಷೇತ್ರಗಳು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದ 2, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರಗಳಲ್ಲಿ ತಲಾ 1 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

      ಬೆಂಗಳೂರಿನಲ್ಲೇ ಬಹುತೇಕ ಸೆಲೆಬ್ರೆಟಿಗಳು ವಾಸವಿದ್ದಾರೆ. ಹಾಗಾಗಿ ಸಾಕಷ್ಟು ಜನ ತಮ್ಮ ನಿವಾಸದ ಬಳಿ ಇರುವ ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆ ಮಾಡಲಿದ್ದಾರೆ. ನಟ ದರ್ಶನ್ ಆರ್‌. ಆರ್‌ ನಗರದ ಮೌಂಟ್ ಕಾರ್ಮೆಲ್ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ. ಈಗಾಗಲೇ ನಟ ಗೋಪಾಲ್ ದೇಶಪಾಂಡೆ ಮತದಾನ ಮಾಡಿದ್ದಾರೆ. ಕಲಾ ದಂಪತಿಗಳದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಬೆಂಗಳೂರು ಉತ್ತರ, ಯಶವಂತಪುರ ಕ್ಷೇತ್ರದಲ್ಲಿ ವೋಟ್‌ ಹಾಕಿದರು. ಚಂದನ್ ಶೆಟ್ಟಿ ನಾಗರಾಬಾವಿಯಲ್ಲಿ ಮತದಾನ ಮಾಡಿದ್ದಾರೆ.

      ರಾಘಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರು ಸದಾಶಿವನಗರದ ಪೂರ್ಣ ಪ್ರಜ್ಞಾ ಎಜುಕೇಶನ್ ಸ್ಕೂಲ್‌ನಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ವೋಟ್ ಮಾಡಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ ಚಲಾಯಿಸಲು ಕತ್ರಿಗುಪ್ಪೆ BTL ವಿದ್ಯಾವಾಹಿನಿ ಶಾಲೆಯ ಮತಗಟ್ಟೆಗೆ ತೆರಳಲಿದ್ದಾರೆ.

      ಇದನ್ನೂ ಓದಿ: Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

      ಗಣೇಶ್, ದಿಗಂತ್, ಪ್ರೇಮ್ ದಂಪತಿ ಆರ್‌ ಆರ್ ನಗರ, ಕುಂದಾಪುರದ ಕೆರಾಡಿ ಶಾಲೆಯಲ್ಲಿ ರಿಷಬ್ ಶೆಟ್ಟಿ, ಉಡುಪಿಯಲ್ಲಿ ರಕ್ಷಿತ್ ಶೆಟ್ಟಿ, ಅರಸೀಕೆರೆಯಲ್ಲಿ ಧನಂಜಯ್ ಮತ ಚಲಾಯಿಸಲಿದ್ದಾರೆ.
      ಮಾಳವಿಕಾ ಅವಿನಾಶ್,ವಸಿಷ್ಠ ಸಿಂಹ, ಹರಿಪ್ರಿಯಾ, ಅಮೂಲ್ಯ, ಅವಿನಾಶ್‌ ಆರ್‌ ಆರ್‌​ನಗರದಲ್ಲಿ,
      ಸೃಜನ್ ಲೋಕೇಶ್, ಪೂಜಾ ಗಾಂಧಿ, ದುನಿಯಾ ವಿಜಯ್ ಕತ್ರಿಗುಪ್ಪೆ.

      ಅನಂತ್ ನಾಗ್: ಮಲ್ಲೇಶ್ವರಂ, ​ಧ್ರುವ ಸರ್ಜಾ: ತ್ಯಾಗರಾಜನಗರ (ಕೆಆರ್​.ರೋಡ್​, ಶಾಸ್ತ್ರಿ ನಗರ) ಶ್ರೀಮುರುಳಿ: ವಸಂತ ನಗರ ಪ್ರಶಾಂತ್​ನೀಲ್​: ವಸಂತ ನಗರ, ಮಾಲಾಶ್ರೀ: ಶಿವಾಜಿನಗರ ರಾಜ್ ಬಿ.ಶೆಟ್ಟಿ: ಉಡುಪಿ ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ) ಆಶಿಕಾ ರಂಗನಾಥ್: ತುಮಕೂರು ಚಿಕ್ಕಣ್ಣ: ಮೈಸೂರು ವಿನೋದ್ ರಾಜ್: ಸೋಲದೇವನ ಹಳ್ಳಿ ದೊಡ್ಡಣ್ಣ: ಬಿದರುಕಲ್ಲು ಮತ ಚಲಾಯಿಸಲಿದ್ದಾರೆ.

      Continue Reading

      ದೇಶ

      Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

      Lok Sabha Election 2024: ಕರ್ನಾಟಕ ಸೇರಿದಂತೆ ದೇಶದ ಒಟ್ಟು 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಹಬ್ಬ (Voting) ರಂಗೇರಿದೆ. ಎರಡನೇ ಹಂತದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ (Lok sabha election 2024) ಇಂದು ಮತದಾನಕ್ಕೆ ಮತದಾರ ಸಜ್ಜಾಗಿದ್ದು, ಕೇರಳ (Kerala) ದ ಎಲ್ಲಾ 20 ಕ್ಷೇತ್ರಗಳು, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 8 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರಗಳ 5 ಕ್ಷೇತ್ರಗಳು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದ 2, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರಗಳಲ್ಲಿ ತಲಾ 1 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

      VISTARANEWS.COM


      on

      By

      Lok sabha election 2024
      Koo

      ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಒಟ್ಟು 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಹಬ್ಬ (Voting) ರಂಗೇರಿದೆ. ಎರಡನೇ ಹಂತದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಲ್ಲಿ (Lok sabha election 2024) ಇಂದು ಮತದಾನಕ್ಕೆ ಮತದಾರ ಸಜ್ಜಾಗಿದ್ದು, ಕೇರಳ (Kerala) ದ ಎಲ್ಲಾ 20 ಕ್ಷೇತ್ರಗಳು, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ ಮತ್ತು ಮಹಾರಾಷ್ಟ್ರಗಳಲ್ಲಿ ತಲಾ 8 ಕ್ಷೇತ್ರಗಳು, ಅಸ್ಸಾಂ ಮತ್ತು ಬಿಹಾರಗಳ 5 ಕ್ಷೇತ್ರಗಳು, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದ 2, ಜಮ್ಮು-ಕಾಶ್ಮೀರ, ಮಣಿಪುರ, ತ್ರಿಪುರಗಳಲ್ಲಿ ತಲಾ 1 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

      ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 89 ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಮಧ್ಯಪ್ರದೇಶದ ಬೇಟುಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಹುಜನ ಸಮಾವಾದಿ ಪಕ್ಷದ ಅಭ್ಯರ್ಥಿ ನಿಧನದಿಂದಾಗಿ ಮತದಾನ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಈ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಇಂದು 88 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

      ಹೈವೋಲ್ಟೇಜ್‌ ಕ್ಷೇತ್ರಗಳು ಯಾವ್ಯಾವು ?

      ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖ ನಾಯಕರು ಸ್ಪರ್ಧಿಸುತ್ತಿರುವ ಹೈ ವೋಲ್ಟೇಜ್‌ (High Profile names) ಕ್ಷೇತ್ರಗಳ ಮೇಲೆ ಎಲ್ಲ ಕಣ್ಣು ನೆಟ್ಟಿದೆ.ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಸ್ಪರ್ಧಿಸುತ್ತಿರುವ ಕೇರಳದ ವಯನಾಡು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Rajiv Chandrshekar) ಮತ್ತು ಕಾಂಗ್ರೆಸ್‌ನ ಶಶಿ ತರೂರು (Shashi Tharoor) ಮುಖಾಮುಖಿಯಾಗಿ ಸ್ಪರ್ಧಿಸಿರುವ ತಿರುವನಂತಪುರಂನಲ್ಲಿ ಇಂದು ಮತದಾನ ನಡೆಯುತ್ತಿದೆ. ಅಷ್ಟೇ ಅಲ್ಲದೇ ನಟಿ ಹೇಮಾ ಮಾಲಿನಿ, ರಾಮಾಯಣ ಧಾರಾವಾಹಿ ಖ್ಯಾತಿಯ ಅರುಣ್‌ ಗೋವಿಲ್‌, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಕೆ.ಸಿ.ವೇಣುಗೋಪಾಲ್‌, ಭೂಪೇಶ್‌ ಭಗೇಲ್‌ ಮ್ತು ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ಕಣದಲ್ಲಿರುವ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ರಂಗೇರಿದೆ.

      ಇದನ್ನೂ ಓದಿ: Loka sabha election-2024: ಮೋದಿ ಗೆದ್ದಿದ್ದ ವಡೋದರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ!

      ಎರಡನೇ ಹಂತದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅತ್ಯಂತ ಚಾಲೆಂಜಿಂಗ್‌ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ಅತೀ ಹೆಚ್ಚು ಸೀಟು ಪಡೆದು ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಹವಣಿಸುತ್ತಿದ್ದರೆ, ಅತ್ತ ಕೇರಳದಲ್ಲಿ ಬಿಜೆಪಿಯೂ ಅದೇ ಕಸರತ್ತಿನಲ್ಲಿ ತೊಡಗಿದೆ. ಕೇರಳದಲ್ಲಿ ಗೆಲುವಿನ ಖಾತೆ ತೆರೆಯಲೇಬೇಕೆಂಬ ಗುರಿಯೊಂದಿಗೆ ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಮತ್ತು ವಿ. ಮುರಳೀಧರನ್‌ರನ್ನು ಕಣಕ್ಕಿಳಿಸಿದೆ. ಇನ್ನು ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ ಭದ್ರಕೋಟೆಯಂತಿರುವ ವಯನಾಡು ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂದ್ರನ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.


      Continue Reading

      ಕರ್ನಾಟಕ

      Lok Sabha Election 2024: ಮುಸ್ಲಿಂ ಮೀಸಲಾತಿ ಬಗ್ಗೆ ಮೋದಿ ಹೇಳಿದ್ದು ಸುಳ್ಳು: ದಿನೇಶ್ ಗುಂಡೂರಾವ್

      Lok Sabha Election 2024: ಮುಸ್ಲಿಂ ಮೀಸಲಾತಿ ವಿಚಾರವಾಗಿ ಮೋದಿಯವರು ಸುಳ್ಳು ಹೇಳಿದ್ದಾರೆ. ದಲಿತರು, ಹಿಂದುಳಿದವರ ಮೀಸಲಾತಿ ಕಿತ್ತು ಎಲ್ಲಿ ಮುಸ್ಲಿಂರಿಗೆ ನೀಡಲಾಗಿದೆ. ಮೋದಿಯವರು ದಾಖಲೆ ಕೊಡಬೇಕು. ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ವಕ್ತಾರ ಹಾಗೂ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

      VISTARANEWS.COM


      on

      Minister Dinesh Gundurao latest statement
      Koo

      ಬೆಂಗಳೂರು: ಚುನಾವಣೆ ಗೆಲ್ಲಬೇಕು ಎಂಬ ಒಂದೇ ಕಾರಣಕ್ಕೆ ಹಸಿ ಸುಳ್ಳುಗಳನ್ನು ಹರಡುತ್ತಿರುವ ಮೋದಿಯವರು, ಸಮಾಜದಲ್ಲಿ ಒಡುಕು ಮೂಡಿಸುವ ಸ್ವಾರ್ಥ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ವಕ್ತಾರ ಹಾಗೂ ಸಚಿವ ದಿನೇಶ್ ಗುಂಡೂರಾವ್ (Lok Sabha Election 2024) ಆರೋಪಿಸಿದ್ದಾರೆ.

      ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ವಿಚಾರವಾಗಿ ಮೋದಿಯವರು ಸುಳ್ಳು ಹೇಳಿದ್ದಾರೆ. ದಲಿತರು, ಹಿಂದುಳಿದವರ ಮೀಸಲಾತಿ ಕಿತ್ತು ಎಲ್ಲಿ ಮುಸ್ಲಿಮರಿಗೆ ನೀಡಲಾಗಿದೆ? ಮೋದಿಯವರು ದಾಖಲೆ ಕೊಡಬೇಕು. ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ತಿಳಿಸಿದರು.

      10 ವರ್ಷ ಏನು ಕೆಲಸ ಮಾಡದೇ ಅಧಿಕಾರ ಅನುಭವಿಸಿರುವ ಮೋದಿಯವರಿಗೆ ಈಗ ಮುಸ್ಲಿಂ ಮೀಸಲಾತಿ ಎಂಬ ಕಪೋಲ ಕಲ್ಪಿತ ವಿಷಯ ಜ್ಞಾನೋದಯವಾಗಿದೆಯೇ? ಇಷ್ಟು ವರ್ಷ ಸುಮ್ಮನಿದ್ದು ಈಗ ಚುನಾವಣೆ ಸಮಯದಲ್ಲೇ ಸುಳ್ಳು ಹೇಳಿಕೆ ನೀಡುತ್ತಿರುವುದು ಏಕೆ? ಬಹುಮತ ಪಡೆಯುವುದು ಕಷ್ಟ ಎಂಬುದು‌ ಮೋದಿಯವರಿಗೆ ಸ್ಪಷ್ಟವಾದಂತಿದೆ. ಹೀಗಾಗಿ ಈ ರೀತಿಯ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.

      ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಲಿಂಕ್‌ ಮಾಡುವ ವಿಧಾನ ಇಲ್ಲಿದೆ

      ದಲಿತರ ಮೀಸಲಾತಿಯನ್ನು ಪರಿಷ್ಕರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ. ಇದಕ್ಕೆ ಸಂಸತ್ತಿನ ಎರಡು ಸದನಗಳ ಒಪ್ಪಿಗೆ ಮೂಲಕ ಕಾಯ್ದೆ ತಿದ್ದುಪಡಿಯಾಗಬೇಕಾಗುತ್ತೆ. ಪ್ರಧಾನಿಯಾದವರು ಈ ಮಟ್ಟಕ್ಕೆ ಸುಳ್ಳು ಹೇಳಬಾರದು. ಕರ್ನಾಟಕದಲ್ಲಿ ಮುಸ್ಲಿಂರನ್ನು ಹಿಂದುಳಿದ ಜಾತಿಗಳ 2B ವರ್ಗಕ್ಕೆ ಸೇರಿಸಿದ್ದು 30 ವರ್ಷಗಳ ಹಿಂದಿನ ಕಥೆ. ಚೆನ್ನಪ್ಪ ರೆಡ್ಡಿಯವರ ಆಯೋಗದ ವರದಿ ಅನ್ವಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಗತಿ‌ ಗಳನ್ನು ಗಮನದಲ್ಲಿಟ್ಟುಕೊಂಡು ಅಂದು 2B ವರ್ಗಕ್ಕೆ ಸೇರಿಸಲಾಯಿತು. ಇಲ್ಲಿಯವರೆಗು ಯಾರು ಇದನ್ನು ಪ್ರಶ್ನೆ ಮಾಡಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಸಮಾಜದಲ್ಲಿ ಒಡಕು ಮೂಡಿಸಿ ಮತ ಪಡೆಯುವ ಉದ್ದೇಶದಿಂದ ಮೋದಿಯವರು ಪ್ರಸ್ತಾಪಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

      ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್‌ ಎನ್ನುತ್ತಿದ್ದ ಮೋದಿಯವರು ಈಗ ಹೇಳುತ್ತಿರುವುದು ಏನು? ಅವರ ಹೇಳಿಕೆಗಳನ್ನು ಗಮನಿಸಿದರೆ ಸಬ್ ಕಾ ಸಾಥ್ ಎನ್ನುವುದು ಶುದ್ಧ ಸುಳ್ಳು ಎಂದಾಯ್ತು. ಒಂದು ಕೋಮಿನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಮೋದಿಯವರಿಗೆ ಸಬ್ ಕಾ ಸಾಥ್ ಎಂದು ಹೇಳುವ ನೈತಿಕತೆ ಇದೆಯಾ. ಸಮಾಜದಲ್ಲಿ ಬೆಂಕಿ ಹಚ್ವುವ ಹೇಳಿಕೆಗಳನ್ನು ನೀಡುವುದರಲ್ಲಿ ಮೋದಿಯವರು ಯತ್ನಾಳ್ ಅವರನ್ನೂ ಮೀರಿಸುವ ಹಂತಕ್ಕೆ ಹೋದಂತಿದೆ‌ ಎಂದು ಟೀಕಿಸಿದ ಅವರು, ಸೋಲಿನ ಭೀತಿ ಮೋದಿಯವರನ್ನು ಕಾಡುತ್ತಿದೆ. ಹೀಗಾಗಿ ಮೋದಿಯವರು ಸುಳ್ಳಿನ ಆಶ್ರಯ ಪಡೆಯುತ್ತಿದ್ದಾರೆ. ಯಾವುದೇ ಆಧಾರದವಿಲ್ಲದೇ ದಲಿತರ ಮೀಸಲಾತಿ ಕಡಿತ ಮಾಡ್ತಿದೆ ಕಾಂಗ್ರೆಸ್ ಎಂದು ಹೇಳಿದ್ದಾರೆ. ದಾಖಲೆ ಸಮೇತ ಮಾತನಾಡಲಿ. ಇಲ್ಲವಾದರೆ ದೇಶದ ಜನರ ಕ್ಷಮೆ ಕೇಳಲಿ ಎಂದು ಅವರು ಆಗ್ರಹಿಸಿದರು.‌

      ಇದನ್ನೂ ಓದಿ: Karnataka Weather : ನಾಳೆ ಬೆಳಗಾವಿ, ಚಾಮರಾಜನಗರದಲ್ಲಿ ಮಳೆ ; ಉಳಿದೆಡೆ ಬಿಸಿಲ ಶಾಕ್‌

      ನ್ಯಾಷನಲ್ ಒಬಿಸಿ ಕಮಿಷನ್‌ಗೆ ನಮ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಯಾವ ಅಧಿಕಾರವೂ ಇಲ್ಲ. ಇಷ್ಟು ವರ್ಷದಿಂದ ನ್ಯಾಷನಲ್ ಓಬಿಸಿ ಅಧ್ಯಕ್ಷ ಏನು ಮಾಡ್ತಿದ್ರು? ಕೇವಲ ಗೊಂದಲ ಮೂಡಿಸುವುದಕ್ಕೆ ಮಾತ್ರ ಹೇಳಿಕೆ ಕೊಟ್ಟಿದ್ದಾರೆ. ಅವರು ಮಧ್ಯಪ್ರವೇಶ ಮಾಡುವ ಅವಶ್ಯಕತೆ ಇಲ್ಲ, ನಾವು ಅವರಿಗೆ ಉತ್ತರ ಕೊಡುವ ಅಗತ್ಯವೂ ಇಲ್ಲ ಹಿಂದೆ ಬೊಮ್ಮಾಯಿ ಅವರು ಇದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡು ಸೋತು ಸುಣ್ಣವಾಗಿ ಹೋಗಿದ್ದಾರೆ. ಇದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡೇ ಬಿಜೆಪಿ 65ಕ್ಕೆ ಇಳಿದಿದೆ. ಅವಿವೇಕಿಯ ರೀತಿ ಮಾತನಾಡಿರುವ ನ್ಯಾಷನಲ್ ಒಬಿಸಿ ಅಧ್ಯಕ್ಷರು ಈಗ ಯಾಕೆ ಹಸ್ತಕ್ಷೇಪ ಮಾಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಗುಡುಗಿದರು.

      Continue Reading
      Advertisement
      voting lok sabha election 2024
      ಪ್ರಮುಖ ಸುದ್ದಿ27 mins ago

      Lok Sabha Election 2024: ಮೊದಲೆರಡು ಗಂಟೆಗಳ ಮತದಾನ ಚುರುಕು, ಶೇ.9.21 ಚಲಾವಣೆ, ಕೆಲವೆಡೆ ಚಕಮಕಿ

      Lok Sabha Election 2024 Ganesh vote by que prakash raj Cast His Vote
      Lok Sabha Election 202459 mins ago

      Lok Sabha Election 2024: ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಗಣೇಶ್ ದಂಪತಿ: ಪ್ರಕಾಶ್‌ ರಾಜ್‌ ಮನವಿ ಏನು?

      IPL 2024
      ಐಪಿಎಲ್ 20241 hour ago

      IPL 2024: ಎಸ್‌ಆರ್‌ಎಚ್‌ ಫ್ಯಾನ್ಸ್‌ ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡ ಆರ್‌ಸಿಬಿ ಫ್ಯಾನ್ಸ್;‌ ವಿಡಿಯೊ ವೈರಲ್

      ರಾಜಕೀಯ1 hour ago

      Lok sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರೋ ಅತ್ಯಂತ ಸಿರಿವಂತ, ಬಡ ಅಭ್ಯರ್ಥಿಗಳು ಯಾರ್ಯಾರು ಗೊತ್ತಾ?

      Kiran Raj Met Jon Abraham
      ಸ್ಯಾಂಡಲ್ ವುಡ್1 hour ago

      Kiran Raj : ʻ777 ಚಾರ್ಲಿʼ ನಿರ್ದೇಶಕ ಬಾಲಿವುಡ್‌ ನಟ ಜಾನ್ ಅಬ್ರಹಾಂ ಭೇಟಿ ಮಾಡಿದ್ದೇಕೆ?

      Tech Mahindra
      ದೇಶ1 hour ago

      Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

      Pune Police 60 Hours Operation; Drugs worth more than Rs 1300 crore seized
      ಕ್ರೈಂ2 hours ago

      Physical Abuse: ಹಿಟಾಚಿ ಕೆಳಗೇ 7 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪಿಶಾಚಿ

      Lok Sabha Election 2024 sandalwood celebs where do cast their votes
      ರಾಜಕೀಯ2 hours ago

      Lok Sabha Election 2024: ಸ್ಯಾಂಡಲ್‌ವುಡ್‌ ತಾರೆಯರು ಎಲ್ಲೆಲ್ಲಿ ವೋಟ್‌ ಹಾಕ್ತಾರೆ?

      China Road
      ದೇಶ2 hours ago

      China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

      Lok sabha election 2024
      ದೇಶ3 hours ago

      Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

      Sharmitha Gowda in bikini
      ಕಿರುತೆರೆ7 months ago

      Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

      Kannada Serials
      ಕಿರುತೆರೆ7 months ago

      Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

      Bigg Boss- Saregamapa 20 average TRP
      ಕಿರುತೆರೆ6 months ago

      Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

      galipata neetu
      ಕಿರುತೆರೆ5 months ago

      Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

      Kannada Serials
      ಕಿರುತೆರೆ7 months ago

      Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

      Kannada Serials
      ಕಿರುತೆರೆ7 months ago

      Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

      Bigg Boss' dominates TRP; Sita Rama fell to the sixth position
      ಕಿರುತೆರೆ6 months ago

      Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

      geetha serial Dhanush gowda engagement
      ಕಿರುತೆರೆ4 months ago

      Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

      varun
      ಕಿರುತೆರೆ5 months ago

      Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

      Kannada Serials
      ಕಿರುತೆರೆ7 months ago

      Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

      Dina bhavishya
      ಭವಿಷ್ಯ6 hours ago

      Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

      Neha Murder Case in hubblli
      ಹುಬ್ಬಳ್ಳಿ18 hours ago

      Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

      Neha Murder Case
      ಹುಬ್ಬಳ್ಳಿ18 hours ago

      Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

      Neha Murder case CID Officer
      ಹುಬ್ಬಳ್ಳಿ22 hours ago

      Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

      Lok sabha election 2024
      Lok Sabha Election 202423 hours ago

      Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

      Dina Bhavishya
      ಭವಿಷ್ಯ2 days ago

      Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

      Dina Bhavishya
      ಭವಿಷ್ಯ3 days ago

      Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

      Bengaluru karaga 2024
      ಬೆಂಗಳೂರು4 days ago

      Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

      Murder Case in yadagiri rakesh and fayas
      ಯಾದಗಿರಿ4 days ago

      Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

      bomb Threat case in Bengaluru
      ಬೆಂಗಳೂರು4 days ago

      Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

      ಟ್ರೆಂಡಿಂಗ್‌