Heavy rains for another 5 days Weather Report updates Weather Report: ಇನ್ನೈದು ದಿನ ಭಾರಿ ಮಳೆ; ಇರಲಿದೆ ಗುಡುಗಿನ ಅಬ್ಬರ, ಬಿಸಿಲೂ ಬರಲಿದೆ: ಎಲ್ಲೆಲ್ಲಿ ಹೇಗಿದೆ? - Vistara News

ಕರ್ನಾಟಕ

Weather Report: ಇನ್ನೈದು ದಿನ ಭಾರಿ ಮಳೆ; ಇರಲಿದೆ ಗುಡುಗಿನ ಅಬ್ಬರ, ಬಿಸಿಲೂ ಬರಲಿದೆ: ಎಲ್ಲೆಲ್ಲಿ ಹೇಗಿದೆ?

Karnataka Rain: ರಾಜ್ಯದಲ್ಲಿ ಇನ್ನೂ ಐದು ದಿನ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಟ್ರಫ್‌ ಎಫೆಕ್ಟ್‌ ಎಂದು ಹೇಳಿದೆ. ಅಲ್ಲದೆ, ಗುಡುಗು, ಸಿಡಿಲಿನ ಮಳೆ ಇರಲಿದ್ದರೂ ಬಿಸಿಲೂ ಬರಲಿದೆ ಎಂದು ಹೇಳಿದೆ.

VISTARANEWS.COM


on

rain in raichur
ರಾಯಚೂರು ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆ (Karnataka Rain) ಆಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆ ನೀಡಿದೆ. ವಿದರ್ಭದಿಂದ ದಕ್ಷಿಣ ತಮಿಳುನಾಡಿನವರೆಗೆ ಟ್ರಫ್ ಮುಂದುವರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಪ್ರಮಾಣ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಬುಧವಾರ ರಾತ್ರಿಯಿಂದಲೇ ಭಾರಿ ಮಳೆಯಾಗುವ ಸಂಭವ ಹೆಚ್ಚಿದೆ. ಗುರುವಾರದಿಂದ (ಜೂನ್‌ 1) ಜೂನ್‌ 4ರ ವರೆಗೆ ಬಹುತೇಕ ಕಡೆ ಜೋರು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಜೂನ್‌ 2 ಮತ್ತು 3ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Heavy rains in Raichur Weather Report
ರಾಯಚೂರಿನಲ್ಲಿ ಸುರಿದ ಭಾರಿ ಮಳೆ

ಇದನ್ನೂ ಓದಿ: Narendra Modi: ರಾಜಸ್ಥಾನದಲ್ಲೂ ಕಾಂಗ್ರೆಸ್‌ ಗ್ಯಾರಂಟಿಗೆ ಕುಟುಕಿದ ಮೋದಿ, ವಿಧಾನಸಭೆ ಚುನಾವಣೆಗೆ ರಣಕಹಳೆ

ಕರಾವಳಿ ಭಾಗವಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯ ಕೆಲವು ಕಡೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಕೆಲ ಕಡೆ ಮಾತ್ರ ಮಳೆ ಸುರಿಯಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.

Heavy rains in Raichur Weather Report
ರಾಯಚೂರಿನಲ್ಲಿ ಮಳೆ ಅಬ್ಬರ

ಗುಡುಗು ಸಹಿತ ಭಾರಿ ಮಳೆ

ಜೂನ್‌ 2ರವರೆಗೆ ಅಂದರೆ ಶುಕ್ರವಾರದ ವರೆಗೆ ದಕ್ಷಿಣ ಒಳನಾಡಿನ ಹಲವು ಕಡೆ, ಕರಾವಳಿಯ ಕೆಲವು ಕಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ.

Heavy rains in Raichur Weather Report
ರಾಯಚೂರಿನಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿರುವುದು

ಗಾಳಿ ವೇಗದಲ್ಲಿ ಹೆಚ್ಚಳ

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಸಾಧ್ಯತೆ ಇದ್ದು, ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿ.ಮೀ. ವೇಗವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗರಿಷ್ಠ ಉಷ್ಣಾಂಶದ ಮುನ್ಸೂಚನೆ

ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಮೀನುಗಾರರಿಗೆ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ.

ಬೆಂಗಳೂರಿನಲ್ಲಿ ಹೇಗಿರಲಿದೆ?

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಒಂದೆರಡು ಸಲ ಭಾರಿ ಬಿರುಗಾಳಿ ಸಹಿತ ಗುಡುಗಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ:Puneeth Rajkumar: ಮಾತು ಉಳಿಸಿಕೊಂಡ ಪ್ರಕಾಶ್‌ ರೈ, ಯಶ್‌; ಅಪ್ಪು ಹೆಸರಲ್ಲಿ ಆರು ಆಂಬ್ಯುಲೆನ್ಸ್‌ ಕೊಡುಗೆ

ರಾಯಚೂರಲ್ಲಿ ಸುರಿದ ಮಳೆ

ರಾಯಚೂರಿನಲ್ಲಿ ಬುಧವಾರ ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಸತತ ಎರಡು ಗಂಟೆಗಳ ಕಾಲ ಮಳೆ ಸುರಿದಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಗೆ ನೀರು ನುಗ್ಗಿದೆ. ಮಳೆ ನೀರಿನಿಂದ ಲಕ್ಷಾಂತರ ರೂಪಾಯಿ ಭತ್ತದ ಬೆಳೆ ಒದ್ದೆಯಾಗಿದೆ. ವಿವಿಧೆಡೆಯಿಂದ ರೈತರು ಮಾರಾಟಕ್ಕೆ ತಂದಿದ್ದ ಭತ್ತದ ಬೆಳೆ ನಾಶವಾಗಿದೆ.

ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿವೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆಯಿಂದ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೊಡಗು

Car Catches fire: ಮಡಿಕೇರಿ ಬಳಿ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸ್ವಿಫ್ಟ್‌ ಕಾರು!

Car Catches fire: ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

VISTARANEWS.COM


on

Car Catches fire
Koo

ಕೊಡಗು: ಮಡಿಕೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 275ರ ಸಂಪಿಗೆ ಕಟ್ಟೆ ಬಳಿ ತಾಂತ್ರಿಕ ದೋಷದಿಂದ ಸ್ವಿಫ್ಟ್‌ ಕಾರು (Car Catches fire) ಹೊತ್ತಿ ಉರಿದಿದೆ. ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಕಾರು ಸುಟ್ಟು ಕರಕಲಾಗಿದೆ.

ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶನಿವಾರ ಬೆಳಗ್ಗೆ ಅಪಘಾತವಾಗಿದ್ದ ಕಾರನ್ನು ಹೆದ್ದಾರಿ ಬದಿ ನಿಲ್ಲಿಸಲಾಗಿತ್ತು. ಸಂಜೆ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರಿನ ಶ್ರೀನಿವಾಸ್ ಎಂಬುವವರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗಡೆ ಬಂದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮ‌ಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ‌ ನಂದಿಸಿದರು. ಮಡಿಕೇರಿ ಸಂಚಾರಿ ಪೊಲೀಸರು ಹಾಗೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದಿಂದ ರಾಷ್ಟ್ರೀಯ ಹೆದ್ದಾರಿ‌ 275ರಲ್ಲಿ‌ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ವಾಹನ ಸವಾರರು ಪರದಾಡಿದರು.

ಇದನ್ನೂ ಓದಿ | Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

ಜೀಪ್ ಪಲ್ಟಿಯಾಗಿ ಎಂಟು ಜನರಿಗೆ ಗಂಭಿರ ಗಾಯ

ಕಲಬುರಗಿ: ಚಾಲಕ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿ 8 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲಯ ಚಿಂಚೋಳಿ ಪಟ್ಟಣ ಹೊರವಲಯದಲ್ಲಿ ನಡೆದಿದೆ. ಸಂಬಂಧಿಕರ ಅಂತ್ಯಕ್ರಿಯೆಗಾಗಿ ಚಿಂಚೋಳಿಯಿಂದ ಶಿಕಾರ ಮೊತಕಪಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ಪಲ್ಟಿಯಾಗಿದೆ.
ಘಟನೆಯಲ್ಲಿ ಕೆಲವರ ಕೈಕಾಲು ಮುರಿದಿವೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಚಿಂಚೋಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

ಪೇಂಟಿಂಗ್ ಮಾಡುವಾಗ ವಿದ್ಯುತ್ ತಗುಲಿ ಯುವಕ ಸಾವು

ಧಾರವಾಡ: ಪೇಂಟಿಂಗ್ ಮಾಡುವಾಗ ವಿದ್ಯುತ್ ತಗುಲಿ ಯುವಕ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿ ನಡೆದಿದೆ. ಅಣ್ಣಿಗೇರಿ ಗಾಂಧಿನಗರದ ನಿವಾಸಿ ಮಂಜುನಾಥ್ ಶಿರಹಟ್ಟಿ (26)ಮೃತ ಯುವಕ. ಹೊಸ ಮನೆಗೆ ಪೇಂಟ್ ಮಾಡುವಾಗ ಸರ್ವೀಸ್ ವೈಯರ್ ತಗುಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Continue Reading

ಕರ್ನಾಟಕ

CM Siddaramaiah: ಕೆಪಿಸಿಸಿ ಕಚೇರಿ ಸ್ವಚ್ಛತಾ ಸಿಬ್ಬಂದಿಗೆ ಮನೆ ನೀಡಲು ಸಿಎಂ ಸೂಚನೆ

CM Siddaramaiah: ಕೆಪಿಸಿಸಿ ಕಚೇರಿಯ ನಾಲ್ವರು ಸ್ವಚ್ಛತಾ ಸಿಬ್ಬಂದಿಗೆ ಮನೆ ನೀಡಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

VISTARANEWS.COM


on

CM Siddaramaiah
Koo

ಬೆಂಗಳೂರು: ಕೆಪಿಸಿಸಿ ಕಚೇರಿ ಸ್ವಚ್ಛಾತಾ ಸಿಬ್ಬಂದಿಗೆ ಮನೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಚೇರಿಯ ನಾಲ್ವರು ಸ್ವಚ್ಚತಾ ಸಿಬ್ಬಂದಿಗೆ ಮನೆ ನೀಡಲು ಅಧಿಕಾರಿಗಳಿಗೆ ಸಿಎಂ (CM Siddaramaiah) ಸೂಚಿಸಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೊ ಭವನದಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕಾರ ಕಾರ್ಯಕ್ರಮ ಶನಿವಾರ ನಡೆಯಿತು. ಈ ವೇಳೆ ವಿಕಲಚೇತನರ ಬಳಿಗೇ ಹೋಗಿ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಮುಖ್ಯಮಂತ್ರಿಗಳು ಅಹವಾಲು ಸ್ವೀಕಾರ ಅಭಿಯಾನಕ್ಕೆ ಚಾಲನೆ ನೀಡಿದರು.

ಪ್ರತಿಯೊಬ್ಬ ಕಾರ್ಯಕರ್ತರ ಅಹವಾಲು ಮತ್ತು ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿರುವ ಬಗ್ಗೆ ವಿವರವಾಗಿ ಕೇಳಿ ತಿಳಿದ ಮುಖ್ಯಮಂತ್ರಿಗಳ, ಬಳಿಕ ತಮ್ಮ ಸಿಬ್ಬಂದಿಗೆ, ಅಹವಾಲುಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬೇಡಿಕೆ ಈಡೇರಿಸಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದರು.

ಇದೇ ವೇಳೆ ಕೆಪಿಸಿಸಿ ಕಚೇರಿಯ ಸ್ವಚ್ಛತಾ ಸಿಬ್ಬಂದಿ ಆಶಾ, ಸುಗಂತಿ, ಜಯಂತಿ ಮತ್ತು ಅರ್ಚನಾ ಎಂಬುವರು ತಮಗೆ ಮನೆ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಿಎಂ, ಸ್ಥಳದಲ್ಲೇ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗೆ ಕರೆ ಮಾಡಿ, ಸಿಬ್ಬಂದಿಯ ದಾಖಲೆ ಪರಿಶೀಲನೆ ನಡೆಸಿ, ಅರ್ಹತೆ ಆಧಾರದಲ್ಲಿ ಮನೆಗಳನ್ನು ಒದಗಿಸಿಕೊಡುವಂತೆ ಸೂಚನೆ ನೀಡಿದರು.

ಇದನ್ನೂ ಓದಿ | Manorama Khedkar: ಪಿಸ್ತೂಲ್‌ ತೋರಿಸಿ ರೈತರಿಗೆ ಬೆದರಿಕೆ ಹಾಕಿದ ಐಎಎಸ್‌ ಅಧಿಕಾರಿ ತಾಯಿಯ ವಿರುದ್ಧ ಎಫ್‌ಐಆರ್‌

ಇದೇ ವೇಳೆ ವಿವಿಧ ಕಾರ್ಯಕರ್ತರು ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ನಿಗಮ ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲದ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ವಿಕಲಚೇತನ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಮುಂದಿಟ್ಟರು.

ನಿಗಮ-ಮಂಡಳಿಗಳಲ್ಲಿ ಕಾರ್ಯಕರಿಗೆ ಆದ್ಯತೆ

ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡಬೇಕು ಎಂದು ಹಲವು ಕಾರ್ಯಕರ್ತರು ಮನವಿ ಮಾಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ನಿಗಮ-ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಿದ್ದೇವೆ. ಬಹುತೇಕ ಎಲ್ಲಾ ಸ್ಥಾನ ಭರ್ತಿಯಾಗಿವೆ. ಇನ್ನೊಂದು ‌10-12 ಬಾಕಿ ಇರಬಹುದು ಅಷ್ಟೇ. ನಾನು ಹಾಗೂ ಅಧ್ಯಕ್ಷರು ಕುಳಿತು ಚರ್ಚೆ ಮಾಡುತ್ತೇವೆ. ಅವುಗಳಿಗೆ ಕಾರ್ಯಕರ್ತರನ್ನು ಆಯ್ಕೆ ಮಾಡುತ್ತೇವೆ, ಆದರೆ ಎಲ್ಲರಿಗೂ ಅವಕಾಶ ಸಿಗಲ್ಲ ಎಂದರು.

ಇದನ್ನೂ ಓದಿ | Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿ; ರಾಜ್ಯಗಳಿಗೆ ಜವಾಬ್ದಾರಿ ನೀಡಲು ಕೇಂದ್ರದ ಚಿಂತನೆ?

ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಿದ್ದೇವೆ‌. ಕೆಲ‌ ನಿಗಮ-ಮಂಡಳಿಗೆ ನಿರ್ದೇಶಕರನ್ನ ಆಯ್ಕೆ ಮಾಡುವುದಿದೆ. ಆ ಸ್ಥಾನಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸುತ್ತೇವೆ. ಇದಕ್ಕಾಗಿ ಡಾ‌.ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ ಆಗಲಿದೆ. ಅದಕ್ಕಾಗಿ ಎರಡು ಅವಧಿಗೆ ಮಾಡುತ್ತೇವೆ ಈಗ ನೇಮಕ ಆಗಿರುವ ನಿಗಮ ಮಂಡಳಿ ಅಧ್ಯಕ್ಷರ, ಸದಸ್ಯರ ಅವಧಿ ಎರಡೂವರೆ ವರ್ಷ ಮಾತ್ರ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕೆಲಸ ಮಾಡಿಕೊಡದ ಅಧಿಕಾರಿಗಳಿಗೆ ತರಾಟೆ

ಕಾರ್ಯಕರ್ತರ ಅಹವಾಲು ಸ್ವೀಕಾರದ ವೇಳೆ ಹಾಸನ ಡಿಸಿಗೆ ಸಿಎಂ ಕರೆ ಮಾಡಿ, ಪಹಣಿ ಮಾಡಿಕೊಡುವ ವಿಚಾರದಲ್ಲಿ ತರಾಟೆ ತೆಗೆದುಕೊಂಡರು. ಯಾಕಪ್ಪ ಇಷ್ಟೊಂದು ಲೇಟ್ ಮಾಡ್ತೀರಾ? ಇಂತದಕ್ಕೆಲ್ಲ ವಿಳಂಬ ಮಾಡಬೇಡಿ. ನಮ್ಮ ಕಾರ್ಯಕರ್ತರು ಬರುತ್ತಾರೆ, ಕೂಡಲೇ ಕೆಲಸ ಮಾಡಿಕೊಡಿ ಎಂದು ಸಿಎಂ ಸೂಚನೆ ನೀಡಿದರು. ಚನ್ನರಾಯಪಟ್ಟಣ ತಾಲೂಕಿನ ಬಾಗೂರು‌ ಹೋಬಳಿ ಮಾದಿಹಳ್ಳಿ ಗ್ರಾಮದ ಪಹಣಿ ಮಾಡಿಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದರಿಂದ ಹಾಸನ ಡಿಸಿಗೆ ಸಿಎಂ ತರಾಟೆ ತೆಗೆದುಕೊಂಡರು.

ಬೀದಿ ಬದಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ

ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಸಿಎಂಗೆ ಮನವಿ ಮಾಡಿದರು. ಇದಕ್ಕೆ ಗರಂ ಆದ ಸಿಎಂ, ಹು-ಧಾರವಾಡ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ, ಬೀದಿ ಬದಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಂಗಡಿಗಳನ್ನು ತೆರವು ಮಾಡಬೇಡಿ, ವ್ಯಾಪಾರಿಗಳ ಜತೆ ಮಾನವೀಯತೆಯಿಂದ ವರ್ತಿಸಬೇಕು ಎಂದು ಸೂಚನೆ ನೀಡಿದರು.

ಕೆಎಂಎಫ್‌ನಲ್ಲಿ ಜನಸ್ನೇಹಿ ಕನ್ನಡ ತಂತ್ರಾಂಶ ಅಳವಡಿಸಲು ಸೂಚನೆ

ಸದ್ಯ ಕೆಎಂಎಫ್‌ನಲ್ಲಿರುವ ಸಾಫ್ಟ್‌ವೇರ್ ಹಾಲು ಉತ್ಪಾದಕರಿಗೆ ಅನುಕೂಲವಾಗಿಲ್ಲ. ಹೀಗಾಗಿ ಕನ್ನಡ ತಂತ್ರಾಂಶ ಅಳವಡಿಸುವಂತೆ ಮೈಸೂರಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳದ ಎಸ್.ಶಿವನಾಗಪ್ಪ ಎಂಬುವರಿಂದ ಮನವಿ ಮಾಡಿದರು. ಈ ವೇಳೆ ಸ್ಥಳದಲ್ಲೇ ಕೆಎಂಎಫ್‌ ಎಂಡಿಗೆ ಫೋನ್ ಮಾಡಿದ ಸಂಪರ್ಕಿಸಿದ ಸಿಎಂ, ಹಾಲು ಉತ್ಪಾದಕರ ಸ್ನೇಹಿಯಾಗಿರುವ ಸಾಫ್ಟ್ ವೇರ್ ಅನ್ನು ಅಳವಡಿಸುವಂತೆ ಸೂಚನೆ ನೀಡಿದರು.

ವಿವಿಧೆ ಬೇಡಿಕೆ ಇಟ್ಟ ವಿಶೇಷಚೇತನ ಕಾರ್ಯಕರ್ತರು

ಮೊದಲಿಗೆ ವಿಶೇಷಚೇತನ ಕಾಂಗ್ರೆಸ್ ಕಾರ್ಯಕರ್ತರ ಅಹವಾಲುಗಳನ್ನು ಸಿಎಂ ಸ್ವೀಕರಿಸಿದರು. ವರ್ಗಾವಣೆ ಅರ್ಜಿ ಕೊಡಬಹುದು, ಆದರೆ ವರ್ಗಾವಣೆ ಶಿಫಾರಸು ತರಬೇಡಿ ಎಂದು ಸಿಎಂ ಹೇಳಿದರು. ಈ ವೇಳೆ ಕಣ್ಣು ಕಾಣದ ಆಶಾ ಪವಾರ್ ಎಂಬುವರು, ಸರ್ ನಾನು ಎಂ‌ಎ ಪೊಲಿಟಿಕಲ್ ಸೈನ್ಸ್ ಓದಿದ್ದೇನೆ‌. ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿದರು. ಈ ವೇಳೆ ನೀನು ಪಾಠ ಮಾಡುತ್ತೀಯಾ ಏನಮ್ಮ ಎಂದು ಸಿಎಂ ಕೇಳಿದ್ದಕ್ಕೆ, ಹೌದು ಎಂದು ಆಶಾ‌ ಪ್ರತಿಕ್ರಿಯಿಸಿದರು, ಮಾಡುವುದಿದ್ದರೆ ಅವಕಾಶ ಕೊಡಿಸುವ ಭರವಸೆಯನ್ನು ಸಿಎಂ ನೀಡಿದರು. ಬಳಿಕ ಆಶಾ ಅವರ ವಿವರಗಳನ್ನು ಸಿಎಂ ವಿಶೇಷ ಅಧಿಕಾರಿ ಪಡೆದರು.

ಈ ವೇಳೆ ಮತ್ತೊಬ್ಬ ಕಾರ್ಯಕರ್ತ ನಾನು ಹಾಸನದಿಂದ ಬಂದಿದ್ದೇನೆ. ಜೀವನಕ್ಕೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಮತ್ತೊಬ್ಬ ಕಾರ್ಯಕರ್ತ ನಿಗಮ ಮಂಡಳಿ ಸದಸ್ಯ ಸ್ಥಾನ ನೀಡುವಂತೆ ಮನವಿ ಮಾಡಿದರು. ಇನ್ನೊಬ್ಬ ಸದಸ್ಯನಿಂದಲೂ ಅದೇ ರೀತಿಯ ಬೇಡಿಕೆ ಬಂತು. ಮಕ್ಕಳ ಸ್ಕೂಲ್ ಫೀಜ್ ಬಗ್ಗೆ ಬಸವನಗುಡಿ ಕ್ಷೇತ್ರದ ಕಾರ್ಯಕರ್ತ ಅಳಲು ತೋಡಿಕೊಂಡರು. ಅದೇ ರೀತಿ ಮೂರು ಚಕ್ರದ ವಾಹನ ನೀಡುವಂತೆ ಮನವಿ ಮಾಡಿದರು. ಮತ್ತೊಬ್ಬರು ನಾಲ್ಕು ಚಕ್ರದ ವಾಹನಕ್ಕೆ ಬೇಡಿಕೆ ಇಟ್ಟರೆ, ಮಹಿಳೆಯೊಬ್ಬರು ಆರ್ಥಿಕ ಸಹಾಯಕ್ಕೆ ಮನವಿ ಮಾಡಿದರು. ಹೀಗಾಗಿ ನಿಗಮದಿಂದ ಸಹಾಯ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಇದನ್ನೂ ಓದಿ | Dog Bite: ಬೀದಿನಾಯಿ ಕಾಟ ತಪ್ಪಿಸಿ ಪ್ಲೀಸ್‌; ಕೊಟ್ಟೂರು ಪ.ಪಂ ಮುಖ್ಯಾಧಿಕಾರಿಗೆ ಪತ್ರ ಬರೆದ ಪುಟಾಣಿ

ಬೀದಿಬದಿ ವ್ಯಾಪಾರಿಗಳ ಘಟಕದ ಅಧ್ಯಕ್ಷರು ನಿವೇಶನಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ಸಿಎಂ ಪ್ರತಿಕ್ರಯಿಸಿ, ಅರ್ಜಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಮತ್ತೊಬ್ಬರಿಂದ ಸೈಬರ್ ಸೆಂಟರ್‌ಗೆ ಮನವಿ ಬಂದಿತು.

Continue Reading

ಮಳೆ

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

Karnataka Weather Forecast : ಒಂದು ಕಡೆ ಮಳೆಯು ಹರ್ಷ ತಂದರೂ ಮತ್ತೊಂದು ಕಡೆ ಭೀತಿಯನ್ನು ಹುಟ್ಟಿಸುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Karnataka rain) ಭೂ ಕುಸಿತ ಪ್ರಕರಣಗಳು (Rain Effect) ಹೆಚ್ಚಾಗುತ್ತಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ (Karnataka weather Forecast) ಧಾರಾಕಾರ ಮಳೆಯಾಗುತ್ತಿದ್ದು, ನಾನಾ ಅವಾಂತರವನ್ನೇ (Rain Effect) ಸೃಷ್ಟಿಸಿದೆ. ಭಾರಿ ಮಳೆಗೆ (Karnataka Rain) ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ಭೂಕುಸಿತ ಉಂಟಾಗಿದೆ. ಮನೆಯ ಹಿಂಬದಿ ಭೂಮಿ ಕುಸಿಯುತ್ತಿರುವುದನ್ನು ಕಂಡು ನಿವಾಸಿಗಳು ಆತಂಕಗೊಂಡಿದ್ದಾರೆ.

ಗಣೇಶನಗರದ 2ನೇ ವಾರ್ಡ್‌ನ ಇಂದೂಧರ ಗೋಸಾವಿ ಎಂಬುವವರ ಮನೆ ಹಿಂಬದಿ ಧರೆ ಕುಸಿಯುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ನಿಧಾನಕ್ಕೆ ಮಣ್ಣು ಕುಸಿಯುತ್ತಿದ್ದು, ಮನೆಗೂ ಹಾನಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ

ಚಿಕ್ಕಮಗಳೂರಿನಲ್ಲಿ ಭಾನುವಾರ ಮಳೆ ಆರ್ಭಟ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಾರ್ಮಾಡಿ, ಕೊಟ್ಟಿಗೆಹಾರ, ಬಾಳೂರು, ಬಣಕಲ್, ಮೂಡಿಗೆರೆಯಲ್ಲಿ ವ್ಯಾಪಕ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಪ್ರವಾಸಿಗರು ಹಾಗೂ ವಾಹನ ಸವಾರರು ಪರದಾಟ ಅನುಭವಿಸಿದರು. ಮಂಜು ಮಿಶ್ರಿತ ಮಳೆಯಿಂದಾಗಿ ರಸ್ತೆ ಕಾಣದೆ ಹೈರಾಣಾದ ಸವಾರರು ವಾಹನ ಚಲಾಯಿಸಲು ಆಗದೆ ನಿಂತಲ್ಲೇ ನಿಲ್ಲುವಂತಾಯಿತು.

ಇದನ್ನೂ ಓದಿ: Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

ಉತ್ತರ ಕನ್ನಡದಲ್ಲಿ ಅಬ್ಬರಿಸುತ್ತಿರುವ ಮಳೆ

ಕರಾವಳಿ ಸುತ್ತಮುತ್ತ ನೈರುತ್ಯ ಮುಂಗಾರು ಪ್ರಬಲವಾಗಿದ್ದು, ಉತ್ತರ ಕನ್ನಡದ ಸುತ್ತಮುತ್ತ ವ್ಯಾಪಕ ಮಳೆಯಾಗಿದೆ. ಉತ್ತರ ಕನ್ನಡ ಅಂಕೋಲಾ, ಕುಮಟಾ, ಕದ್ರಾ, ಗೇಸೊಪ್ಪ, ಹೊನ್ನಾವರ, ಕಾರ್ಕಳ, ಭಾಗಮಂಡಲದಲ್ಲಿ ತಲಾ 13 ಸೆಂ.ಮೀ ಮಳೆಯಾಗಿದೆ.

ಗಾಳಿಯೊಂದಿಗೆ ಮಳೆ ಎಚ್ಚರಿಕೆ

ಜು.14ರಂದು ಒಳನಾಡಿನ ವಿವಿಧೆಡೆ ಗಾಳಿಯ ವೇಗವು 40-50 ಕಿ.ಮೀ ತಲುಪುವ ಸಾಧ್ಯತೆ ಇದೆ. ಜತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉಳಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಸನ ಮತ್ತು ಕೊಡಗು ಸುತ್ತಮುತ್ತ ಗಾಳಿಯೊಂದಿಗೆ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ವಿಹಯಪುರ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್‌, ಧಾರವಾಡದಲ್ಲಿ ನಿರಂತರ ಗಾಳಿ ಜತೆಗೆ ಮಳೆಯಾಗಲಿದೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ

ಮೈಸೂರಿನ ಕಬಿನಿ ಜಲಾಶಯದ ಹೊರ ಹರಿವಿನಲ್ಲಿ ದಿಢೀರ್ ಹೆಚ್ಚಳಗೊಂಡಿದೆ. ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯೂಆರ್‌ಸಿ ಆದೇಶಿಸುತ್ತಿದಂತೆ ನದಿಗೆ 15,000 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಇತ್ತ ಒಳ ಹರಿವಿನಲ್ಲೂ ಗಣನೀಯ ಏರಿಕೆ ಆಗಿದ್ದು, ಕಬಿನಿ ಜಲಾಶಯ ಭರ್ತಿ 15,497 ಕ್ಯುಸೆಕ್ ಇದೆ. 15,500 ಕ್ಯುಸೆಕ್ ಹೊರಹರಿವು ಇದ್ದು, ಕಪಿಲಾ ನದಿ ದಂಡೆಯಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಹೀಗಾಗಿ ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

Bagalkot News: ಭಂಡಾರ ಹಚ್ಚಿ ಕೊಡಲಿ ಏಟು ನೀಡಿದರೆ ನೋವು ಗುಣಮುಖವಾಗುತ್ತದೆ ಎಂಬ ಮೂಢನಂಬಿಕೆ ಸೃಷ್ಟಿಸಲಾಗಿದೆ ಎಂದು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೂಜಾರಿಯ ಬಂಧನವಾಗಿದೆ.

VISTARANEWS.COM


on

Bagalkot news
Koo

ಬಾಗಲಕೋಟೆ: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡುತ್ತಿದ್ದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ (Bagalkot News) ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಮೈ ಕೈ ನೋವು ಎಂದು ಬರುವ ಭಕ್ತರಿಗೆ ಭಂಡಾರ ಹಚ್ಚಿ, ನೋವಾಗುವ ಭಾಗಕ್ಕೆ ಪೂಜಾರಿ ಕೊಡಲಿ ಏಟು ನೀಡುತ್ತಿದ್ದ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಮೂಢನಂಬಿಕೆ ನಿಷೇಧ ಕಾಯ್ದೆಯಡಿ ಪೂಜಾರಿ ವಿರುದ್ಧ ಎಸ್‌ಐಆರ್ ದಾಖಲಿಸಿ, ಆತನನ್ನು ಬಂಧಿಸಲಾಗಿದೆ.

ಮೆಟಗುಡ್ಡ ಗ್ರಾಮದ ಕಾಶಿಲಿಂಗೇಶ್ವರ ದೇವಸ್ಥಾನದ ಪೂಜಾರಿ ಜಕ್ಕಪ್ಪ ಗಡ್ಡದ ಎಂಬುವವರಿಂದ ಮೌಢ್ಯಾಚರಣೆ ನಡೆಯುತ್ತಿದೆ. ಪೂಜಾರಿ ಭಂಡಾರ ಹಚ್ಚಿ ಕೊಡಲಿ ಏಟು ನೀಡಿದರೆ ನೋವು ಗುಣಮುಖವಾಗುತ್ತದೆ ಎಂಬ ಮೂಢನಂಬಿಕೆ ಸೃಷ್ಟಿಸಲಾಗಿದೆ ಎಂದು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೂಜಾರಿಯ ಬಂಧನವಾಗಿದೆ.

ಭಕ್ತನಿಗೆ ಪೂಜಾರಿ ಕೊಡಲಿ ಏಟು ನೀಡುವ ದೃಶ್ಯ ಸಾಮಾಜಿಕ ವೈರಲ್ ಆಗಿದೆ. ವಿಡಿಯೊದಲ್ಲಿ ನೆಲದ ಮೇಲೆ ಭಕ್ತ ಮಲಗಿಕೊಂಡಿದ್ದು, ಪೂಜಾರಿ ಭಕ್ತನ ಹೊಟ್ಟೆಯ ಭಾಗಕ್ಕೆ ಜೋರಾಗಿ ಕೊಡಲಿಯಿಂದ ಹೊಡೆಯುತ್ತಾನೆ. ಆ ರಭಸಕ್ಕೆ ಕೊಡಲಿ ಭಕ್ತನ ದೇಹದೊಳಗೆ ಹೊಕ್ಕಿದ್ದು, ಹೊರತೆಗೆಯಲು ಪೂಜಾರಿ ಕಷ್ಟಪಡುತ್ತಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ | YouTuber Dhruv Rathee: ಸ್ಪೀಕರ್‌ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್‌; ಯೂಟ್ಯೂಬರ್‌ ಧೃವ್‌ ರಥೀ ವಿರುದ್ಧ FIR

ಪೂಜಾರಿಯೊಬ್ಬ ಭಕ್ತನಿಗೆ ಕೊಡಲಿ ಏಟು ನೀಡುವ ದೃಶ್ಯ ವೈರಲ್ ವೈರಲ್‌ ಆಗಿದ್ದರಿಂದ ಮೂಢನಂಬಿಕೆ ನಿಷೇಧ ಕಾಯ್ದೆಯಡಿ ಪೂಜಾರಿ ವಿರುದ್ಧ ಲೋಕಾಪುರ ಠಾಣೆ ಪೊಲೀಸರು ಎಸ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ ಎಂದು ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.

Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

Self Harming

ಬೆಂಗಳೂರು: ಬೆಂಗಳೂರಿನ ಯಲಹಂಕದ ಆರ್‌ಎನ್‌ಜೆಡ್ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರು ಆತ್ಮಹತ್ಯೆ (Self Harming)ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಭಾರ್ಗವ್ ಪುಲಿವರ್ತ (13), ತಾಯಿ ರಮ್ಯಾ (40) ಮೃತ ದುರ್ದೈವಿಗಳು.

ಮೂಲತಃ ಆಂಧ್ರ ಪ್ರದೇಶದ ರಮ್ಯಾ ಶ್ರೀಧರ್ ಎಂಬುವವರನ್ನು ಪ್ರೀತಿಸಿ, ಅಂತರ್ಜಾತಿ ವಿವಾಹವಾಗಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶ್ರೀಧರ್ ಪುಲಿವರ್ತ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಫ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳಿಬ್ಬರ ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ ಲಕ್ಷ ಹಣ ಬೇಕಿತ್ತು. ಇತ್ತ ಹಣ ಹೊಂದಿಸುವುದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು. ಪತಿ ಸತ್ತ ನಂತರ ತಾವು ಸಾಯೋದಾಗಿ ರಮ್ಯಾ ಹಾಗೂ ಮಗ ಭಾರ್ಗವ್ ಹೇಳಿ ಕೊಂಡಿದ್ದರಂತೆ.

ರಮ್ಯಾಳಿಗೆ 19 ವರ್ಷದ ಮಗಳು ಇದ್ದು, ಆಕೆ ಪಿಜಿಯಲ್ಲಿದ್ದುಕೊಂಡು ಓದುತ್ತಿದ್ದಾಳೆ. ಕಳೆದ 9ರ ರಾತ್ರಿ ಮಗಳ ಜತೆಗೆ ಮಾತನಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿನ ನಂತರ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಟುಂಬವು ಕುಗ್ಗಿ ಹೋಗಿತ್ತು.

ಇದನ್ನೂ ಓದಿ: Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

ಮೊದಲು ಮಗ ಆತ್ಮಹತ್ಯೆ ಮಾಡಿಕೊಂಡ ಬಳಿಕ ರಮ್ಯಾ ನೇಣಿನ ಕುಣಿಕೆಯಿಂದ ಬಿಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ನಂತರ ತಾವು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸತ್ತು ನಾಲ್ಕು ದಿನದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಪೊಲೀಸ್‌, ಡಾಕ್ಟರ್‌ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.

ಎರಡ್ಮೂರು ದಿನದಿಂದ ಮನೆಯಿಂದ ಫೋನ್‌ ಬಾರದ ಹಿನ್ನೆಲೆಯಲ್ಲಿ ನಿನ್ನೆ ಶುಕ್ರವಾರ ಮಗಳು ಪಿಜಿಯಿಂದ ಮನೆಗೆ ಬಂದಿದ್ದಾಳೆ. ಮನೆ ಬಾಗಿಲು ಎಷ್ಟೇ ತಟ್ಟಿದ್ದರು ತೆರೆಯದೇ ಇದ್ದಾಗ, ತನ್ನ ಬಳಿ ಇದ್ದ ಇನ್ನೊಂದು ಕೀಯಿಂದ ಮನೆಯ ಬಾಗಿಲು ತೆಗೆದಿದ್ದಾಳೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Car Catches fire
ಕೊಡಗು12 mins ago

Car Catches fire: ಮಡಿಕೇರಿ ಬಳಿ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸ್ವಿಫ್ಟ್‌ ಕಾರು!

Bypoll Results
ದೇಶ28 mins ago

Bypoll Results: ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ; 13ರ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟಕ್ಕೆ ಜಯ!

MS Dhoni
ಪ್ರಮುಖ ಸುದ್ದಿ29 mins ago

MS Dhoni : ಅಂಬಾನಿ ಪುತ್ರನ ಮದುವೆಯಲ್ಲಿ ಬಿಂದಾಸ್​ ​ ಡಾನ್ಸ್ ಮಾಡಿದ ಮಹೇಂದ್ರ ಸಿಂಗ್ ಧೋನಿ

CM Siddaramaiah
ಕರ್ನಾಟಕ46 mins ago

CM Siddaramaiah: ಕೆಪಿಸಿಸಿ ಕಚೇರಿ ಸ್ವಚ್ಛತಾ ಸಿಬ್ಬಂದಿಗೆ ಮನೆ ನೀಡಲು ಸಿಎಂ ಸೂಚನೆ

Israel Hamas War
ವಿದೇಶ54 mins ago

Israel Hamas War: ಗಾಜಾ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ‘ಮಿಲಿಟರಿ ಚೀಫ್’ ಸೇರಿ 71 ಮಂದಿಯ ಹತ್ಯೆ

karnataka Weather Forecast
ಮಳೆ1 hour ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

Healthy Food For Dengue
ಫ್ಯಾಷನ್1 hour ago

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

radioactive material
ದೇಶ2 hours ago

Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

Ambani Wedding Fashion
ಫ್ಯಾಷನ್2 hours ago

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Bagalkot news
ಕರ್ನಾಟಕ2 hours ago

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 hour ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ7 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

ಟ್ರೆಂಡಿಂಗ್‌