ಮನೆ ಕೊಡಿಸಿ, ಇಲ್ದಿದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ: ಗ್ರಾಮ ವಾಸ್ತವ್ಯದ ವೇಳೆ ತಹಸೀಲ್ದಾರ್‌ಗೆ ದಲಿತ ಕುಟುಂಬಗಳ ಘೇರಾವ್ - Vistara News

ಕರ್ನಾಟಕ

ಮನೆ ಕೊಡಿಸಿ, ಇಲ್ದಿದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ: ಗ್ರಾಮ ವಾಸ್ತವ್ಯದ ವೇಳೆ ತಹಸೀಲ್ದಾರ್‌ಗೆ ದಲಿತ ಕುಟುಂಬಗಳ ಘೇರಾವ್

ಗದಗ ಜಿಲ್ಲೆ ಮುಂಡರ್ಗಿ ತಾಲೂಕಿನ ಗಂಗಾಪುರದಲ್ಲಿ ತಹಸೀಲ್ದಾರ್‌ ಶ್ರುತಿ ಗೌಡರ್‌ ಅವರು ಗ್ರಾಮ ವಾಸ್ತವ್ಯಕ್ಕೆ ಹೋಗಿದ್ದರು. ಆಗ ಅಲ್ಲಿ ಜನರು ತಮ್ಮ ಮನೆ ಸಮಸ್ಯೆ ಹೇಳಿಕೊಂಡು ಘೇರಾವೊ ಹಾಕಿದರು.

VISTARANEWS.COM


on

mundargi tehasildar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗದಗ: “ಕಳೆದ ಹತ್ತಾರು ವರ್ಷಗಳಿಂದ ಗೋ ಶಾಲೆಗೆ ಬಳಸುವ ಶೆಡ್‌ನಲ್ಲೇ ಬದುಕುತ್ತಿದ್ದೇವೆ. ಮನೆ ಕಟ್ಟಿ ಕೊಡಿ. ಇಲ್ಲವಾದ್ರೆ ಮನೆ ಕಟ್ಟಿಕೊಳ್ಳಲು ಅನುಮತಿಯಾದ್ರೂ ಕೊಡಿ. ಕಳೆದ ಹತ್ತಾರು ವರ್ಷಗಳಿಂದ ಮನವಿ ಮಾಡ್ತಿದ್ರೂ ನಮಗೆ ಮನೆ ಭಾಗ್ಯವೇ ಇಲ್ಲ. ಬಂದವರೆಲ್ಲ ನೋಡ್ರೀನಿ… ನೋಡ್ತೀನಿ.. ಎನ್ನುತ್ತಲೇ ಇದ್ದಾರೆ. ಈ ಬಾರಿ ಅನುಮತಿ ಕೊಡದಿದ್ದರೆ ಸಾಮೂಹಿಕವಾಗಿ ವಿಷ ಸೇವಿಸ್ತೀವಿʼʼ- ಹೀಗೆಂದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮಸ್ಥರು ತಹಸೀಲ್ದಾರ ಶ್ರುತಿ ಗೌಡರ ಅವರ ಮುಂದೆ ನಮ್ಮ ನೋವು ಹಂಚಿಕೊಂಡರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿಮಿತ್ತ ಶಿರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಹತ್ತಾರು ಮಾದಿಗ ಕುಟುಂಬದ ಜನರು ತಹಸೀಲ್ದಾರ್‌ ಮುಂದೆ ತಮ್ಮ ಕಷ್ಟ ಹೇಳಿಕೊಂಡರು.

ಗಂಗಾಪುರ ಗ್ರಾಮದಲ್ಲಿ ವಾಸ್ತವ್ಯಕ್ಕೆ ಬಂದ ತಹಸೀಲ್ದಾರ್‌ ಶ್ರುತಿ ಗೌಡರ್‌ ಅವರಿಗೆ ಜನರು ಮುತ್ತಿಗೆ ಹಾಕಿದರು.

“ನಾ ಹೊಸದಾಗಿ ಬಂದೇನಿ. ಈ ವಿಷಯ ನನಗೆ ತಿಳಿದಿಲ್ಲ. ನಿಮ್ಗ ಮನೆ ಕೊಡಿಸೋ ವಿಚಾರ ನೋಡ್ತೀನಿ” ಎನ್ನುತ್ತಲೇ ತಹಸೀಲ್ದಾರ ಶ್ರುತಿ ಗೌಡರ್ ಮುಂದೆ ಸಾಗಿದರು. ಮನೆ ಕೊಡಿಸುವ ವಿಚಾರವಾಗಿ ಕೆಲಹೊತ್ತು ತಹಸೀಲ್ದಾರ ಅವರನ್ನು ಸುತ್ತುವರಿದು ಘೇರಾವ ಹಾಕಿದ ಘಟನೆಯೂ ಜರುಗಿತು. ಮನನೊಂದು ಕುಟುಂಬಸ್ಥರು ತಮ್ಮ ಕ್ರೋಧವನ್ನು ಹೊರಹಾಕಿದರು.

ಗಂಗಾಪುರ ಗ್ರಾಮದಲ್ಲಿ ವಾಸ್ತವ್ಯಕ್ಕೆ ಬಂದ ತಹಸೀಲ್ದಾರ್‌ ಶ್ರುತಿ ಗೌಡರ್‌ ಅವರಿಗೆ ಜನರು ಮುತ್ತಿಗೆ ಹಾಕಿದರು.

ಏನಿದು ಸಮಸ್ಯೆ?
ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದ ಸರ್ವೆ ನಂಬರ್ 32ರಲ್ಲಿ ಮಾದಿಗ ಸಮಾಜದ ಹತ್ತಾರು ಕುಟುಂಬಗಳು ಕಳೆದ ಹಲವು ತಗಡಿನ ಶೆಡ್ಡಿನಲ್ಲಿ ವಾಸವಾಗಿದ್ದಾರೆ. ಅದೇ ಸರ್ವೆ ನಂಬರ್ ನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮನೆ ನಿರ್ಮಿಸಿ ಜಿಪಿಎಸ್ ಪ್ರಕ್ರಿಯೆ ನಡೆಸುವ ಮೂಲಕ ಸರಕಾರ ಅನುದಾನವನ್ನೂ ನೀಡಿದೆ. ʻʻಸ್ವಂತ ಜಾಗ ಇಲ್ಲದೇ, ಮನೆ ಇಲ್ಲದೆ ತಗಡಿನ ಶೆಡ್ಡಿನಲ್ಲಿ ವಾಸವಿರುವ ನಮಗೇಕೆ ಸರಕಾರದ ಸೌಲಭ್ಯ ಇಲ್ಲ” ಎಂಬುದು ಈ ಜನರ ಅಳಲು. ʻʻನನಗೂ ಈ ಸಮಸ್ಯೆ ಈಗೀಗ ತಿಳಿದು ಬಂದಿದೆ. ಮನೆ ನೀಡಲು ಆಡಳಿತಾತ್ಮಕ ಪ್ರಕ್ರಿಯೆ ಇವೆ. ಅವುಗಳನ್ನೆಲ್ಲ ಪರಿಗಣಿಸಿ ಮನೆ ನೀಡಲಾಗುವುದುʼʼ ಎಂದು ಮುಂಡಗರಿ ತಹಸೀಲ್ದಾರರಾದ ಶ್ರುತಿ ಗೌಡರ್‌ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Pralhad Joshi: ಹೊಸ ಖಾತೆಗಳ ಅಧಿಕಾರ ಸ್ವೀಕರಿಸಿದ ಪ್ರಲ್ಹಾದ್‌ ಜೋಶಿ; ಲಕ್ಷ್ಮಿ ಪೂಜೆಯೊಂದಿಗೆ ಕಾರ್ಯಾರಂಭ

pralhad joshi: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಎರಡನೇ ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಹಾಗೂ ನವೀಕೃತ ಇಂಧನ ಖಾತೆಗಳ ಅಧಿಕಾರ ವಹಿಸಿಕೊಂಡರು.

VISTARANEWS.COM


on

union minister pralhad joshi takes charge of renewable energy Food Consumer Affairs ministry
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಎರಡನೇ ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.

ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಹಾಗೂ ನವೀಕೃತ ಇಂಧನ ಖಾತೆ ಹೊಣೆ ಹೊತ್ತಿರುವ ಜೋಶಿ ಮಂಗಳವಾರ ಆಯಾ ಖಾತೆಗಳ ಹಿಂದಿನ ಸಚಿವರುಗಳಿಂದ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

ಮೊದಲು ಶ್ರೀಪಾದ ನಾಯಕ್ ಅವರಿಂದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಅಧಿಕಾರ ವಹಿಸಿಕೊಂಡರು.

ಇಂಧನದಲ್ಲಿ ಸ್ವಾವಲಂಬನೆ

2047ರ ವೇಳೆಗೆ ಭಾರತ ಇಂಧನ ಸ್ವಾವಲಂಬನೆ ಸಾಧಿಸುವುದೇ ನಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದ ಸಚಿವ ಪ್ರಲ್ಹಾದ್‌ ಜೋಶಿ, ಹೊಸ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ದೃಷ್ಟಿಯೊಂದಿಗೆ ಹೊಸ ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂದುವರಿಯುತ್ತೇವೆ ಎಂದು ಜೋಶಿ ಹೇಳಿದರು.

ಇನ್ನು, ಪಿಯೂಷ್ ಗೋಯಲ್ ಅವರಿಂದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಅಧಿಕಾರ ವಹಿಸಿಕೊಂಡರು.

ಇದನ್ನೂ ಓದಿ: Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಕನ್ನಡಿಗ ಬೋಪಣ್ಣ, ಸುಮಿತ್‌ ನಾಗಲ್‌

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಜನರಿಗೆ ಆಹಾರ ಭದ್ರತೆ ಖಾತರಿಪಡಿಸಲು ಬದ್ಧರಾಗಿದ್ದೇವೆ ಮತ್ತು ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಕಚೇರಿ ಪೂಜೆ, ಕುಟುಂಬ ಭಾಗಿ

ಕೇಂದ್ರ ಸಚಿವರಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಹೊಸ ಖಾತೆಗಳ ಜವಾಬ್ದಾರಿ ಹೊತ್ತಿರುವ ಸಚಿವ ಪ್ರಲ್ಹಾದ್‌ ಜೋಶಿ, ಮಂಗಳವಾರ ಕಚೇರಿಯಲ್ಲಿ ತಮ್ಮ ಕುಟುಂಬ ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಲಕ್ಷ್ಮಿ ಪೂಜೆ ನೆರವೇರಿಸುವ ಮೂಲಕ ಕಾರ್ಯಾರಂಭ ಮಾಡಿದರು.

ಪತ್ನಿ ಜ್ಯೋತಿ ಜೋಶಿ ಮತ್ತು ಮಕ್ಕಳು, ಪ್ರಲ್ಹಾದ್‌ ಜೋಶಿ ಅವರ ನೂತನ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಸಲ್ಲಿಸಿ, ಸಚಿವರಿಗೆ ಶುಭ ಹಾರೈಸಿದರು.

ಇದನ್ನೂ ಓದಿ: Gold Rate Today: ಚಿನ್ನದ ದರದಲ್ಲಿ ತುಸು ಇಳಿಕೆ; ಇಷ್ಟಿದೆ ಇಂದಿನ ಬೆಲೆ

ಉನ್ನತ ಅಧಿಕಾರಿಗಳ ಸಭೆ

ನೂತನ ಖಾತೆಗಳ ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಪ್ರಲ್ಹಾದ್‌ ಜೋಶಿ, ಆಯಾ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಪ್ರಪ್ರಥಮವಾಗಿ ಔಪಚಾರಿಕ ಸಭೆ ನಡೆಸಿದರು. ಇದೇ ವೇಳೆ ಅಧಿಕಾರಿ ವರ್ಗ ಸಚಿವರನ್ನು ಅಭಿನಂದಿಸಿ, ಆದರದ ಸ್ವಾಗತ ಕೋರಿದರು.

Continue Reading

ಚಿತ್ರದುರ್ಗ

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Murder case: ರೇಣುಕಾ ಸ್ವಾಮಿ ಎಂಬಾತ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಬಂಧಿಯಾಗಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬೇಡ ಜಂಗಮ ಸಮುದಾಯದವರು ಒತ್ತಾಯಿಸಿದ್ದಾರೆ.

VISTARANEWS.COM


on

By

actor Darshan
Koo

ಚಿತ್ರದುರ್ಗ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಬಂಧಿಯಾಗಿದ್ದಾರೆ. ಇದೀಗ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯವು ಕೇಳಿ ಬಂದಿದೆ. ಬೇಡ ಜಂಗಮ ಸಮುದಾಯದ ಜಿಲ್ಲಾಧ್ಯಕ್ಷ ಎಂ.ಟಿ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ತನಿಖೆ ಮಾಡುವುದು ಬೇಡ. ದರ್ಶನ್ ಪ್ರಭಾವಿಯಾಗಿದ್ದು, ಪ್ರಭಾವ ಬೀರಿ ಹೊರಗೆ ಬರಬಹುದು. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸಿದ್ದಾರೆ. ನಮ್ಮ ಸಮುದಾಯದ ಸ್ವಾಮೀಜಿಗಳು ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.ಅವರೊಟ್ಟಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುತ್ತದೆ ಎಂದರು.

ಮೃತ ಕುಟುಂಬಸ್ಥರಿಗೆ ಭಾವನಾ ಬೆಳಗೆರೆ ಸಾಂತ್ವನ

ರೇಣುಕಾ ಸ್ವಾಮಿ ಮನೆಗೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕಿ ಭಾವನಾ ಬೆಳಗೆರೆ ಭೇಟಿ ನೀಡಿದರು. ಹಿರಿಯೂರು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಭಾವನಾ, ವಿಷಯ ತಿಳಿದು ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟರು. ಮೃತನ ಪತ್ನಿ ಸಹನಾಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನ; ನಟಿ ಸಂಜನಾಗೆ ಶಾಕ್‌, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!

ದರ್ಶನ್‌, ಪವಿತ್ರಗೌಡ ಸೇರಿ 13 ಮಂದಿ ಬಂಧನ

ನಟನೆ, ಸಿನಿಮಾಗಳ ಜತೆಗೆ ವಿವಾದಗಳಿಂದಲೂ ಹೆಚ್ಚು ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ (Actor Darshan) ಅವರೀಗ ಗಂಭೀರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ (Renukaswamy) ಎಂಬ 28 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ, ದರ್ಶನ್‌ ಅವರ ವಿರುದ್ಧ ಕೊಲೆ, ಅಪಹರಣ ಹಾಗೂ ಸಾಕ್ಷ್ಯನಾಶ ಪ್ರಕರಣಗಳ ಸಂಕಷ್ಟ ಎದುರಾಗಿದ್ದು, ಆರೋಪ ಸಾಬೀತಾದರೆ ಇವರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್‌ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್‌ 364ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಿದ್ದಾರೆ. ಇನ್ನು ಗೋಡೌನ್‌ನಲ್ಲಿ ಇರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದಾದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಹಾಗಾಗಿ, ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಕೇಸ್‌ ದಾಖಲಾಗಲಿದೆ. ಇನ್ನು ಹತ್ಯೆ ಬಳಿಕ ಶವವನ್ನು ಬಿಸಾಕಿದ ಕಾರಣ ಸಾಕ್ಷ್ಯ ನಾಶದ ಪ್ರಕರಣವನ್ನೂ ಸೇರಿಸಲಾಗುತ್ತದೆ. ಹಾಗಾಗಿ, ಯಾವ ಪ್ರಕರಣಗಳಲ್ಲಿ ಆರೋಪ ಸಾಬೀತಾದರೂ ದರ್ಶನ್‌ ಅವರಿಗೆ ಜೈಲು ಶಿಕ್ಷೆಯಾಗಲಿದೆ. ಕೊಲೆ ಕೇಸ್‌ನಲ್ಲಿ ಆರೋಪ ಸಾಬೀತಾದರಂತೂ ಜೀವಾವಧಿ ಶಿಕ್ಷೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ದರ್ಶನ್‌ ಕೈವಾಡವೇನು?

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ರೇಣುಕಾಸ್ವಾಮಿ ಮೇಲೆ ದರ್ಶನ್‌ ಅವರೇ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ನಂತರ ಶವವನ್ನು ಚರಂಡಿ ಬಳಿ ಎಸೆಯಲಾಗಿತ್ತು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

Bengaluru News: ಬೆಂಗಳೂರಿನ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಇದೇ ಜೂ. 29ರಂದು ಶನಿವಾರ ಸಂಜೆ 5.30ಕ್ಕೆ ನಗರದ ಅರಮನೆ ರಸ್ತೆಯಲ್ಲಿರುವ ಭಾರತ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಕೇಂದ್ರ ಕಚೇರಿಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಚಂದ್ರಶೇಖರಯ್ಯ ಅವರಿಗೆ ಜೀವಮಾನ ಸಾಧನೆಯ ಅಭಿನಂದನಾ ಸಮಾರಂಭ ಹಾಗೂ ಮಣ್ಣಿನ ಮಕ್ಕಳ ಹೆಮ್ಮೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Lifetime achievement felicitation ceremony for retired Judge Chandrashekharaiah on June 29 in Bengaluru
Koo

ಬೆಂಗಳೂರು: ಬೆಂಗಳೂರಿನ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಇದೇ ಜೂ. 29ರಂದು ಶನಿವಾರ ಸಂಜೆ 5.30ಕ್ಕೆ ನಗರದ ಅರಮನೆ ರಸ್ತೆಯಲ್ಲಿರುವ ಭಾರತ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಕೇಂದ್ರ ಕಚೇರಿಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರಿಗೆ ಜೀವಮಾನ ಸಾಧನೆಯ ಅಭಿನಂದನಾ ಸಮಾರಂಭ ಹಾಗೂ ಮಣ್ಣಿನ ಮಕ್ಕಳ ಹೆಮ್ಮೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ (Bengaluru News) ಏರ್ಪಡಿಸಲಾಗಿದೆ.

ಇದನ್ನೂ ಓದಿ: Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಕನ್ನಡಿಗ ಬೋಪಣ್ಣ, ಸುಮಿತ್‌ ನಾಗಲ್‌

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ, ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಕರ್ನಾಟಕ ಕರ್ನಾಟಕ ಹೈಕೋರ್ಟ್‌ ನ್ಯಾ. ಟಿ. ಜಿ. ಶಿವಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ರಾಜಸ್ಥಾನ ಐಜಿಪಿ ರಾಘವೇಂದ್ರ ಸುಹಾಸ್‌, ಮೈಸೂರಿನ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಸಜೀತ್‌ ವಿ.ಜೆ., ಡಾ.ಎನ್‌.ಎಸ್‌. ನಾಗೇಶ್‌ ಪಾಲ್ಗೊಳ್ಳುವರು. ವಿಶೇಷ ಅತಿಥಿಗಳಾಗಿ ಐಎಎಸ್‌ ಅಧಿಕಾರಿಗಳಾದ ಪ್ರದೀಪ್‌ ಪ್ರಭಾಕರ್‌, ಮಂಜುಶ್ರೀ ಎನ್‌. ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Parliament Session 2024: ಜೂನ್‌ 24ರಿಂದ ಸಂಸತ್‌ ವಿಶೇಷ ಅಧಿವೇಶನ; ಸ್ಪೀಕರ್‌ ಆಯ್ಕೆ ಸೇರಿ ಏನೆಲ್ಲ ತೀರ್ಮಾನ?

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಾಗೇಂದ್ರ ಬಾಬು, ಶಶಾಂತ್‌ ಎನ್‌.ಎಂ., ಸುಮಾ ಎಚ್‌.ಕೆ., ನವ್ಯ ಕೆ., ಚಂದನ್‌ ಬಿ.ಎಸ್‌., ಡಾ. ವಿವೇಕ್‌, ಲೇಖನ್‌ ಎಂ., ರಕ್ಷಿತ್‌ ಕೆ. ಗೌಡ, ರಾಹುಲ್‌ ಗೌಡ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್‌ ಮತ್ತು ಎನ್‌.ಆರ್‌.ಐ ಒಕ್ಕಲಿಗರ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ.

Continue Reading

ಮೈಸೂರು

Murder case : ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Murder case : ಅನ್ನದಾನೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿಯನ್ನು ಕೊಂದಿದ್ದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆರೋಪಿಯನ್ನು ಕೆಆರ್‌ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

VISTARANEWS.COM


on

By

murder case
ವಿಷ ಸೇವಿಸಿದ ರವಿ ಹಾಗೂ ಕೊಲೆಯಾದ ಸ್ವಾಮೀಜಿ ಶಿವಾನಂದ
Koo

ಮೈಸೂರು: ಮೈಸೂರಿನ ಸಿದ್ದಾರ್ಥನಗರದಲ್ಲಿ ಅನ್ನದಾನೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರ ಆಪ್ತ ಸಹಾಯಕನಿಂದಲೇ ಬರ್ಬರವಾಗಿ ಕೊಂದು (Murder case ) ಹಾಕಿದ್ದ. ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ರವಿ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ಆರೋಪಿ ರವಿಯನ್ನು ಪೊಲೀಸರು ಕೆಆರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಡಿತದ ಚಟಕ್ಕೆ ಒಳಗಾಗಿದ್ದ ರವಿಗೆ ಶಿವಾನಂದ ಸ್ವಾಮೀಜಿ ಬುದ್ಧಿವಾದ ಹೇಳಿದ್ದರು. ಸ್ವಾಮೀಜಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ರವಿ ಕೊಲೆ ಮಾಡಿದ್ದ ಎನ್ನಲಾಗಿದೆ. ಸದ್ಯ ಆರೋಪಿ‌ ರವಿ ಗುಣಮುಖನಾದ ಬಳಿಕ ಪೊಲೀಸರು ತನಿಖೆಯನ್ನು ಮುಂದುವರಿಸಲಿದ್ದಾರೆ.

ಇದನ್ನೂ ಓದಿ:Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

ಏನಿದು ಪ್ರಕರಣ?

ನಿನ್ನೆ ಸೋಮವಾರ (ಜೂ.10) ಮೈಸೂರಿನಲ್ಲಿ ಹಿರಿಯ ಸ್ವಾಮೀಜಿಯೊಬ್ಬರ ಬರ್ಬರ (Murder case) ಕೊಲೆಯಾಗಿತ್ತು. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ (90) ಸ್ವಾಮೀಜಿ ಕೊಲೆಯಾದವರು. ಶಿವಾನಂದ ಸ್ವಾಮೀಜಿ ಅವರ ಸಹಾಯಕನಾಗಿದ್ದ ಭದ್ರತಾ ಸಿಬ್ಬಂದಿಯಿಂದಲೇ ಕೊಲೆ ನಡೆದಿತ್ತು.

ರವಿ (60) ಎಂಬಾತನಿಂದ ಈ ಕೃತ್ಯ ನಡೆದಿತ್ತು. ಶಿವಾನಂದ ಸ್ವಾಮೀಜಿಯನ್ನು ಮಾರಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಂಚದ ಮೇಲೆ ಮಲಗಿದ್ದಲ್ಲೇ ಶಿವಾನಂದ ಸ್ವಾಮೀಜಿಗೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Mukesh Khanna
ದೇಶ4 mins ago

Mukesh Khanna: ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಕೊಟ್ಟ ʼಮಹಾಭಾರತʼದ ಭೀಷ್ಮ

union minister pralhad joshi takes charge of renewable energy Food Consumer Affairs ministry
ಕರ್ನಾಟಕ7 mins ago

Pralhad Joshi: ಹೊಸ ಖಾತೆಗಳ ಅಧಿಕಾರ ಸ್ವೀಕರಿಸಿದ ಪ್ರಲ್ಹಾದ್‌ ಜೋಶಿ; ಲಕ್ಷ್ಮಿ ಪೂಜೆಯೊಂದಿಗೆ ಕಾರ್ಯಾರಂಭ

Yamaha Fascino S
Latest18 mins ago

Yamaha Fascino S : ಎಲ್ಲಿದ್ದೀಯಾ ಅಂಥ ಕೇಳಿದ್ರೆ, ಇಲ್ಲಿದ್ದೀನಿ ಅನ್ನುತ್ತೆ ಈ ಸ್ಕೂಟರ್​! ವಿಶೇಷ ಫೀಚರ್ ಇರುವ ಸ್ಕೂಟರ್ ಈಗ ಭಾರತದಲ್ಲಿ

RSA vs BAN
ಕ್ರೀಡೆ25 mins ago

RSA vs BAN: ಬಾಂಗ್ಲಾ ಸೋಲಿಗೆ ಐಸಿಸಿ ಹೊಸ ನಿಯಮವೇ ಕಾರಣ; ಬೌಂಡರಿ ದಾಖಲಾದರೂ ರನ್​ ನೀಡಲಿಲ್ಲವೇಕೆ?

actor Darshan
ಚಿತ್ರದುರ್ಗ36 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Mohan Bhagwat
ದೇಶ43 mins ago

Mohan Bhagwat: ಜನ ಸೇವಕ ಎಂದಿಗೂ ಅಹಂಕಾರಿ ಆಗಿರುವುದಿಲ್ಲ: ಮೋಹನ್‌ ಭಾಗವತ್‌

Lifetime achievement felicitation ceremony for retired Judge Chandrashekharaiah on June 29 in Bengaluru
ಬೆಂಗಳೂರು1 hour ago

Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

murder case
ಮೈಸೂರು1 hour ago

Murder case : ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Womens Commission president Dr Nagalakshmi Chaudhary visit bisaadihatti village
ತುಮಕೂರು1 hour ago

Koratagere News: ಗ್ರಾಮೀಣ ಹೆಣ್ಣುಮಕ್ಕಳಿಗೆ ಮೂಲಸೌಕರ್ಯ ಒದಗಿಸುವುದು ಮೊದಲ ಆದ್ಯತೆ: ಮಹಿಳಾ ಆಯೋಗದ ಅಧ್ಯಕ್ಷೆ

IND vs USA
ಕ್ರೀಡೆ1 hour ago

IND vs USA: ಅಪಾಯಕಾರಿ ಅಮೆರಿಕ ಸವಾಲಿಗೆ ಸಡ್ಡು ಹೊಡೆದೀತೇ ಟೀಮ್​ ಇಂಡಿಯಾ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

actor Darshan
ಚಿತ್ರದುರ್ಗ36 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ6 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

ಟ್ರೆಂಡಿಂಗ್‌