Lok Sabha Election 2024: ಅಬ್ಬಾ! ಅಂತೂ ಮುಗೀತು ಪುಟ್ಟಾ ಮಹಾಯುದ್ಧ ಎಂದ ಪ್ರಲ್ಹಾದ್‌ ಜೋಶಿ! - Vistara News

ಹುಬ್ಬಳ್ಳಿ

Lok Sabha Election 2024: ಅಬ್ಬಾ! ಅಂತೂ ಮುಗೀತು ಪುಟ್ಟಾ ಮಹಾಯುದ್ಧ ಎಂದ ಪ್ರಲ್ಹಾದ್‌ ಜೋಶಿ!

Lok Sabha Election 2024: ಕಳೆದ ಮೂರ್ನಾಲ್ಕು ತಿಂಗಳಿಂದ ಬಿಡುವಿಲ್ಲದ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಬುಧವಾರವಿಡೀ ಕುಟುಂಬದೊಂದಿಗೆ ಸಮಯ ಕಳೆದರು. ಹುಬ್ಬಳ್ಳಿಯ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಸಂತಸಪಟ್ಟರು.

VISTARANEWS.COM


on

Lok Sabha Election 2024 Pralhada Joshi who came out of the election frenzy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ಅಬ್ಬಾ ಅಂತೂ ಮುಗೀತಪ್ಪ ಮೋದಿ ಅವರ ಮೂರನೇ ಯುದ್ಧ! ನನ್ನ ಐದನೇ ಮಹಾಯುದ್ಧ!! ಎಂಬಂತೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಈಗ ರಿಲ್ಯಾಕ್ಸ್ ಮೂಡಿಗೆ (Lok Sabha Election 2024) ಜಾರಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ನಿನ್ನೆವರೆಗೂ ಬಿಡುವಿಲ್ಲದ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಪ್ರಲ್ಹಾದ್‌ ಜೋಶಿ ಅವರು ಬುಧವಾರವಿಡೀ ಕುಟುಂಬದೊಂದಿಗೆ ಸಮಯ ಕಳೆದರು. ಹುಬ್ಬಳ್ಳಿಯ ಮನೆಯಲ್ಲಿ ಜೋಶಿ ದಂಪತಿ ಮಕ್ಕಳ ಜತೆ ಸೇರಿ ಮೊಮ್ಮಕ್ಕಳನ್ನು ಆಡಿಸುತ್ತ ಖುಷಿ ವ್ಯಕ್ತಪಡಿಸಿದರು.

ಇದನ್ನೂ ಓದಿ: T20 World Cup 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​​; ಈ ಮೊಬೈಲ್‌ ಆ್ಯಪ್​ನಲ್ಲಿ ಟಿ20 ವಿಶ್ವಕಪ್ ಉಚಿತ ಪ್ರಸಾರ

ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಲ್ಹಾದ್‌ ಜೋಶಿ ಅವರು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಅತ್ತ ಕೇಂದ್ರದಲ್ಲಿ ಇಲಾಖೆ ಕೆಲಸ ಇತ್ತ ಸ್ವಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ಎನ್ನುತ್ತ ಹಗಲಿರುಳು ಶ್ರಮಿಸಿದ್ದರು. ಕಳೆದೊಂದು ತಿಂಗಳಿಂದ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಿದ್ದರು. ಚುನಾವಣೆ ಸಮೀಪಿಸಿದಂತೆ ವಿವಿಧ ಸಮುದಾಯಗಳ ಸಮಾವೇಶ, ಬಿಜೆಪಿ ಕಾರ್ಯಕರ್ತರ ಸಭೆ, ಪ್ರಚಾರ ಸಭೆ ಹೀಗೆ ಸದಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಸಚಿವ ಜೋಶಿ ಅವರಿಗೆ ಜಂಜಾಟದಿಂದ ಈಗ ತುಸು ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ: Heavy Rain: ಕಳುವರಹಳ್ಳಿಯಲ್ಲಿ ಭಾರೀ ಗಾಳಿ ಮಳೆಗೆ ಶಾಲಾ ಚಾವಣಿ ಕುಸಿತ

ಪತಿ ಪ್ರಲ್ಹಾದ್‌ ಜೋಶಿ ಅವರ ಗೆಲುವಿಗಾಗಿ ಜ್ಯೋತಿ ಜೋಶಿ ಅವರೂ ಕ್ಷೇತ್ರದ ವಿವಿಧೆಡೆ ಮಹಿಳಾ ಕಾರ್ಯಕರ್ತರ ಜತೆ ಸೇರಿ ಪ್ರಚಾರ ನಡೆಸಿದ್ದರು. ಇದೀಗ ಚುನಾವಣೆ, ಪ್ರಚಾರ ಎಲ್ಲದರಿಂದ ಹೊರಬಂದು ಮೊಮ್ಮಕ್ಕಳನ್ನು ಎತ್ತಾಡಿಸಿ ಸಂತಸಪಟ್ಟರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather: ಇಂದು ದಕ್ಷಿಣ ಕನ್ನಡ, ಹಾಸನ, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ!

Karnataka Weather: ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರವಾದ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ರಾಜ್ಯದಲ್ಲಿ ಮೇ 30ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗುವ (Karnataka Weather) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಮಾರುತಗಳು (ಗಂಟೆಗೆ 40-50 ಕಿಮೀ) ವೇಗದಲ್ಲಿ ಬೀಸುವ ಸಾಧ್ಯತೆ ಮತ್ತು ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರದಲ್ಲಿ (30-40 ಕಿಮೀ) ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಶಿವಮೊಗ್ಗ ಜಿಲ್ಲೆಗಳು. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರವಾದ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಮೇಲೆ ಗಾಳಿಯು ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 °C ಮತ್ತು 22 ° C ಆಗಿರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಮೇ 31ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ (30-40 kmph) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ (ಗಂಟೆಗೆ 30-40 ಕಿ.ಮೀ) ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.

ಇದನ್ನೂ ಓದಿ | Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

ಇದೇ ರೀತಿ ಜೂನ್‌ 5ರವರೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳು

Continue Reading

ಹುಬ್ಬಳ್ಳಿ

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Hubballi Train: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದ್ದು, ಈ ರೈಲುಗಳ ಬದಲಾವಣೆಯು ಯಾವ ದಿನಾಂಕದಿಂದ ಜಾರಿ ಬರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

Timing change of 5 trains arriving at Sri Siddharooda Swamiji Railway Station Hubballi
ಸಾಂದರ್ಭಿಕ ಚಿತ್ರ.
Koo

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದ್ದು, ಈ ರೈಲುಗಳ (Hubballi Train) ಬದಲಾವಣೆಯು ಯಾವ ದಿನಾಂಕದಿಂದ ಜಾರಿ ಬರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಜೂನ್ 21ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16532 ಕೆಎಸ್ಆರ್ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ: LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

ಜೂ.22ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16506 ಕೆಎಸ್ಆರ್ ಬೆಂಗಳೂರು-ಗಾಂಧಿ ಧಾಮ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂ. 23 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂ.24 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16508 ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ: KSET Results 2024:‌ ಕೆ-ಸೆಟ್‌ ಪರೀಕ್ಷೆ ಫಲಿತಾಂಶ; ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ಜೂ.25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16210 ಮೈಸೂರು-ಅಜ್ಮೀರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ ಎಂದು ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿದೆ.

Continue Reading

ಪ್ರಮುಖ ಸುದ್ದಿ

Love Jihad: ಲವ್ ಜಿಹಾದ್ ತಡೆಗೆ ಹೆಲ್ಪ್‌ಲೈನ್‌ ಆರಂಭಿಸಿದ ಶ್ರೀರಾಮಸೇನೆ

Love Jihad: ರಾಜ್ಯದ ಯಾವುದೇ ಹಿಂದು ಯುವತಿಯರಿಗೆ ಅನ್ಯ ಧರ್ಮದವರು ತೊಂದರೆ ನೀಡಿದರೆ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಶ್ರೀರಾಮ್ ಸೇನೆ ತಿಳಿಸಿದೆ.

VISTARANEWS.COM


on

Love Jihad
Koo

ಹುಬ್ಬಳ್ಳಿ: ರಾಜ್ಯದಲ್ಲಿ ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು (Love Jihad) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದು ಯುವತಿಯರ ರಕ್ಷಣೆಗೆ ಶ್ರೀ ರಾಮಸೇನೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯದ ಯಾವುದೇ ಹಿಂದು ಯುವತಿಯರಿಗೆ ಅನ್ಯ ಧರ್ಮದವರು ತೊಂದರೆ ನೀಡಿದರೆ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಶ್ರೀರಾಮ್ ಸೇನೆ ತಿಳಿಸಿದೆ.

ನಗರದ ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ಲವ್ ಜಿಹಾದ್ ಜಾಗೃತಿಗಾಗಿ ಸಹಾಯವಾಣಿಗೆ (9090443444) ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನೇಹಾ ಹಿರೇಮಠ ಕುಟುಂಬಸ್ಥರು, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಶ್ರೀರಾಮಸೇನೆ ಪದಾಧಿಕಾರಿಗಳು ಭಾಗಿಯಾಗಿದ್ದರು.

ಈ ವೇಳೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದು ಹೆಣ್ಮಕ್ಕಳ ಮತಾಂತರ, ಅತ್ಯಾಚಾರ ನಡೆಯುತ್ತಿದೆ. ಘಜ್ನಿ, ಘೋರಿ, ಟಿಪ್ಪು ಸುಲ್ತಾನ್‌ವರೆಗೂ ಈ ಪ್ರಕ್ರಿಯೆ ಚಾಲನೆಯಲ್ಲಿದೆ. ಹಿಂದು ಯುವತಿಯರಿಗಾಗಿ ನಾವು ಸಹಾಯವಾಣಿ ಉದ್ಘಾಟನೆ ಮಾಡಿದ್ದೇವೆ. ಯಾವುದೇ ಸಮಸ್ಯೆ ಇದ್ದರೂ ನಮಗೆ ತಿಳಿಸಬೇಕು, ನಾವು 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಹಿಂದು ಹೆಣ್ಮಕ್ಕಳು ಸಾಯಬೇಡಿ, ನೀವು ಸಾಯಿಸೋ ಯೋಚನೆ ಮಾಡಬೇಕು. ನಾವು ನಿಮಗೆ ಟ್ರೇನಿಂಗ್ ಕೊಡ್ತೀವಿ, ಕ್ರೂರತನಕ್ಕೆ ಅಲ್ಲೆ ಉತ್ತರ ಕೊಡಬೇಕು. ಹಾಡಹಗಲೇ ನೇಹಾ ಕೊಲೆಯಾಗುತ್ತೆ ಅಂದ್ರೆ ಅವರಿಗೆ ಎಷ್ಟು ಟ್ರೈನಿಂಗ್ ‌ಕೊಟ್ಟಿರಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕರೇ ನೀವು ಮುಸ್ಲಿಂ ಮತಗಳಿಗಾಗಿ ಜೊಲ್ಲು ಸುರಿಸಬೇಡಿ. ಮುಸ್ಲಿಂ ಯುವಕರು ನಿಮ್ಮ ಹೆಣ್ಣುಮಕ್ಕಳನ್ನೂ ಬಿಡೋದಿಲ್ಲ. ಸರ್ಕಾರ, ರಾಜಕಾರಣಿಗಳು ಫೇಲ್ ಆಗಿದ್ದಕ್ಕೆ ನಾವು ಇದಕ್ಕೆ ಮುಂದಾಗಿದ್ದೇವೆ. ಹೌದು, ಇದು ನೈತಿಕ ಪೋಲಿಸ್ ಗಿರಿ. ಸರ್ಕಾರ ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ನಾವು ನೈತಿಕ ಪೊಲೀಸ್ ಗಿರಿ ಆರಂಭಿಸಿದ್ದೇವೆ. ನಾವು ಹಿಂದು ಹೆಣ್ಣುಮಕ್ಕಳಿಗೆ ಬರೀ ತ್ರಿಶೂಲ ಮಾತ್ರ ಅಲ್ಲಾ, ಗನ್, ಲಾಂಗ್ ಮಚ್ಚು ಟ್ರೈನಿಂಗ್ ನೀಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ ಅಧಿಕಾರಕ್ಕೆ ಬಂದ್ರೆ ನಿಮ್ಮ ಖಾತೆಗೆ ಟಕಾಟಕ್ 1 ಲಕ್ಷ ಎಂದಿದ್ದ ರಾಹುಲ್ ಗಾಂಧಿ! ಪೋಸ್ಟ್ ಆಫೀಸ್ ಮುಂದೆ ಮುಸ್ಲಿಂ ಮಹಿಳೆಯರ ನೂಕುನುಗ್ಗಲು!!

ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೇ ದಾವಣಗೆರೆ, ಕಲಬುರಗಿ, ಬಾಗಲಕೋಟೆ, ಬೆಂಗಳೂರು ಸೇರಿ ವಿವಿಧೆಡೆ ಲವ್‌ ಜಿಹಾದ್‌ ತಡೆಗೆ ಶ್ರೀರಾಮಸೇನಿಯ ಸಹಾಯವಾಣಿಗೆ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ.

Continue Reading

ಮಳೆ

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Karnataka weather Forecast : ರಾಜ್ಯಾದ್ಯಂತ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯೊಂದಿಗೆ (Rain News) ಗುಡುಗು, ಮಿಂಚು ಇರಲಿದ್ದು, 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

Mansoon
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮೇ 29 ರಂದು ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ (Karnataka weather Forecast) ಸಾಧ್ಯತೆಯಿದೆ. ಮಲೆನಾಡು ಭಾಗದಲ್ಲಿ ಮಧ್ಯಮ ಮಳೆಯಾದರೆ, ಕರಾವಳಿಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Heavy Rain alert) ಸಾಧ್ಯತೆ ಇದೆ. ಕೆಲವೆಡೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ.

ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕೋಲಾರ, ರಾಮನಗರ, ಮಂಡ್ಯ, ಮೈಸೂರು ಮತ್ತು ತುಮಕೂರಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಒಣಹವೆ ಇರಲಿದೆ.

ಉತ್ತರ ಒಳನಾಡಿನ ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸಲಿದೆ.

ಮಲೆನಾಡಿನ ಹಾಸನ ಮತ್ತು ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ಉತ್ತರ ಕನ್ನಡ ಚದುರಿದಂತೆ ಸಾಧಾರಣ ಮಳೆಯಾಗಲಿದೆ.

ಬೆಂಗಳೂರಲ್ಲಿ ಗುಡುಗು ಸಹಿತ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಸೆಲ್ಸಿಯಸ್ ಮತ್ತು 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Love Case : ಪ್ರೀತಿಸಿದವಳೇ ಬೇಕೆಂದ ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ರಾ ಯುವತಿ ಕುಟುಂಬಸ್ಥರು!

ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಇನ್ನೇನೂ ಸಮ್ಮರ್‌ ಸೀಸನ್‌ (Summer dress fashion) ಮುಗಿಯುವ ಹಂತದಲ್ಲಿದೆ. ಆಗಲೇ ವೆವಿ ಡ್ರೆಸ್‌ಗಳು ಎಂಟ್ರಿ ನೀಡಿವೆ. ಹೌದು. ನೋಡಿದಾಕ್ಷಣ ಮನೋಲ್ಲಾಸ ತುಂಬುವಂತಹ ಉತ್ಸಾಹ ಮೂಡಿಸುವ ಡಿಫರೆಂಟ್‌ ಲುಕ್‌ ನೀಡುವ ನಾನಾ ಶೇಡ್‌ನ ವೆವಿ ಡ್ರೆಸ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ.

Summer Dress Fashion

ಏನಿದು ವೆವಿ ಡ್ರೆಸ್‌?

ಅರರೆ, ಏನಿದು ವೆವಿ ಡ್ರೆಸ್‌ ಎಂದು ಯೋಚಿಸುತ್ತಿದ್ದೀರಾ! ಹೆಸರೇ ಹೇಳುವಂತೆ, ಇವು ಬೀಚ್‌ನಲ್ಲಿ ಸಮುದ್ರದ ಅಲೆಗಳನ್ನು ಬಿಂಬಿಸುವಂತಹ ಪ್ರಿಂಟ್ಸ್ ಇರುವಂತಹ ಸಮ್ಮರ್‌ ಡ್ರೆಸ್‌ಗಳಿವು. ನೋಡಲು ಬೀಚ್‌ ಲುಕ್‌ ಪ್ಲಸ್‌ ಹಾಲಿ ಡೇ ಪಾರ್ಟಿ ಲುಕ್‌ ನೀಡುವಂತಹ ಉಡುಗೆಗಳಿವು. ಅಷ್ಟೇಕೆ! ಲಂಚ್‌-ಬ್ರಂಚ್‌ ಪಾರ್ಟಿಗಳಲ್ಲೂ ಕಾಣಬಹುದಾದ ಹೈ ಫ್ಯಾಷನ್‌ ಉಡುಪುಗಳಿವು. ಇವುಗಳ ಪ್ರಿಂಟ್ಸ್ ಅಲೆಗಳಂತೆ ಇರುವುದರಿಂದ ಇವನ್ನು ವೆವಿ ಡ್ರೆಸ್‌ಗಳೆಂದು ಕರೆಯಲಾಗುತ್ತದೆ. ನಾನಾ ಹೈ ಫ್ಯಾಷನ್‌ ಬ್ರಾಂಡ್‌ಗಳಲ್ಲಿ ಇವು ಬಿಡುಗಡೆಗೊಂಡಿವೆ. ಸೆಲೆಬ್ರೆಟಿಗಳು ಮಾತ್ರವಲ್ಲ, ಸ್ಟೈಲಿಶ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎಂದು ವಿವರಿಸುತ್ತಾರೆ ಸ್ಟೈಲಿಸ್ಟ್‌ಗಳು.

Summer Dress Fashion

ಶಾರ್ವರಿ ವೆವಿ ಡ್ರೆಸ್‌

ಬಾಲಿವುಡ್‌ನಲ್ಲಿ ಇನ್ನೂ ಅತಿ ಹೆಚ್ಚಾಗಿ ಕಂಡು ಬರದ ಉಡುಪುಗಳಲ್ಲಿ ಈ ವೆವಿ ಡ್ರೆಸ್‌ ಕೂಡ ಸೇರಿದೆ. ಯಾಕೆಂದರೇ, ಈ ಉಡುಪು ಈ ಜನರೇಷನ್‌ ನಟಿಯರ ಲಿಸ್ಟ್ನಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಶಾರ್ವರಿ ಸಮುದ್ರದ ಅಲೆಗಳನ್ನು ನೆನಪಿಸುವ ಪಿಸ್ತಾ ಮಿಂಟ್‌ ಗ್ರೀನ್‌ ಶೇಡ್ ಮಿಕ್ಸ್ ಇರುವಂತಹ ವೆವಿ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಸದ್ಯ, ಇತರೇ ಯಾವುದೇ ನಟಿಯರು ಪ್ರಯೋಗಿಸದ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿರುವ ಹೆಗ್ಗಳಿಕೆ ಇವರದು. ವೆವಿ ಡ್ರೆಸ್‌ನಂತಹ ಸಮ್ಮರ್‌ ಡ್ರೆಸ್‌ ಇದೆಯಾ! ಒಮ್ಮೆ ನಾವು ಕೂಡ ಧರಿಸೋಣಾ! ಎಂಬ ಟೀನೇಜ್‌ ಹುಡುಗಿಯರ ಫ್ಯಾಷನ್‌ ಚಾಯ್ಸ್‌ಗೆ ಹೊಸ ಶೇಡ್‌ಗಳು ಆಕರ್ಷಿಸುತ್ತಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ಜಿಯಾ. ಅವರ ಪ್ರಕಾರ, ವೆವಿ ಡ್ರೆಸ್‌ಗಳು ಯಂಗ್‌ ಲುಕ್‌ ನೀಡುತ್ತವಂತೆ. ಹಾಗಾಗಿ ಆನ್‌ಲೈನ್‌ನಲ್ಲಿ ಇದೀಗ ಇವುಗಳ ಖರೀದಿ ಹೆಚ್ಚಾಗಿದೆ ಎನ್ನುತ್ತಾರೆ.

Summer Dress Fashion

ವೆವಿ ಡ್ರೆಸ್‌ಗಳ ಟ್ರೆಂಡ್‌

ಸಾಗರ ಹಾಗೂ ಸಮುದ್ರ ಅಲೆಗಳ ನ್ಯಾಚುರಲ್‌ ಶೇಡ್ಸ್, ಪೀಚ್‌ ಹಾಗೂ ಕೇಸರಿ ಶೇಡ್‌ಗಳ ನೈಜವೆನಿಸದ ಪ್ರಿಂಟ್ಸ್‌ನ ವೆವಿ ಡ್ರೆಸ್‌ಗಳು, ಅಸ್ಸೆಮ್ಮಿಟ್ರಿಕಲ್‌ ವೆವಿ ಡ್ರೆಸ್‌ಗಳು ಅದರಲ್ಲೂ, ವೈಟ್‌ & ಸೀ ಬ್ಲ್ಯೂ , ರಾಯಲ್‌ ಬ್ಲ್ಯೂ ವೆವಿ ಡ್ರೆಸ್‌ಗಳು ಅತಿ ಹೆಚ್ಚಾಗಿ ಬೇಡಿಕೆ ಪಡೆದುಕೊಂಡಿವೆ.

  • ಸಮ್ಮರ್‌ ಪಾರ್ಟಿಗೆ ಹಾಗೂ ಔಟಿಂಗ್‌ಗೆ ಮ್ಯಾಚ್‌ ಆಗುತ್ತವೆ.
  • ಹೆಚ್ಚು ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ.
  • ಮಿನಿಮಲ್‌ ಮೇಕಪ್‌ ಆಕರ್ಷಕವಾಗಿ ಕಾಣಿಸುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Fake CBI Officer
ಬೆಂಗಳೂರು5 mins ago

Fake CBI Officer : ಸಿಬಿಐ ಪೊಲೀಸರೆಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ ನಾಲ್ವರು ಅರೆಸ್ಟ್‌

Prajwal Devaraj death news take leagal action by family
ಸ್ಯಾಂಡಲ್ ವುಡ್21 mins ago

Prajwal Devaraj: ಪ್ರಜ್ವಲ್​ ದೇವರಾಜ್ ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಕುಟುಂಬಸ್ಥರ ಆಕ್ರೋಶ!

Prajwal Revanna Case
ಕ್ರೈಂ25 mins ago

Prajwal Revanna Case: ಅಶ್ಲೀಲ ವಿಡಿಯೋ ಹಂಚಿದ ಆರೋಪಿಗಳಾದ ಚೇತನ್‌, ಲಿಖಿತ್‌ಗೆ ಜಾಮೀನು

Agnikul Cosmos
ತಂತ್ರಜ್ಞಾನ41 mins ago

Agnikul Cosmos: ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿದ ಸ್ಟಾರ್ಟ್ ಅಪ್ ಕಂಪನಿ ಅಗ್ನಿಕುಲ್ ಕಾಸ್ಮೋಸ್; ಮೋದಿ ಅಭಿನಂದನೆ

PM Modi
Lok Sabha Election 202445 mins ago

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

Love Case in vijayapura
ವಿಜಯಪುರ54 mins ago

Love Case : ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕೇಸ್‌; ಯುವತಿ ತಂದೆ ಅರೆಸ್ಟ್‌

Kantara Movie Mollywood actor enters
ಸಿನಿಮಾ58 mins ago

Kantara Movie: `ಕಾಂತಾರ ಚಾಪ್ಟರ್‌ 1‌’ ಸಿನಿಮಾಗೆ ಖ್ಯಾತ ಮಾಲಿವುಡ್‌ ನಟ ಎಂಟ್ರಿ!

Singapore Open
ಕ್ರೀಡೆ59 mins ago

Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

prajwalrevanna case hassan protest
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್‌ ಪ್ರತಿಭಟನೆ

PM Narendra Modi
ದೇಶ1 hour ago

PM Narendra Modi: ಪ್ರಧಾನಿ ಮೋದಿ ಸ್ಪರ್ಧೆ ಅನರ್ಹತೆಗೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌