Shiva Temple: ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ಭವ್ಯ ಶಿವ ಮಂದಿರ; ಡಾ. ವಿಜಯ ಸಂಕೇಶ್ವರ ಸಾರಥ್ಯದಲ್ಲಿ ನಿರ್ಮಾಣ - Vistara News

ಹುಬ್ಬಳ್ಳಿ

Shiva Temple: ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ಭವ್ಯ ಶಿವ ಮಂದಿರ; ಡಾ. ವಿಜಯ ಸಂಕೇಶ್ವರ ಸಾರಥ್ಯದಲ್ಲಿ ನಿರ್ಮಾಣ

Shiva Temple: ಫೆಬ್ರವರಿ 22ರಂದು ಹುಬ್ಬಳ್ಳಿಯಲ್ಲಿ ಶಿವ ಮಂದಿರದ ಪ್ರಾಣ ಪ್ರತಿಷ್ಠಾಪಣೆ ನೆರವೇರಲಿದೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಸಂಕಲ್ಪದೊಂದಿಗೆ ಭವ್ಯ ದೇವಸ್ಥಾನ ನಿರ್ಮಾಣವಾಗಿದೆ.

VISTARANEWS.COM


on

Shiva Temple
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ಕಳೆದ ಎರಡು ದಶಕಗಳಲ್ಲಿ ಹಲವು ಹೊಸ ಮಂದಿರಗಳ ನಿರ್ಮಾಣದ ಮೂಲಕ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಪರಿವರ್ತನೆಯಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇದೀಗ ಮತ್ತೊಂದು ವಿಶಿಷ್ಟ ದೇವಾಲಯ ಗಮನ ಸೆಳೆಯುತ್ತಿದೆ. ತಾಲೂಕಿನ ಪಾಲಿಕೊಪ್ಪ ಬಳಿ ಪಿ.ಬಿ. ರಸ್ತೆಗೆ ಹೊಂದಿಕೊಂಡು ನಿರ್ಮಾಣವಾಗಿರುವ ಶಿವ ದೇವಾಲಯ (Shiva Temple) ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಹಲವಾರು ಸಂತ ಮಹಾಂತರು ಆಗಿ ಹೋಗಿರುವ ಹುಬ್ಬಳ್ಳಿಯಲ್ಲಿ ಭಕ್ತಿ ಸುಧೆ ಹರಿಸಲು ಹೊಸ ಶಿವ ದೇವಾಲಯ ಸಜ್ಜುಗೊಂಡಿದೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಮತ್ತು ಎಂ.ಡಿ ಡಾ. ಆನಂದ ಸಂಕೇಶ್ವರ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಫೆ.22ರಂದು ನೆರವೇರಲಿದೆ.

ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಶಿರೂರ ಪಾರ್ಕ್‌ನ ತದ್ರೂಪಿ ಅಯ್ಯಪ್ಪಸ್ವಾಮಿ ಮಂದಿರ, ಜೈನ ಮಂದಿರಗಳು, ವರೂರಿನ ನವಗ್ರಹ ತೀರ್ಥ, ಇಸ್ಕಾನ್ ಟೆಂಪಲ್, ಐತಿಹಾಸಿಕ ಉಣಕಲ್ಲ ಚಂದ್ರಮೌಳೇಶ್ವರ ದೇವಸ್ಥಾನ… ಹೀಗೆ ಐತಿಹಾಸಿಕ ಹಾಗೂ ನವ್ಯ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಹೆಸರುವಾಸಿಯಾಗಿರುವ ಹುಬ್ಬಳ್ಳಿ -ಧಾರವಾಡ ಇದೀಗ ಮತ್ತೊಂದು ಭವ್ಯ ಮಂದಿರದ ಮೂಲಕ ಭಕ್ತರ ಸುಕ್ಷೇತ್ರವಾಗಿ ಹೊರಹೊಮ್ಮುತ್ತಿದೆ.

ತಾಲೂಕಿನ ಪಾಲಿಕೊಪ್ಪ ಬಳಿ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಶಿವ ದೇವಸ್ಥಾನವು ಕಣ್ಮನ ಸೆಳೆಯುತ್ತಿದೆ. ಶಿವನು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾದೇವನಾಗಿದ್ದಾನೆ. ಅಂತಹ ಶಿವನ ಭವ್ಯ ಮಂದಿರ ಇದೀಗ ಹುಬ್ಬಳ್ಳಿ ಸಮೀಪದಲ್ಲಿ ನಿರ್ಮಾಣವಾಗಿರುವುದು ಭಕ್ತರಿಗೆ ಸಂತಸ ತಂದಿದ್ದು, ಸಂಪೂರ್ಣ ಶಿಲೆಯಲ್ಲಿ ನಿರ್ಮಿಸಿದ ಇದರ ವಿಶೇಷ ಶೈಲಿಯು ನೋಡುಗರನ್ನು ಆಕರ್ಷಿಸುವಂತಿದೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ವಿಶಾಲವಾದ ದೇವಸ್ಥಾನ ಆವರಣದಲ್ಲಿ ಶಿವ, ಗಣೇಶ, ಪಾರ್ವತಿ ಹೀಗೆ ವಿವಿಧ ದೇವಸ್ಥಾನಗಳು ಇವೆ. ಒಂದೇ ಜಾಗದಲ್ಲಿ ಹಲವು ದೇವರನ್ನು ಕಾಣುವ ಮೂಲಕ ಭಕ್ತಿ ಸಮರ್ಪಿಸಿ ಕೃತಾರ್ಥರಾಗುವ ಅವಕಾಶ ಇಲ್ಲಿ ಸಿಗಲಿದೆ.
ಇಲ್ಲಿ ನಿರ್ಮಾಣವಾದ ಪ್ರತಿಯೊಂದು ದೇವಸ್ಥಾನವೂ ವಿಶಿಷ್ಟ ಹಾಗೂ ಪರಂಪರೆಯನ್ನು ಸಾರುವಂತಿವೆ.
ಶಿವ ದೇವಸ್ಥಾನವನ್ನು ಆಗಮ ಶಿಲ್ಪ ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ. ವಾಸ್ತು ಪ್ರಕಾರ ಹಾಗೂ ಯಾವ ಸ್ಥಾನ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ಪರಿಶೀಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ.

ಮುಖ್ಯವಾಗಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ತಳಭಾಗದಲ್ಲಿ ಶಿವಲಿಂಗವನ್ನು ಚೌಕ ಆಕಾರದಲ್ಲಿ ನಿರ್ಮಿಸಲಾಗಿದ್ದು, ಏಕಶಿಲಾ ಮೂರ್ತಿ ಇದಾಗಿದೆ. ಇಲ್ಲಿನ ಎಲ್ಲ ಮೂರ್ತಿಗಳನ್ನು ವಿಶೇಷ ಪದ್ಧತಿಯಲ್ಲಿ ಕೆತ್ತಲಾಗಿದೆ. ಗರ್ಭಗುಡಿ, ಮಹಾಮಂಟಪ, ಧ್ವಜಸ್ತಂಭ, ರಾಜಗೋಪುರ ಎಲ್ಲವೂ ಅತ್ಯಂತ ಸುಂದರ ಹಾಗೂ ಆಕರ್ಷಕ ರೀತಿಯಲ್ಲಿ ಸಜ್ಜುಗೊಂಡಿವೆ.

ನಮ್ಮ ಪಾರಂಪರಿಕ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ಎಂಬಂತೆ ಶಿವ ದೇವಸ್ಥಾನ ನಿರ್ಮಿಸಲಾಗಿದೆ. ಪುರಾತನ ಕಾಲದ ಅನೇಕ ದೇವಾಲಯಗಳಲ್ಲಿ ಈಗಲೂ ಪುಷ್ಕರಣಿ, ನೀರಿನ ಹೊಂಡಗಳು ಕಾಣಸಿಗುತ್ತವೆ. ಅಂತಹ ಪುಷ್ಕರಣಿ ಇಲ್ಲಿಯೂ ಇದೆ. ಅತ್ಯಂತ ಶುದ್ಧ ಜಲ ಇಲ್ಲಿ ಸಂಗ್ರಹವಾಗಿದೆ. ಈ ನೀರು ಪೂಜೆಗೆ ಬಳಸಲಾಗುತ್ತಿದೆ.

ಡಾ. ವಿಜಯ ಸಂಕೇಶ್ವರ ಸಂಕಲ್ಪ

ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಹಾಗೂ ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಸಂಕಲ್ಪದೊಂದಿಗೆ ಈ ಭವ್ಯವಾದ ದೇವಸ್ಥಾನ ನಿರ್ಮಾಣವಾಗಿದೆ. ಡಾ.‌ ಆನಂದ ಸಂಕೇಶ್ವರ ಮಾರ್ಗದರ್ಶನ, ಡಾ. ವಿ.ಎಸ್.ವಿ. ಪ್ರಸಾದ್ ಸಹಕಾರ, ಆರಾಧನಾ ಟ್ರಸ್ಟ್ ಸಹಯೋಗದಲ್ಲಿ ಈ ದೇವಾಲಯ ತಲೆ ಎತ್ತಿ ನಿಂತಿದೆ.

ಶೃಂಗೇರಿ ಪೀಠಕ್ಕೆ ಹಸ್ತಾಂತರ

ದೇವಸ್ಥಾನದಲ್ಲಿ ಫೆಬ್ರವರಿ 22ರಂದು ದೇವರ ಪ್ರಾಣ ಪ್ರತಿಷ್ಠಾಪಣೆ ಮುಗಿದ ನಂತರ ಶ್ರಂಗೇರಿ ಪೀಠಕ್ಕೆ ಹಸ್ತಾಂತರಿಸಲಾಗುತ್ತಿದೆ. ದೇವಸ್ಥಾನದ ಸಂಪೂರ್ಣ ನಿರ್ವಹಣೆಯನ್ನು ಶೃಂಗೇರಿ ಪೀಠವೇ ನೋಡಿಕೊಳ್ಳಲಿದೆ.

ಶಿವ ದೇವಾಲಯದ ದರ್ಶನ ಹೇಗೆ?

ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಪಿ.ಬಿ. ರಸ್ತೆ ಮೂಲಕ ಹಾವೇರಿಯತ್ತ ಹೋಗುವ ಮಾರ್ಗದ ಪಾಲಿಕೊಪ್ಪ ಬಳಿ ಬಲ ಬದಿಯಲ್ಲಿ ವಿಶಾಲ ಹಾಗೂ ಭವ್ಯ ಮಂದಿರ ಗೋಚರಿಸುತ್ತದೆ, ಅದುವೇ ಶಿವ ದೇವಾಲಯ. ಆರಾಧನಾ ಟ್ರಸ್ಟ್ ವತಿಯಿಂದ ಆರೂವರೆ ಎಕರೆ ಜಮೀನಿನಲ್ಲಿ ಬೃಹತ್ ದೇವಾಲಯ ನಿರ್ಮಿಸಲಾಗಿದ್ದು, ಭಕ್ತರ ತನು-ಮನಗಳನ್ನು ಸಂತೈಸುವ ತಾಣವಾಗಿದೆ. ಅತ್ಯಂತ ಸುಂದರ ಹಾಗೂ ಹಸಿರು ಉದ್ಯಾನದ ಮಧ್ಯ ತಲೆ ಎತ್ತಿರುವ ಮಂದಿರ ಆಹ್ಲಾದಕರ ವಾತಾವರಣದಲ್ಲಿ ಭಕ್ತರಿಗೆ ತಂಪೆರೆಯುತ್ತದೆ.

ದ್ರಾವಿಡ ಶೈಲಿ

ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಶಿವ ದೇವಾಲಯ, ಪಾರ್ವತಿ ದೇವಾಲಯ, ಗಣಪತಿ, ಶನೇಶ್ವರ, ನವಗ್ರಹ, ಕಾಳಭೈರವ ದೇವಸ್ಥಾನಗಳಿವೆ. ಒಂದೇ ಆವರಣದಲ್ಲಿ ಸುತ್ತು ಹಾಕಿದರೆ ಎಲ್ಲ ದೇವರ ದರ್ಶನ ಪಡೆದು ಪುನೀತರಾಗುವ ತಾಣ ಇದಾಗಿದೆ.

ಈ ದೇವಾಲಯ ಒಳಗೆ ಪ್ರವೇಶಿಸುವ ಮುನ್ನ ಮಹಾದ್ವಾರ ಕತ್ತು ಮೇಲೆತ್ತಿ ನೋಡುವಂತೆ ಮಾಡುತ್ತದೆ. ಇದನ್ನು ನೋಡುತ್ತಿದ್ದಂತೆ ಮನದಲ್ಲಿ ಭಕ್ತಿಯ ಭಾವನೆ ಶುರುವಾಗುತ್ತದೆ. ಹಾಗೆಯೇ ಒಳ ಪ್ರವೇಶ ಪಡೆಯುತ್ತಿದ್ದಂತೆಯೇ ರಥಬೀದಿ, ರಾಜಗೋಪುರ, ಹೋಮಕುಂಡ ಕಣ್ಣಿಗೆ ಬೀಳುತ್ತವೆ. ಶಿವನನ್ನು ಕಣ್ತುಂಬಿಕೊಳ್ಳಲು ಕುಳಿತರೆ ಸಾಕು ಮನಸ್ಸು ಹೂವಿನಂತೆ ಅರಳುತ್ತದೆ. ನಂತರ ಪಾರ್ವತಿದೇವಿ, ಗಣೇಶನ ಮೂರ್ತಿಯನ್ನು ಸಂದರ್ಶಿಸಿದರೆ ಮನಸು ಹಗುರವಾಗುತ್ತದೆ. ಅತ್ಯದ್ಭುತ ಕಲ್ಪನೆಯೊಂದಿಗೆ ಈ ದೇವಸ್ಥಾನ ನಿರ್ಮಿಸಲಾಗಿದೆ.

ತಮಿಳುನಾಡಿನ ಕೆ. ಸ್ವಾಮಿನಾಥನ್ ಸ್ಥಪತಿ (ಆರ್ಕಿಟೆಕ್ಚರ್) ಇದರ ಉಸ್ತುವಾರಿ ವಹಿಸಿದ್ದು, ಮಣಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸತತ 4 ವರ್ಷದಿಂದ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮಧುರೈನ 50 ಶಿಲ್ಪಿಗಳು ನಿತ್ಯ ಕಾಯಕದಲ್ಲಿ ತೊಡಗಿದ್ದರು. ದೊಡ್ಡಬಳ್ಳಾಪುರದಿಂದ ಕಲ್ಲುಗಳನ್ನು ತರಿಸಿ, ಬೃಹತ್ ದೇವಾಲಯ ನಿರ್ಮಿಸಲಾಗಿದೆ. ತಮಿಳುನಾಡಿನ ವಾಲಜಾಬಾದ್‌ನಿಂದ ಕಪ್ಪು ಶಿಲೆಗಳನ್ನು ತರಿಸಿ, ವಿಗ್ರಹ ಕೆತ್ತಲಾಗಿದೆ. ಕವಚ, ಕಲಶ, ಪ್ರಭಾವಳಿಗಳನ್ನು ಕುಂಭಕೋಣಂನಿಂದ ತರಿಸಲಾಗಿದೆ.

ಶಿವ ದೇವಾಲಯದ ಆಕರ್ಷಣೆ

ಶಿವ ದೇವಾಲಯವು ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ಗರ್ಭಗುಡಿಯಲ್ಲಿ ಶಿವನ ಮೂರ್ತಿ ಇದೆ. ಮುಂದಿನ ಮಹಾಮಂಟಪದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿ ಮುಂದೆ ದ್ವಾರಪಾಲಕರು ಇದ್ದಾರೆ. ಅದರ ಬಳಿ ಚಂಡಿಕೇಶ್ವರ ದೇವಸ್ಥಾನವಿದೆ. ನಂತರ ಪಾರ್ವತಿ ದೇವಾಲಯವನ್ನು ನಿರ್ಮಿಸಲಾಗಿದೆ. ಶಿವ ದೇವಾಲಯದ ಬಲಕ್ಕೆ ಗಣಪತಿ ದೇವಸ್ಥಾನವಿದ್ದು, ಅದರ ಮುಂದೆ ಹೋಮಕುಂಡ ನಿರ್ಮಿಸಿದ್ದು, ಹೋಮ-ಹವನ ಕೈಂಕರ್ಯ ನಡೆಸಲು ಯೋಗ್ಯ ಸ್ಥಳವಾಗಿದೆ. ಶನೈಚ್ಚರ, ನವಗ್ರಹ ಹಾಗೂ ಕಾಳಭೈರವೇಶ್ವರ ದೇವರ ದರ್ಶನವೂ ಭಕ್ತರಿಗೆ ಸಿಗಲಿದೆ. ಒಂದೇ ಸುತ್ತಿಗೆ ಇಷ್ಟೆಲ್ಲ ದೇವಸ್ಥಾನಗಳನ್ನು ಸುತ್ತು ಹಾಕಿ ಪಾಪ ಕಳೆದುಕೊಳ್ಳಲು ಪ್ರಶಸ್ತ ಸ್ಥಳವಾಗಿದೆ ಎಂಬುದು ಭಕ್ತರ ಅಂಬೋಣ.

32 ಅಡಿ ಎತ್ತರದ ಏಕಶಿಲಾ ಧ್ವಜಸ್ತಂಭ

ದೇವಸ್ಥಾನಕ್ಕೆ ಮುಕುಟ ಪ್ರಾಯ ಧ್ವಜಸ್ತಂಭ. ಇದು 32 ಅಡಿ ಎತ್ತರವಿದ್ದು, ಏಕಶಿಲೆಯಲ್ಲಿ ನಿರ್ಮಿಸಲಾಗಿದೆ. ಬೇರೆಡೆ ತುಂಡಾದ ಕಲ್ಲುಗಳನ್ನು ಒಂದರ ಮೇಲೊಂದು ಇಟ್ಟಿರುವುದನ್ನು ನೋಡಿದ್ದೇವೆ. ಇದು ಏಕಶಿಲೆ. ಹಾಗಾಗಿ ಈ ಧ್ವಜಸ್ತಂಭ ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ರಾಜಗೋಪುರ 60 ಅಡಿ ಎತ್ತರವಿದೆ. 5 ಅಂತಸ್ತುಗಳನ್ನು ಹೊಂದಿದ್ದು, ಪಂಚವರ್ಣಗಳು ಕಣ್ಣಿಗೆ ಮುದ ನೀಡುತ್ತವೆ.

ಸೇವಾ ಕೈಂಕರ್ಯ ಕೊಠಡಿಗಳು

ದೇವಸ್ಥಾನ ಪ್ರಾಂಗಣದ ರಾಜಗೋಪುರ ಬಳಿ ಸೇವಾ ಕಚೇರಿ, ನೈವೇದ್ಯ ತಯಾರಿಕೆಗೆ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿಯೇ ನೈವೇದ್ಯ ತಯಾರಿಸಿ ದೇವರಿಗೆ ಸಮರ್ಪಿಸಲಾಗುತ್ತಿದೆ. ಪ್ರಾಶಸ್ತ್ಯ ಸ್ಥಳದಲ್ಲಿ ಇದನ್ನು ನಿರ್ಮಿಸಿದ್ದು, ಶುಚಿಯಾಗಿ ಮಡಿಯಿಂದ ದೇವರಿಗೆ ನೈವೇದ್ಯ ಅರ್ಪಿಸಲು ಅನುಕೂಲವಾಗಿದೆ. ಸೇವಾ ಕಚೇರಿಯಿಂದ ದೇವರಿಗೆ ಅಗತ್ಯ ಸೇವಾ ಕೈಂಕರ್ಯ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಹಾದ್ವಾರದ ಬಳಿ ಸೆಕ್ಯೂರಿಟಿ ಕೊಠಡಿಗಳಿವೆ. ಪೂಜಾ ಕೊಠಡಿ, ಬಜಾರ್ ಸ್ಟ್ರೀಟ್, ಪಾದರಕ್ಷೆ ಸ್ಟ್ಯಾಂಡ್‌ ಕೊಠಡಿಗಳಿವೆ.

ವಿಶಿಷ್ಟ ಗೋಶಾಲೆ

ದೇವಸ್ಥಾನದ ಆವರಣದಲ್ಲಿ ವಿಶಿಷ್ಟವಾಗಿ ಗೋಶಾಲೆ ನಿರ್ಮಿಸಲಾಗಿದೆ. ಇಲ್ಲಿ ಗೋಮಾತೆಗೆ ಪೂಜೆ, ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ಗೋವುಗಳು ನಿಂತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನ ಪಡೆಯುವುದಲ್ಲದೇ ಗೋಮಾತೆಯನ್ನೂ ಪೂಜಿಸಿ ಕೃತಾರ್ಥರಾಗಲು ಸೂಕ್ತ ಸ್ಥಳವಾಗಿ ಮಾರ್ಪಟ್ಟಿದೆ. ಕಲ್ಯಾಣಿ, ಕೆರೆ ಹಾಗೂ ಭಾವಿಗಳನ್ನು ನಿರ್ಮಿಸಲಾಗಿದೆ.

ಬೃಹತ್ ಭೋಜನ ಶಾಲೆ

ದೇವಸ್ಥಾನಕ್ಕೆ ಬಂದ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬೃಹತ್ ಭೋಜನ ಶಾಲೆ ನಿರ್ಮಿಸಲಾಗಿದೆ. ಅತ್ಯಾಧುನಿಕ ಆಹಾರ ತಯಾರಿಕಾ ಪರಿಕರಗಳನ್ನು ಅಳವಡಿಸಲಾಗಿದೆ. ವಿಐಪಿಗಳು, ಭಕ್ತರು, ಅರ್ಚಕರು ಪ್ರಸಾದ ಸೇವಿಸಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಋತ್ವಿಜರು ಉಳಿದುಕೊಳ್ಳಲು 6 ಕೊಠಡಿಗಳು ಇವೆ. ಇದಕ್ಕೆ ಅರ್ಚಕರ ವಸತಿ ಗೃಹವೆಂದು ಹೆಸರಿಡಲಾಗಿದೆ. 4 ಕೊಠಡಿಗಳಿದ್ದು, ಎರಡು 1 ಬಿಎಚ್‌ಕೆ ರೂಮ್‌ಗಳಿವೆ. ಗೆಸ್ಟ್ ಹೌಸ್ ಜಿ ಪ್ಲಸ್ 2 ಇದ್ದು, ಕೆಳಮಹಡಿಯಲ್ಲಿ 3 ಕೊಠಡಿಗಳಿವೆ. ಒಂದು ಊಟದ ಮನೆ ಹಾಗೂ ಸಭಾಂಗಣ ಇದೆ. ಮೊದಲ ಮಹಡಿಯಲ್ಲಿ 7 ರೂಮ್‌ಗಳಿದ್ದು, ಎರಡನೇ ಮಹಡಿಯಲ್ಲಿ ಪ್ರವಚನ ಸಭಾಗೃಹ ನಿರ್ಮಿಸಲಾಗಿದೆ.

ಇನ್ನೊಂದು ಸಮುಚ್ಚಯದ ಕೆಳಮಹಡಿಯಲ್ಲಿ ಪ್ರಸಾದ ನಿಲಯವಿದೆ. 20 ವಿಐಪಿಗಳು ಊಟ ಮಾಡಬಹುದು. ಹಾಲ್‌ನಲ್ಲಿ 60 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ 200 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಎರಡನೇ ಮಹಡಿಯಲ್ಲಿ ಕನ್ವೆನ್ಷನ್ ಸಭಾಗೃಹವಿದೆ. ಪಕ್ಕದಲ್ಲಿಯೇ ಮಹಿಳೆಯರು, ಪುರುಷರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಭಕ್ತರು ಹೋಗಿ ಬರಲು 2 ಲಿಫ್ಟ್ ಹಾಗೂ ಊಟದ ಸಾಮಗ್ರಿ, ಪಾತ್ರೆ ಕಳುಹಿಸಲು ಡಂಬ್ ಎಲಿವೇಟರ್ ಇದೆ.

ಭದ್ರತೆಗೆ ವಿಶೇಷ ಕಾಳಜಿ

ಬೇರೆಬೇರೆ ಕಡೆಗಳಿಂದ ಬರುವ ಭಕ್ತರಿಗೆ ಹಲವು ಅನುಕೂಲಗಳನ್ನು ಒದಗಿಸಲಾಗಿದೆ. ಇದೇ ರೀತಿ ಭದ್ರತೆಗೂ ಗಮನ ನೀಡಲಾಗಿದೆ. ದೇವಸ್ಥಾನದ ಆವರಣದಲ್ಲಿ 60 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 3 ಪಿಟಿಜೆಡ್ ಕ್ಯಾಮೆರಾಗಳಿವೆ. ಇದರ ವಿಶಿಷ್ಟತೆ ಎಂದರೆ ಬರುವ ಮತ್ತು ಹೋಗುವ ವ್ಯಕ್ತಿಗಳ ಭಾವಚಿತ್ರವನ್ನು ಸ್ಪಷ್ಟವಾಗಿ ಸೆರೆ ಹಿಡಿಯಲಿದೆ. ವಾಹನದ ಸಂಖ್ಯೆ ಸೆರೆ ಹಿಡಿಯಲು ಮತ್ತೊಂದು ವಿಶಿಷ್ಟ ಕ್ಯಾಮೆರಾ ಅಳವಡಿಸಲಾಗಿದೆ. ಹೀಗೆ ಅತ್ಯದ್ಭುತ ಸಿಸಿ ಕ್ಯಾಮೆರಾಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದೆ.

ಪಾರ್ಕಿಂಗ್ ಸ್ಥಳ ಗುರುತು

ಬೃಹತ್ ದೇವಸ್ಥಾನ ನಿರ್ಮಿಸಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹಾಗಾಗಿ ದೊಡ್ಡದಾಗಿ ಪಾರ್ಕಿಂಗ್ ಸ್ಥಳವನ್ನು ಕಾಯ್ದಿರಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಸುಮಾರು 60 ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳ ಕಾಯ್ದಿರಿಸಲಾಗಿದೆ. ಸರತಿ ಸಾಲಿನಲ್ಲಿ ವಾಹನಗಳನ್ನು ನಿಲ್ಲಿಸಿ ದೇವರ ದರ್ಶನ ಪಡೆದು ಹೋಗಲು ಇಂಥ ಪ್ರದೇಶವನ್ನು ನಿಗದಿಪಡಿಸಲಾಗಿದೆ.

ಸ್ಥಳೀಯರಿಂದಲೇ ಸಮುಚ್ಚಯ ನಿರ್ಮಾಣ

ದೇವಸ್ಥಾನದ ಗರ್ಭಗುಡಿ, ಗೋಪುರ ಹಾಗೂ ಪ್ರಾಂಗಣವನ್ನು ತಮಿಳುನಾಡು ಮೂಲದವರು ನಿರ್ಮಿಸಿದ್ದಾರೆ. ವಸತಿ ಸಮುಚ್ಚಯವನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದು, ವಿಶಿಷ್ಟವಾಗಿ ಕಾಣುತ್ತಿವೆ. ಪ್ರತಿಯೊಂದು ಕೊಠಡಿಯೂ ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಶೌಚಾಲಯ, ವಾಸದ ಕೊಠಡಿ, ಬಾತ್‌ರೂಮ್‌ಗಳನ್ನು ಅಂದವಾಗಿ ಕಟ್ಟಲಾಗಿದೆ. ಇದರಿಂದ ಸ್ಥಳೀಯವಾಗಿಯೇ ಬಹಳಷ್ಟು ಜನರು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ.

ರಥಬೀದಿಯ ವೈಭವ

ಮಹಾದ್ವಾರ ದಾಟುತ್ತಿದ್ದಂತೆ ರಥಬೀದಿಯು ಕಣ್ಣಿಗೆ ಕಾಣಲಿದೆ. ಅದರಲ್ಲಿ ಸಾಗುತ್ತಿದ್ದಂತೆ ಕೃಷ್ಣದೇವರಾಯ ಕಾಲದ ವೈಭವವು ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದರೊಳಗೆ ಪ್ರವೇಶ ಮಾಡುತ್ತಿದ್ದಂತೆ ಕಣ್ಣಿಗೆ ಹಾಗೂ ಮನಸ್ಸಿಗೆ ಮುದ ನೀಡುತ್ತದೆ. ಇತರ ಕಟ್ಟಡಗಳ ಮೇಲೆ ನಿಂತು ನೋಡಿದರೆ, ಅತ್ಯದ್ಭುತವೆನಿಸುತ್ತದೆ. ಈ ಕಲ್ಪನೆ ಇಷ್ಟೊಂದು ಪರಿಪೂರ್ಣವಾಗಿ ಅನುಷ್ಠಾನಗೊಂಡಿದೆಯೇ ಎಂಬ ಅಚ್ಚರಿ ನೋಡುಗರಿಗೆ ಅನುಭವವಾಗುತ್ತದೆ.

ಇದನ್ನೂ ಓದಿ | Nirmalanandanatha Swamiji : ವರ್ಷ 10, ಸಾಧನೆ ನೂರಾರು: ನಿರ್ಮಲ ಮನಸ್ಸಿನ ಸಂತ ವಿಜ್ಞಾನಿ

ಸಭಾಗೃಹ

ದೇವಸ್ಥಾನದ ಆವರಣದ ಒಳಭಾಗದಲ್ಲಿ ಸಭಾಗೃಹ ನಿರ್ಮಿಸಲಾಗಿದೆ. ಏನಾದರೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ಇದರ ಸೊಬಗು ಮತ್ತಷ್ಟು ಹೆಚ್ಚಲಿದೆ. ಸಭಾಗೃಹದ ಕೆಳಗೆ 4 ನೀರಿನ ಟ್ಯಾಂಕ್‌ಗಳಿವೆ. ಪ್ರತಿ ಟ್ಯಾಂಕ್‌ನಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿದೆ. ಹುಲ್ಲು ಹಾಸು ಹಾಕಲಾಗಿದೆ. ಇದರಿಂದ ಸಭಾಗೃಹದ ಅಂದ ಹೆಚ್ಚಾಗಿ ಕಾಣುತ್ತಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

Anjali Murder Case: ಈ ಹಿಂದೆ ಕಳ್ಳತನ ಮಾಡಿದಾಗ ಬುದ್ಧಿವಾದ ಹೇಳಿದ್ದೆ. ಈಗ ಇಂತಹ ಕೆಲಸ ಮಾಡುತ್ತಾನೆ ಎಂದು ಊಹಿಸಿರಲಿಲ್ಲ ಎಂದು ಅಂಜಲಿ ಕೊಲೆ ಪ್ರಕರಣದ ಬಗ್ಗೆ ಆರೋಪಿ ಗಿರೀಶ್‌ ತಾಯಿ ಸವಿತಾ ಸಾವಂತ್ ಹೇಳಿದ್ದಾರೆ.

VISTARANEWS.COM


on

Anjali Murder Case
Koo

ಹುಬ್ಬಳ್ಳಿ: ನನ್ನ ಮಗ ಗಿರೀಶ್ ಮಾಡಿದ್ದು ತಪ್ಪು, ಆತನಿಗೆ ಕೋರ್ಟ್ ಏನು ಶಿಕ್ಷೆ ಕೊಡುತ್ತೆ ಕೊಡಲಿ. ಅಂಜಲಿ (Anjali Murder Case) ನನ್ನನ್ನು ಮಮ್ಮಿ ಅಂತ ಕರೆಯುತ್ತಿದ್ದಳು, ಅಂಜಲಿ ಮತ್ತು ಗಿರೀಶ್ ಪರಸ್ಪರ ಪ್ರೀತಿಸುತ್ತಿದ್ದರು. ನನ್ನ ಮಗ ಅಂಜಲಿ ಜತೆ ಮದುವೆಯಾಗುತ್ತೇನೆ ಅಂದಿದ್ದ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಅವನು ಈ ಹಂತಕ್ಕೆ ಹೋಗುತ್ತಾನೆ ಅಂತ ಗೊತ್ತಿರಲಿಲ್ಲ ಎಂದು ಆರೋಪಿ ಗಿರೀಶ್ ತಾಯಿ ಸವಿತಾ ಸಾವಂತ್ ಹೇಳಿದ್ದಾರೆ.

ಅಂಜಲಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಬ್ಬರೂ ಹೇಗಾದರೂ ಚೆನ್ನಾಗಿರಿ ಅಂತ ಹೇಳಿದ್ದೆ. ಕಳೆದ ಆರು ತಿಂಗಳಿಂದ ಮಗ ಮನೆಗೆ ಬಂದಿಲ್ಲ. ಅಂಜಲಿ ಫೋನ್‌ನಲ್ಲಿ ಬೇರೆಯವರ ಜತೆ ಮಾತನಾಡುತ್ತಾಳೆ ಮಮ್ಮಿ ಅಂತ ಹೇಳಿದ್ದ. ಆಕೆಗೆ ಇಷ್ಟ ಇಲ್ಲದಿದ್ದರೆ ಬಿಟ್ಟು ಬಿಡು ಅಂದಿದ್ದೆ. ಆದರೆ ಈ ರೀತಿ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ ಎಂದರು ತಿಳಿಸಿದ್ದಾರೆ.

ಇದನ್ನೂ ಓದಿ | Anjali Murder Case: ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನಿಸಿದ ಅಂಜಲಿ ಹಂತಕ!

ಅವನು ನನಗೆ ಒಂದು ಪೈಸೆಯೂ ಮನೆ ಖರ್ಚಿಗೆ ಕೊಡುತ್ತಿರಲಿಲ್ಲ. ಈ ಹಿಂದೆ ಕಳ್ಳತನ ಮಾಡಿದಾಗ ಬುದ್ಧಿವಾದ ಹೇಳಿದ್ದೆ. ನನಗೆ ಯಾರೂ ಇಲ್ಲ, ನಾನು ಕೆಲಸ ಮಾಡದೆ ಮನೆ ನಡೆಯಲ್ಲ. ಬಾಡಿಗೆ ಮನೆಯವರು ಮನೆ ಖಾಲಿ ಮಾಡು ಅಂತಿದ್ದಾರೆ. ಯಾವ ಸಂಬಂಧಿಕರೂ ನನ್ನ ಸಹಾಯಕ್ಕೆ ಬಂದಿಲ್ಲ. ನಾನು ಮಗನನ್ನ ನೋಡಲು ಕಿಮ್ಸ್‌ಗೆ ಹೋಗಲ್ಲ. ಅವನಿಗೆ ಬೇಲ್ ಸೇರಿದಂತೆ, ಯಾವುದೇ ಸಹಾಯವನ್ನು ಮಾಡಲ್ಲ. ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Anjali Murder Case

ಧಾರವಾಡ: ಅಂಜಲಿ ಹತ್ಯೆ ಪ್ರಕರಣದ (Anjali Murder Case) ಆರೋಪಿ ಗಿರೀಶ್‌ನನ್ನು ಎನ್‌ಕೌಂಟರ್ ಮಾಡಬೇಕು. ಯಾವುದೇ ಕಾರಣಕ್ಕೂ ಆರೋಪಿಗೆ ಚಿಕಿತ್ಸೆ ಕೊಡಬಾರದು, ಅವನನ್ನು ಆದಷ್ಟು ಬೇಗ ಎನ್ ಕೌಂಟರ್ ಮಾಡಬೇಕು. ನಮ್ಮ ಅಕ್ಕ ಹೇಗೆ ರಕ್ತ ಸುರಿದು ಪ್ರಾಣ ಬಿಟ್ಟಳೋ ಅದೇ ರೀತಿ ಅವನು ಸಾಯಬೇಕು ಎಂದು ಅಂಜಲಿ ಸಹೋದರಿ ಪೂಜಾ ಆಗ್ರಹಿಸಿದ್ದಾರೆ.

ವಿಸ್ತಾರ ನ್ಯೂಸ್‌ ಜತೆ ಶುಕ್ರವಾರ ಮಾತನಾಡಿರುವ ಅಂಜಲಿ ಸಹೋದರಿ ಪೂಜಾ, ನಮ್ಮ ಅಕ್ಕನಿಗೂ ಅವನಿಗೂ ಯಾವುದೇ ಸಂಬಂಧ ಇಲ್ಲ. ಏನೇನೋ ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಪೊಲೀಸರು ಹೇಗೆ ಬೇಕೋ ಹಾಗೆ ಮಾಡುವ ವಿಚಾರದಲ್ಲಿದ್ದಾರೆ. ಇದನ್ನು ಆದಷ್ಟು ಬೇಗ ತನಿಖೆ ಮಾಡಬೇಕು. ಬೆಳಗ್ಗೆ ಮಾತನಾಡಲು ಬಂದವನು ಚಾಕು ಹಾಕಿದ. ನಾವು ನಮ್ಮ ಅಕ್ಕನ ಜತೆ ಮಾತನಾಡಲು ಸಹ ಆಗಲಿಲ್ಲ. ಕೊನೆ ಗಳಿಗೆಯಲ್ಲಿ ಪೊಲೀಸರು ಬಂದು ಡಾಕ್ಟರ್ ಸಹ ಕರೆಯಲಿಲ್ಲ. ಕೇವಲ ಪೋಟೋ ತೆಗೆದುಕೊಂಡು ಹೋದರು. ಅವನಿಗೆ ಅದೇ ರೀತಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ನಮ್ಮ ಅಕ್ಕನ ಜತೆಗೆ ಏನೇನೋ ಸಂಬಂಧ ಕಲ್ಪಿಸುತ್ತಿದ್ದಾರೆ. ಹಾಗಾದರೆ ನೆನ್ನೆಯೂ ಸಹ ಅವನು ಯಾರದೋ ಜೊತೆ ಜಗಳ ಮಾಡಿದ್ದ. ಅವರಿಗೂ ಸಂಬಂಧ ಇದೆಯಾ ಎಂದು ಸಹೋದರಿ ಪ್ರಶ್ನೆ ಮಾಡಿದ್ದಾರೆ.

ಹಲ್ಲೇ ಮಾಡಿ ಓಡಿ ಹೋದ

ದಾವಣಗೆರೆ: ಮಹಿಳೆಗೆ ಅಂಜಲಿ ಹಂತಕನಿಂದ ಚಾಕು ಇರಿತ ಪ್ರಕರಣದ ಬಗ್ಗೆ ಗಾಯಾಳು ಮಹಿಳೆಯ ಪತಿ ಪ್ರತಿಕ್ರಿಯಿಸಿದ್ದಾರೆ. ನಾವು ಟ್ರೈನ್‌ನಲ್ಲಿ ಇರುವಾಗ ಅರೋಪಿ ಗಿರೀಶ್ ಹಿಂದೆ ಹಿಂದೆಯೇ ಬರುತ್ತಿದ್ದ. ರೆಸ್ಟ್ ರೂಂನ ಡೋರ್ ಓಪನ್ ಮಾಡಿ ಒಳ ನುಗ್ಗಲು ಯತ್ನಿಸಿದ. ಹೊಟ್ಟೆಗೆ ಚಾಕು ಚುಚ್ಚಲು ಮುಂದಾದಾಗ ನಾನು ಕೈ ಅಡ್ಡ ಹಿಡಿದೆ. ಕೈಗೆ ಗಾಯವಾಗುತ್ತಿದ್ದಂತೆ ಕೂಗಿಕೊಂಡೆ, ಆತ ಓಡಿಹೋದ ಎಂದು ಗದಗ ಮೂಲದ ಲಕ್ಷ್ಮೀ ಪತಿ ಮಹಾಂತೇಶ್ ತಿಳಿಸಿದ್ದಾರೆ. ಸದ್ಯ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

5 ಸಾವಿರ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ಬಂದಿಲ್ಲ

ಅಂಜಲಿ ಹತ್ಯೆ ಕೊಲೆ ಪ್ರಕರಣದ ಆರೋಪಿ ಗಿರೀಶ್ ಕಳೆದ ನಾಲ್ಕು ತಿಂಗಳಿನಿಂದ ಮೈಸೂರಿನ ಮಹಾರಾಜ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುವುದು ತಿಳಿದುಬಂದಿದೆ. ಈ ಬಗ್ಗೆ ಮಹಾರಾಜ ಹೋಟೆಲ್ ಮಾಲೀಕ ಗೋವರ್ಧನ್ ಪ್ರತಿಕ್ರಿಯಿಸಿ, ವಿನಾಯಕ ನರ್ಸಿಂಗ್ ಕೇರ್ ಏಜೆನ್ಸಿ ಮೂಲಕ ನಮ್ಮ ತಂದೆ ನೋಡಿಕೊಳ್ಳಲು ಆರೋಪಿ ಗಿರೀಶ್‌ ಬಂದಿದ್ದ. ರೂಂ ಬಾಯ್, ಸಪ್ಲೈಯರ್ ಆಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Prajwal Revanna Case: ದೇವರಾಜೇಗೌಡರಿಗೆ ಮೆಂಟಲ್‌ ಟ್ರೀಟ್ಮೆಂಟ್‌ ಕೊಡಿಸಬೇಕಿದೆ: ಕಾಂಗ್ರೆಸ್‌ ವ್ಯಂಗ್ಯ

ಗಿರೀಶ್ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಒಮ್ಮೆ 10 ದಿನ, 5‌ ದಿನ ಹೀಗೆ ರಜಾ ತೆಗೆದುಕೊಳ್ಳುತ್ತಿದ್ದ. ಏಜೆನ್ಸಿ ಮೂಲಕ ಬಂದ ಕಾರಣ ಹೆಚ್ಚು ರಜಾ ತೆಗೆದುಕೊಂಡರೂ ನಾನು ಅವನ ಬಗ್ಗೆ ಕೇಳುತ್ತಿರಲಿಲ್ಲ. ಮಂಗಳವಾರ ಸಂಜೆ 5 ಸಾವಿರ ರೂ. ಹಣ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ವಾಪಸ್ ಬಂದಿಲ್ಲ ಎಂದು ಹೇಳಿದ್ದಾರೆ.

ಮರುದಿನ ಪೊಲೀಸರು ನನಗೆ ಕರೆ ಮಾಡಿದಾಗಲೇ ಗಿರೀಶ್‌ ಕೊಲೆ ಮಾಡಿದ್ದಾನೆ ಎಂಬುದು ತಿಳಿಯಿತು. ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಎಂದು ಅವನ ಬಗ್ಗೆ ಹೇಳಿದ್ದರು. ಜತೆಗೆ ಕಂಪನಿಯ ಫೋನ್‌ನಿಂದ ಹೆಚ್ಚು ದಿನ ಮಾತನಾಡಿದ್ದಾನೆ. ಘಟನೆ ನಡೆಯುವ ಹಿಂದಿನ ದಿನ ಜೋರಾಗಿ ಕೂಗಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನಂತೆ. ನಮ್ಮ ಹೋಟೆಲ್‌ಗೆ ಏಳು ಪೊಲೀಸರು ಬಂದಿದ್ದರು. ನೆನ್ನೆ ರಾತ್ರಿಯವರೆಗೂ ಪೊಲೀಸರಿ ನಮ್ಮ ಹೋಟೆಲ್‌ನಲ್ಲಿ ಇದ್ದರು. ಆತ ದಾವಣಗೆರೆಯಲ್ಲಿ ಸಿಕ್ಕ ಬಳಿಕ ಮಧ್ಯರಾತ್ರಿ ಪೊಲೀಸರು ಇಲ್ಲಿಂದ ತೆರಳಿದರು ಎಂದು ತಿಳಿಸಿದ್ದಾರೆ.

Continue Reading

ಮಳೆ

Karnataka Weather : ಮಲೆನಾಡಿನಲ್ಲಿ ಮಳೆ ಮೋಡಿ; ಭಾನುವಾರವೂ ಅಬ್ಬರ ಇರಲಿದೆ ನೋಡಿ

Heavy rain : ಶನಿವಾರದಂದು ಚಿಕ್ಕಮಗಳೂರು, ಹಾಸನ, ತುಮಕೂರಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆ ಮೇಲೆ ನದಿಯಂತೆ ನೀರು ಹರಿಯುತ್ತಿದೆ. ರಾಜ್ಯಾದ್ಯಂತ ಇನ್ನೊಂದು ವಾರ ಮಳೆ (Rain News) ಜೋರಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast Rain alert
Koo

ಚಿಕ್ಕಮಗಳೂರು/ಹಾಸನ: ರಾಜ್ಯಾದ್ಯಂತ ಗುಡುಗು ಸಹಿತ ಮಳೆಯು (Karnataka Weather Forecast) ಅಬ್ಬರಿಸುತ್ತಿದೆ. ಚಿಕ್ಕಮಗಳೂರಿನಲ್ಲಿ ಮಳೆ (Rain News) ಆರ್ಭಟ ಮುಂದುವರಿದಿದೆ. ರಾತ್ರಿಯಿಡೀ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಳಸಾ ಪುರ, ಗಾಳಿ ಹಳ್ಳಿ, ಮಾಗಡಿ, ಬೆಳವಾಡಿ, ಲಕ್ಯಾ, ಸಿಂದಿಗೆರೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ರಸ್ತೆ, ಸೇತುವೆ ಮೇಲೆ ನದಿಯಂತೆ ನೀರು ಹರಿಯುತ್ತಿರುದೆ.

ಇನ್ನೂ ಭಾರಿ ಮಳೆಗೆ ಸುತ್ತಮುತ್ತಲಿನ ತೋಟ, ಗದ್ದೆಯು ಸಂಪೂರ್ಣ ಜಲಾವೃತಗೊಂಡಿದೆ. ಕೆರೆಗಳು ಸಂಪೂರ್ಣ ತುಂಬುವ ಹಂತ ತಲುಪಿದೆ. ಚಿಕ್ಕಮಗಳೂರು ತಾಲೂಕಿನ ಐತಿಹಾಸಿಕ ಮಾಗಡಿ ದೊಡ್ಡ ಕೆರೆಗೂ ಭಾರಿ ಪ್ರಮಾಣ ನೀರು ಹರಿದಿದೆ.

ಹಾಸನದಲ್ಲಿ ಸುರಿದ ಧಾರಾಕಾರ ಮಳೆ

ಹಾಸನ ನಗರದ ಹಲವೆಡೆ ಬಿಟ್ಟು ಬಿಡದೆ ಧಾರಾಕಾರವಾಗಿ ಮಳೆ ಸುರಿದಿದೆ. ಶನಿವಾರ ಕಳೆದೊಂದು ಗಂಟೆಯಿಂದ ಹಲವೆಡೆ ಮಳೆ ಆರ್ಭಟಿಸಿದ್ದು, ಜನ ಜೀವನ ಅಸ್ತವ್ಯಸ್ತವಾಗಿತ್ತು. ಭಾರಿ ಮಳೆಗೆ ಹಾಸನ ನಗರದಲ್ಲಿ ಪಾದಾಚಾರಿಗಳು ವಾಹನ ಸವಾರರು ಪರದಾಡಿದರು. ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ, ಆಲೂರು ಭಾಗಗಳಲ್ಲೂ ಮಳೆಯಾಗಿದೆ.

ತುಮಕೂರಿನಲ್ಲಿ ಗುಡುಗು ಸಹಿತ ಮಳೆ

ಶನಿವಾರ ಸಂಜೆಯಾಗುತ್ತಿದ್ದಂತೆ ತುಮಕೂರಿನಲ್ಲಿ ವರುಣನ ಆರ್ಭಟ ಜೋರಾಗಿತ್ತು. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದೆ. ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ಸೇರಿದಂತೆ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದೆ. ತುಮಕೂರು ನಗರದ ರಸ್ತೆ ಮೇಲೆ ಹಳ್ಳದಂತೆ ಹರಿಯುತ್ತಿರುವ ನೀರಿನಿಂದಾಗಿ ವಾಹನ ಸವಾರರ ಪರದಾಡಬೇಕಾಯಿತು. ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಇದನ್ನೂ ಓದಿ: Koppal Tragedy : ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರು ಸಾವು; ಈಜಲು ಹೋದ ಯುವಕ ನೀರುಪಾಲು

ಭಾನುವಾರವೂ ಇರಲಿದೆ ಮಳೆ ಮೋಡಿ

ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಒಂದು ಅಥವಾ ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ (40-50 kmph) ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳ ಒಂದು ಅಥವಾ ಸ್ಥಳಗಳಲ್ಲಿ ಮಳೆಯು ಅಬ್ಬರಿಸಲಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಜೋರಾದ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡಿನ ಧಾರವಾಡ, ಹಾವೇರಿ ಜಿಲ್ಲೆಗಳ ಕೆಲವೆಡೆ ಬಿರುಗಾಳಿ (30-40 kmph) ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (30-40 kmph) ಹಗುರ ಮಳೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ

Karnataka Weather Forecast : ರಾಜ್ಯಾದ್ಯಂತ ಮಳೆಯಾಗುವ ನಿರೀಕ್ಷೆ ಇದ್ದು, 8 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗಲಿದ್ದು (Rain alert) ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು, ಮಿಂಚು ಸಹಿತ ಮಳೆಯಾಗುವ (Karnataka Weather Forecast) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ತುಮಕೂರು, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ಭಾಗಗಳಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶದ ಉಳಿದ ಭಾಗಗಳಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗಲಿದೆ. ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಲಿದೆ.

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದ್ದರೆ, ಉಳಿದ ಭಾಗಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಕೂಡಿರಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ 31 ಮತ್ತು 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಭಾರೀ ಮಳೆಗೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಗಾಳಿಯು ಗಂಟೆಗೆ 40-50 ಕಿ.ಮೀ ಇರಲಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

Karnataka Weather : ತುಮಕೂರಿನಲ್ಲಿ ಸಿಡಿಲಿಗೆ ಜಾನುವಾರೊಂದು ಬಲಿಯಾಗಿದ್ದು, ನಾಲ್ಕು ಜಾನುವಾರುಗಳಿಗೆ ಸುಟ್ಟ ಗಾಯಗಳಾಗಿವೆ. ಚಿಕ್ಕಮಗಳೂರಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ರಾಯಚೂರು, ವಿಜಯಪುರ ಸೇರಿದಂತೆ ಹಲವೆಡೆ ಮಳೆಯು ಅವಾಂತರವನ್ನೇ (Rain News) ಸೃಷ್ಟಿಸಿದೆ.

VISTARANEWS.COM


on

By

karnataka weather Forecast
Koo

ತುಮಕೂರು/ ಚಿಕ್ಕಮಗಳೂರು: ರಾಜ್ಯದ ಹಲವೆಡೆ ಮಳೆಯು (Karnataka Weather) ಅಬ್ಬರಿಸುತ್ತಿದ್ದು, ಅವಾಂತರವನ್ನೇ ಸೃಷ್ಟಿ ಮಾಡಿದೆ. ತುಮಕೂರಲ್ಲಿ ಸಿಡಿಲಿಗೆ ಹಸುವೊಂದು ಬಲಿಯಾಗಿದ್ದು, ನಾಲ್ಕು ಜಾನುವಾರುಗಳಿಗೆ ಸುಟ್ಟ ಗಾಯವಾಗಿವೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಘಟನೆ ನಡೆದಿದೆ.

ಕರಿಯಪ್ಪ ಎಂಬುವರಿಗೆ ಸೇರಿದ ಜಾನುವಾರುಗಳನ್ನು ತೋಟದಲ್ಲಿದ್ದ ಗುಡಿಸಿಲಿನ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಆದರೆ ಸಿಡಿಲು ಬಡಿದು ಕೊಟ್ಟಿಗೆ ಹೊತ್ತಿ ಉರಿದಿದೆ. ಈ ವೇಳೆ ಬೆಂಕಿ ನಂದಿಸಲು ಹೋದ ಮಹಾಲಿಂಗನಿಗೂ ಗಾಯವಾಗಿದೆ. ಕರಿಯಪ್ಪ ಹಾಗೂ ಆತನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಲು ಬಡಿದ ಪರಿಣಾಮ ಗುಡಿಸಲು ಭಸ್ಮವಾಗಿದೆ. ಅರಸಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Karnataka Weather Forecast

ಚಿಕ್ಕಮಗಳೂರಲ್ಲಿ ಮಳೆ ಅವಾಂತರ

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿತ್ತು. ಇದರಿಂದಾಗಿ ಮೇಲ್ಪಾಲ್, ಕೊಪ್ಪ, ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತವಾಗಿದೆ. ಎನ್‌ಆರ್ ಪುರ ತಾಲೂಕಿನ ಅರಳಿ ಕೊಪ್ಪ ತಿರುವಿನಲ್ಲಿ ಘಟನೆ ನಡೆದಿದೆ. ರಸ್ತೆಗೆ ಮರ ಬಿದ್ದ ಕಾರಣಕ್ಕೆ ಮಾರ್ಗ ಬಂದ್‌ ಆಗಿದ್ದು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬದಲಿ ಮಾರ್ಗದಲ್ಲಿ ಸುತ್ತಾಡಿ ಸಂಚರಿಸುವಂತಾಯಿತು.

ಇತ್ತ ಭಾರಿ ಗಾಳಿ ಮಳೆಗೆ ಚಿಕ್ಕಮಗಳೂರು ತಾಲೂಕಿನ ಗಾಳಿಹಳ್ಳಿ, ತಿಮ್ಮನಹಳ್ಳಿ ಗ್ರಾಮಗಳು ತತ್ತರಿಸಿ ಹೋಗಿವೆ. ರಸ್ತೆಯ ಮೇಲೆ ನದಿಯಂತೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತವಾಗಿತ್ತು.

ಇದನ್ನೂ ಓದಿ: Murder case : ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು

Karnataka Weather Forecast

ರಾಯಚೂರಿನಲ್ಲಿ ಮಳೆಗೆ ಕೊಚ್ಚಿ ಹೋದ ರಸ್ತೆ

ರಾಯಚೂರಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ರಸ್ತೆಯೇ ಕೊಚ್ಚಿ ಹೋಗಿದೆ. ರಾಯಚೂರು ಗ್ರಾಮೀಣ ತಾಲೂಕಿನ ಬಿ ಯದ್ಲಾಪುರ ಗ್ರಾಮದಲ್ಲಿ ಹಳ್ಳದ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಸದ್ಯ ಬಿ ಯದ್ಲಾಪುರ ಮತ್ತು ಗಿಲ್ಲೆಸಗೂರು ಕ್ಯಾಂಪ್ ನಡುವಿನ ಸಂಪರ್ಕ ಕಡಿತವಾಗಿದೆ. ರಸ್ತೆ ಕಡಿತವಾಗಿದ್ದರಿಂದ ರಾಯಚೂರು ಮತ್ತು ಮಂತ್ರಾಲಯಕ್ಕೆ ತೆರಳುವವರಿಗೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡಬೇಕಾಯಿತು.

Karnataka Weather Forecast

ವಿಜಯಪುರದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಮರ

ವಿಜಯಪುರ ನಗರದ ನಾಲಬಂದ್ ಗಲ್ಲಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಭಾರಿ ಮಳೆಯಿಂದಾಗಿ ತೆಂಗಿನ ಗರಿಯು ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಡೀ ತೆಂಗಿನ ಮರದಲ್ಲಿ ಬೆಂಕಿ ಆವರಿಸಿತ್ತು. ಇದರಿಂದಾಗಿ ಕೆಲಕಾಲ ಆತಂಕ ಉಂಟಾಗಿತ್ತು. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರು, ಕೊಪ್ಪಳದಲ್ಲಿ ಮಳೆಗೆ ತುಂಬಿ ಹರಿದ ಹಳ್ಳ ಕೊಳ್ಳಗಳು

ಚಿಕ್ಕಮಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದವು. ಕಳಸಾಪುರ, ಬೆಳವಾಡಿ, ಕೆ.ಬಿ ಹಾಳ್, ಈಶ್ವರ ಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ತುಂಗ, ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಆಗಿದೆ. ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆ ಹಿನ್ನೆಲೆ ತುಂಗಾ ಹಾಗೂ ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಿದೆ.

ಕೊಪ್ಪಳದಲ್ಲೂ ಭಾರಿ ಮಳೆಯಾಗುತ್ತಿದ್ದು, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಬ್ರಿಡ್ಜ್ ಮುಳುಗಡೆಗೆ ಕೆಲವೇ ಅಡಿಗಳು ಬಾಕಿ ಇದೆ. ಲಕ್ಷ್ಮೀ ಕ್ಯಾಂಪ್-ಗುಂಡೂರು ರಸ್ತೆ ಸಂಪರ್ಕ ಸೇತುವೆ‌ ಇದಾಗಿದೆ. ಇನ್ನೂ ಬ್ರಿಡ್ಜ್ ಮೇಲೆ ನಿಂತು ತುಂಬಿ ಹರಿಯುತ್ತಿರುವ ಹಳ್ಳವನ್ನು ಕಣ್ತುಂಬಿಕೊಂಡರು.

ರಾಯಚೂರಿನಲ್ಲಿ ವಾಹನ ಸವಾರರ ಪರದಾಟ

ರಾಯಚೂರಲ್ಲಿ ರಾತ್ರಿ ಸುರಿದ ಮಳೆಗೆ ವಾಹನ ಸವಾರರು ಪರದಾಡಿದರು. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರೈಲ್ವೆ ಬಿಡ್ಜ್ ಕೆಳಗೆ ನೀರು ನಿಂತು, ತಗ್ಗು ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಸವಾರರು ಹರಸಾಹಸ ಪಟ್ಟರು. ರಾಯಚೂರು-ಹೈದ್ರಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. 2 ಬದಿಯಲ್ಲಿ ಕಿಲೋ ಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಇರುವುದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Kangana Ranaut
ದೇಶ45 mins ago

Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

RCB vs CSK
ಕ್ರೀಡೆ50 mins ago

RCB vs CSK: ಸಿಕ್ಸರ್​ ಮೂಲಕವೂ ದಾಖಲೆ ಬರೆದ ವಿರಾಟ್​ ಕೊಹ್ಲಿ

Lorry Accident
ಕರ್ನಾಟಕ52 mins ago

Lorry Accident: ಕಾರ್ಕಳದಲ್ಲಿ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರ ಸಾವು

RCB vs CSK
ಕ್ರೀಡೆ1 hour ago

RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

Road Accident
ಕರ್ನಾಟಕ2 hours ago

Road Accident: ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

Russia Tourism
ಪ್ರವಾಸ2 hours ago

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

Constitution
ದೇಶ2 hours ago

ಪ್ರಚಾರದ ವೇಳೆ ರಾಹುಲ್‌ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ

Rain News Boy dies after being struck by lightning in Banavasi Heavy rains lash Chikkamagaluru and Hassan
ಮಳೆ2 hours ago

Rain News: ಬನವಾಸಿಯಲ್ಲಿ ಆಟವಾಡುತ್ತಿದ್ದ ಬಾಲಕ ಸಿಡಿಲು ಬಡಿದು ಸಾವು; ಚಿಕ್ಕಮಗಳೂರು, ಹಾಸನದಲ್ಲಿ ಮಳೆ ಅವಾಂತರ

Election Icon
Lok Sabha Election 20242 hours ago

Election Icon: ಹಿಮಾಚಲ ಪ್ರದೇಶದ ಮಂಗಳಮುಖಿ ಈಗ ‘ಚುನಾವಣಾ ಐಕಾನ್’

Virat Kohli
ಕ್ರೀಡೆ2 hours ago

Virat Kohli: ರೋಹಿತ್​ ಶರ್ಮ ರನ್​ ದಾಖಲೆ ಮುರಿದ ಕಿಂಗ್​ ಕೊಹ್ಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 day ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌