Impella Heart pump| ಸಾವಿನ ಕೊನೆಯ ಮನೆಯಿಂದ ಬೇಕಾದ್ರೂ ಬದುಕಿಸಿ ತರಬಲ್ಲ ಸಂಜೀವಿನಿ ಇಂಪೆಲ್ಲಾ ಹಾರ್ಟ್‌ ಪಂಪ್ - Vistara News

ಆರೋಗ್ಯ

Impella Heart pump| ಸಾವಿನ ಕೊನೆಯ ಮನೆಯಿಂದ ಬೇಕಾದ್ರೂ ಬದುಕಿಸಿ ತರಬಲ್ಲ ಸಂಜೀವಿನಿ ಇಂಪೆಲ್ಲಾ ಹಾರ್ಟ್‌ ಪಂಪ್

ಹೃದಯದ ಸಮಸ್ಯೆ ಎದುರಾದಾಗ, ರಕ್ತನಾಳಗಳು ಬ್ಲಾಕ್‌ ಅದಾಗ ಆಂಜಿಯೊಪ್ಲಾಸ್ಟಿ ಮಾಡುವುದು ಕೇಳಿದ್ದೀರಿ. ಆದರೆ, ವಯಸ್ಸಾದವರಿಗೆ ಇದು ಸ್ವಲ್ಪ ಅಪಾಯಕಾರಿ. ಈಗ ಅಂಥವರಿಗೂ ಸುರಕ್ಷಿತ ಎನಿಸುವ ಸಾಧನವೊಂದು ಜನಪ್ರಿಯವಾಗಿದೆ. ಅದುವೇ ಇಂಪೆಲ್ಲಾ ಹಾರ್ಟ್‌ ಪಂಪ್.

VISTARANEWS.COM


on

Impella heart pump
ಫೊರ್ಟಿಸ್‌ ಆಸ್ಪತ್ರೆ ಇಂಟರ್‌ವೆನ್ಷನಲ್‌ ಕಾರ್ಡಿಯಾಲಜಿ ನಿರ್ದೇಶಕ ಡಾ. ಆರ್‌. ಕೇಶವ್‌ ಅವರು ವಿಸ್ತಾರ ನ್ಯೂಸ್‌ ಇಂಪೆಲ್ಲಾ ಹಾರ್ಟ್‌ ಪಂಪ್‌ ಬಗ್ಗೆ ವಿವರಣೆ ನೀಡಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಭಿಷೇಕ್‌ ಬಿ.ವಿ., ಬೆಂಗಳೂರು
ಹೃದಯದ ರಕ್ತನಾಳಗಳಲ್ಲಿ ರಕ್ತ ಪರಿಚಲನೆಗೆ ತೊಂದರೆ ಉಂಟು ಮಾಡುವ ತಡೆಗಳಿದ್ದಾಗ, ಹೃದಯಾಘಾತವಾದಾಗ ವೈದ್ಯರು ಆಂಜಿಯೋಪ್ಲಾಸ್ಟಿ ಮೂಲಕ ಸಮಸ್ಯೆಯನ್ನು ಬಗೆಹರಿಸುವುದು ಸಾಮಾನ್ಯ. ಆದರೆ, ವೃದ್ಧರಲ್ಲಿ, ಬೇರೆ ಕಾಯಿಲೆಗಳು ಇದ್ದವರಲ್ಲಿ ಅಂಥ ಪರಿಸ್ಥಿತಿಯಲ್ಲಿ ಆಂಜಿಯೊಪ್ಲಾಸ್ಟಿ ಮಾಡುವುದು ಅಪಾಯಕಾರಿಯಾಗುವ ಸಾಧ್ಯತೆಯೂ ಇರುತ್ತದೆ. ಒಂದೋ ಬಂಧುಗಳ ನೆಮ್ಮದಿಗೆ ಆಂಜಿಯೋಪ್ಲಾಸ್ಟಿ ಮಾಡುವುದು, ಇಲ್ಲವೇ ಈ ಸಮಸ್ಯೆಗೆ ಈ ವಯಸ್ಸಲ್ಲಿ ಪರಿಹಾರವಿಲ್ಲ. ಏನಾಗುತ್ತದೋ ಕಾದು ನೋಡೋಣ ಎಂದು ಹೇಳುವುದೇ ಇದುವರೆಗಿನ ಉತ್ತರವಾಗಿತ್ತು. ಕೆಲವೊಮ್ಮೆ ಒತ್ತಾಯಪೂರ್ವಕವಾಗಿ ಆಂಜಿಯೊಪ್ಲಾಸ್ಟಿ ಮಾಡಿದಾಗ ಪ್ರಾಣವೇ ಹೋದ ಉದಾಹರಣೆಗಳು ಸಾಕಷ್ಟಿವೆ.

ಆದರೆ, ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಅತ್ಯಂತ ಅಪರೂಪದ, ಅತ್ಯಾಧುನಿಕ ಸಾಧನವನ್ನು ಬಳಸಿ ದೀರ್ಘ ಕಾಲದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯರಲ್ಲೂ ಆಂಜಿಯೋಪ್ಲಾಸ್ಟಿ ನಡೆಸಿ ಜೀವ ಉಳಿಸಿದ್ದಾರೆ, ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಈ ರೀತಿ ಜೀವ ರಕ್ಷಣೆಗೆ ಬಳಸಿದ್ದು.. ಇಂಪೆಲ್ಲಾ ಹಾರ್ಟ್‌ ಪಂಪ್!‌

ಈ ಕುರಿತು ಹೃದಯ ತಜ್ಞ ಡಾ. ವಿವೇಕ್‌ ಜವಳಿ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಈ ಸಾಧನವನ್ನು 81 ಮತ್ತು 85 ವರ್ಷದ ಪುರುಷ, ಹಾಗೂ 71 ವರ್ಷದ ವೃದ್ಧ ಮಹಿಳೆಯರ ಮೇಲೆ ಪ್ರಯೋಗಿಸಿದ್ದು, ಅವರನ್ನು ಬದುಕುಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಈ ಮೂರು ವೃದ್ಧರು ಕೋಮಾರ್ಬಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಕೆಲವು ವರ್ಷಗಳ ಹಿಂದೆಯೇ ಹೃದಯ ಸಮಸ್ಯೆಗೆ ಒಳಗಾಗಿ ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿತ್ತು. ಇದಾದ ಬಳಿಕವೂ ಸಹ ಅವರಿಗೆ ಗಂಭೀರ ಹೃದಯಾಘಾತ ಸಂಭವಿಸಿತ್ತು, ಅವರನ್ನು ಉಳಿಸಲು ಮತ್ತೊಮ್ಮೆ ಆಂಜಿಯೋಪ್ಲಾಸ್ಟಿ ಮಾಡುವುದು ಅಸಾಧ್ಯದ ಕೆಲಸ. ಹೀಗಾಗಿ ಇಂಪೆಲ್ಲಾ ಹಾರ್ಟ್‌ ಪಂಪ್‌ ಬಳಸಿ ನಾವು ಅವರನ್ನು ರಕ್ಷಿಸಿದೆವು ಎನ್ನುತ್ತಾರೆ ವಿವೇಕ್‌ ಜವಳಿ.

ಇಂಪೆಲ್ಲಾ ಬಗ್ಗೆ ಡಾ. ವಿವೇಕ್‌ ಜವಳಿ ಅವರು ವಿವರಿಸಿದ್ದು ಹೀಗೆ..
ನಾವು ಆಂಜಿಯೋಪ್ಲಾಸ್ಟಿಯನ್ನು ೧೯೭೭ರಿಂದ ಮಾಡುತ್ತಿದ್ದೇವೆ. ೧೯೯೦ರ ಅವಧಿಯಿಂದಿ ಸ್ಟಂಟ್‌ ಬಳಸುತ್ತಿದ್ದೇವೆ. ಈಗ ಬಂದಿರುವುದು ಇಂಪೆಲ್ಲಾ ಹಾರ್ಟ್‌ ಪಂಪ್‌. ಮೊದಲು ಕೃತಕ ಹಾರ್ಟ್‌ ಪಂಪ್‌ ಬಳಸಲಾಗುತ್ತಿತ್ತು. ಎದೆ ಭಾಗದಲ್ಲಿ ಆಪರೇಟ್‌ ಮಾಡಿ ಹಾಕಬೇಕಾಗಿತ್ತು. ಇಲ್ಲವೇ ಕಾಲಿನಿಂದ ಹಾಕಬೇಕಾಗಿತ್ತು. ಇದಕ್ಕೆ ಕನಿಷ್ಠ ೩ ಗಂಟೆ ಅವಧಿ ಬೇಕಾಗುತ್ತಿತ್ತು. ಇಂಪೆಲ್ಲಾವನ್ನು ನಾವು ಕೇವಲ ೧೫ ನಿಮಿಷದಲ್ಲಿ ಅಳವಡಿಸಲು ಸಾಧ್ಯವಾಗುತ್ತದೆ. ಕಾಲಿನಿಂದಲೇ ಅಳವಡಿಸಬಹುದು.

ನಿಜವೆಂದರೆ, ಇಂಪೆಲ್ಲಾ ೨೦ ವರ್ಷದಿಂದಲೇ ಇದೆ. ಭಾರತಕ್ಕೆ ಬಂದೇ ಹತ್ತು ವರ್ಷ ಆಗಿದೆ. ಆದರೆ, ಇದು ಅತಿ ಸುಲಭದಲ್ಲಿ ಸಿಗುತ್ತಿಲ್ಲ. ಈಗ ಎರಡು ಮೂರು ವರ್ಷದಿಂದ ಲಭಿಸುತ್ತಿದೆ. ಇಂಪೆಲ್ಲಾ ಹಾರ್ಟ್‌ ಪಂಪ್‌ನ ಕೆಲಸವೇನೆಂದರೆ ಹೃದಯಕ್ಕೆ ತಾತ್ಕಾಲಿಕವಾಗಿ ಮೂರು ಲೀಟರ್‌ನಷ್ಟು ರಕ್ತವನ್ನು ನಿರಂತರವಾಗಿ ಪಂಪ್‌ ಮಾಡುತ್ತಿರುವುದು.

ಇಂಪೆಲ್ಲಾ ಹಾರ್ಟ್‌ ಪಂಪ್‌ ಹೀಗಿರುತ್ತದೆ ನೋಡಿ

ಇದನ್ನು ಎರಡು ರೀತಿಯ ರೋಗಿಗಳಿಗೆ ಹಾಕಬಹುದು. ಒಂದು ಹೃದಯಾಘಾತಕ್ಕೆ ಒಳಗಾದವರಿಗೆ, ಶಾಕ್‌ನಲ್ಲಿರುವ ರೋಗಿಗಳಿಗೆ. ಇನ್ನೊಂದು ಹೈ ರಿಸ್ಕ್‌ ರೋಗಿಗಳಿಗೆ. ಅಂದರೆ, ಸಾಮಾನ್ಯ ಆಂಜಿಯೋಪ್ಲಾಸ್ಟಿ ಮಾಡಿದರೆ ಪರಿಸ್ಥಿತಿ ಹದಗೆಟ್ಟೀತು ಎಂದು ಭಾವಿಸುತ್ತೇವೋ ಅವರಿಗೆ. ಅಂದರೆ, ಕಿಡ್ನಿ ದುರ್ಬಲವಾಗಿದೆ. ಶ್ವಾಸಕೋಶಗಳು ಸಮಸ್ಯೆಯಲ್ಲಿವೆ. ಹೃದಯದಲ್ಲಿ ಮೂರು ರಕ್ತನಾಳಗಳು ಸರಿಯಾಗಿ ಕೆಲಸ ಮಾಡುತ್ತಿರಬೇಕು. ಅದರೆ, ಕೆಲವರಲ್ಲಿ ಒಂದೇ ಒಂದು ಸರಿಯಾಗಿರುತ್ತದೆ. ಅದೂ ಈ ಸಮಯದಲ್ಲಿ ಕೈಕೊಟ್ಟಿದೆ ಎಂಬ ಪರಿಸ್ಥಿತಿಯಲ್ಲಿ ಇರುವವರಿಗೆ ಇದನ್ನು ಮಾಡಬಹುದು. ಸಾಮಾನ್ಯವಾಗಿ ಹಾರ್ಟ್‌ ಫಂಕ್ಷನಿಂಗ್‌ ೫೦% ಇರಬೇಕು, ಕೆಲವರಿಗೆ ೩೦% ಮಾತ್ರ ಇರುತ್ತದೆ. ಇಂಥವರನ್ನು ಹೈರಿಸ್ಕ್‌ ಅಂತೇವೆ. ಇವರಲ್ಲಿ ಆಂಜಿಯೊಪ್ಲಾಸ್ಟಿ ಮಾಡಿದರೆ ಕಾಂಪ್ಲಿಕೇಶನ್ಸ್‌ ಆಗುವ, ಬಿಪಿ ಇಳಿಯುವ ಅಪಾಯ ಜಾಸ್ತಿ. ಅವರಿಗೆ ಇಂಪೆಲ್ಲಾ ಹಾಕಿದರೆ ರಕ್ತದ ಒತ್ತಡವನ್ನು ಸರಿಯಾದ ಪ್ರಮಾಣದಲ್ಲಿ ಕಾಯ್ದುಕೊಳ್ಳಬಹುದು, ಹೃದಯಕ್ಕೆ ಬೇಕಾದ ಪ್ರಮಾಣದಲ್ಲಿ ರಕ್ತ ಪಂಪ್‌ ಆಗುವಂತೆ ನೋಡಿಕೊಳ್ಳಬಹುದು.

ಮೊದಲೆಲ್ಲ ನಾವು ಹೈ ರಿಸ್ಕ್‌ ಪೇಷೆಂಟ್‌ಗಳಿಗೆ ನಾವು ಆಂಜಿಐೊಪ್ಲಾಸ್ಟಿ ಮಾಡುತ್ತಲೇ ಇರಲಿಲ್ಲ. ಈಗ ಹಾಕಿಲ್ಲ ಒಂದು ಹಂತದಲ್ಲಿ ಹೃದಯ ತಾತ್ಕಾಲಿಕವಾಗಿ ಕೆಲಸವನ್ನೇ ನಿಲ್ಲಿಸಿದರೂ ದೇಹದ ಬೇರೆ ಬೇರೆ ಭಾಗಗಳಿಗೆ ರಕ್ತವನ್ನು ಪಂಪ್‌ ಮಾಡುವ ಕೆಲಸವನ್ನು ಇಂಪೆಲ್ಲಾ ಮಾಡುತ್ತದೆ. ಇಂಪೆಲ್ಲಾ ಬಳಕೆಯಿಂದ ಒಟ್ಟಾರೆ ಪ್ರೊಸೀಜರ್‌ ಫಲಿತಾಂಶ ಚೆನ್ನಾಗಿರುತ್ತದೆ. ಹೀಗಾಗಿ ಇದು ಸುರಕ್ಷಿತ ವಿಧಾನ. ಹಿರಿಯರ ಪಾಲಿಗಂತೂ ಸಂಜೀವಿನಿ. ನಾವು ಆಪರೇಟ್‌ ಮಾಡಿದ ರೋಗಿಗಳೆಲ್ಲರೂ ೪೮ ಗಂಟೆಗಳಲ್ಲಿ ಮನೆಗೆ ಹೋಗಿದ್ದಾರೆ. ಮೊದಲಿಗಿಂತಲೂ ಚೆನ್ನಾಗಿದ್ದಾರೆ.

ರಕ್ತದೊತ್ತಡ ನಾರ್ಮಲ್‌ ಇದೆ, ಒಂದೇ ರಕ್ತನಾಳದಲ್ಲಿ ಬ್ಲಾಕ್‌ ಇದೆ ಅಂತಿದ್ದರೆ ಇಂಪೆಲ್ಲ ಬಳಸಬೇಕಾಗಿಲ್ಲ. ನಾರ್ಮಲ್‌ ಆಂಜಿಯೊಪ್ಲಾಸ್ಟಿ ಸಾಕಾಗುತ್ತದೆ. ಕಾಂಪ್ಲಿಕೇಶನ್ಸ್‌ ಇದ್ದಾಗ, ರೋಗಿಗಳಿಗೆ ತುಂಬ ವಯಸ್ಸಾಗಿದ್ದಾಗ, ಬೇರೆ ಆರೋಗ್ಯ ಸಮಸ್ಯೆಗಳು ಇದ್ದಾಗ ಇಂಪೆಲ್ಲಾ ತುಂಬ ಸಹಾಯಕಾರಿ ಎಂದು ಅವರು ವಿವರಿಸಿದರು.

ಫೊರ್ಟಿಸ್‌ ಆಸ್ಪತ್ರೆ ಇಂಟರ್‌ವೆನ್ಷನಲ್‌ ಕಾರ್ಡಿಯಾಲಜಿ ನಿರ್ದೇಶಕ ಡಾ. ಆರ್‌. ಕೇಶವ್‌ ಮಾತನಾಡಿ, ಇಂಪೆಲ್ಲಾ ಹೃದಯ ಪಂಪ್‌ನನ್ನು ವಯಸ್ಸಾದವರಿಗೆ ಅದರಲ್ಲೂ ಇನ್ನೇನು ಬದುಕಲು ಸಾಧ್ಯವೇ ಇಲ್ಲ ಎನ್ನುವಂಥ ಅಪರೂಪದ ಹೃದಯಾಘಾತದಂಥ ಪ್ರಕರಣಗಳಿಗೆ ಬಳಸಲಾಗುತ್ತದೆ. ಆದರೆ ಈ ಸಾಧನ ಬಳಕೆಯಿಂದ ಶೇ.೧೦೦ರಷ್ಟು ಪ್ರಾಣ ಉಳಿಯುವುದು ಗ್ಯಾರಂಟಿ. ಏಕೆಂದರೆ, ಎಂಥಹ ಬ್ಲಾಕಿಂಗ್‌ ಆಗಿದ್ದರೂ ಈ ಪಂಪ್‌ ಮೂಲಕಹೃದಯದ ರಕ್ತಸಂಚಾರವನ್ನು ಸರಾಗಗೊಳಿಸಬಹುದು. ಈ ಸಾಧನವನ್ನು ದೇಹದೊಳಗೆ ಹಾಕಲು ಕೇವನ ೧೫ ನಿಮಿಷ ಸಾಕು ಎಂದು ವಿವರಿಸಿದರು.

ಇದನ್ನೂ ಓದಿ| Heart Attack | 19 ವರ್ಷದ ಯುವಕನಿಗೆ ಹೃದಯಾಘಾತ, ಸಣ್ಣ ವಯಸ್ಸಿನಲ್ಲೇ ಏಕೆ ಹೀಗೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Corona Virus: ಸಿಂಗಾಪುರದಲ್ಲಿ ಕೋವಿಡ್‌-19 ಹೊಸ ಅಲೆ, ರಾಜ್ಯದಲ್ಲಿ ಅಲರ್ಟ್‌, ಇಂದು ಆರೋಗ್ಯ ಇಲಾಖೆ ಸಭೆ

Corona Virus: ಸಿಂಗಾಪುರದಲ್ಲಿ ಒಂದೇ ವಾರದಲ್ಲಿ 25 ಸಾವಿರ ಕೋವಿಡ್ ಕೇಸ್ ಖಚಿತವಾಗಿದ್ದು, ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಅಲರ್ಟ್‌ ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಒಮಿಕ್ರಾನ್ ರೂಪಾಂತರಿ ವೈರಸ್‌ನ 91 ಕೇಸ್‌ ಪತ್ತೆಯಾಗಿವೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಲು ಇಂದು ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಸಭೆ ನಡೆಯುತ್ತಿದೆ.

VISTARANEWS.COM


on

corona virus wave in singapore
Koo

ಬೆಂಗಳೂರು: ಸಿಂಗಾಪುರದಲ್ಲಿ (Singapore) ಹೊಸ ಕೋವಿಡ್‌- 19 (Covid 19 wave) ಅಲೆ ಪತ್ತೆಯಾಗಿದೆ. ಒಂದೇ ವಾರದಲ್ಲಿ ಕೊರೊನಾ ವೈರಸ್‌ (Corona Virus) ಕೇಸುಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಮತ್ತೆ ಮಾಸ್ಕ್‌ (Mask) ಧರಿಸಲು ಸಲಹೆ ನೀಡಲಾಗಿದೆ. ರಾಜ್ಯದಲ್ಲೂ ಆರೋಗ್ಯ ಇಲಾಖೆ (Health department) ಅಲರ್ಟ್‌ ಆಗಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದೆ.

ಸಿಂಗಾಪುರದಲ್ಲಿ ಒಂದೇ ವಾರದಲ್ಲಿ 25 ಸಾವಿರ ಕೋವಿಡ್ ಕೇಸ್ ಖಚಿತವಾಗಿದ್ದು, ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಅಲರ್ಟ್‌ ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಒಮಿಕ್ರಾನ್ ರೂಪಾಂತರಿ ವೈರಸ್‌ನ 91 ಕೇಸ್‌ ಪತ್ತೆಯಾಗಿವೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಲು ಇಂದು ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಸಭೆ ನಡೆಯುತ್ತಿದೆ.

ಸಿಂಗಾಪುರದಿಂದ ಬೆಂಗಳೂರು ಹಾಗೂ ಮುಂಬಯಿಗೆ ಆಗಮಿಸುವ ವಿಮಾನಯಾನಿಗಳ ಸಂಖ್ಯೆ ಹೆಚ್ಚು ಇದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಆಯ್ದ ಯಾನಿಗಳ ಆರೋಗ್ಯ ತಪಾಸಣೆ, ಮಾಸ್ಕ್‌ ಧಾರಣೆ ಸೇರಿದಂತೆ ಹಲವು ಕ್ರಮಗಳ ಬಗೆಗೆ ಚರ್ಚಿಸಲಾಗುತ್ತಿದೆ.

ಸಿಂಗಾಪುರದಲ್ಲಿ ಏನಾಗಿದೆ?

ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್, ಸಾರ್ವಜನಿಕ ತಾಣಗಳಲ್ಲಿ ಮುಖವಾಡಗಳನ್ನು ಧರಿಸುವಂತೆ ಸಲಹೆ ನೀಡಿದ್ದಾರೆ. ಸಾಮಾಜಿಕ ನಿರ್ಬಂಧಗಳ ಕುರಿತು ಮಾತನಾಡಿದ ಸಚಿವ ಓಂಗ್, ಸದ್ಯಕ್ಕೆ ಯಾವುದೇ ರೀತಿಯ ಸಾಮಾಜಿಕ ನಿರ್ಬಂಧಗಳ ಯೋಚನೆಯಿಲ್ಲ ಎಂದಿದ್ದಾರೆ. ಏಕೆಂದರೆ ಸಿಂಗಾಪುರದಲ್ಲಿ ಕೋವಿಡ್ -19 ಅನ್ನು ಸ್ಥಳೀಯ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.

ಕೋವಿಡ್‌ನ ಹೊಸ ಅಲೆಯ ಪಥವನ್ನು ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ. ಸಚಿವಾಲಯದ ಪ್ರಕಾರ, ಕೋವಿಡ್ -19 ಪ್ರಕರಣಗಳ ಅಂದಾಜು ಸಂಖ್ಯೆಯು ಹಿಂದಿನ ವಾರದಲ್ಲಿದ್ದ 13,700ರಿಂದ 25,900ಕ್ಕೆ ದ್ವಿಗುಣಗೊಂಡಿದೆ. ಅದೇ ಅವಧಿಯಲ್ಲಿ ಸರಾಸರಿ ದೈನಂದಿನ ಕೋವಿಡ್ -19 ಆಸ್ಪತ್ರೆಗೆ ದಾಖಲು ಕೇಸ್‌ಗಳು 181ರಿಂದ ಸರಿಸುಮಾರು 250ಕ್ಕೆ ಏರಿದೆ ಎಂದು ಸಚಿವಾಲಯ ವರದಿ ಮಾಡಿದೆ.

ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು ಸಂರಕ್ಷಿಸಲು, ಸಾರ್ವಜನಿಕ ಆಸ್ಪತ್ರೆಗಳಿಗೆ ತುರ್ತು-ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಕಡಿಮೆ ಮಾಡಲು ಮತ್ತು ಸೂಕ್ತವಾದ ರೋಗಿಗಳನ್ನು ಆರೈಕೆ ಸೌಲಭ್ಯಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ. “ನಾವು ಅಲೆಯ ಆರಂಭಿಕ ಭಾಗದಲ್ಲಿದ್ದೇವೆ. ಪ್ರಮಾಣ ಸ್ಥಿರವಾಗಿ ಏರುತ್ತಿದೆ” ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಹೇಳಿದ್ದಾರೆ.

ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

ನವದೆಹಲಿ: ಕೊರೋನಾ ವೈರಸ್‌(Corona Virus) ಎದುರಿಸಲು ತೆಗೆದುಕೊಂಡಿರುವ ಕೋವಿಶೀಲ್ಡ್‌(Covishield Vaccine) ಲಸಿಕೆ ಅಡ್ಡಪರಿಣಾಮ(Side Effects) ಹೊಂದಿದೆ ಎಂಬುದು ಬಯಲಾದ ಬೆನ್ನಲ್ಲಿ ಕೋವಾಕ್ಸಿನ್‌ (Covaxin) ತೆಗೆದುಕೊಂಡಿರುವ ಜನ ತಮಗೇನು ಅಪಾಯವಿಲ್ಲ ಎಂದು ನಿರಾಳವಾಗಿದ್ದರು. ಆದರೆ ಇದೀಗ ವರದಿಯೊಂದು ಹೊರಬಿದ್ದಿದ್ದು, ಕೋವಾಕ್ಸಿನ್‌ ಪಡೆದಿರುವ ಜನರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಕೋವಾಕ್ಸಿನ್‌ ಲಸಿಕೆಯೂ ಅಡ್ಡಪರಿಣಾಮ ಹೊಂದಿದೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.

ಇತ್ತೀಚೆಗೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಬ್ರಿಟಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅದರ ಲಸಿಕೆ ಕೆಲವು ಜನರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು. ಇದೀಗ ಅದೇ ರೀತಿ ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವರದಿ ಬಂದಿದೆ. ಈ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ನಂತರ, ಅದರ ಅಡ್ಡಪರಿಣಾಮಗಳು ಸಾಕಷ್ಟು ಜನರಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

BHU ಅಧ್ಯಯನ ವರದಿಯಲ್ಲಿ ಬಹಿರಂಗ

ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ವರದಿಯ ಪ್ರಕಾರ, ಕೊವಾಕ್ಸಿನ್‌ ತೆಗೆದುಕೊಂಡಿರುವ ಹದಿ ಹರೆಯದವರು ಮತು ಯುವಕರಲ್ಲಿ ಈ ಅಡ್ಡ ಪರಿಣಾಮ ಹೆಚ್ಚಾಗಿ ಕಂಡು ಬಂದಿದೆ. ಈ ಸಂಶೋಧನೆಗಾಗಿ ಒಟ್ಟು 1024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 635 ಹದಿಹರೆಯದವರು ಮತ್ತು 391 ಯುವಕರು ಇದ್ದರು. 304 ಹದಿಹರೆಯದವರು ಅಥವಾ ಸುಮಾರು 48 ಪ್ರತಿಶತದಷ್ಟು ಜನರು ಶ್ವಾಸನಾಳದ ಸೋಂಕುಗೆ ತುತ್ತಾಗಿರುವುದು ಅಧ್ಯಯನದಲ್ಲಿ ಬಯಲಾಗಿದೆ.

ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

Continue Reading

ಆರೋಗ್ಯ

Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

ʻಬೀನ್‌ ಕರ್ಡ್‌ʼ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಈ ತೋಫು ಸೋಯಾ ಉತ್ಪನ್ನ. ಸಸ್ಯದಿಂದಲೇ ಸಿದ್ಧಗೊಂಡ ಈ ತೋಫು ಅತಿ ಹೆಚ್ಚಿನ ಪ್ರೊಟೀನ್‌ ಹೊಂದಿರುವ ತಿನಿಸು. ಜೊತೆಗೆ ಹಲವು ರೀತಿಯ ಪೋಷಕಸತ್ವಗಳು ಇದರಲ್ಲಿದ್ದು, ಅತ್ಯಂತ ಆರೋಗ್ಯಕರ (Health benefits Of Tofu) ತಿನಿಸು ಎಂಬ ಖ್ಯಾತಿಗೂ ಪಾತ್ರವಾಗಿದೆ.

VISTARANEWS.COM


on

Health Benefits Of Tofu
Koo

ನೋಡುವುದಕ್ಕೆ ಪನೀರ್‌ನಂತೆಯೇ ಕಾಣುವ ಈ ವಸ್ತುವಿನ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲವಿದೆ. ಅದೂ ಪನೀರ್‌ನ ಒಂದು ಬಗೆ ಎಂದು ಭಾವಿಸಿದವರಿದ್ದಾರೆ. ಹಾಲಿನಿಂದಲೇ ಮಾಡಿದ್ದು ಎಂದು ತಿಳಿದವರಿದ್ದಾರೆ. ಆದರೆ ʻತೋಫುʼ ಎಂಬ ಹೆಸರು ಕೇಳಿ ಇದೇನು ಸಸ್ಯಜನ್ಯವೋ, ಪ್ರಾಣಿಜನ್ಯವೋ ಎಂಬ ಗೊಂದಲಕ್ಕೆ ಬಿದ್ದವರೂ ಇದ್ದಾರೆ. ʻಬೀನ್‌ ಕರ್ಡ್‌ʼ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಇದು ಸೋಯಾ ಉತ್ಪನ್ನ. ಸಸ್ಯದಿಂದಲೇ ಸಿದ್ಧಗೊಂಡ ಈ ತೋಫು ಅತಿ ಹೆಚ್ಚಿನ ಪ್ರೊಟೀನ್‌ ಹೊಂದಿರುವ ತಿನಿಸು. ಜೊತೆಗೆ ಹಲವು ರೀತಿಯ ಪೋಷಕಸತ್ವಗಳು ಇದರಲ್ಲಿದ್ದು, ಅತ್ಯಂತ ಆರೋಗ್ಯಕರ (Health benefits Of Tofu) ತಿನಿಸು ಎಂಬ ಖ್ಯಾತಿಗೂ ಪಾತ್ರವಾಗಿದೆ.

Tofu

ಏನಿದು ತೋಫು?

ಸರಳವಾಗಿ ಹೇಳುವುದಾದರೆ ಸೋಯಾ ಹಾಲಿನ ಪನೀರ್‌ ಎಂದು ತಿಳಿಯಬಹುದು. ನೋಡುವುದಕ್ಕೆ ಪನೀರ್‌ನಂತೆಯೇ ಇದ್ದರೂ, ಇವೆರಡರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಸೋಯಾ ಹಾಲಿಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಉಪ್ಪನ್ನು ಸೇರಿಸಿ, ಹಸುವಿನ ಹಾಲಿನಂತೆಯೇ ಒಡೆಸಿ ಪನೀರ್‌ ರೀತಿಯಲ್ಲಿ ಕಾಣುವಂತೆಯೇ ತೋಫುವನ್ನು ಸಿದ್ಧಪಡಿಸಲಾಗುತ್ತದೆ. ನಂತರ ಇದನ್ನು ಚಚ್ಚೌಕವಾಗಿ ಕತ್ತರಿಸಲಾಗುತ್ತದೆ. ಇದು ಸಂಪೂರ್ಣ ಸಸ್ಯಜನ್ಯ ಉತ್ಪನ್ನ. ವೇಗನ್‌ಗಳಿಗೆ ಹೇಳಿ ಮಾಡಿಸಿದ ಆಹಾರ. ಇದನ್ನು ಎಲ್ಲರೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ರೀತಿಯಲ್ಲಿ ಲಾಭಗಳಿವೆ. ಏನು ಪ್ರಯೋಜನಗಳಿವೆ ಸೋಯಾ ಹಾಲಿನ ಪನೀರ್‌ ಅಥವಾ ತೋಫು ಸೇವನೆಯಿಂದ?

paneer tofu

ಅತ್ತ್ಯುತ್ತಮ ಪ್ರಾಣಿಜನ್ಯ ಪ್ರೊಟೀನ್

ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸಾಲುವುದಿಲ್ಲ ಎಂಬ ದೂರು ಸಾಮಾನ್ಯ. ಆದರೆ ನಿಯಮಿತವಾಗಿ ಪನೀರ್‌, ತೋಫು ಸೇವನೆಯನ್ನು ರೂಢಿಸಿಕೊಂಡರೆ ಸಸ್ಯಾಹಾರಿಗಳೂ ಪ್ರೊಟೀನ್‌ ಕೊರತೆಯನ್ನು ನೀಗಿಸಿಕೊಳ್ಳಬಹುದು. ಅರ್ಧ ಕಪ್‌ ತೋಫುವಿನಲ್ಲಿ 181 ಕ್ಯಾಲೊರಿಗಳು, 21.8 ಗ್ರಾಂನಷ್ಟು ಪ್ರೊಟೀನ್‌, 11 ಗ್ರಾಂ ಕೊಬ್ಬು ಪ್ರಮುಖವಾಗಿ ದೊರೆಯುತ್ತದೆ. ಇದರಲ್ಲಿ ಅಗತ್ಯವಾದ ಎಲ್ಲ 9 ಅಮೈನೊ ಆಮ್ಲಗಳು ಸಮೃದ್ಧವಾಗಿ ದೊರೆಯುತ್ತವೆ. ಸ್ನಾಯುಗಳ ದುರಸ್ತಿ ಮಾಡಿ, ಬೆಳವಣಿಗೆಗೆ ಅಗತ್ಯವಾದಂಥ ಸಂಪೂರ್ಣ ಪ್ರೊಟೀನ್‌ ತೋಫುವಿನಲ್ಲಿ ದೊರೆಯುತ್ತದೆ.

weight loss

ತೂಕ ಇಳಿಕೆಗೆ ಸೂಕ್ತ

ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೊಟೀನ್‌ ಹೊಂದಿರುವ ಕಾರಣದಿಂದ, ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವ ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ ಆಗಾಗ ಕಾಡುವ ಕಳ್ಳ ಹಸಿವನ್ನು ದೂರ ಮಾಡಿ, ದೇಹದಲ್ಲಿ ಅನಗತ್ಯ ಕೊಬ್ಬು ಜಮಾಯಿಸುವುದನ್ನು ಸಹ ತಡೆಯಬಹುದು. ಹೀಗಾಗಿ ತೂಕ ಇಳಿಸುವವರಿಗೆ ಇದು ಸೂಕ್ತವಾದ ಆಹಾರವಿದು.

Heart Health In Winter

ಹೃದಯದ ಮಿತ್ರ

ತೋಫುವಿನಲ್ಲಿ ಸ್ಯಾಚುರೇಟೆಡ್‌ ಕೊಬ್ಬಿನ ಪ್ರಮಾಣ ಅತಿ ಕಡಿಮೆ. ಇದರಲ್ಲಿ ಇರುವ ಐಸೊಫ್ಲೇವನ್‌ಗಳು ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ಗಳ ಜಮಾವಣೆಯನ್ನು ತಗ್ಗಿಸಲು ಸಹಾಯ ಮಾಡುತ್ತವೆ. ಹೀಗೆ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಲು ಸೋಯಾ ಪನೀರ್‌ ನೆರವಾಗುತ್ತದೆ.

heart attack and Diabetes control

ಮಧುಮೇಹ ನಿಯಂತ್ರಣ

ತೋಫುವಿನ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದೆ. ಅಂದರೆ ರಕ್ತದಲ್ಲಿರುವ ಸಕ್ಕರೆಯಂಶ ದಿಢೀರ್‌ ಏರಿಕೆಯಾಗಲು ಇದು ಅವಕಾಶ ನೀಡುವುದಿಲ್ಲ. ದೇಹದ ಚಯಾಪಚಯವನ್ನು ಹೆಚ್ಚಿಸುವ ಇದು, ನಾರು ಮತ್ತು ಪ್ರೊಟೀನನ್ನು ಸಾಂದ್ರವಾಗಿ ಹೊಂದಿದೆ. ಇಂಥ ಆಹಾರಗಳು ಮಧುಮೇಹಿಗಳಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತವೆ. ಗರ್ಭಾವಸ್ಥೆಯ ಮಧುಮೇಹ ಹೊಂದಿದವರ ಮೇಲೆ ನಡೆಸಿದ ಪ್ರಯೋಗದಲ್ಲಿ, ಆರು ವಾರಗಳವರೆಗೆ ಹೆಚ್ಚಿನ ಪ್ರಮಾಣದ ಸೋಯ್‌ ಪ್ರೊಟೀನ್‌ ಸೇವಿಸಿದ ಮಹಿಳೆಯರಲ್ಲಿ ಸಕ್ಕರೆ ಕಾಯಿಲೆ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದ್ದು ದಾಖಲಾಗಿದೆ.

ealthy internal organs of human digestive system / highlighted blue organs

ಜೀರ್ಣಾಂಗಗಳು ಕ್ಷೇಮ

ತೋಫುವಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನಾರು ಹೆಚ್ಚಿರುವ ಆಹಾರಗಳಿಂದ ಜೀರ್ಣಾಂಗಗಳಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಇದಲ್ಲದೆ, ಕೆಲವು ಬಗೆಯ ತೋಫುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಒಂದಿಷ್ಟು ಪ್ರೊಬಯಾಟಿಕ್‌ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಈ ಎಲ್ಲದರಿಂದ ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.

Bone Health In Winter

ಮೂಳೆಗಳ ಸಾಂದ್ರತೆ ರಕ್ಷಣೆ

ತೋಫು ತಯಾರಿಸುವ ಪ್ರಕ್ರಿಯೆಯಲ್ಲಿಯೇ ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಇದರಲ್ಲಿ ಸೇರಿಕೊಳ್ಳುತ್ತವೆ. ಮೂಳೆಗಳ ಸಾಂದ್ರತೆಯ ರಕ್ಷಣೆಗೆ ಈ ಖನಿಜಗಳು ಅಗತ್ಯವಾಗಿ ಬೇಕು. ಹಾಗಾಗಿ ಆಸ್ಟಿಯೊಪೊರೊಸಿಸ್‌ ಇರುವಂಥವರಿಗೆ ಇದು ಒಳ್ಳೆಯ ಆಹಾರ. ಜೊತೆಗೆ, ಋತುಬಂಧದ ಸಮಪದಲ್ಲಿರುವವರು, ಯಾವುದೇ ರೀತಿಯ ಕ್ಯಾಲ್ಶಿಯಂ ಕೊರತೆ ಇರುವವರಿಗೂ ಇದು ಸೂಕ್ತ. ಮಿತ ಪ್ರಮಾಣದಲ್ಲಿ ಎಲ್ಲರೂ ಇದನ್ನು ಸೇವಿಸುವುದು ಒಳ್ಳೆಯದೆ.

ಇದನ್ನೂ ಓದಿ: Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

ಜಾಗ್ರತೆ ಮಾಡಿ

ಹಾಗೆಂದು ಇದನ್ನು ಮಿತಿಮೀರಿಯೂ ತಿನ್ನುವಂತಿಲ್ಲ. ಸೋಯ್‌ ಅಲರ್ಜಿ ಇರುವವರು, ಥೈರಾಯ್ಡ್‌ ತೊಂದರೆಗಳು ಇರುವವರು, ಅದರಲ್ಲೂ ಮುಖ್ಯವಾಗಿ ಹೈಪೊ ಥೈರಾಯ್ಡ್‌ ಇರುವವರು, ಕಿಡ್ನಿ ಕಲ್ಲು ಇರುವವರು ಇದನ್ನು ಮಿತವಾಗಿ ಬಳಸುವುದು ಸೂಕ್ತ. ಹೆಚ್ಚಿನ ಪ್ರೊಟೀನ್‌ ಮತ್ತು ನಾರು ಸೇವನೆಯಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಅಜೀರ್ಣ, ಡಯರಿಯಾ ಕಾಡಬಹುದು. ಹಾಗಾಗಿ ತೋಫು ಒಳ್ಳೆಯದೇ ಆದರೂ ಇದನ್ನು ಮಿತವಾಗಿ ಸೇವಿಸುವುದು ಉತ್ತಮ.

Continue Reading

ಆರೋಗ್ಯ

Tea Tips: ಹಾಲಿನ ಚಹಾ ಬದಲು ಬ್ಲ್ಯಾಕ್‌ ಟೀ ಕುಡಿಯಿರಿ!

ಕಾಫಿ ಮತ್ತು ಚಹಾ ಸೇವನೆ (Tea Tips) ಭಾರತ ಉಪಖಂಡದ ಸಂಸ್ಕೃತಿ ಎನಿಸಿದೆ. ಆದರೆ ಅದನ್ನು ಅತಿಯಾಗಿ ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಐಸಿಎಂಆರ್‌ ಗಮನ ಸೆಳೆದಿದೆ. ಚಾ-ಕಾಪಿ ಕುಡಿಯುವುದಕ್ಕೆ ಮಿತಿ ಎಷ್ಟು, ಯಾವಾಗ ಕುಡಿಯಬಹುದು ಎಂಬಿತ್ಯಾದಿ ಮಾಹಿತಿಗಳನ್ನೂ ನೀಡಿದೆ. ಈ ಲೇಖನ ಓದಿ, ಟೀ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ.

VISTARANEWS.COM


on

Tea Tips
Koo

ಭಾರತೀಯರಿಗೆ ಕಾಫಿ-ಚಹಾ ಇಲ್ಲದೆ (Tea Tips) ಬೆಳಗಾಗುವುದೇ ಇಲ್ಲ. ಆದರೆ ಅತಿಯಾಗಿ ಕೆಫೇನ್‌ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಬಗ್ಗೆ ವಿಸ್ತೃತವಾದ ನಿರ್ದೇಶನಗಳನ್ನು ನೀಡಿದ್ದು, ಕೆಫೇನ್‌ ಎಷ್ಟು ಸೇವಿಸಬಹುದು ಮತ್ತು ಯಾವಾಗ ಸೇವಿಸಬಹುದು ಎಂಬ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದೆ. ಮಾತ್ರವಲ್ಲ, ಅತಿಯಾದ ಕೆಫೇನ್‌ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ಜೊತೆಗೂಡಿ, 17 ಹೊಸ ಆಹಾರಕ್ರಮದ ನಿರ್ದೇಶನಗಳನ್ನು ಐಸಿಎಂಆರ್‌ ಬಿಡುಗಡೆ ಮಾಡಿದೆ. ಭಾರತೀಯರಿಗಾಗಿಯೇ ಬಿಡುಗಡೆ ಮಾಡಲಾಗಿರುವ ಈ ಮಾರ್ಗದರ್ಶಿ ಸೂತ್ರಗಳು ಆರೋಗ್ಯಕರ ಆಹಾರ ಕ್ರಮವನ್ನು ದೇಶದೆಲ್ಲೆಡೆ ಪ್ರಚುರಪಡಿಸುವ ಉದ್ದೇಶವನ್ನು ಹೊಂದಿವೆ. ಈ ನಿರ್ದೇಶನಗಳಲ್ಲಿ ಅತಿಯಾಗಿ ಕಾಫಿ-ಚಹಾ ಸೇವನೆಯ ಅಡ್ಡ ಪರಿಣಾಮಗಳನ್ನೂ ತಿಳಿಸಲಾಗಿದೆ.

Cup of Tea

ಹೆಚ್ಚಾದರೆ ಏನಾಗುತ್ತದೆ?

ಕಾಫಿ-ಚಹಾ ಹೆಚ್ಚು ಕುಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಂಸ್ಥೆ ಸ್ಪಷ್ಟ ಉತ್ತರ ನೀಡಿದೆ. ಚಹಾ, ಕಾಫಿ ಹೆಚ್ಚು ಕುಡಿಯುವುದರಿಂದ ಆಹಾರದಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ತೊಡಕಾಗುತ್ತದೆ. ಕೆಫೇನ್‌ ಪೇಯಗಳಲ್ಲಿರುವ ಟ್ಯಾನಿನ್‌ಗಳು ಕಬ್ಬಿಣದಂಶ ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ. ಇದರಿಂದ ಕಬ್ಬಿಣದಂಶದ ಕೊರತೆಯಾಗಿ ಅನೀಮಿಯ ಉಂಟಾಗಬಹುದು. ಜೊತೆಗೆ, ಕಾಫಿ-ಟೀ ಸೇವನೆ ಹೆಚ್ಚಾದರೆ ರಕ್ತದೊತ್ತಡ ಸ್ಥಿರವಾಗಿರದೆ, ಏರಿಳಿತ ಕಾಣಬಹುದು. ಹೃದಯದ ತೊಂದರೆಗಳು ಅಂಟಿಕೊಳ್ಳಬಹುದು.

ಯಾವಾಗ ಸೇವಿಸಬಹುದು?

ಹೊಟ್ಟೆ ತೀವ್ರವಾಗಿ ಹಸಿದಿದ್ದಾಗ, ಆಹಾರದ ಜೊತೆಗೆ ಅಥವಾ ಆಹಾರ ಸೇವಿಸಿದ ತಕ್ಷಣ ಕೆಫೇನ್‌ ಸೇವನೆ ಸರಿಯಲ್ಲ. ಬದಲಿಗೆ, ಆಹಾರ ಸೇವಿಸಿದ ಒಂದು ತಾಸಿನ ನಂತರ ಕಾಫಿ, ಚಹಾ ಕುಡಿಯಬಹುದು. ಇವುಗಳನ್ನು ಅತಿಯಾಗಿ ಕುಡಿಯುವುದು ಕೇಂದ್ರ ನರಮಂಡಲವನ್ನು ಪ್ರಚೋದಿಸುತ್ತದೆ. ಈ ಮೂಲಕ ವ್ಯಸನವನ್ನೂ ಉಂಟು ಮಾಡುತ್ತದೆ. ಹಾಗಾಗಿ ಇದನ್ನು ಮಿತಿಯಲ್ಲಿ ಇರಿಸಿಕೊಳ್ಳುವುದು ಸೂಕ್ತ.

Black and green tea

ದಿನಕ್ಕೆ ಎಷ್ಟು?

ಇದರರ್ಥ ಕಾಫಿ-ಚಹಾ ಕುಡಿಯುವುದೇ ಬೇಡ ಎಂಬುದಲ್ಲ. ಬದಲಿಗೆ ಮಿತಿ ನಿಗದಿ ಮಾಡಿಕೊಳ್ಳಿ ಎನ್ನುತ್ತದೆ ಈ ನಿರ್ದೇಶನ. ದಿನಕ್ಕೆ 300 ಎಂ.ಜಿ.ಗಿಂತ ಹೆಚ್ಚು ಕೆಫೇನ್‌ ಸೇವನೆ ಸೂಕ್ತವಲ್ಲ. ಆದರೆ ಅದನ್ನು ಲೆಕ್ಕ ಹಾಕುವುದು ಹೇಗೆ? ತಾಜಾ ಡಿಕಾಕ್ಷನ್‌ ತೆಗೆದ 150 ಎಂ.ಎಲ್‌. ಕಾಫಿಯಲ್ಲಿ 80ರಿಂದ 120 ಎಂ.ಜಿ. ಕೆಫೇನ್‌ ಇರುತ್ತದೆ. ಅಷ್ಟೇ ಪ್ರಮಾಣದ ಇನ್‌ಸ್ಟಂಟ್‌ ಕಾಫಿಯಲ್ಲಿ 50ರಿಂದ 65 ಎಂ.ಜಿ. ಕೆಫೇನ್‌ ಇರುತ್ತದೆ. ಒಂದು ಸರ್ವಿಂಗ್‌ ಚಹಾದಲ್ಲಿ 30ರಿಂದ 65 ಎಂ.ಜಿ.ವರೆಗೂ ಕೆಫೇನ್‌ ದೇಹಕ್ಕೆ ದೊರೆಯುತ್ತದೆ. ಈ ಪ್ರಮಾಣಗಳನ್ನು ತಿಳಿದುಕೊಂಡರೆ, ಕೆಫೇನ್‌ ಎಷ್ಟು ಸೇವಿಸುತ್ತಿದ್ದೇವೆ ಎಂಬುದನ್ನು ಲೆಕ್ಕ ಹಾಕುವುದಕ್ಕೆ ಕಷ್ಟವಾಗುವುದಿಲ್ಲ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಹಾಲಿನ ಚಹಾ ಬೇಡ

ಭಾರತದಲ್ಲಿ ಚಹಾ ಎಂಬುದು ಪ್ರಾರಂಭವಾಗಿದ್ದು ಬ್ರಿಟೀಷರಿಂದ. ಇಂಗ್ಲಿಷ್‌ ಚಹಾ ಎಂದರೆ ಹಾಲು ಸೇರಿಸಿದ ಚಹಾ. ಬ್ಲ್ಯಾಕ್‌ ಟೀ, ಗ್ರೀನ್‌ ಟೀ, ಲೆಮೆನ್‌ ಟೀ ಇತ್ಯಾದಿಗಳೆಲ್ಲ ನಂತರದಲ್ಲಿ ಬಂದಿದ್ದು. ಆದರೆ ಹಾಲು ಬೆರೆಸಿದ ಚಹಾಗಿಂತ ಬ್ಲ್ಯಾಕ್‌ ಟೀ ಸೇವಿಸುವುದು ಒಳ್ಳೆಯದು ಎಂಬುದು ಐಸಿಎಂಆರ್‌ ಅಭಿಮತ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬ್ಲ್ಯಾಕ್‌ ಟೀ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುವ ಸಂಭವವಿದೆ. ಜೊತೆಗೆ, ಹೊಟ್ಟೆಯ ಕ್ಯಾನ್ಸರ್‌ ಭೀತಿಯನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ ಹಾಲು ಬೆರೆಸಿದ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂಬುದು ಸಂಸ್ಥೆಯ ಕಿವಿಮಾತು.

Continue Reading

ಆರೋಗ್ಯ

Nutrition Alert: ಎಳನೀರು ಕುಡಿಯುವುದರಿಂದಲೂ ನಮ್ಮ ದೇಹಕ್ಕೆ ಸೈಡ್‌ ಎಫೆಕ್ಟ್‌ ಇದೆಯೆ?

ಒಂದು ಕಪ್ ಎಳನೀರಿನಲ್ಲಿ ಎಷ್ಟು ಪೋಷ್ಟಿಕಾಂಶ ಇದೆ ಗೊತ್ತೇ? ಎಳನೀರು ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳಿವೆ ಎಂಬುದು ತಿಳಿದಿದೆಯೇ ? ಹೆಚ್ಚು ಎಳನೀರು ಸೇವನೆ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬಿರುವುದು ಎನ್ನುವ ಕುರಿತು ಮಾಹಿತಿ (Nutrition Alert) ಇಲ್ಲಿದೆ.

VISTARANEWS.COM


on

By

Nutrition Alert
Koo

ವ್ಯಾಯಾಮದ ಬಳಿಕ ಸುಸ್ತಾಗಿದ್ದೀರಾ, ಕೂಡಲೇ ರಿಫ್ರೆಶ್ (refreshing beverage) ಆಗಬೇಕು ಎಂದುಕೊಂಡು ಅತ್ಯಧಿಕ ಪೌಷ್ಠಿಕಾಂಶವುಳ್ಳ (Nutrition Alert) ನೈಸರ್ಗಿಕವಾದ ದಾರಿಯನ್ನು ಹುಡುಕುತ್ತಿರುವಾಗ ನೆನಪಿಗೆ ಬರುವುದು ತೆಂಗಿನ ನೀರು (coconut water). ಎಳೆಯ ಹಸಿರು ತೆಂಗಿನಕಾಯಿಗಳಿಂದ ಪಡೆದ ಈ ಪಾನೀಯವು ಇತ್ತೀಚಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ.

ರುಚಿಕರವಾದ ತೆಂಗಿನ ನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣಗೊಳಿಸುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವವರೆಗೆ ಈ ನೈಸರ್ಗಿಕ ಮೂಲವು ದೇಹಕ್ಕೆ ಬೇಕಾದ ಎಲ್ಲ ಶಕ್ತಿಯನ್ನು ತುಂಬಿಸುವ ಮೂಲವಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ತೆಂಗಿನ ನೀರು ಅತ್ಯುತ್ತಮ ಆಯ್ಕೆಯಾಗಿದೆ. ತೆಂಗಿನ ನೀರಿನಲ್ಲಿರುವ ಎಲೆಕ್ಟ್ರೋಲೈಟ್ ಅಂಶವು ಬೆವರುವಿಕೆಯ ಮೂಲಕ ಕಳೆದುಹೋದದ್ದನ್ನು ಪುನಃ ತುಂಬಲು ಸಹಾಯ ಮಾಡುತ್ತದೆ. ಇದು ಹೊರಾಂಗಣ ಚಟುವಟಿಕೆಗಳ ಅನಂತರ ಅಥವಾ ಬಿಸಿ ವಾತಾವರಣದಲ್ಲಿ ವ್ಯಾಯಾಮದ ಬಳಿಕ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಎಳನೀರಿನಲ್ಲಿರುವ ಪೌಷ್ಟಿಕಾಂಶ ಏನೇನು?

240 ಮಿಲಿ (ಒಂದು ಕಪ್) ಎಳನೀರಿನಲ್ಲಿ ಕ್ಯಾಲೋರಿಗಳು ಸುಮಾರು 45 ಕೆ.ಕೆ.ಎಲ್, ಕಾರ್ಬೋಹೈಡ್ರೇಟ್ ಗಳು ಸುಮಾರು 9 ಗ್ರಾಂ, ಸಕ್ಕರೆಗಳು ಪ್ರಾಥಮಿಕವಾಗಿ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಪ್ರೋಟೀನ್ 1 ಗ್ರಾಂಗಿಂತ ಕಡಿಮೆ, ಕೊಬ್ಬು ಅತ್ಯಲ್ಪ, ಸಾಮಾನ್ಯವಾಗಿ 1 ಗ್ರಾಂಗಿಂತ ಕಡಿಮೆ ಸೋಡಿಯಂ ಸುಮಾರು 45 ಮಿಗ್ರಾಂ, ಪೊಟ್ಯಾಸಿಯಮ್ ಸರಿಸುಮಾರು 600 ಮಿಗ್ರಾಂ ಅನ್ನು ಒಳಗೊಂಡಿದೆ. ಸೂಕ್ಷ್ಮ ಪೋಷಕಾಂಶಗಳು, ಸಣ್ಣ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಸಿ ಅನ್ನು ಎಳನೀರು ಹೊಂದಿರುತ್ತದೆ.

ಎಳನೀರಿನಿಂದ ಆರೋಗ್ಯ ಪ್ರಯೋಜನಗಳು ಹಲವು. ಎಳನೀರು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ:

ಹೈಡ್ರೇಶನ್ ಮಾಡುತ್ತದೆ:

ಎಳನೀರು ದೇಹದಲ್ಲಿ ನೀರಿನ ಅಂಶ ಇರುವಂತೆ ಮಾಡುತ್ತದೆ. ಇದು ವ್ಯಾಯಾಮದ ನಂತರ ಅಥವಾ ಬಿಸಿ ವಾತಾವರಣದಲ್ಲಿ ನಿರ್ಜಲೀಕರಣ ದೂರ ಮಾಡುತ್ತದೆ.

ದೇಹಕ್ಕೆ ಚೈತನ್ಯ

ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಅಂಶವು ಬೆವರಿನ ಮೂಲಕ ಕಳೆದುಹೋದ ಚೈತನ್ಯವನ್ನು ಪುನಃ ತುಂಬಲು ಸಹಾಯ ಮಾಡುತ್ತದೆ. ಸ್ನಾಯುಗಳಿಗೆ ಶಕ್ತಿ ತುಂಬುತ್ತದೆ ಮತ್ತು ಸೆಳೆತವನ್ನು ತಡೆಯುತ್ತದೆ.

ರಕ್ತದೊತ್ತಡ ನಿಯಂತ್ರಣ

ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪೊಟ್ಯಾಸಿಯಮ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಧಿಕ ರಕ್ತದೊತ್ತಡದ ಅಪಾಯವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯ

ಕೆಲವು ಅಧ್ಯಯನಗಳು ತೆಂಗಿನ ನೀರಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಗುಣಲಕ್ಷಣಗಳು

ತೆಂಗಿನ ನೀರಿನಲ್ಲಿ ವಿಟಮಿನ್ ಸಿ ನಂತಹ ಉತ್ಕರ್ಷಣ ನಿರೋಧಕಗಳಿವೆ. ಇದು ಸ್ವತಂತ್ರ ರಾಡಿಕಲ್ ಗಳನ್ನು ತಟಸ್ಥಗೊಳಿಸಲು ಮತ್ತು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಧುಮೇಹಿಗಳು ಎಳನೀರು ಸೇವಿಸಬಹುದೇ?

ಅನೇಕ ಹಣ್ಣಿನ ರಸಗಳಿಗೆ ಹೋಲಿಸಿದರೆ ತೆಂಗಿನ ನೀರಿನಲ್ಲಿ ಸಕ್ಕರೆಯ ಅಂಶ ಗಮನಾರ್ಹವಾಗಿ ಕಡಿಮೆಯಿದ್ದರೂ ಇದು ಇನ್ನೂ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ. ಅದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಅದರ ಗ್ಲೈಸೆಮಿಕ್ ಇಂಡೆಕ್ಸ್ (GI) ಹೆಚ್ಚಿನ ಹಣ್ಣಿನ ರಸಗಳು ಮತ್ತು ಸೋಡಾಗಳಿಗಿಂತ ಕಡಿಮೆಯಾಗಿದೆ. ಅಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ನಿಧಾನಗತಿಯ ಏರಿಕೆಗೆ ಕಾರಣವಾಗುತ್ತದೆ. ಎಳನೀರು ಸೇವಿಸುವ ಮಧುಮೇಹಿಗಳು ತಮ್ಮ ಸೇವನೆಯನ್ನು ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು.


ಗರ್ಭಿಣಿಯರಿಗೆ ಇದು ಪ್ರಯೋಜನಕಾರಿಯೇ?

ತೆಂಗಿನ ನೀರು ಅದರ ನಮ್ಮನ್ನು ಹೈಡ್ರೇಟ್ ಮಾಡುವುದರಿಂದ ಮತ್ತು ಇದು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಗರ್ಭಿಣಿಯರಿಗೆ ಪ್ರಯೋಜನಕಾರಿಯಾಗಿದೆ.

ಗರ್ಭಾವಸ್ಥೆಯಲ್ಲಿ, ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆ ಎರಡಕ್ಕೂ ಮುಖ್ಯವಾಗಿದೆ. ತೆಂಗಿನ ನೀರಿನಲ್ಲಿರುವ ಎಲೆಕ್ಟ್ರೋಲೈಟ್‌ಗಳು ನಿರ್ಜಲೀಕರಣವನ್ನು ತಡೆಗಟ್ಟಲು ಮತ್ತು ವಾಕರಿಕೆ ಮತ್ತು ಮಲಬದ್ಧತೆಯಂತಹ ಸಾಮಾನ್ಯ ಗರ್ಭಧಾರಣೆಯ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಅದರ ನೈಸರ್ಗಿಕ ಮಾಧುರ್ಯವು ಸಕ್ಕರೆ ಪಾನೀಯಗಳ ಕಡುಬಯಕೆಗಳನ್ನು ಪೂರೈಸುತ್ತದೆ, ಆರೋಗ್ಯಕರ ಪ್ರಯೋಜನವನ್ನು ಒದಗಿಸುತ್ತದೆ.

ಇದನ್ನೂ ಓದಿ: Healthy Diet: ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ಈ ಸಂಗತಿ ತಿಳಿದುಕೊಂಡಿರಿ

ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಅಲರ್ಜಿಗಳು

ತೆಂಗಿನಕಾಯಿಂದಾಗುವ ಅಲರ್ಜಿಗಳು ವಿರಳವಾಗಿದ್ದರೂ, ಅಲರ್ಜಿಯನ್ನು ಹೊಂದಿರುವ ವ್ಯಕ್ತಿಗಳು ಎಚ್ಚರ ವಹಿಸಬೇಕು. ತೆಂಗಿನ ಉತ್ಪನ್ನಗಳನ್ನು ಸೇವಿಸುವ ಮೊದಲು ಇದರ ಬಗ್ಗೆ ಗಮನ ಹರಿಸಬೇಕು. ಬಹುತೇಕ ಜನರಿಗೆ ಎಳನೀರು ಸೇವನೆಯಿಂದ ಯಾವುದೇ ಅಲರ್ಜಿ ಆಗುವುದಿಲ್ಲ.

ಸಕ್ಕರೆ ಅಂಶ

ತೆಂಗಿನ ನೀರು ನೈಸರ್ಗಿಕ ಸಕ್ಕರೆಗಳನ್ನು ಹೊಂದಿದ್ದರೂ ಇದು ಪ್ಯಾಕೆಟ್ ಜ್ಯೂಸ್ ಗಳಿಗಿಂತ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ. ಆದಾಗ್ಯೂ, ಮಧುಮೇಹಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು.

ಅತಿಯಾದ ಬಳಕೆ

ಅಧಿಕ ಪ್ರಮಾಣದಲ್ಲಿ ತೆಂಗಿನ ನೀರನ್ನು ಕುಡಿಯುವುದರಿಂದ ಹೆಚ್ಚು ಪೊಟ್ಯಾಸಿಯಮ್ ಸಂಗ್ರಹವಾಗುತ್ತದೆ. ಇದು ಹೈಪರ್‌ಕೆಲೆಮಿಯಾಕ್ಕೆ ಕಾರಣವಾಗಬಹುದು. ಹೈಪರ್‌ಕಲೇಮಿಯಾದ ಲಕ್ಷಣಗಳು ಸ್ನಾಯು ದೌರ್ಬಲ್ಯ, ಅನಿಯಮಿತ ಹೃದಯ ಬಡಿತ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೃದಯ ಸ್ತಂಭನಕ್ಕೆ ಕಾರಣವಾಗಿರುವುದರಿಂದ ಮಿತವಾಗಿ ಸೇವಿಸುವುದು ಒಳ್ಳೆಯದು.

Continue Reading
Advertisement
Viral video
ವೈರಲ್ ನ್ಯೂಸ್11 seconds ago

Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Actor Upendra Ajaneesh Visited Hangary To Record Music
ಸ್ಯಾಂಡಲ್ ವುಡ್22 mins ago

Actor Upendra: ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್: ʻUIʼ ಸಿನಿಮಾದ ಬಿಗ್‌ ಅಪ್‌ಡೇಟ್‌!

RCB
ಕ್ರೀಡೆ26 mins ago

RCB: ಅಮೆರಿಕದ ಘಟಿಕೋತ್ಸವದಲ್ಲೂ ಆರ್​ಸಿಬಿಯದ್ದೇ ಹವಾ: ವಿಡಿಯೊ ವೈರಲ್​

Dog Attack in raichur
ರಾಯಚೂರು30 mins ago

Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು

jain monk samadhi sena chikkodi sallekhana
ಚಿಕ್ಕೋಡಿ37 mins ago

Sallekhana: ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಸೇನ ಮುನಿ ಜಿನೈಕ್ಯ

Viral Video
ವೈರಲ್ ನ್ಯೂಸ್43 mins ago

Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Prashant Kishor
Lok Sabha Election 202450 mins ago

Prashant Kishor: ಈ ಬಾರಿ ಮೋದಿಗೆ ಹಿನ್ನಡೆ ಆಗುತ್ತಾ? ಪ್ರಶಾಂತ್ ಕಿಶೋರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Cannes 2024 Sonam Kapoor dubs this outfit the best at Cannes this year
ಬಾಲಿವುಡ್1 hour ago

Cannes 2024: ಇವರ ಫ್ಯಾಷನ್‌ ಮುಂದೆ ಐಶ್ವರ್ಯಾ ರೈ, ಕಿಯಾರಾನೂ ಇಲ್ಲ! ಸೋನಮ್ ಹೊಗಳಿದ್ದು ಯಾರನ್ನ?

cisf soldier death raichur
ಕ್ರೈಂ1 hour ago

Soldier death: ಬಂದೂಕು ಆಕಸ್ಮಿಕವಾಗಿ ಸಿಡಿದು CISF ಯೋಧ ಸಾವು

Viral Video
ವೈರಲ್ ನ್ಯೂಸ್2 hours ago

Viral Video: ಈಜುಕೊಳದಲ್ಲಿ ಭೀಕರ ದುರಂತ; ಸ್ಟಂಟ್‌ ಮಾಡಲು ಹೋಗಿ ಯುವಕನ ಪ್ರಾಣಕ್ಕೆ ಕುತ್ತು-ವಿಡಿಯೋ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌