JDS Pancharatna: ಕ್ಯಾನ್ಸರ್‌ ಪೀಡಿತ ಪತಿಗೆ ನೆರವಾಗುವಂತೆ ಅಂಗಲಾಚಿದ ಮಹಿಳೆ; ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ ಎಚ್‌ಡಿಕೆ - Vistara News

ಕರ್ನಾಟಕ

JDS Pancharatna: ಕ್ಯಾನ್ಸರ್‌ ಪೀಡಿತ ಪತಿಗೆ ನೆರವಾಗುವಂತೆ ಅಂಗಲಾಚಿದ ಮಹಿಳೆ; ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ ಎಚ್‌ಡಿಕೆ

JDS Pancharatna: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರದ ಹೊಸ ದರೋಜಿ ಗ್ರಾಮದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ವೇಳೆ, ಮಹಿಳೆಗೆ ನೆರವಾಗುವ ಭರವಸೆಯನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದಾರೆ.

VISTARANEWS.COM


on

JDS Pancharatna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಪತಿಯನ್ನು ಬದುಕಿಸಿಕೊಡುವಂತೆ ಮಹಿಳೆಯೊಬ್ಬರು ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ಅಂಗಲಾಚಿ, ಕಣ್ಣೀರಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರದ ಹೊಸ ದರೋಜಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜೆಡಿಎಸ್‌ ಪಂಚರತ್ನ ಯಾತ್ರೆ (JDS Pancharatna) ವೇಳೆ ನಡೆಯಿತು. ಈ ವೇಳೆ ಮಹಿಳೆಯ ಕಷ್ಟ ಕಂಡು ವಿಚಲಿತರಾದ ಮಾಜಿ ಸಿಎಂ, ಬೆಂಗಳೂರಿಗೆ ನಿಮ್ಮ ಪತಿಯನ್ನು ಕರೆದುಕೊಂಡು ಬನ್ನಿ, ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಹನುಮಂತಮ್ಮ ಎಂಬುವವರು ಗಂಡ ಕ್ಯಾನ್ಸರ್‌ ಪೀಡಿತರಾಗಿದ್ದು, ನೆರವಾಗುವಂತೆ ಕಣ್ಣೀರಿಡುತ್ತ ಮನವಿ ಮಾಡಿದರು. ಈ ವೇಳೆ ಚಿಕಿತ್ಸೆ ಕೊಡಿಸುವ ಭರವಸೆ ನೀಡುವ ಜತೆಗೆ ಮಹಿಳೆಗೆ ಪತಿಯೊಂದಿಗೆ ಬೆಂಗಳೂರಿಗೆ ಬರಲು ಖರ್ಚಿಗಾಗಿ ಹಣದ ನೆರವು ನೀಡಿ, ಬೆಂಗಳೂರಿಗೆ ತೆರಳಲು ವ್ಯವಸ್ಥೆ ಮಾಡಲು ಸಂಡೂರು ಕ್ಷೇತ್ರದ ಅಭ್ಯರ್ಥಿ ಸೋಮಪ್ಪ ಅವರಿಗೆ ಸೂಚಿಸಿದರು.

ಭೂಮಿ ಕಳೆದುಕೊಂಡ ರೈತರಿಗೆ ನೆರವಿನ ಅಭಯ

ಬಳಿಕ ಕೈಗಾರಿಕೆಗಳಿಗಾಗಿ ಭೂಮಿ ಕಳೆದುಕೊಂಡು ನ್ಯಾಯಕ್ಕಾಗಿ ಸಂಡೂರು ಕ್ಷೇತ್ರದ ಕುಡುತಿನಿ‌ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾದರು. ಈ ವೇಳೇ ಮಾತನಾಡಿದ ಅವರು, ಕೈಗಾರಿಕೆ ಮಾಡುತ್ತೇವೆ ಎಂದು ನಂಬಿಸಿ ಕೆಲ ಪಟ್ಟಭದ್ರರು ಭೂಮಿ ಸ್ವಾಧೀನ ಮಾಡಿ ರೈತರಿಗೆ ಮೋಸ ಮಾಡಿದ್ದಾರೆ. ಭೂಸ್ವಾಧೀನ ಆಗಿ 11 ವರ್ಷಗಳೇ ಕಳೆದರೂ ಇನ್ನೂ ಕೈಗಾರಿಕೆ ಸ್ಥಾಪನೆ ಆಗದಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದ ಕೂಡಲೇ ಈ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮೂಲಸೌಕರ್ಯ ಇಲ್ಲದೆ ಕೆಟ್ಟ ಸ್ಥಿತಿಯಲ್ಲಿ ಜನರಿದ್ದಾರೆ

ಕೃಷ್ಣ ದೇವರಾಯ ಆಳ್ವಿಕೆ ನಡೆಸಿದ ಜಿಲ್ಲೆಯ ಹಳ್ಳಿಗಳಲ್ಲಿ ಮೂಲಸೌಕರ್ಯ ಇಲ್ಲದೆ ಜನರು ಅತ್ಯಂತ ‌ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಕೆಲವರು ಮಣ್ಣು ‌ಮಾರಾಟ ಮಾಡಿ ಆಳ್ವಿಕೆ ‌ನಡೆಸಿದ್ದಾರೆ. ಜನರ ಈ ರೀತಿಯ ಬದುಕಿಗೆ ಕಾರಣವಾದವರ ಬಗ್ಗೆ ಮಾತನಾಡಲು ಇಲ್ಲಿ‌ನ ಸಚಿವರಿಗೆ ಧೈರ್ಯ ಇಲ್ಲ. ಈ ಬಗ್ಗೆ ಚುನಾವಣಾ ‌ಮತ ಪಡೆಯಲು ಬರುವ ರಾಷ್ಟ್ರೀಯ ‌ಪಕ್ಷಗಳ‌ ಶಾಸಕರನ್ನು ಜನತೆ ಪ್ರಶ್ನಿಸಬೇಕು ಎಂದು ಹೇಳಿದರು.

ಬಳ್ಳಾರಿಯ ಶಾಸಕರ ಮನೆಗಳ ಕಾಂಪೌಂಡ್ ಒಳಗಡೆ ಹೋಗಲು ಬಡವರಿಗೆ ಸಾಧ್ಯವಿಲ್ಲ. ವಿಜಯನಗರ ಆನಂದ್‌ ಸಿಂಗ್ ಮನೆ‌ ನೋಡಿದರೆ ಭಯ ಆಗುತ್ತದೆ. ಬಳ್ಳಾರಿಯ ನಿಮ್ಮ ಪ್ರೀತಿಯ ಅಣ್ಣ ಶ್ರೀರಾಮುಲು ಬಡವರಿಗೆ ಏನು ‌ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಸಾಲಮನ್ನಾಗೆ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಎರಡು ಲಕ್ಷ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನಾ ಸೌಕರ್ಯಗಳನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದರು.

ರಸ್ತೆಬದಿಯ ಪುಟ್ಟ ಹೋಟೆಲ್‌ನಲ್ಲಿ ಮಂಡಕ್ಕಿ, ಚಹಾ ಸೇವಿಸಿದ ಕುಮಾರಸ್ವಾಮಿ

ಕುಷ್ಟಗಿಯಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ಮಾರ್ಗದ ನಡುವೆ ಕಂಪ್ಲಿ ತಾಲೂಕಿನ ದೇವಲಾಪುರದ ರಸ್ತೆಬದಿಯ ಪುಟ್ಟ ಹೋಟೆಲಿನಲ್ಲಿ ಕುಮಾರಸ್ವಾಮಿ ಅವರು ಮಂಡಕ್ಕಿ ಹಾಗೂ ಚಹಾ ಸೇವಿಸಿದರು. ಬಳಿಕ ಹೊಟೇಲ್ ಮಾಲೀಕ ನಾಗಪ್ಪ ಕುಟುಂಬದ ಕುಶಲೋಪರಿ ವಿಚಾರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Illicit relationship : ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ

Illicit relationship : ಪ್ರೀತಿಸಿ ಮದುವೆ ಆಗಿದ್ದ ಮಹಿಳೆಯೊಬ್ಬಳು 18 ವರ್ಷಗಳ ನಂತರ ಪರಪುರಷನೊಂದಿಗೆ ಓಡಿ ಹೋಗಿದ್ದಾಳೆ. ಮರ್ಯಾದೆಗೆ ಅಂಜಿದ ಪತಿ ಡೆತ್‌ನೋಟ್‌ (Death Note) ಬರೆದಿಟ್ಟು, ವಿಷ ಕುಡಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

VISTARANEWS.COM


on

By

Illicit relationship
ಮಾಧವಿ, ಆನಂದ್‌ ಪರಾರಿಯಾದವರು ಹಾಗೂ ದೇವರಾಜ್‌ ಮೃತದುರ್ದೈವಿ
Koo

ತುಮಕೂರು: ಗಂಡ ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬಳು ಪರ ಪುರುಷನೊಂದಿಗೆ (Illicit relationship) ಓಡಿ ಹೋಗಿದ್ದಾಳೆ. ಮರ್ಯಾದೆಗೆ ಅಂಜಿದ ಪತಿ ವಿಷ ಕುಡಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ದೇವರಾಜ್ ಮೃತ ದುರ್ದೈವಿ. ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ಘಟನೆ ನಡೆದಿದೆ.

ದೇವರಾಜ್‌ ಹಾಗೂ ಮಾಧವಿ ಇಬ್ಬರು ಪ್ರೀತಿಸಿ 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪರ ಪುರುಷನ ಮೇಲೆ ವ್ಯಾಮೋಹಕ್ಕೆ ಸಿಲುಕಿದ ಮಾಧವಿ, ಹೊಸಹಳ್ಳಿ ಗ್ರಾಮದ ಆನಂದ್ ಕುಮಾರ್ ಎಂಬಾತನೊಟ್ಟಿಗೆ ಪರಾರಿ ಆಗಿದ್ದಾಳೆ.

ಪರ ಪುರುಷನೊಂದಿಗೆ ಪತ್ನಿ ಓಡಿ ಹೋದ ಸುದ್ದಿ ತಿಳಿದ ದೇವರಾಜ್‌ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್‌ನಲ್ಲಿ ಪ್ರಧಾನಿ ಮೋದಿ, ಕುಮಾರಸ್ವಾಮಿ, ಡಿಸಿ-ಎಸ್ಪಿಗೆ ನನ್ನ ಸಾವಿಗೆ ನ್ಯಾಯಕೊಡಿಸಿ ಎಂದು ದೇವರಾಜ್‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Road Accident : ಪಾದಚಾರಿ ಬಲಿ ಪಡೆದು ಎಸ್ಕೇಪ್‌ ಆದ ಬಸ್‌ ಚಾಲಕ; ಬಾಲಕಿಗೆ ಗುದ್ದಿ ಪ್ರಾಣ ಕಸಿದ ಲಾರಿ

ಮಾಧವಿಯನ್ನು 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ಹೊಸಹಳ್ಳಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೆ. ನಮಗೆ 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗಿರುವಾಗ ಪ್ರತಿ ನಿತ್ಯ ಅಂಗಡಿಯ ಬಳಿ ಬರುತ್ತಿದ್ದ ಆನಂದ್ ಕುಮಾರ್, ಈ ವೇಳೆ ಮಾಧವಿಯೊಂದಿಗೆ ಸಲುಗೆ ಬೆಳೆಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಪರಾರಿ ಆಗಿದ್ದಾನೆ ಎಂದು ಬರೆದಿದ್ದಾರೆ.

ಪತ್ನಿ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ದೇವರಾಜ್, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟು, ತನಗೆ ಆನಂದ್‌ನಿಂದ ಜೀವ ಬೆದರಿಕೆ ಹಾಕಿದ್ದ ಎಂದು ಉಲ್ಲೇಖಿಸಿದ್ದಾರೆ. ಇಬ್ಬರಿಗೂ ತಕ್ಕ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಾಧವಿ, ಆನಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪ ಮೇಲೆ ದೂರು ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಮಾಧವಿ, ಆನಂದ್ ತಲೆಮರೆಸಿಕೊಂಡಿದ್ದಾರೆ. ಇತ್ತ ತಾಯಿ ಇಲ್ಲದೇ ತಂದೆಯನ್ನು ಕೆಳದುಕೊಂಡ ಇಬ್ಬರು ಹೆಣ್ಮಕ್ಕಳು ತಬ್ಬಲಿಗಳಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಯಚೂರು

Road Accident : ಪಾದಚಾರಿ ಬಲಿ ಪಡೆದು ಎಸ್ಕೇಪ್‌ ಆದ ಬಸ್‌ ಚಾಲಕ; ಬಾಲಕಿಗೆ ಗುದ್ದಿ ಪ್ರಾಣ ಕಸಿದ ಲಾರಿ

Road Accident : ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದ್ದು, ಸಾವು-ನೋವು ಸಂಭವಿಸಿದೆ. ರಾಯಚೂರಲ್ಲಿ ಪಾದಚಾರಿ ಮೇಲೆ ಬಸ್‌ ಹರಿದು ಮೃತಪಟ್ಟರೆ, ಬಾಗಲಕೋಟೆಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಬಾಲಕಿಯೊಬ್ಬಳು ಅಸುನೀಗಿದ್ದಾಳೆ.

VISTARANEWS.COM


on

By

road Accident
Koo

ರಾಯಚೂರು/ಬಾಗಲಕೋಟೆ: ರಾಯಚೂರಲ್ಲಿ ಪಾದಚಾರಿ ಮೇಲೆ ಬಸ್ ಹರಿದು ವ್ಯಕ್ತಿಯೊಬ್ಬರು (Road Accident) ದಾರುಣವಾಗಿ ಮೃತಪಟ್ಟಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಂಕುಶದೊಡ್ಡಿ ಗ್ರಾಮದ ನಿವಾಸಿ ಸಿದ್ದಪ್ಪ (22)ಮೃತ ದುರ್ದೈವಿ.

ಸಿದ್ದಪ್ಪ ಹೆದ್ದಾರಿ ರೋಡ್ ಕ್ರಾಸ್ ಮಾಡಿ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್‌ವೊಂದು ಸಿದ್ದಪ್ಪನಿಗೆ ಗುದ್ದಿದ್ದು, ಕೆಳಗೆ ಬಿದ್ದವನ ಮೇಲೆ ಹರಿದಿದೆ. ಅಪಘಾತದ ಬಳಿಕ ಬಸ್ ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ರೊಚ್ಚಿಗೆದ್ಧ ಗ್ರಾಮಸ್ಥರು ಬಸ್‌ ಅನ್ನು ಹಿಂಬಾಲಿಸಿಕೊಂಡು ಹೋಗಿ ಮಸ್ಕಿಯಲ್ಲಿ ತಡೆದಿದ್ದಾರೆ.

ಸದ್ಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬಸ್‌ ಚಾಲಕನನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸಲಾಗುತ್ತಿದೆ.

ಬೈಕ್‌ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಅಸುನೀಗಿದ ಬಾಲಕಿ

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಗ್ಗಲಮರಿ ಕ್ರಾಸ್‌ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಾಲಕಿಯೊಬ್ಬಳು ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗುಗ್ಗಲಮರಿ ಗ್ರಾಮದ ನಿವಾಸಿ ರಾಗಿಣಿ ದುರಗಪ್ಪ ಹುಣಸ್ಯಾಳ (11) ಮೃತ ದುರ್ದೈವಿ. ಬೈಕ್‌ನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿದ್ದ ಇಬ್ಬರು ತಾಲ್ಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಇಳಕಲ್ ಪೊಲೀಸ್‌ ಠಾಣೆಯ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇಳಕಲ್ಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Urvashi Rautela: ನಟಿ ಊರ್ವಶಿ ರೌಟೇಲಾ ಬಟ್ಟೆ ಬಿಚ್ಚಿ, ಸ್ನಾನ ಮಾಡುವ ವಿಡಿಯೊ ಲೀಕ್‌!

ದೊಡ್ಡಬಳ್ಳಾಪುರದಲ್ಲಿ ದ್ರಾಕ್ಷಿ ತುಂಬಿದ್ದ ಕ್ಯಾಂಟರ್ ಪಲ್ಟಿ

ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ಮಧುರನಹೊಸಹಳ್ಳಿ ಗೇಟ್ ಬಳಿ ದ್ರಾಕ್ಷಿ ತುಂಬಿದ್ದ ಕ್ಯಾಂಟರ್‌ ವಾಹನವೊಂದು ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಯಾಂಟರ್ ಪಕ್ಟಿ ಹೊಡೆದ ಕಾರಣದಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಕ್ರೈನ್ ಮೂಲಕ ಕ್ಯಾಂಟರ್ ತೆರವುಗೊಳಿಸಿದ್ದರು. ಇನ್ನೂ ರಸ್ತೆ ತುಂಬೆಲ್ಲ ಚೆಲ್ಲಾಡಿದ್ದ ದ್ರಾಕ್ಷಿಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಯಿತು. ದೊಡ್ಡಬೆಳವಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಬಸ್‌ ಡಿಕ್ಕಿ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಇಳಿದ ಸಾರಿಗೆ ಬಸ್‌ವೊಂದು ಸೇತುವೆಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಎಲ್ಲರೂ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಣಿಗನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ಆಲೂರಿನಿಂದ ಪುರಭೈರವನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಹಾಸನ ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ ಮಳೆಯಿಂದ ನಿಯಂತ್ರಣಕ್ಕೆ ಸಿಗದೆ ಹಳ್ಳಕ್ಕೆ ಇಳಿದಿದೆ. ಸದ್ಯ ಪ್ರಯಾಣಿಕರನ್ನು ಬೇರೆ ವಾಹನಗಳಲ್ಲಿ ಕಳುಹಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Karnataka Jobs Reservation: ಉರಿವ ಮನೆಯಿಂದ ಗಳ ಹಿರಿದ ಆಂಧ್ರಪ್ರದೇಶ; ʼನಮ್ಮಲ್ಲಿಗೇ ಬನ್ನಿʼ ಎಂದು ಖಾಸಗಿ ಉದ್ಯಮಗಳಿಗೆ ಭಿಕ್ಷಾಪಾತ್ರೆ ಒಡ್ಡಿದ ಸಚಿವ

Karnataka Jobs Reservation: ಕರ್ನಾಟಕ ಸರಕಾರದ ನಿಲುವಿನ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಾಸ್ಕಾಂ ಸಂಘಟನೆಯ ಟ್ವೀಟ್‌ ಅನ್ನು ಶೇರ್‌ ಮಾಡಿರುವ ಆಂಧ್ರಪ್ರದೇಶ ಮಾನವ ಸಂಪನ್ಮೂಲ ಇಲಾಖೆ ಸಚಿವ ಲೋಕೇಶ್‌ ನಾರಾ, ʼನಮ್ಮಲ್ಲಿಗೆ ಬನ್ನಿʼ ಎಂದು ಖಾಸಗಿ ಕಂಪನಿಗಳಿಗೆ ಕರೆ ನೀಡಿದ್ದಾರೆ.

VISTARANEWS.COM


on

Karnataka Jobs Reservation
Koo

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಮೀಸಲು (Karnataka Jobs Reservation) ಕಡ್ಡಾಯ ಮಾಡುವ ಕುರಿತು ರಾಜ್ಯ ಸರ್ಕಾರದ (Karnataka Government) ನಿಲುವಿನಿಂದಾಗಿ ಸೃಷ್ಟಿಯಾದ ಗೊಂದಲದ ನಡುವೆ, ʼಉರಿಯುವ ಮನೆಯಲ್ಲಿ ಗಳ ಹಿರಿದರುʼ ಎಂಬಂತೆ ಲಾಭ ಮಾಡಿಕೊಳ್ಳಲು ಆಂಧ್ರಪ್ರದೇಶ (Andhra Pradesh) ಮುಂದಾಗಿದೆ.

ಕರ್ನಾಟಕ ಸರಕಾರದ ನಿಲುವಿನ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಾಸ್ಕಾಂ ಸಂಘಟನೆಯ ಟ್ವೀಟ್‌ ಅನ್ನು ಶೇರ್‌ ಮಾಡಿರುವ ಆಂಧ್ರಪ್ರದೇಶ ಮಾನವ ಸಂಪನ್ಮೂಲ ಇಲಾಖೆ ಸಚಿವ ಲೋಕೇಶ್‌ ನಾರಾ, ʼನಮ್ಮಲ್ಲಿಗೆ ಬನ್ನಿʼ ಎಂದು ಖಾಸಗಿ ಕಂಪನಿಗಳಿಗೆ ಕರೆ ನೀಡಿದ್ದಾರೆ.

“ನಿಮ್ಮ ನಿರಾಶೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ವೈಜಾಗ್‌ನಲ್ಲಿರುವ ನಮ್ಮ IT, IT ಸೇವೆಗಳು, AI ಮತ್ತು ಡೇಟಾ ಸೆಂಟರ್ ಕ್ಲಸ್ಟರ್‌ಗೆ ನಿಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಳಾಂತರಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ನಾವು ನಿಮಗೆ ಅತ್ಯುತ್ತಮ ದರ್ಜೆಯ ಸೌಲಭ್ಯಗಳು, ತಡೆರಹಿತ ವಿದ್ಯುತ್, ಮೂಲಸೌಕರ್ಯ ಮತ್ತು ನಿಮ್ಮ ಐಟಿ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ನಿರ್ಬಂಧಗಳಿಲ್ಲದೆ ಅತ್ಯಂತ ಸೂಕ್ತವಾದ ಕೌಶಲ್ಯಭರಿತ ಪ್ರತಿಭೆಗಳನ್ನು ನೀಡುತ್ತೇವೆ. ಆಂಧ್ರಪ್ರದೇಶ ನಿಮ್ಮನ್ನು ಸ್ವಾಗತಿಸಲು ಸಿದ್ಧವಾಗಿದೆ. ದಯವಿಟ್ಟು ಸಂಪರ್ಕದಲ್ಲಿರಿ!” ಎಂದು ನಾರಾ ಟ್ವೀಟ್‌ ಮಾಡಿದ್ದಾರೆ.

“ಕರ್ನಾಟಕದ ಜಿಡಿಪಿಗೆ ಖಾಸಗಿ ಉದ್ಯಮ ವಲಯ 25% ಕೊಡುಗೆ ನೀಡುತ್ತಿದೆ. ಆದರೆ ಕೌಶಲ್ಯಭರಿತ ಉದ್ಯೋಗಿಗಳ ಕೊರತೆಯಿದೆ. ಇಂಥ ಕಾನೂನು ತಂದರೆ ಉದ್ಯಮ ನಡೆಸುವುದು ಕಷ್ಟವಾಗಲಿದ್ದು, ಉದ್ಯಮಿಗಳು ಬೇರೆ ಕಡೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ” ಎಂದು ಔದ್ಯಮಿಕ ಒಕ್ಕೂಟ ನಾಸ್ಕಾಮ್‌ (NASSCOM) ಎಚ್ಚರಿಕೆ ನೀಡಿತ್ತು.

ಸರ್ಕಾರದ ನಿಲುವಿಗೆ ಬಿವೈ ವಿಜಯೇಂದ್ರ ಖಂಡನೆ

ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಒದಗಿಸುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲು ಬಗ್ಗೆ ವಿಧೇಯಕ ತಡೆಹಿಡಿದ ಸರಕಾರದ ಕ್ರಮವನ್ನು ಅವರು ಟೀಕಿಸಿದ್ದಾರೆ. ಈ ಬಗ್ಗೆ ಅವರು ʼಎಕ್ಸ್‌ʼನಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ? ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ?” ಎಂದು ಅವರು ಪ್ರಶ್ನಿಸಿದ್ದಾರೆ. “ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಖಂಡಿಸುವೆ” ಎಂದಿದ್ದಾರೆ.

“ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು ‘ಎಂದು ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ? ಮುಖ್ಯಮಂತ್ರಿಗಳು ಈ ಕುರಿತು ತಮ್ಮ X ಖಾತೆಯಲ್ಲಿ ಮೂರು ಬಾರಿ ‘ಯೂ ಟರ್ನ್ ಹೊಡೆದು’ ಕೊನೆಗೂ ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ಅಂಜುಬುರುಕ ನಿರ್ಧಾರದ ಹಿಂದೆ ನಾಡಿನ ಆತ್ಮ ಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ”

“ಇಂಡಿ ಕೂಟದಲ್ಲಿ ಯಾವಾಗ ಬಿರುಕು ಮೂಡುತ್ತದೋ ಎಂಬ ಭೀತಿಯಲ್ಲಿರುವ ದೆಹಲಿಯ ದೊಡ್ಡ ‘ಕೈ’ ಮುಖ್ಯಮಂತ್ರಿಗಳ ಕೈ ಕಟ್ಟಿಹಾಕಿರಲೇಬೇಕು, ಇಲ್ಲದಿದ್ದರೇ ಕನ್ನಡಿಗರ ಬದುಕು ಹಸನಾಗಿಸುವ ವಿಧೇಯಕವನ್ನು ಬದಿಗೆ ಸರಿಸುವ ಪಲಾಯನವಾದಿ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ? ಸದ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಮುತ್ತಿರುವ ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದ ತತ್ತರಿಸಿರುವ ಕಾಂಗ್ರೆಸ್ ತನ್ನ ಮುಖ ಮುಚ್ಚಿಕೊಳ್ಳಲು ಹಗರಣದ ಚರ್ಚೆ ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸಲು ಹಾಗೂ ಜನರ ಗಮನ ವಿಚಲಿತಗೊಳಿಸುವ ಕುತಂತ್ರದಿಂದ ಕನ್ನಡ ಪರ ವಿಧೇಯಕವನ್ನು ತಡೆಹಿಡಿದು ಗುರಾಣಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದರೆ ರಾಜ್ಯದ ಜನತೆ ಕಾಂಗ್ರೆಸ್ಸಿಗರನ್ನು ಎಂದಿಗೂ ಕ್ಷಮಿಸರು.”

“ವಿಧೇಯಕದ ಕುರಿತು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಬೀಗಿದ್ದ ಸಚಿವರುಗಳು ಹಾಗೂ ಕಾಂಗ್ರೆಸ್ ಮುಖಂಡರು ಕೆಲವೇ ಸಮಯದ ಅಂತರದಲ್ಲಿ ನಾಡ ಜನರ ಬಗೆಗಿನ ಐತಿಹಾಸಿಕ ವಿಧೇಯಕ ಹಿಂತೆಗೆದುಕೊಂಡ ಬಗ್ಗೆ ಸಮಸ್ತ ಕನ್ನಡ ಜನತೆಯ ಮುಂದೆ ತಲೆ ಎತ್ತಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಅರ್ಹತೆ ಇದ್ದರೂ ಉದ್ಯೋಗಾವಕಾಶಗಳಿಂದ ವಂಚಿತರಾಗಿ ಹತಾಶೆಗೊಳಗಾಗಿದ್ದ ಗ್ರಾಮೀಣ ಭಾಗದ ಲಕ್ಷಾಂತರ ನಿರುದ್ಯೋಗಿಗಳಿಗೆ ಭರವಸೆಯ ಬೆಳಕು ಮೂಡಿಸಿದ್ದ ಕನ್ನಡಿಗರ ಉದ್ಯೋಗ ಮೀಸಲಾತಿಯ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸಲಿ, ಇಲ್ಲವೇ ಕನ್ನಡಿಗರ ಆಕ್ರೋಶ ಎದುರಿಸಲು ಸಿದ್ದವಾಗಲಿ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Karnataka Jobs Reservation : ಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮೀಸಲಾತಿ ಮಸೂದೆಗೆ ತಾತ್ಕಾಲಿಕ ತಡೆ; ಉದ್ಯಮಿಗಳ ಒತ್ತಡ?

Continue Reading

ಪ್ರಮುಖ ಸುದ್ದಿ

Karnataka Assembly Live: ವಾಲ್ಮೀಕಿ ಹಗರಣದ ಆರೋಪಗಳಿಗೆ ಇಂದು ಸಿಎಂ ಉತ್ತರ; ವಿಧಾನಮಂಡಲ ಕಲಾಪ ಲೈವ್‌ ಇಲ್ಲಿದೆ

Karnataka Assembly Live: ವಾಲ್ಮೀಕಿ ನಿಗಮ ಹಗರಣ (Valmiki Corporation Live) ಕುರಿತು ಪ್ರತಿಪಕ್ಷದ ಆರೋಪಗಳಿಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡಲಿದ್ದಾರೆ. ಇದರ ಜೊತೆಗೆ, ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಮೀಸಲು ವಿಧೇಯಕದ (Karnataka jobs reservation) ಕುರಿತು ಸರ್ಕಾರ ನಿಲುವು ಹಾಗೂ ನಡೆ ಚರ್ಚೆಗೆ ಗ್ರಾಸವಾಗಲಿದೆ.

VISTARANEWS.COM


on

vidhana sabha karnataka assembly live
Koo

ಬೆಂಗಳೂರು: ಸೋಮವಾರ ಆರಂಭವಾಗಿದ್ದ ವಿಧಾನಮಂಡಲ ಅಧಿವೇಶನ (Karnataka Assembly Live) ಇಂದು ಮತ್ತೆ ಮುಂದುವರಿಯಲಿದೆ. ಬುಧವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ಕಲಾಪಗಳಿಗೆ (Assembly Session) ವಿರಾಮ ನೀಡಲಾಗಿತ್ತು. ಇಂದು ಬೆಳಗ್ಗೆ ಅಧಿವೇಶನ ಮತ್ತೆ ಆರಂಭವಾಗಲಿದ್ದು, ವಾಲ್ಮೀಕಿ ನಿಗಮ ಹಗರಣ (Valmiki Corporation Live) ಕುರಿತು ಪ್ರತಿಪಕ್ಷದ ಆರೋಪಗಳಿಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಉತ್ತರ ನೀಡಲಿದ್ದಾರೆ. ಇದರ ಜೊತೆಗೆ, ಕನ್ನಡಿಗರಿಗೆ ಖಾಸಗಿ ಉದ್ಯಮದಲ್ಲಿ ಮೀಸಲು ವಿಧೇಯಕದ (Karnataka jobs reservation) ಕುರಿತು ಸರ್ಕಾರ ನಿಲುವು ಹಾಗೂ ನಡೆ ಚರ್ಚೆಗೆ ಗ್ರಾಸವಾಗಲಿದೆ.

ಸೋಮವಾರ ಸಂವಿಧಾನದ ಪೀಠಿಕೆ ಓದು ಹಾಗೂ ಈ ನಡುವೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯೊಂದಿಗೆ ಕಲಾಪ ಆರಂಭವಾಗಿತ್ತು. ನಂತರ ಪ್ರತಿಪಕ್ಷಗಳ ಬೇಡಿಕೆಯಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಕುರಿತು ಚರ್ಚೆಗೆ ಸ್ಪೀಕರ್‌ ಅವಕಾಶ ನೀಡಿದ್ದರು. ಇದರ ನಂತರ ಸೋಮವಾರ ಹಾಗೂ ಮಂಗಳವಾರ ವಿಧಾನಸಭೆ ಕಲಾಪ ಗದ್ದಲದ ಗೂಡಾಗಿತ್ತು. ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ಈ ಬಗ್ಗೆ ಸುದೀರ್ಘವಾಗಿ ಮಾತನಾಡಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಜೋರಾದ ಮಾತಿನ ಚಕಮಕಿ ನಡೆದಿತ್ತು. ಸ್ಪೀಕರ್‌ ಹಲವು ಬಾರಿ ಕಲಾಪವನ್ನು ಮುಂದೂಡಿದ್ದರು. ʼಮುಖ್ಯಮಂತ್ರಿಗಳು ನೈತಿಕ ಹೊನೆ ಹೊತ್ತು ರಾಜೀನಾಮೆ ನೀಡಬೇಕುʼ ಎಂದು ಅಶೋಕ್‌ ಆಗ್ರಹಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್‌, ಎಂಬಿ ಪಾಟೀಲ್‌ ಮುಂತಾದವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದರು. ಅಶೋಕ್‌ ಅವರ ಮಾತು ಹಾಗೂ ಚಕಮಕಿಯ ಬಳಿಕ ಕಲಾಪದ ಅವಧಿ ಮುಗಿದದ್ದರಿಂದ ಸಿಎಂ ಇಂದು ಸದನದಲ್ಲಿ ಉತ್ತರ ನೀಡಬೇಕಾಗಿದೆ.

ವಿರೋಧ ಪಕ್ಷದವರ ಎಂಟತ್ತು ಗಂಟೆಗಳ ಆರೋಪ, ದಾಳಿ, ಆಕ್ರೋಶದ ನುಡಿಗಳನ್ನು ಬಹುತೇಕ ಎಲ್ಲವನ್ನೂ ಅಡ್ಡಿ ಪಡಿಸದೆ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಆಲಿಸಿದರು. ವಾಲ್ಮೀಕಿ ನಿಗಮ ಪ್ರಕರಣದ ವಿರೋಧ ಪಕ್ಷದವರ ಎಲ್ಲಾ ಆರೋಪ ಮತ್ತು ಮಾತುಗಳಿಗೆ ಮುಖ್ಯಮಂತ್ರಿಗಳು ಗುರುವಾರ ಉತ್ತರ ನೀಡಲಿದ್ದಾರೆ.

ಈ ನಡುವೆ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲು ಒಸಗಿಸುವ ಬಗ್ಗೆ ವಿಧೇಯಕ ರೂಪಿಸಲು ಸರ್ಕಾರ ಮುಂದಾಗಿತ್ತು. ಶೇ. 100 ಉದ್ಯೋಗ ಮೀಸಲು ಇಡಬೇಕು ಎಂದು ಕ್ಯಾಬಿನೆಟ್‌ನಲ್ಲಿ ನಿರ್ಣಯವಾಗಿದೆ ಎಂದು ಸಿಎಂ ಟ್ವೀಟ್‌ ಮಾಡಿದ್ದರು. ಇದಕ್ಕೆ ಖಾಸಗಿ ಉದ್ಯಮಿಗಳಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ನಂತರ ಟ್ವೀಟ್‌ ಡಿಲೀಟ್‌ ಮಾಡಿದ್ದ ಸಿಎಂ, ಬಳಿಕ ʼಶೇ.75 ಉದ್ಯೋಗ ಮೀಸಲುʼ ಎಂದಿದ್ದರು. ಇದಕ್ಕೂ ವಿರೋಧ ಬಂದಿತ್ತು. ಇದಾದ ಬಳಿಕ ʼಸದ್ಯ ಈ ವಿಧೇಯಕವನ್ನು ತಡೆಹಿಡಿಯಲಾಗಿದೆʼ ಎಂದು ಸರಕಾರ ಹೇಳಿದೆ.

ಸರಕಾರದ ಈ ಯುಟರ್ನ್‌ ಅನ್ನು ವಿಪಕ್ಷ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈ ಬಗ್ಗೆ ಟ್ವೀಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ʼವಾಲ್ಮೀಕಿ ಹಗರಣ ವಿಚಾರದಲ್ಲಿ ಸರಕಾರಕ್ಕೆ ಆಗುತ್ತಿರುವ ಮುಖಭಂಗ ತಪ್ಪಿಸಲು, ಗಮನವನ್ನು ಬೇರೆಡೆಗೆ ಸೆಳೆಯಲು ಇದನ್ನು ಮಾಡಲಾಗಿದೆ. ಆದರೆ ಸಿಎಂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲʼ ಎಂದು ವಿಪಕ್ಷ ನಾಯಕ ಅಶೋಕ್‌ ಗುಡುಗಿದ್ದಾರೆ. ಹೀಗಾಗಿ, ಕಲಾಪದಲ್ಲಿ ಈ ವಿಚಾರವನ್ನು ಬಿಜೆಪಿ ಎತ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆಯಾ ಎಂಬ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: Karnataka Assembly Live: ವಾಲ್ಮೀಕಿ ಹಗರಣ ಚರ್ಚೆಯ ನಡುವೆ ಗದ್ದಲ ಸೃಷ್ಟಿಸಿದ ರೇವಣ್ಣ ಪ್ರಕರಣ; ರೊಚ್ಚಿಗೆದ್ದ ರೇವಣ್ಣ

Continue Reading
Advertisement
Olympic Medals
ಕ್ರೀಡೆ30 seconds ago

Olympic Medals: ಒಲಿಂಪಿಕ್ಸ್​ ವಿಜೇತರಿಗೆ ನೀಡುವ ಚಿನ್ನದ ಪದಕ ಚಿನ್ನದ್ದಲ್ಲ!

Jaahnavi Kandula
ವಿದೇಶ57 seconds ago

Jaahnavi Kandula: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್ ವಜಾ

Illicit relationship
ತುಮಕೂರು3 mins ago

Illicit relationship : ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ

Bigg Boss Kannada 11 Starting Date And Contestants List
ಬಿಗ್ ಬಾಸ್11 mins ago

Bigg Boss Kannada: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಯಾವಾಗಿನಿಂದ ಶುರು? ಸ್ಪರ್ಧಿಗಳು ಇವರೇನಾ?

Pralhad Joshi
ದೇಶ32 mins ago

Pralhad Joshi: ಉಚಿತ ಅಕ್ಕಿ ವಿತರಣೆಯ ಪಿಎಂ ಗರೀಬ್ ಕಲ್ಯಾಣ್‌ ಅನ್ನ ಯೋಜನೆ 2029ರ ವರೆಗೆ ವಿಸ್ತರಣೆ: ಪ್ರಲ್ಹಾದ ಜೋಶಿ

Kannada New Movie life of mradula song out
ಸ್ಯಾಂಡಲ್ ವುಡ್44 mins ago

Kannada New Movie: ಹೊಸಬರ ತಂಡ ಸಿದ್ದಪಡಿಸಿರುವ ಹೊಸತನದ ಸಿನಿಮಾ; ಲೈಫ್ ಆಫ್ ಮೃದುಲ ಹಾಡು ಬಿಡುಗಡೆ!

road Accident
ರಾಯಚೂರು49 mins ago

Road Accident : ಪಾದಚಾರಿ ಬಲಿ ಪಡೆದು ಎಸ್ಕೇಪ್‌ ಆದ ಬಸ್‌ ಚಾಲಕ; ಬಾಲಕಿಗೆ ಗುದ್ದಿ ಪ್ರಾಣ ಕಸಿದ ಲಾರಿ

Paris Olympics 2024
ಕ್ರೀಡೆ50 mins ago

Paris Olympics 2024: ಈ ಬಾರಿ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಭಾರತದ 117 ಕ್ರೀಡಾಳುಗಳು; ಅಥ್ಲೆಟಿಕ್ಸ್​ ದೊಡ್ಡ ತಂಡ

Urvashi Rautela bathroom video leak on social media
ಸಿನಿಮಾ1 hour ago

Urvashi Rautela: ನಟಿ ಊರ್ವಶಿ ರೌಟೇಲಾ ಬಟ್ಟೆ ಬಿಚ್ಚಿ, ಸ್ನಾನ ಮಾಡುವ ವಿಡಿಯೊ ಲೀಕ್‌!

United Nations
ವಿದೇಶ1 hour ago

United Nations: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿ; ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ5 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌