Kannada New Movie: ಇದು ʼಎʼ ಅಲ್ಲ ʼಬಿʼ ಅಲ್ಲ 'ಸಿ' ಸಾಂಗ್‌! ಹಾಡು ರಿಲೀಸ್‌ ಮಾಡಿದ ಲೂಸ್ ಮಾದ - Vistara News

ಕರ್ನಾಟಕ

Kannada New Movie: ಇದು ʼಎʼ ಅಲ್ಲ ʼಬಿʼ ಅಲ್ಲ ‘ಸಿ’ ಸಾಂಗ್‌! ಹಾಡು ರಿಲೀಸ್‌ ಮಾಡಿದ ಲೂಸ್ ಮಾದ

Kannada New Movie: ‘ಸಿ’ ಸಿನಿಮಾದಿಂದ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಈ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಇದು ಕಿರಣ್ ಸುಬ್ರಮಣಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದ್ದು, ಕಿರಣ್ ನಿರ್ದೇಶನದ ಜತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

VISTARANEWS.COM


on

C Kannada movie release on August 23
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʼಸಿʼ ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾ. ಚಂದನವನದಲ್ಲಿ ಒಂದೇ ಅಕ್ಷರದ ಸಿನಿಮಾಗಳು ತೀರಾ ಅಪರೂಪ. ಇದೀಗ ಹೊಸಬರ ತಂಡವೊಂದು ‘ಸಿ’ ಎನ್ನುವ ಒಂದೇ ಅಕ್ಷರದ ಟೈಟಲ್ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಒಂದೇ ಅಕ್ಷರದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ (Kannada New Movie) ಈಗಾಗಲೇ ಟೀಸರ್ ಮತ್ತು ಕಂದಾ ಕಂದಾ ಎನ್ನುವ ಹಾಡಿನ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದರ ಜತೆಗೆ ಸಿ ಸಿನಿಮಾಗೆ ನಟ ಯೋಗಿ ಮತ್ತು ಖ್ಯಾತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ಬೆಂಬಲ ಕೂಡ ಸಿಕ್ಕಿದೆ‌.

ಅಂದಹಾಗೆ ‘ಸಿ’ ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ ಸಿನಿಮಾ. ಕಿರಣ್ ನಿರ್ದೇಶನದ ಜತೆಗೆ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾದಿಂದ ‘ಇದು ಎ ಅಲ್ಲ ಬಿ ಅಲ್ಲ ಸಿ…’ ಎನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿದ್ದಾರೆ. ಈ ಹಾಡಿಗೆ ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

ವಿಶೇಷ ಎಂದರೆ ಈ ಹಾಡನ್ನು ಲೂಸ್ ಮಾದ ಖ್ಯಾತಿಯ ನಟ ಯೋಗಿ ರಿಲೀಸ್ ಮಾಡಿದ್ದಾರೆ. ಹಾಡಿನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಯೋಗಿ ಹೊಸ ಸಿನಿಮಾ ತಂಡದ ಬೆನ್ನಿಗೆ ನಿಂತಿರುವುದು ಸಿ ಚಿತ್ರತಂಡಕ್ಕೆ ಖುಷಿ ತಂದಿದೆ. ಇನ್ನು ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಕೂಡ ಸಿ ಸಿನಿಮಾದ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾಗೆ ಒಳ್ಳೆದಾಗಲಿ, ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಅವರು ಹಾರೈಸಿದ್ದಾರೆ.

‘ಸಿ’ ಚಿತ್ರವು ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಬಗ್ಗೆ ಇದೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ಅಪ್ಪ ಎಷ್ಟೆಲ್ಲ ಕಷ್ಟ ಪಡುತ್ತಾರೆ, ಮಗಳಿಗಾಗಿ ಅಪ್ಪನ ಹೋರಾಟದ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಿರಣ್ ಸುಬ್ರಮಣಿ.

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಸಿ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಇದನ್ನೂ ಓದಿ: Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

ಸಿ ಸಿನಿಮಾ ತಂದೆ- ಮಗಳ ಬಾಂಧವ್ಯದ ಜತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿ ಸಿನಿಮಾ ಆಗಸ್ಟ್‌ 23ಕ್ಕೆ ತೆರೆಗೆ ಬರುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

Karnataka Weather Forecast : ಸುಳಿಗಾಳಿ ಎಫೆಕ್ಟ್‌ನಿಂದಾಗಿ ರಭಸವಾಗಿ ಬೀಸುವ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಮತ್ತೆ ಮಳೆ ಅವಾಂತರಗಳು ಮುಂದುವರಿದಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು/ಬೆಳಗಾವಿ: ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಆಗಸ್ಟ್ 9 ರವರೆಗೆ ರಾಜ್ಯಾದ್ಯಂತ ಭಾರಿ ಮಳೆಯಾಗುವ (Karnataka Weather Forecast) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಿನ್ನೆ ಸೋಮವಾರ ಸುರಿದ ಮಳೆಗೆ (Heavy Rain) ಹಲವೆಡೆ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮಕ್ಕೆ ಹೊಂದಿಕೊಂಡಿರೋ ಹುಲಿಕೆರೆ ಹಿನ್ನೀರಿನಲ್ಲಿ ವಿದ್ಯಾರ್ಥಿಗಳು ಪರದಾಟ ಅನುಭವಿಸುತ್ತಿದ್ದಾರೆ. ಚೂರು ಆಯ ತಪ್ಪಿದರೂ ಸಹ ಮಕ್ಕಳು ಕೆರೆಯ ಪಾಲಾಗುವ ಭೀತಿ ಇದೆ.

ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಕೆರೆ, ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ಮಕ್ಕಳು ಕಲಿಕೆಗಾಗಿ ಜೀವ ಪಣಕ್ಕಿಟ್ಟು ಕೆರೆ ದಾಟುವಂತಾಗಿದೆ. ಕೆರೆ ಹಿನ್ನೀರು ದಾಟಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಗಾಳಿ ತುಂಬಿದ ಟ್ಯೂಬೆಗಳೇ ಗತಿಯಾಗಿದೆ. ಪೋಷಕರು ಗಾಳಿ ತುಂಬಿದ ಟ್ಯೂಬ್‌ಗೆ ಹಗ್ಗ ಕಟ್ಟಿ ಎಳೆದು ಮಕ್ಕಳ ದಾಟಿಸುತ್ತಿದ್ದಾರೆ. ಚೂರು ಆಯ ತಪ್ಪಿದರೂ ಸಹ ಮಕ್ಕಳು ಕೆರೆಯ ಪಾಲಾಗುವ ಭೀತಿ ಇದೆ. ಸೇತುವೆ ನಿರ್ಮಾಣ ಮಾಡಿ ಕೊಡಿ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೋಟೆಲ್‌ ನುಗ್ಗಿದ ನೀರು

ಮಳೆಯ ಅಬ್ಬರಕ್ಕೆ ಹೋಟೆಲ್ ಅಂಗಡಿಗಳಿಗೆ ನೀರು ನುಗ್ಗಿದೆ. ರಾತ್ರಿ ಮಳೆ ನೀರು ನುಗ್ಗಿದ್ದರಿಂದ ಹೋಟೆಲ್ ಮಾಲೀಕರು ಪರದಾಡಬೇಕಾಯಿತು. ದೊಡ್ಡಬಳ್ಳಾಪುರದ ರೈಲ್ವೆ ಸ್ಟೇಷನ್ ಬಳಿ ಇರುವ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಚರಂಡಿಗಳು ಬಂದ್ ಮಾಡಿರುವ ಕಾರಣ ಈ ರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಚ್ಚಿರುವ ಚರಂಡಿಗಳನ್ನು ತೆರವುಗೊಳಿಸುವಂತೆ ನಗರ ಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಳೆ ತಗ್ಗಿದ್ದರೂ ಮುಂದುವರಿದ ಪ್ರವಾಹ ಸ್ಥಿತಿ

ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾದರೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಮಳೆ ಪ್ರಮಾಣ ಕಡಿಮೆಯಾದರೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿದು ಬರುತ್ತಿದೆ. ಪರಿಣಾಮ ಕೃಷ್ಣಾ ನದಿ ತೀರದ ಜಮೀನುಗಳು ಸ‌ಂಪೂರ್ಣ ಜಲಾವೃತಗೊಂಡಿದೆ. ಕಾಗವಾಡ ತಾಲೂಕಿನ ಜುಗೂಳ ಹಾಗೂ ಮಹಾರಾಷ್ಟ್ರದ ಖಿದ್ರಾಪೂರ ಗ್ರಾಮದ ಕೆಲ ಪ್ರದೇಶಗಳ ಜಲಾವೃತ ಯಥಾಸ್ಥಿತಿ ಇದೆ. ಚಿಕ್ಕೋಡಿ ಉಪ ವಿಭಾಗದ 22 ಗ್ರಾಮಗಳ ನದಿ ತೀರದಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಮಳೆ ಪ್ರಮಾಣ ಹೆಚ್ಚಾದರೇ ನದಿ ತೀರ ಬಿಟ್ಟು ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ವಿಜಯಪುರದಲ್ಲಿ ಉಮರಾಣಿ- ಲವಗಿ ಹಳೆಯ ಬ್ಯಾರೇಜ್ ಮುಳುಗಡೆ

ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಭೀಮಾನದಿ ತುಂಬಿ ಹರಿಯುತ್ತಿದೆ. ಪರಿಣಾಮ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ನದಿಗೆ ಅಡ್ಡಲಾಗಿರುವ ಉಮರಾಣಿ- ಲವಗಿ ಹಳೆಯ ಬ್ಯಾರೇಜ್ ಮುಳುಗಡೆಯಾಗಿದೆ. ಚಡಚಣ, ಇಂಡಿ, ಆಲಮೇಲ ಸಿಂದಗಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ಇದೆ.

ಧಾರಾಕಾರ ಮಳೆಗೆ ಆಸ್ಪತ್ರೆಗೆ ನುಗ್ಗಿದ ನೀರು

ತುಮಕೂರಿನ ಗುಬ್ಬಿ ಪಟ್ಟಣದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದೆ. ರೋಗಿಗಳಿದ್ದ ಕೊಠಡಿ ಸಂಪೂರ್ಣ ಜಲಾವೃತಗೊಂಡಿತ್ತು. ನೀರು ನುಗ್ಗಿದ ಪರಿಣಾಮ ರೋಗಿಗಳು ಪರದಾಡಬೇಕಾಯಿತು. ಕೆಳಗೆ ನೀರು ಮಯವಾದ ಕಾರಣಕ್ಕೆ ಮಧ್ಯರಾತ್ರಿಯೇ ರೋಗಿಗಳನ್ನು ಮೊದಲ ಹಾಗೂ ಎರಡನೇ ಮಹಡಿಯಲ್ಲಿರುವ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.

ತುಮಕೂರಿನಲ್ಲಿ ಧರೆಗುರುಳಿದ ಮರ

ತುಮಕೂರು ಜಿಲ್ಲೆಯಲ್ಲಿ ರಭಸವಾಗಿ ಸುರಿದ ಮಳೆಗೆ ವಿವಿಧೆಡೆ ಅವಾಂತರವೇ ಸೃಷ್ಟಿಯಾಗಿತ್ತು. ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ಇತ್ತ ಬೈಕ್‌ ಸವಾರ ಕೂದಲೆಳೆ ಅಂತರದಿಂದ ಪಾರಾಗಿದ್ದರು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಬಳಿ ಘಟನೆ ನಡೆದಿದೆ. ಮರ ಬಿದ್ದ ಕಾರಣ ಬೈಕ್‌ನ ಹೆಡ್‌ಲೈಟ್ ಪುಡಿ ಪುಡಿಯಾಗಿತ್ತು.

ನದಿ ನೀರು ಇಳಿಕೆ ಆಯಿತು; ಮೊಸಳೆಗಳ ಕಾಟ ಶುರುವಾಯಿತು

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಲ್ಲಿ ವೇದಗಂಗಾ ನದಿ‌ ನೀರಲ್ಲಿ ಇಳಿಕೆ ಆಗುತ್ತಿದ್ದಂತೆ ಮೊಸಳೆಗಳ ಕಾಟ ಹೆಚ್ಚಾಗುತ್ತಿದೆ. ನಾಲ್ಕೈದು ಮೊಸಳೆಗಳು ಗ್ರಾಮದ ಹೊರ ವಲಯದಲ್ಲಿ ಪತ್ತೆಯಾಗಿವೆ. ಮೊಸಳೆ ಮರಿಗಳು ಗ್ರಾಮಕ್ಕೆ ನುಗ್ಗಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Lalbagh Flower Show: ಆ.8ರಿಂದ 19ವರೆಗೆ ಲಾಲ್‌ಬಾಗ್‌ ಫ್ಲವರ್‌ ಶೋ; ಅನಾವರಣವಾಗಲಿದೆ ಭೀಮ ಸಂದೇಶ

Lalbagh Flower Show: ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಹಲವು ವಿಶೇಷತೆಗಳನ್ನು ಹೊಂದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಥೀಮ್‌ನಡಿ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ ಸಜ್ಜಾಗಿದ್ದು, ಫ್ಲವರ್‌ ಶೋನಲ್ಲಿ ಸಂವಿಧಾನ, ಅಂಬೇಡ್ಕರ್‌ ಪ್ರತಿಮೆ, ಅವರು ಬಾಳಿ ಬದುಕಿದ ಮನೆ, ಅವರ ಆದರ್ಶಗಳು ಹೂವುಗಳಲ್ಲಿ ಅನಾವರಣವಾಗಲಿದೆ.

VISTARANEWS.COM


on

Lalbagh Flower Show
Koo

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಆ.8ರಿಂದ 19ವರೆಗೆ 216ನೇ ಫಲಪುಷ್ಪ ಪ್ರದರ್ಶನ (Lalbagh Flower Show) ನಡೆಯಲಿದೆ. ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ (Dr BR Ambedkar) ಅವರ ಜೀವನಗಾಥೆಯ ಥೀಮ್‌ ನೋಡುಗರನ್ನು ರಂಜಿಸಲಿದ್ದು, ಆಗಸ್ಟ್ 8 ರಂದು ಬೆಳಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಫ್ಲವರ್‌ ಶೋಗೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಾಮಲಾ ಇಕ್ಬಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆಗಸ್ಟ್ 8 ರಿಂದ 19ವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಅಂಬೇಡ್ಕರ್ ಅವರ ಜೀವನ ಆಧಾರಿತ ಪುಷ್ಪ ಪ್ರದರ್ಶನ ಇರಲಿದ್ದು, ಆಗಸ್ಟ್ 8ರಂದು ಬೆಳಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಲಿದ್ದಾರೆ. ಇನ್ನು ಮುಖ್ಯ ಅತಿಥಿಯಾಗಿ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶವಂತ ಅಂಬೇಡ್ಕರ್ ಅವರು ಬರಲಿದ್ದಾರೆ ಎಂದ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್ ಮಾತನಾಡಿ, ಈ ಬಾರಿ ಲಾಲ್‌ಬಾಗ್‌ ಪರಿಸರದಲ್ಲಿ ಭೀಮ ಸಂದೇಶ ಅನಾವರಣವಾಗಲಿದೆ. 12 ದಿನಗಳ ಕಾಲ 6 ಆಂಬ್ಯುಲೆನ್ಸ್ ಸೇರಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸುತ್ತೇವೆ. ಡೆಂಗ್ಯೂ ಆತಂಕ ಇರುವುದರಿಂದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಕಳೆದ ಬಾರಿ ಕುಡಿಯುವ ನೀರಿನ ಸಮಸ್ಯೆ ಆಗಿತ್ತು, ಈ ಬಾರಿ ಅಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಪ್ರವೇಶ ಶುಲ್ಕ ಎಷ್ಟು?

168 ವಿವಿಧ ಪ್ರಭೇದದ ಸಸ್ಯಗಳನ್ನು ನಾವೇ ಬೆಳೆದಿದ್ದೇವೆ. ದ್ವಿ ಚಕ್ರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಜನರು ಆದಷ್ಟು ಮೆಟ್ರೋ ಬಳಸಬೇಕು. ಆನ್‌ಲೈನ್‌ ಟಿಕೆಟ್ ಕೂಡ ಲಭ್ಯವಿರುತ್ತದೆ. ಪ್ರವೇಶ ಶುಲ್ಕ ಮಕ್ಕಳಿಗೆ 30 ರೂ., ಸಾಮಾನ್ಯರಿಗೆ 100 ರೂ. ಇರಲಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್ ಮಾಹಿತಿ ನೀಡಿದರು.

ಕಳೆದ ಬಾರಿ 60-70 ಲಕ್ಷ ಲಾಭ ಆಗಿದೆ.. ಈ ಬಾರಿ ಕೂಡ ಸಾಕಷ್ಟು ಆದಾಯ ಬರುವ ನಿರೀಕ್ಷೆ ಇದೆ. ವಾಕಿಂಗ್ ಬರುವವರು ಕೂಡ ಟಿಕೆಟ್ ತೆಗೆದುಕೊಂಡು ಬರಬೇಕು. ಪಾರ್ಕ್‌ನಲ್ಲಿ ಜೇನು ಹುಳುಗಳು ಇಲ್ಲ, ಎರಡು ವರ್ಷಗಳ ಹಿಂದೆ ಇತ್ತು, ಈಗ ಇಲ್ಲ. ಬಹುತೇಕ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ಅಂಬೇಡ್ಕರ್‌ ಜೀವನಗಾಥೆ!

Lalbagh Flower Show 2024
Lalbagh Flower Show 2024

ಈ ಬಾರಿ ರಾಜಧಾನಿಯ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ (Independence Day) ಫಲಪುಷ್ಪ ಪ್ರದರ್ಶನ (Lalbagh Flower Show) ಹಲವು ವಿಶೇಷತೆಗಳನ್ನು ಹೊಂದಿದೆ. ಮುಖ್ಯವಾಗಿ ಈ ಬಾರಿಯ ಥೀಮ್‌ ಹಾಗೂ ವಿಶೇಷ ಆಕರ್ಷಣೆ, ಸಂವಿಧಾನ ಶಿಲ್ಪಿ ಡಾ. ಬಿಆರ್‌ ಅಂಬೇಡ್ಕರ್‌ (Dr BR Ambedkar) ಅವರ ಜೀವನಗಾಥೆ ನೋಡುಗರನ್ನು ರಂಜಿಸಲಿದೆ.

ಬೆಂಗಳೂರಿನ ಲಾಲ್‌ಬಾಗ್​​ನಲ್ಲಿ ಆಗಸ್ಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ (Lalbagh Flower Show) ವೀಕ್ಷಿಸಲು ಜನ ಕಾತರದಿಂದ ಕಾಯುತ್ತಾರೆ. ಪ್ರತಿ ವರ್ಷ ವಿಭಿನ್ನ ಥೀಮ್​​ನಲ್ಲಿ ಫ್ಲವರ್ ಶೋ ಆಯೋಜಿಸುವ ಮೂಲಕ ಲಾಲ್‌ಬಾಗ್‌ಗೆ ಅಸಂಖ್ಯಾತ ಜನರನ್ನು ಆಕರ್ಷಿಸಲಾಗುತ್ತದೆ. ಈ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್‌ಬಾಗ್​​ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ವಿದೇಶಿ ಹಾಗೂ ಸ್ವದೇಶಿ ಹೂಗಳಿಂದ ಈ ಬಾರಿಯ ಫ್ಲವರ್ ಶೋ ಕಂಗೊಳಿಸಲಿದೆ.

ಈ ಸಲ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫ್ಲವರ್‌ ಶೋಗೆ (Lalbagh Flower Show) ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಹೂಗಳ ಆಯ್ಕೆ ನಡೆಯುತ್ತಿದೆ. ಎಂದಿನಂತೆ ಆಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ರೆಡ್‌ಹಾಟ್‌ ಪೋಕರ್‌, ಆಲ್‌ಸ್ಟೋಮೇರಿಯನ್‌ ಲಿಲ್ಲಿ, ಪೂಷಿಯಾ, ಅಗಪಾಂಥಸ್‌, ಸೈಕ್ಲೋಮನ್‌, ಕ್ಯಾಲಾಲಿಲ್ಲಿ, ಸುಗಂಧ ರಾಜ ಮುಂತಾದ ಹೂಗಳಿಂದ ಅಂಬೇಡ್ಕರ್ ಅರಳಲಿದ್ದಾರೆ. 10-12 ದೇಶಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತದೆ. ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳು ಲಾಲ್‌ಬಾಗ್‌ಗೆ ಆಗಮಿಸಲಿವೆ. ಫ್ಲವರ್ ಶೋನಲ್ಲಿ 60ಕ್ಕೂ ಹೆಚ್ಚು ಜಾತಿಯ ಹೂಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಒಟ್ಟು 15 ಲಕ್ಷದಷ್ಟು ಹೂಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಲಾಲ್ ಬಾಗ್ ಗಾರ್ಡನ್​ನಲ್ಲಿ 4 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಹೂಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ | Kannada New Movie: ಇದು ʼಎʼ ಅಲ್ಲ ʼಬಿʼ ಅಲ್ಲ ‘ಸಿ’ ಸಾಂಗ್‌! ಹಾಡು ರಿಲೀಸ್‌ ಮಾಡಿದ ಲೂಸ್ ಮಾದ

ಇದಲ್ಲದೇ ವಿವಿಧ ಬಗೆಯ ಆಕರ್ಷಕ ಬೋನ್ಸಾಯ್, ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಗಳ ಪ್ರದರ್ಶನವೂ ಇರಲಿದೆ. ಸಧ್ಯ ಒಂದೊಂದೇ ವಿದೇಶಿ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ‌ಲಾಲ್‌ಬಾಗ್ ನಿರ್ದೇಶಕ ರಮೇಶ್ ತಿಳಿಸಿದ್ದಾರೆ. ಈ ವರ್ಷ ಸುಮಾರು 50 ಮಾದರಿಯ ಪ್ರದರ್ಶನಕ್ಕೆ ಸಲಹೆಗಳು ಬಂದಿದ್ದು ಅಂತಿಮವಾಗಿ ಅಂಬೇಡ್ಕರ್ ಅವರ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಭಕ್ತಿ ಭಂಡಾರಿ ಬಸವಣ್ಣ ಮತ್ತು ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ಅವರ ಫಲಪುಷ್ಪ ಪ್ರದರ್ಶನ ನಡೆದಿತ್ತು.

Continue Reading

ಬೆಂಗಳೂರು

Physical Abuse : ಬೆಂಗಳೂರಿನಲ್ಲಿ ಶಾಲಾ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿದ ಯುವಕ

Physical Abuse : ಯುವಕನೊಬ್ಬ ಶಾಲಾ ಬಾಲಕಿಯರನ್ನೇ ಟಾರ್ಗೆಟ್‌ ಮಾಡಿ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ. ಶಾಲಾ ಬಾಲಕಿ 7 ತಿಂಗಳ ಗರ್ಭಿಣಿಯಾದಾಗ ಕೃತ್ಯ ಬೆಳಕಿಗೆ ಬಂದಿದೆ.

VISTARANEWS.COM


on

By

Physical Abuse
ಆರೋಪಿ ಸಾದ್ ಮುಸೈಬ್ನಾ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ (Physical Abuse) ನಡೆದಿರುವ ಆರೋಪ ಕೇಳಿ ಬಂದಿದೆ. ಹೊಟ್ಟೆ ನೋವು ಎಂದು ನರಳಾಡುತ್ತಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಹೋದ ಪೋಷಕರಿಗೆ ಆಘಾತವೇ ಎದುರಾಗಿತ್ತು. ಯಾಕೆಂದರೆ ಶಾಲೆಗೆ ಹೋಗುತ್ತಿದ್ದ ಮಗಳು 7 ತಿಂಗಳ ಗರ್ಭಿಣಿಯಾಗಿದ್ದಳು. ವೈದ್ಯರು ಹೇಳಿದ ಸುದ್ದಿ ಕೇಳಿ ತಂದೆ-ತಾಯಿ ಶಾಕ್‌ ಆಗಿದ್ದರು. ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡುತ್ತಾ ಅಲ್ಪ-ಸ್ವಲ್ಪ ಫೇಮಸ್‌ ಆಗಿದ್ದ ಸಾದ್ ಮುಸೈಬ್ನಾ ಎಂಬಾತನ ಮೇಲೆ ಬಾಲಕಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. 15 ವರ್ಷದ ಮಗಳನ್ನು ನಂಬಿಸಿ, ಮನವೊಲಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆಯನ್ನು ಆರೋಪಿ ಸಾದ್‌ ಮನೆಗೆ ಕರೆದೊಯ್ದು ಆತನ ತಾಯಿ ಹಾಗೂ ಸಹೋದರಿಗೆ ಪರಿಚಯಿಸಿ ನಂಬಿಸಿದ್ದನಂತೆ. ಬಳಿಕ ಪದೆ ಪದೇ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದನಂತೆ. ಈ ಬಗ್ಗೆ ಕೇಳಲು ಆರೋಪಿ ಮನೆಗೆ ಹೋದಾಗ ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದನಂತೆ. ರೌಡಿಗಳ ಪರಿಚಯವಿದೆ, ನಿಮ್ಮ ಮಗಳನ್ನು ಬಿಡುವುದಿಲ್ಲ ಎಂದು ಹಲ್ಲೆ ನಡೆಸಿದ್ದನಂತೆ.

Physical Abuse
Physical Abuse

ಇದನ್ನೂ ಓದಿ: Gadag News : ಮಕ್ಕಳ ಕೂದಲು ಕಟ್ ಮಾಡಿದ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು!

ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ

ಈ ಎಲ್ಲ ಘಟನೆಗಳಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಪೋಷಕರು ಆಕೆಯನ್ನು ರಕ್ಷಿಸಿದ್ದಾರೆ. ಆರೋಪಿ ಸಾದ್ ಹಲವಾರು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಶಾಲೆಗೆ ಬರುವ ಅಮಾಯಕ ಹೆಣ್ಣುಮಕ್ಕಳನ್ನು ಇದೇ ರೀತಿ ಬಳಸಿಕೊಳ್ಳುತ್ತಿದ್ದಾನೆ. ಎಲ್ಲರ ಪರವಾಗಿ ನಾನೇ ಮುಂದೆ ಬಂದು ದೂರು ನೀಡಿದ್ದಾನೆ ಎಂದಿದ್ದಾರೆ.

ಸದ್ಯ ಬಾಲಕಿ ತಂದೆಯ ದೂರಿನನ್ವಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಗಳಿಗೆ ನ್ಯಾಯ ಕೊಡಿಸಲು ತಂದೆ ನಿರಂತರವಾಗಿ ಹೋರಾಡುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತರಿಗೂ ಆರೋಪಿಯ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಮೊದಮೊದಲು ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಇದೀಗ ಕೊನೆಗೂ ಆರೋಪಿಯ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಡ್ರ್ಯಾಗರ್‌ ಹಿಡಿದು ಪೋಸ್‌

ಇನ್ನೊಂದೆಡೆ ಆರೋಪಿ ತಾಯಿ ನನ್ನ ಮಗ ಹೀರೋ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ಬರ್ತ್‌ಡೇ ಪಾರ್ಟಿಯೊಂದರಲ್ಲಿ ಡ್ರ್ಯಾಗರ್ ಹಿಡಿದು ಆರೋಪಿ ಪೋಸ್‌ ಕೊಟ್ಟಿದ್ದಾನೆ. ಆತನ ಕುಟುಂಬದಿಂದ ನಮಗೆ ಜೀವ ಬೆದರಿಕೆ ಇದೆ ಅಂತಲೂ ಬಾಲಕಿ ಪೋಷಕರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Women PG: ಬೆಂಗಳೂರಿನಲ್ಲಿ ಮಹಿಳಾ ಪಿಜಿಗಳಿಗೆ ಇನ್ನು ಮುಂದೆ ಕಟ್ಟುನಿಟ್ಟಿನ ರೂಲ್ಸ್! ಫಾಲೋ ಮಾಡದಿದ್ದರೆ ಕೇಸ್

Women PG: ಹೊಸ ನಿಯಮಗಳ ಪ್ರಕಾರ ನಗರದಲ್ಲಿರುವ ಪಿಜಿಗಳು ಇನ್ನು ಮುಂದೆ ಕಡ್ಡಾಯವಾಗಿ ಪಾಲಿಕೆ ಪರವಾನಗಿ ಪಡೆದುಕೊಳ್ಳಬೇಕು. ಪಿಜಿಗೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆಯಬೇಕು. ರಕ್ತ ಸಂಬಂಧಿಕರು ಹಾಗೂ ಸ್ನೇಹಿತರ ವಿವರಗಳು ಹಾಗೂ ಮೊಬೈಲ್‌ ಸಂಖ್ಯೆಗಳನ್ನೂ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

VISTARANEWS.COM


on

women PG bangalore
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜಧಾನಿಯಲ್ಲಿರುವ ಮಹಿಳಾ ಪಿಜಿಗಳಿಗೆ (Women PG) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಬಿಬಿಎಂಪಿ (BBMP) ಹಾಗೂ ಪೊಲೀಸ್‌‍ ಇಲಾಖೆ (Bangalore Police) ನಿರ್ಧರಿಸಿವೆ. ಕೆಲ ದಿನಗಳ ಹಿಂದೆ ಕೋರಮಂಗಲದಲ್ಲಿರುವ ಮಹಿಳಾ ಪಿಜಿಗೆ ವ್ಯಕ್ತಿಯೊಬ್ಬ ನುಗ್ಗಿ ಯುವತಿಯೊಬ್ಬರನ್ನು ಕೊಲೆ (Murder in PG) ಮಾಡಿ ಪರಾರಿಯಾಗಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ.

ಹೊಸ ನಿಯಮಗಳ ಪ್ರಕಾರ ನಗರದಲ್ಲಿರುವ ಪಿಜಿಗಳು ಇನ್ನು ಮುಂದೆ ಕಡ್ಡಾಯವಾಗಿ ಪಾಲಿಕೆ ಪರವಾನಗಿ ಪಡೆದುಕೊಳ್ಳಬೇಕು. ಪಿಜಿಗೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆಯಬೇಕು. ರಕ್ತ ಸಂಬಂಧಿಕರು ಹಾಗೂ ಸ್ನೇಹಿತರ ವಿವರಗಳು ಹಾಗೂ ಮೊಬೈಲ್‌ ಸಂಖ್ಯೆಗಳನ್ನೂ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಪಿಜಿಗೆ ಭೇಟಿ ನೀಡಲು ಬರುವ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಯಾರೇ ಬಂದರು ಅವರ ಎಲ್ಲಾ ವಿವರಗಳನ್ನು ಪ್ರತ್ಯೇಕವಾಗಿ ಪಡೆಯಬೇಕು ಎಂದು ಸೂಚಿಸಲಾಗಿದೆ.

ಪಿಜಿಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಬೇಕು. ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕು. ಮಾದಕ ವಸ್ತುಗಳ ಸೇವನೆ ಮತ್ತು ಸಂಗ್ರಹಣೆ ಕಾನೂನು ಬಾಹಿರ. ಇಂತಹದಕ್ಕೆ ಪಿಜಿ ಒಳಗೆ ಅವಕಾಶ ನೀಡಬಾರದು. ಸ್ಥಳೀಯ ಪೊಲೀಸ್‌‍ ಠಾಣೆ, ತುರ್ತು ಸ್ಪಂದನೆಯ-112, ವೈದ್ಯಕೀಯ ಸೇವೆಯ-103, ಮತ್ತು ಸೈಬರ್‌ ಅಪರಾಧಕ್ಕೆ ಸಂಬಂಧಪಟ್ಟ – 1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಕಾಣುವಂತೆ ಹಾಕಬೇಕು. ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಇಟ್ಟುಕೊಳ್ಳಬೇಕು.

ಪಿಜಿಯಲ್ಲಿ ಕೆಲಸ ಮಾಡುವ ಅಡುಗೆಯವರು, ಸೆಕ್ಯೂರಿಟಿ ಗಾರ್ಡ್‌ ಹಾಗೂ ಇನ್ನಿತರೇ ವ್ಯಕ್ತಿಗಳ ಪೂರ್ವಾಪರಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ವಿದೇಶಿ ಪ್ರಜೆಗಳು ಪಿ.ಜಿ ಯಲ್ಲಿ ನೆಲೆಸಿದ್ದಲ್ಲಿ, ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್‌‍ ಠಾಣೆಗೆ ನೀಡುವುದು. ಪಿಜಿಯಲ್ಲಿ ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತು ಪಡಿಸಿ ಇತರೇ ಯಾರಿಗೂ ವಾಸ್ತವ್ಯಕ್ಕೆ ಅವಕಾಶ ನೀಡಲೇಬಾರದು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಅನುಸಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕಗಳನ್ನು ನಿಷೇಧಿಸಬೇಕು. ಆಹಾರ ಗುಣಮಟ್ಟದ ಬಗ್ಗೆ ಪಿಜಿ ಮಾಲೀಕರು ನಿಗಾ ವಹಿಸಬೇಕು. ತಿಂಗಳಲ್ಲಿ ಒಂದು ದಿನ ಸ್ಥಳೀಯ ಪೊಲೀಸರು ಪಿಜಿಯನ್ನೂ ಪರಿಶೀಲನೆ ನಡೆಸಬೇಕು. ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಅಹಿತಕರ ಘಟನೆ ಸಂಭವಿಸಿದರೆ ಸಂಬಂಧಪಟ್ಟ ಪಿಜಿ ಮಾಲೀಕರು ಅಥವಾ ಅದರ ವ್ಯವಸ್ಥಾಪಕರ ವಿರುದ್ಧ ಪೊಲೀಸರಿಗೆ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೋರಮಂಗಲದ ಪಿಜಿಯೊಂದಕ್ಕೆ ನುಗ್ಗಿದ ವ್ಯಕ್ತಿ ಅಲ್ಲಿದ್ದ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆತನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ಆ ಪಿಜಿಯಲ್ಲಿದ್ದ ಸಿಸಿಟಿವಿ ಫೂಟೇಜ್‌ನ ಮೂಲಕ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿತ್ತು.

ಇದನ್ನೂ ಓದಿ: Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

Continue Reading
Advertisement
Karnataka Weather Forecast
ಮಳೆ2 mins ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

Bangladesh unrest
ವಿದೇಶ5 mins ago

Bangladesh Unrest: ಬಾಂಗ್ಲಾ ಸಂಸತ್‌ ವಿಸರ್ಜನೆ; ಮಾಜಿ ಪ್ರಧಾನಿ ಖಲೀದಾ ಜಿಯಾ ಜೈಲಿನಿಂದ ರಿಲೀಸ್‌

SSC Recruitment 2024
ಉದ್ಯೋಗ26 mins ago

SSC Recruitment 2024: ಗುಡ್‌ನ್ಯೂಸ್‌; 2,006 ಸ್ಟೆನೋಗ್ರಾಫರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Paris Olympics
ಕ್ರೀಡೆ36 mins ago

Paris Olympics: ಸೆಮಿ ಫೈನಲ್​ ಪ್ರವೇಶಿಸಿದ ವಿನೇಶ್ ಫೋಗಟ್

Money Guide
ಮನಿ-ಗೈಡ್50 mins ago

Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

Lalbagh Flower Show
ಕರ್ನಾಟಕ54 mins ago

Lalbagh Flower Show: ಆ.8ರಿಂದ 19ವರೆಗೆ ಲಾಲ್‌ಬಾಗ್‌ ಫ್ಲವರ್‌ ಶೋ; ಅನಾವರಣವಾಗಲಿದೆ ಭೀಮ ಸಂದೇಶ

Physical Abuse
ಬೆಂಗಳೂರು57 mins ago

Physical Abuse : ಬೆಂಗಳೂರಿನಲ್ಲಿ ಶಾಲಾ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿದ ಯುವಕ

Paris Olympics
ಕ್ರೀಡೆ1 hour ago

Paris Olympics: ಫೈನಲ್​ ಪ್ರವೇಶಿಸಿದ ನೀರಜ್​ ಚೋಪ್ರಾ; ಕುಸ್ತಿಯಲ್ಲಿ ವಿನೇಶ್ ಕ್ವಾರ್ಟರ್​ ಫೈನಲ್​ಗೆ

LK advani
ದೇಶ1 hour ago

L K Advani: ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲು

women PG bangalore
ಪ್ರಮುಖ ಸುದ್ದಿ2 hours ago

Women PG: ಬೆಂಗಳೂರಿನಲ್ಲಿ ಮಹಿಳಾ ಪಿಜಿಗಳಿಗೆ ಇನ್ನು ಮುಂದೆ ಕಟ್ಟುನಿಟ್ಟಿನ ರೂಲ್ಸ್! ಫಾಲೋ ಮಾಡದಿದ್ದರೆ ಕೇಸ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Karnataka Weather Forecast
ಮಳೆ2 mins ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

ಟ್ರೆಂಡಿಂಗ್‌