Kannada New Movie: ಹಾರರ್ ಜಾನರ್‌ನ ʼಹಗ್ಗʼ ಚಿತ್ರದ ಟೀಸರ್ ಅನಾವರಣ - Vistara News

ಕರ್ನಾಟಕ

Kannada New Movie: ಹಾರರ್ ಜಾನರ್‌ನ ʼಹಗ್ಗʼ ಚಿತ್ರದ ಟೀಸರ್ ಅನಾವರಣ

Kannada New Movie: ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ, ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್. ನಿರ್ದೇಶನದ “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್. ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ನಿರ್ಮಾಪಕರಾದ ಕೆ.ಮಂಜು,‌ ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

VISTARANEWS.COM


on

Director R Chandru unveiled the teaser of Hagga movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್. ನಿರ್ದೇಶನದ ಹಾಗೂ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ “ಹಗ್ಗ” ಚಿತ್ರದ (Kannada New Movie) ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್. ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಚಿತ್ರದ ನಿರ್ಮಾಪಕರಾದ ಕೆ.ಮಂಜು,‌ ದಯಾಳ್ ಸೇರಿದಂತೆ ಅನೇಕ ಗಣ್ಯರು “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಅವಿನಾಶ್, ನಾನು ಮೂಲತಃ ಮೆಕಾನಿಕಲ್ ಎಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು “ಹಗ್ಗ” ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ “ಹಗ್ಗ”ವೇ ನಮ್ಮ ಚಿತ್ರದ ನಾಯಕ. ಇದು ಹಾರರ್ ಜಾನರ್‌ನ ಚಿತ್ರವಾದರೂ, ಚಿತ್ರದಲ್ಲಿ ಒಂದು ಪ್ರಮುಖ ಸಂದೇಶ ಸಹ ಇದೆ ಎಂದರು.

ಇದನ್ನೂ ಓದಿ: Paris Olympics: ಅತಿ ಹೆಚ್ಚು ಒಲಿಂಪಿಕ್ಸ್ ಆತಿಥ್ಯ ವಹಿಸಿದ ದೇಶ ಯಾವುದು?

ಚಿತ್ರಕ್ಕೆ ನಾನೇ ಕಥೆ‌ ಬರೆದು ನಿರ್ಮಾಣ ಮಾಡಿದ್ದೇನೆ.‌ ಅವಿನಾಶ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಬಂದಿರುವ ಎಲ್ಲಾ ಗಣ್ಯರಿಗೂ ಧನ್ಯವಾದ. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ “ಹಗ್ಗ” ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ತಿಳಿಸಿದರು.

ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು “ಸೂಪರ್ ಹೀರೋ” ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ‌‌. ಆದರೆ ಒಳ್ಳೆಯ ಪಾತ್ರ ಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಟಿ ಅನು ಪ್ರಭಾಕರ್.

ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಕೂಡ ಡ್ರೈವ್ ಮಾಡಿದ್ದೇನೆ ಎಂದು ಹರ್ಷಿಕಾ ಪೂಣಚ್ಚ ತಿಳಿಸಿದರು.

ಇದು ನನ್ನ ಮೊದಲ ಚಿತ್ರ. ನಟನೆಗೆ ತಬಲ ನಾಣಿ ಅವರು ಬಹಳ ಸಹಾಯ ಮಾಡಿದರು. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ವೇಣು. ನಟ ತಬಲ ನಾಣಿ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ನಿರ್ಮಾಪಕ ರಾಜ್ ಭಾರದ್ವಾಜ್ ಅವರೆ “ಹಗ್ಗ” ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್.ಎಂ. ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್.ಪಿ. ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ, ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಯಾದಗಿರಿ

Murder case : ಪತ್ನಿ, ಅತ್ತೆ ಹಾಗೂ ಮಾವನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದ

Murder case : ಹೆಂಡತಿ ದೂರಾಗಿದ್ದಕ್ಕೆ ಸಿಟ್ಟಾದ ದುಷ್ಟನೊಬ್ಬ ರಾಜಿ ಪಂಚಾಯಿತಿ ನೆಪದಲ್ಲಿ ಕರೆಸಿಕೊಂಡು, ಅತ್ತೆ-ಮಾವ ಸೇರಿ ಪತ್ನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದಿದ್ದಾನೆ.

VISTARANEWS.COM


on

By

Koo

ಯಾದಗಿರಿ: ಅತ್ತೆ-ಮಾವ ಹಾಗೂ ಪತ್ನಿಯನ್ನು ಪಾಪಿಯೊಬ್ಬ ಬರ್ಬರವಾಗಿ ಕೊಲೆ (Murder case) ಮಾಡಿದ್ದಾನೆ. ಯಾದಗಿರಿ ತಾಲೂಕಿನ ಸೈದಾಪುರ ಬಳಿ ಘಟನೆ ನಡೆದಿದೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಅನ್ನಪೂರ್ಣ (25), ಕವಿತಾ (45), ಬಸವರಾಜಪ್ಪ (52) ಕೊಲೆಯಾದವರು.

ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣಳನನ್ನು ನವೀನ್‌ ಮದುವೆಯಾಗಿದ್ದ. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇತ್ತು.

ಆದರೆ ಪತಿ ನವೀನ್‌ ಕಿರುಕುಳ ತಾಳಲಾರದೆ ಅನ್ನಪೂರ್ಣ ತವರು ಮನೆಗೆ ವಾಪಸ್‌ ಆಗಿದ್ದಳು. ಕಳೆದ ಒಂದು ವರ್ಷದ ಹಿಂದೆ ಅನ್ನಪೂರ್ಣ ತಂದೆ-ತಾಯಿ ಜತೆಗೆ ಇದ್ದಳು. ನಿನ್ನೆ ಬುಧವಾರ ಮತ್ತೆ ಜತೆಗೆ ಇರೋಣಾ ಬಾ ಎಂದು ಅನ್ನಪೂರ್ಣಳನ್ನು ನವೀನ್ ಕರೆದಿದ್ದ. ನ್ಯಾಯಾ ಪಂಚಾಯತಿ ಬಳಿಕ ಮತ್ತೆ ಈ ದಂಪತಿ ಜೊತೆಗಿರಲು ಮುಂದಾಗಿದ್ದರು.

ಇತ್ತ ಪೋಷಕರು ಮಗಳನ್ನು ಗಂಡನ ಮನೆಗೆ ಬಿಡಲು ಬಂದಿದ್ದರು. ರಾಜೀ ಪಂಚಾಯತಿ ಬಳಿಕ ಅತ್ತೆ- ಮಾವನನ್ನು ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಡಲು ಹೋದಾಗ, ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಇರಿದು ನವೀನ್‌ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ವಡಗೇರಾ ತಾಲೂಕಿನ ಜೋಳದಡಗಿ ಬಳಿ ಶವ ಬಿಸಾಡಿದ್ದಾನೆ. ಸದ್ಯ ಅನ್ನಪೂರ್ಣಳ ಶವ ಪತ್ತೆಯಾಗಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮತ್ತಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ

ತುಮಕೂರು: ಗಂಡ ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬಳು ಪರ ಪುರುಷನೊಂದಿಗೆ (Illicit relationship) ಓಡಿ ಹೋಗಿದ್ದಾಳೆ. ಮರ್ಯಾದೆಗೆ ಅಂಜಿದ ಪತಿ ವಿಷ ಕುಡಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ದೇವರಾಜ್ ಮೃತ ದುರ್ದೈವಿ. ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ಘಟನೆ ನಡೆದಿದೆ.

ದೇವರಾಜ್‌ ಹಾಗೂ ಮಾಧವಿ ಇಬ್ಬರು ಪ್ರೀತಿಸಿ 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪರ ಪುರುಷನ ಮೇಲೆ ವ್ಯಾಮೋಹಕ್ಕೆ ಸಿಲುಕಿದ ಮಾಧವಿ, ಹೊಸಹಳ್ಳಿ ಗ್ರಾಮದ ಆನಂದ್ ಕುಮಾರ್ ಎಂಬಾತನೊಟ್ಟಿಗೆ ಪರಾರಿ ಆಗಿದ್ದಾಳೆ.

ಪರ ಪುರುಷನೊಂದಿಗೆ ಪತ್ನಿ ಓಡಿ ಹೋದ ಸುದ್ದಿ ತಿಳಿದ ದೇವರಾಜ್‌ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್‌ನಲ್ಲಿ ಪ್ರಧಾನಿ ಮೋದಿ, ಕುಮಾರಸ್ವಾಮಿ, ಡಿಸಿ-ಎಸ್ಪಿಗೆ ನನ್ನ ಸಾವಿಗೆ ನ್ಯಾಯಕೊಡಿಸಿ ಎಂದು ದೇವರಾಜ್‌ ಮನವಿ ಮಾಡಿದ್ದಾರೆ.

ಮಾಧವಿಯನ್ನು 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ಹೊಸಹಳ್ಳಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೆ. ನಮಗೆ 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗಿರುವಾಗ ಪ್ರತಿ ನಿತ್ಯ ಅಂಗಡಿಯ ಬಳಿ ಬರುತ್ತಿದ್ದ ಆನಂದ್ ಕುಮಾರ್, ಈ ವೇಳೆ ಮಾಧವಿಯೊಂದಿಗೆ ಸಲುಗೆ ಬೆಳೆಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಪರಾರಿ ಆಗಿದ್ದಾನೆ ಎಂದು ಬರೆದಿದ್ದಾರೆ.

ಪತ್ನಿ ಓಡಿ ಹೋಗಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ದೇವರಾಜ್, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟು, ತನಗೆ ಆನಂದ್‌ನಿಂದ ಜೀವ ಬೆದರಿಕೆ ಹಾಕಿದ್ದ ಎಂದು ಉಲ್ಲೇಖಿಸಿದ್ದಾರೆ. ಇಬ್ಬರಿಗೂ ತಕ್ಕ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮಾಧವಿ, ಆನಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪ ಮೇಲೆ ದೂರು ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಮಾಧವಿ, ಆನಂದ್ ತಲೆಮರೆಸಿಕೊಂಡಿದ್ದಾರೆ. ಇತ್ತ ತಾಯಿ ಇಲ್ಲದೇ ತಂದೆಯನ್ನು ಕೆಳದುಕೊಂಡ ಇಬ್ಬರು ಹೆಣ್ಮಕ್ಕಳು ತಬ್ಬಲಿಗಳಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Valmiki Corporation Scam: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಮತ್ತೆ 5 ದಿನ ಇಡಿ ಕಸ್ಟಡಿಗೆ

Valmiki Corporation Scam: ಇಂದು ನಾಗೇಂದ್ರ ಅವರ ಕಸ್ಟಡಿ ಅಂತ್ಯವಾಗಿದ್ದು, ಅವರನ್ನು ಮತ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಡಿ ಹಾಜರ್ ಪಡಿಸಿತ್ತು. ತನಿಖೆ ಇನ್ನಷ್ಟು ನಡೆಯಬೇಕಿರುವ ಹಿನ್ನೆಲೆಯಲ್ಲಿ ಮತ್ತೆ ಕಸ್ಟಡಿಗೆ ಕೇಳಿತ್ತು. ಇವತ್ತು ಸೇರಿ ಜುಲೈ 22 ರವರೆಗೂ ಇಡಿ ವಶಕ್ಕೆ ನೀಡಿ 82ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.

VISTARANEWS.COM


on

b nagendra valmiki corporation scam 2
Koo

ಬೆಂಗಳೂರು: ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (Enforcement Directorate) ಬಂಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರಿಗೆ ಮತ್ತೆ 5 ದಿನಗಳ ನ್ಯಾಯಾಂಗ ಬಂಧನ ನೀಡಿ ನ್ಯಾಯಾಲಯ ಆದೇಶ ನೀಡಿದೆ.

ಇಂದು ನಾಗೇಂದ್ರ ಅವರ ಕಸ್ಟಡಿ ಅಂತ್ಯವಾಗಿದ್ದು, ಅವರನ್ನು ಮತ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಡಿ ಹಾಜರ್ ಪಡಿಸಿತ್ತು. ತನಿಖೆ ಇನ್ನಷ್ಟು ನಡೆಯಬೇಕಿರುವ ಹಿನ್ನೆಲೆಯಲ್ಲಿ ಮತ್ತೆ ಕಸ್ಟಡಿಗೆ ಕೇಳಿತ್ತು. ಇವತ್ತು ಸೇರಿ ಜುಲೈ 22 ರವರೆಗೂ ಇಡಿ ವಶಕ್ಕೆ ನೀಡಿ 82ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.

ಮಾಚಿ ಸಚಿವ ನಾಗೇಂದ್ರ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದರು. ನಾಗೇಂದ್ರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸರ್ಚಿಂಗ್ ಮುಗಿದಿದೆ. ಸೀಜಿಂಗ್ ಕಾರ್ಯ ಮುಗಿದಿದೆ. ಆರೋಪಿಯ ವಿಚಾರಣೆಯೂ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ. ಇಡಿ ಅಧಿಕಾರಿಗಳು ಪೊಲೀಸರಲ್ಲ. ಅವರನ್ನು ಕಸ್ಟಡಿಗೆ ಪಡೆದ ಉದ್ದೇಶ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡೋದೇನಿದೆ? ಎಂದು ಪ್ರಶ್ನಿಸಿದ ನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್‌, ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿದರು.

ಇಡಿ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಾದರು. ದಾಳಿ ವೇಳೆ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಕಂತೆ ಕಂತೆ ಹಣ ಪತ್ತೆಯಾಗಿದೆ. ಆರೋಪಿ ಎಲ್ಲವೂ ಗೊತ್ತಿದ್ದು ಅಪರಾಧ ಕೃತ್ಯ ಎಸಗಿದ್ದಾರೆ. ಆರೋಪಿ ತನ್ನ ಸಹಚರರಿಗೆ ಸೂಚನೆ ನೀಡಿದ್ದಾರೆ. ಅವರ ಸೂಚನೆ ಮೇರೆಗೆ ನಿಗಮದಲ್ಲಿ ಕೋಟಿ ಕೋಟಿ ಹಗರಣ ನಡೆದಿದೆ. ಈಗಾಗಲೇ ಕೆಲವು ಆರೋಪಿಗಳ‌ ಮೊಬೈಲ್ ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿ ನಾಗೇಂದ್ರ ಪತ್ನಿಯನ್ನು ವಿಚಾರಣೆ ನಡೆಸಿ ‌ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇನ್ನಷ್ಟು ಮಾಹಿತಿ ಬೇಕಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಮನವಿ ಮಾಡಿದರು. ಇಲ್ಲಿಯವರೆಗೆ ನಡೆದ ತನಿಖಾ ಮಾಹಿತಿ ದಾಖಲೆಗಳನ್ನೊಳಗೊಂಡ ಕಡತಗಳನ್ನು ಇಡಿ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಸಿದರು.

ನಿನ್ನೆ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡು ಇಡಿ ವಿಚಾರಣೆ ಮಾಡಿತ್ತು. ಅಧಿಕಾರಿಗಳು 7ರಿಂದ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಮಾಡಿದ್ದರು. ಸಾಕಷ್ಟು ವಿಚಾರಗಳನ್ನು ಹೊರ ತೆಗೆದಿದ್ದಾರೆ. ಪತಿ ಪತ್ನಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನೆ ಮಾಡಲಾಗಿದೆ. ಹಣದ ಅವ್ಯವಹಾರದಲ್ಲಿ ನಾಗೇಂದ್ರ ಪತ್ನಿಯ ಅಕೌಂಟ್‌ನಲ್ಲಿ ಕೂಡ ಅನಧಿಕೃತ ಹಣ ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಲಾಗಿದೆ.

ಕಳೆದೊಂದು ವಾರದಿಂದ ನಾಗೇಂದ್ರ ಇಡಿ ವಶದಲ್ಲಿದ್ದಾರೆ. ಅವರ ಮನೆ ಸೇರಿ 23 ಕಡೆಗಳಲ್ಲಿ ಇಡಿ ಏಕಕಾಲಕ್ಕೆ ದಾಳಿ ಮಾಡಿತ್ತು. 6 ದಿನಗಳ ಕಾಲದ ಇಡಿ ವಿಚಾರಣೆ ವಿಚಾರಣೆಯಲ್ಲಿ ನಾಗೇಂದ್ರ ಸಮರ್ಪಕವಾಗಿ ಉತ್ತರ ನೀಡಿಲ್ಲ. ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌ ಕೂಡ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿಗೆ ಬೇಕಾಗಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳನ್ನು ಪ್ರಶ್ನಿಸಿದಾಗ ದದ್ದಲ್‌ ಪಿಎಯ ಕೈವಾಡ ಕೂಡ ಇದರಲ್ಲಿ ಕಂಡುಬಂದಿದೆ.

ಆದರೆ ಮನೆಗೆ ಇಡಿ ದಾಳಿಯ ಬಳಿಕ ಇಡಿ ಬಂಧನ ತಪ್ಪಿಸಿಕೊಳ್ಳಲು ದದ್ದಲ್‌ ಎಸ್‌ಐಟಿ ಮುಂದೆ ಹಾಜರಾಗಿ ಇಡೀ ದಿನ ಕೂತಿದ್ದರು. ನಂತರ ಅಲ್ಲಿಂದ ಹೊರಬಿದ್ದು ಮೂರು ದಿವಸ ಕಣ್ಮರೆಯಾಗಿದ್ದ ದದ್ದಲ್‌, ನಾಲ್ಕನೇ ದಿವಸ ವಿಧಾನಮಂಡಲ ಅಧಿವೇಶನ ಶುರುವಾದಾಗ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದರು. ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಇಡಿ ನೋಟೀಸ್‌ ನೀಡಿದೆ ಎನ್ನಲಾಗಿದೆ. ಆದರೆ ನನಗೆ ಯಾವುದೇ ನೋಟೀಸ್‌ ಬಂದಿಲ್ಲ ಎಂದಿದ್ದಾರೆ ದದ್ದಲ್.‌ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಸ್ಪೀಕರ್‌ ಅನುಮತಿ ಇಲ್ಲದೆ ಶಾಸಕರನ್ನು ಇಡಿ ಬಂಧಿಸುವಂತಿಲ್ಲ.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

Continue Reading

ಪ್ರಮುಖ ಸುದ್ದಿ

GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ಗೆ ಬೀಗ ಹಾಕಲು ಸಾಧ್ಯವಿಲ್ಲ! ಸಚಿವರ ಮಾತಿಗೆ ಬೆಲೆ ಇಲ್ವಾ?

GT World Mall: ಜಿಟಿ ಮಾಲ್‌ಗೆ ಬೀಗ ಹಾಕುವುದಾದರೆ ಯಾವ ಅಂಶದ ಆಧಾರದಲ್ಲಿ ಬೀಗ ಹಾಕಬೇಕೆನ್ನುವ ಗೊಂದಲಕ್ಕೆ ಬಿಬಿಎಂಪಿ ಅಧಿಕಾರಿಗಳು ಸಿಲುಕಿದ್ದಾರೆ. ನೋಟೀಸ್ ನೀಡದೆ ಏಕಾಏಕಿ ಮಾಲ್‌ಗೆ ಬೀಗ ಹಾಕುವಂತಿಲ್ಲ. ಕೆಎಂಸಿ ಆಕ್ಟ್‌ನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ.

VISTARANEWS.COM


on

gt world mall assembly live
Koo

ಬೆಂಗಳೂರು: ಪಂಚೆ ಧರಿಸಿ ಬಂದ ರೈತರಿಗೆ ಒಳಗೆ ಬಿಡದೆ ಅವಮಾನ ಮಾಡಿದ ಜಿಟಿ ವರ್ಲ್ಡ್‌ ಮಾಲ್‌ (GT World Mall) ಅನ್ನು ಒಂದು ವಾರ ಕಾಲ ಮುಚ್ಚಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (Byrathi Suresh) ಅವರು ಸದನದಲ್ಲಿ ಗುಡುಗಿದ್ದರು. ಆದರೆ ಮಾಲ್‌ ಅನ್ನು ಮುಚ್ಚಿಸಲು ಯಾವುದೇ ಕಾರಣ ಸಿಗದೆ ಬಿಬಿಎಂಪಿ ಅಧಿಕಾರಿಗಳು (BBMP Officers) ಕಂಗಾಲಾಗಿದ್ದಾರೆ. ಹೀಗಾಗಿ, ಸುಮ್ಮನೇ ಬಾಯಿಮಾತಿಗಾಗಿ ಸಚಿವರು ಹೀಗೆ ಹೇಳಿದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಅನ್ನು ಸಮಗ್ರವಾಗಿ ಪರಿಶೀಲಿಸಿದರು. ಆದರೆ ಯಾವುದೇ ಅವ್ಯವಸ್ಥೆ ಅವರಿಗೆ ಕಂಡುಬಂದಿಲ್ಲ. ಆದರೆ, ಮಾಲೀಕರು ಒಂದೂವರೆ ಕೋಟಿ ರೂ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಮಾಲ್‌ಗೆ ನೋಟೀಸ್‌ ನೀಡಬಹುದು ಅಷ್ಟೆ. ಆದರೆ ಮುಚ್ಚುವಂತಿಲ್ಲ.

ಜಿಟಿ ಮಾಲ್‌ಗೆ ಬೀಗ ಹಾಕುವುದಾದರೆ ಯಾವ ಅಂಶದ ಆಧಾರದಲ್ಲಿ ಬೀಗ ಹಾಕಬೇಕೆನ್ನುವ ಗೊಂದಲಕ್ಕೆ ಬಿಬಿಎಂಪಿ ಅಧಿಕಾರಿಗಳು ಸಿಲುಕಿದ್ದಾರೆ. ನೋಟೀಸ್ ನೀಡದೆ ಏಕಾಏಕಿ ಮಾಲ್‌ಗೆ ಬೀಗ ಹಾಕುವಂತಿಲ್ಲ. ಕೆಎಂಸಿ ಆಕ್ಟ್‌ನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಮೂರು ಬಾರಿ ನೋಟೀಸ್ ನೀಡಿದ ಮೇಲೆಯೇ ಬೀಗ ಹಾಕುವ ಅವಕಾಶ ಬಿಬಿಎಂಪಿಗೆ ಇದೆ. ಮೂರು ನೋಟೀಸ್‌ಗಳಿಗೆ ವಿವರಣೆ ನೀಡಲು ಅವಕಾಶ ಕೂಡ ನೀಡಬೇಕು‌.
.
ಈ ಪ್ರಕರಣದಲ್ಲಿ ನೊಟೀಸ್ ನೀಡುವ ಪ್ರಕ್ರಿಯೆಯೇ ನಡೆದಿಲ್ಲ. ಹೀಗಿರುವಾಗ ಏಕಾಏಕಿ ಮಾಲ್ ಮುಚ್ಚಲು ಸಾಧ್ಯವಿಲ್ಲ. ನಿಯಮ ಮೀರಿ ನೋಟೀಸ್ ನೀಡಿದರೆ ಮಾಲ್ ಆಡಳಿತದಿಂದ ಮಾನನಷ್ಟ ಮೊಕದ್ದಮೆ ಹೂಡುವ ಸಾಧ್ಯತೆಯೂ ಇದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳೇ ನಾಳೆ ಕೋರ್ಟ್ ಕಟಕಟೆಯಲ್ಲಿ ನಿಲ್ಲುವ ಆತಂಕ‌ ಇದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳಲು ಬಿಬಿಎಂಪಿ ಅಧಿಕಾರಿಗಳು‌ ಮುಂದಾಗಿಲ್ಲ.

ಆದರೆ ಸಚಿವರ ಆದೇಶ ಪಾಲಿಸಬೇಕಿದ್ದು, ಕಾನೂನಾತ್ಮಕ ಕುಣಿಕೆಯಿಂದ ಹೇಗೆ ಪಾರಾಗಬೇಕು ಎಂಬ ಗೊಂದಲದಲ್ಲಿ ಅಧಿಕಾರಿಗಳಿದ್ದಾರೆ. ಇದುವರೆಗೆ ಸರ್ಕಾರದಿಂದ ಮಾಲ್‌ ಮುಚ್ಚಲು ಯಾವುದೇ ಲಿಖಿತ ಆದೇಶ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳು ಕೇವಲ ಅಂಗಡಿಗಳಿಗೆ ನೋಟೀಸ್ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಸ್ವಚ್ಛತೆ, ಬೆಂಕಿ ಸುರಕ್ಷತೆ ಮೊದಲಾದ ಕೆಲವು ಅನುಬಂಧಗಳ ಅಡಿಯಲ್ಲಿ ನೋಟೀಸ್‌ ನೀಡಬಹುದು.

7 ದಿನ ಮುಚ್ಚಲು ಸೂಚನೆ

ಇಂದು ಆರಂಭವಾದ ಮೂರನೇ ದಿನದ ವಿಧಾನಸಭೆ ಕಲಾಪ ಆರಂಭದಲ್ಲೇ ಈ ವಿಷಯ ಪ್ರಸ್ತಾಪವಾಯಿತು. ಹಲವರು ಸದಸ್ಯರು ರೈತರಿಗೆ ಅವಮಾನ ಆದ ವಿಷಯವನ್ನು ಪ್ರಸ್ತಾಪಿಸಿದರು. ವಿಸ್ತಾರ ನ್ಯೂಸ್‌ ನಿನ್ನೆ ಇಡೀ ದಿನ ಈ ಘಟನೆಯನ್ನು ಪ್ರಸಾರ ಮಾಡಿದ್ದಲ್ಲದೆ, ರೈತರನ್ನು ಮರಳಿ ಜಿಟಿ ಮಾಲ್‌ಗೆ ಕರೆದೊಯ್ದು ಪ್ರವೇಶ ಕೊಡಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಹಾಗೂ ರೈತಪರ ಸಂಘಟನೆಗಳು ಈ ವಿಚಾರದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಕೈಜೋಡಿಸಿದ್ದವು. ನಂತರ ಸಚಿವ ಸಂತೋಷ್‌ ಲಾಡ್‌ (Santosh Lad) ಕೂಡ ಕೂಡ ಈ ವಿಚಾರದಲ್ಲಿ ಮಾಲ್‌ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಧಾನಸಭೆ ಕಲಾಪದ ಆರಂಭದ ಹೊತ್ತಿಗೆ ಸ್ವತಃ ಸ್ಪೀಕರ್‌ ಯು.ಟಿ ಖಾದರ್‌ (Speaker UT Khader) ಅವರು ಈ ವಿಚಾರ ಎತ್ತಿದರು. ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚಿಸಿದರು. ಸದಸ್ಯರು ಪಕ್ಷಾತೀತವಾಗಿ ಮಾಲ್‌ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. 7 ದಿನಗಳ ವರೆಗೆ ಬಂದ್‌ ಮಾಡಿಸಬಹುದು. ಆದರೆ ಎಚ್ಚರಿಕೆ ನೀಡಿ ಮೂರು ದಿನಗಳ ಕಾಲ ಮಾಲ್ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

Continue Reading

ಉತ್ತರ ಕನ್ನಡ

Uttara Kannada News: ಗೋಕರ್ಣದ ʼಅಶೋಕೆʼಯಲ್ಲಿ ಜು. 21ರಿಂದ ರಾಘವೇಶ್ವರಶ್ರೀ ಚಾತುರ್ಮಾಸ್ಯ

Uttara Kannada News: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ. ʼಅನಾವರಣ ಚಾತುರ್ಮಾಸ್ಯʼ ಎಂಬ ಅಭಿದಾನದೊಂದಿಗೆ ಶ್ರೀಗಳು, ಆಷಾಢ ಶುದ್ಧ ಹುಣ್ಣಿಮೆಯಿಂದ ಬಾಧ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದಾರೆ. ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

VISTARANEWS.COM


on

Raghaveshwarashree Chaturmasya at Ashoke from 21st July
Koo

ಗೋಕರ್ಣ: ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ. ಅನಾವರಣ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಶ್ರೀಗಳು, ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದು, ವರ್ಷಾಕಾಲದಲ್ಲಿ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ ನಿರತರಾಗುವರು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಪ್ರಕಟಣೆಯಲ್ಲಿ (Uttara Kannada News) ತಿಳಿಸಿದ್ದಾರೆ.

ಚಾತುರ್ಮಾಸ್ಯದ ಪ್ರತಿದಿನವೂ ಸಮಾಜದ ವಿಶಿಷ್ಟ ವ್ಯಕ್ತಿಗಳು, ವಿಷಯಗಳು ಮತ್ತು ವಸ್ತುಗಳ ಅನಾವರಣ ಈ ಬಾರಿಯ ವಿಶೇಷ. 60 ದಿನಗಳಲ್ಲಿ ಕನಿಷ್ಠ 60 ವ್ಯಕ್ತಿ-ವಿಷಯ- ವಸ್ತುಗಳ ʼಅನಾವರಣʼಕ್ಕೆ ಈ ಚಾತುರ್ಮಾಸ್ಯ ಸಾಕ್ಷಿಯಾಗಲಿದೆ. ಸಮಾಜದಲ್ಲಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿರುವ, ಇದುವರೆಗೆ ಸಮಾಜಕ್ಕೆ ತೆರೆದುಕೊಳ್ಳದ ವ್ಯಕ್ತಿಗಳು, ಸಮಾಜದಲ್ಲಿ ಬೆಳಕಿಗೆ ಬರದ ಶ್ರೀಮಠದ ಭವ್ಯತೆ, ರಾಮಚಂದ್ರಾಪುರ ಮಠದ ಮಹತ್ವದ ಯೋಜನೆಗಳ ಅನಾವರಣ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ.

ಚಾತುರ್ಮಾಸ್ಯಕ್ಕೆ ಪೂರ್ವಭಾವಿಯಾಗಿ ಮುನ್ನಾ ದಿನ (ಜುಲೈ 20) ಶ್ರೀಗಳು ಪುರಾತನ ಮಲ್ಲಿಕಾರ್ಜುನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯುವರು. ರಾಜ್ಯದ ಮೂಲೆಮೂಲೆಗಳಿಂದ ಶಿಷ್ಯಭಕ್ತರು ಸಮರ್ಪಿಸಿದ ಸುವಸ್ತುಗಳಿಗೆ ಧಾನ್ಯಲಕ್ಷ್ಮಿಪೂಜೆಯನ್ನು ರಾಘವೇಶ್ವರ ಶ್ರೀಗಳು ನೆರವೇರಿಸುವರು. ಬಳಿಕ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಚಾತುರ್ಮಾಸ್ಯ ಪರ್ಯಂತ ಲಕ್ಷಾಂತರ ಶಿಷ್ಯಭಕ್ತರಿಗೆ ಅನ್ನದಾನ ಆರಂಭವಾಗಲಿದೆ.

ಇದನ್ನೂ ಓದಿ: Paris Olympics: ಅತಿ ಹೆಚ್ಚು ಒಲಿಂಪಿಕ್ಸ್ ಆತಿಥ್ಯ ವಹಿಸಿದ ದೇಶ ಯಾವುದು?

ಆಷಾಢ ಶುದ್ಧ ಹುಣ್ಣಿಮೆಯಂದು ವ್ಯಾಸಪೂಜೆ ಮತ್ತು ಗುರು ಪರಂಪರೆ ಪೂಜೆಯೊಂದಿಗೆ 31ನೇ ವರ್ಷದ ವ್ರತಾರಂಭ ಮಾಡುವರು. ಜುಲೈ 24ರಂದು ಶ್ರೀವರ್ಧಂತಿ, ಆಗಸ್ಟ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶಗಳು ಚಾತುರ್ಮಾಸ್ಯದಲ್ಲಿ ಆಯೋಜಿತವಾಗಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸೆಪ್ಟೆಂಬರ್ 18ರಂದು ಸೀಮೋಲ್ಲಂಘನೆಯೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ.

ಚಾತುರ್ಮಾಸ್ಯದಲ್ಲಿ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಶ್ರೀಗಳು, ಸಹಸ್ರ ಗಂಗಾಜಲ ಅಭಿಷೇಕಕ್ಕೆ ಸಂಕಲ್ಪಿಸಿದ್ದಾರೆ. ಪವಿತ್ರ ಗಂಗಾಜಲದಿಂದ ತುಂಬಿದ ಸುವರ್ಣ, ರಜತ ಮತ್ತು ತಾಮ್ರ ಕಲಶಗಳ ಸೇವೆಗೆ ಭಕ್ತರಿಗೆ ಅವಕಾಶವಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಕರಾರ್ಚಿತ ದೇವರಿಗೆ ಸರ್ವಸೇವೆ ಸಮರ್ಪಣೆಗೆ ಅವಕಾಶ ಇದೆ. ಅಂತೆಯೇ ಮಹಾಸೇವೆ, ತುಲಾಭಾರ ಸೇವೆ, ಸ್ವರ್ಣಪಾದುಕೆ ಭಿಕ್ಷಾಸೇವೆ, ಸ್ವರ್ಣಪಾದುಕಾ ಪೂಜೆ, ಪಾದುಕಾಪೂಜೆ, ಅನ್ನದಾನ, ಸುವಸ್ತು ಸಮರ್ಪಣೆ ಮತ್ತಿತರ ಸೇವೆಗಳನ್ನೂ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ: Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

ಎರಡು ತಿಂಗಳ ಅವಧಿಯ ಚಾತುರ್ಮಾಸ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಗಣ್ಯರು, ಶಿಷ್ಯಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

Continue Reading
Advertisement
ಯಾದಗಿರಿ14 mins ago

Murder case : ಪತ್ನಿ, ಅತ್ತೆ ಹಾಗೂ ಮಾವನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಂದ

b nagendra valmiki corporation scam 2
ಕ್ರೈಂ18 mins ago

Valmiki Corporation Scam: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಮತ್ತೆ 5 ದಿನ ಇಡಿ ಕಸ್ಟಡಿಗೆ

INDW vs PAKW
ಕ್ರೀಡೆ25 mins ago

INDW vs PAKW: ನಾಳೆಯಿಂದ ಮಹಿಳಾ ಏಷ್ಯಾ ಕಪ್​; ಭಾರತಕ್ಕೆ ಪಾಕ್​ ಎದುರಾಳಿ

gt world mall assembly live
ಪ್ರಮುಖ ಸುದ್ದಿ25 mins ago

GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ಗೆ ಬೀಗ ಹಾಕಲು ಸಾಧ್ಯವಿಲ್ಲ! ಸಚಿವರ ಮಾತಿಗೆ ಬೆಲೆ ಇಲ್ವಾ?

Actor Darshan Judicial Custody Extended Till Aug 1
ಸ್ಯಾಂಡಲ್ ವುಡ್34 mins ago

Actor Darshan: ದರ್ಶನ್‌ &ಗ್ಯಾಂಗ್‌ಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ; ಕಾರಣಗಳು ಹೀಗಿವೆ!

Raghaveshwarashree Chaturmasya at Ashoke from 21st July
ಉತ್ತರ ಕನ್ನಡ35 mins ago

Uttara Kannada News: ಗೋಕರ್ಣದ ʼಅಶೋಕೆʼಯಲ್ಲಿ ಜು. 21ರಿಂದ ರಾಘವೇಶ್ವರಶ್ರೀ ಚಾತುರ್ಮಾಸ್ಯ

Uttara Kannada Landslide
ಮಳೆ40 mins ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Kannada Serials TRP Lakshmi Nivas in Top 3 Lakshmi Baramma at fifth position
ಕಿರುತೆರೆ51 mins ago

Kannada Serials TRP: ಟಾಪ್‌ 3ಯಲ್ಲಿ ʻಲಕ್ಷ್ಮೀ ನಿವಾಸʼ: ಐದನೇ ಸ್ಥಾನದಲ್ಲಿ ʻಲಕ್ಷ್ಮೀ ಬಾರಮ್ಮʻ ಧಾರಾವಾಹಿ

Sameer Nigam
ಕರ್ನಾಟಕ1 hour ago

Sameer Nigam: 25,000 ಜನರಿಗೆ ಉದ್ಯೋಗ ಕೊಟ್ಟಿದ್ದೇನೆ, ನನ್ನ ಮಕ್ಕಳು ರಾಜ್ಯದಲ್ಲಿ ಕೆಲಸ ಮಾಡಬಾರದಾ?: ಫೋನ್‌ಪೇ ಸಿಇಒ ಆಕ್ರೋಶ

Director R Chandru unveiled the teaser of Hagga movie
ಕರ್ನಾಟಕ1 hour ago

Kannada New Movie: ಹಾರರ್ ಜಾನರ್‌ನ ʼಹಗ್ಗʼ ಚಿತ್ರದ ಟೀಸರ್ ಅನಾವರಣ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Uttara Kannada Landslide
ಮಳೆ40 mins ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

ಟ್ರೆಂಡಿಂಗ್‌