karnataka politics cm dcm travels to delhi with cabinet expansion discussionKarnataka Politics: ಬೆಂಬಲಿಗರ ಪಟ್ಟಿ ಹಿಡಿದು ದೆಹಲಿಗೆ ಹಾರಿದ ಸಿಎಂ-ಡಿಸಿಎಂ: ಭಾವಿ ಸಚಿವರ ಪಟ್ಟಿಯಲ್ಲಿ ಶೆಟ್ಟರ್‌ ಹೆಸರಿಲ್ಲ? - Vistara News

ಕರ್ನಾಟಕ

Karnataka Politics: ಬೆಂಬಲಿಗರ ಪಟ್ಟಿ ಹಿಡಿದು ದೆಹಲಿಗೆ ಹಾರಿದ ಸಿಎಂ-ಡಿಸಿಎಂ: ಭಾವಿ ಸಚಿವರ ಪಟ್ಟಿಯಲ್ಲಿ ಶೆಟ್ಟರ್‌ ಹೆಸರಿಲ್ಲ?

ಇದೀಗ ಇಬ್ಬರ ಪಟ್ಟಿಯಲ್ಲಿಯೂ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಹೆಸರು ಇಲ್ಲದಿದ್ದರರೆ ಹೈಕಮಾಂಡ್‌ ತಾನೇ ಹೆಸರು ಸೇರಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

VISTARANEWS.COM


on

karnataka politics cm dcm travels to delhi with cabinet expansion discussion
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈಗಾಗಲೆ 8 ಸಚಿವರು ಪ್ರಮಾಣವಚನ ಸ್ವೀಕರಿಸಿರುವ ಕಾಂಗ್ರೆಸ್‌ ಸರ್ಕಾರ ಮೊದಲ ಬಾರಿಗೆ ಸಂಪುಟ ವಿಸ್ತರಣೆಗೆ ಕೈಹಾಕಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನವದೆಹಲಿಗೆ ಪ್ರಯಾಣಿಸಿದ್ದಾರೆ.

ತಮ್ಮ ತಮ್ಮ ಬೆಂಬಲಿಗರ ಹೆಸರುಗಳನ್ನು ಹಿಡಿದು ದೆಹಲಿಗೆ ಹೊರಟಿರುವ ಇಬ್ಬರೂ ನಾಯಕರ ಪಟ್ಟಿಯಲ್ಲಿ ಮಾಜಿ ಸಿಎಂ ಹಾಗೂ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಆಗಮಿಸಿದ ಜಗದೀಶ್‌ ಶೆಟ್ಟರ್‌ ಹೆಸರು ಇಲ್ಲ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ಭೈರತಿ ಸುರೇಶ್, ಆರ್. ವಿ. ದೇಶಪಾಂಡೆ, ಎಚ್. ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಬಸವರಾಜ ರಾಯರಡ್ಡಿ, ಎಂ. ಕೃಷ್ಣಪ್ಪ, ಕೆ.ಎನ್. ರಾಜಣ್ಣ, ಶಿವರಾಜ್ ತಂಗಡಗಿ, ಸಂತೋಷ ಲಾಡ್, ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಕೃಷ್ಣಭರೇಗೌಡ ಅವರ ಹೆಸರುಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಎನ್.ಎ. ಹ್ಯಾರಿಸ್, ತನ್ವೀರ್ ಸೇಠ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕುಣಿಗಲ್ ರಂಗನಾಥ್, ಬಾಲಕೃಷ್ಣ, ಚಲುವರಾಯಸ್ವಾಮಿ ಸೇರಿದಂತೆ ಇನ್ನೂ‌ ಕೆಲವರು ಹೆಸರುಗಳನ್ನು ಪಟ್ಟಿಯಲ್ಲಿ ನಮೂದಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಿರಿಯರನ್ನು ಕಡೆಗಣಿಸಬಾರದು, ಎಲ್ಲಾ ಸಮುದಾಯಗಳ ಪ್ರಾತಿನಿಧ್ಯ ಸಂಪುಟದಲ್ಲಿರಬೇಕು, ಜಿಲ್ಲಾವಾರು ಪ್ರಾತಿನಿಧ್ಯ ಕೊಡಬೇಕು ಎಂದು ತಮ್ಮ ಬೆಂಬಲಿಗರ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಲಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಸಚಿವರನ್ನಾಗಿ ಮಾಡಬೇಕು, ಭಾರತ್ ಜೋಡೋ, ಮೇಕೆದಾಟು ಸೇರಿದಂತೆ ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿದವರಿಗೆ ಆಧ್ಯತೆ ಕೊಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಾದ ಮಂಡಿಸಲಿದ್ದಾರೆ.

ತಮ್ಮ ಬೆಂಬಲಿಗರು ಸಚಿವರಾಗಬೇಕು ಎನ್ನುವುದು ಒಂದೆಡೆಯಾದರೆ ಎದುರಾಳೀ ಬಣದ ಕೆಲವರು ಸಚಿವರಾಗಬಾರದು ಎಂದು ಎರಡೂ ಬಣ ಒತ್ತಾಯ ಮಾಡುತ್ತಿರುವುದು ಹೈಕಮಾಂಡ್ ಗೆ ತಲೆ ನೋವು ಉಂಟು ಮಾಡಿದೆ. ಇವರಿಬ್ಬರ ಒತ್ತಡದ ನಡುವೆ ಜಿಲ್ಲಾವಾರು ಪ್ರಾತಿನಿಧ್ಯ ಹೇಗೆ ನಿಭಾಯಿಸಬೇಕು? ಮುಸ್ಲಿಂ ಕೋಟಾಗಳೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ.

ಶೆಟ್ಟರ್‌ಗೆ ಸಚಿವಸ್ಥಾನ?
ಇಬ್ಬರೂ ನಾಯಕರು ತಂತಮ್ಮ ಬೆಂಬಲಿಗೆ ಪಟ್ಟಿ ಹಿಡಿದು ದೆಹಲಿಗೆ ಹೊರಟಿದ್ದು, ಇಬ್ಬರ ಪಟ್ಟಿಯಲ್ಲೂ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಇಲ್ಲ ಎನ್ನಲಾಗಿದೆ. ತಮ್ಮ ಬೆಂಬಲಿಗರನ್ನು ಸೇರಿಸಿದರೆ ಸಾಕು ಎನ್ನುತ್ತಿರುವ ನಾಯಕರು ಶೆಟ್ಟರ್‌ ಹೆಸರನ್ನು ಸೇರಿಸಿ ತಮ್ಮ ಕಡೆಯ ಒಂದು ಕೋಟಾವನ್ನು ಕಳೆದುಕೊಳ್ಳುವುದೇಕೆ ಎಂಬ ಚಿಂತೆಯಲ್ಲಿವೆ ಎನ್ನಲಾಗಿದೆ.

ಚುನಾವಣೆಗೆ ಮುನ್ನ ಬಿಜೆಪಿಯಿಂದ ಬೇಸರಿಸಿಕೊಂಡು ಕಾಂಗ್ರೆಸ್‌ಗೆ ಆಗಮಿಸಿದ ಜಗದೀಶ ಶೆಟ್ಟರ್‌ ಅವರು ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ವಿರುದ್ಧ ಸೋಲುಂಡಿದ್ದರು. ಸ್ವತಃ ಶೆಟ್ಟರ್‌ ಸೋತರಾದರೂ ಬಿಜೆಪಿಯಲ್ಲಿ ಅವರಿಗೆ ಅವಮಾನವಾಗಿದ್ದರಿಂದ ಒಟ್ಟಾರೆ ಲಿಂಗಾಯತ ಸಮುದಾಯದಲ್ಲಿ ಬೇಸರವಾಗಿ ಅನೇಕ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಮತದಾರರು ಕಾಂಗ್ರೆಸ್‌ ಕಡೆಗೆ ವಾಲಿದ್ದಾರೆ ಎನ್ನಲಾಗಿದೆ. ತಾವು ಲಿಂಗಾಯತರಿಗೆ ಗೌರವ ನೀಡುತ್ತೇವೆ ಎನ್ನುವುದನ್ನು ಶೆಟ್ಟರ್‌ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಸಾಬೀತುಪಡಿಸಲಾಗುತ್ತದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ. ಈ ಮೂಲಕ ಮುಂದಿನ ಚುನಾವಣೆಗಳಲ್ಲೂ ಲಿಂಗಾಯತ ಮತಗಳು ತಮ್ಮಲ್ಲೇ ಉಳಿಯಬೇಕು ಎಂಬ ನಿರೀಕ್ಷೆಯಿದೆ. ಶೆಟ್ಟರ್‌ ಈಗ ಶಾಸಕರಲ್ಲದಿದ್ದರೂ, ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಅವಕಾಶ ಇರುವುದರಿಂದ ಸಚಿವರಾಗಿ ಮಾಡಲಾಗುತ್ತದೆ ಎಂಬ ಮಾತಿದೆ.

ನಾಯಕರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರೂ ಇಲ್ಲ ಎಂಬ ಚರ್ಚೆ ನಡೆಯುತ್ತಿದೆ. ಇದೀಗ ಇಬ್ಬರ ಪಟ್ಟಿಯಲ್ಲಿಯೂ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಹೆಸರು ಇಲ್ಲದಿದ್ದರರೆ ಹೈಕಮಾಂಡ್‌ ತಾನೇ ಹೆಸರು ಸೇರಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಫೇಸ್‌ಬುಕ್‌ನಲ್ಲೇ ಘೋಷಣೆ !

ಅಧಿಕೃತ ಘೋಷಣೆ ಮುನ್ನವೇ ನೂತನ ಸಚಿವರ ಹೆಸರು ಬಹಿರಂಗವಾಯಿತೇ ಎಂಬ ಪ್ರಶ್ನೆಗಳೆದ್ದಿವೆ. ತಮ್ಮನ್ನು ಭೇಟಿಯಾಗಲು ಬಂದ ಶಾಸಕರ ಕುರಿತು ಫೇಸ್‌ಬುಕ್‌ ಪೋಸ್ಟ್‌ ಹಾಕಿರುವ ಡಿ.ಕೆ. ಶಿವಕುಮಾರ್‌, ನೂತನ ಸಚಿವರು ಎಂದು ಸಂಬೋಧಿಸಿದ್ದಾರೆ.

ಸಚಿವ ಸಂಪುಟದ ನೂತನ ಸಚಿವರಾದ ಈಶ್ವರ್ ಖಂಡ್ರೆ, ಶೃಂಗೇರಿ ಶಾಸಕರಾದ ಶ್ರೀ ಟಿ. ಡಿ. ರಾಜೇಗೌಡ, ಚಿತ್ತಾಪುರ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ, ಜೇವರ್ಗಿ ಶಾಸಕರಾದ ಡಾ.ಅಜಯ್ ಸಿಂಗ್ ರವರು ಇಂದು ನನ್ನನ್ನು ನನ್ನ ನಿವಾಸದಲ್ಲಿ ಭೇಟಿ ಮಾಡಿ, ಶುಭ ಹಾರೈಸಿದರು ಎಂದು ಪೋಸ್ಟ್ ಮಾಡಲಾಗಿದೆ. ಈ ಪಟ್ಟಿಯಲ್ಲಿ ಪ್ರಿಯಾಂಕ್‌ ಖರ್ಗೆ ಮಾತ್ರ ಸದ್ಯ ಸಚಿವರಾಗಿದ್ದಾರೆ. ಉಳಿದವರಿಗೂ ಸಚಿವ ಸ್ಥಾನ ಸಿಗುವುದೇ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ವಿಡಿಯೊ ಬಿಟ್ಟ ಕಾರ್ತಿಕ್‌ ಎಲ್ಲಿ? ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು?: ಎಚ್‌ಡಿಕೆ ಕಿಡಿ

Prajwal Revanna Case: ಪ್ರಜ್ವಲ್‌ ಬಗ್ಗೆ ವಿಡಿಯೊ ಬಿಟ್ಟಿದ್ದ ಕಾರ್ತಿಕ್‌ ಎಲ್ಲಿದ್ದಾನೆ? ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಿಂದ (Prajwal Revanna Case) ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಾಕಷ್ಟು ಇರಿಸುಮುರಿಸು ಉಂಟಾಗಿದೆ. ಪದ್ಮನಾಭನಗರದ ನಿವಾಸದ ಗೇಟ್‌ ಮುಂಭಾಗ ಪ್ರಕರಣದ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಗರಂ ಆಗಿರುವ ಅವರು, ಪದೇಪದೇ ಏನು ಕೇಳುತ್ತೀರಿ, ನಿಮಗೆ ಏನು ಕೆಲಸ, ಇಲ್ಲಿ ಯಾಕೆ ಬಂದಿದ್ದೀರಾ? ಸುದ್ದಿ ಬಿಡುವವರ ಜತೆ ಹೋಗಿ ಎಂದು ಕಿಡಿಕಾರಿದ್ದಾರೆ.

ನೆನ್ನೆ ಡ್ರೈವರ್ ಒಬ್ಬ ವಿಡಿಯೋ ಮಾಡಿ ಹೇಳಿದನಲ್ಲಾ? ಯಾರು ಆ ವಿಡಿಯೊ ಮಾಡಿದ್ದು? ಇಲ್ಲಿ ಚಿಲ್ಲರೆ ಅಣ್ಣ ತಮ್ಮ ಇದ್ದಾರಲ್ಲವೇ? ಅವರು ಏನ್ ಹೇಳಿದರು? ಕುಮಾರಸ್ವಾಮಿ ಬಿಟ್ಟಿದ್ದು ಎನ್ನುತ್ತಾರೆ. ಡ್ರೈವರ್ ಕಾರ್ತಿಕ್ ಎಲ್ಲಿದ್ದಾನೆ ಈಗ? ಮಲೇಷ್ಯಾದಲ್ಲಿ ಇದಾನೆ, ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಆ ಡ್ರೈವರ್‌ ಕಾರ್ತಿಕ್ ಏನು ಹೇಳಿಕೆ ಕೊಟ್ಟಾ? ದೇವರಾಜೇಗೌಡ ಕೈಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದ. ಇಂದು ಬೆಳಗ್ಗೆ ಈ ಚಿಲ್ಲರೆ ಅಣ್ಣ ತಮ್ಮ ಇದಾರಲ್ವಾ (ಡಿಕೆಶಿ ಹಾಗೂ ಡಿ.ಕೆ ಸುರೇಶ್), ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿಯನ್ನು ಈ ಮೊದಲು ದೇವರಾಜೇಗೌಡ ಭೇಟಿಯಾಗಿದ್ದ ಎಂದು ಈ 420ಗಳು ಹೇಳಿದ್ದಾರೆ. ಹಾಗಾದರೆ ಎಲ್ಲಿದ್ದಾನೆ ಈ ಕಾರ್ತಿಕ್? ಯಾರು ಕಳುಹಿಸಿದರು? ಎಲ್ಲಿಂದ ವಿಡಿಯೋ ಮಾಡಿ ಬಿಟ್ಟದ್ದಾನೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕೆಣಕಿದ್ದಾರೆ, ಸುಮ್ಮನೆ ಬಿಡಲ್ಲ ನಾನು ಎಂದು ಡಿಕೆ ಬ್ರದರ್ಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ | Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

ವಿದೇಶಕ್ಕೆ ಹಾರಿದ್ರಾ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್?

ಎಸ್‌ಐಟಿಯಿಂದ ಪ್ರಜ್ವಲ್‌ ರೇವಣ್ಣ ಪೆನ್ ಡ್ರೈವ್ ಪ್ರಕರಣ ತನಿಖೆ ವೇಗ ಪಡೆದ ಬೆನ್ನಲ್ಲೇ ಪ್ರಜ್ವಲ್ ಮಾಜಿ ಕಾರು ಚಾಲಕ, ಪೆನ್ ಡ್ರೈವ್ ಕಿಂಗ್ ಪಿನ್ ಕಾರ್ತಿಕ್ ವಿದೇಶಕ್ಕೆ ಹಾರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಸ್‌ಐಟಿ ತನಿಖೆಗೆ ಹಾಜರಾಗುತ್ತಿದ್ದೇನೆ ಎಂದು ಕಾರ್ತಿಕ್ ವಿಡಿಯೊ ಮಾಡಿ ಹರಿಬಿಟ್ಟಿದ್ದರು. ಆದರೆ, ಈಗ ತನಿಖೆ ದಿಕ್ಕು ತಪ್ಪಿಸಲು ಕಾರ್ತಿಕ್ ವಿಡಿಯೊ ಮಾಡಿದ್ದರಾ ಎಂಬ ಅನುಮಾನಗಳು ಮೂಡಿವೆ.

ವಕೀಲ ದೇವರಾಜೇಗೌಡರಿಗೆ ಮಾತ್ರ ವಿಡಿಯೋ ನೀಡಿದ್ದಾಗಿ ಕಾರ್ತಿಕ್ ಹೇಳಿಕೆ ಕೊಟ್ಟಿದ್ದರು. ಆದರೆ ನನಗಿಂತ ಮೊದಲೇ ಡಿ.ಕೆ.ಶಿವಕುಮಾರ್‌ಗೆ ಕಾರ್ತಿಕ್ ವಿಡಿಯೊ ತಲುಪಿಸಿದ್ದ ಎಂದು ವಕೀಲ ಹೇಳಿದ್ದರು. ಈ ಮೂಲಕ ವಿಡಿಯೊ ಹರಿಬಿಟ್ಟ ಆರೋಪದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೊವನ್ನು ಪ್ರಥಮವಾಗಿ ತನ್ನ ಬಳಿಯೇ ಕಾರ್ತಿಕ್ ಇಟ್ಟುಕೊಂಡಿದ್ದರು. ಇದೀಗ ವೀಡಿಯೊ ವೈರಲ್ ಆದ ನಂತರ ಎಸ್ಕೇಪ್ ಆಗಲು ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಚುನಾವಣೆ ಮತದಾನದ ಸಂದರ್ಭದಲ್ಲೇ ವಿಡಿಯೊಗಳು ವೈರಲ್‌ ಆಗಿದ್ದವು. ಹೀಗಾಗಿ ಯಾರು ವಿಡಿಯೊ ಹರಿಬಿಟ್ಟರು ಎಂಬ ಬಗ್ಗೆ ತಿಳಿಯಲು ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ.

Continue Reading

ಉತ್ತರ ಕನ್ನಡ

Lok Sabha Election 2024: ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಬಿಜೆಪಿಗೆ ಅಧಿಕ ಬಹುಮತ ನಿಶ್ಚಿತ: ಹರಿಪ್ರಕಾಶ್‌ ಕೋಣೆಮನೆ

Lok Sabha Election 2024: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಹಾಗೂ ಮಂಡಲ ಪ್ರಮುಖರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಯಲ್ಲಾಪುರ ಪಟ್ಟಣದಾದ್ಯಂತ ಬುಧವಾರ ಮನೆ ಮನೆ ಪ್ರಚಾರ ನಡೆಸಿದರು.

VISTARANEWS.COM


on

BJP State Spokesperson Hariprakash konemane and leaders Election Campaign for BJP Candidate Vishweshwar Hegde Kageri in Yallapura
Koo

ಯಲ್ಲಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಹಾಗೂ ಮಂಡಲ ಪ್ರಮುಖರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಯಲ್ಲಾಪುರ ಪಟ್ಟಣದಾದ್ಯಂತ ಬುಧವಾರ ಮನೆ ಮನೆ ಪ್ರಚಾರ (Lok Sabha Election 2024) ನಡೆಸಿದರು.

ಮಹಾಸಂಪರ್ಕ ಅಭಿಯಾನದ ಅಂಗವಾಗಿ ಪಟ್ಟಣದ ಅಂಗಡಿಗಳು, ಸಂತೆ ಮಾರುಕಟ್ಟೆ, ರಿಕ್ಷಾ ನಿಲ್ದಾಣ ಹಾಗೂ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರ ಪ್ರಚಾರ ನಡೆಸಲಾಯಿತು.

ಇದನ್ನೂ ಓದಿ: Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಈ ವೇಳೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿ, ಎಲ್ಲರ ಬಾಯಲ್ಲಿ ‘ಮೋದಿ ಮತ್ತೊಮ್ಮೆ’ ಘೋಷಣೆ ಮೊಳಗುತ್ತಿದೆ. ಎಲ್ಲ ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗಿಂತ ಹೆಚ್ಚು ಬಹುಮತ ಪಡೆದು ಗೆಲ್ಲುವುದು ನಿಶ್ಚಿತ. ಅದರಲ್ಲಿಯೂ ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ಅತ್ಯಧಿಕ ಬಹುಮತ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಉಮೇಶ ಭಾಗ್ವತ್, ಜಿ.ಎನ್. ಗಾಂವ್ಕರ್, ಗಣಪತಿ ಮಾನಿಗದ್ದೆ, ರಾಘವೇಂದ್ರ ಭಟ್ಟ ಹಾಸಣಗಿ, ರಾಮು ನಾಯ್ಕ, ಸೋಮೇಶ್ವರ ನಾಯ್ಕ, ರಾಜೇಶ್ ಭಟ್ಟ, ಶ್ರೀನಿವಾಸ ಭಟ್ಟ ಹಾಗೂ ಕಾರ್ಯಕರ್ತರು, ಇತರರು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Lok Sabha Election 2024: ಕಳೆದ ಚುನಾವಣೆಯಲ್ಲಿ ನನ್ನ ಜತೆ ಸ್ವತಃ ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದರು: ರೆಡ್ಡಿ ಸ್ಫೋಟಕ ಹೇಳಿಕೆ

Lok Sabha Election 2024: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನೊಂದಿಗೆ ಕೈಜೋಡಿಸಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ನನಗೆ ಸಾಥ್ ನೀಡಿದ್ದರು ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

VISTARANEWS.COM


on

MLA G Janardan Reddy latest statement in Gangavathi
Koo

ಗಂಗಾವತಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನೊಂದಿಗೆ ಕೈಜೋಡಿಸಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ನನಗೆ ಸಾಥ್ ನೀಡಿದ್ದರು ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಜನಾರ್ದನ ರೆಡ್ಡಿ ಬಾಂಬ್ ಅವರು ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರ ಭಾಷಣದಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಗಂಗಾವತಿ ನಗರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ನನ್ನೊಂದಿಗೆ (ರೆಡ್ಡಿ) ಹೊಂದಾಣಿಕೆ ಮಾಡಿಕೊಂಡು ತನ್ನ ಸೋಲಿಗೆ ಕಾರಣರಾದರು ಎಂದು ಇಕ್ಬಾಲ್ ಅನ್ಸಾರಿ ಪದೇ ಪದೆ ಪ್ರಸ್ತಾಪಿಸುತ್ತಾರೆ. ಆದರೆ, ಅಸಲಿಗೆ ವಾಸ್ತವವೇ ಬೇರೆ ಇದೆ. ನನ್ನೊಂದಿಗೆ ಕೈಜೋಡಿಸಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ನನಗೆ ಸಾಥ್ ನೀಡಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಳ್ಳುವ ವಿಶ್ವಾಸ ಸ್ವತಃ ಕಾಂಗ್ರೆಸ್ ಪಕ್ಷಕ್ಕೂ ಇರಲಿಲ್ಲ. ಹೀಗಾಗಿ ಸ್ವತಃ ಸಿದ್ದರಾಮಯ್ಯ ನನ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ರೆಡ್ಡಿಯ ಕೆಆರ್‌ಪಿಪಿ ಎಲ್ಲಾದರೂ ಒಂದು ಹತ್ತು ಕ್ಷೇತ್ರದಲ್ಲಿ ಗೆದ್ದುಬಿಟ್ಟರೆ ಸರ್ಕಾರ ರಚನೆಯ ಸಂದರ್ಭದಲ್ಲಿ ಅವಸರಕ್ಕೆ ಇರಲಿ ಎಂಬ ಕಾರಣಕ್ಕೆ ಸ್ವತಃ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತು ನನ್ನ ಮಧ್ಯೆ ಒಳ ಒಪ್ಪಂದವಾಗಿತ್ತು. ಇದನ್ನು ಅರಿಯದ ಇಕ್ಬಾಲ್ ಅನ್ಸಾರಿ, ಸ್ಥಳೀಯ ಕಾಂಗ್ರೆಸ್ ನಾಯಕರು ರೆಡ್ಡಿಯೊಂದಿಗೆ ಬುಕ್ ಆಗಿದ್ದಾರೆ ಎಂದು ಭಾವಿಸಿ ಚುನಾವಣೆ ಮುಗಿದ ಬಳಿಕ ತಮ್ಮ ಮನೆ ಬಾಗಿಲು ಹಾಕಿದರು. ಎರಡು ದಿನಗಳ ಬಳಿಕ ಓಪನ್ ಮಾಡಿದ್ದರು ಎಂದು ರೆಡ್ಡಿ ಹೇಳಿದರು.

ಸಿದ್ದರಾಮಯ್ಯ ಮತ್ತು ನನ್ನ ನಡುವೆ ನಡೆದ ಒಳ ಒಪ್ಪಂದದಿಂದಾಗಿಯೇ ಸಿದ್ದರಾಮಯ್ಯ ಅಪ್ಪಿತಪ್ಪಿಯೂ ಗಂಗಾವತಿಗೆ ಪ್ರಚಾರಕ್ಕೆ ಬರಲಿಲ್ಲ. ಅಷ್ಟೆ ಅಲ್ಲ, ನನ್ನ ಪತ್ನಿ ಪ್ರತಿನಿಧಿಸಿದ್ದ ಬಳ್ಳಾರಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಬೇಕಿದ್ದರೆ ಒಮ್ಮೆ ಪರಿಶೀಲಿಸಬಹುದು ಎಂದು ರೆಡ್ಡಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: Diabetic Chutney: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

ಈ ಹಿಂದೆ ಬೆಂಗಳೂರಿನಿಂದ ಬಳ್ಳಾರಿವರೆಗೂ ನಡೆಸಿದ ಪಾದಯಾತ್ರೆ, ರಾಜಕೀಯ ಸೇರಿದಂತೆ ಎಲ್ಲವನ್ನೂ ಮರೆತು ಬಿಡುವಂತೆ ಸಿದ್ದರಾಮಯ್ಯ ಕೇಳಿದ್ದರು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನನ್ನ ಬಗ್ಗೆ ಟೀಕೆ ಮಾಡಿಲ್ಲ. ಗಂಗಾವತಿಯಲ್ಲೂ ಮಾಡಿಲ್ಲ. ಆದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಕಣ್ಣೊರೆಸಬೇಕೆಂಬ ಕಾರಣಕ್ಕೆ ಲೋಕಸಭಾ ಚುನಾವಣೆ ಅಂಗವಾಗಿ ನಡೆದ ಸಮಾವೇಶದಲ್ಲಿ ಕಾಟಾಚಾರಕ್ಕಾಗಿ ಸಿದ್ದರಾಮಯ್ಯ ನನ್ನ ಮೇಲೆ ಟೀಕೆ ಮಾಡಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.

Continue Reading

ಕರ್ನಾಟಕ

Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

Prajwal Revanna Case: ಸಿಂಗಾಪುರದ ಸಿಎನ್‌ಎ ನ್ಯೂಸ್‌ ಚಾನೆಲ್‌ನಲ್ಲಿ ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ಸುದ್ದಿ ಪ್ರಸಾರವಾಗಿದ. ದೇಶದಾದ್ಯಂತ ಪ್ರಜ್ವಲ್‌ ರೇವಣ್ಣ ಪ್ರಕರಣ ಸಂಚಲನ ಸೃಷ್ಟಿಸಿರುವ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಕರಣ ಸದ್ದು ಮಾಡಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಕೇಸ್ ರಾಜ್ಯ, ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಕರಣ ಸದ್ದು ಮಾಡಿದೆ. ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಕರಣದ ಬಗ್ಗೆ ಸುದ್ದಿ ಪ್ರಸಾರವಾಗಿದ್ದು, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ ಪಕ್ಷದಿಂದ ಅಮಾನತು ಮಾಡಿರುವ ಕುರಿತು ಸುದ್ದಿ ಪ್ರಕಟವಾಗಿದೆ.

ಸಿಂಗಾಪುರದ ಸಿಎನ್‌ಎ ನ್ಯೂಸ್‌ ಚಾನೆಲ್‌ನಲ್ಲಿ ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ಸುದ್ದಿ ಪ್ರಸಾರವಾಗಿದೆ. ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಿದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ, ರೇವಣ್ಣ ಕುಟುಂಬ ಮಾತ್ರ ಆರೋಪಗಳಲ್ಲಿ ಹುರುಳಿಲ್ಲ ಎಂದು ತಿಳಿಸಿದೆ ಎಂದು ವಿದೇಶಿ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗಿದೆ.

ಇದನ್ನೂ ಓದಿ | Hassan Pen Drive Case: ಪ್ರಜ್ವಲ್‌ ರೇವಣ್ಣರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಕೋರಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ!

ಮೇ 3ರಂದು ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ, ಬಂದ ತಕ್ಷಣ ಎಸ್‌ಐಟಿ ವಶಕ್ಕೆ?

Hassan Pen Drive Case Prajwal seeks 7 days time to appear for questioning

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka politics) ಅತೀವ ಕೋಲಾಹಲ ಸೃಷ್ಟಿಸಿರುವ ಹಾಸನದ ಪೆನ್‌ಡ್ರೈವ್‌ ಪ್ರಕರಣದ (Hassan Pen Drive Case) ಅಶ್ಲೀಲ ವಿಡಿಯೋದಲ್ಲಿರುವ (Obscene video) ಪ್ರಧಾನ ಆರೋಪಿ, ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna) ಮೇ 3ರಂದು ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಅವರು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿದ್ದಾರೆ.

ಲುಪ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಮೇ 3ರ ಪ್ರಯಾಣಕ್ಕೆ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೇ 3 ಮಧ್ಯರಾತ್ರಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಅವರು ಆಗಮಿಸಬಹುದು. ಮೇ 4ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಅಥವಾ ಅವರು ವಿಮಾನದಿಂದ ಇಳಿದ ಕೂಡಲೇ ಅವರನ್ನು ವಿಶೇಷ ತನಿಖಾ ತಂಡ (SIT) ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮೊದಲ ಹಂತದ ಮತದಾನದ ದಿನವೇ ಪ್ರಜ್ವಲ್‌ ಅವರು ದೇಶ ಬಿಟ್ಟು ತೆರಳಿದ್ದರು. ಬ್ಯುಸಿನೆಸ್‌ ವೀಸಾವನ್ನು ಅವರು ಹೊಂದಿದ್ದಾರೆ. ಟೂರಿಸ್ಟ್‌ ವೀಸಾದಲ್ಲಿ ಅವರು ಜರ್ಮನಿಗೆ ತೆರಳಿದ್ದು, ಇದರ ಅವಧಿ 90 ದಿನಗಳ ಕಾಲ ಚಾಲೂ ಇರುತ್ತದೆ. CRPC41A ಸೆಕ್ಷನ್‌ ಪ್ರಕಾರ, ಅವರು ನೋಟೀಸ್‌ಗೆ ಸ್ಪಂದಿಸಿ ಹಾಜರಾಗದೆ ಇದ್ದರೆ ಅವರನ್ನು ಬಂಧಿಸಬಹುದಾಗಿದೆ.

ಏಕಾಏಕಿ ಬಂಧನವಿಲ್ಲ: ಪರಮೇಶ್ವರ್‌

ಆದರೆ ಹಾಗೆ ಏಕಾಏಕಿ ಯಾರನ್ನೂ ಬಂಧಿಸಲು ಮುಂದಾಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಇಂದು ಬೆಳಗ್ಗೆ ಹೇಳಿದ್ದಾರೆ. “ಅದಕ್ಕೆ ಪುರಾವೆಗಳು, ದೂರು, ದೂರಿನಲ್ಲಿ ಏನು ಹೇಳಿರುತ್ತಾರೆ ಅನ್ನೋದು ಮುಖ್ಯ. ಯಾವ ಸೆಕ್ಷನ್ ಬರುತ್ತೆ, ಅದರಲ್ಲಿ ‌ಅರೆಸ್ಟ್ ಮಾಡಬಹುದಾ, ಬೇಲ್ ಕೇಸಾ, ನಾನ್ ಬೇಲ್ ಕೇಸಾ ಅಂತ ನೋಡಬೇಕು. ಅದಕ್ಕೆ 41A CRPC ಸೆಕ್ಷನ್ ಅಡಿ‌ ನೊಟೀಸ್ ಕೊಟ್ಟಿದ್ದಾರೆ. ಅವರು 24 ಗಂಟೆ ಒಳಗೆ ಒಂದು ಹಾಜರಾಗಬೇಕು. ಹಾಜರಾಗದೇ ಹೋದರೆ SITಯವರು ಮುಂದಿನ ಪ್ರಕ್ರಿಯೆ ಮಾಡ್ತಾರೆ” ಎಂದಿದ್ದಾರೆ.

ಪ್ರಜ್ವಲ್‌ ತನಿಖೆ ಮುಖ್ಯ

ಸದ್ಯ ಪ್ರಜ್ವಲ್ ತನಿಖೆ ಎಸ್‌ಐಟಿಗೆ ತುಂಬಾ ಮುಖ್ಯವಾಗಿದೆ. ಎ1 ರೇವಣ್ಣ ಆಗಿದ್ದರೂ ಪ್ರಕರಣಗಳು ಹೊರಬಂದಿದ್ದು ಪ್ರಜ್ವಲ್ ರೇವಣ್ಣ ವಿಡೀಯೋಗಳಿಂದ ಆಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಸ್ಟೇಟ್‌ಮೆಂಟ್ ಇಲ್ಲಿ ಅಗತ್ಯವಿದೆ. ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna) ಹಾಗೂ ಪ್ರಜ್ವಲ್ ರೇವಣ್ಣ (Hassan MP Prajwal Revanna) ಇವರಿಬ್ಬರ ಹೊಳೆನರಸೀಪುರ ಮನೆಯ ಬಾಗಿಲಿಗೆ ಇಂದು ನೊಟೀಸ್ (Notice) ಅನ್ನು ಎಸ್‌ಐಟಿ (SIT) ಟೀಂ ಅಂಟಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ತನಿಖೆಗೆ ಬೇಕು ಎಂದರೆ ಪ್ರಜ್ವಲ್ ಹಾಜರಾಗ್ತಾನೆ ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ಬಾರದಿದ್ದಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗಬಹುದು. ಆದರೆ ಈಗಾಗಲೇ ಎಸ್‌ಐಟಿ ವಿಚಾರಣೆ ನೋಟೀಸ್‌ ಜಾರಿ ಮಾಡಿದೆ. ಇದಕ್ಕೆ ಉತ್ತರಿಸದೆ ತಲೆ ಮರೆಸಿಕೊಂಡರೆ ಆರೋಪಿಗೆ ಇಂಟರ್‌ಪೋಲ್ ಮುಖಾಂತರ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೊಟೀಸ್ ಜಾರಿ ಮಾಡುವ ಸಾಧ್ಯತೆಯೂ ಎಸ್‌ಐಟಿ ಮುಂದಿದೆ.

ಈಗಾಗಲೇ ಡ್ರೈವರ್ ಕಾರ್ತಿಕ್‌ನನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿದೆ. ಹಾಗೂ ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿದೆ. ನಾಳೆ ಅಥವ ನಾಡಿದ್ದು CRPC 164 ಅಡಿಯಲ್ಲಿ ಸ್ಟೆಟ್ಮೆಂಟ್ ಪಡೆಯಲಿದೆ. ವಿಚಾರಣೆ ಬಳಿಕ ಕಾರ್ತೀಕ್ ಮೊಬೈಲ್ ಸೀಜ್ ಮಾಡಿ ಎಫ್ಎಸ್ಎಲ್‌ಗೆ ವಿಧಿವಿಜ್ಞಾನ ಪರಿಶೀಲನೆಗಾಗಿ ಕಳಿಸಲಾಗಿದೆ.

ಇದನ್ನೂ ಓದಿ: Hassan Pen Drive Case: ಹೊಳೆನರಸೀಪುರದ ಮನೆ ಬಾಗಿಲಿಗೆ ನೊಟೀಸ್‌ ಅಂಟಿಸಿ ಎಸ್‌ಐಟಿ ವಾಪಸ್!‌

ಹೋಮ ಮಾಡಿಸುತ್ತಿರುವ ರೇವಣ್ಣ

ತಮ್ಮ ವಿರುದ್ಧ ಎಸ್ಐಟಿ ತನಿಖೆ ಚುರುಕುಗೊಂಡಿರುವ ನಡುವೆ ರೇವಣ್ಣ ದೇವರು ದಿಂಡಿರ ಮೊರೆ ಹೋಗಿದ್ದಾರೆ. ಹೊಳೆನರಸೀಪುರದ ಅವರ ಮನೆಯಲ್ಲಿ ಹೋಮ ಹವನ ಮಾಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎದುರಾದ ಸಂಕಷ್ಟ ನಿವಾರಣೆಗಾಗಿ ಮನೆಯೊಳಗೇ ಹೋಮ ಕುಂಡ ನಿರ್ಮಿಸಿ ಬೆಳಗ್ಗೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ.

Continue Reading
Advertisement
Pakistan Teen
ದೇಶ4 mins ago

ಪಾಕ್‌ ಯುವತಿಗೆ ಭಾರತದ ಹಿಂದು ವ್ಯಕ್ತಿ ಹೃದಯದ ಕಸಿ; ತಕರಾರು ತೆಗೆದ ನೆರೆ ರಾಷ್ಟ್ರದ ಇಸ್ಲಾಂ ಧರ್ಮಗುರು!

Prajwal Revanna Case
ಕರ್ನಾಟಕ17 mins ago

Prajwal Revanna Case: ವಿಡಿಯೊ ಬಿಟ್ಟ ಕಾರ್ತಿಕ್‌ ಎಲ್ಲಿ? ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು?: ಎಚ್‌ಡಿಕೆ ಕಿಡಿ

KL Rahul
ಕ್ರಿಕೆಟ್51 mins ago

KL Rahul: ಟಿ20 ವಿಶ್ವಕಪ್​ನಲ್ಲಿ ರಾಹುಲ್​ಗೆ ಅವಕಾಶ ಸಿಗದಿರಲು ಕಾರಣ ತಿಳಿಸಿದ ಮಾಜಿ ಆಟಗಾರ

Rahul Gandhi
ದೇಶ59 mins ago

Rahul Gandhi: ರಾಹುಲ್‌ ಗಾಂಧಿಯನ್ನು ಹೊಗಳಿದ ಪಾಕ್‌ ಮಾಜಿ ಸಚಿವ; ತಿರುಗೇಟು ಕೊಟ್ಟ ಬಿಜೆಪಿ

BJP State Spokesperson Hariprakash konemane and leaders Election Campaign for BJP Candidate Vishweshwar Hegde Kageri in Yallapura
ಉತ್ತರ ಕನ್ನಡ1 hour ago

Lok Sabha Election 2024: ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಬಿಜೆಪಿಗೆ ಅಧಿಕ ಬಹುಮತ ನಿಶ್ಚಿತ: ಹರಿಪ್ರಕಾಶ್‌ ಕೋಣೆಮನೆ

MLA G Janardan Reddy latest statement in Gangavathi
ಕರ್ನಾಟಕ2 hours ago

Lok Sabha Election 2024: ಕಳೆದ ಚುನಾವಣೆಯಲ್ಲಿ ನನ್ನ ಜತೆ ಸ್ವತಃ ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದರು: ರೆಡ್ಡಿ ಸ್ಫೋಟಕ ಹೇಳಿಕೆ

Prajwal Revanna Case
ಕರ್ನಾಟಕ2 hours ago

Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

Prajwal Revanna Case BJP will not be with those who do injustice to women says Amit Shah
ರಾಜಕೀಯ2 hours ago

Prajwal Revanna Case: ಮಹಿಳೆಗೆ ಅನ್ಯಾಯ ಮಾಡಿದ್ರೆ ಅಂಥವರ ಜತೆ ಬಿಜೆಪಿ ಇರಲ್ಲ; ಪ್ರಜ್ವಲ್‌ನನ್ನು ಬಿಟ್ಟಿದ್ದು ಕಾಂಗ್ರೆಸ್‌ ತಪ್ಪು ಎಂದ ಶಾ

Adhir Ranjan
ದೇಶ2 hours ago

Adhir Ranjan: ಟಿಎಂಸಿ ಬದಲು ಬಿಜೆಪಿಗೆ ಮತ ಹಾಕೋದೇ ಬೆಸ್ಟ್‌ ಎಂದ ಕಾಂಗ್ರೆಸ್‌ ನಾಯಕ!

Viral Video
ಕ್ರಿಕೆಟ್2 hours ago

Viral Video: ಕಾಲಿನ ಗಾಯವನ್ನು ಲೆಕ್ಕಿಸದೆ ರೋಲರ್ ಓಡಿಸಿ ಪಿಚ್​ ಸಿದ್ಧಪಡಿಸಿದ ಮೊಹಮ್ಮದ್​ ಶಮಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌