Karnataka Weather: ಇಂದು ಕರಾವಳಿ, ಬೆಳಗಾವಿ, ವಿಜಯಪುರ ಸೇರಿ ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ! - Vistara News

ಕರ್ನಾಟಕ

Karnataka Weather: ಇಂದು ಕರಾವಳಿ, ಬೆಳಗಾವಿ, ವಿಜಯಪುರ ಸೇರಿ ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ!

Karnataka Weather: ಆಗಸ್ಟ್ 01 ರವರೆಗೆ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಲ್ಲಿ ಆರ್ದ್ರ ಹವಾಮಾನವು ಮುಂದುವರೆಯುವ ಸಾಧ್ಯತೆಯಿದ್ದು, ಜುಲೈ 28ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮತ್ತು ಅತಿ ಭಾರಿ ಮಳೆ, ನಂತರ ಮಳೆ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿ ತುಂತುರು ಮಳೆ ಮತ್ತು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.

VISTARANEWS.COM


on

Karnataka Weather
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜುಲೈ 25ರಂದು ಗುರುವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ (Heavy Rain) ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ.

ಇನ್ನು ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು (40-50 kmph) ತಲುಪುವ ಸಾಧ್ಯತೆಯಿದೆ ಹಾಗೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿಯ ವೇಗವು (30-40 kmph) ತಲುಪುವ ಸಾಧ್ಯತೆಯಿದೆ ಹಾಗೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಅದೇ ರೀತಿ ಜುಲೈ 26ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಬೆಳಗಾವಿ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿರಂತರ ಗಾಳಿಯ ವೇಗವು (40-50 kmph) ತಲುಪುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು (40-50 kmph) ತಲುಪುವ ಸಾಧ್ಯತೆಯಿದೆ ಹಾಗೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಜುಲೈ 27ರಂದು ಕೂಡ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ, ಉತ್ತರ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಜುಲೈ 28ರಂದು ಕರಾವಳಿಯ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಮತ್ತು ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮೀನುಗಾರರಿಗೆ ಎಚ್ಚರಿಕೆ

ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಗಂಟೆಗೆ 35 ಕಿ.ಮೀ. ನಿಂದ 45 ಕಿ.ಮೀ. ವೇಗದಲ್ಲಿ 55 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯು ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ | Khajjiar Tour: ಖಜ್ಜಿಯಾರ್! ಇದು ಹಿಮಾಲಯದ ತಪ್ಪಲಿನಲ್ಲಿರುವ ಮಿನಿ ಸ್ವಿಟ್ಜರ್ಲೆಂಡ್!

ಜು.26ರವರೆಗಿನ ಬೆಂಗಳೂರು, ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು 30-40 ಕಿ.ಮೀ. ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ° C ಮತ್ತು 21° C ಆಗಿರಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಭಾರಿ ಮಳೆ ಎಚ್ಚರಿಕೆ; ನಾಳೆ ಹಾಸನದ ಈ ಶಾಲೆಗಳಿಗೆ ರಜೆ ಘೋಷಣೆ

Karnataka Weather Forecast : ರಾಜ್ಯಾದ್ಯಂತ ಮಳೆ ಅಬ್ಬರ (Rain News) ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ಹಾಸನದ ಕೆಲ ಶಾಲೆಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. ಮುಂದಿನ 24ಗಂಟೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

VISTARANEWS.COM


on

By

karnataka weather Forecast
Koo

ಹಾಸನ: ಹಾಸನ ಜಿಲ್ಲೆಯಾದ್ಯಂತ ಮಳೆ (Heavy rain) ಮುಂದುವರಿದಿದ್ದು, ಆರು ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ (Karnataka Weather Forecast) ಮಾಡಲಾಗಿದೆ. ಜು.26ರಂದು ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಹಾಗೂ ಅರಕಲಗೂಡು ತಾಲೂಕುಗಳಿಗೆ ರಜೆ ಘೋಷಿಸಿ ಡಿಡಿಪಿಐ ಹೆಚ್.ಕೆ.ಪಾಂಡು ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ.

ಭಾರಿ ಮಳೆಗೆ ಉಕ್ಕಿ ಹರಿದ ಐಗೂರು ಹೊಳೆ

ಭಾರಿ ಮಳೆಗೆ ಹಾಸನದ ಐಗೂರು ಹೊಳೆ ಉಕ್ಕಿ ಹರಿದಿದೆ. ಪರಿಣಾಮ ಯಡಿಕೇರಿ-ಕುಂಬ್ರಳ್ಳಿ ,ಹೆತ್ತೂರು ನಡುವಿನ ಸೇತುವೆ ಮಳುಗಡೆಯಾಗಿದೆ. ಸಕಲೇಶಪುರ ತಾಲೂಕಿನ ಯಡಿಕೇರಿ-ಕುಂಬ್ರಳ್ಳಿ ನಡುವಿನ ಸೇತುವೆ ಮುಳುಗಡೆಯಿಂದಾಗಿ ಯಡಿಕೇರಿ-ಕುಂಬ್ರಳ್ಳಿ-ಹೆತ್ತೂರು ಹಾಗೂ ಸಕಲೇಶಪುರಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಟ ಅನುಭವಿಸಿದರು. ಜನ-ಜಾನುವಾರು, ವಾಹನ ಓಡಾಡಲಾಗದೆ ತೀವ್ರ ಸಮಸ್ಯೆಗೆ ಸಿಲುಕಬೇಕಾಯಿತು. ಸೇತುವೆ ದುರಸ್ತಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸೇತುವೆ ಮೇಲೆ ಅಪಾಯಕಾರಿ ರೀತಿಯಲ್ಲಿ ನೀರು ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಸಂಚಾರ ನಿಷೇಧ ಹಾಕಲಾಗಿದೆ. ಸೇತುವೆಯ ಎರಡೂ ಬದಿಗೂ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ತಡೆಹಿಡಿಯಲಾಗಿದೆ.

ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗುತ್ತಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ‌ಯಲ್ಲಿ ಆರು ಕ್ರಸ್ಟ್ ಗೇಟ್‌ಗಳ ಮೂಲಕ 65 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಹೇಮಾವತಿ ನದಿಯ ತಗ್ಗು ಪ್ರದೇಶದ ಮತ್ತು ನದಿಯ ಎರಡು ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳವಂತೆ ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರಿಂದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

ಭಾರಿ ಮಳೆ ಮುನ್ಸೂಚನೆ

ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ಜತೆಗೆ ಬೆಳಗಾವಿ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಭರ್ಜರಿ ಮಳೆಯೊಂದಿಗೆ ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಘಟ್ಟ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಗಾಳಿ ವೇಗವು ವಿಪರೀತವಾಗಿರಲಿದೆ.

ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ಕೆಲವೆಡೆ ಗಾಳಿ ಜತೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆ ಇದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಯಾದಗಿರಿ

Yadgiri News: ಜಿಲ್ಲಾ ಮಟ್ಟದಲ್ಲಿ ಪ್ರಗತಿಗೆ ಪ್ರಧಾನಿಯ 15 ಅಂಶಗಳ ಕಾರ್ಯಕ್ರಮ

Yadgiri News: ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 49 ಘೋಷಿತ ಕೊಳಚೆ ಪ್ರದೇಶಗಳಿದ್ದು, ಅಲ್ಲಿ ಸುಮಾರು 50,226 ಜನಸಂಖ್ಯೆ ವಾಸಿಸುತ್ತಿದ್ದು, ಇದರಲ್ಲಿ ಅಲ್ಪಸಂಖ್ಯಾತರ 1081 ಕುಟುಂಬಗಳಿದ್ದು, ಸುಮಾರು 6445 ಅಲ್ಪಸಂಖ್ಯಾತ ಜನರು ವಾಸಿಸುತ್ತಿದ್ದಾರೆ. ಇವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಸೂಚಿಸಿದ್ದಾರೆ.

VISTARANEWS.COM


on

Prime Minister 15 Point Programme District Level Meeting at Yadgiri
Koo

ಯಾದಗಿರಿ: ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅರ್ಹರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಸಂಬಂಧಿಸಿದ ಅಧಿಕಾರಿಗಳಿಗೆ (Yadgiri News) ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮ ಜಿಲ್ಲಾ ಮಟ್ಟದ 2024-25ನೇ ಸಾಲಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 49 ಘೋಷಿತ ಕೊಳಚೆ ಪ್ರದೇಶಗಳಿದ್ದು, ಅಲ್ಲಿ ಸುಮಾರು 50, 226 ಜನಸಂಖ್ಯೆ ವಾಸಿಸುತ್ತಿದ್ದು, ಇದರಲ್ಲಿ ಅಲ್ಪಸಂಖ್ಯಾತರ 1081 ಕುಟುಂಬಗಳಿದ್ದು, ಸುಮಾರು 6445 ಅಲ್ಪಸಂಖ್ಯಾತ ಜನರು ವಾಸಿಸುತ್ತಿದ್ದಾರೆ. ಇವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಇದನ್ನೂ ಓದಿ: Pralhad joshi: ನವೀಕರಿಸಬಹುದಾದ ಇಂಧನ ಉತ್ಪಾದನೆ; ವಿಶ್ವದಲ್ಲೇ 4ನೇ ಸ್ಥಾನದಲ್ಲಿ ಭಾರತ

ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ, ಜಿಲ್ಲಾ ಪಂಚಾಯಿತಿ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ ಮತ್ತಿತರ ಇಲಾಖೆಗಳು ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸಿ, ಪ್ರಗತಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸೂಚಿಸಿದರು.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಪಿಒ ಗುರುನಾಥ ಗೌಡಪ್ಪನ್ನೋರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಕೆ. ಪ್ರವೀಣಕುಮಾರ್‌, ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ, ಕೌಶಲ್ಯಾಭಿವೃದ್ದಿ ಇಲಾಖೆ ಸಹಾಯಕ ನಿರ್ದೇಶಕ ಬಸಪ್ಪ ಎಸ್ ತಳವಾಡಿ, ನಗರಸಭೆಯ ಕಾರ್ಯಪಾಲಕ ಅಭಿಯಂತರ ರಜನಿಕಾಂತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ವಾಣಿಜ್ಯ

Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

Samsung Galaxy: ಸ್ಯಾಮ್‌ಸಂಗ್ ತನ್ನ 6ನೇ ಜನರೇಷನ್‌ನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ. ಹಳೆಯ ಜನರೇಷನ್‌ನ ಫೋಲ್ಡೆಬಲ್ ಫೋನ್‌ಗಳಿಗೆ ಹೋಲಿಸಿದರೆ ಗ್ಯಾಲಕ್ಸಿ ಝಡ್ ಫೋಲ್ಡ್6, ಝಡ್ ಫ್ಲಿಪ್6 ಫೋನ್ ಗಳ ಪ್ರೀ ಬುಕಿಂಗ್‌ನಲ್ಲಿ 40% ಹೆಚ್ಚಳ ಉಂಟಾಗಿದ್ದು, ಈ ಪೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಝಡ್ ಸರಣಿಯ ಫೋನ್‌ಗಳು ಎಂಬ ಹೆಗ್ಗಳಿಕೆ ಗಳಿಸಿವೆ.

VISTARANEWS.COM


on

Samsung Galaxy Z Fold6 Z Flip6 Smartphones Good Customer Response
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung Galaxy) ತನ್ನ 6ನೇ ಜನರೇಷನ್‌ನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಳೆಯ ಜನರೇಷನ್‌ನ ಫೋಲ್ಡೆಬಲ್ ಫೋನ್‌ಗಳಿಗೆ ಹೋಲಿಸಿದರೆ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್ 6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ 40% ಹೆಚ್ಚಳ ಉಂಟಾಗಿದ್ದು, ಈ ಪೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಝಡ್ ಸರಣಿಯ ಫೋನ್‌ಗಳು ಎಂಬ ಹೆಗ್ಗಳಿಕೆ ಗಳಿಸಿವೆ.

ಭಾರತದಲ್ಲಿ ಮತ್ತು ವಿಶ್ವಾದ್ಯಂತ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6ನ ಪ್ರೀ ಬುಕಿಂಗ್ ಅನ್ನು ಜುಲೈ 10ರಂದು ಪ್ರಾರಂಭಿಸಲಾಗಿತ್ತು. ಈ ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ಬಡ್ಸ್3 ಪ್ರೊ ಮತ್ತು ಗ್ಯಾಲಕ್ಸಿ ಬಡ್ಸ್3 ಭಾರತದಲ್ಲಿ ಇದೇ ಜು.24ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಈ ಕುರಿತು ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಮಾತನಾಡಿ, “ನಮ್ಮ ಹೊಸ ಫೋಲ್ಡೆಬಲ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ಗೆ ಭಾರತದ ಗ್ರಾಹಕರಿಂದ ದೊರೆತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ಸಂತೋಷಗೊಂಡಿದ್ದೇವೆ. ಹೊಸ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಪ್ರೀ ಬುಕಿಂಗ್ ನಲ್ಲಿ 1.4x ಹೆಚ್ಚಳ ಉಂಟಾಗಿದ್ದು, ಇದು ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವವರಲ್ಲಿ ಭಾರತೀಯ ಗ್ರಾಹಕರು ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.

ಇದನ್ನೂ ಓದಿ: Pralhad joshi: ನವೀಕರಿಸಬಹುದಾದ ಇಂಧನ ಉತ್ಪಾದನೆ; ವಿಶ್ವದಲ್ಲೇ 4ನೇ ಸ್ಥಾನದಲ್ಲಿ ಭಾರತ

ಆರನೇ ಜನರೇಷನ್‌ನ ನಮ್ಮ ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಗ್ಯಾಲಕ್ಸಿ ಎಐನ ಹೊಸ ಅಧ್ಯಾಯವನ್ನು ಆರಂಭಿಸಿವೆ. ಈ ಗ್ಯಾಲಕ್ಸಿ ಎಐ ಸೌಲಭ್ಯವು ಬಳಕೆದಾರರ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿ, ಅನನ್ಯ ಮೊಬೈಲ್ ಅನುಭವಕ್ಕೆ ಪಾತ್ರರಾಗುವ ಸೌಕರ್ಯ ಒದಗಿಸುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ನ ಯಶಸ್ಸು ಭಾರತದಲ್ಲಿನ ಪ್ರೀಮಿಯಂ ವಿಭಾಗದ ನಾಯಕತ್ವವನ್ನು ಮುಂದುವರಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು.

ಭಾರತೀಯ ಗ್ರಾಹಕರಿಗೆ ತಲುಪಿಸಲು ಸ್ಯಾಮ್‌ಸಂಗ್‌ನ ನೋಯ್ಡಾ ಕಾರ್ಖಾನೆಯಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6 ಅನ್ನು ತಯಾರಿಸಲಾಗುತ್ತಿದೆ. ಹೊಸ ಫೋಲ್ಡೆಬಲ್‌ಗಳು ಇದುವರೆಗಿನ ಫೋಲ್ಡೆಬಲ್‌ಗಳಿಗಿಂತ ಹೆಚ್ಚು ತೆಳ್ಳಗಿರುವ ಮತ್ತು ಹಗುರವಾಗಿರುವ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ. ಸಿಮ್ಮೆಟ್ರಿಕಲ್ ವಿನ್ಯಾಸ ಅಂದ್ರೆ ಎರಡೂ ಬದಿಯಲ್ಲಿ ಒಂದೇ ಥರ ಕಾಣುವ ವಿನ್ಯಾಸ ಮತ್ತು ನೇರವಾದ ಎಡ್ಜ್ ಅನ್ನು ಹೊಂದಿವೆ.

ಗ್ಯಾಲಕ್ಸಿ ಝಡ್ ಸರಣಿಯು ಅತ್ಯುತ್ತಮ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದ್ದು, ಇದು ಇನ್ನೂ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯ ಫೋನ್‌ಗಳಾಗಿವೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಗಳು ಗ್ಯಾಲಕ್ಸಿಯ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್‌ ಹೊಂದಿದ್ದು, ಇದು ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದೆ. ಅತ್ಯುತ್ತಮ ದರ್ಜೆಯ ಸಿಪಿಯು, ಜಿಪಿಯು ಮತ್ತು ಎನ್‌ಪಿಯು ಹೊಂದಿದ್ದು, ಅತ್ಯಪೂರ್ವ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ವಿಶೇಷವಾಗಿ ಪ್ರೊಸೆಸರ್ ಅನ್ನು ಎಐಗೆ ಸೂಕ್ತವಾಗಿ ಹೊಂದುವಂತೆ ವಿನ್ಯಾಸ ಮಾಡಲಾಗಿದೆ ಮತ್ತು ಒಟ್ಟಾರೆಯಾಗಿ ಸುಧಾರಿತ ಕಾರ್ಯಕ್ಷಮತೆ ಜತೆಗೆ ಉತ್ತಮ ಗ್ರಾಫಿಕ್ಸ್ ಸೌಕರ್ಯವನ್ನೂ ನೀಡುತ್ತದೆ.

ಇದನ್ನೂ ಓದಿ: Kannada New Movie: ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್; ‘ಕುಬುಸ’ ಚಿತ್ರದ ಟ್ರೈಲರ್ ಬಿಡುಗಡೆ

ಗ್ಯಾಲಕ್ಸಿ ಝಡ್ ಫೋಲ್ಡ್6 ಎಐ- ಆಧರಿತ ಫೀಚರ್‌ಗಳು ಮತ್ತು ಟೂಲ್ ಗಳನ್ನು ಒದಗಿಸುತ್ತವೆ. ಆ ಫೀಚರ್‌ಗಳಲ್ಲಿ ನೋಟ್ ಅಸಿಸ್ಟ್, ಸ್ಕೆಚ್ ಟು ಇಮೇಜ್, ಇಂಟರ್‌ಪ್ರಿಟರ್, ಫೋಟೋ ಅಸಿಸ್ಟ್ ಮತ್ತು ಇನ್‌ಸ್ಟಾಂಟ್ ಸ್ಲೋ-ಮೋ ಒಳಗೊಂಡಿವೆ.

ಗ್ಯಾಲಕ್ಸಿ ಝಡ್ ಫೋಲ್ಡ್6 ಈಗ ದೀರ್ಘಾವಧಿಯ ಗೇಮಿಂಗ್ ಸೆಷನ್‌ನಲ್ಲಿ ತೊಡಗಿಕೊಳ್ಳಲು ಅನುಕೂಲತೆ ಒದಗಿಸುವ 1.6x ಲಾರ್ಜರ್ ವೇಪರ್ ಚೇಂಬರ್ ಅನ್ನು ಹೊಂದಿದೆ ಮತ್ತು ರೇ ಟ್ರೇಸಿಂಗ್ ವ್ಯವಸ್ಥೆಯು 7.6-ಇಂಚಿನ ಪರದೆಯ ಮೇಲೆ ಅತ್ಯುತ್ತಮ ಗುಣಮಟ್ಟದ ಗ್ರಾಫಿಕ್ಸ್ ಸೌಕರ್ಯ ಒದಗಿಸುತ್ತದೆ. ಇವೆಲ್ಲಾ ಸೌಕರ್ಯಗಳು ಹಾಗೂ 2,600 ಎನ್ಐಟಿ ವರೆಗಿನ ಬ್ರೈಟ್ ಆದ ಡಿಸ್ ಪ್ಲೇ ಸೇರಿಕೊಂಡು ಗೇಮಿಂಗ್ ಅನುಭವವನ್ನು ತೀವ್ರಗೊಳಿಸುತ್ತದೆ.

ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೊಸತಾಗಿ ಕಸ್ಟಮೈಸೇಶನ್ ಸೌಲಭ್ಯ ನೀಡುತ್ತದೆ ಮತ್ತು ಸೃಜನಶೀಲ ಫೀಚರ್‌ಗಳ ಶ್ರೇಣಿಯನ್ನು ಒದಗಿಸುತ್ತದೆ. ಆದ್ದರಿಂದ ನೀವು ಪ್ರತಿ ಕ್ಷಣದಲ್ಲಿಯೂ ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. 3.4-ಇಂಚಿನ ಸೂಪರ್ ಅಮೋಲ್ಡ್ ಫ್ಲೆಕ್ಸ್‌ ವಿಂಡೋ ಮೂಲಕ ನೀವು ಫೋನ್ ಅನ್ನು ತೆರೆಯದೆಯೇ ಎಐ ಆಧರಿತ ಕಾರ್ಯ ನಿರ್ವಹಣೆಗಳನ್ನು ಮಾಡಬಹುದಾಗಿದೆ. ಯಾವುದಾದರೂ ಟೆಕ್ಸ್ಟ್ ಮೆಸೇಜ್‌ಗೆ ಸಾಧನೆ ಸೂಚಿಸಿದ ಮೆಸೇಜ್ ರಿಪ್ಲೈ ಮಾಡಬಹುದಾಗಿದೆ. ನಿಮ್ಮ ಇತ್ತೀಚಿನ ಮೆಸೇಜ್‌ಗಳನ್ನು ವಿಶ್ಲೇಷಿಸುವ ಮೂಲಕ ಈಗಾಗಲೇ ಸಿದ್ಧವಿರುವ ಸೂಕ್ತವಾದ ಮೆಸೇಜ್‌ಗಳನ್ನು ಕಳುಹಿಸಲು ಎಐ ಸೂಚಿಸುತ್ತದೆ.

ಫ್ಲೆಕ್ಸ್‌ ಕ್ಯಾಮ್ ಈಗ ಹೊಸ ಅಟೋ ಜೂಮ್‌ ಜತೆಗೆ ಬರುತ್ತದೆ. ಈ ಅಟೋ ಜೂಮ್ ನೀವು ತೆಗೆಯಲು ಉದ್ದೇಶಿಸಿರುವ ಶಾಟ್‌ಗೆ, ನೀವು ಯಾವುದೇ ಅಗತ್ಯ ಹೊಂದಾಣಿಕೆಗಳನ್ನು ಮಾಡುವ ಮೊದಲೇ ಫೋಟೋ ವಸ್ತುವನ್ನು ವಿಶ್ಲೇಷಿಸಿ ಝೂಮ್ ಇನ್ ಔಟ್ ಮಾಡುವ ಮೂಲಕ ಅತ್ಯುತ್ತಮವಾದ ಫ್ರೇಮ್ ಅನ್ನು ಸೆಟ್ ಮಾಡುತ್ತದೆ. ಹೊಸ 50 ಎಂಪಿ ವೈಡ್ ಮತ್ತು 12 ಎಂಪಿ ಅಲ್ಟ್ರಾ-ವೈಡ್ ಸೆನ್ಸರ್‌ಗಳು ಫೋಟೋಗಳಲ್ಲಿ ಸ್ಪಷ್ಟತೆ ಮತ್ತು ಸೂಕ್ಷ್ಮ ವಿವರಗಳು ಇರುವಂತೆ ನೋಡಿಕೊಳ್ಳುತ್ತದೆ. ಆ ಮೂಲಕ ವಿಶಿಷ್ಟ ಕ್ಯಾಮರಾ ಅನುಭವವನ್ನು ಒದಗಿಸುತ್ತವೆ. ಹೊಸ 50 ಎಂಪಿ ಸೆನ್ಸರ್ ಶಬ್ದ- ಮುಕ್ತ ಫೋಟೋ ತೆಗೆಯಲು 2x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. 10x ಜೂಮ್‌ ಜತೆಗೆ ಸುಧಾರಿತ ಶೂಟಿಂಗ್ ಅನುಭವಕ್ಕಾಗಿ ಎಐ ಜೂಮ್ ಕೂಡ ಲಭ್ಯವಿದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೆಚ್ಚು ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ ಮತ್ತು ಮೊದಲ ಬಾರಿಗೆ ವೇಪರ್ ಚೇಂಬರ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ ಝಡ್ ಫೋಲ್ಡ್6 ಬೆಲೆ ರೂ. 164999 (12ಜಿಬಿ+256 ಜಿಬಿ)ರಿಂದ ಪ್ರಾರಂಭವಾಗುತ್ತದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಬೆಲೆ ರೂ. 109999 (12 ಜಿಬಿ+256 ಜಿಬಿ)ಗೆ ಲಭ್ಯವಿದೆ.

ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಜತೆಗೆ ಸ್ಯಾಮ್‌ಸಂಗ್, ಎಐ-ಆಧರಿತ ಉತ್ಪನ್ನಗಳಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ಬಡ್ಸ್3 ಸರಣಿಗಳನ್ನು ಪರಿಚಯಿಸಿದ್ದು, ಇವುಗಳಿಗೂ ಜುಲೈ 10 ರಂದು ಭಾರತದಲ್ಲಿ ಪ್ರೀ ಬುಕಿಂಗ್ ಆರಂಭ ಆಗಿದೆ.

ಇದನ್ನೂ ಓದಿ: Back Benchers Movie: ಬ್ಯಾಕ್ ಬೆಂಚರ್ಸ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ!

ಗ್ಯಾಲಕ್ಸಿ ವಾಚ್7 ಬೆಲೆ ರೂ. 29999ರಿಂದ ಪ್ರಾರಂಭವಾಗುತ್ತದೆ ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಬೆಲೆ ರೂ. 59999 ಆಗಿದೆ. ಸ್ಯಾಮ್‌ಸಂಗ್ ನ ಹೊಸ ಗ್ಯಾಲಕ್ಸಿ ಬಡ್ಸ್3 ಬೆಲೆ ರೂ. 14999 ಆಗಿದೆ. ಗ್ಯಾಲಕ್ಸಿ ಬಡ್ಸ್3 ಪ್ರೊ ಬೆಲೆ ರೂ. 19999 ಆಗಿದೆ ಎಂದು ತಿಳಿಸಿದೆ.

Continue Reading

ಕರ್ನಾಟಕ

Assembly session: ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ನಾಳೆ ಮುಗಿಯಬೇಕಿದ್ದ ಕಲಾಪ ಇಂದೇ ಮೊಟಕು!

Assembly session: 16ನೇ ವಿಧಾನ ಸಭೆಯ 4ನೇ ಅಧಿವೇಶನದಲ್ಲಿ ಒಟ್ಟು 8 ದಿನಗಳ ಕಲಾಪ ನಡೆದಿದ್ದು, 12 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದೆ. ನೀಟ್‌ ಪರೀಕ್ಷೆ ರದ್ದು, ಒನ್ ನೆಷನ್-ಒನ್ ಎಲೆಕ್ಷನ್‌ಗೆ ವಿರೋಧ ಸೇರಿ 4 ನಿರ್ಣಯಗಳು ಪಾಸ್‌ ಆಗಿವೆ.

VISTARANEWS.COM


on

Assembly session
Koo

ಬೆಂಗಳೂರು: ವಿಧಾನ ಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಇದರಿಂದ ನಾಳೆ (ಜು.26) ಮುಗಿಯಬೇಕಿದ್ದ ಅಧಿವೇಶನ (Assembly session) ಇಂದೇ ಮೊಟಕುಗೊಂಡಂತಾಗಿದೆ. 16ನೇ ವಿಧಾನ ಸಭೆಯ ನಾಲ್ಕನೇ ಅಧಿವೇಶನ 8 ದಿನಗಳ ಕಾಲ (37 ಗಂಟೆ, 30 ನಿಮಿಷ) ನಡೆದಿದ್ದು, ರಾಷ್ಟ್ರಗೀತೆಯೊಂದಿಗೆ ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿಕೆಯಾಗಿದೆ.

ಅಧಿವೇಶನ ಅನಿರ್ಧಿಷ್ಟಾವಧಿ ಮುಂದೂಡಿಕೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ರಾಜಭವನಕ್ಕೆ ತೆರಳಲಿದರು. ಸ್ಪೀಕರ್ ನಡೆ ಕಾಂಗ್ರೆಸ್ ಕಡೆ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ನಲ್ಲಿ ಭೇಟಿ ಮಾಡಿ ದೂರು ನೀಡಿದ ಬಿಜೆಪಿ-ಜೆಡಿಎಸ್ ನಿಯೋಗ, ಮುಡಾ ಹಗರಣ ವಿಚಾರ ಚರ್ಚೆಗೆ ನೀಡದ ಬಗ್ಗೆ ಹಾಗೂ ನಾಳೆಗೆ ಮುಗಿಯುವ ಅಧಿವೇಶನ ಇಂದೇ ಮೊಟಕುಗೊಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುವಂತೆ ಮನವಿ ಮಾಡಿದ್ದಾರೆ.

12 ವಿಧೇಯಕಗಳ ಅಂಗೀಕಾರ

16ನೇ ವಿಧಾನ ಸಭೆಯ 4ನೇ ಅಧಿವೇಶನದಲ್ಲಿ ಒಟ್ಟು 8 ದಿನಗಳ ಕಲಾಪ ನಡೆದಿದ್ದು, ಪೂರಕ ಅಂದಾಜುಗಳು, ಲೆಕ್ಕಪರಿಶೋಧಕರ ವರದಿ ಮಂಡನೆ ಮಾಡಲಾಗಿದೆ. ಭರವಸೆಗಳ ಸಮಿತಿ, ಕಾಗದ ಪತ್ರಗಳ ಸಮಿತಿ, ಅಂದಾಜು ಸಮಿತಿ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಕಲ್ಯಾಣ ಸಮಿತಿ, ಅಲ್ಪಾಸಂಖ್ಯಾತ ಸಮಿತಿಯ ಮೊದಲ ವರದಿ ಮಂಡನೆ ಮಾಡಲಾಗಿದೆ.

ಇದನ್ನೂ ಓದಿ | Assembly session: ಪರಿಷತ್‌ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆ ಪಾಸ್; ಹೆಚ್ಚಲಿದೆ ಸಿನಿಮಾ ಟಿಕೆಟ್ ದರ, ಒಟಿಟಿ ಶುಲ್ಕ!

12 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದ್ದು, ಗ್ರೇಟರ್ ಬೆಂಗಳೂರು ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ. ನಿಯಮ 69 ಅಡಿಯಲ್ಲಿ 14 ಸೂಚನೆಗಳ ಅಂಗೀಕಾರ ಸಿಕ್ಕಿದ್ದು, 117 ಪ್ರಶ್ನೆಗಳಿಗೆ ಉತ್ತರ ಹಾಗೂ 1902 ಪ್ರಶ್ನೆಗಳಿಗೆ ಪೈಕಿ 1438 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 170 ಗಮನ ಸೆಳೆಯುವ ಸೂಚನೆ ಗಳಿಗೆ ಉತ್ತರ ನೀಡಲಾಗಿದೆ.

ನಾಲ್ಕು ನಿರ್ಣಯ ಪಾಸ್

  • ಒನ್ ನೆಷನ್-ಒನ್ ಎಲೆಕ್ಷನ್‌ಗೆ ವಿರೋಧ
  • ನೀಟ್ ಪರೀಕ್ಷೆ ರದ್ದು
  • 1971 ಜನಗಣತಿ ಆಧರಿಸಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ
  • ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳು ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006 ಅಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮಾರ್ಪಾಡು ಮಾಡುವ ನಿರ್ಣಯ

ನಕಲಿ ವೈದ್ಯರಿಗೆ 1 ಲಕ್ಷದವರೆಗ ದಂಡ!

ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ – 2024 ವಿಧಾನ ಪರಿಷತ್‌ನಲ್ಲಿ ಅಂಗೀಕಾರಗೊಂಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಧೇಯಕ ಮಂಡಿಸಿದ್ದು, ನಕಲಿ ವೈದ್ಯರ ಮೇಲಿನ ದಂಡ 10 ಸಾವಿರದಿಂದ ಒಂದು ಲಕ್ಷದವರೆಗೆ ಏರಿಕೆ ಮಾಡಿದ್ದೇವೆ. ಉದ್ದೇಶಪೂರ್ವಕವಾಗಿ ವೈದರ ಮೇಲೆ ಹಲ್ಲೆ, ನಿಂದನೆ, ಅವಮಾನಿಸುವುದನ್ನು ನಿಷೇಧಿಸಿರುವ ತಿದ್ದುಪಡಿ ತಂದಿದ್ದೇವೆ. ವೈದ್ಯರ ಮೇಲಿನ ಹಲ್ಲೆಗೆ ಮೂರು ವರ್ಷದಿಂದ 7 ವರ್ಷದ ತನಕ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಾಡಿದ್ದೇವೆ ಎಂದರು. ಬಳಿಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಐತಿಹಾಸಿಕ ಸ್ಥಳ, ಸ್ಮಾರಕ ವಿರೂಪಗೊಳಿಸಿದ್ರೆ ಜೈಲು ಫಿಕ್ಸ್‌

ಇನ್ನು ಮುಂದೆ ಐತಿಹಾಸಿಕ ಸ್ಥಳಗಳ ವಿರೂಪ ಅಥವಾ ಸ್ಮಾರಕಗಳನ್ನು ನಾಶಪಡಿಸಿದರೆ ಜೈಲು ಶಿಕ್ಷೆ ಖಚಿತ. ಐತಿಹಾಸಿಕ ಸ್ಥಳ, ಸ್ಮಾರಕಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಚೀನ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷಗಳ (ತಿದ್ದುಪಡಿ) ವಿಧೇಯಕ 2024 ಬಿಲ್ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ (Assembly session), ಅಂಗೀಕಾರಗೊಂಡಿದೆ.

ವಿಧಾನ ಪರಿಷತ್‌ನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಅವರು ಕರ್ನಾಟಕ ಪ್ರಾಚೀನ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷಗಳ (ತಿದ್ದುಪಡಿ) ವಿಧೇಯಕ 2024 ಬಿಲ್ ಮಂಡಿಸಿದರು. ಇದರಲ್ಲಿ ಪ್ರಾಚೀನ ಹಾಗೂ ಐತಿಹಾಸಿಕ ಸ್ಮಾರಕ ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಐತಿಹಾಸಿಕ ಸ್ಥಳ ಅಥವಾ ಸ್ಮಾರಕಗಳನ್ನು ನಾಶಪಡಿಸಿದರೆ ಮೂರು ತಿಂಗಳ ಕಠಿಣ ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ | Assembly session: ನೀಟ್ ಪರೀಕ್ಷೆ ರದ್ದು, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ನಿರ್ಣಯ; ಉಭಯ ಸದನಗಳಲ್ಲೂ ಅಂಗೀಕಾರ

ಎಚ್.ಕೆ.ಪಾಟೀಲ್ ಅವರು ವಿಧೇಯಕದ ಬಗ್ಗೆ ಮಾತನಾಡಿ, ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಸಂರಕ್ಷಣೆ ಮಾಡುವ ಕರ್ತವ್ಯವಿದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ. ಸೊಸೈಟಿ, ಸಹಕಾರ ಸಂಘಗಳು, ಟ್ರಸ್ಟ್​​ಗಳು, ಸರ್ಕಾರೇತರ ಸಂಸ್ಥೆಗಳು ಆಸಕ್ತಿಯುಲ್ಳ ವ್ಯಕ್ತಿಗಳನ್ನು ಸ್ಮಾರಕ ಪಟ್ಟಿಯಲ್ಲಿ ಸೇರಿಸಲು ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

Continue Reading
Advertisement
IPL 2025
ಕ್ರೀಡೆ7 mins ago

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು

karnataka weather Forecast
ಮಳೆ16 mins ago

Karnataka Weather : ಭಾರಿ ಮಳೆ ಎಚ್ಚರಿಕೆ; ನಾಳೆ ಹಾಸನದ ಈ ಶಾಲೆಗಳಿಗೆ ರಜೆ ಘೋಷಣೆ

NEET UG 2024
ದೇಶ20 mins ago

NEET UG 2024: ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ ಆಗಿಲ್ಲ, ಹಳೇ ಲಿಂಕ್‌ ಹಂಚಿಕೆ ಎಂದ ಕೇಂದ್ರ; ಮತ್ತೊಂದು ಪ್ರಮಾದ?

Prime Minister 15 Point Programme District Level Meeting at Yadgiri
ಯಾದಗಿರಿ21 mins ago

Yadgiri News: ಜಿಲ್ಲಾ ಮಟ್ಟದಲ್ಲಿ ಪ್ರಗತಿಗೆ ಪ್ರಧಾನಿಯ 15 ಅಂಶಗಳ ಕಾರ್ಯಕ್ರಮ

Sara Ali Khan
Latest32 mins ago

Sara Ali Khan: ವಿಮಾನದಲ್ಲಿ ಸಾರಾ ಅಲಿ ಖಾನ್‌ ಮೇಲೆ ಜ್ಯೂಸ್‌ ಚೆಲ್ಲಿದ ಗಗನಸಖಿ! ಮುಂದೇನಾಯ್ತು? ವಿಡಿಯೊ ನೋಡಿ

Parliament Session
ದೇಶ36 mins ago

Parliament Session: ʼತಾಕತ್ತಿದ್ದರೆ ಬಾʼ- ಸಂಸತ್‌ನಲ್ಲಿ ಸಂಸದರ ಪಂಥಾಹ್ವಾನ; ಭಾರೀ ಕೋಲಾಹಲ

Samsung Galaxy Z Fold6 Z Flip6 Smartphones Good Customer Response
ವಾಣಿಜ್ಯ39 mins ago

Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಕ್ರೀಡೆ42 mins ago

Paris Olympics 2024: 2ನೇ ಸುತ್ತಿನಲ್ಲಿ ಜೊಕೊ-ನಡಾಲ್ ಮುಖಾಮುಖಿ ಸಾಧ್ಯತೆ

Assembly session
ಕರ್ನಾಟಕ46 mins ago

Assembly session: ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ನಾಳೆ ಮುಗಿಯಬೇಕಿದ್ದ ಕಲಾಪ ಇಂದೇ ಮೊಟಕು!

Viral Video
Latest1 hour ago

Viral Video: ತಲೆಯಿಂದ ಡಿಚ್ಚಿ ಹೊಡೆದು ಬೋಟ್‌ಅನ್ನೇ ಪಲ್ಟಿ ಮಾಡಿದ ತಿಮಿಂಗಿಲ! ಮೈನವಿರೇಳಿಸುವ ವಿಡಿಯೊ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್5 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ5 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ7 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ1 day ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌