Karnataka weather : ಮುಂದಿನ 48 ಗಂಟೆಯಲ್ಲಿ ಉತ್ತರ ಕರ್ನಾಟಕ ಮಂದಿ ಗಡಗಡ! - Vistara News

ಕರ್ನಾಟಕ

Karnataka weather : ಮುಂದಿನ 48 ಗಂಟೆಯಲ್ಲಿ ಉತ್ತರ ಕರ್ನಾಟಕ ಮಂದಿ ಗಡಗಡ!

Karnataka weather Forecast : ಮುಂದಿನ 2 ದಿನಗಳು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ವಾತಾವರಣ ಹೆಚ್ಚಾಗಲಿದ್ದು, ಜನರನ್ನು ಗಡಗಡ
(Temperature warning) ನಡುಗಿಸಲಿದೆ.

VISTARANEWS.COM


on

Minimum temperatures likely to be below normal by 2-3 Deg Cel at isolated places over North Interior Karnataka
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶುಕ್ರವಾರ ರಾಜ್ಯದಲ್ಲಿ ಒಣಹವೆ (Dry weather) ಇತ್ತು. ಕಡಿಮೆ ಉಷ್ಣಾಂಶ 10 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿತ್ತು. ಮುಂದಿನ 24 ಗಂಟೆಯು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ನಂತರ 48 ಗಂಟೆಯೊಳಗೆ ತಾಪಮಾನ ಎಚ್ಚರಿಕೆಯನ್ನು (Temperature warning) ಹವಾಮಾನ ಇಲಾಖೆ (Karnataka weather Forecast) ನೀಡಿದೆ.

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ಚಳಿಯು ಹೆಚ್ಚಾಗಲಿದ್ದು, ಮೈ ನಡುಗಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಬೆಳಗ್ಗೆ ಹಾಗೂ ಸಂಜೆ ವೇಳೆ ಜೋರಾಗಿ ಗಾಳಿ ಬೀಸಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಮಂದಿಯನ್ನು ಗಡಗಡ ನಡುಗುವಂತೆ ಮಾಡುತ್ತದೆ.

ಇದನ್ನೂ ಓದಿ: Murder Case : ಎಣ್ಣೆ ಜಾಸ್ತಿ ಕುಡಿಯಲ್ಲ ಎಂದಿದ್ದಕ್ಕೆ ಕೊಲೆಯಾದ ಗೆಳೆಯ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಮತ್ತು ಮೈಸೂರು, ರಾಮನಗರ, ಮಂಡ್ಯ, ತುಮಕೂರು, ವಿಜಯನಗರದಲ್ಲಿ ಶುಷ್ಕ ವಾತಾವರಣ ಇರಲಿದೆ. ಜತೆಗೆ ಕರಾವಳಿ‌ಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ.

ಬೆಂಗಳೂರನ್ನು ಆವರಿಸಲಿದೆ ದಟ್ಟ ಮಂಜು

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು/ ದಟ್ಟಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Lalbagh Flower Show : ಜ.18 ರಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ; ವಿಶ್ವ ಗುರು ಬಸವಣ್ಣ ಅನಾವರಣ

ಚಳಿಗಾಲದಲ್ಲಿ ಕೀಲು ನೋವಿನಿಂದ ಪಾರಾಗುವುದು ಹೇಗೆ?

ಚಳಿಗಾಲದ ಮುನ್ಸೂಚನೆ ನೀಡುವುದಕ್ಕೆ ದೇಹದಲ್ಲಿ ಹಲವು ಅಂಗಗಳು ಸಿದ್ಧವಾಗಿರುತ್ತವೆ. ಅವುಗಳಲ್ಲಿ ಒಂದು ನಮ್ಮ ದೇಹದ ಕೀಲುಗಳು. ಎಷ್ಟೊ ಜನರಿಗೆ ಕೀಲುಗಳು ಬಿಗಿದು, ನೋವು ಪ್ರಾರಂಭವಾದಾಗಲೇ ಚಳಿಗಾಲ ಶುರು ಎಂಬುದು ಅರಿವಿಗೆ ಬರುತ್ತದೆ. ಅಷ್ಟು ಸೂಕ್ಷ್ಮ ಅವು. ಹಾಗಾಗಿ ಚಳಿಗಾಲದಲ್ಲಿ ಕೀಲುಗಳಿಗೆ ಹೆಚ್ಚಿನ ಆರೈಕೆ ಅಗತ್ಯವಾಗುತ್ತದೆ. ಅದರಲ್ಲೂ ಹಿರಿಯ ನಾಗರಿಕರು ಮತ್ತು ಆರ್ಥರೈಟಿಸ್‌ ಸಮಸ್ಯೆಯಿಂದ ಬಳಲುವವರಿಗೆ ಚಳಿಗಾಲವನ್ನು ನೋವಿಲ್ಲದೆ ದಾಟುವುದೇ ಕಷ್ಟ (pain management in winter) ಎನ್ನುವಷ್ಟಾಗುತ್ತದೆ. ಚಳಿಗಾಲದಲ್ಲಿ ಕೀಲುಗಳಿಗೆ ಏನೆಲ್ಲ ಆರೈಕೆ ಮಾಡಿದರೆ ನೋವು ಶಮನವಾಗುತ್ತದೆ ಎಂಬ ವಿವರ ಇಲ್ಲಿ ಕೊಡಲಾಗಿದೆ.

Knee trauma and joint pain-Sports injuries

ಕೆಲವೊಮ್ಮೆ ಮಾಂಸಖಂಡಗಳ ಸೆಡವು, ಬಿಗಿತ ಎಲ್ಲ ವಯೋಮಾನದವರನ್ನೂ ಚಳಿಗಾಲದಲ್ಲಿ ಕಾಡಬಲ್ಲದು. ಅದಕ್ಕೆ ವಯಸ್ಸಾಗಿರಬೇಕು, ಅರ್ಥರೈಟಿಸ್‌ ಇರಬೇಕೆಂದೇನೂ ಇಲ್ಲ. ಆದರೆ ಇದರ ಪರಿಣಾಮ ಮಾತ್ರ ಎಲ್ಲರ ಮೇಲೂ ಒಂದೇ ತೆರನಾಗಿ ಇರುತ್ತದೆ. ಕೀಲುಗಳಲ್ಲಿ ನೋವು, ಬಿಗಿತ, ನಿತ್ಯದ ಚಟುವಟಿಕೆಗಳಿಗೆ ತೊಂದರೆ, ಸುಸ್ತು ಇತ್ಯಾದಿಗಳು ಹೈರಾಣಾಗಿಸುತ್ತವೆ.

ಇದಕ್ಕೆ ವಿಟಮಿನ್‌ ಡಿ ಕೊರತೆಯೂ ಸಹ ಕಾರಣವಾಗಬಲ್ಲದು. ಚಳಿಗಾಲದಲ್ಲಿ ಹೆಚ್ಚಾಗಿ ಬಿಸಿಲಿಗೆ ಬೀಳದೆ ಇರುವುದು ಮತ್ತು ವಿಟಮಿನ್‌ ಡಿ ಯುಕ್ತ ಆಹಾರಗಳನ್ನು ಸೇವಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ. ಸೂರ್ಯನ ಬೆಳಕು ಹೆಚ್ಚಿಲ್ಲದಂಥ ಸ್ಥಳಗಳಲ್ಲಿ ವಿಟಮಿನ್‌ ಡಿ ಕೊರತೆಯೂ ಹೆಚ್ಚಾಗಿ ನೋವುಗಳ ತೊಂದರೆಯೂ ಹೆಚ್ಚುತ್ತದೆ. ಜೊತೆಗೆ ಚಳಿ ಹೆಚ್ಚಾದಾಗ, ಅದರಲ್ಲೂ ದೀರ್ಘ ಅಚಲ ಸ್ಥಿತಿಯಿಂದ ಎದ್ದಾಗ, ರಕ್ತ ಸಂಚಾರ ಸುಗಮವಾಗಿ ಇರದೆ, ಕೀಲುಗಳಲ್ಲಿನ ದ್ರವದ ಚಲನೆಯೂ ಸರಾಗವಾಗದೆ ಇದ್ದಾಗ ನೋವು ಕಾಣಿಸಿಕೊಳ್ಳುತ್ತದೆ.

Diverse Athletic Couple Exercising Outdoors

ವ್ಯಾಯಾಮವನ್ನು ತಪ್ಪಿಸಬೇಡಿ

ಚಳಿಗಾಲದಲ್ಲಿ ನೋವು ಅನುಭವಿಸುವವರಿಗೆ ಇದು ಮುಖ್ಯವಾದ ವಿಷಯ. ಇದರರ್ಥ ಬಕೆಟ್‌ಗಟ್ಟಲೆ ಬೆವರು ಹರಿಸಿ ಎಂದಲ್ಲ. ನಿಮ್ಮ ಕೀಲುಗಳ ಆರೋಗ್ಯಕ್ಕೆ ಅಗತ್ಯವಾದ ವ್ಯಾಯಾಮಗಳನ್ನು ವೈದ್ಯರು ಅಥವಾ ಫಿಸಿಯೊ ಮಾರ್ಗದರ್ಶನದಲ್ಲಿ ರೂಢಿಸಿಕೊಂಡರೆ ಮಂಡಿ, ಕುತ್ತಿಗೆ, ಬೆನ್ನು ಮುಂತಾದ ನೋವುಗಳನ್ನು ಹತೋಟಿಯಲ್ಲಿ ಇರಿಸಬಹುದು. ಬೆಳಗ್ಗೆ ಏಳುತ್ತಿದ್ದಂತೆ ಕೆಲಸ ಮಾಡುವುದಕ್ಕೆ ಕೀಲುಗಳು ಮುಷ್ಕರ ಹೂಡುವುದು ಸಹ ಕಡಿಮೆಯಾಗುತ್ತದೆ. ವಾರಕ್ಕೆ ಐದು ದಿನಗಳಾದರೂ ವ್ಯಾಯಾಮ ಬೇಕು. ಮನೆಯಲ್ಲೆ ನಿಮ್ಮ ಆರೋಗ್ಯಕ್ಕೆ ಹೊಂದುವಂಥ ಸ್ಟ್ರೆಚ್‌ಗಳನ್ನು ದಿನವೂ ಮಾಡಬೇಕು. ಯೋಗ, ನಡಿಗೆ ಮುಂತಾದ ಯಾವುದೂ ಆಗಬಹುದು.

Staying Warm

ಬೆಚ್ಚಗಿರಿ

ಚಳಿಯಲ್ಲಿ ಬೆಚ್ಚಗಿರುವುದು ನೋವು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮಾಂಸಖಂಡಗಳಲ್ಲಿನ ಬಿಗಿತ, ಸೆಡವುಗಳು ಚಳಿ ಸೋಕಿದಷ್ಟೂ ಹೆಚ್ಚುತ್ತವೆ. ಹಾಗಾಗಿ ಬೆಚ್ಚಗಿರಿ. ಪದರಗಳಲ್ಲಿ ವಸ್ತ್ರಗಳನ್ನು ಧರಿಸಿ. ಇದರಿಂದ ಹೊರಗಿನ ವಾತಾವರಣಕ್ಕೆ ಸರಿ ಹೊಂದುವಂತೆ ದೇಹದ ಉಷ್ಣತೆಯನ್ನು ಸರಿದೂಗಿಸಿಕೊಳ್ಳಲು ಸುಲಭವಾಗುತ್ತದೆ.

ಆಹಾರ

ಇದು ಇನ್ನೊಂದು ಮುಖ್ಯವಾದ ಅಂಶ. ಆಹಾರದಲ್ಲಿ ಹೆಚ್ಚಾಗಿ ಒಮೇಗಾ ೩ ಕೊಬ್ಬಿನಾಮ್ಲವಿರಲಿ. ಇದನ್ನು ನಿಯಮಿತವಾಗಿ ಸೇವಿಸಿದಲ್ಲಿ, ದೇಹದಲ್ಲಿನ ಉರಿಯೂತವನ್ನು ಇದು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಹಾಗಾಗಿ ಸಾಲ್ಮನ್‌ನಂಥ ಕೊಬ್ಬಿನ ಮೀನುಗಳು, ವಾಲ್‌ನಟ್‌, ಅಗಸೆ ಬೀಜಗಳು, ಬೆಣ್ಣೆಹಣ್ಣು ಮುಂತಾದವು ದಿನವೂ ಬೇಕು. ಜೊತೆಗೆ ಲೀನ್‌ ಪ್ರೊಟೀನ್‌ಗಳು, ನಾರು, ಸಂಕೀರ್ಣ ಪಿಷ್ಟಗಳು ಆಹಾರದಲ್ಲಿ ಅಗತ್ಯವಾಗಿ ಇರಲಿ. ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಮರೆಯದೆ ಸೇವಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳು ಸಹ ಕೊರತೆಯಾಗುವುದಿಲ್ಲ. ಆಹಾರ ಸತ್ವಪೂರ್ಣವಾದಷ್ಟೂ ದೇಹ ಶಕ್ತಿಯುತವಾಗುತ್ತದೆ.

Massage

ಮಸಾಜ್‌

ಅಭ್ಯಂಗ, ಎಣ್ಣೆ ಸ್ನಾನದಂಥವು ಕೀಲುಗಳಿಗೆ ಮತ್ತು ಮಾಂಸಪೇಶಿಗಳಿಗೆ ಆರಾಮ ಒದಗಿಸುತ್ತವೆ. ಆದರೆ ನೋವಿರುವ ಕೀಲು ಮತ್ತು ಮಾಂಸಖಂಡಗಳಿಗೆ ಎಣ್ಣೆ ನೀವುದಕ್ಕಿಂತ ಮೊದಲು ವೈದ್ಯರಲ್ಲಿ ಸಲಹೆ ಪಡೆಯಿರಿ. ಕಾರಣ, ಇರುವಂಥ ನೋವು ಯಾವುದರಿಂದ ಬಂದಿದೆ ಮತ್ತು ಯಾಕಾಗಿ ಬಂದಿದೆ ಎಂಬುದನ್ನು ಪರಿಶೀಲಿಸಿದ ನಂತರ, ಆ ಸ್ಥಿತಿಯಲ್ಲಿ ಮಸಾಜ್‌ ಸೂಕ್ತವೇ ಎಂಬುದನ್ನು ವೈದ್ಯರೇ ನಿರ್ಧರಿಸಬೇಕಾಗುತ್ತದೆ. ನೋವಿಲ್ಲದಿದ್ದಾಗ ಸುಮ್ಮನೆ ಅಭ್ಯಂಗವನ್ನು ಎಲ್ಲರೂ ಮಾಡಬಹುದು.

drink water

ನೀರು

ಬೇಸಿಗೆಯಲ್ಲಿ ನಾವೇ ಮರೆತರೂ ದೇಹ ನೀರು ಕೇಳುತ್ತದೆ. ಆದರೆ ಚಳಿಗಾಲದಲ್ಲಿ ದಾಹ ಕಡಿಮೆ. ಹಾಗೆಂದು ನೀರು ಕಡಿಮೆ ಕುಡಿದರೆ ಸಮಸ್ಯೆಗಳು ಅಮರಿಕೊಳ್ಳುತ್ತವೆ. ದೇಹದ ಕೋಶಗಳಲ್ಲಿ ನೀರು ಕಡಿಮೆಯಾದಷ್ಟೂ ಬಿಗಿತ ಹೆಚ್ಚುತ್ತದೆ, ನೋವು ಉಲ್ಭಣಿಸುತ್ತದೆ. ಹಾಗಾಗಿ ದಿನಕ್ಕೆ ೧೦ ಗ್ಲಾಸ್‌ ನೀರು ಕುಡಿಯುವ ಗುರಿ ಇರಿಸಿಕೊಳ್ಳಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Banavasi News: ಹೆಬ್ಬತ್ತಿ ಗ್ರಾಮದಲ್ಲಿ ಕಾಡುಹಂದಿ ಬೇಟೆ; ಇಬ್ಬರ ಬಂಧನ

Banavasi News: ಬನವಾಸಿ ಅರಣ್ಯ ವಲಯದ ದಾಸನಕೊಪ್ಪ ಶಾಖೆಯ ಹೆಬ್ಬತ್ತಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆ ಯಾಡಿ, ಮಾಂಸ ತಯಾರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬನವಾಸಿ ವಲಯ ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

VISTARANEWS.COM


on

Wild boar hunting in Hebbatti village Arrest of two accused
Koo

ಬನವಾಸಿ: ಬನವಾಸಿ ಅರಣ್ಯ ವಲಯದ ದಾಸನಕೊಪ್ಪ ಶಾಖೆಯ ಹೆಬ್ಬತ್ತಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ (Wild boar) ಬೇಟೆ ಯಾಡಿ, ಮಾಂಸ ತಯಾರಿಸಿ (Banavasi News) ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬನವಾಸಿ ವಲಯ ಅರಣ್ಯಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಕಳೆದ ಜೂ.16ರಂದು ಕಾಡುಹಂದಿ ಬೇಟೆ ಯಾಡಿ ಮಾಂಸ ತಯಾರಿಸಿ ಪರಾರಿಯಾಗಿದ್ದರು. ಅರಣ್ಯ ಇಲಾಖೆ ಆರೋಪಿಗಳ ಪತ್ತೆಗೆ ಒಂದು ತಂಡವನ್ನು ರಚಿಸಿ, ಕಾರ್ಯಾಚರಣೆ ಕೈಗೊಂಡಾಗ ಸಂತೊಳ್ಳಿ ಗ್ರಾಮದ ಬಸವರಾಜ ಯಲ್ಲಪ್ಪ ಚನ್ನಯ್ಯ ಹಾಗೂ ಉಮೇಶ ಚನ್ನಪ್ಪ ಚನ್ನಯ್ಯ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Ballari News: ಕಂಪ್ಲಿಯ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿ ಪ್ರತ್ಯಕ್ಷ!

ವಲಯ ಅರಣ್ಯಾಧಿಕಾರಿ ವರದಾ ರಂಗನಾಥ ಜಿ.ಎಚ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ್, ಗಸ್ತು ಅರಣ್ಯ ಪಾಲಕರಾದ ದಯಾನಂದ ಬೊರ್ಕರ್, ಸಿದ್ದಪ್ಪ ನಾವಿ, ಅರಣ್ಯ ವೀಕ್ಷಕರಾದ ಚಂದ್ರು ಗೌಡ, ಗಿರೀಶ ಕುರುಬರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

ಕರ್ನಾಟಕ

Fortis Hospital: 32 ವರ್ಷದ ಮಹಿಳೆಗೆ ಯಶಸ್ವಿ ಕಿಡ್ನಿ ಕಸಿ

Fortis Hospital: ಕೊನೆ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 32 ವರ್ಷದ ಮಹಿಳೆಗೆ ಬೆಂಗಳೂರಿನ ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಅತ್ಯಾಧುನಿಕ ತಂತ್ರಜ್ಞಾನದಿಂದ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದೆ.

VISTARANEWS.COM


on

a successful kidney transplanted for 32 year old woman at Fortis Hospital
Koo

ಬೆಂಗಳೂರು: ಕೊನೆ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 32 ವರ್ಷದ ಮಹಿಳೆಗೆ ಬೆಂಗಳೂರಿನ ನಾಗರಬಾವಿಯ ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಅತ್ಯಾಧುನಿಕ ತಂತ್ರಜ್ಞಾನದಿಂದ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದೆ. ಫೋರ್ಟಿಸ್ ಆಸ್ಪತ್ರೆಯ ನೆಫ್ರಾಲಜಿಯ ಹಿರಿಯ ಸಲಹೆಗಾರ ಡಾ. ಮಂಜುನಾಥ್, ಮೂತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರ ಡಾ. ಪ್ರೇಮ್‌ಕುಮಾರ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.

ಇದನ್ನೂ ಓದಿ: How Much Salt Is Too Much: ಉಪ್ಪು ಅತಿಯಾಗದಿರಲಿ; ದಿನಕ್ಕೆ ನಾವೆಷ್ಟು ಉಪ್ಪು ತಿನ್ನುತ್ತಿದ್ದೇವೆ ಗೊತ್ತಿರಲಿ

ಈ ಕುರಿತು ಡಾ.ಎಸ್‌. ಮಂಜುನಾಥ್‌ ಮಾತನಾಡಿ, 32 ವರ್ಷದ ರೇಖಾ ಎಂಬ ಮಹಿಳೆಯು ಟೈಪ್‌ II ಡಯಾಬಿಟಿಸ್‌, ಬಿಪಿ, ಹೈಪೋಥೈರಾಯ್ಡ್‌ ಹೊಂದಿದ್ದ ಕಾರಣ ಕ್ರಮೇಣ ಅವರು ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿದ್ದರು. ಅವರನ್ನು ಅನೇಕ ಪರೀಕ್ಷೆಗೆ ಒಳಪಡಿಸಿದ ನಂತರ ಅವರು ಕೊನೆ ಹಂತದ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿರುವುದು ತಿಳಿದುಬಂತು. ಕೂಡಲೇ ಅವರಿಗೆ ಕಿಡ್ನಿಯ ಅವಶ್ಯಕತೆ ಇತ್ತು. ಇವರ ರಕ್ತಕ್ಕೆ ಹೊಂದುವ ಕಿಡ್ನಿ ಲಭ್ಯವಾಗುವ ಭವರಸೆ ಇರಲಿಲ್ಲ. ಆದರೆ, ಈಗಾಗಲೇ ಮೆದುಳು ನಿಷ್ಕ್ರಿಯದಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಕಿಡ್ನಿಯು ಸಕಾಲದಲ್ಲಿ ದೊರೆತ ಕಾರಣದಿಂದ ರೇಖಾ ಅವರಿಗೆ ಸಕಾಲದಲ್ಲಿ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

ಮೂತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರ ಡಾ. ಪ್ರೇಮ್‌ಕುಮಾರ್ ಮಾತನಾಡಿ, ದೇಹ ದಾನ ಅತಿ ಮುಖ್ಯವಾದದ್ದು. ರೇಖಾ ಅವರಿಗೆ ಸಕಾಲದಲ್ಲಿ ಕಿಡ್ನಿ ದೊರೆತ ಕಾರಣದಿಂದ ಹಾಗೂ ಅವರ ಧನಾತ್ಮಕ ಪ್ರತಿಕ್ರಿಯೆಯಿಂದ ಈ ಕಿಡ್ನಿ ಕಸಿ ಪ್ರಕ್ರಿಯೆ ಸರಾಗವಾಗಿ ನಡೆಯಿತು ಎಂದು ಅವರು ವಿವರಿಸಿದರು.

Continue Reading

ಕರ್ನಾಟಕ

Self Harming: ತಿಪಟೂರಿನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

Self Harming: ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವರಹಳ್ಳಿಯ ವಿದ್ಯಾರ್ಥಿನಿ ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಓದುತ್ತಿದ್ದಳು.

VISTARANEWS.COM


on

Self Harming
Koo

ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಜಿಲ್ಲೆಯ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಯುವತಿ ಸಾವಿಗೆ ಶರಣಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವರಹಳ್ಳಿ ಗ್ರಾಮದ ಸುರೇಶ್ ಎಂಬುವವರ ಪುತ್ರಿ ವರ್ಷಿಣಿ (19), ಮೃತ ವಿದ್ಯಾರ್ಥಿನಿ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದ ವಿದ್ಯಾರ್ಥಿನಿ, ಕಾಲೇಜಿಗೆ ಪ್ರತಿದಿನ ಊರಿನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಇಂದು ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವರ್ಷಿಣಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಘಟನೆ ಸಂಬಂಧ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

ಇದನ್ನೂ ಓದಿ | NIA Raid: ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ; ಶಿರಸಿಯಲ್ಲಿ ನಿಷೇಧಿತ ಪಿಎಫ್‌ಐ ಸದಸ್ಯನ ಬಂಧನ

ಕೋಲಾರದಲ್ಲಿ ರೈಲಿಗೆ ಸಿಲುಕಿ ಯುವತಿ ಸಾವು

ಕೋಲಾರ: ರೈಲಿಗೆ ಸಿಲುಕಿ ಯುವತಿ ಮೃತಪಟ್ಟಿ ಘಟನೆ ಜಿಲ್ಲೆಯ ಮಾಲೂರು ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಅರಳೇರಿ ಗ್ರಾಮದ ಸಂಧ್ಯಾ (22) ಮೃತ ದುರ್ದೈವಿ. ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಸಂಧ್ಯಾ, ಬೆಳಗ್ಗೆ ಗ್ರಾಮದಿಂದ ಕೆಲಸಕ್ಕೆ ಎಂದು ಹೊರಟವಳು ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಮಾಲೂರು ರೈಲ್ವೆ ಪೊಲೀಸರಿಂದ ಪರಿಶೀಲನೆ ನಡೆಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Udupi Gang War : ಉಡುಪಿಯಲ್ಲಿ ನಿಲ್ಲದ ಗ್ಯಾಂಗ್ ವಾರ್; ಇಬ್ಬರು ಪುಂಡರು ಅಂದರ್‌

ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಇನ್ಫೋಸಿಸ್‌ ಉದ್ಯೋಗಿ ಆತ್ಮಹತ್ಯೆ

Self Harming

ಕೋಲಾರ: ಇನ್ಫೋಸಿಸ್‌ ಉದ್ಯೋಗಿಯೊಬ್ಬ (Infosys employee) ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ಹರೀಶ್ (28) ಮೃತ ದುರ್ದೈವಿ. ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಹರೀಶ್‌ ಕಳೆದ ಒಂದು ತಿಂಗಳ ಹಿಂದಷ್ಟೇ ದೇವನಹಳ್ಳಿ ಮೂಲದ‌ ಯುವತಿಯೊಂದಿಗೆ ವಿವಾಹವಾಗಿತ್ತು. ಮಂಗಳವಾರ ಬೆಳಗಿನ ಜಾವ ಕೆಲಸ ಮುಗಿಸಿ ಮನೆಗೆ ಹೋದವನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ‌ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ | Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ.

Continue Reading

ಉತ್ತರ ಕನ್ನಡ

Uttara Kannada News: ಬೆಳೆ ವಿಮೆ ಮೊತ್ತ ಸಮರ್ಪಕವಾಗಿ ರೈತರ ಖಾತೆಗೆ ಜಮಾ ಮಾಡಿ; ಹೆಬ್ಬಾರ್

Uttara Kannada News: ಕೃಷಿ ಇಲಾಖೆಯಿಂದ ಪೂರೈಸುವ ಬೀಜ, ಗೊಬ್ಬರದ ಕೊರತೆ ಆಗದಂತೆ ಕ್ರಮಹಿಸಬೇಕು. ರೈತರಿಗೆ ಸರ್ಕಾರದಿಂದ ಸಿಗುತ್ತಿರುವ ಬೆಳೆ ವಿಮೆ ಹಣದಲ್ಲಿ ಇಡೀ ಜಿಲ್ಲೆಗೆ ಸಿಕ್ಕಂತ ಅರ್ಧದಷ್ಟು ವಿಮೆ ಹಣ ತಾಲೂಕಿಗೆ ದೊರೆತಿದ್ದು, ಈ ಹಣ ಸಮರ್ಪಕವಾಗಿ ರೈತರ ಖಾತೆಗೆ ತಲುಪುವಂತೆ ಎಚ್ಚರವಹಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

VISTARANEWS.COM


on

Adequately deposit the crop insurance amount in the farmers account says MLA Shivaram Hebbar
Koo

ಕಾರವಾರ: ಉತ್ತಮ ಮಳೆಯಿಂದಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಕೃಷಿ ಇಲಾಖೆಯಿಂದ ಪೂರೈಸುವ ಬೀಜ, ಗೊಬ್ಬರದ ಕೊರತೆ ಆಗದಂತೆ ಕ್ರಮಹಿಸಬೇಕು. ರೈತರಿಗೆ ಸರ್ಕಾರದಿಂದ ಸಿಗುತ್ತಿರುವ ಬೆಳೆ ವಿಮೆ ಹಣದಲ್ಲಿ ಇಡೀ ಜಿಲ್ಲೆಗೆ ಸಿಕ್ಕಂತ ಅರ್ಧದಷ್ಟು ವಿಮೆ ಹಣ ತಾಲೂಕಿಗೆ ದೊರೆತಿದ್ದು, ಈ ಹಣ ಸಮರ್ಪಕವಾಗಿ ರೈತರ ಖಾತೆಗೆ ತಲುಪುವಂತೆ ಎಚ್ಚರವಹಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್, ಅಧಿಕಾರಿಗಳಿಗೆ (Uttara Kannada News) ಸೂಚಿಸಿದರು.

ಮುಂಡಗೋಡ ಟೌನ್‌ಹಾಲ್‌ನಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತೀ ತುರ್ತು ಆದಾಯ ಗಳಿಕೆಗಾಗಿ ರೈತರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಯುಕ್ತ ಬೀಜ, ಗೊಬ್ಬರ ಬಿತ್ತನೆಗೆ ಮುಂದಾಗುತ್ತಿದ್ದು, ಭವಿಷ್ಯದಲ್ಲಿ ಭೂಮಿಯ ಸಂಪೂರ್ಣ ಫಲವತ್ತತೆ ಕ್ಷೀಣಿಸಿ ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಜತೆಗೆ ಮುಂಬರುವ ದಿನಗಳಲ್ಲಿ ಭೂಮಿಯ ಫಲವತ್ತತೆಯು ಹಾಳಾಗಲಿದೆ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ತಾಲೂಕಿನ ಪ್ರತಿಯೊಬ್ಬ ರೈತರು ಸಾವಯುವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಯೊಬ್ಬ ಜನಸಾಮಾನ್ಯನಿಗೂ ಸರ್ಕಾರಿ ಸೌಲಭ್ಯಗಳು ದೊರಕುವಂತೆ ಜಾಗೃತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಕ್ಷೇತ್ರ ವಿಸ್ತರಿಸಲು ಶಾಸಕರು ಸೂಚಿಸಿದರು.

ಇದಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉತ್ತರಿಸಿ, ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಕ್ಷೇತ್ರ 400 ರಿಂದ 500 ಹೆಕ್ಟರ್ ಪ್ರದೇಶ ಹೆಚ್ಚಾಗಿದೆ. 2022-23ರಲ್ಲಿ ನರೇಗಾದಡಿ ಅಂದಾಜು 70 ಸಾವಿರ ಮಾನವ ದಿನ ಸೃಜನೆ ಗುರಿ ನಿಗದಿಪಡಿಸಲಾಗಿತ್ತು. ಇದಕ್ಕೆ ವಿರುದ್ಧವಾಗಿ 90 ಸಾವಿರ ಮಾನವ ದಿನ ಸೃಜಿಸುವ ಮೂಲಕ ನಿಗದಿತ ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 1 ಲಕ್ಷಕ್ಕೂ ಅಧಿಕ ಮಾನವ ದಿನಗಳ ಗುರಿ ನೀಡಿದ್ದು, ಈಗಾಗಲೇ 15 ಸಾವಿರದಷ್ಟು ಮಾನವ ದಿನ ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಅನುದಾನದ ಜತೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳನ್ನು ಕೈಗೊಂಡು ನರೇಗಾದ ಸಂಪೂರ್ಣ ಲಾಭ ಪಡೆಯುವುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಇದನ್ನೂ ಓದಿ: Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

ಪ್ರಸಕ್ತ ವರ್ಷದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಯ ಪ್ರಕರಣಗಳು ಕಂಡು ಬರದಂತೆ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ವೈದ್ಯರು ಸಣ್ಣಪುಟ್ಟ ವಿಷಯಗಳಿಗೂ ತಾಲೂಕಿನ ಬಡ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸುತ್ತಿರುವುದು ಬೇಸರದ ಸಂಗತಿ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಸಭೆಗೂ ಪೂರ್ವದಲ್ಲಿ ಶಾಸಕರು ಅಭಿವೃದ್ಧಿ ಆಕಾಂಕ್ಷಿ ತಾಲೂಕಾ ಕಾರ್ಯಕ್ರಮದ ಫೋಸ್ಟರ್ ಬಿಡುಗಡೆ ಮಾಡಿದರು. ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಸದಸ್ಯರು ಅತಿಥಿ ಗಣ್ಯರಿಗೆ ಗೌರವಪೂರ್ವಕವಾಗಿ ನೀಡಲು ತಯಾರಿಸಿದ ವಿವಿಧ ಆದಾಯೋತ್ಪನ್ನಗಳನ್ನು ಒಳಗೊಂಡ ಉಡುಗೊರೆ ಬುಟ್ಟಿ ಸ್ವೀಕರಿಸಿ ಪ್ರಶಂಸೆ ವ್ಯಕ್ತಪಡಿಸಿದರು.

2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ರಷ್ಟು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದರು.

ಇದನ್ನೂ ಓದಿ: Gemini Mobile App: ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಗೂಗಲ್ ಜೆಮಿನಿ ಆ್ಯಪ್; ಏನಿದರ ಉಪಯೋಗ?

ಸಭೆಯಲ್ಲಿ ತಹಸೀಲ್ದಾರ್ ಶಂಕರಗೌಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ, ಸಿಪಿಐ ರಂಗನಾಥ ನೀಲಮ್ಮನವರ, ಎಸಿಎಫ್ ರವಿ ಹುಲಕೋಟಿ, ಪ.ಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ನರೇಗಾ ಸಹಾಯ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಐಇಸಿ, ಎಂಐಎಸ್ ಸಂಯೋಜಕರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಇತರರಿದ್ದರು.

Continue Reading
Advertisement
Wild boar hunting in Hebbatti village Arrest of two accused
ಉತ್ತರ ಕನ್ನಡ3 mins ago

Banavasi News: ಹೆಬ್ಬತ್ತಿ ಗ್ರಾಮದಲ್ಲಿ ಕಾಡುಹಂದಿ ಬೇಟೆ; ಇಬ್ಬರ ಬಂಧನ

a successful kidney transplanted for 32 year old woman at Fortis Hospital
ಕರ್ನಾಟಕ6 mins ago

Fortis Hospital: 32 ವರ್ಷದ ಮಹಿಳೆಗೆ ಯಶಸ್ವಿ ಕಿಡ್ನಿ ಕಸಿ

Saved Goats
ದೇಶ8 mins ago

Bakrid: ಬಕ್ರೀದ್ ವೇಳೆ ಜೈನರು ಮುಸ್ಲಿಮರ ವೇಷ ಧರಿಸಿ 124 ಮೇಕೆ ಖರೀದಿಸಿದರು! ಉದ್ದೇಶ ಹೃದಯಸ್ಪರ್ಶಿ

Self Harming
ಕರ್ನಾಟಕ17 mins ago

Self Harming: ತಿಪಟೂರಿನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

Adequately deposit the crop insurance amount in the farmers account says MLA Shivaram Hebbar
ಉತ್ತರ ಕನ್ನಡ18 mins ago

Uttara Kannada News: ಬೆಳೆ ವಿಮೆ ಮೊತ್ತ ಸಮರ್ಪಕವಾಗಿ ರೈತರ ಖಾತೆಗೆ ಜಮಾ ಮಾಡಿ; ಹೆಬ್ಬಾರ್

Youth Empowerment and Sports Department Progress Review Meeting by CM Siddaramaiah
ಕರ್ನಾಟಕ24 mins ago

Bengaluru News: ಎಲ್ಲ ಕಾಮಗಾರಿಗಳಿಗೂ ಟೆಂಡರ್‌; ಸಿದ್ದರಾಮಯ್ಯ ಸೂಚನೆ

JDS protest against petrol diesel price hike in bengaluru
ಕರ್ನಾಟಕ27 mins ago

Petrol Deisel Price Hike: ಟಾಂಗಾ, ಸೈಕಲ್ ಸವಾರಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಜೆಡಿಎಸ್ ನಾಯಕರು!

Protest demanding adequate bus facility in Shira
ತುಮಕೂರು29 mins ago

Shira News: ಶಿರಾದಲ್ಲಿ ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

Two bears were spotted in Devasamudra village of Kampli
ಕರ್ನಾಟಕ32 mins ago

Ballari News: ಕಂಪ್ಲಿಯ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿ ಪ್ರತ್ಯಕ್ಷ!

Kannur Bomb Blast
ದೇಶ1 hour ago

Kannur Bomb Blast: ಕೇರಳದಲ್ಲಿ ಬಾಂಬ್‌ ಸ್ಫೋಟಕ್ಕೆ ವೃದ್ಧ ಬಲಿ; ಕಣ್ಣೂರು ಆಗುತ್ತಿದೆಯೇ ಬಾಂಬ್‌ ಕಾರ್ಖಾನೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌