Karwar News: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕನ ಆರೋಗ್ಯದಲ್ಲಿ ಚೇತರಿಕೆ; ದಾನಿಗಳಿಂದ ನೆರವು - Vistara News

ಆರೋಗ್ಯ

Karwar News: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕನ ಆರೋಗ್ಯದಲ್ಲಿ ಚೇತರಿಕೆ; ದಾನಿಗಳಿಂದ ನೆರವು

Karwar News: ನುರಿತ ಕ್ಯಾನ್ಸರ್ ತಜ್ಞರ ‘ಕ್ಯಾನ್‌ವಿನ್ ಗ್ರೂಪ್’ ತಂಡದ ಅವಿರತ ಶ್ರಮದ ಫಲವಾಗಿ ನಂದನಗದ್ದಾದ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.

VISTARANEWS.COM


on

Health Cancer Society karwar donars
ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂದನಗದ್ದಾದ ಬಾಲಕ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾರವಾರ: ಕ್ಯಾನ್ಸರ್ ದೃಢಪಟ್ಟು ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಗರದ ನಂದನಗದ್ದಾದ 4 ವರ್ಷದ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ನುರಿತ ಕ್ಯಾನ್ಸರ್ ತಜ್ಞರ ‘ಕ್ಯಾನ್‌ವಿನ್ ಗ್ರೂಪ್’ ತಂಡದ ಅವಿರತ ಶ್ರಮದ ಫಲವಾಗಿ ಬಾಲಕನ ಆರೋಗ್ಯದಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬರುತ್ತಿದೆ.

ಕಿವಿಯ ಹಿಂಬದಿಯ ಚಿಕ್ಕ ಗುಳ್ಳೆಯೊಂದು ಬೃಹದಾಕಾರವಾಗಿ ಬೆಳೆದು ಮುಖವನ್ನು ಆವರಿಸಿಕೊಂಡಿದ್ದ ನಂದನಗದ್ದಾದ ಬಾಲಕನಿಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹಾಗೂ ಇತರರು ಕಾರವಾರ ಜಿಲ್ಲಾಸ್ಪತ್ರೆಯ ಬಳಿಕ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ, ಅಲ್ಲಿ ಬಾಲಕನಿಗೆ ಕ್ಯಾನ್ಸರ್ ದೃಢಪಟ್ಟಿತ್ತು. ಈ ವೇಳೆ ಹಲವರ ಸಲಹೆ, ಸೂಚನೆ ಮೇರೆಗೆ ‘ಕ್ಯಾನ್‌ವಿನ್ ಗ್ರೂಪ್’ ತಂಡದ ವೈದ್ಯರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದ ಮಾಧವ ನಾಯಕ, ಬಾಲಕನನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ | Nirmala Sitharaman Pressmeet: ಸ್ತ್ರೀ ಸಬಲೀಕರಣ, ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ: ನಿರ್ಮಲಾ ಸೀತಾರಾಮನ್​

ಸದ್ಯ ಇಂಡಿಯಾನ ಆಸ್ಪತ್ರೆಯಲ್ಲಿ ‘ಕ್ಯಾನ್‌ವಿನ್ ಗ್ರೂಪ್’ನ ಡಾ.ಅಜಯ ಕುಮಾರ್, ಡಾ.ರಾಮನಾಥ ಶೆಣೈ ನೇತೃತ್ವದಲ್ಲಿ ಆಸ್ಪತ್ರೆಯ ಇತರ ವೈದ್ಯರು ಹಾಗೂ ಸಿಬ್ಬಂದಿ ಬಾಲಕನಿಗೆ ಚಿಕಿತ್ಸೆಯ ಜೊತೆಗೆ ಆರೈಕೆ ಮಾಡುತ್ತಿದ್ದಾರೆ. ಹೆಚ್ಚಿನ ಕಾಳಜಿ ವಹಿಸಿ ಬಾಲಕನನ್ನು ಕ್ಯಾನ್ಸರ್ ಮುಕ್ತವಾಗಿಸಲು ಶ್ರಮಿಸುತ್ತಿದ್ದಾರೆ. ಸದ್ಯ ಬಾಲಕನ ಆರೋಗ್ಯದಲ್ಲಿ ಈ ಮೊದಲಿಗಿಂತಲೂ ಚೇತರಿಕೆ ಕಂಡುಬಂದಿದ್ದು, ಇನ್ನೊಂದು ವೈದ್ಯಕೀಯ ವರದಿ ಬಂದ ಬಳಿಕ, ಅಂದರೆ ಇನ್ನೆರಡು ವಾರಗಳಲ್ಲಿ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕನ ಚಿಕಿತ್ಸೆ ಸಂಬಂಧ ಆತನ ಕುಟುಂಬಕ್ಕೆ ಯಾವುದೇ ಆರ್ಥಿಕ ಹೊರೆಯಾಗದಂತೆ ಅನೇಕ ದಾನಿಗಳು ನೆರವಾಗಿದ್ದಾರೆ. ಮಂಗಳೂರಿನ ಕ್ಯಾನ್ಸರ್ ಸೊಸೈಟಿ ಬಾಲಕನ ಚಿಕಿತ್ಸೆಗೆ 1 ಲಕ್ಷ ರೂ. ನೀಡಿ ನೆರವಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿಯು ಕೂಡ ಕೆಲವು ಸಂಘ- ಸಂಸ್ಥೆಗಳ ನೆರವಿನೊಂದಿಗೆ ಹೆಚ್ಚು ಖರ್ಚು ಬಾರದಂತೆ ನೋಡಿಕೊಳ್ಳುತ್ತಿದೆ.

ಕಾರವಾರದಲ್ಲಿ ಮಹಿಳಾ ಮೀನುಗಾರರ ಮುಖಂಡರಾದ ಸುಶೀಲಾ ಹರಿಕಂತ್ರ ಮಗುವಿನ ಚಿಕಿತ್ಸೆಗೆ ಮೀನು ಮಾರಾಟ ಮಹಿಳೆಯರಿಂದ ಸುಮಾರು 10 ಸಾವಿರ ರೂ. ಸಂಗ್ರಹಿಸಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ನರೇಂದ್ರ ದೇಸಾಯಿ 5 ಸಾವಿರ ರೂ., ನಗರಸಭೆಯ ಉಪಾಧ್ಯಕ್ಷ ಪ್ರಕಾಶ ನಾಯ್ಕ 2 ಸಾವಿರ ರೂ., ಮಾಜಿ ಶಾಸಕ ಸತೀಶ್ ಸೈಲ್ 10 ಸಾವಿರ ರೂ. ಹಾಗೂ ಅನೇಕ ಸಂಘ ಸಂಸ್ಥೆಗಳು, ದಾನಿಗಳು ಬಾಲಕನ ಕುಟುಂಬಕ್ಕೆ ನೆರವಾಗಿದ್ದಾರೆ.

ಇದನ್ನೂ ಓದಿ | Union Budget 2023 : ಸಹಜ ಕೃಷಿಯತ್ತ ಒಲವು, ಸಿರಿಧಾನ್ಯಕ್ಕೆ ಪ್ರೋತ್ಸಾಹ

“ಆಸ್ಪತ್ರೆಯವರು ಹಾಗೂ ವೈದ್ಯರ ತಂಡ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಷ್ಟೇ ಖರ್ಚು ಬಂದರೂ ಅದನ್ನು ದಾನಿಗಳ ನೆರವು ಪಡೆದು ಭರಿಸಿಕೊಡುವುದಾಗಿ ಕುಟುಂಬಕ್ಕೆ ಧೈರ್ಯ ನೀಡಿದ್ದೇನೆ. ನಮಗೆ ಬಾಲಕ ಗುಣಮುಖನಾಗಿ ಮೊದಲಿನಂತಾದರಷ್ಟೇ ಸಾಕು” ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ -ಮಾಧವ ನಾಯಕ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Exam Tips: ಮಕ್ಕಳ ಪರೀಕ್ಷೆ ಪೋಷಕರಿಗೂ ಪರೀಕ್ಷೆಯೇ? ಇಲ್ಲಿವೆ ಒತ್ತಡರಹಿತ ಎಕ್ಸಾಮ್‌ಗಾಗಿ ಟಿಪ್ಸ್!

ಪರೀಕ್ಷೆಯ ಹಂತವನ್ನು ಮಕ್ಕಳು ಸರಾಗವಾಗಿ ದಾಟಿಕೊಂಡು ಹೋಗಲು ಪೋಷಕರಾದವರು ಏನು ಮಾಡಬೇಕು, ಮಕ್ಕಳನ್ನು ಪರೀಕ್ಷೆಗೆ ಹೇಗೆ ಸಿದ್ಧಗೊಳಿಸಬೇಕು (Exam Tips) ಎಂಬುದನ್ನು ಇಲ್ಲಿ ನೋಡೋಣ.

VISTARANEWS.COM


on

Exam Tips
Koo

ಹೇಳಿ ಕೇಳಿ ಈಗ ಪರೀಕ್ಷೆಗಳ ಪರ್ವಕಾಲ. ಮಕ್ಕಳಿರುವ ಮನೆಗಳೆಲ್ಲ ಮಕ್ಕಳ ಜೊತೆಗೆ ಪೋಷಕರಿಗೂ ಇದು ಪರೀಕ್ಷೆಯೆಂಬ ಸಂಧಿಕಾಲ. ಮಕ್ಕಳು ಓದುವುದಕ್ಕಿಂತ ಪೋಷಕರು ಧೃತಿಗೆಡುವುದೇ ಹೆಚ್ಚು. ಮನೆಯಲ್ಲೊಂದು ಒತ್ತಡದ ವಾತಾವರಣ. ಆದರೆ, ಮಕ್ಕಳ ಪರೀಕ್ಷೆಯ ಸಂದರ್ಭ ನಿಜವಾಗಿಯೂ ಬೇಕಾಗುವುದು ಪೋಷಕರ ತಾಳ್ಮೆ. ಜೊತೆಗೆ ಹಲವು ಸಮಯಗಳಿಂದ ಅವರು ಕಲಿಸಿಕೊಟ್ಟ ಶಿಸ್ತು. ಬನ್ನಿ, ಪರೀಕ್ಷೆಯ ಹಂತವನ್ನು ಮಕ್ಕಳು ಸರಾಗವಾಗಿ ದಾಟಿಕೊಂಡು ಹೋಗಲು ಪೋಷಕರಾದವರು ಏನು ಮಾಡಬೇಕು, ಮಕ್ಕಳನ್ನು ಪರೀಕ್ಷೆಗೆ ಹೇಗೆ ಸಿದ್ಧಗೊಳಿಸಬೇಕು (Exam Tips) ಎಂಬುದನ್ನು ಇಲ್ಲಿ ನೋಡೋಣ.

Cute Little Children Reading Books While Sitting near Color Wall

ಓದಿನ ಶಿಸ್ತು ಇರಲಿ

ಮಕ್ಕಳಿಗೆ ಪರೀಕ್ಷೆ ಹತ್ತಿರ ಬಂದಂತೆ ಓದು ಎಂದು ಬೆನ್ನು ಬೀಳುವ ಮೊದಲು ನಿತ್ಯವೂ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ಮಾಡಿ. ಶಾಲೆಯಿಂದ ಬಂದ ಮಗು ಒಂದು ನಿತ್ಯದ ದಿನಚರಿಯನ್ನು ತನ್ನ ಪಾಡಿಗೆ ಪಾಲಿಸುವಂತೆ ಮಾಡುವುದು ಹೆತ್ತವರ ಕರ್ತವ್ಯ. ಹೆತ್ತವರು ಎಷ್ಟೇ ಬ್ಯುಸಿಯಾಗಿರಲಿ, ಮಕ್ಕಳ ಓದಿನ ವಿಚಾರದಲ್ಲಿ ಈ ಶಿಸ್ತನ್ನು ರೂಢಿಸಿಕೊಳ್ಳುವಂತೆ ಮಾಡದಿದ್ದಲ್ಲಿ, ಅದು ಖಂಡಿತ ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬಿದ್ದೇ ಬೀಳುತ್ತದೆ. ಯಾಕೆಂದರೆ, ಪರೀಕ್ಷೆ ಕೇವಲ ಶಾಲೆಯಲ್ಲಿ ಮಾತ್ರ ಬರುವುದಿಲ್ಲ. ಜೀವನದುದ್ದಕ್ಕೂ ಸಾಕಷ್ಟು ಪರೀಕ್ಷೆಗಳನ್ನು ಮಕ್ಕಳು ಎದುರಿಸಬೇಕಾಗುತ್ತದೆ. ಶಾಲೆಯ ಪರೀಕ್ಷೆಗಳು ಮಕ್ಕಳನ್ನು ಮುಂದಿನ ಜೀವನಕ್ಕೆ ಬದುಕಿನ ನಿಜವಾದ ಪರೀಕ್ಷೆಗಳಿಗೆ ಸಜ್ಜು ಮಾಡುತ್ತವೆ ಎಂಬುದನ್ನು ನೆನಪಿಡಿ.

time table

ಸಿದ್ಧ ವೇಳಾಪಟ್ಟಿಯಿರಲಿ

ನಿತ್ಯವೂ ಮಕ್ಕಳು ಪಾಲನೆ ಮಾಡಲು ಒಂದು ಸಿದ್ಧ ವೇಳಾಪಟ್ಟಿಯಿರಲಿ. ಮಕ್ಕಳಿಗೆ ಸಾಕಷ್ಟು ತಮ್ಮ ಸಮಯವನ್ನೂ ನೀಡಿ. ಶಾಲೆಯಿಂದ ಬಂದ ತಕ್ಷಣ ರಿಲ್ಯಾಕ್ಸ್‌ ಆಗಲು ಒಂದಿಷ್ಟು ಸಮಯ, ನಂತರ ಓದಿಗಾಗಿ, ಹೋಂವರ್ಕ್‌ಗಾಗಿ, ಇತರ ಆಸಕ್ತಿಗಳಿದ್ದರೆ ಅವುಗಳ ತರಗತಿಗಳಿಗಾಗಿ ಹೀಗೆ ಒಂದು ಸಿದ್ಧ ಮಾದರಿಯನ್ನು ಮಕ್ಕಳು ಪಾಲಿಸಲಿ. ಪರೀಕ್ಷೆಯ ಸಂದರ್ಭ ಮಾತ್ರವೇ ಎಲ್ಲವನ್ನೂ ಒಮ್ಮೆಲೆ ಹೇರದಂತೆ, ಮೊದಲಿನಿಂದಲೇ ಈ ತಯಾರಿ ಅಗತ್ಯ.

ಏಕಾಗ್ರತೆ ಮುಖ್ಯ

ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಸಾಮಾನ್ಯವೇ. ಮನೆಯಲ್ಲಿ ಮಕ್ಕಳ ಓದಿನ ಜೊತೆಜೊತೆಗೇ ಸಾಕಷ್ಟು ಕೆಲಸಗಳು ಅವರ ಸುತ್ತಮುತ್ತ ನಡೆಯುತ್ತಿದ್ದರೆ ಸಹಜವಾಗಿಯೇ ಮಕ್ಕಳು ಬೇರೆ ಕೆಲಸಗಳತ್ತ ಆಕರ್ಷಿತರಾಗುತ್ತಾರೆ. ಏಕಾಗ್ರತೆ ಅವರಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರ ಓದಿಗೊಂದು ಶಾಂತಿಯ, ಯಾವುದೇ ಶಬ್ದಗಳಿಲ್ಲದ, ಇತರ ಕೆಲಸ ಕಾರ್ಯಗಳಿಂದ ವಿಚಲಿತರಾಗದಂತಹ ಒಂದು ಜಾಗವಿರಲಿ. ಮಕ್ಕಳು ಅಲ್ಲಿಯೇ ಕುಳಿತು ತಮ್ಮ ಓದಿನ ಕೆಲಸ ಕಾರ್ಯಗಳನ್ನು ಮಾಡುವ ಅಭ್ಯಾಸವನ್ನು ರೂಢಿ ಮಾಡಿಸಿ.

Hardworking student studying

ನಿರ್ದಿಷ್ಟ ಸಮಯ ನೀಡಿ

ಒಮ್ಮೆಲೇ ಒಂದಿಷ್ಟು ರಾಶಿ ಓದನ್ನು ಮಕ್ಕಳಿಗೆ ಹೇರಬೇಡಿ. ಓದನ್ನು ಸಣ್ಣ ಸಣ್ಣ ಭಾಗಗಳಾಗಿ ಒಂದಿಷ್ಟು ನಿರ್ದಿಷ್ಟ ಸಮಯ ನೀಡಿ ಅದನ್ನು ಮುಗಿಸುವಂತೆ ಹೇಳಿ. ಆಗ ಮಕ್ಕಳಿಗೆ ಒಮ್ಮೆಲೆ ಒಂದು ರಾಶಿ ಓದಲು ಹೇರಿಕೆ ಮಾಡಿದಂತಾಗುವುದಿಲ್ಲ. ಪರೀಕ್ಷೆಗೆ ಬಹಳ ದಿನಗಳಿರುವಾಗಲೇ ಓದಲು ಆರಂಭಿಸಿದರೆ ಹೀಗೆ ಮಾಡಲು ಸಾಧ್ಯವಾಗುವುದು. ಇಲ್ಲವಾದರೆ, ಒಮ್ಮೆಲೆ, ಎಲ್ಲವೂ ಹೊರೆಯೇ ಆಗುತ್ತದೆ. ಪರೀಕ್ಷೆ ಇರುವ ಮಕ್ಕಳ ಮನೆಗಳು ಯುದ್ಧಭೂಮಿಗಳಂತಾಗುತ್ತದೆ.

ಓದಿನ ತಂತ್ರ ಹೇಳಿ ಕೊಡಿ

ಬೇರೆ ಬೇರೆ ಮಾದರಿಯ ಓದಿನ ತಂತ್ರಗಳನ್ನು ಮಕ್ಕಳಿಗೆ ಹೇಳಿ ಕೊಡಿ. ಉದಾಹರಣೆಗೆ, ಸುಲಭದ ಮಾದರಿಯಲ್ಲಿ ನೆನಪಿಟ್ಟುಕೊಳ್ಳುವ ತಂತ್ರಗಳಿರಬಹುದು, ಬರೆದು ಕಲಿತುಕೊಳ್ಳುವುದಿರಬಹುದು, ಕೆಲವು ಪಾಯಿಂಟ್‌ಗಳನ್ನಾಗಿ ಮಾಡಿ ಸುಲಭವಾಗಿ ನೆನಪಿಸಿಕೊಳ್ಳಲು ಮಾಡುವ ಚಿಕ್ಕ ಚಿಕ್ಕ ನೋಟ್‌ಗಳಿರಬಹುದು, ಮಕ್ಕಳು ನೆನಪಿಟ್ಟುಕೊಳ್ಳಲು ಅನುಕೂಲವಾಗುವ ತಂತ್ರಗಳನ್ನು ಕಲಿಸಿ ಕೊಡಿ. ಇದು ಮಕ್ಕಳ ಯೋಚನಾಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನೆನಪಿನಶಕ್ತಿಯನ್ನೂ ಉದ್ದೀಪಿಸುತ್ತದೆ.

Stressed Pupil Taking Exam at School

ಒತ್ತಡ ಹೆಚ್ಚಿಸಬೇಡಿ

ಓದುವ ಕೆಲಸವೊಂದನ್ನೇ ಆಗಾಗ ನೆನಪಿಸುತ್ತಿರಬೇಡಿ. ಮಾತುಮಾತಿಗೂ ಅದನ್ನೇ ಹೇಳುತ್ತಿರಬೇಡಿ. ಇದು ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಓದಿನ ನಡುವೆ ಬ್ರೇಕ್‌ಗಳಿರಲಿ. ಈ ಬ್ರೇಕ್‌ 5-10 ನಿಮಿಷಗಳದ್ದಾಗಿರಲಿ. ಈ ಸಮಯದಲ್ಲಿ ಅವರು ಕೊಂಚ ರಿಲ್ಯಾಕ್ಸ್‌ ಮಾಡಲಿ. ಇದು ಮತ್ತೆ ಮಕ್ಕಳ ಓದಿನತ್ತ ಏಕಾಗ್ರತೆಯನ್ನು ಹೆಚ್ಚು ಮಾಡಿಸುತ್ತದೆ.

ಸಮತೋಲಿತ ಆಹಾರ ನೀಡಿ

ಮುಖ್ಯವಾಗಿ ಮಕ್ಕಳಿಗೆ ಸಮತೋಲಿತ, ಪೋಷಕಾಂಶಯುಕ್ತ ಆಹಾರ ಕೊಡಿ. ಮಕ್ಕಳ ನೆನಪಿನ ಶಕ್ತಿಯನ್ನು ಉದ್ದೀಪಿಸುವ, ಮಿದುಳನ್ನು ಆರೋಗ್ಯವಾಗಿಸುವ, ಚುರುಕಾಗಿಸುವ ಉತ್ತಮ ಆಹಾರಗಳು ಅವಾಗಿರಲಿ. ಉದಾಹರಣೆಗೆ ಬೀಜಗಳು, ಒಣ ಹಣ್ಣುಗಳು, ಹಣ್ಣುಗಳು, ಸೊಪ್ಪು ತರಕಾರಿಗಳು, ಧಾನ್ಯಗಳು, ಹಾಲು, ಮೊಟ್ಟೆ ಇತ್ಯಾದಿ. ಇದು ಮಕ್ಕಳ ಶಕ್ತಿವರ್ಧನೆಗೂ ನೆರವಾಗುತ್ತದೆ. ಅವರನ್ನು ಚುರುಕಾಗಿರಿಸುತ್ತದೆ. ಆದಷ್ಟೂ ಕುರುಕಲು, ಜಂಕ್‌ ಅಥವಾ ಸಂಸ್ಕರಿಸಿದ ಆಹಾರಗಳಿಂದ ದೂರವಿಡಿ.

Child Sleeps

ನಿದ್ದೆ ಕೂಡ ಮುಖ್ಯ

ಓದಿನ ಸಮಯದಲ್ಲಿ ಮಕ್ಕಳಿಗೆ ನಿದ್ದೆಯೂ ಮುಖ್ಯ. ಮಕ್ಕಳಿಗೆ ಸರಿಯಾಗಿ ನಿದ್ದೆ ಮಾಡಲು ಸಮಯ ಕೊಡಿ. ಮಕ್ಕಳ ನಿದ್ದೆಗೆ ಒಂದು ಸರಿಯಾದ ಸಮಯ ನಿಗದಿ ಮಾಡಿ. ಮಕ್ಕಳು ಸಣ್ಣ ವಯಸ್ಸಿನವರಾಗಿದ್ದರೆ, ರಾತ್ರಿ ಹೆಚ್ಚು ಹೊತ್ತು ಕೂರಿಸಬೇಡಿ. ಎಂಟು ಗಂಟೆಗಳ ಕನಿಷ್ಟ ನಿದ್ದೆಯನ್ನು ತಪ್ಪಿಸಲು ಬಿಡಬೇಡಿ.

ಮಕ್ಕಳನ್ನು ಪ್ರೋತ್ಸಾಹಿಸಿ

ಮಕ್ಕಳ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ. ಅವರು ಓದಿ ಮನನ ಮಾಡಿದ್ದಕ್ಕೆ ಉತ್ತಮವಾಗಿ ಪರೀಕ್ಷೆ ಬರೆದು ಬಂದಾಗ ಅವರ ಬೆನ್ನು ತಟ್ಟಿ. ಖುಷಿಯಿಂದ ಸ್ವಾಗತಿಸಿ. ಮತ್ತೆ ಮುಂದಿನ ಓದಿಗೆ ಇದೇ ರೀತಿ ಪೂರಕ ವಾತಾವರಣ ಕಲ್ಪಿಸಿ ಕೊಡಿ.

ಇದನ್ನೂ ಓದಿ: Side Effects Of Vitamin: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಬೇಡಿ!

Continue Reading

ಆರೋಗ್ಯ

Side Effects Of Vitamin: ವಿಟಮಿನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಬೇಡಿ!

ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ದೇಹಕ್ಕೆ ಪೂರಕ ಎನ್ನುವ ಉದ್ದೇಶದಿಂದ ಅತಿಯಾಗಿ ವಿಟಮಿನ್‌ ಪೂರಕಗಳನ್ನು ಸೇವಿಸುವುದು ನಿಶ್ಚಿತವಾಗಿ ಸಮಸ್ಯೆಗಳನ್ನು ತರಬಲ್ಲದು. ಜೀವಸತ್ವಗಳ ಪ್ರಮಾಣ ಹೆಚ್ಚಾದರೆ (Side Effects of Vitamin) ಅದರ ಅಡ್ಡ ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳಿ.

VISTARANEWS.COM


on

Side Effects Of Vitamin
Koo

ವಿಟಮಿನ್‌ಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳು. ಶರೀರ ಆರೋಗ್ಯವಾಗಿರಲು ಮಾತ್ರವಲ್ಲ, ತನ್ನ ಕೆಲಸವನ್ನು ಮಾಡಿಕೊಳ್ಳಲು ಸಹ ಜೀವಸತ್ವಗಳ ಅಗತ್ಯವಿದೆ. ಆಹಾರದ ಮೂಲಕ ದೊರೆಯುವ ಈ ಸತ್ವಗಳು ಸಾಕಾಗದು ಎನಿಸಿದ ಬಹಳಷ್ಟು ಮಂದಿ ವಿಟಮಿನ್‌ ಪೂರಕಗಳನ್ನು ಸೇವಿಸುತ್ತಾರೆ. ಇದಕ್ಕೆ ವೈದ್ಯರ ಸಲಹೆ ಅಗತ್ಯ. ಪೂರಕಗಳನ್ನು ತಮ್ಮಷ್ಟಕ್ಕೆ ಇಷ್ಟ ಬಂದಂತೆ ಸೇವಿಸಿದರೆ ಸಮಸ್ಯೆಗಳಾಗಬಹುದು. ಕಾರಣ, ವಿಟಮಿನ್‌ ಅತಿಯಾದರೆ (Side Effects of Vitamin) ಅದಕ್ಕೂ ಅಡ್ಡಪರಿಣಾಮಗಳಿಗೆ. ಏನದು?
ಜೀವಸತ್ವಗಳಲ್ಲಿ ಕೆಲವು ನೀರಿನಲ್ಲಿ ಕರಗಬಲ್ಲಂಥವು, ಕೆಲವು ಕೊಬ್ಬಿನಲ್ಲಿ ಕರಗಬಲ್ಲವು. ನೀರಲ್ಲಿ ಕರಗಬಲ್ಲ ಸಿ ವಿಟಮಿನ್‌ನಂಥವು ಕೊಂಚ ಹೆಚ್ಚಾದರೆ ಅತಿಯಾದ ದುಷ್ಪರಿಣಾಮಗಳೇನು ಆಗುವುದಿಲ್ಲ. ಕಾರಣ, ಇವು ಹೆಚ್ಚಾದಷ್ಟು ಮೂತ್ರದಲ್ಲಿ ಹೊರಗೆ ಹೋಗಿಬಿಡುತ್ತದೆ. ಆದರೆ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್‌ ಎ, ಡಿ, ಇ ಮತ್ತು ಕೆ-ನಂಥವು ಸಮಸ್ಯೆಗಳು ತರಬಲ್ಲವು. ಏಕೆಂದರೆ, ದೇಹದ ಕೊಬ್ಬಿನ ಕೋಶಗಳಲ್ಲಿ ಉಳಿಯುವ ಇವನ್ನು ದೇಹದಿಂದ ವರ್ಜಿಸುವುದು ಕಷ್ಟವಾಗಿಬಿಡಬಹುದು. ಯಾವ ವಿಟಮಿನ್‌ ಅತಿಯಾದರೆ ಆರೋಗ್ಯದ ಮೇಲಿನ ಪರಿಣಾಮವೇನು ಎಂಬುದನ್ನು ಗಮನಿಸೋಣ.

Vitamin A

ವಿಟಮಿನ್‌ ಎ

ಯಾವುದೇ ಜೀವಸತ್ವಗಳು ಆಹಾರದ ಮೂಲಕ ದೇಹ ಸೇರಿದರೆ ಹೆಚ್ಚು ಸುರಕ್ಷಿತ. ಹಾಗಲ್ಲದೆ ಪೂರಕಗಳನ್ನು ಸೇವಿಸುವಾಗ ಮಾತ್ರ ಎಚ್ಚರ ಬೇಕು. ಎ ಜೀವಸತ್ವ ಹೆಚ್ಚಾದರೆ ತಲೆನೋವು, ತಲೆಸುತ್ತು, ಹೊಟ್ಟೆ ತೊಳೆಸುವುದು, ಚರ್ಮದ ಕಿರಿಕಿರಿ, ಮೂಳೆ ಮತ್ತು ಕೀಲುಗಳಲ್ಲಿ ನೋವುಗಳು ಸಾಮಾನ್ಯವಾಗಿ ಕಂಡುಬರುವಂಥ ಅಡ್ಡ ಪರಿಣಾಮಗಳು. ಆದರೆ ವಿಪರೀತ ಹೆಚ್ಚಾದ ಪ್ರಕರಣಗಳಲ್ಲಿ, ದೃಷ್ಟಿದೋಷ, ಮೂಳೆಗಳಲ್ಲಿ ಉರಿಯೂತ, ಕೂದಲು ಉದುರುವುದು, ಚರ್ಮ ಒಣಗುವುದು, ಯಕೃತ್‌ಗೆ ಹಾನಿಯಾಗುವಂಥದ್ದು ಕಂಡು ಬರಬಹುದು.

Vitamin D

ವಿಟಮಿನ್‌ ಡಿ

ಆಹಾರದ ಮೂಲಕ ಅಥವಾ ಸೂರ್ಯನ ಬೆಳಕಿನ ಮೂಲಕ ನಮ್ಮ ದೇಹ ಸೇರುವ ರೀತಿಯೇ ಸೂಕ್ತವಾದದ್ದು. ಆದರೆ ವಿಟಮಿನ್‌ ಡಿ ಕೊರತೆಯಾದ ಸಂದರ್ಭಗಳಲ್ಲಿ ವೈದ್ಯರ ಸೂಚನೆಯ ಮೇರೆಗೆ ಪೂರಕ ಮಾತ್ರೆಗಳನ್ನು ಸೇವಿಸಬೇಕು. ಅದಿಲ್ಲದಿದ್ದರೆ, ಹೊಟ್ಟೆ ತೊಳೆಸುವುದು, ವಾಂತಿ, ಅಶಕ್ತತೆ ಕಾಡಬಹುದು. ತೀವ್ರವಾದ ಪ್ರಕರಣಗಳಲ್ಲಿ ರಕ್ತದಲ್ಲಿ ಕ್ಯಾಲ್ಶಿಯಂ ಮಟ್ಟ ಏರುವುದು ಅಥವಾ ಕಿಡ್ನಿ ತೊಂದರೆಗಳು ಬಾಧಿಸಬಹುದು.

Vitamin E

ಇ ಜೀವಸತ್ವ

ಈ ವಿಟಮಿನ್‌ ಅಧಿಕವಾದರೆ ಆಗುವ ಅಡ್ಡ ಪರಿಣಾಮಗಳು ತೀವ್ರವಾಗುವ ಸಾಧ್ಯತೆ ಹೆಚ್ಚು. ಇದು ಕಾಡುವುದು ಆಂತರಿಕ ರಕ್ತಸ್ರಾವದ ರೂಪದಲ್ಲಿ. ನೈಸರ್ಗಿಕವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಲ್ಲಿ ಹೆಚ್ಚುವರಿ ವಿಟಮಿನ್‌ ಇ ಅಡ್ಡಗಾಲು ಹಾಕುತ್ತದೆ. ಇದರಿಂದ ಹೆಮೊರೇಜ್‌ಗಳ ಭೀತಿ ಹೆಚ್ಚಬಹುದು. ಇದಲ್ಲದೆ, ದುಷ್ಪರಿಣಾಮ ಸೌಮ್ಯ ಸ್ವರೂಪದಲ್ಲಿದ್ದರೆ, ವಾಂತಿ, ಡಯರಿಯ, ಹೊಟ್ಟೆ ನೋವು, ತಲೆನೋವು, ಅಲರ್ಜಿಯ ಸೂಚನೆಗಳು ಕಾಡಬಹುದು.

Vitamin k

ವಿಟಮಿನ್‌ ಕೆ

ಈ ಸತ್ವವು ಹೆಚ್ಚಾಗುವ ಮಟ್ಟಿಗೆ ದೇಹ ಸೇರುವ ಸಾಧ್ಯತೆ ಉಳಿದವಕ್ಕೆ ಹೋಲಿಸಿದರೆ ಕಡಿಮೆ. ಆದಾಗ್ಯೂ ಕೆ ಜೀವಸತ್ವ ಹೆಚ್ಚಾದರೆ ಕೆಂಪುರಕ್ತಕಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಯಕೃತ್‌ಗೂ ತೊಂದರೆ ನೀಡಬಹುದು. ರಕ್ತ ನೀರಾಗುವಂಥ ಔಷಧಿ ಸೇವಿಸುವವರಲ್ಲಿ, ಈ ಔಷಧಿಯ ಪರಿಣಾಮದಲ್ಲೂ ಅಡ್ಡಗಾಲು ಹಾಕುತ್ತದೆ ಕೆ ಜೀವಸತ್ವ.

Vitamin c

ವಿಟಮಿನ್‌ ಸಿ

ಈವರೆಗೆ ಹೇಳಿದ ಜೀವಸತ್ವಗಳೆಲ್ಲವೂ ಕೊಬ್ಬಿನಲ್ಲಿ ಕರಗುವಂಥವು. ಇನ್ನು ಮೇಲಿನವು ನೀರಲ್ಲಿ ಕರಗಬಲ್ಲ ಜೀವಸತ್ವಗಳು. ಆಸ್ಕಾರ್ಬಿಕ್‌ ಆಮ್ಲವೆಂದೂ ಕರೆಯಲಾಗುವ ಇದು ಹೆಚ್ಚಾದರೆ ಸಾಮಾನ್ಯವಾಗಿ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ. ಈ ಮಿತಿಯನ್ನೂ ಮೀರಿ ವಿಟಮಿನ್‌ ಸಿ ಸೇವಿಸಿದರೆ, ಜೀರ್ಣಾಂಗಗಳ ತೊಂದರೆ ಬಾಧಿಸಬಹುದು. ಇನ್ನೂ ಹೆಚ್ಚಾದರೆ ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗಬಹುದು.

Vitamin b

ವಿಟಮಿನ್‌ ಬಿ

ಇದರಲ್ಲಿ ಹಲವಾರು ವಿಟಮಿನ್‌ಗಳಿವೆ. ಒಂದೊಂದನ್ನೂ ಪ್ರತ್ಯೇಕವಾಗಿ ಹೇಳುವುದಾದರೆ- ವಿಟಮಿನ್‌ ಬಿ೩ ಹೆಚ್ಚಾದರೆ, ಚರ್ಮ ಕೆಂಪಾಗಿ ಬಿಸಿಯಾಗುವುದು, ಹೃದಯ ಬಡಿತ ಏರುವುದು, ವಾಂತಿ, ಯಕೃತ್‌ಗೆ ಹಾನಿ ಮತ್ತು ಜೀರ್ಣಾಂಗಗಳ ಸಮಸ್ಯೆ ಉಂಟಾಗಬಹುದು. ವಿಟಮಿನ್‌ ಬಿ೬ ಹೆಚ್ಚಾದರೆ, ನರಗಳಿಗೆ ಹಾನಿಯಾಗಬಹುದು, ಸ್ನಾಯುಗಳು ದುರ್ಬಲವಾಗಬಹುದು.

ಫಾಲಿಕ್‌ ಆಮ್ಲ ಅಥವಾ ಬಿ9 ಜೀವಸತ್ವ ಅತಿಯಾದರೆ, ವಿಟಮಿನ್‌ ಬಿ12 ಕೊರತೆಯನ್ನು ಮರೆಮಾಚಿಬಿಡುತ್ತದೆ. ಇದರಿಂದ ನರಗಳ ಸಮಸ್ಯೆಯೂ ತಲೆದೋರಬಹುದು. ವಿಟಮಿನ್‌ ಬಿ12 ವಿಪರೀತವಾದರೆ ತಲೆನೋವು, ತಲೆಸುತ್ತು, ವಾಂತಿ, ಒತ್ತಡಗಳು ಕಾಡಬಹುದು.

ಇದನ್ನೂ ಓದಿ: Biryani Tea: ಟ್ರೆಂಡ್‌ನಲ್ಲಿದೆ ಘಮಘಮಿಸುವ ಹೊಸ ಬಿರಿಯಾನಿ ಚಹಾ! ಒಮ್ಮೆ ರುಚಿ ನೋಡಿ!

Continue Reading

ಆರೋಗ್ಯ

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

ಶ್ವಾಸಕೋಶ ನಮ್ಮ ದೇಹದ ಅತಿ ಮುಖ್ಯ ಭಾಗ. ಯಾವೆಲ್ಲ ಆಹಾರಗಳು ಶ್ವಾಸಕೋಶದ (Health Tips for Lungs) ಡಿಟಾಕ್ಸ್‌ಗೆ ಒಳ್ಳೆಯದು? ಈ ಲೇಖನ ಓದಿ.

VISTARANEWS.COM


on

Doctor listens to the human lungs
Koo

ನಮ್ಮ ದೇಹದ ಪ್ರಮುಖ ಅಂಗಗಳ ಪೈಕಿ ಶ್ವಾಸಕೋಶವೂ ಒಂದು. ಶ್ವಾಸಕೋಶದ ಆರೋಗ್ಯ ಅತ್ಯಂತ ಮುಖ್ಯ. ಆದರೆ ಇಂದು ನಗರೀಕರಣ, ಹೆಚ್ಚಿದ ವಾಹನಗಳು, ನಿತ್ಯವೂ ಇಂತಹ ಪರಿಸರದಲ್ಲೇ ಕೆಲಸ ಮಾಡಬೇಕಾಗಿ ಬರುವ ಅನಿವಾರ್ಯತೆ ಇತ್ಯಾದಿಗಳಿಂದಾಗಿ ನಮ್ಮ ಶ್ವಾಸಕೋಶಗೊಳಕ್ಕೆ ವಾತಾವರಣದ ಕಲುಶಿತ ಗಾಳಿಯ ಪ್ರವೇಶವಾಗಿಯೇ ಆಗುತ್ತದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಭಾರತದ ಹಲವು ನಗರಗಳು ಮನುಷ್ಯರಿಗೆ ಉಸಿರಾಡಲು ಯೋಗ್ಯವೇ ಇಲ್ಲದಂಥ ಗಾಳಿಯನ್ನೂ ಹೊಂದಿವೆ. ಇಂಥ ಸಂದರ್ಭದಲ್ಲಿ ನಮ್ಮ ಶ್ವಾಸಕೋಶವನ್ನು ಆದಷ್ಟೂ ಆರೋಗ್ಯವಾಗಿ ಇಟ್ಟುಕೊಳ್ಳುವ ಉತ್ತಮ ಆಹಾರ ಸೇವನೆ, ಪ್ರಾಣಾಯಾಮ, ಯೋಗ ಇತ್ಯಾದಿಗಳ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಿದೆ. ಶ್ವಾಸಕೋಶಕ್ಕೆ ಒಳ್ಳೆಯದನ್ನೇ ಮಾಡುವ ಆಹಾರಗಳೂ ನಮ್ಮ ಸುತ್ತಮುತ್ತಲಿವೆ. ನೈಸರ್ಗಿಕವಾಗಿ ನಮಗೆ ದಕ್ಕುವ ಶ್ವಾಸಕೋಶ ಸ್ನೇಹಿ ಆಹಾರಗಳನ್ನು ನಾವು ಸೇವನೆ ಮಾಡುವ ಮೂಲಕವೂ ಶ್ವಾಸಕೋಶವನ್ನು ಡಿಟಾಕ್ಸ್‌ ಮಾಡಬಹುದು. ಕಶ್ಮಲಗಳನ್ನು ಹೊರಹೋಗುವಂತೆ ಮಾಡಬಹುದು. ಬನ್ನಿ, ಯಾವೆಲ್ಲ ಆಹಾರಗಳು ಶ್ವಾಸಕೋಶದ ಡಿಟಾಕ್ಸ್‌ಗೆ ಒಳ್ಳೆಯದು (Health Tips for Lungs) ಎಂಬುದನ್ನು ನೋಡೋಣ.

sprouts

ಕೋಸುಗಳು

ಪ್ರಕೃತಿಯ ಅಚ್ಚರಿ ನೋಡಿ. ಇಲ್ಲಿ ನಮ್ಮ ದೇಹದ ಅಂಗವನ್ನೇ ಹೋಲುವ ತರಕಾರಿಗಳೂ ಸಿಗುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಶ್ವಾಸಕೋಶದ ರಚನೆಗೆ ತಾಳೆಯಾಗುವ ತರಕಾರಿಗಳು ಯಾವುದೆಂದು ನಿಮಗೆ ಅರ್ಥವಾಗಬಹುದು. ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು ಇತ್ಯಾದಿ ಕೋಸುಗಳು ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು. ಇವು ಶ್ವಾಸಕೋಶದ ಮಲಿನತೆಯನ್ನು ಹೊರಹಾಕುವಲ್ಲಿ (Health Tips for Lungs) ನೆರವಾಗುತ್ತವೆ.

ginger

ಶುಂಠಿ

ಶುಂಠಿಯಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿವೆ. ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ರಾಮ ಬಾಣವಾಗಿರುವ ಶುಂಠಿ, ಶ್ವಾಸಕೋಶವನ್ನು ಕಫಮುಕ್ತವನ್ನಾಗಿಸಿ ಸ್ವಚ್ಛಗೊಳಿಸುವಲ್ಲಿ ನೆರವಾಗುತ್ತದೆ. ಅಸ್ತಮಾ, ಬ್ರೋಂಕೈಟಿಸ್‌ ಹಾಗೂ ಶ್ವಾಸಕೋಶದಲ್ಲಿ ರಕ್ತ ಸಂಚಾರಕ್ಕೂ ಇದು ನೆರವಾಗುತ್ತದೆ.

Tumeric Rhizome with Green Leaf and Turmeric Powder

ಅರಿಶಿನ

ಅರಿಶಿನದಲ್ಲಿರುವ ಕರ್‌ಕ್ಯುಮಿನ್‌ ಎಂಬ ಅಂಶದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ, ಆಂಟಿ ಇನ್‌ಫ್ಲಮೇಟರಿ ಗುಣಗಳನ್ನೂ ಹೊಂದಿರುವುದರಿಂದ ಶವಾಸಕೋಶದ ಅಂಗಾಂಶಗಳ ಮರುರಚನೆಗೆ ಹಾಗೂ ಕಶ್ಮಲಗಳನ್ನು ಹೊರಕಳಿಸಲು ಸಹಾಯ ಮಾಡುತ್ತದೆ.

reen Tea Benefits Of Drinking Green Tea

ಗ್ರೀನ್‌ ಟೀ

ಗ್ರೀನ್‌ಟೀಯಲ್ಲಿನ ಕ್ಯಾಟ್‌ಚಿನ್‌ ಎಂಬ ಅಂಟಿ ಆಕ್ಸಿಡೆಂಟ್‌, ಶ್ವಾಸಕೋಶದಲ್ಲಿರುವ ಉರಿಯೂತದಂತಹ ಲಕ್ಷಣಗಳನ್ನು ಕಡಿಮೆ ಮಾಡಿ ಸರಾಗವಾಗಿ ಉಸಿರಾಟವಾಗುವಂತೆ ನೋಡಿಕೊಳ್ಳುತ್ತದೆ.

Fruits and Berries Foods Consumed By Lord Rama During His 14 Year Exile

ಬೆರ್ರಿಗಳು

ಬ್ಲೂಬೆರ್ರಿ, ರಸ್‌ಬೆರ್ರಿ, ಸ್ಟ್ರಾಬೆರ್ರಿ ಮತ್ತಿತರ ಬೆರ್ರಿ ಜಾತಿಯ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಶ್ವಾಸಕೋಶ ಅಂಗಾಶಗಳನ್ನು ರಕ್ಷಿಸುವುದಲ್ಲದೆ, ಶ್ವಾಸಕೋಶದ ಡಿಟಾಕ್ಸ್‌ಗೆ ನೆರವಾಗುತ್ತವೆ.

Citrus fruits Foods To Avoid Eating With Tea

ಸಿಟ್ರಸ್‌ ಹಣ್ಣುಗಳು

ಕಿತ್ತಳೆ, ನಿಂಬೆ, ಮೂಸಂಬಿ ಸೇರಿದಂತೆ ವಿಟಮಿನ್‌ ಸಿ ಹೇರಳವಾಗಿರುವ ಸಿಟ್ರಸ್‌ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ ಸಮೃದ್ಧವಾಗಿರುತ್ತವೆ. ಇವು ಶ್ವಾಸಕೋಶ ಸಂಬಂಧೀ ಕಾಯಿಲೆಗಳಿಗೆ ತುತ್ತಾಗದಂತೆ ರಕ್ಷಾಕವಚದಂತಹ ಕೆಲಸವನ್ನು ಮಾಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ.

Pomegranate Foods That Slow Down Ageing

ದಾಳಿಂಬೆ

ದಾಳಿಂಬೆಯಲ್ಲಿ ಪುನಿಕ್ಯಾಲಜಿನ್‌ ಎಂಬ ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್‌ ಇದ್ದು, ಇದು ಶ್ವಾಸಕೋಶದ ಅಂಗಾಂಶಗಳಿಗೆ ಹಾನಿಯಾಗುವುದನ್ನು ತಪ್ಪಿಸುತ್ತದೆ.

Lettuce

ಸೊಪ್ಪು

ಸೊಪ್ಪುಗಳಾದ, ಪಾಲಕ್‌, ಬಸಳೆ ಇತ್ಯಾದಿಗಳಲ್ಲಿ ಕ್ಲೋರೋಫಿಲ್‌ ಇರುವುದರಿಂದ ಇವು ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ನೆರವಾಗುತ್ತವೆ. ಶ್ವಾಸಕೋಶದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತವೆ.

Garlic cloves

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಆಲಿಸಿನ್‌ ಎಂಬ ಅಂಶವಿದ್ದು ಇದರಲ್ಲಿ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇವು ಶ್ವಾಸಕೋಶದ ಕಶ್ಮಲಗಳನ್ನು ಹೊರಕ್ಕೆ ಕಳಿಸಿ ಸ್ವಚ್ಛ ಮಾಡುವ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶ್ವಾಸಕೋಶಕ್ಕೆ ಇನ್ಫೆಕ್ಷನ್‌ ಆಗದಂತೆ ತಡೆಯುವಲ್ಲಿ ಇವು ರಕ್ಷಾಕವಚದಂತೆ ನೀರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

Dry seeds

ಬೀಜಗಳು

ಬಾದಾಮಿ, ವಾಲ್ನಟ್‌, ಅಗಸೆಬೀಜ ಸೇರಿದಂತೆ ಬೀಜಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹಾಘೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಶ್ವಾಸಕೋಶವನ್ನು ಡಿಟಾಕ್ಸ್‌ ಮಾಡುವಲ್ಲಿ ನೆರವಾಗುತ್ತವೆ. ಶ್ವಾಸಕೋಶದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ಇದನ್ನೂ ಓದಿ: Health Tips For Kidney: ಕಿಡ್ನಿಯ ಆರೋಗ್ಯಕ್ಕೆ ಯಾವೆಲ್ಲ ಆಹಾರಗಳು ಒಳ್ಳೆಯದು?

Continue Reading

ಆರೋಗ್ಯ

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

ದೇಹದ ಪಚನಕ್ರಿಯೆಯನ್ನು ಚುರುಕಾಗಿಸಲು (health tips for digestion) ಯಾವಾಗಲೂ ಸಮೃದ್ಧ ಆಹಾರಗಳಲ್ಲೇ ಹೆಚ್ಚು ತಾಕತ್ತಿದೆ. ಆದರೂ, ಕೆಲವೊಮ್ಮೆ ನಮ್ಮ ಮನೋಸಾಮರ್ಥ್ಯವನ್ನು ಮೀರಿ ನಾವು ತಿಂದು ಬಿಡುತ್ತೇವೆ. ಆಗೇನು ಮಾಡಬೇಕು?

VISTARANEWS.COM


on

slim woman good health digestion
Koo

ಕೆಲವೊಮ್ಮೆ ಯಾವುದೋ ಮದುವೆಯಲ್ಲೋ, ಹಬ್ಬದೂಟದ ಸಂದರ್ಭವೋ, ಅಥವಾ ಗೆಳೆಯರ ಜೊತೆಗೆ ರೆಸ್ಟೋರೆಂಟಿಗೆ ಹೋಗಿಯೋ ಅಗತ್ಯಕ್ಕಿಂತ ಹೆಚ್ಚೇ ಊಟ ಮಾಡಿ ಬಂದುಬಿಡುತ್ತೇವೆ. ಊಟ ಮಾಡುವ ಸಂದರ್ಭ ಮಾತುಕತೆಯಲ್ಲೋ, ಅಥವಾ ಊಟ ಬಹಳ ರುಚಿಯಾಗಿದೆಯೆಂದೋ, ತನ್ನ ಫೇವರಿಟ್‌ ಅಡುಗೆ ಬಹಳ ದಿನಗಳ ನಂತರ ಸಿಕ್ಕಿದೆಯೆಂದೋ ಹೊಟ್ಟೆ ಬಿರಿಯ ತಿಂದುಬಿಡುತ್ತೇವೆ. ಊಟ ಕುತ್ತಿಗೆವರೆಗೆ ಬಂದಿದೆ ಅನಿಸಿದರೂ, ಕೊನೆಯಲ್ಲಿ ಸಿಹಿತಿನಿಸನ್ನೋ, ಐಸ್‌ಕ್ರೀಮನ್ನೋ ಹೊಟ್ಟೆಗಿಳಿಸಿ ತೇಗುತ್ತೇವೆ. ಎಲ್ಲ ಮುಗಿದ ಮೇಲೆ ಹೊಟ್ಟೆ ಮೇಲೆ ಕೈಯಾಡಿಸುವಾಗಲೇ ಇಹಲೋಕಕ್ಕೆ ಮರಳಿ, ಅಗತ್ಯಕ್ಕಿಂತ ಹೆಚ್ಚೇ ತಿಂದೆ ಎಂಬ ಅನುಭವವಾಗುವುದು. ಕೆಲವೊಮ್ಮೆ ಇಂಥ ಊಟ ಮಾಡುವ ಸಂದರ್ಭ ಮನಸ್ಸಿಗೆ ಖುಷಿಯಾದರೂ, ಜ್ಞಾನೋದಯವಾಗುವ ಹೊತ್ತಿಗೆ ಹೊಟ್ಟೆ ಉಬ್ಬರಿಸಿದಂಥ ಭಾವ. ಇನ್ನೇನು ಮಾಡುವುದು, ಹೊಟ್ಟೆ ಹೊತ್ತುಕೊಂಡು ನಾಲ್ಕು ಹೆಜ್ಜೆ ನಡೆಯಲಾರದಷ್ಟು ಹೊಟ್ಟೆ ಭಾರ. ಅದಕ್ಕಾಗಿಯೇ ಯಾವಾಗಲೂ ನಾವು ತಿನ್ನುತ್ತಿರುವ ಆಹಾರ ಪೋಷಕಾಂಶಗಳಿಂದ ಸಮೃದ್ಧವಾಗಿದೆಯೇ ಎಂದು ಯೋಚಿಸಬೇಕು. ದೇಹದ ಪಚನಕ್ರಿಯೆಯನ್ನು ಚುರುಕಾಗಿಸಲು ಯಾವಾಗಲೂ ಸಮೃದ್ಧ ಆಹಾರಗಳಲ್ಲೇ ಹೆಚ್ಚು ತಾಕತ್ತಿದೆ. ಆದರೂ, ಕೆಲವೊಮ್ಮೆ ನಮ್ಮ ಮನೋಸಾಮರ್ಥ್ಯವನ್ನು ಮೀರಿ ನಾವು ತಿಂದು ಬಿಡುತ್ತೇವೆ. ಅಂಥ ಸಂದರ್ಭ ನಮ್ಮ ಪಚನಕ್ರಿಯೆಯನ್ನು ಚುರುಕಾಗಿಸಲು, ಕೊಂಚ ಬೇಗನೆ ಹೊಟ್ಟೆ ಹಗುರಾಗಿಸಲು ಯಾವ ಉತ್ತೇಜಕ ಆಹಾರಗಳನ್ನು ಕೊನೆಯಲ್ಲಿ ಊಟದ ನಂತರ ಸೇವಿಸಬಹುದು (health tips for digestion) ಎಂಬುದನ್ನು ನೋಡೋಣ.

ಸೋಂಪು ಹಾಗೂ ಜೀರಿಗೆ

ಸೋಂಪು ಹಾಗೂ ಜೀರಿಗೆಯಲ್ಲಿರುವ ಅಂಶಗಳು ನಮ್ಮ ದೇಹದಲ್ಲಿ ಜೀರ್ಣಕಾರಕ ಕಿಣ್ವಗಳನ್ನು ಪ್ರಚೋದಿಸುತ್ತವೆ. ಜೀರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ಕೊಬ್ಬು ಕರಗಿಸುವಲ್ಲಿಯೂ ನೆರವಾಗುತ್ತದೆ. ತೂಕ ಇಳಿಸುವ ಮಂದಿಗೂ ಇದು ತೂಕ ಇಳಿಕೆಗೆ ನೆರವಾಗುತ್ತದೆ. ಆರೋಗ್ಯಕರ ಆಹಾರದ ಸೇವನೆಯೊಂದಿಗೆ ಇವುಗಳ ಸೇವನೆಯು ಈ ಎಲ್ಲ ಕ್ರಿಯೆಗಳನ್ನು ಇನ್ನಷ್ಟು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ.

Raw Brown Organic Ajwain Seed Benefits Of Omkalu Ajwain

ಅಜ್ವೈನ್‌ (ಓಂಕಾಳು)

ಓಂಕಾಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಸಾಕಷ್ಟು ಜೀರ್ಣ ಸಂಬಂಧೀ ಸಮಸ್ಯೆಗಳು ಪರಿಹಾರವಾಗುತ್ತವೆ. ತಿಂದಿದ್ದು ಅತಿಯಾದಾಗ ಅಥವಾ ರಾತ್ರಿ ಇದರ ನೀರನ್ನು ಕೊನೆಯಲ್ಲಿ ಕುಡಿದು ಮಲಗುವುದರಿಂದ ಸಮರ್ಪಕವಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ಅಜೀರ್ಣವಾದಾಗ, ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯದಾದಾಗ ಇದರ ನೀರನ್ನು ಕುಡಿಯುವುದರಿಂದ ಜೀರ್ಣಕಾರಕ ಕಿಣ್ವಗಳು ಬಿಡುಗಡೆಯಾಗಿ ಬೇಗನೆ ಜೀರ್ಣವಾಗಲು ನೆರವಾಗುತ್ತವೆ.

Do not stop using probiotics like yogurt buttermilk They keep the digestive system healthy Gastric Problem

ಮಜ್ಜಿಗೆ

ಮಜ್ಜಿಗೆ ನೀರೂ ಕೂಡ ಜೀರ್ಣಕ್ಕೆ ಒಳ್ಳೆಯದು. ಅತಿಯಾಗಿ ಉಂಡಾಗ, ಮದುವೆಯೂಟದಂತಹ ಹಬ್ಬದಡುಗೆ ಉಂಡಾಗ ಒಂದು ಮಜ್ಜಿಗೆ ನೀರು ಕುಡಿದು ಅಂತ್ಯಗೊಳಿಸಿದರೆ, ಜೀರ್ಣಕ್ರಿಯೆ ಚುರುಕಾಗುತ್ತದೆ.

Berries

ಬೆರ್ರಿ ಹಣ್ಣುಗಳು

ಆಂಟಿ ಆಕ್ಸಿಡೆಂಟ್‌ಗಳು ಹಾಗೂ ನಾರಿನಂಶ ಹೇರಳವಾಗಿರುವ ಬೆರ್ರಿ ಹಣ್ಣುಗಳು ಹುಳಿಸಿಹಿಯಾದ ಹಣ್ಣುಗಳು. ಇವುಗಳ ಸೇವನೆ ಜೀರ್ಣಕ್ರಿಯೆಯನ್ನು ಚುರುಕಾಗಿಸುತ್ತದೆ. ಊಟವಾದ ನಂತರ ಸ್ವಲ್ಪ ಹೊತ್ತಿನ ಮೇಲೆ ಇವುಗಳನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಗೆ ಪ್ರಚೋದನೆ ನೀಡಬಹುದು.

reen Tea Benefits Of Drinking Green Tea

ಗ್ರೀನ್‌ ಟೀ

ಗ್ರೀನ್‌ ಟೀಯಲ್ಲಿರುವ ಕೆಟಚಿನ್‌ ಎಂಬ ಅಂಶವು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಗುಣವನ್ನು ಹೊಂದಿದೆ. ಅಷ್ಟೇ ಅಲ್ಲ, ಇದಕ್ಕೆ ಕೊಬ್ಬು ಕರಗಿಸುವ ಗುಣವೂ ಇದೆ. ಹಾಗಾಗಿಯೇ ಗ್ರೀನ್‌ಟೀ ತೂಕ ಇಳಿಸುವವರ ಅತ್ಯಂತ ಪ್ರಿಯವಾದ ಪೇಯ. ಊಟದ ಸ್ವಲ್ಪ ಹೊತ್ತಿನ ನಂತರ ಗ್ರೀನ್‌ಟೀ ಕುಡಿಯುವ ಮೂಲಕ ಜೀರ್ಣಕ್ರಿಯೆಗೆ ಚುರುಕು ಮುಟ್ಟಿಸಬಹುದು.

Lettuce

ಸೊಪ್ಪು

ನಾರಿನಂಶ ಹೆಚ್ಚಿರುವ, ಪೋಷಕಾಂಶಗಳಿಂದ ಸಂಪದ್ಭರಿತವಾಗಿರುವ ಪಾಲಕ್‌, ಬಸಳೆ, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಸೇರಿದಂತೆ ಬಹುತೇಕ ಎಲ್ಲ ಸೊಪ್ಪುಗಳೂ ಕೂಡಾ, ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವಂಥವುಗಳು. ಹೆಚ್ಚು ಉಂಡ ಸಂದರ್ಭಗಳಲ್ಲಿ, ನಂತರದ ಊಟವನ್ನು ಮಿತವಾಗಿ ಇಟ್ಟುಕೊಳ್ಳುವ ಮೂಲಕ ಅಥವಾ ಸೊಪ್ಪಿನ ಸೂಪ್‌ ಅಥವಾ ಸೊಪ್ಪಿನ ಆಹಾರ ಪದಾರ್ಥಗಳ ಸೇವನೆಯ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗವಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: Homemade Protein Smoothie: ಬೇಸಿಗೆಗೆ ಬೇಕು ತಂಪಾದ ಪ್ರೊಟೀನ್‌ ಸ್ಮೂದಿಗಳು

Continue Reading
Advertisement
Blast in Bangalore Siddaramaiah
ಬೆಂಗಳೂರು15 seconds ago

Blast in Bengaluru : ಬ್ಯಾಗ್‌ನಲ್ಲಿ ತಂದಿಟ್ಟ ಸ್ಫೋಟಕ ಬ್ಲಾಸ್ಟ್‌; ಸಣ್ಣದಾದರೂ ಡೇಂಜರಸ್‌ ಎಂದ ಸಿಎಂ ಸಿದ್ದರಾಮಯ್ಯ

Matrimony Couple
ದೇಶ15 mins ago

Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!

supreme
ದೇಶ31 mins ago

Gyanvapi Case: ಜ್ಞಾನವಾಪಿ ಮಸೀದಿ ವಿವಾದ: ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ವಿಚಾರಣೆಗೆ ಸುಪ್ರೀಂ ಸಮ್ಮತಿ

Blast-in-Bangalore-Rameshwaram-Cafe-cc-tv
ಬೆಂಗಳೂರು36 mins ago

Blast in Bengaluru : ರಾಮೇಶ್ವರಂ ಕೆಫೆಯಲ್ಲಿ ನಿಜಕ್ಕೂ ಆಗಿದ್ದೇನು?; ಸ್ಫೋಟದ EXCLUSIVE ಸಿಸಿ ಟಿವಿ ಫೂಟೇಜ್‌ ಇದು

Kalaburgi has recorded the highest maximum temperature
ಮಳೆ39 mins ago

Karnataka Weather : ವಾರಾಂತ್ಯದಲ್ಲಿ ಇಲ್ಲೆಲ್ಲ ತಾಪಮಾನ ದುಪ್ಪಟ್ಟು

nathan lyon
ಕ್ರೀಡೆ43 mins ago

Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

500 notes
ಮನಿ-ಗೈಡ್44 mins ago

Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

nbcc
ಉದ್ಯೋಗ50 mins ago

Job Alert: ಎನ್‌ಬಿಸಿಸಿಯಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Blast in Bengaluru Time bomb planted in rameshwaram cafe Important evidence found
ಬೆಂಗಳೂರು56 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

Tarang Mela 1
ಬೆಂಗಳೂರು1 hour ago

TARANG Mela: ಬೆಂಗಳೂರಿನಲ್ಲಿ ತರಂಗ್ ಮೇಳಕ್ಕೆ ಚಾಲನೆ; ಕೃಷಿ ಉತ್ಪನ್ನ, ಕರಕುಶಲ ವಸ್ತು ಪ್ರದರ್ಶನ, ಮಾರಾಟ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Blast in Bengaluru Time bomb planted in rameshwaram cafe Important evidence found
ಬೆಂಗಳೂರು56 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು3 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ14 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ4 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

ಟ್ರೆಂಡಿಂಗ್‌