2nd PUC Result 2024: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗಿನ ತಾಯಿ - ಮಗಳು ಪಾಸ್! - Vistara News

ಕೊಡಗು

2nd PUC Result 2024: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗಿನ ತಾಯಿ – ಮಗಳು ಪಾಸ್!

2nd PUC Result 2024: 25 ವರ್ಷಗಳ‌‌ ಹಿಂದೆ ಹತ್ತನೇ ತರಗತಿಯನ್ನು ಓದಿದ್ದೆ. ಬಳಿಕ ನನಗೆ ಓದಿನ ಬಗ್ಗೆ ಗಮನ ಕೊಡಲು ಆಗಿಲ್ಲ. ಮದುವೆ, ಮನೆ, ಸಂಸಾರ ಹೀಗೆ ಕುಟುಂಬದ ಜವಾಬ್ದಾರಿಯಲ್ಲಿ ಇದ್ದೆ. ಆದರೆ, ನನ್ನ ಮಗಳ ಒತ್ತಾಸೆ ಮೇರೆಗೆ ಓದಿ ಪರೀಕ್ಷೆಯನ್ನು ಬರೆದೆ. ಅದರಲ್ಲಿ ಈಗ ಪಾಸ್‌ ಆಗಿದ್ದು ನನಗೆ ನಿಜಕ್ಕೂ ಸಂತಸ ತಂದಿದೆ. ಅಲ್ಲದೆ, ಇದಕ್ಕೆ ನನ್ನ ಮನೆಯವರ ಪ್ರೋತ್ಸಾಹವೂ ಇದೆ” ಎಂದು ಬೇಬಿರಾಣಿ ಹೇಳಿಕೊಂಡಿದ್ದಾರೆ.

VISTARANEWS.COM


on

2nd PUC Result 2024 Kodagu mother and daughter pass
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಡಿಕೇರಿ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರ ಫಲಿತಾಂಶವನ್ನು (2nd PUC Result) ಬುಧವಾರ ಪ್ರಕಟವಾಗಿದೆ. ಕೊಡಗಿನಲ್ಲಿ ಈ ಬಾರಿ ತಾಯಿ – ಮಗಳು ಗಮನ ಸೆಳೆದಿದ್ದಾರೆ. ಜಿಲ್ಲೆಯ ಚೆಟ್ಟಳ್ಳಿಯ ತಾಯಿ‌-ಮಗಳು ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.

ತಾಯಿ ಬೇಬಿರಾಣಿ ಹಾಗೂ ಮಗಳು ರಿನಿಶಾ ಉತ್ತೀರ್ಣರಾದವರು. ರಿನಿಶಾ ಸೈನ್ಸ್‌ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದು, 600ಕ್ಕೆ 570 ಅಂಕ ಪಡೆದು ಪಾಸ್ ಆಗಿದ್ದಾಳೆ. ತಾಯಿ ಬೇಬಿರಾಣಿ ಕಲಾ ವಿಭಾಗವನ್ನು ಪಡೆದುಕೊಂಡಿದ್ದು, 600ಕ್ಕೆ 388 ಅಂಕ ಪಡೆದು ಪಾಸ್ ಆಗಿದ್ದಾರೆ. ತಾಯಿ – ಮಗಳು ಇಬ್ಬರೂ ಬೇರೆ ಬೇರೆ ಕಾಲೇಜು ಸೇರಿದ್ದರು.

ತಾಯಿಗೆ ಪಿಯುಸಿ ವಿದ್ಯಾಭ್ಯಾಸ ಪೂರೈಸುವಂತೆ ಮಗಳು ರಿನಿಶಾ ಬಹಳ ಒತ್ತಾಯ ಮಾಡಿದ್ದಳಂತೆ ಈ ಕಾರಣಕ್ಕಾಗಿ ತಾಯಿ ಬೇಬಿರಾಣಿ ಈ ವಯಸ್ಸಿನಲ್ಲಿಯೂ ಓದಿ ಪರೀಕ್ಷೆ ಬರೆದು ಸೈ ಎನಿಸಿಕೊಂಡಿದ್ದಾರೆ.

25 ವರ್ಷಗಳ‌‌ ಹಿಂದೆ ಹತ್ತನೇ ತರಗತಿಯನ್ನು ಓದಿದ್ದೆ. ಬಳಿಕ ನನಗೆ ಓದಿನ ಬಗ್ಗೆ ಗಮನ ಕೊಡಲು ಆಗಿಲ್ಲ. ಮದುವೆ, ಮನೆ, ಸಂಸಾರ ಹೀಗೆ ಕುಟುಂಬದ ಜವಾಬ್ದಾರಿಯಲ್ಲಿ ಇದ್ದೆ. ಆದರೆ, ನನ್ನ ಮಗಳ ಒತ್ತಾಸೆ ಮೇರೆಗೆ ಓದಿ ಪರೀಕ್ಷೆಯನ್ನು ಬರೆದೆ. ಅದರಲ್ಲಿ ಈಗ ಪಾಸ್‌ ಆಗಿದ್ದು ನನಗೆ ನಿಜಕ್ಕೂ ಸಂತಸ ತಂದಿದೆ. ಅಲ್ಲದೆ, ಇದಕ್ಕೆ ನನ್ನ ಮನೆಯವರ ಪ್ರೋತ್ಸಾಹವೂ ಇದೆ” ಎಂದು ಬೇಬಿರಾಣಿ ಹೇಳಿಕೊಂಡಿದ್ದಾರೆ.

ಕಲೆ, ವಾಣಿಜ್ಯ, ವಿಜ್ಞಾನದಲ್ಲಿ ಟಾಪರ್ಸ್‌ ಯಾರು? ಯಾವ ಕಾಲೇಜು ಮುಂಚೂಣಿಯಲ್ಲಿ?

ಕಲಾ ವಿಭಾಗ

  1. ಮೇಧಾ ಡಿ 596/600 ಎನ್‌ಎಂಕೆಆರ್‌ವಿ ಕಾಲೇಜು, ಬೆಂಗಳೂರು
  2. ವೇದಾಂತ್‌ ಜ್ಞಾನುಬಾ ನವಿ 596/600 ಎಸ್‌ ಎಸ್‌ ಪಿಯು ಕಾಲೇಜು, ವಿಜಯಪುರ
  3. ಕವಿತಾ ಬಿ ವಿ 596/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು
  4. ರವಿನಾ ಸೋಮಪ್ಪ ಲಮಾಣಿ 595/600 ಕೆಇಬಿ ಕಾಂಪ್‌ ಪಿಯು ಕಾಲೇಜು, ಧಾರವಾಡ
  5. ಪುರೋಹಿತ್‌ ಖುಷಿಬೆನ್‌ 594/600 ವಿವೇಕಾನಂದ ಪಿಯು ಕಾಲೇಜು, ಪುತ್ತೂರು
  6. ಅನುಶ್ರೀ ಬಸವರಾಜ 594/600 ಎಸ್‌ಎಂಎಂ ಪಾಟೀಲ್‌ ಪಿಯು ಕಾಲೇಜು, ಹೂವಿನಹಡಗಲಿ, ಬಳ್ಳಾರಿ
  7. ಶಶಿಧರ್‌ ಡಿ 594/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು
  8. ಚುಕ್ಕಿ ಕೆ ಸಿ 594/600 ಡಿವಿಎಸ್‌ ಐಎನ್‌ಡಿಪಿ ಪಿಯು ಕಾಲೇಜು, ಶಿವಮೊಗ್ಗ
  9. ಸೌಂದರ್ಯ 593/600 ಶರಣ ಬಸವೇಶ್ವರ ಪಿಪು ಕಾಲೇಜು, ಸಿಂಧಗಿ, ವಿಜಯಪುರ
  10. ಎಂ ಪಿ ಬೀರೇಶ್‌ 593/600 ಇಂದು ಇನ್ನೋವೇಟಿವ ಪಿಯು ಕಾಲೇಜು, ಕೊಟ್ಟೂರು
  11. ಸಂಗಮ್‌ ಸಿದ್ದಲಿಂಗಪ್ಪ 593/600 ಶ್ರೀ ಕೆ ಜಿ ಗುಗ್ಗಾರಿ ಪಿಯು ಕಾಲೇಜು, ಸಿಂಧಗಿ
  12. ದೇಶಾಂಶಿ ದಿನೇಶ್‌ ಅಮಿತ 593/600 ಮೌಂಟ್‌ ಕಾರ್ಮೆಲ್‌ ಪಿಯು ಕಾಲೇಜು, ಬೆಂಗಳೂರು
  13. ಬನಶಂಕರಿ ಹೂನಲ್ಲಿ 593/600 ಶ್ರೀ ಕೆ ಜಿ ಗುಗ್ಗಾರಿ ಪಿಯು ಕಾಲೇಜು, ಸಿಂಧಗಿ
  14. ಸಾನ್ಯಾ ಎ ಕರ್ಜಗಿ 592/600 ಸರಕಾರಿ ಪಿಯು ಕಾಲೇಜು, ಕನವಳ್ಳಿ, ಹಾವೇರಿ
  15. ಗಂಗವ್ವ ಸುನಧೋಳಿ 592/600 ಅನ್ನದಾನೇಶ್ವರ ಐಎನ್‌ಡಿಪಿ ಪಿಯು ಕಾಲೇಜು, ಮುನವಳ್ಳಿ, ಸೌದತ್ತಿ
  16. ಪಿಲ್ಲಮನಹಳ್ಳಿ ವಿರೇಶ್‌ 592/600 ಶ್ರೀ ಪಂಚಮಸಾಲಿ ಪಿಯು ಕಾ ಲೇಜು ಇಟಗಿ
  17. ಶ್ರೀಲತಾ ಲಿಂಗರಡ್ಡಿ 592/600 ಬಿ ಜಿ ಬಯ್ಯಕೋಡ್‌ ಕಾಂಪ್‌ ಪಿಯು ಕಾಲೇಜು, ಹೂವಿನಹಿಪ್ಪರಗಿ
  18. ಮಾನಸಾ ಎನ್‌ ವ 592/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ
  19. ಎ ಅನುಷಾ 592/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ
  20. ಸಾವಿತ್ರಿ ಮಲ್ಲಿಕಾರ್ಜುನ 592/600 ಎಸ್‌ ಎಸ್‌ ರಾಯಲಿಂಗೇಶ್ವರ ಪಿಯು ಕಾಲೇಜು, ಕಾಕಮಾರಿ, ಅಥಣಿ
    ಮಲ್ಲಪ್ಪ 592/600 ನಿಸರ್ಗ ಪಿಯು ಕಾಲೇಜು, ಅಫಜಲ್ಪುರ, ಕಲಬುರಗಿ
  21. ಕಾವೇರಿ 592/600 ಶ್ರೀ ಉಮಾ ಮಹೇಶ್ವರಿ ಪಿಯು ಕಾಲೇಜು, ಲಿಂಗಸುಗೂರು, ರಾಯಚೂರು
  22. ವಿಜಯಲಕ್ಷ್ಮಿ ಕೊಟ್ರಪ್ಪ ಗುಲಗುಂಜಿ 592/600 ಎಸ್‌ಕೆಇಟಿ ಐಎನ್‌ಡಿಪಿ ಪಿಯು ಕಾಲೇಜು, ಸೌದತ್ತಿ

ಕಾಮರ್ಸ್‌ ವಿಭಾಗ

  1. ಜ್ಞಾನವಿ ಎಂ 597/600 ವಿದ್ಯಾನಿಧಿ ಐಎನ್‌ಡಿಪಿ ಪಿಯು ಕಾಲೇಜು, ಕುವೆಂಪು ನಗರ, ತುಮಕೂರು
  2. ಪವನ್‌ ಎಂ ಎಸ್‌ 596/600 ಕುಮುದಾವತಿ ಎಸ್‌ಸಿಸಿಎಂ ಪಿಯು ಕಾಲೇಜು, ಶಿಕಾರಿಪುರ, ಶಿವಮೊಗ್ಗ
  3. ಹರ್ಷಿತ್‌ ಎಸ್‌ ಎಚ್‌ 596/600 ಪೂರ್ಣಪ್ರಜ್ಞ ಪಿಯು ಕಾಲೇಜು ಉಡುಪಿ
  4. ಬಿ ತುಳಸಿ ಪೈ 596/600 ಕೆನರಾ ಪಿಯು ಕಾಲೇಜು, ಮಂಗಳೂರು
  5. ತೇಜಸ್ವಿನಿ ಕೆ ಕಾಳೆ 596/600 ಎಂಇಎಸ್‌ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
  6. ವೈಷ್ಣವಿ ಪಿ ಎಂ 595/600 ಎಸ್‌ಬಿ ಮಹಾವೀರ ಜೈನ್‌ ಪಿಯು ಕಾಲೇಜು, ವಿವಿಪುರಂ, ಬೆಂಗಳೂರು
  7. ಪೂರ್ವಿ ಸದಾನಂದ 595/600 ನ್ಯೂ ಹೊರಿಜಾನ್‌ ಪಿಯು ಕಾಲೇಜು, ಕಸ್ತೂರಿ ನಗರ, ಬೆಂಗಳೂರು
  8. ಬಿ ಅಶ್ರಿತಾ 595/600 ಎಸ್‌ಬಿಜಿಎನ್‌ಎಸ್‌ ರೂರಲ್‌ ಕಾಂಪ್‌ ಪಿಯು ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ
  9. ಅನುಪಮಾ ಎಂ 595/600 ವಿದ್ಯಾ ಮಂದಿರ ಐಎನ್‌ಡಿಪಿ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
  10. ಧೀರಜ್‌ ಎಸ್‌ 595/600 ಪಿಇಎಸ್‌ ಪಿಯು ಕಾಲೇಜು, ಬನಶಂಕರಿ, ಬೆಂಗಳೂರು
  11. ಶ್ರೇಯಾ ಸಿ ಬಿ 595/600 ಶೇಷಾದ್ರಿಪುರಂ ಕಾಂಪ್‌ ಪಿಯು ಕಾಲೇಜು, ಶೇಸಾದ್ರಿಪುರಂ, ಬೆಂಗಳೂರು
  12. ಬಿ ಜಯಶ್ರೀ 595/600 ವಿದ್ಯಾ ಮಂದಿರ ಐಎನ್‌ಡಿಪಿ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
  13. ಮುಕ್ತಾ ಜಯಕಾಂತ್‌ 595/600 ಜ್ಞಾನಜ್ಯೋತಿ ಐಎನ್‌ಡಿಪಿ ಪಿಯು ಕಾಲೇಜು, ಯಲಹಂಕ, ಬೆಂಗಳೂರು
  14. ಸಾನ್ವಿ ರಾವ್‌ 595/600 ಕ್ರಿಯೇಟಿವ್‌ ಪಿಯು ಕಾಲೇಜು, ಹಿರ್ಗಾನ, ಉಡುಪಿ
  15. ಧ್ಯಾನ್‌ ರಾಮಚಂದ್ರ ಭಟ್‌ 595/600 ಸರಕಾರಿ ಎಚ್‌ ಬೆಣ್ಣೆ ಪಿಯು ಕಾಲೇಜು, ನೆಲ್ಲಿಕೇರಿ, ಕುಮಟಾ
  16. ಸಮಿತ್‌ ವಿ 595/600 ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ಅಳಿಕೆ, ದಕ್ಷಿಣ ಕನ್ನಡ
  17. ದೀಪಶ್ರೀ ಎ ಕೆ 594/600 ವಿದ್ಯಾನಿಧಿ ಐಎನ್‌ಡಿಪಿ ಪಿಯು ಕಾಲೇಜು, ಕುವೆಂಪು ನಗರ, ತುಮಕೂರು
  18. ಧನುಶ್ರೀ 594/600 ಬಿ ಜಿ ಎಸ್‌ ಪಿಯು ಕಾಲೇಜು, ಬೆಂಗಳೂರು
  19. ಸ್ವಾತಿ ಎಸ್‌ ಭಟ್‌ 594/600 ಸದ್ವಿದ್ಯಾ ಕಾಂಪ್‌ ಪಿಯು ಕಾಲೇಜು, ಮೈಸೂರು
  20. ನಿಕೇತನ ವಿ ಆರ್‌ 594/600 ಎಸ್‌ ಡಿ ಸಿ ಐಎನ್‌ಡಿಪಿ ಪಿಯು ಕಾಲೇಜು, ಬಂಗಾರಪೇಟೆ, ಕೋಲಾರ
  21. ಚೈತ್ರಾ ಕಾಮತ್‌, 594/600 ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
  22. ತರುಣ್‌ ಕುಮಾರ್‌ ಪಾಟೀಲ್‌ 594/600 ಆಳ್ವಾಸ್‌ ಪಿಯು ಕಾಲೇಜು, ಮೂಡುಬಿದರೆ, ದಕ್ಷಿಣ ಕನ್ನಡ
  23. ದಿವ್ಯಾ ಜಿ ಕೆ 594/600 ಬನಜವಾಡ, ಆರ್‌ಇಎಸ್‌ ಪಿಯು ಕಾಲೇಜು, ಅಥಣಿ, ಬೆಳಗಾವಿ
  24. ಹಿಮಾನಿ ಪಿ ಪ್ರಭು 594/600 ಸಿಂಧಿ ಪಿಯು ಕಾಲೇಜು, ಚೊಕ್ಕನಹಳ್ಳಿ, ಬೆಂಗಳೂರು
  25. ಸಮೃದ್ಧಿ 594/600 ಕೆನರಾ ಪಿಯು ಕಾಲೇಜು, ಮಂಗಳೂರು
  26. ಪ್ರಜ್ವಲ್‌ ಕೆ ಎನ್‌ 594/600 ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ಅಳಿಕೆ, ದಕ್ಷಿಣ ಕನ್ನಡ
  27. ಕೆ ಎಸ್‌ ಗೀರ್ವಾಣಿ 594/600 ಟ್ರಾನ್ಸೆಂಡ್‌ ಪಿಯು ಕಾಲೇಜು, ಜಯನಗರ, ಬೆಂಗಳೂರು
  28. ಕುಲ್ಸುಂ ಫಲಕ್‌ 594/600 ಲೊಯೊಲಾ ಕಾಂಪ್‌ ಪಿಯು ಕಾಲೇಜು, ಬೆಂಗಳೂರು
  29. ಅಭಿನವ್‌ ರಾವ್‌ 594/600 ಎಸ್‌ಬಿ ಮಹಾವೀರ ಜೈನ್‌ ಪಿಯು ಕಾಲೇಜು, ವಿವಿಪುರಂ, ಬೆಂಗಳೂರು
  30. ಮಾನ್ಯ 594/600 ಎಂಎ ಪಿಎಸ್‌ ಪಿಯು ಕಾಲೇಜು, ಮಂಗಳೂರು

ಇದನ್ನೂ ಓದಿ: 2nd PUC Result: ದ್ವಿತೀಯ ಪಿಯು ಉತ್ತರ ಪತ್ರಿಕೆ ಡೌನ್ಲೋಡ್, ಮರು ಮೌಲ್ಯಮಾಪನ, ಮರು ಎಣಿಕೆ ದಿನಾಂಕ ಫಿಕ್ಸ್;‌ ಈಗಲೇ ಅರ್ಜಿ ಸಲ್ಲಿಸಿ!

ವಿಜ್ಞಾನ ವಿಭಾಗ

  1. ಎ ವಿದ್ಯಾಲಕ್ಷ್ಮಿ 598/600 ವಿದ್ಯಾನಿಕೇತನ ಎಸ್‌ಸಿ ಪಿಯು ಕಾಲೇಜು, ಹುಬ್ಬಳ್ಳಿ ಧಾರವಾಡ
  2. ಕೆ ಎಚ್‌ ಉರ್ವಿಶ್‌ ಪ್ರಶಾಂತ್‌ 597/600 ಆದಿ ಚುಂಚನಗಿರಿ ಪಿಯು ಕಾಲೇಜು, ಮೈಸೂರು
  3. ವೈಭವಿ ಆಚಾರ್ಯ 597/600 ವಿದ್ಯೋದಯ ಪಿಯು ಕಾಲೇಜು, ಉಡುಪಿ
  4. ಜಾನ್ವಿ ತುಮಕೂರು ಗುರುರಾಜ್‌ 597/600 ಆರ್‌ ವಿ ಪಿ ಬಿ ಪಿಯು ಕಾಲೇಜು, ಮೈಸೂರು
  5. ಗುಣಸಾಗರ್‌ ಡಿ 597/600 ಎಕ್ಸಲೆಂಟ್‌ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ
  6. ಫಾತಿಮಾ ಇಮ್ರಾನ್‌ 596/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
  7. ವಿ ಎಸ್‌ ಶ್ರೀಮನ್‌ ನಾರಾಯಣ್‌ 596/600 ಎಂ ಇ ಎಸ್‌ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
  8. ಗೌರಿ ಸಂಜೀವ್‌ ಸೂರ್ಯವಂಶಿ 596/600 ಬನಜವಾಡ ಆರ್‌ಇಎಸ್‌ ಪಿಯು ಕಾಲೇಜು, ಅಥಣಿ ಬೆಳಗಾವಿ
  9. ಅಭಿಜಯ್‌ ಎಂ ಎಸ್‌ 596/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
  10. ಹರಿಪ್ರಿಯಾ ಆರ್‌ 596/600 ಎಸ್‌ ಬಿ ಜಿ ಎನ್‌ ಎಸ್‌ ರೂರಲ್‌ ಕಾಂಪ್‌ ಪಿಯು ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ
  11. ಭಾರ್ಗವಿ ಎಂ ಜೆ 595/600 ಎಕ್ಸಲೆಂಟ್‌ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ
  12. ನಿಖಿತಾ ವೈ 595/600 ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
  13. ನೂತನ ಆರ್‌ ಗೌಡ 595/600 ಆಳ್ವಾಸ್‌ ಪಿಯು ಕಾಲೇಜು, ಮೂಡುಬಿದರೆ
  14. ಸಮ್ಯಕ್‌ ಆರ್‌ ಪ್ರಭು 595/600 ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
  15. ಅಮೋದ್‌ ನಾಯ್ಕ್‌ 595/600 ಅಶೋಕ ಕಾಂಪ್‌ ಪಿಯು ಕಾಲೇಜು, ಕಮ್ಮಗೊಂಡನಹಳ್ಳಿ, ಬೆಂಗಳೂರು
  16. ಸಾತ್ವಿಕ್‌ ಕೆ ವೈ 595/600 ಪಿಯುಎಂ ಪಿಯು ಕಾಲೇಜು, ಶಿವಮೊಗ್ಗ
  17. ಜಿ ಶಾರದಾ 595/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
  18. ಪ್ರಭಾವ್‌ ಪಿ 595/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು
  19. ಪ್ರಿಯಾ ಹಾಸಿನಿ ಎಂ ಎಸ್‌ ಎಸ್‌ 595/600 ನ್ಯೂ ಹಾರಿಜಾನ್‌ ಪಿಯು ಕಾಲೇಜು, ಕಸ್ತೂರಿನಗರ, ಬೆಂಗಳೂರು
  20. ಅಪೂರ್ವ ಎನ್‌ 595/600 ಪಿಇಎಸ್‌ ಪಿಯು ಕಾಲೇಜು, ಬನಸಂಕರಿ, ಬೆಂಗಳೂರು
  21. ಪ್ರೀತಂ ರಾವಲಪ್ಪ 595/600 ಶೇಷಾದ್ರಿಪುರಂ ಕಾಂಪ್‌ ಪಿಯು ಕಾಲೇಜು, ಬೆಂಗಳೂರು
  22. ಚಿನ್ಮಯ ಪ್ರವೀಣ್‌ 595/600 ವೇದಾಂತ ಪಿಯು ಕಾಲೇಜು, ವಸಂತಪುರ, ಬೆಂಗಳೂರು
  23. ಸಮರ್ಥ್‌ ಎಸ್‌ ಬಿ 595/600 ಎಸ್‌ ಬಸವೇಶ್ವರ ಆರ್‌ಇಎಸ್‌ಐ ಪಿಯು ಕಾಲೇಜು, ಕಲಬುರಗಿ
  24. ಅನಂತ್‌ ರಾಘವ್‌ ಪೈ 595/600 ದೀಕ್ಷಾ ಸಿಎಫ್‌ಎಲ್‌ ಪಿಯು ಕಾಲೇಜು, ತಲಘಟ್ಟಪುರ, ಬೆಂಗಳೂರು
  25. ಪ್ರವೀಣ್‌ ಸಿದ್ದಪ್ಪ 595/600 ಶಿವರಾಜ್‌ ಪಾಟೀಲ್‌ ಪಿಯು ಕಾಲೇಜು, ಕಲಬುರಗಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕೊಡಗು

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Kodagu News : ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.

VISTARANEWS.COM


on

By

Kodava Family Hockey Tournament Website Launched
Koo

ಕೊಡಗು: 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಮಡಿಕೇರಿ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ (Kodagu News ) ನಡೆಯಿತು. ಪ್ರತಿ ವರ್ಷ ಕೂಡ ಒಂದೊಂದು ಕುಟುಂಬಗಳು ಪಂದ್ಯಾಟ ಆಯೋಜಿಸುವ ಜವಬ್ದಾರಿ ಹೊತ್ತುಕೊಳ್ಳುತ್ತೆ. ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.

ಮೊದಲಿಗೆ ದೀಪ ಬೆಳಗುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ‌ 2025 ನೇ ಮುದಂಡ ಕ್ರಿಕೇಟ್ ಪಂದ್ಯಾವಳಿಯ ವೆಬ್ ಸೈಟ್ ಲಾಂಚ್ ಮಾಡಿದ್ದು ಎಲ್ಲಾ ರೀತಿಯ ಮಾಹಿತಿಯನ್ನ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಹಾಕಿ ಪಂದ್ಯಾವಳಿಯ ಗೌರವ ಅಧ್ಯಕ್ಷರಾದ ಎಂಬಿ ದೇವಯ್ಯ ಮಾತನಾಡಿ ಮುದ್ದಂಡ ಕುಟುಂಬದ ಹಿರಿಯರು ಹಾಕಿ ಅಕಾಡೆಮಿ ಸಹಕಾರದಲ್ಲಿ ಈ ಬಾರಿ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದೇವೆ. ಕೆಲಸಗಳನ್ನು ಆರಂಭಿಸಿದ್ದು, ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು. 25ನೇ ವರ್ಷದ ಕಾರ್ಯಕ್ರಮ ಆಯೋಜನೆಗೆ ನಮಗೆ ಸಿಕ್ಕಿರೋದು ಬಹಳ ಸಂತೋಷವಿದ್ದು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ಗುರಿ ಹೊಂದಿದೆ.

Kodava Family Hockey Tournament Website Launched
Kodava Family Hockey Tournament Website Launched

ಕಾರ್ಯಕ್ರಮದಲ್ಲಿ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಸ್ಥಳೀಯ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ,ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ,ಮುದ್ದಂಡ ಸ್ಪೋರ್ಟ್ಸ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ,
ಅತಿಥಿಗಳಾಗಿ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ,ಆದ್ಯ ಪೊನ್ನಣ್ಣ ,ರಂಜಿತ್ ಪೊನ್ನಪ್ಪ, ಚಂಗಪ್ಪ, ದಿವ್ಯ ಪ್ರಮುಖರು ಇದ್ದರು

Continue Reading

ಕೊಡಗು

Deepawalli 2024 : ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಡೆದ ದೀಪಾವಳಿ ಉತ್ಸವ

Deepawalli 2024 : ಮಡಿಕೇರಿಯಲ್ಲಿ ದೀಪಾವಳಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ಸನ್ಮಾನಿಸಲಾಯಿತು.

VISTARANEWS.COM


on

By

Deepavali festival held in Madikeri
Koo

ಕೊಡಗು: ದೀಪಾವಳಿ ಹಬ್ಬದ (Deepawalli 2024) ಪ್ರಯುಕ್ತ ಮಡಿಕೇರಿಯ ಕಾಲನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ದೀಪಾವಳಿ ಉತ್ಸವವು ಬಹಳ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ್ ಮಲ್ಪೆ, ಮಡಿಕೇರಿಯ ಕಲಾ ನಗರಕ್ಕೆ ಕರೆಸಿರೋದು ಬಹಳ‌ ಸಂತೋಷವಾಗಿದೆ‌. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಒಂದು ಶವವನ್ನು ಹೊರ ತೆಗೆದಿದ್ದೇನೆ‌. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಈ ಕಾರ್ಯಕ್ರಮಕ್ಕೆ ಕರೆಸಿರೋದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.

Deepavali festival held in Madikeri

ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ‌ ಮಾಡಿದ್ದ ಕೊಡಗಿನ ಪತ್ರಕರ್ತರಾದ ವಿಸ್ತಾರ ನ್ಯೂಸ್‌ನ ಜಿಲ್ಲಾ ವರದಿಗಾರ ಲೋಹಿತ್ ಎಂ.ಆರ್, ಕ್ಯಾಮೆರಾಮನ್ ಮನೋಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಪ್ರಜ್ವಲ್ ಎನ್‌.ಸಿ, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ , ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು‌‌. ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಧ್ಯಕ್ಷರಾದ ಮಹೇಶ್, ಆಶಾ ನಟರಾಜ್, ಸ್ಥಾಪದ ಸದಸ್ಯರು ಚಂದ್ರು, ಕೆ.ಎಸ್ ರಮೇಶ್,ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್ ಉಪಸ್ಥಿತರಿದ್ದರು.

Continue Reading

ಕೊಡಗು

Murder Case : ತೆಲಂಗಾಣ ಉದ್ಯಮಿ ಕೊಲೆ ಕೇಸ್‌; ಸ್ಥಳ ಮಹಜರು ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಲ್ಕಿತ್ತ ಆರೋಪಿ

Murder Case : ತೆಲಂಗಾಣ ಉದ್ಯಮಿ ಕೊಲೆ ಪ್ರಕರಣದ ಆರೋಪಿ ಸ್ಥಳ ಮಹಜರು ವೇಳೆ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

VISTARANEWS.COM


on

By

Murder Case
Koo

ಬೆಂಗಳೂರು: ಕೊಲೆ ಆರೋಪಿಯನ್ನು (Murder Case) ಮಹಜರು ನಡೆಸಲು ಕರೆದೊಯ್ಯುವ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣ ರಾಜ್ಯದ ಉಪ್ಪಳ್‌ನಲ್ಲಿ ನಡೆದಿದೆ. ತೆಲಂಗಾಣದಲ್ಲಿ ಉದ್ಯಮಿಯನ್ನು ಹತ್ಯೆ ನಡೆಸಿ ಬಳಿಕ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಪನ್ಯದ ಎಸ್ಟೇಟ್‌ನಲ್ಲಿ ಸುಟ್ಟುಹಾಕಿದ್ದರು. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದರು.

ಓರ್ವ ನ್ಯಾಯಾಂಗ ಬಂಧನವಾಗಿದ್ದು, ಉಳಿದ ಇಬ್ಬರು ಆರೋಪಿಗಳ ಪೈಕಿ ಅಂಕುರ್ ರಾಣಾ ಠಾಕೂರ್‌ನನ್ನು ಎರಡು ದಿನಗಳ ಹಿಂದೆ ತೆಲಂಗಾಣಕ್ಕೆ ಮಹಜರು ನಡೆಸಲು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಸದ್ಯ ಆರೋಪಿ ಪರಾರಿ ಸಂಬಂಧ ತೆಲಂಗಾಣ ಉಪ್ಪಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ ಕೊಡಗಿನ ಎರಡು ಎಕ್ಸ್ ಪರ್ಟ್ ಟೀಮ್ ಕೂಡ ತೆಲಂಗಾಣಕ್ಕೆ ತೆರಳಿದ್ದು ಹುಟುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?

ಕೊಡಗು: ಅಕ್ಟೋಬರ್ 8ರಂದು ಕೊಡಗಿನ ಸುಂಟಿಕೊಪ್ಪ ಸಮೀಪ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ (Murder case) ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪ್ರಕರಣವನ್ನು ಭೇದಿಸಿ ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ನಿಹಾರಿಕ (29), ಪಶು ವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬುವವರು ಬಂಧಿತರು.

ಈ ಮೂವರು ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನಲ್ಲಿ ಸುಟ್ಟು ಹಾಕಿ ಕಾಲ್ಕಿತ್ತಿದ್ದರು. ಆಸ್ತಿಗಾಗಿ ನಿಹಾರಿಕ ಪ್ರಿಯಕರರ ಜತೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದಳು. ಹತ್ಯೆ ಮಾಡಿ ನಂತರ ಕೊಡಗಿನ ಸುಂಟಿಕೊಪ್ಪದಲ್ಲಿ ಸುಟ್ಟು ಹಾಕಿದ್ದರು. ಪ್ರಕರಣ ಸಂಬಂಧ ಪೊಲೀಸರು ಸಿಸಿ ಕ್ಯಾಮೆರಾ ಸುಳಿವು ಆಧಾರಿಸಿ, ರೆಡ್ ಕಲರ್ ಬೆಂಜ್ ಕಾರಿನ ಹಿಂದೆ ಬಿದ್ದಿದ್ದರು. ಕಾರುಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿತ್ತು.

Murder Case
ಬಂಧಿತ ಆರೋಪಿಗಳು

ನಿಹಾರಿಕ ತಾನು 10ನೇ ತರಗತಿಯಲ್ಲಿ ಇರುವಾಗಲೇ ಮದುವೆಯಾಗಿದ್ದಳು. ಎರಡು ಮಕ್ಕಳಾದ ಮೇಲೆ ಪತಿಗೆ ಡಿವೋಸ್‌ ಕೊಟ್ಟು ದೂರವಾಗಿದ್ದಳು. ಬಳಿಕ ಜೈಲಿನಲ್ಲಿದ್ದ ಅಂಕುರ್ ಎಂಬಾತನ ಪರಿಚಯವಾಗಿತ್ತು. ಈ ಅಂಕುರ್‌ ಮೂಲಕ ರಮೇಶ್‌ನ ಪರಿಚಯವಾಗಿ ಮದುವೆಯಾಗಿದ್ದಳು. ರಮೇಶ್‌ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ನಡುವೆ ನಿಹಾರಿಕ, ನಿಖಿಲ್‌ ಜತೆಗೂ ಲಿವಿಂಗ್ ರಿಲೇಶನ್ ಶಿಪ್‌ನಲ್ಲಿ ಇದ್ದಳು.

ನಿಹಾರಿಕ ಅಂಕುರ್‌ನೊಂದಿಗೆ ಸೇರಿ ಆಸ್ತಿ ನೀಡುವಂತೆ ರಮೇಶ್‌ನಿಗೆ ಕಿರುಕುಳ ನೀಡುತ್ತಿದ್ದರು. ಆಸ್ತಿ ನೀಡದೇ ಇದ್ದದ್ದಕ್ಕೆ ಹೈದರಾಬಾದ್ ಸಮೀಪ ಹಗ್ಗದಿಂದ ಬಿಗಿದು ರಮೇಶ್‌ನ ಕೊಲೆ ಮಾಡಿದ್ದರು. ಕೊಲೆ ಮಾಡಿ ಬಳಿಕ ರಮೇಶ್‌ನ ಕಾರಿನಲ್ಲೇ ಆತನ ಅಪಾರ್ಟ್ಮೆಂಟ್‌ಗೆ ಹೋಗಿ ಹಣ, ಆಸ್ತಿ ದಾಖಲೆ ದೋಚಿದ್ದರು. ನಂತರ ಬೆಂಗಳೂರಿಗೆ ಬಂದು ಪೆಟ್ರೋಲ್ ಖರೀದಿಸಿ, ಕೊಡಗಿಗೆ ತಂದು ರಮೇಶ್‌ ಬಾಡಿಯನ್ನು ಸುಟ್ಟು ಹಾಕಿದ್ದರು. ಕೊಲೆ ಬಳಿಕ ಅಂಕುರ್ ದೆಹಲಿ, ಹರಿಯಾಣ ಅಂತ ಸುತ್ತಾಡಿದ್ದ.

Continue Reading

ಕೊಡಗು

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣವನ್ನು ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಪನ್ಯ ಎಫ್.ಸಿ. ತಂಡದ ಸದಸ್ಯರು ಸನ್ಮಾನಿಸಿ ಗೌರವಿಸಿದರು.

VISTARANEWS.COM


on

By

murder case
Koo

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಸಂದೇಶ್‌ ಎಂಬುವವರಿಗೆ ಸೇರಿದ ಪನ್ಯ ಕಾಫಿ ತೋಟದಲ್ಲಿ ವ್ಯಕ್ತಿಯನ್ನು ಕೊಲೆ (murder case) ಮಾಡಿ, ಸುಟ್ಟು ಹಾಕಿದ ಪ್ರಕರಣವನ್ನು ಸುಂಟಿಕೊಪ್ಪ ಪೊಲೀಸರು ಕಾರ್ಯಾಚರಣೆ ನಡೆಸಿ ಭೇದಿಸಿದ್ದರು. ಹೀಗಾಗಿ ಸುಂಟಿಕೊಪ್ಪ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಪನ್ಯತೋಟದ ಪನ್ಯ ಎಫ್.ಸಿ. ತಂಡದ ಸದಸ್ಯರು ಸುಂಟಿಕೊಪ್ಪ ಠಾಣೆಗೆ ತೆರಳಿ ಕುಶಾಲನಗರ ವೃತ್ತ ನಿರೀಕ್ಷಕ ಮುದ್ದು ಮಾದೇವ, ಸುಂಟಿಕೊಪ್ಪದ ಠಾಣಾಧಿಕಾರಿ ಚಂದ್ರಶೇಖರ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದರು.

murder case
Murder Case

ಯಾವುದೆ ಸುಳಿವು ಇಲ್ಲದಿರೋ ಈ ಪ್ರಕರಣವನ್ನು ಪೊಲೀಸರು ಭೇದಿಸಿರೋದಕ್ಕೆ ಪನ್ಯ ಎಫ್.ಸಿ ತಂಡ ಶ್ಲಾಘನೆ ವ್ಯಕ್ತಪಡಿಸಿತ್ತು. ಪನ್ಯ ಎಫ್.ಸಿ. ತಂಡದ ಸುಮಾರು 25ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು. ಗ್ರಾ.ಪಂ. ಸದಸ್ಯ ಪ್ರಸಾದ್ ಕುಟ್ಟಪ್ಪ ಅವರ ನೇತೃತ್ವದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು

murder case
Murder Case

ಆಸ್ತಿಗಾಗಿ ಪ್ರಿಯಕರನ ಜತೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ್ದಳು

ಕೊಡಗು: ಅಕ್ಟೋಬರ್ 8ರಂದು ಕೊಡಗಿನ ಸುಂಟಿಕೊಪ್ಪ ಸಮೀಪ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ (Murder case) ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ನಿಹಾರಿಕ (29), ಪಶು ವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬುವವರು ಬಂಧಿತರು.

ಈ ಮೂವರು ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54) ಎಂಬಾತನನ್ನು ತೆಲಂಗಾಣದಲ್ಲಿ ಕೊಲೆ ಮಾಡಿ, ಕೊಡಗಿನಲ್ಲಿ ಸುಟ್ಟು ಹಾಕಿ ಕಾಲ್ಕಿತ್ತಿದ್ದರು. ಆಸ್ತಿಗಾಗಿ ನಿಹಾರಿಕ ಪ್ರಿಯಕರರ ಜತೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದಳು. ಹತ್ಯೆ ಮಾಡಿ ನಂತರ ಕೊಡಗಿನ ಸುಂಟಿಕೊಪ್ಪದಲ್ಲಿ ಸುಟ್ಟು ಹಾಕಿದ್ದರು. ಪ್ರಕರಣ ಸಂಬಂಧ ಪೊಲೀಸರು ಸಿಸಿ ಕ್ಯಾಮೆರಾ ಸುಳಿವು ಆಧಾರಿಸಿ, ರೆಡ್ ಕಲರ್ ಬೆಂಜ್ ಕಾರಿನ ಹಿಂದೆ ಬಿದ್ದಿದ್ದರು. ಕಾರುಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿತ್ತು.

Murder Case
Murder Case

ನಿಹಾರಿಕ ತಾನು 10ನೇ ತರಗತಿಯಲ್ಲಿ ಇರುವಾಗಲೇ ಮದುವೆಯಾಗಿದ್ದಳು. ಎರಡು ಮಕ್ಕಳಾದ ಮೇಲೆ ಪತಿಗೆ ಡಿವೋಸ್‌ ಕೊಟ್ಟು ದೂರವಾಗಿದ್ದಳು. ಬಳಿಕ ಜೈಲಿನಲ್ಲಿದ್ದ ಅಂಕುರ್ ಎಂಬಾತನ ಪರಿಚಯವಾಗಿತ್ತು. ಈ ಅಂಕುರ್‌ ಮೂಲಕ ರಮೇಶ್‌ನ ಪರಿಚಯವಾಗಿ ಮದುವೆಯಾಗಿದ್ದಳು. ರಮೇಶ್‌ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ನಡುವೆ ನಿಹಾರಿಕ, ನಿಖಿಲ್‌ ಜತೆಗೂ ಲಿವಿಂಗ್ ರಿಲೇಶನ್ ಶಿಪ್‌ನಲ್ಲಿ ಇದ್ದಳು.

ನಿಹಾರಿಕ ಅಂಕುರ್‌ನೊಂದಿಗೆ ಸೇರಿ ಆಸ್ತಿ ನೀಡುವಂತೆ ರಮೇಶ್‌ನಿಗೆ ಕಿರುಕುಳ ನೀಡುತ್ತಿದ್ದರು. ಆಸ್ತಿ ನೀಡದೇ ಇದ್ದದ್ದಕ್ಕೆ ಹೈದರಾಬಾದ್ ಸಮೀಪ ಹಗ್ಗದಿಂದ ಬಿಗಿದು ರಮೇಶ್‌ನ ಕೊಲೆ ಮಾಡಿದ್ದರು. ಕೊಲೆ ಮಾಡಿ ಬಳಿಕ ರಮೇಶ್‌ನ ಕಾರಿನಲ್ಲೇ ಆತನ ಅಪಾರ್ಟ್ಮೆಂಟ್‌ಗೆ ಹೋಗಿ ಹಣ, ಆಸ್ತಿ ದಾಖಲೆ ದೋಚಿದ್ದರು. ನಂತರ ಬೆಂಗಳೂರಿಗೆ ಬಂದು ಪೆಟ್ರೋಲ್ ಖರೀದಿಸಿ, ಕೊಡಗಿಗೆ ತಂದು ರಮೇಶ್‌ ಬಾಡಿಯನ್ನು ಸುಟ್ಟು ಹಾಕಿದ್ದರು. ಕೊಲೆ ಬಳಿಕ ಅಂಕುರ್ ದೆಹಲಿ, ಹರಿಯಾಣ ಅಂತ ಸುತ್ತಾಡಿದ್ದ.

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ3 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌