Koppala News: ಕೊಪ್ಪಳದಲ್ಲಿ ಗೃಹ ಜ್ಯೋತಿ ಯೋಜನೆಗೆ ಸಚಿವ ಶಿವರಾಜ ತಂಗಡಗಿ ಚಾಲನೆ - Vistara News

ಕರ್ನಾಟಕ

Koppala News: ಕೊಪ್ಪಳದಲ್ಲಿ ಗೃಹ ಜ್ಯೋತಿ ಯೋಜನೆಗೆ ಸಚಿವ ಶಿವರಾಜ ತಂಗಡಗಿ ಚಾಲನೆ

Koppala News: ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ರಾಜ್ಯ ಸರ್ಕಾರದ ಮಹತ್ವದ ಗೃಹ ಜ್ಯೋತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.

VISTARANEWS.COM

on

Minister Shivraj Tangadagi Inaugurated the Gruha Jyothi scheme at Koppala
ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ರಾಜ್ಯ ಸರ್ಕಾರದ ಮಹತ್ವದ ಗೃಹ ಜ್ಯೋತಿ ಯೋಜನೆಗೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿ, ಮಾತನಾಡಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಪ್ಪಳ: ರಾಜ್ಯ ಸರ್ಕಾರದ ಮಹತ್ವದ ಗೃಹ ಜ್ಯೋತಿ ಯೋಜನೆಗೆ (Gruha Jyothi scheme) ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿದ್ಯುಕ್ತ ಚಾಲನೆ ನೀಡಿದರು.

ನಗರದ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಶೂನ್ಯ ಬಿಲ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಸಾರ್ವಜನಿಕರಿಗೆ ಅನುಕೂಲವಾಗಲು ಗೃಹಜ್ಯೋತಿ ಯೋಜನೆ ಜಾರಿಗೊಳಿಸಲಾಗಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇದೆ ಎಂಬಯದನ್ನರಿತು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ಕೊಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಗುಡ್‌ ನ್ಯೂಸ್‌; ಕಡಿಮೆ ದರದಲ್ಲಿ ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ!

ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಯಡಿ 2,41,545 ಗ್ರಾಹಕರು ನೋಂದಣಿ ಮಾಡಿಕೊಂಡು ಜುಲೈ 27ರ ಅಂತ್ಯಕ್ಕೆ ಶೇಕಡವಾರು 81.29 ಪ್ರಗತಿ ಆಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಆರ್ಥಿಕವಾಗಿ ದುರ್ಬಲರಾದವರಿಗೆ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇದುವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದರು.

ಇದನ್ನೂ ಓದಿ: Express Highway : ಹೆದ್ದಾರಿ ಪ್ರಯಾಣಿಕರ ಸುರಕ್ಷತೆಗೆ ಬಂದಿದೆ ಹೊಸ ಮೊಬೈಲ್​ ಆ್ಯಪ್​; ಏನೇನಿದೆ ಅದರಲ್ಲಿ?

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಜೆಸ್ಕಾಂನ ಕಾರ್ಯ ಮತ್ತು ಪಾಲನ ವೃತ್ತ ಕೊಪ್ಪಳದ ಕಾರ್ಯನಿರ್ವಾಹಕ ಅಭಿಯಂತರರಾದ ಮಹೇಶ, ಕೊಪ್ಪಳ ವಿಭಾಗದ ಜೆಸ್ಕಾಂ ಅಧಿಕಾರಿ ಫಣಿ ರಾಜೇಶ, ಗಂಗಾವತಿ ವಿಭಾಗದ ಜೆಸ್ಕಾಂ ಅಧಿಕಾರಿ ರಿಯಾಜ್ ಅಹ್ಮದ್ ಸೇರಿದಂತೆ ಜೆಸ್ಕಾಂನ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

Sedition Case: ಪಾಕ್‌ ಪರ ಘೋಷಣೆ ಪ್ರಕರಣದ‌ ಆರೋಪಿ ಮೊಹಮ್ಮದ್ ಶಫಿ ನಾಶಿಪುಡಿ ಮೂಲತಃ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಕೋಟ್ಯಂತರ ರೂ. ಆಸ್ತಿ ಹೊಂದಿದ್ದಾರೆ.

VISTARANEWS.COM

on

Mohammed Shafi Nashipudi (1)
Koo

ಬೆಂಗಳೂರು: ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದ್ದು, ಸದ್ಯ ಅವರು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಈ ನಡುವೆ ಪ್ರಮುಖ ಆರೋಪಿ ಮೊಹಮ್ಮದ್‌ ಶಫಿ ನಾಶಿಪುಡಿಯ ಹಿನ್ನೆಲೆ ಚರ್ಚೆಗೆ ಗ್ರಾಸವಾಗಿದೆ. ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ, ಈಗ ದೇಶದ್ರೋಹದ ಪ್ರಕರಣದಲ್ಲಿ (Sedition Case) ಬಂಧಿತನಾಗಿದ್ದು, ಈತ ಬಳ್ಳಾರಿ ಮೂಲದ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರ ಸಂಬಂಧಿ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈತ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿಯನ್ನೂ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಬ್ಯಾಡಗಿಯಲ್ಲಿ ಮೆಣಸಿನಕಾಯಿ ವ್ಯಾಪಾರ

ಶಫಿ ನಾಶಿಪುಡಿ ಮೂಲತಃ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಈತನ ಕುಟುಂಬ ಕಳೆದ 50-60 ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಾ ಬಂದಿದೆ. ಬ್ಯಾಡಗಿಯ ಮೋಟೆಬೆನ್ನೂರಿನಿಂದಲೇ ಎಲ್ಲ ವ್ಯವಹಾರಗಳನ್ನು ನಾಶಿಪುಡಿ ನಡೆಸುತ್ತಾ ಬಂದಿದ್ದು, ಮೋಟೆಬೆನ್ನೂರಿನಲ್ಲಿ ಕೋಲ್ಡ್‌ ಸ್ಟೋರೇಜ್‌, ಮೆಣಸಿನಕಾಯಿ ಕ್ವಾಲಿಟಿ ಖಾರದ ಪುಡಿ ಯಂತ್ರ ಸೇರಿ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದ. ಬಳ್ಳಾರಿ ಮೂಲದ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ಅವರ ಸಂಬಂಧಿ ಎಂದು ಕೂಡ ಹೇಳಲಾಗಿದೆ.

ಇದನ್ನೂ ಓದಿ | Sedition Case: ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಿದ್ದೇವೆ; ಮಂಡ್ಯ ಘೋಷಣೆಯನ್ನೂ ತನಿಖೆ ಮಾಡ್ತೇವೆ: ಡಿಕೆಶಿ

ವಿಧಾನಸಭಾ ಚುನಾವಣೆಗೆ ತಯಾರಿ!

ಮೊಹಮದ್‌ ಶಫಿ ನಾಶಿಪುಡಿ ಪ್ರಭಾವಿ ಮುಸ್ಲಿಂ ಮುಖಂಡನಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಈಗಿನಿಂದಲೇ ತಯಾರಿ ನಡೆಸಿದ್ದ ಎನ್ನಲಾಗಿದೆ. ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರ ಈತ ಜತೆ ಉತ್ತಮ ಸಂಪರ್ಕ ಹೊಂದಿರುವ ಹಿನ್ನೆಲೆ ಬ್ಯಾಡಗಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಶಿಪುಡಿ ಸಿದ್ಧತೆ ನಡೆಸಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಇತ್ತೀಚೆಗೆ ನಡೆದ ಅಂಜುಮನ್‌-ಎ-ಇಸ್ಲಾಂ ಸಂಸ್ಥೆಯ ಚುನಾವಣೆಯಲ್ಲಿ ಗೆದ್ದು ಬಂದಿದ್ದ 11 ಜನ ಸದಸ್ಯರಲ್ಲಿ ಮೊಹಮ್ಮದ್‌ ಶಫಿ ಕೂಡ ಒಬ್ಬರಾಗಿದ್ದಾರೆ

ಕ್ರಿಮಿನಲ್‌ ಹಿನ್ನೆಲೆ ಇದೆಯೇ?

ಮೊಹಮದ್‌ ಶಫಿ ನಾಶಿಪುಡಿ ಈ ಹಿಂದೆ ಬ್ಯಾಡಗಿಯಲ್ಲಿ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ತಬ್ಲೀಕ್‌ ಮತ್ತು ಸುನ್ನಿ ವಿವಾದದಲ್ಲಿ ಸಿಲುಕಿದ್ದ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಇತ್ತೀಚೆಗೆ ಎರಡು ಸಮುದಾಯಗಳ ಮುಖಂಡರು ರಾಜಿ ಮೂಲಕ ಪ್ರಕರಣ ಇತ್ಯರ್ಥವಾಗಿತ್ತು. ಈ ಪ್ರಕರಣ ಬಿಟ್ಟರೆ ಮೊಹಮದ್‌ ಶಫಿ ನಾಶಿಪುಡಿ ವಿರುದ್ಧ ಬೇರೆ ಕ್ರಿಮಿನಲ್‌ ಪ್ರಕರಣಗಳಿಲ್ಲ.

ಇದನ್ನೂ ಓದಿ | Sedition Case: ಪಾಕ್‌ ಪರ ಘೋಷಣೆ ಕೂಗಿದವರಿಗೆ 3 ದಿನ ಪೊಲೀಸ್‌ ಕಸ್ಟಡಿ: ಕೋರ್ಟ್‌ ಆದೇಶ

ಕೋಟ್ಯಂತರ ರೂಪಾಯಿ ಆಸ್ತಿ

ಮೊಹಮದ್‌ ಶಫಿ ನಾಶಿಪುಡಿ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬ್ಯಾಡಗಿಯಲ್ಲಿ ಬಹು ಅಂತಸ್ತಿನ ಮನೆ ಹೊಂದಿದ್ದು, ಬ್ಯಾಡಗಿ ಸಮೀಪದ ಮೋಟೆಬೆನ್ನೂರಿನಲ್ಲಿ ಎಸ್‌ಎಎನ್‌ ಎಂಬ ಮೆಣಸಿನಕಾಯಿ ಕೋಲ್ಡ್‌ ಸ್ಟೋರೇಜ್‌ ಘಟಕವನ್ನು ಹೊಂದಿದ್ದು, ಮೆಣಸಿನಕಾಯಿ ಪುಡಿ ಮಾಡುವ ಘಟಕ ಕೂಡ ಹೊಂದಿದ್ದಾರೆ. ಇನ್ನು, ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದಲ್ಲಿಯೂ ಕೂಡ ಉತ್ತಮ ಹೆಸರು ಹೊಂದಿದ್ದು, ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಾರೆ ಎನ್ನಲಾಗಿದೆ. ಅದಲ್ಲದೇ ಪೊಲೀಸರ ವಿಚಾರಣೆ ವೇಳೆ ನಾನು ನೂರಾರು ಕೋಟಿಗೆ ಬಾಳ್ತೀನಿ ಸರ್..‌ ನಾನ್ಯಾಕೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಲಿ ಎಂದಿದ್ದರು.

Continue Reading

ಕರ್ನಾಟಕ

HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

HD Devegowda: ಎಲ್ಲ ಕಡೆ ಗ್ಯಾರಂಟಿ ಕೊಟ್ಟಿದ್ದೇವೆ, ಸಾಧನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ವ್ಯಂಗ್ಯವಾಡಿದ್ದಾರೆ.

VISTARANEWS.COM

on

692 farmers commit suicide is Siddaramaiah achievement says HD DeveGowda
Koo

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ (Water Crisis) ಉಲ್ಬಣವಾಗಿದೆ. ಹಾಲಿನ ಟ್ಯಾಂಕರ್ (Milk Tanker) ಮೂಲಕ ನೀರು ಪೂರೈಕೆ (Water Supply) ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (HD DeveGowda) ಅವರು ಬರದ ವಾಸ್ತವತೆಯನ್ನು ತೆರೆದಿಟ್ಟರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ದೇವೇಗೌಡ, ಎಲ್ಲ ಕಡೆ ಗ್ಯಾರಂಟಿ ಕೊಟ್ಟಿದ್ದೇವೆ, ಸಾಧನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ ನೀರಿಗಾಗಿ ಹೋರಾಟ ನಡೆಸಿ ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟು ಕಟ್ಟಿಸಿದವನು ನಿಮ್ಮ ಮುಂದೆ ಕುಳಿತಿದ್ದೇನೆ. ಹೇಮಾವತಿಯಲ್ಲಿ ನೀರಿದೆ. ಅಲ್ಲಿನ ಹಳ್ಳಿಗಳಿಗೂ ಆ ನೀರು ಕೊಡಿ, ಬೆಂಗಳೂರಿಗೂ ನೀರು ಕೊಡಿ. ಕೆ.ಆರ್.ಎಸ್‌ನಲ್ಲಿ 90 ಅಡಿಗೆ ಬಂದಿದೆ. ಹೇಮಾವತಿಯಲ್ಲಿ 23 ಟಿಎಂಸಿ ನೀರಿದೆ. ಜನರಿಗೆ ಕೊಡಲು ನಿಮಗೆ ಸಮಸ್ಯೆ ಏನು? ಜನರು ನೀರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ನೀರಿನ ಸಮಸ್ಯೆ ಉಲ್ಬಣಕ್ಕೆ ಕಳವಳ

ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮಾರ್ಚ್ 7ರ ಒಳಗೆ ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ಗಳನ್ನು ವಶಕ್ಕೆ ಪಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ ಎಂದು ದಿನಪತ್ರಿಕೆಗಳ ಸುದ್ದಿ ತುಣುಕುಗಳನ್ನು ತೋರಿಸುತ್ತಾ ಸರಕಾರದ ಮೇಲೆ ಎಚ್.ಡಿ. ದೇವೇಗೌಡ ಪ್ರಹಾರ ನಡೆಸಿದರು.

ಕುಡಿಯುವ ನೀರಿನ ಸಮಸ್ಯೆ ಎಷ್ಟು ದಿನಗಳಿಂದ ಇದೆ. ಇವರೇ ಅಲ್ಲವೇ ಡಿಸಿಎಂ, ನೀರಾವರಿ ಮಂತ್ರಿ. ಒಂದು ಟ್ಯಾಂಕರ್ ನೀರಿಗೆ ₹2500 ರಿಂದ 3,000 ಕೊಡಬೇಕು. 10 ತಿಂಗಳಲ್ಲಿ‌ ನೀವು ಎಷ್ಟು ಕಡೆ ಪ್ರವಾಸ ಮಾಡಿದ್ದೀರಾ? 20 ದಿನ ಅಧಿವೇಶನ, ಸಭೆ, ಮಂತ್ರಿಗಳ ಮನೆ ಊಟಕ್ಕೆ 4 ದಿನ ಕಳೆದಿರಿ. ಬಾಕಿ ದಿನ ಏನು ಮಾಡಿದಿರಿ ನೀವು? ಗ್ಯಾರಂಟಿ ಯೋಜನೆ ಉಸ್ತುವಾರಿಗೆ ಮಾಜಿ ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೀರಿ. 95 ಜನರಿಗೆ ಕ್ಯಾಬಿನೆಟ್ ದರ್ಜೆ!! ಆಹಾ.. ಎಂತಹ ಆಡಳಿತ? ಎಂದು ಎಚ್.ಡಿ. ದೇವೇಗೌಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನೀರಿನ ಬಗ್ಗೆ ಇವತ್ತು ಸಭೆ. ಜನ ನೀರು ಕುಡಿಯುತ್ತಿದ್ದಾರಾ ಅಂತ ಸಭೆ. ಗೌರವಾನ್ವಿತ ಸಿಎಂ, ಕಾಂಗ್ರೆಸ್ ಅಧ್ಯಕ್ಷರು ಸಭೆ ಮಾಡುತ್ತಿದ್ದಾರೆ. ನಾನು ಕೂಗಿದರೆ ಮಂಡ್ಯ, ಹಾಸನ ಅಲ್ಲ. ಚಿಕ್ಕಮಗಳೂರುವರೆಗೂ ಕೇಳಬೇಕು. ಕೂಗಿ ಅಂದರು. ನಾಚಿಕೆ ಆಗುವುದಿಲ್ಲವಾ? ಎಂದು ಎಚ್.ಡಿ. ದೇವೇಗೌಡ‌ ಕಿಡಿಕಾರಿದರು.

ಎರಡು ನಾಲಿಗೆಯ ಹೇಳಿಕೆಗೆ ಕಿಡಿ

ವೃಷಭಾವತಿ ನೀರನ್ನು ನೆಲಮಂಗಲಕ್ಕೆ ಎತ್ತುತ್ತೇವೆ ಅಂತಾರೆ. ಮೂರು ತಿಂಗಳ ಹಿಂದೆ ಹೇಮಾವತಿ ನೀರು ನೆಲಮಂಗಲಕ್ಕೆ ತರುತ್ತೇನೆ ಅಂದರು. ಸಮಯಕ್ಕೆ ಸಂದರ್ಭಕ್ಕೆ ಅನುಸಾರವಾಗಿ ಹೇಳಿಕೆ ನೀಡುವ ನಿಮ್ಮನ್ನು ಜನ ನಂಬ್ತಾರೇನ್ರಿ? ಈ ನಾಲಿಗೆಯಲ್ಲಿ ಯಾವ ಯಾವ ಸಮಯಕ್ಕೆ ಏನೇನು ಹೇಳ್ತೀರಾ? ಎಂದು ಮಾಜಿ ಪ್ರಧಾನಿಗಳು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಶೀಘ್ರವೇ ಟ್ಯಾಂಕರ್ ನೀರಿಗೆ ದರ ನಿಗದಿ ಮಾಡುತ್ತೇವೆ ಅಂತಾರೆ. ನೀರಿನ‌ ಬಗ್ಗೆ ಸಚಿವರಿಗೆ ಕೇಳಿದರೆ ಕುಡಿಯುವ ನೀರು ಕೊಡುವುದು ದೊಡ್ಡ ಸಮಸ್ಯೆ ಅಂತಾರೆ. ಸಚಿವರು ಎಲ್ಲಾ ನೀರಿನ ಟ್ಯಾಂಕರ್ ಗಳು ರಿಜಿಸ್ಟರ್ ಮಾಡಿಕೊಳ್ಳಬೇಕು ಅಂತಾರೆ‌. ಇತ್ತ ನೋಡಿದರೆ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 15 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿದೆ. ಕಾವೇರಿ ನೀರಿಗೆ ಜನರು ಚಾತಕ ಪಕ್ಷಿಯಂತೆ ಕಾಯುದ್ದಾರೆ. ಪಾಪ ಈ ಜನ 5 ಗ್ಯಾರಂಟಿ ಸಿಕ್ಕಿದವು ಎಂದು ಸಂತೋಷವಾಗಿ ಇದ್ದಾರೆ! ಎಂದು ನೀರಿನ ಅಭಾವದ ಬಗ್ಗೆ ದೇವೇಗೌಡರು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: Death Threat to Modi: ತಲ್ವಾರ್‌ ಹಿಡಿದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ ಒಡ್ಡಿದ್ದ ನಾಸಿರ್‌ ಸೆರೆ

ಎತ್ತಿನಹೊಳೆಯಲ್ಲಿ ನಿಮ್ಮ ಪಾತ್ರ ಏನು?

ಎತ್ತಿನಹೊಳೆ ಯೋಜನೆಯನ್ನು ಯಾರು ಮಂಜೂರು ಮಾಡಿದ್ದು? ಈ ಯೋಜನೆಗೆ ಅನುಮತಿ ಕೊಟ್ಟಿದ್ದು ಜಗದೀಶ್ ಶೆಟ್ಟರ್. ಇದರಲ್ಲಿ ನಿಮ್ಮ ಪಾತ್ರ ಏನು? ಕುಮಾರಸ್ವಾಮಿ ವಿರೋಧ ಮಾಡ್ತಾರೆ ಅಂತೀರಾ. ಅವರ ಬಗ್ಗೆ ಮಾತಾಡೋಕೆ ನಿಮಗೆ ಏನಿದೆ ನೈತಿಕತೆ? ನಿಮ್ಮ ಪಾತ್ರ ಎತ್ತಿನಹೊಳೆ ಯೋಜನೆಯಲ್ಲಿ ಏನು? ಎಂದು ದೇವೇಗೌಡರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

Continue Reading

ರಾಜಕೀಯ

Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

Water Crisis: ರಾಜ್ಯ ಸರ್ಕಾರದಿಂದ ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಕುಡಿಯುವ ನೀರಿನ ಬವಣೆ ಹೆಚ್ಚಿದೆ. ಕೆ.ಆರ್.ಎಸ್ ಮಟ್ಟ ಕುಸಿದಿದೆ ಎಂದು ಕಿಡಿಕಾರಿರುವ ಎಚ್.ಡಿ. ದೇವೇಗೌಡ, ಹೇಮಾವತಿಯಿಂದ ಬೆಂಗಳೂರಿಗೆ ನೀರು ಕೊಡಲು ಸಲಹೆ ನೀಡಿದ್ದಾರೆ.

VISTARANEWS.COM

on

HD DeveGowda reveals the reality of Karnataka drought

ಬೆಂಗಳೂರು

ED Raid : ಬೆಂಗಳೂರಿನ 8 ಕಡೆ ಇ.ಡಿ ದಾಳಿ, 11.5 ಕೋಟಿ ನಗದು, 120 ಕೋಟಿಯ ದಾಖಲೆ ವಶ

ED Raid : ಬೆಂಗಳೂರಿನಲ್ಲಿ ಇ.ಡಿ ದಾಳಿ ನಡೆದಿದೆ. ಹಣಕಾಸು ವ್ಯವಹಾರದಲ್ಲಿ ಮೋಸ ಮಾಡಿದ ಆರೋಪದ ಬೆನ್ನಿಗೇ ಹಲವು ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ.

VISTARANEWS.COM

on

ED Raid Bangalore
Koo

ಬೆಂಗಳೂರು: ಅಕ್ರಮ ಹಣ ಲೇವಾದೇವಿ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಮಂಗಳವಾರ ಬೆಂಗಳೂರಿನಲ್ಲಿ ಎಂಟು ಕಡೆ ದಾಳಿ (ED Raid) ನಡೆಸಿದರು. ಬೆಂಗಳೂರಿನ (Bangalore News) ನಾನಾ ಭಾಗಗಳಲ್ಲಿ ನಡೆದ ಈ ದಾಳಿಯಲ್ಲಿ 11.5 ಕೋಟಿ ರೂ. ವಶವಾಗಿದೆ ಎಂದು ಹೇಳಲಾಗಿದೆ.

ಹಣ ಲೇವಾದೇವಿ ಮತ್ತು ಅಕ್ರಮ ವಹಿವಾಟಿಗೆ ಸಂಬಂಧಿಸಿ ಕೆಲವೊಂದು ಮಾಹಿತಿಯನ್ನು ಪಡೆದುಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಳೆದ ಫೆ. 29ರಂದೇ ಕೆಲವು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಅಂದು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಮಂಗಳವಾರ ಮತ್ತೆ ಎಂಟು ಕಡೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ವಿಜಯ್ ಟಾಟಾ ಮತ್ತು ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪ್ರಮುಖವಾಗಿ ದಾಳಿ ನಡೆಸಿದೆ. ಆರೋಪಿಗಳ ಅಕೌಂಟ್ ನಲ್ಲಿದ್ದ ಸುಮಾರು 11.25 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಅದರ ಜತೆಗೆ 120 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಸೀಜ್ ಮಾಡಲಾಗಿದೆ.

ವಿಜಯ್ ಟಾಟಾ ಅಸೋಸಿಯೇಟ್ಸ್‌, ಆರ್ ಎಸ್ ಚಂದ್ರಶೇಖರ್, ಮುನಿರಾಜು ಕೆ, ಡಿ ನಾಗೇಂದ್ರಬಾಬು, ಮಂಜುನಾಥ್ ಬಿ.ಎಸ್ ಅವರಿಗೆ ಸಂಬಂಧಪಟ್ಟ ಕಂಪನಿಗಳ ಮೇಲೆ ದಾಳಿ ನಡೆಯಿತು.

ಸಂಚಯ ಲ್ಯಾಂಡ್ & ಎಸ್ಟೇಟ್ ಫ್ರೈ.ಲಿ. ಬಿಸಿಸಿ ಕನ್ಟ್ರಕ್ಷನ್ಸ್, ಆಕಾಶ್ ಎಜುಕೇಷನ್ & ಡೆವಲಪ್ ಮೆಂಟ್ ಟ್ರಸ್ಟ್, ಎಸ್ ವಿ ಕಾನ್ಕ್ರೇಟ್ ಪ್ರಾಜೆಕ್ಟ್ ಪ್ರೈ ಲಿ. ಲಿಮಿಟೆಡ್ ಸಂಸ್ಥೆಗಳಿಗೆ ಸಂಬಂಧಪಟ್ಟ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ಸೀಜ್‌ ಮಾಡಲಾಗಿದೆ. ಸ್ಥಿರಾಸ್ತಿ ಮತ್ತು ಚರಾಸ್ತಿ ಸಂಬಂಧಿಸಿದಂತೆ 120 ಕೋಟಿ ರೂ. ಮೌಲ್ಯದ ದಾಖಲೆಗಳು ಪತ್ತೆಯಾಗಿವೆ.

ಇದನ್ನೂ ಓದಿ : ED Case: ಅಕ್ರಮ ಹಣ ವರ್ಗಾವಣೆ ಕೇಸ್ ರದ್ದು ಮಾಡಿದ ಸುಪ್ರೀಂ ಕೋರ್ಟ್‌; ಡಿ.ಕೆ. ಶಿವಕುಮಾರ್​​ಗೆ ಬಿಗ್ ರಿಲೀಫ್

ಗ್ರಾಹಕರಿಗೆ ವಂಚನೆ ನಡೆಸಿದ ಆರೋಪ

ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಈ ಕಂಪನಿಗಳು ಸೈಟ್‌ ಕೊಡಿಸುವುದಾಗಿ ವಂಚನೆ ಮಾಡಿವೆ ಎಂದು ಬೆಂಗಳೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸೈಟ್‌ ಕೊಡಿಸುವುದಾಗಿ ವಂಚನೆ ಮಾಡಿದ್ದರಿಂದಾಗಿ ಪೊಲೀಸರು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ ಕಾಯಿದೆ 2024 (Karnataka Protection of Interest of Depositors in Financial Establishments Act, 2004-KPIDFE) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇವರು ಜನರಿಂದ ಪಡೆದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದ್ದರು ಎಂಬ ಆರೋಪಗಳಿದ್ದವು. ನೂರಾರು ಗ್ರಾಹಕರಿಂದ ಪಡೆದ ಸುಮಾರು 250 ಕೋಟಿ ರೂ. ಹಣ ಅವರ ಕೈಯಲ್ಲಿತ್ತು. ಅದನ್ನು ಮರಳಿ ಕೇಳಿದರೆ ಬೆದರಿಕೆ ಹಾಕಲಾಗುತ್ತಿತ್ತು ಎನ್ನಲಾಗಿದೆ.

ಈ ವಿಚಾರಗಳು ಜಾರಿ ನಿರ್ದೇಶನಾಲಯದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ದಾಖಲೆ ಪರಿಶೀಲಿಸಿ, ಈಗ ದಾಳಿಯನ್ನು ಸಂಘಟಿಸಿದ್ದಾರೆ.

Continue Reading
Advertisement
Shubman Gill
ಕ್ರೀಡೆ20 mins ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Mohammed Shafi Nashipudi (1)
ಕರ್ನಾಟಕ24 mins ago

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

692 farmers commit suicide is Siddaramaiah achievement says HD DeveGowda
ಕರ್ನಾಟಕ31 mins ago

HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

HD DeveGowda reveals the reality of Karnataka drought
ರಾಜಕೀಯ39 mins ago

Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ED Raid Bangalore
ಬೆಂಗಳೂರು39 mins ago

ED Raid : ಬೆಂಗಳೂರಿನ 8 ಕಡೆ ಇ.ಡಿ ದಾಳಿ, 11.5 ಕೋಟಿ ನಗದು, 120 ಕೋಟಿಯ ದಾಖಲೆ ವಶ

PM Narendra Modi
ದೇಶ46 mins ago

ದೇಶದ ಮೊದಲ ಅಂಡರ್‌ ವಾಟರ್‌ ಮೆಟ್ರೋ ಸೇವೆಗೆ ಮೋದಿ ನಾಳೆ ಚಾಲನೆ; ಏನೆಲ್ಲ ವೈಶಿಷ್ಟ್ಯ?

kiara adwani
ಬಾಲಿವುಡ್1 hour ago

Kiara Advani: ‘ಡಾನ್‌ 3’ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಕಿಯಾರಾ ಅಡ್ವಾಣಿ

Residential School
ಕರ್ನಾಟಕ1 hour ago

Chikkamagaluru News: ವಸತಿ ಶಾಲೆ ಶಿಕ್ಷಕಿಯಿಂದ ವಿದ್ಯಾರ್ಥಿನಿಯರಿಗೆ ಚಿತ್ರಹಿಂಸೆ; ಕ್ರಮಕ್ಕೆ ಪೋಷಕರ ಆಗ್ರಹ

HD Deve Gowda lashes out at CM Siddaramaiah and Nikhil Kumaraswamy with him
ರಾಜಕೀಯ1 hour ago

HD Devegowda: ಮೋದಿ ಬಗ್ಗೆ ಮಾತನಾಡಲು ನೀವು ಯಾರು? ಸಿಎಂ ಸಿದ್ದರಾಮಯ್ಯಗೆ ಎಚ್‌.ಡಿ. ದೇವೇಗೌಡ ಪ್ರಶ್ನೆ

Expensive Celebrity Saree Draper
ಫ್ಯಾಷನ್1 hour ago

Expensive Celebrity Saree Draper: ಸ್ಟಾರ್‌ಗಳಿಗೆ ಸೀರೆ ಉಡಿಸಿದರೆ ಇವರ ಚಾರ್ಜ್ 2 ಲಕ್ಷ ರೂ.! ಯಾರಿವರು ಡಾಲಿ ಜೈನ್‌?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌