Koppala News ZP CEO visits residence of Sunil who died of vomiting-dysentery Koppala News : ಕನಕಗಿರಿಯಲ್ಲಿ ವಾಂತಿ-ಭೇದಿಯಿಂದ ಮೃತಪಟ್ಟ ಸುನಿಲ್ ನಿವಾಸಕ್ಕೆ ಜಿಪಂ ಸಿಇಒ ಭೇಟಿ - Vistara News

ಕರ್ನಾಟಕ

Koppala News : ಕನಕಗಿರಿಯಲ್ಲಿ ವಾಂತಿ-ಭೇದಿಯಿಂದ ಮೃತಪಟ್ಟ ಸುನಿಲ್ ನಿವಾಸಕ್ಕೆ ಜಿಪಂ ಸಿಇಒ ಭೇಟಿ

Koppala News: ವಾಂತಿ-ಭೇದಿ ಹಾಗೂ ತೀವ್ರತರವಾದ ಹೊಟ್ಟೆನೋವಿನಿಂದ ಮೃತಪಟ್ಟ ಕನಕಗಿರಿ ತಾಲೂಕಿನ ಹುಲಸನಹಟ್ಟಿ ಗ್ರಾಮದ ಸುನೀಲ್‌ ಕುಮಾರ್‌ ಅವರ ನಿವಾಸಕ್ಕೆ ಜಿ.ಪಂ. ಸಿಇಒ ರಾಹುಲ್ ರತ್ನಂ ಪಾಂಡೆಯ, ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

VISTARANEWS.COM


on

ZP CEO visits residence of Sunil who died of vomiting-dysentery at Kanakagiri
ವಾಂತಿ-ಬೇಧಿ ಹಾಗೂ ತೀವ್ರತರವಾದ ಹೊಟ್ಟೆನೋವಿನಿಂದ ಮೃತಪಟ್ಟ ಕನಕಗಿರಿ ತಾಲೂಕಿನ ಹುಲಸನಹಟ್ಟಿ ಗ್ರಾಮದ ಸುನೀಲ್‌ ಕುಮಾರ್‌ ಅವರ ನಿವಾಸಕ್ಕೆ ಜಿ.ಪಂ. ಸಿಇಒ ರಾಹುಲ್ ರತ್ನಂ ಪಾಂಡೆಯ, ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕನಕಗಿರಿ: ವಾಂತಿ-ಭೇದಿ (Vomiting-dysentery) ಹಾಗೂ ತೀವ್ರತರವಾದ ಹೊಟ್ಟೆನೋವಿನಿಂದ ಜೂ. 29ರಂದು ಮೃತಪಟ್ಟ ಕನಕಗಿರಿ (Kanakagiri) ತಾಲೂಕಿನ ಹುಲಸನಹಟ್ಟಿ ಗ್ರಾಮದ ಸುನೀಲ್‌ ಕುಮಾರ್‌ ಅವರ ನಿವಾಸಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರು ಶುಕ್ರವಾರ ಭೇಟಿ (Visit) ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಯುವಕನ ಮರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾದ ಸಂದರ್ಭದಲ್ಲಿ ಯುವಕನಿಗೆ ನೀಡಲಾದ ಚಿಕಿತ್ಸೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ವೈದ್ಯಾಧಿಕಾರಿಗಳೊಂದಿಗೆ ಪಡೆದುಕೊಂಡರು.

ಇದನ್ನೂ ಓದಿ: IND vs WI : ಭಾರತ ವಿರುದ್ಧದ ಟೆಸ್ಟ್ ಸರಣಿಗೆ ವಿಂಡೀಸ್​ನ ಪ್ರಮುಖ ಆಟಗಾರರು ಔಟ್​?

ಹುಲಸನಹಟ್ಟಿ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಬೇಕು. ಕುಡಿಯುವ ನೀರಿನ ಪೈಪ್‌ಲೈನ್‌ಗಳ ಪರಿಶೀಲನೆ, ಚರಂಡಿ ಮತ್ತು ಅವುಗಳ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Viral News : ವಿಶ್ವದಲ್ಲೇ ಅತಿ ಉದ್ದದ ನಾಲಿಗೆ ಹೊಂದಿರುವ ನಾಯಿ ಇದೇ ನೋಡಿ; ಅಬ್ಬಬ್ಬಾ ಎಷ್ಟೊಂದು ಉದ್ದವಿದೆ ಇದರ ನಾಲಿಗೆ!

ಈ ಸಂದರ್ಭದಲ್ಲಿ ಕನಕಗಿರಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು, ತಾಲೂಕು ಆರೋಗ್ಯಾಧಿಕಾರಿ ಶರಣಪ್ಪ ಚಕೋತಿ, ಮುಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಹನಾ, ಗ್ರಾ.ಪಂ ಪಿಡಿಓ ಯು.ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

Karnataka Rain : ಮಳೆ ಪ್ರಾರಂಭವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ ಹೆಚ್ಚಾಗುತ್ತದೆ. ಇಷ್ಟಕ್ಕೂ ಏನಿದು ಗುಡ್ಡದ ಭೂತದ ಕಾಟ ಅಂದರೆ ಗೋಕಾಕ ಬೆಟ್ಟದಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿ ಬೀಳುತ್ತಿವೆ.

VISTARANEWS.COM


on

By

karnataka rain
Koo

ಬೆಳಗಾವಿ: ಬೆಳಗಾವಿಯ ಗೋಕಾಕ ತಾಲೂಕಿನ ಗೋಕಾಕ ಕೊಣ್ಣೂರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಡ್ಡದ ಭೂತದ ಕಾಟ (Karnataka Rain) ಶುರುವಾಗಿದೆ. ಅದು ಕೂಡ ಮಳೆ ಪ್ರಾರಂಭವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ ಹೆಚ್ಚಾಗುತ್ತದೆ. ಇಷ್ಟಕ್ಕೂ ಏನಿದು ಗುಡ್ಡದ ಭೂತದ ಕಾಟ ಅಂದರೆ ಗೋಕಾಕ ಬೆಟ್ಟದಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿ ಬೀಳುತ್ತಿವೆ.

karnataka rain

ಗೋಕಾಕ ಹಾಗೂ ಕೊಣ್ಣೂರು ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಬಂಡೆಗಳು ಉರುಳಿ ಬೀಳುತ್ತಿವೆ. ಬೆಟ್ಟದಿಂದ ಉರುಳುತ್ತಿರುವ ಬಂಡೆಗಳಿಂದ ಸವಾರರು, ಜನರು ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಬಂಡೆಗಳ ಕೆಳಗಿನ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಬಂಡೆ ಕಲ್ಲುಗಳು ರಸ್ತೆಗೆ ಬಂದು ಬೀಳುತ್ತಿವೆ. ರಸ್ತೆಯಲ್ಲಿ ಸಂಚರಿಸುವವರು ಪ್ರಾಣ ಭಯದಲ್ಲೇ ಓಡಾಡುವಂತಾಗಿದೆ.

karnataka rain

ಕೊಚ್ಚಿ ಹೋದ ಬೈಕ್‌

ವಿಜಯಪುರದಲ್ಲಿ ನಿನ್ನೆ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಡೋಣಿ ನದಿ ಉಕ್ಕಿ ಹರಿದಿದೆ. ಪರಿಣಾಮ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ವಿಜಯಪುರ ನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆ ನೀರಲ್ಲಿ ಬೈಕ್‌ವೊಂದು ಕೊಚ್ಚಿ ಹೋದ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ. ಉಕ್ಕಿ ಹರಿಯುತ್ತಿರುವ ಮಳೆ ನೀರಲ್ಲಿ ಬೈಕ್ ಕೊಂಡೊಯ್ಯುವ ಹರಸಾಹಸದ ವೇಳೆ ಕೊಚ್ಚಿಹೋಗಿದೆ.

ಇದನ್ನೂ ಓದಿ: Electric shock : ಶಾಲೆಗೆ ಹೋದವಳು ಮಸಣ ಸೇರಿದಳು; ಕರೆಂಟ್‌ ಶಾಕ್‌ಗೆ ಒದ್ದಾಡಿ ಪ್ರಾಣಬಿಟ್ಟಳು

ಇತ್ತ ತುಮಕೂರು ಜಿಲ್ಲೆಯಲ್ಲಿ ರಾತ್ರಿ ಧಾರಕಾರ ಸುರಿದ ಮಳೆ ರಭಸಕ್ಕೆ ಕೆರೆ, ಕಟ್ಟೆಗಳು ಕೋಡಿ ಬಿದ್ದಿದ್ದವು. ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯಿರುವ ಜಂಪೇನಹಳ್ಳಿ ಕೆರೆ ನೀರಿಲ್ಲದೇ ಬತ್ತಿಹೋಗಿತ್ತು. ಇದೀಗ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಇತ್ತ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಈ ವರ್ಷದ ಮೊದಲ ಒಳಹರಿವು 1,768 ಕ್ಯೂಸೇಕ್ ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಜೂನ್ ಕಳೆದರು ಒಳಹರಿವು ಇರಲಿಲ್ಲ. ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ.

ಗ್ರಾಮಕ್ಕೆ ರಭಸವಾಗಿ ನುಗ್ಗಿದ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಕೂನಬೇವು ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ವರುಣ ಅಬ್ಬರಕ್ಕೆ ಕೊನಬೇವು ಗ್ರಾಮ ಜಲಾವೃತಗೊಂಡಿತ್ತು. ಗ್ರಾಮದ ರಸ್ತೆಯಲ್ಲಿ ನೀರು ನದಿಯಂತೆ ಹರಿದಿತ್ತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ನೀರಿನಲ್ಲಿ ಬಸ್ ಸಿಲುಕಿದ ಘಟನೆಯು ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

Karnataka Rain : ಭಾರಿ ಮಳೆಗೆ ಅವಾಂತರವು ಮುಂದುವರಿದಿದ್ದು, ಆಗುಂಬೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಕೆಲ ಗ್ರಾಮದಲ್ಲಿ ನೀರು ನುಗ್ಗಿದ್ದು, ನದಿಯಂತೆ ಸೃಷ್ಟಿಯಾಗಿದೆ.

VISTARANEWS.COM


on

By

karnataka Rain
Koo

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು (Karnataka Rain) ಮೃತಪಟ್ಟಿದ್ದಾರೆ. ನಾಗೇಂದ್ರ (40) ಸಿಡಿಲು ಬಡಿದು ಮೃತಪಟ್ಟವರು.

ಆಗುಂಬೆ ಸಮೀಪದ ಬೀದರಗೋಡು ಗ್ರಾಮದ ನಿವಾಸಿಯಾದ ನಾಗೇಂದ್ರ ಅವರು ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಎಂಬುವರ ಅಡಿಕೆ ತೋಟದಲ್ಲಿ ಕಳೆ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಭಾರಿ ಮಳೆಯೊಂದಿಗೆ ಸಿಡಿಲು ಬಡಿದಿದೆ. ಪರಿಣಾಮ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಳೆ ಶುರುವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಕಾಕ ಕೊಣ್ಣೂರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಡ್ಡದ ಭೂತದ ಕಾಟ ಶುರುವಾಗಿದೆ. ಅದು ಕೂಡ ಮಳೆ ಪ್ರಾರಂಭವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ ಹೆಚ್ಚಾಗುತ್ತದೆ. ಇಷ್ಟಕ್ಕೂ ಏನಿದು ಗುಡ್ಡದ ಭೂತದ ಕಾಟ ಅಂದರೆ ಗೋಕಾಕ ಬೆಟ್ಟದಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿ ಬೀಳುತ್ತಿವೆ.

karnataka rain

ಗೋಕಾಕ ಹಾಗೂ ಕೊಣ್ಣೂರು ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಬಂಡೆಗಳು ಉರುಳಿ ಬೀಳುತ್ತಿವೆ. ಬೆಟ್ಟದಿಂದ ಉರುಳುತ್ತಿರುವ ಬಂಡೆಗಳಿಂದ ಸವಾರರು, ಜನರು ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಬಂಡೆಗಳ ಕೆಳಗಿನ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಬಂಡೆ ಕಲ್ಲುಗಳು ರಸ್ತೆಗೆ ಬಂದು ಬೀಳುತ್ತಿವೆ. ರಸ್ತೆಯಲ್ಲಿ ಸಂಚರಿಸುವವರು ಪ್ರಾಣ ಭಯದಲ್ಲೇ ಓಡಾಡುವಂತಾಗಿದೆ.

ಇದನ್ನೂ ಓದಿ: Assault Case : ಚಿಪ್ಸ್ ಕೊಡಿಸುವ ನೆಪದಲ್ಲಿ ಮಗುವಿನ ಕತ್ತು ಕೊಯ್ದ ಕಿರಾತಕ

ವಿಜಯಪುರದಲ್ಲಿ ನಿನ್ನೆ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಡೋಣಿ ನದಿ ಉಕ್ಕಿ ಹರಿದಿದೆ. ಪರಿಣಾಮ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ವಿಜಯಪುರ ನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆ ನೀರಲ್ಲಿ ಬೈಕ್‌ವೊಂದು ಕೊಚ್ಚಿ ಹೋದ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ. ಉಕ್ಕಿ ಹರಿಯುತ್ತಿರುವ ಮಳೆ ನೀರಲ್ಲಿ ಬೈಕ್ ಕೊಂಡೊಯ್ಯುವ ಹರಸಾಹಸದ ವೇಳೆ ಕೊಚ್ಚಿಹೋಗಿದೆ.

ಇತ್ತ ತುಮಕೂರು ಜಿಲ್ಲೆಯಲ್ಲಿ ರಾತ್ರಿ ಧಾರಕಾರ ಸುರಿದ ಮಳೆ ರಭಸಕ್ಕೆ ಕೆರೆ, ಕಟ್ಟೆಗಳು ಕೋಡಿ ಬಿದ್ದಿದ್ದವು. ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯಿರುವ ಜಂಪೇನಹಳ್ಳಿ ಕೆರೆ ನೀರಿಲ್ಲದೇ ಬತ್ತಿಹೋಗಿತ್ತು. ಇದೀಗ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಇತ್ತ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಈ ವರ್ಷದ ಮೊದಲ ಒಳಹರಿವು 1,768 ಕ್ಯೂಸೇಕ್ ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಜೂನ್ ಕಳೆದರು ಒಳಹರಿವು ಇರಲಿಲ್ಲ. ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ.

ಗ್ರಾಮಕ್ಕೆ ರಭಸವಾಗಿ ನುಗ್ಗಿದ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಕೂನಬೇವು ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ವರುಣ ಅಬ್ಬರಕ್ಕೆ ಕೊನಬೇವು ಗ್ರಾಮ ಜಲಾವೃತಗೊಂಡಿತ್ತು. ಗ್ರಾಮದ ರಸ್ತೆಯಲ್ಲಿ ನೀರು ನದಿಯಂತೆ ಹರಿದಿತ್ತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ನೀರಿನಲ್ಲಿ ಬಸ್ ಸಿಲುಕಿದ ಘಟನೆಯು ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Chetan Ahimsa: ಉಪೇಂದ್ರ ಬುದ್ಧಿವಂತನಲ್ಲ, ಅವರಿಗೆ ಭ್ರಮೆ; ನಟ ಚೇತನ್ ಗೇಲಿ

Chetan Ahimsa: ‘ಪವನ್‌ ಕಲ್ಯಾಣ್‌ ಅವರನ್ನು ಗೆಲ್ಲಿಸಲು ಆಂಧ್ರ ಜನ 14 ವರ್ಷ ತಗೊಂಡ್ರು, ಉಪೇಂದ್ರ ಅವರನ್ನು (Chetan Ahimsa) ಗೆಲ್ಲಿಸಲು ಕನ್ನಡ ಜನ ಇನ್ನು ಎಷ್ಟು ವರ್ಷ ತಗೋತ್ತಾರೋ ಗೊತ್ತಿಲ್ಲ’ ಎಂಬ ಪೋಸ್ಟ್‌ ವೈರಲ್‌ ಆಗಿತ್ತು. ಈ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಚೇತನ್‌ ಅಹಿಂಸಾ ʻʻನಿಜ ಹೇಳಬೇಕೆಂದರೆ , ನೀವು (ಉಪೇಂದ್ರ) ಎಂದಿಗೂ ಬುದ್ಧಿವಂತರಾಗಿರಲಿಲ್ಲʼʼಎಂದು ಪರೋಕ್ಷವಾಗಿ ಉಪೇಂದ್ರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

VISTARANEWS.COM


on

Chetan Ahimsa says that Upendra is not intelligent he is delusional
Koo

ಬೆಂಗಳೂರು: ಆಂಧ್ರದಲ್ಲಿ ನಟ ಪವನ್‌ ಕಲ್ಯಾಣ್‌ `ಜನಸೇನಾ’ ಪಕ್ಷ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಉಪ್ಪಿ ಪರ ಪೋಸ್ಟ್‌ವೊಂದು ಹರಿದಾಡುತ್ತಿದೆ. ‘ಪವನ್‌ ಕಲ್ಯಾಣ್‌ ಅವರನ್ನು ಗೆಲ್ಲಿಸಲು ಆಂಧ್ರ ಜನ 14 ವರ್ಷ ತಗೊಂಡ್ರು, ಉಪೇಂದ್ರ ಅವರನ್ನು (Chetan Ahimsa) ಗೆಲ್ಲಿಸಲು ಕನ್ನಡ ಜನ ಇನ್ನು ಎಷ್ಟು ವರ್ಷ ತಗೋತ್ತಾರೋ ಗೊತ್ತಿಲ್ಲ’ ಎಂಬ ಪೋಸ್ಟ್‌ ವೈರಲ್‌ ಆಗಿತ್ತು. ಈ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಚೇತನ್‌ ಅಹಿಂಸಾ ʻʻನಿಜ ಹೇಳಬೇಕೆಂದರೆ , ನೀವು (ಉಪೇಂದ್ರ) ಎಂದಿಗೂ ಬುದ್ಧಿವಂತರಾಗಿರಲಿಲ್ಲʼʼ ಎಂದು ಪರೋಕ್ಷವಾಗಿ ಉಪೇಂದ್ರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಉಪ್ಪಿ ಪೋಸ್ಟ್‌ ಏನು?

‘ರಿಯಲ್​ ಸ್ಟಾರ್​’ ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷದ (Uttama Prajakeeya Party) ಮೂಲಕ ರಾಜಕೀಯದ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸೂಕ್ತ ಜನಬೆಂಬಲ ಸಿಕ್ಕಿಲ್ಲ.ಪವನ್ ಕಲ್ಯಾಣ್ (Pawan Kalyan)​ ಅವರು ಜಯಭೇರಿ ಬಾರಿಸಿ ಬಳಿಕ ನೆಟ್ಟಿಗರು ಉಪೇಂದ್ರ ಅವರಿಗೆ ಹೋಲಿಕೆ ಮಾಡಿದ್ದಾರೆ.

ಇದಾದ ಬಳಿಕ ಈ ಟ್ರೋಲ್‌ ಪೋಸ್ಟ್‌ಗೆ ಸ್ವತಃ ಉಪ್ಪಿ ಅವರೇ ಪ್ರತಿಕ್ರಿಯೆ ನೀಡಿ ʻʻವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್.. ಉಪೇಂದ್ರ ಸೋಲು ಗೆಲುವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ! ಎಂಥ ನಿಸ್ವಾರ್ಥ! ಎಂಥಾ ತ್ಯಾಗ ಮನೋಭಾವ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ. ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ. ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ…ನೆಕ್ಸ್ಟ್ ಎಲೆಕ್ಷನ್​ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ. ಆಗ್ಲೂ ನೀವ್ ಎಮೋಷನಲ್ ಪ್ರಚಾರ ಮಾಡ್ರಿ. ಸಭೆ ಸಮಾರಂಭ ಎಲ್ಲಾ ಮಾಡ್ರಿ. ಕಷ್ಟ ಪಡ್ರಿ. ಆಮೇಲೆ ಐದು ವರ್ಷ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ. ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲ್ಲರಪ್ಪೋ. ಈ ದಡ್ ನನ್ ಮಗಂಗೇ ಯಾವೋನಾದ್ರು ಇನ್ಮೇಲೆ ಬುದ್ಧಿವಂತ ಅಂದ್ರೇ ಅಷ್ಟೇ… ಸೆಂದಾಗಿರಕ್ಕಿಲ್ಲ’ ಎಂದು ಉಪೇಂದ್ರ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: Actor Chetan Ahimsa: ಮತ್ತೆ ಮೋದಿಯೇ ಪ್ರಧಾನಿ, ಆದರೆ ಬಿಜೆಪಿಗಿದು ಪಾಠ ಎಂದ ನಟ ಚೇತನ್!

ಉಪೇಂದ್ರ ಎಂದಿಗೂ ಬುದ್ಧಿವಂತರಾಗಿರಲಿಲ್ಲ!

ಇದೀಗ ಚೇತನ್‌ ಅಹಿಂಸಾ ಅವರು ಉಪೇಂದ್ರ ಅವರಿಗೆ ಪರೋಕ್ಷವಾಗಿ ಟೀಕಿಸಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ʻʻಉಪೇಂದ್ರ: ‘ಈ ದಡ್ ನನ್ ಮಗಂಗೆ ಇನ್ಮೆಲೆ ಬುದ್ಧಿವಂತ ಅಂದ್ರೆ ಅಷ್ಟೆ’

ನಿಜ ಹೇಳಬೇಕೆಂದರೆ, ನೀವು ಎಂದಿಗೂ ಬುದ್ಧಿವಂತರಾಗಿರಲಿಲ್ಲ— ನಿಮ್ಮ ಅಸಂಬದ್ಧ ಕಲ್ಪನೆಯ ಭ್ರಮೆ ಅಷ್ಟೇ”ಎಂದು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡಿದ್ದಾರೆ. ಇನ್ನು ಕೆಲವರು ʻಚೇತನ್ ಮೊದಲು ಕನ್ನಡ ಬರೆಯೋದು ಕಲೀರಿ, ಆಮೇಲೆ ಕಾಲೆಳೆಯುವ ಕೆಲಸ ಮಾಡಿʼ ಎಂದಿದ್ದಾರೆ.

ಮತ್ತೆ ಮೋದಿಯೇ ಪ್ರಧಾನಿ, ಆದರೆ ಬಿಜೆಪಿಗಿದು ಪಾಠ ಎಂದಿದ್ದ ನಟ ಚೇತನ್!

ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಆದರೆ, ಸಕಾರಾತ್ಮಕವಾಗಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಎನ್‌ಡಿಎ ಅಗತ್ಯವಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಎಕ್ಸ್‌ ಮೂಲಕ ನಟ ಚೇತನ್‌ ಅವರು ಹೇಳಿಕೊಂಡಿದ್ದರು.

“ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರ ಮುಂದುವರಿಸಬಹುದು. ಆದರೆ ಬಿಜೆಪಿಗೆ ಇದೊಂದು ದೊಡ್ಡ ಪಾಠ. ಇದರರ್ಥ ಬಿಜೆಪಿ ಹಿಂದುತ್ವ ಮತ್ತು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯಂತಹ ಒಕ್ಕೂಟ ವಿರೋಧಿ ನೀತಿಗಳನ್ನು ಅಷ್ಟು ಸುಲಭವಾಗಿ ಜಾರಿಗೆ ತರುವುದಿಲ್ಲ. ಇದು ಒಳ್ಳೆಯದೇ. ಇದು ಮೋದಿಯವರ ವಿಜಯವಲ್ಲ, ಪ್ರಜಾಪ್ರಭುತ್ವದ ವಿಜಯ” ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚೇತನ್ ಬರೆದುಕೊಂಡಿದ್ದರು.

Continue Reading

ಬೆಂಗಳೂರು

Art Exhibition : ಜುಲೈ 10ರವರೆಗೆ ಬೆಂಗಳೂರಿನಲ್ಲಿ ಯೂಸುಫ್, ಶಿಬು ಅರಕ್ಕಲ್ ಚಿತ್ರಗಳ ಪ್ರದರ್ಶನ

ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು Art Exhibition: ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ. ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ.

VISTARANEWS.COM


on

Art exhibition
Koo

ಬೆಂಗಳೂರು: ಖ್ಯಾತ ಚಿತ್ರಕಲಾವಿದ ಯೂಸುಫ್​ ಆರಕ್ಕಲ್​ ಚಿತ್ರ ಕಲಾಕೃತಿಗಳು ಹಾಗೂ ಅವರ ಪುತ್ರ ಶಿಬು ಆರಕ್ಕಲ್ ಅವರ ವಿಶೇಷ ಛಾಯಾಚಿತ್ರಗಳ ಸರಣಿಯ ಪ್ರದರ್ಶನವನ್ನು (Art Exhibition) ಸಂದೀಪ್ -ಗೀತಾಂಜಲಿ ಮೈನಿ ಫೌಂಡಶನ್ ಆಯೋಜಿಸಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆಯಲ್ಲಿರುವ ಫೌಂಡೇಶನ್ ಆವರಣದ ಮೆಜ್ಜಾನೈನ್ ಲೆವೆಲ್​ನ 38 ಮೈನಿ ಸದನ್ ನಲ್ಲಿ ಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೂನ್​ 5ರಂದು ಆರಂಭಗೊಂಡಿರುವ ಈ ಪ್ರದರ್ಶನ ಜುಲೈ 10, 2024ರವರೆಗೆ ನಡೆಯಲಿದೆ.

ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ. ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ. ತಾವು ಸ್ವತಃ ಗಂಗಾ ನದಿಯ ಕುರಿತು ಅಕರ್ಷಿತರಾಗುವ ಜತೆಗೆ ನದಿಗಾಗಿಯೇ ಜೀವನ ಸಮರ್ಪಿಸಿದವರ ಬದುಕನ್ನೂ ಚಿತ್ರಿಸಿದ್ದಾರೆ. ಪ್ರಮುಖವಾಗಿ ನದಿಯಲ್ಲಿ ದೋಣಿ ಹಾಯಿಸುವ ಮಲ್ಲಾ ಎಂಬ ಅಂಬಿಗರ ಜೀವಕ್ಕೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.ಈ ಚಿತ್ರಗಳು ಹಾಗೂ ಕಲಾಕೃತಿಗಳು ಗಂಗಾ ಸರಣಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಮಲ್ಲಾ ಎಂದು ಕರೆಯಲ್ಪಡುವ ಗಂಗಾನದಿಯ ಅಂಬಿಗರು, ಈ ಕಲಾ ಪ್ರದರ್ಶನದ ನಿರೂಪಣೆಯ ಅವಿಭಾಜ್ಯ ಭಾಗವಾಗಿದ್ದಾರೆ, ಇದನ್ನು ಶಿಬು ಅರಕ್ಕಲ್ ತನ್ನ ಕ್ಯಾಮೆರಾ ಲೆನ್ಸ್​ ಮೂಲಕ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ನೂರಾರು ವರ್ಷಗಳಿಂದ ಈ ಸಮುದಾಯವು ತಮ್ಮ ಕಾಯಕವನ್ನು ಪರಂಪರಾಗತವಾಗಿ ವರ್ಗಾಯಿಸಿಕೊಂಡು ಬಂದಿದ್ದಾರೆ. ತಂದೆಯಿದ ಮಗನಿಗೆ ಈ ಕಾಯಕವು ಸಾಗಿದೆ. ಪವಿತ್ರ ನದಿಯುದ್ದಕ್ಕೂ ಜನರನ್ನು ಒಂದು ದಡದಿಂದ ಮತ್ತೊಂಡು ದಡಕ್ಕೆ ಸಾಗಿಸಲು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಈ ಜನರು ತಮ್ಮ ದೋಣಿಗಳಿಗೆ ಬಹುತೇಕ ಸಖ್ಯ ಹೊಂದಿರುತ್ತಾರೆ ಮತ್ತು ಮರದ ದೋಣಿಗಳ ನಡುವೆಯೇ ತಮ್ಮ ಜೀವನವನ್ನು ಕಳೆಯುತ್ತಾರೆ, ತಮ್ಮೆಲ್ಲ ಲೌಕಿಕ ಅಗತ್ಯಗಳನ್ನು ದೋಣಿಯಲ್ಲಿಯೇ ನಿರ್ವಹಿಸುತ್ತಾರೆ. ಈ ನಿಗೂಢ ನದಿಯ ನಿಜವಾದ ಉಸ್ತುವಾರಿ ತಾವು ಎಂದು ಹೆಮ್ಮೆಪಡುತ್ತಾರೆ. ಮಲ್ಲಾ ಪುರುಷರು ತಮ್ಮ ಕುಟುಂಬಗಳಿಂದ ಪ್ರತ್ಯೇಕಗೊಂಡಿರುತ್ತಾರೆ ಮತ್ತು ತಾವು ಸೇವೆ ಸಲ್ಲಿಸುವ ನದಿಯೊಂದಿಗೆ ಬಲವಾದ ಬಾಂಧವ್ಯ ಹೊಂದಿರುತ್ತಾರೆ. ಎಷ್ಟೆಂದರೇ ಅವರ ಹುಟ್ಟು ದೋಣಿಯಲ್ಲಿ ಮತ್ತು ಅಲ್ಲೇ ಅವರು ಕೊನೆಯುಸಿರೆಳೆಯುತ್ತಾರೆ.

ಇದನ್ನೂ ಓದಿ : Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!

‘ಮಲ್ಲಾ’ ಶೀರ್ಷಿಕೆಯ ಛಾಯಾಚಿತ್ರ ಕಲಾಕೃತಿಗಳ ಸರಣಿಯು ಈ ದೋಣಿಯವರು ಗಂಗಾ ನದಿಯೊಂದಿ ಗೆ ಹೊಂದಿರುವ ನಂಟಿನಿಂದ ಸ್ಫೂರ್ತಿ ಪಡೆದಿದೆ. ಈ ಸರಣಿಯು ಅವರ ಜೀವನದ ಕಟು ವಾಸ್ತವ ಮತ್ತು ಅವರ ಜೀವನದ ತಿಳುವಳಿಕೆಗೆ ಕನ್ನಡಿಯಾಗಿದೆ. ಇದು ಎಂದಿಗೂ ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದ ಸಂಗತಿಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುವುದಿಲ್ಲ. ಆದರೆ ಅವರ ಸ್ವಯಂ ಅನುಭವಗಳ ರಚನೆಯಾಗಿದೆ. ಈ ಸರಣಿಯ ಮೂಲಕ ಋಷಿಮುನಿಗಳು ಮತ್ತು ಪ್ರಾಚೀನ ನಂಬಿಕೆಯನ್ನೇ ಹೋಲುವ ಭೂಮಿ ಮತ್ತು ನೀರಿನೊಂದಿಗೆ ಈ ಸಮುದಾಯ ಹೊಂದಿರುವ ಆಳ ಸಂಬಂಧವನ್ನು ಸೆರೆಹಿಡಿಯಲಾಗಿದೆ.

ತಮ್ಮ ಪುತ್ರನ ಛಾಯಾಚಿತ್ರಗಳ ಜೊತೆಗೆ ಯೂಸುಫ್ ಅರಕ್ಕಲ್ ಅವರ ಅಪರೂಪದ ಕ್ಯಾನ್ವಾಸ್ ರಚನೆಗಳೂ ಪ್ರದರ್ಶನಗೊಳ್ಳಲಿವೆ. ಇದು ಅವರಿಬ್ಬರ ಕಲಾತ್ಮಕ ಪರಂಪರೆಯ ಸಂಯೋಗವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಮಾನವನ ಸ್ಥಿತಿಯನ್ನು ಪರಿಶೀಲಿಸುವ ಉತ್ಸಾಹದ ಮತ್ತು ವಿನ್ಯಾಸದ ವರ್ಣಚಿತ್ರಗಳಿಗೆ ಹೆಸರುವಾಸಿಯಾದ ಯೂಸುಫ್ ಅರಕ್ಕಲ್, ತಮ್ಮ ಮಗನ ಮನಸ್ಸಿನಲ್ಲಿ ಸೃಜನಶೀಲತೆಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು . ಛಾಯಾಗ್ರಹಣ ವಾಸ್ತವ ಮತ್ತು ಅಮೂರ್ತ ಕಲ್ಪನೆಯ ಶಿಬು ಅರಕ್ಕಲ್ ಅವರ ತೊಡಗಿಸಿಕೊಳ್ಳುವಿಕೆಯು ಅವರ ತಂದೆಯ ಅಭಿವ್ಯಕ್ತಿ ಕೃತಿಗೆ ಸಂಪೂರ್ಣ ವಿರುದ್ಧವಾಗಿದೆ, ಆದರೂ ಅವರ ಕಾವ್ಯಾತ್ಮಕ ಚಿತ್ರಣದಲ್ಲಿ ಹೋಲಿಕೆ ಇದೆ. .
ಯೂಸುಫ್ ಅರಕ್ಕಲ್ ಅವರ ಪ್ರಭಾವ ಮತ್ತು ಶಿಬು ಅರಕ್ಕಲ್ ಅವರ ಸ್ವಂತ ಕಲಾತ್ಮಕ ವಿಕಸನವನ್ನು ಪ್ರತಿಬಿಂಬಿಸುವುದಕ್ಕಾಗಿ ‘ಗಂಗಾ’ದಂತಹ ಪ್ರದರ್ಶನ ಆಯೋಜಿಸಲಾಗಿದೆ.

ಕಲಾವಿದರ ಕುರಿತು
ಯೂಸುಫ್ ಅರಕ್ಕಲ್ (1945-2016) ಒಬ್ಬ ಭಾರತೀಯ ಪ್ರಖ್ಯಾತ ಕಲಾವಿದ, ಅಭಿವ್ಯಕ್ತಿವಾದದ ಚಳವಳಿಗೆ ನೀಡಿದ ಅಮೋಘ ಕೊಡುಗೆಗಳಿಗಾಗಿಯೇ ಸ್ಮರಣೀಯರು. ಅವರ ಪ್ರೇರಣಾದಾಯ ಮತ್ತು ಶಕ್ತಿಯುತ ಕಲಾಕೃತಿಗಳು ಮಾನವ ಭಾವನೆಗಳ ಆಳವನ್ನು ಬಿಂಬಿಸುತ್ತದೆ. ಮಾನವ ಸ್ಥಿತಿಯ ಸಂಕೀರ್ಣತೆಗಳನ್ನು ತೀವ್ರತೆಯೊಂದಿಗೆ ಚಿತ್ರಿಸಿದ ಕಲಾವಿದರಾಗಿದ್ದಾರೆ.

ಶಿಬು ಅರಕ್ಕಲ್ ಪ್ರಪಂಚದಾದ್ಯಂತದ ಶ್ರೇಷ್ಠ ವಾಸ್ತುಶಿಲ್ಪದೊಂದಿಗೆ ವ್ಯವಹರಿಸುವಾಗ ಶಕ್ತಿಯಿಂದ ಬಲಕ್ಕೆ ಹೋಗಿದ್ದಾರೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಗಮನಕ್ಕೆ ಬಾರದ ಸಣ್ಣ ವಿಷಯಗಳಿಗೆ ಹೋಗಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿ ಬಹಳ ವಿಭಿನ್ನ ಮತ್ತು ಮೂಲ ಶೈಲಿಯನ್ನು ರಚಿಸಿದ್ದಾರೆ. ದಾರಿಯುದ್ದಕ್ಕೂ ತಮ್ಮ ಕಲೆಗೆ ನಿಷ್ಠರಾಗಿದ್ದ ಅವರು ಹಲವಾರು ನಿಷ್ಠಾವಂತ ಸಂಗ್ರಾಹಕರನ್ನು ಗಳಿಸಿದ್ದಲ್ಲದೆ, ಭಾರತ ಮತ್ತು ವಿದೇಶಗಳಲ್ಲಿ ಮನ್ನಣೆಯನ್ನೂ ಗಳಿಸಿದ್ದಾರೆ. ರೊಮೇನಿಯಾದ ಅರಾದ್ ಬಿನಾಲೆ 2005 ಮತ್ತು ಇಟಲಿಯ ‘ವೆಂಟಿಪೆರ್ಟ್ರೆಂಟಾ ’04’ನಲ್ಲಿ 2007 ರಲ್ಲಿ ಲಂಡನ್ನ ರಾಯಲ್ ಕಾಲೇಜ್ ಆಫ್ ಆರ್ಟ್ ಮತ್ತು 2004 ರಲ್ಲಿ ಲಕ್ನೋದ ನ್ಯಾಷನಲ್ ಎಕ್ಸಿಬಿಷನ್ ಆಫ್ ಆರ್ಟ್ನಲ್ಲಿ ಪ್ರದರ್ಶನ ನೀಡಿದ್ದಾರೆ.

Continue Reading
Advertisement
karnataka rain
ಮಳೆ48 seconds ago

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

karnataka Rain
ಮಳೆ3 mins ago

Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

T20 World Cup
ಕ್ರೀಡೆ3 mins ago

T20 World Cup : ಪಾಕಿಸ್ತಾನ ವಿರುದ್ಧದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ ಅಮೆರಿಕ ತಂಡ ಸೌರಭ್ ನೇತ್ರವಾಲ್ಕರ್ ಯಾರು?

NDA Meeting
Lok Sabha Election 202421 mins ago

NDA Meeting: ಮತ್ತೊಮ್ಮೆ ಮೋದಿ ಸರ್ಕಾರ; ಜೂ. 9ರಂದು ಪ್ರಮಾಣ ವಚನ ಸ್ವೀಕಾರ

Chetan Ahimsa says that Upendra is not intelligent he is delusional
ಸ್ಯಾಂಡಲ್ ವುಡ್22 mins ago

Chetan Ahimsa: ಉಪೇಂದ್ರ ಬುದ್ಧಿವಂತನಲ್ಲ, ಅವರಿಗೆ ಭ್ರಮೆ; ನಟ ಚೇತನ್ ಗೇಲಿ

Art exhibition
ಬೆಂಗಳೂರು31 mins ago

Art Exhibition : ಜುಲೈ 10ರವರೆಗೆ ಬೆಂಗಳೂರಿನಲ್ಲಿ ಯೂಸುಫ್, ಶಿಬು ಅರಕ್ಕಲ್ ಚಿತ್ರಗಳ ಪ್ರದರ್ಶನ

Prajwal Revanna Case
ಪ್ರಮುಖ ಸುದ್ದಿ32 mins ago

Prajwal Revanna Case: ಮಧ್ಯಂತರ ಜಾಮೀನು ಬೆನ್ನಲ್ಲೇ ಭವಾನಿ ರೇವಣ್ಣ‌ ಪ್ರತ್ಯಕ್ಷ; ಎಸ್ಐಟಿ ವಿಚಾರಣೆಗೆ ಹಾಜರು!

Gold Rate Today
ಚಿನ್ನದ ದರ33 mins ago

Gold Rate Today: ಸತತ ಎರಡನೇ ದಿನವೂ ದುಬಾರಿಯಾದ ಚಿನ್ನ; ಇಂದಿನ ದರದ ಮಾಹಿತಿ ಇಲ್ಲಿದೆ

Assault Case
ಚಿತ್ರದುರ್ಗ54 mins ago

Assault Case : ಚಿಪ್ಸ್ ಕೊಡಿಸುವ ನೆಪದಲ್ಲಿ ಮಗುವಿನ ಕತ್ತು ಕೊಯ್ದ ಕಿರಾತಕ

Posani Krishna Murali End of Career In Tollywood
ಟಾಲಿವುಡ್1 hour ago

Posani Krishna Murali: ಟಾಲಿವುಡ್‌ನಲ್ಲಿ ಪೋಸಾನಿ ಕೃಷ್ಣ ಮುರಳಿ ವೃತ್ತಿಜೀವನ ಅಂತ್ಯ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌