KRS Brindavan | ಚಿರತೆ ಕಾಟಕ್ಕೆ ತಿಂಗಳಿನಿಂದ ಮುಚ್ಚಿದ್ದ ಕೆಆರ್‌ಎಸ್‌ ಬೃಂದಾವನ ಮತ್ತೆ ಪ್ರವೇಶ ಮುಕ್ತ - Vistara News

ಕರ್ನಾಟಕ

KRS Brindavan | ಚಿರತೆ ಕಾಟಕ್ಕೆ ತಿಂಗಳಿನಿಂದ ಮುಚ್ಚಿದ್ದ ಕೆಆರ್‌ಎಸ್‌ ಬೃಂದಾವನ ಮತ್ತೆ ಪ್ರವೇಶ ಮುಕ್ತ

KRS Brindavan | ಕೆಆರ್‌ಎಸ್‌ ಬೃಂದಾವನದಲ್ಲಿ ತಿಂಗಳ ಕಾಲ ಕಾರ್ಯಾಚರಣೆ ನಡೆಸಿದರೂ ಚಿರತೆಯು ಪತ್ತೆಯಾಗದ ಕಾರಣ ಅರಣ್ಯ ಇಲಾಖೆ ಅನುಮತಿ ಮೇರೆಗೆ ಪುನಃ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಡ್ಯ: ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಸರಿಸುಮಾರು ೨೭ ದಿನಗಳ ಕಾಲ ಬಂದ್‌ ಆಗಿದ್ದ ಕೆಆರ್‌ಎಸ್‌ ಬೃಂದಾವನವು (KRS Brindavan) ಈಗ ಪ್ರವಾಸಿಗರಿಗೆ ಮುಕ್ತವಾಗಿದ್ದು, ಬುಧವಾರದಿಂದ (ನ. ೩೦) ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಅರಣ್ಯ ಇಲಾಖೆಯು ಕೆಆರ್‌ಎಸ್‌ ಬೃಂದಾವನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅನುಮತಿ ಮೇರೆಗೆ ಬುಧವಾರದಿಂದ ಮತ್ತೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

krs brindavan garden Leopard not found

ಕೆಆರ್‌ಎಸ್‌ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿರತೆ ಕಾಣಿಸಿಕೊಂಡು ಆತಂಕವನ್ನು ಹುಟ್ಟುಹಾಕಿತ್ತು. ಅಲ್ಲದೆ, ಬೃಂದಾವನ ಆವರಣದಲ್ಲಿಯೇ ನಾಯಿ ಹಿಡಿಯಲು ಸೇರಿದಂತೆ ಒಂದೆರೆಡು ಬಾರಿ ಚಿರತೆ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಾಲ್ಕೈದು ದಿನಕ್ಕೆ ಮುಂಚಿತವಾಗಿ ಕೆಆರ್‌ಎಸ್‌ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರೊಬ್ಬರ ಮೊಬೈಲ್‌ನಲ್ಲಿ ಚಿತ್ರೀಕರಣಗೊಂಡಿತ್ತು.

ಇದನ್ನೂ ಓದಿ | Muslim college | ರಾಜ್ಯದಲ್ಲಿ 10 ಮುಸ್ಲಿಂ ಕಾಲೇಜು ಸ್ಥಾಪನೆಗೆ ವಿರೋಧ: ಬಲಿದಾನವಾದ್ರೂ ಸರಿ ತಡೀತೀವಿ ಎಂದ ಮುತಾಲಿಕ್‌

ಅರಣ್ಯ ಇಲಾಖೆ ಸಹ ಚಿರತೆ ಸಂಚರಿಸಿದ ಹಾಗೂ ಕೆಆರ್‌ಎಸ್‌ ಬೃಂದಾವನದ ಕೆಲವು ಕಡೆ ಬೋನ್‌ಗಳನ್ನು ಇಟ್ಟು ಚಿರತೆ ಸೆರೆಗೆ ಪ್ರಯತ್ನಪಟ್ಟಿದ್ದರು. ಅಲ್ಲದೆ, ಹುಡುಕಾಟವೂ ನಡೆದಿತ್ತು. ಕೆಲವು ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾವಹಿಸಲಾಗಿತ್ತು. ಎಷ್ಟೇ ಪ್ರಯತ್ನಪಟ್ಟರೂ ಚಿರತೆಯನ್ನು ಸೆರೆಹಿಡಿಯಲು ಕಷ್ಟವಾಗಿತ್ತು. ಅ. 21ರಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ ನಾಲ್ಕು ಬಾರಿ ಬೃಂದಾವನದಲ್ಲಿನ ಸಿಸಿ ಟಿವಿಯಲ್ಲಿ ಚಿರತೆ ಸಂಚರಿಸಿರುವುದು ಸೆರೆಯಾಗಿತ್ತು.

ಕೋಟಿ ರೂಪಾಯಿಗೂ ಹೆಚ್ಚು ಆದಾಯ ನಷ್ಟ
ಬೃಂದಾವನಕ್ಕೆ ಮುಕ್ತ ಪ್ರವೇಶ ಇದ್ದರೆ ವಾರದ ಮಾಮೂಲಿ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವಾರಾಂತ್ಯವಾಗಿದ್ದರೆ ಇಲ್ಲವೇ ಸರ್ಕಾರಿ ರಜಾ ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡ್ತಿದ್ದರು. ಒಬ್ಬರಿಗೆ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ೨೭ ದಿನಗಳಿಂದ ಪ್ರವೇಶ ಬಂದ್ ಆಗಿರುವ ಕಾರಣ ನಿಗಮಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗಿದೆ.

ವ್ಯಾಪಾರಿಗಳಿಗೂ ಆರ್ಥಿಕ ನಷ್ಟ
ಕಾವೇರಿ ನೀರಾವರಿ ನಿಗಮಕ್ಕಷ್ಟೇ ಅಲ್ಲದೆ ಅಲ್ಲಿನ ವ್ಯಾಪಾರಸ್ಥರಿಗೂ ನಷ್ಟ ಉಂಟಾಗಿತ್ತು. ಕೆಆರ್‌ಎಸ್‌ನ ಬೃಂದಾವನದಲ್ಲಿ ಪ್ರವಾಸಿಗರನ್ನೇ ನೆಚ್ಚಿಕೊಂಡು ನೂರಾರು ಜನ ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದರು. ಹಣ್ಣಿನ ಅಂಗಡಿ, ತಂಪು ಪಾನೀಯ, ಕರಕುಶಲ ವಸ್ತು ಮಾರಾಟ ಸೇರಿದಂತೆ ವಿವಿಧ ವ್ಯಾಪಾರ- ವಹಿವಾಟುಗಳು ನಡೆಯುತ್ತಿದ್ದವು. ಜತೆಗೆ ಬೃಂದಾವನದ ಒಳಭಾಗದಲ್ಲಿರುವ ರಾಯಲ್ ಆರ್ಕಿಡ್, ಮಯೂರ ಹೋಟೆಲ್‌ಗಳಿಗೂ ಪ್ರವಾಸಿಗರಿಲ್ಲದೆ ನಷ್ಟ ಉಂಟಾಗಿದೆ.

ಪಿಐಪಿ ತಂತ್ರಕ್ಕೆ ಮೊರೆ
ಚಿರತೆ ಸೆರೆಗೆ 8 ಕಡೆ ಬೋನ್ ಇರಿಸಿದ್ದರೂ ಸಿಕ್ಕಿಬೀಳದ ಹಿನ್ನೆಲೆಯಲ್ಲಿ ಚಿರತೆಯ ಜಾಡು ಪತ್ತೆಗೆ ಪಗ್ ಇಂಪ್ರೆಷನ್ ಪ್ಯಾಡ್ (ಪಿಐಪಿ) ತಂತ್ರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮೊರೆ ಹೋಗಿದ್ದಾರೆ. ಕೃಷಿ ಜಮೀನು ಮತ್ತು ಬೋನು ಇರಿಸಿರುವ ಕಡೆ ಪಿಐಪಿ ಟೆಕ್ನಾಲಜಿಯ ಮರಳು ಹಾಸಿಗೆಯನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ | Voter data | ವೋಟರ್‌ ಐಡಿ ಮಾತ್ರವಲ್ಲ ನಾಗರಿಕರ ಖಾಸಗಿ ಮಾಹಿತಿ ಲೂಟಿ ಆಗ್ತಿದೆ ಎಂದ ಪ್ರಿಯಾಂಕ್‌ ಖರ್ಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬಿಯರ್‌ ಕುಡಿಯುತ್ತಾ ಚಿಲ್‌ ಆಗುವ ಚಾನ್ಸ್ ಸಿಗುವುದು ಕಷ್ಟವಾಗಲಿದೆ. ಯಾಕೆಂದರೆ, ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದ ಕಾರಣ ಇನ್ನೆರಡು ತಿಂಗಳು ರಾಜ್ಯದಲ್ಲಿ ಬಿಯರ್‌ ಅಭಾವ ಉಂಟಾಗುವ ಸಾಧ್ಯತೆ ಇದೆ.

VISTARANEWS.COM


on

Beer Shortage
Koo

ಬೆಂಗಳೂರು: ಬೇಸಿಗೆಯಲ್ಲಿ ಐಸ್‌ ಕ್ರೀಂ, ಕೂಲ್‌ ಡ್ರಿಂಕ್ಸ್‌ಗೆ ಹೆಚ್ಚು ಬೇಡಿಕೆ ಇರುತ್ತದೆ. ಮತ್ತೊಂದೆಡೆ ಅದಕ್ಕಿಂತ ದುಪ್ಪಟ್ಟು ಬೇಡಿಕೆ ಬಿಯರ್‌ಗಳಿಗೆ ಇರೋದನ್ನು ಕಾಣಬಹುದು. ಆದರೆ, ಇದೀಗ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್ ಸಿಕ್ಕಿದ್ದು, ಇನ್ನೆರಡು ತಿಂಗಳ ಕಾಲ ಬಿಯರ್‌ ಸಿಗುವುದು ಕಷ್ಟವಾಗಲಿದೆ. ಯಾಕೆಂದರೆ, ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದ ಕಾರಣ ರಾಜ್ಯದಲ್ಲಿ ಬಿಯರ್ ಅಭಾವ (Beer Shortage) ಉಂಟಾಗಿರುವುದು ಕಂಡುಬಂದಿದೆ.

ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಮಾರಾಟ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಆಗುತ್ತಿಲ್ಲ. ಹೀಗಾಗಿ ಇನ್ನೂ ಎರಡು ತಿಂಗಳ ಕಾಲ ಬಿಯರ್‌ ಅಭಾವ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ | Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

ರಾಜ್ಯದಲ್ಲಿ ಪ್ರಸ್ತುತ ನಿತ್ಯ 11.50 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿದೆ. ಬೇಸಿಗೆ‌ ಮುನ್ನ ನಿತ್ಯ 8 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿತ್ತು. ಈಗ ಬೇಸಿಗೆ ಹಿನ್ನೆಲೆ ನಿತ್ಯ 2 ಲಕ್ಷ ಲೀಟರ್ ಬಿಯರ್ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಸಿಗುತ್ತಿಲ್ಲ. ಇದಕ್ಕೆ ಕಾರಣ ಬಿಯರ್ ತಯಾರಿಕೆಯಲ್ಲಿ ಭಾರಿ ಕುಂಠಿತವಾಗಿರುವುದು. ಬಿಯರ್ ಅಭಾವ ಇರುವ ಬಗ್ಗೆ ಅಬಕಾರಿ‌ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಮುಂದಿನ ಎರಡು ತಿಂಗಳ ಕಾಲ ಬಿಯರ್‌ ಅಭಾವ ಉಂಟಾಗಲಿದೆ ಎನ್ನಲಾಗಿದೆ.

ಈ ವರ್ಷದ ಆರಂಭದ ತಿಂಗಳಲ್ಲಿ ಬಿಯರ್ ಮಾರಾಟ ಕುಸಿತ ಕಂಡಿತ್ತು. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.30 ಮಾರಾಟ ಹೆಚ್ಚಳವಾಗಿದೆ. ಅಗತ್ಯ ಇರುವಷ್ಟು ಬಿಯರ್ ಸಂಗ್ರಹ ಇದೆ ಎಂದು ಅಬಕಾರಿ ಇಲಾಖೆ ಮೂಲಗಳಿಂದ ಕಳೆದ ತಿಂಗಳು ತಿಳಿದುಬಂದಿತ್ತು. ಆದರೆ, ಇದೀಗ ಬಿಯರ್‌ಗೆ ಭಾರಿ ಬೇಡಿಕೆ ಉಂಟಾಗಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡ ಬಿಯರ್‌ ಉತ್ಪಾದನೆ ಕುಸಿಯಲು ಕಾರಣವಾಗಿದೆ. ಇನ್ನು ಸಾರಿಗೆ ಸಮಸ್ಯೆ, ಚುನಾವಣೆ ಸಮಯದಲ್ಲಿ ಮಳಿಗೆಗಳಲ್ಲಿ ಹೆಚ್ಚುವರಿ ಮದ್ಯ, ಬಿಯರ್‌ ಸಂಗ್ರಹಣೆ ಮೇಲೆ ನಿರ್ಬಂಧ ಹೇರಿರುವುದು ಕೂಡ ಬಿಯರ್‌ ಪೂರೈಕೆ ಕುಸಿಯಲು ಕಾರಣವಾಗಿದೆ.

ಇದನ್ನೂ ಓದಿ | Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

ಬಿಸಿಲಿನ ಝಳದಿಂದ ಹೊರಬರಲು ಜನರು ಹಾಟ್ ಡ್ರಿಂಕ್ಸ್‌ಗಳಿಗಿಂತ ಬೇಸಿಗೆಯಲ್ಲಿ ಬಿಯರ್ ಹೆಚ್ಚು ಕುಡಿಯುತ್ತಾರೆ. ಜತೆಗೆ ಈ ವರ್ಷ ಮಾರಾಟ ಹೆಚ್ಚಳವಾಗಲು ಲೋಕಸಭಾ ಚುನಾವಣೆಯ ಕೊಡುಗೆಯೂ ಇದೆ. ಬಿಯರ್ ಕುಡಿದರೆ ಬಿಸಿಲ ಧಗೆಯಿಂದ ಹೊರಬರಬಹುದು ಎಂದು ನಂಬಲಾಗಿದ್ದು, ಇದು ಬಿಯರ್ ಬಳಕೆ ಹೆಚ್ಚಳವಾಗಲು ಕಾರಣವಾಗಿದೆ. ಇನ್ನು ಮದ್ಯ ಮಾರಾಟದಿಂದ ಈ ವರ್ಷ ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಆರಂಭದಲ್ಲಿಯೇ ಉತ್ತಮ ಮಾರಾಟ ಕಂಡು ಬಂದಿರುವುದರಿಂದ ಆದಾಯ ಹೆಚ್ಚುವ ನಿರೀಕ್ಷೆ ಇದೆ.

Continue Reading

Lok Sabha Election 2024

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

Lok Sabha Election 2024: ಮೇ 7ಕ್ಕೆ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯಲಿದ್ದು, ಮತದಾರರು ಊರುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಊರಿಗೆ ತೆರಳು ಪ್ರಯಾಣಿಕರಿಗೆ ಖಾಸಗಿ ಬಸ್ (Bus Fare) ಮಾಲೀಕರು ಬೇಕಾಬಿಟ್ಟಿ ಟಿಕೆಟ್‌ ದರ ಏರಿಕೆ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

VISTARANEWS.COM


on

By

lok sabha Election 2024 Bus Fare Hike
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಮತ ಹಾಕಲು ಜನರು ಕೆಲಸ ಕಾರ್ಯಕ್ಕೆ ವಿರಾಮ ನೀಡಿ, ತಮ್ಮ ಊರುಗಳತ್ತ ತೆರಳಲು ಸಿದ್ಧರಾಗುತ್ತಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಖಾಸಗಿ ಬಸ್‌ ಮಾಲೀಕರು, ಟಿಕೆಟ್‌ ದರವನ್ನು ಹೆಚ್ಚು ಮಾಡಿ ಪ್ರಯಾಣಿಕರಿಂದ ವಸೂಲಿಗೆ (Bus Fare) ಇಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮತದಾನದ ಹಬ್ಬವನ್ನು ಆಚರಿಸಲು ಹೊರಟಿರುವ ಮತದಾರರ ಬಳಿ ಖಾಸಗಿ ಬಸ್‌ ಮಾಲೀಕರು ಲೂಟಿಗೆ ಇಳಿದಿದ್ದಾರೆ‌. ದೇಶದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಈ ಬಾರಿ ನಮ್ಮ ರಾಜ್ಯದಲ್ಲೂ ಕೂಡ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಕಳೆದ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ಮುಗಿದಿದೆ.

ಇನ್ನು ಮೇ.7ರಂದು ನಡೆಯಲಿರುವ 2ನೇ ಹಂತದ ಮತದಾನಕ್ಕಾಗಿ ಜನರು ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಬೇಕಾಬಿಟ್ಟಿ ದರ ಏರಿಕೆ ಮಾಡಿ, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇನ್ನು ಈ ಕುರಿತು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರನ್ನ ಕೇಳಿದರೆ, ಶಕ್ತಿ ಯೋಜನೆಯ ಎಫೆಕ್ಟ್ ಜತೆಗೆ ಕೋವಿಡ್ ನಂತರ ಖಾಸಗಿ ಬಸ್ ಗಳಿಗೆ ಹೊಡೆತ ಬಿದ್ದಿದೆ. ಇನ್ನು ರಜಾ ದಿನಗಳು ಹಾಗೂ ಹಬ್ಬದ ಸಂದರ್ಭದಲ್ಲಿ ದರ ಏರಿಕೆ ಮಾಡುವುದು ಸಹಜ ಎಂದು ಹೇಳುತ್ತಿದ್ದಾರೆ.

ಪ್ರಯಾಣಿಕರಿಂದ ಬೇಕಾ ಬಿಟ್ಟಿ ವಸೂಲಿ ಮಾಡುತ್ತಿದ್ದರೂ ಕೂಡ ಇದುವರೆಗೂ ಸಾರಿಗೆ ಇಲಾಖೆ ಅಧಿಕಾರಿಗಳು, ನಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ದರ ಏರಿಕೆ ಮಾಡಿದರೆ ಪ್ರಯಾಣಿಕರು ಕೂಡ ಊರುಗಳತ್ತ ತೆರಳುವುದಿಲ್ಲ. ಮಹಿಳೆಯರು ಫ್ರೀ ಬಸ್‌ ಏರಬಹುದು, ಆದರೆ ಪುರುಷ ಪ್ರಯಾಣಿಕರು ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್‌ ಕೆಂಡಾಮಂಡಲ; ಅಂತಹದ್ದೇನಿದೆ?

Prajwal Revanna Case: ಪ್ರಜ್ವಲ್‌ಗೆ ವೋಟ್‌ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್‌; ಬಿಜೆಪಿಯಿಂದ ಫುಲ್‌ ಕ್ಲಾಸ್‌!

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ರಾಜಕೀಯವಾಗಿ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಪ್ರಜ್ವಲ್‌ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿದ್ದಾರೆ. ಅವರು ಅತ್ಯಾಚಾರಿ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಈಗ ಬಿಜೆಪಿ ತಿರುಗೇಟು ನೀಡಿದೆ. ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಈ ಬಗ್ಗೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರ ಪರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ. ಈಗ ಇದಕ್ಕೆ ಸಿಎಂ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.‌ ಅಶೋಕ್‌, 2019ರ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಭಾಷಣದ ವಿಡಿಯೊವನ್ನು ಪ್ಲೇ ಮಾಡಿದ್ದಾರೆ. 2019ರ ಏಪ್ರಿಲ್ 17ರಂದು ಕಡೂರಿನ ಎಪಿಎಂಸಿಯಲ್ಲಿ ಸ್ವತಃ ಪ್ರಜ್ವಲ್ ರೇವಣ್ಣ ಅವರನ್ನು ಸಿದ್ದರಾಮಯ್ಯ ಪಕ್ಕದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡಿದ್ದರು.

ಪ್ರಜ್ವಲ್‌ ರೇವಣ್ಣ ಯಂಗ್ ಸ್ಟಾರ್‌ ಇದ್ದಾನೆ. ಪ್ರತಿಭಾವಂತ ಇದ್ದಾನೆ. ಹಾಗಾಗಿ ನಮ್ಮ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಗೆಲ್ಲಿಸಿಕೊಡಿ. ಹಾಸನದ ಅಭಿವೃದ್ಧಿಗೆ ಕೆಲಸ‌ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್‌ ಪಕ್ಷಕ್ಕೆ ಶಕ್ತಿ ನೀಡಿ, ತೆನೆ ಹೊತ್ತ ಮಹಿಳೆಗೆ ಮತ ನೀಡಿ ಅಂತ ಮನವಿ ಮಾಡಿ (17-4-2019ರಲ್ಲಿ) ಟ್ವೀಟ್ ಮಾಡಿದ್ದರು. ನಾನು ಹೇಳಿದರೆ ಸುಳ್ಳು ಎಂದು ಹೇಳುತ್ತಾರೆ. ಇಲ್ಲಿ ನೋಡಿ ಅವರದ್ದೇ ಟ್ವೀಟ್ ಇದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಪ್ರದರ್ಶನ ಮಾಡಿದರು.

ಈಗ ಹೇಳಿ ಸಿದ್ದರಾಮಯ್ಯ ಅವರೇ!

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಈ ಹಿಂದಿನ ಭಾಷಣವನ್ನು ಸಹ ಮಾಧ್ಯಮದವರ ಮುಂದೆ ಪ್ಲೇ ಮಾಡಿದರು. ಈಗ ದಾಖಲೆ ಬಿಡುಗಡೆ ಮಾಡಿದ್ದೇನೆ. ಈಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕು. ಯಂಗ್ ಮತ್ತು ವಿಷನ್ ಲೀಡರ್ ಅಂತ ಹೇಳಿದ್ದೀರಿ. ನಮ್ಮದು ಮುಂದಿನ ಐದು ವರ್ಷಗಳ ವಿಷನ್‌ ಇದೆ. ಪ್ರಜ್ವಲ್‌ ಗೆದ್ದರೆ ಅದನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಿರಲ್ಲವೇ? ಪ್ರಜ್ವಲ್‌ ಅವರನ್ನು ಜೆಡಿಎಸ್‌ನಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಅವರು ಕಳೆದ ಬಾರಿ ನಮ್ಮ‌ ಹೊಂದಾಣಿಕೆಯಿಂದ ಗೆದ್ದಿಲ್ಲ. ನಿಮ್ಮ ಮೈತ್ರಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ ಎಂದು ಕಿಡಿಕಾರಿದರು.

Prajwal Revanna Case Siddaramaiah tweets vote for Prajwal Full class from BJP

ಎಚ್.ಡಿ. ರೇವಣ್ಣ ಮೊಬೈಲ್‌ ವಶಕ್ಕೆ? ಟೆಕ್ನಿಕಲ್‌ ಎವಿಡೆನ್ಸ್‌ ಕಲೆ ಹಾಕಲು ಮುಂದಾದ ಎಸ್‌ಐಟಿ!

ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಈಗಾಗಲೇ ಬಂಧನದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಅಲ್ಲದೆ, ಅವರ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿರುವುದರಿಂದ ಎಸ್‌ಐಟಿ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆಯನ್ನು ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧವಾಗಲೀ ಅಥವಾ ಎಸ್‌ಐಟಿ ವಿರುದ್ಧವಾಗಲೀ ಯಾರೂ ಬೊಟ್ಟು ಮಾಡಬಾರದು ಎಂಬ ನಿಟ್ಟಿನಲ್ಲಿ ತನಿಖೆಯ ಜತೆ ಜತಗೆ ಸಾಕ್ಷ್ಯಗಳ ಸಂಗ್ರಹಕ್ಕೂ ಮುಂದಾಗಲಾಗಿದೆ.

ಈ ಸಂಬಂಧ ಈಗ ಎಸ್.ಐ.ಟಿ ಅಧಿಕಾರಿಗಳಿಂದ ಎಚ್.ಡಿ. ರೇವಣ್ಣ ಅವರ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಎಚ್‌.ಡಿ. ರೇವಣ್ಣ ಅವರ ಮೊಬೈಲ್ ಸೀಜ್ ಮಾಡಿ ಡೇಟಾ ಪರಿಶೀಲನೆ ಮಾಡಲಾಗುತ್ತಿದೆ. ರೇವಣ್ಣ ಮೊಬೈಲ್ ಚಾಟಿಂಗ್, ಕಾಲ್ ಸಿಡಿಆರ್ ಪರಿಶೀಲನೆಗೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಈಗ ಎಚ್‌.ಡಿ. ರೇವಣ್ಣ ಅವರನ್ನು ಕಿಡ್ನ್ಯಾಪ್‌ ಕೇಸ್ ಅಡಿ ಬಂಧಿಸಿರುವುದರಿಂದ ಟೆಕ್ನಿಕಲ್ ಎವಿಡೆನ್ಸ್ ಅನ್ನು ಸಂಗ್ರಹ ಮಾಡಬೇಕಾಗುತ್ತದೆ. ಹೀಗಾಗಿ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಈ ಮೊಬೈಲ್‌ನಲ್ಲಿ ಡಿಲಿಟ್‌ ಆಗಿರುವ ಡೇಟಾಗಳನ್ನೂ ರಿಟ್ರೀವ್‌ ಮಾಡಿ ಅವುಗಳನ್ನು ಸಾಕ್ಷ್ಯವೆಂದು ಪರಿಗಣಿಸಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್‌ ಪರಿಶೀಲನೆಯಲ್ಲಿ ಈಗ ಎಸ್‌ಐಟಿ ತಂಡವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮೈಸೂರು

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Book Release: ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Ithichanda Ramesh Uthappaʼs Four books to be released in Mysore on May 9
Koo

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನ ಹಾಗೂ ಮೈಸೂರು ಕಲ್ಚರಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಮೇ 9ರಂದು ಬೆಳಗ್ಗೆ 10.30ಕ್ಕೆ ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್‌ ಉತ್ತಪ್ಪ (Ithichanda Ramesh Uthappa) ಅವರ ವನ್ಯಜೀವಿಗಳ ಕುರಿತ 4 ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು (Book Release) ನಗರದ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಉದ್ಘಾಟಿಸಲಿದ್ದು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಭಾಗವಹಿಸಲಿದ್ದಾರೆ.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಹಾಜರಿರಲಿದ್ದಾರೆ.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಪ್ರೊ. ಎನ್. ಮಮತ, ಪುಸ್ತಕಗಳ ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶಕ ಚೇತನ್ ಕಣಬೂರು, ಮೈಸೂರು ಕಲ್ಬರಲ್ ಅಸೋಸಿಯೇಷನ್‌ನ ಎ.ಪಿ.ನಾಗೇಶ್ ಉಪಸ್ಥಿತರಿರಲಿದ್ದಾರೆ.

ಬಿಡುಗಡೆಯಾಗಲಿರುವ ಕೃತಿಗಳು

  • ಕಾಡು ಹೇಳಿದ ಕಥೆ: ವೈಲ್ಡ್‌ ಲೈಫ್ ರಿಪೋರ್ಟಿಂಗ್
  • ಹಾವು: ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ
  • ಆನೆ: ಬದಲಾದ ವರ್ತನೆ
  • ಅರ್ಜುನ ನಿನ್ನ ಮರೆಯಲೆಂತು ನಾ..!
Continue Reading

ಮಳೆ

Karnataka Weather :ಮಳೆಯ ಕಣ್ಣಾ ಮುಚ್ಚಾಲೆ ಆಟ; ವರುಣ ದೇವನ ತಲೆ ಮೇಲೆ ಹೊತ್ತು ತಿರುಗಿದ ಗ್ರಾ.ಪಂ ಪಿಡಿಒ

Karnataka Weather Forecast : ರಾಜ್ಯದಲ್ಲಿ ಆಗಾಗ ಮಳೆಯು (Rain News) ದರ್ಶನ ಕೊಡುತ್ತಿದ್ದರೂ, ಸೂರ್ಯನ ಶಾಖಕ್ಕೆ ಭೂಮಿ ಕಾದ ಕೆಂಡವಾಗುತ್ತಿದೆ. ಬಿಸಿಲ ಧಗೆಯು ಹೆಚ್ಚಾಗುತ್ತಲೇ ಇದ್ದು, ಮಳೆಗಾಗಿ ತಾವರೆಕೆರೆ ಗ್ರಾ.ಪಂ ಪಿಡಿಓ ವರುಣ ದೇವನನ್ನು ಪ್ರತಿಷ್ಠಾಪಿಸಿ ತಲೆ ಮೇಲೆ ಹೊತ್ತು ಪೂಜೆ ಸಲ್ಲಿಸಿದ್ದಾರೆ.

VISTARANEWS.COM


on

By

Karnataka Weather Forecast
ದೇವರ ಮೊರೆ ಹೋದ ತಾವರೆಕೆರೆ ಗ್ರಾ.ಪಂ ಪಿಡಿಒ
Koo

ತುಮಕೂರು/ಬೆಂಗಳೂರು: ಬಿಸಿಲ ಬೇಗೆಗೆ ಬೇಸತ್ತ ಜನರು ಮಳೆಗಾಗಿ (Rain News) ದೇವರ ಮೊರೆ ಹೋಗುತ್ತಿದ್ದಾರೆ. ಮಳೆರಾಯನ (Karnataka Weather Forecast) ಕಣ್ಣಾಮುಚ್ಚಾಲೆ ಆಟ ನಿಲ್ಲಿಸಲೆಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಮಳೆಗಾಗಿ ಪೂಜೆ ನಡೆದಿದೆ.

ತಾವರೆಕೆರೆ ಗ್ರಾ.ಪಂ ಪಿಡಿಒ ನಾಗರಾಜ್ ಅವರು ಸ್ವತಃ ಮಳೆರಾಯನ ಹೊತ್ತು ಜಲಾಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು. ವರುಣ ದೇವನನ್ನು ಪ್ರತಿಷ್ಠಾಪಿಸಿ ನಂತರ ತಲೆ ಮೇಲೆ ಹೊತ್ತು ಮನೆ ಮನೆಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು. ಭೀಕರ ಬರಗಾಲ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

ಇನ್ನೂ‌ ಶನಿವಾರದಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರದ ಎಂ.ಎಂ ಹಿಲ್ಸ್‌ನಲ್ಲಿ 4 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 44.7 ಡಿ.ಸೆ ದಾಖಲಾಗಿತ್ತು.

ಇದನ್ನೂ ಓದಿ: Heat Wave: ಬಿಸಿಲಿನ ಬೇಗೆಗೆ ಹೈರಾಣಾದ ದೇಶ; ಹಲವು ಭಾಗಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ದಾಖಲು

ಮತ್ತಷ್ಟು ದಿನ ಬಿಸಿಲ ತಾಪ

ರಣಬಿಸಿಲು, ಉಷ್ಣಗಾಳಿ ಹೊಡೆತಕ್ಕೆ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಮತ್ತಷ್ಟು ದಿನ ಬಿಸಿಲ ತಾಪ ಹೆಚ್ಚಾಗಲಿದ್ದು, ಆರೋಗ್ಯದ ಕಾಳಜಿ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉಷ್ಣತೆಯು ಇದ್ದಕ್ಕಿದ್ದಂತೆ ತೀಕ್ಷ್ಣವಾಗಿ ಮೇಲೇರಿ, ತನ್ನ ಸಾಮಾನ್ಯ ಮಟ್ಟವನ್ನು ಮೀರುವುದನ್ನು ಶಾಖದ ಅಲೆಗಳು ಅಥವಾ ಹೀಟ್‌ವೇವ್‌ ಎನ್ನಲಾಗುತ್ತದೆ. ಸದ್ಯ ಸಾಮಾನ್ಯ ಮಟ್ಟವನ್ನು ಮೀರಿ, ಉಷ್ಣತೆ ಮೇಲೇರುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಸುಸ್ತು, ಆಯಾಸ, ಎಚ್ಚರ ತಪ್ಪುವುದು ಆಗಲಿದೆ. ಹೀಗಾಗಿ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.

ಮೇ.8ರವೆರೆಗೆ ಹೀಟ್‌ ವೇವ್‌ ಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಲಿದೆ.

ಮಳೆ ಸೂಚನೆ ಇದ್ಯಾ?

ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇದರ ಹೊರತಾಗಿಯೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಕೊಡಗು, ಹಾಸನದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜತೆಗೆ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜಧಾನಿ ಬೆಂಗಳೂರಲ್ಲಿ ಮತ್ತೆ ತಾಪಮಾನ ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನಿರ್ಮಲ ಆಕಾಶ ಇರಲಿದ್ದು, ಗರಿಷ್ಠ ಉಷ್ಣಾಂಶವು 39ರ ಗಡಿ ದಾಟಲಿದೆ.‌ ಜತೆಗೆ ಆಗಾಗ ಗಾಳಿ ವೇಗವು ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Beer Shortage
ಕರ್ನಾಟಕ13 mins ago

Beer Shortage: ಬೇಸಿಗೆಯಲ್ಲಿ ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Torn Jeans Styling Tips
ಫ್ಯಾಷನ್26 mins ago

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

lok sabha Election 2024 Bus Fare Hike
Lok Sabha Election 202428 mins ago

Lok Sabha Election 2024 : ಮತದಾನದ ಹಬ್ಬದಲ್ಲೂ ಲೂಟಿಗೆ ಇಳಿದ ಖಾಸಗಿ ಬಸ್‌! ವೋಟ್‌ ಹಾಕಲು ಬಸ್‌ ಏರುವವರಿಗೆ ಟಿಕೆಟ್ ದುಬಾರಿ!‌

IPL 2024
Latest30 mins ago

IPL 2024 : ಚೆನ್ನೈ ತಂಡದ ಮಾರಕ ಬೌಲರ್ ಮಹೀಶ್​ ಪತಿರಾನಾ​ ಐಪಿಎಲ್​ನಿಂದ ಹೊರಕ್ಕೆ

MI vs SRH
ಕ್ರೀಡೆ1 hour ago

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

Kavitha Gowda chandan expected First Child
ಕಿರುತೆರೆ1 hour ago

Kavitha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿʻಲಕ್ಷ್ಮೀಬಾರಮ್ಮʼ ಧಾರಾವಾಹಿ ಖ್ಯಾತಿಯ ಜೋಡಿ

Met Gala 2024 Alia Bhatt attend
ಬಾಲಿವುಡ್1 hour ago

Met Gala 2024: ಮೆಟ್‌ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!

IPL2024
ಕ್ರೀಡೆ1 hour ago

IPL 2024 : ಮ್ಯಾಕ್ಸಿ ಐಪಿಎಲ್​ನಲ್ಲಿ ಬರೀ ಬೂಸಿ; ಮ್ಯಾಕ್ಸ್​ವೆಲ್​ ಆಟಕ್ಕೆ ಅಭಿಮಾನಿಗಳ ಆಕ್ರೋಶ

Job Alert
ಉದ್ಯೋಗ1 hour ago

Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 7ರೊಳಗೆ ಅಪ್ಲೈ ಮಾಡಿ

Ithichanda Ramesh Uthappaʼs Four books to be released in Mysore on May 9
ಮೈಸೂರು1 hour ago

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ7 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌