Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌ - Vistara News

South Cinema

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavathi: ಚಲನಚಿತ್ರ ರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ನೇ ಸಾಲಿನಲ್ಲಿ ಲೀಲಾವತಿ ಅವರಿಗೆ ಕರ್ನಾಟಕ ಸರ್ಕಾರ ನೀಡಿದೆ. ಲೀಲಾವತಿ ಅವರ ಕಲಾ ಸಾಧನೆಯನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯವು 2008ರಲ್ಲಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ.

VISTARANEWS.COM


on

Actress Leelavati and Rajkumar film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ (Actress Leelavathi) ಕನ್ನಡ ಮಾತ್ರವಲ್ಲದೆ, ವಿವಿಧ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪೈಕಿ ಕನ್ನಡದಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಿವೆ. ನಾಯಕಿಯಾಗಷ್ಟೇ ಅಲ್ಲದೆ, ಪೋಷಕ ಪಾತ್ರಗಳಲ್ಲಿಯೂ ಲೀಲಾವತಿ ಮಿಂಚಿದ್ದಾರೆ. ಇವರ ಕಲಾ ಸೇವೆಗೆ ಅನೇಕ ಪ್ರಶಸ್ತಿಗಳು ಸಹ ಅರಸಿ ಬಂದಿದೆ.

ಚಲನಚಿತ್ರ ರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿಯಾದ ಡಾ. ರಾಜಕುಮಾರ್ ಪ್ರಶಸ್ತಿಯನ್ನು (Dr Rajkumar Award) 1999-2000ನೇ ಸಾಲಿನಲ್ಲಿ ಲೀಲಾವತಿ ಅವರಿಗೆ ಕರ್ನಾಟಕ ಸರ್ಕಾರ ನೀಡಿದೆ. ಲೀಲಾವತಿ ಅವರ ಕಲಾ ಸಾಧನೆಯನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯವು 2008ರಲ್ಲಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ.

ಬೆಳ್ತಂಗಡಿಯಲ್ಲಿ ಜನನ

ಲೀಲಾ ಕಿರಣ್ (ಲೀಲಾವತಿ) ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ಲೀಲಾವತಿ 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಬಳಿಕ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಇನ್ನು ಡಾ. ರಾಜ್‌ಕುಮಾರ್‌ ಜತೆಗೆ ನಾಯಕಿಯಾಗಿ ನಟಿಸಿದ್ದು ಮಾತ್ರವಲ್ಲದೆ, ಕಾಲಾ ನಂತರದಲ್ಲಿ ಅವರಿಗೆ ತಾಯಿಯಾಗಿಯೂ ನಟಿಸಿದ್ದಾರೆ. 1970ರ ಬಳಿಕ ಲೀಲಾವತಿ ಪೋಷಕ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು. ಅನಾರೋಗ್ಯದ ಹಿನ್ನಲೆಯಲ್ಲಿ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ನೆಲಮಂಗಲದಲ್ಲಿ ತಮ್ಮ ಪುತ್ರ ವಿನೋದ್‌ ರಾಜ್‌ ಜತೆಗೆ ವಾಸವಾಗಿದ್ದರು.

ನಾಟಕ, ರಂಗಭೂಮಿ ಬಗೆಗೆ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು. ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು..

ಚಿತ್ರ ಜೀವನ

ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ, ಅಲ್ಲಿಂದ ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದ್ದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದರು.

ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ ಆಗಿದೆ. ರಾಜ್‌ಕುಮಾರ್‌ ಅವರ ಜತೆ ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು.

ಮೋಡಿ ಮಾಡಿದ ರಾಜ್‌ಕುಮಾರ್ ಮತ್ತು ಲೀಲಾವತಿ ಜೋಡಿ

ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್‌ಕುಮಾರ್ ಮತ್ತು ಲೀಲಾವತಿ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲವು ಚಿತ್ರಗಳಲ್ಲಿ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.

ಪ್ರಶಸ್ತಿ-ಪುರಸ್ಕಾರಗಳು

  • 2008 – ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
  • 2006- ಅತ್ತ್ಯುತ್ತಮ ಪೋಷಕನಟಿ ಫಿಲಂಫೇರ್ ಕನ್ನಡ – ಕನ್ನಡದ ಕಂದ
  • 1999-2000 – ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ಅತ್ತ್ಯುತ್ತಮ ಪೋಷಕನಟಿ ಪ್ರಶಸ್ತಿ

  • 1960-70-ಗೆಜ್ಜೆಪೂಜೆ
  • 1971-72-ಸಿಪಾಯಿ ರಾಮು
  • 1989-90- ಡಾಕ್ಟರ್ ಕೃಷ್ಣ

ಇದನ್ನೂ ಓದಿ: Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

ಲೀಲಾವತಿ ಅಭಿನಯದ ಪ್ರಮುಖ ಚಿತ್ರಗಳ ಲಿಸ್ಟ್‌ ಇಲ್ಲಿದೆ

  • 1958 ಮಾಂಗಲ್ಯ ಯೋಗ ಮೊದಲ ಚಿತ್ರ
  • 1958 ಭಕ್ತ ಪ್ರಹ್ಲಾದ ಕನ್ನಡ
  • 1959 ರಾಜ ಮಲಯ ಸಿಂಹ
  • 1959 ಅಬ್ಬಾ ಆ ಹುಡುಗೀ
  • 1959 ಧರ್ಮ ವಿಜಯ
  • 1960 ದಶಾವತಾರ
  • 1960 ರಣಧೀರ ಕಂಠೀರವ
  • 1960 ರಾಣಿ ಹೊನ್ನಮ್ಮ
  • 1961 ಕೈವಾರ ಮಹಾತ್ಮೆ
  • 1961 ಕಣ್ತೆರೆದು ನೋಡು
  • 1961 ಕಿತ್ತೂರು ಚೆನ್ನಮ್ಮ ಕನ್ನಡ ವೀರವ್ವ
  • 1962 ಗಾಳಿ ಗೋಪುರ
  • 1962 ಕರುಣೆಯೇ ಕುಟುಂಬದ ಕಣ್ಣು
  • 1962 ಭೂದಾನ (ಉದಯ ಕುಮಾರ್, ರಾಜಕುಮಾರ್, ಕಲ್ಯಾಣ್ ಕುಮಾರ್ ಅವರೊಂದಿಗೆ)
  • 1962 ಮನ ಮೆಚ್ಚಿದ ಮಡದಿ
  • 1962 ನಂದಾ ದೀಪ (ಉದಯ ಕುಮಾರ್, ರಾಜಕುಮಾರ್)
  • 1962 ಪತ್ತಿನಾಥರ್ (ಮೊದಲ ತಮಿಳು ಚಲನಚಿತ್ರ)
  • 1962 ರಾಣಿ ಚನಮ್ಮ
  • 1962 ರತ್ನ ಮಂಜರಿ
  • 1962 ಸುಮೈತಾಂಗಿ (ತಮಿಳು)
  • 1962 ವಾಲರ್ ಪಿರೈ (ತಮಿಳು ಚಲನಚಿತ್ರ – ಶಿವಾಜಿ ಗಣೇಶನ್ ಜತೆ)
  • 1962 ವಿಧಿ ವಿಲಾಸ
  • 1963 ಕುಲವಧು
  • 1963 ಕನ್ಯಾರತ್ನ
  • 1963 ಕಲಿತರು ಹೆಣ್ಣೆ
  • 1963 ಬೇವು ಬೆಲ್ಲ
  • 1963 ಜೀವನ ತರಂಗ
  • 1963 ಮಲ್ಲಿ ಮದುವೆ
  • 1963 ಮನ ಮೆಚ್ಚಿದ ಮಡದಿ
  • 1963 ಸಂತ ತುಕಾರಾಂ (ಕನ್ನಡ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಿನಿಮಾ- ರಾಜಕುಮಾರ್ ಅವರೊಂದಿಗೆ)
  • 1963 ವಾಲ್ಮೀಕಿ (ತೆಲುಗು ಚಲನಚಿತ್ರ – ಎನ್‌.ಟಿ. ರಾಮರಾವ್ ಅವರೊಂದಿಗೆ)
  • 1963 ವಾಲ್ಮೀಕಿ ಕನ್ನಡ
  • 1963 ವೀರ ಕೇಸರಿ ಕನ್ನಡ (ರಾಜ್‌ಕುಮಾರ್ ಜತೆ)
  • 1964 ಮರ್ಮಯೋಗಿ (ಮೊದಲ ತೆಲುಗು ಚಲನಚಿತ್ರ)
  • 1964 ಶಿವರಾತ್ರಿ ಮಹಾತ್ಮೆ
  • 1964 ತುಂಬಿದ ಕೊಡ (ಕನ್ನಡ ರಾಜ್ಯ ಪ್ರಶಸ್ತಿ)
  • 1965 ಚಂದ್ರಹಾಸ
  • 1965 ಇದೇ ಮಹಾಸುದಿನ
  • 1965 ಮದುವೆ ಮಡಿ ನೋಡು (ರಾಜಕುಮಾರ್ ಅವರೊಂದಿಗೆ – ಕನ್ನಡ ರಾಷ್ಟ್ರೀಯ ಪ್ರಶಸ್ತಿ)
  • 1965 ನಾಗ ಪೂಜಾ
  • 1965 ವಾತ್ಸಲ್ಯ
  • 1965 ವೀರ ವಿಕ್ರಮ (ಉದಯ ಕುಮಾರ್ ಜತೆ)
  • 1966 ಮೋಹಿನಿ ಭಸ್ಮಾಸುರ
  • 1966 ಪ್ರೇಮಮಯಿ
  • 1966 ಪಾದುಕಾ ಪಟ್ಟಾಭಿಷೇಕಮು
  • 1966 ತೂಗು ದೀಪ
  • 1967 ಗಂಗೆ ಗೌರಿ ಕನ್ನಡ
  • 1968 ಅಣ್ಣ ತಮ್ಮ ಕನ್ನಡ
  • 1968 ಅತ್ತೆಗೊಂದು ಕಾಲ ಸೊಸೆಗೊಂದು
  • 1968 ಭಾಗ್ಯ ದೇವತೆ
  • 1968 ಮಮತೆ
  • 1969 ಕಲ್ಪವೃಕ್ಷ
  • 1969 ಬೃಂದಾವನ
  • 1969 ಗೆಜ್ಜೆ ಪೂಜೆ (ಕನ್ನಡ ರಾಜ್ಯ ಪ್ರಶಸ್ತಿ)
  • 1970 ಆರು ಮೂರು ಒಂಭತ್ತು
  • 1970 ಬೋರೇಗೌಡ ಬೆಂಗಳೂರಿಗೆ ಬಂದ
  • 1970 ಅಪರಾಜಿತೆ
  • 1970 ಸುಖ ಸಂಸಾರ
  • 1971 ಸಿಗ್ನಲ್‌ಮ್ಯಾನ್ ಸಿದ್ದಪ್ಪ
  • 1972 ಸಿಪಾಯಿ ರಾಮು (ರಾಜ್ಯ ಪ್ರಶಸ್ತಿ – ರಾಜಕುಮಾರ್ ಅವರೊಂದಿಗೆ)
  • 1971 ಸೋತು ಗೆದ್ದವಳು
  • 1971 ಶರಪಂಜರ
  • 1972 ಧರ್ಮಪತ್ನಿ
  • 1972 ನಾಗರಹಾವು
  • 1972 ನಾ ಮೆಚ್ಚಿದ ಹುಡುಗ
  • 1973 ಮೂರೂವರೆ ವಜ್ರಗಳು
  • 1973 ಪ್ರೇಮಪಾಶ
  • 1973 ಸಹಧರ್ಮಿಣಿ
  • 1974 ಭಕ್ತ ಕುಂಬಾರ
  • 1974 ದೇವರ ಗುಡಿ
  • 1974 ಅವಳ್ ಒರು ಥೋಡರ್ ಕಥೈ (ತಮಿಳು – ಕಮಲ್ ಹಾಸನ್ ಜತೆ)
  • 1974 ಇದು ನಮ್ಮ ದೇಶ
  • 1974 ಮಗ ಮೊಮ್ಮಗ
  • 1974 ಮಹಾ ತ್ಯಾಗ
  • 1974 ನಾನ್ ಅವನಿಲ್ಲೈ (ತಮಿಳು)
  • 1974 ಪ್ರೊಫೆಸರ್ ಹುಚ್ಚುರಾಯ
  • 1974 ಆರತಿಯೊಂದಿಗೆ ಉಪಾಸನೆ
  • 1975 ಭಾಗ್ಯ ಜ್ಯೋತಿ
  • 1975 ಬಿಳಿ ಹೆಂಡ್ತಿ
  • 1975 ಹೆಣ್ಣು ಸಂಸಾರದ ಕಣ್ಣು
  • 1975 ಹೊಸಲು ಮೆಟ್ಟಿದ ಹೆಣ್ಣು
  • 1975 ಕೂಡಿ ಬಾಳೋಣ
  • 1975 ಕಥಾ ಸಂಗಮ (ರಜನಿಕಾಂತ್ ಜತೆ)
  • 1975 ಕಲ್ಲ ಕುಳ್ಳ
  • 1976 ಬಂಗಾರದ ಗುಡಿ
  • 1976 ಕಾಲೇಜು ರಂಗ
  • 1976 ಮಕ್ಕಳ ಭಾಗ್ಯ
  • 1976 ನಾ ನಿನ್ನ ಮರೆಯಲಾರೆ
  • 1976 ಫಲಿತಾಂಶ
  • 1977 ದೀಪ
  • 1977 ಅವರಗಲ್
  • 1977 ಧನಲಕ್ಷ್ಮಿ
  • 1977 ಕುಂಕುಮ ರಕ್ಷೆ
  • 1977 ಮುಗ್ಧ ಮಾನವ
  • 1977 ಸೋಲಾ ಶುಕ್ರವಾರ್
  • 1977 ವೀರ ಸಿಂಧೂರ ಲಕ್ಷ್ಮಣ
  • 1978 ದೇವದಾಸಿ
  • 1978 ಕಿಲಾಡಿ ಜೋಡಿ
  • 1978 ಗಮ್ಮತ್ತು ಗೂಡಚಾರುಲು
  • 1978 ಹೊಂಬಿಸಿಲು
  • 1978 ಕಿಲಾಡಿ ಕಿಟ್ಟು ಕನ್ನಡ
  • 1978 ಮಾತು ತಪ್ಪದ ಮಗ
  • 1978 ವಸಂತ ಲಕ್ಷ್ಮಿ
  • 1979 ಕಾರ್ತಿಕ ದೀಪಂ (ತೆಲುಗು)
  • 1979 ಇದಿ ಕಥಾ ಕಾಡು (ತೆಲುಗು)
  • 1979 ನಾ ನಿನ್ನ ಬಿಡಲಾರೆ
  • 1979 ಪಕ್ಕಾ ಕಳ್ಳ
  • 1979 ಸವತಿಯ ನೆರಳು
  • 1979 ವಿಜಯ್ ವಿಕ್ರಮ್
  • 1980 ಭೂಮಿ ಪರ್ ಆಯೆ ಭಗವಾನ್
  • 1980 ಜಾಥಾರ
  • 1980 ಕುಳ್ಳ ಕುಳ್ಳಿ
  • 1980 ನನ್ನ ರೋಷ ನೂರು ವರುಷ
  • 1980 ನಮ್ಮ ಮನೆ ಸೊಸೆ
  • 1980 ನ್ಯಾಯ ನೀತಿ ಧರ್ಮ
  • 1980 ಸಿಂಹ ಜೋಡಿ
  • 1980 ಸುಬ್ಬಿ ಸುಬ್ಬಕ್ಕ ಸುವ್ವಳಲಿ
  • 1980 ವಸಂತ ಗೀತೆ
  • 1981 ಹಣ ಬಲವೋ ಜನ ಬಲವೋ
  • 1981 ಎಡೆಯೂರು ಸಿದ್ಧಲಿಂಗೇಶ್ವರ
  • 1981 ಕುಲ ಪುತ್ರ
  • 1981 ಗರ್ಜನೈ
  • 1981 ಗರ್ಜನೆ
  • 1981 ತಾಯಿಯ ಮಡಿಲಲ್ಲಿ
  • 1981 ಮರೆಯದ ಹಾಡು
  • ಶಂಕರ್ ನಾಗ್ ಜೊತೆ 1982 ಆಟೋ ರಾಜ
  • 1982 ಮಾರೋ ಮಲುಪು (ತೆಲುಗು)
  • 1983 ಎರಡು ನಕ್ಷತ್ರಗಳು
  • 1983 ಮುದುಡಿದ ತಾವರೆ ಅರಳಿತು
  • 1983 ಸಿಡಿದ್ದೆದ್ದ ಸಹೋದರ
  • 1983 ಸಮರ್ಪಣೆ
  • 1984 ಎಂದಿನ ರಾಮಾಯಣ
  • 1984 ಚಾಣಕ್ಯ
  • 1984 ಒಲವು ಮೂಡಿದಾಗ
  • 1984 ಶ್ರಾವಣ ಬಂತು
  • 1985 ಅಜೇಯ
  • 1985 ಹೊಸ ಬಾಳು
  • 1985 ಬಾಳೊಂದು ಉಯ್ಯಾಲೆ
  • 1985 ನಾನು ನನ್ನ ಹೆಂಡ್ತಿ
  • 1986 ಬೆಟ್ಟದ ತಾಯಿ
  • 1986 ಕಥಾನಾಯಕ
  • 1986 ಕೆಡಿ ನಂ. 1
  • 1986 ಮೃಗಾಲಯ
  • 1986 ಪುದಿರ್
  • 1986 ಸೀಳು ನಕ್ಷತ್ರ
  • 1987 ಹುಲಿ ಹೆಬ್ಬುಲಿ
  • 1987 ಒಲವಿನ ಉಡುಗೊರೆ
  • 1987 ಪ್ರೇಮಲೋಕ
  • 1988 ರಾಮಣ್ಣ ಶಾಮಣ್ಣ
  • 1989 ಅಭಿಮಾನ
  • 1989 ಡಾಕ್ಟರ್ ಕೃಷ್ಣ (ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ)
  • 1989 ಯುಗ ಪುರುಷ
  • 1989 ಗಗನ
  • 1990 ಗೋಲ್ಮಾಲ್ ರಾಧಾಕೃಷ್ಣ
  • 1990 ಟೈಗರ್ ಗಂಗೂ
  • 1991 ಗೋಲ್ಮಾಲ್ ರಾಧಾಕೃಷ್ಣ II
  • 1999 ಹಬ್ಬ
  • 2000 ಚಾಮುಂಡಿ
  • 2003 ಸ್ವಾತಿ ಎಂ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸಿನಿಮಾ

Dolly Dhananjay: ಕೋಟೆ ನಾಡಿನ ಕನ್ಯೆ ಜತೆಗೆ ಸಪ್ತಪದಿ ತುಳಿಯಲ್ಲಿದ್ದಾರೆ ಡಾಲಿ ಧನಂಜಯ್‌

Dolly Dhananjay : ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಜೋಡಿ ಹಸೆಮಣೆ ಏರಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಡಾಲಿ ಧನಂಜಯ್‌ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ.

VISTARANEWS.COM


on

By

Dolly Dhananjay
Koo

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ನಟರಾಕ್ಷಸ ಡಾಲಿ ಧನಂಜಯ್‌ (Dolly Dhananjay) ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

Sandalwood star Dali Dhananjay And dhanya They are getting married next year

ಹಲವು ದಿನಗಳ ಮೌನಕ್ಕೆ ತೆರೆ ಎಳೆದಿರುವ ಧನಂಜಯ್ ಬೆಳಕಿನ ಹಬ್ಬ ದೀಪಾವಳಿಯಂದು ಬಾಳ ಸಂಗತಿಯನ್ನು ಪರಿಚಯಿಸಿದ್ದಾರೆ.

Sandalwood star Dali Dhananjay And dhanya They are getting married next year

ಡಾಕ್ಟರ್ ಧನ್ಯತಾ ಜತೆಗೆ ಸಪ್ತಪದಿ ತುಳಿಯಲಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ಧನ್ಯತಾ ಅವರೊಂದಿಗೆ ಮುಂದಿನ ವರ್ಷ ಫೆಬ್ರವರಿ 16 ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಧನ್ಯತಾ ಹಾಗೂ ಧನಂಜಯ್‌ ವಿವಾಹ ನಡೆಯಲಿದೆ.

Sandalwood star Dali Dhananjay And dhanya They are getting married next year

ಸೌತ್ ಸಿನಿಮಾ ಇಂಡಸ್ಟ್ರಿ ತಾರೆಯರು ಹಾಗು ಹಲವು ರಾಜಕೀಯ ಗಣ್ಯರು ಡಾಲಿ ಧನಂಜಯ್ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

Sandalwood star Dali Dhananjay And dhanya They are getting married next year

ವಿಭಿನ್ನ ರೀತಿಯ ಫೋಟೊಶೂಟ್‌ ನಡೆಸಿ ತಮ್ಮ ಹುಡುಗಿಯನ್ನು ಪರಿಚಯಿಸಿದ ಡಾಲಿ ಧನಂಜಯ್‌

Sandalwood star Dali Dhananjay And dhanya They are getting married next year
Continue Reading

ಸಿನಿಮಾ

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

Actor Darshan: ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, 6 ವಾರಗಳ ನಂತ್ರ ಮತ್ತೆ ಸರೆಂಡರ್‌ ಆಗಬೇಕಿದೆ

VISTARANEWS.COM


on

By

Hc grants interim bail to actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 5 ತಿಂಗಳ ಬಳಿಕ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ನೀಡಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಿಂದ ಆದೇಶ ಹೊರಡಿದೆ. ಇನ್ನು ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕಿಲ್ಲ. ಬದಲಾಗಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಆದೇಶ ನೀಡಿದೆ.

ಬೆನ್ನುಹುರಿ ಚಿಕಿತ್ಸೆಗೆ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಅಂಗೀಕಾರವಾಗಿದೆ. ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವಾರದಲ್ಲಿ ಯಾವ ರೀತಿಯ ಚಿಕಿತ್ಸೆ ಎಂಬ ವರದಿಯನ್ನು ನೀಡಬೇಕು. ದರ್ಶನ್ ತನ್ನ ಪಾಸ್‌ಪೋರ್ಟ್ ಸರಂಡರ್ ಮಾಡಬೇಕೆಂದು ನ್ಯಾ . ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಏನಿದು ಕೊಲೆ ಕೇಸ್‌?

ಜೂನ್ 9ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂಬಂಧ ಜೂನ್ 11ರಂದು ಮೈಸೂರಿನಲ್ಲಿ ಎ2 ದರ್ಶನ್ ಅರೆಸ್ಟ್ ಆಗಿದ್ದರು. ಜೂನ್ 22ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜೂ.22ರಂದು ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಅಲ್ಲಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಶಿಫ್ಟ್ ಮಾಡಲಾಗಿತ್ತು. ಆ.29ರಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.

ಪವಿತ್ರಾಗೌಡ ಖುಷಿ

ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಖುಷಿ ಆಗಿದ್ದಾರೆ. ತನ್ನಿಂದಾಗಿ ದರ್ಶನ್ ಜೈಲು ಸೇರಿದ ಎಂಬ ಬೇಸರವಿತ್ತು. ದರ್ಶನ್‌ಗೆ ಜಾಮೀನು ಸಿಕ್ಕಿದೆ ಎಂದು ಪವಿತ್ರಾ ಖುಷಿಯಾಗಿದ್ದು, ತನಗೂ ಬೇಲ್ ಸಿಗುತ್ತೆಂಬ ವಿಶ್ವಾಸದಲ್ಲಿದ್ದಾರೆ.

Continue Reading

ಪ್ರಮುಖ ಸುದ್ದಿ

Actor Darshan : ದರ್ಶನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ನ.8ರಂದು ನವಗ್ರಹ ಸಿನಿಮಾ ರೀ-ರಿಲೀಸ್‌

Actor Darshan : ನಟ ದರ್ಶನ್ ಜೈಲಿನಲ್ಲಿದ್ದರೂ ಹಳೆಯ ಸಿನಿಮಾಗಳು ಥಿಯೇಟರ್​ಗಳಲ್ಲಿ ಸೌಂಡ್ ಮಾಡುತ್ತಿವೆ. ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಕರಿಯ, ಶಾಸ್ತ್ರಿ ಹಾಗೂ ಪೊರ್ಕಿ ಸಿನಿಮಾಗಳನ್ನು ಮರು ಬಿಡುಗಡೆಗೊಂಡಿತ್ತು. ಇದೀಗ ನವಗ್ರಹ ಸಿನಿಮಾ ರೀ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಆಗಿದೆ.

VISTARANEWS.COM


on

By

actor darshan
Koo

ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಒದ್ದಾಡುತ್ತಿರುವುದನ್ನು ಕಂಡು ಬೇಸರದಲ್ಲಿರುವ ಅಭಿಮಾನಿಗಳಿಗೆ ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲೇ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಿಲೀಸ್ ಆಗ್ಬೇಕಿತ್ತು. ಆದರೆ ಇದೀಗ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಬಂಧಿಯಾಗಿದ್ದಾರೆ.

ದಾಸನ ಸಿನಿಮಾ ರೀ-ರಿಲೀಸ್, ಡೇಟ್ ಅನೌನ್ಸ್

ನಟ ದರ್ಶನ್ ಜೈಲಿನಲ್ಲಿದ್ದರೂ ಹಳೆಯ ಸಿನಿಮಾಗಳು ಥಿಯೇಟರ್​ಗಳಲ್ಲಿ ಸೌಂಡ್ ಮಾಡುತ್ತಿವೆ. ಈ ವರ್ಷ ‘DEVIL THE HERO’ ಸಿನಿಮಾವನ್ನು ನೋಡಬೇಕು ಎಂಬುದು ದರ್ಶನ್ ಅಭಿಮಾನಿಗಳ ಆಸೆ ಆಗಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ ಬಳಿಕ ಆ ಸಿನಿಮಾದ ಕೆಲಸಕ್ಕೆ ಬ್ರೇಕ್​ ಬಿತ್ತು. ಹಾಗಾಗಿ ದೊಡ್ಡ ಪರದೆ ಮೇಲೆ ದರ್ಶನ್ ಹೊಸ ಸಿನಿಮಾ ತೆರೆಕಾಣಲಿಲ್ಲ. ಈ ಸಂದರ್ಭದಲ್ಲಿ ಅಭಿಮಾನಿಗಳು ದರ್ಶನ್​ ಅವರನ್ನು ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ಈ ಹಿಂದಿನ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರಲಾಗುತ್ತಿದೆ. ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಕರಿಯ, ಶಾಸ್ತ್ರಿ ಹಾಗೂ ಪೊರ್ಕಿ ಸಿನಿಮಾಗಳನ್ನು ಮರು ಬಿಡುಗಡೆಗೊಂಡಿತ್ತು.

Actor darshan

‘ನವಗ್ರಹ’ ಸಿನಿಮಾ ಹಿಟ್‌ ಆದ ನಂತರ ಸಿನಿಮಾದ ಸೀಕ್ವೆಲ್‌ ಬರಲಿದೆ ಅಂತ ಹೇಳಲಾಗಿತ್ತಾದರೂ ಕೊನೆವರೆಗೂ ಈ ಸಿನಿಮಾದ ಸೀಕ್ವೆಲ್‌ ಬರಲೇ ಇಲ್ಲ. ಇದೊಂದು ವಿಷಯ ಡಿ ಬಾಸ್‌ ಫ್ಯಾನ್ಸ್‌ ಅಲ್ಲಿ ನಿರಾಶೆ ಉಂಟು ಮಾಡಿತ್ತು. ಕೆಲವು ದಿನಗಳ ಹಿಂದೆ, ‘ನವಗ್ರಹ’ ಸಿನಿಮಾ ರೀ ರಿಲೀಸ್‌ ಮಾಡಬೇಕೆಂದು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಅಭಿಯಾನವನ್ನು ಸ್ಟಾರ್ಟ್‌ ಮಾಡಿದ್ದರು. #WeWantNavagrahaReRelease ಎಂಬ ಹ್ಯಾಶ್‌ಟ್ಯಾಗ್‌ ಬಳಸುವ ಮೂಲಕ ಈ ಟ್ರೆಂಡ್‌ ಅನ್ನು ವೈರಲ್‌ ಆಗಿತ್ತು. ಇದೀಗ ಮತ್ತೆ ಈ ಸಿನಿಮಾ ನೋಡೋ ಆಸೆಯಿಂದ ಅಭಿಮಾನಿಗಳು ಚಿತ್ರದ ರೀ ರಿಲೀಸ್‌ಗಾಗಿ ಪಟ್ಟು ಹಿಡಿದಿದ್ದಾರೆ.

ಕುತೂಹಲ ಮೂಡಿಸಿದ ದಿನಕರ್​ ಪೋಸ್ಟ್

‘ನವಗ್ರಹ’ ಕನ್ನಡ ಚಿತ್ರರಂಗದ ಸೂಪರ್ ಹಿಟ್​ ಸಿನಿಮಾ. 2008ರಲ್ಲಿ ತೆರೆಕಂಡ ನಟ ದರ್ಶನ್​​ ಮುಖ್ಯಭೂಮಿಕೆಯ ಈ ಚಿತ್ರ ಸೂಪರ್ ಹಿಟ್​ ಆಗಿತ್ತು. ಬಹುತಾರಾಗಣದ ಈ ಚಿತ್ರ ‘ಅಂಬಾರಿ’ ಕಳ್ಳತನಕ್ಕೆ ಪ್ರಯತ್ನಿಸುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾ ರೀ-ರಿಲೀಸ್​ ಆಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ದಿನಕರ್ ತೂಗುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ನಿರ್ದೇಶನದ 2ನೇ ಸಿನಿಮಾ ನವಗ್ರಹ. ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆಯಾಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8ರಂದು ಮರುಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ’ ಎಂದು ಅವರು ಬರೆದುಕೊಂಡಿದ್ದಾರೆ.

‘ನವಗ್ರಹ’ ಸಿನಿಮಾಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ತರುಣ್ ಸುಧೀರ್​, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್​, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್​, ವರ್ಷಾ, ಶರ್ಮಿಳಾ ಮಾಂಡ್ರೆ, ಕುರಿ ಪ್ರತಾಪ್, ಡೇರಿಂಗ್ ಸ್ಟಾರ್ ಧರ್ಮ ಸೇರಿದಂತೆ ಅನೇಕರು ನಟಿಸಿದ್ದಾರೆ. ಎ.ವಿ ಕೃಷ್ಣಕುಮಾರ್​ ಕ್ಯಾಮರಾ ಕೈಳಚಕವಿರುವ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಒದಗಿಸಿದ್ದರು. ಟಿ ಶಶಿಕುಮಾರ್​ ಸಂಕಲನದ ಹೊಣೆ ಹೊತ್ತಿದ್ದರು. ತೂಗುದೀಪ ಪ್ರೊಡಕ್ಷನ್ಸ್ ಅಡಿ ನಿರ್ಮಾಣಗೊಂಡ ಈ ಚಿತ್ರ 2008ರ ನವೆಂಬರ್​​ 7ರಂದು ಚಿತ್ರಮಂದಿರ ಪ್ರವೇಶಿಸಿ ಯಶಸ್ವಿಯಾಗಿತ್ತು. ಇದೀಗ ಅದೇ ದಿದಂದೇ ಮರು ಬಿಡುಗಡೆಗೆ ಸನ್ನದ್ಧವಾಗಿದೆ.

Continue Reading

ಸಿನಿಮಾ

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ನಿಧನ

Deepak Aras: ನಟಿ ಅಮೂಲ್ಯ ಸಹೋದರ ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

VISTARANEWS.COM


on

By

Actress Amulyas brother film director Deepak aras passes away
Koo

ಬೆಂಗಳೂರು: ನಟಿ ಅಮೂಲ್ಯ ಸಹೋದರ, ಚಲನಚಿತ್ರ ನಿರ್ದೇಶಕ ದೀಪಕ್ ಅರಸ್ (46) ಬದುಕಿನ ಪಯಣ ಮುಗಿಸಿದ್ದಾರೆ. ದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್ (Deepak Aras) ಶುಕ್ರವಾರ ಬೆಳಗ್ಗೆ 6 ಗಂಟೆಗೆ ನಿಧನರಾಗಿದ್ದಾರೆ. ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ದೀಪಕ್ ಅರಸ್ ನಿರ್ದೇಶಿಸಿದ್ದರು. 3 ದಿನಗಳಿಂದ ಕೋಮದಲಿದ್ದ ದೀಪಕ್ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಮಲ್ಲೇಶ್ವರಂ ಪೈಪ್ ಲೈನ್ ರಸ್ತೆಯಲ್ಲಿರುವ ಮನೆ ಬಳಿ ದೀಪಕ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ದೀಪಕ್ ಸಹೋದರ ಪವನ್ ಮಾಹಿತಿ ನೀಡಿದ್ದಾರೆ. ಅಣ್ಣ ದೀಪಕ್ ಕುರಿತು ನಟಿ ಅಮೂಲ್ಯ ಪೋಸ್ಟ್ ಹಾಕಿದ್ದಾರೆ. ದೀಪಣ್ಣ ಇಂದು ಬೆಳಗ್ಗೆ 6ಗಂಟೆಗೆ ನಮೆಲ್ಲರನ್ನು ಅಗಲಿದ್ದಾರೆ.

ಮದುವೆ ಆಗಿ ಎರಡು ಮಕ್ಕಳಿರುವ ದೀಪಕ್‌ಗೆ ಕಿಡ್ನಿ ಫೆಲ್ಯುರ್‌ ಆಗಿತ್ತು, ಡಯಾಲಿಸಿಸ್ ಮಾಡಿಸುತ್ತಿದ್ದರು. ಆರ್ ಆರ್ ನಗರದಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ದೀಪಕ್ ಅರಸ್ ಕೊನೆಯುಸಿರೆಳೆದಿದ್ದಾರೆ.

Continue Reading
Advertisement
Kodava Family Hockey Tournament Website Launched
ಕೊಡಗು1 ತಿಂಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು1 ತಿಂಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ1 ತಿಂಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ1 ತಿಂಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು1 ತಿಂಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ1 ತಿಂಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ತಿಂಗಳುಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ1 ವರ್ಷ ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ1 ವರ್ಷ ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ3 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್4 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌