Lok Sabha Election 2024: ಬೆಂಗಳೂರಲ್ಲಿ ನಾಳೆಯಿಂದ ಏ.26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ; ಮದ್ಯ ಮಾರಾಟವೂ ಬಂದ್‌ - Vistara News

ಕರ್ನಾಟಕ

Lok Sabha Election 2024: ಬೆಂಗಳೂರಲ್ಲಿ ನಾಳೆಯಿಂದ ಏ.26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ; ಮದ್ಯ ಮಾರಾಟವೂ ಬಂದ್‌

Lok Sabha Election 2024: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಏ.24ರ ಸಂಜೆ 6 ಗಂಟೆಯಿಂದ ಏ.26ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

VISTARANEWS.COM


on

Lok Sabha Election 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ (Lok Sabha Election 2024) ನಡೆಯುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಏ.24ರ ಸಂಜೆ 6 ಗಂಟೆಯಿಂದ ಏ.26ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಲ್ಲದೇ ಮದ್ಯ ಮಾರಾಟಕ್ಕೂ ನಿಷೇಧ ವಿಧಿಸಲಾಗಿದೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಬುಧವಾರ ಸಂಜೆ 6 ಗಂಟೆಯಿಂದ ಬೆಂಗಳೂರು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜತೆಗೆ 5 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಭದ್ರತೆ ಕೈಗೊಳ್ಳಲಾಗಿದೆ. ನಿಷೇಧಾಜ್ಞೆಯು ಏಪ್ರಿಲ್ 26ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರಲಿದೆ. ಈ ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನ 5 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 13 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 11 ಸಿಆರ್‌ಪಿಎಫ್, 14 ಕೆಎಸ್‌ಆರ್‌ಪಿ ಹಾಗೂ 40 ಸಿಎಆರ್ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Lok Sabha Election 2024: ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

ಬೆಂಗಳೂರು: ಲೋಕಸಭಾ ಚುನಾವಣೆ- 2024ರ (Lok Sabha election 2024) ಅಂಗವಾಗಿ ರಾಜ್ಯದಲ್ಲಿ (karnataka) ಏಪ್ರಿಲ್ 26ರಂದು ಮತದಾನ (voting) ನಡೆಯಲಿದ್ದು, ಈ ಸಂದರ್ಭದಲ್ಲಿ ಮತದಾರರ ಗುರುತು ಚೀಟಿಯನ್ನು (voter id) ಪ್ರತಿಯೊಬ್ಬ ಅರ್ಹ ಮತದಾರನೂ ಹೊಂದಿರಲೇಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ (Voter ID) ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.

ಮತದಾರರ ಗುರುತು ಚೀಟಿಯು ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮತದಾರನ ಗುರುತು, ವಾಸಸ್ಥಳ, ಜನನ ಮತ್ತು ಇತರ ವಿವರಗಳನ್ನು ದೃಢೀಕರಿಸುವ ಇದು ಮಹತ್ವದ ಅಧಿಕೃತ ದಾಖಲೆಗಳಲ್ಲಿ ಒಂದಾಗಿದೆ.
ಮತದಾನವು ನಮ್ಮ ಮೂಲಭೂತ ಹಕ್ಕು ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಜವಾಬ್ದಾರಿಯಾಗಿದೆ. ಇದಕ್ಕಾಗಿ ವೋಟರ್ ಐಡಿ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾಕೆಂದರೆ ಅದನ್ನು ಹೊಂದಿರುವವರ ಗುರುತು ಮತ್ತು ವಿವರಗಳನ್ನು ಪರಿಶೀಲಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್‌ ಮೊಬೈಲ್‌ನಲ್ಲೇ ಮಾಡಿ!

ಯಾರು ಅರ್ಹರು?

ಭಾರತದ ಚುನಾವಣಾ ಆಯೋಗದ ಪ್ರಕಾರ ನಾಗರಿಕರು ಈ ಕೆಳಗಿನ ಷರತ್ತುಗಳ ಅಡಿಯಲ್ಲಿ ಮತದಾರರಾಗಲು ಅರ್ಹರಾಗಿರುತ್ತಾರೆ. 18 ವರ್ಷ ವಯಸ್ಸಿನ ಪ್ರತಿಯೊಬ್ಬ ನಾಗರಿಕರು ಯಾವುದಾದರೂ ನಿರ್ಧಿಷ್ಟ ಕಾರಣದಿಂದ ಅನರ್ಹಗೊಳಿಸದ ಹೊರತು ಮತದಾರರ ಗುರುತು ಚೀಟಿ ಪಡೆಯಲು ದಾಖಲಾತಿ ನಡೆಸಲು ಅರ್ಹರಾಗಿರುತ್ತಾರೆ.
ಅರ್ಹ ಮತದಾರನ ಸಾಮಾನ್ಯ ನಿವಾಸದ ಸ್ಥಳದಲ್ಲಿ ಮಾತ್ರ ನೋಂದಣಿ ಮಾಡಿಸಬಹುದು ಹಾಗೂ ಒಂದೇ ಸ್ಥಳದಲ್ಲಿ ಮಾತ್ರ ನೋಂದಣಿ ಸಾಧ್ಯ.


ಸಾಗರೋತ್ತರ ಭಾರತೀಯರ ಪಾಸ್‌ಪೋರ್ಟ್‌ನಲ್ಲಿನೀಡಿರುವ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮತದಾರರು ತಮ್ಮ ಮನೆಯ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಾರೆ ಎಂದು ಪರಿಗಣಿಸಲಾಗುವುದು.

ವೋಟರ್ ಐಡಿ ಇಲ್ಲದೆ ಮತ ಚಲಾಯಿಸಬಹುದೇ?

ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಅಗತ್ಯವಿದೆ. ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಯಾವುದೇ ಒಂದು ದಾಖಲೆಯನ್ನು ಒದಗಿಸಬೇಕು.

ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿದ ಸೂಚನೆಗಳ ಪ್ರಕಾರ ಮತದಾರರ ಗುರುತಿನ ಚೀಟಿ ಇಲ್ಲದೆಯೂ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರೆಗೆ ಮತ ಚಲಾಯಿಸಲು ಮತದಾರರು ಅರ್ಹನಾಗಿರುತ್ತಾರೆ.

ಹೆಸರಿದೆಯೇ ಪರಿಶೀಲಿಸಿ

ಮತದಾನ ಪ್ರಕ್ರಿಯೆಯಲ್ಲಿ (ಇಸಿಐ) ಪಾಲ್ಗೊಳ್ಳುವ ಮೊದಲು ಭಾರತದ ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಪರಿಶೀಲಿಸಬೇಕು. ಮತಪತ್ರವನ್ನು ಚಲಾಯಿಸುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದು ನಿರ್ಣಾಯಕವಾಗಿದೆ ಏಕೆಂದರೆ ಅದರಲ್ಲಿ ನೀವು ಮತ ಚಲಾಯಿಸುವ ಅರ್ಹತೆಯನ್ನು ದೃಢೀಕರಿಸುತ್ತದೆ.

ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೆ ಚುನಾವಣಾ ಆಯೋಗವು ಗೊತ್ತುಪಡಿಸಿದ ಪರ್ಯಾಯ ದಾಖಲೆಗಳನ್ನು ಮತದಾರರು ಬಳಸಬಹುದು.

ಇತರ ದಾಖಲೆ ಯಾವುದು?

ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿಗಾಗಿ ಎಪಿಕ್ ಅಥವಾ ಮತದಾರರ ಐಡಿ ಹೊಂದಿಲ್ಲದಿದ್ದರೆ ಸಾರ್ವತ್ರಿಕ ಚುನಾವಣೆಯ ವೇಳೆ ವೋಟರ್ ಐಡಿ ಇಲ್ಲದೆಯೇ ಮತವನ್ನು ಚಲಾಯಿಸಲು ಬಳಸಬಹುದಾದ ದಾಖಲೆಗಳು ಇಂತಿವೆ.

ಆಧಾರ್ ಕಾರ್ಡ್, MNREGA ಜಾಬ್ ಕಾರ್ಡ್, ಬ್ಯಾಂಕ್/ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ, ಕೇಂದ್ರ/ ರಾಜ್ಯ ಸರ್ಕಾರ/ ಪಿಎಸ್‌ಯು/ ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಎಂಪಿಗಳು/ ಎಂಎಲ್‌ಎಗಳು/ ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು, ವಿಶಿಷ್ಟ ಅಂಗವೈಕಲ್ಯ ಐಡಿ (UDID) ಕಾರ್ಡ್ ಗಳನ್ನು ದಾಖಲೆಯಾಗಿ ಮತದಾನದ ವೇಳೆ ಗುರುತು ಚೀಟಿಯಾಗಿ ಮತದಾನ ಕೇಂದ್ರದಲ್ಲಿ ತೋರಿಸಬಹುದಾಗಿದೆ.

ನೋಂದಣಿ ಸ್ಥಿತಿ ಪರಿಶೀಲನೆ ಹೇಗೆ?

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಮಾತ್ರ ಮತ ಚಲಾಯಿಸಬಹುದು. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ https://electoralsearch.eci.gov.in ಗೆ ಲಾಗಿನ್ ಆಗಿ ನೋಡಬಹುದು. ಅಲ್ಲದೇ ಮತದಾರರ ಸಹಾಯವಾಣಿ 1950ಕ್ಕೆ ಕರೆಯೂ ಪರಿಶೀಲನೆ ನಡೆಸಬಹುದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

Prajwal Revanna Case: ಸಂಸದರ ನಿವಾಸಕ್ಕೂ ಬೀಗ ಬಿದ್ದಿದ್ದು, ಬೀಗದ ಕೀ ಯಾರ ಬಳಿ ಇದೆ ಎಂಬುದು ನಿಗೂಢವಾಗಿದೆ. ಇಂದು ಸಂತ್ರಸ್ತೆ ಜೊತೆ SIT ತಂಡ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಆದರೆ ಕಳೆದೊಂದು ವಾರದಿಂದ ಸಂಸದರ ನಿವಾಸಕ್ಕೆ ಬೀಗ ಬಿದ್ದಿದ್ದು, ಮೇಟಿ ಕುಟುಂಬವೂ ಕಣ್ಮರೆಯಾಗಿದೆ. ಸ್ಥಳ ಮಹಜರಿಗೆ ಸಂಸದರ ಕಚೇರಿ ಬೀಗದ ಕೀ ಯಾರ ಬಳಿ ಇದೆ ಎಂಬುದು ಗೊತ್ತಾಗಿಲ್ಲ.

VISTARANEWS.COM


on

prajwal revanna case hassan MP home
Koo

ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ನಿವಾಸದಲ್ಲೇ ನಿವಾಸದಲ್ಲೇ ಅತ್ಯಾಚಾರ (Physical abuse) ನಡೆದಿರುವ ಬಗ್ಗೆ ದೂರು ನೀಡಲಾಗಿರುವ ಹಿನ್ನೆಲೆಯಲ್ಲಿ, ಸಂಸದರ ನಿವಾಸದ ಗೇಟ್‌ಗೆ ನಿನ್ನೆ ಬೀಗ ಜಡಿಯಲಾಗಿದೆ. ಇನ್ನೊಂದು ಕಡೆ ಲುಕೌಟ್‌ ನೋಟೀಸ್‌ (Lokkout notice) ಹೊರಡಿಸಿದರೂ ಪ್ರಕರಣ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ತಲೆ ಮರೆಸಿಕೊಂಡಿದ್ದಾರೆ. ಭವಾನಿ ರೇವಣ್ಣ (Bhavani Revanna) ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ಮಾಡಿದೆ.

ಸಂಸದರ ನಿವಾಸದ ರೂಮ್‌ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ‌ ವಿರುದ್ಧ ಅತ್ಯಾಚಾರದ ದೂರು ನೀಡಿದ್ದ ಮಹಿಳೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. CID ಪೊಲೀಸರ ಮುಂದೆ, ಸಂಸದರ ನಿವಾಸದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ನೀಡಲಾಗಿದೆ. ಹೀಗಾಗಿ ಸಾಕ್ಷಿ ನಾಶದ ಆತಂಕದ ಹಿನ್ನೆಲೆಯಲ್ಲಿ ಸಂಸದರ ನಿವಾಸದ ಆವರಣಕ್ಕೆ ಪ್ರವೇಶ ನಿರ್ಬಂಧಿಸಿ ಗೇಟಿಗೆ ಬೀಗ ಹಾಕಲಾಗಿದೆ. SIT ತಂಡ ತನಿಖೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸರು ಬೀಗ ಹಾಕಿದ್ದಾರೆ.

ಸಂಸದರ ನಿವಾಸಕ್ಕೂ ಬೀಗ ಬಿದ್ದಿದ್ದು, ಬೀಗದ ಕೀ ಯಾರ ಬಳಿ ಇದೆ ಎಂಬುದು ನಿಗೂಢವಾಗಿದೆ. ಇಂದು ಸಂತ್ರಸ್ತೆ ಜೊತೆ SIT ತಂಡ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಆದರೆ ಕಳೆದೊಂದು ವಾರದಿಂದ ಸಂಸದರ ನಿವಾಸಕ್ಕೆ ಬೀಗ ಬಿದ್ದಿದ್ದು, ಮೇಟಿ ಕುಟುಂಬವೂ ಕಣ್ಮರೆಯಾಗಿದೆ. ಸ್ಥಳ ಮಹಜರಿಗೆ ಸಂಸದರ ಕಚೇರಿ ಬೀಗದ ಕೀ ಯಾರ ಬಳಿ ಇದೆ ಎಂಬುದು ಗೊತ್ತಾಗಿಲ್ಲ.

ರೇವಣ್ಣಗೂ ಲುಕ್‌ಔಟ್‌ ನೋಟೀಸ್‌

ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ.

ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.

ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್‌ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ.

ಭವಾನಿಗೂ ಬುಲಾವ್‌

ಅಪ್ಪ ಮಗನ ಬಳಿಕ ಭವಾನಿ ರೇವಣ್ಣಗೂ ಎಸ್ಐಟಿ‌ ನೊಟೀಸ್ ಕಳಿಸಿದೆ. ಕೆಆರ್ ನಗರ ಠಾಣೆಯಲ್ಲಿ ದಾಖಲಾದ ಕಿಡ್ನಾಪ್ ಪ್ರಕರಣ ಸಂಬಂಧ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ಕಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ‌ರೇವಣ್ಣ ಸಂಬಂಧಿ ಸತೀಶ್ ಬಾಬು ಎಂಬಾತನ ಬಂಧನ ಆಗಿದೆ.

ಪ್ರಮುಖ ಆರೋಪಿ ಎಚ್‌.ಡಿ. ರೇವಣ್ಣ (HD Revanna) ವಿರುದ್ಧವೂ ಈಗ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case: ವಿದೇಶದಿಂದ ಪ್ರಜ್ವಲ್‌ ರೇವಣ್ಣ ಎಳೆತರಲು ರೆಡ್‌ ಕಾರ್ನರ್‌ ನೋಟಿಸ್?‌ ಭವಾನಿ ರೇವಣ್ಣಗೂ ವಿಚಾರಣೆಗೆ ಬುಲಾವ್

Continue Reading

ಕ್ರೈಂ

Robbery Case: ಕಾರು ತಪಾಸಣೆ ನೆಪದಲ್ಲಿ ಸುಲಿಗೆ; ಪೊಲೀಸರ ವಿರುದ್ಧವೇ ಕೇಳಿ ಬಂತು ಗಂಭೀರ ಆರೋಪ

Robbery Case: ಕಾರಿನಲ್ಲಿ ಮಲಗಿದ್ದವನನ್ನು ಎಚ್ಚರಿಸಿ ಪೊಲೀಸರು ಸುಲಿಗೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ತಲಘಟ್ಟಪುರ ಪೊಲೀಸರ ಮೇಲೆ ಇಂತಹ ಗಂಭೀರ ಆರೋಪ ಕೇಳಿ ಬಂದಿದ್ದು, ತನ್ನ ಕಾರು ಪರಿಶೀಲಿಸಿ ಸುಲಿಗೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

VISTARANEWS.COM


on

Robbery Case
Koo

ಬೆಂಗಳೂರು: ತಮ್ಮ ಕಾರಲ್ಲೂ ಆರಾಮಾಗಿ ಮಲಗೋ ಹಾಗಿಲ್ವಾ? ಸದ್ಯ ಹೀಗೊಂದು ಪ್ರಶ್ನೆ ಬೆಂಗಳೂರಿಗರನ್ನು ಕಾಡುತ್ತಿದೆ. ಯಾಕೆಂದರೆ ಕಾರಿನಲ್ಲಿ ಮಲಗಿದ್ದವನನ್ನು ಎಚ್ಚರಿಸಿ ಪೊಲೀಸರು ಸುಲಿಗೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ (Robbery Case).

ಸದ್ಯ ತಲಘಟ್ಟಪುರ ಪೊಲೀಸರ ಮೇಲೆ ಇಂತಹ ಗಂಭೀರ ಆರೋಪ ಕೇಳಿ ಬಂದಿದ್ದು, ತನ್ನ ಕಾರು ಪರಿಶೀಲಿಸಿ ಸುಲಿಗೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಏನಿದು ಪ್ರಕರಣ?

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕಾರು ನಿಲ್ಲಿಸಿದ ವ್ಯಕ್ತಿಯೊಬ್ಬರು ಅದರಲ್ಲಿ ಮಲಗಿದ್ದರು. ಈ ವೇಳೆ ಕಾರು ತಪಾಸಣೆ ನಡೆಸಬೇಕು ಎಂದು ಪೊಲೀಸ್ ಸಿಬ್ಬಂದಿ ಮಹಾದೇವ್ ನಾಯಕ್ ಹಾಗೂ ಅಂಜನಪ್ಪ ಆ ವ್ಯಕ್ತಿಯನ್ನು ಏಬ್ಬಿಸಿದ್ದರು. ʼʼಬಳಿಕ ಕಾರು ಪರಿಶೀಲಿಸದಾಗ ಇ ಸಿಗರೇಟ್(ವೇಫರ್) ಕಂಡು ಬಂದಿತ್ತು. ಇ ಸಿಗರೇಟು ಇಟ್ಟುಕೊಂಡರೆ ಒಂದು ಲಕ್ಷ ರೂ. ದಂಡ ಕಟ್ಟಬೇಕು ಎಂದು ಪೊಲೀಸ್ ಸಿಬ್ಬಂದಿ ಮಹಾದೇವ್ ನಾಯಕ್ ಹಾಗೂ ಅಂಜನಪ್ಪ ಹೇಳಿದ್ದರುʼʼ ಎಂದು ವ್ಯಕ್ತಿ ಆರೋಪಿಸಿದ್ದಾರೆ.

ʼʼಸ್ಥಳದಲ್ಲೇ 50 ಸಾವಿರ ರೂ. ಕಟ್ಟಿದ್ರೆ ಬಿಟ್ಟು ಬಿಡುತ್ತೇವೆ ಎಂದು ಸಿಬ್ಬಂದಿ ಹೇಳಿದರು. ಸಾಧ್ಯವಿಲ್ಲ ಎಂದಾಗ 50 ರೂ.ಯಿಂದ 10 ಸಾವಿರ ರೂ.ಗೆ ಪೊಲೀಸ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ. ಸದ್ಯ ಕೈಯಲ್ಲಿ ಹಣ ಇಲ್ಲವೆಂದು ಹಣ ಕಟ್ಟಲು ನಿರಾಕರಿಸಿದ್ದೆʼʼ ಎಂದು ಅವರು ಹೇಳಿದ್ದಾರೆ.

ನಂತರ ಪರಿಚಿತರ ಬಳಿಯಿಂದ ಹಣ ಹಾಕಿಸಿಕೊಳ್ಳುವಂತೆಯೂ ಪೊಲೀಸರು ಸಲಹೆ ನೀಡಿದ್ದರಂತೆ. ಈ ವೇಳೆ ಅಂಜನಪ್ಪ ಮತ್ತು ಮಹಾದೇವ್ ನಾಯಕ್ ಮಾತನಾಡಿರುವ ಆಡಿಯೋ ಲಭ್ಯವಾಗಿದೆ. ಸಿದ್ದರಾಜು ಎಂಬುವರೊಂದಿಗೆ ಮಾತನಾಡಿದ್ದ ಪೊಲೀಸರು ಕೊನೆಗೆ ಸದ್ಯ ಐದು ಸಾವಿರ ರೂ. ಕೊಡಿ ಉಳಿದ ಐದು ಸಾವಿರ ರೂ. ಮತ್ತೆ ಪಾವತಿಸುವಂತೆ ಹೇಳಿದ್ದರು. ʼʼಕೊನೆಗೂ ಒಂದು ಸಾವಿರ ರೂ. ಮತ್ತು ಇ ಸಿಗರೇಟ್ ತೆಗೆದುಕೊಂಡ ಪೊಲೀಸರು ಹೊರಟು ಹೋಗಿದ್ದಾರೆ. ಜತೆಗೆ ಸಂಬಳ ಬಂದ ಮೇಲೆ ಹಣ ಕಳಿಸುವಂತೆ ಫೋನ್‌ ನಂಬರ್ ಕೊಟ್ಟು ಕಳಿಸಿದ್ದಾರೆʼʼ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!

ನೀರು ಕೇಳುವ ನೆಪದಲ್ಲಿ ದರೋಡೆ

ತುಮಕೂರು: ಪಿಸ್ತೂಲ್‌ನಿಂದ ಫೈರ್ ಮಾಡಿ ಸುಲಿಗೆಗೆ ಯತ್ನಿಸಿದ ಜಾರ್ಖಂಡ್ ಮೂಲದ ಇಬ್ಬರು ಆರೋಪಿಗಳನ್ನು (Robbery Case) ಪೊಲೀಸರು ಬಂಧಿಸಿದ್ದಾರೆ. ಏಜಾಸ್ ಮಿರ್ದಹ (30), ಸಹಿಬುಲ್ ಅನ್ಸಾರಿ (30) ಬಂಧಿತ ಆರೋಪಿಗಳು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೆಹಳ್ಳಿ ಗ್ರಾಮದಲ್ಲಿ ಗಂಗಣ್ಣ ಎಂಬುವರ ತೋಟದ ಮನೆಯಲ್ಲಿ ಸುಲಿಗೆಗೆ ಮುಂದಾಗಿದ್ದರು. ಕಳೆದ ಮಾ. 26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡಿಯಲು ನೀರು ಕೇಳುವ ನೆಪದಲ್ಲಿ ಎಂಟ್ರಿ ಕೊಟ್ಟಿದ್ದರು.

ನೀರು ತರಲು ಹೋದಾಗ ಮನೆಯೊಳಗೆ ನುಗ್ಗಿ, ಹಣ ದೋಚಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳನ್ನು ಹಿಡಿಯಲು ಹೋದ ಮನೆ ಮಾಲೀಕ ಗಂಗಣ್ಣನ ಮೇಲೆ ಪಿಸ್ತೂಲ್‌ನಿಂದ ಫೈರ್ ಮಾಡಿ, ಎಸ್ಕೇಪ್ ಆಗಿದ್ದರು. ಈ ವೇಳೆ ಗಂಗಣ್ಣ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದ ಕುಣಿಗಲ್ ಪೊಲೀಸರು, ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದರು. ಸುಲಿಗೆ ಮಾಡಲು ಯತ್ನಿಸಿದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

ಕ್ರಿಕೆಟ್

RCB vs GT: ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ; ಮೆಟ್ರೋ ಸೇವೆ ವಿಸ್ತರಣೆ

RCB vs GT: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಟಾ ಐಪಿಎಲ್ 2024 ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಈ ಕೆಳಕಂಡಂತೆ ಸೂಕ್ತ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ಮೇ 4 ಶನಿವಾರ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 11.00ರವರೆಗೆ ಈ ವ್ಯತ್ಯಾಸಗಳು ಜಾರಿಯಲ್ಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ. ಜತೆಗೆ ಬೆಂಗಳೂರು ನಗರ ಸಂಚಾರ ಪೊಲೀಸರಿಂದಲೂ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

VISTARANEWS.COM


on

RCB vs GT
Koo

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ಆರ್​ಸಿಬಿ(Royal Challengers Bengaluru) ಇಂದು (ಮೇ​ 4) ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy stadium) ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ​ಕಣಕ್ಕಿಳಿಯಲು ಸಜ್ಜಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಟಾ ಐಪಿಎಲ್ 2024 ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಈ ಕೆಳಕಂಡಂತೆ ಸೂಕ್ತ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ಮೇ 4 ಶನಿವಾರ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 11.00ರವರೆಗೆ ಈ ವ್ಯತ್ಯಾಸಗಳು ಜಾರಿಯಲ್ಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ. ಜತೆಗೆ ಬೆಂಗಳೂರು ನಗರ ಸಂಚಾರ ಪೊಲೀಸರಿಂದಲೂ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಪೂರ್ಣವಾಗಿ ಪಾರ್ಕಿಂಗ್ ನಿಷೇಧ ಮಾಡಲಾಗಿದೆ.

ವಾಹನಗಳ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ


ಕ್ರೀನ್ಸ್ ರಸ್ತೆ, ಎಂ.ಜಿ ರಸ್ತೆ, ಎಂ.ಜಿ ರಸ್ತೆ ಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್‌ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ, ವಿಠಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ & ನೃಪತುಂಗ ರಸ್ತೆ.

ಸಾರ್ವಜನಿಕ ವಾಹನಗಳ ನಿಲುಗಡೆ ಸ್ಥಳಗಳು


ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮೊದಲನೆ ಮಹಡಿ & ಓಲ್ಸ್ ಕೆ.ಜಿ.ಐ.ಡಿ ಬಿಲ್ಡಿಂಗ್, ಕಿಂಗ್ಸ್ ರಸ್ತೆ, (ಕಬ್ಬನ್‌ಪಾರ್ಕ್ ಒಳಭಾಗ) ಈ ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಮೆಟ್ರೋ ಸೇವೆ


ಕ್ರಿಕೆಟ್‌ ಪಂದ್ಯ ನೋಡಲು ಬರುವ ಕ್ರಿಕೆಟ್‌ ಪ್ರೇಮಿಗಳಿಗಾಗಿ ಮೆಟ್ರೋ ರೈಲು ವಿಶೇಷ ಓಡಾಟಕ್ಕೆ ಅನುಮತಿ ನೀಡಿವೆ. ಹೀಗಾಗಿ ಕ್ರಿಕೆಟ್‌ ನೋಡಲು ಬರುವವರು, ಕ್ರೀಡಾಂಗಣ ತಲುಪುವ ವಿಚಾರದಲ್ಲಿ ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.

ಪೇಪರ್‌ ಟಿಕೆಟ್‌ ಮಾರಾಟ


ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.

ಎಂದಿನಂತೆ, ಕ್ಯೂಆರ್‌ ( QR) ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.

Continue Reading

ಪ್ರಮುಖ ಸುದ್ದಿ

Prajwal Revanna Case: ವಿದೇಶದಿಂದ ಪ್ರಜ್ವಲ್‌ ರೇವಣ್ಣ ಎಳೆತರಲು ರೆಡ್‌ ಕಾರ್ನರ್‌ ನೋಟಿಸ್?‌ ಭವಾನಿ ರೇವಣ್ಣಗೂ ವಿಚಾರಣೆಗೆ ಬುಲಾವ್

Prajwal Revanna Case: ಬಂದರೆ ಬಂಧನ ಆಗುವುದು ಖಚಿತವಾಗಿರುವುರಿಂದ, ಪ್ರಜ್ವಲ್ ರೇವಣ್ಣ ಸದ್ಯ ವಾಪಸು ಬರೋದು ಅನುಮಾನವೆನಿಸಿದೆ. ಪ್ರಜ್ವಲ್ ಬಳಿ ರಾಜತಾಂತ್ರಿಕ ಪಾಸ್‌ಪೋರ್ಟ್ ಇರುವುದರಿಂದ ಓಡಾಟಕ್ಕೆ ವೀಸಾ ಆಗತ್ಯ ಬೀಳುವುದಿಲ್ಲ. ಇದರ ಮೂಲಕ ದೇಶದಿಂದ ದೇಶಕ್ಕೆ ಓಡಾಡಿಕೊಂಡು ಇರಬಹುದು.

VISTARANEWS.COM


on

Prajwal Revanna Case red corner notice
Koo

ಬೆಂಗಳೂರು: ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ (Pen drive case) ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ರೆಡ್ ಕಾರ್ನರ್ ನೊಟೀಸ್ (Red Corner Notice) ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ. ಇನ್ನೊಂದೆಡೆ ಭವಾನಿ ರೇವಣ್ಣ (Bhavani Revanna) ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ಮಾಡಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೊಟೀಸ್ (Lookout notice) ಜಾರಿ ಮಾಡಲಾಗಿದೆ. ಆದರೆ ಇದು ದೇಶದೊಳಗೆ ಮಾತ್ರ ಅನ್ವಯವಾಗುತ್ತದೆ. ದೇಶದೊಳಗೆ ಯಾವುದೇ ಏರ್‌ಪೋರ್ಟ್‌, ಬಂದರು, ರೈಲ್ವೇ ನಿಲ್ದಾಣದಲ್ಲೂ ಇದರ ಮೂಲಕ ಪ್ರಜ್ವಲ್‌ ಅವರನ್ನು ಬಂಧಿಸಬಹುದು. ಆದರೆ ಇದು ಹೊರದೇಶಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವುದಿಲ್ಲವಾದ್ದರಿಂದ, ವಿದೇಶದಿಂದ ಕರೆತರಲು ಇದು ಸಾಕಾಗುವುದಿಲ್ಲ.

“ಒಂದು ವಾರ ಸಮಯ ಬೇಕು” ಎಂದು ಪ್ರಜ್ವಲ್‌ ರೇವಣ್ಣ ಮನವಿ ಮಾಡಿಕೊಂಡಿದ್ದರು. ಮೇ 15ರಂದು ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದರು. ಇದೆಲ್ಲವೂ ಎಸ್‌ಐಟಿಯ ದಾರಿ ತಪ್ಪಿಸುವ ತಂತ್ರ ಎಂದು ಭಾವಿಸಲಾಗಿದೆ. ಬಂದರೆ ಬಂಧನ ಆಗುವುದು ಖಚಿತವಾಗಿರುವುರಿಂದ, ಪ್ರಜ್ವಲ್ ರೇವಣ್ಣ ಸದ್ಯ ವಾಪಸು ಬರೋದು ಅನುಮಾನವೆನಿಸಿದೆ. ಪ್ರಜ್ವಲ್ ಬಳಿ ರಾಜತಾಂತ್ರಿಕ ಪಾಸ್‌ಪೋರ್ಟ್ ಇರುವುದರಿಂದ ಓಡಾಟಕ್ಕೆ ವೀಸಾ ಆಗತ್ಯ ಬೀಳುವುದಿಲ್ಲ. ಇದರ ಮೂಲಕ ದೇಶದಿಂದ ದೇಶಕ್ಕೆ ಓಡಾಡಿಕೊಂಡು ಇರಬಹುದು.

ಹೀಗಾಗಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಮನವಿ ಮಾಡುವ ಸಾಧ್ಯತೆ ಇದೆ. ಸಿಐಡಿ ಮುಖಾಂತರ ಸಿಬಿಐಗೆ ಮನವಿ ಮಾಡಿ, ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಮನವಿ ಮಾಡಬೇಕು. ಸಿಬಿಐ ಸಂಸ್ಥೆಯು ಇಂಟರ್‌ಪೋಲ್‌ ಅನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೊಟೀಸ್‌ಗೆ ಬೇಡಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೊಟೀಸ್ ಜಾರಿಯಾದರೆ, ಯಾವ ದೇಶದಲ್ಲಿದ್ದರೂ ಆ ದೇಶದ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ದೇಶಕ್ಕೆ ಮಾಹಿತಿ ನೀಡುತ್ತಾರೆ. ನಂತರ ಇಲ್ಲಿನ ಪೊಲೀಸರು ಹೋಗಿ ಆತನನ್ನು ಕರೆತರುತ್ತಾರೆ.

ಭವಾನಿಗೂ ಬುಲಾವ್‌

ಅಪ್ಪ ಮಗನ ಬಳಿಕ ಭವಾನಿ ರೇವಣ್ಣಗೂ ಎಸ್ಐಟಿ‌ ನೊಟೀಸ್ ಕಳಿಸಿದೆ. ಕೆಆರ್ ನಗರ ಠಾಣೆಯಲ್ಲಿ ದಾಖಲಾದ ಕಿಡ್ನಾಪ್ ಪ್ರಕರಣ ಸಂಬಂಧ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ಕಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ‌ರೇವಣ್ಣ ಸಂಬಂಧಿ ಸತೀಶ್ ಬಾಬು ಎಂಬಾತನ ಬಂಧನ ಆಗಿದೆ.

ಪ್ರಮುಖ ಆರೋಪಿ ಎಚ್‌.ಡಿ. ರೇವಣ್ಣ (HD Revanna) ವಿರುದ್ಧವೂ ಈಗ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ.

ರೇವಣ್ಣಗೂ ಲುಕ್‌ಔಟ್‌ ನೋಟೀಸ್‌

ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ.

ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.

ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್‌ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ವಿಡಿಯೊ ಪೆನ್‌ಡ್ರೈವ್ ಕಿಂಗ್‌ಪಿನ್ ಯಾರು? ಬೆನ್ನತ್ತಿ ಹೊರಟಿದೆ ಎಚ್‌ಡಿಕೆ ಟೀಂ!

Continue Reading
Advertisement
IPL 2024 POINTS TABLE
ಕ್ರೀಡೆ6 mins ago

IPL 2024 POINTS TABLE: ಕೆಕೆಆರ್​ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

prajwal revanna case hassan MP home
ಕ್ರೈಂ15 mins ago

Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

Robbery Case
ಕ್ರೈಂ20 mins ago

Robbery Case: ಕಾರು ತಪಾಸಣೆ ನೆಪದಲ್ಲಿ ಸುಲಿಗೆ; ಪೊಲೀಸರ ವಿರುದ್ಧವೇ ಕೇಳಿ ಬಂತು ಗಂಭೀರ ಆರೋಪ

Food Cleaning Tips Kannada
ಲೈಫ್‌ಸ್ಟೈಲ್25 mins ago

Food Cleaning Tips Kannada: ಹಣ್ಣು, ತರಕಾರಿಗಳಿಂದ ರಾಸಾಯನಿಕ ಅಂಶ ಸ್ವಚ್ಛಗೊಳಿಸುವ 5 ವಿಧಾನಗಳಿವು

Viral Video
ವೈರಲ್ ನ್ಯೂಸ್34 mins ago

Viral Video: ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

Salaar Movie Fails To Get Expected TRP Star Suvarna
ಸಿನಿಮಾ37 mins ago

Salaar Movie: ಕಿರುತೆರೆಯಲ್ಲಿ ‘ಸಲಾರ್’ಗೆ ಕಡಿಮೆ ಟಿಆರ್‌ಪಿ: ಪ್ಲಾಪ್‌ ಆಗಲು ಕಾರಣವೇನು?

RCB vs GT
ಕ್ರಿಕೆಟ್40 mins ago

RCB vs GT: ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ; ಮೆಟ್ರೋ ಸೇವೆ ವಿಸ್ತರಣೆ

Ajay Devgn 'Shaitaan' to stream on OTT
ಒಟಿಟಿ59 mins ago

Ajay Devgn: ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗ್ತಾ ಇದೆ ಅಜಯ್‌ ದೇವಗನ್‌ ʻಶೈತಾನ್ʼ ಸಿನಿಮಾ

Brij Bhushan
ಕ್ರೀಡೆ1 hour ago

Brij Bhushan: ಮಗನ ನಾಮನಿರ್ದೇಶನದ ವೇಳೆ 10 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸಿದ ಬ್ರಿಜ್ ಭೂಷಣ್

Prajwal Revanna Case red corner notice
ಪ್ರಮುಖ ಸುದ್ದಿ1 hour ago

Prajwal Revanna Case: ವಿದೇಶದಿಂದ ಪ್ರಜ್ವಲ್‌ ರೇವಣ್ಣ ಎಳೆತರಲು ರೆಡ್‌ ಕಾರ್ನರ್‌ ನೋಟಿಸ್?‌ ಭವಾನಿ ರೇವಣ್ಣಗೂ ವಿಚಾರಣೆಗೆ ಬುಲಾವ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ18 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌